ಪ್ರೊ.ಕೆ.ರಾಮದಾಸ್ ಪ್ರತಿಭಟನೆ ಮತ್ತು ‘ರಾಮ’ ರಾಜ್ಯ!

ಕೆ.ಎಸ್. ಮಧು

ಅದು ಎಸ್.ಎಂ.ಕೃಷ್ಣ ಮುಖ್ಯಮಂತ್ರಿ ಆಗಿದ್ದ ಕಾಲ. ಮೈಸೂರಿನ ಉಸ್ತುವಾರಿ ಅಂದಿನ ಸಚಿವ ಎಚ್.ವಿಶ್ವನಾಥ್ ರ ಕೈಯಲ್ಲಿತ್ತು. ಮೈಸೂರು ವಿಶ್ವವಿದ್ಯಾನಿಲಯದ ಲಲಿತ ಕಲೆಗಳ ಕಾಲೇಜು ಆವರಣದಲ್ಲೊಂದು ಕಾರ್ಯಕ್ರಮ. ಮುಖ್ಯ ಅತಿಥಿಯಾಗಿ ವಿಶ್ವನಾಥ್ ಭಾಗವಹಿಸಿದ್ದರು. ಅವರು ಇನ್ನೇನು ತಮ್ಮ ಮಾತುಗಳನ್ನು ಆರಂಭಿಸಬೇಕಿತ್ತು. ಆಗ ಅದೆಲ್ಲಿದ್ದವರೋ ಎಂಬಂತೆ ವಿಚಾರವಾದಿ ಕೆ.ರಾಮದಾಸ್ ಎದ್ದು ನಿಂತರು. ‘ನಿಷೇಧವಾಗಿರುವ ಪ್ರಾಣಿ ಬಲಿಯನ್ನು ಮಾಡಿಬಂದಿರುವ ಮಂತ್ರಿ ನೀನು. ನೀನು ಆ ಹುದ್ದೆಗೆ ನಾಲಾಯಕ್..” ಎಂದು ದನಿ ಎತ್ತಿದರು. ಬೆಳವಣಿಗೆಯಿಂದ ಸ್ವಲ್ಪ ವಿಚಲಿತರಾದ ‘ನೀವು ನಾಲಾಯಕ್ ವಿಚಾರವಾದಿ’ ಎಂದು ಜಗಳಕ್ಕೆ ನಿಂತರು.

ಸಚಿವರಾದ ವಿಶ್ವನಾಥ್ ಅವರ ಕುಟುಂಬ ಕೆಲವೇ ದಿನಗಳ ಹಿಂದೆ ತಮ್ಮ ಊರಿನ ಹತ್ತಿರದ ದೇವರಿಗೆ ಕುರಿ ಬಲಿ ಕೊಟ್ಟು ಊಟ ಏರ್ಪಡಿಸಿದ್ದರು ಎಂಬ ಸುದ್ದಿ ಅದೇ ದಿನ ವರದಿಯಾಗಿತ್ತು. ಆ ಸುದ್ದಿಯನ್ನು ಓದಿದ ರಾಮದಾಸ್ ಅವರು, ಒಬ್ಬ ಮಂತ್ರಿಯಾದವProf.Ramadas-3ರು ಹೀಗೆ ಮಾಡುವುದು ಸರಿಯಲ್ಲ, ಹಾಗಾಗಿ ಅವರನ್ನು ನೇರಾನೇರ ಎಲ್ಲರ ಎದುರು ಟೀಕಿಸಬೇಕು ಎಂದು ತಮ್ಮ ಒಂದೆರಡು ಗೆಳೆಯರೊಂದಿಗೆ ಆ ಕಾರ್ಯಕ್ರಮಕ್ಕೆ ಹೋಗಿ ಹಾಗೆ ವಾದಕ್ಕಿಳಿದಿದ್ದರು.

