Category Archives: ಸಾಹಿತ್ಯ

ಸಾಹಿತ್ಯಕ್ಕೆ ಸಂಬಂಧಿಸಿದ ಲೇಖನಗಳು ಮತ್ತು ವಿಡಿಯೋಗಳು…

ರೋಹಿತ್ ಸಾವು: ಸಾಲು ಸಾಲು ಅಪರಾಧಿಗಳು!

-ಶಿವರಾಂ

ಪ್ರತಿಯೊಬ್ಬರೂ ಹುಟ್ಟೂ ಆಕಸ್ಮಿಕ. ಆದರೆ ‘ತನ್ನ ಹುಟ್ಟು ಮಾರಣಾಂತಿಕ ಅವಘಡ’ ಎಂದು ಬರೆದಿಟ್ಟು ನೇಣು ಹಾಕಿಕೊಂಡ ರೋಹಿತ್ ವೇಮುಲ ಮಾತ್ರ ಭಾರತದ ಪ್ರಜ್ಞೆಯನ್ನು ಬಹುವಾಗಿ ಬಹಳ ಕಾಲ ಕಾಡುತ್ತಾನೆ. ಜಾತಿಯ ಅಹಂ ಮತ್ತು ಅಸ್ಪೃಶ್ಯತೆಯನ್ನು ಪೋಷಿಸುವ ರಾಜಕಾರಣ ರೋಹಿತ್ ನನ್ನು ನೇಣಿಗೆ ಏರಿಸಿ, ತಮ್ಮದೇನೂ ತಪ್ಪೇ ಇಲ್ಲದಂತೆ ಬೀಗುತ್ತಿವೆ. ದೇಶದ ಕಾನೂನಿನಲ್ಲಿ ಮರಣ ದಂಡನೆಯಂತಹ ಘೋರ ಶಿಕ್ಷೆ ಇರಬಾರದು ಎಂದು ಪ್ರತಿಭಟಿಸಿದ್ದ ವೇಮುಲ ಈಗ ತಾನೇrohit-2 ನೇಣಿನ ಕುಣಿಕೆಗೆ ತಲೆ ಒಡ್ಡಿದ. ತನ್ನ ಸುತ್ತಲ ವ್ಯವಸ್ಥೆಯ ತಪ್ಪಿಗೆ, ತನಗೆ ತಾನೇ ಶಿಕ್ಷೆ ವಿಧಿಸಿಕೊಂಡ.
ಕಳೆದ ಡಿಸೆಂಬರ್ 16 ರಂದು ವಿಶ್ವವಿದ್ಯಾನಿಲಯ ರೋಹಿತ್ ಸೇರಿದಂತೆ ಐವರನ್ನು ಹಾಸ್ಟೆಲ್ನಿಂದ ಉಚ್ಚಾಟನೆ ಮಾಡಿತು. ಪ್ರತಿಭಾನ್ವಿತ ವಿದ್ಯಾರ್ಥಿಯಾದ ರೋಹಿತ್ ಮತ್ತು ಗೆಳೆಯರು ವಿದ್ಯಾರ್ಥಿ ವೇತನ ಪಡೆದು ಸಂಶೋಧನೆಗೆಂದು ವಿ.ವಿಗೆ ಬಂದವರು. ಅವರಿಗೆ ಬೇರೆ ಆದಾಯದ ಮೂಲಗಳಿರುವುದಿಲ್ಲ. ಅಂತಹವರಿಗೆ ಇರಲು ಜಾಗ ಕೊಡದೆ, ಹೊರಗೆ ನೂಕುವುದು ಘೋರ. ಅವರ ಮೇಲಿರುವ ಆರೋಪ (ಸುಳ್ಳು) ಗಳ ಕಾರಣಕ್ಕೆ ಪೊಲೀಸರು ಬಂಧಿಸಿದ್ದರೂ, ಆತನಿಗೆ ಅನ್ನ, ಆಶ್ರಯಕ್ಕೆ ತೊಂದರೆ ಮಾಡುತ್ತಿರಲಿಲ್ಲ. ಆದರೆ ಶಿಕ್ಷಣ ಪಡೆಯಲು ಸೇರಿಕೊಂಡಿದ್ದ ಸಂಸ್ಥೆಯೇ ಅವರನ್ನು ಹೊರಹಾಕಿತು. ನಿರ್ಧಾರವನ್ನು ಪ್ರತಿಭಟಿಸಿ ಉಪವಾಸ ಕುಂತರೂ, ಕುಲಪತಿಗೆ ಕರುಣೆ ಬಾರಲಿಲ್ಲ.
ವಿಶ್ವವಿದ್ಯಾನಿಲಯ ಈ ವಿದ್ಯಾರ್ಥಿಗಳ ಪ್ರವೇಶ ನಿರ್ಬಂಧಿಸಿದ್ದು – ಸಾಮಾಜಿಕವಾಗಿ ಇತರರೊಂದಿಗೆ ಬೆರೆಯಬಹುದಾದ ಎಲ್ಲಾ ಪ್ರದೇಶಗಳಿಗೆ. (ಹಾಸನ ಜಿಲ್ಲೆಯ ಸಿಗರನಹಳ್ಳಿ ಗ್ರಾಮದಲ್ಲಿ ದಲಿತರಿಗೆ ವಿಧಿಸಲಾಗಿರುವ ಸಾrohit-1ಮಾಜಿಕ ಬಹಿಷ್ಕಾರಕ್ಕೂ, ಈ ವಿ.ವಿ. ನಿರ್ಧಾರಕ್ಕೂ ಏನಾದರೂ ವ್ಯತ್ಯಾಸ ಇದೆಯೆ?) ಇತರರೊಂದಿಗೆ ಮಾತನಾಡಲು ಕನಿಷ್ಟ ಅವಕಾಶಗಳಿರುವ ತರಗತಿ ಹಾಗೂ ಲೈಬ್ರರಿಗೆ ಮಾತ್ರ ಪ್ರವೇಶ ಅವಕಾಶ ಇತ್ತು. ಮೇಲಾಗಿ, ವಿದ್ಯಾರ್ಥಿ ಚುನಾವಣೆಗೆ ಸ್ಪರ್ಧಿಸುವಂತಿಲ್ಲ. ಇಂತಹ ನಿರ್ಧಾರಕ್ಕೆ ಇದ್ದ ಮೂಲ ಕಾರಣವಾದರೂ ಏನು – ತಮ್ಮನ್ನು ಗೂಂಡಾಗಳು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸಿದ್ದ ಎಬಿವಿಪಿ ಹುಡುಗರ ಮೇಲೆ ಹಲ್ಲೆ ಮಾಡಿದರು ಎಂಬ ಆರೋಪ. ವಿಚಿತ್ರ ಎಂದರೆ, ಅಂತಹದೊಂದು ‘ಹಲ್ಲೆ’ ಗೆ ಒಳಗಾದ ವಿದ್ಯಾರ್ಥಿಯ ಮೇಲೆ ಯಾವುದೇ ಗಾಯದ ಕುರುಹುಗಳಿಲ್ಲ ಎಂದು ಪರೀಕ್ಷಿಸಿದ ವೈದ್ಯರು ವರದಿ ನೀಡಿದ್ದರು. ಅದೇ ವರದಿ ಆಧರಿಸಿ ವಿ.ವಿ ನೇಮಿಸಿದ್ದ ಮೊದಲ ಸಮಿತಿ ತನ್ನ ನಿರ್ಧಾರ ತಿಳಿಸಿತ್ತು.

 
ಆದರೆ, ತನಗೆ ಒಪ್ಪಿತವಾಗದ ವರದಿಯನ್ನು ವಿ.ವಿ ತಿರಸ್ಕರಿಸಿ ಮತ್ತೊಂದು ವ್ಯತಿರಿಕ್ತ ವರದಿಗೆಂದೇ ಇನ್ನೊಮ್ಮೆ ಇನ್ನೊಂದು ಸಮಿತಿ ನೇಮಿಸಿ ತನಿಖೆಗೆ ಆದೇಶಿಸಿತು. ಕುಲಪತಿ ಅಪ್ಪಾರಾವ್ ಹೇಳುತ್ತಾರೆ, ಮೊದಲಿನದ್ದು ಮಧ್ಯಂತರ ವರದಿಯಂತೆ, ಎರಡನೆಯದು ಅಂತಿಮ ಅಂತೆ. ಮೊದಲನೆಯ ವರದಿ ಮಧ್ಯಂತರ ಆಗಿದ್ದರೆ, ಆರೋಪ ಹೊತ್ತಿರುವ ಹುಡುಗರ ಮೇಲೆ ಯಾವುದೇ ಶಿಕ್ಷೆಯ ಕ್ರಮಗಳು ಬೇಡ ಎಂದೇಕೆ ಶಿಫಾರಸ್ಸು ಮಾಡುತ್ತಿದ್ದರು? ಹೀಗೆ ದಿಕ್ಕುತಪ್ಪಿಸುವ ಹೇಳಿಕೆಗಳನ್ನು ನೀಡಿ, ತಮ್ಮ ತಪ್ಪುಗಳನ್ನು ಮುಚ್ಚಿಡುವ ಪ್ರಯತ್ನ ಮಾಡುತ್ತಿದ್ದಾರೆ ಕುಲಪತಿ. ಸನ್ನಿವೇಶ ಎಷ್ಟು ಕ್ರೂರವಾಗಿದೆ ಎಂದರೆ, ಈಗಲೂ ಕುಲಪತಿ ಹುಡುಗರ ಜೊತೆ ಮಾತುಕತೆಗೆ ಮುಂದಾಗಿಲ್ಲ, ಮೃತನ ಕುಟುಂಬದವರ ಜೊತೆ ಸಾಂತ್ವನದ ಮಾತುಗಳನ್ನಾಡಿಲ್ಲ. ಹುಡುಗರ ಉಪವಾಸ, ಪ್ರತಿಭಟನೆಗಳಿಗೆ ಬೆಲೆ ಇಲ್ಲವೆ?

 
ಭಾರತದ ಪ್ರತಿಷ್ಟಿತ ವೈದ್ಯಕೀಯ ಸಂಸ್ಥೆಯಲ್ಲಿ ದಲಿತ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ನಂತರ ಸುಖದೇವ್ ತೋರಟ್ ಅಧ್ಯಯನ ನಡೆಸಿ (2007ರಲ್ಲಿ) ವರದಿ ಸಲ್ಲಿಸಿದ್ದರು. ಅವರ ಶಿಫಾರಸ್ಸಿನ ಪ್ರಮುಖ ಅಂಶಗಳು, ಶಿಕ್ಷಣ ಸಂಸ್ಥೆಗಳಲ್ಲಿ ಅಸ್ಪೃಶ್ಯತೆ, ಶೋಷಣೆ ತಡೆಯಲು ಸೂಕ್ತ ಕಾನೂನಿನ ಅಗತ್ಯ ಇದೆ, ಸದ್ಯ ಚಾಲ್ತಿಯಲ್ಲಿರುವ ಎಸ್ಸಿ-ಎrohit-3ಸ್ಟಿ ಕಾಯ್ದೆ ಈ ವಿಚಾರದಲ್ಲಿ ಪರಿಣಾಮಕಾರಿಯಾಗಿಲ್ಲ ಎನ್ನುವುದು ಅವರ ಅನಿಸಿಕೆ. ಹಾಗೇ ಶಿಕ್ಷಣ ಸಂಸ್ಥೆಯ ಎಲ್ಲಾ ಆಯಕಟ್ಟಿನ ಸ್ಥಾನಗಳಲ್ಲಿ ನಿಮ್ನ ವರ್ಗದ ಪ್ರತಿನಿಧಿಗಳಿಗೆ ಸೂಕ್ತ ಅವಕಾಶ ಬೇಕು. ಜೊತೆಗೆ ಪ್ರತಿಷ್ಟಿತ ವಿದ್ಯಾಸಂಸ್ಥೆಗಳಲ್ಲಿ ಎಲ್ಲಾ ವಿದ್ಯಾರ್ಥಿಗಳನ್ನು ಒಳಗೊಳ್ಳುವಂತೆ ಸಿವಿಕ್ ಎಜುಕೇಶನ್ ನೀಡುವುದು ಅಗತ್ಯ. ಜಾತಿ, ವರ್ಣ, ಲಿಂಗ, ವರ್ಗ ಆಧಾರಿತ ತಾರತಮ್ಯಗಳ ಬಗ್ಗೆ ಸೂಕ್ತ ತಿಳವಳಿಕೆ ನೀಡುವುದರಿಂದ ವಿದ್ಯಾರ್ಥಿ ಸಮೂಹ ಸಮಾನತೆಯನ್ನು ಬಯಸುತ್ತಾ ಎಲ್ಲರನ್ನೂ ಒಂದೇ ರೀತಿ ನೋಡವ ಮನೋಭಾವ ಬೆಳೆಸಲು ಈ ಕ್ರಮ ಅಗತ್ಯವಾಗಿತ್ತು.

 

ಆದರೆ, ಈ ಯಾವ ಶಿಫಾರಸ್ಸುಗಳ ಬಗೆಯೂ ಸರಕಾರಗಳು ಸೂಕ್ತ ನಿರ್ಧಾರ ತೆಗೆದುಕೊಳ್ಳಲಿಲ್ಲ. ಆ ಕಾರಣ ಅಂಬೇಡ್ಕರ್ ಅಥವಾ ಪೆರಿಯಾರ್ ಹೆಸರಿಟ್ಟುಕೊಂಡು ಚಟುವಟಿಕೆ ನಡೆಸುವವರನ್ನೆಲ್ಲಾ ದೇಶದ್ರೋಹಿಗಳೆಂದು ಕೆಲವರು ದೂರುತ್ತಾರೆ, ಮಾನವ ಸಂಪನ್ಮೂಲ ಖಾತೆ ಸಚಿವೆ ಸ್ಮೃತಿ ಇರಾನಿ ಈ ಹುಡುಗರ ಮೇಲೆ ಕ್ರಮ ಜರುಗಿಸಲೆಂದು ಪದೇ ಪದೇ ಪತ್ರ ಬರೆದೂ, ತನ್ನದೇನೂ ಪಾತ್ರವಿಲ್ಲ ಎನ್ನುತ್ತಾರೆ. ಆದರೆ ರೋಹಿತ್ ಮಾತ್ರ ಯಾರನ್ನೂ ದೂಷಿಸಬೇಡಿ ಎಂದು ಸಾವಿಗೆ ಶರಣಾಗಿದ್ದಾನೆ. ಅವನ ಸಾವಿಗೆ ಯಾರನ್ನೇ ಆಗಲಿ ದೂಷಿಸಿ, ಇಂದಿನ ಕಾನೂನಿನಡಿ ‘ಆತ್ಮಹತ್ಯೆಗೆ ಪ್ರಚೋದನೆ’ ಎಂದು ತೀರ್ಪು ಪಡೆಯುವುದು ದೀರ್ಘದ ಪ್ರಕ್ರಿಯೆ ಇರಬಹದುದು. ಆದರೆ ಒಂದಂತೂ ಸತ್ಯ, ಆತನನ್ನು ಸಾವಿಗೆ ದೂಡಿದ್ದು, ಈ ದೇಶ, ವ್ಯವಸ್ಥೆ, ಶಿಕ್ಷಣ, ಮಧ್ಯಮ ವರ್ಗದ ಮೀಸಲಾತಿ-ವಿರೋಧಿ, ದಲಿತ-ವಿರೋಧಿ ಆಲೋಚನೆ ಹಾಗೂ ಎಲ್ಲಡೆ ಹೇರಳವಾಗಿ ಹಬ್ಬುತ್ತಿರುವ ‘ಮೇಲ್ವರ್ಗ ಕೇಂದ್ರಿತ ರಾಜಕಾರಣ’.

“ಉಡುಗೊರೆ” : ಗಾಂಧಿ ಜಯಂತಿ ಕಥಾಸ್ಪರ್ಧೆ 2015 – ಬಹುಮಾನಿತ ಕಥೆ

– ಸ್ವಾಲಿಹ್ ತೋಡಾರ್

ಪ್ರೀತಿಯಲ್ಲಿ ಉಡುಗೊರೆಗೆ ಅಷ್ಟೊಂದು ಮಹತ್ವವಿದೆ ಎಂದು ಪೊಡಿಮೋನುವಿಗೆ ಎಂದೂ ತಿಳಿದಿರಲಿಲ್ಲ. “ಮದುವೆಯಾಗಿ ಎರಡು ವರ್ಷ ಮೀರುತ್ತಾ ಬಂತು. ಇದುವರೆಗೂ ನಾನು ಕೇಳದೆ ಏನನ್ನಾದರೂ ನನಗೋಸ್ಕರ ನೀವು ತಂದುಕೊಟ್ಟದ್ದಿದೆಯೇ? ನಿಮಗೆ ನನ್ನ ಮೇಲೆ ಪ್ರೀತಿಯೇ ಇಲ್ಲ”ಎಂದು ಸಕೀನ ಹುಸಿ ಮುನಿಸು ತೋರಿದಾಗ ಪೊಡಿಮೋನು ಏನೂ ಆಗದವನಂತೆ ಹಲ್ಕಿರಿಯುತ್ತಾ ನಿಂತಿದ್ದ. ಹೆಂಡತಿ ಹುಸಿ ಮುನಿಸು ತೋರುವಾಗಲೆಲ್ಲಾ ಹೀಗೆ ಹಲ್ಕಿರಿಯುವುದು ಪೊಡಿಮೋನುವಿನ ಒಂದು ಪಾರಂಪರಿಕ ರೋಗವಾಗಿತ್ತು. ಸಕೀನಾಳಿಗೆ ಇದೆಂದೂ ಇಷ್ಟವಾಗುತ್ತಿರಲಿಲ್ಲ. ಅವಳು ಅತ್ಯಂತ ಪ್ರೇಮದ ಮೂಡಿನಲ್ಲಿದ್ದಾಗಲೂ, “ನನಗೆ ನಿಮ್ಮ ನಗುವೆಂದರೆ ಒಂಚೂರು ಇಷ್ಟವಿಲ್ಲ, ಅದೇನು ಅಷ್ಟೊಂದು ಅಸಹ್ಯವಾಗಿ ಹಲ್ಕಿರಿಯುತ್ತೀರಿ” ಎನ್ನುತ್ತಿದ್ದಳು. ಪೊಡಿಮೋನುವಿಗೆ ಬೇಸರವಾಗುತಿತ್ತು. ಆದರೂ, ಆತ ತನ್ನ ಬೇಸರವನ್ನು ತೋರಿಸಿಕೊಳ್ಳದೆ, ಹೆಂಡತಿಯ ಮುಂಗುರುಳನ್ನು ನೇವರಿಸುತ್ತಾ, “ಅದು ತನಗೆ ತನ್ನ ಅಪ್ಪನಿಂದ ದೊರೆತ ಏಕೈಕ ಆಸ್ತಿಯೆಂದೂ, ತಾನು ಬೇಡವೆಂದರೂ ಅದು ತನ್ನನ್ನು ಬಿಡಲೊಲ್ಲದು ಎಂದೂ”ಪರಿತಪಿಸುತ್ತಿದ್ದನು. ಸಕೀನಾ, “ಸರಿ ಬಿಡಿ. ನಿಮ್ಮ ಆ ಏಕೈಕ ಆಸ್ತಿಯನ್ನು ಭದ್ರವಾಗಿ ಬ್ಯಾಂಕ್ ತಿಜೋರಿಯಲ್ಲಿಟ್ಟು ಬಿಡಿ. ಹೀಗೆ ಎಲ್ಲೆಂದರಲ್ಲಿ ಪ್ರದರ್ಶಿಸಬೇಡಿ, ಯಾರಾದರೂ ಕದ್ದೊಯ್ದಾರು”ಎಂದು ತಮಾಷೆ ಮಾಡುತ್ತಿದ್ದಳು.

ಆದರೆ, ಈ ದಿನ ತಾನು ಉಡುಗೊರೆಯ ವಿಷಯ ಹೇಳಿದಾಗಲೂ ಗಂಡ ಹಲ್ಕಿರಿಯುತ್ತಾ ನಿಂತಿರುವುದು affection-paintingಕಂಡು ಸಕೀನಾ ಸಿಡಿಮಿಡಿಗೊಂಡಳು. ಆತನ ನಗು ತನ್ನ ವ್ಯಕ್ತಿತ್ವವನ್ನು ಕನಿಷ್ಠಗೊಳಿಸುತ್ತಿದೆ ಎಂದು ಭಾವಿಸಿ ಅಪಮಾನಿತಳಾದ ಆಕೆ, ಪೋಡಿಮೋನನ್ನು ತನ್ನ ಕೋಣೆಯಿಂದ ಹೊರ ದಬ್ಬಿ ಬಾಗಿಲು ಹಾಕಿಕೊಂಡಳು. ಪೊಡಿಮೋನು ಇದೆಲ್ಲಾ ಒಂದೆರಡು ದಿನಕ್ಕೆ ಸರಿ ಹೋಗುತ್ತದೆಂದು ಕೊಂಡಿದ್ದ. ಆದ್ದರಿಂದ ಆತ ಹೆಂಡತಿಯನ್ನು ರಮಿಸಿ ಸಮಾಧಾನಿಸಲೂ ಹೋಗಿರಲಿಲ್ಲ. ಸುಮ್ಮನೆ ತಾನಾಯಿತು, ತನ್ನ ಕೆಲಸವಾಯಿತೆಂದು ರಾತ್ರಿಯಿಡೀ ಹೊರಗಡೆ ಸುತ್ತಾಡಿ ಹೆಂಡತಿಯ ನೆನಪಾದೊಡನೆ ಮನೆಗೆ ಬರುತ್ತಿದ್ದನು.

ಪೊಡಿಮೋನು ಊಟ ಮಾಡಿ ಎದ್ದು ಬರುವಷ್ಟರಲ್ಲಿ ಸಕೀನಾ ತನ್ನ ಕೋಣೆಗೆ ಒಳಗಿನಿಂದ ಚಿಲಕ ಹಾಕಿ ಮಲಗುತ್ತಿದ್ದಳು. ಪೊಡಿಮೋನು ಆ ತಡರಾತ್ರಿಯಲ್ಲಿ ಕೋಣೆಯ ಬಾಗಿಲು ಬಡಿಯುವ ಮನಸ್ಸೂ ಇಲ್ಲದವನಂತೆ ನೆಲ ಸಿಕ್ಕಲ್ಲಿ ಬಿದ್ದುಕೊಳ್ಳುತ್ತಿದ್ದ. ಪೊಡಿಮೋನು ಹತಾಶನಾಗುವಂತೆ ಸಕೀನಾ ಒಂದು ವಾರವಾದರೂ ತುಟಿ ಬಿಚ್ಚಲಿಲ್ಲ. ಅವನು ಮಾತನಾಡಲು ಪ್ರಯತ್ನಿಸಿದರೂ, ಆಕೆ ಮುಖ ತಿರುಗಿಸುತ್ತಿದ್ದಳು. “ಕೇವಲ ಒಂದು ಉಡುಗೊರೆಗಾಗಿ ಈಕೆ ಇಷ್ಟೆಲ್ಲಾ ಹಠ ಮಾಡುತ್ತಿದ್ದಾಳಲ್ಲಾ, ಎಂತಹ ದುಷ್ಟೆ ಈಕೆ”ಎನಿಸಿತು ಪೊಡಿಮೋನುವಿಗೆ. ಆತ ಪ್ರತಿನಿತ್ಯ ಬೆಳಗ್ಗೆ ಅಂಗಳದಲ್ಲಿ ನಿಂತು ಹೆಂಡತಿಗಾಗಿ ಕಾದು ಕಾದು ನಿರಾಶೆಯಿಂದ ಹೊರಡುತ್ತಿದ್ದ. ಮಾಡಲು ಏನೂ ಕೆಲಸವಿಲ್ಲದಿರುವುದರಿಂದ ಪೊಡಿಮೋನು ಮನೆಯಿಂದ ನೇರವಾಗಿ ಬಸ್ ನಿಲ್ದಾಣದತ್ತ ಸಾಗುತ್ತಿದ್ದ. ಸಂಜೆಯವರೆಗೂ ಅಲ್ಲೆಲ್ಲಾ ಗೊತ್ತುಗುರಿಯಿಲ್ಲದಂತೆ ಅದ್ದಾಡಿ ರಾತ್ರಿಯಾಗುತ್ತಿದ್ದಂತೆ ಬರಿಗೈ ದಾಸನಂತೆ ಹತಾಶೆಯ ಮುಖವೊತ್ತು ಮನೆಗೆ ಮರಳುತ್ತಿದ್ದನು.

