ಸಂಘಪರಿವಾರದ ರಕ್ತಸಿಕ್ತ ಅಧ್ಯಾಯದಲ್ಲಿ ಬಿಲ್ಲವರ ಸರತಿಯಲ್ಲಿ ಬಂಟರು

Naveen Soorinje


– ನವೀನ್ ಸೂರಿಂಜೆ


 

 

ಜತೆಗೆ ಆಟವಾಡಿ ಬಂದ ಸಮೀಯುಲ್ಲಾನನ್ನು ಹಿಂದೂ ಕೋಮುವಾದಿಗಳಿಂದ ರಕ್ಷಿಸಲು ಹೊರಟ ಹರೀಶ್ ಪೂಜಾರಿ ಬಲಿಯಾಗಿದ್ದಾನೆ. ಹಿಂದುತ್ವ ಸಂಘಟನೆಯ ಪದಾಧಿಕಾರಿಯಾಗಿರೋ ಭುವಿತ್ ಶೆಟ್ಟಿ ಮತ್ತು ಅಚ್ಯುತ ಮುಂತಾದ ಏಳು ಮಂದಿಯ ತಂಡ ಹರೀಶ್ ಪೂಜಾರಿ ಕೊಲೆಯನ್ನೂ ಸಮೀಯುಲ್ಲಾನ ಕೊಲೆಯತ್ನವನ್ನೂ ಮಾಡಿದೆ ಎಂದು ಪೊಲೀಸರು ಕೇಸು ದಾಖಲಿಸಿ ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ. ಕೋಮುವಾದಿಗಳ ರಕ್ಕಸ ನಗೆಯ ಮಧ್ಯೆಯೂ ಹರೀಶ್ ಸಮೀಯುಲ್ಲಾನಂತಹ ಮಲಿನಗೊಳ್ಳದ ಮನಸ್ಸುಗಳು ಜಿಲ್ಲೆಯಲ್ಲಿದೆ ಎಂಬುದೇ ಸಮಾದಾನವಾಗಿದ್ದರೆ, ಆರ್.ಎಸ್.ಎಸ್ ಜಾತಿ ಲೆಕ್ಕಾಚಾರದಲ್ಲಿ ಕೋಮು ಕ್ರಿಮಿನಲ್ ಗಳನ್ನು ಸೃಷ್ಠಿಸುತ್ತಿರುವುದು ಹೊಸ ಆತಂಕಕ್ಕೆ ಕಾರಣವಾಗಿದೆ. ಈವರೆಗೂ ಹಿಂದುಳಿದ ಜಾತಿಗಳಾದ ಬಿಲ್ಲವರನ್ನು ಕೊಲೆಗಳಿಗೆ ಬಳಸುತ್ತಿದ್ದ ಆರ್.ಎಸ್.ಎಸ್ ಇದೀಗ ಬಲಿಷ್ಠ ಮತ್ತು ಬಲಿತ ಹಿಂದುಳಿದ ವರ್ಗವಾಗಿರುವ ಬಂಟರನ್ನೂ ಸಹ ಬಳಸಲು ಶುರು ಮಾಡಿದೆ. ಇದರ ಹಿಂದೆ ಆರ್.ಎಸ್.ಎಸ್ ನ ವ್ಯವಸ್ಥಿತ ಅಜೆಂಡಾ ಕೆಲಸ ಮಾಡಿದೆ. ಇದನ್ನು ತಡೆಯದೇ ಇದ್ದಲ್ಲಿ ಬಂಟರ ಸಮಾಜ ಮತ್ತು ಜಿಲ್ಲೆ ಮುಂಬರುವ ದಿನಗಳಲ್ಲಿ ಭಾರೀ ದಂಡ ತೆರಬೇಕಾಗುತ್ತದೆ.

ನಿನ್ನೆ ಮೊನ್ನೆಯವರೆಗೆ ಆರ್.ಎಸ್.ಎಸ್ ಬಿಲ್ಲವರನ್ನಷ್ಟೇ ಕೋಮುಗಲಭೆಗಳಿಗೆ ಬಳಕೆ ಮಾಡಿ ಜೈಲಿಗೆ ಕಳುಹಿಸುತ್ತಿತ್ತು.bhajarangadal  ಅಮ್ನೇಶಿಯಾ ಪಬ್ ನಲ್ಲಿ ಯುವತಿಯ ಮೇಲೆ ಶ್ರೀರಾಮಸೇನೆ ದಾಳಿ ನಡೆಸಿತು. ಬಂಧಿತ 25 ಆರೋಪಿಗಳಲ್ಲಿ ಎಲ್ಲರೂ ಹಿಂದುಳಿದ ವರ್ಗಗಳಿಗೆ ಸೇರಿದವರು. ಬಹುತೇಕ ಬಿಲ್ಲವರು. ನಂತರ ಹಲವಾರು ಕೋಮುಗಲಭೆಗಳು, ನೈತಿಕ ಪೊಲೀಸ್ ಗಿರಿಗಳು ನಡೆದವು. ದನ ಸಾಗಾಟಗಾರರ ಮೇಲೆ ಹಲ್ಲೆಗಳು ನಡೆದವು. ಆ ಹಲ್ಲೆಗಳಲ್ಲಿ ಕೋಮುಗಲಭೆಗಳಲ್ಲಿ ಒಂದೇ ಒಂದು ಜನಿವಾರಧಾರಿ ಆರೋಪಿ ಇರಲಿಲ್ಲ. ನಂತರ ಇಡೀ ರಾಷ್ಟ್ರವನ್ನು ಬೆಚ್ಚಿ ಬೀಳಿಸಿದ ಹೋಂ ಸ್ಟೇ ದಾಳಿಯಲ್ಲಿ ಹಿಂದೂ ಸಂಘಟನೆಯ 41 ಕಾರ್ಯಕರ್ತರನ್ನು ಬಂಧಿತರಾಗಿದ್ದರು. ಅದರಲ್ಲೂ ಸಹ ಬಹತೇಕ ಬಿಲ್ಲವರು ಮತ್ತು ಸಣ್ಣಪುಟ್ಟ ಜಾತಿಗಳವರು. ಈಗಲೂ ಮಂಗಳೂರು ಜೈಲಿನ ಬಿ ಬ್ಲಾಕ್ ನಲ್ಲಿ ಇರುವ ಕೋಮುಗಲಭೆಯ ಆರೋಪಿಗಳನ್ನು ಮಾತನಾಡಿಸಿದ್ರೆ ಅದರಲ್ಲಿ ಒಬ್ಬನೇ ಒಬ್ಬ ಜನಿವಾರಧಾರಿ ಇಲ್ಲ. ಎಲ್ಲರೂ ಹಿಂದುಳಿದ ವರ್ಗಗಳಿಗೇ ಸೇರಿದವರು. ಇನ್ನು ಕೋಮುಗಲಭೆಯಲ್ಲಿ ಸಾವನ್ನಪ್ಪಿದ ಹಿಂದತ್ವವಾದಿಗಳಲ್ಲೂ ಬಹುತೇಕ ಬಿಲ್ಲವರೇ ಆಗಿದ್ದಾರೆ. ಉದಯ ಪೂಜಾರಿ, ಜಗದೀಶ್ ಪೂಜಾರಿ, ಕ್ಯಾಂಡಲ್ ಸಂತು, ಪೊಳಲಿ ಅನಂತು, ಪ್ರಶಾಂತ್ ಪೂಜಾರಿ, ಹರೀಶ್ ಪೂಜಾರಿ, ಪ್ರೇಮ್ ಕೋಟ್ಯಾನ್, ಸುನೀಲ್ ಪೂಜಾರಿ, ಹೇಮಂತ್. ಹೀಗೆ ಬಿಲ್ಲವ ಹೆಸರುಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. (ವಿಚಿತ್ರ ಎಂದರೆ ಕೋಮುವಾದಿಗಳ ವಿರುದ್ಧ ನಿಂತು ಸಾವನ್ನಪ್ಪಿದವರೂ ಕೂಡಾ ಬಿಲ್ಲವರೇ. ಹರೀಶ್ ಪೂಜಾರಿ, ಶ್ರೀನಿವಾಸ್ ಬಜಾಲ್, ಭಾಸ್ಕರ ಕುಂಬ್ಳೆ ಈ ರೀತಿ ಬಿಲ್ಲವರೇ ಕೋಮುವಾದಿಗಳಿಗೆ ಎದೆಯೊಡ್ಡಿ ಹುತಾತ್ಮರಾದವರು.) ಹೀಗೆ ಕೊಲೆ-ಕೊಲ್ಲು-ಕೊಲ್ಲಿಸು ಈ ಮೂರಕ್ಕೂ ಸಾಮಾಜಿಕವಾಗಿ ಹಿಂದುಳಿದ ಬಿಲ್ಲವರನ್ನೇ ಟಾರ್ಗೆಟ್ ಮಾಡಿಕೊಂಡಿದ್ದ ಆರ್.ಎಸ್.ಎಸ್ ಇದೀಗ ಬಲಿಷ್ಠ ಮತ್ತು ಬಲಿತ ಹಿಂದುಳಿದ ವರ್ಗವಾಗಿರುವ ಬಂಟರನ್ನು ಬಳಸಿಕೊಳ್ಳಲು ತಂತ್ರಗಾರಿಕೆ ರೂಪಿಸಿದೆ. ಅದರ ಭಾಗವಾಗಿಯೇ ಹರೀಶ್ ಪೂಜಾರಿಯನ್ನು ಕೊಲೆ ಮಾಡಿ ಭುವಿತ್ ಶೆಟ್ಟಿ ಎಂಬ ಬಂಟರ ಹುಡುಗ ಜೈಲುಪಾಲಾಗಿದ್ದಾನೆ.

