ಸಂಘಪರಿವಾರದಲ್ಲಿ ಬ್ರಾಹ್ಮಣ ಮತ್ತು ಶೂದ್ರ ನಾಯಕತ್ವ

Naveen Soorinje


ನವೀನ್ ಸೂರಿಂಜೆ


 

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಕೋಮು ಗಲಭೆಗೆ ಸಂಬಂಧಿಸಿದಂತೆ ಪೊಲೀಸರು ಆರ್.ಎಸ್.ಎಸ್ ಮುಖಂಡರ ಮೇಲೆ ಕೇಸು ದಾಖಲಿಸಿದ್ದಾರೆ. ಶವ ಮೆರವಣಿಗೆ ನಡೆಯುತ್ತಿದ್ದಾಗ ಕಲ್ಲು ತೂರಾಟ ನಡೆಸಲು ಪ್ರೇರೇಪಿಸಿದ್ದರು ಎಂದು ಹಿಂದೂ ಜಾಗರಣಾ ವೇದಿಕೆಯ ದಕ್ಷಿಣ ಪ್ರಾಂತ್ಯದ ಮಾಜಿ ಸಂಚಾಲಕ ಸತ್ಯಜಿತ್ ಸುರತ್ಕಲ್ ಹಾಗೂ ಭಜರಂಗದಳದ ಅಧ್ಯಕ್ಷ ಶರಣ್ ಪಂಪ್ ವೆಲ್ ಮೇಲೆ ಪೊಲೀಸರು ಎಫ್.ಐ.ಆರ್ ದಾಖಲಿಸಿದ್ದಾರೆ. ಇವರೀರ್ವರ ಮನೆ ಶೋಧ ನಡೆಸಿರುವ ಪೊಲೀಸರು ಅವರಿಬ್ಬರೂ ಪರಾರಿಯಾಗಿದ್ದಾರೆ ಎಂದು ವರದಿ ನೀಡಿದ್ದಾರೆ. ಸದಾ ಪೊಲೀಸ್ ಗನ್ ಮ್ಯಾನ್ ಹೊಂದಿರುವ ಸತ್ಯಜಿತ್ ಸುರತ್ಕಲ್ ಅಥವಾ ಶರಣ್ ಪಂಪ್‍ವೆಲ್‌ ಒಮ್ಮಿಂದೊಮ್ಮೆಲೆ ಪರಾರಿಯಾಗುವುದಾದರೂ ಹೇಗೆ ಎಂಬ ಪ್ರಶ್ನೆ ಇಲ್ಲಿ ಸಹಜವಾಗಿಯೇ ಉದ್ಬವಿಸುತ್ತದೆ. ಇದರ ಜೊತೆಗೆಯೇ ಕೋಮುಗಲಭೆ ಪ್ರಕರಣದ ವಿಚಾರಣೆಗೆ ಸಂಬಂಧಪಟ್ಟಂತೆ ಪೋಲೀಸರು ಸತ್ಯಜಿತ್ ಸುರತ್ಕಲ್ ಹಾಗೂ ಶರಣ್ ಪಂಪ್‍ವೆಲ್‌- ಇವರಿಬ್ಬರನ್ನಷ್ಟೇ ಆಯ್ಕೆ ಮಾಡಿಕೊಂಡಿದ್ದು ಯಾಕೆ; ಕೋಮುಗಲಭೆ ಪ್ರಚೋದನೆಗೆ ಅವರಿಬ್ಬರಷ್ಟೇ ಕಾರಣರಾಗಿರುವ ಕಲ್ಲಡ್ಕ ಪ್ರಭಾಕರ ಭಟ್ ಅಥವಾ ಎಂ.ಬಿ. ಪುರಾಣಿಕ್ ಅವರನ್ನು ಯಾಕೆ ಪೋಲಿಸರು ತನಿಖೆಯ ಕೇಂದ್ರ ಬಿಂದುವನ್ನಾಗಿ ಪರಿಗಣಿಸಿಲ್ಲ ಎಂಬ ಪ್ರಶ್ನೆಯೂ ಇಲ್ಲಿ ಎದುರಾಗುತ್ತದೆ. ಕರಾವಳಿಯಲ್ಲಿ ಸಂಘಪರಿವಾರದ ಪ್ರಚೋದನೆಯ ಹಿನ್ನಲೆಯಲ್ಲಿ ನಡೆದ ಕೋಮುಗಲಭೆಗಳು, ಮತೀಯ ದ್ವೇಷದ ಪ್ರಕರಣಗಳು ಮತ್ತು ನೈತಿಕ ಪೋಲಿಸುಗಿರಿಯಂತಹ ಪ್ರಕರಣಗಳು ಮತ್ತು ಅವುಗಳ ತನಿಖೆಗಳ ಜಾತಿ ಸಮೀಕರಣದ ಹಿನ್ನಲೆಯನ್ನು ನೋಡಿದಾಗ ಈ ಪ್ರಶ್ನೆ ಇನ್ನೂ ಸ್ಪಷ್ಟವಾಗುತ್ತದೆ.    

