ಸಾವಿನ ನಂತರ ‘ಹೀರೋ’ ಆದ ಎಂ.ಕೆ. ಗಣಪತಿ!

                                                                                                             – ನವೀನ್ ಸೂರಿಂಜೆ

ಡಿವೈಎಸ್ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಈಗ ಚರ್ಚೆಯ ವಿಷಯವಾಗಿದೆ. ಈ ಗಣಪತಿಗೆ ಒಂದು ಇತಿಹಾಸವಿದೆ. ಮಂಗಳೂರಿನ ಚರ್ಚ್ ದಾಳಿಯಲ್ಲಿ ಆಗ ಕದ್ರಿ ಇನ್ಸ್ ಪೆಕ್ಟರ್ ಆಗಿದ್ದ ಎಂ ಕೆ ಗಣಪತಿ ಪಾತ್ರವನ್ನು ನಾನು ಕಣ್ಣಾರೆ ಕಂಡಿದ್ದೆ. ಬಿಜೆಪಿ ಸರಕಾರದ ಅವಧಿಯಲ್ಲಿ ಭಜರಂಗದಳದಿಂದ ಪ್ರಾರಂಭವಾದ ಚರ್ಚ್ ದಾಳಿಯನ್ನು ಪೊಲೀಸ್ ಯೂನಿಫಾರಂ ಮೂಲಕವೇ ಮುನ್ನಡೆಸಿದವರು ಎಂ.ಕೆ ಗಣಪತಿ.

 

ಪೊಲೀಸರ ಚರ್ಚ್ ದಾಳಿಯಲ್ಲಿ ನೋವುಂಡವರು.

ಪೊಲೀಸರ ಚರ್ಚ್ ದಾಳಿಯಲ್ಲಿ ನೋವುಂಡವರು.

ಪೊಲೀಸ್ ಅಧಿಕಾರಿಯೊಬ್ಬನ ಸಾವಿಗೆ ಮರುಕವಿದೆ. ಆದರೆ ಆ ಪೊಲೀಸ್ ಅಧಿಕಾರಿಯನ್ನು ಹೀರೋ ಮಾಡುವ ಮುನ್ನ ಆತನ ಇತಿಹಾಸ ಅರಿಯುವುದು ಮುಖ್ಯ.

 

2008 ರಲ್ಲಿ ಮಂಗಳೂರಿನ ಮಿಲಾಗ್ರಿಸ್ ಅಡೋರೇಷನ್ ಮೊನೆಸ್ಟ್ರಿ ಎಂಬ ಕ್ರಿಶ್ಚಿಯನ್ನರ ಧರ್ಮಶಾಲೆ ಮೇಲೆ ಭಜರಂಗದಳ ದಾಳಿ ನಡೆಸಿತ್ತು. ಇದು ಮಂಗಳೂರಿನಲ್ಲಿ ಆ ವರೆಗೂ ಬೀದಿಗಿಳಿಯದ ಕ್ರಿಶ್ಚಿಯನ್ ಸಮುದಾಯ ಬೀದಿಗಿಳಿಯುವಂತೆ ಮಾಡಿತ್ತು. ರಾಜ್ಯದಲ್ಲಿ ಬಿಜೆಪಿ ಸರಕಾರ ಆಳ್ವಿಕೆ ಮಾಡುತ್ತಿದ್ದ ಸಂಧರ್ಭದಲ್ಲಿ ಭಜರಂಗದಳ ನಡೆಸಿದ ದಾಳಿಗೆ ಪೂರಕವಾಗಿ ಪೊಲೀಸರೂ ವರ್ತಿಸತೊಡಗಿದ್ರು.

 

ಅಡೋರೇಷನ್ ಮೊನೆಸ್ಟ್ರಿ ಮೇಲೆ ದಾಳಿ ನಡೆದ ಮಾಹಿತಿ ದೊರೆತ ತಕ್ಷಣ ನಾವು ಪತ್ರಕರ್ತರೂ ಚರ್ಚಗೆ ಭೇಟಿ ನೀಡಲಾರಂಭಿಸಿದೆವು. ನಂತರ ಮಂಗಳೂರಿನಾದ್ಯಂತ ಕ್ರಿಶ್ಚಿಯನ್ ಪ್ರಾರ್ಥನಾ ಮಂದಿರಗಳ ಮೇಲೆ ದಾಳಿ ನಡೆಯಲಾರಂಭಿಸಿತು. ದಾಳಿ ಎಲ್ಲೆಲ್ಲಿ ನಡೆಯಿತೋ ಅಲ್ಲೆಲ್ಲಾ ಪತ್ರಕರ್ತರಾದ ನಾವುಗಳೂ ಇರುತ್ತಿದ್ದೆವು. ವಾಸ್ತವವಾಗಿ ಭಜರಂಗಿಗಳು ದಾಳಿ ನಡೆಸಿದ್ದು ಮಿಲಾಗ್ರಿಸ್ ಅಡೋರೇಷನ್ ಮೊನೆಸ್ಟ್ರಿ ಎಂಬ ಮಠದ ಮಾಧರಿಯ ಧರ್ಮಶಾಲೆಗೆ ಮಾತ್ರ. ಉಳಿದಂತೆ ಬಿಜೈ ಚರ್ಚ್, ಕುಲಶೇಖರ ಚರ್ಚ್ಗಳಿಗೆ ನಡೆದ ದಾಳಿಯ ವೇಳೆ ಒಂದೇ ಒಂದು ಭಜರಂಗಿಗಳು ಇರಲಿಲ್ಲ. ಆದರೂ ದಾಳಿಯಾಗಿತ್ತು.

 

ಕದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಕುಲಶೇಖರ ಚರ್ಚ್ ನಲ್ಲಿ ಕ್ರಿಶ್ಚಿಯನ್ ಯುವಕರು ಸೇರಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಬಂದಿತ್ತು. ತಕ್ಷಣ ಕದ್ರಿ ಪೊಲೀಸ್ ಇನ್ಸ್ಸ್ಪೆಕ್ಟರ್ ಎಂ ಕೆ ಗಣಪತಿ ನೇತೃತ್ವದಲ್ಲಿ ಪೊಲೀಸರು ಕುಲಶೇಖರ ಚಚರ್್ಗೆ ಧಾವಿಸಿದ್ರು. ಎಂ ಕೆ ಗಣಪತಿ ಮತ್ತು ತಂಡ ಕುಲಶೇಖರ ಚರ್ಚ್ ಗೆ ಬರುತ್ತಿದ್ದಂತೆಯೇ ನಾನೂ ಕೂಡಾ ಕುಲಶೇಖರ ಚರ್ಚ್ ಆವರಣ ಪ್ರವೇಶಿಸಿದ್ದೆ. ಕುಲಶೇಖರ ಚರ್ಚ್ ಒಳಗೆ ಕ್ರಿಶ್ಚಿಯನ್ನರು ಪ್ರಾರ್ಥನೆ ನಡೆಸುತ್ತಿದ್ದರು. ಪ್ರಾರ್ಥನೆ ಜೋರಾಗಿ ಹೊರಗೆ ಕೇಳಿಸುತ್ತಿತ್ತು.

 

ವಾಹನದಿಂದ ಇಳಿದ ಎಂ ಕೆ ಗಣಪತಿ ಕ್ರಿಶ್ಚಿಯನ್ನರು ಪ್ರಾರ್ಥನೆ ನಿಲ್ಲಿಸಿ ಹೊರಬರುವಂತೆ ಸೂಚಿಸಿದ್ರು. ಪ್ರಾರ್ಥನನಿರತರು ಹೊರಬರಲು ಒಪ್ಪಲಿಲ್ಲ. ಅಷ್ಟರಲ್ಲಿ ಚರ್ಚ್ ಒಳಗೆ ನುಗ್ಗುವಂತೆ ಪೊಲೀಸರಿಗೆ ಎಂ ಕೆ ಗಣಪತಿ ಸೂಚಿಸಿದ್ರು. ಆಗ ಹಿರಿಯ ವಕೀಲರಾದ ಮರಿಯಮ್ಮ ಥಾಮಸ್ ಮತ್ತು ಚರ್ಚ್ ನ ಫಾದರ್ ಒಬ್ಬರು ಮಧ್ಯ ಪ್ರವೇಶಿಸಿದರು. ಕೊನೆಗೆ ಎಂ ಕೆ ಗಣಪತಿ ಸೂಚನೆಯಂತೆ ಚರ್ಚ್ ಒಳಗಿದ್ದ ಮಹಿಳೆಯರು, ಮಕ್ಕಳು, ನನ್ ಗಳನ್ನು ಸರತಿ ಸಾಲಿನಲ್ಲಿ ಹೊರಗೆ ಬರುವಂತೆ ಮಾಡಲಾಯ್ತು. ಶಿಸ್ತುಬದ್ದವಾಗಿ, ಶಾಂತಿಯುತವಾಗಿ ಹೊರಬರುತ್ತಿದ್ದ ಮಹಿಳೆಯರು, ಮಕ್ಕಳು ಮತ್ತು ಧಾರ್ಮಿಕ ಸಮGanapatiವಸ್ತ್ರ ಧರಿಸಿದ್ದ ನನ್ ಗಳ ಮೇಲೆ ಪೊಲೀಸರು ಲಾಠಿ ಬೀಸಿದ್ದರು. ನನ್ ಗಳ ತೊಡೆ, ಕೈ ಕಾಲುಗಳು ಬಾತು ಹೋಗುವಂತೆ ಬಾರಿಸಲಾಗಿತ್ತು. ಆ ಚರ್ಚಿನಲ್ಲಿ ಪೊಲೀಸರ ಆಗಮನಕ್ಕೂ ಕಾರಣಗಳಿಲ್ಲದೇ ಇರುವ ಸಂಧರ್ಭದಲ್ಲಿ ಆರ್ ಎಸ್ ಎಸ್ ಹಿನ್ನಲೆಯ ಎಂ ಕೆ ಗಣಪತಿ ವಿನಾಕಾರಣ ದಾಳಿ ನಡೆಸಿದ್ದರು.

 

ಇದಾದ ನಂತರ ಚರ್ಚ್ ದಾಳಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಯ್ತು. ಮರುದಿನವೇ ರಾಜ್ಯ ಮಾನವ ಹಕ್ಕು ಆಯೋಗ, ರಾಷ್ಟ್ರೀಯ ಮಾನವ ಹಕ್ಕು ಆಯೋಗ ಮಂಗಳೂರು ಬೇಟಿ ಮಾಡಿ ಚರ್ಚ್ ದಾಳಿಯ ವಿಚಾರಣೆ ಕೈಗೆತ್ತಿಕೊಂಡಿತ್ತು. ಅಮೇರಿಕಾದ ಅಧ್ಯಕ್ಷರೂ ಕೂಡಾ ಮಂಗಳೂರು ಚರ್ಚ್ ದಾಳಿ ಬಗ್ಗೆ ಮಾತನಾಡಿದ ನಂತರ ಗಂಭೀರವಾಗಿ ತೆಗೆದುಕೊಂಡ ಕೇಂದ್ರ ಸರಕಾರವು ಕೇಂದ್ರ ಗೃಹ ಕಾರ್ಯದರ್ಶಿಯನ್ನು ಮಂಗಳೂರಿಗೆ ಕಳುಹಿಸಿತ್ತು. ಮಂಗಳೂರಿಗೆ ಬಂದ ಕೇಂದ್ರ ಗೃಹ ಕಾರ್ಯದರ್ಶಿ ಕೆಲವು ಚರ್ಚ್ ಗಳ ವಿಸಿಟ್ ಮಾಡಿದ ನಂತರ ಕುಲಶೇಖರ ಚರ್ಚ್ ಗೂ ಬೇಟಿ ನೀಡಿದ್ರು. ಆಗ ಚರ್ಚ್ ನಲ್ಲಿದ್ದ ಕ್ರೈಸ್ತ ಸನ್ಯಾಸಿಗಳು ತಮ್ಮ ಬಟ್ಟೆಯನ್ನು ಎತ್ತಿ ಹಲ್ಲೆ ನಡೆದ ಭಾಗಗಳನ್ನು ತೋರಿಸುತ್ತಿದ್ದರು. ಈ ಸಂಧರ್ಭ ಕೇಂದ್ರ ಗೃಹ ಕಾರ್ಯದರ್ಶಿಯವರ ನಿಯೋಗಕ್ಕೆ ಭದ್ರತೆ ನೀಡಲು ಇದೇ ಎಂ ಕೆ ಗಣಪತಿ ಬಂದಿದ್ದರು.

