ಜನವರಿ 19 ರಂದು ಮೈಸೂರಿನಲ್ಲಿ “ದಲಿತರು ಮತ್ತು ಉದ್ಯಮಶೀಲತೆ” – ವಿಚಾರ ಸಂಕಿರಣ ಮತ್ತು ಸಂವಾದ

ಸ್ಣೇಹಿತರೇ, ಇತರ ಸಮಾನಮನಸ್ಕ ಸಂಸ್ಥೆ ಮತ್ತು ಸಂಘಗಳ ಜೊತೆ ಸೇರಿ ವರ್ತಮಾನ.ಕಾಮ್ ನಡೆಸುತ್ತಿರುವ “ದಲಿತರು ಮತ್ತು ಉದ್ಯಮಶೀಲತೆ” ಕುರಿತಾದ ವಿಚಾರ ಸಂಕಿರಣ ಮತ್ತು ಸಂವಾದದ ಮೂರನೆಯ ಕಾರ್ಯಕ್ರಮ ಬರುವ ಭಾನುವಾರದಂದು (ಜನವರಿ 19, 2014) ಮೈಸೂರಿನಲ್ಲಿ ನಡೆಯಲಿದೆ. ಈ ಸರಣಿಯ ಮೊದಲ ಕಾರ್ಯಕ್ರಮ ಹಾಸನದಲ್ಲಿ ನಡೆಯಿತು. ಎರಡನೆಯದನ್ನು ತುಮಕೂರಿನಲ್ಲಿ ಆಯೋಜಿಸಲಾಗಿತ್ತು. ಮೈಸೂರಿನ ಕಾರ್ಯಕ್ರಮವನ್ನು ಮೈಸೂರು ವಿಶ್ವವಿದ್ಯಾಲಯದ “ಡಾ.ಬಿ.ಆರ್. ಅಂಬೇಡ್ಕರ್ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ”ದ ಸಹಯೋಗದಲ್ಲಿ ನಡೆಸಲಾಗುತ್ತಿದೆ. ಇಲ್ಲಿ ಆ ಕಾರ್ಯಕ್ರಮದ ವಿವರಗಳನ್ನು ಲಗತ್ತಿಸಲಾಗಿದೆ. ಮೈಸೂರು ಮತ್ತು ಸುತ್ತಮುತ್ತಲಿನ […]

ತುಮಕೂರಿನಲ್ಲಿ “ದಲಿತರು ಮತ್ತು ಉದ್ಯಮಶೀಲತೆ” ಬಗ್ಗೆಯ ವಿಚಾರ ಸಂಕಿರಣ ಮತ್ತು ಸಂವಾದ

ಸ್ನೇಹಿತರೆ, ಹಾಸನದಲ್ಲಿ 07-09-2013 ರಂದು ನಡೆದ “ದಲಿತರು ಮತ್ತು ಉದ್ಯಮಶೀಲತೆ” ಕಾರ್ಯಕ್ರಮದ ಬಗ್ಗೆ ನಿಮಗೆಲ್ಲ ತಿಳಿದಿದೆ. ಈಗ ಅದರ ಮುಂದುವರೆದ ಭಾಗವಾಗಿ ಎರಡನೆಯ ವಿಚಾರ ಸಂಕಿರಣ ಮತ್ತು ಸಂವಾದವನ್ನು ಇದೇ ತಿಂಗಳ 24 ರಂದು ತುಮಕೂರಿನಲ್ಲಿ ಆಯೋಜಿಸಲಾಗಿದೆ. ನಮ್ಮ ವರ್ತಮಾನ ಬಳಗದ ಶ್ರೀಪಾದ ಭಟ್ಟರು ಈ ಕಾರ್ಯಕ್ರಮವನ್ನು ಏರ್ಪಡಿಸಲು ಹಲವಾರು ದಿನಗಳಿಂದ ತೊಡಗಿಸಿಕೊಂಡಿದ್ದರು. ಈ ಸಾರಿ ನಮ್ಮ ಬಳಗದ ಜೊತೆಗೂಡಿರುವವರು ತುಮಕೂರಿನ “ಭೀಮರಾವ್ ಸಮಾಜ ಕಲ್ಯಾಣ ಸಂಸ್ಥೆ”ಯವರು. ಹೆಚ್ಚಿನ ವಿವರಗಳು ಕೆಳಗಿನ ಆಮಂತ್ರಣ ಪತ್ರದಲ್ಲಿದೆ. ದಯವಿಟ್ಟು ಸಾಧ್ಯವಾದವರೆಲ್ಲ […]

