Category Archives: ಶ್ರೀಪಾದ್ ಭಟ್

ಕೆಂಡದ ಗಿರಿಯ ಮೇಲೊಂದು ಅರಗಿನ ಕಂಬ

download– ಬಿ.ಶ್ರೀಪಾದ ಭಟ್

“ಅಸಮಾನತೆಯು ಹಿಂದೂಯಿಸಂನ ಆತ್ಮ. ಸಾಮಾಜಿಕ ಉಪಯುಕ್ತತೆಯ ಫಲಾಫಲವನ್ನು ಪರಾಮರ್ಶಿಲು ಸೋಲುವ ಹಿಂದೂಯಿಸಂ ಫಿಲಾಸಫಿಯು ವೈಯುಕ್ತಿಕ ನ್ಯಾಯಪರತೆಯ ಫಲಾಫಲವನ್ನು ಪರಾಮರ್ಶಿಸಲು
ಸಹ ಸೋತಿದೆ.” – ಡಾ.ಬಿ.ಆರ್.ಆಂಬೇಡ್ಕರ್.

ಹತ್ತೊಂಬತ್ತನೇ ಶತಮಾನದ ಪ್ರಮುಖ ಆಧ್ಯಾತ್ಮದ ಗುರುವಾಗಿದ್ದ ರಾಮಕ್ರಿಷ್ಣ ಪರಮಹಂಸರು ಧರ್ಮದ ಕುರಿತಾಗಿ ವ್ಯಕ್ತಿಯೊಬ್ಬನು ತಾನು ನಂಬಿದ ಧರ್ಮದಲ್ಲಿ ಅನೇಕ ಲೋಪದೋಷಗಳಿದ್ದಲ್ಲಿ ಮತ್ತು ಆ ವ್ಯಕ್ತಿಯು ಪ್ರಾಮಾಣಿಕ ಮತ್ತು ಶ್ರದ್ಧೆಯುಳ್ಳವನಾಗಿದ್ದರೆ ಆಗ ದೇವರು ಸ್ವತಃ ಆ ಲೋಪದೋಷಗಳನ್ನು ಸರಿಪಡಿಸುತ್ತಾನೆ. ಬೇರೊಂದು ಧರ್ಮದಲ್ಲಿ ಲೋಪದೋಷಗಳಿದ್ದರೆ ಅದು ಆ ಧರ್ಮದಲ್ಲಿ ನಂಬಿಕೆಯಿಟ್ಟವರಿಗೆ ಸಂಬಂಧಪಟ್ಟಿರುತ್ತದೆ, ದೇವರು ಅದನ್ನು ಸರಿಪಡಿಸುತ್ತಾನೆ. ನಾನು ಹಿಂದೂಯಿಸಂ, ಇಸ್ಲಾಂ, ಕ್ರಿಶ್ಚಿಯಾನಿಟಿ ಎಲ್ಲಾ ಧರ್ಮಗಳನ್ನು ಪಾಲಿಸಿದ್ದೇನೆ. ಈ ಧರ್ಮಗಳ ಆಚರಣೆಗಳನ್ನು ಆಳವಾಗಿ ಆಚರಿಸಿದಾಗ ನಾನು ಕಂಡುಕೊಂಡ ಸತ್ಯವೇನೆಂದರೆ ಒಂದೇ ದೇವರ ಕಡೆಗೆ ನಾವೆಲ್ಲಾ ಚಲಿಸುತ್ತಿದ್ದೇವೆ. ಆದರೆ ವಿಭಿನ್ನ ದಾರಿಗಳನ್ನು ಬಳಸುತ್ತಿದ್ದೇವೆ.

ದುರಂತವೆಂದರೆ ಧರ್ಮದ ಹೆಸರಿನಲ್ಲಿ ಹಿಂದೂಗಳು, ಮುಸ್ಲಿಂರು, ಕ್ರಿಶ್ಚಿಯನ್ನರು, ವೈಶ್ಣವ, ಶೈವ ಹೀಗೆ ಪರಸ್ಪರ ಕಚ್ಚಾಡುತ್ತಿರುವುದು. ಕ್ರಿಷ್ಣ ಎಂದು ಕರೆಯಲ್ಪಡುವ ದೇವರು ಶಿವ ಎಂದು ಕರೆಯಲ್ಪಡುತ್ತಾನೆ, ಶಿವ ಎಂದು ಕರೆಯಲ್ಪಡುವ ದೇವರು ಜೀಸಸ್ ಎಂದೂ, ಅಲ್ಲಾ ಎಂದೂ ಕರೆಯಲ್ಪಡುತ್ತಾನೆ. ಎಲ್ಲರೂ ಒಂದೇ ಆದರೆ ಈ ನಂಬಿಕೆಯನ್ನು ಜನರು ಜನರು ಸೋಲು ಗೆಲವುಗಳ ನೆಲೆಯಲ್ಲಿ ನೋಡುವ ಜನರು ತಮ್ಮ ಧರ್ಮ ಮಾತ್ರ ಸದಾ ಗೆಲವು ಸಾಧಿಸುತ್ತದೆ ಮತ್ತು ಬೇರೆಲ್ಲ ಧರ್ಮಗಳು ಸೋಲುತ್ತವೆ ಎಂದು ಚಿಂತಿಸುತ್ತಾರೆ ಎಂದು ಹೇಳುತ್ತಾರೆ. ಚಿಂತಕ ಜ್ಯೋತಿರ್ಮಯ ಶರ್ಮ ಅವರು ಸಂಶೋಧನ ಪುಸ್ತಕ Cosmic Love and Human Apathy: Swami Vivekananda’s Re-statement of Religion
ದಲ್ಲಿ ರಾಮಕ್ರಿಷ್ಣ ಮತ್ತು ಅವರ ಶಿಷ್ಯರಾದ ವಿವೇಕನಾಂದರ ಕುರಿತಾಗಿ ಹೊಸ ಚಿಂತನೆಗಳೊಂದಿಗೆ ಚರ್ಚೆಗಳನ್ನು ನಡೆಸುತ್ತಾರೆ. ಆ ಪುಸ್ತಕದಲ್ಲಿ ಜ್ಯೋತಿರ್ಮಯ ಶರ್ಮ ಅವರು ಬರೆಯುತ್ತಾರೆ 1896ರಲ್ಲಿ ಅಮೇರಿಕಾ ಮತ್ತು ಲಂಡನ್ ಗೆ ಪ್ರವಾಸ ಮಾಡುವ ವಿವೇಕಾನಂದರು ಅಲ್ಲಿ ಧರ್ಮದ ಕುರಿತಾಗಿ, ತಮ್ಮ ಗುರುಗಳಾದ ರಾಮಕ್ರಿಷ್ಣರ ಕುರಿತಾಗಿ ಮಾತನಾಡುತ್ತ ರಾಮಕ್ರಿಷ್ಣ ಅವರು ಎಲ್ಲಾ ಧರ್ಮಗಳ ಕುರಿತಾದ ಸತ್ಯಗಳನ್ನು ಅರಿಯಲು ಉತ್ಸುಕರಾಗಿದ್ದರು. ಅವರು ಯಾವುದೇ ವ್ಯಕ್ತಿಯ ವೈಯುಕ್ತಿಕ ನಂಬಿಕೆಯನ್ನು ತೊಂದರೆಗೊಳಪಡಿಸಲು ಬಯಸುತ್ತಿರಲಿಲ್ಲ ಎಂದು ಭಾಷಣ ಮಾಡಿದ್ದರು. ರಾಜಕೀಯವಾಗಿ ಹಿಂದೂಯಿಸಂ ಕುರಿತಾಗಿ ಆಳವಾಗಿ ಮಾತನಾಡಿದ್ದ ವಿವೇಕಾನಂದ ಬೇರೆ ಧರ್ಮದ ಜನರ ನಂಬಿಕೆಗಳ ಕುರಿತಾಗಿ ಬಹಳಷ್ಟು ಲಿಬರಲ್ ಆಗಿ ಚಿಂತಿಸುತ್ತಿದ್ದರು.

ಎಲ್ಲಾ ಧರ್ಮಗಳ ನಂಬಿಕೆಗಳು ವಿಭಿನ್ನವಾಗಿದ್ದರೂ ಅದು ಕಡೆಗೆ ಒಂದೇ ದೇವರನ್ನು ಪ್ರಾಥಿಸುತ್ತದೆ ಎಂದು ವಿವೇಕಾನಂದ ಸಹ ನಂಬಿದ್ದರು. ತಮ್ಮ ಅನೇಕ ಸಾರ್ವಜನಿಕ ಭಾಷಣಗಳಲ್ಲಿ ವಿವೇಕಾನಂದ ಅವರು ತಮ್ಮ ಸಂದೇಶವು ಶಾಂತಿ ಮತ್ತು ಧರ್ಮದ ಒಗ್ಗಟ್ಟನ್ನು ಬೆಂಬಲಿಸುತ್ತದೆ ಮತ್ತು ಶತೃತ್ವವನ್ನು download (1)ನಾನು ವಿರೋಧಿಸುತ್ತೇನೆ ಎಂದು ಹೇಳಿದ್ದಾರೆ. ಸ್ವತಹ ಹಿಂದೂ ಧರ್ಮದ ಕುರಿತಾಗಿ ನಂಬಿಗೆಯನ್ನು ಹೊಂದಿದ್ದ ವಿವೇಕಾನಂದ ಪ್ರತಿಯೊಬ್ಬರೂ ತನ್ನ ಧರ್ಮದ ಕುರಿತಾದ ಇರುವ ನಂಬಿಕೆಯ ಪ್ರಮಾಣದಷ್ಟೇ ವಿವಿಧ ಧರ್ಮಗಳ ಕುರಿತಾಗಿ ಇರಬೇಕೆಂದು ಹೇಳಿದ್ದರು. ನಂಬಿಕೆಗಳು ಬಹುರೂಪಿಯಾಗಿರುತ್ತವೆಂದು ನಂಬಿದ್ದರು. ವಿವಿಧ ಧರ್ಮಗಳ ನಂಬಿಕೆಗಳ ಕುರಿತಾಗಿ ವಿವೇಕಾನಂದ ಅವರು ಜಗತ್ತಿನಲ್ಲಿರುವ ವಿವಿಧ ಪಂಥಗಳನ್ನು ನಾನು ವಿರೋಧಿಸುವುಲ್ಲ. ಪಂಥಗಳ ಸಂಖ್ಯೆ ಹೆಚ್ಚಾದಷ್ಟು ದೇವರಿಗೆ ಆಯ್ಕೆಗಾಗಿ ವಲಯಗಳು ವಿಶಾಲವಾಗುತ್ತ ಹೋಗುತ್ತವೆ. ಆದರೆ ಪ್ರತಿಯೊಂದು ಸಂದರ್ಭದಲ್ಲಿ, ಸಂಗತಿಗಳಲ್ಲಿ, ವ್ಯಾಜ್ಯಗಳಲ್ಲಿ ಒಂದೇ ಧರ್ಮವನ್ನು ಗುರಿಯಾಗಿ ದೂಷಿಸುವುದನ್ನು ನಾನು ವಿರೋಧಿಸುತ್ತೇನೆ. ಪ್ರತಿಯೊಂದು ಧರ್ಮದವರನ್ನು ನಾವು ಒಳಗೊಳ್ಳಬೇಕು ಮತ್ತು ಗೌರವಿಸಬೇಕು ಎಂದು ಪ್ರತಿಪಾದಿಸಿದರು ಎಂದು ಜ್ಯೋತಿರ್ಮಯ ಶರ್ಮ ಹೇಳುತ್ತಾರೆ.

ಒಂದು ಕಡೆ ಧರ್ಮದ ವಿವಿಧ ಮಜಲುಗಳನ್ನು ಅರಿತುಕೊಳ್ಳಲು ಆಧ್ಯಾತ್ಮವನ್ನು ಬಳಸಿಕೊಂಡ ರಾಮಕ್ರಿಷ್ಣ ಹಿಂದೂ ಧರ್ಮವನ್ನು ಸನಾತನ ಧರ್ಮವೆಂದೇ ಪರಿಭಾವಿಸಿದ್ದರು. ಇವರ ಆಧ್ಯಾತ್ಮದ ಚಿಂತನೆಗಳಿಗೂ ಧರ್ಮದ ಕುರಿತಾದ ಶ್ರೇಣೀಕೃತ ವ್ಯವಸ್ಥೆಯ ಕುರಿತಾದ ಚಿಂತನೆಗಳ ನಡುವೆ ಅನೇಕ ವೈರುಧ್ಯಗಳಿದ್ದವು. ಆದರೆ ತಮ್ಮ ಗುರುಗಳಿಂದ ವಿಭಿನ್ನವಾಗಿ ಚಿಂತಿಸಿದ ವಿವೇಕಾನಂದ ಅವರು ಧರ್ಮವನ್ನು ಒಂದು ಕಡೆ ಆಧ್ಯಾತ್ಮದ ತುದಿಯಲ್ಲಿಯೂ ಮತ್ತೊಂದೆಡೆ ರಾಜಕೀಯ ನೆಲೆಯಲ್ಲಿಯೂ ನಿರ್ವಚಿಸಿದರು.
ಹೆಗೆಲ್ನ absolute idealism ಮತ್ತು Phenomenology of Spirit ನ ಫಿಲಾಸಫಿ ಚಿಂತನೆಗಳ ನಂತರ 19ನೇ ಶತಮಾದ ಎರಡು ಮತ್ತು ಮೂರನೇ ದಶಕಗಳಲ್ಲಿ ಯುರೋಪಿನಲ್ಲಿ ಸಂಸ್ಕೃತಿಗಳ ವಿಸ್ಮೃತಿ ಮತ್ತು ಬಂಡವಾಳಶಾಹಿಗಳ ಏಳಿಗೆಗಳು ಆ ಕಾಲದ ದಾರ್ಶನಿಕರಲ್ಲಿ ಚಿಂತೆಯನ್ನು ಹೆಚ್ಚಿಸಿದ್ದವು. ಬೂಜ್ರ್ವ ಶಕ್ತಿಗಳು ತಲೆಯೆತ್ತುತ್ತಿರುವುದು ಅವರಲ್ಲಿ ಆತಂಕವನ್ನುಂಟು ಮಾಡಿತು. ಕಡೆಗೆ 19ನೇ ಶತಮಾನ ಕೊನೆಯ ದಶಕದಲ್ಲಿ ಯುರೋಪ್ ರಾಷ್ಟ್ರಗಳು ಮತ್ತು ಇಂಡಿಯಾದಲ್ಲಿ ರಾಷ್ಟ್ರೀಯ ಹಿತಾಸಕ್ತಿಯನ್ನು, ಚೈತನ್ಯವನ್ನು ಆಧ್ಯಾತ್ಮದ ಚಿಂತನೆಗಳೊಂದಿಗೆ ಬೆಸೆಯಲಾಯಿತು. ಈ ಪ್ರಕ್ರಿಯೆಯು ಕ್ರಮೇಣ ಗಟ್ಟಿಗೊಳ್ಳುತ್ತಾ ಹೋಯಿತೇ ಹೊರತು ಕುಂಠಿತಗೊಳ್ಳಲಿಲ್ಲ. ಧರ್ಮವನ್ನು ಪುನರುಜ್ಜೀವನಗೊಳಿಸುವ ಮಾತುಗಳು ಕೇಳಿಬಂದವು. ಇಂತಹ ಕಾಲಘಟ್ಟದಲ್ಲಿ ವಿವೇಕಾನಂದ ಅವರು ಈ ಹಿಂದೂ ಧರ್ಮದ ಪುನರುಜ್ಜೀವನದ ಚಿಂತನೆಗಳಿಗೆ ಹೊಸ ತಿರುವುಗಳನ್ನು ಕೊಟ್ಟರು. ಈ ಹಿಂದೂ ಧರ್ಮಕ್ಕೆ ಪಾರಮರ್ಥಿಕ ಚಿಂತನೆಗಳ ಜೊತೆ ಜತೆಗೆ ರಾಜಕೀಯ ಪರಿಹಾರವನ್ನೂ ಬೆಸೆದವರು ವಿವೇಕಾನಂದ. ಭಕ್ತಿಪಂಥ ಮತ್ತು ರಾಮಕ್ರಿಷ್ಣ ಪರಮಹಂಸರಂತಹವರು ಪ್ರತಿಪಾದಿಸಿದ್ದ ಸಂಕೇತಗರ್ಭಿತವಾದ, ಉದಾರವಾದಿ ನೆಲೆಗಳಲ್ಲಿದ್ದ ಧರ್ಮದ ಕುರಿತಾದ ಚಿಂತನೆಗಳನ್ನು ಅಲ್ಲಿಂದ ಬೇರ್ಪಡಿಸಿದ ವಿವೇಕಾನಂದ ಅವರು ಹಿಂದೂಯಿಸಂ ಅನ್ನು ಧಾರ್ಮಿಕ
ಸಮ್ಮೋಹಕತೆಯ ತತ್ವಗಳಿಗೆ, ಜನಸಾಮಾನ್ಯರ ರಾಜಕಾರಣಕ್ಕೆ ಹೊರಳಿಸಿದರು.

ರಾಜಕೀಯ ಹಿಂದೂಯಿಸಂಗೆ ಮೊಟ್ಟ ಮೊದಲ ಬುನಾದಿಯನ್ನು ಹಾಕಿದ್ದು ವಿವೇಕಾನಂದ ಅವರು ಎಂದು ಚಿಂತಕರು ವಿಶ್ಲೇಷಿಸುತ್ತಾರೆ. ಕಲೋನಿಯಲ್ ಆಡಳಿತದ ಸಂದರ್ಭದ 19ನೇ ಶತಮಾನದಲ್ಲಿ ಭಕ್ತಿಪಂಥದ ಚಳುವಳಿಯಿಂದ ಪ್ರೇರೇಪಿತಗೊಂಡಿದ್ದ ರಾಮಕ್ರಿಷ್ಣ ಪರಮಹಂಸರು ಧರ್ಮವನ್ನು ಮಾನವೀಯ ಜವಾಬ್ದಾರಿಯ ಮೂಲಕ,ರಹಸ್ಯವೆನಿಸುವ ಆಧ್ಯಾತ್ಮದ ಯೋಗದ ಮೂಲಕ ಬೋಧಿಸುತ್ತ ಮಧ್ಯಮವರ್ಗಗಳನ್ನು ಬೆರಗಾಗಿಸಿದ್ದರು. ಜ್ಯೋತಿರ್ಮಯ ಶರ್ಮ ಅವರು ಆದರೆ ರಾಮಕ್ರಿಷ್ಣ ಪರಮಹಂಸರ ಸಮಾನತಾ ಭಾವದ, ರಹಸ್ಯಾತ್ಮಕ ಆಧ್ಯಾತ್ಮಕತೆಯಿಂದ ಧರ್ಮವನ್ನು ಸಂಪೂರ್ಣವಾಗಿ ಹೊರತಂದ ವಿವೇಕಾನಂದ ಅವರು ಧರ್ಮದ ನಂಬಿಕೆಯನ್ನು ನೈತಿಕ ಮತ್ತು ದೈಹಿಕ ಶಕ್ತಿಯ ಅಭಿವ್ಯಕ್ತಿಯಾಗಿ ರೂಪಿಸಿದರು ಮತ್ತು ಧರ್ಮ ಮತ್ತು ನಂಬಿಕೆಗಳ ಪರಂಪರೆಯ ಚಿಂತನೆಗಳನ್ನು ಹುಟ್ಟು ಹಾಕಿದರು ಹಾಗೂ ಯಶಸ್ವಿಯಾದರು. ಕೇವಲ ಕಾರಣಗಳ ಮಿತಿಯೊಳಗೆ ಧರ್ಮವನ್ನು ಅರಿತುಕೊಳ್ಳಬೇಕೆಂದು ಪ್ರತಿಪಾದಿಸಿದ ವಿವೇಕಾನಂದ ಹೀಗೆ ಮಾಡುವುದರ ಮೂಲಕ ಸತ್ಯವನ್ನು ವಿವಿಧ ಮಜಲುಗಳಲ್ಲಿ ಅನಾವರಣಗೊಳಿಸಬಹುದೆಂದು, ಪ್ರೀತಿ ಮತ್ತು ಮಮತೆಯನ್ನು ದೇವರನ್ನು ನೋಡುವ ಸಾಕ್ಷಾಧಾರಗಳಾದ ಸಾಮರ್ಥ್ಯಗಳು ಎಂದೂ ಚಿಂತಿಸಿದರು. ಇದರ ಫಲವಾಗಿ ಭಕ್ತಿಪಂಥವು ನಿರಂತರವಾಗಿ ನಿರಾಕರಿಸುತ್ತಾ ಬಂದಿದ್ದ ವಣರ್ಾಶ್ರಮದ ಸನಾತನ ಚಿಂತನೆಗಳ ಸ್ವಧರ್ಮ ಪರಿಕಲ್ಪನೆಯು ಹಿಂಬಾಗಿಲಿನಿಂದ ಪ್ರವೇಶ ಪಡೆದುಕೊಂಡಿತು. ಪೌರುಷತ್ವ, ಬಲಶಾಲಿ ಸಾಮರ್ಥತೆಗಳು ಧರ್ಮದ ಪುನರುಜ್ಜೀವನಕ್ಕೆ ಬುನಾದಿಗಳಾಗಿ ಪ್ರತಿಪಾದನೆಗೊಂಡವು. ಮಾನವೀಯತೆಯ ಪರವಾಗಿದ್ದ ವಿವೇಕಾನಂದರ ಈ ರಾಜಕೀಯ ಹಿಂದೂಯಿಸಂ ಮುಂದೆ ವಿವಿಧ ರೀತಿಯಲ್ಲಿ ಬದಲಾವಣೆಗೊಳ್ಳುತ್ತ ಕಾಲು ಶತಮಾನದ ನಂತರ ಗಾಂಧಿಯವರ ಹಿಂದ್ ಸ್ವರಾಜ್ ಆಗಿ ಹೊರ ಹೊಮ್ಮಿತು ಮdownload (2)ತ್ತು ಸ್ವಾತಂತ್ರ ಚಳುವಳಿಯ ಸಂದರ್ಭದಲ್ಲಿ ರಾಷ್ಟ್ರೀಯತೆಯ ಸ್ವರೂಪ ಪಡೆದುಕೊಂಡಿತು.

ಭಕ್ತಿಪಂಥ ಮತ್ತು ರಾಮಕ್ರಿಷ್ಣ ಪರಮಹಂಸರ ಚಿಂತನೆಗಳ ಈ ಆಧ್ಯಾತ್ಮಕತೆಯ ಸಂಕೇತಗಭರ್ಿತ ಉದಾರವಾದಿ ಚಿಂತನೆಗಳು ಮೇಲಿನಂತೆ ಹೈಜಾಕ್ಗೊಂಡಿದ್ದನ್ನು ಕಣ್ಣಾರೆ ಕಂಡಿದ್ದ ಡಾ.ಬಿ.ಆರ್.ಆಂಬೇಡ್ಕರ್ ಅವರು ಈ ಧಾಮರ್ಿಕ ಆಧ್ಯಾತ್ಮಿಕತೆಯು ಮುಂದೊಂದು ದಿನ ವಿಕಾರ ಸ್ವರೂಪಕ್ಕೆ ತಿರುಗುತ್ತದೆ ಎಂದು ಎಚ್ಚರಿಸಿದ್ದರು. ಈ ಮಾದರಿಯ ಹಿಂದೂ ಧಾರ್ಮಿಕತೆಯ ಆಧ್ಯಾತ್ಮಕತೆಯನ್ನು ಅಂಬೇಡ್ಕರ್ರವರು ಅನೈತಿಕವಾದ,ವಿಕಾರವಾದ ಮೃಗಸದೃಶ್ಯ ಶಕ್ತಿಗೆ ಹೋಲಿಸಿ ಮುಂದೊಂದು ದಿನ ಇದು ರೂಢಿಗತಗೊಳ್ಳುವ ಹೇರುವಿಕೆಯ ಕಾನೂನಾಗಿ ಮಾರ್ಪಡುತ್ತದೆ ಎಂದು 1920ರಲ್ಲಿಯೇ ಎಚ್ಚರಿಸಿದ್ದರು.

ಇಂದು 21ನೇ ಶತಮಾನದಲ್ಲಿ ಈ ಆಧ್ಯಾತ್ಮ ಧಾರ್ಮಿಕತೆಯು ಸಂಪೂರ್ಣವಾಗಿ ವಿಕಾರಗೊಂಡು, ಕ್ರೌರ್ಯದ ಪ್ರದರ್ಶಕ್ಕೆ ಆಡೊಂಬೊಲವಾಗಿ, ಮಾನವ ವಿರೋಧಿ ತತ್ವಗಳಾಗಿ ಪರಿವರ್ತನೆಗೊಂಡು ದಿನೇ ದಿನಕ್ಕೆ ವಿರೂಪಗೊಳ್ಳುತ್ತಿದೆ ಮತ್ತು ಜಟಿಲಗೊಳ್ಳುತ್ತಿದೆ. ಜಾತೀಯತೆಯನ್ನು ವಿರೋಧಿಸಿದ ವಿವೇಕಾನಂದರನ್ನು ತನ್ನ ಮತೀಯವಾದಿ, ಜಾತಿ ಪದ್ಧತಿಯ, ಪ್ರತ್ಯೇಕತೆಯ ಹಿಂದೂ ಧರ್ಮಕ್ಕೆ appropriation ಮಾಡಿಕೊಂಡ ಸಂಘ ಪರಿವಾರ ಈ ಮತಾಂಧತೆಯನ್ನು ವಿರೋಧಿಸುವ ನಾಗರಿಕರ ಮೇಲೆ ದೈಹಿಕ ಮತ್ತು ಮಾನಸಿಕ ಹಲ್ಲೆಗಳನ್ನು ನಡೆಸುತ್ತಿದೆ.

ಈ ಸಂಘ ಪರಿವಾರದ ಲುಂಪೆನ್ ಗುಂಪು ಮತ್ತು ಅವರನ್ನು ಕುರುಡಾಗಿ ಬೆಂಬಲಿಸುವ ಧಾರ್ಮಿಕ ಮತಾಂಧರ ಮೂಲಭೂತವಾದವನ್ನು ವಿರೋಧಿಸುವ ಜನಪರ ಚಿಂತಕರು, ಲೇಖಕರ ಮೇಲೆ ವ್ಯಕ್ತಪಡಿಸುತ್ತಿರುವ ಅಸಹನೆಗಳು ಕ್ರೌರ್ಯದ ನೆಲೆಯಲ್ಲಿ ನಡೆಸುತ್ತಿರುವ ಮಾನಸಿಕ ಹಲ್ಲೆಗಳು ಅಂಬೇಡ್ಕರ್ ಅವರ ಮೇಲಿನ ಎಚ್ಚರಿಕೆಯ ಮಾತುಗಳಿಗೆ ಸಾಕ್ಷಿಯಾಗಿವೆ. ತೀರಾ ಇತ್ತೀಚಿಗೆ ಪೆರುಮಾಳ್ ಮುರುಗನ್ ಅವರ ಕಾದಂಬರಿಯ ವಿರುದ್ಧ ಪ್ರತಿಭಟನೆ, ದೌರ್ಜನ್ಯವನ್ನು ನಡೆಸಿದ ಸಂಘ ಪರಿವಾರದ ಫೆನಟಿಸಂ ಮತ್ತು ಅವರ ಮತಾಂಧ ಪಡೆ ಕರ್ನಾಟಕದಲ್ಲಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಮತ್ತು ಪ್ರಮುಖ ಚಿಂತಕ ದಿನೇಶ್ ಅಮೀನ್ ಮಟ್ಟು ಅವರ ಮೇಲೆ ಮಾನಸಿಕ ಹಲ್ಲೆಗಳನ್ನು ನಡೆಸುತ್ತಿದೆ. ಮೂರು ವರ್ಷಗಳ ಹಿಂದೆ ದಿನೇಶ್ ಅವರು ವಿವೇಕಾನಂದರ ಕುರಿತಾಗಿ ಬರೆದ ವಿಶಿಷ್ಟವಾದ, ಆಕರ ಗ್ರಂಥಗಳನ್ನು ಅಧರಿಸಿ ಬರೆದ ಲೇಖನವನ್ನು ಇಂದು ಹಿಂದೂ ಮತಾಂಧರು ವಿನಾಕಾರಣವಾಗಿ, ಅಮಾನವೀಯವಾಗಿ ಉಲ್ಲೇಖಿಸಿ ಅವರ ವಿರುದ್ಧ ಕೀಳು ಮಟ್ಟದ ಭಾಷೆಯನ್ನು ಪ್ರಯೋಗಿಸುತ್ತಿದ್ದಾರೆ. ಪ್ರತಿಯೊಬ್ಬರ ನಂಬಿಕೆಯನ್ನು ನಾವು ಗೌರವಿಸಬೇಕು,ಶತೃತ್ವವನ್ನು ನಾನು ವಿರೋಧಿಸುತ್ತೇನೆ ಎಂದು ದೃಢವಾಗಿ ಪ್ರತಿಪಾದಿಸಿದ ವಿವೇಕಾನಂದರ ಮಾನವೀಯತೆಯ ತತ್ವಗಳನ್ನು ಇಂದು ತಮ್ಮ ಮತಾಂಧತೆಗೆ ತಕ್ಕಂತೆ ತಿರುಚಿ appropriation ಮಾಡಿಕೊಂಡ ವಿದ್ಯಾವಂತ ಮತಾಂಧರು ಸಾಮಾಜಿಕ ಜಾಲತಾಣಗಳಲ್ಲಿ ದಿನೇಶ್ ಅವರ ಮೇಲೆ ಶತೃತ್ವವನ್ನು ಸಾಧಿಸುತ್ತಿದ್ದಾರೆ, ದಿನೇಶ್ ಅವರ ಚಿಂತನೆಗಳನ್ನು ಗೌರವಿಸುವ, ಪ್ರಜಾತಾಂತ್ರಿಕವಾಗಿ ಚರ್ಚಿಸುವ ಕನಿಷ್ಠ ನಾಗರಿಕತೆಯನ್ನು ಸಹ ಬೆಳೆಸಿಕೊಂಡಿಲ್ಲ.ಈ ಧಾರ್ಮಿಕ ಮತಾಂಧರನ್ನು ವಿವೇಕಾನಂದರ ಅನುಯಾಯಿಗಳು ಎಂದು ಮಾನ್ಯ ಮಾಡಲು ಸಾಧ್ಯವೇ ಇಲ್ಲ.

ಇನ್ನು ಕರ್ನಾಟಕದಲ್ಲಿ ವಿವೇಕಾನಂದರು ತನ್ನ ಆಸ್ತಿಯೆಂಬಂತೆ ವರ್ತಿಸುತ್ತಿರುವ ಚಕ್ರವರ್ತಿ ಸೂಲಿಬೆಲೆ ಎನ್ನುವ ಮತ್ತೊಬ್ಬ ಹುಸಿ ಚಿಂತಕ, ಹಿಂದುತ್ವವಾದಿ ಪ್ರತಿಪಾದಕ ಮೂರು ವರ್ಷಗಳ ಹಿಂದೆ ದಿನೇಶ್ ರವರ ವಿವೇಕಾನಂದರ ಕುರಿತ ಲೇಖನಕ್ಕೆ ಪ್ರಜಾಪ್ರಭುತ್ವವಿರೋಧಿ ಮಾದರಿಯಲ್ಲಿ ವಿರೋಧಿಸಲು ಹೋಗಿ ಸಾರ್ವಜನಿಕವಾಗಿ ನಗೆಪಾಟಲಿಗೆ ಈಡಾಗಿದ್ದರು. ಭಾಷಣಕ್ಕೆ ನಿಂತರೆ ಹಿಂದೂಯಿಸಂ ಪರವಾಗಿ ಉನ್ಮಾದಕಾರಿಯಾಗಿ ಮಾತನಾಡುವ, ಹಿಂದುತ್ವದ ನಿರ್ದಿಷ್ಟ ವೈದಿಕಶಾಹಿಯನ್ನು ಪ್ರತಿಪಾದಿಸುವ ಈ ಸೂಲಿಬೆಲೆಯ ಮತೀಯವಾದಿ ಹಿಂದೂಯಿಸಂ ಚಿಂತನೆಗಳು ಸಂವಿಧಾನ ವಿರೋಧಿಯಾಗಿವೆ. ಪ್ರಜಾತಾಂತ್ರಿಕ ಮೌಲ್ಯಗಳನ್ನು ಧಿಕ್ಕರಿಸುತ್ತವೆ. ಚಲನಶೀಲವಾಗಬಯಸುವ ಮಾನವೀಯ ಧಾರ್ಮಿಕತೆಯನ್ನು ಸಮಾನತೆ, ಜೀವಪರತೆಯನ್ನು ವಿರೋಧಿಸುತ್ತ, ಧಾರ್ಮಿಕತೆಯನ್ನು ಕ್ಷುದ್ರತೆಯ ಮಟ್ಟಕ್ಕೆ ಇಳಿಸುವಲ್ಲಿ ಈ ಸೂಲಿಬೆಲೆಯಂತಹ ಪ್ರತಿಗಾಮಿ ಭಾಷಣಕಾರರು ಯಶಸ್ವಿಯಾಗಿದ್ದಾರೆ.

ಲಂಕೇಶ್ ಹೇಳಿದಂತೆ ಸುಳ್ಳು ನನಗೆ ಲಾಭದಾಯಕವಾಗಿದ್ದರೆ ನಾನು ಸತ್ಯವನ್ನೇಕೆ ಹೇಳಬೇಕು ಎನ್ನುವ ಮಾತಿಗೆ ಅಕ್ಷರಶಃ ಸಾಕ್ಷಿಯಂತಿರುವ ಈ ಸೂಲಿಬೆಲೆಯನ್ನು ಹಂಪಿ ಕನ್ನಡ ವಿ.ವಿ.ಯ ಸಿಂಡಿಕೇಟ್ ಸದಸ್ಯರನ್ನಾಗಿ ನೇಮಿಸಿದ ಮನಸ್ಸಾದರೂ ಎಂತಹ ಕೆಡುಕಿನದು ಎಂದು ನೆನೆಸಿಕೊಂಡರೆ ಗಾಬರಿಯಾಗುತ್ತದೆ. ಇಂತಹವರೊಂದಿಗೆ ಕೈ ಜೋಡಿಸಿರುವ ಕನ್ನಡ ಪ್ರಭ ದಿನಪತ್ರಿಕೆ ತನ್ನ ಪತ್ರಿಕೋದ್ಯಮದ ಎಲ್ಲಾ ಮೌಲ್ಯಗಳನ್ನು ಧಿಕ್ಕರಿಸಿ ವಿನಾಕಾರಣ ದಿನೇಶ್ ಅಮೀನ್ ಅವರ ಮೇಲೆ ವೈಯುಕ್ತಿಕ ದ್ವೇಷವನ್ನು ಸಾಧಿಸುತ್ತಿದೆ. ಹೀಗೆ ಕೀಳು ಮಟ್ಟದಲ್ಲಿ ಹಂಗಿಸುವ ಕನ್ನಡಪ್ರಭ ದಿನಪತ್ರಿಕೆಯ ಈ ಅನೈತಿಕ ಮನಸ್ಥಿತಿಯ ಹಿಂದಿನ ಶಕ್ತಿಗಳಾವುವೆಂದು ಬಿಡಿಸಿ ಹೇಳುವ ಅಗತ್ಯವಿಲ್ಲ. ಪತ್ರಿಕೋದ್ಯಮವನ್ನು ರೋಗ್ರಗ್ರಸ್ಥ ತಾಣವಾಗಿ, ಕೊಳೆತು ನಾರುವ ಕೊಚ್ಚೆ ಗುಂಡಿಯಾಗಿ ಪರಿವರ್ತಿಸಿದ ಪತ್ರಕರ್ತರು ಈ ದಿನಪತ್ರಿಕೆಯನ್ನು ದುರುಪಯೋಗಪಡಿಸಿಕೊಂಡು ಇಂದು ದಿನೇಶ್ ರಂತಹ ಚಿಂತಕರ ಚಾರಿತ್ರ್ಯಹರಣದಲ್ಲಿ ತೊಡಗಿದ್ದಾರೆ.

ಆರೋಗ್ಯಪೂರ್ಣ, ಸೌಹಾರ್ದಯುವಾದ ಸಂವಾದವನ್ನು ತಿರಸ್ಕರಿಸುವ ಇಂತಹ ಅಪಾಯಕಾರಿ ಮಾಧ್ಯಮಗಳು, ಪುಢಾರಿ ಪತ್ರಕರ್ತರು, ವಿದ್ಯಾವಂತ ಮತಾಂಧರು ಅಂಬೇಡ್ಕರ್ ಅವರು ವಿವರಿಸಿದಂತೆ ಅನೈತಿಕವಾದ, ವಿಕಾರವಾದ ಮೃಗಸದೃಶ್ಯ ವ್ಯವಸ್ಥೆಯನ್ನು ಹುಟ್ಟು ಹಾಕಿದ್ದಾರೆ. ಇವರ ವಿಚಾರಹೀನತೆಯ ಕುಮ್ಮುಕ್ಕಿನಿಂದಾಗಿ ಇಂದು ವ್ಯವಸ್ಥೆಯಲ್ಲಿ ದ್ವೇಷದ, ಸೇಡಿನ, ಕ್ರೌರ್ಯದ ವಾತಾವರಣ ನಿರ್ಮಾಣಗೊಂಡಿದೆ ಮತ್ತು ನಮ್ಮೆಲ್ಲರ ನಿಷ್ಕ್ರಿಯತೆ ಮತ್ತು ನಿರ್ಲಕ್ಷ ಧೋರಣೆಗಳು, ಸಿನಿಕತನ, ವಿತಂಡವಾದದ ಫಲವಾಗಿಯೇ ಕರ್ನಾಟಕದ ಮತಾಂಧರ ಲುಂಪೆನ್ ಗುಂಪು ಆಳದಲ್ಲಿ ಭಂಡತನವನ್ನು ಬೆಳೆಸಿಕೊಳ್ಳುತ್ತ ಹಿಂಸಾತ್ಮಕ ವಾತಾವರಣವನ್ನು ನಿರ್ಮಿಸಿದೆ.

ದಶಕಗಳ ಹಿಂದೆಯೇ ವಿವೇಕಾನಂದರನ್ನು ಹಿಂದೂ ಧರ್ಮದ ವಕ್ತಾರರಾಗಿ appropriation ಮಾಡಿಕೊಂಡ ಸಂಘ ಪರಿವಾರ ಇಂದು ಅಕ್ಟೋಬರ್2 ಗಾಂಧಿ ಹುಟ್ಟಿದ ದಿನವdineshನ್ನು appropriation ಮಾಡಿಕೊಂಡು ಗೋಡ್ಸೆ ಗಾಂಧಿಯನ್ನು ಕೊಂದ ಜನವರಿ 30 ರ ದಿನದಂದು ದೇಶದ ನಾಲ್ಕು ಮೂಲೆಗಳಲ್ಲಿ ಗೋಡ್ಸೆಯ ಪ್ರತಿಮೆಗಳನ್ನು ನಿರ್ಮಿಸಲು ಹೊರಟಿದೆ. ಆ ದಿನವನ್ನು ವಿಜಯೋತ್ಸವವನ್ನಾಗಿ ಆಚರಿಸಲು ಸಿದ್ಧತೆ ನಡೆಸಿದೆ. ಅಂಬೇಡ್ಕರ್ ಅವರ ಪರಿನಿರ್ವಾಣ ದಿನವಾದ ಡಿಸೆಂಬರ್6 ಅನ್ನು ತುಂಬಾ ಲೆಕ್ಕಾಚಾರದಿಂದಲೇ ಆಯ್ದುಕೊಂಡ ಸಂಘ ಪರಿವಾರ ಆ ದಿನದಂದೇ ಬಾಬ್ರಿ ಮಸೀದಿಯನ್ನು ಧ್ವಂಸಗೊಳಿಸಿತು. ಅದನ್ನು ವೈಭವೀಕರಿಸಲು ಡಿಸೆಂಬರ್ 6 ಅನ್ನು ವಿಜಯೋತ್ಸವ ಹಬ್ಬವನ್ನಾಗಿ ಆಚರಿಸುತ್ತಿದೆ. ಅಂದರೆ ಅಂಬೇಡ್ಕರ್ ನೆನಪಿನಲ್ಲಿ ಮೌನದ, ಧ್ಯಾನದ ದಿನವಾಗಬೇಕಿದ್ದ ಡಿಸೆಂಬರ್ 6 ರಂದು ವಿಜಯೋತ್ಸವ ದಿನವಾಗಿ appropriation ಮಾಡಿಕೊಂಡಿದೆ.
ಪ್ರಜ್ಞಾವಂತರು ಸಂಸ್ಕೃತಿ ಮತ್ತು ಧರ್ಮಗಳ ಪ್ರಶ್ನೆಗಳನ್ನು ಕಡೆಗಣಿಸಿದ್ದರಿಂದ ಅವು ಉಡಾಳರ ಕೈಯಲ್ಲಿ ತ್ರಿಶೂಲಗಳಾದವು, ಅಗ್ನಿ ಭಕ್ಷಕ ರಾಜಕಾರಣಿಗಳ ಕೈಯಲ್ಲಿ ಮಾರಕಾಸ್ತ್ರಗಳಾದವು ಎಂದು ಡಿ.ಆರ್.ನಾಗರಾಜ್ ಮಾರ್ಮಿಕವಾಗಿ ಹೇಳುತ್ತಾರೆ. ಇನ್ನಾದರು ನಾವು ಮರಳಿ ಸಂಸ್ಕೃತಿಯನ್ನು ಕೈಗೆತ್ತಿಕೊಳ್ಳಬೇಕು. ವೈಚಾರಿಕವಾಗಿ, ಬಹುತ್ವದ ಪ್ರತಿಸಂಸ್ಕೃತಿಯನ್ನು ಕಟ್ಟಬೇಕು. ಧರ್ಮವನ್ನು ಈಗಿನ ಗುಲಾಮಿ ಸಂಸ್ಕೃತಿಯಿಂದ ಕಾಪಾಡಬೇಕು. ಅದಕ್ಕೆ ಬೇಕಾದ ಸೆಕ್ಯುಲರ್ ಎನ್ನುವ ಮಾಂತ್ರಿಕ ತತ್ವವನ್ನು ಕಟ್ಟಲು ತೊಡಗಬೇಕು.