 

ನಿಯೋಗಕ್ಕೆ ಪೊಲೀಸರ ದಾಳಿಯನ್ನು ಜನ ವಿವರಿಸುತ್ತಿರಬೇಕಾದರೆ ಸ್ವಲ್ಪ ಆಚೆ ಬಂದ ಎಂ. ಕೆ. ಗಣಪತಿ ಹಿಂದೂ ಸಂಘಟನೆಗಳ ಪ್ರಮುಖರಿಗೆ ಫೋನಾಯಿಸಿದ್ದರು. ನಾನು ಅಲ್ಲೇ ಇರುವುದನ್ನು ಗಮನಿಸದ ಎಂ ಕೆ ಗಣಪತಿ ಹಿಂದೂ ಸಂಘಟನೆಗಳನ್ನು ಗುಂಪು ಸೇರಿಸಲು ಪ್ರಯತ್ನಿಸುತ್ತಿದ್ದರು. “ಕ್ರಿಶ್ಚಿಯನ್ನರು ಅವರ ಮನವಿ ನೀಡ್ತಾ ಇದ್ದಾರೆ. ನೀವೂ ಕೂಡಾ ಬಂದು ಮತಾಂತರ ಮಾಡುತ್ತಿದ್ದನ್ನು ಹೇಳಿ” ಎಂದು ನನ್ನೆದುರಿಗೇ ಹೇಳಿದ್ದರು. ಕೇಂದ್ರ ಗೃಹ ಕಾರ್ಯದರ್ಶಿ ಚರ್ಚ್ ಆವರಣದಿಂದ ಹೊರಬರುತ್ತಿದ್ದಂತೆ ನೂರಕ್ಕೂ ಅಧಿಕ ಹಿಂದೂ ಸಂಘಟನೆಯ ಕಾರ್ಯಕರ್ತರು ಜಮಾವಣೆಗೊಂಡಿದ್ದರು. ಅವರು ದಾಳಿಕೋರ ಸಂಘಟನೆಯವರು ಎಂದು ತಿಳಿದ ಕೇಂದ್ರ ಗೃಹ ಕಾರ್ಯದರ್ಶಿ ಅವರ ಮನವಿಯನ್ನು ಚರ್ಚ್ ಆವರಣ ಸುತ್ತಮುತ್ತ ಸ್ವೀಕರಿಸಲು ನಿರಾಕರಿಸಿದ್ರು. ಹಿಂದೂ ಸಂಘಟನೆಗಳು ಮನವಿ ನೀಡಬೇಕಾದ್ರೆ ಸರ್ಕ್ಯೂಟ್ ಹೌಸ್ ಗೆ ಬರಲಿ ಎಂದರು. ಇದರಿಂದ ಕೆರಳಿದ ಹಿಂದೂ ಸಂಘಟನೆಯ ಕಾರ್ಯಕರ್ತರು ಕೇಂದ್ರ ಗೃಹ ಕಾರ್ಯದರ್ಶಿ ಕಾರನ್ನು ತಡೆಯಲು ಮುಂದಾದ್ರು. ಆಗ ಭದ್ರತೆಗೆ ನಿಯೋಜಿತರಾಗಿದ್ದ ಎಂ ಕೆ ಗಣಪತಿ ಸುಮ್ಮನಿದ್ದರು. ಇದು ಬಿಜೆಪಿ ಸರಕಾರವಿದ್ರೂ ಅಧಿಕಾರಿಗಳ ಮಟ್ಟದಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು.

 

ಚರ್ಚ್ ದಾಳಿಯಲ್ಲಿ ಎಂ ಕೆ ಗಣಪತಿ ಪಾತ್ರ ಮತ್ತು ಕ್ರೈಸ್ತ ಸನ್ಯಾಸಿನಿಯರ ಮೇಲೆ ನಡೆದ ಭೀಕರ ದಾಳಿಯಲ್ಲಿ ಅವರ ಪಾತ್ರದ ಬಗ್ಗೆ ನಾನು ಚರ್ಚ್ ದಾಳಿಗಳ ವಿಚಾರಣಾ ಆಯೋಗದ ನ್ಯಾಯಮೂರ್ತಿಯಾಗಿದ್ದ ಸೋಮಶೇಖರ್ ರವರ ಬಳಿ ಮಾಹಿತಿ ಹಂಚಿಕೊಂಡಿದ್ದೆ.
ನಂತರ ಉರ್ವಸ್ಟೋರ್ ಎಂಬ ಪ್ರದೇಶದಲ್ಲಿ ಸಿಂಗಲ್ ನಂಬರ್ ದಂಧೆ ಹೆಚ್ಚಾದಾಗ ಡಿವೈಎಫ್ಐ ಹೋರಾಟಕ್ಕಿಳಿದಿತ್ತು. ಈ ಸಿಂಗಲ್ ನಂಬರ್ ದಂಧೆಯ ಹಿಂದೆ ಇನ್ಸ್ ಸ್ಪೆಕ್ಟರ್ ಎಂ ಕೆ ಗಣಪತಿ ಕೈವಾಡವಿತ್ತು. ಪ್ರತಿಭಟನೆ ನಡೆದ್ರೂ ಕೂಡಾ ಇನ್ಸ್ ಸ್ಪೆಕ್ಟರ್ ಎಂ ಕೆ ಗಣಪತಿ ಸಿಂಗಲ್ ನಂಬರ್ ಅಡ್ಡೆಗಳ ಮೇಲೆ ದಾಳಿ ನಡೆಸಲು ಸಿದ್ದರಿರಲಿಲ್ಲ. ಆಗ ಮಂಗಳೂರಿನಲ್ಲಿ ಐಜಿಪಿಯಾಗಿದ್ದವರು ಈಗ ಗುಪ್ತಚರ ಇಲಾಖೆಯ ಮುಖ್ಯಸ್ಥರಾಗಿರುವ ಅಶಿತ್ ಮೋಹನ್ ಪ್ರಸಾದ್. ಡಿವೈಎಫ್ ಐ ಐಜಿಪಿ ಅಶಿತ್ ಮೋಹನ್ ಪ್ರಸಾದ್ ಗೆ ದೂರು ನೀಡಿದಾಗ ಅವರೂ ಕೂಡಾ ಇನ್ಸ್ ಸ್ಪೆಕ್ಟರ್ ಗಣಪತಿ ಪಾತ್ರ ಇರುವುದನ್ನು ಮನಗಂಡು ನೇರವಾಗಿ ಸಿಂಗಲ್ ನಂಬರ್ ದಂಧೆಯ ಮೇಲೆ ದಾಳಿ ನಡೆಸಿದ್ದರು.
ನಾನೊಬ್ಬ ಆರ್ ಎಸ್ ಎಸ್ ಹಿನ್ನಲೆಯಿಂದ ಬಂದವನು ಎಂದು ಬಹಿರಂಗವಾಗಿ ಹೇಳಿಕೊಳ್ಳುತ್ತಿದ್ದ ಎಂ ಕೆ ಗಣಪತಿ ಎಡಪಂಥೀಯ ಸಂಘಟನೆಗಳು ಮತ್ತು ಮುಸ್ಲೀಮರ ವಿರೋಧಿ ನಿಲುವನ್ನು ಹೊಂದಿದ್ದರು. ನೀರಿನ ಖಾಸಗೀಕರಣವನ್ನು ವಿರೋಧಿಸಿ ಮಂಗಳೂರು ಮಹಾನಗರ ಪಾಲಿಕೆಯ ಎದುರು ಡಿವೈಎಫ್ಐ ಪ್ರತಿಭಟನೆ ನಡೆಸುತ್ತಿತ್ತು. ಈ ಪ್ರತಿಭಟನೆಯ ಸ್ಥಳ ಬಂದರು ಪೊಲೀಸ್ ಠಾಣಾ ವ್ಯಾಪ್ತಿಯದ್ದು. ಶಾಂತಿಯುತವಾಗಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಇದೇ ಎಂ ಕೆ ಗಣಪತಿ ವ್ಯಾಪ್ತಿ ಮೀರಿ ಲಾಠಿ ಚಾರ್ಜ್ ಮಾಡಿದ್ದರು. ಲಾಠಿ ಚಾರ್ಜ್ ಆಗುವ ಬಗ್ಗೆ ಖುದ್ದು ಬಂದರು ಠಾಣೆಗೆ ಮಾಹಿತಿ ಇರಲಿಲ್ಲ. ಸೈದ್ದಾಂತಿಕವಾಗಿ ವಿರೋಧಿಸುತ್ತಿದ್ದವರನ್ನು ಹಣಿಯಲು ಎಂ ಕೆ ಗಣಪತಿ ಪೊಲೀಸ್ ಯೂನಿಫಾರಂ ಅನ್ನು ಬಳಸುತ್ತಿದ್ದರು.
ನಕಲಿ ಎನ್ ಕೌಂಟರ್, ಚರ್ಚ್ ದಾಳಿಯ ವೇಳೆ ಕ್ರೈಸ್ತ ಸನ್ಯಾಸಿನಿಯರ ಮೇಲೆ ದಾಳಿ, ಮಾನವ ಹಕ್ಕು ಉಲ್ಲಂಘನೆ ಮಾಡುತ್ತಿದ್ದ ಇನ್ಸ್ ಸ್ಪೆಕ್ಟರ್ ಎಂ ಕೆ ಗಣಪತಿ ಇದೀಗ ಸಾವಿನ ನಂತರ ಹೀರೋ ಆಗುತ್ತಿದ್ದಾರೆ.

 

ಅವರ ಸಾವು ನ್ಯಾಯಯುತವಾದುದಲ್ಲ. ಅವರಿಗೆ ಪೊಲೀಸ್ ಉನ್ನತಾಧಿಕಾರಿಗಳು, ಸಚಿವರುಗಳು ಕಿರುಕುಳ ನೀಡಿದ್ದರೆ ಅದು ಶಿಕ್ಷಾರ್ಹ. ಆದರೆ ಎಂ ಕೆ ಗಣಪತಿ ಒಬ್ಬ ದಕ್ಷ, ಕೆಚ್ಚೆದೆಯ ಪ್ರಾಮಾಣಿಕ, ರಿಯಲ್ ಹೀರೋ ಎಂದೆಲ್ಲಾ ಕರೆದರೆ ಅದು ಅಪ್ಪಟ ಸುಳ್ಳಾಗುತ್ತದೆ.

64 thoughts on “ಸಾವಿನ ನಂತರ ‘ಹೀರೋ’ ಆದ ಎಂ.ಕೆ. ಗಣಪತಿ!

  1. Arjun

    ಅದ್ಭುಯ ಬರಹ ನವೀನ್ ಸರ್. ಕಟು ಸತ್ಯವನ್ನು ಬಹಿರಂಗಗೊಳಿಸಿದ್ದಕ್ಕಾಗಿ ಧನ್ಯವಾದಗಳು.

