ಆ್ಯಂಕರಿಂಗ್‍ v/s ಪತ್ರಿಕೋದ್ಯಮ!


-ವಿಶ್ವಾಸ್ ಕೆ


ಇದು ಸುದ್ದಿ ಓದುತ್ತಿರುವವರೇ ಸುದ್ದಿಯಾಗುತ್ತಿರುವ ಕಾಲ. ಕನ್ನಡವನ್ನು ಕನ್ನಡದ ರೀತಿಯಲ್ಲೇ ಓದುತ್ತಿದ್ದ, K S Bhagavanಸುದ್ದಿಗಳ ಹಿಂದಿರುವ ಭಾವಗಳನ್ನು ವೀಕ್ಷಕರಿಗೆ ತಲುಪಿಸುತ್ತಿದ್ದ, ಕನ್ನಡದ ಸುದ್ದಿ ಮಾಧ್ಯಮಕ್ಕೆ ಒಂದೊಳ್ಳೆಯ ಮಾದರಿಯಾಗಬಲ್ಲ ಸಾಧ್ಯತೆ ಹೊಂದಿದ್ದ ರೆಹಮಾನ್‍ ಹಾಸನ್‍, ಬಿಗ್‍ಬಾಸ್ ಮನೆಪಾಲಾಗಿದ್ದಾರೆ. ಮತ್ತೆಂದೂ ಹಳೆಯ ರೆಹಮಾನ್ ಸಿಗುವ ಸಾಧ್ಯತೆಗಳಿಲ್ಲ. ಹೀಗಿರುವಾಗಲೇ ಈ ವಾರ ಕನ್ನಡದ ಎರಡು ಸುದ್ದಿ ವಾಹಿನಿಗಳಲ್ಲಿ ಚಿಂತಕ ಭಗವಾನ್ ಸಂದರ್ಶನಗಳು ಪ್ರಸಾರವಾಗಿವೆ. ಭಗವಾನ್ ಮಾತು, ಅವರ ಪ್ರತಿಪಾದನೆಗಳು ಸುದ್ದಿಯಾಗುವ ಜಾಗದಲ್ಲಿ, ಅವರನ್ನು ಸಂದರ್ಶಿಸಿದ ಇಬ್ಬರೂ ಆ್ಯಂಕರ್‍ಗಳು ಸುದ್ದಿ ಕೇಂದ್ರಕ್ಕೆ ಬಂದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಇಬ್ಬರ ಪರ ಮತ್ತು ವಿರೋಧದ ದನಿಗಳು ಸದ್ದುಮಾಡುತ್ತಿವೆ. ಫೋನ್ ಕಾಲ್‍ಗಳು ‘ಸೌಂಡ್ ಕ್ಲೌಡ್’ ನಲ್ಲಿ ಬಿಕರಿಗಿಡಲಾಗಿದೆ. ಎರಡೂ ಪ್ರತ್ಯೇಕ ಘಟನೆಗಳಾದರೂ, ಒಂದಕ್ಕೊಂದು ಅಂತರ್ ಸಂಬಂಧ ಹೊಂದಿವೆ. ಜತೆಗೆ, ಕನ್ನಡದ ಸುದ್ದಿವಾಹಿನಿಗಳು, ಒಂದು ದಶಕದ ನಂತರವೂ ಎದುರಿಸುತ್ತಿರುವ ವೃತ್ತಿಪರತೆಯ ಕೊರತೆಯನ್ನು ಎತ್ತಿಹಿಡಿಯುತ್ತಿವೆ.

