ರಿಯಾಲಿಟಿ ಶೋ ಪ್ರಧಾನಿ!

ಗುರು, ಚಿಕ್ಕಮಗಳೂರು

ವಿಪರ್ಯಾಸ ಎಂದರೆ ಇದೇ ಇರಬೇಕು. ರಾಷ್ಟ್ರೀಯ ವಿಜ್ಞಾನ ಕಾಂಗ್ರೆಸ್ ಉದ್ಘಾಟನೆಗೆ ಮೈಸೂರಿಗೆ ಬಂದ ಪ್ರಧಾನಿ ಸ್ವಾಮೀಜಿಯ ಜನ್ಮ ಶತಮಾನೋತ್ಸವದಲ್ಲಿ ಭಾಗವಹಿಸಿ ಬುದ್ಧಿಜೀವಿಗಳನ್ನು ಹೀಗಳೆಯುತ್ತಾರೆ. ತಾನು ಅದೇ ಊರಲ್ಲಿ ಭಾಗವಹಿಸುತ್ತಿರುವ ಇನ್ನೊಂದು ಕಾರ್ಯಕ್ರಮದಲ್ಲಿ ಎದುರು ನೋಡುತ್ತಿರುವುದು ಬುದ್ದಿಜೀವಿ ವಲಯವನ್ನು ಪ್ರತಿನಿಧಿಸುವ ವಿಜ್ಞಾನಿಗಳನ್ನು ಎನ್ನುವ ಪ್ರಜ್ಞೆಯೂ ಅವರಿಗಿರುವುದಿಲ್ಲ.

ಮಾರನೇ ದಿನ ಬೆಂಗಳೂರಿನಲ್ಲಿ ಯೋಗ ಕ್ಯಾಂಪ್ ಉದ್ಘಾಟಿಸುತ್ತಾರೆ. ಅದೇ ಹೊತ್ತಿಗೆ ಪಠಾಣಕೋಟ್ ನಲ್ಲಿ ಈ ದೇಶದ ಸೈನಿಕರು ಭಯೋತ್ಪಾದಕರ ಗುಂಡಿಗೆ ಅಸುನೀಗುತ್ತಿದ್ದಾರೆ, ಅಷ್ಟೇ ಅಲ್ಲ ಸೂಕ್ತ ರಕ್ಷಣಾತ್ಮಕ ವ್ಯವಸ್ಥೆ ಇಲ್ಲದೆ ಗ್ರನೇಡ್ ನಿಷ್ಕ್ರಿಯ ಗೊಳಿಸಲು ಹೋದ ವೀರನೂ ಮೃತಪಡುತ್ತಾನೆ. ಸಾವಿರಾರು modi-in-biharಭಕ್ತರನ್ನು ಹೊಂದಿರುವ ಈ ವ್ಯಕ್ತಿಗೆ ಮಾತ್ರ ಏನೂ ಅನ್ನಿಸುವುದಿಲ್ಲ. (ಈ ಘಟನೆಯೊಂದಿಗೆ ತಕ್ಷಣ ನೆನಪಾಗುವುದು 2009 ರಲ್ಲಿ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳು ನೆರೆಯಿಂದ ಜಲಾವೃತಗೊಂಡಿದ್ದಾಗ ಅಂದು ಅಧಿಕಾರದಲ್ಲಿದ್ದ ಬಿಜೆಪಿ ಮಂತ್ರಿಗಳು ಮೈಸೂರಿನ ಮಠವೊಂದರ ಆವರಣದಲ್ಲಿ ಯೋಗಾಭ್ಯಾಸ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಪಿ.ಮಹಮ್ಮದ್ ಬರೆದ ಪರಿಣಾಮಕಾರಿ ಕಾರ್ಟೂನ್ ಇನ್ನೂ ಅನೇಕರಿಗೆ ನೆನಪಿರಬಹುದು).