ಸೆಪ್ಟೆಂಬರ್ 14, 2008 ರಂದು ಭಜರಂಗದಳದ ಕಾರ್ಯಕರ್ತರು ಮಂಗಳೂರಿನಲ್ಲಿ ಚರ್ಚುಗಳ ಮೇಲೆ ದಾಳಿ ನಡೆಸಿದರು. ಈ ಕುಕೃತ್ಯದ ಬಗ್ಗೆ ಸೆಪ್ಟೆಂಬರ್ 15 ರಂದು ಭಜರಂಗದಳದ ಅಂದಿನ ರಾಜ್ಯಾಧ್ಯಕ್ಷ ಮಹೇಂದ್ರ ಕುಮಾರ್ ಹಾಗೂ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಎಂ.ಬಿ. ಪುರಾಣಿಕ್ ಪತ್ರಿಕಾಗೋಷ್ಠಿ ಕರೆದಿದ್ದರು. ಅಲ್ಲಿ ಅವರಿಬ್ಬರೂ ‘’ಚರ್ಚ್ ದಾಳಿಯನ್ನು ಮಾಡಲು ನಮ್ಮ ಕಾರ್ಯಕರ್ತರಿಗೆ ಸೂಚಿಸಿದ್ದು ನಾವೇ. ಚರ್ಚ್ ಗಳಲ್ಲಿ ಮತಾಂತರ ನಡೆಯುತ್ತಿದ್ದರಿಂದ ದಾಳಿ ಮಾಡಬೇಕಾಯಿತು’’ ಎಂದಿದ್ದರು. ಮರುದಿನ ಪೊಲೀಸರು ಭಜರಂಗದಳದ ರಾಜ್ಯಾಧ್ಯಕ್ಷ ಮಹೇಂದ್ರ ಕುಮಾರ್ ವಿರುದ್ಧ ಪ್ರಕರಣ ದಾಖಲಿಸಿ ಜೈಲಿಗೆ ಹಾಕಿದ್ದರು. ಆದರೆ ಪತ್ರಿಕಾಗೋಷ್ಟಿಯಲ್ಲಿ ಮಹೇಂದ್ರ ಕುಮಾರ್ ಅವರ ಪಕ್ಕದಲ್ಲೇ ಇದ್ದ, ಭಜರಂಗದಳದ ಮಾತೃ ಸಂಘಟನೆಯಾಗಿರುವ ವಿಶ್ವ ಹಿಂದೂ ಪರಿಷತ್ತಿನ ಮುಖಂಡ ಎಂ.ಬಿ. ಪುರಾಣಿಕ್ ವಿರುದ್ಧ ಕೇಸೂ ದಾಖಲಾಗಲಿಲ್ಲಬಂಧನವೂ ಆಗಲಿಲ್ಲ. ಇಬ್ಬರೂ ಒಂದೇ ವೇದಿಕೆಯಲ್ಲಿ, ಒಂದೇ ಕೃತ್ಯಕ್ಕೆ ಸಂಬಂಧಿಸಿ ಒಂದೇ ರೀತಿಯ ಹೇಳಿಕೆ ನೀಡಿದ್ದರು. ದಾಳಿಯಲ್ಲಿ ಇಬ್ಬರ ಪಾತ್ರವೂ ಒಂದೇ ಆಗಿತ್ತು. ಆದರೆ ಪ್ರಕರಣದಲ್ಲಿ ಬಂಧನವಾಗಿದ್ದು, ಫಿಕ್ಸ್ ಆಗಿದ್ದು ಹಿಂದುಳಿದ ವರ್ಗಕ್ಕೆ ಸೇರಿದ ಮಹೇಂದ್ರ ಕುಮಾರ್ ಮಾತ್ರ. ಎಂ.ಬಿ. ಪುರಾಣಿಕ್ ಎಂಬ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಆರ್.ಎಸ್.ಎಸ್ ಮುಖಂಡನ ಮೇಲೆ ಕೇಸು ದಾಖಲಾಗಲೇ ಇಲ್ಲ.

ಕೋಮುಗಲಭೆ ಹಾಗೂ ನೈತಿಕ ಪೋಲೀಸುಗಿರಿಯಂತ ಪ್ರಕರಣಗಳಲ್ಲಿ ಮತ್ತು ಅವುಗಳ ವಿಚಾರಣೆಗಳಲ್ಲಿ ಗೋಚರಿಸುವ ಜಾತಿ ಸಮೀಕರಣದ ನೆರಳು ಪಬ್ ದಾಳಿ (2009) ಮತ್ತು ಹೋಂ ಸ್ಟೇ ದಾಳಿ (2012) ಪ್ರಕರಣಗಳಲ್ಲಿ ಇನ್ನಷ್ಟು ಸ್ಪಷ್ಟವಾಗಿ ಗೋಚರವಾಗುತ್ತದೆ. ಜನವರಿ 24, 2009 ರಂದು ಮಂಗಳೂರಿನಲ್ಲಿ ಪಬ್ ದಾಳಿ ನಡೆಯಿತು. ಅಂಬೇಡ್ಕರ್ ಸರ್ಕಲ್ ನಿಂದ ಹಂಪನಕಟ್ಟೆಗೆ ಹೋಗುವ ರಸ್ತೆಯಲ್ಲಿರುವ ಅಮ್ನೇಶಿಯಾ ಪಬ್ ನಲ್ಲಿ ಹುಡುಗ ಹುಡುಗಿಯರು ಕುಣಿತ-ಕುಡಿತದಲ್ಲಿ ತೊಡಗಿಕೊಂಡು ಭಾರತೀಯ ಸಂಸ್ಕೃತಿಗೆ ಅಪಚಾರ ಎಸಗುತ್ತಿದ್ದಾರೆ ಎಂದು ಆರೋಪಿಸಿ ಶ್ರೀರಾಮ ಸೇನೆ ದಾಳಿ ನಡೆಸಿತು. ಅಂದು ಪಬ್ ಒಳಗೆ ನುಗ್ಗಿ ದಾಳಿ ನಡೆಸಿದ್ದು ಶ್ರೀರಾಮ ಸೇನೆಯ ಕಾರ್ಯಕರ್ತರು. ಆದರೆ ಘಟನೆಯ ನಂತರದಲ್ಲಿ ಪೋಲೀಸರು ದಾಳಿ ನಡೆಸಿದ್ದ ಶ್ರೀರಾಮ ಸೇನೆಯ ಕಾರ್ಯಕರ್ತರನ್ನು ಮಾತ್ರವಲ್ಲದೇ ದಾಳಿಯಲ್ಲಿ ನೇರವಾಗಿ ಭಾಗಿಯಾಗದೆ, ಆದರೆ ದಾಳಿ ನಡೆಸುವಂತೆ ಸೂಚಿಸಿದ್ದ, ಪ್ರಚೋದಿಸಿದ್ದ ಶ್ರೀರಾಮ ಸೇನೆಯ ಅಂದಿನ ಅಧ್ಯಕ್ಷನಾಗಿದ್ದ, ವಿಶ್ವಕರ್ಮ ಸಮುದಾಯಕ್ಕೆ ಸೇರಿದ ಪ್ರಸಾದ್ ಅತ್ತಾವರನನ್ನು ಕೂಡಾ ಬಂಧಿಸಿದ್ದರು.