ಮಂಗಳೂರು ಕೋಮುವಾದದ ಜಗತ್ತಿನಲ್ಲಿ ಈಗ ಬಂಟರು ಫೀಲ್ಡಿಗಿಳಿದಿದ್ದಾರೆ. ಬಿಲ್ಲವರ ರಾಜಕೀಯ ಮುಗ್ದತೆಯನ್ನು ಬಳಸಿಕೊಂಡು ಮೇಲ್ವರ್ಗಗಳು ಬಲಿ ಪಡೆಯುತ್ತಿದ್ದವು. ಆರ್.ಎಸ್.ಎಸ್ ಮತ್ತು ಬಿಜೆಪಿಯಲ್ಲಿ ಬಿಲ್ಲವರಿಗೆ ನಾಯಕತ್ವ ಬೇಕಾಗಿಯೂ ಇರಲಿಲ್ಲ ಮತ್ತು ಅದನ್ನು ಕೊಡಲೂ ಇಲ್ಲ. ಕೇವಲ ಕಾಲಾಳುಗಳಾಗಿ ಸತ್ತರು ಮತ್ತು ಸಾಯಿಸಿ ಜೈಲು ಪಾಲಾದ್ರು. ಆದರೆ ಬಂಟರು ಹಾಗಲ್ಲ. ಸಾಮಾಜಿಕ ಸ್ಥಾನಮಾನಗಳ ಜೊತೆಗೇ ಕೋಮುವಾದಿಗಳ ಜೊತೆ ಸೇರುತ್ತಿದ್ದಾರೆ. ಮುಂಬೈ ಅಂಡರ್ ವಲ್ಡ್ ಪ್ರಾರಂಭವಾಗಿದ್ದೇ ಕರಾವಳಿಯ ಬಂಟರಿಂದ. ಹಾಗಂತ ಅದೇನೂ ಅವರಿಗೆ ಮುಜುಗರ ತರುವಂತಹ ವಿಚಾರವಲ್ಲ. ಬದಲಾಗಿ ಪ್ರತಿಷ್ಠೆಯ ವಿಷಯವಾಗಿತ್ತು. ದೇವಸ್ಥಾನ ಪುನರುಜ್ಜೀವನ, ಬ್ರಹ್ಮಕಲಶ, ನಾಗಮಂಡಲ, ಕೋಲ ನೇಮಗಳಲ್ಲಿ ಈ ಭೂಗತ ಜಗತ್ತಿನ ಶೆಟ್ರುಗಳಿಗೆ ವಿಶೇಷ ಗೌರವವಿದೆ.

 ***

ತೊಂಭತ್ತರ ದಶಕದ ಆರ್ಥಿಕ ಸುಧಾರಣೆಗಳ ಫಲವಾಗಿ ಕರಾವಳಿಯ ಜಾತೀಯ ಸಮೀಕರಣದಲ್ಲಿ ಹಲವು ಬಗೆಯ20090124pub4 ಚಲನೆಗಳು ಕಂಡುಬಂದವು. ಜ್ಞಾನ ಹಾಗೂ ಉದ್ಯೋಗ ಆಧಾರಿತ ಹೊಸ ಸಮಾಜೋ ಆರ್ಥಿಕ  ಸನ್ನಿವೇಶದಲ್ಲಿ ಸೃಷ್ಟಿಯಾದ ನೂತನ ಅವಕಾಶಗಳನ್ನು ಬಳಸಿಕೊಳ್ಳುವಲ್ಲಿ ಮೂಲತಃ ವ್ಯವಸಾಯದ ಜೊತೆಗೆ  ಪೂರಕವಾಗಿ ಮುಂಬಯಿ ಉದ್ಯೋಗದ ಸಂಪರ್ಕದ ಹಣವನ್ನು ಅವಲಂಬಿಸಿದ್ದ ಇಲ್ಲಿಯ ಬಂಟ ಮತ್ತು ಬಿಲ್ಲವ ಜಾತಿಗಳು ಸಾಕಷ್ಟು ಯಶಸ್ಸನ್ನು ಕಂಡವು. ಅಲ್ಲದೆ ಆ ಕಾಲಕ್ಕಾಗಲೇ ಭೂಸುಧಾರಣೆಗಳ ಫಲವಾಗಿ ಭೂಮಿಯನ್ನು ಆಧರಿಸಿದ್ದ ಆರ್ಥಿಕ ಸಂಬಂಧಗಳು ಕೂಡಾ ಬಹತೇಕ ಸಡಿಲವಾಗಿದ್ದವು.

ಅಂತೆಯೇ ಒಂದು ಕಡೆ ಆರ್ಥಿಕ ಸಂಬಂಧಗಳಲ್ಲಿ ಉಂಟಾದ ಬದಲಾವಣೆ ಇನ್ನೊಂದೆಡೆ ಮಧ್ಯಮ ವರ್ಗೀಯ ಉದ್ಯೋಗಗಳ ಪ್ರಸರಣ- ಇವೆರಡೂ ಸಹಜವಾಗಿಯೇ ಸಾಮಾಜಿಕ ಸ್ತರೀಕರಣದಲ್ಲಿ ಮತ್ತು ಸಂಬಂಧಗಳಲ್ಲಿ ಮಾರ್ಪಾಡುಗಳಿಗೆ ಬೇಡಿಕೆಯಿಟ್ಟವು. ಅಂದರೆ ಹೊಸದಾಗಿ ದೊರೆತ ಆರ್ಥಿಕ ಸ್ಥಿತಿವಂತಿಕೆಯ ದೆಸೆಯಿಂದ ಇಲ್ಲಿಯ ಹಿಂದುಳಿದ ಜಾತಿಗಳು ಸಾಮಾಜಿಕ ಶ್ರೇಣೀಕರಣದಲ್ಲಿ ಮೇಲ್ಮುಖ ಚಲನೆಯನ್ನು ಅಪೇಕ್ಷಿಸಿದವು. ಯಕ್ಷಗಾನ ಮೇಳಗಳಲ್ಲಿ ಭಾಗವಹಿಸುವ ಹಕ್ಕಿಗೆ ಬಿಲ್ಲವರು ಬೇಡಿಕೆಯಿಟ್ಟದ್ದು ಅಥವಾ ಕಟೀಲು ಮೊದಲಾದೆಡೆ ದೇವಾಲಯಗಳ ಮ್ಯಾನೇಜ್ ಮೆಂಟ್ ಗೆ ಸಂಬಂಧಪಟ್ಟಂತೆ ಕಂಡುಬಂದ ಸಂಘರ್ಷಗಳು ಮತ್ತು ಇತರೆ ಕೆಲವು ಬೆಳವಣಿಗೆಗಳು ಅಂತಹ ಪ್ರವೃತ್ತಿಗಳನ್ನು ಸಂಕೇತಿಸಿದ್ದವು.

ಆರ್ಥಿಕ ನೆಲೆಯಲ್ಲಿ ಬಲಗೊಳ್ಳುತ್ತಿದ್ದ ಕೆಳವರ್ಗಗಳ ಮಹತ್ವಾಕಾಂಕ್ಷೆಗಳು ಮತ್ತು ಹಕ್ಕೊತ್ತಾಯ ಸಾಮಾಜಿಕ ಶ್ರೇಣೀಕರಣದ ಪೀಠಭಾಗದಲ್ಲಿ ಸ್ಥಾಪಿಸಲ್ಪಟ್ಟಿದ್ದ ಜನಿವಾರಿಗಳಿಗೆ ಹೊಸ ಸವಾಲುಗಳನ್ನು ಸೃಷ್ಟಿಸಿದವು. ಆರಂಭದಲ್ಲಿ ಜೀರ್ಣೋದ್ಧಾರ, ನಾಗಮಂಡಲ ಅಥವಾ ಬ್ರಹ್ಮಕಲಶೋತ್ಸವದಂತಹ ಧಾರ್ಮಿಕ ಕಾರ್ಯಕ್ರಮಗಳ ನಾಯಕತ್ವವನ್ನ ಹೊಸ ಆರ್ಥಿಕ ವರ್ಗಗಳಾಗಿರೋ ಬಂಟರು ಮತ್ತು ಬಿಲ್ಲವರಿಗೆ ನೀಡುವ ಮೂಲಕ ಹೊಸ ಯುಗದ ಸವಾಲುಗಳನ್ನ ಎದುರಿಸುವ ಪ್ರಯತ್ನಗಳನ್ನ ಬ್ರಾಹ್ಮ,ಣರು ನಡೆಸಿದ್ದನ್ನ ನಾವು ನೋಡಿದ್ದೇವೆ.