ದೇಶವೊಂದರ ನಾಯಕ, ಆತನ ಮನಸ್ಥಿತಿ, ಬುದ್ದಿವಂತಿಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನೇ ಪ್ರತಿನಿಧಿಸುತ್ತಿರುತ್ತವೆ. ದುರಂತವೆಂದರೆ ಸದ್ಯ ಆಡಳಿತ ಚುಕ್ಕಾಣಿ ಹಿಡಿದಿರುವ ಮನುಷ್ಯ ಪ್ರಚಾರದ ಹುಚ್ಚಿಗೆ ಮರುಳಾಗಿ ಬಿಗ್ ಬಾಸ್ ನಂತಹ ರಿಯಾಲಿಟಿ ಶೋಗಳ ಸ್ಪರ್ದಿಗಳಂತೆ ವರ್ತಿಸುತ್ತಿರುವುದು. ಆ ಸ್ಪರ್ದಿಗಳಿಗೆ ಇರುವ ದೊಡ್ಡ ಮಟ್ಟದ ಚಾಲೆಂಜ್ ತಾವು ಸದಾ ಟಿ.ಆರ್.ಪಿ ಪುಲ್ಲರ್ಸ್ ಆಗಿರಬೇಕು. ಅಂತಹದೊಂದು ಪ್ರಯತ್ನದಲ್ಲಿ ಯಶಸ್ವಿಯಾದರೆ ಎಲಿಮಿನೇಟ್ ಆಗದಂತೆ ಬಹಳ ಕಾಲ ಉಳಿಯಬಹುದು. ಪ್ರಸ್ತುತ ಪ್ರಧಾನ ಮಂತ್ರಿಗೂ ಇಂತಹದೇ ಗೀಳು ಹತ್ತಿದಂತಿದೆ.

ನಮ್ಮಲ್ಲಿ ಬಹುತೇಕರು ಕೈಗಳ ಮೇಲೆ ಹಚ್ಚೆ ಹಾಕಿಸುತ್ತಾರೆ. ಹಾಗೆ ಹಾಕಿಸುವರಾರೂ ತಮ್ಮ ಹೆಸರನ್ನು ಬರೆಸಿಕೊಳ್ಳುವುದಿಲ್ಲ, ಬದಲಿಗೆ ತಮ್ಮ ಪ್ರೀತಿಪಾತ್ರರ ಹೆಸರನ್ನು ಸದಾ ಹಸಿರಾಗಿರಿಸಲು ಬರೆಸಿಕೊಳ್ಳುತ್ತಾರೆ. ಈಗ ಟಾಟ್ಟೂ ಕಾಲದಲ್ಲೂ ಅದೇ ಮನೋಭಾವ ಮುಂದುವರಿದಿದೆ. (ಇಲ್ಲಿ ಹೆಸರಿಗಿಂತ ಚಿತ್ರ ಮುನ್ನೆಲೆಗೆ ಬಂದಿರಬಹುದು). ಆದರೆ ತನ್ನ ಹೆಸರನ್ನೇ ಅಚ್ಚಾಗಿಸಿರುವ ಅಂಗಿಯನ್ನು ಪ್ರಮುಖ ರಾಜತಾಂತ್ರಿಕ ಮಾತುಕತೆ (ಒಬಾಮಾ ಭೇಟಿ) ಸಂದರ್ಭದಲ್ಲಿ ಹಾಕಿಕೊಂಡ ಪ್ರಧಾನಿ ಮನಸ್ಥಿತಿ ನೆನಸಿಕೊಂಡರೆ ರೇಜಿಗೆ ಹುಟ್ಟುತ್ತೆ.

