Tag Archives: ಭೂಸ್ವಾಧೀನ

ಪೋಸ್ಕೊ ಹೋರಾಟದಲ್ಲಿ ಸಾವಿರಾರು ಹೆಜ್ಜೆಗಳು

– ಹು.ಬಾ.ವಡ್ಡಟ್ಟಿ

ಕರ್ನಾಟಕ ಸರಕಾರವು ಪೋಸ್ಕೊ ಕ0ಪನಿ ಭೂಮಿ ಸ್ವಾಧೀನ ಪಡಿಸಿಕೊಳ್ಳುವ ಸಲುವಾಗಿ 2010 ರಲ್ಲಿ ಕೊನೆಯ ಭಾಗದಲ್ಲಿಯೇ ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಣೆಯನ್ನು ಹೊರಡಿಸಿತ್ತು. ಈ ಪ್ರಕಟಣೆಯು ಜನ ಸಾಮಾನ್ಯರಿಗೆ ಇರಲಿ ಹಳ್ಳಿ ಗುಡಿ ಮತ್ತು ಭೊಮಿ ಕಳೆದು ಕೊಳ್ಳುಲಿರುವ ಇತರೇ ರೈತರಿಗೆ ಗೊತ್ತೆ ಇರಲಿಲ್ಲಾ . ಮು0ಡರಗಿ ತಾಲೊಕಿನ ಜ0ತ್ಲಿ-ಶಿರೊರು. ಗದಗ ತಾಲೊಕಿನ ಹರ್ಲಾಪುರ, ಲಕ್ಕು0ಡಿ ಭಾಗದಲ್ಲಿ ಎಸ್.ಆರ್.ಸ್ಟೀಲ್ ಕ0ಪನಿಗೆ 1560 ಎಕರೆ,  ಅನಿಲಘಟಕ ಸ್ಧಾಪನೆಗೆ 733 ಎಕರೆ ಭೊಮಿಯನ್ನು ವಶಪಡಿಸುವಕೊಳ್ಳುವ ಹುನ್ನಾರ ನಡೆಸಿತ್ತು.

