ನಡೆದರಷ್ಟೇ ಮೂಡುವುದು ಹೊಸ ದಾರಿ, ನುಡಿದರಷ್ಟೇ ಕೇಳುವುದು ಹೊಸ ಹಾಡು

ಬಿ.ಶ್ರೀಪಾದ ಭಟ್ ಎಲ್ಲವೂ ಆಗಿ ಹೋಗಿದೆ, ಮತ್ತು ಎಲ್ಲವೂ ಉಳಿದಿದೆ ಆದರೆ ನಾವು ಮುನ್ನುಗ್ಗುವದೇ ನಮ್ಮ ಕಾರ್ಯಭಾರ ರಸ್ತೆಗಳನ್ನು ನಿರ್ಮಿಸುತ್ತಾ ಸಾಗುವುದು ಸಮುದ್ರವನ್ನು ಸೀಳಿಕೊಂಡ ರಸ್ತೆಗಳು ಪಯಣಿಗನೆ, ನಿನ್ನ ಹೆಜ್ಜೆ ಗುರುತುಗಳೇ ರಸ್ತೆ ಮತ್ತೇನಿಲ್ಲ ಪಯಣಿಗನೇ ಅಲ್ಲಿ ರಸ್ತೆಯೇ ಇಲ್ಲ ನಡೆದರಷ್ಟೇ ಮೂಡುವುದು ಹೊಸ ದಾರಿ ನಮ್ಮ ನಡೆಯೇ ರಸ್ತೆ ಅಂಟೋನಿಯೋ ಮಕಾಡೋ ನಮ್ಮ ವರ್ತಮಾನದ ಪರಿಸ್ಥಿತಿ ಎಷ್ಟು ಕ್ರೌರ್ಯದಿಂದ ತುಂಬಿಕೊಂಡಿದೆಯೆಂದರೆ ಪ್ರಸ್ತುತ ಸಂದರ್ಭದಲ್ಲಿ ಇಲ್ಲಿನ ಸಮಾಜ, ಸಂಸ್ಕೃತಿ ಕಂಡರಿಯದಷ್ಟು ಸಂಕೀರ್ಣವಾಗಿದೆ, ಜಟಿಲವಾಗಿದೆ, ವಿಕೃತಗೊಂಡಿದೆ. ಮುಂದಿನ ಹೆಜ್ಜೆ […]

ಜನನಾಯಕರೇ, ಸೆನ್ಸಾರ್ ಮಾಡಿ ಮಾತನಾಡಿ

– ಡಾ.ಎಸ್.ಬಿ. ಜೋಗುರ ನುಡಿದರೆ ಮುತ್ತಿನ ಹಾರದಂತಿರಬೇಕು.. ಎನ್ನುವ ಶರಣರ ವಾಣಿ ಆ ಮಾತು ಹೌದು..ಹೌದು ಎಂದು ಲಿಂಗ ಮೆಚ್ಚುವಂತಿರಬೇಕು ಎನ್ನುತ್ತದೆ. ಕೊನೆಗೂ ಇಲ್ಲಿ ಲಿಂಗ ಎನ್ನುವುದು ನಮ್ಮ ಮನ:ಸಾಕ್ಷಿ ಎಂದರ್ಥ. ಮಾತು ಮನುಷ್ಯನ ಮನಸಿನ ಕನ್ನಡಿ, ವ್ಯಕ್ತಿತ್ವದ ಭಾಗ.ಹೀಗಿರುವಾಗ ಮನಸೊಪ್ಪದ ಮಾತನಾಡಿ ಪರಿತಪಿಸುವ ಅಗತ್ಯವಾದರೂ ಏನಿದೆ..? ಮಾತನಾಡುವವರಲ್ಲಿ ಮೂರು ಪ್ರಬೇಧಗಳಿವೆ ಒಂದನೆಯದು ಬರೀ ಮಾತನಾಡುತ್ತಾ ಹೋಗುವದು ಅದರ ಅಡ್ಡ ಪರಿಣಾಮ, ಉದ್ದ ಪರಿಣಾಮಗಳ ಬಗ್ಗೆ ಇವರು ಕಿಂಚಿತ್ತೂ ತಲೆ ಕೆಡಿಸಿಕೊಳ್ಳದವರು. ಎರಡನೆಯವರು ಮೊದಲು ಮಾತನಾಡಿ ಆಮೇಲೆ […]