ಹಿಂದೂಯಿಸಂನ ದೇಹಕ್ಕೆ ಅಭಿವೃದ್ಧಿಯ ತಲೆಯ ಜೋಡಣೆ : ನರೇಂದ್ರ ಮೋದಿಯ ಆಧುನಿಕ ಪ್ಲಾಸ್ಟಿಕ್ ಸರ್ಜರಿ

– ಬಿ.ಶ್ರೀಪಾದ ಭಟ್

ಫ್ಲಾಶ್‌ಬ್ಯಾಕ್ 2013 14

ಆರೆಸಸ್ ಪಕ್ಷದ ಮುಖವಾಣಿ “ತರುಣ್ ಭಾರತ್” ಪತ್ರಿಕೆಯ ಮಾಜಿ ಸಂಪಾದಕ,ಸ್ವಯಂಸೇವಕ ಸುಧೀರ್ ಪಾಠಕ್ ಅವರನ್ನು ಆರೆಸಸ್‌ನ ಪಾತ್ರ ಮತ್ತು ಬಿಜೆಪಿಯೊಂದಿಗಿನ ಅದರ ಭಾಂಧವ್ಯದ ಕುರಿತಾಗಿ ಪ್ರಶ್ನಿಸಿದಾಗ ಅವರು ಹೇಳಿದ್ದು, “ಒಂದು ವೇಳೆ ಮೋದಿ ಗೆದ್ದರೆ ಸಂಘ ಪರಿವಾರಕ್ಕೆ ಸ್ವಲ್ಪ ಅನುಕೂಲವಿದೆ. ಒಂದು ವೇಳೆ ಆತ ಸೋತು ಹೋದರೆ ಅದು ಆತನ ಸೋಲು. ಮೋದಿಗೆ ಮಾತ್ರ ಚುನಾವಣೆಯೇ ಅಂತಿಮ, ಆದರೆ ಆರೆಸಸ್‌ಗೆ ಹಿಂದೂ ರಾಷ್ಟ್ರದ ನಿರ್ಮಾಣದ ಗುರಿಯಲ್ಲಿ ಚುನಾವಣೆಯು ತಮ್ಮ ಚಿಂತನೆಗಳನ್ನು ಹಬ್ಬಿಸಲು ಇರುವಂತಹ ಒಂದು ಸಾಧನವಷ್ಟೇ. ಬಿಜೆಪಿಯ ಆಸ್ತಿತ್ವವೇ ದ್ವಿಸದಸ್ಯ ನೀತಿಯಲ್ಲಿದೆ. ಹಿಂದಿನ ದಿನಗಳಲ್ಲಿ ಪಕ್ಷವು ಆರೆಸಸ್‌ನ ಆದೇಶಗಳಿಗಾಗಿ ಕಾಯುತ್ತಿತ್ತು. ಆಗ ಅಟಲ್‌ಜೀ ಮತ್ತು ಅಡ್ವಾನೀಜಿ ಸಂಘ ಪರಿವಾರಕ್ಕೆ ಸೀನಿಯರ್ ನಾಯಕತ್ವವನ್ನು ಒದಗಿಸಿದ್ದರು. ಆಗ ಪಕ್ಷದ ಕೈ ಮೇಲಾಗಿತ್ತು. ಆದರೆ ಈಗ ಆರೆಸಸ್ ನಾಯಕರು ಮತ್ತು ಬಿಜೆಪಿಯ ನಾಯಕರು ಒಂದೇ ತಲೆಮಾರಿಗೆ ಸೇರಿದವರಾಗಿದ್ದಾರೆ. ಇವರು ಒಂದೇ ಶಾಖೆಗಳಲ್ಲಿ ತರಬೇತಿ ಪಡೆದಿದ್ದಾರೆ. ಇಂದು ಆರೆಸಸ್‌ಗೆ ಮೇಲುಗೈ ಸಾಧಿಸಿದೆ.”

ಮಹಾರಾಷ್ಟ್ರದ ಬೆಜೆಪಿಯ ಅಧ್ಯಕ್ಷರಾದ ದೇವೇಂದ್ರ ಫಡ್ನವೀಸ್ ಅವರು ಮಾತನಾಡುತ್ತ, “ಅಟಲ್‌ಜೀ ಮತ್ತು ಅಡ್ವಾನೀಜೀ ಅವರಿಗೂ ಸಹ ಆರೆಸಸ್‌ನ ಮಾತೇ ಅಂತಿಮವಾಗಿತ್ತು. ಅವರಿಗೆ ಆರೆಸಸ್‌ನ ಉದ್ದೇಶಗಳು ಸಂಪೂರ್ಣವಾಗಿ ಅರ್ಥವಾಗಿದ್ದವು ಮತ್ತು ಅದನ್ನು ಶಿರಸಾವಹಿಸಿ ಪಾಲಿಸುತ್ತಿದ್ದರು. ಆರೆಸಸ್‌ನ ಅಗ್ರ ನಾಯಕತ್ವದ ಆದೇಶವನ್ನು ಎಂದಿಗೂ ಕಡೆಗಣಿಸಲಿಲ್ಲ.” ಎಂದು ಹೇಳಿದರು

ದಿ ಹಿಂದೂ, 18ನೇ ಅಕ್ಟೋಬರ್, 2013

***

ನಾಗಪುರದಲ್ಲಿರುವ ಆರೆಸಸ್‌ನ ಹೆಡ್‌ಕ್ವಾಟ್ರಸ್‌ನಲ್ಲಿ ಕುಳಿತು ಬಿಜೆಪಿಯ ಮಾಜಿ ಕಾರ್ಯದರ್ಶಿ ಆರೆಸಸ್ ಸಂಚಾಲಕ ಸದಾನಂದ ಶಿರ್ಡಾಲೆಯವರೊಂದಿಗೆ ಮಾತನಾಡಿಸಿದಾಗ ಅವರು, “ಈಗಿನ ವ್ಯವಸ್ಥೆಯು ಮುಸ್ಲಿಂರನ್ನು ಓಲೈಸುವುದಕ್ಕಾಗಿಯೇ ಇದೆ. ಒಮ್ಮೆ ನರೇಂದ್ರ ಮೋದಿ ಚುನಾಯಿತರಾದ ಮೇಲೆ ನೋಡಿ ಎಲ್ಲವೂ ಬದಲಾಗುತ್ತದೆ. ಉದಾಹರಣೆಗೆ ಗುಜರಾತ್‌ನಲ್ಲಿ ಒಬ್ಬ ಮುಸ್ಲಿಂ ಶಾಸಕನೂ ಇಲ್ಲ. ವ್ಯವಸ್ಥೆ ಇರಬೇಕಾದದ್ದೇ ಹೀಗೆ.” ಎಂದು ಹೇಳಿದರು. ನಾವು ಒಂದುವೇಳೆ ನೀವು ಬಯಸುವ ಈ ವ್ಯವಸ್ಥೆ ಬಂದರೆ ಮುಸ್ಲಿಂರು ಹೇಗೆ ಪ್ರತಿಕ್ರಯಿಸುತ್ತಾರೆ? ಎಂದು ಪ್ರಶ್ನಿಸಿದಾಗ ಈ ಆರೆಸಸ್ ಸಂಚಾಲಕರು, “ಅವರೆಲ್ಲರೂ ಪಾಕಿಸ್ತಾನಕ್ಕೆ ಹೋಗಲು ಸಾಧ್ಯವಿಲ್ಲ. ಆದರೆ ಮುಖ್ಯವಾಗಿ ಅವರು ನಮ್ಮ ದೇಶಕ್ಕೆ ನಿಷ್ಠರಾಗಿರಬೇಕೇ ಹೊರತಾಗಿ ಬೇರೆ ದೇಶಕ್ಕಲ್ಲ” ಎಂದು ಉತ್ತರಿಸಿದರು.

ಮೇಲಿನ ಸಂಭಾಷಣೆಯ ಸಾರಾಂಶವೆಂದರೆ ಅಲ್ಪಸಂಖ್ಯಾತರ ಮೂಲಭೂತವಾಗಿ ಈ ದೇಶಕ್ಕೆ ನಿಷ್ಠರಾಗಿಲ್ಲ. ಆರೋಪವೆಂದರೆ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಇವರಿಗೆ ಸರ್ಕಾರವು ಓಲೈಸುತ್ತದೆ. ದೇಶದ ಬಹುಸಂಖ್ಯಾತರಾದ ಹಿಂದೂಗಳು ಇಂದು ಒತ್ತಡದಲ್ಲಿದ್ದಾರೆ. ಬಿಜೆಪಿ, ಆರೆಸಸ್ ಕಾರ್ಯಕರ್ತರು ಸ್ಪಷ್ಟವಾಗಿ ಹೇಳುವುದೇನೆಂದರೆ “ಮೋದಿಯು ಹಿಂದುತ್ವದ ವಿಷಯವನ್ನು ಮಾತನಾಡುತ್ತಾರೋ ಇಲ್ಲವೋ ಅದು ಮುಖ್ಯವಲ್ಲ, ಆದರೆ ಹಿಂದುತ್ವದ ರಾಷ್ಟ್ರದ ಪರಿಕಲ್ಪನೆ ಮಾತ್ರ ಬದಲಾಗದು ಎಂಬುದು ವಾಸ್ತವ.” ಎಂಬತ್ತು ಮತ್ತು ತೊಂಬತ್ರರ ದಶಕಗಳ ಸ್ಲೋಗನ್‌ಗಳಾದ ಸ್ಯೂಡೋ ಸೆಕ್ಯುಲರಿಸಂ, ಮುಸ್ಲಿಂ ಓಲೈಸುವಿಕೆ ಮತ್ತೆ ಹಿಂದಿನಂತೆಯೇ ಚಾಲ್ತಿಗೆ ಬಂದಿವೆ.

ದಿ ಹಿಂದೂ, 18ನೇ ಅಕ್ಟೋಬರ್, 2013

***

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಸಂಕಲ್ಪ ದಿನವನ್ನಾಗಿ ಆಚರಿಸುವ ಸಲುವಾಗಿ ಸಂಕಲ್ಪ ಯಾತ್ರೆಯನ್ನು ಕೈಗೊಳ್ಳಲು ಪ್ರಯತ್ನಿಸಿದ್ದ ಸುಮಾರು 2000 ಬಿಜೆಪಿ, ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳದ ನಾಯಕರು ಮತ್ತು ಕಾರ್ಯಕರ್ತರನ್ನು ಬಂಧಿಸಲಾಯಿತು. ಬಂಧಿತರಲ್ಲಿ ಬಿಜೆಪಿ ಪಕ್ಷದ ಸಂಸದ ಯೋಗಿ ಆದಿತ್ಯನಾಥ್ (ಗೋರಖ್‌ಪುರ), ಮಾಜಿ ಸಂಸದ ಸತ್ಯದೇವನಾಥ್, ಮತ್ತು ವಿಎಚ್‌ಪಿಯ ರಾಷ್ಟ್ರೀಯ ಕಾರ್ಯದರ್ಶಿ ಚಂಪತ್ ರಾಯ್, ಅಲ್ಲಿನ ಹನುಮ ದೇವಸ್ಥಾನದ ಮಹಂತ ಬಾಬಾ ರಾಮೇಶ್ ದಾಸ್, ರಾಜ್ಯ ಬಿಜೆಪಿಯ ಯುವ ಮೋರ್ಚದ ಅಧ್ಯಕ್ಷ ಅಶುತೋಷ್ ಪ್ರಮುಖರು.

ಬಿಜೆಪಿ ಪಕ್ಷವು ತನ್ನ ಮೂಲಭೂತ ಗುರಿಗಳನ್ನು ಮತ್ತೊಮ್ಮೆ ಪುನರುಚ್ಚರಿಸುತ್ತಿದೆ. ಸಂಘ ಪರಿವಾರದ ಕಾರ್ಯಸೂಚಿಗಳಾದ ಕಲಮ್ 370 ಅನ್ನು ರದ್ದುಪಡಿಸುವುದು, ರಾಮಮಂದಿರ ನಿರ್ಮಾಣ, ಸಮಾನ ನಾಗರಿಕ ಕಾಯ್ದೆಯನ್ನು ಜಾರಿಗೊಳಿಸುವುದು, ಇವೆಲ್ಲವನ್ನೂ ತಮ್ಮ ಚುನಾವಣಾ ಪ್ರಣಾಳಿಕೆಯಿಂದ ಕೈಬಿಡುವ ಪ್ರಶ್ನೆಯೇ ಇಲ್ಲವೆಂದು ಬಿಜೆಪಿ ಸ್ಪಷ್ಟಪಡಿಸಿದೆ. ಬಿಜೆಪಿ ಪಕ್ಷ ರಚಿಸಿರುವ ತನ್ನ ಪ್ರಣಾಳಿಕೆ ಸಮಿತಿಯ ಛೇರ್ಮನ್ ಆಗಿ ನೇಮಕಗೊಂಡ ಮುರುಳೀ ಮನೋಹರ್ ಜೋಷಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತ್ತಾ “ನಮ್ಮ ಪಕ್ಷವು ಚುನವಣಾ ಪ್ರಣಾಳಿಕೆಯ ಕರಡು ಪ್ರತಿಯನ್ನು ರಚಿಸಲು ಸಮಾಜದ ಎಲ್ಲಾ ಸ್ತರಗಳಿಂದಲೂ ಅಭಿಪ್ರಾಯವನ್ನು ಸಂಗ್ರಹಿಸುತ್ತದೆ. ಇದಕ್ಕಾಗಿ ಬಿಜೆಪಿಎಲೆಕ್ಷನ್‌ಮ್ಯಾನಿಫೆಷ್ಟೋ.ಕಾಮ್ ಎನ್ನುವ ವೆಬ್‌ಸೈಟ್ ಅನ್ನು ಸಹ ಶುರುಮಾಡಲಾಗಿದೆ. ಅಲ್ಲಿ ಆಸಕ್ತಿ ಇರುವಂತಹವರು ತಮ್ಮ ಅಭಿಪ್ರಾಯಗಳನ್ನು ತಿಳಿಸಬಹುದು. ಅನೇಕ ವಿಷಗಳ ಕುರಿತಾಗಿ ಮುಕ್ತವಾಗಿ ಚರ್ಚಿಸಲು ಸಿದ್ಧರಿದ್ದೇವೆ. ಆದರೆ ನಮ್ಮ ಮೂಲಭೂತ ಕಾರ್ಯ ಸೂಚಿಗಳಾದ ಕಲಮ್ 370 ಅನ್ನು ರದ್ದುಪಡಿಸುವುದು, ರಾಮಮಂದಿರ ನಿರ್ಮಾಣ, ಸಮಾನ ನಾಗರಿಕ ಕಾಯ್ದೆಯನ್ನು ಜಾರಿಗೊಳಿಸುವುದು, ಇವುಗಳೊಂದಿಗೆ ಮಾತ್ರ ಯಾವುದೇ ರೀತಿಯ ಸಂಧಾನವಿಲ್ಲ. ಅದರಲ್ಲೂ ರಾಮ ಜನ್ಮಭೂಮಿಯ ನಿರ್ಮಾಣ ನಮ್ಮ ಮೊದಲ ಆದ್ಯತೆ.” ಎಂದು ಹೇಳಿದರು.

ದಿ ಹಿಂದೂ, 19ನೇ ಅಕ್ಟೋಬರ್, 2013

***

ಉತ್ತರ ಪ್ರದೇಶದ ಕಾನ್ಪುರದಲ್ಲಿ ತನ್ನ ಚುನಾವಣಾ ಭಾಷಣದಲ್ಲಿ ಅಚ್ಚರಿ ಎನ್ನುವಂತೆ ನರೇಂದ್ರ ಮೋದಿಯು ರಾಮಮಂದಿರ ನಿರ್ಮಾಣದ ಕುರಿತಾಗಿ ಮಾತನಾಡದೆ ಕಾಂಗ್ರೆಸ್ ಪಕ್ಷವನ್ನು ಟೀಕಿಸುವುದಕ್ಕೆ ಮಾತ್ರ ತಮ್ಮ ಭಾಷಣವನ್ನು ಸೀಮಿತಗೊಳಿಸಿದ್ದರು. ಅಭಿವೃದ್ಧಿ ಮಂತ್ರವನ್ನು ಮತ್ತೊಮ್ಮೆ ಜಪಿಸಿದರು. ಆದರೆ ಈ ಸಮಾವೇಶದಲ್ಲಿ ಬಿಜೆಪಿ ಹೇಳಿಕೊಳ್ಳುವಷ್ಟು ಮುಸ್ಲಿಂ ನಾಗರಿಕರ ಸಂಖ್ಯೆ ಇರಲಿಲ್ಲ. ತೀರಾ ಗೌಣವಾಗಿತ್ತು. ಬಿಜೆಪಿ ಪಕ್ಷವು ಸುಮಾರು 5000 ಸ್ಕಲ್ ಟೋಪಿ ಮತ್ತು ಬುರ್ಖಾಗಳನ್ನು ಈ ಸಮಾವೇಶದಲ್ಲಿ ಭಾಗವಹಿಸಲು ವಿತರಿಸಲಾಗಿತ್ತು ಎಂದು ತಿಳಿಸಿತ್ತು. ಪೋಲಿಸ್ ಅಧಿಕಾರಿಯೊಬ್ಬರ ಪ್ರಕಾರ ಈ ಸಮಾವೇಶಕ್ಕಾಗಿ ಮುಸ್ಲಿಂರನ್ನು ಬಾಡಿಗೆ ಕರೆತಂದಿಲ್ಲವೆಂಬಂತೆ ಅಭಿಪ್ರಾಯ ಮೂಡಿಸಲು ಬಿಜೆಪಿ ಕಾರ್ಯಕರ್ತರು ಬಳಸಿದ, ಹಳೆಯದಾದ ಸ್ಕಲ್ ಟೋಪಿಯನ್ನು ಹಂಚಲು ಆದೇಶಿಸುತ್ತಿದ್ದರು.

ದಿ ಹಿಂದೂ, 20ನೇ ಅಕ್ಟೋಬರ್, 2013

2014ರ ಚುನಾವಣ ಸಂದರ್ಭದಲ್ಲಿ ನರೇಂದ್ರ ಮೋದಿ, ಅಮಿತ ಷಾ, ಸಂಘ ಪರಿವಾರದ ಲುಂಪೆನ್ ಗುಂಪಿನ ಮತೀಯವಾದಿ, ಪ್ರಚೋದನಕಾರಿ ಭಾಷಣಗಳ ಕೆಲವು ಉದಾಹರಣೆಗಳು:

ಎಪ್ರಿಲ್ 2, 2014ರಂದು ಬಿಹಾರದಲ್ಲಿ ಬಾಷಣ ಮಾಡುತ್ತ ನರೇಂದ್ರ ಮೋದಿ “ಈ ದೇಶವು ಗೋವುಗಳನ್ನು ದೇವತೆಯಂತೆ ಪೂಜಿಸುವ ದೇಶ. ಗೋ ಹತ್ಯೆ ಮಾಡುವವರನ್ನು ನೀವು ಹೇಗೆ ಬೆಂಬಲಿಸುತ್ತೀರಿ?” ಎಂದು ಯಾದವರನ್ನು ಉದ್ರೇಕಿಸುತ್ತಾರೆ

ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ “ಮಿಯ್ಯಾ ಮುಶ್ರಫ್, ಮೇಡಂ ಮೇರಿ, ಮೈಖೆಲ್ ಲಿಂಗ್ಡೋ” modi_bjp_conclaveಎಂದು ಅತ್ಯಂತ ಸ್ಯಾಡಿಸ್ಟ್ ಮನಸ್ಥಿತಿಯಲ್ಲಿ ಇತರೇ ಧರ್ಮಗಳನ್ನು ಕ್ರೂರವಾಗಿ, ಅಮಾನವೀಯವಾಗಿ ಹಂಗಿಸಿದ್ದ ಈ ಮೋದಿ 2014ರಲ್ಲಿ ಮುಂದುವರೆದು ಧರ್ಮ ನಿರಪೇಕ್ಷತೆಯನ್ನು ಲೇವಡಿ ಮಾಡುತ್ತ “ಬುರ್ಖಾ ಸೆಕ್ಯುಲರಿಸಂ” ಎಂದು ಅಮಾನವೀಯವಾಗಿ ಮಾತನಾಡಿದ್ದರು. ಮತ್ತೊಂದೆಡೆ ಕಾಶ್ಮೀರದಲ್ಲಿ ಭಾಷಣ ಮಾಡುತ್ತ ಮೋದಿ ಅತ್ಯಂತ ಕ್ರೂರವಾದ ಭಾಷೆ ಬಳಸುತ್ತಾ ಎಕೆ 47, ಎಕೆ ಅಂಟೊನಿ, ಎಕೆ 49 ಎಂದು ವ್ಯಂಗವಾಡಿದ್ದರು

ರಾಹುಲ್ ಗಾಂಧಿಯವರನ್ನು “ಶೆಹಜಾದ” ಎಂದು ಸಂಬೋಧಿಸುವುದು, ಸೋನಿಯಾಗಾಂಧಿಯವರನ್ನು “ಸುಲ್ತಾನ” ಎಂದು ಸಂಬೋಧಿಸುವುದರ ಮೂಲಕ ಒಂದು ಸುಳ್ಳನ್ನು ನೂರು ಸಲ ಹೇಳುವ ಗೋಬೆಲ್ಸ್ ಸಿದ್ಧಾಂತವನ್ನು ಬಳಸಿದ ನರೇಂದ್ರ ಮೋದಿ 2002ರ ಹತ್ಯಾಕಾಂಡದ ನಂತರದಲ್ಲಿ ಸ್ಥಾಪಿಸಲ್ಪಟ್ಟ ಮುಸ್ಲಿಂ ನಿರಾಶ್ರಿತ ಶಿಬಿರಗಳನ್ನು ಉದ್ದೇಶಿಸಿ ’ಆ ಶಿಬಿರಗಳು ಮಕ್ಕಳನ್ನು ಹುಟ್ಟಿಸುವ ಶಿಬಿರಗಳೆಂದು’ ವ್ಯಂಗವಾಡಿದ್ದರು,

ತಾನು ಅಧಿಕಾರಕ್ಕೆ ಬಂದರೆ ಆಕ್ರಮ ವಲಸಿಗರನ್ನು (ಅಂದರೆ ಮುಸ್ಲಿಂರನ್ನು) ದೇಶದಿಂದ ಒದ್ದೋಡಿಸಲಾಗುವುದು ಎಂದು ತಮ್ಮ 2014ರ ಚುನಾವಣ ಭಾಷಣದಲ್ಲಿ ಮೋದಿ ಗುಡುಗಿದ್ದರು. ಬಾಂಗ್ಲಾ ದಿಂದ ಬರುವ ಆಕ್ರಮ ವಲಸಿಗರಲ್ಲಿ ದುರ್ಗಾ ಮಾತೆಯನ್ನು ಪೂಜಿಸುವ ಧರ್ಮದವರನ್ನು (ಹಿಂದೂಗಳನ್ನು) ಮಾತ್ರ ಕರೆದುಕೊಳ್ಳಲಾಗುವುದು, ಮಿಕ್ಕಂತೆ ಅನ್ಯಧರ್ಮೀಯರನ್ನು ಒದ್ದೋಡಿಸಲಾಗುವುದು ಎಂದು ಅಸ್ಸಾಂನ ಚುನಾವಣಾ ಭಾಷಣದಲ್ಲಿ ಪ್ರಚೋದನಕಾರಿಯಾಗಿ ಮಾತನಾಡಿದ್ದರು.

ಮತ್ತೊಂದು ಕಡೆ ಇದೇ ಮೋದಿಯು ಎಪ್ರಿಲ್ 2ರಂದು ತಾನು ಪ್ರಧಾನ ಮಂತ್ರಿಯಾದ ನಂತರ “ಪಿಂಕ್ ರೆವಲ್ಯೂಷನ್” (ದನದ ಮಾಂಸದ ರಫ್ತು) ಅನ್ನು ಕೊನೆಗೊಳಿಸುತ್ತೇನೆ ಎಂದು ಭರವಸೆ ಕೊಟ್ಟಿದ್ದರು. ಮತ್ತೊಂದು ಕಡೆ ತಮ್ಮ ಭಾಷಣದಲ್ಲಿ “ಸಬಕಾ (ಸಮಾಜವಾದಿ, ಬಹುಜನ ಪಕ್ಷ, ಕಾಂಗ್ರೆಸ್) ದ ವಿನಾಶ ಶತಸಿದ್ಧ” ಎಂದು ಹೇಳುವ ಮೋದಿ ಮುಂದುವರೆದು “ಕಾಂಗ್ರೆಸ್ ಮುಕ್ತ ಭಾರತ್” ಗಾಗಿ ತನ್ನನ್ನು ಚುನಾಯಿಸಬೇಕೆಂದು ಕೋರಿಕೊಂಡಿದ್ದರು.

ಮತ್ತೊಂದು ಚುನಾವಣಾ ಭಾಷಣದಲ್ಲಿ ಮೋದಿಯು “ಕಷ್ಟದ ಕೆಲಸಗಳನ್ನು ನಿಭಾಯಿಸಲು ದೇವರು ಕೆಲವರನ್ನು ಆರಿಸುತ್ತಾನೆ. ಬಹುಶ ದೇವರು ನನ್ನನ್ನು ಆರಿಸಿರಬಹುದು” ಎಂದು ಹೇಳಿ ಕಟ್ಟಕಡೆಗೆ ದೇವರನ್ನು ಎಳೆದು ತಂದಿದ್ದರು.

ಇದೇ ಮೋದಿ 2014ರ ಚುನಾವಣೆಯ ಸಂದರ್ಭದಲ್ಲಿ ಬಿಹಾರ್‌ನಲ್ಲಿ ಭಾಷಣ ಮಾಡುತ್ತಾ narender_modi_rss“ಹಮ್ ಚುನ್ ಚುನ್ ಕೆ ಸಬಕ್ ಸಿಖಾಯೇಂಗೇ ( ನಾವು ಹುಡುಕಿ ಹುಡುಕಿ ಪಾಠ ಕಲಿಸುತ್ತೇವೆ)” ಎಂದು ಹೇಳಿದ್ದರು. 2002ರ ಗುಜರಾತ್ ಹತ್ಯಾಕಾಂಡದಲ್ಲಿ ಮುಸ್ಲಿಂ ಮಹಿಳೆಯರನ್ನು, ಗರ್ಭಿಣಿಯರನ್ನು ಹುಡುಕಿ, ಹುಡಕಿ ಸಾಯಿಸಲಾಯಿತು. ಮೋದಿ ಆಡಳಿತದ ಹತ್ತು ವರ್ಷಗಳ ಗುಜರಾತ್‌ನಲ್ಲಿ ಪೋಲೀಸ್ ವ್ಯವಸ್ಥೆಯನ್ನು ಬಳಸಿಕೊಂಡು ಹುಡುಕಿ ಹುಡುಕಿ ಹದಿಮೂರು ನಕಲಿ ಎನ್‌ಕೌಂಟರ್‌ಗಳನ್ನು ನಡೆಸಲಾಗಿದೆ. ಇಂದಿಗೂ ತನಿಖೆಗಳು ಜಾರಿಯಲ್ಲಿವೆ.

ಇನ್ನು ಬಿಹಾರನ ಬಿಜೆಪಿ ನಾಯಕ ಗಿರಿರಾಜ್ ಸಿಂಗ್ ಮೋದಿಯನ್ನು ವಿರೋಧಿಸುವವರೆಲ್ಲಾ ಪಾಕಿಸ್ತಾನಕ್ಕೆ ಹೋಗಬೇಕಾಗುತ್ತದೆ ಎಂದು ಗುಡುಗಿದ್ದರು. ಇನ್ನು ಪ್ರವೀಣ್ ತೊಗಾಡಿಯಾ ಮುಸ್ಲಿಂ ಮೊಹಲ್ಲಗಳನ್ನು ವರ್ಗೀಕರಿಸಿ ನಂತರ ಅವನ್ನು ಶುದ್ಧೀಕರಿಸಿ ಅದರಿಂದ ಮುಸ್ಲಿಂರನ್ನು ಪ್ರತ್ಯೇಕಿಸಿ ಹೀಗೆ ಬಾಯಿಗೆ ಬಂದಂತೆ ಮಾತನಾಡಿದ್ದರು. ಬಿಜೆಪಿಯನ್ನು ಬೆಂಬಲಿಸಿದ ರಾಮದೇವ್ ಎನ್ನುವ ಸನ್ಯಾಸಿ ದಲಿತರ ಕುರಿತಾಗಿ ಅವಹೇಳನಕರವಾಗಿ ಮಾತನಾಡಿದ್ದರು.ಇವರ ಈ ಮಾತುಗಳನ್ನು ಸಂಘರಿವಾರ ಸಮರ್ಥಿಸಿಕೊಂಡಿತ್ತು.

ಮೋದಿಯ ಬಲಗೈ ಬಂಟ ಅಮಿತ್ ಷಾ ಉತ್ತರ ಪ್ರದೇಶದಲ್ಲಿ ಜಾಟ್ ಪಂಗಡದವರನ್ನು ಉದ್ದೇಶಿಸಿ ಮಾತನಾಡುತ್ತಾ “ಮುಜಫರ್ ನಗರದ ಗಲಭೆಗಳಿಗೆ ಪ್ರತೀಕಾರವಾಗಿ ಈ 2014ರ ಚುನಾವಣೆಗಳನ್ನು ಬಳಸಿಕೊಳ್ಳಿ” ಎಂದು ಕರೆ ನೀಡಿದರು. ಇದು ಸಹ ಮೋದಿ ಶೈಲಿಯ ನೆತ್ತರ ದಾಹದ ಭಾಷೆ. ಇದನ್ನು ಅಮಿತ್ ಷಾ ನಿರಾಕರಿಸಲೂ ಇಲ್ಲ. ಬದಲಾಗಿ ಸಮರ್ಥಿಸಿಕೊಂಡಿದ್ದಾರೆ. ಮತ್ತೊಂದು ಕಡೆ “ಇನ್ನು ಮುಂದೆ ನಾನು ಪ್ರತೀಕಾರದ ನಡಾವಳಿಗಳಿಂದ ಆಡಳಿತ ನಡೆಸುವುದಿಲ್ಲ” ಎಂದು ಸ್ವತಃ ಸ್ವಯೋಪ್ರೇರಿತನಾಗಿ ಹೇಳಿಕೆ ನೀಡಿದ್ದ ಮೋದಿ ತಮ್ಮ ಬಲಗೈ ಬಂಟನ ಈ ನೆತ್ತರ ದಾಹದ ಹೇಳಿಕೆಗಳನ್ನು ಮಾತ್ರ ಇದುವರೆಗೂ ಖಂಡಿಸಿಲ್ಲ ಅಥವಾ ನಿರಾಕರಿಸಿಲ್ಲ.

ಇನ್ನೂ ಹಿಂದಕ್ಕೆ 2002ರ ಗುಜರಾತ್‌ನ ಹತ್ಯಾಕಾಂಡದ ಸಂದರ್ಭದಲ್ಲಿ ಗೋಧ್ರಾ ದುರಂತ ನಡೆದ 27, ಫೆಬ್ರವರಿ 2002ರಂದು ಪೋಲೀಸ್ ಅಧಿಕಾರಿಗಳ ಉನ್ನತ ಮಟ್ಟದ ಸಭೆಯಲ್ಲಿ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯು “ಕೋಮು ಗಲಭೆಗಳಲ್ಲಿ ಹಿಂದೂ ಮತ್ತು ಮುಸ್ಲಿಂರನ್ನು ಪ್ರತ್ಯೇಕಿಸದೆ ಶಿಕ್ಷಿಸಬೇಕಾಗುತ್ತದೆ. ಆದರೆ ಈಗ ಹಾಗೆ ಮಾಡಬೇಡಿ. ಹಿಂದೂಗಳಿಗೆ ಅವರ ಸಿಟ್ಟನ್ನು ವ್ಯಕ್ತಪಡಿಸಲು ಅವಕಾಶ ಕೊಡಿ” ಎಂದು ಆದೇಶಿಸಿದ್ದರೆಂದು ಆಗಿನ ಗುಪ್ತಚರ ವಿಭಾಗದ ಡೆಪ್ಯುಟಿ ಕಮಿಷನರ್ ಸಂಜೀವ್ ಭಟ್ ಮತ್ತು ಮಂತ್ರಿ ಹರೇನ್ ಪಾಂಡ್ಯ ತನಿಖಾ ಆಯೋಗದ ಮುಂದೆ ಸಾಕ್ಷಿ ನುಡಿದಿದ್ದರು. ಆದರೆ 26 ಮಾರ್ಚ್, 2003ರಲ್ಲಿ ಹರೇನ್ ಪಾಂಡ್ಯ ಅವರನ್ನು ಕೊಲೆಯಾಗುತ್ತದೆ.

ವರ್ತಮಾನ : 2014-15

ಕೇಂದ್ರದಲ್ಲಿ ಆರೆಸ್ಸಸ್ ಮತ್ತು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಸಂಪೂರ್ಣ ಬಹುಮತದೊಂದಿಗೆ ಅಧಿಕಾರ ಕಬ್ಜಾ ಮಾಡಿಕೊಂಡಿತು. ಯುಪಿಎ ಸರ್ಕಾರದ ಹತ್ತು ವರ್ಷಗಳ ಆಡಳಿತವನ್ನು ತಿರಸ್ಕರಿಸಿದ ಇಂಡಿಯಾದ ಮತದಾರ ಕಾಂಗ್ರೆಸ್ ಪಕ್ಷವನ್ನು ಹೀನಾಯವಾಗಿ ಸೋಲಿಸಿದ್ದ.

“ಚಿಕ್ಕದಾದ ಸರ್ಕಾರ, ವಿಶಾಲವಾದ, ಪರಮಾವಧಿಯ ಆಡಳಿತ” (minimum government, maximum governance) ಎನ್ನುವುದು ನರೇಂದ್ರ ಮೋದಿಯ ಸ್ಲೋಗನ್. ಈ ನಾಲ್ಕು ಶಬ್ದಗಳ ಈ ಸ್ಲೋಗನ್ ದೇಶವೊಂದರಿಂದ ನಾವು ಬಯಸುವಂತಹ, ನಮ್ಮ ಕಿವಿಗೆ ಸುಶ್ರಾವ್ಯವಾಗುವಂತಹದ್ದನ್ನೇ ಅರಹುತ್ತಿರುತ್ತದೆ. ಇದು ನರೇಂದ್ರ ಮೋದಿಯ ಜನಪ್ರಿಯ ಸ್ಲೋಗನ್‌ಗಳಲ್ಲೊಂದು. ಇದನ್ನೆಲ್ಲಾ ಗುಜರಾತ್ ಮಾಡೆಲ್ ಎನ್ನುವ ಸಂಘ ಪರಿವಾರದ, ಮಧ್ಯಮವರ್ಗದ ಬೈಬಲ್‌ನಿಂದ ಹೆಕ್ಕಿಕೊಳ್ಳಲಾಗಿದೆ. 2014ರ ತಮ್ಮ ಚುನಾವಣಾ ಪ್ರಚಾರದ ಭಾಷಣ ಉದ್ದಕ್ಕೂ ಈ ನರೇಂದ್ರ ಮೋದಿ ಮತ್ತು ಅಮಿತ್ ಷಾ “ಕಾಂಗ್ರೆಸ್ ಮುಕ್ತ ಭಾರತಕ್ಕಾಗಿ ಬಿಜೆಪಿಗೆ ಮತ ನೀಡಿ” ಎಂದು ಪ್ರಚಾರ ಮಾಡಿದ್ದರು. ಯುಪಿಎ ಸರ್ಕಾರದ ಹತ್ತು ವರ್ಷಗಳ ಭ್ರಷ್ಟ ಆಡಳಿತವನ್ನು ಕೊನೆಗೊಳಿಸಿ ಎಂದು ದೇಶಾದ್ಯಾಂತ ಕಾಂಗ್ರೆಸ್ ವಿರುದ್ಧ ತೀವ್ರವಾದ ವಾಗ್ದಾಳಿ Modi-roadshow-varanasiನಡೆಸಿದ ನರೇಂದ್ರ ಮೋದಿ ಮತ್ತು ಸಂಘ ಪರಿವಾರ ಅತ್ಯಂತ ವ್ಯವಸ್ಥಿತವಾದ ಚುನಾವಣಾ ಪ್ರಚಾರವನ್ನು ಕೈಗೊಂಡಿದ್ದರು. ಬಿಜೆಪಿ ಪಕ್ಷವು ಮಾಧ್ಯಮಗಳು ಸೃಷ್ಟಿಸಿದ ಮೋದಿಯ ಅಭಿವೃದ್ಧಿಯ ಜನಪ್ರಿಯತೆಯನ್ನು ಬಳಸಿಕೊಂಡು ದೇಶದ ಮಧ್ಯಮ ಹಾಗೂ ಮೇಲ್ವರ್ಗಗಳ ಮತಗಳನ್ನು ಬೇಟೆಯಾಡಲು ವ್ಯವಸ್ಥಿತ ಕಾರ್ಯತಂತ್ರ ರೂಪಿಸಿತ್ತು. ಕಳೆದ ಎರಡು ದಶಕಗಳಿಂದ ಜಾಗತೀಕರಣದ ಫಲವಾದ ಕನ್ಸೂಮರಿಸಂನ ಸೆಳೆತಕ್ಕೆ ಒಳಗಾಗಿ ಕೊಳ್ಳುಬಾಕ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿದ್ದ ಇಲ್ಲಿನ ಮಧ್ಯಮವರ್ಗ ಈ ಕೊಳ್ಳುಬಾಕ ಸಂಸ್ಕೃತಿಯನ್ನೇ ಅಭಿವೃದ್ಧಿಯೆಂದು ಭ್ರಮಿಸಿ ನರೇಂದ್ರ ಮೋದಿಯನ್ನು ತಮಗೆ ಬೇಕಾದ್ದನ್ನೆಲ್ಲ ದಯಪಾಲಿಸುವ ಹರಿಕಾರ ಎಂದು ನಂಬಿದರು. ಮೊನ್ನೆಯವರೆಗೂ ಈ ಮಧ್ಯಮ ವರ್ಗ ಮತ್ತು ಕಾರ್ಪೋರೇಟ್ ವರ್ಗಗಳಿಗೆ ಈ ಜಾಗತೀಕರಣದ ಹರಿಕಾರ ಮನಮೋಹನ್ ಸಿಂಗ್ ಡಾರ್ಲಿಂಗ್ ಆಗಿದ್ದರು. ಆದರೆ ಇಂದು ಇವರ ಪಾಲಿಗೆ ಮನಮೋಹನ್ ಸಿಂಗ್ ಖಳನಾಯಕ. ಏಕೆಂದರೆ ಇವರ ಹತ್ತು ವರ್ಷಗಳ ಆಡಳಿತದಲ್ಲಿ ಮತ್ತಷ್ಟು ಕೊಳ್ಳಲು, ಮಗದಷ್ಟು ಕೊಳ್ಳಲು ಕಷ್ಟವಾಗುತ್ತಿದೆ. ನಮ್ಮ ಮಾಧ್ಯಮಗಳ ಮತ್ತು ಮಧ್ಯಮ ವರ್ಗಗಳ ಈ ಬೌದ್ಧಿಕ ದಿವಾಳಿತನದ ಫಲವಾಗಿ ಇಂದು ಮತೀಯವಾದಿ, ಫ್ಯಾಸಿಸ್ಟ್ ಸಂಘಟನೆ ಆರೆಸ್ಸಸ್ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ. “ಅಚ್ಛೇ ದಿನ್” ಎನ್ನುವ ತನ್ನ ಆವೇಶದ, ಪ್ರಚೋದನಕಾರಿ ಭಾಷಣದ ಮೂಲಕ ಇಂಡಿಯಾದ ಯುವ ಸಮೂಹವನ್ನು ಬುಟ್ಟಿಗೆ ಹಾಕಿಕೊಂಡಿದ್ದ ನರೇಂದ್ರ ಮೋದಿ ವಿದೇಶದಿಂದ ಕಪ್ಪು ಹಣವನ್ನು ಜಪ್ತಿ ಮಾಡಿ ಮರಳಿ ಇಂಡಿಯಾಗೆ ತರಬೇಕೆಂದರೆ, ತಂಟೆ ಮಾಡುವ ನೆರೆಹೊರೆ ಮುಸ್ಲಿಂ ರಾಷ್ಟ್ರಗಳಿಗೆ ಪಾಠ ಕಲಿಸಬೇಕೆಂದರೆ ಈ ದೇಶಕ್ಕೆ ನನ್ನಂತಹ 56 ಇಂಚಿನ ಎದೆಯುಳ್ಳ ನಾಯಕನ ಅವಶ್ಯಕತೆ ಇದೆ ಎಂದು ಬಹು ಸಂಖ್ಯಾತ ಹಿಂದೂಗಳಿಗೆ ಸಂದೇಶವನ್ನು ರವಾನಿಸಿದ್ದರು. ಈ ಸಂದೇಶ ತನ್ನ ಗುರಿಯನ್ನು ಸಾಧಿಸಿದರ ಫಲವಾಗಿ ಆರೆಸ್ಸಸ್ ನೇತೃತ್ವದ ಬಿಜೆಪಿ ಪಕ್ಷ ಬಹುಮತವನ್ನು ಪಡೆದು ಕೇಂದ್ರದಲ್ಲಿ ಅಧಿಕಾರವನ್ನು ಪಡೆದುಕೊಂಡಿತು. “ಎಲ್ಲರಿಗೂ ನ್ಯಾಯ, ಯಾರನ್ನೂ ಓಲೈಸುವುದಿಲ್ಲ” ಎಂದು ಜನತೆಯ ಮುಂದೆ ಪ್ರಮಾಣ ಮಾಡಿದ್ದ ಸಂಘ ಪರಿವಾರ ಇಂದು ಅಧಿಕಾರಕ್ಕೆ ಬಂದ ನಂತರ ಅಸಮಾನತೆಯ ತತ್ವಗಳನ್ನು ಜಪಿಸುತ್ತಿದೆ. ಪ್ರತ್ಯೇಕತೆಯ, ಶ್ರೇಣೀಕೃತ, ತಾರತಮ್ಯ ನೀತಿಯ ಸನಾತನ ಹಿಂದೂ ಧರ್ಮದ ಸಂಸ್ಥಾಪನೆ ತನ್ನ ಮುಖ್ಯ ಅಜೆಂಡಾಗಳಲ್ಲಿ ಒಂದು ಎಂದು ಸಂಘ ಪರಿವಾರ ಬಹಿರಂಗವಾಗಿ ಹೇಳಿಕೆಗಳನ್ನು ಕೊಡುತ್ತಿದೆ ಮತ್ತು ಅದಕ್ಕೆ ಪೂರಕವಾಗಿ ವರ್ತಿಸುತ್ತಿದೆ. ಅಭಿವೃದ್ಧಿಯೊಂದೇ ನಮ್ಮ ಮೊದಲ ಧ್ಯೇಯ, “ಸಂಪೂರ್ಣ ಆಡಳಿತ, ಎಲ್ಲರ ವಿಕಾಸ” ಎಂದು ಭಾಷಣದ ಮೂಲಕ ಅಧಿಕಾರವನ್ನು ಗಳಿಸಿದ್ದ ಮೋದಿ ಇಂದು ಸಂಘ ಪರಿವಾರದ ಧಾರ್ಮಿಕ ಫೆನಟಿಸಂ ಅನ್ನು ಕುರಿತು ಯಾವುದೇmodi-GIM ಹೇಳಿಕೆಗಳನ್ನು ಕೊಡುತ್ತಿಲ್ಲ. ಈ ಸಂಘ ಪರಿವಾರದ ಸದಸ್ಯರಾದ ಪತ್ರಕರ್ತ ಅರಣ್ ಶೌರಿ ಕಳೆದ ಆರು ತಿಂಗಳ ಆರೆಸ್ಸ್‌ಸ್, ನರೇಂದ್ರ ಮೋದಿಯ ಜಂಟಿ ನೇತೃತ್ವದ ಈ ಬೆಜೆಪಿ ಸರ್ಕಾರದ ಆಡಳಿತದ ಕಾರ್ಯ ವೈಖರಿಯನ್ನು ವಿಶ್ಲೇಷಿಸುತ್ತ “ನೀವು ದೆಹಲಿಯಲ್ಲಿ ಅಭಿವೃದ್ಧಿಯ ಕುರಿತಾಗಿ ಮತ್ತು ಮುಜಫ್ಫರ್ ನಗರದಲ್ಲಿ ಲವ್ ಜಿಹಾದ್ ಕುರಿತು ಏಕಕಾಲದಲ್ಲಿ ಮಾತನಾಡಲು ಸಾಧ್ಯವಿಲ್ಲ” ಎಂದು ಹೇಳಿದ್ದರು. ಚಿಂತಕ ಪ್ರಣಬ್ ಬರ್ಧನ್ ಅವರು “ಸಂಘ ಪರಿವಾರ ಮತ್ತು ಮೋದಿಯ ಆಡಳಿತದ ಈ ಮಾದರಿ ಅಮೇರಿಕಾದ ರಿಪಬ್ಲಿಕನ್ ಪಕ್ಷದ ಮಾದರಿಗೆ ಹತ್ತಿರವಾಗಿದೆ. ವಾಷಿಂಗ್ಟನ್‌ನಲ್ಲಿ ತೆರಿಗೆ ಕಡಿತದ ಕುರಿತಾಗಿ, ಕಾರ್ಪೋರೇಟ್ ಸುಧಾರಣೆಗಳ ಕುರಿತಾಗಿ ಮಾತನಾಡಿ ಕಾರ್ಪೋರೇಟ್ ಗುಂಪುಗಳನ್ನು ಸಂತೃಪ್ತಿಗೊಳಿಸಿದರೆ, ಉಳಿದ ಭಾಗಗಳಲ್ಲಿ ಬೈಬಲ್ ಅನ್ನು ಬಳಸಿಕೊಂಡು ಗೇ ಹಕ್ಕುಗಳನ್ನು ನಿರಾಕರಿಸುವುದು, ಗರ್ಭಪಾತವು ಬೈಬಲ್‌ನ ನೀತಿಗಳಿಗೆ ವಿರೋಧ ಎನ್ನುವ ಧಾರ್ಮಿಕ ಮೂಲಭೂತವಾದವನ್ನು ಪ್ರದರ್ಶಿಸುತ್ತದೆ. ಇಂದು ನರೇಂದ್ರ ಮೋದಿಯು ಜಾಗತೀಕರಣದ ಆರ್ಥಿಕ ನೀತಿಯನ್ನು ಪ್ರತಿಪಾದಿಸುವ ತನ್ನ ಕಟ್ಟಾ ಬೆಂಬಲಿಗ ಆರ್ಥಿಕ ತಜ್ಞ ’ಭಗವತಿ’ ಮತ್ತು ಮತೀಯವಾದಿ, ಆಧುನಿಕತೆಯ ವಿರೋಧಿ ಆರೆಸ್ಸಸ್‌ನ ’ಭಾಗವತ್’ ಇವರಿಬ್ಬರನ್ನೂ ಒಳಗೊಳ್ಳುವಂತಹ ದ್ವಿಮುಖ ತತ್ವವನ್ನು ಅಳವಡಿಸಿಕೊಂಡಿದ್ದಾರೆ. ಹಿಂದೂ ಫೆನಟಿಸಂ ಎನ್ನುವ ದೇಹಕ್ಕೆ ಆಡಳಿತ ಮತ್ತು ಅಭಿವೃದ್ಧಿ ಎನ್ನುವ ತಲೆಯನ್ನು ಕಸಿ ಮಾಡಿರುವ ನರೇಂದ್ರ ಮೋದಿ ಗಣೇಶನಂತೆ ಪ್ರಾಚೀನ ಭಾರತದ ಸರ್ಜರಿ ಕೌಶಲ್ಯವನ್ನು ಇದನ್ನು ಉದಾಹರಣೆಯಾಗಿ ಬಳಸಿಕೊಳ್ಳುತ್ತಿದ್ದಾರೆ” ಎಂದು ವಿವರಿಸುತ್ತಾರೆ.

