ಮಂಗಳೂರಿನಲ್ಲಿ “ನುಡಿಸಿರಿ”ಗೆ ಪರ್ಯಾಯವಾಗಿ “ಜನ ನುಡಿ”

ಸ್ನೇಹಿತರೇ, ಪ್ರತಿವರ್ಷ ಮಂಗಳೂರು ಜಿಲ್ಲೆಯ ಮೂಡಬಿದ್ರೆಯಲ್ಲಿ ಮೋಹನ್‌ ಆಳ್ವ ಎನ್ನುವ ಉದ್ಯಮಿಯ ಶಿಕ್ಷಣ ಸಂಸ್ಥೆಯಲ್ಲಿ “ನುಡಿಸಿರಿ” ಎನ್ನುವ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವ ನಡೆಯುತ್ತದೆ. ಈ ಉತ್ಸವದ ಹಿನ್ನೆಲೆ ಮತ್ತು ಅದರ ನೈಜ ಉದ್ದೇಶದ ಬಗೆ ನಾಡಿನ ಕೆಲವು ಜನರಿಗೆ ಕೆಲವು ಸಂಶಯಗಳಿವೆ. ಕಳೆದ ವರ್ಷ ನಾಡಿನ ಹಿರಿಯ ಸಾಹಿತಿ ಅನಂತಮೂರ್ತಿಯವರು ಈ “ನುಡಿಸಿರಿ” ಕಾರ್ಯಕ್ರಮದ ಉದ್ಘಾಟಕರು ಎಂದು ಘೋಷಣೆಯಾದ ಸಂದರ್ಭದಲ್ಲಿ ಮಂಗಳೂರಿನ ಪತ್ರಕರ್ತ ನವೀನ್ ಸೂರಿಂಜೆಯವರು ವರ್ತಮಾನ.ಕಾಮ್‌ನಲ್ಲಿ “ಆಳ್ವಾಸ್ ನುಡಿಸಿರಿಗೆ ಅನಂತಮೂರ್ತಿಯವರು ಹೋಗುವುದು ಯುಕ್ತವೇ” ಎಂಬ ಲೇಖನ […]

ಜನನುಡಿಗಾಗಿ ಮಂಗಳೂರಿಗೆ…

ಅಭಿಮತ ಮಂಗಳೂರು ಮತ್ತೊಂದು ‘ಜನನುಡಿ’ ಯೊಂದಿಗೆ ಸಜ್ಜಾಗಿದೆ. ಬದುಕನ್ನೇ ನುಡಿಯಾಗಿಸಿಕೊಂಡವರು ಮಾತು, ಹರಟೆ, ಹಾಡು, ಕತೆ, ಕವಿತೆ ಎಂದು ಎರಡು ದಿನಗಳ ಕಾಲ ಮಂಗಳೂರಿನಡೆಗೆ ನಡೆಯುತ್ತಿದ್ದಾರೆ. ಹಿಂದಿನ ವರ್ಷಗಳಂತೆ ಈ ಬಾರಿಯೂ ವರ್ತಮಾನ ಬಳಗದ ಅನೇಕ ಗೆಳೆಯರು ಅಲ್ಲಿರುತ್ತಾರೆ. ನೆನಪಿರಲಿ ಕಾರ್ಯಕ್ರಮ ಡಿಸೆಂಬರ್ 19 ಮತ್ತು 20 (ಶನಿವಾರ ಮತ್ತು ಭಾನುವಾರ). ಮಂಗಳೂರು ನಗರದ ಶಾಂತಿಕಿರಣದಲ್ಲಿ. ದೇವನೂರು ಮಹದೇವ ಉದ್ಘಾಟಿಸಿ ಮಾತನಾಡಲಿದ್ದಾರೆ. ಎಚ್.ಎಸ್.ಅನುಪಮ, ಕಡಿದಾಳ್ ಶಾಮಣ್ಣ, ಜಾನ್ ಫರ್ನಾಂಡಿಸ್, ಶ್ರೀನಿವಾಸ ಕಕ್ಕಿಲಾಯ, ಬಾನು ಮುಷ್ತಾಕ್, ಡಿ.ಉಮಾಪತಿ, ಬಿ.ಟಿ.ಜಾಹ್ನವಿ, […]