ಮೊನ್ನೆ ಮೊನ್ನೆವರೆಗೆ ಪಾಕಿಸ್ತಾನಕ್ಕೆ ‘ಲವ್ ಲೆಟರ್ಸ್ ಬರೆಯುವುದನ್ನ ನಿಲ್ಲಿಸಬೇಕು’ ಎಂದು ಗುಟುರು ಹಾಕುತ್ತಿದ್ದ ವ್ಯಕ್ತಿ, ಇದ್ದಕ್ಕಿದ್ದಂತೆ ಪಾಕ್ ಗೆ ಭೇಟಿ ನೀಡುತ್ತಾರೆ. ಸೌಹಾರ್ದ ವಾತಾವರಣಕ್ಕೆ ಅಂತಹದೊಂದು ಪ್ರಯತ್ನ ಶ್ಲಾಘನೀಯವೇ, ಆದರೆ, ಅದರ ಹಿಂದಿನ ಬದ್ಧತೆ ಪ್ರಶ್ನಾರ್ಹ. ಸಂಗೀತಗಾರರು, ಕ್ರಿಕೆಟಿಗರು ಎರಡೂ ದೇಶಗಳಲ್ಲಿ ಮುಕ್ತವಾಗಿ ಓಡಾಡಿಕೊಂಡಿರಲು ವಿರೋಧ ವ್ಯಕ್ತ ಪಡಿಸುವ ಪರಿವಾರಕ್ಕೆ ನಿಷ್ಠನಾಗಿರುವ ವ್ಯಕ್ತಿಯ ಬದ್ಧತೆ ಪ್ರಶ್ನಿಸುವುದು ಸಹಜ. ಅದರಾಚೆಗೆ, ಇದು ಕೇವಲ ಪ್ರಚಾರಕ್ಕೆ ಜೋತು ಬಿದ್ದವರ ಸ್ಟ್ರಾಟಜಿಯಾಗಿದ್ದರೆ (ಮತ್ತದೇ ಬಿಗ್ ಬಾಸ್ ಸ್ಪರ್ಧಿಯಂತೆ) ನಾಚಿಕೆಗೇಡು.
ಇವರ ಪ್ರಚಾರದ ಗೀಳಿಗೆ ಇನ್ನೊಂದು ಉದಾಹರಣೆ ವಿದೇಶಗಳಿಗೆ ಭೇಟಿ ನೀಡಿದಾಗ ಅಲ್ಲಿ ನಡೆಸುವ ಎನ್.ಆರ್.ಐ ಸಭೆಗಳು. ಬಿಹಾರದಲ್ಲಿ ಸೋತು ಮುಖ ಮುಚ್ಚಿಕೊಳ್ಳುವ ಪರಿಸ್ಥಿತಿ ಎದುರಾದಾಗ, ಇಲ್ಲಿ ಕಳೆದುಕೊಂಡದ್ದನ್ನು ಹುಡುಕಲು ಲಂಡನ್ ನಲ್ಲಿ ಪ್ರಯತ್ನಿಸುತ್ತಾರೆ.

ಭಾರತಕ್ಕೆ ಹೂಡಿಕೆ ತರುವ ಪ್ರಯತ್ನವಾಗಿ ಅವರು ಅನೇಕ ಗ್ಲೋಬಲ್ ನಾಯಕರನ್ನು ಭೇಟಿ ಮಾಡುತ್ತಿರುವ ಸುದ್ದಿಗಳು ವಿದೇಶಿ ಪ್ರವಾಸದ ಹೊತ್ತಿನಲ್ಲಿ ಬಂದಿವೆ. ಗೂಗಲ್, ಮೈಕ್ರೋಸಾಫ್ಟ್ ಫೇಸ್ ಬುಕ್..ಹೀಗೆ ಹಲವು ಸಂಸ್ಥೆಗಳ ಮುಖ್ಯಸ್ಥರನ್ನು ಅವರು ಭೇಟಿ ಮಾಡಿದ್ದಾರೆ. ಅದರ ಹಿಂದೆಯೂ ಕೂಡ ದೂರದೃಷ್ಟಿಗಿಂತ ಪ್ರಚಾರದ ಗೀಳೇ ಪ್ರಮುಖವಾಗಿ ಕಾಣುತ್ತಿದೆ. ಮೇಲೆ ಹೇಳಿರುವ ಯಾವ ಕಂಪನಿಗಳೂ, ಭಾರತದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆಗೆ ಸಮಾಧಾನಕಾರ ಪರಿಹಾರ ನೀಡಲಾರವು. ಅವರು ಇಲ್ಲಿಯ ರೈಲ್ವೇ ನಿಲ್ದಾಣಗಳಲ್ಲಿ ವೈ-ಫೈ ಅಳವಡಿಸಬಹುದು, ಫ್ರೀ-ಬೇಸಿಕ್ಸ್ ಹೆಸರಿನಲ್ಲಿ ಮಂಗಮಾಡಬಹುದು. ಆದರೆ ನಿರುದ್ಯೋಗ ಸಮಸ್ಯೆ ನೀಗಬಲ್ಲವಂತಹವು ದೊಡ್ಡ ದೊಡ್ಡ ಉದ್ದಿಮೆಗಳು.

