ಶ್ರೀಗಂಧ ಸಂಸ್ಕೃತಿಯ ಕಲ್ಲಡ್ಕದ ಭಟ್ಟರಿಗೆ ಕರಿಗಂಧದ ಪ್ರಸಾದ!

Naveen Soorinje


ನವೀನ್ ಸೂರಿಂಜೆ


“ತಲೆ ಸರಿ ಇರೋ ದೈವದ ಪಾತ್ರಧಾರಿಯು ದೈವಸ್ಥಾನಕ್ಕೆ ಬಂದ ಯು.ಟಿ.ಖಾದರ್ ಗೆ ಪ್ರಸಾದ ನೀಡಲ್ಲ. ಯು ಟಿ ಖಾದರ್ ಭೇಟಿ ಕೊಟ್ಟ ಎಲ್ಲಾ ದೈವ/ಭೂತಸಾನಗಳಿಗೆ ಬ್ರಹ್ಮಕಲಶ ಮಾಡಬೇಕು” ಎಂದು ಕಲ್ಲಡ್ಕ ಪ್ರಭಾಕರ ಭಟ್ಟರು ಹೇಳಿಕೆ ನೀಡಿರುವುದು ಸುದ್ದಿಯಾಗಿದೆ. ಅವರಾಡಿದ ಮಾತುಗಳು ಪ್ರತಿಗಾಮಿ ವೈದಿಕ ಶಕ್ತಿಗಳು ”ಮೈಲಿಗೆ-ಜೀರ್ಣೋದ್ಧಾರ-ಬ್ರಹ್ಮಕಲಶ”- ಈ ಸಮೀಕರಣವನ್ನಿಟ್ಟುಕೊಂಡು ಕರಾವಳಿಯ ಜನಾದರಣೀಯ ಭೂತಾರಾಧನೆ ಪರಂಪರೆಯನ್ನು ಕೆಡಿಸಿದ ಚರಿತ್ರೆಯನ್ನು ಪ್ರತಿನಿಧಿಸುತ್ತವೆ.

ಭೂತಗಳು ಕರಾವಳಿಯ ಮಣ್ಣಿನ ದೈವಗಳು. ಬ್ರಾಹ್ಮಣರು ಕರಾವಳಿಗೆ ಬರುವುದಕ್ಕೂ ಮೊದಲು ಈ ಶೂದ್ರ ದೈವಾರಾಧನೆ ಚಾಲ್ತಿಯಲ್ಲಿತ್ತು ಎಂದು ಇತಿಹಾಸ ಹೇಳುತ್ತದೆ. ದೈವ/ಭೂತಾರಾಧನೆಗೂ ಬ್ರಾಹ್ಮಣರಿಗೂ, ವೈದಿಕರ ಬ್ರಹ್ಮಕಲಶಕ್ಕೂ ಸಂಬಂಧವಿಲ್ಲ. ಬೂತಸಾನವೇನಾದರೂ ಅಶುದ್ದಿಯಾಯ್ತು ಎಂದರೆ ಸಾನದ ಬಾವಿಯಿಂದ ಒಂದು ತಂಬಿಗೆ ನೀರು ಸಿಂಪಡಿಸಿ ಶುದ್ದಗೊಳಿಸುವ ಶಕ್ತಿ ಭೂತಸಾನದ ಮನೆತನಕ್ಕಿದೆ. ಬೇರೆ  ಜಾತಿ/ ಧರ್ಮದ ವ್ಯಕ್ತಿ ಭೂತಸಾನಕ್ಕೆ ಬಂದನೆಂದರೆ ಅದು ಸಾನದೊಳಗಿರುವ ದೈವಕ್ಕೆ ಪ್ರತಿಷ್ಠೆಯ ವಿಚಾರವೇ ಹೊರತು ಅವಮರ್ಯಾದೆಯಲ್ಲ. ಇಷ್ಟಕ್ಕೂ ದೈವವೊಂದು ತಾನು ಎಷ್ಟು ಜಾತಿ, ಧರ್ಮದವರಿಗೆ ಗೌರವ ಕೊಟ್ಟೆ ಎನ್ನುವುದನ್ನು ತನ್ನ ಮಾತಿನಲ್ಲಿ ಉಲ್ಲೇಖಿಸುತ್ತದೋ ಅಷ್ಟು ಅದರ ಹಿರಿಮೆ ಹೆಚ್ಚಿದೆ ಎಂದರ್ಥ.