ಪೊಡಿಮೋನು ಕೆಲಸ ಕಳೆದುಕೊಂಡು ಸೌದಿ ಅರೇಬಿಯಾದಿಂದ ಹಿಂದಿರುಗಿ ಇಂದಿಗೆ ಆರೇಳು ತಿಂಗಳು ಕಳೆದವು. ಹದಿನೈದು ವರ್ಷದ ಹಿಂದೆ ಆತ ಕೆಲಸ ಹುಡುಕಿಕೊಂಡು ತನ್ನ ಮಾವನೊಂದಿಗೆ ಸೌದಿ ಅರೇಬಿಯಾಕ್ಕೆ ಹೋಗಿದ್ದ. ಅಲ್ಲಿ ಅರಬಿಯ ಹತ್ತಾರು ಆಡುಗಳನ್ನು ಗುಡ್ಡದ ತನಕ ಅಟ್ಟಿಕೊಂಡು ಹೋಗಿ ಮೇಯಿಸಿ, ಅದು ಕಳ್ಳಕಾಕರ ಪಾಲಾಗದಂತೆ ಜೋಪಾನವಾಗಿ ನೋಡಿಕೊಂಡು, ಅದಕ್ಕೆ ಬೇಕಾದ ಪೋಷಕಾಂಶಗಳನ್ನು ಒದಗಿಸಿ ಅಂತೂ ತನಗೂ, ತನ್ನ ಮನೆಯ ಖರ್ಚಿಗೂ ಸಾಕಾಗುವಷ್ಟು ಸಂಪಾದಿಸುತ್ತಿದ್ದನು. ಅಲ್ಲದೆ, ತನ್ನ ಇಬ್ಬರು ತಂಗಿಯಂದಿರ ಮದುವೆ ಖರ್ಚಿಗಾಗಿಯೂ ಇಂತಿಷ್ಟೆಂದು ಉಳಿಸುತ್ತಿದ್ದನು. ಮನೆಗೆ ಕರೆ ಮಾಡಿದಾಗಲೆಲ್ಲಾ ಆತನ ಅಮ್ಮ, “ನಿನಗೆ ಇಬ್ಬರು ತಂಗಿಯರಿದ್ದಾರೆ. ಅವರಿಗೆ ಮದುವೆ ವಯಸ್ಸಾಗುತ್ತಾ ಬಂತು, ದುಂದು ಮಾಡಬೇಡ” ಎಂದು ಪದೇ ಪದೇ ನೆನಪಿಸುತ್ತಾ ಆತ ಸಾಕಷ್ಟು ಜಾಗರೂಕನಾಗಿರುವಂತೆ ನೋಡಿಕೊಂಡಿದ್ದರು. ಅಂತೂ ಹತ್ತು ವರ್ಷ ಸೌದಿ ಅರೇಬಿಯಾದಲ್ಲಿ ದುಡಿದು ಕೂಡಿಟ್ಟ ಹಣದೊಂದಿಗೆ ಮರಳಿ ಬಂದಿದ್ದ ಪೊಡಿಮೋನು ತನ್ನ ಸಂಬಂಧಿಕರಿಗಾಗಿ ಸಾಕಷ್ಟು ಉಡುಗೊರೆಗಳನ್ನೂ ತಂದಿದ್ದನು. ಎಲ್ಲರಿಗೂ ಖುಷಿಯೋ ಖಷಿ. ಅಮ್ಮನಿಗೆ ಎರಡು ಜೊತೆ ಸೀರೆ, ಚಪ್ಪಲಿ, ಬುರ್ಖಾ, ತಂಗಿಯಂದಿರಿಗೆ ಚೂಡಿದಾರೆ ಪೀಸು, ಬುರ್ಖಾ, ವಾಚು, ತಲೆಸಿಂಗಾರ, ಚಿಕ್ಕಪ್ಪನಿಗೆ ಶರಟ್ಟು ಪೀಸು, ವಾಚು, ಸುಗಂಧದ ಬಾಟಲಿ, ಚಿಕ್ಕಮ್ಮನಿಗೆ ಎರಡು ಜೊತೆ ಚಪ್ಪಲಿ, ಸೀರೆ, ಮಾವನಿಗೆ ವಾಚು, ಅತ್ತೆಗೆ ಸೀರೆ, ಬುರ್ಖಾ ಹಾಗೂ ಕಂಡವರಿಗೆಲ್ಲಾ ಕೊಡಲು ಸಾಕಷ್ಟು ಚಾಕಲೇಟು..

ಪೊಡಿಮೋನು ಸಂಬಂಧಿಕರ ಮನೆಗೆ ಹೋಗುವಾಗ ಎಂದೂ ಬರಿಗೈಯಲ್ಲಿ ಹೋಗುತ್ತಿರಲಿಲ್ಲ. ಮಾರುಕಟ್ಟೆಯಿಂದ ಸಾಕಷ್ಟು ತಿಂಡಿತಿನಿಸುಗಳನ್ನು ಖರೀದಿಸಿ ಜೊತೆಗೆ ಕೊಂಡೊಯ್ಯುತ್ತಿದ್ದನು. ಅಷ್ಟೇ ಅಲ್ಲದೆ, ಪೊಡಿಮೋನು ಸಂಬಂಧಿಕರನ್ನೂ, oil-paintingಸ್ನೇಹಿತರನ್ನೂ ಪದೇ ಪದೇ ಮನೆಗೆ ಕರೆದು ಭರ್ಜರಿ ಬಿರ್ಂದ್ ನಡೆಸುತ್ತಿದ್ದನು. ಪೊಡಿಮೋನುವಿನ ದುಂದುವೆಚ್ಚ ಕಂಡು ಅವನ ಅಮ್ಮ, “ಇಷ್ಟೆಲ್ಲಾ ಹಣ ಯಾಕೆ ಪೋಳು ಮಾಡುತ್ತಿದ್ದೀಯಾ, ಕಷ್ಟಪಟ್ಟು ದುಡಿದದ್ದಲ್ಲವೇ? ಮುಂದಿನ ಜೀವನಕ್ಕೆ ಉಳಿಸಬೇಡವೇ”ಎಂದು ಬುದ್ಧಿ ಹೇಳುತ್ತಿದ್ದರು. ಪೊಡಿಮೋನು ನಗುತ್ತಾ, “ಉಮ್ಮಾ…ನಾವು ಯಾಕೆ ದುಡಿಯುತ್ತೇವೆ ಹೇಳು. ನೆಮ್ಮದಿಯಿಂದ ಬದುಕುವುದಕ್ಕೆ ತಾನೆ? ಇದ್ದಾಗ ಖರ್ಚು ಮಾಡಬೇಕು. ಖುಷಿ ಪಡಬೇಕು. ನಾಳೆ ನಾವು ಇರುತ್ತೇವಂತ ಏನು ಗ್ಯಾರಂಟಿ ಹೇಳು. ಹಣ ಖಾಲಿಯಾದರೆ, ಮತ್ತೆ ದುಡಿಯಬಹುದಲ್ಲವೇ?”ಎಂದೆಲ್ಲಾ ವೇದಾಂತಿಯ ಸಬೂಬು ನೀಡುತ್ತಿದ್ದನು. ಆದರೆ, ವಾಸ್ತವದಲ್ಲಿ ಅವನಿಗೆ ನಾಲ್ಕು ಜನರ ಮುಂದೆ ತನ್ನ ಅಂತಸ್ತನ್ನು ತೋರಿಸಿಕೊಳ್ಳಬೇಕೆಂಬ ಒಳ ಹಂಬಲವಿತ್ತು. ಅವನ ಮನಸ್ಸನ್ನು ಅರ್ಥ ಮಾಡಿಕೊಂಡಂತೆ ಅವನ ಅಮ್ಮ,“ಯಾವತ್ತೂ ಹೀಗೆ ಇರಲ್ಲಪ್ಪ…ಜೋಪಾನವಾಗಿರು”ಎಂದು ಎಚ್ಚರಿಸುತ್ತಿದ್ದರು.

ಆ ವರ್ಷವೇ ಪೊಡಿಮೋನು ಒಂದೆರಡು ವರ್ಷ ಅಂತರದ ತನ್ನ ಇಬ್ಬರು ತಂಗಿಯಂದಿರಿಗೂ ಮದುವೆ ಮಾಡಿ ಅವರನ್ನು ಗಂಡಂದಿರ ಮನೆಗೆ ಕಳುಹಿಸಿದ್ದ. ಇಷ್ಟೆಲ್ಲಾ ಮುಗಿಯುವಾಗ ಪೊಡಿಮೋನುವಿನ ಕೈಯಲ್ಲಿದ್ದ ನಾಕಾಸೂ ಮುಗಿದು, ಆತ ಮತ್ತೆ ಸೌದಿಗೆ ಹೊರಡ ಬೇಕಾಯಿತು. ಹೊರಡುವಾಗ ಮಾತ್ರ ಪೊಡಿಮೋನುವಿಗೆ ಯಾಕೋ ಎಂದಿಲ್ಲದ ವೇದನೆಯಾಯಿತು. ಈ ಹಿಂದೆ ಮೊದಲ ಬಾರಿ ಅವನು ಸೌದಿಗೆ ಹೊರಟು ನಿಂತಿದ್ದಾಗ ಕೊಂಚ ಭಯವಾಗಿತ್ತೇ ವಿನಾ ಈ ರೀತಿಯ ವೇದನೆಯಾಗಿರಲಿಲ್ಲ. ಆದರೆ, ಈಗ ಮಾತ್ರ ತಾಯಿ ನಾಡಿನಿಂದ ದೂರವಾಗಿ ಮತ್ತೆ ಆ ನರಕದಲ್ಲಿ ತಾನು ಇನ್ನೆಷ್ಟು ವರ್ಷ ಸಾಯಬೇಕೋ ಎಂದು ಆತನಿಗೆ ಯೋಚನೆಯಾಯಿತು. ಆದರೂ ಆತ, “ವರ್ಷ ಮೂವತ್ತಾಯಿತು ನಿನಗೂ ಒಂದು ಮದುವೆ ಗಿದುವೆ ಅನ್ನೋದು ಬೇಡವೆ?” ಎಂಬ ತಾಯಿಯ ಮಾತಿಗೆ ಪ್ರಭಾವಿತನಾದವನಂತೆ ಮತ್ತೆ ಹೊರಟು ನಿಂತಿದ್ದ. ಹೊರಡುವಾಗ ಅವನ ಮನಸ್ಸಿನಲ್ಲಿ -ಸೌದಿಯ ಆ ವಿಶಾಲ ಮರುಭೂಮಿ, ರಣ ಬಿಸಿಲು, ಬೇ ಬೇ ಎಂದು ತಾನು ಅಟ್ಟಿದತ್ತ ಓಡುತ್ತಿದ್ದ ಆ ನೂರಾರು ಆಡಿನ ಮರಿಗಳ ಮುಗ್ಧತೆ, ಅರಬಿಯ ಕ್ರೌರ್ಯ- ನಿಂತು ಗೊಂದಲಗೊಳಿಸಿದವು.

ಸೌದಿಯಲ್ಲಿ ಮತ್ತೆ ಎರಡು ವರ್ಷ ದುಡಿದು ಊರಿಗೆ ಮರಳಿದ್ದ ಪೊಡಿಮೋನು ಸಕೀನಾಳನ್ನು ಮದುವೆಯಾಗಿದ್ದನು. ಮನೆಯ ಸುತ್ತಲೂ, ಶಾಮಿಯಾನ ಕಟ್ಟಿಸಿ, ಜಗಮಗಿಸುವ ಚಿಕ್‌ಬುಕ್ ಏರಿಸಿ, ದಪ್‌ನವರನ್ನು ಕರೆಸಿ ಊರಿನ ಜನರ ನಡುವೆ ತನ್ನ ಮದುವೆ ಚಿರಾಯುವಾಗುವಂತೆ ನೋಡಿಕೊಂಡಿದ್ದನು. ಸಕೀನಾಳ ತಂದೆ ತನಗೆ ಶ್ರೀಮಂತ ಅಳಿಯನೇ ಸಿಕ್ಕಿದನೆಂದು ಖುಷಿಪಟ್ಟರು. ಹಣ ಇರುವುದು ಖರ್ಚು ಮಾಡುವುಕ್ಕೆ, ಅಲ್ಲದೆ, ಕನಿಷ್ಠ ಭರವಸೆಯೂ ಇಡಲಾಗದ ನಾಳೆಗಾಗಿ ಕೂಡಿಡುವುದಕ್ಕಲ್ಲ ಎಂಬಂತೆ ಪೊಡಿಮೋನು ತನ್ನ ಮದುವೆಗೆ ಬೇಕಾಬಿಟ್ಟಿ ಖರ್ಚು ಮಾಡಿದ್ದನು. ಬಿರಿಯಾನಿ ಬಾಯಿ ತುಂಬಾ ಚಪ್ಪರಿಸಿ ಹೊಗಳುತ್ತಿದ್ದ ಜನರನ್ನು ಕಂಡು ಪೊಡಿಮೋನು ಖುಷಿಪಡುತ್ತಿದ್ದನು. ಆ ಖುಷಿಯಲ್ಲೇ ಮದುವೆಯ ದಿನ ತಡರಾತ್ರಿಯವರೆಗೂ ಇದ್ದು ಹೊಟ್ಟೆ ತುಂಬಾ ತಿಂದುಂಡು ಹೋಗಿದ್ದ ಸ್ನೇಹಿತರಿಗಾಗಿಯೇ ಮರುದಿನ ಸ್ಪೆಷಲ್ ಪಾರ್ಟಿಯನ್ನೂ ಆಯೋಜಿಸಿದ್ದನು. ಪತ್ನಿಯ ಸಂಬಂಧಿಕರನ್ನು ಒತ್ತಾಯದಿಂದ ಮನೆಗೆ ಕರೆಸಿ ಮತ್ತೊಮ್ಮೆ ಧಾಂ ಧೂಂ ಪಾರ್ಟಿ ಮಾಡಿ ಎಲ್ಲರನ್ನೂ ಚಕಿತಗೊಳಿಸಿದ್ದನು.

ದಿನಗಳೆದಂತೆ ಸೌದಿಯಿಂದ ತಂದಿದ್ದ ಹಣವೆಲ್ಲಾ ಖಾಲಿಯಾಗಿ ಕೈ ಸುಟ್ಟುಕೊಂಡಿದ್ದ ಪೊಡಿಮೋನು ಮದುವೆಯ ಒಂದೆರಡು ತಿಂಗಳಿಗೇ ಜೇಬಿಗೆ ಕತ್ತರಿ ಬಿದ್ದವನಂತೆ ಒದ್ದಾಡತೊಡಗಿದನು. ಸೌದಿಗೆ ಮರಳಿದ ಮೇಲೆ ಹಿಂದಿರುಗಿಸುತ್ತೇನೆಂದು ಅವರಿವರಿಂದ ಸಾಲಸೋಲ ಮಾಡಿ ಒಂದೆರಡು ತಿಂಗಳನ್ನು ಅದು ಹೇಗೋ ಮುಂದೂಡಿದ್ದನು. ಆದರೆ, ಸಾಲಗಾರರ ಉಪಟಳ, ಮನೆಯ ಖರ್ಚು ದಿನದಿಂದ ದಿನಕ್ಕೆ suicide-paintingದುಪ್ಪಟ್ಟಾಗಿ ಪೊಡಿಮೋನುವಿನ ಮನಶ್ಶಾಂತಿಯೇ ಕಳೆದು ಹೋದವು. ಅಲ್ಲದೆ, ಅವನ ಅಮ್ಮ “ಈ ಕತ್ತಲ ಗುಹೆಯಂಥಾ ಮನೆಯಲ್ಲಿ ಇದ್ದೂ ಇದ್ದು ನಿನ್ನ ಹೆಂಡತಿಗೆ ಬೇಸರವಾಗಿರಬಹುದು ಎಲ್ಲಾದರೂ ಸುತ್ತಾಡಿಸಿಕೊಂಡು ಬಾ”ಎಂದೋ ಅಥವಾ “ಅವಳನ್ನು ನಿರಾಶೆ ಮಾಡಬೇಡ ಏನಾದರೂ ತೆಗೆದುಕೊಡು”ಎಂದೋ ಅಥವಾ “ಅವಳಿಗೆ ನಮ್ಮ ಕುಟುಂಬದ ಪರಿಚಯ ಆಗಲಿ, ನಿನ್ನ ಮಾವಂದಿರ ಮನೆಗೆ ಕರೆದುಕೊಂಡು ಹೋಗು. ಗಂಡ ಹೆಂಡತಿ ಹೀಗೆ ಮನೆಯೊಳಗೆ ಬೆಪ್ಪು ತಕ್ಕಡಿಗಳ ಹಾಗೆ ಕೂತಿದ್ದರೆ ಮನಸು ಬೆಸೆಯುವುದು ಹೇಗೆ?” ಹೇಳಿ ಪೀಡಿಸುತ್ತಿದ್ದರು. ಪೊಡಿಮೋನುವಿಗೆ ಇಂತಹ ಆಶೆಗಳಿರಲಿಲ್ಲವೆಂದಲ್ಲ. ಹೆಂಡತಿಯ ಜೊತೆಗೆ ಸುತ್ತಾಡುವುದನ್ನು ಅವನೂ ಬಯಸುತ್ತಿದ್ದನು. ಆದರೇನು ಮಾಡುವುದು? ಕನಸುಗಳು ದುಬಾರಿಯಾಗಿದ್ದ ಕಾಲದಲ್ಲಿ ಪೊಡಿಮೋನು ಬದುಕುತ್ತಿದ್ದನು. ಕಷ್ಟಕಾಲದಲ್ಲಿ ಬಡವರಿಗೆ ಶಕ್ತಿ ತುಂಬುವ ಕನಸುಗಳೇ ಕೆಲವೊಮ್ಮೆ ಒಲ್ಲದ ಸಮಯದಲ್ಲಿ ಹೆಗಲ ಮೇಲೆ ಕೂತು ಒಜ್ಜೆ ಎನಿಸತೊಡಗುತ್ತವೆ. ತಲೆ ಚಿಟ್ಟು ಹಿಡಿಸುತ್ತವೆ. ಹೀಗೆ ಒಜ್ಜೆಯಾದ ಕನಸುಗಳನ್ನು ನನಸು ಮಾಡುವ ದಾರಿಯೇ ಬಹಳ ಕಿರಿಕಿರಿಯದ್ದು ಎಂಬುದು ಪೊಡಿಮೋನುವಿಗೆ ತಿಳಿದಿತ್ತು. ಆದ್ದರಿಂದ ತನ್ನ ಅಮ್ಮನ ಉಪದೇಶಗಳಿಂದ, ಹೆಂಡತಿಯ ಆಶೆಗಣ್ಣಿನಿಂದ ತಪ್ಪಿಸಿಕೊಳ್ಳಲು ಮುಂಜಾನೆ ಆರು ಗಂಟೆಗೆ ಎದ್ದು ಹೊರಡುತ್ತಿದ್ದನು.

ಆದರೆ, ಅಮ್ಮನ ಉಪದೇಶ ನಿರಂತರವಾಗಿತ್ತು. ಬರಿಗೈದಾಸನಾಗಿದ್ದ ಪೊಡಿಮೋನು, ಅಮ್ಮ ತನ್ನನ್ನು ಬರ್ಬಾದ್ ಮಾಡುವ ದಾರಿ ಹುಡುಕುತ್ತಿದ್ದಾರೆ ಎಂದೇ ಕೋಪಾವಿಷ್ಠನಾಗುತ್ತಿದ್ದನು. ಹೀಗೆ ದಿನದಿಂದ ದಿನಕ್ಕೆ ಮನಸ್ಸಿನ ನೆಮ್ಮದಿ ಕೆಡಿಸಿಕೊಳ್ಳುತ್ತಿದ್ದ ಪೊಡಿಮೋನುವಿಗೆ ಬರಿಗೈಯಲ್ಲಿ ಊರಲ್ಲಿ ದಿನಗಳೆಯುವುದು ಸಾಧ್ಯವಿಲ್ಲವೆನಿಸಿತು. ಆದ್ದರಿಂದ ಮೂರು ತಿಂಗಳ ರಜೆ ಇನ್ನೂ ಬಾಕಿಯಿರುವಂತೆಯೇ ಅವನು ಮತ್ತೆ ಹೊರಟು ನಿಂತನು. ಪೊಡಿಮೋನುವಿಗೆ ಈಗ ಹಿಂದೆಂದಿಗಿಂತಲೂ ಹೆಚ್ಚು ವೇದನೆಯಾಯಿತು. ಮದುವೆಯಾಗಿ ಮೂರು ತಿಂಗಳಾಗಿತ್ತಷ್ಟೆ, ಕೆಲವು ತಿಂಗಳ ಹಿಂದೆ ಹೆಂಡತಿಯ ಜೊತೆಗಿನ ಸ್ವರ್ಗದ ಬದುಕನ್ನು ಆರಂಭಿಸಿದವನಿಗೆ ಈಗ ಇದ್ದಕ್ಕಿದ್ದಂತೆ ಅವೆಲ್ಲವನ್ನು ಬಿಟ್ಟು ನರಕಕ್ಕೆ ಹೊರಡುವುದು ಅಸಾಧ್ಯವೆನಿಸಿತು. ‘ತಾನು ಈ ನರಕಕ್ಕೆ ಹೋಗಲೇಬಾರದಿತ್ತು. ಒಮ್ಮೆ ದೀನಾರಿನ ರುಚಿ ಹತ್ತಿದವನಿಗೆ ಮತ್ತೆ ಊರಿನಲ್ಲಿ ದುಡಿದು ಬದುಕುವುದು ಸಾಧ್ಯವೇ ಇಲ್ಲ’ ಎಂದುಕೊಂಡ. ಜೊತೆಗೆ “ತಾನು ಅಷ್ಟೊಂದು ವೈಭೋಗದಿಂದ ಮದುವೆಯಾಗದೆ ಸರಳವಾಗಿ ಆಗಿದ್ದರೂ ಇನ್ನು ಮೂರು ತಿಂಗಳು ಊರಲ್ಲಿ ಕಳೆಯಬಹುದಾಗಿತ್ತು. ಹಾಳಾದ ಊರಿನವರನ್ನು ದಂಗುಬಡಿಸಲು ಹೋಗಿ ಕೈ ಸುಟ್ಟುಕೊಂಡೆ. ಒಟ್ಟಾರೆ ನನ್ನ ದುರ್ವಿಧಿ, ಅಲ್ಲದೆ ಏನು? ಎಷ್ಟು ಮಂದಿ ಈ ಊರಲ್ಲೇ ದುಡಿದು ತಂಗಿಯಂದಿರಿಗೆ ಮದುವೆ ಮಾಡಿ, ತಾವೂ ಮದುವೆಯಾಗಿ ಸುಖವಾಗಿ ಬದುಕುತ್ತಿದ್ದಾರೆ” ಎನಿಸಿ ಅವನ ಕಣ್ಣಲ್ಲಿ ನೀರು ನಿಂತವು. ಅವನಿಗೀಗ ಊರಿನಲ್ಲೇ ಇದ್ದು ಕೂಲಿನಾಲಿ ಮಾಡಿ ಬದುಕುತ್ತಿರುವ ದಟ್ಟ ದರಿದ್ರರೂ ಕೂಡ ತನಗಿಂತ ನೆಮ್ಮದಿಯ ಜೀವನ ಸಾಗಿಸುತ್ತಿರುವಂತೆ ಕಂಡು ಕರುಳು ಹಿಚುಕಿದಂತಾಯಿತು. “ಎಷ್ಟು ಸಂಬಳವಿದ್ದರೆ ಏನು, ಏಳು ಕಡಲು ದಾಟಿ, ವರ್ಷಾನು ಗಟ್ಟಲೆ ಬಂಧು ಬಳಗದ ಮುಖ ನೋಡಲೂ ಆಗದೆ ಅನ್ಯರಂತೆ ಆ ನಾಡಿನಲ್ಲಿ ಬದುಕುವುದಕ್ಕಿಂತ, ಇಲ್ಲಿ ಕೂಲಿನಾಲಿ ಮಾಡಿ ಗಂಜಿ ಕುಡಿದು ಬದುಕುವುದೇ ಮೇಲು. ಒಂದು ಕಷ್ಟಸುಖಕ್ಕೆಂದು ಅಲ್ಲಿ ಬಂಧುಗಳು ಇದ್ದಾರ? ಸತ್ತರೆ ತೆಗೆದು ದಫನ್ ಮಾಡುವವರು ಯಾರಾದರು ಇದ್ದಾರ? ಎಂಥಾ ಸೌದಿ ಎಂಥಾ ಸೌದಿ?” ಎಂಬ ಮೇಲ್ಮನೆಯ ಮೂಸಾಕನವರ ಮಾತು ವಿಮಾನ ಹತ್ತುವವರೆಗೂ ಪೊಡಿಮೋನುವಿನ ಕಿವಿಯಲ್ಲಿ ಗುಂಯ್‌ಗುಟ್ಟುತ್ತಿದ್ದವು.

ಆದರೆ, ಸೌದಿಗೆ ಮುಟ್ಟಿದ ಪೊಡಿಮೋನುವಿಗೆ ಅಲ್ಲ್ಲೊಂದು ಆಘಾತ ಕಾದಿತ್ತು. ಸೌದಿ ಅರೇಬಿಯಾದಲ್ಲಿ ಅದಾಗಲೇ ನಿತಾಖತ್ ಎಂಬ ಹೊಸ ಕಾನೂನೊಂದು ಜಾರಿಗೆ ಬಂದು, ಪರದೇಶದ ಲಕ್ಷೆಪಲಕ್ಷ ಜನರು ಕೆಲಸ ಕಳೆದುಕೊಂಡು ಅನಿವಾರ್ಯವಾಗಿ ಊರಿಗೆ ಮರಳಿದ್ದರು. ಊರಿಗೆ ಮರಳಲಾಗದೆ ಕದ್ದು ಮುಚ್ಚಿ ಅಲ್ಲಿ ಇಲ್ಲಿ ಓಡಾಡಿಕೊಂಡಿದ್ದ ಕೆಲವರು ಪೊಲೀಸರ ಕೈಗೆ ಸಿಕ್ಕು ಜೈಲುಪಾಲಾಗಿದ್ದರು.