ಅವರು ರಂಗನಾಥ್ ಭಾರಧ್ವಾಜ್. ರಾಮೋಜಿ ಕನಸಿನ ಈ-ಟಿವಿ ಕನ್ನಡದಲ್ಲಿ ವಾರ್ತಾ ನಿರೂಪಕರಾಗಿದ್ದವರು. ನಂತರ ನಾನಾಚಾನಲ್‍ಗಳನ್ನು ನಾನಾರೀತಿಯ ಹುದ್ದೆಗಳನ್ನು ನಿಭಾಯಿಸಿದವರು. ಇದೀಗ ಅಂಬಾನಿ ಎಂಬ ಈ ದೇಶದ ಸಿರಿವಂತನ ಒಡೆತನಕ್ಕೆ ಮಾರಿಸಿಕೊಂಡ ಈ-ಟಿವಿ ಕನ್ನಡ ಸುದ್ದಿವಾಹಿನಿಯ ಎಡಿಟರ್ ಇನ್ ಚೀಫ್. ಇವರು ಒಂದು ತಿಂಗಳಿಂದ ಸಂದರ್ಶನ ನೀಡುವಂತೆ ಭಗವಾನ್ ಅವರಿಗೆ ದುಂಬಾಲುಬಿದ್ದದರು. ಅದಕ್ಕೆ ಅವರ ಹತ್ತಿರದ ಕೆಲವರಿಗೆ ಕರೆಮಾಡಿ, ಭಗವಾನ್ ಜತೆಗೆ ಮಾತುಕತೆಗೆ ಬರಲು ಅಹ್ವಾನಿಸಿದ್ದರು. ಭಗವಾನ್ ಬಂದರುಕೂಡ. ಬಹುಶಃ ರಂಗನಾಥ್ ಅಂತಹ ಅನುಭವಿ ಪತ್ರಕರ್ತ ಈ ಸಮಯದಲ್ಲಿ ಭಗವಾನ್ ಅವರ ಬಗ್ಗೆ ಅಧ್ಯಯನಕ್ಕೆ ಮೀಸಲಿಡಬೇಕಿತ್ತು. ಅವರ ಕೃತಿಗಳನ್ನು ಗುಡ್ಡೆಹಾಕಿಕೊಂಡು ಓದಬೇಕಿತ್ತು. ಅವರ ವಿವಾದಿತ ಮಾತುಗಳನ್ನು ರಿವಿಝಿಟ್‍ ಮಾಡಬೇಕಿತ್ತು. ನಂತರ, ಅವರ ಜತೆಗಿನ ಸಂದರ್ಶನಕ್ಕೆ ಪ್ರಶ್ನೆಗಳನ್ನು ರೆಡಿ ಮಾಡಿಕೊಳ್ಳಬೇಕಿತ್ತು. ಆದ್ರೆ, ರಂಗನಾಥ್‍ ಮಾಡಿದ್ದೇನು? ಬಲಪಂಥೀಯ ಹಿನ್ನೆಲೆಯವರಿಗೆ ಕರೆಮಾಡಿ, “ಲೆಫ್ಟ್-ರೈಟ್” ತಗೊಳ್ಳಿ ಎಂದುಬಿಟ್ಟರು.