ಲಕ್ಷ್ಮಿ ಮಿತ್ತಲ್ ಬಳ್ಳಾರಿ ಸಮೀಪ ಸ್ಟೀಲ್ ಪ್ಲಾಂಟ್ ಹಾಕುವ ಯೋಜನೆ ಬಹಳ ದಿನಗಳಿಂದ ಪೂರ್ಣಗೊಂಡಿಲ್ಲ. ಅಂತಹದೊಂದು ಉದ್ದಿಮೆ ಬಂದರೆ, ನೂರಾರು ಕೈಗಳಿಗೆ ಕೆಲಸ ಸಿಗುತ್ತೆ. ಫೇಸ್ ಬುಕ್ ನವರು ಬಂದು ಇಲ್ಲಿ ಕನಿಷ್ಟ ಪಕ್ಷ ಒಂದು ಪುಸ್ತಕ ಅಂಗಡಿಯನ್ನೂ ಇಡುತ್ತಾರೆಂದು ನಿರೀಕ್ಷಿಸಲಾಗದು. ಹೀಗಿರುವಾಗ ಕೇವಲ ಪ್ರಚಾರ ಪ್ರೇರಿತ ಸ್ಟ್ರಾಟಜಿಗಳನ್ನು ಅನುಸರಿಸಿ ಬಿಗ್ ಬಾಸ್ ಸ್ಪರ್ಧಿಯೊಬ್ಬ ಟಿ.ಆರ್.ಪಿ ರೇಸ್ ನಲ್ಲಿ ಕೊನೆತನಕ ಉಳಿದುಕೊಂಡು ದುಡ್ಡು ಗೆಲ್ಲಬಹುದು. ಆದರೆ ಪ್ರಜಾಪ್ರಭುತ್ವದಲ್ಲಿ ಹಾಗಾಗುವುದಿಲ್ಲ. ಜನರನ್ನು ಮರಳು ಮಾಡಲಾಗದು. ಬ್ಯಾಂಕ್ ಅಕೌಂಟ್ ತೆರೆದಿರುವ ಮಂದಿ ಆಗಾಗ ಬ್ಯಾಂಕ್ ಗಳಿಗೆ ಭೇಟಿ ನೀಡಿ 15 ಲಕ್ಷ ರೂ ಯಾವಾಗ ಬರುತ್ತೆ ಎಂದು ಕೇಳುತ್ತಿದ್ದಾರೆ.

10 thoughts on “ರಿಯಾಲಿಟಿ ಶೋ ಪ್ರಧಾನಿ!

  1. Salam Bava

    ರಿಯಾಲಿಟಿ ಶೋ ಪ್ರಧಾನಿ-ಅತ್ಯಂತ ಸೂಕ್ತ ತಲೆಬರಹ . ಮೋದಿಯವರ ಕ್ಯಾಬಿನೆಟ್ ತುಂಬಾ ಅಸಮರ್ಥರೇ ತುಂಬಿದ್ದಾರೆ ,ಅದನ್ನು ಸ್ವತಹ ಬಿಜೆಪಿ ಒಪ್ಪಿಕೊಂಡಿದೆ . ಅವರಲ್ಲಿ ದೇಶ ಆಳುವ ಸಾಮರ್ಥ್ಯದ ಕೊರತೆ ಇದೆ . ಒಮ್ಮೆ ಕಾಂಗ್ರೇಸಿನಲ್ಲಿರುವ ಘಟಾನುಘಟಿಗಳನ್ನು ನೋಡಿ ,ಮತ್ತು ಮೋದಿಯವರನ್ನು ಸಹಾ ಸೇರಿಸಿ ಅವರ ಮಂತ್ರಿ ಮಂಡಲವನ್ನು ತುಲನೆ ಮಾಡಿ . ಒಂದೇ ಉದಾಹರಣೆ ಸಾಕು – ಪಠಾಣ್ ಕೋಟೆಯಲ್ಲಿ ಭೀಕರರು ತಾಂಡವವಾಡುತ್ತಿರುವಾಗ ಪ್ರಧಾನಿ ಯೋಗ ಪಾಠ ಮಾಡುತ್ತಿದ್ದರೆ ,ಅವರ ರಕ್ಷಣಾ ಮಂತ್ರಿ ಗೋವೆಯಲ್ಲಿ ಬೀಚ್ ರಾಜಕೀಯ ಮಾಡುತ್ತಿದ್ದರು . ಗ್ರಹ ಮಂತ್ರಿ ಟ್ವೀಟ್ ಮಾಡಿ ಆಕ್ರಮಣ ಮುಗಿಯಿತು ಎಂದವರು ,ಸ್ವಂಥ ಟ್ವೀಟ್ ನ್ನೇ ಡಿಲೀಟ್ ಮಾಡುತ್ತಾರೆ .
    ಇಂತವರಿಂದ ಎಷ್ಟು ಬೇಗ ಮುಕ್ತಿ ಸಿಗುತ್ತೋ ಅಷ್ಟು ನಮಗೆ ,ನನ್ನ ಈ ದೇಶಕ್ಕೆ ಒಳ್ಳೆಯದು . ದೇವರು ಕಾಪಾಡಲಿ