ಪತ್ರಕರ್ತ ವಿನೋದ ಮೆಹ್ತ ಬರೆದಂತೆ ಮೋದಿಯ ಶೈಲಿಯ ಆಡಳಿತವೆಂದರೆ ಗುರಿ ಮುಟ್ಟುವುದು ಮುಖ್ಯವಾಗುತ್ತದೆಯೇ ಹೊರತು ಅದನ್ನು ತಲಪಲು ಬಳಸುವ ವಾಮಮಾರ್ಗದ, ಹಿಂಸಾಚಾರದ, ಮೂಲಭೂತವಾದದ ದಾರಿಗಳು ಅಕ್ಷೇಪಾರ್ಹವಲ್ಲವೇ ಅಲ್ಲ.

ಆರೆಸ್ಸಸ್ ಮತ್ತು ಮೋದಿ ನೇತೃತ್ವದ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಸಂಘ ಪರಿವಾರದ ಮುಖಂಡ ಮೋಹನ್ ಭಾಗವತ್ ಮತ್ತು ಅದರ ಲುಂಪೆನ್ ಗುಂಪು ಮಾತನಾಡಿದ ಮತೀಯವಾದಿ, ಪ್ರಚೋದನಾತ್ಮಕ ಭಾಷಣಗಳು, ಹೇಳಿಕೆಗಳು:

ಇಂಗ್ಲೆಂಡ್‌ನ ನಿವಾಸಿಗಳು ಇಂಗ್ಲೀಷರು, ಜರ್ಮನಿಯ ನಿವಾಸಿಗಳು ಜರ್ಮನ್ನರು, ಅಮೇರಿಕಾದ ನಿವಾಸಿಗಳು ಅಮೇರಿಕನ್ನರು ಎಂದು ಒಪ್ಪಿಕೊಳ್ಳಬಹುದಾದರೆ ಹಿಂದುಸ್ತಾನದಲ್ಲಿ ವಾಸಿಸುವವರೆಲ್ಲರೂ ಹಿಂದೂಗಳೆಂದು ನಾವೆಲ್ಲರೂ ಒಪ್ಪಿಕೊಳ್ಳಬೇಕು.

ಹಿಂದೂಗಳು ಇಲ್ಲಿ ಇರುವವರೆಗೂ ಭಾರತ ಸುರಕ್ಷಿತವಾಗಿರುತ್ತದೆ. ಒಂದು ವೇಳೆ ಹಿಂದೂಗಳು ಇಲ್ಲದಿದ್ದರೆ ಭಾರತೀಯರೆಲ್ಲರೂ ಅಪಾಯಕ್ಕೆ ಸಿಲುಕಬೇಕಾಗುತ್ತದೆ.ಇಡೀ ವಿಶ್ವದ ಒಳಿತಿಗಾಗಿ ಬಲಾಢ್ಯ ಹಿಂದೂ ಸಮಾಜದ ನಿರ್ಮಾಣ ಅತ್ಯಗತ್ಯ.

– ಮೋಹನ್ ಭಾಗವತ್

***

ಮದರಾಸಗಳಲ್ಲಿ ಭಯೋತ್ಪಾದನೆಯ ಕುರಿತಾಗಿ ತರಬೇತಿ ನೀಡಲಾಗುತ್ತಿದೆ. ಮದರಾಸಾಗಳು ಅವರನ್ನು ಜೆಹಾದಿಗಳನ್ನಾಗಿ, ಭಯೋತ್ಪಾದಕರನ್ನಾಗಿ ತಯಾರಿಸುತ್ತಿವೆ.

ನಾಥುರಾಮ್ ಗೋಡ್ಸೆ ಸಹ ರಾಷ್ಟ್ರೀಯವಾದಿ ಮತ್ತು ಮಹಾತ್ಮ ಗಾಂಧಿ ಸಹ ದೇಶಕ್ಕೆ ಸೇವೆ ಸಲ್ಲಿಸಿದ್ದಾರೆ. ಗೋಡ್ಸೆ ತುಂಬಾ ಉದ್ರೇಕಕಾರಿ ವ್ಯಕ್ತಿಯಾಗಿದ್ದ. ಅವನು ತಪ್ಪನ್ನು ಮಾಡಿರಬಹುದು. ಆದರೆ ದೇಶ ದ್ರೋಹಿ ಅಲ್ಲ. ಅವನು ದೇಶಪ್ರೇಮಿ

ಹಿಂದೂಯಿಸಂ ಅನ್ನು ರಕ್ಷಿಸಲು ಹಿಂದೂ ಮಹಿಳೆಯರು ಕನಿಷ್ಠ ನಾಲ್ಕು ಮಕ್ಕಳನ್ನು ಹೆರಬೇಕು.

– ಉತ್ತರ ಪ್ರದೇಶದ ಉನ್ನೋ ಕ್ಷೇತ್ರದ ಬಿಜೆಪಿ ಸಂಸದ ಸಾಕ್ಷಿ ಮಹರಾಜ್

***

ಪಶ್ಚಿಮ ಉತ್ತರ ಪ್ರದೇಶದಲ್ಲಿ ಕಳೆದ ಎರಡೂವರೆ ವರ್ಷಗಳ ಸಮಾಜವಾದಿ ಪಕ್ಷದ ಆಡಳಿತದಲ್ಲಿ ಸುಮಾರು 450 ಗಲಭೆಗಳಾಗಿವೆ. ಏಕೆಂದರೆ ಒಂದು ನಿರ್ದಿಷ್ಟ ಧರ್ಮದವರ ಪ್ರಭಾವ ಹೆಚ್ಚುತ್ತಿದೆ. ಆದರೆ ಪೂರ್ವ ಉತ್ತರ ಪ್ರದೇಶದಲ್ಲಿ ಗಲಭೆಗಳು ಯಾಕಿಲ್ಲ? ನಿಮಗೆ ಸುಲುಭವಾಗಿ ಅರ್ಥವಾಗುತ್ತದೆ. ಶೇಕಡ 10-20% ಅಲ್ಪಸಂಖ್ಯಾತರಿರುವ ಸ್ಥಳಗಳಲ್ಲಿ ಸಣ್ಣ ಪುಟ್ಟ ಗಲಭೆಗಳು ನಡೆಯುತ್ತವೆ. ಶೇಕಡಾ 35% ರಷ್ಟು ಅಲ್ಪಸಂಖ್ಯಾತರಿರುವ ಸ್ಥಳಗಳಲ್ಲಿ ತೀವ್ರವಾದ ಗಲಭೆಗಳು ಜರಗುತ್ತವೆ. ಶೇಕಡಾ35% ಕ್ಕಿಂತಲೂ ಅಧಿಕ ಅಲ್ಪಸಂಖ್ಯಾತರಿರುವ ಪ್ರದೇಶಗಳಲ್ಲಿ ಹಿಂದೂಗಳಿಗೆ ಜಾಗವೇ ಇಲ್ಲ

ಅವರು ನಮ್ಮ ಒಬ್ಬ ಹಿಂದೂ ಹುಡುಗಿಯನ್ನು ಅಪಹರಿಸಿದರೆ ನಾವು 100 ಹಿಂದೂ ಹುಡುಗಿಯರನ್ನು ಅಪಹರಿಸುತ್ತೇವೆ. ಹಿಂದೂ ಹುಡುಗರು ಮುಸ್ಲಿಂ ಮಹಿಳೆಯರನ್ನು ಮದುವೆಯಾಗಿ ನಂತರ ಅವರನ್ನು ಹಿಂದೂ ಧರ್ಮಕ್ಕೆ ಮತಾಂತರಗೊಳಿಸಬೇಕು

(ಪಾರ್ಲಿಮೆಂಟಿನಲ್ಲಿ ಮಾತನಾಡುತ್ತ) ಹಿಂದೂಗಳನ್ನು ಹೆದರಿಸಿದರೆ, ಅವರು ಪ್ರತೀಕಾರ ತಿರಿಸಿಕೊಳ್ಳಲು ಸಿದ್ಧರಿರಬೇಕು.

– ಉತ್ತರ ಪ್ರದೇಶದ ಗೋರಖ್‌ಪುರ ಕ್ಷೇತ್ರದ ಬಿಜೆಪಿ ಸಂಸದ ಯೋಗಿ ಆದಿತ್ಯನಾಥ್

***

(ಪಶ್ಚಿಮ ದೆಹಲಿಯ ಶ್ಯಾಮನಗರ ಏರಿಯಾದಲ್ಲಿ ಚುನಾವಣಾ ಭಾಷಣ ಮಾಡುತ್ತ) ನಿಮಗೆ ರಾಮಜಾದೆ ಧರ್ಮದ ಆಡಳಿತ ಬೇಕೋ, ಹರಾಮಜಾದೆ ಧರ್ಮದ ಆಡಳಿತ ಬೇಕೋ ಎಂದು ನೀವೇ ನಿರ್ಧರಿಸಿ.

– ಬಿಜೆಪಿ ಸರ್ಕಾರದ ಮಂತ್ರಿ ನಿರಂಜನ ಜ್ಯೋತಿ

***

ನಿಮಗೆ ಹನುಮಂತ ಗೊತ್ತಲ್ಲವೇ? ನಾವೆಲ್ಲರೂ ಹನುಮಂತರು. ಮೋದಿಯ ಭಕ್ತರು. ಹನುಮಂತನು ರಾಮನಿಗೆ ನನಗೆ ಪ್ರತ್ಯೇಕ ಐಡೆಂಟಿಟಿ ಇಲ್ಲ. ನಿನ್ನ ಭಕ್ತ ಅಷ್ಟೆ ಎಂದು ಹೇಳುತ್ತಾನೆ. ಹಾಗೆ ಮೋದಿ ನಮಗೆಲ್ಲ ರಾಮನಂತೆ. ಕೇಜ್ರೀವಾಲ್ ಮಾರೀಚನಂತೆ.

– ಬಿಜೆಪಿ ಮುಖಂಡ ಗಿರಿರಾಜ್ ಸಿಂಗ್

***

ಭಗವದ್ಗೀತೆಯನ್ನು ಭಾರತದ ಧರ್ಮಗ್ರಂಥವೆಂದು ಅಧಿಕೃತವಾಗಿ ಘೋಷಿಸಿ.

– ಬಿಜೆಪಿ ಸರ್ಕಾರದ ಮಂತ್ರಿ ಸುಷ್ಮಾ ಸ್ವರಾಜ್

***

ಮಹಾಭಾರತದ ಕಾಲದಲ್ಲಿ ಕರ್ಣನು ಕುಂತಿಯ ಗರ್ಭದಿಂದ ಜನಿಸಿಲ್ಲ. ಗರ್ಭದ ಹೊರಗೆ ಜನಿಸಿದ್ದಾನೆ ಎಂದು ನಾವೆಲ್ಲಾ ಓದಿದ್ದೇವೆ. ಅಂದರೆ ಇದರ ಅರ್ಥ ಪುರಾತನ ಕಾಲದಲ್ಲಿಯೇ ಭಾರತವು ಜೆನಟಿಕ್ ತಂತ್ರಜ್ಞಾನದಲ್ಲಿ ಪರಿಣಿತಿಯನ್ನು ಹೊಂದಿತ್ತು ಎಂಬುದು ಸಾಬೀತಾಗಿದೆ. ಮತ್ತೊಂದು ಉದಾಹರಣೆ ಕೊಡುವುದಾದರೆ ನಾವು ಆನೆ ಮುಖದ ಗಣೇಶನನ್ನು ಪೂಜಿಸುತ್ತೇವೆ. ಮನುಷ್ಯನ ದೇಹಕ್ಕೆ ಆನೆಯ ಮುಖವನ್ನು ಜೋಡಿಸಿದ್ದಾರೆಂದರೆ ಆ ಕಾಲದಲ್ಲಿಯೇ ಪ್ಲಾಸ್ಟಿಕ್ ಸರ್ಜರಿಯಲ್ಲಿ ನಾವು ಪಳಗಿದ್ದೆವು ಎಂದು ಸಹ ಸಾಬೀತಾಗುತ್ತದೆ

– ಪ್ರಧಾನಿ ನರೇಂದ್ರ ಮೋದಿ

***

ಮೋದಿಯು ದೇವರ ಅವತಾರ. ಮೋದಿಯು ಗಾಂಧಿಯನ್ನು ಮೀರಿದ್ದಾರೆ. ಏಷ್ಯಾದ ಪೂರ್ವ-ದಕ್ಷಿಣ ರಾಷ್ಟ್ರಗಳನ್ನು ಮಹಾಭಾರತ ಮತ್ತು ರಾಮಾಯಣದ ಮೂಲಕ ಸಾಂಸ್ಕೃತಿಕವಾಗಿ ಬೆಸೆಯಬೇಕಾಗಿದೆ.

– ಲೋಕೇಶ ಚಂದ್ರ, Indian Council for Cultural Relations (ICCR) ನ ಮುಖ್ಯಸ್ಥ

***

“ತೀರಾ ಇತ್ತೀಚೆಗೆ ಆರೆಸಸ್ ತನ್ನ ಹಿಂದೂ ರಾಷ್ಟ್ರೀಯತೆಯನ್ನು ನವೀಕರಿಸಲು ಮತ್ತು ಈ ಸಿದ್ಧಾಂತಕ್ಕೆ ಹೊಸ ರೂಪ ಕೊಡಲು ನಿರ್ಧರಿಸಿದೆ. ತನ್ನ ಎಂಬತ್ತು ವರ್ಷಗಳ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಜಾತಿ ಪದ್ಧತಿಯ ಕುರಿತಾಗಿ ಮಾತನಾಡುತ್ತಿದೆ. ಈ ಜಾತಿ ಪದ್ಧತಿಯ ಹುಟ್ಟಿಗೆ ಸಂಪೂರ್ಣ ಮತೀಯವಾದದ ಚಿಂತನೆಗಳನ್ನು ಲೇಪಿಸಲು ಪೂರ್ವ ತಯಾರಿಗಳನ್ನು ನಡೆಸುತ್ತಿರುವ ಆರೆಸಸ್ ಅದಕ್ಕಾಗಿ ಮೊಟ್ಟ ಮೊದಲ ಬಾರಿಗೆ ದಲಿತರ ಇತಿಹಾಸದ ಕುರಿತಾಗಿ ಪುಸ್ತಕಗಳನ್ನು ಬರೆಯುತ್ತಿದೆ. ಇತ್ತೀಚೆಗೆ ಬಿಡುಗಡೆಯಾದ ಈ ಮೂರು ಪುಸ್ತಕಗಳಲ್ಲಿ ವಿದೇಶಿ ದಾಳಿಕೋರರು ಇಲ್ಲಿನ ಜಾತಿ ಪದ್ಧತಿಯನ್ನು ಹುಟ್ಟು ಹಾಕಿದರು ಎಂದು ಹೇಳಿದೆ. ಬಿಜೆಪಿಯ ವಕ್ತಾರರಾದ ಸೋನಂಕರ್ ಶಾಸ್ಟ್ರಿ ಬರೆದಿರುವ ’ಹಿಂದೂ ಚರ್ಮಕಾರ ಜಾತಿ, ಹಿಂದೂ ವಾಲ್ಮೀಕಿ ಜಾತಿ, ಹಿಂದೂ ಖಾತಿಕ್ ಜಾತಿ’ ಎನ್ನುವ ಮೂರು ಪುಸ್ತಕಗಳಲ್ಲಿ ದಲಿತರನ್ನು ಮತ್ತು ಹಿಂದುಳಿದ ವರ್ಗಗಳನ್ನು ಸೆಳೆಯಲು ಇಡೀ ಶ್ರೇಣೀಕೃತ ವ್ಯವಸ್ಥೆಗೆ ಮುಸ್ಲಿಂ ದಾಳೀಕೋರರೇ ಕಾರಣ ಎಂದು ಬರೆಯಲಾಗಿದೆ. ಈ ಪುಸ್ತಕಗಳನ್ನು ಆರೆಸಸ್ ಮುಖ್ಯಸ್ಥ ಮೋಹನ್ ಭಾಗವತ್ ಬಿಡುಗಡೆಗೊಳಿಸಿದ್ದಾರೆ. ಈ ಮೂರು ಪುಸ್ತಕಗಳಿಗೂ ಆರೆಸಸ್ ಸಂಚಾಲಕರು ಮುನ್ನುಡಿಗಳನ್ನು ಬರೆದಿದ್ದಾರೆ. ಇಲ್ಲಿನ ಒಂದು ಪುಸ್ತಕದಲ್ಲಿ ಆರೆಸಸ್ ನಾಯಕ ಭೈಯ್ಯಾಜಿ ಜೋಶಿ ಬರೆದ ಮುನ್ನುಡಿಯ ಕೆಲವು ಸಾಲುಗಳು ಹೀಗಿವೆ: “ಕ್ಷತ್ರಿಯ ಹಿಂದೂಗಳ ಸ್ವಾಭಿಮಾನವನ್ನು ನಾಶಪಡಿಸಲು ವಿದೇಶದ ಅರಬರು, ದನ ತಿನ್ನುವವರು, ಮುಸ್ಲಿಂ ನಾಯಕರು ಆ ಕ್ಷತ್ರಿಯರನ್ನು ಗೋವುಗಳನ್ನು ಕೊಲ್ಲಲು ಬಲಾತ್ಕರಿಸಿದರು, ಚರ್ಮವನ್ನು ಸುಲಿದು ಅದರ ಅಸ್ಥಿಪಂಜರವನ್ನು ನಿರ್ಜನ ಪ್ರದೇಶದಲ್ಲಿ ಬಿಸಾಡುವಂತೆ ಒತ್ತಾಯಿಸಿದರು. ಈ ಮೂಲಕ ಈ ವಿದೇಶಿ ದಾಳಿಕೋರರು ಚರ್ಮ-ಕರ್ಮ ಎನ್ನುವ ಜಾತಿಯನ್ನು ಸೃಷ್ಟಿಸಿದರು. ವರ್ಣಾಶ್ರಮದಲ್ಲಿ ಶೂದ್ರರು ಎಲ್ಲಿಯೂ ಅಸ್ಪಶ್ಯರಾಗಿರಲಿಲ್ಲ. ವಿದೇಶಿ ದಾಳಿಕೋರರು ಅವರನ್ನು ಅಸ್ಪಶ್ಯರನ್ನಾಗಿಸಿದರು.” ಮತ್ತೊಬ್ಬ ಆರೆಸಸ್ ಮುಖಂಡ ಸುರೇಶ್ ಸೋನಿ ಅವರು “ಬ್ರಾಹ್ಮಣ ಮತ್ತು ಕ್ಷತ್ರಿಯರ ಮೇಲೆ ಮಧ್ಯಯುಗೀನ ಕಾಲದಲ್ಲಿ ಮುಸ್ಲಿಂ ದಾಳಿಕೋರರು ನಡೆಸಿದ ದೌರ್ಜನ್ಯದ ಫಲವಾಗಿ ಇಂದಿನ ಜಾತಿಗಳಾದ ವಾಲ್ಮೀಕಿ, ಸುದರ್ಶನ್, ಮೆಹಜಾಬಿ ಸಿಖ್ ಮತ್ತು ಇತರೆ 624 ಉಪಜಾತಿಗಳು ಹುಟ್ಟಿಕೊಂಡವು” ಎಂದು ಹೇಳಿದ್ದಾರೆ. ಮತ್ತೊಬ್ಬ ಆರೆಸಸ್ ಮುಖಂಡ ಕ್ರಿಷ್ಣ ಗೋಪಾಲ್ “ವೇದಗಳ ಕಾಲದಲ್ಲಿ ಖಾತಿಕ್ ಕ್ಷತ್ರಿಯರನ್ನು ಬ್ರಾಹ್ಮಣರೆಂದು ಗುರುತಿಸುತ್ತಿದ್ದರು. ದಾಳಿಕೋರರ ನಂತರ ಅವರನ್ನು ಅಸ್ಪಶ್ಯರೆಂದು ಕರೆಯತೊಡಗಿದರು” ಎಂದು ಬರೆಯುತ್ತಾರೆ.
– ಹಿಂದುಸ್ತಾನ್ ಟೈಮ್ಸ್, 22 ಸೆಪ್ಟೆಂಬರ್, 2014

CBSE ಜೂನ್30, 2014 ರಲ್ಲಿ ಒಂದು ಸುತ್ತೋಲೆಯನ್ನು ಹೊರಡಿಸಿದೆ. ಆ ಸುತ್ತೋಲೆಯ ವಿವರ ಈ ರೀತಿ ಇದೆ: “CBSE ಗೆ ಸೇರಿದ ಎಲ್ಲಾ ಶಾಲೆಗಳು ಸಂಸ್ಕೃತ ವಾರವನ್ನು ಆಚರಿಸಬೇಕು. ಸಂಸ್ಕೃತ ಮತ್ತು ಭಾರತದ ಸಂಸ್ಕೃತಿ ಒಂದಕ್ಕೊಂದು ಬೆಸೆದುಕೊಂಡಿವೆ. ನಮ್ಮ ಸ್ವದೇಶಿ ಜ್ಞಾನವು ಈ ಸಂಸ್ಕೃತ ಭಾಷೆಯಲ್ಲಿ ಮಾತ್ರ ಲಭ್ಯವಿದೆ.”

ಇಂಡಿಯಾದ ಶಿಕ್ಷಣ ವ್ಯವಸ್ಥೆಯನ್ನು “ಭಾರತೀಕರಣ”ಗೊಳಿಸಲು ಹೊಸ ರಾಷ್ಟ್ರೀಯ ಸ್ಕೂಲ್ ಬೋರ್ಡಗಳನ್ನು ಸ್ಥಾಪಿಸಬೇಕೆಂದು ಬಾಬಾ ರಾಮದೇವ್ ಹೇಳಿದ್ದಾರೆ. ಭಾರತದ ಸನಾತನ ಪರಂಪರೆಯನ್ನು ಹೇಳಿಕೊಡುವ muzaffarnagar-riots-tentsಈ ಶಾಲೆಗಳನ್ನು “ಸೆಕೆಂಡರಿ ಶಿಕ್ಷಣದ ಭಾರತೀಯ ಬೋರ್ಡ್” ಎಂದು ನಾಮಕರಣ ಮಾಡಬೇಕೆಂದು ಹೇಳಿದ್ದಾರೆ.

ಕಳೆದ ಆರು ತಿಂಗಳಲ್ಲಿ ಸಂಘ ಪರಿವಾರದ ವಿಎಚ್‌ಪಿ ಸಂಘಟನೆಯ ನೇತೃತ್ವದಲ್ಲಿ “ಘರ್ ವಾಪಸಿ” ಎನ್ನುವ ಅಮಾನವೀಯ ಚಿಂತನೆಯ ಅನುಸಾರ ನಡೆದ ಅನ್ಯಧರ್ಮೀಯರನ್ನು ಹಿಂದೂ ಧರ್ಮಕ್ಕೆ ಬಲವಂತವಾಗಿ ಮತಾಂತರಗೊಳಿಸುವ ಚಟುವಟಿಕೆಗಳು :

8, ಡಿಸೆಂಬರ್, 2014ರಂದು ಆರೆಸ್ಸಸ್ ಸೇರಿದ ಹಿಂದೂ ಸಂಘಟನೆಗಳು ಸುಮಾರು 250 ಮುಸ್ಲಿಮರನ್ನು ಹಿಂದೂ ಧರ್ಮಕ್ಕೆ ಮತಾಂತರಗೊಳಿಸಿದರು.

ಅಂದ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಸುಮಾರು 8000 ಅಲ್ಪಸಂಖ್ಯಾತರನ್ನು ಹಿಂದೂ ಧರ್ಮಕ್ಕೆ ಮತಾಂತರಿಸಲಾಗಿದೆ. ಹೈದರಬಾದ್ ಒಂದರಲ್ಲೇ ಸುಮಾರು 1200 ಕುಟುಂಬಗಳನ್ನು ಮತಾಂತರಿಸಲಾಗಿದೆ. ಇದನ್ನು ಮತಾಂತರ ಎಂದು ನಾವು ಕರೆಯುವುದಿಲ್ಲ. ಘರ್ ವಾಪಸಿ ಎಂದು ಕರೆಯಬೇಕು ಎಂದು ವಿಎಚ್‌ಪಿ ಮುಖಂಡ ವೆಂಕಟೇಶ್ ಹೇಳಿದ್ದಾರೆ.

ಗೋವಾದಲ್ಲಿ ಪೋರ್ಚುಗೀಸರ ಸಂದರ್ಭದಲ್ಲಿ ಬಲವಂತವಾಗಿ ಕ್ಯಾಥೋಲಿಕ್ ಧರ್ಮಕ್ಕೆ ಮತಾಂತರಗೊಂಡವರನ್ನು ಘರ್ ವಾಪಸಿ ಕಾರ್ಯಕ್ರಮದ ಅಡಿಯಲ್ಲಿ ಮರಳಿ ಹಿಂದೂ ಧರ್ಮಕ್ಕೆ ಕರೆತರುತ್ತೇವೆ ಎಂದು ಆರೆಸ್ಸಸ್‌ನ ಶರದ್ ಕುಂಟೆ ಹೇಳಿದ್ದಾರೆ

ಪ್ರತಿ ವರ್ಷವು 25,000-30,000 ಮುಸ್ಲಿಂರು ಹಿಂದೂಯಿಸಂಗೆ ಮರಳಿ ಬರುತ್ತಿದ್ದಾರೆ. ಪಟೇಲ್, ದೇಸಾಯಿ, ಭಟ್ ಎಲ್ಲ ಹಿಂದೂ ಹೆಸರುಗಳು. ಮುಸ್ಲಿಮರು ತಮ್ಮ ಹೆಸರಿನ ಮುಂದೆ ಈ ಹಿಂದು ಹೆಸರುಗಳನ್ನು ಇಟ್ಟುಕೊಳ್ಳುತ್ತಾರೆ. ಇಲ್ಲಿ ನೂರ್ ಮಹಮದ್ ದೇಸಾಯಿ, ಅಹ್ಮದ್ ಪಟೇಲ್, ಮಕ್ಬೂಲ್ ಭಟ್ ಎನ್ನುವ ಹೆಸರುಗಳನ್ನು ಕಾಣುತ್ತೇವೆ. ಅವರ ಹಿಂದಿನವರು ಹಿಂದೂಗಳು ಎಂದು ಗುಜರಾತ್‌ನ ವಿಎಚ್‌ಪಿ ಸೆಕ್ರೆಟರಿ ರಾನಚೋಡ್ ಭಾರವಾದ್ ಹೇಳಿದ್ದಾರೆ.

ಕೇರಳದ ಅಲಪ್ಪುಜಾದಲ್ಲಿ ಸುಮಾರು 30 ದಲಿತ ಕ್ರಶ್ಚಿಯನ್ ಕುಟುಂಬಗಳ್ನ್ನು ಘರ್ ವಾಪಸಿ ಕಾರ್ಯಕ್ರಮದ ಅಡಿಯಲ್ಲಿ ಹಿಂದೂ ಧರ್ಮಕ್ಕೆ ಮತಾಂತರಗೊಳಿಸಲಾಗಿದೆ. ಇನ್ನೂ 150 ಕುಟುಂಬಗಳು ಹಿಂದೂ ಧರ್ಮಕ್ಕೆ ಬರಲು ಇಚ್ಛೆ ವ್ಯಕ್ತಪಡಿಸಿವೆ ಎಂದು ವಿಎಚ್‌ಪಿ ಮುಖಂಡ ಪ್ರತಾಪ್.ವಿ.ಪಡಿಕ್ಕಲ್ ಹೇಳಿದ್ದಾರೆ.ಬಲ್ಲ ಮೂಲಗಳ ಪ್ರಕಾರ ಆರೆಸ್ಸಸ್ ಸುಮಾರು 58 ಪ್ರಚಾರಕರನ್ನು ಈ ಕಾರ್ಯಕ್ರಮಕ್ಕಾಗಿಯೇ ನಿಯೋಜಿಸಲಾಗಿದೆ

ಗುಜರಾತ್‌ನ ವಲ್ಸದ್‌ನಲ್ಲಿ ಸುಮಾರು 200 ಆದಿವಾಸಿ ಕ್ರಿಶ್ಚಿಯನ್ನರನ್ನು ಹಿಂದೂ ಧರ್ಮಕ್ಕೆ ಮತಾಂತರಗೊಳಿಸಲಾಗಿದೆ.

ಉತ್ತರ ಪ್ರದೇಶದ ಜಾನುಪುರದಲ್ಲಿ 310 ಕ್ರಿಶ್ಷಿಯನ್ನರನ್ನು ಹಿಂದೂ ಧರ್ಮಕ್ಕೆ ಮತಾಂತರಿಸಲಾಗಿದೆ.

11, ಡಿಸೆಂಬರ್ 2014 ರಂದು ಲೂಧಿಯಾನದ ಕಲವರಿ ಚರ್ಚಿನ ಮೇಳೆ ದಾಳಿ.

3 ಡಿಸೆಂಬರ್, 2014ರಲ್ಲಿ ದೆಹಲಿ ಚರ್ಚನ ಮೇಲೆ ದಾಳಿ.

ಭಿಲಾಯಿ, ಚಿತ್ರದುರ್ಗ, ದುರ್ಗ, ತ್ರಿಶ್ಯೂರ್ ಚರ್ಚಗಳ ಮೇಲೆ ದಾಳಿ.

ಮೇಲಿನ ಘಟನೆಗಳು ಸಂಘಪರಿವಾರದ ಮತೀಯವಾದಿ ಫೆನಟಿಸಂನ ಮುಖವನ್ನು ಬಯಲುಗೊಳಿಸುತ್ತವೆ. ಇನ್ನು ಇವರ ಆಡಳಿತದ, ಅಭಿವೃದ್ಧಿಯ ಮುಖದ ಲಕ್ಷಣಗಳೇನಿವೆ?

ಉದಾಹರಣೆಗೆ ಸಂಸತ್ತಿನ ಅಧಿವೇಶನದಲ್ಲೂ ಭಾಗವಹಿಸದೆ, ಭಾಗವಹಿಸಿದ ಕೆಲವೇ ದಿನಗಳಲ್ಲಿಯೂ ಒಂದೆರೆಡು ವಿವರಣೆಗಳನ್ನು ಕೊಟ್ಟಿದ್ದನ್ನು ಬಿಟ್ಟಲ್ಲಿ ಸಂಸತ್ತಿನ ಪ್ರಮುಖವಾದ ಚರ್ಚೆಗಳಲ್ಲಿ ಕಿಂಚಿತ್ತೂ ಭಾಗವಹಿಸಲಿಲ್ಲ ಪ್ರಧಾನಿ ನರೇಂದ್ರ ಮೋದಿ. ಏಕೆಂದರೆ ನರೇಂದ್ರ ಮೋದಿಗೆ ದೇಶವೆಂದರೆ ಒಂದು ಕಾರ್ಪೋರೇಟ್ ಸಂಸ್ಥೆ. ಅದರ ಪ್ರಧಾನ ಮಂತ್ರಿ ಎಂದರೆ ಕಾರ್ಪೋರೇಟ್ ಸಂಸ್ಥೆಯ ಸಿಇಓ. ಸಾಮಾನ್ಯವಾಗಿ ಈ ಸಿಇಓಗಳು ನೌಕರರೊಂದಿಗೆ ದಿನನಿತ್ಯ ಬೆರೆಯುವುದಿಲ್ಲ. ಮಾತನಾಡುವುದಿಲ್ಲ. ಈ ಸಿಇಓಗಳು ಏನಿದ್ದರೂ ಅಧಿಕಾರಿಗಳ ಮೂಲಕ ಆಡಳಿತ ನಡೆಸುತ್ತಾರೆ. ಹಾಗೆಯೇ ನರೇಂದ್ರ ಮೋದಿಯೂ ಸಹ. ಸಂಸತ್ತಿಗೆ ಬರುವುದಿಲ್ಲ, ಕಲಾಪಗಳಲ್ಲಿ ಭಾಗವಹಿಸುದಿಲ್ಲ. ಎಲ್ಲವನ್ನೂ ಪ್ರಧಾನ ಮಂತ್ರಿ ಕಾರ್ಯಾಲಯದ ಮೂಲಕ ಆಡಳಿತ ನಡೆಸಲಾಗುತ್ತದೆ. ಇದು ಪರೋಕ್ಷವಾಗಿ ತುರ್ತುಪರಿಸ್ಥಿತಿಯ ಅಂಶಗಳು. ಕೇಂದ್ರೀಕೃತ ವ್ಯವಸ್ಥೆಯ ಲಕ್ಷಣಗಳು.

ತಾನು ಅಧಿಕಾರಕ್ಕೆ ಬಂದು ಕೇವಲ ಆರು ತಿಂಗಳಲ್ಲೇ ನರೇಂದ್ರ ಮೋದಿ ಸರ್ಕಾರ ಮಸೂದೆಗಳನ್ನು ಸಂಸತ್ತಿನಲ್ಲಿ ಚರ್ಚೆಗೆ ಮಂಡಿಸದೆ, ಸಂಸತ್ತಿನ ಪ್ರಾಮುಖ್ಯತೆಯನ್ನು ಕಡೆಗಣಿಸಿ ಸುಗ್ರೀವಾಜ್ಞೆಗಳ ಮೂಲಕ 8 ಮಸೂದೆಗಳನ್ನು ಅಂಗೀಕರಿಸಿಕೊಂಡಿದ್ದಾರೆ. ಕನಿಷ್ಠ ಎಲ್ಲಾ ಸಂಸದರ ಅನುಮೋದನೆ ಮತ್ತು ಆಕ್ಷೇಪಣೆಗಳನ್ನು ಪರಿಗಣನೆಗೆ ತಂದುಕೊಂಡು ಆ ಮೂಲಕ ಒಂದು ಒಮ್ಮತದ ನಿರ್ಣಯದ ಮೂಲಕ ಅಥವಾ ಅದಾಗದಿದ್ದ ಪಕ್ಷದಲ್ಲಿ ಬಹುಮತದ ಮೂಲಕವಾದರೂ ಮಸೂದೆಗಳನ್ನು ಅಂಗೀಕರಿಸಬೇಕಾಗಿತ್ತು. ಆದರೆ ಪ್ರಜಾಪ್ರಭುತ್ವದ ಪ್ರಕ್ರಿಯೆಗಳಲ್ಲಿ, ಸಂವಿಧಾನದ ಆಶಯಗಳಲ್ಲಿ ಕೊಂಚಿತ್ತೂ ಗೌರವವಿಲ್ಲದ ಆರೆಸ್ಸಸ್ ಮತ್ತು ನರೇಂದ್ರ ಮೋದಿ ಹಿಂದಿನ ಎಲ್ಲಾ ಪ್ರಧಾನ ಮಂತ್ರಿಗಳಿಗೆ ಹೋಲಿಸಿದರೆ ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಸುಗ್ರೀವಾಜ್ಞೆಗಳನ್ನು ಬಳಸಿ ಅಂದರೆ ಸರಾಸರಿ 28 ದಿನಗಳಿಗೆ 1 ಸುಗ್ರೀವಾಜ್ಞೆಯನ್ನು ಬಳಸಿ ಮಸೂದೆಯನ್ನು ಅಂಗೀಕರಿಸಿಕೊಂಡಿದ್ದಾರೆ. ಇದು ಆರೆಸ್ಸಸ್ ಮತ್ತು ನರೇಂದ್ರ ಮೋದಿಯ ಸರ್ವಾಧಿಕಾರದ ಆಡಳಿತದ ಶೈಲಿ.

ನರೇಂದ್ರ ಮೋದಿಯ ;ಮೋಹನ್ ಭಾಗವತ್; ಎನ್ನುವ ಮತೀಯವಾದದ, ಫ್ಯಾಸಿಸಂನ ಮುಖದ, ಹಿಂದೂಯಿಸಂವಾದಿಯ ವ್ಯಾಖ್ಯಾನ ಮೇಲಿನಂತಿದ್ದರೆ ನರೇಂದ್ರ ಮೋದಿಗೆ ಬಹುಮತ ಗಳಿಸಲು ಕಾರಣವಾದ, ಇಡೀ ಮಧ್ಯಮವರ್ಗ ಮತ್ತು ಕಾರ್ಪೋರೇಟ್ ವಲಯಗಳು ಮೋದಿಯನ್ನು ಸಂಪೂರ್ಣವಾಗಿ ಬೆಂಬಲಿಸಲು ಕಾರಣವಾದ ಅಭಿವೃದ್ಧಿ, ಎಲ್ಲರ ವಿಕಾಸ, ಮುಕ್ತ ಮಾರುಕಟ್ಟೆ ಎನ್ನುವ ಮತ್ತೊಂದು ಮುಖದ ಕತೆ ಏನು ?