ವಾಟರ್ ಗೇಟ್ ಹಗರಣ ಹೊರಬಿದ್ದ ನಂತ್ರ ಅಮೆರಿಕಾದ ಅಧ್ಯಕ್ಷರಾಗಿದ್ದ ನಿಕ್ಸನ್ ರಾಜೀನಾಮೆಕೊಟ್ಟರು. ಆದ್ರೆ, ಅವರು ಎಲ್ಲಿಯೂRanganth Bharadhwaj ತಮ್ಮ ತಪ್ಪಿನ ಕುರಿತು ಚಿಕ್ಕ ವಿಷಾದವನ್ನೂ ವ್ಯಕ್ತಪಡಿಸಿರಲಿಲ್ಲ. ಈ ಸಮಯದಲ್ಲಿ ಆಸ್ಟ್ರೇಲಿಯಾದ ಸುದ್ದಿವಾಹಿನಿಗಳಿಗೆ ಸಂದರ್ಶನಗಳನ್ನು ನಡೆಸಿಕೊಡುತ್ತಿದ್ದ ಫ್ರೋಸ್ಟ್ ಎಂಬ ಪತ್ರಕರ್ತ ನಿಕ್ಸನ್ ಇಂಟರ್ವ್ಯೂಗೆ ಮುಂದಾದ. ಅದಕ್ಕೆನಿಕ್ಸನ್ ವಿರೋಧಿಸುತ್ತಿದ್ದ ಒಂದಿಬ್ಬರನ್ನು ಜತೆ ಇಟ್ಟುಕೊಂಡು ಅಧ್ಯಯನ ಶುರುಮಾಡಿದ. ನಿಕ್ಸನ್ ಅವರ ಪ್ರತಿನಡೆಯನ್ನೂ ಅವನು ಪರೀಕ್ಷೆಗೆ ಒಳಪಡಿಸಿದ. ನಂತ್ರವಷ್ಟೆ ನಿಕ್ಸನ್ ಸಂದರ್ಶನವನ್ನು ಶೂಟ್ ಮಾಡಲಾಯಿತು. ಮೊದಲಬಾರಿಗೆ ನಿಕ್ಸನ್ ಕಣ್ಣೀರುಹಾಕಿದರು. ನಾನು ಜನರನ್ನು ತಪ್ಪುಹಾದಿಗೆ ಎಳೆದೆ ಎಂದುಒಪ್ಪಿಕೊಂಡರು. ಆ ಒಂದು ಸಂದರ್ಶನದಿಂದಾಗಿ ಫ್ರೋಸ್ಟ್ ನೇ ಮಾತಾಗಿಹೋದ್ರು. ಬಹುಶಃ ಈ ಕಾರಣಕ್ಕೆ ನಾವಿಲ್ಲಿ, ಸಂದರ್ಶನಗಳ ವಿಚಾರ ಬಂದಾಗ ನಿಕ್ಸನ್ ಮತ್ತು ಫ್ರೋಸ್ಟ್  ನಡುವೆ ನಡೆದ ಈ ಸಂದರ್ಶನವನ್ನು ನೆನಪು ಮಾಡಿಕೊಳ್ಳುತ್ತಿದ್ದೇವೆ. ರಂಗನಾಥ್ ಅಂತಹ ಹಿರಿಯ ಪತ್ರಕರ್ತ ಇದನ್ನು ಗಮನಿಸದೇ ಹೋದ ಬಗೆಯೇ ಸೋಜಿಗ ಎನ್ನಿಸುತ್ತದೆ. ಭಗವಾನ್ ಮಾತುಗಳು ತಪ್ಪು, ಅವುಗಳಿಂದ ಸಮಾಜ ಹಾಳಾಗುತ್ತಿದೆ ಎಂದು ಅವರು ನಂಬಿಕೊಂಡಿದ್ದರೆ, ಅದು ಅವರ ನಂಬಿಕೆ. ಅದರ ಬಗ್ಗೆ ಭಿನ್ನಾಭಿಪ್ರಾಯ ಇಟ್ಟುಕೊಳ್ಳಬಹುದೇ ಹೊರತು, ಅದನ್ನು ತಪ್ಪು ಎಂದು ಹೇಳುವುದು ಕಷ್ಟ. ಆದ್ರೆ, ಒಬ್ಬ ಪತ್ರಕರ್ತರಾಗಿ ರಂಗನಾಥ್‍, ತಮ್ಮ ಭಿನ್ನಾಭಿಪ್ರಾಯಗಳನ್ನು ಪ್ರತಿಪಾದನೆ ಮಾಡಲು ಹೊರಡುತ್ತಾರೆ. ಅಲ್ಲಿ ವೃತ್ತಿಪರತೆಯಾಗಲೀ, ಸಿದ್ಧತೆ ಯಾಗಲೀ ಕಾಣುವುದಿಲ್ಲ. ಹಿಂದೆ ಅವರೊಮ್ಮೆ ನಟ ಪ್ರಕಾಶ್ ರಾಜ್ ಅವರ ಸಂದರ್ಶನ ಮಾಡಿದ್ದರು. ಮೊದಲುಪ್ರಕಾರ ಪ್ರಕಾಶ್ ರಾಜ್ ಅವರ ಹೊಗಳಿಕೆಗೆ ಸಂದರ್ಶನದ ಸಮಯವನ್ನು ಮೀಸಲಿಟ್ಟರು. ನಂತ್ರ, ಕಾಲೆಳೆಯಲು ಹೋದರು. ಆದ್ರೆ, ಸಮಚಿತ್ತವನ್ನು ಕಾಯ್ದುಕೊಂಡಿದ್ದ ಪ್ರಕಾಶ್ ರಾಜ್  ಅದ್ಯಾವುದಕ್ಕೂ ಸೊಪ್ಪು ಹಾಕಲಿಲ್ಲ. ಬಹುಶಃ ಇದನ್ನು ನಿರೀಕ್ಷಿಸದೇ ಇದ್ದ ರಂಗನಾಥ್, ಕೊನೆ ಕೊನೆಯಲ್ಲಿ ಬುಸುಗುಡಲು ಶುರುಮಾಡಿದರು. ಆಗಲೂ, ಜೀವನಾನುಭವವನ್ನು ಕಂಡಿದ್ದ ನಟ ಫಾರ್ಮ್ ಕಳೆದುಕೊಳ್ಳಲಿಲ್ಲ. ಒಬ್ಬ ಪತ್ರಕರ್ತ ಸಿದ್ಧತೆ ಇಲ್ಲದೆ ಹೇಗೆ ಸಂದರ್ಶನ ನಡೆಸಬಾರದು ಎಂಬುದಕ್ಕೆ ಈ ಸಂದರ್ಶನವೊಂದು ಪಾಠ. ಇದು ನಡೆದ ವರ್ಷದ ನಂತ್ರ ಭಗವಾನ್ ‍ಸಂದರ್ಶನ. ರಂಗನಾಥ್ ಸುಧಾರಿಸಿಕೊಂಡಂತೆ ಕಾಣಿಸುವುದಿಲ್ಲ. ಇದರಿಂದ ವೈಯುಕ್ತಿಕವಾಗಿ ರಂಗನಾಥ್ ಅವರಿಗೆ ಲಾಭನಷ್ಟಗಳಿಗಿಂತ, ಪತ್ರಿಕೋದ್ಯಮದ ಒಟ್ಟಾರೆ ಬೆಳವಣಿಗೆ ದೃಷ್ಟಿಯಿಂದ ಒಳ್ಳೆಯದಲ್ಲ. ಯಾಕೆಂದರೆ, ಪತ್ರಿಕೋದ್ಯಮ ವ್ಯಕ್ತಿಗಳನ್ನು ಮೀರಿದ್ದು. ಅದು ಜರ್ನಲಿಸಂ. ಇಸಂ ಅಂದ್ರೆನೇ ಧರ್ಮ!