    Reply
    1. ಸೀತಾ

      ಅಯ್ಯೋ ಬಾವಯ್ಯ! ಸೆಕ್ಯೂಲರ್ ದೀದಿ ನೇತೃತ್ವದಲ್ಲಿ ಮುಸ್ಲಿಂ ಮತಾಂಧತೆಯ ಕಾರಣದಿಂದ ಮಾಲ್ಡ ಹೊತ್ತಿ ಉರಿಯುತ್ತಿರುವ ಈ ಸಂದರ್ಭದಲ್ಲಿ ತಾವು ಮೋದಿಯವರನ್ನು ಶಪಿಸುತ್ತಿದ್ದೀರಲ್ಲ!

      Reply
      1. ಸೀತಾ

        “ಮ್ಮ ವಿಕ್ರತ ,ಅಸಹಿಸ್ಟ್ನು ಮನಸ್ಸಿನ ನಂಜನ್ನು ಚೆನ್ನಾಗಿ ಕಾರಿದ್ದೀರಿ ”

        ನಿಮ್ಮ ಮತಾಂಧತೆಯನ್ನು ವಿರೋಧಿಸುವವರನ್ನು ವಿಕೃತ ಅಸಹಿಷ್ಣು ಅಂತ ಕರೆಯುವ ನಿಮ್ಮದು ಬಹಳ ಸುಂದರವಾದ ಮನಸ್ಸೇ ಬಾವ ಅವರೇ?

        “ಮೋದಿ ಯ ಬೆಂಬಲಿಗರಾದರೆ ಅದನ್ನು ಪ್ರಕಟಿಸಲು ಯಾಕೆ ಹಿಂಜರಿಕೆ”

        ಮೋದಿಯವರಿಗೆ ಇಶ್ಯೂ ಆಧಾರಿತ ಬೆಂಬಲ ನೀಡುತ್ತೇನೆ, ಮನಮೋಹನ ಸಿಂಹರಿಗೆ ಹಿಂದೆ ನೀಡಿದ ರೀತಿಯಲ್ಲೇ, ಇಂದು ಸಿದ್ದರಾಮಯ್ಯನವರಿಗೆ ನೀಡುತ್ತಿರುವ ರೀತಿಯಲ್ಲೇ. ಇಲ್ಲಿ ಹಿಂಜರಿಕೆ ಎಲ್ಲಿದೆ?!

        “ನನ್ನ ಕಮೆಂಟಿಗೆ ಇಷ್ಟು ಪ್ರಕೋಪವೇಕೆ ?”

        ಸುಳ್ಳು ಹೇಳಿ ಸತ್ಯ ಎಂದು ಸಾಧಿಸುವ ಸಲಾಂ ಬಾವರಂತಹ ಮತೀಯವಾದಿಗಳ ಪಾತಕಗಳ ಬಗ್ಗೆ ಸಾತ್ವಿಕ ಸಿಟ್ಟು ವ್ಯಕ್ತಪಡಿಸಲು ನನಗೆ ಪ್ರಜಾಸತ್ತಾತ್ಮಕವಾದ ಹಕ್ಕು ಇದೆ. ನಾನಿರುವುದು ಪ್ರಜಾಪ್ರಭುತ್ವವನ್ನು ನಂಬಿರುವ ಭಾರತದಲ್ಲಿ, ಅಲ್ ಖೈದಾ ಹಾಗೂ ಐ ಎಸ ಐ ಗಳ ಕಟಪುತಲೀಗಳಾದ ಮುಸ್ಲಿಂ ರಾಷ್ಟ್ರದಲ್ಲಲ್ಲ!