    Reply
    1. Anonymous

      ಕುಲಶೇಖರ ಚರ್ಚ್ ಆವರಣದಲ್ಲಿ ಮೂಟೆಗಟ್ಟಲೆ ಕಲ್ಲು ತಂದಿಟ್ಟು ನೂರಾರು ಪೋಲೀಸರ ಮಂಡೆ ಒಡೆದ ದುಷ್ಕರ್ಮಿಗಳ ಮೇಲೆ ಲಾಟಿ ಚಾರ್ಜ್ ಮಾಡಿ ಕೇಸು ಹಾಕಿದ್ದೇ ಡಿವೈಎಸ್ಪಿ ಗಣಪತಿ ಮಾಡಿದ ದೊಡ್ಡ ತಪ್ಪು. ಪೊಲೀಸ್ ವರಿಷ್ಟಾಧಿಕಾರಿಯ ಮೇಲೆ ಕಲ್ಲು ತೂರಾಟ ನೆಡೆ
      ದ ಬಳಿಕವೂ ಗಣಪತಿ ಸುಮ್ಮನಿರಬೇಕಿತ್ತೇ ? ಜಾರ್ಜ್ ಕರ್ನಾಟಕದ ರಾಜಶೇಖರ್ ರೆಡ್ಡಿ ಆಗುತ್ತಿರುವುದು ಮಾತ್ರ ಸತ್ಯ. ಎಂಟು ವರ್ಷದ ಹಿಂದೆ ನಡೆದ ಘಟನೆಗೆ ಇಡೀ ಸರ್ವಿಸ್ ಪರ್ಯಂತ ಒಬ್ಬ ಅಧಿಕಾರಿ ಶಿಕ್ಷೆ ಅನುಭವಿಸಬೇಕಾಯಿತು ಎಂದಾದರೆ ಈ ಜಾರ್ಜ್ ಎಂಬ ಮತಾಂಧನ ಮನಸ್ಸಿನಲ್ಲೆಷ್ಟು ವಿಷವಿರಬಹುದು.? ಐಜಿಪಿ ಬಿ.ಕೆ ಸಿಂಗ್ ಹೇಳ್ತಾರೆ ಕೌಟುಂಬಿಕ ಕಾರಣದಿಂದಾಗಿ ಗಣಪತಿ ಸತ್ತಿದ್ದಾರಂತೆ..ಡಿಕೆರವಿ, ಗಣಪತಿ, ಅನುಪಮಾ ಶೆಣೈ ರಾಜ್ಯದ ರೈತರು ಎಲ್ಲರನ್ನೂ ಕಾಡುತ್ತಿರುವ ಆ ಕೌಟುಂಬಿಕ ಕಾರಣವಾದರೂ ಯಾವುದು

      Reply
  2. raviraj

    y u people lying here, that day section144 was there, still Christian’s gathered is thousand in kulashekara charch nd they(only boys) started protest in road that time police warned to stop, then crowed went inside church premises, police authority told to not conducted any prayer, later wat Christian people did u naveen forgot wat, who started throw stones, i not forgot all these, don’t simplylame him for wat happened there, ya u can blame BJP OR BAKARANGADAL for wat happened church attack. NAVEEN PLS STOP USING UR PROFESSION TO DIVID PEOPLE.

    Reply
    1. Ashwan Loy Dsouza

      Dude I’ve witnessed the incident standing from the shaktinagar cross. I didn’t see a single Christian on the road all those were bajarangi thugs. All Christians formed a human shield which bajarangis tried to break using the corrupt officers.
      U keep your RSS propaganda to yourself

      Reply
    2. Anonymous

      What Navin wrote was rightfuly fact and true….I feel deivl traps the people from Hero to Zero…and this is what was behind Ganapati’s death

      Reply
    3. Pratap Rao

      Raviraj, you are a bhakta. You can only talk as if you do not know. Christians were not violent and will not be violent. I had my studies with them

      Reply
  3. Anonymous

    ನವೀನ್ ಸುರಿಂಜೆಯನ್ನು ಜೈಲಿಗೆ ಅಟ್ಟಿದ ಧೈರ್ಯವಂತ ಆಫ಼ೀಸರ್ ಇವರೇ ಇರಬಹುದೇನೋ
    ಸುಳ್ಳನ್ನು ಖಚಿತವಾಗಿ ಬರೆಯಬಲ್ಲ ಭಾರತದ ಏಕೈಕ ಪತ್ರಕರ್ತರು

    Reply
  4. Charles D'Mello, Pangala

    This show why and what made him to commit suicide. If one goes against his own conscience will definitely kill him in due course…….!!!

    Reply
  5. Anonymous

    ತಮ್ಮನ್ನು ಜೈಲಿಗೆ ತಳ್ಳಿದವರ ವಿರುದ್ದ ಸೇಡು ತೀರಿಸಲು ಒಳ್ಳೆಯ ಸಮಯ ನವೀನ್

    Reply
  6. n.r.ramapriya

    I doubt the bona fide intentions of the author. He is trying to tarnish the image of an upright officer who is no more to defend theses allegation. when a person commits suicide after disclosing the persons who are harassing him itself speaks how helpless he was in front of the powerful ,other wise no body will give up their precious life. The fact that the author has given this story after the demise of the officer leads to the conclusion that he is trying to safe guard the accused for the obvious reasons

    Reply
  7. Anonymous says

    heloo naveen avare adakke shakshi ideya nimmathra.. antha officer adre avaru athma hatye madthirova prashanga yake bekithu .. rajiname kottu avara padige irbahuditu.. dustaru bere iddare antha ivara savalli gothaguthe.. nivu nijana sullu madolu horatiddireno naveenavare.. nimagu ivara mele sittithenooo..

    Reply
  8. Anonymous says

    ಸಕಾ೯ರದ ಮುಖವಾಡ
    ಮಂಗಳೂರು Dysp ಗಣಪತಿ ಆತ್ಮಹತ್ಯ ಪ್ರಕರಣಕ್ಕೆ ಯಾವುದೇ ವಿಚಾರಣೆ ಇಲ್ಲದೆ ಎಳ್ಳುನೀರು ಬಿಟ್ಟ ಕಾಂಗ್ರೇಸ್ ಸಕಾ೯ರ ಮತ್ತು ಪೋಲಿಸ್ ಇಲಾಖೆ. CRP ಕಲಂ 174 ಅಡಿ ಪ್ರಕರಣ ದಾಖಲು. ದಾರಿ ತಪ್ಪಿಸಿದ ಸಕಾ೯ರ. CRP ಕಲo 306 ಅಡಿಯಲ್ಲಿ ಪ್ರಕರಣ ದಖಾಲಿಸಿ ವಿಚಾರಣೆ ಆಗಬೇಕಿತ್ತು. ಆದರೆ ಸಕಾ೯ರದ ಭ್ರಷ್ಟ ಮತ್ತು ಕೆಲ ಪೋಲಿಸ್ ಇಲಾಖೆಯ ಅಧಿಕಾರಿಗಳ ಕಿರುಕುಳಕ್ಕೆ ಒಳಗಾಗಿ ಆತ್ಮಹತ್ಯ ಆದ ದಕ್ಷ ಅಧಿಕಾರಿಯ ಮರಣವನ್ನ ಯಾವುದೇ ವಿಚಾರಣೆ ನಡೆಸದೆ ಮುಚ್ಚಿಹಾಕಲು ಕಾಣದ ಹಿಂದಿನ ಮುಖಗಳು ಪ್ರಯತ್ನಿಸುತ್ತಿದೆ….
    ಪ್ರಜ್ಞಾವಂತ ನಾಗರಿಕರು ಮತ್ತು ಮಾಧ್ಯಮ ಗಳು ಇದರ ವಿರುದ್ಧ ಆದಲ್ಲಿ ಮಾತ್ರ ಇನ್ನಷ್ಟು ದಕ್ಷ ಅಧಿಕಾರಿಗಳ ಜೀವ ಉಳಿಸಿಕೊಳ್ಳಬಹುದು…

    ಡಿ.ಕೆ ರವಿ ಅಸಹಜ ಸಾವು, dysp ಎಂ.ಕೆ.ಗಣಪತಿ ಅಸಹಜ ಸಾವು,ಇನ್ಸ್ಪೆಕ್ಟರ್ ಮಲ್ಲಿಕಾರ್ಜುನ ಭಂಡೆ ಅಸಹಜ ಸಾವು, ಸಬ್ ಇನ್ಸ್ಪೆಕ್ಟರ್ ಜಗದೀಶ್ ಕೊಲೆ, ದಕ್ಷ ಅದಿಕಾರಿ ಕೂಡ್ಲಿಗಿ dysp ಅನುಪಮ ಶೆಣೈ ರಾಜಿನಾಮೆ,ಮೈಸೂರು d.c ಶಿಖಾ ರ ಬೆದರಿಕೆ
    ಈ ಎಲ್ಲಾ ಪ್ರಕರಣದ ಹಿಂದೆ ಕೇಳಿ ಬರೋದು ರಾಜಕಾರಣಿ ಗಳ ಕಿರುಕುಳ ಹಿರಿಯ ಅಧಿಕಾರಿಗಳ ಕಿರುಕುಳ ಏನು ನಡಿತಿದೆ ನಮ್ಮ ರಾಜ್ಯ ದಲ್ಲಿ ಇಂತ ಉನ್ನತ ಅಧಿಕಾರಗಳಿಗೆ ರಕ್ಷಣೆ ಇಲ್ಲಾ ಅಂದ್ರೆ ನಮ್ಮಂತ ಸಾಮಾನ್ಯ ಜನರ ಪಾಡೇನು.
    ಕುಲಶೇಖರ ಚರ್ಚ್ ಆವರಣದಲ್ಲಿ ಮೂಟೆಗಟ್ಟಲೆ ಕಲ್ಲು ತಂದಿಟ್ಟು ನೂರಾರು ಪೋಲೀಸರ ಮಂಡೆ ಒಡೆದ ದುಷ್ಕರ್ಮಿಗಳ ಮೇಲೆ ಲಾಟಿ ಚಾರ್ಜ್ ಮಾಡಿ ಕೇಸು ಹಾಕಿದ್ದೇ ಡಿವೈಎಸ್ಪಿ ಗಣಪತಿ ಮಾಡಿದ ದೊಡ್ಡ ತಪ್ಪು. ಪೊಲೀಸ್ ವರಿಷ್ಟಾಧಿಕಾರಿಯ ಮೇಲೆ ಕಲ್ಲು ತೂರಾಟ ನೆಡೆ
    ದ ಬಳಿಕವೂ ಗಣಪತಿ ಸುಮ್ಮನಿರಬೇಕಿತ್ತೇ ? ಜಾರ್ಜ್ ಕರ್ನಾಟಕದ ರಾಜಶೇಖರ್ ರೆಡ್ಡಿ ಆಗುತ್ತಿರುವುದು ಮಾತ್ರ ಸತ್ಯ. ಎಂಟು ವರ್ಷದ ಹಿಂದೆ ನಡೆದ ಘಟನೆಗೆ ಇಡೀ ಸರ್ವಿಸ್ ಪರ್ಯಂತ ಒಬ್ಬ ಅಧಿಕಾರಿ ಶಿಕ್ಷೆ ಅನುಭವಿಸಬೇಕಾಯಿತು ಎಂದಾದರೆ ಈ ಜಾರ್ಜ್ ಎಂಬ ಮತಾಂಧನ ಮನಸ್ಸಿನಲ್ಲೆಷ್ಟು ವಿಷವಿರಬಹುದು.? ಐಜಿಪಿ ಬಿ.ಕೆ ಸಿಂಗ್ ಹೇಳ್ತಾರೆ ಕೌಟುಂಬಿಕ ಕಾರಣದಿಂದಾಗಿ ಗಣಪತಿ ಸತ್ತಿದ್ದಾರಂತೆ..ಡಿಕೆರವಿ, ಗಣಪತಿ, ಅನುಪಮಾ ಶೆಣೈ ರಾಜ್ಯದ ರೈತರು ಎಲ್ಲರನ್ನೂ ಕಾಡುತ್ತಿರುವ ಆ ಕೌಟುಂಬಿಕ ಕಾರಣವಾದರೂ ಯಾವುದು ?
    ಅಲಂಗಾರು ಚರ್ಚ್ ನಲ್ಲಿ ನಡೆಯುತ್ತಿದ್ದ ಮತಾಂತರವನ್ನು ಖಂಡಿಸಿ ಕೆಲ ಹುಡುಗರು ಚರ್ಚಿನ ಕಿಟಕಿಗಳ ಗಾಜಿಗೆ ಕಲ್ಲು ತೂರಾಟ ನಡೆಸಿದರು. ಕಲ್ಲು ತೂರಾಟ ನಡೆಸಿದ ಹುಡುಗರು ಮನೆ ತಲುಪುವ ಮೊದಲು ಚರ್ಚ್ ಮೇಲೆ ದಾಳಿಯಾಗಿದೆ. ಕ್ರೈಸ್ತರ ಜೀವನ ಸಂಕ‍ಷ್ಟದಲ್ಲಿ ಎನ್ನುವ ಸುದ್ದಿ ಬಿಬಿಸಿ ನ್ಯೂಸಲ್ಲಿ ವಿಶ್ವವಿಡೀ ಪ್ರಸಾರವಾಗಿತ್ತು.!! ಈ ಮತಾಂತರಿಗಳ ಜಾಲ ಎಷ್ಟು ವಿಸ್ತಾರವಾಗಿದೆ ಅನ್ನುವುದಕ್ಕೆ ಒಂದು ಉದಾಹರಣೆಯಷ್ಟೆ. ರಾಜ್ಯದಲ್ಲಿ ವಿಪಕ್ಷ ಬೆಡ್ ರೆಸ್ಟಲ್ಲಿ ಇದೆ ಎಂದು ಭಾವಿಸಿದ್ದೆ. ಆದರೆ ಅದು ಸತ್ತು ಎಕ್ಕುಟ್ಟೊಗಿದೆ ಅಂತ ಈವತ್ತು ತಿಳಿಯಿತು.
    ಬಿಜೆಪಿಯ ನಾಲಾಯಕ್ಕುಗಳು ಪಕ್ಷದ ಜವಾಬ್ದಾರಿಗೆ ನೆಡೆಸುತ್ತಿರುವ ಕಿತ್ತಾಟವನ್ನು ಕಂಡಾಗ ಇನ್ನು ಇವರು ಸರಕಾರ ರಚಿಸಿಕೊಂಡರೆ ರಾಜ್ಯದ ಸ್ಥಿತಿ ಹೇಗಾಗಬಹುದು ಎಂದು ಊಹಿಸಿಕೊಂಡ್ರೆ ವಾಕರಿಕೆ ಬರುತ್ತೆ.