ಇನ್ನು, ಚಂದನ್ ಶರ್ಮ ಸಂದರ್ಶನದ ಬಗ್ಗೆ. ಚಂದನ್ ವಿದೇಶದಲ್ಲಿ ಓದಿದ್ದು. ಅದಕ್ಕಿಂತ ಹೆಚ್ಚಾಗಿ ಬಳ್ಳಾರಿChandan Sharma ಎಂಬ ಸುಡುನಾಡಿನಲ್ಲಿ ಅಜ್ಜಿ ಪ್ರೀತಿಯೊಂದಿಗೆ ಬೆಳೆದವರು. ಸುದ್ದಿ ಮತ್ತು ಮನೋರಂಜನೆ ಎಂಬ ಎರಡೂ ದೋಣಿಯಲ್ಲಿ ಕಾಲಿಟ್ಟವರು. ಇತ್ತ ಸಂದರ್ಶನದ ನೆಪದಲ್ಲಿ ಸಿನೆಮಾ ನಟರನ್ನು ಮಾತನಾಡಿಸುತ್ತಲೇ, ಅತ್ತ ಟಿವಿ ಸೀರಿಯಲ್‍ಗಾಗಿ ಬಣ್ಣಹಚ್ಚಿದವರು. ಅಂತವರು ಮೊನ್ನೆ ಭಗವಾನ್ ಜತೆಗೆ ಸಂದರ್ಶನದ ಹೆಸರಿನಲ್ಲಿ ಬಾಲಿಶ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. ಉದಾಹರಣೆಗೆ; ನೀವ್ಯಾಕೆ ಭಗವಾನ್ ಅಂತ ಹೆಸರಿಟ್ಟುಕೊಂಡಿದ್ದೀರಾ? ನೂರು ಚಿಲ್ಲರೆ ರೂಪಾಯಿ ಕೊಟ್ಟರೆ ಹೆಸರು ಚೇಂಜ್ ಮಾಡಿಸಬಹುದಲ್ಲಾ? ಭಗವಾನ್ ಅಂದ್ರೆ ಬುದ್ಧ ಅಂತೀರಾ? ಬುದ್ಧ ದೇವರಲ್ಲವಾ? ಹೀಗೆ ಅವರ ಪ್ರಶ್ನೆಗಳ ಸರಮಾಲೆಸಾಗಿದೆ. ಬುದ್ಧ ದೇವರಲ್ಲ ಮಗು, ನೀನು ಅಲ್ಪಜ್ಞಾನಿ ಅಂದಿದ್ದಾರೆ ಭಗವಾನ್. ಇದಕ್ಕಿಂತ ಹೆಚ್ಚು ಚಂದನ್ ಬಗ್ಗೆ ಏನೇ ಹೇಳಿದರೂ ಅತೀ ಅನ್ನಿಸುತ್ತದೆ. ಇನ್ನೂ ಮಾಗದ ವಯಸ್ಸು, ಜೀವನಾನುಭವದ ಕೊರತೆ ಮತ್ತು ಜನರ್ನಲಿಸಂ ಎಂಬ ಪವಿತ್ರ ಕೆಲಸಕ್ಕೆ ತನ್ನನ್ನು ತಾನು ಸಂಪೂರ್ಣವಾಗಿ ತೊಡಗಿಸಿಕೊಳ್ಳಲಾಗದ ಅವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ.

ಇವೆಲ್ಲವನ್ನೂ ಪಕ್ಕಕ್ಕಿಟ್ಟು ನೋಡುವುದಾದರೆ, ಇಲ್ಲಿ ರಂಗನಾಥ್ ಮತ್ತು ಭಾರಧ್ವಾಜ್ ಗಳಿಗಿಂತ ಪತ್ರಿಕೋದ್ಯಮದ ಇತಿಹಾಸ ದೊಡ್ಡದು. ಕನ್ನಡದ ಪಾಲಿಗೆ ಸುದ್ದಿವಾಹಿನಿಗಳು ಬಂದು ಒಂದು ದಶಕ ಕಳೆದಿದೆ ಅಷ್ಟೆ. ಇನ್ನೂ ಈ ಕ್ಷೇತ್ರ ತನ್ನ ಬಾಲ್ಯಾವಸ್ಥೆಯಲ್ಲಿದೆ. ಹೊಸ ಪ್ರತಿಭೆಗಳು ಪ್ರವೇಶವಾಗುತ್ತಿದೆ. ಅವರಿಗೆಲ್ಲಾ, ಟಿವಿಚಾನಲ್‍ಗಳಲ್ಲಿ  ಹೇಗೆ  ಸಂದರ್ಶನಗಳನ್ನು ನಡೆಸಬೇಕು ಎಂಬುದಕ್ಕಿಂತ, ಹೇಗೆ ನಡೆಸಬಾರದು ಎಂಬುದನ್ನು ಇವರಿಬ್ಬರು ಅಮೂಲ್ಯ ಪಾಠವೊಂದನ್ನು ನೀಡಿದ್ದಾರೆ.