        “ಪಾಪದ ಮುಸಲ್ಮಾನರಿಗೆ ಮೇಲೆ ಅಪವಾದ ಹೊರಿಸಿ ಸಾದಿಸಲು ಏನೂ ಇಲ್ಲ”

        ಪಾಪದ ಭಾರತೀಯ ಮುಸಲ್ಮಾನರ ಮನಸ್ಸಿನಲ್ಲಿ ಕೋಮುದ್ವೇಷದ ಕಿಚ್ಚು ಹತ್ತಿಸಿ ಹೃದಯವನ್ನು ವಿಷವಾಗಿಸಲು ಹೊರಟಿರುವ ನಿಮ್ಮಂತಹವರೇ ಅಲ್ಲವೇ ಮಾಲ್ಡ ಗಲಭೆಯ ರೂವಾರಿಗಳು? ಇನ್ನಾದರೂ ದಾನವತೆಯಿಂದ ಮಾನವತೆ ಕಡೆ ಹೆಜ್ಜೆ ಇಡಿ.

        Reply
  2. Salam Bava

    ಶೀತಯ್ಯ , ಕಲುಷಿತ ಮಾನಸಿಕವಸ್ಥೆಯ ಕಮಲೇಶ್ ತಿವಾರಿ ಎಂಬವರ ಸಲಿಂಗ ಕಾಮದ ಪರಕಾಷ್ಟೆಯೆ ಮಾಲ್ಡಾದ ಗಲಭೆ!ಸುಮ್ಮನೆ ದೀದಿಯನ್ನು ಯಾಕೆ ಆರೋಪಿಸುತ್ತೀರಿ . ಅಸ್ಸಾಂನ ಗವರ್ನರ್ ಹೇಳಿಕೆ -” ಹಿಂದುಸ್ಥ್ಹಾನ ಹಿಂದುಗಳಿಗಾಗಿ ” ಮತ್ತು ಕಮಲೇಶ್ ಹೇಳಿಕೆ ಒಂದಕ್ಕೊಂದು ಪೂರಕ . ಅಸ್ಸಾಂ ಮತ್ತು ಪ.ಬಂಗಾಳ ದ ಚುನಾವಣಾ ಸಿದ್ದತೆ ಬಿಜೆಪಿ ಯಿಂದ . ಇದನ್ನು ಗ್ರಹಿಸಲು ರಾಕೆಟ್ ಸೈನ್ಸ್ ನ ಅಗತ್ಯವಿಲ್ಲ ಎಂದು ಭಕ್ತರಿಗೆ ನನ್ನ ಸಣ್ಣ ಸಲಹೆ

    Reply
    1. ಸೀತಾ

      ಅಯ್ಯೋ ಬಾವಯ್ಯ! ಒಬ್ಬ ನಗಣ್ಯ ಪೋಕರಿ ಕಮಲೇಶ ತಿವಾರಿಯ ಯಕಶ್ಚಿತ್ ಅಭಿಪ್ರಾಯಕ್ಕೆ ಏಕೆ ನಿಮ್ಮ ಜನ ಇಷ್ಟೊಂದು ಬೆಲೆ ನೀಡಿ ಮಾಲ್ಡವನ್ನು ಕೋಮು ದಳ್ಳುರಿಗೆ ಬಲಿ ನೀಡುತ್ತಿದ್ದಾರೆ? ಸಹಿಷ್ಣುತೆಯ ಪಾಠವನ್ನು ನಿಮ್ಮವರು ಕಲಿತಿಲ್ಲವೇ?