ಈ ಭೂ ಸ್ವಾಧೀನ ಪ್ರಕ್ರಿಯೆಯ ವಿಷಯವನ್ನು ಅಷ್ಟೊ0ದು ಗಹನವಾಗಿ, ರೈತರು  ತೆಗೆದುಕೊ0ಡರಲಿಲ್ಲ. ಆದರೇ ಹಳ್ಳಿಗುಡಿಯ ಬಡ ರೈತ  ಅಲ್ಪ ಭೂಮಿಯನ್ನು ಹೊ0ದಿರುವ ಸಿದ್ದಪ್ಪ ಮುದ್ಲಾಪುರ 2011 ರ ಫೆಬ್ರುವರಿ ತಿ0ಗಳಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಅಡಿಯಲ್ಲಿ ಭೂ ಸ್ವಾಧೀನ ವಿರೋಧಿಸಿ ಜಿಲ್ಲಾಧಿಕಾರಿಗಳಗೆ ಫೆಬ್ರುವರಿ 28 ರ0ದು ಪತ್ರದ ಮೂಲಕ ಹೇಳಿಕೆ ನೀಡಲಾಗಿತ್ತು . ಆ ಸಮಯದಲ್ಲೂ ಭೂ ಸ್ವಾಧೀನದ ಕುರಿತಾಗಿ ಚಿ0ತನೆಯನ್ನು ನಡೆಸಿರಲಿಲ್ಲ. ಹೋರಾಟ ಕಟ್ಟುವ ಕುರಿತು ಯೋಚನೆಯನ್ನೆ ಮಾಡಿರಲಲ್ಲಿ. ದಿನದಿ0ದ ದಿನಕ್ಕೆ ಮಾಧ್ಯಮದ ಮುಖಾ0ತರ ಭೂ ಸ್ವಾಧೀನ ಕುರಿತಾಗಿ ಸುದ್ದಿಗಳು ಪ್ರಕಟಣೆಗೊ0ಡಾಗ, ಜನರಿಗೆ ಪೋಸ್ಕೊ ಸ್ಟೀಲ್ ಕ0ಪನಿಯ ಬಗ್ಗೆ ತಿಳಿಯ ತೊಡಗಿತು. ಆನ0ತರವೇ 2011 ರ ಮೇ ತಿ0ಗಳ ಮೊದಲ ವಾರದಲ್ಲಿ ಭೂ ಸ್ವಾಧೀನ ವಿರೋಧ ಹೋರಾಟ ವೇದಿಕೆಯು ಅಸ್ತಿತ್ವಕ್ಕೆ  ಬ0ತು. ಈ ವೇದಿಕೆಯ ಅಡಿಯಲ್ಲಿ ಮೇ 9ರ0ದು ಶ್ರೀ ಜಗದ್ಗುರು ಡಾ. ಅನ್ನಾದಾನೀಶ್ವರ ಮಹಾಶಿವಯೋಗಿಗಳು, ಶಿವ ಕುಮಾರ ಮಹಾಸ್ವಾಮಿಗಳು, ವೈ.ಎನ್.ಗೌಡರ, ಈಶ್ವರಪ್ಪ ಹ0ಚಿನಾಳ, ಲಕ್ಷಣ ದೇಸಾಯಿಯವರ ನೇತೃತ್ವದಲ್ಲಿ ಹಳ್ಳಿಗುಡಿ ಜ0ತ್ಲಿ-ಶಿರೊರು ,ಮೇವು0ಡಿ, ಪೇಠಾಲೊರಿನ ರೈತರು ತಹಸೀದ್ದಾರ ರಮೇಶ ಕೋನರೆಡ್ಡಿಯವರ ಮೂಲಕ ಮುಖ್ಯ ಮ0ತ್ರಿಯವರಿಗೆ ಮನವಿಯನ್ನು ಸಲ್ಲಿಸಿ, ಭೂ ಸ್ವಾಧೀನಕ್ಕೆ ಸ0ಬಂಧಿಸಿದ  5 ಬೇಡಿಕೆಗಳನ್ನು ಮು0ದಿಟ್ಟಿತ್ತು:

1. ಭೂ ಸ್ವಾಧೀನವನ್ನು ಪುನರ್ ಪರಿಶೀಲಿಸ ಬೇಕು.
2 ಭೂಮಿ ಕಳೆದು ಕೊ0ಡ ರೈತರ ಶೇರು ಆ ಕ0ಪನಿಯಲ್ಲಿರ ಬೇಕು .ರೈತರನ್ನು ಶೇರುದಾರನ್ನಾಗಿ ಮಾಡಬೇಕು.

3.ಭೂಮಿ ಕಳೆದುಕೊ0ಡ ಪ್ರತಿ ರೈತರ ಮನೆಯವರಿಗೊ ಉದ್ಯೋಗ ಕೊಡಬೇಕು.

4. ರಾಜ್ಯ ಸರಕಾರ ಮತ್ತು ಕೇ0ದ್ರ ಸರಕಾರಗಳು ಭೂ ಹೀನರಿಗೆ ವಿದ್ಯಾರ್ಹತೆಗೆ ಅನುಗುಣವಾಗಿ ಉದ್ಯೋಗ ಕಲ್ಪಿಸಬೇಕು.

5. ಪ್ರತಿ ಎಕರೆ ಭೊಮಿಗೆ 30 ಲಕ್ಷ ರೊಪಾಯಿಗಳನ್ನು ಪರಿಹಾರ ನೀಡಬೇಕು.