ಜಾರಂದಾಯ, ಕೋಡ್ದಬ್ಬು, ತನ್ನಿಮಾನಿಗ, ರಾಹು, ಗುಳಿಗ, ಬಂಟ, ಕಲ್ಲುರ್ಟಿ, ಸತ್ಯಪ್ಪೆ ಹೀಗೆ ತುಳುನಾಡಿನ ಸಾವಿರದ ಒಂದು ದೈವಗಳನ್ನು ಭೂಮಿಯಲ್ಲಿ ಮನುಷ್ಯನ ಮೇಲೆ ದರ್ಶನ ಬರಿಸಿದಾಗ ಎಲ್ಲಾ ಜಾತಿ ಧರ್ಮಗಳನ್ನು ಕರೆದೇ ತನ್ನ ಧಾರ್ಮಿಕ ವಿಧಿವಿಧಾನಗಳನ್ನು ಪ್ರಾರಂಭಿಸುತ್ತದೆ. “ಗುತ್ತಿನಾರ್ಲೇ, ಮೂಲ್ಯರೇ, ಪೂಜಾರ್ಲೇ, ಸೇಕುರ್ಕುಲೇ….. ಒರಿಯತ್ತು, ಒರಿಯಂದು…. ” ಅಂತ ದೈವ ಎಲ್ಲಾ ಜಾತಿ ಧರ್ಮದವರನ್ನು ಕರೆದು ಗೌರವಿಸಿ ಅವರೆಲ್ಲರ ಅನುಮತಿ ಪಡೆದು ತನ್ನ ನಡಾವಳಿಯನ್ನು  ಪ್ರಾರಂಭಿಸುತ್ತದೆ. ‘ಸೇಕುರ್ಕುಲೇ’ ಅಂದರೆ ತುಳುನಾಡಿನ ಮುಸ್ಲೀಮರಾದ ಬ್ಯಾರಿಗಳನ್ನು ಉದ್ದೇಶಿಸಿರುವುದು.

”ತಲೆ ಸರಿ ಇರುವ ದೈವದ ಪಾತ್ರಿ ಯು.ಟಿ. ಖಾದರ್ ಗೆ ಬೂಳ್ಯ ಕೊಡಲ್ಲ” ಎಂದು ಹೇಳಿರೋದು ತುಳುನಾಡಿನ ದೈವಗಳಿಗೆ ಪ್ರಭಾಕರ ಭಟ್ಟರು ಮಾಡಿದ ಅವಮಾನ. ದೈವಗಳೆಂದರೆ “ಪತ್ತಪ್ಪೆ ಜೋಕುಲೆನ್ ಒಂಜಿ ಮಟ್ಟೆಲ್ಡ್ ಪಾಡುನ ಶಕ್ತಿ”ಗಳು (ಹತ್ತು ತಾಯಿಯ ಮಕ್ಕಳನ್ನು ಒಂದೇ ಮಡಿಲಲ್ಲಿ ಹಾಕಿ ಸಾಕುವ ಶಕ್ತಿಗಳು) ಎಂದೇ ಬಣ್ಣಿಸಲಾಗುತ್ತದೆ.