ಹಾಗೇಯೇ ಆರ್ಥಿಕ ಸುಧಾರಣೆಯ ಫಲ ಮತ್ತು ಅದರ ಜೊತೆಯೇ ಸೃಷ್ಟಿಯಾದ ಅತೃಪ್ತಿ ರಾಜಕೀಯ ನೆಲೆಯಲ್ಲೂ ಸಂಚಲನವನ್ನ ಕಾಣಿಸಿದವು. ಚುನಾವಣಾ ರಾಜಕಾರಣದಲ್ಲಿ ಅವಶ್ಯವಿದ್ದ ಸಂಖ್ಯಾಬಲ ಮತ್ತು ಸಂಪನ್ಮೂಲ- ಇವೆರಡೂ ಕ್ರಮವಾಗಿ ಕರಾವಳಿಯ ಹಿಂದುಳಿದ ವರ್ಗವಾಗಿರೋ ಬಿಲ್ಲವ ಮತ್ತು ಬಂಟರಲ್ಲಿ ಇದ್ದವು. ಹೀಗಾಗಿ, ಅಂತಹ ವರ್ಗಗಳ ಒಳಗೊಳ್ಳುವಿಕೆ ಆರ್.ಎಸ್.ಎಸ್ ಗೆ ಅನಿವಾರ್ಯವಾಗಿತ್ತು. ಅದರ ಭಾಗವಾಗಿಯೇ ಯಕ್ಷಗಾನ, ನಾಗಮಂಡಲ, ಭ್ರಹ್ಮಕಲಶ, ಜಾತ್ರೆ, ನೇಮಗಳಲ್ಲಿ ಬಂಟ- ಬಿಲ್ಲವರಿಗೆ ಪುರೋಹಿತಶಾಹಿಗಳು ನಾಯಕತ್ವ ನೀಡಿದವು. ಇಂದೊಂದು ಜನಿವಾರಧಾರಿಗಳ ಮಲ್ಟಿ ಪ್ಲ್ಯಾನ್ ಆಗಿದೆ. ಇಂತಹ ಒಂದು ವಿಶಿಷ್ಟ ಸನ್ನಿವೇಶದಲ್ಲಿಯೇ ನಾವು ಹಿಂದೂಪರ ಸಂಘಟನೆಗಳ ಪ್ರಸರಣವನ್ನು ಕಾಣುವುದು. ಇದು ಒಂದು ನೆಲೆಯಲ್ಲಿ ಹೊಸಕಾಲದ ಹೊಸ ಒತ್ತಡಗಳಿಗೆ ಪುರೋಹಿತಶಾಹಿ ಪ್ರತಿಕೃಯಿಸಿದ ರೀತಿಯಾಗಿದ್ದರೆ ಇನ್ನೊಂದೆಡೆ ಜೀರ್ಣೋದ್ಧಾರಗಳಂತಹ ಮೊದಲ ಸುತ್ತಿನ ಕಾರ್ಯತಂತ್ರಗಳ ಮುಂದುವರಿಕೆಯೂ ಆಗಿದೆ.

ಹಿಂದುತ್ವ ಸಂಘಟನೆಯ ಕಾಲಾಳುಗಳ ಸಂಘಟನೆಯ ನಾಯಕತ್ವ ದೊರಕಿದ್ದು ಹೊಸಕಾಲದಲ್ಲಿ ಹೊಸ ಕಸವು ಪಡೆದುಕೊಂಡ ವರ್ಗಗಳಿಗೇ.Accused_Homestay_Attack ಪುರೋಹಿತಶಾಹಿಯ ಇಂತಹ ಕಾರ್ಯತಂತ್ರಗಳ ಇನ್ನೊಂದು ಅಂಶ ಹಿಂದುಳಿದ ಜಾತಿಗಳಿಗೆ ಸಮಾನ ಶತ್ರುವೊಂದನ್ನು ಸ್ಷಷ್ಟಪಡಿಸಿಕೊಟ್ಟದ್ದು. ಅದು ಮುಸ್ಲೀಮರು. ಹೀಗಾಗಿ ಕರಾವಳಿಯ ಕೆಳವರ್ಗಗಳಲ್ಲಿ ಹೊಸದಾಗಿ ಸೃಷ್ಟಿಯಾದ ಎನರ್ಜಿಗೆ, ಕ್ರೀಯಾಶೀಲಿತೆಗೆ ಒಂದು ವೇದಿಕೆ ನಿರ್ಮಿಸಿಕೊಡುವ ಮೂಲಕ ಪುರೋಹಿತಶಾಹಿ ಅವುಗಳ ಹಕ್ಕೊತ್ತಾಯದ ಬೇಡಿಕೆಗಳು ತನ್ನತ್ತವೇ ತಿರುಗಿ ತಾನು ಅನುಭವುಸುತಿದ್ದ ಪಂಕ್ತಿಭೇದಗಳಂತಹ ವಿಶೇಷ ಸಾಮಾಜಿಕ ಸ್ಥಾನಮಾನ, ಸೌಲಭ್ಯಗಳು ಸಾರ್ವತ್ರಿಕವಾಗಿ ಪ್ರಶ್ನೆಯಾಗುವುದರಿಂದ ಸ್ವಯಂ ರಕ್ಷಿಸಿಕೊಂಡಿದೆ. ಪಂಕ್ತಿಬೇದವನ್ನು, ದೇವಸ್ಥಾನದ ಸ್ಥಾನ ಮಾನವನ್ನು ಪ್ರಶ್ನೆ ಮಾಡಬೇಕಾಗಿದ್ದವರನ್ನೇ ಪುರೋಹಿತಶಾಹಿಗಳು ತನ್ನ ತೆಕ್ಕೆಯಲ್ಲಿ ಇರಿಸಿಕೊಂಡಿದ್ದಾರೆ.

ಉತ್ತರದಲ್ಲಿ ಹಿಂದುಳಿದ ವರ್ಗಗಳನ್ನ ಮುಸ್ಲಿಮರ ವಿರುದ್ಧ ಎತ್ತಿಕಟ್ಟುವ ಪ್ರಕ್ರಿಯೆಯನ್ನ ನಾವು ಕಾಣುತ್ತೇವೆ. ಆದರೆ ಅಲ್ಲಿ ಅಂತಹ ಹೊಸ ಆರ್ಥಿಕತೆಯ ಸುಳಿವುಗಳು ಇಲ್ಲದಿರುವಂತದ್ದು ಮತ್ತು ಅಲ್ಲಿ ಚಲನೆ ಮುಖ್ಯವಾಗಿ ಮೀಸಲಾತಿ ಆಧರಿಸಿದ್ದು. ಹೀಗಾಗಿ ಅಲ್ಲಿನ ಹಿಂದುಳಿದ ಜಾತಿಗಳು ಮುಸ್ಲಿಮರನ್ನು ಮೀಸಲಾತಿಗೆ ಸಹಸ್ಪರ್ಧಿಗಳು ಮತ್ತು ಆ ಮೂಲಕ ಅವರು ತಮ್ಮ ಸೌಲಭ್ಯಗಳಿಗೆ ಸಂಚಕಾರ ಎನ್ನುವಂತೆ ಪರಿಗಣಿಸುವಲ್ಲಿ ಹಿಂದುತ್ವ ಪ್ರಾಜೆಕ್ಟ್ ಕಾರ್ಯನಿರ್ವಹಿಸಿದೆ. ಇತ್ತೀಚೆಗೆ ನಡೆದ ಬಿಹಾರದ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಲಾಲು ಹಾಗೂ ನಿತೀಶ್ ಅವರನ್ನ ಕುರಿತಂತೆ “ಅವರು ದಲಿತ, ಮಹಾದಲಿತ ಹಾಗೂ ಹಿಂದುಳಿದ ವರ್ಗಗಳಿಂದ ಶೇಕಡಾ ಐದರಷ್ಟು ಮೀಸಲು ಕೋಟಾವನ್ನು ಕಿತ್ತುಕೊಂಡು ಇನ್ನೊಂದು ಸಮುದಾಯಕ್ಕೆ ಕೊಡಲು ಪಿತೂರಿ ಮಾಡುತ್ತಿದ್ದಾರೆ” ಎಂದು ನುಡಿದದ್ದು ಇದೇ ತಂತ್ರದ ಭಾಗವಾಗಿಯೇ.