ಇದಕ್ಕೆ ಪುರಾವೆಗಳು ಈ ಕೆಳಗಿನಂತಿವೆ:

ಕತೆ 1 : ಯೋಜನಾ ಆಯೋಗ
65 ವರ್ಷಗಳಷ್ಟು ಹಳೆಯದಾದ ಹಣಕಾಸು ಇಲಾಖೆ,ರಿಸರ್ವ ಬ್ಯಾಂಕ್ ಆಫ್ ಇಂಡಿಯಾಗಳ ಸಹಯೋಗತ್ವದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ, ಇತರೇ ಇಲಾಖೆಗಳ ಅಭಿವೃದ್ಧಿ ಮಾನದಂಡಗಳನ್ನು ನಿರ್ಧರಿಸುತ್ತಿದ್ದ ಅತ್ಯಂತ ಪ್ರಮುಖ ಸಂಸ್ಥೆಯಾದ ಯೋಜನಾ ಆಯೋಗವನ್ನು ಈ ಮೋದಿ ತಾನು ಅಧಿಕಾರ ವಹಿಸಿಕೊಂಡು ಕೇವಲ ಆರು ತಿಂಗಳೊಳಗೆ ಅದರ ಸ್ವರೂಪವನ್ನು ಬದಲಾಯಿಸಿ ಹೊಸದಾಹಿ “ನೀತಿ ಆಯೋಗ” ಎಂದು ಮರು ನೇಮಕ ಮಾಡಲು ಇದ್ದ ಪ್ರಚೋದನೆಗಳೇನು? ಹಿತಾಸಕ್ತಿಗಳೇನು?

ಈ ಹೊಸ ಆಯೋಗಕ್ಕೆ ಬಲಪಂಥೀಯ ಆರ್ಥಿಕ ತಜ್ಞ ಅರವಿಂದ ಪನಗರಿಯಾ ಅದರ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ. 19 ಜನವರಿ, 2015ರ ಔಟ್‌ಲುಕ್‌ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ ಈ ಪನಗರಿಯ ತಮ್ಮ ಗುರುಗಳಾದ ಮತ್ತೊಬ್ಬ ಆರ್ಥಿಕ ತಜ್ಞ ಜಗದೀಶ್ ಭಗವತಿಯವರೊಂದಿಗೆ ಜೊತೆಗೂಡಿ 2013ರಲ್ಲಿ ಎಕನಾಮಿಸ್ಟ್ ಪತ್ರಿಕೆಯಲ್ಲಿ ಗೋಧ್ರಾ ದುರಂತದ ನಂತರ ನಡೆದ ಗುಜರಾತ್ ಹತ್ಯಕಾಂಡವನ್ನು ಕೋಮು ಗಲಭೆಗಳೆಂದು ಮತ್ತು ಗಲಭೆಗಳಲ್ಲಿ ಕಾಲು ಭಾಗದಷ್ಟು ಹಿಂದೂಗಳೂ ಸಾವನ್ನಪ್ಪಿದ್ದಾರೆ ಎಂದು ಬರೆದಿದ್ದರು. ಈ ಪನಗರಿಯ ರಾಜಸ್ಥಾನದ ಹಣಕಾಸು ಸಮಿತಿಯ ಮುಖ್ಯಸ್ಥರಾಗಿದ್ದ ಸಂದರ್ಭದಲ್ಲಿ ಆ ರಾಜ್ಯದ ಸಾಮಾಜಿಕ-ಆರ್ಥಿಕ ಹಕ್ಕುಗಳ ಮಟ್ಟ ಸಂಪೂರ್ಣ ಕುಸಿದು ಹೋಗಿತ್ತು, ಪಡಿತರ ವ್ಯವಸ್ಥೆ ದುರ್ಬಲಗೊಂಡಿತ್ತು, ಉಚಿತ ವೈದ್ಯಕೀಯ ಸೌಲಭ್ಯಗಳನ್ನು ಕಡಿತಗೊಳಿಸಲಾಗಿತ್ತು, 17000 ಸರ್ಕಾರಿ ಶಾಲೆಗಳನ್ನು ಮುಚ್ಚಲಾಯಿತು, ಹಸಿವಿನಿಂದ ಆದಿವಾಸಿಗಳ ಸಾವಿನ ಪ್ರಮಾಣ ಹೆಚ್ಚಾಗಿತ್ತು ಎಂದು ಅಭಿವೃದ್ಧಿ ಆರ್ಥಿಕ ತಜ್ಞೆ ರೀತಿಕಾ ಖೇರ ಹೇಳುತ್ತಾರೆ. ಮಜ್ದೂರ್ ಕಿಸಾನ್ ಶಕ್ತಿ ಸಂಘಟನೆಯ ನಿಕಿಲ್ ಡೇ ಅವರು “ಈ ಪನಗೇರಿಯಾ ಅವರು ಉದ್ಯೋಗ ಖಾತ್ರಿ ಯೋಜನೆ ನರೇಗಾವನ್ನು ಗೇಲಿ ಮಾಡುತ್ತಿದ್ದರು, ಅದನ್ನು ನಿಲ್ಲಿಸಬೇಕೆಂದು ಶಿಫಾರಸ್ಸು ಮಾಡಿದ್ದರು” ಎಂದು ಹೇಳಿದ್ದಾರೆ.

ಬಹುತೇಕ ಆಕ್ಟಿವಿಸ್ಟ್‌ಗಳಿಗೆ, ಆರ್ಥಿಕ ತಜ್ಞರಿಗೆ ಈ ಪನಗರಿಯಾ ಅವರ ಹೊಣೆಗಾರಿಕೆ ಏನು ಎನ್ನುವುದು ಅರ್ಥವಾಗುತ್ತಿಲ್ಲ. ಒಂದು ವೇಳೆ ಯೋಜನಾ ಆಯೋಗದ ಉಪಾಧ್ಯಕ್ಷನ ಹೊಣೆಗಾರಿಕೆಗಳೇ ಆಗಿದ್ದಲ್ಲಿ ಇದು ಕೇವಲ ಹೆಸರು ಬದಲಾವಣೆ ಎನ್ನಬಹುದೇ? ಒಂದು ವೇಳೆ ಹಾಗಿದ್ದ ಪಕ್ಷದಲ್ಲಿ ಈ ನೀತಿ ಆಯೋಗದ ಕುರಿತು ಇಷ್ಟೊಂದು ಸಂಭ್ರಮಗಳೇಕೆ? ಒಂದು ವೇಳೆ ಈ ನೀತಿ ಆಯೋಗಕ್ಕೆ ಸಂವಿಧಾನಾತ್ಮಕ ಅಧಿಕಾರವನ್ನು ಕೊಡದೇ ಇದ್ದಲ್ಲಿ ಈ ಆಯೋಗವು ನಿವೃತ್ತ ಅಧಿಕಾರಿಗಳ, ಸೋತ ರಾಜಕಾರಣಿಗಳ ಗೂಡಾಗುತ್ತದೆ ಎಂದು ಆರ್ಥಿಕ ತಜ್ಞರು ಕಳವಳಪಡುತ್ತಾರೆ.

19 ಜನವರಿ, 2015ರ ಔಟ್‌ಲುಕ್ ಪತ್ರಿಕೆಯಲ್ಲಿ ಇದರ ಕುರಿತಾದ ಪ್ರಕಟವಾದ ವರದಿಯಲ್ಲಿ ನೀತಿ ಆಯೋಗದ ಕುರಿತಾಗಿ ಕೆಲವು ಪ್ರಶ್ನೆಗಳನ್ನು ಕೇಳಲಾಗಿದೆ.
1. ಪಂಚ ವಾರ್ಷಿಕ ಯೋಜನೆಯ ಭವಿಷ್ಯವೇನು? ರಾಜ್ಯಗಳು ತಮ್ಮ ಭವಿಷ್ಯದ ಯೋಜನೆಗಳನ್ನು ಚರ್ಚಿಸಲು ಸರ್ಕಾರಿ ಸಂಸ್ಥೆಗಳೇ ಇಲ್ಲದಂತಾಗುತ್ತದೆಯೇ?
2. ಕೇಂದ್ರವು ಬಿಡುಗಡೆ ಮಾಡುವ ಸ್ಕೀಮುಗಳಿಗೆ ಹಣಕಾಸಿನ ವಿತರಣೆಯ ಸ್ವರೂಪವನ್ನು ನಿರ್ಧರಿಸುವವರಾರು?
3. ಗಣರಾಜ್ಯ ವ್ಯವಸ್ಥೆಗೆ ತದ್ವಿರುದ್ಧವಾಗಿ,ಪ್ರಜಾಪ್ರಭುತ್ವದ ಆಶಯಗಳನ್ನೇ ನಿಶ್ಯಕ್ತಿಗೊಳಿಸುವಂತೆ ಪ್ರಧಾನ ಮಂತ್ರಿ ಕಾರ್ಯಾಲಯ ಮತ್ತು ಹಣಕಾಸು ಇಲಾಖೆಗಳು ಅಧಿಕಾರದ ಶಕ್ತಿಕೇಂದ್ರಗಳಾಗಿ ರೂಪಗೊಳ್ಳುತ್ತವೆಯೇ?
4. ಪಡಿತರ ವ್ಯವಸ್ಥೆ ಮತ್ತು ಜನಕಲ್ಯಾಣ ಯೋಜನೆಗಳನ್ನು ವಿರೋಧಿಸುತ್ತಿದ್ದ ಈ ಪನಗೆರಿಯ ಮತ್ತಿತರ ಬಲಪಂಥೀಯ ಆರ್ಥಿಕ ತಜ್ಞರನ್ನು ಒಳಗೊಂಡ ಈ ನೀತಿ ಆಯೋಗದ ಮುಂದೆ ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು, ಜನ ಕಲ್ಯಾಣ ಯೋಜನೆಗಳನ್ನು ಹೇಗೆ ನಿಭಾಯಿಸುತ್ತದೆ?

ಯೋಜನಾ ಆಯೋಗದ ಕುರಿತಾಗಿ ಹಲವು ಟೀಕೆಗಳಿರಬಹುದು ಆದರೆ ಪ್ರತಿ ರಾಜ್ಯಕ್ಕೂ ಅದರ ಅಭಿವೃದ್ಧಿ ಯೋಜನೆಗಳಿಗೆ ಅವಶ್ಯಕವಾದ ಸಂಪನ್ಮೂಲಗಳನ್ನು ಕುರಿತು ನಿರ್ಧರಿಸುತ್ತಿದ್ದ ಈ ಆಯೋಗ ಆ ನಿಟ್ಟಿನಲ್ಲಿ ಅತ್ಯಂತ ಜವಬ್ದಾರಿಯುತವಾಗಿ ಕಾರ್ಯ ನಿರ್ವಹಿಸಿದೆ.ದೇಶವನ್ನು ಕಟ್ಟುವ ನೆಹರೂ ಅವರ ಕನಸಿಗೆ ಹೆಗಲಾಗಿ ಕಾರ್ಯ ನಿರ್ವಹಿಸಿದೆ. ಆದರೆ ಹಠಾತ್ತಾಗಿ ಅದರ ಕಾರ್ಯ ಸ್ವರೂಪವನ್ನು, ಚಹರೆಯನ್ನು ಬದಲಾಯಿಸಿ ಖಾಸಗೀಕರಣದ ಪರವಾದ, ಕಾರ್ಪೋರೇಟ್ ಶೈಲಿಗೆ ಹತ್ತಿರವಾದ ನೀತಿ ಆಯೋಗವನ್ನು ರಚಿಸುವ ಕಾರಣಗಳೇನು?

ಚುನಾವಣೆಯಲ್ಲಿ ಈ ನರೇಂದ್ರ ಮೋದಿ ಮತ್ತು ಬಿಜೆಪಿಯ ಗೆಲುವಿಗೆ ಕಾರ್ಪೋರೇಟ್ ಗುಂಪಗಳ ಪಾತ್ರ ಗುರುತರವಾಗಿದೆ. ಇಡೀ ಚುನಾವಣ ವೆಚ್ಚವನ್ನು ಭರಿಸಿದ್ದು ಕೆಲವು ಕಾರ್ಪೋರೇಟ್ ಶಕ್ತಿಗಳು. ನರೇಂದ್ರ ಮೋದಿಯೂ ಸಹ ಸಂಪೂರ್ಣ ಖಾಸಗೀಕರಣದ ಪರವಾಗಿರುವಂತಹ, ಕಾರ್ಪೋರೇಟ್ ಗುಂಪುಗಳ ವಕ್ತಾರರಾದ ರಾಜಕಾರಣಿ. ಸಾರ್ವಜನಿಕ ವ್ಯವಸ್ಥೆ, ಸರ್ಕಾರ ಆಡಳಿತ, ವಿಕೇಂದ್ರೀಕರಣ, ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು, ವೈವಿಧ್ಯ ಸಂಸ್ಕೃತಿ ಎನ್ನುವ ಆದರ್ಶಗಳ ಗ್ರಹಿಕೆ ಈ ನರೇಂದ್ರ ಮೋದಿಯ ವ್ಯಕ್ತಿತ್ವದಲ್ಲಿಯೂ ಇಲ್ಲ ಅವರಿಗೆ ಇದು ಬೇಕಾಗಿಯೂ ಇಲ್ಲ. ಇದನ್ನು ಇಲ್ಲಿನ ಪ್ರಜ್ಞಾವಂತರು ಮೋದಿಯ ಗುಜರಾತ್ ಆಡಳಿತದ ಶೈಲಿಯನ್ನು ಅಧ್ಯಯನ ಮಾಡಿ ವಿವರಿಸಿದ್ದರು. ಆದರೆ ಮೋದಿ ಫೋಬಿಯಾ ತಲೆಗೇರಿಸಿಕೊಂಡ ಮಂದಿಗೆ ಹಾಗಿದ್ದಲ್ಲಿ ಸಂವಿಧಾನದ ಆಶಯಗಳಾದ ವಿಕೇಂದ್ರೀಕರಣ, ರಾಷ್ಟ್ರೀಕರಣ ಮತ್ತು ಸಾರ್ವಜನಿಕ ಸಂಸ್ಥೆಗಳ ಸಬಲೀಕರಣದ ಎಲ್ಲಾ ಪ್ರಕ್ರಿಯೆಗಳು ಕ್ರಮೇಣ ಕುಂಠಿತಗೊಳ್ಳುತ್ತ ಮುಂದೊಂದು ದಿನ ಸಂಪೂರ್ಣ ಸ್ಥಗಿತಗೊಳ್ಳುತ್ತವೆ.

ಕತೆ 2 : ಆರು ತಿಂಗಳಲ್ಲಿ ಸಂಸತ್ತನ್ನು ಕಡೆಗಣಿಸಿ ಸುಗ್ರೀವಾಜ್ಞೆಗಳನ್ನು ಬಳಸಿಕೊಂಡು 8 ಮಸೂದೆಗಳನ್ನು ಅಂಗೀಕಾರ

1954ರಲ್ಲಿ ಲೋಕಸಭಾದ ಮೊದಲನೇ ಸ್ಪೀಕರ್ ಜಿ.ವಿ.ಮಾವಲಂಕರ್ ಪ್ರಧಾನಿಯ ಆಗಿದ್ದ ನೆಹರೂ ಅವರಿಗೆ ವಿಶೇಷ ಸಂದರ್ಭಗಳಲ್ಲಿ ಮತ್ತು ಜಟಿಲ ಪರಿಸ್ಥಿತಿ ಉದ್ಭವವಾಗದಂತಹ ವಿರಳ ಸಂದರ್ಭಗಳಿಗೆ, ತುರ್ತುಪರಿಸ್ಥಿಗಳಲ್ಲಿ ಮಾತ್ರ ಸುಗ್ರೀವಾಜ್ಞೆಗಳನ್ನು ಬಳಸಿಕೊಂಡು ಕಾಯಿದೆಯ ಅನುಷ್ಠಾನವನ್ನು ಸೀಮಿತಗೊಳಿಸಬೇಕು. ಸಾಮಾನ್ಯ ಸಂದರ್ಭಗಳಲ್ಲಿಯೂ ವಿವೇಚನೆ ಇಲ್ಲದೆ ವಿಶೇಷ ಶಾಸನಗಳನ್ನು ಬಳಸತೊಡಗಿದರೆ ಲೋಕಸಭೆಯು ರಬ್ಬರ್ ಸ್ಟಾಂಪ್‌ನಂತೆ ಕಾರ್ಯ ನಿರ್ವಹಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದರು. ಆದರೆ ನೆಹರೂ ಅವರನ್ನು ಒಳಗೊಂಡಂತೆ ನಂತರದ ಪ್ರಧಾನ ಮಂತ್ರಿಗಳು ಮಾವಲಂಕರ್ ಅವರ ಕಿವಿಮಾತನ್ನು ನಿರ್ಲಕ್ಷಿಸಿ ಈ ಸುಗ್ರೀವಾಜ್ಞೆಗಳನ್ನು ಸಂಸತ್ತನ್ನು ಒಳಗೊಳ್ಳದಯೇ ಶಾಸನಗಳನ್ನು ಜಾರಿಗೊಳಿಸುವ ಒಂದು ಸಮಾನಾಂತರ ಪ್ರಕ್ರಿಯೆಯನ್ನಾಗಿಯೇ ಬಳಸಿಕೊಂಡರು

ಸಂಸತ್ತಿನ ಅನುಮೋದನೆ ಪಡೆದುಕೊಳ್ಳದೆ ಸುಗ್ರೀವಾಜ್ಞೆಗಳನ್ನು ಬಳಸಿ ಅನುಮೋದನೆ ಪಡೆದುಕೊಂಡ ಪ್ರಮುಖ ಮಸೂದೆಗಳು :

ಇನ್ಸೂರೆನ್ಸ್ ಕಾಯಿದೆಗಳ (ತಿದ್ದುಪಡಿ) ಶಾಸನ 2014, ಕಲ್ಲಿದ್ದಲು ಗಣಿಗಳ (ವಿಶೇಷ ಹಂಚಿಕೆಗಳು) ಎರಡನೇ ಶಾಸನ 2014, ಭೂ ಸ್ವಾಧೀನ ಕಾಯಿದೆ ಮತ್ತು ಪುನರ್ವಸತಿ ಹಾಗೂ ಪುನಹ ಒಪ್ಪಂದ ಆಕ್ಟ್ 2013, ಮೋಟಾರು ವಾಹನ ಶಾಸನ 2015, ಹಿರಿಯ ನಾಗರಿಕರ ಶಾಸನ 2015.

ಚಳಿಗಾಲದ ಅಧಿವೇಶನ ಒಂದು ತಿಂಗಳ ಕಾಲ ನಡೆದರೂ ಸರ್ಕಾರವು ಪ್ರಮುಖ ಮಸೂದೆಗಳನ್ನು ಸಂಸತ್ತಿನಲ್ಲಿ ಚರ್ಚೆಗೆ ಮಂಡಿಸದೆ ಇದ್ದದ್ದು ಯಾತಕ್ಕೆ? ಈ ಚಳಿಗಾಲದ ಅಧಿವೇಶನದಲ್ಲಿ 12 ಮಸೂದೆಗಳನ್ನು ಮಂಡಿಸಿ ಅನುಮೋದನೆ ಪಡೆದುಕೊಳ್ಳಲು ಸಾಧ್ಯವಾಗಬಹುದಾದರೆ ಭೂಸ್ವಾಧೀನ, ಕಲ್ಲಿದ್ದಲು ಗಣಿಗಳು, ಇನ್ಸೂರೆನ್ಸ್ ಕಾಯಿದೆಗಳನ್ನು ಸಹ ಪ್ರಮುಖ ಮಸೂದೆಗಳೆಂದು ಸರ್ಕಾರವು ಪರಿಗಣಿಸಲಿಲ್ಲವೇಕೆ? ಮಾವಲಂಕರ್ ಹೇಳಿದ ಹಾಗೆ ನರೇಂದ್ರ ಮೋದಿ ಸರ್ಕಾರ ಸಂಸತ್ತನ್ನು ಒಂದು ರಬ್ಬರ್ ಸ್ಟಾಂಪ್ ಆಗಿ ಬಳಸಿಕೊಳ್ಳುತ್ತಿದೆ.

ಕತೆ 3 : ಭೂ ಸ್ವಾಧೀನ ಕಾಯಿದೆ ಮತ್ತು ಪುನರ್ವಸತಿ ಹಾಗೂ ಪುನಹ ಒಪ್ಪಂದ ಆಕ್ಟ್ 2013, ಸಂಪೂರ್ಣ ಖಾಸಗೀಕರಣ, ಕಾರ್ಪೋರೇಟ್ ಶಕ್ತಿಗಳ ಮೇಲುಗೈ, ಸಂವಿಧಾನಕ್ಕೆ ಅಪಚಾರ

ತಿದ್ದುಪಡಿಗೆ ಮೊದಲು :
ಕೇವಲ ಸೆಕ್ಷನ್ 101 ಅನ್ನು ತಿದ್ದುಪಡಿ ಮಾಡಿ ಭೂಸ್ವಾಧೀನ ಪಡಿಸಿಕೊಂಡ ಜಮೀನನ್ನು 5 ವರ್ಷಗಳೊಳಗೆ ಉದ್ದೇಶಿತ ಕಾರ್ಯಕ್ಕಾಗಿ ಬಳಸದೇ ಇದ್ದರೆ ಆ ಜಮೀನನ್ನು ಮರಳಿ ಅದರ ಮಾಲೀಕರಿಗೆ ಹಿಂದುರಿಗಿಸಬೇಕು.
ತಿದ್ದುಪಡಿಯ ನಂತರ :
ಪ್ರಾಜೆಕ್ಟ್‌ಗಳನ್ನು ಸಿದ್ಧಪಡಿಸಲು ನಿಗದಿಪಡಿಸಿದ ಕಾಲಾವಧಿ ಅಥವಾ 5 ವರ್ಷಗಳ ಅವಧಿ ಇವೆರಡರಲ್ಲಿ ಯಾವುದು ದೀರ್ಘವಾಗಿರುವುದೋ ಅದನ್ನು ಪರಿಗಣಿಸಲಾಗುವುದು. ಅಂದರೆ ಪ್ರಾಜೆಕ್ಟ್ ಅನ್ನು ಪಡೆದುಕೊಂಡ ಸಂಸ್ಥೆಯು ತನ್ನ ಉದ್ದೇಶಿತ ಯೋಜನೆಯನ್ನು 5 ವರ್ಷಗಳ ನಂತರವೂ ಪ್ರಾರಂಬಿಸದೇ ಇದ್ದರೂ ತಾನು ಕರಾರು ಪತ್ರದಲ್ಲಿ ಹೇಳಿದ ಕಾಲಾವಧಿಯವರೆಗೂ ಆ ಜಮೀನನ್ನು ತನ್ನ ಬಳಿ ಇಟ್ಟುಕೊಳ್ಳಬಹುದು

ತಿದ್ದುಪಡಿಗೆ ಮೊದಲು :
ಸರ್ಕಾರಿ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ನಿರ್ವಹಿಸಲು ವಿಫಲರಾದಲ್ಲಿ ಮತ್ತು ಕಾಯಿದೆಯ ನೀತಿಯನ್ನು ಉಲ್ಲಂಘಿಸಿದಲ್ಲಿ ಅವರ ಮೇಲೆ ಶಿಸ್ತುಕ್ರಮ ಕೈಗೊಳ್ಳಬೇಕು ಮತ್ತು ಸಂಸ್ಥೆಯ ಮುಖ್ಯಸ್ಥರು ಹೊಣೆಗಾರರಾಗಿರುತ್ತಾರೆ.
ತಿದ್ದುಪಡಿಯ ನಂತರ :
ಸರ್ಕಾರಿ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ನಿರ್ವಹಿಸಲು ವಿಫಲರಾದಲ್ಲಿ ಮತ್ತು ಕಾನೂನುಗಳನ್ನು ಉಲ್ಲಂಘಿಸಿದಲ್ಲಿ ಸರ್ಕಾರದ ಅನುಮತಿಯನ್ನು ಪಡೆದ ನಂತರವಷ್ಟೇ ಅವರ ಮೇಲೆ ಶಿಸ್ತುಕ್ರಮ ಕೈಗೊಳ್ಳಬೇಕು. ಅಧಿನಿಯಮ 197 ಅಡಿಯಲ್ಲಿ ಅವರಿಗೆ ರಿಯಾಯಿತಿ ನೀಡಲಾಗಿದೆ. ಅವರು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಅವಕಾಶವನ್ನು ಕಲ್ಪಿಸಲಾಗಿದೆ. ಸಂಸ್ಥೆಯ ಮುಖ್ಯಸ್ಥರು ಸಹ ಈ ಹೊಣೆಗಾರಿಕೆಗೆ ಒಳಪಡುವುದಿಲ್ಲ. ಅವರೂ ಸಹ ತನಿಖೆಗೆ ಒಳಪಡುವುದಿಲ್ಲ

ತಿದ್ದುಪಡಿಗೆ ಮೊದಲು :
ಸರ್ಕಾರಿ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ನಿರ್ವಹಿಸಲು ವಿಫಲರಾದಲ್ಲಿ ಮತ್ತು ಕಾನೂನುಗಳನ್ನು ಉಲ್ಲಂಘಿಸಿದಲ್ಲಿ ನ್ಯಾಯಾಂಗವು ಅವರ ಮೇಲೆ ಶಿಸ್ತುಕ್ರಮ ಕೈಗೊಳ್ಳಲು ಅಧಿಕಾರವಿದೆ.
ತಿದ್ದುಪಡಿಯ ನಂತರ :
ಈ ಕೆಳಗೆ ಸೂಚಿಸಿದ ಪ್ರಾಜೆಕ್ಟ್‌ಗಳನ್ನು ಪ್ರಾರಂಭಿಸಲು, ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಅದರ ಮಾಲೀಕರ, ರೈತರ ಅನುಮತಿ ಪಡೆಯುವ ಅಗತ್ಯವಿಲ್ಲ. ಸಾಮಾಜಿಕ ಹಕ್ಕುಗಳು, ಸಾಮಾಜಿಕ ನ್ಯಾಯಗಳನ್ನು ಪರಿಗಣಿಸುವ ಅಗತ್ಯವಿಲ್ಲ. ಈ ಪ್ರಾಜೆಕ್ಟ್‌ಗಳನ್ನು ಸರ್ಕಾರ, ಖಾಸಗಿ ಸಂಸ್ಥೆಗಳು, ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಅಡಿಯಲ್ಲಿ ಜಾರಿಗೊಳಿಸಲು ಅನುಮತಿ ಕೊಡಲಾಗಿದೆ.

  • ಸಾರಿಗೆ
  • ರಸ್ತೆ ಮತ್ತು ಸೇತುವೆಗಳು
  • ಬಂದರುಗಳು
  • ಒಳನಾಡು waterways
  • ವಿಮಾನ ನಿಲ್ದಾಣಗಳು
  • ರೇಲ್ವೇ ಇಲಾಖೆಯ ಯೋಜನೆಗಳು
  • ನಗರ ಸಾರ್ವಜನಿಕ ಸಾರಿಗೆ ವ್ಯವಸ್ಥೆ
  • ಇಂಧನ
  • ವಿದ್ಯುತ್ ಉತ್ಪಾದನೆ, ಪ್ರಸರಣೆ, ವಿತರಣೆ
  • Oll Pipelines
    • ತೈಲ /ಅನಿಲ/ LPG ಸಂಗ್ರಹಣ ಸೌಲಭ್ಯಗಳು
    • ಅನಿಲ ಪೈಪ್ ಲೈನ್
  • ಜಲ ಮತ್ತು ಒಳಚರಂಡಿ
  • ಘನ ತ್ಯಾಜ್ಯ ನಿರ್ವಹಣೆ
    • ಜಲ ಸರಬರಾಜು pipelines
    • Water treatment plants
    • Sewage collection, treatment system
    • Irrigation (dams, channels, embankments)
    • Storm water drainage system
    • Water harvesting and conservation
  • ದೂರ ಸಂಪರ್ಕ ಇಲಾಖೆಯ ನೆಟ್‌ವರ್ಕ ಮತ್ತು ಟವರ್
  • ಸಾಮಾಜಿಕ ಮತ್ತು ವಾಣಿಜ್ಯ ಮೂಲಭೂತ ಸೌಕರ್ಯ
  • ಶಿಕ್ಷಣ ಸಂಸ್ಥೆಗಳು
  • ಆಸ್ಪತ್ರೆಗಳು, ವೈದ್ಯಕೀಯ ಕಾಲೇಜುಗಳು, ರೋಗ ಪರೀಕ್ಷಣ ಕೇಂದ್ರಗಳು, ಕೈಗಾರಿಕ ಪಾರ್ಕ, ಎಸ್‌ಇಜಢ್, ಪ್ರವಾಸೋದ್ಯಮ, ವ್ಯವಸಾಯ ಮಾರುಕಟ್ಟೆ
  • ರಸಗೊಬ್ಬರಗಳು
  • ಟರ್ಮಿನಲ್ ಮಾರುಕಟ್ಟೆಗಳು
  • ಮಣ್ಣು ಪರೀಕ್ಷಣ ಪ್ರಯೋಗಾಲಯಗಳು
  • ಶೈತ್ಯಾಗಾರಗಳು
  • ವ್ಯವಸಾಯ, ಡೈರಿ, ಮತ್ಸೋದ್ಯಮ, ಮಾಂಸದ ಪ್ರೊಸಸ್ ಗೆ ಮಾರುಕಟ್ಟೆ ಇನಫ್ರಾಸ್ಟ್ರಕ್ಚರ್
  • ಗಣಿಗಾರಿಕೆ ಚಟುವಟಿಕೆಗಳು, ಕೈಗಾರಿಕಾ ಕಾರಿಡಾರ್‌ಗಳು, ಕ್ರೀಡೆ, ಆರೋಗ್ಯ ವಲಯ, ಪ್ರವಾಸೋದ್ಯಮ, ಸಾರಿಗೆ, ಸ್ಪೇಸ್ ಯೋಜನೆಗಳು
  • ರಕ್ಷಣಾ ಇಲಾಖೆಗೆ ಸಂಬಂಧಪಟ್ಟ ಎಲ್ಲಾ ಯೋಜನೆಗಳು

ನಮ್ಮಲ್ಲಿನ ಭ್ರಷ್ಟ ವ್ಯವಸ್ಥೆ, ಭ್ರಷ್ಟ ರಾಜಕೀಯ, ರಾಜಕಾರಣಿ-ಅಧಿಕಾರಿ-ಉದ್ಯಮಿ ಎನ್ನುವ ಒಂದು ನೆಕ್ಸಸ್ ಇವೆಲ್ಲವೂ ಮೇಲ್ಕಾಣಿಸಿದ ಎಲ್ಲಾ ವಲಯಗಳಲ್ಲಿ, ವರ್ಗಗಳಲ್ಲಿ ಅರ್ಹತೆ ಪಡೆದುಕೊಳ್ಳುತ್ತಾರೆ. ಪ್ರತಿಯೊಂದನ್ನೂ ಸುರಕ್ಷತೆಗೆ ಸಂಬಂಧಪಟ್ಟಿದ್ದು, ದೇಶದ ಹಿತಾಸಕ್ತಿಗೆ ಸಂಬಂಧಪಟ್ಟಿದ್ದು ಎನ್ನುವ ಹಣೆಪಟ್ಟಿಯ ಅಡಿಯಲ್ಲಿ ಅರ್ಹತೆ ಪಡೆದುಕೊಳ್ಳುತ್ತಾರೆ. ಅಡಾನಿಗಳು, ಅಂಬಾನಿಗಳು, ವೇದಾಂತಗಳು, ಮುಂತಾದ ಬಂಡವಾಳಶಾಹಿಗಳ ಒಕ್ಕೂಟ ಇಡೀ ದೇಶದ ಬಹುಪಾಲು ಯೋಜನೆಗಳನ್ನು ಪಡೆದುಕೊಳ್ಳುವುದರಲ್ಲಿ ಸಂಶಯವೇ ಇಲ್ಲ. ಮುಂದಿನ ವರ್ಷಗಳಲ್ಲಿ ಕ್ರಮೇಣವಾಗಿ ಇಂಡಿಯಾ ದೇಶ ಬಂಡವಾಳಶಾಹಿಗಳ ದೇಶವಾಗುತ್ತದೆ. ಇದರಲ್ಲಿ ಉತ್ಪ್ರೇಕ್ಷೆ ಇಲ್ಲ. ಏಕೆಂದರೆ ಈ ಕರಾಳ ಭೂಸ್ವಾಧೀನ ತಿದ್ದುಪಡಿ ಕಾಯ್ದೆಗೆ ರಾಷ್ಟ್ರಪತಿಗಳ ಅಂಕಿತ ದೊರೆತಾಗಿದೆ.

ತೆ 4 : ಇನ್ಸೂರೆನ್ಸ್ ಕಾಯಿದೆಗಳ (ತಿದ್ದುಪಡಿ) ಶಾಸನ 2014, ಕಲ್ಲಿದ್ದಲು ಗಣಿಗಳ (ವಿಶೇಷ ಹಂಚಿಕೆಗಳು) ಎರಡನೇ ಶಾಸನ 2014
ಇನ್ಸೂರೆನ್ಸ್ ಕಂಪನಿಗಳಲ್ಲಿ ( ಸರ್ಕಾರಿ ಮತ್ತು ಖಾಸಗಿ) ವಿದೇಶಿ ಬಂಡವಾಳ ಹೂಡಿಕೆಯ ಪ್ರಮಾಣವನ್ನು ಶೇಕಡಾ 26 % ರಿಂದ ಶೇಕಡಾ 49 % ಏರಿಸಲಾಗಿದೆ.

ಈ ಹಿಂದೆ ಯುಪಿಎ ಸರ್ಕಾರವಿದ್ದಾಗ ಚಿಲ್ಲರೆ ವಲಯದಲ್ಲಿ ವಿದೇಶಿ ಬಂಡವಾಳ ಹೂಡಿಕೆಯನ್ನು ವಿರೋಧಿಸಿ ತೀವ್ರವಾಗಿ ಪ್ರತಿಭಟಿಸಿದ್ದ ಬಿಜೆಪಿ ಪಕ್ಷ ಆಗ ಸಂಸತ್ತಿನಲ್ಲಿ ಪದೇ ಪದೇ ಗದ್ದಲವನ್ನೆಬ್ಬಿಸುತ್ತಾ ಕಾರ್ಯ ಕಲಾಪಗಳಿಗೆ ಭಂಗವನ್ನು ಉಂಟು ಮಾಡಿತ್ತು. ಆರೆಸ್ಸಸ್ ಸದಾ ಸ್ವದೇಶಿ ಮಂತ್ರವನ್ನು ಜಪಿಸುತ್ತಾ ವಿದೇಶಿ ಬಂಡವಾಳ ಹೂಡಿಕೆಯನ್ನು ದೇಶವನ್ನು ಹಾಳು ಮಾಡುತ್ತದೆ ಹಿಂದೂ ರಾಷ್ಟ್ರದ ಪಾವಿತ್ರತೆ ನಾಶವಾಗುತ್ತದೆ ಎಂದು ಪ್ರಚೋದಿಸುತ್ತಾ ವಿದೇಶಿ ಬಂಡವಾಳ ಹೂಡಿಕೆಯನ್ನು ವೀರೋಧಿಸಿತ್ತು. ಇಂದು ಇದೇ ಸಂಘ ಪರಿವಾರ ಇನ್ಸೂರೆನ್ಸ್ ವಲಯದಲ್ಲಿ ಶೇಕಡ 49% ರಷ್ಟು ವಿದೇಶ ಬಂಡವಾಶ ಹೂಡಿಕೆಗೆ ಅನುಮೋದನೆ ನೀಡಿದೆ.

ಕತೆ 5 : ಕಾರ್ಮಿಕ ಕಾನೂನು ಮತ್ತು ರಿಲೇಷನ ಸುಧಾರಣೆಗಳು ಮತ್ತು ತಿದ್ದುಪಡಿಗಳು : ಕೇಂದ್ರದ ಕ್ಯಾಬಿನೆಟ್ ಅನುಮೋದಿಸಿದ ಶಿಫಾರಸುಗಳು

ಕೈಗಾರಿಕಾ ವ್ಯಾಜ್ಯ ಅಕ್ಟ್ 1947 :

ವರ್ತಮಾನದ ಕಾಯಿದೆ :
ಗರಿಷ್ಠ 100 ನೌಕರರನ್ನು ಹೊಂದಿದಂತಹ ಕಾರ್ಖಾನೆ/ಉದ್ಯಮದ ಮಾಲೀಕರು ಯಾವುದೇ ಮುನ್ಸೂಚನೆ ಇಲ್ಲದೆಯೇ ತನ್ನ ಉತ್ಪಾದನೆಯನ್ನು ಅಥವಾ ಸಂಪೂರ್ಣ ಕಾರ್ಖಾನೆ/ಉದ್ಯಮವನ್ನು ಮುಚ್ಚಬಹುದು

ಸುಧಾರಣೆ / ಬದಲಾವಣೆಯ ಶಿಫಾರಸು:
ಗರಿಷ್ಠ 3000 ನೌಕರರನ್ನು ಹೊಂದಿದಂತಹ ಕಾರ್ಖಾನೆ/ಉದ್ಯಮದ ಮಾಲೀಕರು ಯಾವುದೇ ಮುನ್ಸೂಚನೆ ಇಲ್ಲದೆಯೇ ತನ್ನ ಉತ್ಪಾದನೆಯನ್ನು ಅಥವಾ ಸಂಪೂರ್ಣ ಕಾರ್ಖಾನೆ/ಉದ್ಯಮವನ್ನು ಮುಚ್ಚಬಹುದು

ಕಾರ್ಖಾನೆ ಅಕ್ಟ್ 1948 :
ವರ್ತಮಾನದ ಕಾಯಿದೆ :
ವಿದ್ಯುತ್ ಬಳಕೆ ಇಲ್ಲದ ಗರಿಷ್ಠ 20 ನೌಕರರನ್ನು ಹೊಂದಿದಂತಹ ಕಾರ್ಖಾನೆ/ಉದ್ಯಮದ ಮಾಲೀಕರು ಮತ್ತು ವಿದ್ಯುತ್ ಬಳಸುತ್ತಿರುವ ಗರಿಷ್ಠ 10 ನೌಕರರನ್ನು ಹೊಂದಿದಂತಹ ಕಾರ್ಖಾನೆ/ಉದ್ಯಮಗಳಿಗೆ ಮಾತ್ರ ಫಾಕ್ಟರೀಸ್ ಆಕ್ಟ್ 1948 ಅನ್ವಯವಾಗುತ್ತದೆ

ಸುಧಾರಣೆ / ಬದಲಾವಣೆಯ ಶಿಫಾರಸು:
ವಿದ್ಯುತ್ ಬಳಕೆ ಇಲ್ಲದ ಗರಿಷ್ಠ 40 ನೌಕರರನ್ನು ಹೊಂದಿದಂತಹ ಕಾರ್ಖಾನೆ/ಉದ್ಯಮಗಳು ಮತ್ತು ವಿದ್ಯುತ್ ಬಳಸುತ್ತಿರುವ ಗರಿಷ್ಠ 20 ನೌಕರರನ್ನು ಹೊಂದಿದಂತಹ ಕಾರ್ಖಾನೆ/ಉದ್ಯಮಗಳಿಗೆ ಮಾತ್ರ ಫಾಕ್ಟರೀಸ್ ಆಕ್ಟ್ 1948 ಅನ್ವಯವಾಗುತ್ತದೆ

(ಇದರ ಅನುಸಾರ 40/20 ಕ್ಕಿಂತ ಕಡಿಮೆ ನೌಕರರನ್ನು ಹೊಂದಿದ್ದ ಕಾರ್ಖಾನೆ/ಉದ್ಯಮಗಳಿಗೆ ಕಾರ್ಖಾನೆ ಅಕ್ಟ್ 1948 ಅನ್ವಯವಾಗುವುದಿಲ್ಲ. ಹೀಗಾಗಿ ಮಾಲೀಕರು ಯಾವುದೇ ಮೂಲ ಭೂತ ಸೌಕರ್ಯ, ಕನಿಷ್ಠ ಸೌಲಭ್ಯಗಳು, ವೇತನಗಳು, ಸೌಹಾರ್ದಯುತ ವಾತಾವರಣಗಳನ್ನು ಕಲ್ಪಿಸಬೇಕಾಗಿಲ್ಲ. ನೌಕರರನ್ನು ಜೀತದಾಳುಗಳಂತೆ ಬಳಸಿಕೊಳ್ಳಬಹುದು )

ಕಾಂಟ್ರಾಕ್ಟ್ ಕಾರ್ಮಿಕರ ಅಕ್ಟ್ 1970 :
ವರ್ತಮಾನದ ಕಾಯಿದೆ :
20 ಕ್ಕಿಂತಲೂ ಮೇಲ್ಪಟ್ಟ ನೌಕರರನ್ನು ಹೊಂದಿದಂತಹ ಕಾರ್ಖಾನೆ/ಉದ್ಯಮಗಳಿಗೆ ಕಾಂಟ್ರಾಕ್ಟ್ ಕಾರ್ಮಿಕರ ಅಕ್ಟ್ 1970 ಅನ್ವಯವಾಗುತ್ತದೆ

ಸುಧಾರಣೆ / ಬದಲಾವಣೆಯ ಶಿಫಾರಸು:
50 ಕ್ಕಿಂತಲೂ ಮೇಲ್ಪಟ್ಟ ನೌಕರರನ್ನು ಹೊಂದಿದಂತಹ ಕಾರ್ಖಾನೆ/ಉದ್ಯಮಗಳಿಗೆ ಕಾಂಟ್ರಾಕ್ಟ್ ಕಾರ್ಮಿಕರ ಅಕ್ಟ್ 1970 ಅನ್ವಯವಾಗುತ್ತದೆ.

(ಈ ಕಾಯಿದೆಯ ಅನ್ವಯ 50ಕ್ಕಿಂತಲೂ ಕಡಿಮೆ ನೌಕರರನ್ನು ಹೊಂದಿದ ಕಾರ್ಖಾನೆ/ಉದ್ಯಮಗಳ ಮಾಲೀಕರು ಕಾಂಟ್ರಾಕ್ಟ್ ಕಾರ್ಮಿಕರಿಗೆ ವೇತನವನ್ನು ತಮ್ಮ ಹಿತಾಸಕ್ತಿಗೆ ಅನುಸಾರ ನಿರ್ಧರಿಸಬಹುದು. ಕನಿಷ್ಠ ವೇತನದ ನೀತಿ ಅನ್ವವಾಗುವುದಿಲ್ಲ. ಕೆಲಸದ ಅವಧಿಯನ್ನು ಮಾಲೀಕನೇ ನಿರ್ಧರಿಸುತ್ತಾನೆ. ಹೆಚ್ಚುವರಿಯಾದ ಮಾಡಿದ ಕೆಲಸಕ್ಕೆ ವೇತನವನ್ನು ನಿರ್ಧರಿಸುವುದು ಮಾಲೀಕನೇ. ವೈದ್ಯಕೀಯ ಸೌಲಭ್ಯಗಳು, ಸುರಕ್ಷಿತ ಸೌಲಭ್ಯಗಳನ್ನು ನಿರಾಕರಿಸಲು ಮಾಲೀಕನಿಗೆ ಸ್ವಾತಂತ್ರವಿದೆ. ಒಟ್ಟಿನಲ್ಲಿ ನೌಕರರನ್ನು ಜೀತದಾಳುಗಳಂತೆ ದುಡಿಸಿಕೊಳ್ಳಲು ಮಾಲೀಕರಿಗೆ ಸ್ವಾತಂತ್ರ ದೊರೆತಂತಾಗುತ್ತದೆ.)