ಇದಾದ ನಂತರ ಜುಲೈ 28, 2012 ರಂದು ಪಬ್ ಅಟ್ಯಾಕ್ ಮಾಧರಿಯಲ್ಲೇ ಹಿಂದೂ ಜಾಗರಣಾ ವೇದಿಕೆಯು ಹೋಂ ಸ್ಟೇ ದಾಳಿ ನಡೆಸಿತು. ಮಾರ್ನಿಂಗ್ ಮಿಸ್ಟ್ ಎಂಬ ಹೋಂ ಸ್ಟೇಯಲ್ಲಿ ರೇವ್ ಪಾರ್ಟಿ ನಡೆಯುತ್ತಿದೆ ಎಂದು ಆರೋಪಿಸಿ ಕಾಲೇಜು ವಿದ್ಯಾರ್ಥಿನಿಯರ ಮೇಲೆ ನಡೆದ ಅಮಾನವೀಯ ದಾಳಿ ಅದಾಗಿತ್ತು. ಪಬ್ ಅಟ್ಯಾಕ್ ಮಾಡಿದಾಗ ಶ್ರೀರಾಮ ಸೇನೆಯಲ್ಲಿದ್ದ ಕಾರ್ಯಕರ್ತರೇ ಅಲ್ಲಿಂದ ಸಿಡಿದು ಬಂದು ಹಿಂದೂ ಜಾಗರಣಾ ವೇದಿಕೆ ಸೇರಿದ್ದರು. ಬಹುಪಾಲು ಪಬ್ ಅಟ್ಯಾಕ್ ಆರೋಪಿಗಳೇ ಮಾರ್ನಿಂಗ್ ಮಿಸ್ಟ್ ಹೋಂ ಸ್ಟೇ ಮೇಲೆ ನಡೆದ ದಾಳಿಯಲ್ಲೂ ಭಾಗಿಯಾಗಿದ್ದರು. ದಾಳಿ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ, ಮಾಧ್ಯಮಗಳ ದೃಶ್ಯಾವಳಿಯನ್ನು ಆಧರಿಸಿ ದಾಳಿಕೋರ ಹಿಂದೂ ಜಾಗರಣಾ ವೇದಿಕೆಯ ಸದಸ್ಯರನ್ನು ಬಂಧಿಸಿದರು. ಈ ಸಂಧರ್ಭದಲ್ಲಿ ಹಿಂದೂ ಜಾಗರಣಾ ವೇದಿಕೆಯ ರಾಜ್ಯಾಧ್ಯಕ್ಷ ಜಗದೀಶ ಕಾರಂತ ಪತ್ರಿಕಾಗೋಷ್ಠಿಯನ್ನು ಮಾಡಿ, ದಾಳಿಯನ್ನು ಸಮರ್ಥಿಸಿದ್ದಲ್ಲದೇ ಹಿಂದೂ ಜಾಗರಣಾ ವೇದಿಕೆಯೇ ದಾಳಿಯನ್ನು ಸಂಘಟಿಸಿತ್ತು ಎಂದು ಹೇಳಿಕೆ ನೀಡಿದ್ದರು. ಆದರೆ ಪಬ್ ದಾಳಿ ಸಂದರ್ಭದಲ್ಲಿ ಆ ದಾಳಿಗೆ ಪ್ರಚೋದನೆ ನೀಡಿದ್ದ ವಿಶ್ವಕರ್ಮ ಸಮುದಾಯಕ್ಕೆ ಸೇರಿದ ಪ್ರಸಾದ್ ಅತ್ತಾವರ ಬಂಧಿಸಲ್ಪಟ್ಟಂತೆ ಹೋಂ ಸ್ಟೇ ದಾಳಿಯ ಹಿನ್ನಲೆಯಲ್ಲಿದ್ದ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಜಗದೀಶ ಕಾರಂತ್ ಪೋಲೀಸ್ ಬಂಧನಕ್ಕೆ ಒಳಗಾಗಲೇ ಇಲ್ಲ; ಅವರ ಮೇಲೆ ಕನಿಷ್ಠ ಕೇಸು ಕೂಡಾ ದಾಖಲಾಗಿಲ್ಲ.  