ಕರಾವಳಿಯಲ್ಲಿ ಹಿಂದುತ್ವ ಸಂಘಟನೆಗಳ ಮೂಲಕ ಅಂತಹ ಒಂದು ಗೋಲ್ ಪೋಸ್ಟ್ ಅನ್ನು ಕೆಳವರ್ಗಗಳಿಗೆ ಬ್ರಾಹ್ಮಣಶಾಹಿ ಸಂಘಪರಿವಾರ ಒದಗಿಸಿಕೊಟ್ಟಿದೆ. ಪರಿವಾರದ ಕಾಲಾಳು ಸಂಘಟನೆಗಳಲ್ಲಿ ಹಿಂದುಳಿದ ಜಾತಿಗಳಿಗೆ ನಾಯಕತ್ವವನ್ನ ಕೊಡುವುದು ಮತ್ತು ಅದೇ ವೇಳೆಗೆ ಅವುಗಳ ದೃಷ್ಟಿ ತನ್ನ ವಿರುದ್ಧ ಬೀಳದಂತೆ ನೋಡಿಕೊಳ್ಳುವುದು- ಇವೆರಡೂ ಸ್ಪಷ್ಟವಾಗಿ ವ್ಯಾಖ್ಯಾನಿಸಲ್ಪಟ್ಟ ಹಾಗೂ ಸಂಕೀರ್ಣ ಸ್ವರೂಪದ ನಿಯಂತ್ರಣ ವ್ಯವಸ್ಥೆಯನ್ನ ಅಪೇಕ್ಷಿಸಿದವು. ಇವತ್ತು ಕಲ್ಲಡ್ಕ ಅನ್ನೋದು ಇಡೀ ಕರಾವಳಿಯ ಹೈಕಮಾಂಡ್ ಅನ್ನೋ ರೀತಿಯಲ್ಲಿ ಉದಯಿಸಿದ್ದು ಸಂಘಪರಿವಾರದ ಅಂತಹ ಪ್ರಯತ್ನಗಳು ಯಶಸ್ವಿಯಾಗಿರುವುದನ್ನ ಸಂಕೇತಿಸುತ್ತವೆ.

***

ಬಿಲ್ಲವರ ಸಮುದಾಯದಲ್ಲಿ ಆರ್.ಎಸ್.ಎಸ್ ನ ಯೂಸ್ ಅ್ಯಂಡ್ ತ್ರೋ ಗೆ ಬಲಿಯಾದುದರ ಬಗ್ಗೆ ಗಂಭಿರ ಚರ್ಚೆಗಳು ನಡೆಯುತ್ತಿದೆ. ಹಿಂದುತ್ವವಾದದಿಂದ ಬೀದಿಪಾಲಾದ ಬಿಲ್ಲವ ಕುಟುಂಬಗಳ ಉದಾಹರಣೆಯನ್ನು ಮುಂದಿಟ್ಟುಕೊಂಡು ಸಮುದಾಯದೊಳಗೇ ಜಾಗೃತಿ ಕಾರ್ಯ ಸ್ವಲ್ಪ ಮಟ್ಟಿಗೆ ಪ್ರಾರಂಭವೇನೋ ಆಗಿದೆ. ಅದರ ಅರಿವಿದ್ದೇ ಇದೀಗ ಆರ್ ಎಸ್ ಎಸ್ ಕಣ್ಣು ಬಂಟ ಸಮುದಾಯದತ್ತಾ ಬಿದ್ದಿದೆ. ಅಂಡರ್ ವಲ್ಡ್ ಅನ್ನು ಹತ್ತಿರದಿಂದ ನೋಡಿದ ಸಮುದಾಯವಾಗಿರೋ ಬಂಟ ಸಮುದಾಯದಲ್ಲಿ ರೌಡೀಸಂ ಎನ್ನುವುದೂ ಕೂಡಾ ಪ್ರತಿಷ್ಠೆಯ ವಿಚಾರವಾಗಿದೆ. ದೇವಸ್ಥಾನಗಳಲ್ಲಿ ಯಜಮಾನಿಕೆಯನ್ನು ಕೊಟ್ಟು ತಮ್ಮ ನೈವೇದ್ಯ ಬೇಯಿಸಿಕೊಂಡವರು ಇದೀಗ ತಮ್ಮ ದ್ವೇಷದ ರಾಜಕಾರಣಕ್ಕೂ ಬಂಟರನ್ನು ಬಳಸಿಕೊಳ್ಳಲು ಹವಣಿಸುತ್ತಿದ್ದಾರೆ. ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಸದೃಡವಾಗಿರುವ ಇಂತಹ ಸಮುದಾಯ ಕೋಮುವಾದಿಗಳಿಗೆ ಅಸ್ತ್ರವಾಗುತ್ತಿರೋದು ಬಂಟ ಸಮುದಾಯ ಮತ್ತು ಸಮಾಜಕ್ಕೆ ಅತ್ಯಂತ ಆತಂಕಕಾರಿ.

21 thoughts on “ಸಂಘಪರಿವಾರದ ರಕ್ತಸಿಕ್ತ ಅಧ್ಯಾಯದಲ್ಲಿ ಬಿಲ್ಲವರ ಸರತಿಯಲ್ಲಿ ಬಂಟರು

  1. Ananda Prasad

    ಬಿಲ್ಲವರು ಹಾಗೂ ಬಂಟರು ಕೋಮು ಗಲಭೆಗಳಲ್ಲಿ ತೊಡಗಿಸಿಕೊಳ್ಳುವುದು, ಕೊಲೆ-ಹಿಂಸಾಚಾರಗಳಲ್ಲಿ ತೊಡಗಿಕೊಳ್ಳುವುದು ವೈಚಾರಿಕತೆ ಹಾಗೂ ಸ್ವಂತ ಬುದ್ಧಿ ಇಲ್ಲದಿರುವುದರಿಂದಾಗಿ. ಇವರನ್ನು ವೈಚಾರಿಕವಾಗಿ ಬೆಳೆಸಿದರೆ ಕೋಮುಗಲಭೆ ನಡೆಸಲು ಮೇಲ್ಜಾತಿಯ ಶಕುನಿ ಕೇಸರಿ ದಂಡನಾಯಕರಿಗೆ ಜನ ಸಿಗದೆಹೋಗುವುದರಲ್ಲಿ ಸಂದೇಹವಿಲ್ಲ. ಬಿಲ್ಲವ ಹಾಗೂ ಬಂಟ ಸಂಘಟನೆಗಳು ಎಚ್ಚತ್ತು ತಮ್ಮ ಜಾತಿಯ ಜನರನ್ನು ವೈಚಾರಿಕವಾಗಿ ಬೆಳೆಸುವ, ಅವರಲ್ಲಿ ಸ್ವತಂತ್ರ ಚಿಂತನಾಶಕ್ತಿಯನ್ನು ಬೆಳೆಸುವ ಕಾರ್ಯಕ್ರಮಗಳನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಮ್ಮಿಕೊಳ್ಳಬೇಕಾಗಿದೆ. ಇದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ನೆಲೆಸಬೇಕಾದರೆ ಅತೀ ಅಗತ್ಯ. ಪ್ರತಿ ಗ್ರಾಮಗಳಲ್ಲಿ ವೈಚಾರಿಕ ಚಿಂತನಾ/ಸಮಾಲೋಚನಾ ಸಭೆಗಳನ್ನು ಈ ಸಂಘಟನೆಗಳು ಹಮ್ಮಿಕೊಂಡು ತಮ್ಮ ಜಾತಿಯ ಜನರಲ್ಲಿ ವೈಚಾರಿಕ ಜಾಗೃತಿ ಮೂಡಿಸಿದರೆ ಅದು ಅವರು ದೇಶಕ್ಕೆ ನೀಡುವ ಬಹಳ ದೊಡ್ಡ ಕೊಡುಗೆಯಾಗುತ್ತದೆ. ಇಂದು ದೇಶದಲ್ಲಿ ನಡೆಯಬೇಕಾಗಿರುವುದು ಧಾರ್ಮಿಕ ಜಾಗೃತಿ ಅಲ್ಲ, ವೈಚಾರಿಕ ಜಾಗೃತಿ. ಭೂಗತ ಲೋಕದಲ್ಲಿ ಗುರುತಿಸಿಕೊಳ್ಳುವುದು, ಹಿಂಸಾಚಾರ, ರೌಡಿಸಂನಲ್ಲಿ ತೊಡಗಿಕೊಳ್ಳುವುದು ಹೆಮ್ಮೆಯ ವಿಚಾರವೇನೂ ಅಲ್ಲ, ಇದು ಅವರಲ್ಲಿ ನಾಗರಿಕತೆಯ ಕೊರತೆಯನ್ನು ತೊರಿಸುತ್ತದೆ. ನಾಗರಿಕ ಜನ ಹಿಂಸೆ, ರೌಡಿಸಂ, ಕೋಮುಗಲಭೆಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ.

    Reply
  2. ಸೀತಾ

    “ಬಿಲ್ಲವರು ಹಾಗೂ ಬಂಟರು ಕೋಮು ಗಲಭೆಗಳಲ್ಲಿ ತೊಡಗಿಸಿಕೊಳ್ಳುವುದು, ಕೊಲೆ-ಹಿಂಸಾಚಾರಗಳಲ್ಲಿ ತೊಡಗಿಕೊಳ್ಳುವುದು ವೈಚಾರಿಕತೆ ಹಾಗೂ ಸ್ವಂತ ಬುದ್ಧಿ ಇಲ್ಲದಿರುವುದರಿಂದಾಗಿ.”