ಸಿದ್ಧಲಿಂಗಯ್ಯ ಮತ್ತು ಆಳ್ವಾಸ್ ನುಡಿಸಿರಿ : ಅಂಗೈ ಹುಣ್ಣಿಗೆ ನಿಲುಗನ್ನಡಿ ಬೇಕಿಲ್ಲ

– ಬಿ. ಶ್ರೀಪಾದ ಭಟ್   22 ಅಕ್ಟೋಬರ್, 1964. ಸಾಹಿತ್ಯದಲ್ಲಿನ ಸಾಧನೆಗಾಗಿ ತನಗೆ ನೀಡಿದ ನೊಬೆಲ್ ಪ್ರಶಸ್ತಿಯನ್ನು ತಿರಸ್ಕರಿಸುತ್ತ ಚಿಂತಕ ಜೀನ್ ಪಾಲ್ ಸಾರ್ತೆ, “ನಾನು ಯಾವಾಗಲೂ ಸರ್ಕಾರ ಅಥವಾ ಅಫೀಶಯಲ್ ಆಹ್ವಾನಗಳನ್ನು,ಪುರಸ್ಕಾರಗಳನ್ನು ಒಪ್ಪಿಕೊಳ್ಳುವುದಿಲ್ಲ. ತಾನು ಒಂದು ಸಂಸ್ಥೆಯಾಗುವ ಎಲ್ಲಾ ಸಾಧ್ಯತೆಗಳನ್ನು ಲೇಖಕನು ತಿರಸ್ಕರಿಸಬೇಕು. ಲೇಖಕನ ಬದ್ಧತೆಯ ಅಗತ್ಯತೆಯನ್ನಾಧರಿಸಿ ನನ್ನ ನಿಲುವನ್ನು ರೂಪಿಸಿಕೊಂಡಿದ್ದೇನೆ. ರಾಜಕೀಯ, ಸಾಮಾಜಿಕ, ಸಾಹಿತ್ಯಕ ಸ್ಥಾನಗಳನ್ನು ಅಲಂಕರಿಸುವ ಲೇಖಕ ಅದರ ಮಿತಿಯೊಳಗೊಳಪಟ್ಟೇ ವರ್ತಿಸಬೇಕು ಮತ್ತು ಮುಖ್ಯವಾಗಿ ಅದು ಕೇವಲ ಆತನ ಲೋಕವಾಗಿರಬೇಕು” ಎಂದು […]

ಏರುತಿದೆ ಜನಸಂಖ್ಯೆ, ಹೆಚ್ಚುತಿದೆ ಅಸಮಾನತೆ

– ಡಾ. ಅರುಣ್ ಜೋಳದಕೂಡ್ಲಿಗಿ ನಾವಿಂದು ಸಾಂಪ್ರದಾಯಿಕವಾಗಿ ಜನಸಂಖ್ಯಾ ದಿನಾಚರಣೆಯನ್ನು ಆಚರಿಸುತ್ತಾ ಬಂದಿದ್ದೇವೆ. ಇದು ಕೇವಲ ಆಚರಣೆಯಾಗುವುದರಿಂದ ಉಪಯೋಗವಿಲ್ಲ. ಈ ಸಂದರ್ಭದಲ್ಲಿ ಜನಸಂಖ್ಯೆಯ ಹೆಚ್ಚಳ ಮತ್ತದರ ದುಷ್ಪರಿಣಾಮಗಳ ಬಗ್ಗೆ ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸಬೇಕು. ಪೂರಕವಾದ ಯೋಜನೆಗಳನ್ನು ರೂಪಿಸಬೇಕು. ಅಂತೆಯೇ ಆಯಾ ದೇಶವು ಜನಸಂಖ್ಯೆಯ ನಿಯಂತ್ರಣದಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕಿದೆ. ಸದ್ಯಕ್ಕಿರುವ ಜಗತ್ತಿನ ಜನಸಂಖ್ಯೆಯ ಜಾಡು ಹಿಡಿದು ಸುತ್ತಾಡಿದರೆ ಭಯ ಆವರಿಸುತ್ತದೆ. ಮುಂದಿನ ಭವಿಷ್ಯದ ಬಗ್ಗೆ ಆತಂಕ ಉಂಟಾಗುತ್ತದೆ. ಜಗತ್ತಿನ ಜನಸಂಖ್ಯಾ ಬೆಳವಣಿಗೆ ವಾರ್ಷಿಕ ಶೇ 1.14 ರಷ್ಟಿದೆ. […]

“ನುಡಿಸಿರಿ”ಯ ನಂತರ

– ಪ್ರಸಾದ್ ರಕ್ಷಿದಿ “ಆಳ್ವಾಸ್ ನುಡಿಸಿರಿ” ಮತ್ತು ಅಲ್ಲಿನ ವಿಚಾರಗಳ ಬಗೆಗೆ ನಡೆಯುತ್ತಿರುವ ಚರ್ಚೆ ಹಾಗೂ ರವಿ ಕೃಷ್ಣಾರೆಡ್ಡಿಯವರ ಲೇಖನ ಇವುಗಳನ್ನು ನೋಡಿ ಕೆಲವು ವಿಷಯಗಳನ್ನು ಹಂಚಿಕೊಳ್ಳಬೇಕೆನಿಸಿತು. ರವಿಯವರ ನಿಲುವು ಸರಿಯಾಗಿಯೇ ಇದೆ. ಇದಕ್ಕೆ ಪೂರಕವಾಗಿ ನಾನು ಕೆಲವು ಸಂಗತಿಗಳನ್ನು ಹೇಳಬಯಸುತ್ತೇನೆ. ಮೊದಲನೆಯದಾಗಿ ಆಳ್ವಾಸ್ ಪ್ರತಿಷ್ಟಾನ ಮತ್ತು ಅದರ ಚಟುವಟಿಕೆಗಳ ಬಗ್ಗೆ. ಆಳ್ವರ ಸಾಂಸ್ಕೃತಿಕ ಆಸಕ್ತಿಗಳನ್ನು ನಮ್ಮಂತವರು ಹಲವು ವರ್ಷಗಳಿಂದ ನೋಡುತ್ತ ಬಂದಿದ್ದೇವೆ. ಬಹುಶಃ ಮೋಹನ ಆಳ್ವರ ಅಭಿರುಚಿಗಳ ಬಗ್ಗೆ ಮತ್ತು ಅವರ ಸಾಂಸ್ಕೃತಿಕ ಆಸಕ್ತಿಗಳ ಬಗ್ಗೆ […]