ಮೊನ್ನೆ ನಡೆದ ಶರತ್ ಮಡಿವಾಳ ಶವ ಮೆರವಣಿಗೆಯ ಅಹಿತಕರ ಘಟನೆಯಲ್ಲೂ ಇದು ಪುನರಾವರ್ತನೆ ಆಗಿದೆ. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಪೋಲೀಸ ತನಿಖೆಯ ಕೇಂದ್ರವಾಗಿರುವ, ಹಿಂದುಳಿದ ಬಿಲ್ಲವ ಸಮುದಾಯಕ್ಕೆ ಸೇರಿದ ಸತ್ಯಜಿತ್ ಸುರತ್ಕಲ್ ಹಿಂದೂ ಜಾಗರಣಾ ವೇದಿಕೆಯ ದಕ್ಷಿಣ ಪ್ರಾಂತ್ಯ ಸಂಚಾಲಕರಾಗಿ ಕೆಲಸ ಮಾಡಿದವರು. ಹಾಗೆಯೇ ಕೊಟ್ಟಾರಿ ಎಂಬ ಅತ್ಯಂತ ಹಿಂದುಳಿದ ಸಮುದಾಯಕ್ಕೆ ಸೇರಿದ ಶರಣ್ ಪಂಪ್‍ವೆಲ್‌ ಭಜರಂಗದಳದ ರಾಜ್ಯಾಧ್ಯಕ್ಷರಾಗಿ ಕೆಲಸ ಮಾಡುತ್ತಿರುವವರು. ಇವರಿಬ್ಬರೂ ಶವ ಮೆರವಣಿಗೆಯ ವೇಳೆ ಕಲ್ಲು ತೂರಾಟ ಮಾಡಲು ಪ್ರಚೋದಿಸಿದ್ದರು ಎಂದು ಕೇಸು ದಾಖಲಾಗಿದೆ. ಅವರ ಶೋಧ ಕಾರ್ಯವೂ ನಡೆಯುತ್ತಿದೆ. ಇದೇ ಪ್ರಕರಣದಡಿಯಲ್ಲಿ ಶವಮೆರವಣಿಗೆ ಆಯೋಜಿಸಿದ್ದ ಕಲ್ಲಡ್ಕ ಪ್ರಭಾಕರ್ ಭಟ್ ಮೇಲೆ ಯಾವ ಪ್ರಕರಣವೂ ದಾಖಲಾಗಿಲ್ಲ. ಇಡೀ ಕೋಮುಗಲಭೆಗೆ ಕಲ್ಲಡ್ಕ ಪ್ರಭಾಕರ್ ಭಟ್, ಶರಣ್ ಪಂಪ್‍ವೆಲ್‌ ಹಾಗೂ ಸತ್ಯಜಿತ್ ಸುರತ್ಕಲ್- ಮೂವರೂ ಸಮಾನ ಜವಾಬ್ದಾರರಾಗಿದ್ದಾರೆ. ಮೂವರೂ ಒಂದೇ ರೀತಿಯ ಕೃತ್ಯಗಳನ್ನು ನಡೆಸಿದ್ದಾರೆ. ಆದರೆ ಪ್ರಕರಣ ದಾಖಲಾಗಿರುವುದು ಹಿಂದುಳಿದ ಸಮುದಾಯದಿಂದ ಬಂದ ಆರ್.ಎಸ್.ಎಸ್ ಮುಖಂಡರ ಮೇಲೆ ಮಾತ್ರವೇ.

ಕೋಮು ಗಲಭೆಯಲ್ಲಿ ಭಾಗಿಯಾಗಿ ಜೈಲು ಸೇರುತ್ತಿರುವುದು ಮಾತ್ರವಲ್ಲದೆ ಕೋಮು ಗಲಭೆಯಲ್ಲಿ ಕೊಲೆಯಾದವರೂ ಕೂಡಾ ಬಹುತೇಕರು ಬಿಲ್ಲವ/ಹಿಂದುಳಿದ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಉದಯ ಪೂಜಾರಿ, ಜಗದೀಶ್ ಪೂಜಾರಿ, ಕ್ಯಾಂಡಲ್ ಸಂತು, ಪೊಳಲಿ ಅನಂತು, ಪ್ರಶಾಂತ್ ಪೂಜಾರಿ, ಹರೀಶ್ ಪೂಜಾರಿ, ಪ್ರೇಮ್ ಕೋಟ್ಯಾನ್, ಸುನೀಲ್ ಪೂಜಾರಿ, ಹೇಮಂತ್, ಪ್ರವೀಣ್ ಪೂಜಾರಿ… ಹೀಗೆ ಬಿಲ್ಲವ ಹೆಸರುಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.  ಇದಲ್ಲದೆ ಹರೀಶ್ ಭಂಡಾರಿ, ಸುಖಾನಂದ ಶೆಟ್ಟಿ, ಕೋಡಿಕೆರೆ ಶಿವರಾಜ್, ಪ್ರಕಾಶ್ ಕುಳಾಯಿ, ಮಣಿಕಂಠ ಸುರತ್ಕಲ್, ಹೇಮಂತ್ ಸುರತ್ಕಲ್ ಹೀಗೆ ಸಾವಿಗೀಡಾದ ಬ್ರಾಹ್ಮಣೇತರ ವರ್ಗಗಳ ಯುವಕರ ಪಟ್ಟಿ ಸಿಗುತ್ತದೆ. ಮೊನ್ನೆ ಮೃತನಾದ ಶರತ್ ಮಡಿವಾಳ ಕೂಡಾ ಅತ್ಯಂತ ಹಿಂದುಳಿದ ಅಗಸ ಸಮುದಾಯಕ್ಕೆ ಸೇರಿದವರು. ಶರತ್ ಮಡಿವಾಳ ಶವಯಾತ್ರೆಯ ಸಂಧರ್ಭ ಮುಸ್ಲಿಂ ಯುವಕನಿಗೆ ಇರಿದ ಪ್ರಕರಣಗಳಲ್ಲಿ ಪೊಲೀಸರು ನಿತಿನ್ ಪೂಜಾರಿ (21 ವರ್ಷ), ಪ್ರಾಣೇಶ್ ಪೂಜಾರಿ (20 ವರ್ಷ) ಹಾಗೂ ಕಿಶನ್ ಪೂಜಾರಿ (21 ವರ್ಷ) ಮೊದಲಾದವರನ್ನು ಬಂಧಿಸಿದ್ದಾರೆ. ಈ ಮೂವರು ಯುವಕರೂ ಕೂಡಾ ಹಿಂದುಳಿದ ಬಿಲ್ಲವ ಸಮುದಾಯಕ್ಕೆ ಸೇರಿದ್ದಾರೆ.