    Reply
    1. Anonymous

      We Christians never ever teach or taught for do this kind of violence by our community, only we are getting gather to pray in the church and you people it’s says converting, we never do violence any church not giving support to do , this what you saying…..at kulshekar church ground stored stones . because of our churches teaching us peace not violence, that’s what you people takeing this opportunity!!! our religion not teaching us do like other religion isis or Taliban, al Qaeda…… We or our community never makeing force to convert to……..if you want know real from your eyes please go to kulshekar church and watch how many non Christians coming to visit there and karkalla , Annual Festival of St.lawrence Church at Attur Matthew 27:3-5) 3) Then Judas, which had betrayed him, when he saw that he was condemned, repented himself, and brought again the thirty pieces of silver to the chief priests and elders,

      4) Saying, I have sinned in that I have betrayed the innocent blood. And they said, What is that to us? see thou to that.

      5) And he cast down the pieces of silver in the temple, and departed, and went and hanged himself.

      Reply
  9. L N Rego

    Let me reply to Raviraj… If you have half knowledge stop writing comments on this issue. Section 144 was implemented intentionally knowing the ripple effect of the attack. In fact In Kulshekar, Vamanjur and Bendur church the huge crowd was gathered. Except Bendur other two place police ordered lathi charge.In Kulshekar Bhajrang Dal Gundas instigated the Police and they them self joined and attacked Women, Nuns and children. D Y S P Ganapathis death is nothing but aftermath of the cruelty.

    Reply
  10. Stivan J Alva

    There is no history of violence from the group of christian in this coastal belt. Right from the tippus to present bajarangis they faced all violence… I don’t know what is the problem in accepting truth to a section of people. Christian followers were gathered in the church for the prayers and the prayers in the church never banned. And they weren’t came out to any protest, but goonda’s on uniform made them to come out from the church one by one and violently beaten them. The stock of construction materials stored for building works have been recorded as stock of weapons kept for violence.. everything was in a planned manner. several ganapathi’s like officers were posted to the offices from police to judicial very systematically well in advance to this incident….. Remembering the tears of those days….. Anyway we have a respect to his departed soul…. Heartfelt sympathy to his family. Prayers to Almighty God, May give enough strength and courage to bear the irreparable loss… May his soul rest in eternal peace…..

    Reply
  11. katapadi

    ಕುಲಶೇಖರ ಚರ್ಚ್ ಆವರಣದಲ್ಲಿ ಮೂಟೆಗಟ್ಟಲೆ ಕಲ್ಲು ತಂದಿಟ್ಟು ನೂರಾರು ಪೋಲೀಸರ ಮಂಡೆ ಒಡೆದ ದುಷ್ಕರ್ಮಿಗಳ ಮೇಲೆ ಲಾಟಿ ಚಾರ್ಜ್ ಮಾಡಿ ಕೇಸು ಹಾಕಿದ್ದೇ ಡಿವೈಎಸ್ಪಿ ಗಣಪತಿ ಮಾಡಿದ ದೊಡ್ಡ ತಪ್ಪು. ಪೊಲೀಸ್ ವರಿಷ್ಟಾಧಿಕಾರಿಯ ಮೇಲೆ ಕಲ್ಲು ತೂರಾಟ ನೆಡೆ
    ದ ಬಳಿಕವೂ ಗಣಪತಿ ಸುಮ್ಮನಿರಬೇಕಿತ್ತೇ ? ಜಾರ್ಜ್ ಕರ್ನಾಟಕದ ರಾಜಶೇಖರ್ ರೆಡ್ಡಿ ಆಗುತ್ತಿರುವುದು ಮಾತ್ರ ಸತ್ಯ. ಎಂಟು ವರ್ಷದ ಹಿಂದೆ ನಡೆದ ಘಟನೆಗೆ ಇಡೀ ಸರ್ವಿಸ್ ಪರ್ಯಂತ ಒಬ್ಬ ಅಧಿಕಾರಿ ಶಿಕ್ಷೆ ಅನುಭವಿಸಬೇಕಾಯಿತು ಎಂದಾದರೆ ಈ ಜಾರ್ಜ್ ಎಂಬ ಮತಾಂಧನ ಮನಸ್ಸಿನಲ್ಲೆಷ್ಟು ವಿಷವಿರಬಹುದು.? ಐಜಿಪಿ ಬಿ.ಕೆ ಸಿಂಗ್ ಹೇಳ್ತಾರೆ ಕೌಟುಂಬಿಕ ಕಾರಣದಿಂದಾಗಿ ಗಣಪತಿ ಸತ್ತಿದ್ದಾರಂತೆ..ಡಿಕೆರವಿ, ಗಣಪತಿ, ಅನುಪಮಾ ಶೆಣೈ ರಾಜ್ಯದ ರೈತರು ಎಲ್ಲರನ್ನೂ ಕಾಡುತ್ತಿರುವ ಆ ಕೌಟುಂಬಿಕ ಕಾರಣವಾದರೂ ಯಾವುದು ?

    Reply
  12. Anonymous

    Do you think .. What ever he writes are accurate or true..? .. (it may true but you are not the deciding factor .. there is Judaical or court will decide ) my opinion is they do for their TRP or publicity only …. as a educated citizen of India we know what is right what is wrong….if he writess this kind of Controversial news .. he can sell little more paper than actual … am really not happy now a days .. bcz before justice decided these kind of people decide like he is culprit and whole day do live telecast of this..opppss

    Reply
  13. Anonymous

    naveen surinjeyavare …. kathe chennagi bareyuttira,,,,, kathalekhana competation ge hogabahudu…. istu dina illada e lekhana avaru satta nantharave bidugadegolisiruvudu buddivanthara lakshana… adannu chennagi nibhayisiddiri… …

    Reply
  14. M A Sriranga

    ನವೀನ್ ಸೂರಿಂಜೆ ಅವರಿಗೆ—- ಕಾಂಗೈ/ಬಿಜೆಪಿ/ಜೆಡಿಎಸ್ ಯಾವುದೇ ಪಕ್ಷವಿರಲಿ, ಸರ್ಕಾರಗಳು ಬದಲಾದರೆ ನಾಯಕರು,ಮಂತ್ರಿಗಳ ಮೊದಲ ಗುರಿ ಪೊಲೀಸ್ ಅಧಿಕಾರಿಗಳು. ಇದಂತೂ ಬದಲಾಗುವುದಿಲ್ಲವಲ್ಲ!!

    Reply
  15. Anonymous

    Naveeeen ….Plz sir Sarkar adikarigalige koduttiruva kirukula mattu vyavasteya durbalakeya bagge swalpa Bariri..Namma kanmude D.K ravi sir rind hididu M.Ganapati yavar varege udaharnegalive..Sattavara bagge negative baridu sadisuvudadru enu…# Karnataka sarkarkke dikkaravirali..

    Reply
  16. Anonymous

    Navin suranje avare…ganapathi avru saayo tanaka nidre madtidra? sayokinta munche helabahudittu alva? nimge satya helodakke 8 varsha bekayta?!!!…nivu sullu helta idiri anta idralle gottagutte…nivobba journalist agi idanna heloke istu dina takondira?? idara arta yenu saahebre? idontara nagu tariso hagide…ha ha ha. dayavittu obba daksha police adhikariya bagge e tarahada barahagalanna bari bedi

    Reply
  17. Dr michael

    Lesson no 1- Never ever hurt or abuse any Religious Leaders whether it’s swamiji Ustad, priest or non….etc. They have sacrifice their life. We are not the person to punish them

    Reply
  18. Anonymous

    Hello Mr Naveen how can we accept ur article is truth.. ?? If u hv any proof than submit to media and public… Plzz don’t politize this incident.. All people of Karnataka know how govt behaving with officers and police officers.. DK ravi, shenoy, rashmi, mallikarjun bande, etc are good example for good governance..
    ..

    Reply
  19. Anonymous

    ವಿಷಯವನ್ನು ಹೇಗೂ ತಿರುಚಿ ಬರೆಯಬಹುದು. RSS ಕಂಡರಾಗದವರ ಬರಹವಿದು ಎಂಬುದು ಸ್ಪಷ್ಟ !! ರಾಜಕೀಯ ಬಿಟ್ಟು ಮಾನವೀಯತೆ ಮೆರೆಯುವ ಸಮಯವಿದು .

    Reply
  20. Anonymous

    Any number of stories can be created and this is one among them. Stop lying and do reveal the truth .

    Reply
  21. Anonymous

    Brilliant Narrator, u proved that the writer can twist the incidents whatever they way they like Navin

    Reply
  22. Adiga

    I have not seen a journalist taking advantage after death of a officer to write things one can’t defend. Are you enjoying lollypop in your mouth when the officer alive. Shame on you for politicising death. You are no different from left wing or right wing.

    Reply
  23. sudhanva bharadwaj

    ತಾರತಮ್ಯವೇ ಮೈವೆತ್ತ ನಮ್ಮ ಬುದ್ಧಿಜೀವಿಗಳ ನವ ಬ್ರಾಹ್ಮಣ್ಯ: ಇವರಿಗೆ ಯಾಕೂಬ್ ಮೆಮನ್, ಅಫ್ಜಲ್ ಗುರು ಮುಂತಾದ ದ್ರೋಹಿಗಳು ಸತ್ತಾಗ ಮಾನವ ಹಕ್ಕುಗಳ ನೆನಪಾಗುತ್ತದೆ, ಅವರುಗಳ ನೆವದಲ್ಲಿ ಮಾನವ ಹಕ್ಕುಗಳನ್ನು ರಕ್ಷಿಸಲು ಉಗ್ರ ಹೋರಾಟ ಮಾಡಲು ಸ್ಫೂರ್ತಿಯಾಗುತ್ತದೆ. ಅದೇ ಗಣಪತಿಯಂತಹ ಬಲಪಂಥೀಯನೊಬ್ಬ ಸತ್ತಾಗ…ಈ ನೆವದಲ್ಲಾದರೂ ರಾಜಕಾರಿಣಿಗಳ ಮತ್ತು ಅಧಿಕಾರಶಾಹಿಯ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಬೇಕು ಎನಿಸುವುದಿಲ್ಲ…