ಬ್ರಾಹ್ಮಣರು ತುಳುನಾಡಿಗೆ ಬಂದ ಬಳಿಕ ಒಂದೊಂದೇ ಶೂದ್ರ, ದಲಿತರ ದೈವಸ್ಥಾನಗಳನ್ನು ವೈದಿಕೀಕರಣಗೊಳಿಸಲು ಪ್ರಾರಂಭಿಸಿದರು ಎಂಬುದು ಗೋಡೆ ಮೇಲಿನ ಬರಹದಷ್ಟೇ ಸ್ಪಷ್ಟ. ಬ್ರಾಹ್ಮಣರಿಗೆ ಸಂಬಂಧವೇ ಇಲ್ಲದ ಕಿರುಸಂಸ್ಕೃತಿಯ ಒಳಗೆ ವೈದಿಕ ಆಚರಣೆಗಳು ಕಾಣಿಸಿಕೊಳ್ಳಲಾರಂಭಿದವು. ಬ್ರಾಹ್ಮಣರು ತುಳುನಾಡಿಗೆ ಬಂದ ಬಳಿಕ, ಅವರ ಕುತಂತ್ರಗಳಿಗೆ ಬಲಿಯಾದ ಎಷ್ಟೋ ಶೂದ್ರ, ದಲಿತ ವೀರಪುರುಷರು- ವೀರ ಮಹಿಳೆಯರು ನಮ್ಮನ್ನು ಕಾಪಾಡುವ ದೈವಗಳಾಗಿದ್ದಾರೆಂದು ಜನಪದ ನಂಬಿಕೊಂಡೇ ಬಂದಿದೆ. ಇತ್ತಿಚಿನ ಹತ್ತಿಪ್ಪತ್ತು ವರ್ಷಗಳಲ್ಲಿ ಯಾರಿಂದ ನಮ್ಮ ಹಿರೀಕರು ಹತರಾಗಿ ದೈವಗಳಾದರೋ ಅವರಿಂದಲೇ ಹಿರೀಕರ ದೈವಸ್ಥಾನಗಳಿಗೆ ಬ್ರಹ್ಮಕಲಶ, ಶುದ್ದೀಕರಣ ಹೋಮ ಮಾಡಿಸಲಾಗುತ್ತಿದೆ. ಪುರೋಹಿತರು ಮಾಡುವ ಬ್ರಹ್ಮಕಲಶದ ಹೋಮಕ್ಕೂ ನಮ್ಮ ಬೂತಗಳಿಗೂ ಸಂಬಂಧವೇ ಇಲ್ಲ. ದೈವಗಳಿಗೆ ಹೂ ನೀರು ಇಟ್ಟರೆ ಅದೇ ದೊಡ್ಡ ಬ್ರಹ್ಮಕಲಶ. ಹಳೇ ದೈವಸ್ಥಾನ ಕೆಡವಿ ಹೊಸ ದೈವಸ್ಥಾನ ಕಟ್ಟುವಾಗ ಒಂದು ಬಿದಿರ ಬುಟ್ಟಿಯಲ್ಲಿ ದೈವದ ಮೂರ್ತಿಗಳನ್ನು ಇಟ್ಟು ಅದಕ್ಕೆ ಬಾವಿಯ ನೀರು ಮತ್ತು ಗುಡ್ಡದಲ್ಲಿ ಹೇರಳವಾಗಿ ಸಿಗುವ ಕೇಪುಲ ಹೂ ಇಟ್ಟರೆ ಅದೇ ದೈವಸ್ಥಾನದ ಶುದ್ದೀಕರಣ ಪ್ರಕ್ರಿಯೆ. ಈಗೀಗ ನಮ್ಮ ದೈವಸ್ಥಾನಗಳ ಶುದ್ದೀಕರಣಕ್ಕೆ ವೈದಿಕರು ಬಂದು ನಮ್ಮನ್ನೇ ಅಸ್ಪೃಶ್ಯರಂತೆ ದೂರ ನಿಲ್ಲಿಸಲಾಗುತ್ತಿದೆ. ಇದನ್ನೇ ಯು.ಟಿ. ಖಾದರ್ ಬಂದು ಹೋಗಿರುವ ಭೂತಸಾನಗಳಲ್ಲಿ ಮಾಡುವಂತೆ ಕಲ್ಲಡ್ಕ ಭಟ್ಟರು ಹೇಳಿದ್ದಾರೆ.

ಹಾಗಂತ ಬ್ರಾಹ್ಮಣರಿಂದ ಅಥವಾ ಮೇಲ್ವರ್ಗಗಳ ದಬ್ಬಾಳಿಕೆಗೆ ಬಲಿಯಾಗಿ ಬೂತಗಳಾಗಿದ್ದು ಕೇವಲ ಶೂದ್ರರು ಮತ್ತು ದಲಿತರು ಮಾತ್ರವಲ್ಲ. ಬ್ರಾಹ್ಮಣ ಸಮುದಾಯಕ್ಕೂ ಅಂತದ್ದೊಂದು ಹಿರಿಮೆಯಿದೆ. “ಭಟ್ಟರಾಗಿದ್ದು ಭಟ್ಟರಂತಾಗದೇ” ಬ್ರಾಹ್ಮಣ ಸಮುದಾಯದೊಳಗೆ ಇದ್ದುಕೊಂಡೇ ಸಮಾನತೆಗಾಗಿ ಹೋರಾಡಿದವರನ್ನು ಪ್ರತಿಗಾಮಿ ವೈದಿಕ ಶಕ್ತಿಗಳೇ ಮುಗಿಸಿದ್ದಾರೆ. ಅಂತಹ  ಬ್ರಾಹ್ಮಣರನ್ನೂ ಶೂದ್ರರು ದೈವಗಳಾಗಿ ಆರಾಧಿಸಿಕೊಂಡು ಬರುತ್ತಿದ್ದಾರೆ.  ಭಟ್ಟಿ ಭೂತ, ಬ್ರಾಣ ಭೂತ / ಮಾಣಿ ಭೂತ, ಮುಂಡೆ ಭೂತ/ ಮರ್ಲು ಮಾಣಿ, ಓಪೆತ್ತಿ ಮದಿಮಾಳ್, ಬ್ರಾಹ್ಮಣತಿ ಭೂತ ಹೀಗೆ ಹಲವು ಬ್ರಾಹ್ಮಣ ಭೂತಗಳು ಶೂದ್ರರ ಆರಾಧನೆಯಲ್ಲಿದೆ. ಬ್ರಾಹ್ಮಣ ಸಮುದಾಯದ ಪುರೋಹಿತಶಾಹಿ ಚೌಕಟ್ಟನ್ನು ಮೀರಿ ಶೂದ್ರರ ಜೊತೆ ಸಂಬಂಧ ಸಾಧಿಸಿದ ಕ್ರಾಂತಿಕಾರಿಗಳನ್ನು “ಮಾಯ” ಮಾಡಲಾಯಿತು. ಅವರು ದೈವಗಳಾದರು.‌ ಕಲ್ಲಡ್ಕ ಭಟ್ಟರಂತವರಿಗೆ ದಲಿತ ದೈವಗಳನ್ನು ಮಾದರಿಯಾಗಿಟ್ಟುಕೊಳ್ಳಲು ಮಡಿಮೈಲಿಗೆಯಾದರೆ ಇಂತಹ ಬ್ರಾಹ್ಮಣ ದೈವಗಳನ್ನಾದರೂ ಮಾದರಿಯನ್ನಾಗಿಸಿಕೊಂಡು ಜಾತಿ ಧರ್ಮದ ಬಗ್ಗೆ ಮಾತನಾಡಲಿ.

ದೈವ/ಭೂತಸಾನದಲ್ಲಿ ಮುಸ್ಲೀಮನಿಗೆ ಪ್ರಸಾದ ಕೊಡಬಾರದು ಎಂದು ಭಟ್ಟರು ಹೇಳುವುದಕ್ಕೆ ಅದೇನು ವರ್ಣನೀತಿ ಅನುಸರಿಸೋ ಬ್ರಾಹ್ಮಣರ ದೇವಸ್ಥಾನವಲ್ಲ. ಬ್ರಾಹ್ಮಣರ ದೇವಸ್ಥಾನದಲ್ಲಿ ಯಾರಿಗೆ ಶ್ರೀಗಂಧದ ಪ್ರಸಾದ ಕೊಡಬೇಕು, ಯಾರಿಗೆ ಕೊಡಬಾರದು, ಯಾರಿಗೆ ಯಾವ ರೀತಿ, ಎಷ್ಟು ಎತ್ತರದಿಂದ, ಎಷ್ಟು ದೂರದಿಂದ ಗಂಧ ಪ್ರಸಾದ ನೀಡಬೇಕು ಎಂಬ ಅಲಿಖಿತ ನಿಯಮಗಳಿವೆ. ಆದರೆ ಭೂತಸಾನದಲ್ಲಿ ನೇಮ ಮುಗಿಯೋ ಕೊನೇ ಗಳಿಗೆಯಲ್ಲಿ ಬೂತ/ದೈವ ಗುತ್ತಿನಾರ ಬಳಿ ಕೇಳುತ್ತದೆ “ಎನ್ನ ಕರಿಗಂಧ ತಿಕ್ಕಂದೆ ಏರ್ಲಾ ಪೋತಿಜೆರತ್ತಾ ?” ( ನನ್ನ ಕರಿಗಂಧ ಸಿಗದೇ ಯಾರೂ ಹೋಗಿಲ್ಲ ತಾನೆ ?) ಎಂದು ಪ್ರಶ್ನಿಸುತ್ತದೆ. ಬ್ರಾಹ್ಮಣರ ದೇವಸ್ಥಾನದಲ್ಲಿ ಶ್ರೀಗಂಧದ ಕೊರಡು ತೇಯ್ದು ಜಾತಿ ಆಧಾರಿತ ಗಂಧ ಪ್ರಸಾದ ನೀಡಿದರೆ ಬೂತಸಾನದಲ್ಲಿ ಮಸಿ ಮತ್ತು ತೆಂಗು, ಎಣ್ಣೆಯಿಂದ ತೇಯ್ದ ಕರಿಗಂಧ ನೀಡಲಾಗುತ್ತದೆ. ಜಾತಿ, ಮತ, ಧರ್ಮ ಬೇದಭಾವ ಇಲ್ಲದೇ ಭೂತಸಾನಕ್ಕೆ ಬಂದ ಎಲ್ಲರಿಗೂ ಕರಿಗಂಧ ನೀಡಲಾಗಿದೆ ಎಂದು ಖಾತ್ರಿಪಡಿಸಿಕೊಳ್ಳಬೇಕು. ಭಟ್ಟರದ್ದು ಶ್ರೀಗಂಧದ ಸಂಸ್ಕೃತಿ. ತುಳುವರದ್ದು ಕರಿಗಂಧದ ಸಂಸ್ಕೃತಿ. ಇಲ್ಲಿಯ ಸಂಸ್ಕೃತಿ ಎಲ್ಲರನ್ನೂ ಒಳಗೊಳ್ಳುವ, ತನ್ನವರೆನ್ನುವ ಪೆರ್ಮೆಯ ಸಂಸ್ಕೃತಿ. ತುಳುವ ಭಾಷೆಯ ಮೌಖಿಕ ಪರಂಪರೆಯ ಶ್ರೀಮಂತ ಅಭಿವ್ಯಕ್ತಿ ಬಲೀಂದ್ರ ಪಾಡ್ದನದ ಅವೃತ್ತಿಯೊಂದರಲ್ಲಿ, ತಾನು ದಾನವಾಗಿ ನೀಡಲಿರುವ ಮೂರು ಹೆಜ್ಜೆ ಭೂಮಿಯನ್ನು ಏನು ಮಾಡುತ್ತೀಯ ಎಂದು ಬಲಿ ಚಕ್ರವರ್ತಿಯು ವಾಮನನ್ನುಕೇಳುತ್ತಾನೆ. ಆಗ ವಾಮನನು,

“ದೇವೆರೆಗು ದೇವಾಲ್ಯೊ,
ದೈವೋಳೆಗು ಬದಿಮಾಡ,
ಬೆರ್ಮೆರೆಗು ಸಾನ,
ನಾಗೆರೆಗ್ ಬನ,
ಜೈನೆರೆ ಬಸ್ತಿ,
ಬ್ಯಾರಿಳೆ ಪಲ್ಲಿ,
ಕುಡುಂಬೆರೆ ಇಂಗ್ರೇಜಿ ಕಟ್ಟಾವ”

ಅನ್ನುತ್ತಾನೆ. (ದೇವರಿಗೆ ದೇವಾಲಯ, ನಾಗದೇವರಿಗೆ ಬನ, ಜೈನರಿಗೆ ಬಸದಿ, ಬ್ಯಾರಿಗಳಿಗೆ ಮಸೀದಿ ಹಾಗೂ ಕ್ರಿಶ್ಚಿಯನ್ನರಿಗೆ ಚರ್ಚುಗಳನ್ನು ಕಟ್ಟಿಸುತ್ತೇನೆ). ಇದು ತುಳುನಾಡ ಸಂಸ್ಕೃತಿ. ಅದು ವೈದಿಕ ವಾಮನನ್ನೂ ಸಾಮರಸ್ಯ ಬಯಸುವ ಅಪ್ಪಟ ತುಳುವನನ್ನಾಗಿಸಿದೆ. ಸದ್ಯಕ್ಕೆ ಕರಾವಳಿಯ “ಪತ್ತಪ್ಪೆ ಜೋಕುಲೆನ್ ಒಂಜಿ ಮಟ್ಟೆಲ್ಡ್ ಪಾಡುನ ಶಕ್ತಿ”ಗಳು ಮತ್ತು ಅವರನ್ನು ನಂಬುವ ತುಳುವರು ಕಲ್ಲಡ್ಕ ಪ್ರಭಾಕರ ಭಟ್ಟರಿಗೆ ಭೂತಸಾನದ ಕರಿಗಂಧ ಪ್ರಸಾದವನ್ನ ನೀಡಿ ಅವರನ್ನು ಸತ್ಯದ ದಾರಿಯಲ್ಲಿ ನಡೆಯುವಂತೆ ಮಾಡಬೇಕಿದೆ.

10 thoughts on “ಶ್ರೀಗಂಧ ಸಂಸ್ಕೃತಿಯ ಕಲ್ಲಡ್ಕದ ಭಟ್ಟರಿಗೆ ಕರಿಗಂಧದ ಪ್ರಸಾದ!

  1. Mallikarjun. M

    ಆ ಪ್ರಭಾಕರ ಭಟ್ಟ ದೈವಸ್ಥಾನದ ಬಗ್ಗೆ ಮಾತನಾಡಲು ಅರ್ಹತೆ ಇಲ್ಲದವನು.

    Reply
    1. akha dri khadar

      Pampuwelld battag private boothada kottya undu ayk layak batte devasthanada pudard komu galabe malpere batte baari pathervettha (sorry) koragerena devasthanogu imbe popena aklen imbena devstngu barre budpena aani indira gandhi ithinet aand ijjinda inikla thippiye gathi kuda hindu navella onduge naachike unda battag

      Reply
  2. Anonymous

    ಸರಿಯಾಗಿ ಹೇಳಿದ್ದಿರಿ ,ಅನ್ಯ ಧರ್ಮದವರು ನಮ್ಮ ದೈವಸಾನಗಳಿಗೆ ಬಂದರೆ ಅದು ನಮ್ಮ ಭಾಗ್ಯ. ಅವರನ್ನು ಗೌರವಿಸ ಬೇಕಾದುದು ನಮ್ಮ ಧರ್ಮ. ಅದು ಕೂಡ ಸನ್ಮಾನ್ಯ ಯು .ಟಿ.ಖಾದರ್ ರಂತವರನು ಮಾನ್ಯ ಮಾಡುವುದು ನಮ್ಮ ಕರ್ತವ್ಯ.