ಟ್ರೇಡ್ ಯೂನಿಯನ್ ಆಕ್ಟ್ 1926:
ವರ್ತಮಾನದ ಕಾಯಿದೆ :
ಕಾರ್ಖಾನೆಯೊಂದರ ಎಲ್ಲಾ ನೌಕರರ ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ 15% ನೌಕರರು ಸದಸ್ಯರಾಗಿದ್ದರೆ ಮಾತ್ರ ಅಲ್ಲಿ ಯೂನಿಯನ್ ಪ್ರಾರಂಬಿಸಲು ಅನುಮತಿ ದೊರಕುತ್ತದೆ.

ಸುಧಾರಣೆ / ಬದಲಾವಣೆಯ ಶಿಫಾರಸು:
ಕಾರ್ಖಾನೆಯೊಂದರ ಎಲ್ಲಾ ನೌಕರರ ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ 30% ನೌಕರರು ಸದಸ್ಯರಾಗಿದ್ದರೆ ಮಾತ್ರ ಅಲ್ಲಿ ಯೂನಿಯನ್ ಪ್ರಾರಂಭಿಸಲು ಅನುಮತಿ ದೊರಕುತ್ತದೆ.

ಕಾರ್ಮಿಕರ ಬದುಕಿನ ಸುಧಾರಣೆಯೆಂದರೆ ನರೇಂದ್ರ ಮೋದಿ ಚಿಂತನೆಯ ಅನುಸಾರ ಅವರ ಬದುಕನ್ನು modi_ambani_tata_kamathಮತ್ತಷ್ಟು ದಯನೀಯವಾಗಿಸುವುದು. ಈಗ ದೊರಕುತ್ತಿರುವ ಅಲ್ಪಸ್ವಲ್ಪ ಸೌಲಭ್ಯಗಳನ್ನು ಕಡಿತಗೊಳಿಸಿ ಮರಳಿ ಪಾಳೇಗಾರಿಕೆ ಸಂಸ್ಕೃತಿಯನ್ನು ಜಾರಿಗೊಳಿಸುವುದು. ಕಾರ್ಮಿಕರನ್ನು ಜೀತಗಾರರನ್ನಾಗಿಸುವುದು. ಇದು ನಿಜಕ್ಕೂ ಉತ್ಪ್ರೇಕ್ಷೆಯಲ್ಲ. ಮೇಲಿನ ಹೊಸ ಆಕ್ಟ್‌ಗಳೇ ಮಾತನಾಡುತ್ತವೆ. ಕಾರ್ಮಿಕ ಸುಧಾರಣೆ ಶಿಫಾರಸ್ಸುಗಳನ್ನು ಬಿಜೆಪಿ ಸರ್ಕಾರ ಆಡಳಿತದಲ್ಲಿರುವ ರಾಜಸ್ತಾನದಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಕ್ಕೆ ತರಲು ತೀರ್ಮಾನಿಸಲಾಗಿದೆ. ಏಕೆಂದರೆ ಅಲ್ಲಿ ಬಿಜೆಪಿ ಆಡಳಿತವಿದೆ. ಏಕೆಂದರೆ ಅಲ್ಲಿ ಫ್ಯೂಡಲ್ ಸಮಾಜದ ಪ್ರಭಾವ ದಟ್ಟವಾಗಿದೆ. ಏಕೆಂದರೆ ಅಲ್ಲಿ ಪ್ರಬಲ ಜಾತಿಗಳ ಕೈಗೆ ಅಧಿಕಾರವನ್ನು ಹಸ್ತಾಂತರಿಸಲು ಈ ಆಕ್ಟ್‌ಗಳನ್ನು ಬಳಸಿಕೊಳ್ಳಬಹುದು.

ಹಾಗಿದ್ದಲ್ಲಿ ಸಾಮಾಜಿಕ ನ್ಯಾಯ, ವಿಕೇಂದ್ರೀಕರಣ, ಸಂವಿಧಾನ, ಪ್ರಜಾತಂತ್ರ ವ್ಯವಸ್ಥೆ ಎಲ್ಲವನ್ನೂ ಸಂಪೂರ್ಣವಾಗಿ, ನಿಶ್ಯಕ್ತಗೊಳಿಸಲಾಗುತ್ತಿದೆ. ಸಂಘ ಪರಿವಾರಕ್ಕೆ ಬೇಕಾಗಿರುವುದೂ ಇದೇ ಮಾದರಿಯ ಯಜಮಾನ್ಯ- ಬ್ರಾಹ್ಮಣ್ಯ ವ್ಯವಸ್ಥೆಯ, ತಾರತಮ್ಯ, ಪ್ರತ್ಯೇಕತೆಯ ಹಿಂದುತ್ವದ ಇಂಡಿಯಾ. ನರೇಂದ್ರ ಮೋದಿಯ ಉದ್ದೇಶವು ಇದೇ ಮಾದರಿಯ ಇಂಡಿಯಾ.

ಹಾಗಿದ್ದಲ್ಲಿ ಸಂಪೂರ್ಣ ಅಭಿವೃದ್ಧಿ ಮತ್ತು ಎಲ್ಲರ ವಿಕಾಸ ಎನ್ನುವ ತತ್ವದ ಹಿಂದಿನ ಕುತಂತ್ರವೇನು? ಅದರ ಮುಂದಿನ ಹಣೆಬರಹವೇನು? ಏಕೆಂದರೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಾ ಹೋಗುವುದಂತೂ ಖಾತರಿಯಾಗಿದೆ. ಅಭಿವೃದ್ಧಿಯ ಮಾದರಿಯೆಂದೇ ಬಿಂಬಿಸಲ್ಪಟ್ಟ ನರೇಂದ್ರ ಮೋದಿಯ ನೇತೃತ್ವದಲ್ಲಿ ದೇಶದ ಭವಿಷ್ಯ ನಿಜಕ್ಕೂ ಸುರಕ್ಷಿತವೇ? ಆವರನ್ನು ಬಹುಮತದಿಂದ ಗೆಲ್ಲಿಸಿದ ಅವರ ಅಭಿಮಾನಿಗಳೇ ಉತ್ತರಿಸಬೇಕು.

(ಮುಂದುವರೆಯುತ್ತದೆ…)

pk : ನಾವು ನೋಡುವುದೆಲ್ಲ ಕೇವಲ ದೃಷ್ಟಿಕೋನಗಳನ್ನು ಮಾತ್ರ, ಸತ್ಯವನ್ನಲ್ಲ


– ಬಿ. ಶ್ರೀಪಾದ ಭಟ್


ಇತ್ತೀಚೆಗೆ ಬಿಡುಗಡೆಗೊಂಡ ಅಮೀರ್ ಖಾನ್ ನಟಿಸಿದ ‘ಪಿಕೆ’ ಎನ್ನುವ ಹಿಂದಿ ಸಿನಿಮಾ ನೋಡಿದಾಗ ಕೆಲವರು ಹೇಳಿದ ಹಾಗೆ ಅದು ಒಂದು ರೀತಿ ದೂರದರ್ಶನದಲ್ಲಿ ಅಮೀರ್ ಖಾನ್ ನಿರ್ಮಿಸಿ, ಪ್ರಸ್ತುತಪಡಿಸಿದ ’ಸತ್ಯಮೇವ ಜಯತೆ’ ಧಾರವಾಹಿಯ ಮುಂದುವರೆದ ಭಾಗದಂತೆಯೇ ಇದೆ. ಸತ್ಯಮೇವ ಜಯತೆ ಸರಣಿಯಲ್ಲಿ ತುಂಬಾ ಕುತೂಹಲದಿಂದ, ಕಣ್ಣರಳಿಸಿ ನೊಂದವರ ಮಾತುಗಳನ್ನು ಕೇಳುತ್ತ ಸ್ವತಃ ತಾನು ನೋವನ್ನು ಅನುಭವಿಸುವ ಅಮೀರ್ ಖಾನ್ ಅಲ್ಲಿ ವಾಸ್ತವ ಮತ್ತು ಭ್ರಮೆಗಳ ನಡುವೆ ಜಿಗಿದಾಡುತ್ತ ಸಮಯ ಸಿಕ್ಕಾಗಲೆಲ್ಲ ಭರಪೂರು ಉಪದೇಶಗಳನ್ನು ನೀಡುತ್ತಿರುತ್ತಾನೆ. ಅದೇ ಮಾದರಿಯಲ್ಲಿ ‘ಪಿಕೆ’ ಸಿನಿಮಾದಲ್ಲಿಯೂ ಸಹ ಉಪದೇಶಗಳ ಒಂದು ಪ್ರವಾಹವೇ ಹರಿದಿದೆ. ‘ಪಿಕೆ’ ಸಿನಿಮಾದಲ್ಲಿಯೂ ವ್ಯಕ್ತಿತ್ವ ಮತ್ತು ವ್ಯಕ್ತಿ ಎಂದು ಎರಡನ್ನು pk_aamir-khanವಿಭಜಿಸುತ್ತಾ, ಕೂಡಿಸುತ್ತಾ ಜಿಗಿದಾಡುವ ಅಮೀರ್ ಖಾನ್ ಪ್ರತಿ ದೃಶ್ಯಗಳಲ್ಲಿಯೂ ರಾಜಕಪೂರ್‌ನಂತೆ ಭ್ರಮೆಗಳ ಬಣ್ಣಗಳನ್ನು ತೇಲಿ ಬಿಡುತ್ತಲೇ ಇರುತ್ತಾನೆ. ಆ ಬಣ್ಣಗಳಿಗೆ ನಿರ್ದಿಷ್ಟ ಚೌಕಟ್ಟುಗಳನ್ನು ನಿರ್ಮಿಸಲು, ವೈಚಾರಿಕತೆಯ ಲೇಪನವನ್ನು ನೀಡಲು ನಿರ್ದೇಶಕ ರಾಜಕುಮಾರ್ ಹಿರಾನಿ ನಾಯಕಿ ಅನುಷ್ಕ ಶರ್ಮಳನ್ನು ಯಶಸ್ವಿಯಾಗಿ ಬಳಸಿಕೊಂಡಿದ್ದಾನೆ. ಪ್ರೇಕ್ಷಕರೂ ಆ ಬಣ್ಣಗಳನ್ನು, ವೈಚಾರಿಕತೆಯ ಲೇಪನವನ್ನೂ ಆನಂದಿಸಿದ್ದಾರೆ.

’ಸತ್ಯಮೇವ ಜಯತೆ’ಯನ್ನು ನಿರ್ಮಿಸುವಾಗ ಅದು ತನ್ನ ಆಕ್ಟಿವಿಸಂನ ಭಾಗವೆಂದೇ ಅಮೀರ್ ಖಾನ್ ಕರೆದುಕೊಂಡಿದ್ದ. ಜನ ಅದನ್ನು ಅನುಮೋದಿಸಿದರು. ಅದು ತುಂಬಾ ಜನಪ್ರಿಯವೂ ಆಯಿತು. ಅಲ್ಲಿ ಅಮೀರ್ ಖಾನ್ ಭಾವುಕತೆಯಿಂದ ಪ್ರಸ್ತುತಪಡಿಸಿದ ಶತಮಾನಗಳಿಂದ ಚಾಲ್ತಿಯಲ್ಲಿದ್ದ ವ್ಯವಸ್ಥೆಯ ಕ್ರೌರ್ಯಕ್ಕೆ ಇಂಡಿಯಾದ ಮಧ್ಯಮವರ್ಗ ಸಹ ಅದು ಇದುವರೆಗೂ ತಮಗೆ ಗೊತ್ತೇ ಇರಲಿಲ್ಲವೆನ್ನುವಂತೆ, ಇದೇ ಮೊದಲ ಬಾರಿಗೆ ಅಮೀರ್ ಖಾನ್‌ನ ಮೂಲಕ ತಮಗೆ ದರ್ಶನವಾಗಿದೆಯೇನೋ ಎನ್ನುವಷ್ಟು ಬಾವುಕತೆಯಿಂದ ಸಮನಾಗಿ ಕಣ್ಣೀರಿಟ್ಟರು. ಸದ್ಯದ ಸಂದರ್ಭದಲ್ಲಿ ತನ್ನನ್ನು ಇಂಡಿಯಾದ Method Actor ಎಂದೇ ಬಿಂಬಿಸಿಕೊಳ್ಳುತ್ತಿರುವ ಅಮೀರ್ ವಾಸ್ತವದಲ್ಲೂ ಅದಕ್ಕೆ ಹತ್ತಿರವಿರುವಂತಹ pk-posterಪಾತ್ರಗಳನ್ನೂ ಆಯ್ದುಕೊಳ್ಳುತ್ತಿದ್ದಾನೆ. ಆದರೆ ಆ Method Actor ಆಯ್ಕೆಯನ್ನು ನಿಭಾಯಿಸಿಲಾಗದಂತೆ ತಡೆಯೊಡ್ಡುವ ಅನೇಕ ಜನಪ್ರಿಯವಾದ ಮಿತಿಗಳಲ್ಲಿ ಸಹ ಅಮೀರ್ ಬಂಧಿಯಾಗಿದ್ದಾನೆ. ಆದರೆ ಮತ್ತೊಂದೆಡೆ ಕಮಲ್ ಹಾಸನ್ ‘ಅನ್ಬೆ ಶಿವಂ, ವಿರುಮಾಂಡಿ’ ತರಹದ ಸಿನಿಮಾಗಳ ಮೂಲಕ ಇಲ್ಲಿನ ಕಮರ್ಷಿಯಲ್ ಮಿತಿಗಳನ್ನೂ ಮೀರುತ್ತ Method Actor ನ ಮಾದರಿಗೆ ಇಂಡಿಯಾದ ಮಟ್ಟದಲ್ಲಿ ಹೊಸ ರೂಪವನ್ನು ತಂದುಕೊಟ್ಟಿದ್ದಾನೆ. ಪಂಕಜ್ ಕಪೂರ್, ನಾಸಿರುದ್ದೀನ್ ಶಾ, ಇರ್ಫಾನ್ ಖಾನ್, ನವಾಜುದ್ದೀನ್ ಸಿದ್ದಕಿ ಯಂತಹ ನಟರು ಇಂದು Method Actor ನ ಅತ್ಯುತ್ತಮವಾದ, ಪ್ರತಿಭಾವಂತ ಉದಾಹರಣೆಯಾಗಿದ್ದಾರೆ. ಇವರಿಗೆ ಸಾಧ್ಯವಾಗಿದ್ದು ಅಮೀರ್ ಖಾನ್‌ಗೆ ಸಾಧ್ಯವಾಗುತ್ತಿಲ್ಲ.

ನಿರ್ದೇಶಕ ರಾಜಕುಮಾರ್ ಹಿರಾನಿ ಪ್ರಸ್ತುತ ಸಂದರ್ಭದಲ್ಲಿ ತಾನು ಇಂಡಿಯಾದ ಯಶಸ್ವೀ Show Man ಎಂದು ಈ ‘ಪಿಕೆ’ ಸಿನಿಮಾದ ಮೂಲಕ ಮತ್ತೊಮ್ಮೆ ಸಾಬೀತುಪಡಿಸಿದ್ದಾನೆ. ಒಬ್ಬ ಯಶಸ್ವಿ Show Manಗೆ ಅತ್ಯವಶ್ಯಕವಾದ ಕತೆ ಹೇಳುವ ನೈಪುಣ್ಯತೆಯನ್ನು ಸಮರ್ಥವಾಗಿ ಮೈಗೂಡಿಸಿಕೊಂಡಿರುವ ಹಿರಾನಿ ಅದನ್ನು ಪ್ರೇಕ್ಷಕರು ತಲೆದೂಗುವಂತೆ ಫ್ರೇಮಿನಿಂದ ಫ್ರೇಮಿಗೆ ಕಟ್ಟುತ್ತಾ ಹೋಗುತ್ತಾನೆ. ಈತನ ಕಾಗಕ್ಕ, ಗುಬ್ಬಕ್ಕ ಕತೆಗಳನ್ನು ಸಿನಿಮಾದ ರೀಲುಗಳಲ್ಲಿ ಅಡಗಿಸಿಟ್ಟು ಅದಕ್ಕೆ ಬಣ್ಣಗಳನ್ನು ತುಂಬುತ್ತಾ ಪರದೆಯ ಮೇಲೆ ಹೊರ ಬಿಡುವಾಗ ಪ್ರೇಕ್ಷಕನೂ ಸಹ ಆ ಬಣ್ಣಗಳಲ್ಲಿ ಕಳೆದು ಹೋಗುವಂತಹ ಚಿತ್ರಕತೆಯನ್ನು ಹೆಣೆಯುವ ಹಿರಾನಿ, ಪ್ರತಿ ಸಿನಿಮಾದಲ್ಲೂ ಅದಕ್ಕೆ ವೈಚಾರಿಕತೆಯ, ನೈತಿಕತೆಯ, ಆದರ್ಶದ ಸ್ಲೋಗನ್‌ಗಳ ಹೊದಿಕೆಯನ್ನು ಸುತ್ತುತ್ತಾನೆ. ಹಿರಾನಿಯ ಈ ನೈತಿಕತೆಯ ಪಾಠಗಳು ಚಿಂತನೆಗೆ ಹಚ್ಚುತ್ತವೋ ಇಲ್ಲವೋ ಗೊತ್ತಿಲ್ಲ, ಆದರೆ ಪ್ರೇಕ್ಷಕನನ್ನು ಮತ್ತಷ್ಟು ಉಲ್ಲಾಸಗೊಳಿಸುತ್ತವೆ. ಆತನಿಗೆ ಸಿನಿಮಾ ಭಾಷೆಯ ಮೇಲಿರುವ ಹಿಡಿತ ನಿಜಕ್ಕೂ ಬೆರಗುಗೊಳಿಸುತ್ತದೆ. ಆದರೆ ‘ಈ ನರಕ ಯಾತನೆಗೆ ಕೊನೆ ಎಂದು?’ ಎನ್ನುವ ಪ್ರಶ್ನೆಗಳನ್ನು ಹಿರಾನಿಯ ಪಾತ್ರಗಳೂ ಕೇಳುವುದಿಲ್ಲ. ಪ್ರೇಕ್ಷಕರೂ ಬಯಸುವುದಿಲ್ಲ. ಏಕೆಂದರೆ ಇಲ್ಲಿನ ಎಲ್ಲಾ ಭ್ರಷ್ಟತೆ, ಕ್ರೌರ್ಯಗಳ ನಿರೂಪಣೆಯು ಪ್ರೇಕ್ಷಕನಲ್ಲಿ ತಲ್ಲಣಗೊಳಿಸುವುದರ ಬದಲು, ನೋವನ್ನು ಉಂಟು ಮಾಡುವುದರ ಬದಲು ಅರೆ ಅದನ್ನೆಲ್ಲ ಎಷ್ಟು ಚೆಂದ ತೋರಿಸಿದ್ದಾನೆ ಈ ಹಿರಾನಿ ಎಂದು ಪ್ರೇಕ್ಷಕ ತಲೆದೂಗುವಂತೆ ಮಾಡುವದರಲ್ಲಿಯೇ rajkumar-hiraniಹಿರಾನಿಯ ನೈಪುಣ್ಯತೆ ಕರಗಿ ಹೋಗುವುದರಿಂದ ಮತ್ತು ಈ ಎಲ್ಲಾ ಪ್ರಶ್ನೆಗಳನ್ನೇ ಅನೇಕ ಬಾರಿ ಅಸಂಬದ್ಧ, ನೀವು ಸಿನಿಮಾ ನೋಡಲು ಬಂದಿದ್ದೀರಿ ಅದನ್ನು ಮಾಡಿ ಎಂದೇ ತಾಕೀತು ಮಾಡುವಂತಿರುತ್ತದೆ.

ಆದರೆ ಹಿರಾನಿ ತನ್ನ ಮೊದಲ ಸಿನಿಮಾ ‘ಮುನ್ನಾ ಭಾಯಿ ಎಂಬಿಬಿಎಸ್’ ಅನ್ನು ನಿದೇಶಿಸಿದಾಗ ಅಲ್ಲಿ ಕತೆಯ ಮೂಲಕ ಸಂದೇಶವನ್ನು ಕೊಡುವುದರಲ್ಲಿ ಯಶಸ್ವಿಯಾಗಿದ್ದ. ಆ ಸಿನಿಮಾದಲ್ಲಿ ಮಗುವಿನ ಮುಗ್ಧತೆ, ಅಂಬೆಗಾಲಿನ ಪ್ರಾಮಾಣಿಕ ನಡಿಗೆ ಪ್ರತಿ ಪ್ರೇಮಿನಲ್ಲಿ ನಮ್ಮನ್ನು ತಟ್ಟುತ್ತಿತ್ತು. ಇದಕ್ಕೆ ಮೂಲಭೂತ ಕಾರಣವೇನೆಂದರೆ ಅಲ್ಲಿ ಕತೆ ಹೇಳುತ್ತಲೇ ನ್ಶೆತಿಕತೆ, ಆದರ್ಶದ ಸಂದೇಶಗಳು ಪ್ರೇಕ್ಷಕನಿಗೆ ರವಾನೆ ಆಗುತ್ತಿದ್ದವು. ಈ ಸಂದೇಶಗಳು ತೀರಾ ಸರಳೀಕೃತ ರೂಪದಲ್ಲಿದ್ದರೂ ಸಹ ಅದರ ಪ್ರಮಾಣಿಕತೆಯಿಂದಾಗಿಯೇ ನಮ್ಮನ್ನೆಲ್ಲಾ ಗೆದ್ದುಬಿಟ್ಟಿತ್ತು. ಆದರೆ ನಂತರ ’ಲಗೇ ರಹೋ ಮುನ್ನಾಭಾಯ”, ಮತ್ತು ’ತ್ರೀ ಈಡಿಯಟ್ಸ್’ ನ ಅಭೂತಪೂರ್ವ ಯಶಸ್ಸಿನ ನಂತರ ಹಿರಾನಿಯ ಆ ಮುಗ್ಧತೆ ಮತ್ತು ಪ್ರೇಕ್ಷಕನ್ನು ತಟ್ಟುವ ಗುಣಗಳು ಈ ಪಿಕೆ ಸಿನಿಮಾದಲ್ಲಿ ಕಣ್ಮರೆಯಾಗಿ ಬೋಧನೆಯ ಸ್ವರೂಪ ಪಡೆದುಕೊಂಡಿವೆ ಮತ್ತು ಅದನ್ನು ಬೋಧಿಸುತ್ತಿರುವವರು ಪ್ರತಿ ನಾಯಕರಾದ, ನಮ್ಮ ನಡುವಿನ, ಪಕ್ಕದ ಮನೆಯ ಹುಡುಗರಾದ ಮುನ್ನಾಭಾಯಿ, ಸರ್ಕಿಟ್‌ಗಳಲ್ಲ, ಬದಲಾಗಿ ರ್‍ಯಾಂಚೋ, ಪಿಕೆ ಗಳಂತಹ ತಂತ್ರಜ್ಞಾನ ಪ್ರವೀಣರು, ಛಾಂಪಿಯನ್ನರು, ಯಾವುದೇ ಐಬಿಲ್ಲದ, ಕಲ್ಮಶಗಳಿಲ್ಲದ ಪರಿಪೂರ್ಣ ನಾಯಕರು. ಚಿತ್ರದಿಂದ ಚಿತ್ರಕ್ಕೆ ಬಲಗೊಳ್ಳುತ್ತ ಸಾಗಿದ ನಿರ್ದೆಶಕ ಹಿರಾನಿ ಆತ್ಮ ವಿಶ್ವಾಸವನ್ನು ಗಳಸಿಕೊಳ್ಳುತ್ತಾ, ಹೊಸ ನಿರ್ದೇಶನದ ಪಿಕೆ ಸಿನಿಮಾದಲ್ಲಿ ಸಂದೇಶಗಳೇ ಇಡೀ ಸಿನಿಮಾವನ್ನು ವ್ಯಾಪಿಸಿಕೊಂಡು ಪ್ರೇಕ್ಷಕ ’ಕತೆ ಎಲ್ಲಿದೆ?’ ಎಂದು ಪ್ರಶ್ನಿಸಿದಾಗ ನಿರ್ದೇಶಕ ಹಿರಾನಿ ’ನೀನೆ ನನ್ನ ಆ ಸಂದೇಶಗಳಲ್ಲಿ ಕತೆಯನ್ನು ಹುಡುಕಿಕೋ’ ಎಂದು ಉತ್ತರಿಸುತ್ತಾನೆ. ಆದರೆ ಅಲ್ಲಿ ಕತೆಯ ಹೊಳಹೂ ಸಹ ಸಿಗುವುದಿಲ್ಲ. ಮುನ್ನಾಭಾಯಿಯ ’ಒಮ್ಮೆ ನನ್ನನ್ನು ಅಪ್ಪಿಕೋ’ ಎನ್ನುವ ಮುಗ್ಧ ಸಂದೇಶ ತಂದುಕೊಟ್ಟ ಹುಮ್ಮಸ್ಸು, ಉತ್ಸಾಹ ಈ ಪಿಕೆಯ ’ರಾಂಗ್ ನಂಬರ್’ ಸಂದೇಶಕ್ಕೆ ಬಂದು ತಲುಪುವಷ್ಟರಲ್ಲಿ ಕಣ್ಮರೆಯಾಗುತ್ತವೆ.

ಹೀಗಾಗಿ ಪಿಕೆ ಸಿನಿಮಾದಲ್ಲಿ ಆದರ್ಶಗಳ ಸಂದೇಶಗಳಿವೆ, ಧಾರ್ಮಿಕ ಮೌಢ್ಯ, ಮೂಲಭೂತವಾದದ ವಿರುದ್ಧ ಪ್ರತಿಭಟನೆ ಇದೆ. pk-aamir-khan-anushka-sharmaಆಶಯಗಳ ಮಟ್ಟಿಗೆ ಈ ಸಿನಿಮಾ ನಿಜಕ್ಕೂ ಅತ್ಯುತ್ತಮ ಸಿನಿಮಾ. ಆದರೆ ಆ ಆಶಯಗಳು ಅದನ್ನು ಪ್ರೇಕ್ಷಕರಿಗೆ ರವಾನಿಸುವ ಸಂದರ್ಭದಲ್ಲಿ ಹೊಸ ಒಳನೋಟಗಳೊಂದಿಗೆ, ಮತ್ತಷ್ಟು ಆಳವಾದ ಪ್ರಶ್ನೆಗಳೊಂದಿಗೆ ಮೂಡಿ ಬರಲು ನಿರಾಕರಿಸುತ್ತವೆ. ಪಾತ್ರಗಳ ನಡುವೆ ಅತ್ಯಗತ್ಯವಾದ ಪರಸ್ಪರ ಪೂರಕವಾದ ಕೆಮಿಸ್ಟ್ರಿ ಕಣ್ಮರೆಯಾಗಿದೆ. ಹೀಗಾಗಿ ಪ್ರತಿಯೊಂದು ಪಾತ್ರವೂ ಕ್ಯಾಮಾರಾ ಕಡೆಗೆ ಮುಖ ಮಾಡಿ ನಿರ್ದೇಶಕ ಹಿರಾನಿಯ ಸಂದೇಶಗಳನ್ನು ಪ್ರೇಕ್ಷಕನಿಗೆ ಗಿಣಿಪಾಠದಂತೆ ಒಪ್ಪಿಸುತ್ತಿರುತ್ತವೆ ಅಷ್ಟೆ. ಯಾವುದೇ ಪಾತ್ರಗಳಲ್ಲಿಯೂ ಸಂಕೀರ್ಣತೆ ಕಂಡು ಬರುವುದಿಲ್ಲ. ಜಾನೇ ಭೀ ದೋ ಯಾರೋ ದಂತಹ ಅತ್ಯುತ್ತಮ ಹಾಸ್ಯ ಸಿನಿಮಾದ ಪಾತ್ರಗಳ ಸಂಕೀರ್ಣತೆಯು ಪ್ರೇಕ್ಷಕನಿಗೂ ಆಳವಾಗಿ ಮುಟ್ಟುತ್ತದೆ ಮತ್ತು ತಾನು ಹೇಳಬೇಕಾದದ್ದನ್ನು ಕೊಂಚವೂ ಅಳುಕಿಲ್ಲದೆ ನಿರೂಪಿಸುತ್ತಾ ಹೋಗುತ್ತದೆ. ಅದು ನಿಜದ ಯಶಸ್ಸು. ಕನಿಷ್ಠ ‘ಓಹ್ ಮೈ ಗಾಡ್’ ಸಿನಿಮಾದ ತಾಜಾತನವೂ ಇಲ್ಲಿ ಕಾಣಿಸುತ್ತಿಲ್ಲ. ಅಂದರೆ ನಿರ್ದೇಶಕ ಹಿರಾನಿ ತಾನು ಸ್ವತಃ ಅರಗಿಸಿಕೊಳ್ಳುವುದಕ್ಕೂ ಆಗದಷ್ಟು ಆಹಾರವನ್ನು ಅಗಿಯುತ್ತಿದ್ದಾನೆ. ಅಂದರೆ Art for the sale of art ನ ತತ್ವದಂತೆಯೇ ಪಿಕೆಯಲ್ಲಿ Messages for the sake of messages ತರಹ ತತ್ವಗಳು ರವಾನೆಯಾಗುತ್ತಿವೆ. ಈ ಸಿನಿಮಾದ ಕ್ಲೈಮಾಕ್ಸ್ ದೃಶ್ಯದಲ್ಲಿ ಡೋಂಗಿ ಬಾಬಾ ‘ತಪಸ್ವಿ’ ಮತ್ತು ‘ಪಿಕೆ’ ನಡುವಿನ ಚರ್ಚೆ ಮತ್ತು ಸಂವಾದದ ಆಶಯಗಳು ತುಂಬಾ ಮಾನವೀಯವಾಗಿದೆ. ಧರ್ಮ ನಿರಪೇಕ್ಷತೆಯನ್ನು ಪ್ರತಿಪಾದಿಸುವ ಆ ಆಶಯಗಳು ಇಂದಿನ ಧಾರ್ಮಿಕ ಫೆನಟಿಸಂಗೆ ತಕ್ಕ ಉತ್ತರವಾಗಿದೆ. munna-bhai-mbbsಇದನ್ನು ಮತ್ತೊಂದು ಸ್ತರಕ್ಕೆ ಕೊಂಡೊಯ್ಯಬೇಕಿದ್ದ ನಿರ್ದೇಶಕ ಹಿರಾನಿ ಆ ಇಡೀ ದೃಶ್ಯವನ್ನು ಹೈಸ್ಕೂಲ್‌ನ ಡಿಬೇಟ್ ಮಟ್ಟಕ್ಕೆ ಇಳಿಸಿದ್ದಾನೆ. ಕಡೆಗೆ ಅದು ವೀರ-ಜಾರ ಸಿನಿಮಾದ ಮಾದರಿಯಲ್ಲಿ ಅನುಷ್ಕ ಶರ್ಮ ಮತ್ತು ಅವಳ ಪಾಕಿಸ್ತಾನ ಪ್ರೇಮಿಯನ್ನು ಒಂದುಗೂಡಿಸುಲ್ಲಿಗೆ ಪರ್ಯಾವಸಾನಗೊಳ್ಳುತ್ತದೆ.

ಆದರೆ ಒಂದು ಸದುದ್ದೇಶದ, ಸೂಕ್ಷ್ಮತೆಯ, ಮೌಢ್ಯವನ್ನು ನೇರವಾಗಿ ಟೀಕಿಸುವ, ಜನಪರ ಆಶಯಗಳನ್ನುಳ್ಳ ಪಿಕೆ ಸಿನಿಮಾವನ್ನು ನೋಡಲು ಈ ಎಲ್ಲಾ ಪ್ರಶ್ನೆಗಳು ಬೇಕೆ ಸ್ವಾಮಿ ಎಂದು ಕೇಳಿದರೆ ಉತ್ತರವೂ ಇಲ್ಲ. ಏಕೆಂದರೆ ಆ ಪ್ರಶ್ನೆ ತುಂಬಾ ವಾಸ್ತವ. ಆದರೆ ಪಿಕೆ ನೋಡಿದ ನಂತರ ಮತ್ತೊಮ್ಮೆ ಗರಂ ಹವಾ, ರಾಮ್ ಕೆ ನಾಮ್, ತಣ್ಣೀರ್ ತಣ್ಣೀರ್, ಸದ್ಗತಿಯಂತಹ ಸಿನಿಮಾಗಳನ್ನು ಐದನೇ ಬಾರಿ, ಹತ್ತನೇ ಬಾರಿ ನೋಡಲು ಮನಸ್ಸು ತಹತಹಿಸುತ್ತದೆ. ಇದು ಸಹ ಅಷ್ಟೇ ಸತ್ಯ. ಆದರೆ ಸಿನಿಮಾ ಬಿಡುಗಡೆಯಾದ ಮೂರೇ ವಾರಗಳಲ್ಲಿ 300 ಕೋಟಿಗೂ ಮೇಲ್ಪಟ್ಟು ಗಳಿಸಿರುವುದೇ ಇದನ್ನೂ ಪ್ರೇಕ್ಷಕ ಸ್ವೀಕರಿಸಿದ್ದಾನೆ ಎನ್ನುವುದಕ್ಕೆ ಸಾಕ್ಷಿ. ಅಷ್ಟೇಕೆ ನಿರ್ಮಾಪಕರು ಈ ಸಿನಿಮಾವನ್ನು ಮತೀಯವಾದಿ ನಾಯಕ ಎಲ್.ಕೆ. ಅದ್ವಾನಿ, ಭ್ರಷ್ಟ, ಮತೀಯವಾದಿ, ಡೋಂಗಿ ಬಾಬಾ ಶ್ರೀ ಶ್ರೀ ರವಿಶಂಕರ್‌ಗೆ ಅರ್ಪಿಸಿದ್ದಾನೆ, ಇದಕ್ಕೇನು ಮಾಡುವುದು ಎಂದಾಗ ಇಂತಹ ಕ್ಷುಲ್ಲಕ ಸಂಗತಿಗಳನ್ನು ಎತ್ತಬೇಡಿ, ಸಿನಿಮಾದ ಸಂದೇಶಗಳನ್ನು ಗಮನಿಸಿ ಎಂದು ಹೇಳಿದರೆ ????

ಹೀಗಾಗಿಯೇ ಇಂದು ಹಿಂದಿ ಸಿನಿಮಾರಂಗದಲ್ಲಿ ಒಂದು ತುದಿಯಲ್ಲಿ ಸಲ್ಮಾನ ಖಾನ್, ಅಜಯ್ ದೇವಗನ್, ಅಕ್ಷಯ್ ಕುಮಾರ್‌ರಂತಹ ನಟರು ಮತ್ತು ಬಹುಪಾಲು ಹಿಂದಿ ನಿರ್ದೇಶಕರು ಅತ್ಯಂತ ಕಳಪೆ, ಮೂರನೆ ದರ್ಜೆಯ ಸಿನಿಮಾಗಳನ್ನು ನೀಡುತ್ತಿರುವುದರ ಫಲವಾಗಿ ಮತ್ತೊಂದು ತುದಿಯಲ್ಲಿ ಈ ಹಿರಾನಿ ಮತ್ತು PK_poster_burning_Jammuಅಮೀರ್ ಖಾನ್ ಜೋಡಿ ನಿರ್ಮಿಸುತ್ತಿರುವ ಸಿನಿಮಾಗಳು ನಿಜಕ್ಕೂ something better ಎನ್ನುಂತೆ ರೂಪಿತಗೊಂಡಿರುವುದೂ ನಿಜ. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಆರೆಸ್ಸಸ್ ಸರ್ಕಾರ ಕಳೆದ ಆರು ತಿಂಗಳಿಂದ ಸಮಾಜದಲ್ಲಿ ಹಿಂದೂಯಿಸಂನ ಫೆನಟಿಸಂ ಅನ್ನು ನಿರಂತರವಾಗಿ ಹುಟ್ಟು ಹಾಕುತ್ತಿದೆ, ಮೂಲಭೂತವಾದ ಮತ್ತು ಕೋಮುವಾದದ ಸ್ವರೂಪಗಳು ಹೆಡೆ ಎತ್ತುತ್ತಿವೆ. ಮತ್ತು ಈ ‘ಪಿಕೆ’ ಸಿನಿಮಾದ ವಿರುದ್ಧ ಮತೀಯವಾದಿ ಹಿಂದೂ ಸಂಘಟನೆಗಳು ಪ್ರತಿಭಟಿಸಿ ಹಿಂಸಾತ್ಮಕವಾಗಿ ವರ್ತಿಸುತ್ತಿವೆ. ಈ ಕಾರಣಗಳಿಂದಾಗಿಯೇ ಹಿರಾನಿ-ಅಮೀರ್ ಖಾನ್ ಜೋಡಿಯ ‘ಪಿಕೆ’ ಸಿನಿಮಾಗೆ ಒಂದು ಬಗೆಯ ಸೆಕ್ಯುಲರ್ ಅಯಾಮವೇ ದೊರಕಿಬಿಟ್ಟಿದೆ. ಇಂದು ಮೂಢ ನಂಬಿಕೆಗಳ ವಿರುದ್ಧದ ಹೋರಾಟಕ್ಕೆ ಶ್ರೇಷ್ಠವಾದ ಸಂಕೇತ ಈ ಪಿಕೆ ಸಿನಿಮಾ ಎನ್ನುವುದೇ ನಿಜವಾದಲ್ಲಿ, ಪ್ರಜ್ಞಾವಂತರು, ಪ್ರಗತಿಪರರು, ಜಾತ್ಯಾತೀತರು ತಮ್ಮ ಹೊಣೆಯನ್ನು ನಿಭಾಯಿಸಲು ಸೋತು ಅ ಹೊಣೆಗಾರಿಕೆಯನ್ನು ಈ ‘ಪಿಕೆ’ ಎನ್ನುವ ಅಮಾಯಕ, ಮುಗ್ಧ, ಸರಳ ಸಿನಿಮಾದ ಹೆಗಲಿಗೆ ವರ್ಗಾಯಿಸಿದ್ದೇವೆ ಅಷ್ಟೆ. ಮತ್ತೇನಿಲ್ಲ.

ಭೂಪಾಲ್ ದುರಂತಗಳು, ಸಾವಿರಾರು ಹೆಣಗಳು – Make in India


– ಬಿ. ಶ್ರೀಪಾದ ಭಟ್


ಮೀಥೈಲ್ ಐಸೋ ಸೈನೇಟ್ (MIC) ಎನ್ನುವ ಪದ ಕಿವಿಗೆ ಬಿದ್ದರೆ ಭೂಪಾಲ್‌ನ ನಾಗರಿಕರು ಇಂದಿಗೂ ಬೆಚ್ಚಿ ಬೀಳುತ್ತಾರೆ. ಅದು 1984ರ ಡಿಸೆಂಬರ್ ತಿಂಗಳ ಚಳಿಗಾಲದ ರಾತ್ರಿ. ಆ ರಾತ್ರಿಯ ಚಳಿಗಾಳಿಯ ತೀವ್ರತೆ, ಅದರಿಂದುಂಟಾದ ನಡುಕ ಮುಂದಿನ ಕೆಲವೇ ಗಂಟೆಗಳಲ್ಲಿ ಸುಮಾರು 25000 ಜನರ ಭಯಾನಕ ಸಾಮೂಹಿಕ ಕಗ್ಗೊಲೆಗೆ ಮುನ್ನುಡಿಯಂತಿತ್ತೇನೋ. ಡಿಸೆಂಬರ್ 2-3, 1984 ರ ರಾತ್ರಿ 12.30ಕ್ಕೆ ಭೂಪಾಲ್‌ನಲ್ಲಿರುವ ಯೂನಿಯನ್ ಕಾರ್ಬೈಡ್ (UCC) ಎನ್ನುವ ವಿದೇಶಿ ಕಂಪನಿಯ ಕಾರ್ಖಾನೆಯಿಂದ ಈ MIC ಎನ್ನುವ ರಾಸಾಯನಿಕ ವಿಷಾನಿಲ ಸೋರಿಕೆಗೊಂಡು ಸುಮಾರು 9 ಕಿ.ಮೀ.ನಷ್ಟು ದೂರ ಪಸರಿಸತೊಡಗಿತು.ಈ ಕಾರ್ಖಾನೆಯ ಸುತ್ತ ಸ್ಲಂ ಕಾಲೋನಿಗಳಿದ್ದವು. ಮರುದಿನ ಬೆಳಗಿನ ಹೊತ್ತಿಗೆ ಇಡೀ ಭೂಪಾಲ್ ನಗರ ಸಾವಿನ ನೃತ್ಯಕ್ಕೆ ಸಾಕ್ಷಿಯಾಯಿತು. ಈ ಸಾವಿನ ನೃತ್ಯ ನೇರವಾಗಿ ಪ್ರವೇಶಿಸಿದ್ದು Bhopal-Gas-Tragedy-TIMEಕಾರ್ಖಾನೆಯ ಸುತ್ತಲಿದ್ದ ಸ್ಲಂ ಕಾಲೋನಿಗಳನ್ನು. ಕೆಲವೇ ಗಂಟೆಗಳಲ್ಲಿ ಈ MIC ವಿಷಾನಿಲ ಮಕ್ಕಳು, ಮಹಿಳೆಯರನ್ನೊಳಗೊಂಡಂತೆ ಸಾವಿರಾರು ಜನರನ್ನು ಬಲಿತೆಗೆದುಕೊಂಡಿತು. ಇಡೀ ಕಾಲೋನಿ ಕೆಮ್ಮು, ಆಕ್ರಂದನ, ವಾಂತಿಯಿಂದ ನಲುಗಿಹೋಯ್ತು. ಭೂಪಾಲ್‌ನ ಆಸ್ಪತ್ರೆಗಳಲ್ಲಿ ಈ MIC ರಾಸಾಯನಿಕ ವಿಷಾನಿಲದಿಂದುಟಾದ ಭೀಕರತೆಯನ್ನು ಗುಣಪಡಿಸುವ ಮದ್ದಿನ ವಿವರಗಳು ಗೊತ್ತಿರಲಿಲ್ಲ. ಯೂನಿಯನ್ ಕಾರ್ಬೈಡ್ ಕಾರ್ಖಾನೆಯಿಂದಲೂ ಯಾವುದೇ ವೈಜ್ಞಾನಿಕ ವಿವರಗಳು ದೊರಕಲಿಲ್ಲ. ಇದರ ಪರಿಣಾಮವೇನಾಯ್ತೆಂದರೆ ಈ ದುರ್ಘಟನೆ ನಡೆದು ಎರಡು ದಿನಗಳವರೆಗೂ ಅಲ್ಲಿನ ಆಸ್ಪತ್ರೆಗಳಲ್ಲಿ ಸೂಕ್ತ ಔಷದೋಪಚಾರಗಳ ಕೊರತೆಯಿಂದಾಗಿಯೇ ಸಾವಿರಾರು ಜನ ಸಾವಿಗೀಡಾಗುತ್ತಲೇ ಇದ್ದರು. ಇನ್ನೊಂದು ಅಘಾತಕಾರಿ ಸಂಗತಿಯೆಂದರೆ ಈ MIC ವಿಷಾನಿಲದ ಜೊತೆಗೆ ಹೈಡ್ರೋಜನ್ ಸೈನೈಡ್, ನೈಟ್ರೋಜನ್ ಆಕ್ಸೈಡ್‌ಗಳಂತಹ ರಾಸಾಯನಿಕ ವಿಷಾನಿಲಗಳೂ ಸೇರಿಕೊಂಡಿದ್ದವೆಂದು ಅನೇಕ ದಿನಗಳ ನಂತರ ಗೊತ್ತಾಗಿದ್ದು. ಇದರ ಪರಿಣಾಮವಾಗಿ ಈ ದುರ್ಘಟನೆ ನಡೆದು ಒಂದು ವಾರದ ನಂತರವೂ ಸಾವಿನ ವಾಸನೆ ಭೂಪಾಲ್ ನಗರವನ್ನು ನುಂಗುತ್ತಲೇ ಇತ್ತು. ಇನ್ನೂ ಹಸಿಹಸಿಯಾಗಿ ಹೆಣಗಳು ಬೀಳುತ್ತಲೇ ಇದ್ದವು.