    Reply
  24. Ananda Prasad

    ನವೀನ್ ಸೂರಿಂಜೆ ಅವರ ಲೇಖನ ಹಾಗೂ ಈವರೆಗೆ ಮಾಧ್ಯಮಗಳಲ್ಲಿ ಬಂದ ವಿಚಾರಗಳನ್ನು ಗಮನಿಸಿದರೆ ಎಂ. ಕೆ. ಗಣಪತಿ ಒಬ್ಬ ಹೀರೊ ಎಂದೇನೂ ಅನಿಸುವುದಿಲ್ಲ. ಮಂಗಳೂರಿನ ಚರ್ಚ್ ದಾಳಿಯ ಸಂದರ್ಭದಲ್ಲಿ ಗಣಪತಿ ಅವರು ಸಂವಿಧಾನಾತ್ಮಕವಾಗಿ ನಿಷ್ಪಕ್ಷಪಾತವಾಗಿ ವರ್ತಿಸಿ ಕಾನೂನನ್ನು ಎತ್ತಿ ಹಿಡಿದಂತೆ ಕಾಣುವುದಿಲ್ಲ ಬದಲಿಗೆ ಒಂದು ಸಂಘಟನೆಯ ಪರವಾಗಿ ಅವರ ಅಜೆಂಡಾದಂತೆ ಕಾರ್ಯನಿರ್ವಹಿಸಿದಂತೆ ಕಂಡುಬರುತ್ತದೆ. ಇದುವೇ ಅವರಿಗೆ ಸರ್ಕಾರ ಬದಲಾದಾಗ ಮುಳುವಾಗಿರುವಂತೆ ಕಂಡುಬರುತ್ತದೆ. ಒಂದು ಸಂಘಟನೆಯ ಹಾಗೂ ಸಿದ್ಧಾಂತದ ಅಡಿಯಾಳಾಗಿ ಸಂವಿಧಾನಕ್ಕೆ ವಿರೋಧವಾಗಿ ವರ್ತಿಸುವುದು ತಪ್ಪು ಎಂದು ಈಗಲಾದರೂ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಅರಿವಾದರೆ ಒಳ್ಳೆಯದು. ಬೇರೆ ಕೆಲವು ಸಂದರ್ಭಗಳಲ್ಲಿಯೂ ಅವರು ಅಮಾನತು ಆಗಿರುವುದು ಕೂಡ ಅವರು ಅಪ್ಪಟ ಪ್ರಾಮಾಣಿಕ ಎಂಬುದನ್ನು ಬಿಂಬಿಸುವುದಿಲ್ಲ. ವಶಪಡಿಸಿಕೊಂಡ ಹಣದ ಲೆಕ್ಕ ತೋರಿಸುವಲ್ಲಿಯೂ ಕಡಿಮೆ ತೋರಿಸಿದ ಪ್ರಕರಣವೂ ಅವರ ಮೇಲೆ ಇದೆ. ಇದನ್ನೆಲ್ಲ ನೋಡಿದಾಗ ಆತ್ಮಹತ್ಯೆ ಅವರ ಸ್ವಯಂಕೃತ ಅಪರಾಧದಂತೆ ಕಾಣುತ್ತದೆ. ಏಕೆಂದರೆ ಅವರಿಗೆ ಸರ್ಕಾರದಿಂದ ಅಥವಾ ಮೇಲಧಿಕಾರಿಗಳಿಂದ ವಿಪರೀತ ಒತ್ತಡ ಇದ್ದಂತೆ ಕಾಣಿಸುವುದಿಲ್ಲ. ಭಡ್ತಿಯ ವಿಚಾರದಲ್ಲಿ ಅವರಿಗೆ ಕೊರಗು ಇತ್ತು ಎಂಬುದು ಕಂಡುಬರುತ್ತದೆ. ಭಡ್ತಿ ವಿಚಾರದಲ್ಲಿಯೂ ಅವರ ಅಮಾನತು ಪ್ರಕರಣಗಳು ತಡೆಯಾಗಿದ್ದವು. ಅಂದರೆ ಇದು ಕೂಡ ಅವರ ಸ್ವಯಂಕೃತವೇ. ಇದೇ ಕೊರಗೇ ಅವರಿಗೆ ಮಾನಸಿಕ ಖಿನ್ನತೆಗೆ ದೂಡಿರುವ ಸಂಭವ ಕಂಡುಬರುತ್ತಿದೆ. ಅವರ ನಂತರ ಪೊಲೀಸ್ ಸೇವೆಗೆ ಸೇರಿದ ಅವರ ತಮ್ಮ ಡಿವೈಎಸ್ ಪಿ ಆಗಿ ಭಡ್ತಿ ಹೊಂದಿ ಕಾರ್ಯನಿರ್ವಹಿಸುತ್ತಿರುವುದು ಅವರಿಗೆ ಕೀಳರಿಮೆ ಹಾಗೂ ಖಿನ್ನತೆ ತಂದಿರುವ ಸಂಭವ ಇದೆ. ಸೈದ್ಧಾಂತಿಕವಾಗಿ ಭಿನ್ನ ನಿಲುವಿನ ಸಂಘಟನೆಗಳ ಜನರ ಹಾಗೂ ಅವರ ಪ್ರತಿಭಟನೆಗಳ ಮೇಲೆ ದೌರ್ಜನ್ಯಕಾರಕವಾಗಿ ನಡೆದುಕೊಂಡಿದ್ದು ಕೂಡ ಅವರ ಒಂದು ಸಂಘಟನೆಗೆ ಸೇರಿದ ಮನೋಸ್ಥಿತಿಯನ್ನು ತೋರಿಸುತ್ತದೆ. ಸರ್ಕಾರಿ ಸೇವೆಯಲ್ಲಿ ಇರುವವರು ಈ ರೀತಿ ಸಂವಿಧಾನವಿರೋಧಿಯಾಗಿ ನಡೆದುಕೊಳ್ಳುವುದು ತಪ್ಪು.

    Reply
  25. ಸೀತಾ

    ಒಬ್ಬ ವಕ್ತಿ ಮನನೊಂದು ಆತ್ಮಹತ್ಯೆ ಮಾಡಿಕೊಂಡು ಇನ್ನೂ ಒಂದು ವಾರವೂ ಆಗಿಲ್ಲ! ಜೈಲುಹಕ್ಕಿಯಾಗಿದ್ದ ಸದರಿ ಪತ್ರಕರ್ತರಿಗೆ ಮಾತ್ರ ಸೂತಕವೆಂಬುದು ಇಲ್ಲ, ಸತ್ತವರ ಚಾರಿತ್ರ್ಯಹರಣಕ್ಕೆ ಮುಂದಾಗಿದ್ದಾರೆ. ಕ್ಷಮಿಸಿ ಇದು ಸಭ್ಯವೂ ಅಲ್ಲ ಶಿಷ್ಟವೂ ಅಲ್ಲ ಮಾನವೀಯವೂ ಅಲ್ಲ.

    Reply
  26. ಸೀತಾ

    “ಆಗ ಚರ್ಚ್ ನಲ್ಲಿದ್ದ ಕ್ರೈಸ್ತ ಸನ್ಯಾಸಿಗಳು ತಮ್ಮ ಬಟ್ಟೆಯನ್ನು ಎತ್ತಿ ಹಲ್ಲೆ ನಡೆದ ಭಾಗಗಳನ್ನು ತೋರಿಸುತ್ತಿದ್ದರು”

    ಪಾಪದ ಕ್ರೈಸ್ತ ಸನ್ಯಾಸಿನಿಯರಿಗೆ ಈ ಅವಮಾನವೀಯ ಪರಿಸ್ಥಿತಿ ಬರಬಾರದಿತ್ತು.

    Reply
  27. Anonymous

    ಏನ್ ಸಾರ್ ನೀವೂ ಆ ಕೇಂದ್ರ ಸರ್ಕಾರದ ಆಯೋಗಕ್ಕೆ ದೂರು ನೀಡಿದ ಬಗ್ಗೆ ಯಾವುದಾದರು ದಾಖಲೆ ತೋರಿಸುವಿರಾ ಅಥವಾ ಇಷ್ಟು ದಿನ ಬಿಟ್ಟು ಆ ವ್ಯಕ್ತಿ ಸತ್ತಾಗ ಬಂದು ಲೇಖನ ಬರೆಯುತ್ತಿದ್ದಿರಲ್ಲ ಅಂದಿನ ಚರ್ಚ್ ದಾಳಿ ಅದಾಗ ಇವರ ವಿರುದ್ಧ ಸದರಿ ವಿಷಯಕ್ಕೆ ಸಂಬಂಧಪಟ್ಟಂತೆ ಲೇಖನ ಬರೆದಿದ್ದರು ತೋರಿಸುವಿರ

    ನಾಚಿಕೆಯಾಗಬೇಕು ಈ ಸಮಯದಲ್ಲಿ ಆಧಾರವಿಲ್ಲದೆ ಲೇಖನ ಬರೆಯಲು

    Reply
  28. Salam Bava

    ನಮ್ಮ ಜಿಲ್ಲೆಯ ಪೊಲೀಸ್ ಅಧಿಕಾರಿಗಳಲ್ಲಿ ತುಂಬಾ ಜನ ವೃತ್ತಿ ಧರ್ಮ ಪಾಲಿಸದೇ ,ಹಣದ ಹಿಂದೆ ಮತ್ತು ತಾವು ನಂಬಿದ ಸೈದ್ಯಾಂನಿತಿಕತೆಯ ದೌರ್ಜ್ಯನ್ಯಕಾರರಾಗಿ ವರ್ತಿಸಿದ್ದೇ ಹೆಚ್ಚ್ಚು ! ತಮ್ಮ ಸಿದ್ದಾಂತವನ್ನು ಅವರು ಬಳಸಿದ್ದು ತಮ್ಮ ತಿಜೋರಿ,ಮನೆ ,ಕಟ್ಟಡ ,ಕಟ್ಟಲು ಮಾತ್ರಾ ! ಪೊಲೀಸರ ಬಗೆಗೆ ಜಿಲ್ಲೆಯಲ್ಲಿ ಯಾವಾಗಲೂ ಒಂದು ತರಹದ ಜಿಗುಪ್ಸ್ ಮತ್ತು ಭಯವೇ ತುಂಬಿರುವುದು ,ಎಂ. ಕೆ. ಗಣಪತಿ ಯವರ ಸಾವನ್ನು ಅದೂ ಅವರ ಭೂತ ಕಾಲದ ಪಾಪದ ಕೊಡ ತುಂಬಿ ಸಂಭವಿಸಿದರೂ ನ್ಯಾಯೀಕರಣ ಸಲ್ಲ . ನವೀನ್ ನಿರ್ಭಯವಾಗಿ ತಾವು ಕಂಡ ಸತ್ಯವನ್ನು ಬರೆದ್ದ್ದಿದ್ದಾರೆ ! ಅವರಲ್ಲಿ ಪ್ರೂಫ್ ಕೇಳುವವರು ,ಅವರೇ ಪೊಲೀಸ್ ದೌರ್ಜನ್ಯದ ಸ್ವಂತ ಮಿಶಾಲ್ ಎಂದು ಅರಿಯಲಿ .
    ಜಿಲ್ಲೆಯ ಪೊಲೀಸರು ಇಂಥಾ ಕೆಲವಾರು ಘಟನೆಗಳಿಂದ ಪಾಠ ಕಲಿತು,ನ್ಯಾಯ ಪರಿಪಾಲಕರಾಗಲಿ ಎಂಬ ಸದಾಶಯ ನನ್ನದು

    Reply
    1. ಸೀತಾ

      ದಿವಂಗತ ಗಣಪತಿಯವರ ಜಾಗದಲ್ಲಿ ಇಬ್ರಾಹಿಮ್ ಅಥವಾ ಡಿಸೋಜಾ ಇದ್ದಿದ್ದರೆ, ಈ ಪತ್ರಕರ್ತ ಹಾಗೂ ಆತನ ಅಭಿಮಾನಿ ಬಳಗ ಆ ಪೋಲೀಸ್ ಅಧಿಕಾರಿಯನ್ನು ಸಿಕ್ಕಾಪಟ್ಟೆ ಹೊಗಳಿ ಕಣ್ಣೀರು ಸುರಿಸುತ್ತಿದ್ದರು! ಹಾಗೂ ಆತನ ಸಾವಿಗೆ ಹಿರಿಯ ಅಧಿಕಾರಿಗಳನ್ನೂ ಮಂತ್ರಿಗಳನ್ನೂ ಹೊಣೆಯಾಗಿಸುತ್ತಿದ್ದರು.