ಜನನುಡಿ 2014 : ಒಂದು ವರದಿ

– ವಸಂತ ಕಡೇಕಾರ್ “ಕೋಮುವಾದಿ ಗಾಢಾಂಧಕಾರದ ಸುರಂಗದ ಕೊನೆಯಲ್ಲೊಂದು ಬೆಳಕಿನ ಕಿಂಡಿ, ಜನನುಡಿ” – ದಿನೇಶ್ ಅಮಿನ್ ಮಟ್ಟು ಇವು ದಿನೇಶ ಅಮಿನ್ ಮಟ್ಟು ಅವರು ಡಿಸೆಂಬರ್ 13-14ರಂದು ಮಂಗಳೂರಿನಲ್ಲಿ ನಡೆದ ಜನನುಡಿ ಸಮಾವೇಶದ “ಸಮಕಾಲೀನ ಸವಾಲುಗಳು – ಐಕ್ಯತೆಯ ಅಗತ್ಯತೆ’ ಬಗೆಗಿನ ಗೋಷ್ಟಿಯಲ್ಲಿ ಅಧ್ಯಕ್ಷೀಯ ಭಾಷಣದ ಕೊನೆಯಲ್ಲಿ ಆಡಿದ ಮಾತುಗಳು. ತಾರ್ಕಿಕವಾಗಿ ತಣ್ಣಗೆ ವಿಚಾರ ಮಂಡಿಸುವ ದಿನೇಶ್ ಇಂತಹ ‘ಅತಿಶಯೋಕ್ತಿ’ಯಂತೆ ಕಾಣುವ ಮಾತುಗಳನ್ನು ಸಾಮಾನ್ಯವಾಗಿ ಆಡುವುದಿಲ್ಲವಲ್ಲ ಎಂದು ಬಹಳ ಜನರಿಗೆ (ಅದರಲ್ಲೂ ಜನನುಡಿ ಸಮಾವೇಶದಲ್ಲಿ ಭಾಗವಹಿಸದೆ ಇದ್ದವರಿಗೆ) ಆಶ್ಚರ್ಯವಾಗಬಹುದು. ಎರಡೂ […]

ಜನನುಡಿಯಲ್ಲಿ ದಿನೇಶ್ ಅಮಿನ್ ಮಟ್ಟು ಮತ್ತು ಡಿ.ಉಮಾಪತಿ

ಮಂಗಳೂರು – 14-12-14: ಬಹುಸಂಖ್ಯಾತ ಹಿಂದೂಗಳ ಕೋಮುವಾದ ಹಾಗೂ ಅಲ್ಪಸಂಖ್ಯಾತರ ಕೋಮುವಾದಗಳನ್ನು ಒಂದೇ ತಕ್ಕಡಿಯಲ್ಲಿಟ್ಟು ನೋಡಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಹಾಗೂ ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಭಾನುವಾರ ಅಭಿಪ್ರಾಯಪಟ್ಟರು. ಅವರು ಮಂಗಳೂರಿನಲ್ಲಿ ನಡೆದ ಜನನುಡಿ ಸಮಾವೇಶದಲ್ಲಿ ಮಾತನಾಡಿದರು. ಹಿಂದೂಗಳ ಕೋಮುವಾದ ತಾವು ಬಹುಸಂಖ್ಯಾತರು ಎಂಬ ಅಹಂಕಾರದಿಂದ ಹುಟ್ಟಿದ್ದು. ಅದರ ದುರುದ್ದೇಶ ಅಲ್ಟಸಂಖ್ಯಾತ ಸಮುದಾಗಳ ಮೇಲೆ ದಾಳಿ ಮಾಡಿ ಅವರನ್ನು ಮಟ್ಟಹಾಕುವುದು. ಆದರೆ ಅಲ್ಪಸಂಖ್ಯಾತರ ಕೋಮುವಾದ ಅಭದ್ರತೆ, ಆತಂಕ ಹಾಗೂ ಅಸಹಾಯಕತೆಗಳಿಂದ ಹುಟ್ಟಿದ್ದು. ತಮ್ಮ […]

ಮಂಗಳೂರಿನಲ್ಲಿ “ಜನನುಡಿ” ಸಮಾವೇಶ ಆರಂಭ

ಎರಡು ದಿನಗಳ “ಜನನುಡಿ” ವಿಚಾರ ಸಂಕಿರಣ ಡಾ.ಎಚ್.ಎಸ್. ಅನುಪಮ ಅವರ ಆಶಯ ಮಾತುಗಳೊಂದಿಗೆ ಕೆಲ ಹೊತ್ತಿಗೆ ಮೊದಲು ಆರಂಭವಾಯಿತು. ಅವರ ಮಾತುಗಳ ಕೆಲ ತುಣುಕುಗಳು ಇಲ್ಲಿವೆ: ಬಂಡವಾಳಶಾಹಿಯ ಮೂಲಗುಣ ತನ್ನ ಇಡುಗಂಟನ್ನು ಕಾಪಿಟ್ಟುಕೊಳ್ಳುವುದು. ಇಡುಗಂಟನ್ನು ಕಾಯ್ದುಕೊಳ್ಳಲು ಯಾವುದೇ ರಾಜಿಗೂ ಸಿದ್ಧವಾಗುವುದು ಅದರ ಚಾಳಿ. ಇಂದು ಅದೇ ಬಂಡವಾಳಶಾಹಿ ಸಾಹಿತ್ಯ ಕ್ಷೇತ್ರಕ್ಕೂ ಪ್ರವೇಶಿಸಿರುವುದು ಅಪಾಯಕಾರಿ. ಅರಸ, ದೇವರು ಮತ್ತು ದಾನಿಗಳ ದೃಷ್ಟಿ ಸಾಹಿತ್ಯ ಕ್ಷೇತ್ರದ ಮೇಲೆ ಬೀಳಬಾರದು. ಅಂತಹ ಬೆಳವಣಿಗೆಗಳನ್ನು ವಿರೋಧಿಸುವ ಚಾರಿತ್ರಿಕ ಕಾರಣಕ್ಕಾಗಿ ಸಮಾನ ಮನಸ್ಕ ಸಂಘಟನೆಗಳೆಲ್ಲ […]