    ಬಿಲ್ಲವ ಹಾಗೂ ಬಂಟರಿಗೆ “ವೈಚಾರಿಕತೆ ಹಾಗೂ ಸ್ವಂತ ಬುದ್ಧಿ ಇಲ್ಲ” ಎಂಬುದು ನಿಮ್ಮ ಅಭಿಪ್ರಾಯವೇ ಆಗಿದ್ದಲ್ಲಿ ಅದನ್ನು ಖಂಡನಾರ್ಹ. ಇದು ಜನಾಂಗೀಯ ನಿಂದನೆಯಾದುದರಿಂದ ತಮ್ಮ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ.

    Reply
    1. Ananda Prasad

      ‘ಬಿಲ್ಲವರು ಹಾಗೂ ಬಂಟರು ಕೋಮು ಗಲಭೆಗಳಲ್ಲಿ ತೊಡಗಿಸಿಕೊಳ್ಳುವುದು, ಕೊಲೆ-ಹಿಂಸಾಚಾರಗಳಲ್ಲಿ ತೊಡಗಿಕೊಳ್ಳುವುದು ವೈಚಾರಿಕತೆ ಹಾಗೂ ಸ್ವಂತ ಬುದ್ಧಿ ಇಲ್ಲದಿರುವುದರಿಂದಾಗಿ.’ – ಈ ವಾಕ್ಯದಲ್ಲಿ ವ್ಯಕ್ತವಾದ ಅಭಿಪ್ರಾಯ ಕೋಮು ಗಲಭೆಗಳಲ್ಲಿ, ಕೊಲೆ-ಹಿಂಸಾಚಾರಗಳಲ್ಲಿ ತೊಡಗಿಸಿಕೊಳ್ಳುವವರಿಗೆ ಅನ್ವಯವಾಗುವುದೇ ವಿನಃ ಎಲ್ಲರಿಗೂ ಅನ್ವಯವಾಗುವುದಿಲ್ಲ.

      Reply
  3. ಸೀತಾ

    “ಕೋಮುಗಲಭೆಯ ಆರೋಪಿಗಳನ್ನು ಮಾತನಾಡಿಸಿದ್ರೆ ಅದರಲ್ಲಿ ಒಬ್ಬನೇ ಒಬ್ಬ ಜನಿವಾರಧಾರಿ ಇಲ್ಲ.”

    “ಇಂದೊಂದು ಜನಿವಾರಧಾರಿಗಳ ಮಲ್ಟಿ ಪ್ಲ್ಯಾನ್ ಆಗಿದೆ.”

    ಪ್ರಿಯ ರವಿಕೃಷ್ಣಾ ರೆಡ್ಡಿ, ಕರ್ನಾಟಕ ರಾಜ್ಯದಲ್ಲಿ ಜನಿವಾರ ಧರಿಸುವ ಹಲವಾರು ಜಾತಿ ಸಮುದಾಯಗಳಿವೆ. ಪ್ರಸ್ತುತ ಲೇಖನದಲ್ಲಿ ಜನಿವಾರ ಧರಿಸುವವರ ಬಗ್ಗೆ ಅವಮಾನಕಾರಿಯಾದ ಹೇಳಿಕೆಗಳಿವೆ. ಜಾತಿ ನಿಂದನೆಯು ಕಾನೂನು ರೀತ್ಯ ಶಿಕ್ಷಾರ್ಹ ಅಪರಾಧ ಎಂದು ತಮಗೆ ತಿಳಿದಿದೆ. ಪ್ರಗತಿಪರ ವೇದಿಕೆ ಎಂದು ಕರೆದುಕೊಳ್ಳುವ ವರ್ತಮಾನದಲ್ಲಿ ಜಾತಿನಿಂದನೆ ನಡೆಯುತ್ತಿರುವುದು ತಮ್ಮ ಗಮನಕ್ಕೆ ಬಾರದೆ ಹೋಗಿದೆಯೇ?

    Reply
  4. Salam Bava

    ಈ ಯುವ ಲೇಖಕರಂತೆ ಕರಾವಳಿಯ ನರ ,ನಾಡಿ ಅರಿತವರು ಅದನ್ನು ಅಭಿವ್ಯಕ್ತಗೊಳಿಸಿದವರು ಅತೀ ವಿರಳ . ಅವರೊಂದಿಗೆ ಸ್ಯೆದ್ಯಾಂತಿಕ ವಾಗಿ ಭಿನ್ನ ಅಭಿಪ್ರಾಯವಿರಬಹುದು ,ಆದರೆ ಅವರ ಮಾನವೀಯ ಬದ್ಧತೆ ಅತ್ಯುನ್ನತ,ಸಂಶಯಾತೀತ . ನಾನು ಅತೀ ಪ್ರೀತಿಸುವ ,ಗೌರವಿಸುವ ಸಮುದಾಯ -ಬಂಟರು . ನನ್ನ ಪ್ರಾಥಮಿಕ ಶಾಲೆಯಿಂದ ಹಿಡಿದು ಕಾಲೇಜಿನಲ್ಲೂ ಹೆಚ್ಹಿನ ಸ್ನೇಹಿತರು ಅವರೇ . ಕರಾವಳಿಯಲ್ಲಿ ಬ್ಯಾರಿಗಳು,ಬಂಟರು ,ಪೂಜಾರಿಗಳು ಮತ್ತಿತರ ಹಿಂದುಳಿದ ಸಮುದಾಯದವರು ಅತ್ಯಂತ ಸೌಹಾರ್ದಯುತವಾಗಿ ಬಾಳುತ್ತಿದ್ದರು . ಅವರಲ್ಲಿ ಸಂಘರ್ಸ ಏರ್ಪಡುತ್ತಿತ್ತು ,ಆದರೆ ಅದು ಎಂದೂ ಕೋಮು ಗಲಬೆಯ ರೂಪ ತಾಳುತ್ತಿರಲಿಲ್ಲ .
    ಜನಾರ್ಧನ ಪೂಜಾರಿಯವರು ಯಾವಾಗ ಇಂದಿರಾ ಗಾಂದಿಯವರ,ಅರಸರ ಬೆಂಬಲದಿಂದ ಮಂತ್ರಿಯಾದರೋ -ಅದರ ಸಂಪೂರ್ಣ ಪಲಾನುಭವ ಅನುಬವಿಸಿದ್ದು ಬಿಲ್ಲವರು . ಎಲ್ಲಾ ರಂಗದಲ್ಲೂ ಅವರು ಅಭಿವ್ರದ್ದಿ ಸಾದಿಸಿದರು . ಅಲ್ಲಿಯ ವರೆಗೆ ರಾಜಕೀಯವಾಗಿ ಪ್ರಬಲವಾಗಿದ್ದ ಬಂಟರು ,ಸ್ವಲ್ಪ ಹಿಂದೆ ತಲ್ಲೆಲ್ಪಟ್ಟರು ! ಆದ್ರೆ ಭೂ ಸುಧಾರಣೆಯಿನ್ದ ತಮ್ಮ ಜಾಮಿನ್ದಾರಿಕೆ ಕಳಕೊಂಡ ಬಂಟರು ,ತಮ್ಮ ಸಾಮುದಾಯಿಕ ಸಂಘಟನೆಯಿಂದ ಅತ್ಯುನತ ವಿದ್ಯಾಬ್ಯಾಸವನ್ನುತಮ್ಮದಾಗಿಸಿ ಎಲ್ಲಾ ರಂಗಗಳಲ್ಲೂ ಪ್ರಾಬಲ್ಯ ಸ್ಥಾಪಿಸಿದರು . ಕೇವಲ ದೇವಸ್ತಾನದ ಪೂಜೆಗೆ ಮಾತ್ರ ಸೀಮಿತರಾಗಿದ್ದ ವ್ಯದಿಕ ಸಮುದಾಯ ಬಿಜಿಪಿ ಪಾಬಲ್ಯಕ್ಕೆ ಬರುತ್ತಲೇ ,ಕೋಮು ಬೀಜ ಬಿತ್ತಿದರು . ಜನಾರ್ಧನ ಪೂಜಾರಿಯವರ ತೆಕ್ಕೆಯಿಂದ ಬಿಲ್ಲವರನ್ನು ಸೆಳೆದು ತಮ್ಮ ಬೇಳೆ ಬೇಯಿಸಿದರು .!ಅವರೇ ಹೇಳುವಂತೆ -ಬಿಲ್ಲವ ಹುಡುಗರ ಕ್ಯೆಗೆ ತಲವಾರು ಕೊಟ್ಟು ,ತಮ್ಮ ಮಕ್ಕಳನ್ನು ಅಮೇರಿಕಾ ,ಯೂರೋಪಿಗೆ ಕಳುಹಿಸಿದರು . ಇನ್ನು ಬಂಟರು ಈ ಟ್ರಾಪಿಗೆ ಬೀಳಲಿಕ್ಕಿಲ್ಲ ,ಯಾಕೆಂದರೆ ಅವರ ನೇತ್ರತ್ವ ಮತ್ತು ಸಂಘಟನೆ ತುಂಬಾ ಬುದ್ದಿವಂತರ ಕ್ಯೆಲ್ಲಿದೆ .