ಪೊಡಿಮೋನು ತನ್ನ ಧಣಿಯ ಸಹಕಾರದಿಂದ ಅದು ಹೇಗೋ ಒಂದು ವರ್ಷ ಕದ್ದು ಮುಚ್ಚಿ ಕೆಲಸ ಮಾಡಿದ್ದ. ಆದರೆ, ಒಂದು ದಿನ ಅವನು ಯಾರದೋ ಚಿತಾವಣೆಯಿಂದ ಪೊಲೀಸರ ಕಣ್ಣಿಗೆ ಬಿದ್ದು, ಜೈಲು ಪಾಲಾದ. ಅರಬಿ ಆತನನ್ನು ಜೈಲಿನಿಂದ ಬಿಡಿಸಿ, “ಇನ್ನು ಮುಂದೆ ನಿನ್ನನ್ನು ಕಾಯುವುದು ನನ್ನಿಂದ ಸಾಧ್ಯವಿಲ್ಲ. ಪೊಲೀಸರು ಹಿಂದೆಂದಿಗಿಂತಲೂ ಚುರುಕಾಗಿದ್ದಾರೆ. ಅಕ್ಕಪಕ್ಕದ ಟ್ಯೂನಿಶೀಯಾ, ಈಜಿಪ್ಟ್, ಸಿರಿಯಾದಲ್ಲಿ ದಂಗೆಗಳಾಗಿವೆ. ಸೌದಿ ಅರೇಬಿಯಾದ ಯುವಕರೂ ಬುಸುಗುಟ್ಟಲು ಆರಂಭಿಸಿದ್ದಾರೆ. ಅವರಿಗೆಲ್ಲಾ ಉದ್ಯೋಗ ಕೊಟ್ಟು ಬಾಯಿ ಮುಚ್ಚಿಸುವ ಕೆಲಸವನ್ನು ಸುಲ್ತಾನರು ಮಾಡುತ್ತಿದ್ದಾರೆ. ಇನ್ನು ನೀನಿಲ್ಲಿ ಇರುವುದು ಕ್ಷೇಮವಲ್ಲ”ಎಂದು ಎಚ್ಚರಿಸಿ ಊರಿಗೆ ಹೋಗಲೇ ಬೇಕೆಂದು ಒತ್ತಾಯಿಸಿ ಕಳುಹಿಸಿದನು. ಆದರೆ, ಪೊಡಿಮೋನು ಅದುವರೆಗೂ ದುಡಿದ ಸಂಬಳ ನೀಡಿರಲಿಲ್ಲ. ಕೇಳಿದ್ದಕ್ಕೆ, “ನಿನ್ನ ಸಂಬಳವನ್ನೆಲ್ಲಾ ಜೈಲಿನ ಅಧಿಕಾರಿಗಳಿಗೆ ಕೊಡಬೇಕಾಯಿತು. ಇಲ್ಲಿಯ ಜೈಲಿನ ಬಗ್ಗೆ ನಿನಗೆ ಗೊತ್ತೇ ಇದೆಯಲ್ಲಾ? ಇದು ನಿಮ್ಮ ಊರಿನಂಥ ಜೈಲಲ್ಲ. ಇಲ್ಲಿ ನಿನ್ನ ಜೀವ ಉಳಿದದ್ದೇ ಹೆಚ್ಚು ಅನ್ನಬೇಕು. ಆದಷ್ಟು ಬೇಗ ಹೊರಡು ಇಲ್ಲಿಂದ. ಎಲ್ಲಾ ಸರಿಯಾದರೆ ನಾನೇ ಕರೆಸುತ್ತೇನೆ”ಎಂದನು.

ಪೊಡಿಮೋನು ಇಂಗುತಿಂದ ಮಂಗನಂತೆ ಅವನತ್ತ ನೋಡಿ ಹಲ್ಕಿರಿದು ಸುಮಾರು ಹೊತ್ತು ಕಾದನು. ಅರಬಿಯ ಮನಸ್ಸು ಕರಗಲೇ ಇಲ್ಲವಾದ್ದರಿಂದ ವಿಧಿಯಿಲ್ಲದೆ ಅವನು ಹಿಂದಿರುಗಿದನು. ಹಲ್ಕಿರುವುದಲ್ಲದೆ ಆತ ಬೇರೆ ಏನು ತಾನೆ ಮಾಡಬಲ್ಲ? ಆ ಶ್ರೀಮಂತ ಅರಬಿಯೊಂದಿಗೆ ಹುಲುಮಾನವನಾದ ಅವನು ಕಾದಾಡುವುದು ಸಾಧ್ಯವೇ? ಆದರೂ, ಅರಬಿಯ ಕಪಾಲಕ್ಕೊಂದೇಟು ಕೊಡದೇ ಬಂದದ್ದು ತಪ್ಪಾಯಿತೆಂದು ಪೊಡಿಮೋನು ವಿಮಾನದಲ್ಲಿ ಕೂತು ಒಂದು ರೀತಿಯ ಷಂಡ ಸಿಟ್ಟಿನಿಂದ ತನ್ನನ್ನು ತಾನೇ ಹಳಿದನು.

ಇದ್ದಕ್ಕಿದ್ದಂತೆ ಊರಿಗೆ ಬಂದಿದ್ದ ಪೊಡಿಮೋನನ್ನು ಕಂಡು ಸಕೀನಾ ಆನಂದ ತುಂದಿಲಳಾದಳು. ವರ್ಷದ ನಂತರ ಪ್ರೀತಿಯ ಗಂಡನನ್ನು ಎದುರುಗೊಳ್ಳುವುದೆಂದರೆ ಯಾವ ಹೆಂಡತಿಗೆ ತಾನೆ ಖುಷಿಯಾಗದು ಹೇಳಿ? ಬಾಡಿ ಹೋಗಿದ್ದ ಅವಳ ಒಡಲ ಬಳ್ಳಿಗಳು ಮತ್ತೆ ಜೀವ ತಾಳಿದವು. ಒಣಗಿದ ಗಂಟಲಲಿ ಮತ್ತೆ ಪಸೆ ತುಂಬಿ, ಮಾತುಗಳು ಕಲ್ಪನೆಯ ಅನಂತ ಆಕಾಶೆದೆಡೆಗೆ ರೆಕ್ಕೆ ಹಚ್ಚಿದವು. ಗಂಡ ಸೌದಿಗೆ ಹಿಂದಿರುಗಿದ ಮರುದಿನದಿಂದ ಮಾಸಿದ ಬಣ್ಣದ ಬಟ್ಟೆಗಳಲ್ಲಿ ಅತ್ತೆಯ ಒರಟು ಮಾತುಗಳ ನಡುವೆ ನೀರಸವಾಗಿ ಕಳೆಯುತ್ತಿದ್ದವಳು, ಈಗ ಮತ್ತೆ ಹೊಸ ಬಟ್ಟೆಗಳಲ್ಲಿ, ಹೊಸ ಕನಸುಗಳ ಜೀವಧರಿಸಿ ಕಂಗೊಳಿಸತೊಡಗಿದಳು.

ಆದರೆ, ಪಕ್ಕನೆ ಹೊಸತು ಹಳತಾಗಿ ಬಿಡುತ್ತವೆ. ಕನಸುಗಳು ಸಣ್ಣಪುಟ್ಟ ಗೀರುಗಾಯಗಳ ಒರಟು ಮೈಯಾಗುತ್ತವೆ. ಎಷ್ಟು ಸಣ್ಣ ಅವಧಿಯಲ್ಲಿ ಈ ಕನಸುಗಳು ಹುಟ್ಟುತ್ತವೆ, ಸಾಯುತ್ತವೆ. ಹೊಸತು ಹಳತಾಗುತ್ತವೆ. ಆದರೆ, ಹಳತು ಮಾತ್ರ ಸದಾ ಹಳತೇ ಆಗಿರುತ್ತವೆ, ಎಷ್ಟು ವರ್ಷ ಸಂದರೂ!

ಪೊಡಿಮೋನು ಬರಿಗೈಯಲ್ಲಿ ಹಿಂದಿರುಗಿದ್ದಾನೆಂದು ತಿಳಿದಾಗ ಸಕೀನಾಳಿಗೆ ತೀವ್ರ ನಿರಾಶೆಯಾಯಿತು. ಆದರೂ, ತನ್ನ ಗಂಡ ಸಂಕಟದಲ್ಲಿದ್ದಾನೆಂದೂ, ಈ ಸಂದರ್ಭದಲ್ಲಿ ಅಲ್ಲದ ಮಾತು ಆಡಿ ಮನಸ್ಸು ನೋವಿಸುವುದು ಸರಿಯಲ್ಲವೆಂದು ಸಕೀನಾ ಆತನನ್ನು ಸಮಾಧಾನಿಸಿದಳು. “ಇನ್ನು ಆ ನರಕಕ್ಕೆ ಹೋಗುವ ಯೋಚನೆ ಬಿಡಿ. ಇಲ್ಲೇ ಏನಾದರೂ ಕೆಲಸ ಮಾಡಿದರಾಯಿತು” ಇತ್ಯಾದಿ ಇತ್ಯಾದಿಯಾಗಿ ಪೊಡಿಮೋನುವಿನ ಮನಸ್ಸನ್ನು ಗೆಲ್ಲುವ ಪ್ರಯತ್ನ ಮಾಡುತ್ತಿದ್ದಳು. ಆದರೆ, ಪೊಡಿಮೋನು ಮಾತ್ರ ಹೆಚ್ಚಾಗಿ ಯಾವುದರಲ್ಲೂ ಆಸಕ್ತಿ ಇಲ್ಲದವನಂತೆ ಇದ್ದು ಬಿಡುತ್ತಿದ್ದನು. ತನ್ನದೆಲ್ಲವೂ ಮುಗಿಯಿತು ಎಂಬಂತೆ. ಕೆಲವೊಮ್ಮೆ ಆತ “ಇಲ್ಲಿ ತನಗೆ ಒಳ್ಳೆಯ ಸಂಬಳದ ಕೆಲಸ ಸಿಗುತ್ತಿದ್ದರೆ, ತಾನೇಕೆ ಸೌದಿಗೆ ಓಡುತ್ತಿದ್ದೆ, ಹೇಳು. ಇನ್ನು ಮುಂದೆ ನಮ್ಮದು ಅರೆ ಹೊಟ್ಟೆಯ ಬದುಕು”ಎಂದು abstract-painting-sexನಿಟ್ಟುಸಿರು ಬಿಡುತ್ತಿದ್ದನು. ಸೌದಿಯಿಂದ ಹಿಂದಿರುಗುವಾಗ ತಾನು ಯಾವುದೇ ಉಡುಗೊರೆ ತರಲಿಲ್ಲವೆಂದು ಸಂಬಂಧಿಕರ್‍ಯಾರು ತನ್ನನ್ನು ನೋಡಲು ಬರುತ್ತಿಲ್ಲವೆಂದು ಹೆಂಡತಿಯೊಂದಿಗೆ ಹಳಹಳಿಸುತ್ತಿದ್ದನು. ಆತನ ಹತಾಶೆಯ ದನಿ, ಹಳಹಳಿಕೆ ಸಕೀನಾಳಿಗೆ ಸಿಟ್ಟು ತರಿಸುತ್ತಿದ್ದವು. “ಈ ಗಂಡಸರಿಗೆ ಈ ಲೋಕದಲ್ಲಿ ಎಷ್ಟೊಂದು ಸಾಧ್ಯತೆಗಳಿವೆ. ಅವರ ವಿಶ್ವ ಎಷ್ಟು ವಿಶಾಲವಾದುದು, ಅನಂತವಾದುದು. ಆದರೂ, ಯಾಕಿಷ್ಟೊಂದು ಹತಾಶೆ, ಹಳಹಳಿಕೆ ಅವರ ಲೋಕದಲ್ಲಿ ತುಂಬಿಕೊಂಡಿವೆ? ಸೋಲುಗಳನ್ನು ಗಂಡಸಿನಷ್ಟು ಭಯಪಡುವವನೂ ಯಾರು ಇಲ್ಲ. ಅವನೊಬ್ಬ ಮಹಾ ಹೇಡಿ. ಹೆಣ್ಣಿಗೆ ಈ ಸಾಧ್ಯತೆಗಳಿದ್ದಿದ್ದರೆ…”ಎಂದು ಆಕೆ ತನ್ನಷ್ಟಕ್ಕೆ ಯೋಚಿಸುತ್ತಿದ್ದಳು. ಅವಳ ಸೀಮಿತ ಅನುಭವಕ್ಕೆ ಗಂಡಸಿನ ಈ ವಿಶಾಲ ಲೋಕ ಧರ್ಮ, ರಾಜಕೀಯ, ಬಡವ, ಶ್ರೀಮಂತ ಇತ್ಯಾದಿ ಯಾವುದ್ಯಾವುದೋ ಸಿಕ್ಕುಗಳಲ್ಲಿ ಸಿಕ್ಕಿಕೊಂಡು ರಿಪೇರಿಯಾಗದಷ್ಟು ಹಾಳಾಗಿವೆ ಎಂಬುದು ಮಾತ್ರ ಹೊಳೆಯುತ್ತಿರಲಿಲ್ಲ. ಅವಳಿಗೆ ಹೊಳೆಯುತ್ತಿದ್ದುದು ಒಂದೇ, “ಪದೇ ಪದೇ ದಿವ್ಯಾನುಭೂತಿ ಸೂಸುವ ತನ್ನ ಕಣ್ಣುಗಳಲ್ಲಿ ಪ್ರೇಮದ ಕಣ್ಣು ನೆಟ್ಟು, ಆಳಕ್ಕಿಳಿದು ಹುಡುಕಿದರೆ ಗಂಡಸಿನ ಯಾವ ಸಮಸ್ಯೆಗೂ ಪರಿಹಾರ ದೊರೆಯುತ್ತವೆ. ಆದರೆ, ಈ ಪೆದ್ದ ಗಂಡಸರಿಗೆ ಬದುಕಿನ ಕೆಸರುಗದ್ದೆಯಲ್ಲಿ ಓಡುವುದೇ ತಿಳಿದಿಲ್ಲ. ಕಂಬಳದೆತ್ತುಗಳ ಬುದ್ಧಿಯೂ ಇವರಿಗಿಲ್ಲ.”

ಸಾಲಗಾರರ ಉಪಟಳ ಸಹಿಸಲಾರದೆ ಪೊಡಿಮೋನು ಹೆಂಡತಿಯ ಮೈಮೇಲಿದ್ದ ಚಿನ್ನ ಮಾರಿದನು. ಅದರಿಂದ ಸಾಲಗಾರರ ಉಪಟಳವೂ ನಿಂತಿತೆನ್ನುವಾಗ ಸಕೀನಾ ಬರಿಮೈಯಲ್ಲಿ ಜನರಿಗೆ ಮುಖ ತೋರಿಸುವುದು ಇಷ್ಟವಿಲ್ಲದೆ ಮದುವೆಮುಂಜಿಗೆ ಹೋಗುವುದನ್ನೇ ನಿಲ್ಲಿಸಿದಳು. “ವೃಥಾ ಅವರಿವರ ನಡುವೆ ಕೀಳರಿಮೆ ಯಾಕೆ? ಅಲ್ಲದೆ, ಈ ಹೆಂಗಸರ ಕಣ್ಣುಗಳೇ ಸರಿಯಿಲ್ಲ, ಅವು ಸದಾ ಚಿನ್ನತುಂಬಿದ ಕತ್ತುಗಳನ್ನೇ ಹುಡುಕುತ್ತಿರುತ್ತವೆ. ಬರಿದಾದ ಕತ್ತುಗಳನ್ನು ಕಂಡರೆ ಅವುಗಳಿಗೆ ಖುಷಿ”ಎಂದು ಅವಳು ಸಬೂಬು ನೀಡುತ್ತಿದ್ದಳು. ತಾನು ಬರಿದಾದೆನೆಂಬ ನೋವು ಅವಳ ಮಾತುಗಳಲ್ಲಿ ಇಣುಕುತ್ತಿದ್ದಂತೆ ಪೊಡಿಮೋನುವಿಗೆ ತೋರಿ, ಅವನನ್ನು ಗಾಢ ಖಿನ್ನತೆ ಆವರಿಸಿದವು. “ಇವಳ ಮಾತುಗಳಲ್ಲಿರುವ ‘ತಾನು ಬರಿದಾದೆನೆಂಬ ನೋವು’ಯಾವುದಕ್ಕೆ ಸಂಬಂಧಿಸಿದ್ದು?” ಅವನು ಯೋಚಿಸುತ್ತಿದ್ದನು, “ಬರಿಯ ಚಿನ್ನಕ್ಕಾಗಿ ಆಗಿರಲಿಕ್ಕಿಲ್ಲ? ಹಾಗಾದರೆ ಇನ್ನೇನನ್ನು ಇವಳು ಕಳೆದುಕೊಂಡಿರಬಹುದು? ಕನಸನ್ನೇ? ಯಾವ ಕನಸನ್ನು? ತಾಯಿಯಾಗುವ ಕನಸನ್ನೇ? ಒಳ್ಳೆಯ ಬದುಕು ಸಾಗಿಸುವ ಕನಸನ್ನೇ? ಅವರಿವರ ನಡುವೆ ಮೆರೆಯುವ ಕನಸನ್ನೇ? ಅಥವಾ ಇವೆಲ್ಲವನ್ನು ಒಳಗೊಂಡಿರುವ ಮತ್ತೊಂದು ಕನಸನ್ನೇ?”

ದಿನಗಳು ಕಳೆದಂತೆ ಮನೆಯಲ್ಲಿ ಅಕ್ಕಿ ಮುಗಿಯುತ್ತಾ ಬಂದು ಗಂಜಿಗೂ ತತ್ವಾರವಾಯಿತು. ಯಾವುದೋ ದೊಡ್ಡ ಕೆಲಸಕ್ಕಾಗಿ ಕಾದು ಕುಳಿತಿದ್ದ ಪೊಡಿಮೋನು ಈಗ ಕೂಲಿ ಕೆಲಸಕ್ಕೆ ಹೋಗುವುದು ಅನಿವಾರ್ಯವಾಯಿತು. ಮೊದ ಮೊದಲು ಪೊಡಿಮೋನುವಿಗೆ ಕೂಲಿ ಕೆಲಸಕ್ಕೆ ಹೋಗುವುದು ಮುಜುಗುರದ ಸಂಗತಿಯಾಗಿತ್ತು. ಸೌದಿಯಲ್ಲಿ ಎಂಥಾ ದರಿದ್ರ ಕೆಲಸ ಮಾಡುತ್ತಿದ್ದರೂ, ಊರಿಗೆ ಮರಳುವಾಗ ಸುಗಂಧ ಪೂಸಿಕೊಂಡು, ದೊಡ್ಡ ಆಫೀಸರನಂತೆ ಬಂದಿಳಿದು ಊರಿನವರಲ್ಲಿ ವಿಚಿತ್ರ ಭ್ರಮೆಯುಟ್ಟಿಸುತ್ತಿದ್ದರಿಂದ ಸೌದಿಯಿಂದ ಆಗಮಿಸುತ್ತಿದ್ದ ಯಾರೂ ಊರಲ್ಲಿ ಕೂಲಿ ಕೆಲಸ ಮಾಡುವುದನ್ನು ಇಷ್ಟಪಡುತ್ತಿರಲಿಲ್ಲ. ಅದು ತಮ್ಮ ಘನತೆಗೆ ಕಡಿಮೆಯೆಂದೇ ಭಾವಿಸುತ್ತಿದ್ದರು. ಕೆಲವು ದಿನಗಳ ಮಟ್ಟಿಗೆ ಪೊಡಿಮೋನುವಿಗೂ ಅಂತಹದ್ದೇ ರೋಗ ಬಡಿದಿತ್ತು. ಆತ “ಸೌದಿಯಲ್ಲಿ ತಾನು ಅರಬಿಯ ದಿನಸಿ ಅಂಗಡಿಯ ಮ್ಯಾನೇಜರ್ ಆಗಿದ್ದೆನೆಂದೂ, ಅಲ್ಲಿಯ ಜನರಿಗೆ ತಾನೆಂದರೆ ತುಂಬಾ ಗೌರವವೆಂದೂ, ಆದರೆ, ಇಲ್ಲಿಯ ಜನರು ಕೊಳಕರೆಂದೂ, ಮನುಷ್ಯರ ಬಗ್ಗೆ, ಅವರ ದುಡಿಮೆಯ ಬಗ್ಗೆ ಇಲ್ಲಿ ಯಾರಿಗೂ ಗೌರವವಿಲ್ಲವೆಂದೂ, ಇಲ್ಲಿ ಒಂದು ದಿನಸಿ ಅಂಗಡಿಯ ಮ್ಯಾನೇಜರಾಗಬೇಕಾದರೆ, ಎಷ್ಟು ಕಲಿತ್ತಿದ್ದಾನೆಂಬುದೇ ಮುಖ್ಯವೆಂದೂ, ಆದರೆ, ಸೌದಿಯಲ್ಲಿ ಆತ ಎಷ್ಟು ಚುರುಕಾಗಿದ್ದಾನೆ ಮತ್ತು ಹೇಗೆ ದುಡಿಯುತ್ತಾನೆ ಎಂಬುದೇ ಮುಖ್ಯವೆಂದೂ, ಸೌದಿಯಲ್ಲಿ ಮ್ಯಾನೇಜರಾಗಿದ್ದ ತಾನು ಇಲ್ಲಿ ಕೂಲಿ ಕೆಲಸಕ್ಕೆ ಹೋಗುವುದು ಸಾಧ್ಯವೇ ಇಲ್ಲವೆಂದು” ಊರ ಕಟ್ಟೆಯಲ್ಲಿ ಕೂತು ಬಡಾಯಿ ಕೊಚ್ಚುತ್ತಿದ್ದನು.

“ಮತ್ತೆ ಸೌದಿ ಎಂದರೆ ಸುಮ್ಮನೆಯೇ? ಅದಕ್ಕೇ ಅಲ್ಲವೇ ಕೇರಳ, ಕರ್ನಾಟಕ, ಬಿಹಾರದಿಂದ ಯುವಕರೆಲ್ಲಾ ಸೌದಿಗೆ ಓಡುವುದು”ಎಂದು ಒಬ್ಬ ಮುದುಕ ಪೊಡಿಮೋನುವಿಗೆ ಸಾಥ್ ನೀಡುತ್ತಿದ್ದನು.

“ಇಲ್ಲಿ ಕಲಿತವರಿಗೆ ಮಾತ್ರ ಒಳ್ಳೆಯ ಸಂಬಳ, ಒಳ್ಳೆಯ ಬದುಕು, ಆದರೆ, ಸೌದಿಯಲ್ಲಿ ಹಾಗೋ? ಅಲ್ಲಿ ಕಲಿಯದವರೂ ಹೋಗಿ ಸಂಪಾದಿಸುವುದಿಲ್ಲವೇ? ಮುತ್ತುನೆಬಿ ಓಡಾಡಿದ ಸ್ಥಳವಲ್ಲವೇ ಅದು. ಬರ್ಕತ್ತಿನ ನಾಡು. ಪುಣ್ಯ ಮಾಡಿರಬೇಕು ಅಲ್ಲಿಗೆ ಹೋಗಲು” ಎಂದು ಇನ್ನೋರ್ವ ಮುದುಕ ಹೇಳುತ್ತಿದ್ದಂತೆ ಅಲ್ಲಿ ಮಾತಿನ ರಂಗೇರುತ್ತಿದ್ದವು.

ಆದರೆ, ಪೊಡಿಮೋನುವಿಗೆ ತನ್ನ ಇತರ ಅನುಭವಗಳನ್ನು ಹಂಚಿಕೊಳ್ಳುವ ತವಕ. ಎಲ್ಲರೂ ಗರಬಡಿಯುವಂತೆ ಆತ ಹೇಳುತ್ತಿದ್ದನು, “ಎಷ್ಟು ಹಣ ಸಂಪಾದಿಸಿದರೆ ಏನು? ನಮ್ಮಂತಹ ಬಡಪಾಯಿಗಳು ಗತ್ತಿನ ಅರಬಿಗಳ ನಡುವೆ ಬದುಕುವುದು ಸಾಧ್ಯವೇ? ತರಕಾರಿ ತರಲೆಂದು ಮಾರುಕಟ್ಟೆಗೆ ಹೋದರೆ ತಮ್ಮ ಮನೆಯ ಮಾಳಿಗೆಯ ಮೇಲೆ ನಿಂತು ಅರಬಿಯ ಮಕ್ಕಳು ಹಾಳಾದ ಟೊಮಟೋ ಎಸೆದು ಕೇಕೆ ಹಾಕಿ ನಗುತ್ತಾರೆ. ಒಮ್ಮೆ ಒಬ್ಬ ಪಾಕಿಸ್ತಾನಿ ಸಿಟ್ಟಿನಿಂದ ಆ ಮಕ್ಕಳಿಗೆ ಎರಡೇಟು ಬಾರಿಸಿದ್ದಕ್ಕೆ ‘ಅರಬಿಯ ಮಕ್ಕಳಿಗೆ ಹೊಡೆಯುತ್ತಿಯೇನೋ ಹಿಂದ್’ ಎಂದು ಜರೆದು ಆತನನ್ನು ಜೈಲಿಗಟ್ಟಿದರು. ಅರಬಿಗಳಿಗೆ ಪಾಕಿಸ್ತಾನಿಯರೂ, ಭಾರತೀಯರು ಎಲ್ಲರೂ ಹಿಂದೂಗಳೇ”

“ಇರಬಹುದು, ಇರಬಹುದು ಕೆಟ್ಟವರು ಎಲ್ಲಾ ಕಡೆಯೂ ಇರುತ್ತಾರಲ್ಲವೇ?” ಮುತ್ತುನೆಬಿಯ ನಾಡನ್ನು ದೂರಲು ಇಷ್ಟವಿಲ್ಲದೆ ಒಬ್ಬ ಹೇಳಿದ.

“ಈಗಿನ ಅರಬಿಗಳು ಹೆಣ್ಣು ಹೆಂಡ ಎಂದು ಬಾಯಿ ಬಿಡುವವರಂತೆ. ಅಲ್ಲಿಯ ಯುವಕರು ದುಡಿಯುವುದೇ ಇಲ್ಲವಂತೆ. ಅದಕ್ಕೆ ನಿತಾಖತ್ ಅಂತ ಕಾನೂನು ತಂದು ಹೊರಗಿನವರನ್ನೆಲ್ಲಾ ಓಡಿಸಿ, ಅಲ್ಲಿಯ ಯುವಕರಿಗೆ ಕೆಲಸ ಕೊಡುವ ಹುನ್ನಾರ ಮಾಡಿದ್ದಾರೆ ಸೌದಿಯ ದೊರೆಗಳು. ಆದರೆ, ಇದೆಲ್ಲಾ ನಡೆಯುವಂತಹದ್ದೇ? ಮನುಷ್ಯನ ಆದಿಮ ಆಲಸ್ಯಕ್ಕೆ ದುರ್ಗತಿ ಕಾಣಿಸುವುದು ಕಾಗದದ ತುಂಡಿನ ಮೇಲಿನ ಯಾಂತ್ರಿಕ ವಾಕ್ಯಗಳಿಗೆ ಸಾಧ್ಯವೆ?”

“ಒಟ್ಟಾರೆ ಸರಳ ಜೀವನದ ಇಸ್ಲಾಮಿಗೂ ಭೋಗಿಗಳಾದ ಅವರಿಗೂ ಸಂಬಂಧವೇ ಇಲ್ಲ ಅನ್ನಬೇಕು. ಇಲ್ಲದಿದ್ದರೆ, ಅಷ್ಟೆಲ್ಲಾ ಸಂಪತ್ತಿದ್ದೂ ಅಮೆರಿಕದ ಎದುರು ನಾಯಿಯಂತೆ ಬದುಕಬೇಕಿತ್ತೇ ಅವರಿಗೆ.”