12 thoughts on “ಆ್ಯಂಕರಿಂಗ್‍ v/s ಪತ್ರಿಕೋದ್ಯಮ!

  1. ಸೀತಾ

    “ಈ ಸಮಯದಲ್ಲಿ ಭಗವಾನ್ ಅವರ ಬಗ್ಗೆ ಅಧ್ಯಯನಕ್ಕೆ ಮೀಸಲಿಡಬೇಕಿತ್ತು. ಅವರ ಕೃತಿಗಳನ್ನು ಗುಡ್ಡೆಹಾಕಿಕೊಂಡು ಓದಬೇಕಿತ್ತು.”

    ಮಾಧ್ಯಮ ಕ್ಷೇತ್ರದ ಬುದ್ಧಿವಂತರಿಗೆ ನಿಜಕ್ಕೂ ಅಧ್ಯಯನ ಮಾಡುವ ಇರಾದೆ ಇದ್ದರೆ ಶ್ರೀಯುತ ಭಗವಾನ್ ಅವರ ಕೃತಿಗಳ ಹೊರತಾಗಿ ಬೇಕಾದಷ್ಟು ಯೋಗ್ಯ ಕೃತಿಗಳಿವೆ – ಉದಾ: ಆದಿ ಶಂಕರರ ವಿವೇಕಚೂಡಾಮಣಿ. ಭಗವಾನ್ ಅವರ ಬರವಣಿಗೆಯ ಉದ್ದೇಶ ಅನಗತ್ಯ ವಿವಾದವುಂಟು ಮಾಡುವುದಷ್ಟೇ ಆಗಿರುವುದರಿಂದ ಅವರ ಕೃತಿಗಳಿಗೆ ಪ್ರಾಶಸ್ತ್ಯ ಕೊಡುವ ಅಗತ್ಯವಿಲ್ಲ.

    Reply
  2. ರಾಮ

    ಓದಲು ಭೈರಪ್ಪ ಆದರೆ ಏನು? ಭಗವಾನ್ ಆದರೆ ಏನು? ಆದ್ರೆ ಯಾರ ಸಂದರ್ಶನ ಮಾಡುತ್ತಾರೋ ಅವರ ಹಿನ್ನಲೆ ಬಗ್ಗೆ ಓದಿಕೊಂಡು ಹೋಗಬೇಕು ಎಂಬುದು ಸಾಮಾನ್ಯ ಜ್ಞಾನ. ನನಗೆ ಭಗವಾನ್ ಬಗ್ಗೆ ವಿರೋಧವಿದೆ. ಹಾಗಂತ ಇನ್ನೊಬ್ಬರ ಹೆಗಲಮೇಲೆ ಬಂದೂಕಿಟ್ಟು ಅವರ ವಿರುದ್ಧ ಸಮರ ಸಾರಲು ಹೊರಡುವುದು ನ್ಯಾಯವಾ? ಕೃತಿಗಳ ಮಹತ್ವ ಇರುವುದು ಓದಿದ ನಂತರ ಓದುಗನ ಮನಸ್ಸಿನ ಮೇಲೆ ಮೂಡಿಸುವ ಛಾಯೆಯಿಂದ. ಅದಕ್ಕೂ ಮುನ್ನವೇ ಅರ್ಧಂಬರ್ಧ ತಿಳಿವಳಿಕೆಯಿಂದ ಫತ್ವಾ ಹೊರಡಿಸುವ ಮನಸ್ಥಿತಿಯೇ, ಇಂದು ದೇಶ ಈ ಸ್ಥಿತಿಗೆ ಬರಲು ಕಾರಣ..

    Reply
  3. Anonymous

    Media is becoming a business. Some journalist have already become biased. Relegion has become our assest. Ethics of journalism remains only in books not in reality. So study of journalism should be made compulsory. We all r human beings. We come naked we go naked. We all r human beings. Wait for some days n see people will start talking like Hindu blood n Muslim blood.