ನೆನಪಿರಲಿ. ಅಂದಿಗೆ, ರಾಮದಾಸ್ ಮಹಾರಾಜ ಕಾಲೇಜಿನ ಕನ್ನಡ ಪ್ರಾಧ್ಯಾಪಕ. ವಿಶ್ವನಾಥ್ ಕ್ಯಾಬಿನೆಟ್ ದರ್ಜೆಯ ಮಂತ್ರಿ. ಇಂದು ರಾಮದಾಸ್ ನಮ್ಮ ಮಧ್ಯೆ ಇಲ್ಲ. ಆದರೆ ವಿಶ್ವನಾಥ್ ಸೇರಿದಂತೆ, ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದ ಅನೇಕರು ಇಂದು ಇದ್ದಾರೆ.

ಈಗ ಹೇಳಿ, ಇಂತಹದೊಂದು ಸನ್ನಿವೇಶವನ್ನು ನಾವು ಇಂದು ಕಾಣಬಹುದೇ? ಕ್ಯಾಬಿನೆಟ್ ದರ್ಜೆಯ ಮಂತ್ರಿ ಬೇಡ, ತನ್ನ ಊರಿನ ಶಾಸಕನನ್ನು ಟೀಕಿಸುವುದು ಒತ್ತಟ್ಟಿಗಿರಲಿ, ಎದುರು ನಿಂತು ಕತ್ತು ಬಗ್ಗಿಸದೆ ಮಾತನಾಡುವ ಸಾಮರ್ಥ್ಯ ಎಷ್ಟು ಪ್ರಾಧ್ಯಾಪಕರಿಗಿದೆ? ಕೆಲ ಕಾಲೇಜುಗಳಲ್ಲಿ ಶಾಸಕರು ಬಂದಾಗ ಕಾಲಿಗೆ ಬಿದ್ದ ಪ್ರಾಂಶುಪಾಲರುಗಳಿದ್ದಾದರೆ, ಪ್ರಾಧ್ಯಾಪಕರುಗಳಿದ್ದಾರೆ. ಇಂತಹವರಿಂದ ಹುಡುಗರು ಕಲಿಯುವುದೇನನ್ನು?

ಪ್ರೊ.ಕೆ.ರಾಮದಾಸ್ ಅವರ ಉದಾಹರಣೆಯನ್ನು ಈಗಿನ ಕೆಲ ಹುಡುಗರಿಗೆ ಹೇಳಿದರೆ, ‘ಇವನ್ಯಾರೋ ಸುಳ್ಳು ಹೇಳುತ್ತಿದ್ದಾನೆ’ ಎನ್ನಿಸಬಹುದು. ಏಕೆಂದರೆ ಇಂದಿನ ಪರಿಸ್ಥಿತಿ ಹಾಗಿದೆ. ಅಂತಹದೊಂದು ಘಟನೆ ಈ ಹೊತ್ತಲ್ಲಿ ನಡೆದಿದ್ದರೆ, ಏನೆಲ್ಲಾ ಆಗುತ್ತಿತ್ತು ಎನ್ನುವುದನ್ನು ಒಂದ್ಸಾರಿ ಯೋಚನೆ ಮಾಡೋಣ. “ಏ. Vishwa-1ಯಾರಲ್ಲಿ ಪೊಲೀಸರು, ಈತನನ್ನು ಒಳಗೆ ಹಾಕಿ..” – ಎಂದು ಆಜ್ಞೆ ಹೊರಡಿಸಬಹುದಾದ ಮಂತ್ರಿ, ಶಾಸಕರು ನಮ್ಮ ಮಧ್ಯೆ ಇದ್ದಾರೆ. “ಅದ್ಸರಿ, ಹೀಗೆ ಅವರು ಮಂತ್ರಿಯವರನ್ನು ಟೀಕೆ ಮಾಡಲು ಹೋಗುವಾಗ, ಕಾಲೇಜಿಗೆ ರಜೆ ಹಾಕಿದ್ರಾ..ಅಥವಾ ಹುಡಗರಿಗೆ ಪಾಠ ಮಾಡೋದನ್ನು ಬಿಟ್ಟು ಮಂತ್ರಿಗೆ ಪಾಠ ಮಾಡೋಕೆ ಬಂದಿದ್ದರಾ.?” – ಹೀಗೆ ಪ್ರಶ್ನೆ ಮಾಡುವ ಮಾಧ್ಯಮದವರಿದ್ದಾರೆ.