ಇಡೀ ದಕ್ಷಿಣ ಕನ್ನಡದ ಮತೀಯವಾದಿ ರಕ್ತ ಚರಿತೆಯಲ್ಲಿ ಒಬ್ಬನೇ ಒಬ್ಬ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಕಾರ್ಯಕರ್ತನಾಗಲೀ, ನಾಯಕನಾಗಲೀ ಜೈಲು ಸೇರಿಲ್ಲ ಅಥವಾ ಹಿಂದುತ್ವಕ್ಕಾಗಿ ಜೀವ ನೀಡಿಲ್ಲ (?) ಎಂಬುದು ಗಮನಾರ್ಹ. ಅತ್ತ ಸತ್ಯಜಿತ್ ಸುರತ್ಕಲ್, ಶರಣ್ ಪಂಪ್‍ವೆಲ್‌ ರಂತಹ ಹಿಂದುತ್ವವಾದಿ ಮುಖಂಡರು ಮೈಮೆಲೆಲ್ಲಾ ಪೋಲಿಸ್ ಕೇಸು ಜಡಿಸಿಕೊಡು ಜೀವ ಭಯದಿಂದ ಹೆಣಗಾಡುತ್ತಿದ್ದರೆ ಇತ್ತ ಪ್ರಭಾಕರ ಭಟ್ಟರು ಮಾತ್ರ ಕಲ್ಲಡ್ಕದ ತಮ್ಮ ನಿವಾಸದಲ್ಲಿ ಬಿಜೆಪಿ ಮುಖಂಡರ ಜೊತೆ ಸಭೆ ನಡೆಸುತ್ತಿದ್ದಾರೆ; ಅಧಿಕಾರ ಗ್ರಹಣದ ಚರ್ಚೆ ನಡೆಸುತ್ತಿದ್ದಾರೆ. ಅದೇ ಹೊತ್ತಿಗೆ ಹಿಂದುಳಿದ ವರ್ಗದಿಂದ ಬಂದ ಆರ್.ಎಸ್.ಎಸ್ ಮುಖಂಡರು ಕ್ರಿಮಿನಲ್ ಗಳಂತೆ ಪೋಲೀಸ್ ಕೇಸುಗಳ, ಬಂಧನದ ಭೀತಿಯಿಂದ ಭೂಗತರಾಗುತ್ತಿದ್ದಾರೆ.

 

21 thoughts on “ಸಂಘಪರಿವಾರದಲ್ಲಿ ಬ್ರಾಹ್ಮಣ ಮತ್ತು ಶೂದ್ರ ನಾಯಕತ್ವ

  1. Salam Sammi

    ಹಿಂದುಳಿದ ಸಮುದಾಯದ ಯುವಕರನ್ನು ಸುಲಭವಾಗಿ ತಮ್ಮ ಬುಟ್ಟಿಗೆ ಹಾಕಿಕೊಂಡು ಮೇಲ್ವರ್ಗದ ಜನರು ತಮ್ಮ ಬೇಳೆಯನ್ನು ಬೇಯಿಸಿ ಕೊಳ್ಳುತ್ತಿದ್ದಾರೆ. ತಲೆಯಲ್ಲಿ ಮೆದುಳು ಇರುವ ಜನರಿಗೆ ಈ ಲೇಖನ ಸಾಕು… ಆದರೆ ಅದನ್ನು ಓದುವಷ್ಟು ತಾಳ್ಮೆ ಅವರಲ್ಲಿರಬೇಕಾಷ್ಟೆ.

    Reply
    1. Pichalli Srinivas

      ಇದನ್ನು ಕರಪತ್ರ ಹಾಕಿಸಿ ದ.ಕ.ಉಡುಪಿ ಜಿಲ್ಲೆಗಳಲ್ಲಿ ಮನೆ ಮನೆ ತಲುಪಿಸಿ

      Reply
      1. Sharatkumar

        Hindugalu moorkharalla. Case yarmele hakkbeku annodu monitor madtirodu Congress govt. Hindugalannu Bharmana, shoodrarendu odeyuva kutantra ee lekhana.

        Reply
    2. Sharatkumar

      Police ru yaramele case dakhalisiddare or bittiddare annuvadara mele idu hindulida vargagala mele nadeyuttiro pitoori anta bimbisa horatavarige taleyalli medulidre modalu rajyadalli yava govt ide n yara ajna palakaragi police vyavaste karya nirvahisuttide annuvadara arivirali. Bhrahmana n shoodrara hesaralli Hindugala oggattu muriyuva gullenarigala yatna ee lekhana aste. Yaru moorkharilla understand?