ಹೀಗೆ ಮಾತು ಒಂದರಿಂದ ಇನ್ನೊಂದಕ್ಕೆ ಜಿಗಿಯುತ್ತಿದ್ದಂತೆ ಅನ್ಯಮನಸ್ಕನಾಗುತ್ತಿದ್ದ ಪೊಡಿಮೋನುವಿಗೆ ಇದ್ದಕ್ಕಿದ್ದಂತೆ ತಾನೊಬ್ಬ ನಿರುದ್ಯೋಗಿ ಎಂಬ ವಾಸ್ತವ ಹೊಳೆದು ಖಿನ್ನನಾಗಿ ಅಲ್ಲಿಂದ ಕಾಲ್ಕೀಳುತ್ತಿದ್ದನು.

ಪೊಡಿಮೋನು ಮನೆಗೆ ಬರುತ್ತಿದ್ದಂತೆ ಅವನ ಅಮ್ಮ ಬೀಡಿ ಸೂಪನ್ನು ಮಡಿಲಲ್ಲಿಟ್ಟುಕೊಂಡೇ “ತನ್ನ ಮಗನೊಬ್ಬ ಪೋಲಿ ಅಲೆಯುತ್ತಿದ್ದಾನೆಂದೂ, ತಾನು ಸಾಯಲು ಬಿದ್ದಿರುವ ಮುದುಕಿ ಬೀಡಿ ಕಟ್ಟಿ ಮನೆಯ ಖರ್ಚುವೆಚ್ಚ ನೋಡಿಕೊಳ್ಳಬೇಕೆಂದೂ, ಅಕ್ಕಪಕ್ಕದ ಮನೆಯ ಹುಡುಗರೆಲ್ಲಾ ಚೆನ್ನಾಗಿ ದುಡಿದು ತಮ್ಮ ತಮ್ಮ ಮನೆಗಳನ್ನು ಬೆಲೆಬಾಳುವ ಅತ್ಯಮೂಲ್ಯ ವಸ್ತುಗಳಿಂದ ತುಂಬಿಸಿದ್ದಾರೆಂದೂ, drought-kelly-stewart-sieckಆದರೆ, ನಾವಿನ್ನೂ ಒಂದು ಹಿಡಿ ಅಕ್ಕಿಗಾಗಿ ಪರದಾಡುತ್ತಿದ್ದೇವೆಂದೂ, ಇದಕ್ಕೆಲ್ಲಾ ಪೊಡಿಮೋನುವಿನ ದುರ್ಬುದ್ಧಿಯೇ ಕಾರಣವೆಂದೂ, ತನ್ನ ಸೊಸೆ ಗಂಡನನ್ನು ಪೋಲಿ ಅಳೆಯ ಬಿಟ್ಟಿದ್ದಾಳೆಂದೂ” ಹಳಿಯುತ್ತಿದ್ದರು. ಇದರಿಂದ ಸಕೀನಾಳಿಗೆ ಸಿಟ್ಟು ಬರುತಿತ್ತು. ಆಕೆ, ಗಂಡನ ಮೇಲೆ ಹರಿಹಾಯುತ್ತಿದ್ದಳು. “ನನ್ನ ಮಾವ ನನ್ನನ್ನು ಮದುವೆ ಮಾಡಿಕೊಡುವಂತೆ ಕೇಳಿದರೂ, ಅಪ್ಪ ಸೌದಿಯಲ್ಲಿ ದುಡಿಯುತ್ತಿದ್ದಾನೆಂದು ನಿಮಗೆ ನನ್ನನ್ನು ಮದುವೆ ಮಾಡಿಕೊಟ್ಟರೆಂದೂ, ನನ್ನ ದುರ್ವಿಧಿ ನಾನು ಈ ನರಕದಲ್ಲಿ ಬದುಕಬೇಕಾಯಿತೆಂದೂ, ಮಾವನೊಂದಿಗಿದ್ದಿದ್ದರೆ ಸುಖವಾಗಿ ರಾಣಿಯಂತೆ ಬದುಕುತ್ತಿದ್ದೆನೆಂದೂ” ಪೊಡಿಮೋನುವಿನ ಮನಶ್ಶಾಂತಿಯನ್ನೇ ಕೆಡಿಸುತ್ತಿದ್ದಳು. ಮನೆಯೊಳಗಿನ ಕಿರಿಕಿರಿ ತಾಳಲಾರದೆ ಪೊಡಿಮೋನು ಕೆಲಸಕ್ಕಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದನು.

ಆದರೆ, ದೊಡ್ಡ ಸಂಬಳದ ಕೆಲಸಕ್ಕೆ ಈ ಊರಲ್ಲಿ ಕಾಯುವುದು ವ್ಯರ್ಥವೆಂದು ಬಹಳ ಬೇಗನೆ ಅರಿತ ಪೊಡಿಮೋನು ಮೇಸ್ತ್ರಿ ಮೋನಾಕರ ಜೊತೆ ಕೈಯಾಳಾಗಿ ಕೂಲಿ ಕೆಲಸಕ್ಕೆ ಹೋಗತೊಡಗಿದನು. ಅದರಿಂದ ಸಿಗುತ್ತಿದ್ದ ದಿನಗೂಲಿ ಇನ್ನೂರೋ, ಮುನ್ನೂರೋ ರೂ.ವನ್ನು ತಂದು ತಾಯಿಯ ಸಿಡಿಮಿಡಿಯನ್ನೂ ಗಮನಿಸದವನಂತೆ ಹೆಂಡತಿಯ ಕೈಗೊಪ್ಪಿಸುತ್ತಿದ್ದನು. ಆದರೆ, ಈ ಕೂಲಿ ಕೆಲಸ ಶಾಶ್ವತವೇನಾಗಿರಲಿಲ್ಲ. ಒಂದೆರಡು ವಾರ ಕೆಲಸವಿದ್ದರೆ ಇನ್ನೆರಡು ವಾರ ಆತ ಕೆಲಸವಿಲ್ಲದೆ ಕಾಲಯಾಪನೆ ನಡೆಸುತ್ತಿದ್ದನು. ಕೆಲಸ ಸಿಕ್ಕರೆ ಭಾಗ್ಯ ಎಂಬಂತೆ ಕಾಯುತ್ತಾ ಪೊಡಿಮೋನು ಕೆಲಸವಿಲ್ಲದ ದಿನ ಬಸ್ ನಿಲ್ದಾಣದಲ್ಲಿ ಕೂತು ಕನಸು ಕಾಣುತ್ತಾ ಕಳೆಯುತ್ತಿದ್ದನು. ಅದು ಅವನಿಗೆ ಒಂದು ಅಭ್ಯಾಸವೇ ಆಗಿ ಹೋಗಿ, ತನ್ನ ಅರೆಹೊಟ್ಟೆಯ ಬದುಕನ್ನು ಆತ ಸಹಜವಾಗಿಯೇ ಸ್ವೀಕರಿಸತೊಡಗಿದ್ದನು. ಸೌದಿಯ ದೊಡ್ಡ ಸಂಬಳದ ಕನಸು ಈಗ ಅವನಿಗೆ ಬೀಳುತ್ತಲೂ ಇರಲಿಲ್ಲ. ಅಂತಹ ಕನಸಿನಿಂದ ನೆಮ್ಮದಿ ಹಾಳಾಗುತ್ತದೆಯೇ ವಿನಾ ಬೇರೇನೂ ಉಪಯೋಗವಿಲ್ಲವೆಂದು ಅವನು ತಿಳಿದಿದ್ದ. ಆದ್ದರಿಂದ ಈಗೀಗ ಅವನಿಗೆ ತನ್ನ ಅರೆಹೊಟ್ಟೆಯ ಬದುಕಿನಿಂದ ಹೆಚ್ಚಿನ ಬೇಸರವೇನೂ ಆಗುತ್ತಿರಲಿಲ್ಲ.

ಆದರೆ, ಕಳೆದ ಒಂದು ವಾರದಿಂದ ತನ್ನ ಹೆಂಡತಿ ಉಡುಗೊರೆಗಾಗಿ ಪಟ್ಟು ಹಿಡಿದು ಕೂತಿರುವುದು ಕಂಡು ಅವನು ರೋಸಿ ಹೋಗಿದ್ದ. ಅಷ್ಟಕ್ಕೂ ಉಡುಗೊರೆಗೂ ಪ್ರೀತಿಗೂ ಏನೂ ಸಂಬಂಧ? ಎಂದು ಪೊಡಿಮೋನು ತಲೆಚಿಟ್ಟು ಹಿಡಿಯುವವರೆಗೂ ಯೋಚಿಸಿದ. ಆದರೆ, ಆತನಿಗೆ ಏನೂ ಹೊಳೆಯಲಿಲ್ಲ. “ಇವಳು ನಿಜವಾಗಿಯೂ ಉಡುಗೊರೆಗಾಗಿ ಪಟ್ಟು ಹಿಡಿಯುತ್ತಿದ್ದಾಳೋ ಅಥವಾ ತನ್ನ ಹಲ್ಕಿರಿಯುವ ಚಟದಿಂದ ರೋಸಿ ಹೀಗಾಡುತ್ತಿದ್ದಾಳೋ” ಎಂದು ಪೊಡಿಮೋನುವಿಗೆ ಶಂಕೆಯೂ ಆಯಿತು. ಈ ಶಂಕೆಯೊಂದಿಗೆ ಅವನಿಗೆ ತನ್ನ ಅಪ್ಪನ ಮೇಲಿನ ಲಾಗಾಯ್ತಿನ ಸಿಟ್ಟು ಬಲವಾದವು. ಅಪ್ಪನೆಂದರೆ ಅವನಿಗೆ ಮೊದಲೇ ಸಿಟ್ಟಿತ್ತು. ಅಪ್ಪ ತೀರಿ ಹೋದ ದಿನ ಅವನ ಕಣ್ಣಲ್ಲಿ ಒಂದು ಹನಿ ನೀರೂ ಉದುರಿರಲಿಲ್ಲ. ಯಾಕೆ ತನಗೆ ಅಪ್ಪನ ಮೇಲೆ ಇಷ್ಟೊಂದು ಸಿಟ್ಟೋ? ಎಂದು ಅವನು ಎಷ್ಟೋ ಸಲ ಯೋಚಿಸಿದ್ದರೂ ಸರಿಯಾದ ಕಾರಣ ಹೊಳೆದಿರಲಿಲ್ಲ. ಬಹುಷಃ ಅಪ್ಪ ತನ್ನ ಹಲ್ಕಿರಿಯುವ ಚಟವನ್ನು ತನಗೆ ದಾಟಿಸಿ ಹೋದರೆಂಬ ಕಾರಣಕ್ಕೆ ತನಗೆ ಸಿಟ್ಟಿರಬೇಕೆಂದು ಅವನಿಗೆ ಈ ಕ್ಷಣ ಅನಿಸಿತು. ಹಾಗೆ ಅನಿಸುವಾಗ ಅವನಿಗೆ ತನ್ನ ಅಪ್ಪ ಕಂಟ್ರಾಕ್ಟರ್ ಮೋನಾಕರ ಮನೆಗೆ ಸಂಬಳಕ್ಕಾಗಿ ಹಲ್ಕಿರಿಯುತ್ತಾ ಹೋಗುತ್ತಿದ್ದುದೂ, ಮೋನಾಕ ಸಂಬಳ ಕೊಡದೆ ಸತಾಯಿಸಿ ಅಟ್ಟಿದಾಗಲೂ ಹಲ್ಕಿರಿಯುತ್ತಲೇ ಹಿಂದಿರುಗುತ್ತಿದ್ದುದೂ ಅವನ ನೆನಪಿಗೆ ಬಂದವು. ಪ್ರತಿ ತಿಂಗಳ ಒಂದನೇ ತಾರೀಖಿನಂದು ಹಲ್ಕಿರಿಯುತ್ತಾ ಸಾಗುತ್ತಿದ್ದ ಈ ಹಲ್ಕಟ್ ಯಾನವೂ ಅವನಲ್ಲಿ ವಿಪರೀತ ಕೀಳರಿಮೆಯನ್ನು ಹುಟ್ಟಿಸಿದ್ದವು. ಆ ದಿನ ಹಲ್ಕಿರಿಯುತ್ತಾ ಹೋಗುತ್ತಿದ್ದ ಅಪ್ಪನನ್ನು ಕಂಡು ಶಾಲೆಯ ಕಂಡಿಯ ಪಕ್ಕ ಗುಂಪುಗೂಡಿ ನಿಂತು ಗೆಳೆಯರು ಗೇಲಿ ಮಾಡುತ್ತಿದ್ದರು. ಸರಾಗ ರಕ್ತ ಚಲನೆ ಇಲ್ಲದ್ದರಿಂದಲೋ ಏನೋ? ಬಿಳುಪಾಗಿದ್ದ ಅಪ್ಪನ ಒಂದು ತುಟಿ ಆಕಾಶದಲ್ಲೂ, ಮತ್ತೊಂದು ಭೂಮಿಯಲ್ಲೂ ಒಂದಕ್ಕೊಂದು ಸಂಬಂಧವಿಲ್ಲದಂತೆ ನಿಶ್ಚಲವಾಗಿರುತ್ತಿದ್ದವು. ನಡುವೆ ಶುಭಾ ಬೀಡಿಯ ಘಾಟು ಹೊಗೆಯಿಂದ ಕರ್ರಗಾಗಿ ಅಡ್ಡಾದಿಡ್ಡಿ ಬೆಳೆದ ಆ ಹಲ್ಲುಗಳು! ಅವುಗಳ ನೆನಪು ಅವನಲ್ಲಿ ಈಗಲೂ ಭಯ ಹುಟ್ಟಿಸುತ್ತವೆ. ಅವುಗಳು ಭೂಮಿ ಆಕಾಶಗಳ ನಡುವೆ ತ್ರಿಶಂಕುವಿನಂತೆ ಜೋತು ಬಿದ್ದಿರುವ ತನ್ನ ಇಂದಿನ ಬದುಕಿನ ಭಯಾನಕ ರೂಪಕದಂತೆ ಅವನಿಗೆ ಕಾಣಿಸುತ್ತಿದ್ದರಿಂದಲೋ ಏನೋ? ಅವನು ಅವುಗಳಿಂದ ಕಳಚಿಕೊಳ್ಳಲು ಪ್ರಯತ್ನಿಸುತ್ತಿದ್ದನು.

ಕೆಲವು ಸಲ ಪೊಡಿಮೋನು ಒತ್ತಾಯಪೂರ್ವಕವಾಗಿ ಹಲ್ಕಿರಿಯುವ ಚಟದಿಂದ ದೂರವಿರಲು ಪ್ರಯತ್ನಿಸುತ್ತಿದ್ದುದೂ ಉಂಟು. ಆದರೆ, ವಿಚಿತ್ರವೆಂಬಂತೆ ಪೊಡಿಮೋನುವಿನ ಈ ಒತ್ತಾಯಪೂರ್ವಕ ಪ್ರಯತ್ನವೇ ಒಂದು ಚಟವಾಗಿ ಅವನ ವ್ಯಕ್ತಿತ್ವದಲ್ಲೇ ಒಂದು ಗಂಭೀರ ಬದಲಾವಣೆಯಾದವು. ಅವನು ಸದಾ ಸಿಟ್ಟು ಬಂದವನಂತೆ ಮುಖ ಊದಿಸಿಕೊಂಡೇ ಇರ ತೊಡಗಿದನು. ಆದ್ದರಿಂದ ಹೆಚ್ಚಾಗಿ ಮೌನಿಯಾಗಿರುತ್ತಿದ್ದನು. ಇದರ ಹೊರತಾಗಿಯೂ ಜನರೊಂದಿಗೆ ಸಹಜ ಮಾತುಕತೆಯ ಸಂದರ್ಭದಲ್ಲಿ ಅವನು ಅವನಿಗರಿವಿಲ್ಲದಂತೆಯೇ ಹಲ್ಕಿರಿಯುತ್ತಿದ್ದನು. ಉದಾಹರಣೆಗೆ ಯಾರಾದರು ತನ್ನನ್ನೋ ಅಥವಾ ತನ್ನ ತಂದೆಯನ್ನೋ ತಾಯಿಯನ್ನೋ ನಿಂದಿಸಿದಾಗ ಪೊಡಿಮೋನು ಎದುರು ನಿಂತವರಿಗೆ ಸಂಪೂರ್ಣ ವಶವಾದವನಂತೆ ಏನನ್ನೂ ಹೇಳಲಾಗದೆ ಸುಮ್ಮನೆ ಹಲ್ಕಿರಿಯುತ್ತಾ ನಿಂತು ಬಿಡುತ್ತಿದ್ದನು. ನಂತರ ಇದು ಅವನನ್ನು ‘ತಾನು ಅವನ ಮಾತಿಗೆ ಹಾಗೆ ಹಲ್ಕಿರಿಯ ಬಾರದಿತ್ತೆಂದೂ, ಸಮಾ ಎರಡು ಹಿಂದಿರುಗಿ ಕೊಡಬೇಕಿತ್ತೆಂದೂ’ ಬಾಧಿಸುತ್ತಿದ್ದವು. ಇಂತಹ ಯೋಚನೆಗಳು ಅವನಲ್ಲಿ ಇನ್ನಿಲ್ಲದ ಕೀಳರಿಮೆ ಹುಟ್ಟಿಸುತ್ತಿದ್ದವು. ಸೌದಿಯಿಂದ ಕೆಲಸ ಕಳೆದುಕೊಂಡು ಬಂದ ಮೇಲಂತೂ ಅವನ ಈ ರೋಗ ಹೆಚ್ಚುತ್ತಾ ಹೋದವು. ಈ ಊರು ತನ್ನನ್ನು ವಿನಾಕಾರಣ ಹಲ್ಕಿರಿಯುವಂತೆ ಮಾಡುತ್ತಿದೆ ಎಂದೂ, ಆದ್ದರಿಂದ ಇದೊಂದು ದರಿದ್ರ ಊರೆಂದೂ ಅವನು ಕೆಲವೊಮ್ಮೆ ಊರಿನ ಮೇಲೆ ರೋಷ ಕಾರುತ್ತಿದ್ದನು. ಬೊಂಬಾಯಿಗೋ, ಬೆಂಗಳೂರಿಗೋ ಓಡಿ ಬಿಡಬೇಕೆಂದೂ ಅವನಿಗೆ ಅನಿಸುತ್ತಿದ್ದವು. ಈ ಅನಿಸಿಕೆ ತೀವ್ರವಾದಂತೆ ಊರುಬಿಡಲೊಲ್ಲದ ಅವನ ಮನಸ್ಸು ಸೂಕ್ಷ್ಮವಾಗಿ, ಊರಿನಲ್ಲಿ ಎಲ್ಲಿ ನೋಡಿದರೂ ಅವನಿಗೆ ಹಲ್ಕಿರಿಯುವವರೇ ಕಾಣಿಸುತ್ತಿದ್ದರು. ಇದರಿಂದ ಅವನಿಗೆ ಗೊಂದಲವಾಗುತ್ತಿದ್ದರೂ, “ಇಡೀ ಊರೇ ಹಲ್ಕಿರಿಯುವ ರೋಗ ಹತ್ತಿಸಿಕೊಂಡಿರುವಾಗ ಯಕಃಶ್ಚಿತ್ ನಾನೇನು ತಾನೆ ಮಾಡಬಲ್ಲೆ?” ಎಂದು ಸಮಾಧಾನಪಟ್ಟುಕೊಳ್ಳುತ್ತಿದ್ದನು.

ಆದ್ದರಿಂದ ಪೊಡಿಮೋನು, ಸಕೀನಾ ತನ್ನ ಮೇಲೆ ಕೋಪಿಸಿಕೊಂಡಿರುವುದು ತನ್ನ ಈ ಹಲ್ಕಿರಿಯುವ ಚಟದಿಂದ ಬೇಸತ್ತೇ ವಿನಾ ಉಡುಗೊರೆಗಾಗಿಯಲ್ಲ ಎಂದು ಗಟ್ಟಿಯಾಗಿ ನಂಬಿದನು. ಈ ಗಟ್ಟಿ ನಂಬಿಕೆಯ ಜೊತೆಗೆ ಹಾಗಾದರೆ ಈ ಊರಿನ ಎಲ್ಲಾ ಹೆಂಗಸರೂ ತಮ್ಮ ಗಂಡಂದಿರ ಜೊತೆ ಮುನಿಸಿಕೊಂಡಿರಬೇಕಲ್ಲ? ಎಂಬ ಪ್ರಶ್ನೆಯೂ ಅವನನ್ನು ಕಾಡಿದವು. ಆ ಪ್ರಶ್ನೆಯ ಬಿಸಿಯಿಂದ ತಪ್ಪಿಸಿಕೊಳ್ಳಲೆಂಬಂತೆ ಅವನು ‘ಗಂಡಂದಿರ ಜೊತೆಗೆ ಮುನಿಸಿಕೊಳ್ಳುವುದು ಹೆಂಗಸರಿಗೆ ಒಂದು ಪಾರಂಪರಿಕ ರೋಗ’ ಎಂದುಕೊಂಡನು.

ಆದರೂ, ಅವನಿಗೆ ತನ್ನ ಹೆಂಡತಿಗೆ ಏನಾದರು ಉಡುಗೊರೆ ಕೊಟ್ಟು ರಮಿಸಬೇಕೆಂದೂ, ಈ ಒಂದು ದಿನ ಅವಳು ತನ್ನೊಂದಿಗೆ ಮಾತನಾಡಿದರೆ ತನ್ನ ಇದುವರೆಗಿನ ಸಂಕಷ್ಟವೆಲ್ಲಾ ಕಳೆದು ಹೋಗುತ್ತದೆಂದೂ ತೀವ್ರವಾಗಿ ಅನಿಸಿದ್ದಂತೂ ಸುಳ್ಳಲ್ಲ. ಹಾಗೆ ಅನಿಸುತ್ತಿದ್ದಂತೆ, “ಉಡುಗೊರೆಗೂ ಪ್ರೀತಿಗೂ ಸಂಬಂಧವಿದೆ. ಅಂತರಂಗದ ಅಮೂರ್ತ ಪ್ರೀತಿಯನ್ನು ಭೌತ ವಸ್ತುವಿನ ಮೂಲಕ ವ್ಯಕ್ತಪಡಿಸುವುದು ಅಪ್ಯಾಯಮಾನವಾದುದೆಂದೂ, ಅದರಷ್ಟು ರೋಮಾಂಚನಕಾರಿಯಾದುದು ಬೇರೆ ಇಲ್ಲ”ವೆಂದು ಪೊಡಿಮೋನು ಮೊದಲ ಬಾರಿ ಅರ್ಥಮಾಡಿಕೊಂಡನು. ಆದ್ದರಿಂದ ತನ್ನ ಹೆಂಡತಿ ಉಡುಗೊರೆಗಾಗಿ ಒಂದು ವಾರಗಳ ಕಾಲ ಸಿಟ್ಟು ಮಾಡಿಕೊಂಡು ಮಾತು ಬಿಟ್ಟಿರುವುದು ಅಸಹಜವೇನಲ್ಲ ಎನಿಸಿತು ಅವನಿಗೆ. “ಪ್ರೀತಿಗಾಗಿ ಅವಳು ಇಷ್ಟೂ ಮಾಡದಿದ್ದರೆ ಹೇಗೆ? ಅವಳೂ ಮನುಷ್ಯಳೇ ತಾನೆ” ಎಂದು ಯೋಚಿಸುತ್ತಲೇ ಪೊಡಿಮೋನುವಿಗೆ ಅಂದು ಹೆಂಡತಿಯ ಮೇಲೆ ಎಂದಿಲ್ಲದ ಪ್ರೀತಿಯುಕ್ಕಿತು. ಆದರೆ, ಅತ್ಯಂತ ದುಃಖದ ಸಂಗತಿ ಎಂದರೆ, ಆ ದಿನ ಅವನ ಕಿಸೆಯಲ್ಲಿ ಐದು ಪೈಸೆಯೂ ಇರಲಿಲ್ಲ.

ಪೊಡಿಮೋನು ಪರಿಚಯವಿದ್ದವರ ಜೊತೆಗೆಲ್ಲಾ ತನಗೆ ಅರ್ಜೆಂಟಾಗಿ ಐನೂರು ರೂ.ಬೇಕೆಂದೂ, ತಾನೂ ಒಂದೆರಡು ವಾರದಲ್ಲಿ ಹಿಂದಿರುಗಿಸುತ್ತೇನೆಂದೂ ಅಂಗಲಾಚಿದನು. ಆದರೆ, ಅವನಿಗೆ ಯಾರಿಂದಲೂ ಹಣ ಸಿಗಲಿಲ್ಲ. ಅವನ ಗೆಳೆಯರಲ್ಲಿ ಹೆಚ್ಚಿನವರು ಪೊಡಿಮೋನುವಿಗೆ ಹಣ ಕೊಡುವ ಸ್ಥಿತಿಯಲ್ಲೇ ಇರಲಿಲ್ಲ. ಆದರೆ, ಕೊಂಚ ಸ್ಥಿತಿವಂತರಾಗಿದ್ದವರು, ಕೆಲಸವಿಲ್ಲದೆ ವಾರದ ಮೂರು ದಿನ ಪೋಲಿ ಅಳೆವ ಪೊಡಿಮೋನು ಹಣ ಹಿಂದಿರುಗಿಸಲಾರನೆಂದು ಭಯದಿಂದ ಕೊಡಲೊಪ್ಪಲಿಲ್ಲ. ಕೊನೆಯ ಪ್ರಯತ್ನವೆಂಬಂತೆ ಪೊಡಿಮೋನು ತನ್ನ ಮನೆಗೆ ಹಿಂದಿರುಗಿ ಅಮ್ಮನೊಂದಿಗೆ ಎಂದಿಲ್ಲದ ಪ್ರೀತಿ ವಾತ್ಸಲ್ಯವನ್ನು ನಟಿಸಿ ಕೇಳಿದನು. ಐಶಮ್ಮಾದರಿಗೆ ಮಗನ ಮೇಲೆ ಕನಿಕರart-2 ಮೂಡಿದರೂ, ಬಹಳ ಪ್ರಯತ್ನಪೂರ್ವಕವಾಗಿ “ತನ್ನ ಬಳಿ ಐದು ಪೈಸೆಯೂ ಇಲ್ಲ, ಇದ್ದರೂ ಕೊಡುವುದಿಲ್ಲ, ಮದುವೆಯಾದ ನಂತರ ನೀನು ಎಂದಾದರೂ ನಿನಗಿರಲಿ ಇದೋ ಅಮ್ಮ ಎಂದು ಒಂದು ಪೈಸೆಯಾದರೂ ಕೊಟ್ಟಿದ್ದಿದೆಯಾ? ಈಗ ನಾನೇಕೆ ನಿನಗೆ ಹಣ ಕೊಡಲಿ?” ಎಂದು ಖಡಾಖಂಡಿತವಾಗಿ ಹೇಳಿದರು. ಪೊಡಿಮೋನು ಒಂದು ಅಕ್ಷರವೂ ಮಾತನಾಡದೆ ನಿರಾಶಿತನಾಗಿ ಅಲ್ಲಿಂದ ಮರಳಿದ.