ಸರ್ಕಾರದ ಅಧಿಕೃತ ಮಾಹಿತಿಯ ಪ್ರಕಾರ ಸುಮಾರು 5000 ಜನರು ಸಾವಿಗೀಡಾಗಿದ್ದರೆ ವಾಸ್ತವದಲ್ಲಿ 25000 ಕ್ಕೂ ಮೇಲ್ಪಟ್ಟು ಜನ ಸತ್ತಿದ್ದಾರೆಂದು ಅಲ್ಲಿನ ಸ್ಥಳೀಯರು ಹೇಳುತ್ತಿದ್ದರು. ಪತ್ರಿಕಾ ವರದಿಯು ಸಹ ಇದೇ ಅಂಕಿಯನ್ನು ಕೊಟ್ಟಿದೆ. ಆ ದಿನದಂದು ಈ ಘಟನೆಗೆ ಸಾಕ್ಷಿಯಾಗಿದ್ದ ವ್ಯಕ್ತಿಯೊಬ್ಬ 30 ವರ್ಷಗಳ ನಂತರ ಮೊನ್ನೆ ಹೇಳುತ್ತಿದ್ದ: “ಅಂದು ರಾತ್ರಿಯಾಗಿತ್ತು. Bhopal-Gas-Tragedy-1ಇಡೀ ಸ್ಲಂನ ಜನರು ದಿಕ್ಕಾಪಾಲಾಗಿ ಕಿರುಚುತ್ತ ಓಡತೊಡಗಿದರು.ಆದರೆ ಎಂತಹ ದುರಂತವೆಂದರೆ ಅವರು ಭಯದಲ್ಲಿ ತಮಗರಿವಿಲ್ಲದೇ ಆ ಕತ್ತಲಿನಲ್ಲಿ ಈ MIC ವಿಷಾನಿಲ ತೇಲಿ ಬರುತ್ತಿದ್ದ ದಿಕ್ಕಿನೆಡೆಗೆ ಧಾವಿಸುತ್ತಿದ್ದರು. ತಾವಾಗಿಯೇ ಆ ಸಾವಿಗೆ ಆಹುತಿಯಾಗಿ ಹೋದ್ರು. ಸುಮಾರು 500000 ಜನ ಕಣ್ಣು, ಧ್ವನಿ, ಕೈಕಾಲುಗಳನ್ನು ಕಳೆದುಕೊಂಡರು.”

ಕಾರ್ಖಾನೆಯೊಳಗಡೆ ಸುರಕ್ಷತೆಯ ವೈಫಲ್ಯವೇ ಇಡೀ ದುರ್ಘಟನೆಗೆ ಮೂಲಭೂತ ಕಾರಣ. ಈ ಬಗೆಯ ವಿಷಾನಿಲವನ್ನು ಉತ್ಪಾದಿಸುವ ಯೂನಿಯನ್ ಕಾರ್ಬೈಡ್ ಎನ್ನುವ ವಿದೇಶಿ ರಾಸಾಯನಿಕ ಕಾರ್ಖಾನೆಯನ್ನು 1969 ರಲ್ಲಿ ಪರಿಸರ ಮತ್ತು ಸುರಕ್ಷತೆಗೆ ಸಂಬಂಧಪಟ್ಟಂತಹ ಎಲ್ಲ ನಿಯಮಾವಳಿಗಳನ್ನು ಉಲ್ಲಂಘಿಸಿ ನಗರ ಪ್ರದೇಶದ ವ್ಯಾಪ್ತಿಗೆ ಬರುವಂತಹ ಪ್ರದೇಶದಲ್ಲಿಯೇ ಸ್ಥಾಪನೆಗೆ ಅನುಮತಿ ನೀಡಲಾಯಿತು. (ವ್ಯಂಗವೆಂದರೆ ಈ ಕಾರ್ಖಾನೆಯ ಬಳಿಯಲ್ಲಿಯೇ ಡಿ.ಐ.ಜಿ. ಬಂಗಲೆಯಿದೆ)

ಆರಂಭದಲ್ಲಿ Pesticide Sevin ಎನ್ನುವ ರಸಗೊಬ್ಬರಕ್ಕೆ ಸಂಬಂಧಿತ ರಾಸಾಯನಿಕವನ್ನು ತಯಾರಿಸುತ್ತೇವೆಂದು ಪ್ರಾರಂಭವಾದ ಈ ಯೂನಿಯನ್ ಕಾರ್ಬೈಡ್ ಕಂಪನಿ 1979ರಲ್ಲಿ ಇದಕ್ಕೆ ಪೂರಕವಾಗಿ ಈ MIC ವಿಷಾನಿಲ ತಯಾರಿಕೆಯ ಎರಡು ಘಟಕಗಳನ್ನು ಪ್ರಾರಂಭಿಸಿತು. ಇದಕ್ಕೆ ಅನುಮತಿ ಕೊಟ್ಟವರಾರು ಎಂದು ಇಂದಿಗೂ ನಿಗೂಢವಾಗಿ ಉಳಿದಿದೆ ಎಂದು ಸ್ಥಳೀಯರು ಹೇಳುತ್ತಾರೆ. ಸ್ಥಾಪಿತಗೊಂಡ ಕೇವಲ ಮೂರು ವರ್ಷಗಳ ನಂತರ 1982ರಲ್ಲಿ ಯೂನಿಯನ್ ಕಾರ್ಬೈಡ್ ಕಾರ್ಖಾನೆಯಲ್ಲಿ ಸುಮಾರು ಅವಘಡಗಳು ಜರುಗಿದವು. ಕಾರ್ಖಾನೆಯ ಕಾರ್ಮಿಕನೊಬ್ಬ ಈ MIC ವಿಷಾನಿಲದ ಫಲವಾಗಿ ಸ್ಥಳದಲ್ಲೇ ಮೃತ ಪಟ್ಟರೆ ಎಲೆಕ್ಟ್ರಿಕ್ ಇಂಜಿನಿಯರ್ ಇದೇ ಸುರಕ್ಷತೆಯ ವಿಫಲತೆಯ ಪರಿಣಾಮವಾಗಿ ಕಣ್ಣುಗಳನ್ನು ಕಳೆದುಕೊಂಡ. 1982 ರ ಜನವರಿಯಿಂದ 1982 ರ ಫೆಬ್ರವರಿಯ ಒಂದು ತಿಂಗಳ ಅವಧಿಯಲ್ಲಿ ಅನಿಲ ಸೋರಿಕೆಯ ಪರಿಣಾಮವಾಗಿ ಸುಮಾರು 36 ನೌಕರರು ಅಸ್ವಸ್ಥರಾಗಿ ಅಸ್ಪತ್ರೆಗೆ ಸೇರಿಕೊಳ್ಳಬೇಕಾಯಿತು. ಅಲ್ಲಿನ ನೌಕರರರಿಗೆ ಸುರಕ್ಷತೆಯ ಮುಖವಾಡವನ್ನು ಸಹ ಕೊಟ್ಟಿರಲಿಲ್ಲ ಎನ್ನುವುದು ಆಗಲೇ ಗೊತ್ತಾಗಿದ್ದು. 1983-1984ರ ಅವಧಿಯಲ್ಲಿ ಸುಮಾರಿ ಬಾರಿ ಅನಿಲ ಸೋರಿಕೆ ಘಟನೆಗಳು ಜರುಗಿದವು. ಇಡೀ ಕಾರ್ಖಾನೆಯೇ ಸುರಕ್ಷತೆಯ ಸಂಪೂರ್ಣ ವೈಫಲ್ಯದಿಂದಾಗಿ ಸಿಡಿಮುದ್ದಿನ ಮೇಲೆ ಮಲಗಿದಂತಿತ್ತು ಎಂದು ಸ್ಥಳೀಯರು ಇಂದಿಗೂ ನಡಗುವ ಧ್ವನಿಯಲ್ಲಿ ಹೇಳುತ್ತಾರೆ.

ನವೆಂಬರ್ 1984ರ ವೇಳೆಗೆ ಇಡೀ ಯೂನಿಯನ್ ಕಾರ್ಬೈಡ್ ಕಾರ್ಖಾನೆಯ ಎಲ್ಲಾ ಸುರಕ್ಷೆ ಸಂಬಂಧಿತ ವ್ಯವಸ್ಥೆಗಳು ಕೆಟ್ಟು ಹೋಗಿದ್ದವು. Bhopal-Gas-Tragedy-3ಪೈಪ್ ಲೈನ್‌ಗಳು, ವಾಲ್ವ್‌ಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿರಲಿಲ್ಲ. ಅಲ್ಲಿನ ಮಾಜಿ ನೌಕರರೊಬ್ಬರನ್ನು ಸಂದರ್ಶನ ಮಾಡಿದಾಗ ಅವರು ಮಾತನಾಡುತ್ತಾ ಹೇಳುತ್ತಿದ್ದರು “1984ರ ಆ ದಿನಗಳಲ್ಲಿ ಯಾವುದೇ ಅಡಚಣೆಗಳಿಲ್ಲದೆ ಕೇವಲ ಉತ್ಪಾದನೆಯೊಂದೇ ನಮ್ಮ ಮುಂದಿರುವ ಟಾರ್ಗೆಟ್ ಆಗಿತ್ತು. ಯಾವುದೇ ಬೆಲೆ ತೆತ್ತಾದರೂ ಸರಿಯೇ ಘಟಕವನ್ನು ಒಂದು ಕ್ಷಣಕ್ಕೂ ಸ್ಥಗಿತಗೊಳಿಸಬಾರದೆಂದು ವಿದೇಶದಲ್ಲಿರುವ ಅದರ ಮಾಲೀಕರು ನಿರ್ದೇಶಿಸಿದ್ದಾರೆಂದು ನಮ್ಮ ವ್ಯವಸ್ಥಾಪಕರು ಹೇಳುತ್ತಿದ್ದರು. ಇದರ ಪರಿಣಾಮವಾಗಿ ಸುರಕ್ಷತೆಗಾಗಿ ಯಾವುದೇ ಸಮಯವನ್ನು ಸಹ ಮೀಸಲಿಡದೇ ಹೋದದ್ದು ಈ ದುರ್ಘಟನೆಗೆ ಕಾರಣ. ಮತ್ತೊಂದು ಮುಖ್ಯ ಸಂಗತಿಯೆಂದರೆ ಟ್ಯಾಂಕ್ 610 ಸುಮಾರು 50 ಟನ್‌ನಷ್ಟು MIC ವಿಷಾನಿಲವನ್ನು ಅಡಗಿಸಿಕೊಂಡಿತ್ತು. ಇದು ಸುರಕ್ಷತೆಯ ಎಲ್ಲಾ ನಿಯಮಗಳಿಗೆ ವಿರುದ್ಧವಾಗಿತ್ತು. ಇದನ್ನು ಪ್ರಶ್ನಿಸಿದಾಗ ಹೊಸ ಟ್ಯಾಂಕ್ ಖರೀದಿಗೆ ಆರ್ಥಿಕ ಸೌಲಭ್ಯದ ಕೊರತೆ ಇದೆಯೆಂದೇ ನಮ್ಮನ್ನು ದಬಾಯಿಸಿದ್ದರು. ಎಲ್ಲಾ ಪೈಪ್ ಲೈನ್‌ಗಳು ತುಕ್ಕು ಹಿಡಿದುಹೋಗಿದ್ದವು. ಆ ದುರ್ದಿನದಂದು ಅನಿಲ ಸೋರಿಕೆಯಾದಾಗ ಉಷ್ಣತೆಯ ತಾಪಮಾನ ಸುಮಾರು 200 ಸೆಂಟಿಗ್ರೇಡ್ ಅನ್ನು ದಾಟಿತ್ತು (ವೈಜ್ಞಾನಿಕವಾಗಿ ಇಡೀ ಪ್ರದೇಶವು -20 ಸೆಂಟಿಗ್ರೇಡ್ ತಾಪಮಾನದಲ್ಲಿರಬೇಕು). ಟ್ಯಾಂಕ್ 610 ನಲ್ಲಿದ್ದ ಹೆಚ್ಚುವರಿಯಾದ ಅನಿಲವು ವಾತಾವರಣದ ಈ ಒತ್ತಡದ ಫಲವಾಗಿ ಅದರಿಂದಲೂ ಅನಿಲ ಸೋರಿಕೆ ಪ್ರಾರಂಭವಾಯಿತು. ಈ ಬಗೆಯ ಸಂಪೂರ್ಣ ಸುರಕ್ಷತೆ ವೈಫಲ್ಯಕ್ಕೆ ಕಾರಣರಾದ ಯೂನಿಯನ್ ಕಾರ್ಬೈಡ್‌ನ ವಿದೇಶಿ ಮಾಲೀಕರೇ ಇದಕ್ಕೆ ನೇರ ಹೊಣೆಗಾರರು.”

ಈ ದುರ್ಘಟನೆಯ ನಡೆದ ನಂತರ ಡಿಸೆಂಬರ್4, 1984ರಂದು ಭಾರತಕ್ಕೆ ಆಗಮಿಸಿದ ಯೂನಿಯನ್ ಕಾರ್ಬೈಡ್‌ನ ಮಾಲೀಕ ಅಂಡರಸನ್‌ನನ್ನು ಭಾರತ ಸರ್ಕಾರವು ಗೃಹ ಬಂಧನದಲ್ಲಿರಿಸಿತು. ಆದರೆ ಅಮೇರಿಕಾದ ಒತ್ತಡಕ್ಕೆ ಮಣಿದು ಡಿಸೆಂಬರ್ 7, 1984ರಂದು ನರಹಂತಕನೆಂದು ಬಣ್ಣಿಸಲ್ಪಡುವ ಈ ಅಂಡರ್‌ಸನ್‌ನನ್ನು ಮಧ್ಯಪ್ರದೇಶದ ಆಗಿನ ಮುಖ್ಯ ಮಂತ್ರಿ ಅರ್ಜುನ್ ಸಿಂಗ್ ವಿಶೇಷ ವಿಮಾನದಲ್ಲಿ ಭಾರತದಿಂದ ಅಮೇರಿಕಾಗೆ ಕಳುಹಿಸಿಕೊಟ್ಟರು. ಅಂದು ಇಲ್ಲಿಂದ ಪರಾರಿಯಾದ ಈ ಅಂಡರ್‌ಸನ್ ಮರಳಿ ಭಾರತಕ್ಕೆ ವಿಚಾರಣೆಗೆ ಬರಲೇ ಇಲ್ಲ. ಆತನನ್ನು ‘ಪಲಾಯನಗೊಂಡ ಅಪರಾಧಿ’ ಎಂದು ನಮ್ಮ ನ್ಯಾಯಾಲಯಗಳು ತೀರ್ಪನ್ನಿತ್ತರು. 1992ರಲ್ಲಿ ಭೂಪಾಲ್‌ನ ಮುಖ್ಯ ಮಾಜಿಸ್ಟ್ರೇಟ್ ಅಂಡರ್‌ಸನ್‌ನ್ನು ಒಬ್ಬ Fugitive ಎಂದೇ ತೀರ್ಪಿತ್ತರು. ಅಮೇರಿಕಾ ಇದಕ್ಕೆ ಮನ್ನಣೆ ನೀಡಲೇ ಇಲ್ಲ. ಮೂವತ್ತು ವರ್ಷಗಳ ನಂತರ ಈ ಅಂಡರ್‌ಸನ್ ಮೊನ್ನೆ ಸೆಪ್ಟೆಂಬರ್ 2014 ರಲ್ಲಿ ತೀರಿಕೊಂಡ. Bhopal-Union_Carbide_Memorialಹೌದು ಯಾವುದೇ ಶಿಕ್ಷೆಯನ್ನು ಅನುಭವಿಸಲೇ ಇಲ್ಲ.

ಇನ್ನು ಯೂನಿಯನ್ ಕಾರ್ಬೈಡ್ ಕಾರ್ಖಾನೆಯ ಭಾರತೀಯ 10 ನೌಕರರನ್ನು (ಪ್ರಮುಖರೆಂದರೆ ಕೇಶುಭ್ ಮಹೇಂದ್ರ – ಛೇರ್ಮನ್, ವಿಪಿ.ಗೋಖಲೆ – ವ್ಯವಸ್ಥಾಪಕ ನಿರ್ದೇಶಕ, ಕಾಮ್ದರ್ – ಉಪಾಧ್ಯಕ್ಷ, ಮುಕುಂದ್, ಚೌಧುರಿ – ವ್ಯವಸ್ಥಾಪಕರು, ಇಂದು ಇವರೆಲ್ಲ 70ರ ಆಸುಪಾಸಿನಲ್ಲಿದ್ದಾರೆ) ನಿರ್ಲಕ್ಷ್ಯದ ಆರೋಪದ ಮೇಲೆ 2 ವರ್ಷಗಳ ಸಾದಾ ಜೈಲು ಶಿಕ್ಷೆ ಎಂದು ನಿರ್ಣಯ ನೀಡಲಾಯಿತು. ಕೆಲವೇ ತಿಂಗಳುಗಳ ನಂತರ ಅವರೆಲ್ಲಾ ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ಹೌದು ಯಾವುದೇ ಶಿಕ್ಷೆಯನ್ನು ಅನುಭವಿಸದೆ.

ಇನ್ನು ಬದುಕುಳಿದ ಲಕ್ಷಾಂತರ ಸಂತ್ರಸ್ಥರಿಗೆ ಈ ನೆಲದ ಅಭೂತಪೂರ್ವ ಗುಣದಂತೆಯೇ ನ್ಯಾಯಯುತವಾದ ಪರಿಹಾರದ ಮೊತ್ತ ಇಂದಿಗೂ ಮೂವತ್ತು ವರ್ಷಗಳ ನಂತರವೂ ಸಂದಾಯವಾಗಿಲ್ಲ. ಈ ಭೂಪಾಲ್ ಅನಿಲ ದುರಂತದ 30ನೇ ವರ್ಷದಲ್ಲಿ ಭೂಪಾಲ್‌ಗೆ ಭೇಟಿ ಕೊಟ್ಟಂತಹ ಸಂದರ್ಭದಲ್ಲಿ ಈ ನಿರಾಶ್ರಿತರನ್ನು ಭೇಟಿಯಾದಾಗ ಅವರೆಲ್ಲ ಸೋತು ಹೋಗಿದ್ದು ನಮ್ಮ ಮುಖಕ್ಕೆ ರಾಚುತ್ತಿತ್ತು. ಇಲ್ಲಿನ ಕಾನೂನು, ರಾಜಕೀಯದ ಭ್ರಷ್ಟತೆ, ವೈಫಲ್ಯಗಳಿಂದಾಗಿ ಸಂಪೂರ್ಣ ಕುಗ್ಗಿ ಹೋಗಿರುವ ಈ ಸಂತ್ರಸ್ಥರನ್ನು ಈ 30 ವರ್ಷಗಳ ಕಾಲಘಟ್ಟ ಹೆಚ್ಚೂ ಕಡಿಮೆ ಜೀವಂತಶವಗಳನ್ನಾಗಿಸಿದೆ. “ಕಾಲ ಮತ್ತು ಪ್ರವಾಹ ಯಾರನ್ನು ಕಾಯುವುದಿಲ್ಲ” ಎನ್ನುವ ಮಾತು ಇವರ ಪಾಲಿಗೆ ದಿನನಿತ್ಯದ ವಾಸ್ತವವಾಗಿರುವುದು ನಮ್ಮಲ್ಲಿ ತಲ್ಲಣವನ್ನುಂಟು ಮಾಡಿತು.

ಏಕೆಂದರೆ ಕಾಲ ಎಲ್ಲವನ್ನೂ ಉಪಶಮನ ಮಾಡುತ್ತದೆ ಎನ್ನುವುದು ಭೂಪಾಲ್ ಸಂತ್ರಸ್ಥರ ಪಾಲಿಗೆ ಸುಳ್ಳಾಗಿ, bhopal_Film_Posterನ್ಯಾಯಕ್ಕಾಗಿ ಕನಸು ಕಾಣುತ್ತಾ ಜೀವನ ಸಾಗುತ್ತಿದೆ ಎನ್ನುವುದು ಮಾತ್ರ ನಿಜವಾಗಿ, ನಾಗರಿಕತೆಯ ಮುಖ್ಯ ಗುಣಲಕ್ಷಣಗಳಾದ ಆಳವಾದ ಸಂವೇದನೆ, ನಿಸ್ವಾರ್ಥ, ಕನಿಷ್ಠ ಕ್ಷುದ್ರತೆ, ಗರಿಷ್ಠ ಸಮತೋಲನ ಎಲ್ಲವೂ ಕಣ್ಮರೆಯಾಗಿದ್ದು ಮಾತ್ರ ಅಂದು ಯೂನಿಯನ್ ಕಾರ್ಬೈಡ್ ಕಾರ್ಖಾನೆಯ ಸುತ್ತಲಿನ ಸ್ಲಂಗಳಲ್ಲಿ ಬಹಿರಂಗವಾಗಿ ಗೋಚರಿಸುತ್ತಿತ್ತು.

ಈ ಭೂಪಾಲ್ ಅನಿಲ ದುರಂತದ ಕುರಿತಾಗಿ “Bhopal: A Prayer for Rain” ಎನ್ನುವ ಇಂಗ್ಲೀಷ್-ಹಿಂದಿ ಭಾಷೆಯ ಚಲನಚಿತ್ರ ಡಿಸೆಂಬರ್ 5, 2014 ರಂದು ಬಿಡುಗಡೆಗೊಂಡಿದೆ. ಪ್ರತಿಯೊಬ್ಬರೂ ನೋಡಲೇ ಬೇಕಾದ ಸಿನಿಮಾ. ಇಲ್ಲಿ ಅಂಡರ್‌ಸನ್‌ನನ್ನು ಮಾನವೀಯ ನೆಲೆಯಿಂದ ಚಿತ್ರಿಸಿರುವುದು ಈ ಸಿನಿಮಾದ ಒಂದು ದೌರ್ಬಲ್ಯ. ಇದನ್ನು ಹೊರತು ಪಡಿಸಿದರೆ ಇದು ನಮ್ಮನ್ನು ಸಂಪೂರ್ಣ ಅಲ್ಲಾಡಿಸಿಬಿಡುತ್ತದೆ. ಒಂದು ಮಾನವೀಯ ಸಿನಿಮಾ.

ಉಪಸಂಹಾರ : ಈ ಭೂಪಾಲ್ ಅನಿಲ ದುರಂತ ಒಳಗೊಂಡಂತೆ ಇನ್ನು ಅನೇಕ ದುರ್ಘಟನೆಗಳು ಇಲ್ಲಿ ಜರುಗಿದ್ದರೂ ಈ ಬೇಜವಬ್ದಾರಿ ಪ್ರಧಾನ ಮಂತ್ರಿ ಮೋದಿ ಘೋಷಿಸಿದ ’ಕೈಗಾರಿಕಾ ಸುಧಾರಣಾ ನೀತಿ’ಯ ಪಾಲಿಸಿಗಳು ಸಂಪೂರ್ಣವಾಗಿ ಕಾರ್ಪೋರೇಟ್ ಪರವಾಗಿವೆ. ಇದನ್ನು ವಿವರವಾಗಿ ಚರ್ಚಿಸಲು ಇಲ್ಲಿ ಸಾಧ್ಯವಿಲ್ಲ. ಈ ಹೊಸ ಕೈಗಾರಿಕ ನೀತಿಯ ಒಂದು ಪ್ರಮುಖ ಅಂಶವೆಂದರೆ ಇನ್ನು ಮುಂದೆ ಕೈಗಾರಿಕೆಗಳನ್ನು ಸ್ಥಾಪಿಸಲು ಅದರ ಮಾಲೀಕರು ಈಗ ಜಾರಿಯಲ್ಲಿರುವ ಪದ್ಧತಿಯಂತೆ ಪರಿಸರ ಇಲಾಖೆ, Inspectors of Factories Act ಇಲಾಖೆ, make-in-indiaವಾಯುಮಾಲಿನ್ಯ ನಿಯಂತ್ರಣ ಮಂಡಳಿಗಳಂತಹ ಪ್ರಮುಖ ಸರ್ಕಾರಿ ಇಲಾಖೆಗಳಿಂದ ಅನುಮತಿ ಪಡೆಯುವ ಅಗತ್ಯವೇ ಇಲ್ಲ. ಈ ಮಾಲೀಕರು ಸುರಕ್ಷತೆ, ಪರಿಸರ ಮಾಲಿನ್ಯಕ್ಕೆ ಸಂಬಂಧಿಸಿದಂತೆ Self Certificate ಗಳನ್ನು ಸಲ್ಲಿಸಿದರೆ ಅಷ್ಟೇ ಸಾಕು. ಅದರ ಆಧಾರದ ಮೇಲೆ ಅವರಿಗೆ ಕೈಗಾರಿಕೆಗಳನ್ನು ಸ್ಥಾಪಿಸಲು ಅನುಮತಿ ದೊರಕುತ್ತದೆ. ಇದು ಈ ಮೋದಿ ಎನ್ನುವ ಅಪ್ರಬುದ್ಧ ಪ್ರಧಾನ ಮಂತ್ರಿಯ ಕೈಗಾರಿಕಾ ನೀತಿ!!! ನಮ್ಮ ಕಣ್ಣ ಮುಂದೆಯೇ ಈ ಎಲ್ಲಾ ಇಲಾಖೆಗಳ ನಿರ್ಬಂಧಗಳ ಅಡಿಯಲ್ಲಿಯೇ, ಕಾನೂನು ಕಟ್ಟಳೆಗಳ ಸಮ್ಮುಖದಲ್ಲಿಯೇ ಭೂಪಾಲ್ ಅನಿಲ ದುರಂತ ಸಂಭವಿಸಿದೆ. ಇನ್ನು ಇವೆಲ್ಲದರ ಅವಶ್ಯಕತೆ ಇಲ್ಲವೆಂದರೆ?? ಸಾವಿರಾರು ಭೂಪಾಲ್ ದುರಂತಗಳು ನಮ್ಮನ್ನು ನಿರೀಕ್ಷಿಸುತ್ತಿವೆ ಅಷ್ಟೆ. ಆದರೆ ಇಲ್ಲಿನ ನೀರು, ಗಿಡ ಮರಗಳು, ಪ್ರಾಣಿಗಳು, ಗೃಹ ಕೈಗಾರಿಕೆಗಳು, ಕೃಷಿ ಮಂತಾದವುಗಳ ಕುರಿತಾಗಿ ಪ್ರಾಥಮಿಕ ತಿಳುವಳಿಕೆ ಇಲ್ಲದ ಈ ನರೇಂದ್ರ ಮೋದಿಯ ಈ ದುರಹಂಕಾರದ ಅತ್ಮಹತ್ಯಾತ್ಮಕ ನೀತಿಗಳು ದೇಶವನ್ನು ಕೊಂಡೊಯ್ಯುವ ದಿಕ್ಕನ್ನು ನಾವೀಗಲೇ ಊಹಿಸಬಹುದು. ಮತ್ತು ಈ ಎಲ್ಲ ನೀತಿಗಳು “Make in India” ಎನ್ನುವ ಸ್ಲೋಗನ್‌ನ ಅಡಿಯಲ್ಲಿಯೇ ಜಾರಿಗೊಳ್ಳುತ್ತವೆ. ಹಾಗಿದ್ದರೆ ಸಾವಿರಾರು ಹೆಣಗಳು, ಭೂಪಾಲ್ ದುರಂತಗಳು ಸಹ ಇನ್ನು ಮುಂದೆ “Make in India” ಎನ್ನುವ ಸರ್ಕಾರಿ ಅಧಿನಿಯಮದ ಅಡಿಯಲ್ಲಿ ಸಂಭವಿಸುತ್ತಿರುತ್ತವೆ ಕಾಲಕಾಲಕ್ಕೆ.

Paid News ಕುರಿತಾದ ಸಂಗತಿಗಳು

Observations/Recommendations of the Parliament Standing Committee on Information Technology.

[ಕೇರಳ ಮಾಧ್ಯಮ ಅಕಾಡೆಮಿಯ ಜರ್ನಲ್‌ನ ಆಗಸ್ಟ್ ೨೦೧೩ರ ಸಂಚಿಕೆಯಲ್ಲಿ ಪ್ರಕಟಗೊಂಡ “Issues Related to Paid News” ಎನ್ನುವ ಲೇಖನದ ಭಾವಾನುವಾದ.]

ಕನ್ನಡಕ್ಕೆ- ಬಿ. ಶ್ರೀಪಾದ ಭಟ್

ಜನರ ನೋವಿಗೆ, ಭಾವನೆಗಳಿಗೆ ಶಕ್ತಿಶಾಲಿಯಾದ ಧ್ವನಿಯಾಗಿ ಕಾರ್ಯ ನಿರ್ವಹಿಸುವ ಮಾಧ್ಯಮವು ಪ್ರಜಾಪ್ರಭುತ್ವದಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಅಷ್ಟು ಮಾತ್ರವಲ್ಲ ದೇಶದ ರಾಜಕೀಯ, ಸಾಂಸ್ಕೃತಿಕ, ಸಾಮಾಜಿಕ, ಆರ್ಥಿಕ ವಿದ್ಯಮಾನಗಳನ್ನು, ಈ ವಲಯಗಳ ಕುರಿತಾದ ಸತ್ಯನಿಷ್ಠ ವರದಿಗಳನ್ನು, ಸಂಶೋಧನೆಗಳನ್ನು ಪ್ರತಿಬಿಂಬಿಸುತ್ತದೆ ಮತ್ತು ನಾಗರಿಕ ಸಮಾಜವನ್ನು ಪ್ರಭಾವಿಗೊಳಿಸುತ್ತದೆ ಎನ್ನುವ ಕಾರಣಕ್ಕಾಗಿಯೇ ಮಾಧ್ಯಮವನ್ನು ಪ್ರಜಾಪ್ರಭುತ್ವದ ನಾಲ್ಕನೇ ಸ್ಥಂಭವೆಂದೇ ಪರಿಗಣಿಸಲಾಗಿದೆ. ಈ ಕಾರಣಕ್ಕಾಗಿಯೇ ಕಮಿಟಿಯು (Parliament Standing Committee on Information Technology) ಮಾಧ್ಯಮದ ವಿವಿಧ ವಲಯಗಳಾದ ಮುದ್ರಣ, paid-news-indiaಟಿವಿ, ರೇಡಿಯೋ, ದಿನಪತ್ರಿಕೆಗಳು ಮೂಲಕ ಪ್ರಕಟಗೊಳ್ಳುವ ಪ್ರತಿಯೊಂದು ಸುದ್ದಿಯೂ ಬೇರೆಲ್ಲದ್ದಕ್ಕಿಂತಲೂ ಮಹತ್ವದ್ದಾಗಿರುತ್ತದೆ ಎಂದು ಅಭಿಪ್ರಾಯಪಟ್ಟಿದೆ. ಆದರೆ ಮಾಧ್ಯಮ ವಲಯದ ಕೆಲವು ಮಾಲೀಕರು, ಗುಂಪುಗಳು, ಪತ್ರಿಕೆಗಳು, ದೃಶ್ಯ ಮಾಧ್ಯಮಗಳು ವ್ಯಕ್ತಿಯೊಬ್ಬನ, ರಾಜಕಾರಣಿಯ, ಸಂಸ್ಥೆಗಳ ಪರವಾಗಿ ಏಕಪಕ್ಷೀಯ ವರದಿಗಳನ್ನು ನೀಡುತ್ತಿವೆ ಹಾಗೂ ಇದಕ್ಕಾಗಿ ಹಣವನ್ನು ಪಡೆದಿವೆ ಎನ್ನುವ, Paid News ಎಂದೇ ಕುಖ್ಯಾತಿ ಪಡೆದಿರುವ ಆರೋಪಗಳ ಕುರಿತಾಗಿ ಕಮಿಟಿಯು ತೀವ್ರ ಕಳವಳವನ್ನು ವ್ಯಕ್ತಪಡಿಸಿದೆ. ಈ ಹಗರಣವು ಷೇರು ಮಾರುಕಟ್ಟೆಯನ್ನು, ಸೆನ್ಸೆಕ್ಸ್ ಅನ್ನು, ರಿಯಲ್ ಎಸ್ಟೇಟ್ ಮಾರ್ಕೆಟ್ ಮೇಲೆ ಪರಿಣಾಮ ಬೀರುವಷ್ಟು ಪ್ರಭಾವಶಾಲಿಯಾಗಿದೆ. ಅಲ್ಲದೆ ಚುನಾವಣೆಯ ಸಂದರ್ಭದಲ್ಲಿ ರಾಜಕೀಯ ವಿಶ್ಲೇಷಣೆಗಳ ಮೇಲೆ, ಮತದಾರನ ಮೇಲೆ ಇದು influence ಮಾಡುತ್ತದೆ. ಕಮಿಟಿಯ ಆತಂಕವೇನೆಂದರೆ ಇದು ಕೇವಲ ವ್ಯಕ್ತಿಯೊಬ್ಬನ, ಪತ್ರ್ರಕರ್ತನೊಬ್ಬನ ಭ್ರಷ್ಟಾಚಾರದ ವಿಷಯ ಮಾತ್ರವಲ್ಲ, ಜೊತೆಗೆ ಈ Paid News ಹಗರಣವು ಪತ್ರಕರ್ತರು, ವ್ಯವಸ್ಥಾಪಕರು, ಮಾಧ್ಯಮಗಳ ಮಾಲೀಕರು, ಕಾರ್ಪೋರೇಟ್ಸ್, ಸಾರ್ವಜನಿಕ ಸಂಪರ್ಕ ಸಂಸ್ಥೆಗಳು, ಜಾಹಿರಾತು ಸಂಸ್ಥೆಗಳು ಮತ್ತು ರಾಜಕೀಯ ಕ್ಷೇತ್ರದ ಕೆಲವು ವಲಯಗಳೆಲ್ಲವನ್ನೂ ಒಳಗೊಂಡಿದೆ. ಇದರ ಕುರಿತಾಗಿ ತನಿಖೆಯನ್ನು ಕೈಗೆತ್ತಿಕೊಂಡ ಕಮಿಟಿಗೆ ಬೆಳಕಿಗೆ ಬಂದ ಮತ್ತೊಂದು ಅಘಾತಕಾರಿ ಸಂಗತಿಯೇನೆಂದರೆ Paid News ಹಗರಣವು ಕೇವಲ ಚುನಾವಣೆಯ ಸಂದರ್ಭದಲ್ಲಿ ಮಾತ್ರ ಕಂಡುಬರುವ ವಿದ್ಯಮಾನವಲ್ಲ, ಬದಲಾಗಿ ದಿನನಿತ್ಯದ ವಹಿವಾಟುಗಳಾದ ಹೊಸ ಉತ್ಪನ್ನಗಳ, ಕಂಪನಿಗಳ launching ಸಂದರ್ಭವಾಗಿರಬಹುದು, ಇಲ್ಲವೆ ಮಾರ್ಕೆಟಿಂಗ್ ಯೋಜನೆಗಳಾಗಿರಬಹುದು. ಒಟ್ಟಾರೆ ಸುದ್ದಿ/ಜಾಹೀರಾತು ಎನ್ನುವ ಛದ್ಮವೇಶದಲ್ಲಿ ವರ್ಷಪೂರ್ತಿ ಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತಿರುತ್ತವೆ. ಅಷ್ಟೇ ಅಲ್ಲ ಇಂಡಿಯಾದ ಚುನಾವಣಾ ಕಮಿಷನ್, ಸುದ್ದಿ ಪ್ರಸಾರ ಅಸೋಶಿಯೇಶನ್ಸ್, ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ, ವಾರ್ತಾ ಮತ್ತು ಪ್ರಚಾರ ಇಲಾಖೆ, ಎಡಿಟರ್ಸ್ ಗಿಲ್ಡ್, ಪ್ರಸಾರ ಭಾರತಿಗಳಂತಹ ಪ್ರಮುಖ ಸರ್ಕಾರಿ ಸಂಸ್ಥೆಗಳು ಮತ್ತು ದೇಶದ ಪ್ರಾಮಾಣಿಕ ಚಿಂತಕರು ಮತ್ತು ರಾಜಕೀಯ ವಿಶ್ಲೇಷಕರು ಈ Paid News ಹಗರಣವು ನಡೆದಿರುವುದರ ಕುರಿತಾಗಿ ಒಪ್ಪಿಕೊಂಡು ಈ ಹಗರಣದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಶಿಸಿದ್ದರೂ ಬಹುಪಾಲು ಮಾಧ್ಯಮಗಳು ಮಾತ್ರ ಇದರ ಕುರಿತಾಗಿ ತಳೆದಿರುವ ದಿವ್ಯ ಮೌನ ಕಮಿಟಿಯನ್ನು ಚಕಿತಗೊಳಿಸಿದೆ. ಸರ್ಕಾರವೂ ಇದರ ಕುರಿತಾಗಿ ಸೂಕ್ತ ಕ್ರಮಕ್ಕೆ ಮುಂದಾಗಿಲ್ಲ. ಮೀಡಿಯಾ, ದೃಶ್ಯ ಮಾಧ್ಯಮ, ಮುದ್ರಣ ಮಾಧ್ಯಮ, ರೇಡಿಯೂ, ಚಲನಚಿತ್ರ, ಪಬ್ಲಿಕೇಶನ್ಸ್, ಜಾಹೀರಾತು ವಿಭಾಗಗಳ ನಡುವೆ ಒಂದು ಬಗೆಯ ಆರೋಗ್ಯಕರ ಪೈಪೋಟಿ ಇರುವಂತಹ ಸೌಹಾರ್ದಯುತ ವಾತಾವರಣ ನಿರ್ಮಿಸುವಂತಹ ಗುರುತರವಾದ ಹೊಣೆಗಾರಿಕೆಯು ವಾರ್ತಾ ಮತ್ತು ಪ್ರಚಾರ ಇಲಾಖೆಯ ಮೇಲಿದೆ ಎಂದು ಕಮಿಟಿ ಅಬಿಪ್ರಾಯ ಪಟ್ಟಿದೆ. ಸುದ್ದಿ ಪ್ರಸರಣವು ಅತ್ಯಂತ ಜವಾಬ್ದಾರಿಯುತವಾಗಿಯೂ, ಪಕ್ಷಪಾತವನ್ನು ಮಾಡದೆ ನೇರ ಮತ್ತು ದಿಟ್ಟವಾಗಿರುವಂತೆ ರೂಪಿಸುವುದು ಇಲಾಖೆಯ ಕರ್ತವ್ಯವೆಂದು ಕಮಿಟಿ ಅಭಿಪ್ರಾಯ ಪಟ್ಟಿದೆ. ವಾರ್ತಾ ಮತ್ತು ಪ್ರಚಾರ ಇಲಾಖೆ ಮತ್ತು ಸರ್ಕಾರ ಇವೆರೆಡೂ ಈ Paid News ಹಗರಣಕ್ಕೆ ಸಂಬಂಧಿಸಿದಂತೆ ಸೂಕ್ತವಾದ ನೀತಿನಿಯಾಮಾವಳಿಗಳನ್ನು ಜಾರಿಗೊಳಿಸಿಲ್ಲ ಎಂದು ಕಮಿಟಿ ಹೇಳಿದೆ. ವಾರ್ತಾ ಮತ್ತು ಪ್ರಚಾರ ಇಲಾಖೆಯು ಕಾನೂನುಬದ್ಧವಾಗಿ ಕ್ರಮ ಕೈಗೊಳ್ಳುವ ಅವಕಾಶಗಳಿದ್ದಾಗಲೂ ಅದನ್ನು ಹೊಣೆಗಾರಿಕೆಯಿಂದ ನಿಭಾಯಿಸಲಿಲ್ಲ ಎಂದು ಕಮಿಟಿ ಅಭಿಪ್ರಾಯ ಪಟ್ಟಿದೆ. ಈ ಹಿನ್ನೆಲೆಯಲ್ಲಿ ವಾರ್ತಾ ಮತ್ತು ಪ್ರಚಾರ ಇಲಾಖೆಯು ಈ ಕೂಡಲೆ ಕಾರ್ಯಪ್ರವೃತ್ತವಾಗಿ Paid News ಹಗರಣಕ್ಕೆ ಸಂಭಂದಿಸಿದಂತೆ ತನಿಖಾ ತಂಡವನ್ನು ರಚಿಸಬೇಕೆಂದೂ ಹಾಗೂ ಈ ಹಗರಣವು ಮತ್ತೆ ಮರುಕಳಿಸದಂತೆ ಸೂಕ್ತ ಕ್ರಮಗಳನ್ನು ಒಳಗೊಂಡಂತಹ ವರದಿಯನ್ನು ನೀಡಬೇಕೆಂದು ಕಮಿಟಿ ಆದೇಶಿಸಿದೆ. ಮತ್ತು ೬ ತಿಂಗಳುಗೊಳಗೆ ಸರ್ಕಾರವು ಈ ವರದಿಯನ್ನಾಧರಿಸಿ ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಹ ಆದೇಶಿಸಿದೆ.