      Reply
      1. Salam Bava

        ತಿವಾರಿಯ ಅಭಿಪ್ರಾಯಕ್ಕೆ ಬಲ ಬರುವುದು ನಿಮ್ಮಂಥ ಭಕ್ತರು ರೊಚ್ಚಿಗೆದ್ದು ಕೋಮು ದಳ್ಳುರಿ ಹಚ್ಚಿದಾಗ !ನಮ್ಮ ಮೊದೀಜಿಯವರು ಸಹಾ ಅಧಿಕಾರಕ್ಕೆ ಬಂದದ್ದು ಗುಜರಾತ್ ಗಲಬೆಯ ಪಲವಾಗಿ ಅಲ್ಲವೇ . ನಿಮ್ಮಂಥ Die hard ಹಿಂಬಾಲಕರು ಇದ್ದರೆ ಎಲ್ಲವನ್ನೂ ಜೀರ್ಣಿಸಿ ಕೊಳ್ಳಬಹುದು ,ಅಧಿಕಾರದ ,ಸಂಪತ್ತಿನ ತುತ್ತ ತುದಿಗೇರಿ ಅನುಭವಿಸಬಹುದು .

        Reply
        1. ಸೀತಾ

          ಅಯ್ಯೋ ಬೆಪ್ಪೆ! ನಾನು ಮೋದಿಯವರ ಅನುಚರನೂ ಅಲ್ಲ ಅಭಿಮಾನಿಯೂ ಅಲ್ಲ. ಕಾಮಾಲೆ ಕಣ್ಣಿಗೆ ಲೋಕವೇ ಹಳದಿ ಎಂಬ ಗಾದೆಯಂತೆ ನಿಮ್ಮ ಪ್ರಕಾರ ನಿಮ್ಮ ಮತಾಂಧತೆಯನ್ನು ವಿರೋಧಿಸುವವರೆಲ್ಲ ಮೋದಿ ಅಭಿಮಾನಿಗಳೇ ಆಗಿರಬೇಕು! ಮೋದಿ ಗುಮ್ಮ ತೋರಿಸಿ ಮತಾಂಧತೆಯನ್ನು ಸಮರ್ಥಿಸಿಕೊಳ್ಳುವ ನಿಮ್ಮ ವರ್ತನೆಯನ್ನು ಲಜ್ಜೆಗೇಡು. ಮೊದಿಯವರಾದರೋ ಕಾಂಗ್ರೆಸ್ ಸರಕಾರದ ಅವಧಿಯಲ್ಲೇ ಆ ಸರಕಾರವೇ ನೇಮಿಸಿದ ಸಿಟ್ ತನಿಖೆಗೆ ಒಳಗಾಗಿ ಕ್ಲೀನ್ ಚಿಟ್ ಪಡೆದರು. ಮಾಲ್ಡಾ ಮಾರಣಹೋಮಕ್ಕೆ ದೀದಿಯನ್ನು ಹೊಣೆಯಾಗಿಸಿ ಸಿಟ್ ತನಿಖೆ ಮಾಡುವಂತೆ ತಾವು ಆಗ್ರಹ ಮಾಡುತ್ತೀರಾ? ಬಾವ ಸಾಹೇಬರೇ, ಭಾರತದ ಮುಸಲ್ಮಾನರು ಹೃದಯವಂತ ಮನುಷ್ಯರೇ. ಅವರನ್ನು ಮತಾಂಧತೆಯ ಮೂಲಕ ಮತಿಹೀನ ರಾಕ್ಷಸರನ್ನಗಿಸಬೇಡಿ. ಮಾಲ್ಡದಲ್ಲಿ ಮಾಡಿದ ಹಾಗೆ ಮಂಗಳೂರಿನಲ್ಲೂ ಮಾಡಬೇಡಿ.

          Reply
        2. ಸೀತಾ

          “ತಿವಾರಿಯ ಅಭಿಪ್ರಾಯಕ್ಕೆ ಬಲ ಬರುವುದು ನಿಮ್ಮಂಥ ಭಕ್ತರು ರೊಚ್ಚಿಗೆದ್ದು ಕೋಮು ದಳ್ಳುರಿ ಹಚ್ಚಿದಾಗ”