      Reply
    3. .Sharatkumar

      Shava yatreya mele kallu hodedavaru yarendu janarella nodiddare. Hatyeyannu madiddu yarendu janarige gottagide. Hindugala madye huli hinduva prayatna ee lekhana aste.

      Reply
  2. ಕಿಶೋರ್ ಕೆ.

    ಇನ್ನಾದರೂ ಶೂದ್ರ / ಹಿಂದುಳಿದ ಸಮುದಾಯಗಳು ಹಿಂದುತ್ವೆಂಬ ಅಫೀಮಿನ ಮತ್ತಿನಿಂದ ಹೊರಬರಬೇಕು. ಇಲ್ಲವಾದಲ್ಲಿ ಇಂಥ ಕೋಮುಗಲಭೆಗಳಲ್ಲಿ ನಿರಂತರವಾಗಿ ಬಲಿಪಶುಗಳಾಗಬೇಕಾಗುತ್ತದರ.

    Reply
    1. Sharatkumar

      Apimu illa mannu illa. Case yarmele hakbeku beda annodanna tirmana madtirodu Congress govt. Hagirovaga discrimination elli bantu. Hindugala oggattannu odeyo tantra idu anta medulirge artha agutte.

      Reply
    1. Sharatkumar

      No such discrimination here. FIRs are monitored according to ruling parties will. Here in Karnataka Congress is ruling. If discrimination is there, its by Congress govt. Then what’s the role of upper casts in decision making? This is nothing but a conspiracy to divide Hindu society in the name of cast discrimination.

      Reply
  3. ವಾಸು.