ರಾಮದಾಸ್ ಅಂತಹವರು ತಮ್ಮ ಅಂತಹದೊಂದು ಪ್ರತಿಭಟನೆಯ ಮೂಲಕ ಒಬ್ಬ ಶಿಕ್ಷಕ ಒಂದು ವರ್ಷ ಕಾಲ ಪಾಠ ಮಾಡಿ ಹುಡುಗರಿಗೆ ತಿಳಿಸುವುದಕ್ಕಿಂತ ಹೆಚ್ಚಿನ ಮೌಲ್ಯಯುತವಾದದ್ದನ್ನು ಬೋಧಿಸಿದ್ದರು. ಹಾಗೆ ಪಾಠ ಮಾಡುವವರು ಇಂದು ಬೇಕಾಗಿದ್ದಾರೆ. ಆದರೆ ನಮ್ಮನ್ನಾಳುವ ಸರಕಾರಕ್ಕೆ ಇಂತಹವರ ಅಗತ್ಯ ಇದ್ದಂತೆ ಕಾಣುವುದಿಲ್ಲ. ಇಲ್ಲವಾಗಿದ್ದಲ್ಲಿ, ಪ್ರೊ.ಬಿ.ಪಿ.ಮಹೇಶ್ ಚಂದ್ರ ಗುರು ಬಂಧನವಾಗುತ್ತಿರಲಿಲ್ಲ. ಅವರು ತಮ್ಮ ಮಾನವ ಹಕ್ಕುಗಳ ಬಗೆಗಿನ ಉಪನ್ಯಾಸದಲ್ಲಿ ಹೇಳಿದ್ದಿಷ್ಟೆ. “ರಾಮ ಸೀತೆಯನ್ನು ಶಂಕಿಸಿ, ಅಗ್ನಿ ಪ್ರವೇಶ ಮಾಡಲು ಹೇಳುವ ಮೂಲಕ, ಆತ ಸೀತೆಯ ಹಕ್ಕುಗಳನ್ನು ನಿರಾಕರಿಸಿದ್ದ”. ಅದೊಂದು ಮಾತನ್ನು ಸಹಿಸಿಕೊಳ್ಳಲಾಗದವರು ದೂರು ಕೊಟ್ಟರು. ಅವರ ಬಂಧನವಾಯ್ತು. ಅಷ್ಟರ ಮಟ್ಟಿಗೆ ನಮ್ಮದು ರಾಮ ರಾಜ್ಯ…ಸಿದ್ದರಾಮ ರಾಜ್ಯ!

9 thoughts on “ಪ್ರೊ.ಕೆ.ರಾಮದಾಸ್ ಪ್ರತಿಭಟನೆ ಮತ್ತು ‘ರಾಮ’ ರಾಜ್ಯ!

  1. NagarajaM

    tombattombattu jana buddhivaada heluvavariddaru-adannu paalisabekaadavnu obbane-iga heluvavanu obbane, paalisabekaadavaru 99jana