      Reply
  29. Ananda Prasad

    ಜೀವನ ನಡೆಸಲು ಬೇಕಾದಷ್ಟು ಉತ್ತಮ ಸಂಬಳ ಇರುವ ಉನ್ನತ ಪೊಲೀಸ್ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡು ಸಮಾಜಕ್ಕೆ ಸಂದೇಶವಾದರೂ ಏನು? ಉತ್ತಮ ಸಂಬಳ ಇರುವ ಇವರೇ ಆತ್ಮಹತ್ಯೆ ಮಾಡಿಕೊಂಡರೆ ಜೀವನ ನಡೆಸಲು ಸಾಕಷ್ಟು ಆದಾಯವಿಲ್ಲದೆ ಸೊರಗುತ್ತಿರುವ ಈ ನನ್ನ ಘನ ದೇಶದ ಕೋಟ್ಯಂತರ ರೈತರು, ಕಾರ್ಮಿಕರು ಹೇಗೆ ಬದುಕಬೇಕು ಎಂದು ರಾಜಕಾರಣಿಗಳು ತಿಳಿಸಬೇಕು. ಉನ್ನತ ಪೊಲೀಸ್ ಅಥವಾ ಐ. ಎ. ಎಸ್. ಅಧಿಕಾರಿಗಳು ಮೇಲಧಿಕಾರಿಗಳ ಅಥವಾ ಆಡಳಿತದಲ್ಲಿರುವ ರಾಜಕೀಯ ವ್ಯಕ್ತಿಗಳ ಕಿರುಕುಳ ಇದ್ದರೆ ರಾಜೀನಾಮೆ ಕೊಟ್ಟು ಬೇರೆ ಕೆಲಸ ನೋಡಿಕೊಳ್ಳಲು ಸಾಧ್ಯವಿಲ್ಲವೇ? ಆತ್ಮಹತ್ಯೆ ಮಾಡುವುದರ ಬದಲು ಇವರು ಮೇಲಧಿಕಾರಿಗಳಿಗೆ, ಮುಖ್ಯಮಂತ್ರಿ, ಪ್ರಧಾನಮಂತ್ರಿ, ರಾಷ್ಟ್ರಪತಿ ಇವರಿಗೆ ತಮಗೆ ಇರುವ ಒತ್ತಡದ ಕುರಿತು ದೂರು ಕೊಟ್ಟು ಪರಿಹಾರಕ್ಕೆ ಪ್ರಯತ್ನಿಸಬಹುದಲ್ಲವೇ? ಹೀಗೆ ದೂರು ಕೊಟ್ಟು ಪರಿಹಾರ ಸಿಗದಿದ್ದರೆ ಇರುವ ಕೆಲಸವನ್ನು ಮಾಡಿಕೊಂಡು ಹೋಗಲು ಸಾಧ್ಯವಿಲ್ಲವೇ? ಅದು ಸಾಧ್ಯವಿಲ್ಲ ಎಂದಾದರೆ ಅದಕ್ಕೆ ರಾಜೀನಾಮೆ ಕೊಟ್ಟು ಬೇರೆ ಕೆಲಸ ನೋಡಿಕೊಳ್ಳಬಹುದು. ಜೀವನ ನಡೆಸಲು ನೂರೆಂಟು ದಾರಿಗಳು ಇವೆ. ಅದೂ ಉತ್ತಮ ಸಂಬಳ ಇರುವ ಇವರಿಗೆ ರಾಜೀನಾಮೆ ಕೊಟ್ಟು ಬೇರೆ ಕೆಲಸ ನೋಡಿಕೊಳ್ಳುವುದು ಸಾಧ್ಯವಿದೆ. ಗಣಪತಿಯವರ ವಿಷಯದಲ್ಲಿ ಹೇಳುವುದಾದರೆ ಇವರಿಗೆ ತಂದೆ ಮಾಡಿದ ಆಸ್ತಿಯೇ ಬೇಕಾದಷ್ಟು ಇದೆ ಎಂದು ಅವರೇ ಹೇಳಿದ್ದಾರೆ. ಹೀಗಿರುವಾಗ ಕೆಲಸಕ್ಕೆ ರಾಜೀನಾಮೆ ಕೊಟ್ಟು ಹೊರಬಂದು ಕೃಷಿಯೋ, ವ್ಯಾಪಾರವೋ ಇನ್ನೇನೋ ಮಾಡಿಕೊಂಡು ಇರಲು ಸಾಧ್ಯವಿತ್ತು. ಅದು ಬಿಟ್ಟು ಆತ್ಮಹತ್ಯೆ ಮಾಡಿಕೊಳ್ಳುವುದು ತಪ್ಪು ಹಾಗೂ ಹೇಡಿತನದ ಕೆಲಸ. ಇದು ಸಮಾಜಕ್ಕೆ ತಪ್ಪು ಸಂದೇಶ ಕೊಡುತ್ತದೆ.

    Reply
  30. M A Sriranga

    ಕನ್ನಡ ಸಾಹಿತ್ಯದ ಅಮೋಘ ‘ಸಾಕ್ಷಿ ಪ್ರಜ್ಞೆಗಳು’, ‘ಸ್ತ್ರೀವಾದಿಗಳು’ , ‘ಮಾನವ ಹಕ್ಕುಗಳ ಪ್ರತಿಪಾದಕರು’ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ‘ಅಸಹಿಷ್ಣುತೆಯ ವಿರೋಧಿಗಳು’ ಏಕೆ ಇನ್ನೂ ಬೆಂಗಳೂರಿನ ಟೌನ್ ಹಾಲ್ ನ ಮೆಟ್ಟಲುಗಳ ಮೇಲೆ,ಫ್ರೀಡಂ ಪಾರ್ಕ್ ನಲ್ಲಿ ಧರಣಿ ನಡೆಸುತ್ತಿಲ್ಲ? ಪಾಪ ಬೆಂಗಳೂರಿನಲ್ಲಿ ಚಳಿ,ಮಳೆ,ಗಾಳಿ ಜಾಸ್ತಿಯಾಗಿದೆ. ಹೋಗಲಿ ಮನೆಯಿಂದಲೇ ಒಂದು ಪತ್ರಿಕಾ ಹೇಳಿಕೆಯನ್ನಾದರೂ ಕೊಡಬಹುದಿತ್ತಲ್ಲವೇ?

    Reply
    1. ಸೀತಾ

      ಶ್ರೀರಂಗ ಅವರೇ, ಗತಿಸಿದ ಪೋಲೀಸ್ ಅಧಿಕಾರಿಯ ಚಿತೆಯಿಂದ ಇವರ (ಅಂದರೆ ‘ಸಾಕ್ಷಿ ಪ್ರಜ್ಞೆಗಳು’, ‘ಸ್ತ್ರೀವಾದಿಗಳು’ , ‘ಮಾನವ ಹಕ್ಕುಗಳ ಪ್ರತಿಪಾದಕರು’ ಮತ್ತು ‘ಅಸಹಿಷ್ಣುತೆಯ ವಿರೋಧಿಗಳು’) ಮನೆಯ ಒಲೆ ಉರಿಯುವುದಿಲ್ಲವಲ್ಲ! ಇನ್ನೆರಡು ವರ್ಷಗಳ ನಂತರ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗುವುದು ಖಚಿತವಾಗಿರುವುದರಿಂದ ಇವರುಗಳೆಲ್ಲ ತಮ್ಮ ಬೇಳೆಯನ್ನೂ ಬೀಫ್ ಅನ್ನೂ ಮಾನ್ಯ ಸಿದ್ದರಾಮಯ್ಯನವರ ಅಧಿಕಾರಾವಧಿಯಲ್ಲಿಯೇ ಬೇಯಿಸಿಕೊಳ್ಳಬೇಕಾಗಿದೆ! ಆದುದರಿಂದ ಸಿದ್ದರಾಮಯ್ಯನವರ ಕಣ್ಣು ಕೆಂಪು ಮಾಡುವಂತಹ ಯಾವ ಕೆಲಸವನ್ನೂ ಈ ಜನಗಳು ಮಾಡುವುದಿಲ್ಲ!

      Reply
  31. Ananda Prasad

    ಗಣಪತಿ ಅವರದ್ದು ಆತ್ಮಹತ್ಯೆ ಆದರೆ ಮಾಹಿತಿ ಹಕ್ಕು ಕಾರ್ಯಕರ್ತ ಹಾಗೂ ಬಿಜೆಪಿಯ ಕಾರ್ಯಕರ್ತನೂ ಪರಮ ದೈವಭಕ್ತನೂ ಆಗಿದ್ದ ಮಂಗಳೂರಿನ ವಿನಾಯಕ ಬಾಳಿಗಾರ ಬರ್ಬರ ಕೊಲೆ ನಡೆದಾಗ ಮತ್ತು ಈ ಕೊಲೆಯನ್ನು ಬಿಜೆಪಿ ಪಕ್ಷದ ಕಟ್ಟಾ ಸಮರ್ಥಕರೂ, ಬಲಪಂಥೀಯರೇ ಸುಪಾರಿ ಕೊಟ್ಟು ಮಾಡಿಸಿದ್ದು ಎಂದು ತಿಳಿದ ನಂತರ ಕೊಲೆಗಡುಕರನ್ನು ಶೀಘ್ರ ಬಂಧಿಸಿ ಶಿಕ್ಷೆ ವಿಧಿಸುವಂತೆ ಯಾವ ಬಲಪಂಥೀಯ ಪಕ್ಷಗಳವರು ಧ್ವನಿ ಎತ್ತಿದ್ದು ಕಂಡುಬರುವುದಿಲ್ಲ. ಆಗ ಎಡಪಂಥೀಯರು ಹಾಗೂ ವಿಚಾರವಾದಿ ನರೇಂದ್ರ ನಾಯಕರು ಮಾತ್ರವೇ ಎರಡೆರಡು ಸಲ ಪ್ರತಿಭಟಿಸಿ ರಾಜ್ಯದ ಮಾನ ಉಳಿಸಿದರು. ಬಲಪಂಥೀಯರ ಇಂಥ ದ್ವಿಮುಖ ನೀತಿಗೆ ಏನೆಂದು ಹೇಳೋಣ? ಇದೇ ರೀತಿ ಡಿವೈಎಸ್ಪಿ ಕಲ್ಲಪ್ಪ ಅವರ ಆತ್ಮಹತ್ಯೆಯ ಹಿಂದೆ ಬಲಪಂಥೀಯ ಸಂಘಟನೆಗೆ ಸೇರಿದ ಕೆಲವರು ಕಾರಣ ಎಂದು ಕಂಡುಬಂದ ಮೇಲೆ ಅದರ ಬಗ್ಗೆ ಉಗ್ರ ಪ್ರತಿಭಟನೆ ಬಲಪಂಥೀಯ ಪಕ್ಷಗಳಿಂದ ಕಂಡುಬರಲಿಲ್ಲ. ಆತ್ಮಹತ್ಯೆಗಿಂಥ ವಾಸ್ತವವಾಗಿ ಕೊಲೆಯ ಬಗ್ಗೆ ವಿಧಾನಸಭೆಯಲ್ಲಿ ಭಯಂಕರ ವಿರೋಧ ಹಾಗೂ ಪ್ರತಿಭಟನೆಆಗಬೇಕಾಗಿತ್ತು. ವಿಧಾನಸಭೆಯಲ್ಲಿ ಅಂಥ ಪ್ರತಿಭಟನೆಯ ಕಾವು ಕಂಡುಬರಲೇ ಇಲ್ಲ. ಬಲಪಂಥೀಯ ಕೊಲೆಗಡುಕರು ನಮೋ ಸಂಘಟನೆಯ ರೂವಾರಿಗಳು ಎಂಬುದು ಇದಕ್ಕೆ ಕಾರಣವೇ?

    Reply
    1. ಸೀತಾ

      ಆನಂದ ಪ್ರಸಾದ್ ಅವರೇ, ಬಲಪಂಥೀಯರ ಪಕ್ಷಪಾತಿ ಧೋರಣೆಯನ್ನು ಆಕ್ಷೇಪಿಸಿ ತಾವು ಎತ್ತಿರುವ ತಮ್ಮ ಪ್ರಶ್ನೆಗಳಿಗೆ ಬಲಪಂಥೀಯರೇ ಉತ್ತರ ಕೊಡಬೇಕು. ಅತ್ತ ಬಲಪಂಥೀಯರೂ ಅಲ್ಲದ ಇತ್ತ ಎಡಪಂಥೀಯರೂ ಅಲ್ಲದ ಸ್ಥಿತಪ್ರಜ್ಞರಾದ ಶ್ರೀರಂಗ ಹಾಗೂ ಮತ್ತಿತರ ಸಹೃದಯ ಓದುಗರಿಗೆ ಪಕ್ಷಪಾತದ ಮನೋಭಾವ ಇಲ್ಲ. ಮನುಷ್ಯನ ಜೀವಕ್ಕೆ (ಗಣಪತಿಯವರದ್ದಾಗಲಿ ಬಾಳಿಗಾರವರದ್ದಾಗಲಿ) ಕನಿಷ್ಠ ಘನತೆಯನ್ನೂ ಕೊಡದ ಎಡ/ಬಲ ವ್ಯವಸ್ಥೆ ಹಾಗೂ ಅವುಗಳ ವಂದಿಮಾಗಧರ ಬಗ್ಗೆ ನಮಗೆ ಹೇಸಿಗೆಯ ಭಾವವಿದೆ. ಒಬ್ಬ ವ್ಯಕ್ತಿ ಒತ್ತಡಕ್ಕೆ ಸಿಲುಕಿ ರಾಜಕಾರಣದ ಒಳಸುಳಿಗಳಿಗೆ ಬಲಿಯಾದ; ಆತನ ಸಾವಿನ ಸೂತಕ ಕಳೆಯುವ ಮೊದಲೇ ಆತನ ಖಂಡನೆಯನ್ನು ಮಾಡುವ ವಿಕೃತ ಮನಸ್ಸುಗಳನ್ನು ವಿರೋಧಿಸುತ್ತೇವೆ.