    Reply
  4. ಸೂರ್ಯ

    ಸೀತಾ ಅವರೆ, ಆ್ಯಂಕರ್ ಅವರು ಆದಿ ಶಂಕರರನ್ನು ಸಂದರ್ಶನ ಮಾಡುವ ಸಂದರ್ಭ (???!!) ಇದ್ದಿದ್ದರೆ, ನೀವು ಹೇಳಿದಂತೆ ಅವರ ವಿವೇಕ ಚೂಡಾಮಣಿ ಅಧ್ಯಯನ ಮಾಡುವುದರಲ್ಲಿ ಅರ್ಥ ಇರುತ್ತಿತ್ತು. ಇಲ್ಲಿ ಸಂದರ್ಶನಕ್ಕೆ ಆಯ್ಕೆ ಮಾಡಿದ್ದು ಕೆ.ಎಸ್.ಭಗವಾನ ಅವರನ್ನು. ಅವರನ್ನು ಪ್ರಶ್ನೆ ಕೇಳಬೇಕೆಂದರೆ, ಅವರು ಏನು ಬರೆದಿದ್ದಾರೆ ಎನ್ನುವುದನ್ನು ತಿಳಿಯಬೇಡವೇ..? ಒಂದು ಉದಾಹರಣೆ ಕೊಡುತ್ತೇನೆ: ಒಬ್ಬ ಯಂಗ್ ಜರ್ನಲಿಸ್ಟ್ ಕೆಲವು ವರ್ಷಗಳ ಹಿಂದೆ ಮೈಸೂರಿನ ಜನಪ್ರಿಯ ಕಾದಂಬರಿಕಾರರೊಬ್ಬರನ್ನು (ಯಾರೆಂದು ಊಹಿಸುವುದು ಕಷ್ಟವೇನಲ್ಲ) ಸಂದರ್ಶಿಸಲು ಹೋಗಿದ್ದರು. ಸಂದರ್ಶನಕ್ಕೆ ಮುನ್ನ, ಕಾದಂಬರಿಕಾರರು ಕೇಳಿದರು “ನೀವು ನನ್ನ ಎಷ್ಟು ಪುಸ್ತಕಗಳನ್ನು ಓದಿದ್ದೀರಿ..?” ಪತ್ರಕರ್ತ ಕೊಟ್ಟ ಉತ್ತರ ಕಾದಂಬರಿಕಾರರಿಗೆ ಸಮಾಧಾನ ತರಲಿಲ್ಲ. ಹಾಗಾಗಿ ಸಂದರ್ಶನ ಆರಂಭವಾಗುವ ಮೊದಲೇ ಮುಗಿದಿತ್ತು.

    Reply
  5. ಸೀತಾ

    “ನೀವು ನನ್ನ ಎಷ್ಟು ಪುಸ್ತಕಗಳನ್ನು ಓದಿದ್ದೀರಿ..?” ಎಂದು ಶ್ರೀ ಭಗವಾ* ಅವರು ಈಟೀವಿ ಸಂದರ್ಶನಕ್ಕೆ ಒಪ್ಪುವ ಮೊದಲು ಸಂದರ್ಶಕರನ್ನು ಕೇಳಬೇಕಿತ್ತಲ್ಲವೇ? ಮಾಧ್ಯಮದವರು ವಿವಾದ ಎಂಬ ಮೀನಿನ ಆಸೆಗೆ ಹಾಕಿದ ಗಾಳಕ್ಕೆ ಸ್ವಯಂಪ್ರೇರಣೆಯಿಂದ ಸಿಕ್ಕಿಬಿದ್ದ ಭಗವಾ* ಅವರಿಗೆ ಮೈಸೂರಿನ ಜನಪ್ರಿಯ ಕಾದಂಬರಿಕಾರರ ಹಾಗೆ ಈ ಪ್ರಶ್ನೆ ಕೇಳುವಷ್ಟು ನೈತಿಕ ಸ್ಥೈರ್ಯ ಇದೆಯೇ?

    Reply
  6. Jayaram

    ” ಅವರ ಕೃತಿಗಳನ್ನು ಗುಡ್ಡೆಹಾಕಿಕೊಂಡು ಓದಬೇಕಿತ್ತು”

    Lol. I appreciate the sense of humor of Vishvas.