    ಈ ಮುಂಚೆ, ಸಂಘ, ಭಾರತೀಯ ಜನಸಂಘ ಮತ್ತು ನಂತರ ಭಾರತೀಯ ಜನತಾ ಪಾರ್ಟಿಗಳನ್ನು ಬ್ರಾಹ್ಮಣರ ಪಕ್ಷಗಳೆಂದು ಹೀಯಾಳಿಸಿ ಜನತೆಯನ್ನು ದಾರಿ ತಪ್ಪಿಸುತ್ತಿದ್ದ ಜನರೇ, ಇಂದು ಬ್ರಾಹ್ಮಣೇತರ ಕೋಮಿನವರು ಮೇಲಿನ ಈ ಸಂಘಟನೆಗಳನ್ನು ಸೇರಿ, ಅವರೇ ಅಲ್ಲಿ ಬಹು ಸಂಖ್ಯಾಕರಾಗುತ್ತಿದ್ದುದು ಇವರಿಗೆ ಸಹಿಸಲುಸಾಧ್ಯವಿಲ್ಲವಾಗಿ, ಈಗ ಈ ಸಂಘಟನೆಗಳಲ್ಲಿ ಜಾತಿ ಭೇದವನ್ನು ಬಿತ್ತಿ ಅವುಗಳನ್ನು ದುರ್ಬಲ ಮಾಡುತ್ತಿರುವ ಪ್ರಯತ್ನ ಕಂಡು ಬರುತ್ತಿದೆ. ಶಿಸ್ತು, ರಾಷ್ಟ್ರ ಭಕ್ತಿ ಮೈಗೂಡಿಸಿಕೊಂಡು ಮತ್ತು ಮತದ ಹೆಸರಿನಲ್ಲಿ ನಡೆಯುತ್ತಿರುವ ಭಯೋತ್ಪಾದನೆಯನ್ನು ಎದುರಿಸಲು ಮತ್ತು ಇದಕ್ಕೆ ಪ್ರಾಣತ್ಯಾಗ ಮಾಡುತ್ತಿರುವ ಸಮೂಹವೇ ತಯಾರಾಗುತ್ತಿರುವುದು ಇವರಿಗೆ ಅನಪೇಕ್ಷಣೀಯವಾಗಿದೆ. ಭಗತ್ ಸಿಂಗ್, ಸಾವರ್ಕರ್ ಮುಂತಾದವರು ಕ್ರಾಂತಿ ಕಾರಿ ಸಂಘಟನೆ ಮಾಡುತ್ತಿರುವಾಗ ಗಾಂಧೀ ಭಕ್ತರು ಅವರನ್ನು ಹಿಂಸಾಚಾರಿಗಳೆಂದು ಧೂಷಿಸಿದರು. ಆದರೆ ಈ ಗಾಂದೀಭಕ್ತರು ದೇಶ ವಿಭಜನೆಯಾದಾಗ ಹಿಂದೂಗಳ ಮಾರಣ ಹೋಮ ನೋಡಿಯೂ ಸುಮ್ಮನಿದ್ದರು. ಬಹುಶಃ ಪರಿಸ್ಥಿತಿ ಇಂದು ಬದಲಾಗಿದೆ. ಜಾತ್ಯಾತೀತತೆ ಹೆಸರಿನಲ್ಲಿ ಬಹುಸಂಖ್ಯಾತ ಕೋಮಿನವರಿಗೆ ಆಗುತ್ತಿರುವ ಅನ್ಯಾಯವನ್ನು ಈಗ ಜನತೆ ಸಹಿಸುತ್ತಿಲ್ಲ. ಹಾಗಾಗಿಯೇ, ಇಂದು ಸೆಕ್ಯುಲರ್ ಹೆಸರಿನಲ್ಲಿ ಅಲ್ಪಸಂಖ್ಯಾತ ತುಷ್ಟೀಕರಣದ ವಿರುದ್ಧ ಒಂದು ದೊಡ್ಡ ಹೋರಾಟಕ್ಕೆ ಎಲ್ಲಾ ಕೋಮಿನವರೂ ಧುಮಿಕಿದ್ದಾರೆ. ಸಂಖ್ಯೆಯಲ್ಲಿ ಜಾಸ್ತಿಯಿರುವ ಕಾರಣ ಮತ್ತು ಹೋರಾಟ ಮನೋಭಾವ ಅವರಲ್ಲಿ ಹೆಚ್ಚಿರುವ ಕಾರಣ ಹೆಚ್ಚಿನ ಬ್ರಾಹ್ಮಣೇತರ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಕೊಲೆ,ದೌರ್ಜನ್ಯಕ್ಕೆ ಈಡಾಗಿದ್ದಾರೆ. ಬ್ರಾಹ್ಮಣೇತರರು ಹಿಂದೂ ಸಂಘಟನೆಗಳನ್ನು ಸೇರಲು ಇದೂ ಒಂದು ಕಾರಣ. ಆದರೆ ಈ ಹಿಂದೂ ಯುವಕರು ವೈಚಾರಿಕತೆಯನ್ನು ಮೈಗೂಡಿಸಿಕೊಂಡಿಲ್ಲ ವೆಂಬುದು ಖೇದದ ಸಂಗತಿ. ಸಂಘ ಪರಿವಾರದಲ್ಲಿ ಜಾತಿಯತೆ ಇಲ್ಲ. ಆದರೆ ಅಲ್ಲಿ ವೈಚಾರಿಕತೆ ಯಿಲ್ಲ. ವೈಚಾರಿಕತೆ ಯನ್ನು ಮೈಗೂಡಿಸಿಕೊಂಡು ಹಿಂದುತ್ವ ನಿಷ್ಟರಾಗಿರಲು ಸಾಧ್ಯವಿದೆ. ಆದರೆ ಅದು ಸಾಧ್ಯವಾಗಬೇಕಾದರೆ ಈ ಯುವಕರು ವೈಚಾರಿಕತೆಯ ಹರಿಕಾರ ” ಆರ್ಯಸಮಾಜ” ದಂತಹ ಸಂಘಟನೆಯನ್ನು ಸೇರಿ ವಿಚಾರವಂತರಾಗಿ, ಮೌಡ್ಯಗಳಿಂದ ದೂರವಿರಬೇಕು. ಸಾವರ್ಕರ್ ಒಬ್ಬ ವಿಚಾರವಾದಿಯಾಗಿದ್ದರು. ಅವರು ಹಿಂದುತ್ವ ನಿಷ್ಠರೂ ಅಗಿದ್ದರು. ಇದಕ್ಕೆ ಕಾರಣ ಅವರು ಆರ್ಯಸಮಾಜದ ಸಂಪರ್ಕಕ್ಕೆ ಬಂದುದು. ಜೀವನದುದ್ದಕ್ಕೂ, ಹಿಂದುತ್ವ ನಿಷ್ಠರಾಗಿ, ವೈಚಾರಿಕರಾಗಿಯೇ ಬಾಳಿದರು.
    ಮತ್ತೊಂದು ಪ್ರಶ್ನೆ. ಅಹಿಂದ ಸರಕಾರ ಆಧಿಕಾರದಲ್ಲಿದೆ. ಇವರ ಕಾಲದಲ್ಲಿಯೇ ಮತೀಯ ಆಧಾರದ ಮೇಲೆ ಸುಮಾರು 30 ಜನರ ಕೊಲೆಯಾಗಿದೆ. ಆದರೂ ಕೊಲೆ ಪಾತಕರಿಗೆ ಶಿಕ್ಷೆಯಿಲ್ಲ. ಡಾ|| ಪ್ರಭಾಕರ ಕಲ್ಲಡ್ಕರವರ ವಿರುದ್ಧ ಕೇಸು ಹಾಕಲು ಇವರಿಗೆ ಏಕೆ ಅಂಜಿಕೆ? ಕಾರಣವಿಷ್ಠೆ, ಕೇಸ್ ಹಾಕಿ ನಂತರ ಮುಖ ಭಂಗ ಮಾಡಿಸಿಕೊಳ್ಳಲು ಇವರು ತಯಾರಿಲ್ಲ. ಹಾಗಾಗಿಯೇ ಅಪಪ್ರಚಾರದ ದಾರಿ ಹಿಡಿದಿದ್ದಾರೆ.

    Reply
  4. N Krishna karanth

    Kamale kannige kanuodu yella haladiyagi ede karanadinda hero agalu hogi jail paladavara Kate yenu

    Reply
  5. Vishwaradhya Satyampet

    ಈ ಮನುವಾದಿಗಳ ಕುತಂತ್ರ ಇಂದು ನಿನ್ನೆಯದಲ್ಲ. ಇತಿಹಾಸದ ಉದ್ದಕ್ಜೂ ಇವರದು ಕಂತ್ರಿ ಬುದ್ದಿ. ಆದರೆ ನಮ್ಮ ಹುಡುಗರಿಗೆ ಇತಿಹಾಸದ ಅರಿವಿಲ್ಲದಿರುವುದು ದುರಂತ.