      ಅಂದ ಹಾಗೆ ಬಾಳಿಗಾ ಪ್ರಕರಣ ನಡೆದದ್ದು ಇದೇ ಸಿದ್ದರಾಮಯ್ಯನವರ ಘನ ಸರಕಾರದ ಅಧಿಕಾರಾವಧಿಯಲ್ಲೇ. ತನಿಖೆ ಚುರುಕಾಗಿ ನಡೆಸಿ ಆರೋಪಿಗಳ ಮೇಲೆ ಕೇಸು ಹಾಕುವ ಜವಾಬ್ದಾರಿ ಸರಕಾರದ್ದು. ಸರಕಾರದ ವೈಫಲ್ಯಕ್ಕೆ ವಿರೋಧಪಕ್ಷದವರನ್ನು ಹೊಣೆಯಾಗಿಸುವುದು ಮೂರ್ಖತನ. ಸಿದ್ದರಾಮಯ್ಯ ರಾಜಿನಾಮೆ ಕೊಡಲಿ ಅಂತ ‘ಸಾಕ್ಷಿ ಪ್ರಜ್ಞೆಗಳು’, ‘ಸ್ತ್ರೀವಾದಿಗಳು’ , ‘ಮಾನವ ಹಕ್ಕುಗಳ ಪ್ರತಿಪಾದಕರು’ ಮತ್ತು ‘ಅಸಹಿಷ್ಣುತೆಯ ವಿರೋಧಿಗಳು’ ಬೀದಿಗೆ ಬಂದು ಒತ್ತಡ ತರಲಿ.

      Reply
  32. Ananda Prasad

    ಸರಕಾರ ತನ್ನ ಕರ್ತವ್ಯವನ್ನು ನಿರ್ವಹಿಸಲು ವಿಫಲವಾದಾಗ ಅದನ್ನು ಪ್ರತಿಭಟಿಸಬೇಕಾದದ್ದು ವಿರೋಧ ಪಕ್ಷಗಳ ಕರ್ತವ್ಯವಾಗಿದೆ. ಇದನ್ನೇ ವಿರೋಧ ಪಕ್ಷವಾದ ಬಿಜೆಪಿ ಮಾಡಿಲ್ಲ. ಅಂದರೆ ಕರ್ತವ್ಯಲೋಪ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷ ಎರಡರಿಂದಲೂ ಆಗಿದೆ. ನಾನು ಎಡಪಂಥೀಯನೂ ಅಲ್ಲ ಬಲಪಂಥೀಯನೂ ಅಲ್ಲ, ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವನೂ ಅಲ್ಲ. ನಾನು ಯಾವುದೇ ಪಂಥ, ಪಂಗಡ, ಜಾತಿ ಗುಂಪುಗಳಿಗೆ ಸೇರಿರದ ಸ್ವತಂತ್ರ ವ್ಯಕ್ತಿ. ನಾನು ಯಾವಾಗಲೂ ಪ್ರಗತಿಪರ ನಿಲುವಿನವನು. ವಾಸ್ತವಾಗಿ ಮನುಷ್ಯ ಪ್ರಗತಿಪರನಾಗಿ ಇರಬೇಕು ಇಲ್ಲದಿದ್ದರೆ ಮನುಷ್ಯನಿಗೆ ಯೋಚಿಸುವ ಮೆದುಳು ಇದ್ದು ಏನು ಪ್ರಯೋಜನ? ನಿಂತನೀರಿನಲ್ಲೇ ಕೊಳೆಯುತ್ತಾ ಇರುವ ಪ್ರತಿಗಾಮಿ ನಿಲುವು ನನ್ನದಲ್ಲ. ಕಾಲ ಸರಿದಂತೆ ವಿಜ್ಞಾನದ ಹೊಸ ಹೊಸ ಚಿಂತನೆ ಬೆಳೆದಂತೆ ಮನುಷ್ಯ ತನ್ನ ನಂಬಿಕೆಗಳನ್ನು ಬದಲಿಸಿ ಹೆಚ್ಚು ಮಾನವೀಯವಾಗುತ್ತಾ ಹೋಗಬೇಕು ಎಂಬುದೇ ನನ್ನ ನಿಲುವು.

    Reply
    1. ಸೀತಾ

      “ಕರ್ತವ್ಯಲೋಪ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷ ಎರಡರಿಂದಲೂ ಆಗಿದೆ”

      ಆದರೆ ನೀವು ವಿರೋಧಪಕ್ಷವನ್ನು ಮಾತ್ರ ಟೀಕಿಸುವಲ್ಲಿ ನಿಮ್ಮ ಪ್ರಗತಿಪರತೆಯನ್ನು ಮೆರೆದಿದ್ದೀರಿ! ;-P ಪ್ರಗತಿಪರ ಎಂದು ತಮ್ಮನ್ನು ಕರೆದುಕೊಳ್ಳುವವರು ಸಿದ್ದರಾಮಯ್ಯ ಸರಕಾರ ಹಾಗೂ ಆಡಳಿತ ಪಕ್ಷದ ವೈಫಲ್ಯವನ್ನು ಪ್ರತಿಭಟಿಸಿ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿ ಇನ್ನಷ್ಟು ಪ್ರಗತಿಪರರಾಗಲಿ ಎಂದು ಆಶಿಸೋಣ.

      Reply
  33. M A Sriranga

    ಆನಂದಪ್ರಸಾದ್ ಅವರೇ ನಾನು ಎಡ ಪಂಥ, ಬಲ ಪಂಥ ಅಥವಾ ಪರ್ಯಾಯ ಪಂಥ ಎಂದು ಹೇಳಿಲ್ಲ. ನಮ್ಮ ಕರ್ನಾಟಕದ ಚಿಂತಕರ ಚಾವಡಿಯ ಖಾಯಂ ಸದಸ್ಯರಾದ ಮಾನ್ಯ ಬುದ್ಧಿಜೀವಿಗಳು,ಕೋಮು ಸೌಹಾರ್ದ ವೇದಿಕೆಯ ಪದಾಧಿಕಾರಿಗಳು,ಪತ್ರಕರ್ತರು,ಒಂದಿಬ್ಬರು ಸ್ವಾಮೀಜಿಗಳು ಇವರ ಬಗ್ಗೆ ಮಾತ್ರ ನನ್ನ ಕಾಮೆಂಟ್ ನಲ್ಲಿ ಪ್ರಸ್ತಾಪಿಸಿದ್ದೇನೆ ಅಷ್ಟೇ. ದೂರದ ಡೆಲ್ಲಿ,ಪಕ್ಕದ ಹೈದರಾಬಾದ್ ಗೆ ಮಾತ್ರ ಇವರ ಕಾರ್ಯವ್ಯಾಪ್ತಿ ಸೀಮಿತವೇ ಎಂದಷ್ಟೇ ಕೇಳಿರುವೆ. ಮನುಷ್ಯನ ಜೀವ ಯಾವುದೇ ಊರು,ನಗರಗಳಲ್ಲಾಗಲೀ ಅಮೂಲ್ಯವೇ ತಾನೇ? ಒಬ್ಬ ಮಹಿಳಾ ಐಪಿಎಸ್ ಅಧಿಕಾರಿ ಮತ್ತು ಮತ್ತೊಬ್ಬ ಮಹಿಳಾ ಐಎಎಸ್ ಅಧಿಕಾರಿಗೆ ರಾಜಕಾರಣಿಗಳಿಂದ/ಅವರ ಆಪ್ತರಿಂದ/ಮತ್ತೆ ಕೆಲವು ಮಾಫಿಯಾಗಳಿಂದ ಕಳೆದ ಎರಡು ತಿಂಗಳಲ್ಲಿ ಅವರ ಸರ್ಕಾರಿ ಕಾರ್ಯಕ್ಕೆ ಅಡಚಣೆಯುಂಟಾಗಿದೆ. ಯಾವುದೋ ಒಂದು ಕಾಲ್ಪನಿಕ ಕಾದಂಬರಿಯಲ್ಲಿ ಹೆಣ್ಣಿಗೆ ಅವಮಾನವಾಗಿದೆ ಎಂದು ಸಭೆ,ಸೆಮಿನಾರು,ಧರಣಿ ಕೂತು ಅದನ್ನು ನಿಷೇಧಿಸಬೇಕೆಂದು ಒತ್ತಾಯ ತರುವ ನಮ್ಮ ಕರ್ನಾಟಕದ ಮಾನ್ಯ ಸ್ತ್ರೀವಾದಿಗಳಿಗೆ ಇಬ್ಬರು ಮಹಿಳೆಯರ ರಿಯಲ್ ಲೈಫ್ ನಲ್ಲೇ ಅನ್ಯಾಯವಾಗಿರುವ, ಅವಮಾನವಾಗಿರುವ ವಿಷಯ ಕಾದಂಬರಿಯ ವಿಷಯಕ್ಕಿಂತ ಮುಖ್ಯ ಅನಿಸಲಿಲ್ಲವೇ?. ಇದರ ಬಗ್ಗೆ ಏಕೆ ದನಿ ಎತ್ತಿಲ್ಲ ಎಂದಷ್ಟೇ ನನ್ನ ಪ್ರಶ್ನೆ. ನಾನು ದಿನಾ ಎರಡು ರಾಜ್ಯ ಮಟ್ಟದ ಕನ್ನಡ ದಿನಪತ್ರಿಕೆಗಳನ್ನು ಓದುವೆ. ಅದರಲ್ಲಿ ಒಂದು ‘ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ ದಿನಪತ್ರಿಕೆ’. ತಾವು ಎಲ್ಲಾದಾರೂ ನಮ್ಮ ಸ್ತ್ರೀವಾದಿಗಳು ಈ ಹಿಂದೆ ಹೇಳಿದ್ದರ ಬಗ್ಗೆ ಮಾತಾಡಿದ್ದರೆ ತಿಳಿಸಿ.