    Reply
  7. BNS

    ‘ನೀವು ನನ್ನ ಎಷ್ಟು ಪುಸ್ತಕಗಳನ್ನು ಓದಿದ್ದೀರಿ?’ ಎಂದು ಕೇಳುವಷ್ಟು ಅಧ್ಯಯನದ ಬಲ ಮತ್ತು ಆತ್ಮವಿಶ್ವಾಸ ಇದ್ದಿದ್ದರೆ ಶ್ರೀ ಕೆ ಎಸ್ ಭಗವಾನ್ ಅವರು ಖಂಡಿತ ಕೇಳುತ್ತಿದ್ದರು. ಭಗವಾನರ ಜ್ಞಾನದ ವಿಸ್ತಾರ ಎಷ್ಟಿದೆ ಎನ್ನಲು, ಅವರು ಆಸ್ತಿಕ ಎನ್ನುವ ಪದಕ್ಕೆ ಕೊಟ್ಟ ಅರ್ಥ ಮತ್ತು ಅದರ ಹಿನ್ನೆಲೆಯ ವಿವರಣೆ ಈಗಾಗಲೇ public domain ನಲ್ಲಿ ಇದೆ, ಓದುಗರು ಪರಿಶೀಲಿಸಬಹುದು. ಇಂಥವರ ಮಾತು ಕೇಳಿ ನಮ್ಮ ಜ್ಞಾನ ಹೆಚ್ಚಾಗುತ್ತದೆ ಎಂದು ಭಾವಿಸಿದರೆ ನಕ್ಕು ಸುಮ್ಮನಾಗುವುದೇ ಒಳ್ಳೆಯದು.

    Reply
    1. Sumanasa

      “ಭಗವಾನ್ ಅವರ ಕೃತಿಗಳನ್ನು ಗುಡ್ಡೆಹಾಕಿಕೊಂಡು ಓದಬೇಕಿತ್ತು” – ಈ ಮಾತು ಒಂದು ಒಳ್ಳೆಯ ನಗೆಯನ್ನು ಹುಟ್ಟಿಸಿತು. ಥ್ಯಾಂಕ್ಸ್ ವಿಶ್ವಾಸ್!

      ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆದಾಗಿನಿಂದ ಭಗವಾನ್ ಅವರ ಬಗ್ಗೆ ಮಾಧ್ಯಮಗಳ ಆಸಕ್ತಿ ಹೆಚ್ಚಾಗಿದೆ. ಖರ್ಗೆ ಮುಖ್ಯಮಂತ್ರಿ ಆದ ಮೇಲೆ ಭಗವಾನ್ ನೇಪಥ್ಯ ಸೇರುವುದು ಖಚಿತ. ಆಗ ಅವರು ತಮ್ಮ ಮನೆಯ ದೇವರ ಕೋಣೆಯಲ್ಲೇ ಸಪತ್ನೀಕರಾಗಿ ಭಗವದ್ಗೀತೆಯೊಂದಿಗೆ ಸ್ವರಚಿತ ಕೃತಿಗಳಿಗೆ ಬೆಂಕಿ ಕೊಟ್ಟು ಚಳಿ ಕಾಯಿಸಿಕೊಳ್ಳಬಹುದು..

      Reply
  8. ಸೂರ್ಯ

    ವಿಶ್ವಾಸ್ ಕೆ. ಅವರ ಈ ಲೇಖನ ಪತ್ರಕರ್ತರ ಬಗ್ಗೆ, ಪತ್ರಿಕೋದ್ಯಮದ ಬಗ್ಗೆ. ಆ್ಯಂಕರ್ ಗಳ ತಯಾರಿ ಬಗ್ಗೆ ಅವರು ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ. ಅವರೇನು ಬಿಡು ಬೀಸಾಗಿ, ಸುಮ್ಮನೆ ಮಾತನಾಡಿಲ್ಲ. ನಿಕ್ಸನ್ ಪ್ರಕರಣವನ್ನು ಉದಾಹರಣೆ ಸಮೇತ ವಿವರಿಸಿ ಹೇಳಿದ್ದಾರೆ. ಆದರೆ ಕಾಮೆಂಟ್ ಮಾಡುವ ಬೃಹಸ್ಪತಿಗಳಿಗೆ ಅದೇಕೆ ಭಗವಾನ್ ಅವರ ನೈತಿಕತೆ ಕಡೆ ಚರ್ಚೆಯನ್ನು ಎಳೆದೊಯ್ಯುವುದರಲ್ಲಿ ಉತ್ಸಾಹವೋ..? ಭಗವಾನ್ಗೆ ನೈತಿಕತೆ ಇದೆಯೋ, ಇಲ್ಲವೋ ಎಂಬ ಪ್ರಶ್ನೆಯನ್ನು ಲೇಖಕರು ಚರ್ಚಿಸಿಯೇ ಇಲ್ಲ. ಹಾಗಂತ, ಆ ಬಗ್ಗೆ ಚರ್ಚೆ ಮಾಡಬಾರದು ಎಂದೇನಲ್ಲ, ಆದರೆ ಆ ವಿಚಾರಕ್ಕೆ ಕಾಮೆಂಟಿಗರು ಪ್ರತ್ಯೇಕ ಲೇಖನ/ಬರಹ ಬರೆಯಬಹುದು, ಅದು ಇಲ್ಲಿ ಪೋಸ್ಟ್ ಆಗಿರುವ ಲೇಖನದ ಸಾರ ಅಲ್ಲ.