ಆ ರಾತ್ರಿಯಿಡೀ ಪೊಡಿಮೋನು ಮಲಗಲಿಲ್ಲ. ತನ್ನ ಅಮ್ಮನೊಂದಿಗೆ ಆಕೆಯ ತಮ್ಮಂದಿರು ಅಪರೂಪಕ್ಕೊಮ್ಮೆ ಕೊಡುತ್ತಿದ್ದ ಹಣ ಇದೆ ಎಂದೂ ಅದನ್ನು ಹೇಗಾದರು ಮಾಡಿ ಕದಿಯಬೇಕೆಂದು ಅರೆಗಣ್ಣಲ್ಲೇ ಯೋಚಿಸುತ್ತಿದ್ದನು. ಮಧ್ಯರಾತ್ರಿಯಾಗುತ್ತಿದ್ದಂತೆ ಅವನ ನಿರ್ಧಾರ ಕಠಿಣವಾಗಿ ಎದ್ದು ಕೂತ. ಅಮ್ಮ ಹಣವನ್ನು ಎಲ್ಲಿ ಅಡಗಿಸಿಡುತ್ತಿದ್ದರೆಂದು ಪೊಡಿಮೋನುವಿಗೆ ತಿಳಿದಿತ್ತು. ಬಾಯಿಕತ್ತರಿಸಿದ ಆ ದೊಡ್ಡ ಕ್ಯಾನಿನೊಳಗಡೆ ಕತ್ತಿನ ಮಟ್ಟ ಅಕ್ಕಿಯನ್ನು ತುಂಬಿಸಿ, ನಂತರ ಆಳದವರೆಗೂ ಗುಳಿ ತೋಡಿ ಅಮ್ಮ ಅಲ್ಲಿ ತನ್ನ ಹಣದ ಪರ್ಸನ್ನು ಇಟ್ಟು ಅಕ್ಕಿಯಿಂದ ಮುಚ್ಚಿ ಹಾಕುತ್ತಿದ್ದರೆಂಬುದು ಪೊಡಿಮೋನು ಅದು ಹೇಗೋ ಕಂಡು ಹಿಡಿದಿದ್ದ. ಆ ರಾತ್ರಿ ಪೊಡಿಮೋನು ಕಳ್ಳನಂತೆ ಎದ್ದು, ಕ್ಯಾನನ್ನು ಒಕ್ಕಿ, ಪರ್ಸ್ ತೆಗೆದು ಎಣಿಸುತ್ತಾನೆ, ಮೂರು ಸಾವಿರಕ್ಕೂ ಮಿಕ್ಕಿ ಹಣವಿದೆ! ಪೊಡಿಮೋನುವಿಗೆ ಈ ಅಮ್ಮ ಎಂಥಾ ಖಂಜೂಸು ಎನಿಸಿತು. ಆದರೂ, ಆತ ತನಗೆ ಬೇಕಾಗಿರುವ ಐನೂರು ರೂ.ಮಾತ್ರ ತೆಗೆದು ಉಳಿದದ್ದು ಹಾಗೆಯೇ ಅಕ್ಕಿಯ ನಡುವೆ ಹೂತಿಟ್ಟು ಹಾಸಿಗೆಗೆ ಮರಳಿದನು.

ಮರುದಿನ ಪೊಡಿಮೋನು ಬಸ್‌ನಿಲ್ದಾಣದಲ್ಲಿ ಕೂತು ಸಕೀನಾಳಿಗೆ ಏನು ಉಡುಗೊರೆ ಕೊಡುವುದೆಂದು ಸಾಕಷ್ಟು ಬಾರಿ ಯೋಚಿಸಿದ. ಸೀರೆ? ಚೂಡಿದಾರ? ಚಿನ್ನ? ಇತ್ಯಾದಿ ಯೋಚನೆಗಳು ಬಂದರೂ ಈ ಐನೂರು ರೂ.ಗೆ ಅವೆಲ್ಲಾ ಸಿಗುವುದಿಲ್ಲವೆಂದು ಅವನಿಗೆ ತಿಳಿದಿತ್ತು. ಆದ್ದರಿಂದ ಅವನು ಮತ್ತೂ ಮತ್ತೂ ಯೋಚಿಸುತ್ತಲೇ ಕೂತ. ಇದ್ದಕ್ಕಿದ್ದಂತೆ ಅವನಿಗೆ ಎರಡು ಜೊತೆ ಚಪ್ಪಲಿ ತೆಗೆದುಕೊಟ್ಟರೆ ಹೇಗೆ ಎನಿಸಿತು. ನಾನೂರಕ್ಕೆ ಒಂದು ಜೊತೆ ಚಪ್ಪಲಿಯಂತೂ ಸಿಗುತ್ತದೆ, ನೂರು ರೂ.ವನ್ನು ಹೇಗೂ ತನ್ನ ಬಳಿ ಉಳಿಸಿಕೊಳ್ಳಬಹುದು ಎಂಬ ಯೋಚನೆ ಬಂದೊಡನೇ ಅವನು ಖುಷಿಯಿಂದ ಎದ್ದು ನಿಂತನು.

ಆದರೆ, ಅಷ್ಟರಲ್ಲಿ ಅವನಿಗೆ ತನ್ನ ಹಿಂದೆ ಯಾರೋ ಏನನ್ನೋ ಎಳೆದಂತಾಗಿ ಗಾಬರಿಯಾದವು. ದೂರದಲ್ಲಿ ಒಬ್ಬ ಹುಡುಗ ಆವೇಗದಿಂದ ಓಡುತ್ತಿರುವುದು ಕಾಣಿಸಿತು. ಪೊಡಿಮೋನು ಅನುಮಾನದಿಂದ ತನ್ನ ಕಿಸೆಯತ್ತ ನೋಡಿದನು. ಅರೆ..! ಅಲ್ಲಿದ್ದ ಐನೂರು ರೂ.ಮಂಗಮಾಯ! ಪೊಡಿಮೋನುವಿಗೆ ಒಂದು ಕ್ಷಣ ಏನೂ ಅರ್ಥವಾಗಲಿಲ್ಲ. ಗರಬಡಿದು ನಿಂತುಬಿಟ್ಟನು. ನಂತರ ಇದ್ದಕ್ಕಿದ್ದಂತೆ ಎಚ್ಚರಗೊಂಡವನಂತೆ ‘ಕಳ್ಳ, ಕಳ್ಳ….’ ಎಂದು ಬೊಬ್ಬೆ ಹೊಡೆದು ಸುತ್ತಲ ಜನರನ್ನು ಕರೆದನು. ಜನರೆಲ್ಲಾ ಗುಂಪು ಗೂಡಿದರು. ಕೆಲವು ಯುವಕರು ಓಡುತ್ತಿದ್ದ ಹುಡುಗನ ಬೆನ್ನಟ್ಟಿ ಹಿಡಿದು ತಂದರು. ಇನ್ನೂ ಮೀಸೆ ಮೂಡದ ಹದಿನೈದು, ಹದಿನಾರರ ಮಾಸಿದ ಬಟ್ಟೆಯ, ತುಂಡು ಚಪ್ಪಲಿಯ ಹುಡುಗ! ಏದುಸಿರು ಬಿಡುತ್ತಿದ್ದ. ಕೈಕಾಲು ಭೀತಿಯಿಂದ ನಡುಗುತ್ತಿದ್ದವು. ಯುವಕರು ಆತನ ಜುಟ್ಟು ಹಿಡಿದು ತಾರಾಮಾರ ಬಡಿದರು. ಯಾರೋ ಕೆಲವು ಹಿರಿಯರು ಸಾಕು ಎಂದಾಗ ನಿಲ್ಲಿಸಿ ‘ತೆಗಿಯೋ ಹಣ’ ಎಂದು ದಬಾಯಿಸಿದರು. ಹುಡುಗ ಕಣ್ಣೀರು ಹಾಕಿದ. ಪೊಡಿಮೋನುವಿಗೆ ವಿಪರೀತ ಸಿಟ್ಟು ಬಂತು, ಮುನ್ನುಗ್ಗಿ ಆ ಹುಡುಗನ ಕಪಾಲಕ್ಕೊಂದು ಏಟು ಕೊಟ್ಟ. ಯುವಕರು, “ನೀವು ಅತ್ತ ಸರಿಯಿರಿ ನಾವು ನೋಡಿಕೊಳ್ಳುತ್ತೇವೆ” ಎಂದು ಪೊಡಿಮೋನನ್ನು ದೂರ ತಳ್ಳಿದರು. ನಂತರ ಹುಡುಗನತ್ತ ತಿರುಗಿ, “ಹಣ ತೆಗಿಯಿತಿಯೋ ಇಲ್ಲವೋ ಬೋಳಿ…..” artಎಂದು ಕೈಯೆತ್ತಿದಾಗ ಹುಡುಗ ಭಯದಿಂದ ತತ್ತರಿಸಿ ಹರಿದ ಪ್ಯಾಂಟಿನ ಕಿಸೆಯಿಂದ ಐನೂರು ರೂ.ತೆಗೆದು ಅವರ ಮುಂದಿಟ್ಟನು. ಯುವಕರು ಅದನ್ನು ಪೊಡಿಮೋನುವಿಗೆ ದಾಟಿಸಿದರು. ಪೊಡಿಮೋನು ಹಣವನ್ನು ಎಣಿಸಿ, ಒಂದು ಕ್ಷಣ ಯೋಚಿಸಿ ಒಂದು ಸುಳ್ಳು ಹೇಳಬೇಕೆಂದು ತೀರ್ಮಾನಿಸಿದನು. ಅವನಿಗೆ ಇನ್ನಷ್ಟು ಹಣ ಹೊಂದಿಸಬೇಕೆಂಬ ಆಸೆಯೇನೂ ಇರಲಿಲ್ಲ. ಆದರೆ, ಗತಿಗೆಟ್ಟ ತನ್ನಿಂದ ಹಣ ಕಸಿದುಕೊಂಡ ಈ ಹುಡುಗನಿಗೆ ಸರಿಯಾದ ಪಾಠ ಕಲಿಸಬೇಕೆಂಬ ಆಸೆಯಾಗಿ, “ಇದು ಬರೀ ಐನೂರು ಇದೆಯಲ್ಲಾ, ಇನ್ನೂ ಐನೂರು ಆಗಬೇಕಿತಲ್ಲಾ…!” ಎಂದು ಬಾಂಬ್ ಸಿಡಿಸಿದನು. ಈಗ ಹುಡುಗ ನಿಜಕ್ಕೂ ಗಾಬರಿ ಬಿದ್ದ. ಜನರ ದೃಷ್ಟಿ ತನ್ನತ್ತ ಬಿದ್ದೊಡನೇ, “ಇಲ್ಲ ಇಲ್ಲ, ಸುಳ್ಳು” ಎಂದೇನೋ ಗೋಗರೆದನು. ಆತನ ದನಿ ಗೊಗ್ಗರು ಗೊಗ್ಗರಾಗಿತ್ತು. ಯುವಕರು ಅವನ ದೇಹವನ್ನಿಡೀ ಒಂದೊಂದು ಕೈಗೆ ಹರಿದು ಹಂಚಿ ಜಾಲಾಡಿದರು. ಅಲ್ಲಿ ನಯಾಪೈಸೆಯೂ ದೊರೆಯದಾಗ ಅನುಮಾನದಿಂದ ಪೊಡಿಮೋನುವಿನತ್ತ ದುರುಗುಟ್ಟಿದರು. ಪೊಡಿಮೋನುವಿನ ಎದೆ ಧಸಕ್ಕೆಂದಿತು. ಆತ ತಾನು ಹೇಳುತ್ತಿರುವುದು ನಿಜವೆಂದ. ಆದರೆ, ಅಲ್ಲಿ ಅವನು ಸಾಲ ಕೇಳಿದ ಕೆಲವರು ಇದ್ದದ್ದರಿಂದ ಅವರು ಅವನನ್ನು ಇನ್ನಷ್ಟು ಅನುಮಾನಿಸಿ ನೋಡಿದರು. ನಿನ್ನೆ ಐನೂರು ರೂ. ಸಾಲ ಕೇಳಿದವನ ಬಳಿ ಇಂದು ಸಾವಿರ ರೂ. ಹೇಗೆ ಬಂತೆಂದು ತಲೆಕೆಡಿಸಿಕೊಂಡರು.

ದೂರದಲ್ಲಿ ಪೊಡಿಮೋನುವಿನ ತಾಯಿ ಓಡೋಡಿ ಬರುತ್ತಿದ್ದಳು. ಯಾರೋ ಒಬ್ಬ ಅತ್ತ ತಿರುಗಿದವನು ಎಲ್ಲರಿಗೂ ಹೇಳಿದ. ಎಲ್ಲರೂ ಅತ್ತ ತಿರುಗಿದರು. ಆಕೆ ಒಂದು ರೀತಿಯ ಆವೇಶದಿಂದಿದ್ದಳು. ಸಿಟ್ಟಿನಿಂದ ಬುಸುಗುಡುತ್ತಿದ್ದಳು. ಜನರ ಗುಂಪಿನ ನಡುವೆ ಬಂದವಳೇ ಸುತ್ತಲ ಜನರಿಗೆ ಮುಖಮಾಡಿ ನಿಂತು ಏದುಸಿರು ಬಿಡುತ್ತಾ, “ಈತನನ್ನು ನಂಬಬೇಡಿ, ಈ ಹಂಕು ತಾನು ಸತ್ತ ಮೇಲೆ ಸಮಾಧಿ ಕಟ್ಟುವುದಕ್ಕಾಗಿ ಕೂಡಿಟ್ಟಿದ್ದ ಹಣದಿಂದ ಐನೂರು ರೂ. ಕದ್ದಿರುವುದಲ್ಲದೆ, ಈಗ ಬೀದಿಯಲ್ಲಿ ನಿಂತು ತನ್ನ ಮತ್ತು ತನ್ನ ಕುಟುಂಬದ ಮಾನ ಮರ್ಯಾದೆ ಹರಾಜು ಹಾಕುತ್ತಿದ್ದಾನೆ’ ಎಂದು ಕೂಗಿದಳು. ಪೊಡಿಮೋನು ಅವಮಾನ ತಾಳಲಾರದೆ “ಸುಳ್ಳು ಸುಳ್ಳು..” ಎಂದು ಕಿರುಚಿದ. ಆದರೆ, ಯಾರೂ ಆತನನ್ನು ನಂಬಲಿಲ್ಲ. ಪೊಡಿಮೋನುವಿಗೆ ಅಳು ಬಂದವು. ಆತನ ನಿಸ್ತೇಜ ಕಣ್ಣಿನಿಂದ ಬಳ ಬಳನೆ ನೀರು ಸುರಿದವು. ಆ ಕ್ಷಣ ಪೊಡಿಮೋನುವಿಗೆ ತಾನೆಂಥ ದುಷ್ಟ ಸಂಕೋಲೆಯೊಳಗೆ ಸಿಕ್ಕಿಹಾಕಿಕೊಂಡಿದ್ದೇನೆಂದು ಅನಿಸಿತು. ತನ್ನ ಬಗ್ಗೆಯೇ ಅಸಹ್ಯ ಮೂಡಿತು. ಆದರೂ, ಅವನು ತನ್ನೆಲ್ಲಾ ದುಃಖವನ್ನು ಅದುಮಿಡಲು ಪ್ರಯತ್ನಿಸಿದ. ಆತನಿಗೀಗ ಹುಡುಗನ ನೆನಪಾದವು. ಆತನ ಹ್ಯಾಪೆ ಮೋರೆ ಕಂಡು ಕನಿಕರ ಮೂಡಿದವು. ಈ ಹುಡುಗನೂ ತನ್ನಂತೆ ದುಷ್ಟ ಸಂಕೋಲೆಯೊಳಗೆ ಸಿಕ್ಕಿಹಾಕಿಕೊಂಡಿದ್ದಾನೆ ಎನಿಸಿ, ಈ ಸಂಕೋಲೆಯಿಂದ ಆತನನ್ನೂ ಪಾರು ಮಾಡುವ art-1ಹೊಣೆಗಾರಿಕೆ ತನ್ನದು ಎಂದುಕೊಂಡ. ಅಷ್ಟರಲ್ಲಿ ಒಬ್ಬ ಯುವಕ ಪೊಡಿಮೋನುವಿನ ಬಳಿ ಬಂದು ನಿಂತು, “ಥೂ..ನಾಯಿ” ಎಂದು ಮುಖಕ್ಕೆ ಉಗಿದ. ಪೊಡಿಮೋನುವಿಗೆ ಸಿಟ್ಟು ತಡೆಯಲಾಗಲಿಲ್ಲ. ಆತ ಆ ಯುವಕನ ಎದೆಗೆ ಕಾಲಿನಿಂದ ಒದ್ದು, ನೆಲಕ್ಕೆ ಬೀಳಿಸಿದ. ಯುವಕ ಅನಿರೀಕ್ಷಿತವಾಗಿ ಬಿದ್ದ ಒಡೆತದಿಂದ ಚೇತರಿಸಿಕೊಳ್ಳಲಾಗದವನಂತೆ ನೆಲಕ್ಕೆ ಬಿದ್ದು ಹೊರಳಾಡಿದ. ಆತ ಹೊರಳಾಡಿದ ಜಾಗದಿಂದ ಧೂಳುಗಳೆದ್ದು ಆ ಇಡೀ ಪರಿಸರವೇ ಅಯೋಮಯವಾದವು. ಪೊಡಿಮೋನು ತಡಮಾಡಲಿಲ್ಲ. ತಬ್ಬಿಬ್ಬಾಗಿದ್ದ ಜನರು ವಾಸ್ತವಕ್ಕೆ ಮರಳುವ ಮೊದಲೇ ಇಲ್ಲಿಂದ ತಪ್ಪಿಸಿಕೊಳ್ಳಬೇಕೆಂದು ನಿರ್ಧರಿಸಿ, ದೂರದಲ್ಲಿ ಹ್ಯಾಪೆ ಮೋರೆ ಹಾಕಿ ನಿಂತಿದ್ದ ಹುಡುಗನ ಕೈಯಿಡಿದೆಳೆದು ನೆಲಕ್ಕೆ ಬಿದ್ದಿದ್ದ ಯುವಕನ ಎದೆ ತುಳಿದುಕೊಂಡೇ ಓಡಿದ. ಹುಡುಗ ಏನಾಗುತ್ತಿದೆ ಎಂದು ತಿಳಿಯುವ ಮೊದಲೇ ಪೊಡಿಮೋನು ಅವನನ್ನು ಬಹುದೂರಕ್ಕೆ ಒಯ್ದಿದ್ದ.

ತಮ್ಮ ಸುತ್ತಲೂ ಅನಿರೀಕ್ಷಿತವಾಗಿ ಜರುಗಿದ ಘಟನೆಯಿಂದ ತಬ್ಬಿಬ್ಬಾಗಿದ್ದ ಜನರೆಲ್ಲಾ ಆ ಇಬ್ಬರನ್ನೂ ಅಟ್ಟಿಸಿಕೊಂಡು ಓಡಿದರು. ಅವರ ಕಾಲುಗಳು ಬಲವಾಗಿ ತುಳಿದು ಹಿಂದಕ್ಕೆ ಬಿಟ್ಟು ಹೋದ ನೆಲದಿಂದ ದಟ್ಟ ಧೂಳುಗಳೆದ್ದು ಇಡೀ ಊರೇ ಅಸ್ಪಷ್ಟ, ಗೊಂದಲದಲ್ಲಿ ಸಿಕ್ಕಿಹಾಕಿಕೊಂಡವು. ದೂರದಲ್ಲಿ ನಿಂತು ನೋಡುತ್ತಿದ್ದವರಿಗೆ ಏನಾಗುತ್ತಿದೆ ಎಂದು ತಿಳಿಯದಂತೆ ಧೂಳು ಓಡುತ್ತಿದ್ದವರನ್ನೂ, ಓಡಿಸಿಕೊಂಡು ಹೋಗುತ್ತಿದ್ದವರನ್ನೂ ತನ್ನ ಕೋಟೆಯೊಳಗೆ ಮುಚ್ಚಿ ಹಾಕಿತ್ತು.

ಕನ್ನಡಪ್ರಭದಲ್ಲಿ ಹರಿಕುಮಾರ್ – ಹೀಗೊಂದು ಅನಿರೀಕ್ಷಿತ

ಗೋಪಾಲ್ ಬಿ. 

ಕನ್ನಡ ಪತ್ರಿಕೋದ್ಯಮದಲ್ಲಿ Hari kumar-picಕಳೆದ ಒಂದು ವಾರ ಅಪರೂಪದ ಸಂಗತಿಯೊಂದು ನಡೆಯಿತು. ಪ್ರಜಾವಾಣಿ ಪತ್ರಿಕೆಗೆ ಹೊಸ ದಿಕ್ಕು ಹಾಗೂ ಕರ್ನಾಟಕದ ಚಿಂತನಾವಲಯಕ್ಕೆ ಹೊಸದೊಂದು ದೆಸೆ ತೋರಿಸಿದ್ದ ಕೆ.ಎನ್.ಹರಿಕುಮಾರ್ ಅವರ ದೀರ್ಘ ಲೇಖನವೊಂದು ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರಕಟವಾಯಿತು. ಬರಹದ ಮೊದಲ ಕಂತು ಪ್ರಕಟವಾದಾಗ ಅನೇಕರಿಗೆ ಅಚ್ಚರಿಯಾದದ್ದಂತೂ ಸತ್ಯ. ಅದು ಅನಿರೀಕ್ಷಿತ.
ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಇತ್ತೀಚೆಗೆ ಮಾತನಾಡುತ್ತಾ ತುರ್ತು ಪರಿಸ್ಥಿತಿಯಂತಹ ಸನ್ನಿವೇಶ ಮತ್ತೆ ಬಂದೀತೇನೋ ಎಂಬ ಆತಂಕ ವ್ಯಕ್ತಪಡಿಸಿದ್ದರು. ಆ ಮಾತಿನ ಎಳೆಯೊಂದಿಗೆ ಆರಂಭವಾಗುವ ಹರಿಕುಮಾರ್ ಅವರ ಮಾತುಗಳು, ಈ ಹೊತ್ತು ಪ್ರಜಾಪ್ರಭುತ್ವ ಎದುರಿಸುತ್ತಿರುವ ಸವಾಲುಗಳನ್ನು ಗುರುತಿಸಿ
ದ್ದಾರೆ. ತುರ್ತು ಪರಿಸ್ಥಿತಿ ಹೇರಿಕೆ ತಂದುಕೊಡಬಹುದಾದ ಅಪಾಯಗಳನ್ನು ಮನಗಂಡು, ಕೇವಲ ಪ್ರಜಾಪ್ರಭುತ್ವದ ಮೇಲ್ಮೈ ರೂಪುರೇಷೆಗಳನ್ನು ಹಾಗೇ ಉಳಿಸಿಕೊಂಡು, ಇದೇ ವ್ಯವಸ್ಥೆ ಜನವಿರೋಧಿಯಾಗುವ ಅಪಾಯ ಇದೆ Hari Kumar.jpg - 2ಎಂದು ಎಚ್ಚರಿಸುವ ಹರಿಕುಮಾರ್ ಅವರು “ನಮ್ಮ ಸ್ವಾತಂತ್ರ್ಯ ಹಾಗೂ ಹಕ್ಕುಗಳನ್ನು ಹತ್ತಿಕ್ಕುವ, ಕಬಳಿಸುವ ಪ್ರಯತ್ನಗಳನ್ನು ಹಿಮ್ಮೆಟ್ಟಿಸಲು, ಸಾಮಾಜಿಕ ಅಭಿಪ್ರಾಯ ರೂಪಿಸುವ ಹಾಗೂ ಸಾಮಾಜಿಕ ಹೋರಾಟ ಕಟ್ಟುವ ಮೂಲಕ ಮಾತ್ರ ಸಾಧ್ಯ” – ಎಂದು ಸಲಹೆ ನೀಡುತ್ತಾರೆ.