    Reply
  34. Ananda Prasad

    ಪೊಲೀಸ್ ವ್ಯವಸ್ಥೆಯನ್ನು ಚುನಾವಣಾ ಆಯೋಗದಂತೆ ಒಂದು ಸ್ವಾಯತ್ತ ಸಂಸ್ಥೆಯನ್ನಾಗಿ ಮಾಡಬೇಕು. ಇಲ್ಲದೆ ಹೋದರೆ ಪೊಲೀಸರು ನಿಷ್ಪಕ್ಷಪಾತವಾಗಿ ಹಾಗೂ ಸಂವಿಧಾನಬದ್ಧವಾಗಿ ಕಾರ್ಯನಿರ್ವಹಿಸುವುದು ಕಷ್ಟ ಅಥವಾ ಅಸಾಧ್ಯವೆಂಬಂಥ ಪರಿಸ್ಥಿತಿ ಇಂದು ದೇಶದಲ್ಲಿದೆ. ಇದರ ಬಗ್ಗೆ ವಿಧಾನಸಭೆಯಲ್ಲಿ ರಾಜಕಾರಣಿಗಳು ಏಕೆ ಪ್ರತಿಭಟನೆ, ಒತ್ತಾಯ ಏಕೆ ಮಾಡುವುದಿಲ್ಲ? ಮೊದಲು ನಿಮಗೆ ತಾಕತ್ತಿದ್ದರೆ ಹಾಗೂ ದೇಶ ಹಾಗೂ ರಾಜ್ಯದ ಹಿತದ ಕಾಳಜಿ ಇದ್ದರೆ ಪೊಲೀಸ್ ವ್ಯವಸ್ಥೆಯನ್ನು ಸ್ವಾಯತ್ತಗೊಳಿಸಿ ಎಂದು ಮಾಧ್ಯಮಗಳು, ಸಂಘಟನೆಗಳು ಪ್ರತಿಭಟನೆ ಮಾಡಬೇಕು. ಅಂಥ ಒತ್ತಾಯ ಕಂಡುಬರುತ್ತಿಲ್ಲ. ಒಬ್ಬ ಜಾರ್ಜ್ ರಾಜೀನಾಮೆ ನೀಡುವುದರಿಂದ ಈ ಸಮಸ್ಯೆ ಪರಿಹಾರವಾಗಲಾರದು ಅಥವಾ ಈ ಸರ್ಕಾರ ಹೋಗಿ ಬಿಜೆಪಿ ಬಂದರೂ ಪರಿಸ್ಥಿತಿ ಬದಲಾಗಲಾರದು. ಹಿಂದೆ ಬಿಜೆಪಿ ಆಡಳಿತದಲ್ಲಿಯೂ ರಾಜಕಾರಣಿಗಳ ಮೂಲಕ ಪೊಲೀಸರ ದುರುಪಯೋಗ ಆಗಿದೆ. ನವೀನ್ ಸೂರಿಂಜೆ ತನ್ನ ಕರ್ತವ್ಯ ನಿರ್ವಹಿಸಿದ ತಪ್ಪಿಗೆ ಮೂರು ತಿಂಗಳು ಜೈಲಿನಲ್ಲಿ ಕಾಲಕಳೆಯಬೇಕಾಯಿತು. ಕರಾವಳಿ ಅಲೆ ಸಂಪಾದಕರನ್ನು ಬಂಧಿಸಿ ಕೈಕೋಳ ತೊಡಿಸಿ ಭಯೋತ್ಪಾದಕನಂತೆ ಕೋರ್ಟಿಗೆ ಹಾಜರು ಪಡಿಸಿ ವಿನಾಕಾರಣ ಜೈಲಿನಲ್ಲಿ ಕಾಲಕಳೆಯುವಂತೆ ಮಾಡಲಾಯಿತು ಹಾಗೂ ನಂತರ ಇದನ್ನು ಹೈಕೋರ್ಟ್ ಕಾನೂನುಬಾಹಿರ ಎಂದು ಛೀಮಾರಿ ಹಾಕಿ ಸರ್ಕಾರಕ್ಕೆ ದಂಡ ವಿಧಿಸಿತು.

    ವ್ಯವಸ್ಥೆಯನ್ನು ಬದಲಾಯಿಸದ ಹೊರತು ಇವುಗಳಿಗೆ ಪರಿಹಾರ ಇಲ್ಲ. ಸರ್ಕಾರ ಬದಲಾದರೂ ರಾಜಕಾರಣಿಗಳು ಪೊಲೀಸರ ದುರುಪಯೋಗ ಮಾಡುವುದು ತಪ್ಪುವುದಿಲ್ಲ. ಪರ್ಯಾಯರಾಜಕಾರಣವನ್ನು ಜನರು ಬೆಂಬಲಿಸುತ್ತಿಲ್ಲ. ಪರ್ಯಾಯ ರಾಜಕೀಯ ಕಟ್ಟುವ ಪ್ರಯತ್ನಗಳಿಗೆ ಜನರು ಬೆಂಬಲಿಸದೆ ಇದ್ದರೆ ವ್ಯವಸ್ಥೆ ಬದಲಾವಣೆ ಆಗಲಾರದು. ಪರ್ಯಾಯ ರಾಜಕೀಯ ವ್ಯವಸ್ಥೆ ಕಟ್ಟುವ ಚಿಂತನೆ ಮಾಡುವುದೇ ನಿಷ್ಪ್ರಯೋಜಕ ಎಂಬ ನಿರಾಶಾವಾದ ಮತ್ತೆ ಮತ್ತೆ ಕಂಡುಬರುತ್ತಿದೆ. ಇಂಥ ನಿರಾಶಾವಾದದ ಬದಲು ಜನರು ನಿರಂತರ ಪ್ರಯೋಗ ಮಾಡುತ್ತಾ ಇರಬೇಕು. ಪ್ರಜಾಪ್ರಭುತ್ವ ವ್ಯವಸ್ಥೆ ಬಲವಾಗುವುದು, ಪ್ರಬುದ್ಧವಾಗುವುದು ಇಂಥ ಪರ್ಯಾಯ ರಾಜಕೀಯ ವ್ಯವಸ್ಥೆಯನ್ನು ಜನ ಬೆಂಬಲಿಸಿದಾಗಲೇ. ಇಲ್ಲದಿದ್ದರೆ ವ್ಯವಸ್ಥೆ ನಿಂತ ನೀರಿನಂತೆ ಕೊಳೆಯುತ್ತಾ ಇರುತ್ತದೆ. ಪರ್ಯಾಯ ರಾಜಕೀಯ ವ್ಯವಸ್ಥೆಯನ್ನು ಬೆಂಬಲಿಸಿದರೆ ಸ್ವಲ್ಪವಾದರೂ ವ್ಯವಸ್ಥೆ ಮುಂದೆ ಹೋಗುತ್ತದೆ, ನಿಂತಲ್ಲೇ ನಿಂತು ವ್ಯವಸ್ಥೆ ಕೊಳೆಯುವುದು ಸ್ವಲ್ಪವಾದರೂತಪ್ಪುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸುವುದು ಜನರ ಕೈಯಲ್ಲಿಯೇ ಇದೆ. ಇದಕ್ಕೆ ಅವರು ಮಾಡಬೇಕಾದದ್ದು ಏನೂ ಇಲ್ಲ ಹೊಸ ಪ್ರಯೋಗಗಳಿಗೆ ಓಟು ಹಾಕಬೇಕಾದದ್ದು ಮಾತ್ರ. ಅಂಥ ತಿಳುವಳಿಕೆ ಇನ್ನೂ ನಮ್ಮ ಜನಕ್ಕೆ ಬಂದಿಲ್ಲ. ವ್ಯವಸ್ಥೆಯನ್ನು ಬದಲಿಸುವ ಕೀಲಿಕೈ ಜನರ ಬಳಿಯೇ ಇದ್ದರೂ ಅದನ್ನು ನಾವು ಬಳಸುತ್ತಿಲ್ಲ. ನಾವು ದೂರಬೇಕಾದದ್ದು ನಮ್ಮನ್ನೇ. ವ್ಯವಸ್ಥೆಯನ್ನು ಬದಲಾಯಿಸುವ ಅವಕಾಶವನ್ನು ನಾವು ಮತದಾರರು ಬಳಸಿಕೊಳ್ಳುತ್ತಿಲ್ಲ. ಇನ್ನು ವ್ಯವಸ್ಥೆಯನ್ನು ದೂರಿ ಏನು ಪ್ರಯೋಜನ?

    Reply
  35. M A Sriranga

    ಆನಂದಪ್ರಸಾದ್ ಅವರಿಗೆ— ಈ ದಿನದ ಪ್ರಜಾವಾಣಿ ದಿನಪತ್ರಿಕೆಯಲ್ಲಿ ದೇವರಾಜ್ ಅರಸು ಅವರು ನಮ್ಮ ರಾಜ್ಯದ ಮುಖ್ಯಮಂತ್ರಿಗಳಾಗಿದ್ದಾಗ ಅವರ ಸಂಪುಟದಲ್ಲಿದ್ದ ಮಂತ್ರಿಯೊಬ್ಬರ ಮೇಲೆ ಆಪಾದನೆ ಬಂದ ನಾಲ್ಕೇ ನಾಲ್ಕು ದಿನಗಳಲ್ಲಿ ಆ ಮಂತ್ರಿಯವರಿಂದ ರಾಜೀನಾಮೆ ಕೊಡಿಸಿದರು. ಈ ಬಗ್ಗೆ ವಿವರವಾಗಿ ಬಂದಿದೆ. ಬಿಡುವಿದ್ದರೆ ಓದಿ. ಒಬ್ಬ ಮಂತ್ರಿ ರಾಜೀನಾಮೆ ಕೊಡುವುದರಿಂದ ‘ಏನಾದರೂ ಆಗುತ್ತದೋ ಇಲ್ಲವೋ’ ಅದು ಬೇರೆ ಮಾತು. ಆದರೆ ಜನಗಳಿಗೆ ಈ ಪಕ್ಷದ ಸರ್ಕಾರ ನಮ್ಮ ಭಾವನೆಗಳಿಗೆ ಸ್ಪಂದಿಸುತ್ತದೆ ಎಂಬ ಭಾವನೆ ಬರುತ್ತದೆ. ಆ ಕಾರಣದಿಂದಲೇ ಅರಸು ಅವರು ಜನಗಳ ಪ್ರೀತಿ,ವಿಶ್ವಾಸಗಳಿಸಿದ್ದರು. ‘ಅಜಾತಶತ್ರು’ ಎನಿಸಿಕೊಂಡಿದ್ದರು. ರಾಮಕೃಷ್ಣ ಹೆಗಡೆಯವರು ಮುಖ್ಯ ಮಂತ್ರಿಯಾಗಿದ್ದಾಗ ಫೋನ್ ಕದ್ದಾಲಿಕೆಯ ದೊಡ್ಡ ಆರೋಪ ಬಂದಿತ್ತು. ತಕ್ಷಣ ರಾಜೀನಾಮೆ ನೀಡಿದರು. ಇವೆಲ್ಲಾ ತಮಗೆ ತಿಳಿದಿದೆ ಎಂದು ಭಾವಿಸುವೆ.

    Reply
  36. Ananda Prasad

    ದೇವರಾಜ ಅರಸು ಅವರಂತೆ ಸಿದ್ಧರಾಮಯ್ಯನವರು ಸೂಕ್ಷ್ಮ ಸಂವೇದನೆ ಹೊಂದಿರುವ ರಾಜಕಾರಣಿ ಅಲ್ಲ, ಹೀಗಾಗಿ ಮತ್ತೆ ಮತ್ತೆ ತಪ್ಪು ಮಾಡುತ್ತಿದ್ದಾರೆ. ಇದು ಅಧಿಕಾರದ ಅಮಲು ಇರಬಹುದು. ಆಪಾದನೆ ಬಂದಾಗ ಸಂಬಂಧಪಟ್ಟ ಮಂತ್ರಿ ರಾಜೀನಾಮೆ ನೀಡುವುದು ಅಥವಾ ಮುಖ್ಯಮಂತ್ರಿ ಅಥವಾ ಪ್ರಧಾನಮಂತ್ರಿ ಸಂಬಂಧಪಟ್ಟ ಮಂತ್ರಿಯ ರಾಜೀನಾಮೆ ಪಡೆಯುವುದು ಒಳ್ಳೆಯ ರಾಜಕಾರಣದ ಮಾದರಿ ಹೌದು. ಈಗ ಸಿದ್ಧರಾಮಯ್ಯನವರು ಆಪಾದನೆಗೆ ಒಳಗಾದ ಜಾರ್ಜ್ ರಾಜೀನಾಮೆ ಪಡೆದು ಈ ಪ್ರಕರಣವನ್ನು ಸಿಬಿಐ ಕೊಡುವುದು ಸೂಕ್ತ. ಇದರಿಂದ ವಿಧಾನಮಂಡಲದ ಅಧಿವೇಶನವಾದರೂ ಜನರ ಅವಶ್ಯಕ ವಿಚಾರಗಳ ಬಗ್ಗೆ ಚರ್ಚಿಸಲು ಬಳಕೆಯಾಗಬಹುದು. ಹಾಗೆ ನೋಡಿದರೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಕೂಡ ರಾಜೀನಾಮೆ ಕೊಡಬೇಕಾಗಬಹುದು ಏಕೆಂದರೆ ಈಗ ಮತ್ತೊಬ್ಬ ಪೊಲೀಸ್ ಅಧಿಕಾರಿ ಸಿದ್ಧರಾಮಯ್ಯನವರ ವಿರುದ್ಧ ಕಿರುಕುಳದ ಆಪಾದನೆ ಹೊರಿಸಿದ್ದಾರೆ. ಸಿದ್ಧರಾಮಯ್ಯ ಬೆಂಬಲಿಗರು ಇನ್ನೊಬ್ಬ ಐಎಎಸ್ ಅಧಿಕಾರಿಗೂ ಬೆದರಿಕೆ ಹಾಕಿದ್ದಾರೆ. ಇದರಿಂದ ಸಿದ್ಧರಾಮಯ್ಯನವರ ವರ್ಚಸ್ಸು ತೀವ್ರವಾಗಿ ಕುಂದುಲಿದೆ.

    Reply

Leave a Reply

Your email address will not be published. Required fields are marked *