ಈ ಸಂಸದೀಯ ಕಮಿಟಿಯ Paid News ಕುರಿತಾದ Observations/Recommendations ಪ್ರಕಾರ ಸ್ವಾತಂತ್ರೋತ್ತರ ನಂತರದ ವರ್ಷಗಳಲ್ಲಿ ಈ ಮಾಧ್ಯಮಗಳು ಮತ್ತು ಅದರ ಮಾಲೀಕರು ಅತ್ಯಂತ ಆರೋಗ್ಯಕರ ಪೈಪೋಟಿಯನ್ನು ಮತ್ತು ಸೌಹಾರ್ದಯುತ ವಾತಾವರಣವನ್ನು ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ವರ್ಷಗಳುರುಳಿದಂತೆ ಈ ಮಾಧ್ಯಮಗಳು ಮತ್ತು ಅದರ ಮಾಲೀಕರು ಆರ್ಥಿಕವಾಗಿ ಬಲಾಢ್ಯರಾದಂತೆಲ್ಲ, ತಾನು ಜನರನ್ನು ನೇರವಾಗಿ ತಲುಪಬಲ್ಲಂತಹ ಪ್ರಭಾವಶಾಲಿ ಪರಿಣಾಮಕಾರಿ ಸಂಸ್ಥೆಯೆಂದು ಆತ್ಮವಿಶ್ವಾಸ ಮೂಡಲಾರಂಭಿಸಿದ ತಕ್ಷಣ ಇಡೀ ಪತ್ರಿಕೋದ್ಯಮದ ನೈತಿಕತೆಯೇ ಕುಸಿಯತೊಡಗಿತು. ಈ ಹಿನ್ನೆಲೆಯಲ್ಲಿ ಪ್ರಚಾರಕ್ಕಾಗಿ ಜಾಹೀರಾತು ಮತ್ತು ಇತರೇ ಮಾರ್ಗಗಳಿಗೆ ಮೊರೆ ಹೋಗುವುದಕ್ಕಿಂತ ಮಾಧ್ಯಮಗಳ ಮೇಲೆ ನೇರವಾದ ಪ್ರಭಾವವನ್ನು ಬೀರಿದರೆ ಹೆಚ್ಚಿನ ಅನುಕೂಲಗಳು ಮತ್ತು ಪರಿಣಾಮಕಾರಿ ಫಲಿತಾಂಶಗಳು ತಮ್ಮ ಕಡೆಗೆ ವಾಲಬಹುದೆಂದು ಚುನಾವಣಾ ಕಣದಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ಮನದಟ್ಟಾಗಿತ್ತು. ಇದು malpractice ಗೆ ದಾರಿ ಮಾಡಿಕೊಟ್ಟಿತು. ಕೇಂದ್ರ ಚುನಾವಣಾ ಕಮಿಷನ್‌ಗೆ ೨೦೦೪ರಲ್ಲಿಯೇ Paid News ಹಗರಣವು ಗಮನಕ್ಕೆ ಬಂದಿತ್ತಾದರೂ ೨೦೦೯ರ ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿ ಮತ್ತು ನಂತರ paidmedia2ಈ Paid News ಹಗರಣವು ಅತ್ಯಂತ ಪ್ರಮುಖವಾಗಿ ಚರ್ಚಿತವಾಗತೊಡಗಿತು ಎಂದು ಕಮಿಟಿ ಅಭಿಪ್ರಾಯಪಟ್ಟಿದೆ. ಮತ್ತೂ ಮುಂದುವರೆದು ಕಮಿಟಿಯು ಕಳೆದೆರಡು ದಶಕಗಳಲ್ಲಿ ಎಲೆಕ್ಟ್ರಾನಿಕ್ ಮೀಡಿಯಾ ಅರ್ಥಾತ್ ದೃಶ್ಯ ಮಾಧ್ಯಮವು ಜನಪ್ರಿಯತೆ ಗಳಿಸಿದಂತೆಲ್ಲಾ ಅದು ಹೆಚ್ಚು ಹೆಚ್ಚು ವಾಣಿಜ್ಯೀಕರಣಗೊಂಡು ಅದರ ಮೇಲೆ ಕಾರ್ಪೋರೇಟ್‌ನ ಪ್ರಾಬಲ್ಯ ಬಲವಾಗತೊಡಗಿತು ಎಂದು ವಿವರಿಸಿದೆ. ಅಷ್ಟೇಕೆ ಸಾಮಾನ್ಯವಾಗಿ ಸಂಪಾದಕರು ಮತ್ತು ಪ್ರಕಾಶಕರು ಕಛೇರಿಗಳು ಹೊರಪ್ರಪಂಚದಿಂದ ಸಂರಕ್ಷಿಸಲ್ಪಟ್ಟಿರುವಂತಹ ಸಾಂಪ್ರದಾಯಿಕ ವ್ಯವಸ್ಥೆಯು ಇಂದು ಬದಲಾಗಿದೆ ಮತ್ತು ಹೆಚ್ಚು ಹೆಚ್ಚು compromise ಆಗುತ್ತಿದೆ. ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಪ್ರಕಾರ ಕಳೆದ ಆರು ದಶಕಗಳಲ್ಲಿ ವಿವಿಧ ಸಮಾರಂಭಗಳಲ್ಲಿ ಭಾಗವಹಿಸಿ ಗಿಫ್ಟ್‌ಗಳನ್ನು ಸ್ವೀಕರಿಸುವುದರಿಂದ, ಆಗಾಗ್ಗೆ ಅಭ್ಯರ್ಥಿಗಳ ಪ್ರಾಯೋಜತ್ವದಲ್ಲಿ ವಿದೇಶಿ ಪ್ರವಾಸದಂತಹ ಘಟನೆಗಳಿಂದ ಶುರುವಾದ ಈ Paid News ನ ಪರಿಕಲ್ಪನೆ ಇಂದು ನೇರವಾಗಿ ಹಣವನ್ನು ಕೊಡುವ ಕಾಲಕ್ಕೆ ತಲುಪಿದೆ. ಇತ್ತೀಚೆಗೆ ಮಾಧ್ಯಮಗಳ ಮಾಲೀಕರು ತಮಗೆ ನಿಯಮಿತವಾಗಿ ಜಾಹೀರಾತುಗಳನ್ನು ನೀಡುತ್ತಿರುವ, ತಮ್ಮ ಕಾರ್ಯಕ್ರಮಗಳ ಪ್ರಾಯೋಜಕತ್ವ ವಹಿಸಿಕೊಳ್ಳುವ ಉದ್ದಿಮೆದಾರರು, ಉದ್ದಿಮೆ ನಡೆಸುವ ಕುಟುಂಬಗಳು ಇವರಿಗೆ ಪ್ರಶಸ್ತಿಗಳನ್ನು ಪ್ರಕಟಿಸಿ, ಅದನ್ನು ವಿತರಿಸಲು ಪ್ರಶಸ್ತಿ ಪ್ರಧಾನ ಸಮಾರಂಭಗಳನ್ನು ಆಯೋಜಿಸುವ ಹಂತಕ್ಕೆ ಈ Paid News ತಲುಪಿರುವುದು ಕಂಡು ಕಮಿಟಿ ತೀವ್ರ ಕಳವಳ ವ್ಯಕ್ತಪಡಿಸಿದೆ. ಕೆಲವೊಮ್ಮೆ ಕಣದಲ್ಲಿರುವ ಅಭ್ಯರ್ಥಿಗೆ ಪಬ್ಲಿಸಿಟಿಯನ್ನು ಸಂಪೂರ್ಣವಾಗಿ ನಿರಾಕರಿಸಲಾಗುವುದರ ಮೂಲಕ ಪರೋಕ್ಷವಾಗಿ ಬ್ಲಾಕ್ ಮಾಡಲಾಗುತ್ತದೆ. ಇನ್ನೂ ಕೆಲವೊಮ್ಮೆ ವಯುಕ್ತಿಕ ಸಂಭಂಧದ ನೆಲೆಯಲ್ಲಿ ಅಗತ್ಯಕ್ಕಿತಂಲೂ ಹೆಚ್ಚಿನ ಪಬ್ಲಿಸಿಟಿ ನೀಡುತ್ತಾರೆ. ಈ Paid News ನ ಮತ್ತೊಂದು ಅಪಾಯಕಾರಿ ಮಗ್ಗಲೆಂದರೆ ಖಾಸಗಿ ಒಡಂಬಡಿಕೆಗಳ ಅಡಿಯಲ್ಲಿ ಮಾಧ್ಯಮ ಮತ್ತು ಕಾರ್ಪೋರೇಟ್ ವಲಯಗಳ ನಡುವೆ ಏರ್ಪಡುವ ಅನೈತಿಕ ಮೈತ್ರಿ.

ಈ Paid News ನ ಎಲ್ಲಾ ಮಗ್ಗಲುಗಳನ್ನು ಶೋಧಿಸಿ ಈಗಿನ ಮಟ್ಟದಲ್ಲಿಯೇ ನಿಯಂತ್ರಿಸದಿದ್ದರೆ ಮುಂದೆ ಇದು ದೈತ್ಯಾಕಾರ ಸ್ವರೂಪ ತಾಳುತ್ತದೆ ಎಂದು ಕಮಿಟಿ ಅಭಿಪ್ರಾಯಪಡುತ್ತದೆ. ಸುದ್ದಿ ಮತ್ತು ಸಮಾಚಾರ ಮತ್ತು ಜಾಹೀರಾತು ಇವುಗಳ ನಡುವೆ ಒಂದು ಅಥೆಂಟಿಕ್ ಆದ ಭಿನ್ನತೆಯನ್ನು ಕಾಯ್ದುಕೊಳ್ಳುವಂತೆ ಮಂತ್ರಿಮಂಡಲವು ಈ ನಿಟ್ಟಿನಲ್ಲಿ ಈ ಕೂಡಲೇ ಕಾರ್ಯಪ್ರವೃತ್ತರಾಗಬೇಕಾಗಿದೆ ಎಂದು ಹೇಳುತ್ತಾ ನಿಜಕ್ಕೂ ಜಾಹೀರಾತು ಮತ್ತು Paid News ನ ನಡುವೆ ವಸ್ತುವಿನ ವಿಷಯದಲ್ಲಿ ಯಾವುದೇ ವ್ಯತ್ಯಾಸ ಇರದಿದ್ದರೂ Paid News ಅನ್ನು ಜಾಹೀರಾತಿನಂತೆ ಬಿಂಬಿಸದೆ ಸುದ್ದಿ ಮತ್ತು ಸಮಾಚಾರದಂತೆ ಬಿಂಬಿಸಲಾಗುತ್ತದೆ. ಇವುಗಳ ನಡುವೆ ಭಿನ್ನತೆಯನ್ನು ಕಂಡುಹಿಡಿಯುವುದು ತುಂಬಾ ಕಷ್ಟ. ಒಂದು ವೇಳೆ Paid News ಅನ್ನು ಜಾಹೀರಾತೆಂದು ತೋರಿಸುವಾಗಲೂ ಜಾಹೀರಾತು ಎನ್ನುವ ಪದವನ್ನು ಕಣ್ಣಿಗೆ ಕಾಣದಷ್ಟು ಚಿಕ್ಕ ಅಕ್ಷರಗಳಲ್ಲಿ ಪತ್ರಿಕೆಯ ಮೂಲೆಯಲ್ಲಿ ‘Advt.’ ಎಂದು ಮುದ್ರಿಸಿರುತ್ತಾರೆ. ದೃಶ್ಯ ಮಾಧ್ಯಮಗಳಲ್ಲಿ ಜಾಹೀರಾತು ಎನ್ನುವ ಸಣ್ಣ ಪದ ನಿಂರತರವಾಗಿ scroll/ticker ಆಗುತ್ತಿರುತ್ತದೆ. ರೇಡಿಯೋದಲ್ಲಿಯಂತೂ ಪ್ರಾಯೋಜಕರ ಹೆಸರನ್ನೇ ಪ್ರಸ್ತಾಪಿಸುವುದಿಲ್ಲ. ಈ ಹಿನ್ನೆಲೆಯಲ್ಲಿ ಕಮಿಟಿಯು ಎಲೆಕ್ಟ್ರಾನಿಕ್ ಮೀಡಿಯಗಾಗಿಯೇ ರೂಪಿಸಿದ ಕೇಬಲ್ ಟೆಲಿವಿಶನ್ ನಿಯಂತ್ರಣ ಕಾಯ್ದೆಯ ಅಡಿಯಲ್ಲಿ ಬರುವ ರೂಲ್ ೭(೧೦)ನಲ್ಲಿ ಸಮಾಚಾರ ಮತ್ತು ಸುದ್ದಿಗಳು ಜಾಹೀರಾತಿಗಿಂತಲೂ ಸ್ಪಷ್ಟವಾಗಿಯೇ ಭಿನ್ನವಾಗಿರಬೇಕು ಮತ್ತು ಇತರೇ tv-mediaಪ್ರಾಯೋಜಿತ ಕಾರ್ಯಕ್ರಮಗಳೊಂದಿಗೆ ಹಸ್ತಕ್ಷೇಪ ಮಾಡಬಾರದೆಂದು ಹೇಳಲಾಗಿದೆ ಎಂದು ಕಮಿಟಿ ವಿವರಿಸಿದೆ. ಇದರ ಜೊತೆಗೆ ಪ್ರೋಗ್ರಾಮ್ ಕೋಡ್‌ನ ಅಡಿಯಲ್ಲಿ ಬರುವ ರೂಲ್ ೬(೧)( ಜ) ನ ಪ್ರಕಾರ ದಿನನಿತ್ಯ ಪ್ರಸಾರವಾಗುವ ಕಾರ್ಯಕ್ರಮಗಳಲ್ಲಿ ಅವಹೇಳನಕಾರಿ, ಪ್ರಚೋದನಕಾರಿ, ಅಶ್ಲೀಲ ಸಂಭಾಷಣೆ ಮತ್ತು ದೃಶ್ಯಗಳಿದ್ದರೆ ಅದು ಕಾನೂನುಬಾಹಿರ ಮತ್ತು ಸಂಬಂಧಪಟ್ಟವರು ಶಿಕ್ಷೆಗೊಳಗಾಗಬೇಕಾಗುತ್ತದೆ ಎಂದು ಕಮಿಟಿ ವಿವರಿಸುತ್ತದೆ.

ಹಾಲಿಯಲ್ಲಿ ಚಾಲ್ತಿಯಲ್ಲಿರುವ ಕಾನೂನುಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮೀಡಿಯಾ ಹೌಸ್‌ಗಳ ಮೇಲೆ ವಾರ್ತಾ ಮತ್ತು ಪ್ರಚಾರ ಇಲಾಖೆಯು ನಿರಂತರ ಒತ್ತಡ ಹೇರಬೇಕೆಂದು, ಒಂದು ವೇಳೆ ಪಾಲಿಸದಿದ್ದರೆ ಅಂತಹ ಮಾಲೀಕರ ಮೇಲೆ ಕಟ್ಟುನಿಟ್ಟಾದ ಕ್ರಮ ಜರುಗಿಸಬೇಕೆಂದು ಕಮಿಟಿ ಬಯಸುತ್ತದೆ. ಮುದ್ರಣ ಮಾಧ್ಯಮಗಳ ಮೇಲೆ “ಜಾಹೀರಾತು” ಎನ್ನುವ ಪದವನ್ನು ಬೋಲ್ಡ್ ಆಗಿ ಕಣ್ಣಿಗೆ ಕಾಣುವಂತೆ ಮುದ್ರಿಸಬೇಕೆಂದು ಸರ್ಕಾರವು ಆದೇಶಿಸಬೇಕು ಮತ್ತು ಇಲ್ಲಿ Disclaimer ಪದವನ್ನು ಸೂಕ್ತವಾಗಿ ಮುದ್ರಿಸಬೇಕು. ಎಲೆಕ್ಟ್ರಾನಿಕ್ಸ್ ಮಾಧ್ಯಮಗಳು ಪ್ರಸಾರದ ಸಮಯದವರೆಗೂ “Advertorial”, ‘ಈ ಭಾಗವು ಜಾಹೀರಾತು’ ಎನ್ನುವ ಪದವನ್ನು, ಮೇಲ್ಭಾಗದ ಮಧ್ಯದಲ್ಲಿ ಆ ಛಾನಲ್ ಹೆಸರಿನ Font Size ನಷ್ಟೇ ದೊಡ್ಡ ಅಕ್ಷರಗಳಲ್ಲಿ ಲಗತ್ತಿಸಿರಬೇಕು. ಪ್ರತಿಯೊಂದು ಕಾರ್ಯಕ್ರಮದ ವಿರಾಮದ ಸಮಯದ ಮುಂಚೆ ಮತ್ತು ನಂತರ ಪ್ರಾಯೋಜಕರ ಹೆಸರನ್ನು ಪ್ರಕಟಿಸಬೇಕು. ರೇಡಿಯೋ ಮಾಧ್ಯಮದಲ್ಲಿ ಪ್ರತಿಯೊಂದು ವಿರಾಮದ ಮುಂಚೆ ಮತ್ತು ನಂತರ ಈ ಭಾಗದ ಪ್ರಾಯೋಜಕರ ಹೆಸರನ್ನು ಪ್ರಕಟಿಸಬೇಕು ಎಂದೂ ಕಮಿಟಿಯು ಅಭಿಪ್ರಾಯ ಪಡುತ್ತದೆ. ಮೇಲಿನ ಶಿಫಾರಸುಗಳ ಅನುಷ್ಟಾನಕ್ಕಾಗಿ ಪಾಲಿಸಿ ನಿರ್ಧಾರಗಳಿಗಾಗಿ ಕಾಯುವ ಅವಶ್ಯಕತೆ ಇಲ್ಲ, ಯಾವುದೇ ಶಾಸನದ ತಿದ್ದುಪಡಿಯ ಅವಶ್ಯಕತೆಯೂ ಇಲ್ಲ. ಸಮಯ ವ್ಯರ್ಥ ಮಾಡದೆ ಜಾರಿಗೊಳಿಸಬೇಕು ಎಂದು ಕಮಿಟಿ ಒತ್ತಾಯಿಸುತ್ತದೆ.

Paid News ಎನ್ನುವ ವಾಸ್ತವ ಸಂಗತಿಯ ಸಂಕೀರ್ಣತೆಯನ್ನು,ಕಾಲ ಕಾಲಕ್ಕೆ ಬದಲಾಗುತ್ತಿರವ ಅದರ ಸ್ವರೂಪಗಳು ಮತ್ತು ಉದ್ದೇಶಗಳನ್ನು ಮತ್ತಷ್ಟು ಸರಳವಾಗಿ ವಿವರಿಸಲು ಮತ್ತು ಯಾವ ಬಗೆಯ ನಿಯಮಗಳು ಮತ್ತು ಅಂಶಗಳು Paid News ಅನ್ನು ಸರಿಯಾಗಿ ಅರ್ಥೈಸುತ್ತವೆ ಎನ್ನುವುದರ ಕುರಿತಾಗಿಯೂ ನಾವೆಲ್ಲ ಸ್ಪಷ್ಟವಾಗಿರಬೇಕು. Corruption-in-News-Mediaಸಚಿವಾಲಯವು ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಶಿಫಾರಸ್ಸುಗಳನ್ನು ಕುರುಡಾಗಿ ಒಪ್ಪಿಕೊಳ್ಳದೆ ಸಂಬಂಧಿತ ವ್ಯಕ್ತಿಗಳನ್ನೂ, ಮಾಧ್ಯಮದ ನಿಷ್ಣಾತರೊಂದಿಗೆ ಸಮಾಲೋಚಿಸಿ ಮೇಲಿನ ಎಲ್ಲಾ ಶಿಫಾರಸ್ಸುಗಳ ಅನುಷ್ಟಾನಕ್ಕೆ ಮುಂದಾಗಬೇಕೆಂದು ಕಮಿಟಿ ಒತ್ತಾಯಿಸುತ್ತದೆ.

’Paid News’ನ ಹಗರಣಗಳಲ್ಲಿ ಇಡೀ ಹಣದ ವಹಿವಾಟು ರಹಸ್ಯವಾಗಿ ನಡೆದಿರುತ್ತದೆ.ಈ ಗೌಪ್ಯ ವಹಿವಾಟನ್ನು ಬಹಿರಂಗಗೊಳಿಸುವ ಸಂಧರ್ಭದಲ್ಲಿ ಇಡೀ ಹಗರಣವನ್ನು ಸಾಕ್ಷಿ ಸಮೇತ ಸಾಬೀತುಗೊಳಿಸಲು ಕಷ್ಟವಾಗುತ್ತದೆ. ಉದಾಹರಣೆಗೆ ಚುನಾವಣೆಯ ಸಂಧರ್ಭದಲ್ಲಿ ಕಣದಲ್ಲಿರುವ ಅಭ್ಯರ್ಥಿಯೊಬ್ಬ ಸುದ್ದಿಗಾಗಿ ಹಣವನ್ನು ನೀಡಲು ನಿರಾಕರಿಸಿದರೆ ಮಾಧ್ಯಮಗಳಲ್ಲಿ ಆತನನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗುತ್ತದೆ. ಆದರೆ ಇದನ್ನು ಸಾಬೀತುಪಡಿಸಲು ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಮತ್ತು ಚುನಾವಣ ಕಮಿಷನ್‌ಗೆ ನಿಜಕ್ಕೂ ಕಷ್ಟಕರವಾಗುತ್ತದೆ. ೨೦೧೦ರಲ್ಲಿ ಬಿಡುಗಡೆಗೊಂಡ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಉಪ ಸಮಿತಿಯ ರಿಪೋರ್ಟನ ಪ್ರಕಾರ Paid News ಅನ್ನು ಮೌಖಿಕವಾಗಿ ಪುಷ್ಟೀಕರಿಸಬಹುದಾದರೂ ಅದನ್ನು ಬೆಂಬಲಿಸಲು ಅವಶ್ಯಕವಾದಂತಹ ದಾಖಲೆಗಳು ದೊರಕದೆ ಇಡೀ ಪ್ರಕರಣದ ಆರೋಪಗಳು ದುರ್ಬಲಗೊಳ್ಳುವ ಸಾಧ್ಯತೆಗಳಿವೆ. ಅಲ್ಲದೆ ದೃಶ್ಯ ಮಾಧ್ಯಮಗಳಲ್ಲಿ ಇದರ Coverage ಅತ್ಯಂತ ಕ್ಷಣಿಕ ಮತ್ತು ಕಡಿಮೆ ಅವಧಿಯಾಗಿರುವುದರಿಂದ ಅದನ್ನು ಪತ್ತೆ ಹಚ್ಚಲೂ ಕಷ್ಟವಾಗುತ್ತದೆ. ಆಂತಹ ಸಂಧರ್ಭದಲ್ಲಿ ಆಗ ಸಾಂಧರ್ಬಿಕ ಪುರಾವೆಗಳನ್ನು (circumstantial evidence) ಆಧಾರವಾಗಿ ಪರಿಗಣಿಸಬಹುದು. ಈ ಸಾಂಧರ್ಬಿಕ ಪುರಾವೆಗಳನ್ನು ಪ್ರಮಾಣೀಕರಿಸಲು, ಪ್ರಸಾರವಾದ ಕಾರ್ಯಕ್ರಮಗಳ ದೃಶ್ಯಾವಳಿಗಳನ್ನು ಸಂಪಾದಿಸಲು ಸಚಿವಾಲಯವು ಮಾಧ್ಯಮ ನಿಪುಣರೊಂದಿಗೆ ಮತ್ತು ಪ್ರಸಾರ ಭಾರತಿಯ ಸಹಯೋಗದೊಂದಿಗೆ ಸೂಕ್ತವಾದ ಕಾನೂನನ್ನು ರೂಪಿಸಬೇಕು

ಸಂಪಾದಕೀಯ ಬಳಗ, ಜಾಹೀರಾತು ವಿಭಾಗ, ಸಾರ್ವಜನಿಕ ಸಂಪರ್ಕ ವಿಭಾಗ, Lobbying ವಿಭಾಗ ಇವೆಲ್ಲವೂ ಒಂದಾಗಿ ಪರಸ್ಪರ ಹೊಂದಾಣಿಕೆ ಮತ್ತು ಸಹಕಾರಗಳ ಮೂಲಕವೇ Paid News ಹಗರಣ ಜನ್ಮ ತಾಳುತ್ತದೆ. ಈ Paid News ಹಗರಣಕ್ಕೆ ಮತ್ತೊಂದು ಪ್ರಮುಖ ಕಾರಣ ಕುಂಠಿತಗೊಳ್ಳುತ್ತಿರವ ಸಂಪಾದಕೀಯ ಮಂಡಳಿಯ/ವರದಿಗಾರರ ಸ್ವಾತಂತ್ರ. ಸಂಪಾದಕರ ಅಧಿಕಾರ ವ್ಯಾಪ್ತಿಯಲ್ಲಿ ಅಡ್ಡಬಂದು ಪ್ರತಿಯೊಂದರಲ್ಲೂ ಮೂಗು ತೂರಿಸುವ ಮಾಲೀಕರು, ಮಾರ್ಕೆಟಿಂಗ್ ಟೀಮ್‌ಗಳು ತಮ್ಮ ಈ ವರ್ತನೆಗಳ ಮೂಲಕ, ಸಂಪಾದಕರ ವೈಯಕ್ತಿಕ ಸ್ವಾತಂತ್ರವನ್ನು,ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರವನ್ನು ಮೊಟುಕುಗೊಳಿಸಲಾಗುತ್ತದೆ. paid-news-cartoonಪ್ರಾರಂಭದಲ್ಲಿ ಈ “Paid News/Advertorials” ನಂತಹ ಸಂಗತಿಗಳನ್ನು ಮಾರ್ಕೆಟಿಂಗ್ ಕಾರ್ಯತಂತ್ರವಾಗಿ ರೂಪಿಸಲಾಗುತ್ತಿತ್ತು. ಆದರೆ ಈಗ ಸಂಗತಿಗಳು ಅಭ್ಯರ್ಥಿಯ ಪರವಾಗಿ ಉಪಯುಕ್ತವಾದ Coverage ಗಳು ಮತ್ತು ವಿರೋಧಿ ಪಕ್ಷದ ಅಭ್ಯರ್ಥಿಯ ವಿರುದ್ಧವಾಗಿ ತೇಜೋವಧೆಯ ವರದಿಗಳು ಪ್ರಕಟಗೊಳ್ಳುವ ಹಂತಕ್ಕೆ ಬಂದು ತಲುಪಿದೆ.

ಈ ವರದಿಗಾರರ ಸ್ವಾತಂತ್ರ ಕುಂಠಿತಗೊಳ್ಳಲು ಚಾಲ್ತಿಯಲ್ಲಿರುವ ಕಾಂಟ್ರಾಕ್ಟ್ ಪದ್ಧತಿಯೂ ಪ್ರಮುಖವಾದ ಕಾರಣ. ಏಕೆಂದರೆ ಈ ಕಾಂಟ್ರಾಕ್ಟ್ ಪದ್ಧತಿಯಿಂದಾಗಿಯೇ ಈ ವರದಿಗಾರರ ಸ್ಥಾನಮಾನವು ಕೇವಲ ಒಬ್ಬ ಮಾರ್ಕೆಟ್ ಏಜೆಂಟರ ಮಟ್ಟಕ್ಕೆ ಕುಸಿಯುತ್ತದೆ. PCI ನ ಪ್ರಕಾರ ಸಂಬಂಧಪಟ್ಟ ಪತ್ರಿಕೆ/ಛಾನಲ್‌ನೊಂದಿಗೆ ಕಾಲಕಾಲಕ್ಕೆ ತನ್ನ ಕಾಂಟ್ರಾಕ್ಟ್ ಅನ್ನು ನವೀಕರಿಸಿಕೊಳ್ಳಲು ವರದಿಗಾರರು ನಿರಂತರವಾಗಿ ಫಲಿತಾಂಶವನ್ನು ಕೊಡುತ್ತಿರಬೇಕಾಗುತ್ತದೆ. ಈ ರೀತಿಯಾಗಿ ಕಾಂಟ್ರಾಕ್ಟ್ ಪದ್ಧತಿಯನ್ನು ದುರ್ಬಳಕೆ ಮಾಡಿಕೊಳ್ಳುವ ಮಾಲೀಕ ವರ್ಗ ಅನೇಕ ಬಾರಿ ವರದಿಗಾರರ ನೆತ್ತಿಯ ಮೇಲೆ ವರ್ಗಾವಣೆಯ ತೂಗುಕತ್ತಿ ನೇತಾಡಿಸುತ್ತಿರುತ್ತದೆ. ಕೆಲವು ನಗರಗಳನ್ನು ಹೊರತುಪಡಿಸಿ ಇತರೇ ಪಟ್ಟಣ ಮತ್ತು ಸಣ್ಣ ಹೋಬಳಿ ಮಟ್ಟದಲ್ಲಿ ಕೆಲಸ ಮಾಡುವ ವರದಿಗಾರರ ವೇತನ ಕನಿಷ್ಠ ಮಟ್ಟದಲ್ಲಿರುತ್ತದೆ. ಕೆಲವು ಬಾರಿ ಕಾಂಟ್ರಾಕ್ಟ್ ವರದಿಗಾರರಿಗೆ ಕಮಿಷನ್ ಪದ್ಧತಿಯಲ್ಲಿ ವೇತನವನ್ನು ನೀಡಲಾಗುತ್ತದೆ. ಸರ್ಕಾರ ನಿಗದಿಪಡಿಸಿದ ಕನಿಷ್ಠ ವೇತನಕ್ಕಿಂತಲೂ ಕಡಿಮೆ ಸಂಬಳವನ್ನು ಕೊಡುತ್ತಾರೆ. ಕಮಿಟಿಯು ಮಾಧ್ಯಮರಂಗದಲ್ಲಿರುವ ಎಲ್ಲಾ ಪತ್ರಕರ್ತರು ಕಾರ್ಯನಿರತ ಪತ್ರಕರ್ತರ ಆಕ್ಟ್ ನ ಅಡಿಯಲ್ಲಿ ಬರುವಂತೆ ಕಾನೂನು ರೂಪಿಸಬೇಕೆಂದು ಆಶಿಸಿದೆ.

PCI ನ ಉಪಸಮಿತಿಯ ವರದಿ “Election, Coverage, Monitoring in Gujarat” ಯಲ್ಲಿ Paid News ನ ಕಾಂಟ್ರಾಕ್ಟ್ ವಹಿವಾಟನ್ನು ಮೇಲ್ಮಟ್ಟದಲ್ಲಿ ರಹಸ್ಯವಾಗಿ ಅಂತಿಮಗೊಳಿಸಲಾಗುತ್ತದೆ, ನಂತರ ಕಾಲಕಾಲಕ್ಕೆ ನಮಗೆ ಮೇಲಿನಿಂದ ನಿರ್ದಿಷ್ಟ ಸುದ್ದಿಯನ್ನು ಅಥವಾ ನಿರ್ದಿಷ್ಟ ಫೋಟೋಗಳನ್ನು ಪ್ರಕಟಿಸಬೇಕೆಂದು words_for_price_paid-newsಆದೇಶಗಳು ಬರುತ್ತವೆ ಎಂದು ಹಲವಾರು ಸಂಪಾದಕರು ಮತ್ತು ಪತ್ರಕರ್ತರು ವಿವರಿಸಿದರು ಎಂದು ವಿವರಿಸಲಾಗಿದೆ. ಆದರೆ ಪತ್ರಕರ್ತರ ನೀತಿಸಂಹಿತೆಯ ನಿಬಂಧನೆ ಪ್ಯಾರಾ ೩೭ (A) ನ ಅಡಿಯಲ್ಲಿ ಯಾವುದೇ ಸಂಧರ್ಭದಲ್ಲಿಯೂ ಮಾಧ್ಯಮದ ಮಾಲೀಕರು ತಮ್ಮ ಸಂಪಾದಕರಿಗೆ ವಯುಕ್ತಿಕ ಹಿತಾಸಕ್ತಿಗಳನ್ನು ಪಾಲಿಸುವಂತೆ ನಿರ್ದೇಶನಗಳನ್ನು ನೀಡಬಾರದೆಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ೨೦೧೨ರ ಗುಜಾರಾತ್ ಚುನಾವಣೆಯ ಸಂಧರ್ಭದಲ್ಲಿ ೧೨೬ Paid News ಕೇಸುಗಳನ್ನು ದಾಖಲೆ ಸಮೇತ ಮಂಡಿಸಿದೆ. ಇದರಲ್ಲಿ ಕಣದಲ್ಲಿದ್ದ ೬೧ ಅಭ್ಯರ್ಥಿಗಳು Paid News ನ ಹಗರಣದಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದಾರೆ. ಇದೇ ಸಂಧರ್ಬದಲ್ಲಿ ಜಿಲ್ಲಾ ಮಟ್ಟದ ಪ್ರಮಾಣಪತ್ರ ಮತ್ತು ಮೇಲುಸ್ತುವಾರಿ ಕಮಿಟಿಯು ೪೧೪ Paid News ಹಗರಣಗಳನ್ನು ಪತ್ತೆಹಚ್ಚಿದೆ. ಈ Paid News ನಲ್ಲಿ ಭಾಗಿಯಾಗಿರುವ ಶಂಕಿತರು ತಾವು ವಕಾಲತ್ತು ವಹಿಸುವ ಅಭ್ಯರ್ಥಿಗಳ ಪರವಾಗಿ ಕರಪತ್ರಗಳನ್ನು ಹಂಚುತ್ತಾ ಆತನ ವಿರೋಧಿಗಳ ವಿರುದ್ಧವಾಗಿ ಅಪಪ್ರಚಾರ ಮಾಡುತ್ತಿದ್ದರು ಎನ್ನುವ ಮತ್ತೊಂದು ಅಘಾತಕಾರಿ ಸಂಗತಿ ಬಯಲಾಗಿದೆ.

ಮಾಧ್ಯಮರಂಗದ ಮಾಲೀಕರು ಮತ್ತು ಕಾರ್ಪೋರೇಟ್ ಸಂಸ್ಥೆಗಳ ನಡುವೆ ಆಸ್ತಿತ್ವದಲ್ಲಿರುವ ಖಾಸಗಿ ಒಡಂಬಡಿಕೆಗಳ ಸ್ವರೂಪದ ಕುರಿತು ಮಾತನಾಡುತ್ತ ಕಮಿಟಿಯು ಈ ಖಾಸಗಿ ಒಡಂಬಡಿಕೆಗಳ ವಿಧಿವಿಧಾನಗಳೇ ಈ Paid News ನಂತಹ ವಿದ್ಯಮಾನಗಳಿಗೆ ಅಪಾಯಕಾರಿಯಾದ ಮುನ್ನುಡಿಗಳಾಗಿರುತ್ತವೆ ಎಂದು ಕಳವಳ ವ್ಯಕ್ತಪಡಿಸುತ್ತದೆ. ಈ ಖಾಸಗಿ ಒಡಂಬಡಿಕೆಗಳ ಪ್ರಕಾರ ಕಾರ್ಪೋರೇಟ್ ಸಂಸ್ಥೆಗಳು ಜಾಹೀರಾತುಗಳನ್ನು ಪ್ರಕಟಿಸಿದ್ದಕ್ಕಾಗಿ, ಅನುಕೂಲಕರ ವರದಿಗಳನ್ನು ಪ್ರಕಟಿಸಿದ್ದಕ್ಕಾಗಿ ಮಾಧ್ಯಮರಂಗದ ಮಾಲೀಕತ್ವದ ಸಂಸ್ಥೆಗಳಿಗೆ ತನ್ನ ಶೇರುಗಳನ್ನು ವರ್ಗಾಯಿಸುತ್ತದೆ. ಆದರೆ ಈ ವ್ಯವಹಾರವು ಜರ್ನಲಿಸಂನ ನೀತಿನಿಯಮಗಳನ್ನು ಸ್ಪಷ್ಟವಾಗಿ ಉಲ್ಲಂಘಿಸುತ್ತದೆ ಹಾಗೂ Paid News/Advertorials ಮಾದರಿಯ ಅನೈತಿಕ ಕಾರ್ಯವಿಧಾನಕ್ಕೆ ನಾಂದಿ ಹಾಡುತ್ತದೆ ಎಂದು ಕಮಿಟಿಯ ಅಭಿಪ್ರಾಯವಾಗಿದೆ. ಈ ಈ ಖಾಸಗಿ ಒಡಂಬಡಿಕೆಗಳು ಸಂಪೂರ್ಣವಾಗಿ ಪಾರದರ್ಶಕವಾಗಿರಬೇಕೆಂದು, ಮತ್ತು ಮಾಧ್ಯಮಗಳ ಮಾಲೀಕರು ತಮ್ಮ ಎಲ್ಲ ಫೈನಾನ್ಸ್ ವ್ಯವಹಾರಗಳು, ಶೇರ್‌ಗಳ ಒಡೆತನದ ಕುರಿತಾಗಿ ತಮ್ಮ ವೆಬ್‌ಸೈಟುಗಳಲ್ಲಿ ವಿವರವಾದ ಮಾಹಿತಿ ನೀಡಬೇಕೆನ್ನುವ ನಿಯಮವನ್ನು ರೂಪಿಸಬೇಕೆಂದು ಸಚಿವಾಲಯವನ್ನು ಕಮಿಟಿಯು ಒತ್ತಾಯಿಸುತ್ತದೆ.

ಒಂದೇ ಮಾಲೀಕತ್ವದ ಸಂಸ್ಥೆಯು ವಿವಿಧ ಮಾಧ್ಯಮಗಳ (ಮುದ್ರಣ, ದೃಶ್ಯ, ರೇಡಿಯೋ) ಒಡೆತನವನ್ನು ಹೊಂದಿರುವುದು ಮತ್ತು ಸಾರ್ವಜನಿಕವಾಗಿ ಏಕಸ್ವಾಮ್ಯವನ್ನು ಸಾಧಿಸುವುದು Paid News ನಂತಹ ವಿದ್ಯಮಾನಗಳಿಗೆ ಕಾರಣವಾಗುವಂತಹ ಮತ್ತೊಂದು ಗಹನವಾದ ಸಂಗತಿ. ಈ ಏಕಸ್ವಾಮ್ಯಕ್ಕೆ ಕಡಿವಾಣ ಹಾಕಲು ಕಾನೂನು ಇಲ್ಲದಿರುವುದರಿಂದ ಇಲ್ಲಿ ’ಬಾಡಿಗೆ ಮಾಲೀಕರು’ ಜನ್ಮ ತಳೆಯುತ್ತಾರೆ. ಈ ಎಲ್ಲಾ ಸಂಕೀರ್ಣತೆಯು ಸುದ್ದಿ ಸಮಾಚಾರಗಳು ಅಥೆಂಟಿಕ್ ಸ್ವರೂದಲ್ಲಿ ಇರುವುದೇ ಇಲ್ಲ. ಕಮಿಟಿಯು ಇದನ್ನು ಉದಾಹರಿಸುತ್ತಾ ೨೦೦೮ರಲ್ಲಿ ವಾರ್ತಾ ಮತ್ತು ಪ್ರಚಾರ ಇಲಾಖೆಯು ಮೇಲ್ಕಾಣಿಸಿದ ಸಂಗತಿಗಳನ್ನು TRAI ನ ಗಮನಕ್ಕೆ ತರುತ್ತಾ ಕಂಪನಿಗಳು ಬಹುಮಾಲೀಕತ್ವಕ್ಕಾಗಿ ಲೈಸೆನ್ಸ್/ಪರವಾನಗಿ ಪಡೆಯಲು, ನೋಂದಣಿ ಮಾಡಲು ಸುಲುಭವಾಗದಂತೆ, ಭ್ರಷ್ಟಾಚಾರವು ಮಿತಿಮೀರದಂತೆ ಕಡಿವಾಣ ಹಾಕುವಂತಹ ಪಾಲಿಸಿಗಳನ್ನು, ಕಟ್ಟುನಿಟ್ಟಾದ ಕಾನೂನುಗಳನ್ನು ರೂಪಿಸಬೇಕೆಂದು ಅಭಿಪ್ರಾಯಪಡುತ್ತದೆ. ನಿರಂತರ ಪರಾಮರ್ಶೆಯ ನಂತರ ಮುದ್ರಣ, ದೃಶ್ಯ, ರೇಡಿಯೋ ವಲಯಗಳಲ್ಲಿ election-paid-newsಮಾಧ್ಯಮರಂಗದ ಎಲ್ಲಾ ಮಗ್ಗಲುಗಳನ್ನು ಒಳಗೊಳ್ಳುವಂತೆ ಬಹುತ್ವದ, ವೈವಿಧ್ಯತೆಯ ವಾತಾವರಣವನ್ನು ನಿರ್ಮಿಸಬೇಕೆಂದು ಫೆಬ್ರವರಿ ೨೦೦೯ರಲ್ಲಿ TRAI ಕೆಲವು ಪ್ರಮುಖ ಶಿಫಾರಸುಗಳನ್ನು ಮಾಡುತ್ತದೆ. ಎರಡು ವರ್ಷಕ್ಕೊಮ್ಮೆ ಇದನ್ನು ಪುನಃ ಪರಾಮರ್ಶಿಸಬೇಕೆಂದು ಸಹ ಶಿಫಾರಸ್ಸು ಮಾಡುತ್ತದೆ. ಇದರ ಆಧಾರದ ಮೇಲೆ ವಾರ್ತಾ ಮತ್ತು ಪ್ರಚಾರ ಇಲಾಖೆಯು Administrative Staff College of India, Hyderabad ನ ನೇತೃತ್ವದಲ್ಲಿ ಅಧ್ಯಯನವನ್ನು ಕೈಗೊಳ್ಳುತ್ತದೆ.೨೦೧೨ ರಲ್ಲಿ ವಾರ್ತಾ ಮತ್ತು ಪ್ರಚಾರ ಇಲಾಖೆಯು TRAI ಗೆ ಸಹ ಅಧ್ಯಯನವನ್ನು ಕೈಗೊಳ್ಳಬೇಕೆಂದು ಒತ್ತಾಯಿಸುತ್ತದೆ. ೧೩, ಫೆಬ್ರವರಿ ೨೦೧೩ರಲ್ಲಿ TRAI ಸಂಸ್ಥೆಯು Administrative Staff College of India, Hyderabad ನ ಸಹಬಾಗಿತ್ವದಲ್ಲಿ ಪರಾಮರ್ಶೆ ವರದಿಯನ್ನು ಒಪ್ಪಿಸುತ್ತದೆ. ಇದರ ಆಧಾರದ ಮೇಲೆ ಕಮಿಟಿಯು ೨೦೧೨-೧೩ ನೇ ಸಾಲಿನ ಅನುದಾನ ಬೇಡಿಕೆಯ ಮೇಲಿನ ೩೦ ಸೆಕೆಂಡ್ ವರದಿಯಲ್ಲಿ ಶೀಘ್ರವಾಗಿ ಮಾಧ್ಯಮಗಳ ಮಾಲೀಕತ್ವದ ಏಕಸ್ವಾಮ್ಯತೆಯನ್ನು ಕೊನೆಗಾಣಿಸಬೇಕೆಂದು ಒತ್ತಾಯಿಸುತ್ತದೆ. Paid News ಅನೈತಿಕತೆಯು ಕೇವಲ ಭ್ರಷ್ಟಾಚಾರವನ್ನು ಹುಟ್ಟುಹಾಕುವುದಿಲ್ಲ, ಜೊತೆಗೆ ಓದುಗರನ್ನೂ ಮತ್ತು ವೀಕ್ಷಕರನ್ನೂ ದಾರಿ ತಪ್ಪಿಸುತ್ತದೆ, ಭ್ರಷ್ಟರನ್ನಾಗಿಸುತ್ತದೆ. ಇದು ಪ್ರಜಾಪ್ರಭುತ್ವದ ಪ್ರಕ್ರಿಯೆಗೂ ಸಹ ಕಳಂಕವನ್ನು ತರುತ್ತದೆ. PCI ನ ಉಪಸಮಿತಿಯು ೨೦೦೯ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯ ಕುರಿತಾಗಿ ಹೇಳುತ್ತ “ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವೆಂದು ಕರೆಯಲ್ಪಡುವ ಪತ್ರಿಕಾರಂಗವು Paid News ನಂತಹ ಹಗರಣಗಳ ಮೂಲಕ ಭ್ರಷ್ಟಾಚಾರದಲ್ಲಿ ಹೂತುಹೋಗಿದೆ” ಎಂದು ಕಟುವಾಗಿ ಟೀಕಿಸುತ್ತದೆ. ಇದರಿಂದಾಗಿ ಪ್ರಜಾಪ್ರಭುತ್ವದ ಸಂರಚನೆ ದುರ್ಬಲಗೊಳ್ಳುತ್ತದೆ ಮಾತ್ರವಲ್ಲ ರಾಜಕಾರಣದಲ್ಲಿ ಅನೈತಿಕ ಹಣದ ಒಳಹರಿವು ಜಾಸ್ತಿಯಾಗುತ್ತದೆಂದು ಕಮಿಟಿಯು ಆತಂಕ ವ್ಯಕ್ತಪಡಿಸಿದೆ. ವಿಭಿನ್ನ ವಲಯಗಳಿಂದ ಬಂದ ಅಭಿಪ್ರಾಯದ ಪ್ರಕಾರ ಜನಪ್ರತಿನಿಧಿಗಳ ಅಕ್ಟ್ ೧೯೫೧ಗೆ ತಿದ್ದುಪಡಿ ತಂದು Paid News ಎನ್ನವುದು ಚುನಾವಣಾ ಅಪರಾಧ, ಶಿಕ್ಷೆಗೆ ಅರ್ಹ ಎಂದು ಉಲ್ಲೇಖಿಸಬೇಕೆಂದು ಕಮಿಟಿ ಅಭಿಪ್ರಾಯಪಡುತ್ತದೆ. ಈ ತಿದ್ದುಪಡಿಯನ್ನು ಚುನಾವಣಾ ಆಯೋಗವೂ ಸೂಚಿಸಿದೆ.