    Reply
  2. Ananda Prasad

    ಪ್ರೊ.ಬಿ.ಪಿ.ಮಹೇಶ್ ಚಂದ್ರ ಗುರು ಅವರ ಬಂಧನ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ವೈಚಾರಿಕ ಅಸಶಿಷ್ಣುತೆಯ ಮುಂದುವರಿದ ಭಾಗ. “ರಾಮ ಸೀತೆಯನ್ನು ಶಂಕಿಸಿ, ಅಗ್ನಿ ಪ್ರವೇಶ ಮಾಡಲು ಹೇಳುವ ಮೂಲಕ, ಆತ ಸೀತೆಯ ಹಕ್ಕುಗಳನ್ನು ನಿರಾಕರಿಸಿದ್ದ” ಎಂಬ ಮಹೇಶ್ ಚಂದ್ರ ಗುರು ಅವರ ಮಾತಿಗೇ ಬಂಧನ ನಡೆಯುತ್ತದೆ ಎಂದಾದರೆ ಪಂಪ ಪ್ರಶಸ್ತಿ ಪುರಸ್ಕೃತ ‘ದೇವರು’ ಪುಸ್ತಕ ಬರೆದ ಪ್ರೊ. ಎ. ಎನ್. ಮೂರ್ತಿರಾಯರು ಅಜೀವನ ಪರ್ಯಂತ ಜೈಲಿನಲ್ಲೇ ಇರಬೇಕಾಗಿತ್ತು. ಪೆರಿಯಾರ್ ರಾಮಸ್ವಾಮಿ ನಾಯ್ಕರ್ ಅವರನ್ನು ಧಾರ್ಮಿಕ ಭಾವನೆಗೆ ಧಕ್ಕೆ ಮಾಡಿದ್ದಾರೆ ಎಂದು ನೇಣು ಹಾಕಬೇಕಾಗಿತ್ತು. ನಾವು ಹಿಟ್ಲರನ ಸರ್ವಾಧಿಕಾರಿ ರಾಜ್ಯದಲ್ಲಿ ಬದುಕುತ್ತಿ ದ್ದೇವೆಯೋ ಅಥವಾ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿಯೋ ಎಂದು ಮರುಚಿಂತನೆ ನಡೆಸಬೇಕಾದ ಅಗತ್ಯ ಇಂದು ಕಾಣುತ್ತಿದೆ.

    Reply
    1. ಸೀತಾ

      ಇದೇನು ಸ್ವಾಮಿ ತಾವು ಲೋಹಿಯಾ ಸಮಾಜವಾದ ಹಿನ್ನೆಲೆಯ ಅಹಿಂದ ಜನನಾಯಕ ಸಿದ್ದರಾಮಯ್ಯನವರ ಘನ ಸರಕಾರವನ್ನೇ ನಿರಂಕುಶ ಪಾತಕಿ ಹಿಟ್ಲರನ ಸರ್ವಾಧಿಕಾರಕ್ಕೆ ಹೋಲಿಸಿದ್ದೀರಿ?!! ನಿಮ್ಮಂತಹ ಕೃತಘ್ನ ವಿಚಾರವಾದಿಗಳನ್ನು ನಂಬಿ ಸಿದ್ದರಾಮಯ್ಯನವರು ಜನವಿರೋಧಿ ಮೂಢನಂಬಿಕೆ ನಿಷೇಧ ಖಾಯಿದೆ ತರಲು ಮುಂದಾಗಿದ್ದರು! ನೀವು ಮಾಡುವ ವೈಚಾರಿಕ ಮಡೆಸ್ನಾನವನ್ನು ಕಣ್ಣಾರೆ ಕಂಡವರಿಗೆ ಇದಕ್ಕಿಂತ ಕುಕ್ಕೆಯ ಮಡೆಸ್ನಾನ ಎಷ್ಟೋ ವಾಸಿ ಅಂತ ಅನ್ನಿಸದೇ ಇರುವುದಿಲ್ಲ!

      Reply
  3. Sr

    Swamy Anand avre gottidu gottillada tara nataka madabedi. He is not jailed just for that statement. He used very bad words on Rama