ಶ್ರೀ ಜಗದ್ಗುರು ಡಾ.ಅನ್ನಾದಾನೀಶ್ವರ ಮಹಾ ಶಿವಯೋಗಿಗಳ ನೇತೃತ್ವದಲ್ಲಿ , ನ0ದಿಕೇರಿ ಮಠದ ಶಿವ ಕುಮಾರ ಸ್ವಾಮೀಜಿ, ವೈ.ಎನ್.ಗೌಡರ.ಲಕ್ಷಣ ದೇಸಾಯಿ  ಈಶ್ವರಪ್ಪ ಹ0ಚಿನಾಳರು ಮೇ 9 2011 ರ0ದು ತಹಸಿಲ್ದಾರ ರಮೇಶ ಕೋನರೆಡ್ಡಿಯವರ ಮೂಲಕ ಆಗಿನ ಮುಖ್ಯ ಮ0ತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪನವರಿಗೆ, ಮನವಿಯನ್ನು ಅರ್ಪಿಸಲಾಯಿತು.

ಅಧಿಕಾರಿಗಳು, ಜನಪ್ರತಿನಿಧಿಗಳು ಮನವಿಗೆ ಸ್ಪ0ದಿಸಲೇ ಇಲ್ಲ. ಬದಲಿಗೆ ಜೂನ್ ತಿ0ಗಳ ಕೊನೆಯ ವಾರದಲ್ಲಿ ವಿಶೇಷ ಭೊ ಸ್ವಾಧೀನಧಿಕಾರಿಗಳ ಕಛೇರಿ ಧಾರವಾಡ ಕೈಗಾರಿಕಾ ಪ್ರದೇಶಾಭಿವೃದ್ದಿ ಮ0ಡಳಿ ಯಿ0ದ ಪೊಸ್ಕೋ ಇ0ಡಿಯಾ ಪ್ರೈತರ ಮನೆ ಬಾಗಿಲುಗಳಿಗೆ ತಲುಪಿಸಿದರು. ಆಕ್ಷೇಪಗಳಿದ್ದರೆ 15 ದಿನಗಳಲ್ಲಿ ಮೌಖಿಕವಾಗಿ, ಇಲ್ಲವೇ ಲಿಖಿತ ರೂಪದಲ್ಲಿ ಸಲ್ಲಿಸಬೇಕು, ಇಲ್ಲವಾದರೆ ಭೂಸ್ವಾಧೀನ ಕಾಯ್ದೆ ಪ್ರಕಾರ ಸ್ವಾಧೀನ ಕ್ರಮ ಜರುಗಿಸಲಾಗುವುದು ಎಂದ ನೋಟಿಸ್ ನಲ್ಲಿ ಸೂಚಿಸಲಾಗಿತ್ತು. ರೈತರು  ಸಲ್ಲಿಸಿದ್ದ ಮನವಿಗೆ ಸ್ಪ0ದಿಸಿದೇ ಭೂಮಿ ವಶಪಡಿಸಿ ಕೊಳ್ಳುವದ್ದಕ್ಕೆ ಮು0ದಾಯಿತ್ತು.

ಹೋರಾಟದ ಹಾದಿಯಲ್ಲಿ ಸಾವಿರಾರು ಹೆಜ್ಜೆಗಳು. ಶ್ರೀ ಜಗದ್ಗುರು  ತೋ0ಟದ ಸಿದ್ದಲಿ0ಗ ಮಹಾ ಸ್ವಾಮಿ, ಶ್ರೀ ಜಗದ್ಗುರು  ಅನ್ನದಾನೀಶ್ವರ ಮಹಾಶಿವಯೋಗಿಗಳು, ಡಾ. ಸಿದ್ದನ ಗೌಡ  ಪಾಟೀಲ, ವೈ.ಎನ್. ಗೌಡರ , ಚ0ದ್ರಶೇಖರ ಬಾಳೆ, ಬಸವರಾಜ ಸೂಳಿಬಾವಿ, ಲಕ್ಷ್ಮಣ ದೇಸಾಯಿ, ಚನ್ನಪ್ಪ ಬೂದಿಹಾಳ, ಹನುಮ0ತಪ್ಪ ಗಡ್ಡದರು ಹೋರಾಟಕ್ಕೆ ನಾಯಕತ್ವ ನೀಡತೊಡಗಿದರು.

ಅದಕ್ಕೊ0ದು ದೊಡ್ಡ ಮಟ್ಟದಲ್ಲಿ ಬಲವೆ0ಬ0ತೆ ಹುಬ್ಬಳ್ಳಿಗೆ ಬ0ದಿದ್ದ ಸಾಮಾಜಿಕ ಕಾರ್ಯಕರ್ತೆ, ಹೋರಾಟಗಾರ್ತಿ ಮೇಧಾ ಪಾಟ್ಕರ್  ಹಳ್ಳಿಗುಡಿಗೆ ಬ0ದು ರೈತರೊ0ದಿಗೆ ಸ0ವಾದ ನಡೆಸಿ ನೈತಿಕ ಸ್ಥೈರ್ಯವನ್ನು ರೈತ-ಮಹಿಳೆಯರಲ್ಲಿ ತು0ಬಿದರು. ಹೋರಾಟಕ್ಕೆ ಮೇಧಾ ಪಾಟ್ಕರ್ ಬಲವು ಸಾವಿರಾರು ಆನೆ ಬಲ ಬ0ದ0ತೆ ಆಯಿತು.

ಪೋಸ್ಕೋ ಪಲಾಯನದ ಹಿಂದಿನ ರಾಜಕಾರಣ ಮತ್ತು ಕಾಡುತ್ತಿರುವ ಪ್ರಶ್ನೆಗಳು

ಹು.ಬಾ. ವಡ್ಡಟ್ಟಿ

ಪೋಸ್ಕೋ ಎಂಬ ಸ್ಟೀಲ್ ಉತ್ಪಾದಿಸುವ ದ.ಕೋರಿಯಾದ ಕಂಪನಿ ಗದಗ ಜಿಲ್ಲೆಯ ಹಳ್ಳಿಗುಡಿಯ ರೈತರ ಹೊಲಗಳಲ್ಲಿ ಸ್ಟೀಲ್ ಉತ್ಪಾದನೆ ಮಾಡುವ ಘಟಕವನ್ನು ಸ್ಥಾಪನೆ ಮಾಡುತ್ತಾರೆ ಎನ್ನುವ ಗಾಳಿ ಸುದ್ಧಿ ಮೊದಲು ದಲ್ಲಾಳಿಗಳ ಕಿವಿ ತಲುಪಿದಾಗ ದಲ್ಲಾಳಿಗಷ್ಟು ಖುಷಿ ಪಟ್ಟವರು ಈ ಜಗತ್ತಿನಲ್ಲಿ ಯಾರು ಇರಲಾರರು ಅನಿಸುತ್ತದೆ. ಆದರೆ 2011 ರ ಜೂನ್ ಕೊನೆಯ ವಾರದಲ್ಲಿ ಧಾರವಾಡದ ಕೆಐಎಡಿಬಿ(ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ದಿ ಮಂಡಳಿ)ಯಿಂದ ರೈತರ ಮನೆ ಬಾಗಿಲಿಗೆ “ನಿಮ್ಮ ಭೂಮಿಯನ್ನು ಪೋಸ್ಕೋಗಾಗಿ ವಶಪಡಿಸಿಕೊಳ್ಳಲಾಗುತ್ತದೆ, ಆಕ್ಷೇಪಣೆಗಳು ಇದ್ಧರೆ ಧಾರವಾಡಕ್ಕೆ ಬಂದು ಕೆಐಎಡಿಬಿ ಗೆ ಸಲ್ಲಿಸಬಹುದು,” ಅನ್ನುವ ಸೂಚನೆಯು ತಲೆತಲಾಂತರಿಂದ ಭೂಮಿ ನಂಬಿ ಬದುಕಿರುವ ರೈತಾಪಿ ಜೀವಗಳಿಗೆ ಒಮ್ಮಿ೦ದೊಮ್ಮೆಲೆ ಬರಸಿಡಿಲು ಬಡಿದಂತೆ ಆಗಿ, ರೈತರು ಭೂಮಿ ಜೊತೆ ಹೊಂದಿರುವ ಭಾವನಾತ್ಮಾಕವಾದ ಸಂಬಂಧ ಹಾಗೂ ಭೂಮಿ ಆಧರಿಸಿ ಬದುಕು ಸಾಗಿಸುವುದಕ್ಕೆ ಕೊಡಲಿ ಪೆಟ್ಟುಬೀಳುತ್ತದೆ, ಆದ್ದರಿಂದ ಬದುಕು ಮುಂದೇನು ಎನ್ನುವ ಪ್ರಶ್ನೆಯನ್ನು ಹುಟ್ಟುಹಾಕಿತು.

ಅಭಿವೃದ್ದಿಯೆಂಬ ಬಿಸಿಲುಕುದುರೆಯ ನಾಗಾಲೋಟಕ್ಕೆ ಹಳ್ಳಿಗುಡಿ, ಜಂತ್ಲಿಶಿರೂರ್ , ಮೇವುಂಢಿ, ರೈತರು ಭೂಮಿಯನ್ನು ಕೊಡುವದರ ಮೂಲಕ ಅಭಿವೃದ್ದಿಯಲ್ಲಿ ಪಾಲ್ಗೊಳ್ಳಬಹುದೆಂಬ ಹುಸಿ ಕಲ್ಫನೆಯನ್ನು ಆಡಳಿತಾರೂಢ ಬಿಜೆಪಿಯ ಬೆಂಬಲಿಗರು ಜನರಲ್ಲಿ ಹುಟ್ಟುಹಾಕಿದರು. ಆದರೆ ಪೋಸ್ಕೋ ಆಗಮನದಿಂದ ಇಲ್ಲಿನ ಜನರ ಬದುಕಿಗೆ ನೆಮ್ಮದಿ ಸಿಗುತ್ತಾ ಮೂಲಭೂತ ಕಾಳಜಿಯಿಂದ ಪರಿಸರದ ಮೇಲೆ ಎಂಥ ಪರಿಣಾಮ ಉಂಟಾಗಬಹುದು ಎಂಬ ಆತಂಕ ಪರಿಸರವಾದಿಗಳು, ಪ್ರಗತಿಪರರು, ಮಠಾಧೀಶರದ್ದಾಗಿತ್ತು.ಆದರೂ ಪೋಸ್ಕೋ ಕಂಪನಿಯು ಉಕ್ಕು ಘಟಕ ಸ್ಥಾಪಿಸಲು ಪೂರಕವಾದ ಮೂಲಭೂತ ಸೌಕರ್ಯಗಳಾದ ರಸ್ತೆ, ರೈಲು, ನೀರು ಸುಲಭವಾಗಿ ಕೈ ಅಳತೆಯಲ್ಲಿ ನಿರಾಯಾಸವಾಗಿ ದೊರಕುವುದು ಎಂದು ರಾಜಕಾರಣಿಗಳು, ದಲ್ಲಾಳಿಗಳು, ಅಭಿವೃದ್ದಿಯ ಮಂತ್ರ ಜಪಿಸುವ ಭೂಮಾಫೀಯಾದ ಕುಳಗಳು, ಪೋಸ್ಕೋ “ಯಜ್ಙ”ಕ್ಕೆ ಹಳ್ಳಿಗುಡಿಯ ರೈತರನ್ನು, ಭೂಮಿಯನ್ನು ಸಮಿತ್ತಾಗಿ ಸಿದ್ದಗೊಳಿಸತೊಡಗಿದರು.

ಇದರ ಹಿಂದಿರುವ ಹುನ್ನಾರ ಎಂದರೆ ಪಕ್ಕದಲ್ಲಿಯೇ ಇರುವ ರಾಷ್ಟ್ರೀಯ ಹೆದ್ದಾರಿ – 63 ಹುಬ್ಬಳ್ಳಿ- ಗುಂಟಕಲ್ಲನ್ನು ಜೊಡಿಸುವ ಬ್ರಾಡಗೇಜ್ ರೈಲು ಅದಕ್ಕಿಂತಲು, ಶಿಂಗಟಾಲುರುಗಳಂತಿರುವ  ಏತ ನೀರಾವರಿಯ ನೀರನ್ನು ಉಕ್ಕು ಘಟಕಕ್ಕೆ ಬಳಸಬಹುದು. ಜೊತೆಗೆ ಉಕ್ಕು ಘಟಕಕ್ಕೆ ಬೇಕಾಗುವ ಆದಿರನ್ನು 15 ಕಿ ಮೀ ಅಂತರದಲ್ಲಿರುವ ಕಪ್ಪತ್ತ ಗುಡ್ಡದಿಂದ ಕೊಳ್ಳೆಹೂಡೆಯಲು ಅನೂಕೂಲವಾಗುತ್ತದೆ ಎನ್ನುವ ದೂ(ದು)ರಾಲೊಚನೆಯೊಂದಿಗೆ ಪೋಸ್ಕೋ ಕಂಪನಿಗೆ, ಭೂಮಿ ಕಬಳಿಸುವ ದುಷ್ಟ ಯೋಜನೆಗೆ, ಸರ್ಕಾರವು ಕೈ ಹಾಕಿತು.

ಸರ್ಕಾರವು 2011 ರ ಮಾರ್ಚನಲ್ಲಿ ಕೈಗಾರಿಕೆಯ ಸಲುವಾಗಿ ಲ್ಯಾಂಡ್ ಬ್ಯಾಂಕ್ ಮಾಡಲು ಭೂಮಿ ಒಳಪಡಿಸಿಕೊಳ್ಳುವ ಪ್ರಕ್ರಿಯೆಗೆ ಚಾಲನೆಯನ್ನು ನೀಡಿ ರಾಜ್ಯ ಪತ್ರದಲ್ಲಿ ಪ್ರಕಟಿಸಿತ್ತು. ಈ ಪ್ರಕಟಣೆಯು ಜನರಿಗೆ, ರೈತರ ಗಮನಕ್ಕೆ ಬಂದಿರಲಿಲ್ಲ. ಈ ಮೊದಲೇ ಗದಗ್ ಜಿಲ್ಲಾ ಉಸ್ತಾವಾರಿ ಸಚಿವಾರಾಗಿದ್ದ ಬಿ.ಶ್ರೀ ರಾಮುಲು ಅವರು ಹಳ್ಳಿಗುಡಿ – ಹಳ್ಳಿಕೇರಿ ರಾಷ್ಟೀಯ ಹೆದ್ದಾರಿಯ ಪಕ್ಕದಲ್ಲಿಯೇ 2 ಸಾವಿರ ಕೋಟಿ ರೂಪಾಯಿವೆಚ್ಚದಲ್ಲಿ ಉಕ್ಕು ಕಾರ್ಖಾನೆಯನ್ನು  ಸ್ಥಾಪಿಸಲಾಗುತ್ತದೆ  ಎನ್ನುವ ಮುನ್ಸುಚನೆ, 2009 ರಲ್ಲಿಯೇ ನೀಡಿದ್ದರಲ್ಲದೆ, ಉಕ್ಕು ಕಾರ್ಖಾನೆಯು ಗದಗ್ ಜಿಲ್ಲೆಯನ್ನು  ಅಭಿವೃದ್ಧಿಯತ್ತ ಕೊಂಡೊಯ್ಯುತ್ತದೆ, ಗದಗ್ ಜಿಲ್ಲೆಯಲ್ಲಿ ಕಾರ್ಖಾನೆಯಿಂದಾಗಿ  , ಅಭಿವೃದ್ಧಿಯು, ತಾನೇ-ತಾನಾಗಿ ಜನರ ಬದುಕಿನಲ್ಲಿ  ಫಲಗಳನ್ನು ತಂದುಹಾಕುತ್ತದೆ. ಇನ್ನು ಮುಂದೆ ಸುಖದ, ನೆಮ್ಮದಿಯ ದಿನಗಳು ಬರಲಿವೆ ಎನ್ನುವ ಕನಸು ಕಾಣ ತೊಡಗಿದರು.

ಇದಕ್ಕೆ ಪೂರಕವಾಗುವಂತೆ ಎಪ್ರಿಲ್ 15-2011 ರಲ್ಲಿ ಮೊದಲ ನೋಟಿಸ್, ‘1966 ರ ಕಲಂ 28 (2) ಮೇರೆಗೆ ಭೂಮಿಯು ಸ್ವಾಧೀನಪಡಿಸಿಕೊಳ್ಳುವ  ದಿಶೆಯಲ್ಲಿ ರೈತರಿಗೆ  ನಿಮ್ಮ ಆಕ್ಷೇಪಣೆಗಳಿದ್ದರೆ ಲಿಖಿತ ರೂಪದಲ್ಲಿ 30 ದಿನಗಳ ಒಳಗಾಗಿ ಸಲ್ಲಿಸಲು,’ ಕೆಐಎಡಿಬಿಯ ಧಾರವಾಡದ ಕಾರ್ಯಾಲಯವು ಗಡುವು ನೀಡಿತ್ತು.

ಜೂನ್ 23-2011 ರಂದು ಧಾರವಾಡ ಕೆಐಎಡಿಬಿಯು ಪುನಃ ರೈತರ ಮನೆಯಬಾಗಿಲಿಗೆ ಬಂದಾಗ, ಆ ನೋಟಿಸ್‌ನಲ್ಲಿ ಸ್ಪಷ್ಟವಾಗಿ ನಮೂದಿಸಿದಂತೆ ಕೈಗಾರಿಕೆ ಸ್ಥಾಪನೆ ಸಂಬಂಧಿಸಿ, ಹಳ್ಳಿಗುಡಿ ಗ್ರಾಮದ 3382-ಏಕರೆ ಭೂಮಿಯನ್ನು ಪೋಸ್ಕೋ ಇಂಡಿಯ ಪ್ರೈ.ಲಿ. ಕೈಗಾರಿಕೆ ಸ್ಥಾಪನೆಗೆ ಬೇಕಾಗಿದೆ ಅದರ ಸಲುವಾಗಿ ಆಪೇಕ್ಷೇಣೆಗಳನ್ನು ಸಲ್ಲಿಸಲು, ರೈತರಿಗೆ 10 ದಿನಗಳ ಗಡುವು ನೀಡಿತು. ರೈತರು, ಮಠಾಧೀಶರು, ಪ್ರಗತಿಪರ ಸಂಘಟನೆ, ರೈತರ ಸಂಘಟನೆಯವರು , ಐತಿಹಾಸಿಕ ಹೋರಾಟಕ್ಕೆ ಸಜ್ಜಾಗತೊಡಗಿದರು.  ಪೋಸ್ಕೋ  ಉಕ್ಕು ಕಾರ್ಖಾನೆಯಿಂದ ಉಂಟಾಗಬಹುದಾದ ಪರಿಣಾಮಗಳನ್ನು ಕುರಿತು ಹಲವು ಸುದ್ದಿಗಳು ಪ್ರಕಟವಾದವು.

ರೈತರು ಸರ್ಕಾರಕ್ಕೆ ಭೂಮಿ ಕೊಡದಿರುವ ಗಟ್ಟಿ ನಿರ್ಧಾರಕ್ಕೆ  ಮಠಾಧೀಶರು, ಪ್ರಗತಿಪರರು, ಮಾಧ್ಯಮದವರು ಬೆಂಬಲವಾಗಿ  ನಿಂತರು. ಹೋರಾಟವು ಮುಂದುವರೆಯಲು ಹೇಗೆ ಸಾಧ್ಯವಾಯಿತು? ಜೊತೆಗೆ ಅಭಿವೃದ್ದಿಯ ಟೊಳ್ಳು-ಗಟ್ಟಿಯು ಜನರ, ರೈತರ, ಬದುಕಿನೊಂದಿಗೆ ಹೇಗೆ ಚೆಲ್ಲಾಟವಾಡುತ್ತಿದೆ ಎನ್ನುವ ಮುಂದಿರುವ ಪ್ರಶ್ನೆಗಳನ್ನು ಇಟ್ಟುಕೊ0ಡು ಮುಂದಿನ ಭಾಗದಲ್ಲಿ ನೊಡೋಣ.

  • ಗದಗ ಜಿಲ್ಲೆಯ ಅಭಿವೃದ್ದಿಗೆ ಪೋಸ್ಕೋ ಬೇಕೆ?
  • ಕೃಷಿ ಆಧಾರಿತ ಕೈಗಾರಿಕೆಗಳು, ಅನುಕೂಲಕರವೇ?
  • ಪೋಸ್ಕೋದಿಂದ ಪರಿಸರ – ಕಪ್ಪತಗುಡ್ಡದ ಮೇಲಾಗುವ ದುಷ್ಟಪರಿಣಾಮಗಳು ಏನು?
  • ಕಳೆದ 50 ವರ್ಷಗಳಿಂದ ಕೈಗಾರಿಕೆ ಏಕೆ ಸ್ಥಾಪನೆ ಆಗಿರಲಿಲ್ಲ?
  • ಸಿಂಗಾಟಲೂರು ಏತ ನೀರಾವರಿ ಈ ಭಾಗದಲ್ಲಿ ಕನಿಷ್ಟ ರೈತರ ಬದುಕಿಗೆ ಆಸರೆಯಾಗಲಿದೆಯೇ?
  • ರೈತರ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡು ಸರ್ಕಾರ ಹಣವನ್ನು ರೈತರಿಗೆ ನೀಡಿದರೆ ರೈತರ ಬದುಕಿನ ಪಯಣ ಯಾವ ದಿಕ್ಕಿನ ಕಡೆಗೆ?
  • ಭೂಸ್ವಾಧೀನ, “ಹಣ ಕೊಡುವ-ತೆಗೆದುಕೊಳ್ಳುವ” ಪ್ರಕ್ರಿಯೆಗಷ್ಟೆ ಸೀಮಿತವೆ?
  • ಪೋಸ್ಕೋ ಕಂಪನಿಯಿಂದ ಗದಗ್ ಜಿಲ್ಲೆಯಲ್ಲಿ ಎಷ್ಟು ಉದ್ಯೋಗಗಳು ಸೃಷ್ಟಿಯಾಗುತ್ತವೆ?
  • ಭೂಸ್ವಾಧೀನದಿಂದ ಭೂಹೀನವಾಗುವ ರೈತರ ಕುಟುಂಬಗಳು ಎಷ್ಟು? ಅವರು ಬದುಕಿನ ನೆಲೆ ಕಳೆದುಕೊಂಡಾಗ ಪರ್ಯಾಯ ಉದ್ಯೋಗ ಕಲ್ಪಿಸುವರು ಯಾರು?
  • ಪೋಸ್ಕೋಗೆ ಕೊಡುತ್ತಿರುವ ರೈತರ ಭೂಮಿಯು ಕೃಷಿ ಯೋಗ್ಯವಲ್ಲದ ಬಂಜರು, ಭೂಮಿ – ಕೈಗಾರಿಕೆ ಸಚಿವ ನಿರಾಣಿಯವರ ಹೇಳಿಕೆ.
  • ಪೋಸ್ಕೋಗೆ ತುಂಗಾಭದ್ರೆಯಿಂದ ನೀರು ಕೊಡದೇ, ಆಲಮಟ್ಟಿದಿಂದ ನೀರು ಕೊಡುತ್ತೆವೆ – ನೀರಾವರಿ ಸಚಿವ ಬಸವರಾಜ ಬೊಮ್ಮಾಯಿ.

(ಮುಂದುವರೆಯುವುದು…)

ಚಿತ್ರಗಳು: ಲೇಖಕರವು