    Reply
    1. ಕೆ ಕೃಷ್ಣ

      ಮನುವಾದಿಗಳ ಕುತಂತ್ರ ಎಂದು ನೀವು ಹೇಳುತ್ತೀರಲ್ಲ ದಯವಿಟ್ಟು ಇತಿಹಾಸದ ಯಾವುದೇ ವಿಷಯದ ಬಗ್ಗೆ ನಿಮಗೆ ತಿಳಿದಿದ್ದರೆ ಅದನ್ನು ತಿಳಿಸಿ ನಾವು ಕೂಡ ಅದರ ಬಗ್ಗೆ ಸ್ವಲ್ಪ ಯೋಚನೆ ಮಾಡುತ್ತೇವೆ .ಕೇವಲ ನೀವು ಆರೋಪ ಹೊರಿಸಿ ಓಡಿ ಹೋಗಬೇಡಿ

      Reply
  6. Anonymous

    Obba comunist meinded pathrakartha antha helalu naachikepattukollbekada soorinjeyinda e reethiya hindu samaja odeyuva baraha allade mathyavudu nirikshisabahudu?

    Reply
  7. Anonymous

    ಹಿಂದು ಎಂಬ ಪದ ಬಳಸಿ 85% ಹಿಂದುಳಿದ ಜಾತಿಗಳಿಗೆ 3% ಬ್ರಾಹ್ಮಣರೇ ಇಂದಿಗೂ ರಾಜರು….

    Reply
    1. shantiNayak

      ಹಿಂದು ಈ ಶಬ್ದ ಸಿಂಧು ಗಳಿಗೆ ಸಂಬಂಧ ಪಟ್ಟದ್ದು. ಇನ್ನೊಂದು ಶಬ್ದ ಈ ಮೂಲ ಹಿಂದು ಗಳಲ್ಲದವರ ಮತ ಕ್ಕಾಗಿ ಜಾರಿಗೆ ಬಂದ ಶಬ್ದ. ಇದು ಮೂಲತಹ ಹಿಂದುಗಳಲ್ಲದವರನ್ನು ಮೂರ್ಖರನ್ನಾಗಿ ಮಾಡಿದೆ. ಇಲ್ಲಿ ಮೂಲ ಹಿಂದುಗಳು ಸಂಸ್ಕೃತ ಭಾಷಿಕರು. ಅವರು ಪುರಾಣ ಕಟ್ಟಿ ಬುಡಕಟ್ಟು ದೇವರನ್ನು ಮತಾಂತರ ಮಾಡಿ ದ್ದಲ್ಲದೆ ಬುಡಕಟ್ಟು ದೇವರನ್ನು ತಾವು ಪೂಜಿಸುವ ಪುರಾಣ ಮೂಲದ ದೇವರ ವಾಹನ ಗಳನ್ನಾಗಿ ಮಾಡಿದರು. ಬುಡಕಟ್ಟು ಗಳ ಪ್ರಾಣಿದೇವರಾದ ಹುಲಿ ಇಲಿ ಆನೆ ನವಿಲು ಗಳನ್ನು ವಾಹನ ಗಳಾಗಿಸಿದರು ಅಥವಾ ಅವುಗಳ ಹೆಸರನ್ನು ಸಂಸ್ಕೃತ ಭಾಷೆಗೆ ಪರಿವರ್ತಿಸಿದರು ಬುಡಕಟ್ಟುಗಳ ಅಮ್ಮ ದುರ್ಗೆಯಾದಳು . ಈ ಬುಡಕಟ್ಟು ದೇವರುಗಳ ಮತಾಂತರ ದಕ್ಷ ಪುರಾಣ ಶಿವ ಪುರಾಣ ಕಾಲಕ್ಕೆ ಬಹು ವಾಗಿ ನಡೆಯಿತು. ೫೨ ಶಕ್ತಿ ದೇವತೆಗಳನ್ನು ಬುಡಕಟ್ಟು ಗಳ ಮೂಲ ದೇವರ ಸ್ಥಾನದಲ್ಲಿ ಸ್ಥಾಪಿಸಿದರು. ಮತಕ್ಕಾಗಿ ಮೂಲ ಹಿಂದುಗಳಿಂದ ಹಿಂದು ನಾಮ ಪಡೆದ ಹೊಸ ಹಿಂದುಗಳು ತಾವು ಮೂಲದವರ ಹಿಂದುತ್ವನ್ನು ಹೊಂದಿದವರೇ ? ಎಂಬುದನ್ನು ಯೋಚಿಸಬೇಕಾಗಿದೆ. ಬುಡಕಟ್ಟುಗಳ ದೇವರಿಗೆ ಸಂಸ್ಕೃತ ಭಾಷೆಯೇ ಬೇಕೇ? ಯಜ್ಞ ಕರಾದ ಮೂಲ ಹಿಂದುಗಳ ಹೋಮ ಹವನ ಬೆಂಕಿಯೇ ಬೇಕೆ? ಹಣ್ಣು ಕಾಯಿ ಸಾಲದೆ? ತಾಯಿ ಭಾಷೆ ಸಾಲದೆ? ಬಾಯಿಯಿಲ್ಲದ ಮೂಕ ಬುಡಕಟ್ಟು ದೇವರನ್ನು ಇಂತಹ ಮತಾಂತ ರದಿಂದ ಉಳಿಸಿ. ಹೊಸ ಹಿಂದು ಗಳೆ ನೀವು ಮೂಲ ಹಿಂದು ಗಳಲ್ಲಎಂಬುದನ್ನು ಮನಗಾಣಿರಿ. ನೀವು ಭಾರತೀಯರೆಂದರೆ ಸಾಲದೆ?

      Reply

Leave a Reply to neil Cancel reply

Your email address will not be published. Required fields are marked *