    Reply
  4. Ananda Prasad

    ನನ್ನ ಅನಿಸಿಕೆ ಇರುವುದು ಸಿದ್ದರಾಮಯ್ಯ ಸರ್ಕಾರದ ಬಗ್ಗೆ ಅಲ್ಲ, ಇಲ್ಲಿಯ ಅಸಹಿಷ್ಣುತೆಯನ್ನು ಪೋಷಿಸುವ ಧಾರ್ಮಿಕ ಮೂಲಭೂತವಾದಿ ಸಮಾಜದ ಬಗ್ಗೆ. ನನಗೆ ತಿಳಿದಿರುವ ಪ್ರಕಾರ ಮಹೇಶ್ ಚಂದ್ರ ಗುರು ಅವರ ಬಂಧನ ನಡೆಸಿರುವುದು ಸಿದ್ಧರಾಮಯ್ಯ ಸರ್ಕಾರವಲ್ಲ. ಇದು ಸಿದ್ಧರಾಮಯ್ಯ ಸರ್ಕಾರ ತೆಗೆದುಕೊಂಡಿರುವ ತೀರ್ಮಾನ ಅಲ್ಲ. ಇಲ್ಲಿ ಬಂಧನ ನಡೆದಿರುವುದು ನ್ಯಾಯಾಂಗದ ಆದೇಶದ ಮೂಲಕ. ಪುರಾಣದ ಕಟ್ಟು ಕತೆಗಳ ಒಂದು ಒಂದು ಸಣ್ಣ ವಿಮರ್ಶೆಯನ್ನೂ ಸಹಿಸಲಾರದಷ್ಟು ನಮ್ಮ ಜನ ಸರ್ವಾಧಿಕಾರಿ ಮನೋಭಾವ ಬೆಳೆಸಿಕೊಂಡು ನ್ಯಾಯಾಂಗದ ಮೆಟ್ಟಲು ಏರುತ್ತಿದ್ದಾರಲ್ಲ ಅಂಥವರ ಅಸಹಿಸ್ಣುತೆಯ ಬಗ್ಗೆ ನನ್ನ ತೀವ್ರ ಪ್ರತಿರೋಧವಿದೆ. ಚಂದ್ರ ಗುರು ಅವರ ಒಂದು ಸಣ್ಣ ಪುರಾಣದ ಸಣ್ಣ ವಿಮರ್ಶೆಯನ್ನು ಸಹಿಸದೆ ನ್ಯಾಯಾಂಗದ ಮೆಟ್ಟಲು ಏರಿದ ಮಹಾನುಭಾವರು ಯಾರೋ ನನಗೆ ಗೊತ್ತಿಲ್ಲ. ಈ ಮಹಾನುಭಾವರು ಮೂರ್ತಿರಾಯರು ಬರೆದ ‘ದೇವರು’ ಎಂಬ ವೈಚಾರಿಕ ಪುಸ್ತಕ ಓದಿಲ್ಲ ಎಂದು ಕಾಣುತ್ತದೆ, ಹಾಗೆಯೇ ಬಂಧನದ ಆದೇಶ ನೀಡಿದ ಘನ ನ್ಯಾಯಾಧೀಶರು ಕೂಡ ‘ದೇವರು’ ಪುಸ್ತಕವನ್ನು ಓದಿಲ್ಲ ಎಂದು ಕಾಣುತ್ತದೆ. ಓದಿದ್ದರೆ ಬಹುಶ ಮೂರ್ತಿರಾಯರಿಗೆ ಗಲ್ಲು ಶಿಕ್ಷೆ ವಿಧಿಸುತ್ತಿದ್ದರೋ ಏನೋ! ಏಕೆಂದರೆ ಆ ಪುಸ್ತಕದಲ್ಲಿ ಪುರಾಣ ಕತೆಗಳ, ದೈವಿಕ ಪುರುಷರ ಬಹಳಷ್ಟು ವಿಮರ್ಶೆ ಇದೆ.

