ನಿರಂತರವಾಗಿ ಉತ್ಪಾದಿಸಲ್ಪಡುತ್ತಿರುವ ವೈಭವದ ಮಿಥ್‌ಗಳು

– ಬಿ.ಶ್ರೀಪಾದ ಭಟ್

ಅವನು ಹೇಳುತ್ತಿದ್ದ, ನಾವು ಭವಿಷ್ಯವನ್ನು ರೂಪಿಸುತ್ತಿದ್ದೇವೆ ಎಂದು, ಆದರೆ ಯಾವ ಬಗೆಯ ಭವಿಷ್ಯವನ್ನು ರೂಪಿಸುತ್ತಿದ್ದೇವೆ ಎಂದು ಒಂದು ಚಣ ಸಹ ಚಿಂತಿಸಲು ಸಹ ನಾವು ವಿಫಲರಾಗಿದ್ದರಿಂದ, ಇಗೋ ಇಲ್ಲಿದೆ ಆ ಭವಿಷ್ಯ.
– ಎಚ್.ಜಿ.ವೆಲ್ಸ್

ಯಾವುದಾದರೂ ಒಂದು ಸಂದರ್ಭವನ್ನು, ಒಂದು ಮೂಲವನ್ನು ಆಧರಿಸಿ ಸತ್ಯವೆಂದು ವರದಿ ಮಾಡುವುದು ಮುಕ್ತ ಪತ್ರಿಕೋದ್ಯಮದ ತಿರುಳು ಅಲ್ಲ. ಬದಲಾಗಿ ವಿವಿಧ ಸಾಂದರ್ಭಿಕ ದೃಷ್ಟಾಂತಗಳನ್ನು, ವಿವಿಧ ಮೂಲಗಳನ್ನು ಆಧರಿಸಿ ಸತ್ಯವು ಹೊರಹೊಮ್ಮಬೇಕಾಗುತ್ತದೆ ಮತ್ತು ಅದೇ ಮುಕ್ತ ಪತ್ರಿಕೋದ್ಯಮದ ಮಾದರಿ ಎಂದು ಅಮೇರಿಕಾದ ಖ್ಯಾತ ಪತ್ರಕರ್ತ ವಾಲ್ಟರ್ ಲಿಪ್‌ಮೆನ್ ಅವರು ಬರೆಯುತ್ತಾರೆ.

ಖ್ಯಾತ ಸೋಷಿಯಾಲಿಜಿಸ್ಟ್ ಅಂಡ್ರಿ ