ಜನನುಡಿಗಾಗಿ ಮಂಗಳೂರಿಗೆ…

ಅಭಿಮತ ಮಂಗಳೂರು ಮತ್ತೊಂದು ‘ಜನನುಡಿ’ ಯೊಂದಿಗೆ ಸಜ್ಜಾಗಿದೆ. ಬದುಕನ್ನೇ ನುಡಿಯಾಗಿಸಿಕೊಂಡವರು ಮಾತು, ಹರಟೆ, ಹಾಡು, ಕತೆ, ಕವಿತೆ ಎಂದು ಎರಡು ದಿನಗಳ ಕಾಲ ಮಂಗಳೂರಿನಡೆಗೆ ನಡೆಯುತ್ತಿದ್ದಾರೆ. ಹಿಂದಿನ ವರ್ಷಗಳಂತೆ ಈ ಬಾರಿಯೂ ವರ್ತಮಾನ ಬಳಗದ ಅನೇಕ ಗೆಳೆಯರು ಅಲ್ಲಿರುತ್ತಾರೆ. ನೆನಪಿರಲಿ ಕಾರ್ಯಕ್ರಮ ಡಿಸೆಂಬರ್ 19 ಮತ್ತು 20 (ಶನಿವಾರ ಮತ್ತು ಭಾನುವಾರ). ಮಂಗಳೂರು ನಗರದ ಶಾಂತಿಕಿರಣದಲ್ಲಿ.
ದೇವನೂರು ಮಹದೇವ ಉದ್ಘಾಟಿಸಿ ಮಾತನಾಡಲಿದ್ದಾರೆ. ಎಚ್.ಎಸ್.ಅನುಪಮ, ಕಡಿದಾಳ್ ಶಾಮಣ್ಣ, ಜಾನ್ ಫರ್ನಾಂಡಿಸ್, ಶ್ರೀನಿವಾಸ ಕಕ್ಕಿಲಾಯ, ಬಾನು ಮುಷ್ತಾಕ್, ಡಿ.ಉಮಾಪತಿ, ಬಿ.ಟಿ.ಜಾಹ್ನವಿ, ಸಂವರ್ಥ, ಡಾ.ಸಿ.ಎಸ್.ದ್ವಾರಕಾನಾಥ್, ಡಾ.ಮುಜಾಫರ್ ಅಸಾದಿ, ಪೀರ್ ಬಾಷ, ಕೆ.ಷರೀಫ, ಲಕ್ಷ್ಮಣ್ ಹೂಗಾರ್, ಕೆ.ವೈ.ನಾರಾಯಣಸ್ವಾಮಿ, ಟಿ.ಕೆ.ದಯಾನಂದ್, ಪ್ರೊ.ಕೆ.ಚಂದ್ರ ಪೂಜಾರಿ, ಆರ್. ಸುನಂದಮ್ಮ, ಎಚ್.ವಿ.ವಾಸು, ಕೋಟಿಗಾನಹಳ್ಳಿ ರಾಮಯ್ಯ, ಶಶಿಧರ್ ಭಟ್, ಕೆ.ಎಸ್.ವಿಮಲಾ, ಹುಲಿಕುಂಟೆ ಮೂರ್ತಿ, ದಿನೇಶ್ ಅಮೀನ್ ಮಟ್ಟು, ರಹJananudi-4Jananudi-2ಮತ್ ತರೀಕೆರೆ, ನರೇಂದ್ರ ನಾಯಕ್, ಇಂದಿರಾ ಕೃಷ್ಣಪ್ಪ..ಮತ್ತಿತJananudi-3ರರು ಅಲ್ಲಿರುತ್ತಾರೆ.

2 thoughts on “ಜನನುಡಿಗಾಗಿ ಮಂಗಳೂರಿಗೆ…

 1. Salam Bava

  “ಅಭಿಮತ ಮಂಗಳೂರು ಮತ್ತೊಂದು ‘ಜನನುಡಿ’ ಯೊಂದಿಗೆ ಸಜ್ಜಾಗಿದೆ. ಬದುಕನ್ನೇ ನುಡಿಯಾಗಿಸಿಕೊಂಡವರು ಮಾತು, ಹರಟೆ, ಹಾಡು, ಕತೆ, ಕವಿತೆ ಎಂದು ಎರಡು ದಿನಗಳ ಕಾಲ ಮಂಗಳೂರಿನಡೆಗೆ ನಡೆಯುತ್ತಿದ್ದಾರೆ”
  ಸಮಾನ ಮನಸ್ಕ ,ಸಾಮುದಾಯಿಕ ಬದ್ದತೆಯ ಪ್ರಭುದ್ದರ ಭಾಗವಹಿಸುವಿಕೆಯ ,ಶೋಷಿತರ ಪರವಾಗಿ ಸ್ವಂದಿಸುವ ಈ “ಜನನುಡಿ”ಗೆ ನನ್ನಂತೆ ಯೋಚಿಸುವ ಲಕ್ಷಾಂತರ ಜನ ಸಾಮಾನ್ಯರ ಶುಭ ಕಾಮನೆಗಳು

  Reply
 2. ಸೀತಾ

  ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವವರ ಪಟ್ಟಿಯಲ್ಲಿ ದಕ್ಷಿಣ ಕನ್ನಡ ಬರಹಗಾರರು ಒಬ್ಬರೂ ಕಾಣಿಸಲಿಲ್ಲ. ಕನಿಷ್ಠ ಬೊಳುವಾರು ಹಾಗೂ ಕಟ್ಪಾಡಿ ಅವರನ್ನಾದರೂ ಆಹ್ವಾನಿಸಬೇಕಿತ್ತಲ್ಲವೇ?

  Reply

Leave a Reply

Your email address will not be published.