    Reply
    1. Anonymous

      Daiva sannidi yalli jathi beda madbardu, Muslim nema aguva sthala dalli vadya nudisutthare, adke udaharane yermal hidaythulla shaheb

      Reply
  3. akha dri khadar

    Naramani aanda yavand battre dinala meenda erena mai shudda avu, mailige aathina erena manas sari aavodaanda thibar (surinje) da kodamanitthayeg (kodamandaye) 2 tharayi parake malpule poora 2dinot sari aapundu

    Reply
  4. Prakash Shetty

    ಎಲ್ಲವೂ ಸರಿ, ಆದರೆ ಕೆಳಗಿನ ಈ ನುಡಿ ಸ್ವನಿರ್ಮಿತದಂತೆ ತೋರುತ್ತಿದೆ.

    “ದೇವೆರೆಗು ದೇವಾಲ್ಯೊ,
    ದೈವೋಳೆಗು ಬದಿಮಾಡ,
    ಬೆರ್ಮೆರೆಗು ಸಾನ,
    ನಾಗೆರೆಗ್ ಬನ,
    ಜೈನೆರೆ ಬಸ್ತಿ,
    ಬ್ಯಾರಿಳೆ ಪಲ್ಲಿ,
    ಕುಡುಂಬೆರೆ ಇಂಗ್ರೇಜಿ ಕಟ್ಟಾವ”

    ನಿಮ್ಮ ಅನುಕೂಲಕ್ಕೆ ತಕ್ಕಂತೆ ತುಳುನಾಡಿನ ಸಂಸ್ಕೃತಿಯನ್ನು ಕಟ್ಟಿಕೊಡಲು ಪ್ರಯತ್ನಿಸಬೇಡಿ ನವೀನ್…

    Reply
  5. RUTHVIK GOWDA

    ಇಲ್ಲಿ ಶೂದ್ರ ಬ್ರಾಹ್ಮಣ ಎನ್ನುವ ಧಾಟಿಯಲ್ಲಿ ಪ್ರಭಾಕರರವರ ಮಾತಲ್ಲ.ಇಲ್ಲಿ ಎತ್ತಿರುವುದು ಧರ್ಮ-ಆಧರ್ಮಗಳ ಮಾತು ಹಿಂದೂ ಸಂಸ್ಕೃತಿಗೆ ಯುಟಿ ಖಾದರ್ ರಿಂದ ಅದ ಆನಾಹುತಗಳ ಬಗ್ಗೆ ಎಲ್ಲರಿಗೂ ಗೋತ್ತಿರೊದೆ.ಧರ್ಮದ ವಿಚಾರ ಬಂದಾಗ ಅವನು ತನ್ನ ಭಕ್ತನಾದರು ಸರಿಯೆ ಅವರಿಗೆ ಬುದ್ದಿ ಕಲಿಸುವುದು ದೈವಗಳಾದಿ ದೇವರುಗಳ ಕೇಲಸ ಯಾದ ಯಾದ ಧರ್ಮಸ್ಯ…

    Reply
  6. akha dri khadar

    O batta chaddi kashmir devasthanavannu hege shudda madthiya neene hogi shudda madu batta nimma janmanu manushya janmana thoooo nivella sayodu alemari nayi sattha hage nodu jagatthige obba devaru endiddare neevu khanditha anubhavisuttheera

    Reply

Leave a Reply to RUTHVIK GOWDA Cancel reply

Your email address will not be published. Required fields are marked *