ಮತದಾನದ ದಿನಕ್ಕಿಂತ ೪೮ ಗಂಟೆಗಳ ಮೊದಲು ಚುನಾವಣಾ ಪ್ರಚಾರವನ್ನು ನಿಷೇಧಿಸಿರುವಂತಹ ಕಾನೂನನ್ನು ಮುದ್ರಣ, ದೃಶ್ಯ, ರೇಡಿಯೋ ಮಾಧ್ಯಮಗಳಿಗೂ ಅನ್ವಯಿಸಬೇಕೆಂದು ಕಮಿಟಿ ಒತ್ತಾಯಿಸುತ್ತದೆ. ಜೊತೆಗೆ ಅಭ್ಯರ್ಥಿಗಳ ಚುನಾವಣಾ ವೆಚ್ಚದ ಮಿತಿಯನ್ನು ಹೆಚ್ಚಿಸಬೇಕು. ರಾಷ್ಟ್ರೀಯ ಪಕ್ಷಗಳು ಮತ್ತು ಪ್ರಾದೇಶಿಕ ಪಕ್ಷಗಳ ನಡುವೆ ಚುನಾವಣಾ ವೆಚ್ಚದ ಮಿತಿಯು ವಿಭಿನ್ನವಾಗಿರಬೇಕು ಮತ್ತು ಅಂತರವಿರಬೇಕು. ಈ Paid Newsನ ಕುರಿತಾದ ದೂರುಗಳನ್ನು ಸ್ವೀಕರಿಸಲು ಮತ್ತು ತ್ವರಿತಗತಿಯಲ್ಲಿ ವಿಚಾರಣೆ ನಡೆಸಲು ವಿಶೇಷ ಸೆಲ್ ಒಂದನ್ನು ಸ್ಥಾಪಿಸಬೇಕು. ಅಭ್ಯರ್ಥಿ ಯಾವ ಪತ್ರಿಕೆಗಳಿಗೆ, ದೃಶ್ಯ ಮಾಧ್ಯಮಗಳಿಗೆ ಸಂದರ್ಶನವನ್ನು ನೀಡುತ್ತಾರೋ, ಯಾವ ಪತ್ರಿಕೆಗಳಲ್ಲಿ, ದೃಶ್ಯ ಮಾಧ್ಯಮಗಳಲ್ಲಿ ಅವರ ಕುರಿತಾದ ವಿವರಗಳು ಹೆಚ್ಚಾಗಿ ಪ್ರಕಟಗೊಳ್ಳುತ್ತವೆಯೋ ಅಂತಹ ಪತ್ರಿಕೆಗಳಲ್ಲಿ, ದೃಶ್ಯ ಮಾಧ್ಯಮಗಳಲ್ಲಿ ತಮ್ಮ ಶೇರುಗಳನ್ನು, ತಾವು ತೊಡಗಿಸಿದ ಬಾಂಡ್‌ಗಳನ್ನು ಬಹಿರಂಗಪಡಿಸಬೇಕು ಎಂದು ಕಮಿಟಿ ಆಗ್ರಹಿಸುತ್ತದೆ.

ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಕಾನೂನು ಮತ್ತು ಸಂಸದೀಯ ವ್ಯವಹಾರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ PAID _NEWSಸಹಯೋಗದೊಂದಿಗೆ ಚುನಾವಣ ಕಮಿಷನ್‌ನ ಶಿಫಾರಸ್ಸುಗಳನ್ನು ಜಾರಿಗೊಳಿಸಬೇಕು. Paid News ನಂತಹ ಅವ್ಯವಹಾರಗಳನ್ನು ಪತ್ತೆ ಅದರ ವಿರುದ್ಧ ಹಚ್ಚಿ ಕಟ್ಟುನಿಟ್ಟಾದ ಕ್ರಮಗಳನ್ನು ಜರುಗಿಸಲು Regulatory bodies/organisations/professional bodies ಗಳಾದ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ, ಭಾರತೀಯ ಸುದ್ದಿ ಪ್ರಸಾರ ಮಂಡಳಿ, ಭಾರತೀಯ ಪ್ರಸಾರ ಫೆಡರೇಶನ್, ಭಾರತೀಯ ಜಾಹಿರಾತು ಕೌನ್ಸಿಲ್, ಎಲೆಕ್ಟ್ರಾನಿಕ್ ಮೀಡಿಯಾ ಮಾನಿಟರಿಂಗ್ ಕೇಂದ್ರ, ಎಡಿಟರ್ಸ್ ಗಿಲ್ಡ್ ಇಂಡಿಯಾ ಮತ್ತು ಸಿವಿಲ್ ಸೊಸೈಟಿ, ಯೂನಿಯನ್‌ಗಳು ಇನ್ನೂ ಮುಂತಾದ ಕಾನೂಬದ್ಧ ಸಂಸ್ಥೆಗಳನ್ನು ಮತ್ತು Guidelines/Norms/Codes/Acts ಗಳಾದ ಕಾರ್ಯನಿರತ ಪತ್ರಕರ್ತರ ಸಂಘ, ಭಾರತೀಯ ಸುದ್ದಿ ಪ್ರಸಾರ ಮಂಡಳಿ ಕೋಡ್, PCI Act, ಕಮರ್ಶಿಯಲ್ ಜಾಹೀರಾತು ನಿಯಂತ್ರಣದ ದೂರದರ್ಶನ ಕೋಡ್, Press and Registration of Books and Publications Act, 1867, the Cable Television Network (Regulation) Act, 1995, the Representation of Peoples Act, 1951, Income Tax Act, 1961, the Companies Act 1956 ಗಳನ್ನು ಬಳಸಿಕೊಳ್ಳಬೇಕು. ಆದರೆ ಮೇಲೆ ತಿಳಿಸಿದ ಕಾನೂನುಬದ್ಧ ಸಂಸ್ಥೆಗಳು Paid News ನಂತಹ ಅವ್ಯವಹಾರಗಳನ್ನು ನಿಯಂತ್ರಿಸುವಷ್ಟು ಪರಿಣಾಮಕಾರಿಗಿಲ್ಲ ಎಂದು ಕಮಿಟಿ ದೂರಿದೆ. PCI ಮತ್ತು ಎಡಿಟರ್ಸ್ ಗಿಲ್ಡ್ ಇಂಡಿಯಾಗಳಂತಹ ಸಂಸ್ಥೆಗಳು ತಾವು ಸಂಬಂಧಪಟ್ಟ ಮಾಧ್ಯಮಗಳ ಮೇಲೆ ಒತ್ತಡವನ್ನು ಹೇರಬಹುದೇ ಹೊರತು ಅಧಿಕಾರ ಬಳಸಿ ಕಟ್ಟುನಿಟ್ಟಾದ ಕ್ರಮ ಜರುಗಿಸಲು ಸಾಧ್ಯವಿಲ್ಲ ಎಂದು ಹೇಳಿವೆ. ತಮ್ಮ ಸಂಸ್ಥೆಗಳು ಕಾನೂನುಬದ್ಧವಾದ ಸರ್ಕಾರಿ ಸಂಸ್ಥೆಗಳಾದರೂ ಹಲ್ಲುಗಳಿಲ್ಲದ ಅಸಹಾಯಕ ಸಂಸ್ಥೆಗಳಾಗಿವೆ ಎಂದು ಒಪ್ಪಿಕೊಳ್ಳುತ್ತಾರೆ. ಸರ್ಕಾರವೇ ನೇಮಿಸಿದ ಎಲೆಕ್ಟ್ರಾನಿಕ್ ಮೀಡಿಯಾ ಮಾನಿಟರಿಂಗ್ ಕೇಂದ್ರವು ಕೇವಲ ಶಿಫಾರಸ್ಸನ್ನು ಕೊಡುವ ಸಂಸ್ಥೆಯಾಗಿದೆಯೇ ಹೊರತು ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲು ಅಧಿಕಾರವೇ ಇಲ್ಲ, ೨೭೬ ಜಿಲ್ಲೆಗಳಲ್ಲಿರುವ ಜಿಲ್ಲಾ ಮಟ್ಟದ ಮತ್ತು ೧೬ ರಾಜ್ಯಗಳಲ್ಲಿರುವ ರಾಜ್ಯ ಮಟ್ಟದ ಮಾನಿಟರಿಂಗ್ ಕಮಿಟಿಗಳು ಚುನಾವಣಾ ಸಂಧರ್ಭದಲ್ಲಿ ಮಾತ್ರ Paid News ಅವ್ಯವಹಾರಗಳನ್ನು ಪರಿಶೀಲಿಸುತ್ತದೆ ಹೊರತಾಗಿ ಮಾಧ್ಯಮಗಳ ಮೇಲೆ ಕ್ರಮ ಕೈಗೊಳ್ಳುವುದಿಲ್ಲ ಎಂದು ಕಮಿಟಿಯು ಅಭಿಪ್ರಾಯಪಟ್ಟಿದೆ. ಮತ್ತೊಂದು ಕಡೆ ಮಾಧ್ಯಮಗಳು ಅವ್ಯವಹಾರಗಳನ್ನು ನಿಯಂತ್ರಿಸಲು ಸ್ವತಃ News and current affairs channels, non-news and general entertainment channels, ASCI ಗಳನ್ನು ಸ್ಥಾಪಿಸಿಕೊಂಡಿವೆ. ಆದರೆ ಇದು ಕೇವಲ ಕಣ್ಣೊರೆಸುವ ತಂತ್ರವಾಗಿದೆ ಎಂದು ಕಮಿಟಿ ಅಭಿಪ್ರಾಯ ಪಟ್ಟಿದೆ. ಇನ್ನು News and Current Affairs Channels ೨೦೦೮ರಲ್ಲಿ ತಾನು ೧೯೮ ದೂರುಗಳನ್ನು ಸ್ವೀಕರಿಸಿದ್ದು ಅದರಲ್ಲಿ Paid News ಅವ್ಯವಹಾರಕ್ಕೆ ಸಂಬಂಧಪಟ್ಟಂತೆ ಒಂದು ದೂರೂ ಬಂದಿರಲಿಲ್ಲ ಎಂದು ಹೇಳಿದೆ. ಇದು ಕಣ್ಣೊರೆಸುವ ತಂತ್ರವೆನ್ನುವ ಅಪಾದನೆಯನ್ನು ಪುಷ್ಟೀಕರಿಸುತ್ತದೆ.

Paid News ಅವ್ಯವಹಾರಕ್ಕೆ ಸಂಬಂಧಪಟ್ಟಂತೆ ೨೦೦೯ -೨೦೧೩ರವೆರೆಗೆ ಸುಮಾರು ೪೦ ದೂರುಗಳು ದಾಖಲಾಗಿದ್ದವು. ಇದರಲ್ಲಿ ಕಾಲುಭಾಗದಷ್ಟು ಪ್ರಕರಣಗಳು ಸೂಕ್ತ ದಾಖಲಾತಿಗಳಿಲ್ಲದೆ ಬಿದ್ದು ಹೋದವು. ೧೭ ಪ್ರಕರಣಗಳಲ್ಲಿ ಸಂಬಂಧಪಟ್ಟ ಮಾಧ್ಯಮಗಳಿಗೆ ಮೌಖಿಕ/ಲಿಖಿತ ಎಚ್ಚರಿಕೆಗಳನ್ನು ಮಾತ್ರ ನೀಡಿ ಮುಕ್ತಾಯಗೊಳಿಸಲಾಯಿತು.

ಉದಾಹರಣೆಗೆ:
ಮೆ/ಸ ಜಿಂದಾಲ್ ಸ್ಟೀಲ್ ಪವರ್ ಲಿ. ವರ್ಸಸ್ ಮೆ/ಸ. Zee ಲಿ. ನಡುವಿನ ಕೇಸ್ ಹಾಲಿಯಲ್ಲಿ ಚಾಲ್ತಿಯಲ್ಲಿರುವ ಇಡೀ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಸಾಬೀತುಪಡಿಸುತ್ತದೆ. ಮೆ/ಸ. Zee ಲಿ ಗುಂಪು News Broadcasters Association and Rules framed under the Cable Television Networks (regulation) Act, 1995ರ ಅಡಿಯಲ್ಲಿ ಬರುವ ಎಲ್ಲಾ ನೀತಿನಿಯಮಗಳನ್ನು, ಹಕ್ಕುಬಾಧ್ಯತೆಗಳನ್ನು ಉಲ್ಲಂಘಿಸಿ ತಪ್ಪು ಮಾಹಿತಿಗಳನ್ನೊಳಗೊಂಡ, ಅಸತ್ಯವಾದ, ಅವಹೇಳನಕಾರಿ ಪ್ರೋಗ್ರಾಮ್‌ಗಳನ್ನು ಪ್ರಸಾರ ಮಾಡಿದೆ ಎಂದು ಮೆ/ಸ ಜಿಂದಾಲ್ ಸ್ಟೀಲ್ ಪವರ್ ಲಿ. ಗುಂಪು ಆಪಾದನೆಗಳನ್ನು ಮಾಡಿತು. ಲೈಸನ್ಸ್ ಅನ್ನು ಕೊಡುವ ಅಧಿಕಾರ ವಾರ್ತಾ ಮತ್ತು ಪ್ರಚಾರ ಸಚಿವಾಲಯಕ್ಕೆ ಇದ್ದ ಹಾಗೆಯೇ ಅಕ್ರಮಗಳು ಕಂಡುಬಂದರೆ ಲೈಸನ್ಸ್ ಅನ್ನು ಹಿಂತೆಗೆದುಕೊಳ್ಳುವ ಅಧಿಕಾರವೂ ವಾರ್ತಾ ಮತ್ತು ಪ್ರಚಾರ ಸಚಿವಾಲಯವಕ್ಕೆ ಇರುತ್ತದೆ. ಆದರೆ ಸಾಕ್ಷಾಧಾರಗಳನ್ನು ಮಂಡಿಸುವ ಸಂಧರ್ಭದಲ್ಲಿ ಇದು ಸಬ್ ಜುಡೀಸ್ ಆಗುತ್ತದೆ ಎನ್ನುವ ನೆಪವೊಡ್ಡಿ ವಾರ್ತಾ ಮತ್ತು ಪ್ರಚಾರ ಸಚಿವಾಲಯವು ತನ್ನ ದೂರಿನ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ಜಿಂದಾಲ್ ಗುಂಪು ಆರೋಪಿಸಿತು. ಇದಕ್ಕೆ ಪ್ರತ್ಯುತ್ತರವಾಗಿ ಈ ವಿಷಯವನ್ನು Inter Ministerial Committee (IMC) ಗೆ ಹಸ್ತಾಂತರಿಸುತ್ತ ಇಡೀ ಪ್ರಕರಣವನ್ನು ಕೂಲಂಕುಶವಾಗಿ ತನಿಖೆ ನಡೆಸಿ IMC ನೀಡುವ ವರದಿಯನ್ನು ನ್ಯಾಯಾಂಗದ ಪರಿಶೀಲನೆಗೆ ಕೊಡಲಾಗುವುದು ಎಂದು ವಾರ್ತಾ ಮತ್ತು ಪ್ರಚಾರ ಸಚಿವಾಲಯವು tv-mediaಕಮಿಟಿಗೆ ಸ್ಪಷ್ಟೀಕರಣ ನೀಡಿತು. ಆದರೆ ವಾರ್ತಾ ಮತ್ತು ಪ್ರಚಾರ ಸಚಿವಾಲಯದ ಸಬ್ ಜುಡೀಸ್‌ನ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ನಿರ್ಣಯಗಳ ಕುರಿತಾದ ಗೊಂದಲಗಳು, ಎರಡೂ ಗುಂಪುಗಳ ನಡುವಿನ ಈ ಕಲಹ ಸಾರ್ವಜನಿಕ ಹಿತಾಸಕ್ತಿಗೆ ಒಳಪಡುತ್ತದೆಯೇ ಅಥವಾ ಕಾನೂನು ಪರಿಶೀಲನಗೆ ಒಳಪಡುತ್ತದೆಯೇ ಎಂದು ನಿರ್ಣಯಿಸುವಲ್ಲಿನ ಅನಿಶ್ಚತೆ ಮತ್ತು ಕಾನೂನುಬದ್ಧವಾದ NBSA ದಂತಹ regulatory Bodies ಗಳ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗದಂತಹ ಅಸಹಾಯಕತೆ ಇವೆಲ್ಲವನ್ನೂ ವಾರ್ತಾ ಮತ್ತು ಪ್ರಚಾರ ಸಚಿವಾಲಯವು ಕೈಗೆತ್ತಿಕೊಂಡು ಅದನ್ನು ಕ್ರಮಬದ್ಧವಾಗಿ ಸರಿಪಡಿಸಬೇಕೆಂದು ಕಮಿಟಿ ಆದೇಶಿಸಿದೆ. ಆದಷ್ಟೂ ಕಡಿಮೆ ಅವಧಿಯಲ್ಲಿ ಈ ಕಲಹಗಳನ್ನು ಮುಕ್ತಾಯಗೊಳಿಸಬೇಕೆಂದು ಒತ್ತಾಯಿಸಿದೆ. ಅಲ್ಲದೆ ಇಡೀ ವ್ಯಾಜ್ಯವು ಕೋರ್ಟಿನ ಮಟ್ಟಿಲೇರಿದ್ದರೂ ಆಡಳಿತ ವ್ಯವಸ್ಥೆಯು ಸ್ಥಗಿತಗೊಳ್ಳದಂತೆ ಎಚ್ಚರವಹಿಬೇಕೆಂದು ಕಮಿಟಿ ಅಭಿಪ್ರಾಯಪಟ್ಟಿದೆ.

ಇತರೇ ದೇಶಗಳು ಈ Paid News ನಂತಹ ಅವ್ಯವಹಾರಗಳನ್ನು ನಿಯಂತ್ರಿಸಲು ರೂಪಿಸಿದ ಕಾನೂನಗಳನ್ನು ವಾರ್ತಾ ಮತ್ತು ಪ್ರಚಾರ ಸಚಿವಾಲಯವು ಅಧ್ಯಯನ ಮಾಡಬೇಕು ಮತ್ತು ಅದನ್ನು ನಮ್ಮ ಸಂವಿಧಾನಕ್ಕೆ ಅನುಗುಣವಾಗಿ ಬಳಸಿಕೊಳ್ಳಬೇಕು ಎಂದು ಕಮಿಟಿ ಹೇಳುತ್ತದೆ.

ಸಚಿವಾಲಯವು PCI ಗೆ ಹೆಚ್ಚಿನ ಕಾನೂಬದ್ಧ ಅಧಿಕಾರವನ್ನು ಕೊಡಬೇಕೆಂದು ಈ ಸಂಸ್ಥೆಗೆ ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಅಧಿಕಾರಕ್ಕಾಗಿ ಅಕ್ಟ್‌ನಲ್ಲಿ ಸೂಕ್ತ ತಿದ್ದುಪಡಿ ತರಬೇಕೆಂದು ಕಮಿಟಿಗೆ ಮನವರಿಕೆ ಮಾಡಿಕೊಟ್ಟಿದೆ. ಆದರೆ PCI ಯನ್ನು ಬಲಪಡಿಸಲು ವಾರ್ತಾ ಮತ್ತು ಪ್ರಚಾರ ಸಚಿವಾಲಯವು ತೋರಿಸುತ್ತಿರುವ ನಿರಾಸಕ್ತಿ ಕುರಿತು ಕಳವಳ ವ್ಯಕ್ತಪಡಿಸಿದೆ. ಇದರ ಒಟ್ಟಾರೆ ಸ್ವರೂಪದ ಫಲವಾಗಿ ಈ PCIನ ಭಾಗವಾಗಿರುವ ಮುದ್ರಣ ವಲಯದ ಮಾಲೀಕರು Paid News ನಂತಹ ಅವ್ಯವಹಾರಗಳ ಕುರಿತಾದ ವರದಿಗಳನ್ನು ಸಾರ್ವಜನಿಕವಾಗಿ ಮಂಡಿಸದಂತೆ ಒತ್ತಾಯ ತರುತ್ತಿದ್ದಾರೆ ಎಂದು PCIನ ಸದಸ್ಯರೊಬ್ಬರು ಹೇಳಿಕೆಯನ್ನು ನೀಡಿದ್ದರು. ಇನ್ನೂ ಕೆಟ್ಟದಾದ್ದೆಂದರೆ ಅತ್ಯಂತ ತೆಳುವಾದ ಬಹುಮತದ ಮೂಲಕ (ಈ ಸಂದರ್ಭದಲ್ಲಿ ಕೈ ಎತ್ತುವುದರ ಮೂಲಕ) ಉಪಸಮಿತಿಯ ವರದಿಯನ್ನು ತಿರಸ್ಕರಿಸಲಾಯಿತು. ಅಲ್ಲದೆ ಈ ಬಗೆಯ ತೆಳುವಾದ ಬಹುಮತದ ಕುರಿತಾಗಿ PCIನ ಇತರೇ ಸದಸ್ಯರ ಭಿನ್ನಮತದ ಅಭಿಪ್ರಾಯ ಮಂಡನೆಗೆ ಅವಕಾಶವೇ ಸಿಗಲಿಲ್ಲ. ಹೀಗಾಗಿ PCIನ ಸಂಯೋಜನೆಯನ್ನೇ ಪುನಃ ರೂಪಿಸಬೇಕಾಗಿದೆ ಎಂದು ಕಮಿಟಿ ಅಭಿಪ್ರಾಯ ವ್ಯಕ್ತಪಡಿಸಿದೆ. ೧೯೭೮ರಲ್ಲಿ PCI ಚಾಲ್ತಿಗೆ ಬಂದಿತು. ಆಗ ಕೇವಲ ಮುದ್ರಣ ಮಾಧ್ಯಮವು ಅದರ ಭಾಗವಾಗಿತ್ತು. ಎಲೆಕ್ಟ್ರಾನಿಕ್ ಮಾಧ್ಯಮವು ಕೇಂದ್ರ ಸರ್ಕಾರದ ಹಿಡಿತದಲ್ಲಿತ್ತು. ಈ ಕಾರಣಕ್ಕಾಗಿ PCI ಗೆ ಕೇವಲ ಮುದ್ರಣ ಮಾಧ್ಯಮವನ್ನು ನಿಯಂತ್ರಿಸುವ ಅಧಿಕಾರ ಕೊಡಲಾಗಿತ್ತು. ಆದರೆ ದುರಂತವೆಂದರೆ ಕಳೆದೆರೆಡು ದಶಕಗಳಲ್ಲಿ ಎಲೆಕ್ಟ್ರಾನಿಕ್ ಮಾಧ್ಯಮವು ಬೃಹದಾಕಾರವಾಗಿ ಬೆಳೆದಿದ್ದು ಬಹುಪಾಲು ಖಾಸಗಿಯವರ ಹಿಡಿತದಲ್ಲಿದೆ. ಆದರೆ ಇಂದಿಗೂ PCI ಇದನ್ನು ಸರಿಪಡಿಸಿ ಎಲೆಕ್ಟ್ರಾನಿಕ್ ಮಾಧ್ಯಮವನ್ನು ವ್ಯಾಪ್ತಿಯೊಳಗೆ ತರಬೇಕೆಂದು ಪ್ರಯತ್ನಿಸಿಲ್ಲ ಎಂದು ಕಮಿಟಿಯು ಆತಂಕ ವ್ಯಕ್ತ ಪಡಿಸಿದೆ.ಅಲ್ಲದೆ ಇದನ್ನು Cable TV Network Regulation Act, 1995 ಅಡಿಯಲ್ಲಿ Compliance of Provisions ಅನ್ವಯವಾಗುವಂತೆ ನಿಯಮಾವಳಿಗಳನ್ನು ರೂಪಿಸಿಲ್ಲ ಎಂದು ಕಮಿಟಿ ಆರೋಪಿಸಿದೆ.

PCIನ ಉಪಸಮಿತಿಯು ೨೦೦೯ರ ಚುನಾವಣೆಯ ಕುರಿತಾದ ‘Paid News: How corruption in the Indian media und ermines democracy’ Realising the dangers of ‘Paid News’ ವರದಿಯನ್ನು ೩೦ನೇ ಜುಲೈ ೨೦೧೦ರಲ್ಲಿ ಮಂಡಿಸಿತು. ಆದರೆ ಇಂದಿಗೂ PCI ಈ ವರದಿಯ ಕುರಿತಾಗಿ ತೀರ್ಮಾನ ತೆಗೆದುಕೊಳ್ಳದೆ ಮೀನಮೇಷ ಎಣಿಸುತ್ತಿರುವುದಕ್ಕೆ ಕಮಿಟಿಯು ಕಳವಳ ವ್ಯಕಪಡಿಸಿದೆ. ಆ ವರದಿಯ ವಿವರಗಳನ್ನಾದರೂ ಸಾರ್ವಜನಿಕ ಚರ್ಚೆ ನಡೆಸುವಂತೆ ಕಮಿಟಿ ಆಗ್ರಹಿಸಿದಾಗ PCI ಈ ವರದಿಯ ಸಾಧಕಬಾಧಕಗಳನ್ನು ಪರಾಮರ್ಶಿಶಲು GoM ಅನ್ನು ರಚಿಸಲಾಗಿದೆ ಎಂದು ತಿಳಿಸಿತು. ಅಲ್ಲದೆ Paid News ವಿದ್ಯಾಮಾನವು ತುಂಬಾ ಸೂಕ್ಷ್ಮ ವಿಷಯವಾದ್ದರಿಂದ ಸಂಬಂಧಪಟ್ಟ ಸಚಿವಾಲಯಗಳ ಸಹಯೋಗದೊಂದಿಗೆ ಚರ್ಚಿಸಿದ ನಂತರವಷ್ಟೇ ಮುಂದಿನ ತೀರ್ಮಾನಗಳನ್ನು ತೆಗೆದುಕೊಳ್ಳಲಾಗುವುದು ಮತ್ತು ಸಚಿವಾಲಯವು ಈ GoM ಅನ್ನು ಪುನರೂಪಿಬೇಕೆಂದು ಕ್ಯಾಬಿನೆಟ್ ಕಮಿಟಿಯ ಮುಂದೆ ಮನವಿ ಸಲ್ಲಿಸಿದೆ ಎಂದು ತಿಳಿಸಲಾಗಿತ್ತು. ಆದರೆ GoM ನ ಶಿಫಾರಸುಗಳನ್ನು ಕ್ಯಾಬಿನೆಟ್ ಕಮಿಟಿಯ ಮುಂದೆ ಮಂಡಿಸಿ ಚರ್ಚಿಸಲೂ ಸಹ ತಡ ಮಾಡುತ್ತಿರುವುದಕ್ಕೆ ಕಮಿಟಿಯು ತನ್ನ ಅತೃಪ್ತಿಯನ್ನು ವ್ಯಕ್ತಪಡಿಸಿದೆ.

ಆದರೆ ಈ ವರದಿಯ ಕುರಿತಾಗಿ ಅತ್ಯಂತ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಕಮಿಟಿಯು ಸಚಿವಾಲಯಕ್ಕೆ ಆಗ್ರಹಿಸಿದೆ. ಪದ್ಧತಿಯ ಪ್ರಕಾರ Directorate of Advertising and Visual Publicity (DAVP) ಅಡಿಯಲ್ಲಿ ಜಾಹೀರಾತುಗಳ ನಿಯಂತ್ರಣ ಕಾಯ್ದೆ ಬರುತ್ತದೆ. ಈ DAVP ಯು ಸರ್ಕಾರದ ನೋಡಲ್ ಮಲ್ಟಿಮೀಡಿಯಾ ಕೇಂದ್ರೀಕೃತ ಏಜೆನ್ಸಿ ಎಂದು ಮಾನ್ಯತೆ ಮಾಡಲಾಗಿದೆ ಮತ್ತು ಇದು ವಾರ್ತಾ ಮತ್ತು ಪ್ರಚಾರ ಇಲಾಖೆಯ ವ್ಯಾಪ್ತಿಗೆ ಬರುತ್ತದೆ. ಆದರೆ ಸರ್ಕಾರವನ್ನು ಟೀಕಿಸುವ, ವಿಮರ್ಶಿಸುವ ಖಾಸಗಿ ಚಾನೆಲ್‌ಗಳನ್ನು DAVP ಸಂಸ್ಥೆಯು ನಿರ್ಲಕ್ಷಿಸುತ್ತದೆ ಮತ್ತು ಇನ್ನೂ ಮುಂದುವರೆದು ಅಂತಹ ಮಾಧ್ಯಮಗಳಿಗೆ ಜಾಹೀರಾತನ್ನೇ ನಿರಾಕರಿಸುತ್ತದೆ ಎಂದು ಕಮಿಟಿಗೆ ದೂರು ನೀಡಲಾಗಿತ್ತು. ಇದನ್ನು ಸೀರಿಯಸ್ ಆಗಿ ಪರಿಗಣಿಸಿದ ಕಮಿಟಿಯು ಈ ಜಾಹೀರಾತು ನಿಯಂತ್ರಣ ಕಮಿಟಿಯು ಸಾರ್ವಜನಿಕ ಹಿತಾಸಕ್ತಿಯಾಗಿದೆ. ಇಂಡಿಯಾದಂತಹ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ DAVP ಯಂತಹ ಸಂಸ್ಥೆಯು ಪಾರದರ್ಶಕವಾಗಿ ಮತ್ತು ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸಬೇಕೆಂದು ಕಮಿಟಿ ಆಗ್ರಹಿಸಿದೆ. ಇದಕ್ಕೆ ತಗಲುವ ಖರ್ಚುವೆಚ್ಚಗಳನ್ನು ಸಾರ್ವಜನಿಕ ಲೆಕ್ಕಪತ್ರ ಇಲಾಖೆಗೆ ಮಂಡಿಸಬೇಕೆಂದು ಕಮಿಟಿ ಆಗ್ರಹಿಸಿದೆ. ಇದೇ ಸಂದರ್ಭದಲ್ಲಿ ಈ ಜಾಹೀರಾತಿನ ಪ್ರದರ್ಶನದಲ್ಲಿ ದೊರೆಯುವ ವಿನಾಯ್ತಿ ಮೊತ್ತವನ್ನು ಮತ್ತು ಜಾಹೀರಾತಿನಿಂದ ಬಂದ ಮೊತ್ತವನ್ನು ತಮ್ಮ ವೆಬ್‌ಸೈಟಿನಲ್ಲಿ ಪ್ರಕಟಿಸಬೇಕೆಂದು ಕಮಿಟಿ ಖಾಸಗಿ ಮಾಧ್ಯಮದವರಿಗೆ ಆಗ್ರಹಿಸಿದೆ.

Paid News ನ ಅವ್ಯವಹಾರಗಳಲ್ಲಿ ಮಾಧ್ಯಮಗಳು ಭಾಗಿಯಾಗಿರುವುದು ಸಾಬೀತಾದಲ್ಲಿ ಆ ಅಪರಾಧಕ್ಕೆ ವಿಧಿಸುವ ಶಿಕ್ಷೆಯ ಪ್ರಮಾಣ ಅತ್ಯಂತ ಕ್ಷುಲ್ಲಕವಾಗಿದೆ. Cartoon-ECಮುದ್ರಣ ಮಾಧ್ಯಮಗಳಿಗೆ PCI Act ನ ಅಡಿಯಲ್ಲಿ ಷೋಕಾಸ್ ನೋಟೀಸ್ ಜಾರಿಗೊಳಿಸುವುದು, ಮಾಡಿದ ತಪ್ಪಿಗೆ ವಿವರಣೆ ಕೇಳುವುದು ಮತ್ತು ಕಡೆಗೆ ಜಾಹೀರಾತನ್ನು ರದ್ದು ಮಾಡುವುದಕ್ಕೆ ಮಾತ್ರ ಶಿಕ್ಷೆಯ ಪ್ರಮಾಣವನ್ನು ಸೀಮಿತಗೊಳಿಸಲಾಗಿದೆ. ದೃಶ್ಯ ಮಾಧ್ಯಮಗಳಿಗೆ ಲೈಸೆನ್ಸ್ ಅನ್ನು ರದ್ದು ಮಾಡುವುದಕ್ಕೆ ಮಾತ್ರ ಶಿಕ್ಷೆಯ ಪ್ರಮಾಣವನ್ನು ಸೀಮಿತಗೊಳಿಸಲಾಗಿದೆ. ಇದನ್ನು ಇನ್ನಷ್ಟು ವಿಸ್ತರಿಸಿ ಜೈಲು ಶಿಕ್ಷೆಯನ್ನೂ ಸಹ ಇದರ ವ್ಯಾಪ್ತಿಯೊಳಗೆ ಬರುವಂತೆ ಕಾನೂನು ರೂಪಿಸಬೇಕೆಂದು ಕಮಿಟಿ ಆಗ್ರಹಿಸಿದೆ. ಈ ಶಿಕ್ಷೆ ನಿಗದಿಪಡಿಸುವ/ವಿಧಿಸುವ ಅಧಿಕಾರ ಯಾವ ಸಂಸ್ಥೆ/ಇಲಾಖೆಯ ವ್ಯಾಪ್ತಿಯೊಳಗೆ ಬರಬೇಕೆಂಬ ವಿಷಯದಲ್ಲಿ ಸ್ಪಷ್ಟಪಡಿಸಬೇಕೆಂದು ಕಮಿಟಿ ಆಗ್ರಹಿಸಿದೆ. ೨೦೦೯ರ ಚುನಾವಣೆಯಲ್ಲಿ ಉತ್ತರಪ್ರದೇಶದಲ್ಲಿ PCI ಪತ್ತೆಹಚ್ಚಿದ Paid News ನ ಅವ್ಯವಹಾರವನ್ನು ಪರಿಶೀಲಿಸಿದ ಚುನಾವಣಾ ಆಯೋಗವು ತನ್ನ ಅಧಿಕಾರವನ್ನು ಬಳಸಿಕೊಂಡು Representation of People Act, 1951 ರ ಸೆಕ್ಷನ್ ೧೦ (A)ದ ಅಡಿಯಲ್ಲಿ ಸಂಬಂಧಪಟ್ಟ ಅಭ್ಯರ್ಥಿಯ ಆಯ್ಕೆಯನ್ನು ಅಮಾನತುಗೊಳಿಸಿತು. ಆದರೆ ೨೦೦೯ರ ಮಹಾರಾಷ್ಟ್ರದ ವಿಧಾನಸಭಾ ಚುನಾವಣೆಯ ಸಂಧರ್ಭದಲ್ಲಿ ಪತ್ತೆಯಾದ Paid News ನ ಅವ್ಯವಹಾರಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥ ಅಭ್ಯರ್ಥಿಯ ವಿರುದ್ಧ ಚುನಾವಣಾ ಆಯೋಗವು ಕ್ರಮ ಕೈಗೊಳ್ಳಲು ಮುಂದಾದಾಗ ಅದಕ್ಕೆ Representation of People Act, 1951 ರ ಸೆಕ್ಷನ್ ೧೦ (A)ದ ಅಡಿಯಲ್ಲಿ ಅಧಿಕಾರವಿದೆಯೇ ಎಂದು ಪರಿಶೀಲಿಸಬೇಕೆಂದು ಸುಪ್ರೀಂಕೋರ್ಟನಲ್ಲಿ ಅಪೀಲ್ ಸಲ್ಲಿಸಲಾಯಿತು. ಇಂತಹ ವಿಪರ್ಯಾಸಗಳನ್ನು ಸರಿಪಡಿಸಿ ಶಿಕ್ಷೆಯನ್ನು ವಿಧಿಸುವ ಅಧಿಕಾರ ಚುನಾವಣಾ ಆಯೋಗಕ್ಕೆ ಇರಬೇಕೆಂದು ಕಮಿಟಿ ಅಭಿಪ್ರಾಯ ಪಟ್ಟಿದೆ. PCI ಸುಮಾರು ೪೦ ಪ್ರಕರಣಗಳನ್ನು Paid News ನ ಅವ್ಯವಹಾರಕ್ಕೆ ಸಂಬಂಧಪಟ್ಟಿದ್ದು ಎಂದು ಪತ್ತೆ ಹಚ್ಚಿತು. ಅದರಲ್ಲಿ ೧೧ ಪ್ರಕgಣಗಳನ್ನು ಸೂಕ್ತ ಸಾಕ್ಷಾಧಾರಗಳಿಲ್ಲದೆ ಖುಲಾಸೆಗೊಳಿಸಲಾಯಿತು. ಈ ಎಲ್ಲ ಹಿನ್ನೆಲೆಯಲ್ಲಿ ಕಮಿಟಿಯು PCI ಅನ್ನು ಪುನರಚಿಸಬೇಕೆಂದು ಆ ಮೂಲಕ ಅದನ್ನು ಬಲಪಡಿಸಬೇಕೆಂದು ಶಿಫಾರಸು ಮಾಡಿದೆ.

Companies Act, ೧೯೫೬ ರ ಅಡಿಯಲ್ಲಿ ತಮ್ಮ ವ್ಯವಹಾರಗಳಿಗೆ ತೊಡಗಿಸುವ ಹಣದ ಮೂಲವನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸಬೇಕಾದ ಉತ್ತರದಾಯಿತ್ವ ಮಾಧ್ಯಮಗಳ ಮೇಲಿದೆ.

ಕಡೆಗೆ ಸಾರಾಂಶವಾಗಿ ಹೇಳಬೇಕೆಂದರೆ ವಾರ್ತಾ ಮತ್ತು ಪ್ರಚಾರ ಇಲಾಖೆ, Editors Guild of India, Securities and Exchange Board of India, Telecom Regulatory Authority of India, self regulatory bodies, research bodies, other stakeholders, etc. ಇಡೀ ಪ್ರಕರಣದ ಗಂಭೀರತೆಯನ್ನು ಅರಿತುಕೊಂಡಿವೆ. ವಾರ್ತಾ ಮತ್ತು ಪ್ರಚಾರ ಇಲಾಖೆಯು ಈ ಗಂಭೀರತೆಯನ್ನು ಅರಿತುಕೊಂಡು ಸೂಕ್ತವಾದ ಕಾನೂನುನನ್ನು ರಚಿಸಿ ತಪ್ಪಿತಸ್ಥರು ಶಿಕ್ಷೆಗೊಳಗಾಬೇಕೆಂದು ಕಮಿಟಿಯು ಒತ್ತಾಯಿಸಿದೆ.