Hari Kumar
ಅವರ ಈ ಲೇಖನ ಪ್ರಕಟವಾಗುವ ಕೆಲವು ವಾರಗಳ ಹಿಂದಷ್ಟೇ ಫೇಸ್ ಬುಕ್ ನಲ್ಲಿ ಹರಿಕುಮಾರ್ ಅವರು ಸಕ್ರಿಯ ಪತ್ರಿಕೋದ್ಯಮ ಹಾಗೂ ಸಾ ಮಾಜಿಕ ಹೋರಾಟಗಳಿಂದ ದೂರ ಉಳಿದಿರುವ ಬಗ್ಗೆ ಚರ್ಚೆಯಾಗಿತ್ತು. ಈ ನಾಡಿನ ಆಸ್ತಿಗಳೇ ಎನ್ನಬಹುದಾದ ಕೆಲ ಹಿರಿಯ ಪ ತ್ರಕರ್ತರು (ಜಗದೀಶ್ ಕೊಪ್ಪ, ದಿನೇಶ್ ಅಮಿನ್ ಮಟ್ಟು, ನಾಗೇಶ್ ಹೆಗಡೆ…ಇನ್ನೂ ಹಲವರು) ಆ ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಹರಿಕುಮಾರ್ ಮತ್ತೆ ಚಾಲ್ತಿಗೆ ಬರಬೇಕು. ಅವರು ಮಾತನಾಡಬೇಕು, ಬರೆಯಬೇಕು – ಎನ್ನುವ ಅಭಿಪ್ರಾಯ ಅಲ್ಲಿ ವ್ಯಕ್ತವಾಗಿತ್ತು. ಬಹುಶಃ ಆ ಚರ್ಚೆಯ ವಿವರಗಳು ಅವರಿಗೆ ಸಾಮಾಜಿಕ ತಾಣದ ಮೂಲಕ ತಲುಪಿದ್ದವೇನೋ, ಆ ಕಾರಣದಿಂದ ಅವರು ಸುದೀರ್ಘ ಲೇಖನವೊಂದನ್ನು ಬರೆದು ಕನ್ನಡ ಪ್ರಭಕ್ಕೆ ಕಳುಹಿಸಿದರೆ… ಗೊತ್ತಿಲ್ಲ.
ಆದರೆ, ಈ ಬೆಳವಣಿಗೆ ಆಶಾದಾಯಕ. ಕನ್ನsugataಡಪ್ರಭ ನವೆಂಬರ್ 1 ರಂದು ಕರ್ನಾಟಕದ 60 ಮಹನಿಯರನ್ನು ಆಯ್ಕೆ ಮಾಡುವಾಗ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಹರಿಕುಮಾರ್ ಅವರನ್ನು ಗುರುತಿಸಿದ್ದರು. ಅದಾದ ಬಳಿಕೆ ಕೆಲವೇ ದಿನಗಳಲ್ಲಿ ಲೇಖನ ಸರಣಿ ಆರಂಭವಾಯಿತು. ಇಂತಹದೊಂದು ಅಪರೂಪದ ಬೆಳವಣಿಗೆ ಘಟಿಸಲು ಕಾರಣರಾದ ಹರಿಕುಮಾರ್ ಹಾಗೂ ಕನ್ನಡಪ್ರಭ ಸಂಪಾದಕರಾದ ಸುಗತ ಶ್ರೀನಿವಾಸರಾಜು ಅವರು ಅಭಿನಂದನಾರ್ಹರು.

ಶಾಂತಿ ಕದಡುವವರ ಮಧ್ಯೆ ನೆಮ್ಮದಿಯನ್ನು ಕನವರಿಸುತ್ತಾ…

​ಎಸ್. ಸದಾನಂದ

ಕೆಲ ವರ್ಷಗಳ ಹಿಂದೆ ಮಧ್ಯಕರ್ನಾಟಕದ ಜಿಲ್ಲಾ ಕೇಂದ್ರವೊಂದರಲ್ಲಿ ನಡೆದ ಘಟನೆ ಇದು.

ಆಗ ನಿವೃತ್ತಿ ಅಂಚಿನಲ್ಲಿದ್ದ ಶಿಕ್ಷಕರೊಬ್ಬರು ಪ್ರತಿ ದಿನ ವಾಕಿಂಗ್ ನಲ್ಲಿ ಆ ಪತ್ರಿಕೆಯ ವರದಿಗಾರರನ್ನು ಭೇಟಿಯಾಗಿ ವಿಷ್ ವಿನಮಯ ಮಾಡಿಕೊಳ್ಳುತ್ತಿದ್ದರು. ಒಂದು ದಿನ pic 2ವರದಿಗಾರರನ್ನು ತಡೆದು ನಿಲ್ಲಿಸಿ “ದಯವಿಟ್ಟು ನಾಳೆಯಿಂದ ನಿಮ್ಮ ಪತ್ರಿಕೆ ನಮ್ಮ ಮನೆಗೆ ಹಾಕುವುದನ್ನು ನಿಲ್ಲಿಸಬೇಕು. ನಿಮ್ಮ ಪ್ರಸರಣ ವಿಭಾಗದವರಿಗೆ ತಿಳಿಸಲು ಸಾಧ್ಯವೇ” ಎಂದರು. ಮನವಿಯನ್ನು ಸ್ವೀಕರಿಸಿದ ವರದಿಗಾರ ಸಂಬಂಧಪಟ್ಟವರಿಗೆ ಮಾಹಿತಿ ತಲುಪಿಸಿ ಅವರ ಮನೆಗೆ ಪತ್ರಿಕೆ ಹೋಗುವುದು ನಿಂತಿತು.

 

ಮತ್ತೆ ಕೆಲ ದಿನಗಳ ನಂತರ ಅಂತಹದೇ ವಾಕಿಂಗ್ ಸಂದರ್ಭವೊಂದರಲ್ಲಿ ಭೇಟಿಯಾದ ವರದಿಗಾರರನ್ನು ಆ ಶಿಕ್ಷಕರು ಮತ್ತೆ ನಿಲ್ಲಿಸಿದರು. “ನಿಮ್ಮ ಪತ್ರಿಕೆಯನ್ನು ನಿಲ್ಲಿಸಿದ್ದಕ್ಕೆ ನಿಮಗೆ ಬೇಸರ ಆಗಿರಬಹುದು. ಆದರೆ ನಿಮ್ಮೊಂದಿಗೆ ಆ ನನ್ನ ತೀರ್ಮಾನಕ್ಕೆ ಕಾರಣವನ್ನು ತಿಳಿಸಿಬೇಕಿದೆ” ಎಂದು ಮಾತು ಮುಂದುವರಿಸಿದರು… “ನನಗೆ ಕಾಲೇಜು ಓದುವ ಮಗನಿದ್ದಾನೆ. ನಿಮ್ಮ ಪತ್ರಿಕೆಯಲ್ಲಿ ಪ್ರಕಟವಾಗುವ ಕೆಲ ಅಂಕಣಗಳು ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ಹಾಗೂ ನೆರೆಹೊರೆಯವರನ್ನು ಅನುಮಾನದಿಂದ ನೋಡುವ ಸನ್ನಿವೇಶ ಸೃಷ್ಟಿಯಾಗಲು ಪ್ರಚೋದನಕಾರಿಯಾಗಿವೆ. ಇನ್ನೂ ಎಳೆಯ ಹರೆಯದಲ್ಲಿರುವ ಮಗ ಅವನ್ನು ಓದಿ, ದಿಕ್ಕು ತಪ್ಪಿ ಮತಾಂಧನಾಗಿ ಯಾವುದೋ ಕೃತ್ಯದಲ್ಲಿ ಭಾಗಿಯಾಗಿ ಜೈಲುಪಾಲಾದರೆ ಏನು ಗತಿ? ನಾನೀಗ ನಿವೃತ್ತಿ ಅಂಚಿನಲ್ಲಿದ್ದೇನೆ. ನಿವೃತ್ತಿ ನಂತರ ನಾನು ನೆಮ್ಮದಿಯಾಗಿ ಮನೆಯಲ್ಲಿ ಮಕ್ಕಳ ಶ್ರೇಯೋಭಿವೃದ್ಧಿಯನ್ನು ನೋಡಿಕೊಂಡು ಇರಬೇಕೆಂದು ಬಯಸುತ್ತೇನೆ. ಜೈಲಿಗೆ ಹೋದ ಮಗನಿಗೆ ನಾನು ಬುತ್ತಿ ತೆಗೆದುಕೊಂಡು ಜೈಲಿನ ಬಾಗಿಲು ಕಾಯುವ ಕಾಯಕ ಬೇಡ..ಹಾಗಾಗಿ ನಿಮ್ಮ ಪತ್ರಿಕೆ ನಿಲ್ಲಿಸಿದೆ. ನೀವು ಬೇಸರ ಮಾಡಿಕೊಳ್ಳಬೇಡಿ,” ಎಂದು ಆ ಶಿಕ್ಷಕರು ಮುಂದೆ ಹೋದರು.

 

ಈ ಘಟನೆಯ ಪರಿಚಯ ಇರುವ ಅನೇಕರಿಗೆ ಇದು ಮತ್ತೆ ಮತ್ತೆ ನೆನಪಾಗಿ ಕಾಡುವುದುಂಟು. ಈ ಹೊತ್ತು ಮೂಡಬಿದ್ರೆಯಲ್ಲಿ ಕೊಲೆಯಾದ ಯುವಕ, ಮಂಗಳೂರಿನಲ್ಲಿ ಕೋಮು ಸಂಘಟನೆಗಳ ಪ್ರಚೋದನೆಗೆ ಮರುಳಾಗಿ ವಿವಿಧ ಗಲಭೆಗಳಲ್ಲಿ ಸಿಲುಕಿ ಜೈಲುಪಾಲಾಗಿರುವ ಹತ್ತಾರು ಯುವಕರು, ಯಾರದೋ ಜಯಂತಿ, ಮತ್ತಾರದೋ ಮೆರವಣಿಗೆ ಎಂದಾಕ್ಷಣ ಬೀದಿಗೆ ಬಂದು ಕಲ್ಲು, ಬಾವುಟ ಹಿಡಿದು ನಿಲ್ಲುವ ಮಂದಿಯನ್ನು ನೋಡಿದಾಗಲೆಲ್ಲಾ ಈ ಮೇಲಿನ ಘಟನೆ ನೆನಪಾಗದೆ ಇರದು.

girish-karnad

ಕೊಡಗಿನಲ್ಲಿ ಒಬ್ಬರು ಹತ್ಯೆಯಾದರೆ, (ಅದು ಯಾವ ಕಾರಣಕ್ಕೆ ಎಂಬುದು ಇನ್ನೂ ಸ್ಪಷ್ಟವಿಲ್ಲ) ಇದಕ್ಕೆ ಪ್ರತೀಕಾರ ತೆಗೆದುಕೊಳ್ಳುತ್ತೇವೆ ಎಂದು ಅಲ್ಲಿಯ ಶಾಸಕ ಹೇಳಿಕೆ ನೀಡುತ್ತಾರೆ. ಇಡೀ ರಾಜ್ಯದ ನಾಯಕರೆಲ್ಲಾ ಆ ಊರಿಗೆ ಹೋಗಿ ಬಾಯಿಗೆ ಬಂದ ಹಾಗೆ ಮಾತನಾಡಿ ಹಿಂಸೆಯನ್ನು ವ್ಯಾಪಕಗೊಳಿಸುತ್ತಾರೆ. ಏಕೆ ಶಾಂತಿ ಬೇಡ? ಅವರಿಗೆ ಅಶಾಂತಿ ನೆಲೆಸಿದಷ್ಟೂ ಲಾಭವೇ? ಎದುರಿಗಿದ್ದು ನೋಡಿದವರಂತೆ, ಕೆಳಗೆ ಬೀಳಿಸಿ ಕಲ್ಲಿನಿಂದ ಜಜ್ಜಿ ಕೊಂದರು ಎಂದು ಹೇಳಿಕೆ ನೀಡುತ್ತಾರೆ ಕೆಲವರು. ಇವರಿಗೇಕೆ ಜವಾಬ್ದಾರಿ ಬಾರದು?

ನಮ್ಮಲ್ಲಿರುವ ವೈವಿಧ್ಯತೆಯನ್ನು ಧಿಕ್ಕರಿಸುವ, ಶೋಷಣೆಯನ್ನು ಪೋಷಿಸುವ ಹಾಗೂ ಇನ್ನೊಂದು ಧರ್ಮದವರನ್ನು ಶತ್ರುವಂತೆ ಕಾಣುವ ಮನಸುಗಳ ಮಧ್ಯೆ ಬದುಕಬೇಕಿರುವುದನ್ನು ನನೆಸಿಕೊಂಡರೆ ಆತಂಕವಾಗುತ್ತದೆ. ಪುಟ್ಟ ಪುಟ್ಟ ಮಕ್ಕಳಿರುವ ಕೆಲ ಪೋಷಕರಂತೂ ಮಕ್ಕಳು ಎದುರಿಸಬೇಕಿರುವ ನಾಳೆಗಳ ಬಗ್ಗೆ ಸಾಕಷ್ಟು ಚಿಂತಿತರಾಗಿದ್ದಾರೆ. ಹೀಗೆ ಮಾಧ್ಯಮದ ಕೆಮರಾಗಳ ಮುಂದೆ, ಪತ್ರಿಕೆಗಳ ಅಂಕಣಗಳಲ್ಲಿ ಕಿಡಿ ಹಚ್ಚುವವರು ನೆಮ್ಮದಿಯಾಗೇ ಇರುತ್ತಾರೆ. ಸಂದರ್ಭ ಬಂದಾಗ ಪಕ್ಷಾಂತರ ಮಾಡಿ ‘ಕ್ರಾಂತಿಕಾರಿ’ ಪೋಸು ಕೊಟ್ಟು ಮ್ಯಾಗಜೀನ್ ಗಳಿಗೆ ಮುಖಪುಟದ ರೂಪದರ್ಶಿಯಾಗುತ್ತಾರೆ! ಆದರೆ ಬಲಿಪಶುವಾಗುವುದು ಅಮಾಯಕರು. ಬಡವರ ಮಕ್ಕಳು ಹಾಗೂ ಅನಾಥರಾಗುವವರು ವೃದ್ಧ ಪೋಷಕರು.

 

ಬುದ್ಧಿ ಹೇಳಬೇಕಾದ ಜೀವಿಗಳು ಪ್ರಶಸ್ತಿ, ಸನ್ಮಾನ, ಸ್ಥಾನಮಾನಗಳಲ್ಲಿ ಮೈಮರೆತು ಭಾಷಣಗಳಿಗೆ ಸೀಮಿತರಾಗಿ ಆಗಾಗ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಾರೆ. ಅಷ್ಟರ ಮಟ್ಟಿಗೆ ಅವರು ಆಕ್ಟಿವ್. ಇಲ್ಲವಾದಲ್ಲಿ ಯಾವುದೋ ಸಿನಿಮಾದ ವಿಲನ್ ಪಾತ್ರಗಳಲ್ಲಷ್ಟೇ ದರ್ಶನ. ಈ ದೇಶ ಪ್ರಪಂಚದಲ್ಲಿ ನಂಬರ್ 1 ಪಟ್ಟ ಪಡೆದುಕೊಂಡು ಏನೂ ಆBhagawanಗಬೇಕಿಲ್ಲ. ಮನುಷ್ಯನ ಮೆದುಳು ವಿಕಾಸ ಗೊಳ್ಳದೆ, ಅಭಿವೃದ್ಧಿ ಏನಾದರೇನು? ಬಿಹಾರದ ನೆಲದಲ್ಲಿ ನಿಂತು, ನೀವು ನಮಗೆ ಓಟು ಹಾಕಿ ಗೆಲ್ಲಿಸದಿದ್ದರೆ, ಪಾಕಿಸ್ತಾನದಲ್ಲಿ ಪಟಾಕಿ ಹಚ್ಚುತ್ತಾರೆ ಅಂತ ಒಬ್ಬ. ಮತ್ತೊಬ್ಬ ನಿಮ್ಮ ಮೀಸಲಾತಿಯನ್ನು ಅಲ್ಪಸಂಖ್ಯಾತರು ತಿನ್ನುತ್ತಿದ್ದಾರೆ ಎಂದು ಹಲ್ಲು ಮಸೆಯುತ್ತಾನೆ. ಸಂವಿಧಾನದ ಆಶಯಗಳಿಗೆ ಬದ್ಧನಾಗಿ ಕಾರ್ಯನಿರ್ವಹಿಸಿ ಹೀಗೆ ಓಟಿಗಾಗಿ ಸಮಾಜ ಒಡೆಯುವ ಮಾತನಾಡಿದವನ ಹೆಸರು ಪ್ರಧಾನಿ! ಈ ಕಡಿ-ಕೊಲ್ಲು ಮಾತುಗಳಿಗೆ ಸಾಮಾಜಿಕ ತಾಣಗಳಲ್ಲಿ ಜಯಕಾರಗಳು.

 

ಬುದ್ಧಿವಂತ, ವಿಚಾರವಂತ, ಓದಿಕೊಂಡಿರುವವನು, ಸಂಶೋಧಕ, ಪ್ರಗತಿಪರ – ಎನ್ನುವ ಪದಗಳನ್ನು ಅದೆಷ್ಟರ ಮಟ್ಟಿಗೆ ಹೀಯಾಳಿಸಲಾಗಿದೆ ಎಂದರೆ, ಯಾರೂ ತನ್ನನ್ನು ತಾನು ಹಾಗೆ ಪರಿಚಯ ಮಾಡಿಕೊಳ್ಳಲು ಹಿಂಜರಿಯುವಷ್ಟು. (ವಿಚಿತ್ರ ಎಂದರೆ ಇತ್ತೀಚೆಗೆ ಮಾನ್ಯತೆ ಪಡೆಯುತ್ತಿರುವ ಮತ್ತೊಂದು ಡೆಸಿಗ್ನೇಷನ್ – ಸಂಸ್ಕೃತಿ ಚಿಂತಕ!) ಇಂತಹ ಬೆಳವಣಿಗೆ ಅಧ್ಯಯನ ಎನ್ನುವ ಕ್ರಿಯೆ ಬಗ್ಗೆಯೇ ನವ ತರುಣರಲ್ಲಿ ನಿರ್ಲಕ್ಷ್ಯ ಉಂಟು ಮಾಡುವಷ್ಟು. There is no respect for scholarship. ಥ್ಯಾಂಕ್ ಗಾಡ್, ಇಂತಹವರ ಕಾಲದಲ್ಲಿ ಕುವೆಂಪು, ವಿವೇಕಾನಂದ ರಂತಹವರು ಬದುಕಲಿಲ್ಲ. ಇಲ್ಲವಾಗಿದ್ದಲ್ಲಿ ಅವರ ಒಂದೊಂದು ಮಾತು, ಹೇಳಿಕೆಗಳು ಟಿಆರ್ ಪಿ ಹಿಂದೆ ಬಿದ್ದಿರುವವರ ಬೆಳಗ್ಗೆ, ಮಧ್ಯಾಹ್ನ ಹಾಗೂ ಸಂಜೆಯ ಬುಲೆಟಿನ್ ಗಳಿಗೆ ಸರಕಾಗಿರುತ್ತಿದ್ದವು! ಮಾರನೆಯ ದಿನ ಅವರ ಗಡಿಪಾರಿಗೆ ಒತ್ತಾಯಿಸಿ ಬೀದಿಗಿಳಿಯುತ್ತಿದ್ದರು. ಕೆಲ ಮಾಜಿ ಮಂತ್ರಿ ಮಹಾಶಯರು ಅವರನ್ನು ಸಾರಸಗಟಾಗಿ ‘ಹುಚ್ಚ’ ರೆಂದು ಪ್ರಮಾಣ ಪತ್ರ ಕೊಡುತ್ತಿದ್ದರು.
ಇಂದು ಗಿರೀಶ್ ಕಾರ್ನಾಡ್ ಅವರನ್ನು ಅನೇಕ ರಾಜಕಾರಣಿಗಳು, ಸ್ವಾಮೀಜಿಗಳು ‘ಹುಚ್ಚ’ ಎಂದು ಕರೆದರು. ಆಯ್ತು ಅವರಿಗೆ ಸ್ವಾತಂತ್ರ್ಯ ಇದೆ, ಕರೆಯಲಿ. ಆದರೆ ಕರೆಯುವ ಮುನ್ನ ಒಂದೇ ಒಂದು ಬಾರಿ ಕಾರ್ನಾಡರ ‘ತುಘಲಕ್’ ನಾಟಕವನ್ನು ಓದಿದ್ದರೆ ಚೆನ್ನಾಗಿತ್ತಲ್ಲವೆ. ಆದರೆ, ಈಗ ಅಂತಹ ಮಾತನ್ನೇ ಹೇಳುವಂತಿಲ್ಲ. “ಅವನ್ಯಾವ ಸೀಮೆ ರೈಟರ್ ಅಂತ ಓದಬೇಕು…” ಎಂದು ಜಗಳಕ್ಕೆ ಬರುತ್ತಾರೆ. ಲೇಖಕರೊಬ್ಬರನ್ನು ಸಂದರ್ಶನಕ್ಕೆ ಕರೆದಾಗ, ಅವರ ಲೇಖನಗಳನ್ನು ಓದಿಕೊಂಡಿರಬೇಕಲ್ಲವೇ. ಆದರೆ ‘ಅಧ್ಯಯನದ ಅಗತ್ಯವೇ ಇಲ್ಲ’ ಎನ್ನುವವರ ಧಾಟಿ ಹೆಚ್ಚಾಗುತ್ತಿದೆ. ಕೆಲ ದಿನಗಳ ಹಿಂದೆ, ಸೃಜನಶೀಲ ಬರೆವಣಿಗೆಯಲ್ಲಿರುವವರ ವಾದವೂ ಹೀಗೇ ಆಗಿತ್ತು. ನಾನು ನನ್ನ ಹಿಂದಿನ ಲೇಖಕರನ್ನು ಓದಿಕೊಳ್ಳುವುದಿಲ್ಲ. ಅದರ ಅಗತ್ಯ ನನಗಿಲ್ಲ ಎನ್ನುವವರು ಭಾರೀ ಆತ್ಮವಿಶ್ವಾಸದಿಂದಲೇ ತಮ್ಮ ವಾದ ಮಂಡಿಸಿದರು.
ಆದರೆ ಈಗ ಸೃಜನೇತರ ಬರವಣಿಗೆ/ಮಾಧ್ಯಮದಲ್ಲಿ ತೊಡಗಿಸಿಕೊಂಡವರೂ ಅದೇ ಧಾಟಿಯಲ್ಲಿ ಮಾತಿಗಿಳಿಯುತ್ತಿದ್ದಾರೆ. ಕೆ.ಎಸ್. ಭಗವಾನ್ ಅವರ ವಿಚಾರದ ಬಗ್ಗೆ ತಕರಾರುಗಳಿರಲಿ. ಆದರೆ, ಆ ಮನುಷ್ಯ ತನ್ನ ವೃತ್ತಿಯ 30ಕ್ಕೂ ಹೆಚ್ಚು ವರ್ಷ ಈ ನೆಲದ ಸಾವಿರಾರು ಹುಡುಗರಿಗೆ ಶೇಕ್ಸ್ ಪಿಯರ್ ಪರಿಚಯಿಸಿದ, ಮನೋಜ್ಞವಾಗಿ ಪಾಠ ಮಾಡಿದವರು ಎನ್ನುವ ಕಾರಣಕ್ಕೆ ಕನಿಷ್ಟ ಗೌರವ ಬೇಡವೆ? ಒಬ್ಬ ‘ಏ ಭಗವಾನ್…’ ಎಂದು ಗದರಿದರೆ, ಮತ್ತೊಬ್ಬ “ನಿಮ್ಮಂ ತಹವರಿಗೇಕೆ ಭಗವಾನ್ ಎಂಬ ಹೆಸರು..” ಎಂದು ಪ್ರಶ್ನಿಸುತ್ತಾನೆ.
download
ಹಿಂಸೆಯಿಲ್ಲದ, ದ್ವೇಷ ಇಲ್ಲದ ನಾಳೆಗಳಿಗಾಗಿ ಈ ಹೊತ್ತಿನ ಯುವಕರಿಗೆ ಜಾತಿ, ವರ್ಣ, ಧರ್ಮದ ಆಚೆಗೆ ನಿಲ್ಲುವ ಒಂದಿಷ್ಟು ಆದರ್ಶ ವ್ಯಕ್ತಿತ್ವಗಳನ್ನು ಅಮೂಲಾಗ್ರವಾಗಿ ಓದಿಕೊಳ್ಳಿ ಎಂದು ಹೇಳುವ ಹಿರಿಯರು ಬೇಕಾಗಿದ್ದಾರೆ. ಟೀವಿ ಸ್ಟುಡಿಯೋಗಳಲ್ಲಿ ಕುಳಿತು ಏರಿದ ದಿನಯಲ್ಲಿ ಮಾತನಾಡುವವರಷ್ಟೇಬುದ್ಧಿವಂತರಲ್ಲ ಎನ್ನುವುದನ್ನು ಎದೆಗೆ ನಾಟುವಂತೆ ಹೇಳುವವರ ಅಗತ್ಯವಿದೆ.

ಪಾಕಿಸ್ತಾನದಿಂದ ಬಂದ ಪತ್ರ : ಗಾಂಧಿ ಜಯಂತಿ ಕಥಾಸ್ಪರ್ಧೆ 2015 – ಬಹುಮಾನಿತ ಕಥೆ

– ಮಹಾಂತೇಶ್ ನವಲ್ಕಲ್

ಕಾಶ್ಮೀರದ ಝೇಲಂ ನದಿಯ ಅನತಿ ದೂರದಲ್ಲಿನ ಈ ರಾತ್ರಿ ಎಂದಿನಂತೆ ಇರಲಿಲ. ಅಲ್ಲಿಯ ತೋಟಗಳ ಪ್ಲಮ್ ಪೀಚು ಹಣ್ಣುಗಳು ಕೊಳೆತು ಮೆಲ್ಲಗೆ ಮಧ್ಯವಾಗಿ ಆ ಗಂಧಗಾಳಿಯನ್ನು ಪರಿಸರದ ತುಂಬಾ ಹರಡಿದ್ದವು.ಆತನ ಮನಸ್ಸು 11ನೇ ಶತಮಾನದ ಕಾಶ್ಮೀರದ ಕವಿ ಕಲ್ಹಣ ಮತ್ತು ಆತನ ಗ್ರಂಥ “ರಾಜತರಂಗಿಣಿ” ಬಗ್ಗೆ ಯೊಚಿಸುತ್ತಿತ್ತು. ಅತನ ಈ ಕಾವ್ಯ ತನ್ನನ್ನು ದೇಶದ್ರೋಹದ ಅಪವಾದನೆಗೆ ತಳ್ಳುತ್ತದೆ ಎಂದುಕೊಂಡಿರಲಿಲ್ಲ.