    Reply
  5. ಸೀತಾ

    “ತಮ್ಮ ಮಕ್ಕಳನ್ನು ಅಮೇರಿಕಾ ,ಯೂರೋಪಿಗೆ ಕಳುಹಿಸಿದರು”

    ಸದ್ಯ! ಕೆಲವರು ತಮ್ಮ ಮಕ್ಕಳನ್ನು ಸಿರಿಯಾ ಇರಾಕ್ ಈಜಿಪ್ಟ್ ತುರ್ಕಿಗೆ ಕಳುಹಿಸುತ್ತಾರಲ್ಲ, ಅವರಿಗಿಂತ ಇವರು ಎಷ್ಟೋ ವಾಸಿ. ಪಾಕಿಸ್ತಾನ ಮೂಲದ ಹಿರಿಯ ಸುಧಾರಣಾವಾದಿ ಚಿಂತಕ ಪತ್ರಕರ್ತ ತಾರೆಕ್ ಫತಾ ಅವರು ಅಮಾಯಕ ಮಕ್ಕಳನ್ನು ಬಾಲ್ಯದಿಂದಲೇ armed jehad ಗೆ ತಯ್ಯಾರು ಮಾಡುವ ಮೂಲಭೂತವಾದಿ ಶಾಲೆಗಳ ಬಗ್ಗೆ ಸಾಕಷ್ಟು ಬೆಳಕು ಚೆಲ್ಲಿದ್ದಾರೆ. ಇಂತಹ ಶಾಲೆಗಳಿಗೆ ಮಕ್ಕಳನ್ನು ಕಳುಹಿಸುವವರು ಆ ಮಕ್ಕಳು ದೊಡ್ಡವರಾದ ಮೇಲೆ ಅವರನ್ನು ಸಿರಿಯಾ ಇರಾಕ್ ಈಜಿಪ್ಟ್ ತುರ್ಕಿಗೆ ಕಳುಹಿಸುವುದು ಸಹಜವೇ ಆಗಿದೆ. ತಾರೆಕ್ ಫತಾ ಅವರು ಮಕ್ಕಳನ್ನು radicalise ಆಗದಂತೆ ತಡೆಯಲು ಮೂಲಭೂತವಾದಿ ಶಾಲೆಗಳನ್ನು ಮುಚ್ಚಬೇಕು ಅಂತ ಸಲಹೆ ನೀಡಿದ್ದಾರೆ. ತಾಲಿಬಾನ್ ಹಾಗೂ ಐ ಎಸ್ ಐ ಎಸ್ ಭದ್ರವಾಗಿ ಬೇರೂರಿರುವ ಪಾಕಿಸ್ತಾನದಲ್ಲೇ ನೂರಾರು ಮೂಲಭೂತವಾದಿ ಶಾಲೆಗಳನ್ನು ಇತ್ತೀಚಿಗೆ ಅಲ್ಲಿನ ಸರಕಾರ ಮುಚ್ಚಿದೆ – ಪಾಕಿಸ್ತಾನದ ಯುವಕರು ಸಿರಿಯಾ ಇರಾಕ್ ಈಜಿಪ್ಟ್ ತುರ್ಕಿಗೆ ಹೋಗುವುದನ್ನು ತಡೆಗಟ್ಟಲು.

    Reply
  6. Salam Bava

    ಕರಾವಳಿಯ ತಲ್ಲಣಗಳ ಕುರಿತು ಚರ್ಚಿಸುವಾಗ ಎಲ್ಲಿಂದಲೋ ಏನೆಲ್ಲಾ ಹೆಕ್ಕಿ ಯಾಕೆ ಹಾಸ್ಪಾಸ್ಪದವಾಗುತ್ತೀರಿ ? ಉಗ್ರವಾದ ಯಾವುದೇ ಧರ್ಮದ ಮುಖವಾಡ ತೊಟ್ಟರೂ ಅದು ಅತ್ಯಂತ ಖಂಡನೀಯ !ಆದರೆ ನಿಮ್ಮ ಮುಖವಾಡ ಯಾವುದೆಂದು ತಿಳಿಯುತ್ತಿಲ್ಲ ,ತಾರಿಕ್ ಫಾತಹಾ ಕೆನಡಾದ ಪ್ರಜೆ , ಓರ್ವ ಯಹೂದಿ ಏಜೆಂಟ್ ಮತ್ತು “ಪೇಮೆಂಟ್ ಜರ್ನಲಿಸ್ಟ್”. ಜಗತ್ತಿನ ಯಾವುದೇ ಪ್ರತಿಷ್ಟಿತ ವಾರ್ತಾಮಾದ್ಯಮಗಳು ಅವನ ಲೇಖನ ಪ್ರಕಟಿಸುದಿಲ್ಲ !ಇನ್ನು ಉಗ್ರವಾದಕ್ಕೆ ಧರ್ಮವಿಲ್ಲ ಎಂದು ಎಲ್ಲರಿಗೂ ತಿಳಿದ ವಿಷಯ ,ಅದನ್ನು ನೀವು ವ್ಯಭವಿಕರಿಸುವ ಆವಶ್ಯಕತೆ ಏನಿದೆ .come on grow up!

    Reply
    1. ಸೀತಾ

      ಅಯ್ಯೋ ಬಾವಯ್ಯ! ಕರಾವಳಿಯ ತಲ್ಲಣಗಳಿಗೆ ಮದ್ರಸಾಗಳಲ್ಲಿ ಎಳೆಯ ಹುಡುಗರ ಮನಸ್ಸಿನಲ್ಲಿ ಬಿತ್ತಲ್ಪಡುತ್ತಿರುವ ಉಗ್ರಗಾಮಿ ತತ್ವಗಳೇ ಮುಖ್ಯ ಕಾರಣ. ಆದುದರಿಂದಲೇ ತಾವು ಮದ್ರಸಾಗಳ ಪ್ರಸ್ತಾಪ ಬಂದಾಗ ವಾದವನ್ನು ಹಳಿ ತಪ್ಪಿಸುವ ಮಾತುಗಳನ್ನಾಡುತ್ತೀರಿ. ಪ್ರಾಮಾಣಿಕ ಚರ್ಚೆ ಬೇಕು ಅಂತ ಹೇಳುವುದು ಪ್ರಾಮಾಣಿಕ ಚರ್ಚೆ ಆಗದ ಹಾಗೆ ನೋಡಿಕೊಳ್ಳುವುದು; ಉಗ್ರವಾದಕ್ಕೆ ಮತಧರ್ಮವಿಲ್ಲ ಎನ್ನುವುದು ಆದರೆ ಉಗ್ರಗಾಮಿತ್ವದ ವಿರೋಧಕ್ಕೆ ಮತಧರ್ಮವನ್ನು ಆರೋಪಿಸುವುದು! ಇದೇ ಅಲ್ಲವೇ ನಿಮ್ಮ ಮುಲ್ಲಾಗಳು ಮಾಡುತ್ತಿರುವುದು! ಉಗ್ರಗಾಮಿತ್ವವನ್ನು ಮೂಲದಲ್ಲೇ ವಿರೋಧಿಸುವ ತಾರೆಕ್ ಫತಾ ಅವರ ಯೋಗ್ಯತೆ ಏನು ಅಂತ ನಿಮ್ಮಿಂದ ತಿಳಿದುಕೊಳ್ಳುವ ಅಗತ್ಯವಿಲ್ಲ. ಸುಧಾರಣಾವಾದಿಗಳನ್ನು ಯಹೂದಿ ಏಜೆಂಟ್ ಎಂದು ಕರೆಯುವುದು ನೀಚ ಬುದ್ಧಿಯ ದ್ಯೋತಕವಷ್ಟೇ ಅಲ್ಲ ಮತೀಯ ಉಗ್ರತ್ವದ ಚಿಹ್ನೆಯೂ ಆಗಿದೆ.