    Reply
    1. ಸೀತಾ

      ಓ ಇತ್ತೀಚಿಗೆ ಪ್ರವಾದಿ ಮಹಮ್ಮದರ ಲೈಂಗಿಕತೆಯ ವಿಮರ್ಶೆ ಮಾಡಿದ ಕಮಲೇಶ್ ತ್ರಿಪಾಠಿ ಎಂಬಾತ ಅದೇ ಕಾರಣಕ್ಕೆ ಜೈಲು ಸೇರಿದ್ದು ಇನ್ನೂ ಅಲ್ಲೇ ಕೊಳೆಯುತ್ತಿರುವುದು ತಮಗೆ ತಿಳಿದಿಲ್ಲವೇ? ಆ ಸಂದರ್ಭದಲ್ಲಿ ವಿಚಾರವಾದಿಗಳು ಜಾಣ ಮೌನವಹಿಸಿ ಮಹೇಶ್ ಗುರುವಿನ ಬಗ್ಗೆ ಕಾಳಜಿ ವ್ಯಕ್ತಪಡಿಸುತ್ತಿರುವುದು ಹಿಪಾಕ್ರಸಿ ಅಲ್ಲವೇ?

      Reply
  5. Ananda Prasad

    ಕಮಲೇಶ್ ತ್ರಿಪಾಠಿ ಎಂಬವರ ವಿಷಯ ನನಗೆ ತಿಳಿದಿಲ್ಲ. ಹೆಸರು ನೋಡಿದರೆ ಇದು ಬೇರೆ ರಾಜ್ಯದಲ್ಲಿ ನಡೆದ ಘಟನೆ, ಅದು ನನಗೆ ತಿಳಿದಿಲ್ಲ. ಧಾರ್ಮಿಕ ವಿಚಾರಗಳ ವಿಮರ್ಶೆ ಮಾಡಿದ್ದಕ್ಕೆ ಅವರನ್ನು ಜೈಲಿಗೆ ಹಾಕಿದ್ದರೆ ಅದು ಕೂಡ ಖಂಡನೀಯವೇ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂಥ ಬಂಧನ ನಡೆಸುವುದು ಯೋಗ್ಯವಲ್ಲ.

    Reply
    1. ಸೀತಾ

      ಅಯ್ಯೋ ಪಾಪ ನೀವು ಕೂಪ ಮಂಡೂಕದಂತೆ ನಿಮ್ಮದೇ ಹೊಂಡದಲ್ಲಿ ಹೊರಳುತ್ತಿದ್ದೀರಿ ತಮಗೆ ಕಮಲೇಶ್ ತ್ರಿಪಾಠಿ ಬಗ್ಗೆ ಏನೂ ತಿಳಿದಿಲ್ಲ! ನಿಮ್ಮ ವಿಚಾರ ಬಿಡಿ ಮಿಕ್ಕ ವಿಚಾರವಾದಿಗಳೂ ಕೂಪ ಮಂಡೂಕಗಳೇ ಇರಬೇಕು ಏಕೆಂದರೆ ಅವರೂ ಕಮಲೇಶ್ ತ್ರಿಪಾಠಿಯ ವಿಚಾರದಲ್ಲಿ ಏನೂ ತಿಳಿಯದವರ ಹಾಗೆ ವರ್ತಿಸುತ್ತಿದ್ದಾರೆ!

      Reply
    2. ಸೀತಾ

      ಇದನ್ನು ಓದಿ: _http://www.openthemagazine.com/article/society/call-for-jihad#all

      “IT SHOULD BE borne in mind that the principle of blasphemy against Prophet Muhammad often invites murder by almost all Islamic groups, Shia or Sunni, Barelvi or Deobandi. For example, Imam Khomeini of Iran issued a fatwa (decree) of death against Salman Rushdie. Two brothers owing allegiance to Al-Qaeda in the Arabian Peninsula (AQAP) shot dead the editors of Charlie Hebdo in Paris. Malik Mumtaz Qadri, an elite Pakistani commando owing allegiance to the Barelvi group Dawat-e-Islami, assassinated Punjab’s liberal governor Salman Taseer for advocating the reform of blasphemy laws. By the same theological token, Islamic clerics of Bijnor led by Maulana Anwarul Haq Sadiq publicly issued a reward of Rs 51 lakh for anyone who could kill Kamlesh Tiwari, whether in prison or outside, for blasphemy.”

      Reply

Leave a Reply

Your email address will not be published. Required fields are marked *