ದೂರದ ಕಲ್ಬುರ್ಗಿಯಿಂದ ಬಂದ ಇವನಿಗೆ ಪಂಜಾಬಿನ ವಾಘ ಗಡಿ, ಜಮ್ಮುವಿನ ದೇಶ ವಿಭಾಂತರ ನಿಯಂತ್ರಣ ಮತ್ತು ಕಾಶ್ಮೀರದ ಈಗ ಇರುವ ಮಿಲಟರಿ ಕ್ಯಾಂಪ್ ಹೀಗೆ ತಿರಗಿಣಿಯಂತೆ ತಿರುಗಿ ತಿರುಗಿ ಬಂದುದ್ದು ಒಂದು ಕಡೆಯಾದರೆ, ದೇಶದ್ರೋಹದ ಅಪವಾದನೆಯ ದೀವಿಟಿಗೆಗೆ ಮುಖಕೊಟ್ಟು ಓಡಾಡುವದು ಮತ್ತೊಂದು ಕಡೆ. ಈ ಆರು ತಿಂಗಳ ನರಕ ಸದೃಶ ಕಾಲವನ್ನು ಹೇಗೆ ಕಳೆದೆನೆಂಬುವದೆ ಒಂದು ಪವಾಡ. ಇಲ್ಲಿಂದ ಊರಿಗೆ ಹೋಗುವ ಹಾಗಿಲ್ಲ. ಊರಿಗೆ ದೂರವುಳಿಯಿತು, ಜಮ್ಮುವಿನ ಗಡಿ ದಾಟುವಂತಿಲ್ಲ. ಇಲ್ಲಿ ವಿಚಾರಣೆ ಇದೆ ಮಾತುಗಳಿವೆ ಸಾಂತ್ವನಗಳಿವೆ, ಆದರೆ ಅಲ್ಲಿ ಅಂದರೆ ಪಾಕಿಸ್ತಾನದಲ್ಲಿ ಏನಿದೆ? ವಿಚಾರಣೆ ಎಂದರೆ ಸಾವಿನ ಮನೆಯ ಅಂಗಳಕ್ಕೆ ಒಯ್ಯುವದು ಎಂದರ್ಥ. ಅವನೆ ಹೇಳುತ್ತಿದ್ದ, ಮಗನೆ ನನ್ನ ತಾತ ತೆಗೆದುಕೊಂಡ ತಪ್ಪು ನಿರ್ದಾರಗಳಲ್ಲಿ ನಾವು ಭಾರತಬಿಟ್ಟು ಹೋಗಿದ್ದು ಒಂದು. abstract-art-sheepಅಲ್ಲಿರುವ ಶಾಂತಿ ನೆಮ್ಮದಿ ಇಲ್ಲಿ ಇರಲು ಸಾಧ್ಯವಿಲ್ಲ. ಭಾರತ ಎಂಥಹ ಸುಂದರ ದೇಶ ಎಂದು ವಾಘ ಗಡಿಯ ತನ್ನ ದೇಶಕ್ಕೂ ಸೇರದ ಅವನ ದೇಶಕ್ಕೂ ಸೇರದ ಭೂಮಿಯಲ್ಲಿ ನಿಂತು ಹೇಳುತ್ತಿದ್ದಾಗಲೆ ಪಾಕಿಸ್ತಾನದ ಬಾರ್ಡರ್ ಸೆಕ್ಯೂರಿಟಿ ಆಧಿಕಾರಿ ರೇಂಜರ್ ಎಂದು ಕರೆಯಿಸಿ ಕೊಳ್ಳುವ ಆ ದಾಂಡಿಗ ಚಾಚನ ಮುಖಕ್ಕೆ ರಪ್ಪಂತ ಗುದ್ದಿದ್ದ. ಇಂಥಹ ಗುದ್ದಿಕೆಗಳು ಬಹು ಸಹಜವೆಂಬಂತೆ ಜೀರ್ಣಿಸಿಕೊಂಡು ಅಂದಿನ ಕೆಲಸ ಕಾರ್ಯಗಳಲ್ಲಿ ಭಾಗವಹಿಸಿದ್ದನಲ್ಲ ಚಾಚ.

ಎಂಥಹ ನಾಟಕ ಎಂಥಹ ಉನ್ಮತ್ತ ಉಮೇದಿ, ವಾಘ ಗಡಿಯಲ್ಲಿ ಪರೇಡಿನ ನೆಪದಲ್ಲಿ ಕಾಲನ್ನು ಅವನ ಮುಖಕ್ಕೆ ಬಲತ್ಕಾರವಾಗಿ ಒಯ್ಯುವ ಉನ್ಮಾದ ಅವನದು. ಅದೆ ತೆರನಾದ ಇಂಥಹದೆ ಇವನ ಮುಖಕ್ಕೆ ಅವನು, ಅಣುಕು ಚಪ್ಪಾಳೆ ತಟ್ಟುವವರೆಲ್ಲ ಎರಡು ದೇಶದ ದೇಶಭಕ್ತರು. ಕೋತಿಕುಣಿತದಾಟಕ್ಕೆ ಚಪ್ಪಾಳೆ ಚಪ್ಪಾಳೆ ಚಪ್ಪಾಳೆ. ಭಾರತ ಎಂಥ ಚಂದದ ದೇಶ ಎಂದು ಮೇಲೆ ಹೇಳಿದ ಮಾತು ದೂರದ ಬೆಟ್ಟದ ಮಾತೋ ಇರಬಹುದು. ಅಲ್ಲಿಯ ಪ್ರಮಾಣ ದೊಡ್ಡದಾಗಿದ್ದರೆ ಇಲ್ಲಿಯದು ಅಲ್ಪ ಪ್ರಮಾಣವಾಗಿರಬಹುದು. ಆದರೆ ಚಾಚನ ಮಗಳು ಅಕ್ಕ ರಜಿಯಾ ಅವಳು ಚಾಚನಮೇಲೆ ಸಂಪೂರ್ಣ ಅವಲಂಬಿತಳಾಗಿದ್ದಳಲ್ಲ, ಈಗ ಅವಳ ಬದುಕು? ಆಕೆಯ ಆ ಏಳು ಮಕ್ಕಳು? ಕೊನೆಯ ಮಗು ನೂರ್ ಇನ್ನೂ ಒಂದು ವರ್ಷದ ಒಳಗಿನವನು. ಅದು ಅಲ್ಲದೆ ಅವಳಿಗೆ ಗರ್ಭಾಶಯದ ಕ್ಯಾನ್ಸರ್ ಎಂಬ ಮಹಾ ರೋಗ. ಈತನ ತಲೆದಂಡವಾದರೆ ಅವರನ್ನು ನೋಡಿಕೊಳ್ಳುವವರು ಯಾರು. ಇದಕ್ಕೆಲ್ಲ ಕಾರಣಪುರುಷ ತಾನಾದೆನೆ? ಮನಸ್ಸು ಮುದಡಿಕೊಂಡಿತ್ತು. ಈದಿನ ರಜೆಯ ದಿನವಾದುದ್ದರಿಂದ ಶುಭಾಂಕರ ಹೇಳಿದ್ದ . ಖುರೇಶಿಯವರ ಸೇಬಿನ ತೋಟಕ್ಕೆ ಹೋಗೋಣ ಅವರು ಬಹಳ ದಿನದಿಂದಲೂ ಕರೆಯುತ್ತಿದ್ದಾರೆ. ಆದರೆ ಈಗ ಸೇಬು ಬಿಡುವ ಕಾಲವಲ್ಲ, ಇವನಿಗೂ ಹೋಗಬೇಕೆಂದು ಅನ್ನಿಸಿದರೂ ಹೋಗಲಿಲ್ಲ. ಏಕೆಂದರೆ ಅವನ ಜೊತೆ ಜೋಯ್ ಸಹ ಹೋಗುವವನಿದ್ದಾನೆಂದು ಗೊತ್ತಾದ ತಕ್ಷಣವೆ ತಾನು ಹೋಗುವದು ತರವಲ್ಲ ಎಂದುಕೊಂಡ.

ಹಿಮ ಜುಮುರು ಮಳೆಯಂತೆ ಸುರಿಯುತ್ತಿತ್ತು. ತಣ್ಣನೆಯ ಈ ನಾಡಿನಲ್ಲಿ ತಮ್ಮಂತವರು ಯಾವಾಗಲೂ artಬೆಂಕಿಯುಗುಳುವ ಬಂದೂಕುಗಳನ್ನು ಹೆಗಲಿಗೇರಿಸಿಕೊಂಡು ಅಡ್ಡಾಡುವ ವೈಪರಿತಯಕ್ಕೆ ಬೆರಗಾಗಿತ್ತು ಮನ. ಆದರೆ ಈಗ ವಿಚಾರಣೆ ಎದರಿಸುವ ಸಮಯದಲ್ಲಿ ಬಂದೂಕು ಮುಟ್ಟುವ ಕರ್ಮ ಇಲ್ಲ. ಅವರ ಜೊತೆ ಇರಬಹುದು ನಗಬಹುದು ವಾಸಿಸಬಹುದು ಆದರೆ ಇಂದು ತನಗೆ ಡಾರ್ಮೆನ್ಸಿ ಪಿರಿಯಡ್. ವಿಚಾರಣೆ ವಿಚಾರಣೆ ವಿಚಾರಣೆ ಇಲ್ಲಿಯ ಕೋರ್ಟು ಸಹ ಮಿಲಟರಿಯ ದರ್ಪದಿಂದ ಹೊರತಾಗಿಲ್ಲ ಎನ್ನಿಸಿತು ಅವನಿಗೆ. ಎಂಥಹ ವಿಚಾರಣೆ ಅದು, ಕೈಕಟ್ಟಿಕೊಳ್ಳುವಂತಿಲ್ಲ ಸೀದಾ ನಿಲ್ಲುವಂತಿಲ್ಲ ಮೈಮರೆತು ನಿಲ್ಲುವಂತಿಲ್ಲ. ಕಲಾತ್ಮಕ ಸಿನೆಮಾದಂತಹ ಮಾತುಗಳು ಆಗೊಂದೊ ಈಗೊಂದು.

‘ನಮ್ಮ ದೇಶದ ರಕ್ಷಣ ವ್ಯವಸ್ತೆಯ ಮಾಹಿತಿ ಆ ದೇಶಕ್ಕೆ ರವಾನಿಸಿದ ಅಪಾದನೆ ನಿನ್ನ ಮೇಲಿದೆ”.

ತನ್ನ ಕ್ಯಾಂಪಿನಲ್ಲೆ ಎಷ್ಟು ಜನರಿರುತ್ತಾರೆ ಎನ್ನುವ ಸತ್ಯ ತನಗಿನ್ನು ಗೊತ್ತಿಲ್ಲದೆ ಇರುವಾಗ ಅಂತಹದ್ದು ನಾನು ಹೇಗೆ ಮಾಡಲಿ.

ಆ ವಿರೋಧಿ ರಾಷ್ಟದ ಸೈನಿಕನಿಗೂ ನಿನಗೂ ಏನು ಸಂಬಂಧ? ವಿಚಿತ್ರವೆನ್ನಿಸುತ್ತಿದೆ ಈ ಪ್ರಶ್ನೆ. ಅದೆ ವಾಘ ಗಡಿಯಲ್ಲಿ ಸಿಹಿ ಹಂಚಿದ್ದು ಭಾಯಿ ಭಾಯಿ ಎಂದದ್ದು ಎಲ್ಲವೂ ನಾಟಕವೇ.? ದಿನಾಲು ಮಾತಾಡುವದರ ಹಿಂದಿನ ಮುಖವಾಡಗಳು ಯಾಕೆ? ಅವನಲ್ಲಿ ತನ್ನಲ್ಲಿ ಮೂಡಿದ್ದು ವಿರೋಧವಾಗಲಿ ಅಥವಾ ಅಗಮ್ಯ ದೇಶಪ್ರೇಮದ ಹಿನ್ನಲೆಯ ಪೂರ್ವಾಗ್ರಹದ ಭಾವನೆಗಳಲ್ಲ. ಸಹಜ ಮನುಷ್ಯ ಮನುಷ್ಯರಲ್ಲಿ ಒಡಮೂಡಿದ ಭಾವಗಳು ಅವು. ಅಲ್ಲಿ ನಾನು ಭಾರತೀಯನಲ್ಲ, ಅವನು ಪಾಕಿಯಲ್ಲ. ನಾವು ಕೇವಲ ಸಾಮಾನ್ಯ ಮನುಷ್ಯರು ಮಾತ್ರ.

“ಸರ್ ಅಲ್ಲಿದ್ದವ ಸೈನಿಕ ಮಾತ್ರ ಉಗ್ರಗಾಮಿಯಲ್ಲ ಸೈನಿಕನಿಗೂ ಉಗ್ರಗಾಮಿಗೂ ಬಹಾಳ ವ್ಯತ್ಯಾಸವಿದೆ.” ಅಷ್ಟಕ್ಕೂ ನಾನು ಮಾತಾಡಿದ್ದು ಸೈನಿಕನ ಜೊತೆ ಮಾತ್ರ.

“ನಮಗೆ ತಿಳುವಳಿಕೆ ಹೇಳಲು ಬರಬೇಡ ಅಲ್ಲಿ ಇರುವವರೆಲ್ಲ ಉಗ್ರಗಾಮಿಗಳೆ. ಅವರಾರು ಸೈನಿಕರಲ್ಲ. ಇರಲಿ ಅತನಿಗೂ ನಿನಗೂ ಎನು ಸಂಬಂಧ ಹೇಳು.” ಏನು ಹೇಳುವದು ಸರ್ ಆತ ನನ್ನ ಚಾಚಾ. ಚಾಚಾನೆಂದರೆ ನಿಮ್ಮಪ್ಪನ ತಮ್ಮನೆ? ಇರಬಹುದು ಸಂಬಂಧಗಳ ಹೆಜ್ಜೆಗಳನ್ನು ನೀರಿನಲ್ಲಿ ಹುಡುಕಬಾರದು. ಅಜ್ಜಿ ಹೇಳುತ್ತಿದ್ದಳು ತಮ್ಮ ವಂಶದವನೊಬ್ಬನು ಕಲಬುರ್ಗಿಗೆ ಬಂದೇನವಾಜ ದರ್ಗಾ ನೋಡಲು ಬಂದ ದೆಹಲಿಯ ಸೂಫಿಯ ಒಬ್ಬನ ಪ್ರಭಾವಕ್ಕೆ ಒಳಗಾಗಿ ದೆಹಲಿಗೆ ಹೋದನಂತೆ, ಅದೇ ವಂಶದವರು ಮುಂದೆ ದೇಶ ವಿಭಜನೆಯಾದಾಗ ಪಾಕಿಸ್ತಾನಕ್ಕೆ ಹೋದರಂತೆ ಈಗಲೂ ಅವರ ಹೆಸರಿನ ಮುಂದೆ ನಿಷ್ಟಿ ಹೆಸರಿದೆ ಎಂದು ಅದು ನೆನಪಾಗಿ ಮಾತಾಡಲು ಬಾಯ್ತೆರೆದಾಗಲೆ ಆ ಮಿಲಿಟರಿ ಅಧಿಕಾರಿ “ಒಹೊಹೋ ಇದು ಧರ್ಮವನ್ನು ಮೀರಿದ ಜಾಲವಿರಬಹುದು. ಇಲ್ಲ ಆತನ ಹೆಸರು ಬಂದೇನವಾಜ. ಅದು ತನ್ನ ಊರಿಗೆ ಸಂಬಂಧಪಟ್ಟಿದ್ದು. ಇನ್ನೊಂದು ಆತನ ಮುಂದೆ ಇರುವ ಮನೆತನದ ಹೆಸರು ನಿಷ್ಟಿಯೆಂಬುದು.” ನನ್ನ ಮನೆತನಕ್ಕೆ ಸಂಬಂಧಪಟ್ಟದ್ದು ಎಂದು ಹೇಳಲು ಸಾಧ್ಯವಾಗಿದ್ದು ಮಾತ್ರ ಇಷ್ಟು.

“ಬದ್ಮಾಶ್ ದೇಶದ್ರೋಹಿಗಳೇ ನಮ್ಮ ಸರ್ಕಾರಗಳಿದ್ದರೆ ನಿಮ್ಮನ್ನು ಇಲ್ಲವಾಗಿಸಲು ಕಾರಣವೇ ಇರುತ್ತಿರಲಿಲ್ಲ.” ಆತನ ಆಸ್ಪೋಟಕ ಧ್ವನಿಗೆ ಬೆಚ್ಚಗೆ ಬೆರಗಾಗಿದ್ದ ಇವನು.

“ಮುಂಬೈ ಘಟನೆಯಲ್ಲಿ ನೀನು ಎಲ್ಲಿದ್ದೆ?”

“ಬಾಲಕನಾಗಿದ್ದೆ.”

ಅದು ಅಲ್ಲದೆ ಮುಂಬೈ ನೋಡಿದ್ದು ಕಡಿಮೆಯೆ ಅನ್ನುವಾಗಲೆ ಆ ಹಿನ್ನಲೆಯೂ ಪತ್ತೆ ಹಚ್ಚಬೇಕು ಎಂದು ವಿಚಾರಣೆ ಮುಗಿಸಿದ್ದರು. ಮತ್ತೆ ಪಾಕಿಸ್ತಾನದ ಯೋಚನೆ ಅವನಿಗೆ ಅಲ್ಲಿ ಹೀಗೂ ಇರಲು ಸಾಧ್ಯವಿಲ್ಲದೆ ಇರಬಹುದು. ಏನು ಏಕೆ ಹೇಗೆ ಏಲ್ಲಿ ಪ್ರಶ್ನೆಗಳು ಮುಗಿದ ನಂತರ ಶಿರಶ್ಚೇದನವೇ ಇರಬಹುದು. ಪಾಪ ಚಾಚ ಮಾಡಿದ ತಪ್ಪು ಯಾವುದು? ಗೆದ್ದಲು ತಿಂದ ಪರ್ಶಿಯನ್ ಭಾಷೆಯ ’ರಾಜ ತರಂಗಿಣಿ’ಯನ್ನು ತನಗೆ ಕೊಟ್ಟಿದ್ದು. ಅದೇ ದೇಶದ್ರೋಹವಾಯಿತಲ್ಲ. ಅಕ್ಬರ್ ಕಾಶ್ಮೀರದ ರಾಜನಿಗೆ ಹೇಳಿ ಅದನ್ನು ಪರ್ಶಿಯನ್ ಭಾಷೆಗೆ ಅನುವಾದಿಸಿದನಂತೆ. ಅದೇ ಪ್ರತಿ ಇದು. ಇಂದು ಇಲ್ಲಿ ತನಗೆ ಹಾಗು ಅಲ್ಲಿ ಚಾಚನಿಗೆ ದೇಶದ್ರೋಹದ ಪಟ್ಟ ಕಟ್ಟಿದೆ.

ಹಿಮವರ್ಷ ತನ್ನ ಶ್ವಾಸ ನಿಶ್ವಾಸದ ಮುಖಾಂತರ ಇಡೀ ದೇಹವನ್ನು ಸೇರಿದ್ದರೂ ಉಸಿರು ಮಾತ್ರ ಬೆಚ್ಚಗಿನ ಹಬೆಯನ್ನು ಉಗುಳುತ್ತಿತ್ತು. ಈ ಆರು ತಿಂಗಳು ಸಂಬಳವನ್ನು ತಡೆದಿದ್ದಾರೆ, ಈಗ ಶುಭಾಂಕರನ ಮೇಲೆಯೇ ತಾನು ಅವಲಂಬಿತನಾಗಿದ್ದೇನೆ. ತನ್ನ ತಾಯಿಗೂ ಹಣಕಳಿಸಬೇಕು. ಎಲ್ಲಿಂದ ಕಳಿಸಬೇಕು?

ಕ್ಯಾಂಪಿನಿಂದ ಅನತಿ ದೂರದಲ್ಲಿದ್ದ ರಾತ್ರಿಯ ಪಾರ್ಟಿಯಲ್ಲಿ ನಡೆದ ಘಟನೆಗಳು ಅವು ಕಪ್ಪು ಅಲ್ಲ ಬಿಳಪು ಅಲ್ಲ ಎನ್ನುವಂತೆ ಇದ್ದವು. ಕಪ್ಪಾದರೆ ದೇಶ ದ್ರೋಹಿಯಾಗುತ್ತಿದ್ದೆ. ಬಿಳುಪಿನದಾಗಿದ್ದರೆ ದೇಶಭಕ್ತನಾಗಿರುತ್ತಿದ್ದೆ. ಆದರೆ ಅಲ್ಲಿ ನಡೆದ ಘಟನೆಗಳು ತನ್ನನ್ನು ಒಬ್ಬ ಭಫೂನನ್ನಾಗಿ ಮಾಡಿದವಲ್ಲ? ಆ ಮೂಲಕ ರಾಷ್ಟ್ರದ್ರೋಹದ ಅಪವಾದನೆಗಳು ಹೀಗೆಯೇ ಜರಗಿದವಲ್ಲ? ನಗಬೇಕೆಂದರೆ ನಗಲು ಆಗುತ್ತಿಲ್ಲ ಅಳಬೇಕೆಂದರೆ ಅಳಲು ಆಗುತ್ತಿಲ್ಲ. ಹಾಗೆಯೇ ಟೆಂಟಿನಲ್ಲಿ ಮುದರಿ ಮಲಗಿದ. ದೂರದಲ್ಲಿ ಎಲ್ಲೋ ತಾತ್ಕಾಲಿಕ ಹಿಮ art-3ನಿರೋಧಕ ಟೆಂಟಿನ ಕೆಳಗೆ ನಾಲ್ಕು ಕಡೆ ಉರಿಯುತ್ತಿದ್ದ ಅಗ್ಗಿಶ್ಟಿಕೆಯ ಮಧ್ಯ ಬೇಯುತ್ತಿರುವವು ಎರಡು ಕೋಳಿಗಳು ಮತ್ತು ಎರಡು ನಾಯಿಗಳು. ಕೋಳಿಗಳು ಬಂಗಾರವರ್ಣದಿಂದ ಜ್ವಾಲೆಯ ಜೊತೆ ಇನ್ನೂ ತೇಜೋಪುಂಜವಾಗಿ ಬೆಳಗಿದರೆ ನಾಯಿಗಳು ಪಾಳು ಬಿದ್ದು ಅವಶೇಷವಾಗಿರುವ ಗುಡಿಯ ಮಧ್ಯದಲ್ಲಿರುವ ಶಿವಲಿಂಗದಂತೆ ಕಪ್ಪು ಕಪ್ಪಾಗಿ ಹೊಳೆಯುತ್ತಿದ್ದವು.

ಮಣಿಪುರದ ಜೋಯ್ ಸಿಂಗ್ ಅಗ್ಗಿಷ್ಠೆಕೆಯ ಮಧ್ಯ ಜೋತುಬಿದ್ದ ನಾಯಿಮಾಂಸದ ತುಣುಕುಗಳನ್ನು ಒಂದೋದೆ ಎಸಳುಗಳಾಗಿ ಬಿಡಿಸಿ ತಿನ್ನುತ್ತ ಜೋರಾಗಿ ಕೂಗಿದ. ’ಬದ್ಮಾಶ್ ನಿನ್ನ ಚಾಚನನ್ನು ನಾನೇ ಕೊಂದೆ. ಆ ದಿನ ನುಸಳಿಕೋರರು ಅವನ ಸಹಾಯದಿಂದಲೇ ತಂತಿ ಹಾರಿ ಬರುತ್ತಿರುವಾಗಲೆ ನನ್ನ ಬುಲ್ಲೆಟುಗಳು ನುಸಳಿಕೋರರ ಜೊತೆ ನಿನ್ನ ಚಾಚನನ್ನು ಸುಟ್ಟು ಚಿಂದಿ ಮಾಡಿದ್ದವು. ಅವನ ರಕ್ತಮಾಂಸ ಮಜ್ಜೆಗಳೆಲ್ಲವೂ ನನ್ನ ಮೇಲೆ ಮಸ್ತಕಾಭಿಷೇಕ ಮಾಡಿದಂತೆ ಸಿಡದಿದ್ದವು. ಒಂದು ವೇಳೆ ನೀನು ಹೀಗೆ ಚಿಂತಾಕ್ರಾಂತನಾಗುತ್ತಿ ಎಂದಾದರೆ ನನ್ನ ಮೇಲೆ ಬಿದ್ದಿದ್ದ ಮಾಂಸ ಮಜ್ಜೆಗಳನ್ನು ನಿನಗೆ ಕೊಡುತ್ತಿದ್ದೆ, ನೀನು ಅವುಗಳನ್ನು ಒಂದು ಮಡಿಕೆಯಲ್ಲಿ ಹಾಕಿ ಝೇಲಂ ನದಿಗೆ ಬಿಟ್ಟು ಶ್ರಾಧ್ಧ ಮಾಡಬಹುದಿತ್ತು.’ ಎಂಥಹ ಉಡಾಫೆ ಮಾತು.

ಮತ್ತೆ ರಮ್ ಓಡ್ಕಾಗಳ ಬುರುಡೆ ಬಿಚ್ಚುತ್ತ ಜೋಯ್,’ಬಾ ಬಾ ನಿನಗೆ ನಾಯಿ ಬಿರ್ಯಾನಿ ತಿನ್ನಿಸುತ್ತೇನೆ’ ಎಂದು ಕೂಗಿದ. ಅವನ ಜೊತೆ ಮಿಜೋರಾಮ್‌ನ ವಿಲಿಯಂ , ಮೇಘಾಲಯದ ಡೆಂಗ್, ಬಂಗಾಲದ ಶುಭಾಂಕರ್ ಎಲ್ಲರೂ ಇದ್ದರಲ್ಲ. ಜೋಯ್ ಇನ್ನೂ ಮಾತಾಡಿದ್ದು ಹಾಡಿದ್ದು ಆ ಹುಳಿಮಿಶ್ರಿತ ಸೇಬು, ಪ್ಲಮ್ ಪೀಚುಗಳ ಮದ್ಯ ಒಂದಾಗಿತ್ತು.