      Reply
      1. Salam Bava

        ಶೀತಾರೆ ,ನಾನು ಯಾವುದಕ್ಕೆ ಪ್ರತಿಕಯಿಸಬೇಕು ಅಥವಾ ಬೇಡ ಎಂದು ತೀರ್ಮಾನಿಸುದು ನಾನೇ . ಅದಕ್ಕೆ ನಿಮ್ಮ ಕುಹಕ ಬುದ್ದಿಯ ಸಲಹೆ ಅಗತ್ಯವಿಲ್ಲ . ನಿಮ್ಮದೇ ಪರಿವಾರದ
        ಪಿಂಚಣಿ ಪಡೆದ ಮುದಿ ರೋಗಿಸ್ಟ ಮನಸ್ಸುಗಳು – ಇಡೀ ದೇಶದ ಆಹಾರಕ್ರಮ,ಜೀವನ ಕ್ರಮ ,ದನ ,ಪಾಕಿಸ್ತಾನ ಎಂದು ಬೊಬ್ಬಿಟ್ಟು ಬೆಂಕಿ ಹಚ್ಚಿದ್ದು ಸಾಲದೇ ? ಬಿಹಾರದ ಕುರಿತಾದ ಒಂದು ಆರೋಗ್ಯಕರ ಚರ್ಚೆಯನ್ನು ,ದ್ವೇಷ ಪೂರಿತವಾಗಿ ಮಾಡಿದ್ದು ನೀವು . ಮದ್ರಸ ,ಮೌಲವಿ ಗಳ ಕುರಿತಾಗಿ ನಿಮಗೇನು ತಿಳಿದಿದೆ ?ಅಲ್ಲಿ ನೀಡುವ ಲೌಕಿಕ ಮತ್ತು ಪಾರಮಾರ್ಥಿಕ ಶಿಕ್ಷಣ ,ಬ್ರಾತತ್ವ ,ಶಾಂತಿ ,ಪರಸ್ಪರ ಸ್ನ್ಹೇಹ ,ಕುರಿತು ಮೊದಲು ತಿಳಿದು ಅನಂತರ ಬೊಗಳೆ ಬಿಡಿ !
        ಇದು ಎಲ್ಲಾ ನಿಮ್ಮ ಕೆರೆತ ಬಿಹಾರದ ಸೋಲಿನಿಂದ ಉದ್ಭವಿಸಿದ್ದು . ಪ್ರಭುಗಳು ನಿಮ್ಮ ಮೊಸಳೆ ಕಣ್ಣೀರಿಗೆ ಸರಿಯಾಗಿ ಕೊಟ್ಟಿದ್ದಾರಲ್ಲಾ . ಬಿಹಾರದಲ್ಲಿ ನಿತೀಶ್ ಮತ್ತು ಲಾಲು ಪ್ರಸಾದರು ಅಧಿಕಾರದಲ್ಲಿ ಇದ್ದಾರೆ ,ಸಾಕು . ಓರ್ವನೇ ಮುಸ್ಲಿಂ ಮಂತ್ರಿ ಇಲ್ಲವಾದರೂ ಪರವಾ ಇಲ್ಲಾ !

        Reply
        1. Sumanasa

          “ಬಿಹಾರದಲ್ಲಿ ಓರ್ವನೇ ಮುಸ್ಲಿಂ ಮಂತ್ರಿ ಇಲ್ಲವಾದರೂ ಪರವಾ ಇಲ್ಲಾ !”

          ತಥಾಸ್ತು!

          Reply
        2. ಸೀತಾ

          ಬಾವಯ್ಯ, ತಾರೆಕ್ ಫತಾ ಅವರನ್ನು ಅಸಲಿ ಮುಸ್ಲಿಂ ಎಂದು ಯಾಕೆ ನೀವು ಗಣಿಸುವುದಿಲ್ಲ? ತಾರೆಕ್ ಫತಾ ಅವರು ತಮ್ಮ ಇತ್ತೀಚಿನ ಬರಹವೊಂದರಲ್ಲಿ ಹೀಗೆ ಹೇಳಿದ್ದಾರೆ: “I write as a Muslim whose ancestors were Hindu. My religion, Islam, is rooted in Judaism, while my Punjabi culture is tied to that of the Sikhs. Yet I am told by Islamists that without shedding this multifaceted heritage, if not outrightly rejecting it, I cannot be considered a true Muslim.” ನಿಮಗೆ ಫತಾ ಅವರ multifaceted heritage ಇಷ್ಟವಿಲ್ಲ ಅಂತ ನೇರವಾಗಿ ಹೇಳಿಬಿಡಿ. ಅದು ಬಿಟ್ಟು ಅವರನ್ನು ‘ಯಹೂದಿ ಏಜೆಂಟ್’.. ‘ಪೇಮೆಂಟ್ ಜರ್ನಲಿಸ್ಟ್’..ಅಂತೆಲ್ಲ ಏಕೆ ನಂಜನ್ನು ಕಾರುತ್ತೀರಿ?

          Reply
    2. BNS

      ನಿಮ್ಮ ವಾದಕ್ಕೆ ಒಪ್ಪದಿದ್ದವರನ್ನು ಉದಾ. ತಾರಿಕ್ ಫತಾ: ‘ಯಹೂದಿ ಏಜೆಂಟ್’.. ‘ಪೇಮೆಂಟ್ ಜರ್ನಲಿಸ್ಟ್’..ಅಂತೆಲ್ಲ ಕರೆಯುವುದು ಸತ್ಯಕ್ಕೆ ಅಪಚಾರ ಮಾಡಿದಂತೆ. ‘ಜಗತ್ತಿನ ಯಾವ ಪ್ರತಿಷ್ಠಿತ ವಾರ್ತಾ ಮಾಧ್ಯಮಗಳೂ ಅವನ ಲೇಖನ ಪ್ರಕಟಿಸುವುದಿಲ್ಲ..’ ಈ ಹೇಳಿಕೆ ಅಂತೂ ನೀವು ಯಾವ ಜಗತ್ತಿನಲ್ಲಿ ಇದ್ದೀರಿ ಅನ್ನುವ ಪ್ರಶ್ನೆಯನ್ನು ಮೂಡಿಸುತ್ತದೆ (ತಾರಿಕ್ ಫತಾ ‘ಟೊರೋಂಟೊ ಸನ್’ ಪತ್ರಿಕೆಯಲ್ಲಿ ನಿಯಮಿತವಾಗಿ ಅಂಕಣವನ್ನು ಬರೆಯುತ್ತಾರೆ), ಕೆನಡಾದ, ಬಹುಶಃ ಅತ್ಯಧಿಕ ಸರ್ಕ್ಯುಲೇಷನ್ ಇರುವ ‘ದಿ ಗ್ಲೋಬ್ ಅಂಡ್ ಮೇಯ್ಲ್’ ಗೆ ನಿಯಮಿತವಾಗಿ ಕೆಲವು ಲೇಖನಗಳನ್ನೂ ನೀಡುತ್ತಾರೆ. ಸಲಾಮ್ ಬಾವಾ ಅವರೆ, ಇಲ್ಲಿ ಓದಿ ಕಮೆಂಟು ಬರೆಯುವವರನ್ನು ನಿಮ್ಮಂತೆ ‘ಮದ್ರಸಾ’ ಶಿಕ್ಷಣ ಪಡೆದವರೆಂದು ಭಾವಿಸಬೇಡಿ.

      Reply
      1. Salam Bava

        ಇನ್ನು ತಾರಿಕ್ ಫ಼ತಾಹ್ ರ ಲೇಖ್ನವನ್ನು ,ಅಥವಾ ಅವರನ್ನು ಕೇವಲ ಇಸ್ಲಾ೦ ನ್ನು
        ದ್ವೇಶಿಸುತ್ತಾರೆ ಎ೦ಬ ಒ೦ದೇ ಕಾರಣಕ್ಕೆ ವ್ಯೆಭವೀಕರಿಸುದಾದರೆ ಅದು ನಿಮ್ಮ ದ್ವೇಷ ಪೂರಿತ
        ಮನಸ್ಸಿನ ಮತ್ತು ಅರಿವಿನ ಕೊರತೆಯ ಹೊರಗೆಡವಿವುಕೆ. ನಾನು ಬರೆದದ್ದು ಯಾವುದೇ ಪತ್ರಿಕೆಯ ಕುರಿತಾಗಿ ಅಲ್ಲ, ಮತ್ತು Newyork times,Washington post,Guardianನ೦ಥಾ ಪ ತ್ರಿಕೆಯ ಕುರಿತಾಗಿ.
        ಮದ್ರಸಾ ಶಿಕ್ಷಣ ನೀವು ಪಡೆದ್ದಿದ್ದರೆ ,ಎಲ್ಲ ಧರ್ಮದವರನ್ನು,ಮಾನವರನ್ನು ಪ್ರೀತಿಸುತ್ತಿದ್ದೆರಿ,ಈ ವಿಷಪೂರಿತ ವರ್ತನೆ ಇರುತ್ತಿರಲಿಲ್ಲ.
        ಕೆನಡಾದ ಇತ್ತೀಚಿನ ಚುನಾವಣೆಯಲ್ಲಿ ಅಲ್ಲಿಯ ಪ್ರಧಾನಿ ಹಾರ್ಪರರ
        ಕನ್ಸರ್ವೆಟಿವೆ ಪಕ್ಷ ತಾನು ಸೋಲುತ್ತೇನೆ ಎ೦ಬುದು ಖಾತ್ರಿಯಾದಾಗ ಇಸ್ಲಮ್ ಫೊಬಿಯ,ಬುರ್ಖಾ
        ಮು೦ತಾದ ಗಿಮಿಕ್ ಗಳನ್ನು ಹರಿಯಬಿಟ್ಟಿತು. ಆದ್ರೆ ಸೋತಿತು.ಲಿಬರಲ್ ಪಾರ್ಟಿಯ ಜುಸ್ಟಿನ್ ಟ್ರುಡ್ ಎ೦ಬ ಯುವಕ ಬುರ್ಖದಾರಿ ಮಹಿಳೆಯರ ಒಟ್ಟಿಗೆ ಪೋಸ್ ಕೊಟ್ಟು,”ಕೆನಡಾದಲ್ಲಿ ಎಲ್ಲಾ ಪ್ರಜೆಗಳು ಸಮಾನರು,ಕೆನಡಾ ಎಲ್ಲರಿಗಾಗಿ ಎ೦ದು” ಒರ್ವ ನಾಯಕನ ದ್ಯೆರ್ಯ,ಅತ್ಮ ವಿಶ್ವಾಸ ತೋರಿಸಿದ,ಗೆದ್ದು ಪ್ರಧಾನಿಯಾದ.
        ಅದೇ ಬಿಜಿಪಿ ಬಿಹಾರದಲ್ಲಿ ಪಟಾಕಿ,ದನ ಎ೦ದು ಕೊನೆ,ಕೊನೆಗೆ ಗಾಳಿ ಬಿಟ್ಟಾಗಲೂ ಸೋತು ನುಚ್ಚೂ ನೋರಾಯಿತು. ದೇಶದಲ್ಲಿ ಕೆಲವು ಕಲುಷಿತ ಮನಸ್ಸಿನವರು ಒ೦ದು ರೀತಿಯ ಅಶಾ೦ತಿ,ಅಸಹನೆಯ ವಾತವರಣ ಹರಡುತ್ತಿರುವಾಗ ,ನಮ್ಮ ಪ್ರಧಾನಿ ತಮ್ಮ ಮೌನದಲ್ಲಿದ್ದಾರೆ.