          ಸಲಾಂ ಬಾವ ಎಂಬ ಹೆಸರಿನಲ್ಲಿ ಪ್ರತಿಕ್ರಿಯಿಸುತ್ತಿರುವ ಮಹನೀಯರಿಗೆ ಸುಳ್ಳು ಹೇಳುವುದೇ ಚಟ ಅಂತ ಕಾಣುತ್ತದೆ. ತಿವಾರಿ ಎಂಬ ಪೋಕರಿಯ ಯಕಶ್ಚಿತ್ ಹೇಳಿಕೆಗೆ ಬಲ ನೀಡಿದ್ದು ಯಾರು? ಉತ್ತರಪ್ರದೇಶದಲ್ಲಿ ಲಕ್ಷಕ್ಕೂ ಹೆಚ್ಚು ಮುಸಲ್ಮಾನರು ಗುಂಪು ಸೇರಿ ತಿವಾರಿಯ ತಲೆಕಡಿದವರಿಗೆ ದೊಡ್ಡ ಇನಾಮು ನೀಡುವ ಘೋಷಣೆ ಮಾಡಿದ್ದು ಬಾವ ಅವರಿಗೆ ತಿಳಿದಿಲ್ಲವೇ? ಬೆಂಗಳೂರಿನಲ್ಲೂ ಸಹಸ್ರಾರು ಜನ ಮುಸಲ್ಮಾನರು ಗುಂಪಾಗಿ ತಿವಾರಿಯ ಮೇಲೆ ಸೇಡು ತೀರಿಸಿಕೊಳ್ಳುವ ಮಾತನ್ನಾಡಲಿಲ್ಲವೇ? ಮಾಲ್ಡಾದಲ್ಲಿ ಲಕ್ಷಗಟ್ಟಲೇ ಮುಸಲ್ಮಾನರನ್ನು ಸೇರಿಸಿ ಗಲಭೆ ಎಬ್ಬಿಸಿದ್ದು ಯಾರು? ತಿವಾರಿಯ ಮೂರ್ಖ ಹೇಳಿಕೆಗೆ ಹಿಂದೂಗಳು ಎಲ್ಲಿ ಬೆಂಬಲ ನೀಡಿ ರೊಚ್ಚಿಗೆದ್ದಿದ್ದಾರೆ ಹೇಳಿ ಬಾವ ಅವರೇ? ಎಲುಬಿಲ್ಲದ ನಾಲಿಗೆಯಷ್ಟೇ ಅಲ್ಲ ಸುಳ್ಳನ್ನೇ ಉತ್ಪಾದಿಸುವ ಪಾತಕಿ ಮನಸ್ಸು ನಿಮ್ಮದು.

          Reply
          1. Salam Bava

            “ಅಯ್ಯೋ ಬೆಪ್ಪೆ! ನಾನು ಮೋದಿಯವರ ಅನುಚರನೂ ಅಲ್ಲ ಅಭಿಮಾನಿಯೂ ಅಲ್ಲ.”
            ಇಲ್ಲಿ ನಿಮ್ಮ ವಿಕ್ರತ ,ಅಸಹಿಸ್ಟ್ನು ಮನಸ್ಸಿನ ನಂಜನ್ನು ಚೆನ್ನಾಗಿ ಕಾರಿದ್ದೀರಿ ,ಭಕ್ತ ,ಅಭಿಮಾನಿ ಅಲ್ಲವಾದರೆ ತೆಳು ಪರದೆಯ ಹಿಂದೆ ಯಾಕೆ ಅವರನ್ನು ನ್ಯಾಯೀಕರಿಸುತ್ತೀರಿ . ಮೋದಿ ಯ ಬೆಂಬಲಿಗರಾದರೆ ಅದನ್ನು ಪ್ರಕಟಿಸಲು ಯಾಕೆ ಹಿಂಜರಿಕೆ ?ನನ್ನ ಕಮೆಂಟಿಗೆ ಇಷ್ಟು ಪ್ರಕೋಪವೇಕೆ ?ಮಾಲ್ಡ ,ಮಂಗಳೂರು ಎಲ್ಲಾ ಕಡೆ ದಂಗೆ ,ಹಿಂಸೆ ನಡೆಸುವವರು ನಿಮ್ಮದೇ ದಳದ ಕಪಿಗಳು ,ನೀವು ಹೇಳಿದ್ದನ್ನು ಅವರಿಗೆ ಬೋದಿಸಿ ,ಅವರನ್ನು ಸರಿದಾರಿಗೆ ತನ್ನಿ .ಪಾಪದ ಮುಸಲ್ಮಾನರಿಗೆ ಮೇಲೆ ಅಪವಾದ ಹೊರಿಸಿ ಸಾದಿಸಲು ಏನೂ ಇಲ್ಲ

Leave a Reply

Your email address will not be published. Required fields are marked *