ನಮ್ಮಲ್ಲಿ ಓಬ್ಬನಿದ್ದಾನೆ ದೇಶದ್ರೋಹಿ
ಅವನು ಪಾಕಿಸ್ತಾನಿಯೊಬ್ಬನ ಸ್ನೇಹಿ
ಇವನಿಗೆ ಅವನದೇ ಚಿಂತೆ
ಅವನನ್ನು ಮಾಡಿದ್ದೇನೆ ಹರಿದ ಪಂಚೆ
ಇವನಿಗೆ ಅವನಾಗುತ್ತಾನೆ ಚಾಚಾ
ನಮ್ಮ ದೇಶಕ್ಕೆ ಇವನೆಷ್ಠು ಸಾಚ
ಕೊಲ್ಲುತ್ತೇನೆ ಇವನನ್ನು ಅವನಂತೆ
ಇದು ಒಂದು ಹುಚ್ಚರ ಸಂತೆ

ಎನ್ನುವ ಹಾಡು ಬೆಟ್ಟ ಗುಡ್ಡಗಳ ಮಧ್ಯ ಒಂದಾಗಿ ಪ್ರತಿಧ್ವನಿಸುತ್ತಿತ್ತು, ನೀರ್ಗಲ್ಲುಗಳು ಉರಳುತ್ತಿದೆಯೋ ಎನ್ನುವಂತೆ ಪ್ರತಿಧ್ವನಿ ಪದೆ ಪದೆ ಹಾಡುತ್ತಿತ್ತು. ದೂರದ ಬೆಟ್ಟಗಳು ರಜತಾದ್ರಿಯಂತೆ ಆ ಬೆಳ್ದಿಂಗಳಲ್ಲಿ ಹೊಳೆಯುತ್ತಿದ್ದವು. ಇದೆಲ್ಲ ನೆಡೆದಾಗ ತಾನು ಅಲ್ಲಿ ಇರಲಿಲ್ಲ ಕೂಡ. ತಾನು ಇದ್ದುದ್ದು ಅದೇ ಡೇರೆಯಲ್ಲಿಯೇ ಕಾಲು ಮಡಚಿಕೊಂಡು ಮಲಗಿದವನಿಗೆ ಅವರು ಹಾಡುಗಳ ಮೂಲಕ ಆಹ್ವಾನಿಸುವ ಉದ್ರೇಕಕಾರಿ ಆಹ್ವಾನ ಅಸಹ್ಯ ಮತ್ತು ಭಯ ಹುಟ್ಟಿಸಿತ್ತು. ಈ ಊರು ಕರ್ಪ್ಯೂ ಘೋಷಿಸಿಕೊಂಡು ನೇಣಿಗೇರಿದ್ದರೆ, ಸುತ್ತಮುತ್ತ ಹಳ್ಳಿಗಳು ಶಾಂತ ಸ್ಥಿತಿಯಲ್ಲಿ ಮಲಗಿದ್ದವು. ತಾನು ನಿರ್ಲಿಪ್ತನಾಗಿ ದೂರ ಉಳಿದರೂ ಅವರು ಕೇಳುವವರೆ ಅಲ್ಲ ಎಂದು ತನಗೂ ಗೊತ್ತು, ಹಾಡು ಹೇಳಿ ಹೇಳಿ ಅವರ ಗಂಟಲು ಶೋಷಣೆಯಯಿತೊ ಮೆಲಕು ನೋಯಿತೊ, ನೇರವಾಗಿ ತನ್ನನ್ನು ಕರೆಯಲು ದಾಂಗುಡಿ ಇಟ್ಟರು. ಅರೆ ಶರಣ ಬಾರೋ….. ಶರಣ್ ಬಾರೋ…..ಎನ್ನುವ ಒಕ್ಕರಲಿನ ದ್ವನಿಗಳುಮತ್ತೆ ಬಾರಲೋ ಬಾರಲೋ ಎನ್ನುವ ಘೋಷಗಳು ಒಂದೆರಡು ದ್ವನಿಗಳು ಮಾತ್ರ ಶರಣಕುಮಾರ್ ನಿಷ್ಟಿ ಬನ್ನಿ ಹೊರಗೆ ಎನ್ನುತ್ತಿದ್ದವು. ಬರುವದೋ ಬೇಡವೋ ಬಾಗವಹಿಸುವದೋ ಬೇಡವೋ? ಏಕೆಂದರೆ ಈ ವಿಕ್ಷಿಪ್ತ ಜೋಯ್ ತನ್ನನ್ನು ಮುಕ್ಕಿ ಮುಕ್ಕಿ ತಿನ್ನುವದರಲ್ಲಿ ಸಂದೇಹವಿಲ್ಲ. ಇಷ್ಟಕ್ಕು ಆ ಆಹ್ವಾನಿಸುತ್ತಿರುವ ದ್ವನಿಗಳು ಆಪೇಕ್ಷಣೀಯವೋ ಅಥವಾ ಅವಮಾನದ ಹಾದಿಗೆ ತಳ್ಳುವಂತಹವೋ? ಆದರೂ ಹೋಗಲೆ ಬೇಕಾಗಿತ್ತು. ತಾನು ಸಂಘ ಜೀವಿಯಲ್ಲವೆ. ಅವರಿಲ್ಲದೆ ಬದುಕಲು ಸಾಧ್ಯವೇ ಇಲ್ಲ. ಅಲ್ಲಿ ತನ್ನನ್ನು ಪ್ರೀತಿಸುವ ಶುಭಾಂಕರ ಇದ್ದನಲ್ಲ. ದೂರದ ಬೆಟ್ಟದ ಆ ಧಡಲ್ ಬಡಲ್ ಶಬ್ದಗಳು ನೀರ್ಗಲ್ಲುಗಳವೇ ಇರಬಹುದು. ಹೊರಗೆ ಹೋಗಲೇಬೇಕಾಗಿತ್ತು.

ಹೊರಬಂದ. ಅವರ ಚೀರಾಟ ಮುಗಿಲು ಮುಟ್ಟಿತ್ತು. ’ಶರಣ್ ಮಹಾರಾಜಕಿ ಜೈ ಬೋಲೊ ಶರಣ್ ಮಹಾರಾಜಕಿ ಜೈ ದೇಶದ್ರೋಹಿ ಶರಣ್ ಮಹಾರಾಜ ಕಿ ಜೈ.’

ಪಾಕಿಸ್ತಾನಿಯ ಜೊತೆ ಮಾತಾಡುವದು ಅಪರಾಧವಾದರೆ ಅವರನ್ನು ಕೊಲ್ಲುವದು ಧರ್ಮ. ಅಲ್ಲಿಯೂ ಅಷ್ಟೆ ಕೊಲೆಯಾದ ವ್ಯಕ್ತಿಗಳ ತಲೆ ಎಣಿಸಿ ಹೇಳಿದರೆ ಬಹುಮಾನ ಮೆಡಲ್ಲುಗಳುಗಳು. ಇನ್ನೂ ಕ್ರೂರವಾಗಿ ಕೊಂದರೆ ಆತ ದೇಶ ಭಕ್ತ. ಕೊಲೆಗಡುಕರಿಗೆ ಪುರಸ್ಕಾರ ಸಿಗುವದು ಇಲ್ಲಿಯೇ ಇರಬಹುದು. ತನ್ನ ತಾಯಿಯ ಊರು ಆಳಂದದ ಖಜೂರಿಯಲ್ಲಿ ಕನಿಷ್ಟ ವರ್ಷಕ್ಕೆ ಎರಡು ಹೆಣ ಬೀಳುತ್ತವೆ. ಆ ಎರಡು ಹೆಣಗಳ ಸಲುವಾಗಿ ವರ್ಷದವರೆಗೂ ಸಂಪೂರ್ಣ ಸೂತಕದ ಛಾಯೆ ಆ ಊರಲ್ಲಿ. ಆದರೆ ಇಲ್ಲಿ ಎಲ್ಲವೂ ವಿಲೋಮ ಸ್ಥಿತಿ. ವಿಜಯೋತ್ಸವ, ಸಾವಿನ ಮನೆಯಲ್ಲಿ ಸಂಭ್ರಮ ಪಡುವ ಗಳಿಗೆ ಇದು ಒಂದೇ ಇರಬಹುದು. ಎಂದು ಏನೇನೋ ಯೋಚನೆಗಳು, ಬೋಲೋ ಶರಣ ಮಹಾರಾಜಕಿ ಜೈ.

ಟೆಂಟಿನಿಂದ ಹೊರಬರಲೇಬೇಕಾಗಿತ್ತು ಇಲ್ಲದಿದ್ದರೆ ಜೋಯ್ ನ ಗುಂಪು ಸುಮ್ಮನಿರಬೇಕಲ್ಲ. ಹೊರಬಂದ ತಕ್ಷಣವೇ ಹೋ ಹೋ ಶರಣ್ ಆಯೇ….. ಶರಣ್ ಆಯೇ…….ಆಗಿಂದಾಗಲೇ ದೂರದ ಕಂಟಿಯಲ್ಲಿದ್ದ ಅದೊಂದು ಸೇಬಿನ ಮರದ ದಿನ್ನೆಯನ್ನು ಉರಳಿಸಿಕೊಂಡು ಬಂದು ಅಲ್ಲಿ ನೆಡಲಾಯಿತು. ಅದರ ಮೇಲೆ ತನ್ನನ್ನು ಬಲಾತ್ಕಾರವಾಗಿ ಕೂಡಿಸಲಾಯಿತು. ಶರಣ್ ಗೆ ಈಗ ಸನ್ಮಾನ ಕಾರ್ಯಕ್ರಮ ಎಂದು ಹೇಳಲಾಯಿತು. ಕಾರ್ಯಕ್ರಮಕ್ಕೆ ಮುಂಚಿತವಾಗಿ ಮಾತಾಡಬೇಕಲ್ಲ. ಪ್ರಾಸ್ತಾವಿಕ ಅದು ಮಾತಾಡುವವರು ಮತ್ಯಾರು? ಅದೇ ಜೋಯ್‍ಸಿಂಗ್. ಇಂದು ಬಹಳ ಸಂತೋಷದ ದಿನ. ಏಕೆಂದರೆ ನನ್ನ ಸ್ನೇಹಿತರೊಬ್ಬರು ಬಹುವಾಗಿ ಒಂದು ಮಹತ್ಕಾರ್ಯವನ್ನು ಮಾಡಿದ್ದಾರೆ. oil-paintingಅವರನ್ನು ಈ ದೆಸೆಯಿಂದ ಹೇಗೆ ಸನ್ಮಾನಿಸಬೇಕು ತಿಳಿಯುತ್ತಿಲ್ಲ. ಆದರೂ ಅವರಿಗೆ ಸನ್ಮಾನಿಸಿ “ನಿಶಾನಿ ಏ ಪಾಕಿಸ್ತಾನ” ಕೊಟ್ಟು ಗೌರವಿಸಲಾಗುವದು ಏಕೆಂದರೆ ಅವರು ಪಾಕಿಸ್ಥಾನಕ್ಕೆ ಬೇಕಾದ ವ್ಯಕ್ತಿ ಎಂದು ಹೇಳಿದ. ಎಲ್ಲರೂ ಚಪ್ಪಾಳೆ ತಟ್ಟಿದರು ನಗುತ್ತಲೆ ಓಹೋ….. ಎಂದು ಸಂಭ್ರಮಿಸಿದರು. ಒಂದು ತಟ್ಟೆಯಲ್ಲಿ ಫರ್ನಗಿಡದ ಎಲೆಗಳಿಂದ ಮಾಡಿದ ಹಾರ ಮತ್ತು ಪೀಚ್ ಹೂಗಳ ಗುಚ್ಚ ಮತ್ತು ಅದರ ಜೊತೆ ನಾಯಿಯ ಎಲಬುಗಳನ್ನು ಆ ತಟ್ಟೆಯಲ್ಲಿ ಇಟ್ಟು ತನಗೆ ಕೊಡಮಾಡಿದರು . ರಭಸವಾಗಿ ನುಗ್ಗುವ ಗಾಳಿಗೆ ಸಣ್ಣ ಸಣ್ಣ ಹಿಮಹಳ್ಳುಗಳು ಟೆಂಟಿನೊಳಗೆ ನುಗ್ಗುತ್ತಿದ್ದವು. ಸನ್ಮಾನಕ್ಕೆ ಪ್ರತಿಯಾಗಿ ತಾನು ಮಾತಾಡಲೇಬೇಕು ಎಂದು ಎಲ್ಲರು ಪಟ್ಟು ಹಿಡದಿದ್ದರು ಏನು ಮಾತಾಡಬೇಕು? ಮಾತಾಡಲು ಏನಿದೆ ದೇಶದ್ರೋಹಿಯ ಬಾಯಿಂದ ಯಾವ ಮಾತು ಕೇಳಲಿದ್ದಿರಿ ಎನ್ನಬೇಕು ಎಂದುಕೊಂಡ. ಆದರೆ ಮಾತಾಡಲೇಬೇಕು ಎಂದು ಶುಭಾಂಕರನೊಡಗೂಡಿ ಎಲ್ಲರೂ ಒತ್ತಾಯಿಸಿದಾಗ ಮಾತಾಡಬೇಕೆನಿಸಿದರೂ ಮಾತಾಡಲಿಲ್ಲ. ಹಾಡಾದರು ಹೇಳು ಎಂದು ಎಲ್ಲರೂ ಒತ್ತಾಯಿಸುವವರೆ ಹಾಡು ಹಾಡಲು ತಾನೇನು ಗಾಯಕನಲ್ಲ. ಆದರೂ ಅವರು ಕೇಳುವುದಿಲ್ಲ ಕೂಡ ಹಾಡು ಶುರು ಮಾಡಿದ.

ಬಾ ಬಾ ಗಿಳಿಯೇ ಬಣ್ಣದ ಗಿಳಿಯೇ
ಹಸಿರು ಮೂಗಿನ ಚಂದದ ಗಿಳಿಯೇ
ಹಣ್ಣನು ಕೊಡುವೆನು ಬಾ ಬಾ ಬಾ

ಒಂದು ಪಲ್ಲವಿ ಮುಗಿದಾಕ್ಷಣವೇ ಜೋಯ್ ಜೋರಾಗಿ ಹಾಡಲು ಆರಂಭ ಮಾಡಿದ.

ಬಾಯ್ ಬಾಯ್ ಗಳಿಯೇ
ಬಾಣದ ಗಳಿಯೇ ಚಾಚಾ ಗಳಿಯೇ ಶರಣಗಳಿಯೇ ಚಾಚ ಶರಣ್ ಗಳಿಯಾ ಶರಣ್ ಚಾಚಾ ಶರಣ .. ಹಾಸ್ರ ಶರಣ ಹಣ ಶರಣ್ ಎಂದು ಕನ್ನಡ ಪದ್ಯವನ್ನು ಅಪಭ್ರಂಷಗೊಳಿಸಿ ಹಾಡಿದ ಆ ಪರ್ವತ ಶ್ರೇಣಿಗಳೆಲ್ಲವೂ ಆಮೇಲೆ ತಾವೆ ಹಾಡಲು ಶುರು ಮಾಡಿದವು . ಚಾಚಾ ಶರಣ್ ಗಳಿಯಾ ಶರಣ್ ಚಾಚಾ ಶರಣ ಗಳಿಯಾ ಶರಣ್…

ನಾನ್‍ಸೆನ್ಸ, ಬನ್ನಿ ಅಲ್ಲಿ ದಿಗ್ವಿಜಯ್ ಸಿಂಗ್ ನ ಹೆಣ ಬಿದ್ದಿದೆ. ನೀವು ಇಲ್ಲಿ ಕುಡಿದು ತಿಂದು ಮೋಜು ಮಾಡುತ್ತಿರುವಿರಿ ಇದು. ನಿಮಗೆ ನಾಚಿಕೆ ಆಗುವದಿಲ್ಲವೆ. ಕರೆದವನು ಸಾಮನ್ಯನಲ್ಲ ಸೈನ್ಯದ ಮೇಜರ್. ದಿಗ್ವಿಜಯ ಎಂದರೆ ಅಪ್ರತಿಮ ಧೈರ್ಯವಂತ. ಕಳೆದ ತಿಂಗಳು ಆರು ಉಗ್ರರನ್ನು ಕೊಂದ ಭೂಪಾಲದ ಹುಡುಗ. ಸಾಯುವ ಮುಂಚೆಯೂ ಇಬ್ಬರು ಉಗ್ರರನ್ನು ಕೊಂದಿದ್ದ. ಆತನ ಗ್ರೆನೈಡ್ ದಾಳಿಗೆ ಅವರು ಸುಟ್ಟು ಕರಕಲಾಗಿದ್ದರು.

ಎಲ್ಲರೂ ಗಾಬರಿಯಾಗಿದ್ದರು.

ಶರಣ್ ಕೈಯ್ಯಲ್ಲಿದ್ದ ಹೂವು ತುರಾಯಿ ನೋಡಿದ ಮೇಜರ್ ಸಾಹೆಬರಿಗೆ ಏನು ಅನ್ನಿಸಿತೋ ಏನೋ. ಅದನ್ನು ಜೋರಾಗಿ ಆಕಾಶಾಭಿಮುಖವಾಗಿ ತೂರಿದರು ಕಾಲನ್ನು ಭೂಮಿಗೆ ಜೋರಾಗಿ ಒದ್ದರು ದೇಶದ್ರೋಹಿಗಳೆ ಎಂದು ಕಿರುಚಿ ಆ ಹುಡಗನನ್ನು ನೋಡಿ ಕಲಿಯಿರಿ ಆ ಹುಡುಗನ ಧೈರ್ಯ ಸಾಹಸ ದೆಶದ್ರೋಹಿಗಳಿಗೆ ಒಂದು ಪಾಟವಾಗಬೇಕು ಎಂದು ಸಿಟ್ಟಿನಿಂದಲೆ ಮೂವ್ ಟು ಫೀಲ್ಡ ಎಂದು ಎಲ್ಲರನ್ನು ಕರೆದುಕೊಂಡು ಹೋದರು.ಆ ಒಂದು ವಾರ ದಿಗ್ವಿಜಯನ ನೆನಪಲ್ಲೆ ಹೋಯಿತು. ಅದರ ಜೊತೆ ತಾನು ಅನಾಥನಂತೆ ಈ ದೇಶಕ್ಕೆ ಸಂಬಂಧವಿಲ್ಲದ ಒಬ್ಬವನಾಗಿ ಆ ಢೇರೆಯಲ್ಲೆ ಕಾಲಕಳೆದನಲ್ಲ? ಎಲ್ಲಕ್ಕಿಂತಲೂ ತನ್ನನ್ನು ಬಹುವಾಗಿ ಭಾದಿಸಿದ್ದು ಕಾಡಿದ್ದು ತನ್ನನ್ನು ಇಂದಿಗೂ ಭಾಧಿಸುತ್ತಿರುವದು ಜೋಯ್‍ನ ಆಗಿನ ವರ್ತನೆ ಆತಟ್ಟೆಯಲ್ಲಿ ಇಟ್ಟು ನಾಯಿಎಲಬುಗಳನ್ನು ಕೊಟ್ಟಿದ್ದು ತಮಾಶೆಗಾಗಿ ಇರಬಹುದು, ಆದರೆ ಆತನ ಹಿಂದಿನ ಮಾತು ಮರೆಯಲು ಹೇಗೆ ಸಾಧ್ಯ ಅವನೇ ಯಾವಾಗಲೂ ಹೇಳುತ್ತಿದ್ದ ನಮ್ಮ ಗುಡ್ಡಗಾಡುಗಳ ರಾಜ್ಯಗಳಲ್ಲಿ ದ್ರೋಹಿಗಳಿಗೆ ನಾಯಿ ಎಲಬುಗಳನ್ನು ಉಡುಗರೆಯಾಗಿ ಕೊಡುತ್ತಾರೆ ಅದು ಒಂದು ರೀತಿಯ ಎಚ್ಚರಿಕೆಯಾಗಿಯೂ ಇರಬಹುದು. ಈ ಮಾತು ರಾತ್ರಿಯ ನಿದ್ರೆಯನ್ನು ಕಸಿಯುತ್ತದೆ. ಜೊಯ್ ನ ಮಾತುಗಳನ್ನು ನಾವು ಗಂಭೀರವಾಗಿ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ ಎಂದು ಶುಭಾಂಕರ ಹೇಳಿದರೂ ಕೂಡ ಆಂತರ್ಯದಲ್ಲಿರುವ ಆ ಸಂಶಯದ ವಾಸನೆ? ಯೋಚಿಸುತ್ತ ಯೋಚಿಚುಸುತ್ತ ನನ್ನ ಮನಸ್ಸು ಅದೇ ಆಗುತ್ತದೆ. ರಜಿಯಾ ತನಗಾಗಿ ಕಳುಹಿಸಿದ ಪತ್ರದಲ್ಲಿ ಅವಳು ಏನೆಂದು ಬರೆಯತ್ತಿದ್ದಳು. ಅದೆ ಕಣ್ಣಿಗೆ ಕಾಣದ ಎಂದೂ ಭೇಟಿಯಾಗಲಾಗದ ತಮ್ಮ ಶರಣ್ ಅಂತೆಲೋ ನನ್ನ ಅಜ್ಞಾತ ತಮ್ಮನೆಂತಲೋ ಹೌದಲ್ಲವೋ? ಏನೇನೋ ಯೋಚನೆಗಳು.

ಎಂಟು ದಿನಕ್ಕೊಮ್ಮೆ ಸೈನಿಕ ಕೋರ್ಟಿನ ಕಟ್ಟಳೆಗಳು, ತರಹೇವಾರಿ ಪ್ರಶ್ನೆಗಳು, ತನಗೇ ಅಸಂಭದ್ಧವೋ ಅವರಿಗೆ ಸಂಬದ್ದವೋ ತಿಳಿಯದು. ಅಂದು ಮಂಜುಮುಸುಕಿ ಶ್ರೀನಗರವೆಲ್ಲ ಮಂಜಿನಿಂದಾವೃತ್ತವಾಗಿತ್ತು. ಅವರು ಇಂದು ಬಹಳ ಮರ್ಯಾದೆಯಿಂದಲೇ ಮಾತಾಡಿಸಿದರು. ಕೆಲ ಎಚ್ಚರಿಕೆಯನ್ನು ಕೊಟ್ಟರು, ಬೇರೆದೇಶದ ಸೈನಿಕನ ಜೊತೆ ನನ್ನ ವರ್ತನೆ ಹೇಗೆ ಇರಬೇಕೆಂದು ಹೇಳಿದರು. ಈ ಬಡತನದಲ್ಲಿ ತಾಯಿಯ ಜವಬ್ದಾರಿಯನ್ನು ಹೇಗೆ ನಿಭಾಯಿಸಬೇಕೆಂದು ಮಾತಿನಿಂದಲೇ ಜಂಕಿಸಿದರು. ಇದಕ್ಕೆ ಪೂರಕವಾಗಿ ಚಾಚಾನ ಜೊತೆ ನಮ್ಮ ಕೆಲ ಸೈನಿಕರು ಕೆಲಸಮಾಡಿದ್ದರಲ್ಲ ವಾಘಗಡಿಯಲ್ಲಿ? ಆತನ ಬಗ್ಗೆ ಅಭಿಪ್ರಾಯ ಸಂಗ್ರಹಿಸಲಾಗಿತ್ತು. ಘನ ನ್ಯಾಯಾಧೀಶರು ಒಂದು ಲಿಖಿತ ಹಿಮ್ಮಾಯಿತಿಯನ್ನು ಓದಿದರು. ಬಂದೇನವಾಜ ನಿಷ್ಟಿ ಎನ್ನುವ ಈತನಿಗೆ ಏನನ್ನಬೇಕೋ ತಿಳಿಯದು. ಬಹುಶ ಸಂತ ಮಹಾತ್ಮ ಎನ್ನುವ ಶಬ್ದಗಳು ಸೂಕ್ತ ಎನ್ನಿಸುತ್ತವೆ ಅಂಥಹ ಅದಮ್ಯ ಕಾಳಜಿ ಇರುವ ಶಾಂತಮೂರ್ತಿ, ಇನ್ನೂ ಇವನ ಬಗ್ಗೆ ಏನು ಹೇಳಲಿ ಪ್ರೀತಿಯ ಸಂಕೇತವಾದ ಅದಮ್ಯ ಜೀವ ಇವನು, ಇದನ್ನು ಬರೆದಿದ್ದು ಜೋಯ್ ಸಿಂಗ್. ಕಣ್ಣೀರು ಭೂಮಿ ಸೇರಿದ್ದವು.

ಮರುದಿನ ಮತ್ತೆ ಅದೆ ಲೆಫ್ಟ್ ರೈಟ್, ಸೈನ್ಯದ ಪೋಷಾಕುಗಳು, ಇದರ ಜೊತೆ ಆರು ತಿಂಗಳ ಸಂಬಳಕ್ಕೆ ಅರ್ಜಿ ಹಾಕುವ ಕೆಲಸ ಅಮ್ಮನಿಗೆ ಶುಭಾಂಕರನಿಂದ ಮತ್ತಷ್ಟು ಹಣ ಕಳುಹಿಸುವ ಕೆಲಸ, ಇದರ ಜೊತೆ ಲೆಟರ್ ಟ್ರೇನಲ್ಲಿ ತನ್ನದೊಂದು ಪತ್ರ ಆಗಲೇ ಒಡೆದಾಗಿತ್ತು. ಅದು ಪಾಕಿಸ್ತಾನದಿಂದ ಬಂದ ಪತ್ರ. ಪತ್ರ ತೆರೆದ. ಬಿಳಿಯ ದ್ರಾವಣದಿಂದ ಅದರಲ್ಲಿರು ಅಕ್ಷರಗಳನ್ನು ಕೆಡೆಸಲಾಗಿತ್ತು, ಪತ್ರದ ಮೇಲ್ಬಾಗ ಹೆಬ್ಬಟ್ಟಿನ ಗುರುತು. ಇದು ಮಾಡಿದ್ದು ಯಾರು ನಮ್ಮ ಸೈನ್ಯವೇ? ಅಲ್ಲಿಯ ಸೈನ್ಯವೇ ಆದರೂ ಆ ಹೆಬ್ಬಟ್ಟಿನ ಕರಿ ಗುರಿತು ಅಲ್ಲಿ ಯಾರೋ ಸತ್ತಿದ್ದನ್ನು ಹೇಳುತ್ತಿತ್ತು. ಸತ್ತವರು ಯಾರು ಎಂದು ಮನ ಪ್ರಶ್ನಿಸುತ್ತಿತ್ತು. ಎಂಥಹ ಯೋಚನೆಗಳು ಅವು ಮೆದಳು ಬಳ್ಳಿಗಳೆಲ್ಲ ದಣದಿದ್ದವು, ಅರಗಿನ ಕೊರಡಿಗೆ ತೀವ್ರವಾಗಿ ತಾಗುವ ಬೆಂಕಿಯಂತೆ ನಿದ್ರೆ ಎಂಬುದು ತಗಲಿಕೊಂಡಿತಲ್ಲ.