    Reply
    1. ನಾರಾಯಣ ಹೊಳ್ಳ

      ಅಗತ್ಯವಿರದೆಯೂ ಮೈಸೂರಿನ ಜನಪ್ರಿಯ ಕಾದಂಬರಿಕಾರರ ಪ್ರಸ್ತಾಪವನ್ನು ಮಾಡಿ ಚರ್ಚೆಯ ಹಳಿ ತಪ್ಪಿಸಿದ್ದು ಯಾರು?!

      Reply
  9. deepak m

    ರಂಗನಾಥ್ ವೃತ್ತಿ ಕುರಿತು ಸ್ವಾಭಿಮಾನ ಇರಿಸಿಕೊಂಡಿರುವುದು ಒಳ್ಳೆಯದು. ಆದರೆ ಅದನ್ನು ತಮ್ಮ ಕೆಟ್ಟ ಭಾಷೆಯಿಂದ ಕಾಪಾಡಿಕೊಳ್ಳುವುದು ತಪ್ಪು. ಪತ್ರಕರ್ತರನ್ನು ಪ್ರಶ್ನಿಸಬಾರದು ಎಂದು ಕಾನೂನು ಇದೆಯೇ?. ಭಗವಾನ್ ಭಗವದ್ಗೀತೆ ಕುರಿತು ಸ್ವಂತ ಅಭಿಪ್ರಾಯ ಇರಿಸಿಕೊಳ್ಳಲಿ ಬಿಡಿ, ಆ ಮನುಷ್ಯನಿಗೆ ಅದರಲ್ಲಿ ಇರುವ ತಪ್ಪು ಮಾತ್ರ ಕಂಡಿದೆ. ಕಾಮಾಲೆ ಕಣ್ಣಿಗೆ ಲೋಕವೆಲ್ಲ ಹಳದಿ ಕಂಡರೆ ನಮಗೇನು? ಇನ್ನು ಆತನ ಪುಸ್ತಕಗಳನ್ನು ಓದಲು ಹೇಳುತ್ತೀರಾ, ಇನ್ನೂ ಕುವೆಂಪು, ಕಾರಂತ್ ಮುಂತಾದವರು ಬರೆದಿರುವುದನ್ನೇ ಅಲ್ಪ-ಸ್ಪಲ್ಪ ಓದಿದ್ದೇವೆ. ಈಯಪ್ಪನ ಪುಸ್ತಕ ನಮ್ಮ ಪಟ್ಟಿಯಲ್ಲೇ ಇಲ್ಲ. ಅದನ್ನು ಆಯಪ್ಪನೇ ಓದಲಿ, ಒಂದು ದಿನ ನಾವೆಲ್ಲಾ ಸುಮ್ಮನಿದ್ದರೆ, ಅದನ್ನು ಸುಡುತ್ತೇನೆ ಎಂದು ಟಿವಿ ಮುಂದೆ ಬಾಯಿ ಬಡಿದುಕೊಳ್ಳುತ್ತಾನೆ.

    Reply
  10. ಎಚ್. ಸುಂದರ ರಾವ್

    ಕೇವಲ ಕುತೂಹಲಕ್ಕಾಗಿ ಕೆ. ಎಸ್. ಭಗವಾನರು ಕನ್ನಡಕ್ಕೆ ಅನುವಾದಿಸಿರುವ ಷೇಕ್ಸ್ ಪಿಯರಿನ “ಜೂಲಿಯಸ್ ಸೀಸರ್” ನಾಟಕ ಓದುತ್ತಿದ್ದೆ. ಪುಸ್ತಕದ ಪೀಠಿಕೆಯಲ್ಲಿ ಲೇಖಕರು ನಾಟಕದ ಕತೆಯ ಆಕರದ ಕುರಿತು ಬರೆಯುತ್ತಾ ಹೀಗೆ ಹೇಳುತ್ತಾರೆ: “… ಮಾನವ ಜನಾಂಗವನ್ನು, ಅದರಲ್ಲಿಯೂ ಯೂರೋಪಿನ ಜನತೆಯನ್ನು, ರೂಪಿಸುವುದರಲ್ಲಿ ಪ್ಲೂಟಾರ್ಕನ “ಜೀವನ ಕಥೆಗಳು” ಅಮೂಲ್ಯವಾದ ಪ್ರಭಾವ ಬೀರಿದೆ; ಸೇವೆ ಸಲ್ಲಿಸಿದೆ. ಗೀತೆ, ಬೈಬಲ್, ಕುರಾನ್, ದಾಸ್ ಕ್ಯಾಪಿಟಲ್ ಮುಂತಾದ ಯುಗ ನಿರ್ಮಾಣ ಕೃತಿಗಳ ಹಾಗೆ ಪರಿಣಾಮಕಾರಿಯಾಗಿದೆ” (ಪುಟ ೧೧)

    Reply

Leave a Reply

Your email address will not be published. Required fields are marked *