        Reply
        1. ನಾರಾಯಣ ಹೊಳ್ಳ

          “ಸಲಾಮ್ ಬಾವಾ ಅವರೆ, ಇಲ್ಲಿ ಓದಿ ಕಮೆಂಟು ಬರೆಯುವವರನ್ನು ನಿಮ್ಮಂತೆ ‘ಮದ್ರಸಾ’ ಶಿಕ್ಷಣ ಪಡೆದವರೆಂದು ಭಾವಿಸಬೇಡಿ.”

          ಕರೆಕ್ಟ್! ಅಷ್ಟೇ ಅಲ್ಲ ಮುಸ್ಲಿಮ್ ಮತಾಂಧತೆಯನ್ನು ವಿರೋಧಿಸುತ್ತಿರುವವರೆಲ್ಲರೂ ಸಂಘ ಪರಿವಾರದವರಲ್ಲ ಸಂಘ ಪರಿವಾರದ ಬಗ್ಗೆ ಒಲವು ಇರುವವರೂ ಅಲ್ಲ. ಸತ್ಯ ತಿಳಿದಿದ್ದೂ ಅಂಥವರನ್ನು ಸಂಘಿ ಚೆಡ್ಡಿ ಅಂತ ಕರೆದು ವಾದವನ್ನು ಹಳ್ಳಕ್ಕೆ ಇಳಿಸುವುದೂ ಸರಿಯಲ್ಲ ಬಾವ ಅವರೇ.

          Reply
  7. raj

    seeta…. yake neevu pakistana hagu iraq vishayakke hogtira… namma deshadalli nadeyutiruva ella vishaya sariyagideye…. jaathi hesaralli hodedadikolluvavaru manaveeyate annodu enendu chintisiddeera… yake ellaru muslimaranne target madteera.. even nanobba hindu ada matrakke muslemarannu dveshisabekendu namma hindu sampradaydalli heli kottideye… kole maduvudannu hindu granthadalli nishedisalaagide… adhare jathi hesarinalli kole maduvude ondu sampradayavagisikondiddare… yaro kelavara labhakkagi.. buddi illada janaru manaveeyate marethu.. hodedadikolluthare… tippu jayantigoskara hindugale hareesh yemba yuvakana kole madiddare… obba nijavada manushyanagi alochane madidare nijavada terrorist kesari yuvakare horatu beraru alla…. hindugalu kole madidre adu deshakkagi anteera ade obba musalmana madidre terrorism, deshadrohi anteera … enu nyayavaya idu……..??

    Reply
    1. ನಾರಾಯಣ ಹೊಳ್ಳ

      ಹೆಸರಾಂತ ಪತ್ರಕರ್ತೆ ತವ್ಲೀನ್ ಸಿಂಗ್ ಅವರು ತಮ್ಮ ಲೇಖನವೊಂದಕ್ಕೆ ಬಂದ ಪ್ರತಿಕ್ರಿಯೆಗಳ ಬಗ್ಗೆ ಆಶ್ಚರ್ಯವ್ಯಕ್ತ ಪಡಿಸುತ್ತಾ ಹೇಳಿದ್ದಾರೆ “ಪ್ಯಾರಿಸಿನಲ್ಲಿ ಐ ಎಸ್ ಐ ಎಸ್ ನಡೆಸಿದ ಪಾತಕಿ ಕೃತ್ಯಗಳಿಗೆ ಬಾಬರಿ ಮಸೀದಿ ಧ್ವಂಸವೇ ಮೂಲ ಕಾರಣ ಅಂತ ಅನೇಕ ಮುಸಲ್ಮಾನರು ನಂಬಿದ್ದಾರೆ” ಅಂತ! ಹಾಗೆ ವರ್ತಮಾನದ ಅನೇಕ ಓದುಗರಿಗೆ ಭಾರತದಲ್ಲಿ ಜರುಗುವ ಎಲ್ಲಾ ದುಷ್ಕೃತ್ಯಗಳಿಗೆ ಜಾತಿ ಪದ್ಧತಿಯೇ ಕಾರಣ ಎಂಬ ನಂಬಿಕೆ ಇದೆ!

      Reply
      1. Salam Bava

        .ತಲ್ವೀನ್ ಸಿಂಗ್ ನಾನು ಸಹಾ ಮೆಚ್ಚುವ ಪತ್ರಕರ್ತೆ,ಅವರು ಹೇಳುವ ಹಾಗೆ ಕೆಲವು ಮೂರ್ಖರು
        ನ೦ಬಿರಬಹುದು!ಅದೇ ತವ್ಲೀನ್ ,ಸಂಘ ಪರಿವಾರಿ ದ್ವೇಷವಾಹಕರ ಕುರಿತು ಅತೀ ಕಠಿಣವಾಗಿ ದಿನ
        ನಿತ್ಯ ಬರೆಯುತ್ತಾರೆ,ಟಿವಿ ಚರ್ಚೆಯಲ್ಲಿ ವಾದಿಸುತ್ತಾರೆ. ಅದರ ಕುರಿತು ಇಲ್ಲಿ ಯಾವುದೇ ಪ್ರಸ್ತಾಪವಿಲ್ಲವೇಕೆ ?

        Reply
        1. ನಾರಾಯಣ ಹೊಳ್ಳ

          ರಾಜ್ ಅವರು ಜಾತಿ ಪದ್ಧತಿಯೇ ದೇಶದ ಎಲ್ಲಾ ಸಮಸ್ಯೆಗಳಿಗೂ ಕಾರಣ ಅಂತ ಹೇಳಿದ್ದಾರೆ, ಅವರ ಕಮೆಂಟಿಗೆ ಪ್ರತಿಕ್ರಿಯೆಯಾಗಿ ಸಂದರ್ಭೋಚಿತವಾಗಿ ತವ್ಲೀನ್ ಸಿಂಗ್ ಅವರ ಹೇಳಿಕೆಯ ಪ್ರಸ್ತಾಪ ಮಾಡಲಾಗಿದೆ. ಕಾಂಟೆಕ್ಸ್ಟ್ ಅನ್ನು ಗ್ರಹಿಸದೆ ಹೋದಿರಿ ನೀವು ಸಲಾಂ ಅವರೇ.

          Reply
  8. jagadishsmga

    ನವೀನ್, ಭಯೋತ್ಪಾದನೆಗಾಗಿ ಐಸಿಸ್ ಅಲ್ಕೈದಾ ನೇಮಿಸಿಕೊಳ್ಳುತ್ತಿರುವ ಮುಸ್ಲಿಮರಲ್ಲಿ ಎಲ್ಲ ಪಂಗಡದವರೂ ಇದ್ದಾರಾ? ಇದರ ಬಗ್ಗೆ ಏನಾದರೂ ಹೆಚ್ಚಿಗೆ ತಿಳಿದಿದೆಯಾ?

    Reply
  9. muaad gm

    Hello seetha mam… maneyolage koothu vyarthapralaapa beda…eradu dina madrasa da mettilu hatthi nodi…jnaanodayavaagatthe…

    Reply

Leave a Reply

Your email address will not be published. Required fields are marked *