ಹಾಸನದಲ್ಲಿ ನಡೆದ “ದಲಿತರು ಮತ್ತು ಉದ್ಯಮಶೀಲತೆ” ಕುರಿತ ವಿಚಾರಸಂಕಿರಣ

ಸ್ನೇಹಿತರೇ, ’ವರ್ತಮಾನ.ಕಾಮ್’ ಮತ್ತು ಹಾಸನದ ’ಸಹಮತ ವೇದಿಕೆ’ಯವರು ಕಳೆದ ಶನಿವಾರ ಹಾಸನದಲ್ಲಿ ಏರ್ಪಡಿಸಿದ್ದ “ದಲಿತರು ಮತ್ತು ಉದ್ಯಮಶೀಲತೆ” ಕುರಿತಾದ ವಿಚಾರಸಂಕಿರಣಕ್ಕೆ ದೊರೆತ ಸ್ಪಂದನೆ ಸಮಾಧಾನಕರವಾಗಿತ್ತು. ಬೆಂಗಳೂರಿನಿಂದ ಬಂದಿದ್ದ ಎಲ್.ಹನುಮಂತಯ್ಯ, ರಾಜಾ ನಾಯಕ್, ಮತ್ತು ಸಿ.ಜಿ.ಶ್ರೀನಿವಾಸನ್‌ರವರು ದಲಿತರು ಉದ್ಯಮಿಗಳಾಗಬೇಕಾದ ಅಗತ್ಯ, ಮತ್ತು ಉದ್ಯಮವಲಯದಲ್ಲಿ ಹಾಗೂ ಸರ್ಕಾರದ ಮಟ್ಟದಲ್ಲಿ ಅವರಿಗಿರುವ ಅವಕಾಶಗಳು, ಮತ್ತಿತರ ವಿಷಯಗಳ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು. ಇಂತಹ ವಿಷಯಗಳ ಬಗ್ಗೆ ಪೂರಕವಾಗಿ ಸ್ಪಂದಿಸುವ ಹಾಸನದಲ್ಲಿರುವ ಪ್ರಖ್ಯಾತ ಚಿತ್ರಕಲಾವಿದ ಕೆ.ಟಿ.ಶಿವಪ್ರಸಾದ್‌ರವರು ಅಧ್ಯಕ್ಷತೆ ವಹಿಸಿ ದಲಿತರು ಎದುರಿಸಬಹುದಾದ ಸವಾಲುಗಳ ಬಗ್ಗೆ […]

ದಲಿತರು ಮತ್ತು ಉದ್ಯಮಶೀಲತೆ : ಈ ವಿಚಾರಗಳ ಬಗ್ಗೆಯೂ ಚರ್ಚೆಯಾಗಲಿ

– ಎನ್.ರವಿಕುಮಾರ್, ಶಿವಮೊಗ್ಗ “ದಲಿತರು ಮತ್ತು ಉದ್ಯಮಶೀಲತೆ” ಕುರಿತಾದ ವಿಚಾರ ಸಂಕೀರ್ಣ-ಸಂವಾದ ನಿಜಕ್ಕೂ ಇಂದಿನ ಅಗತ್ಯವಾಗಿದೆ. ದಲಿತರಿಗೆ ಶಿಕ್ಷಣದ ಜೊತೆಗೆ ಜಾಗತಿಕ ಮತ್ತು ಆರ್ಥಿಕ ಪ್ರಪಂಚದ ಅರಿವನ್ನು ಮೂಡಿಸುವ ಅಗತ್ಯತೆ ಇದ್ದೇ ಇದೆ. ಜಾತಿಯ ತಾರತಮ್ಯ ಔದ್ಯೋಗಿಕ ಜಗತ್ತಿನಲ್ಲಿ ಯಥಾ ರೀತಿ ಭಿನ್ನ ಸ್ವರೂಪಗಳಲ್ಲಿ ದೊಡ್ಡ ಪಿಡುಗಾಗಿ ದಲಿತ ಉದ್ಯಮಿಗಳನ್ನು ಕಾಡುತ್ತಿವೆ. ಆರ್ಥಿಕ ಸಂಪನ್ಮೂಲ ನೆರವು ನೀಡುವ ಆರ್ಥಿಕ ಸಂಸ್ಥೆಗಳು (ಬ್ಯಾಂಕ್‌ಗಳು) ಯಾರ ಕೈಯಲ್ಲಿವೆ ಎಂಬುದನ್ನು ನಾವು ಯೋಚಿಸಬೇಕಾಗಿದೆ. ಆರ್ಥಿಕ ಶಕ್ತಿಯ ಕ್ರೋಢೀಕರಣ ಕೂಡ ಜಾತಿಯ ನೆಲೆಯಲ್ಲಿಯೆ […]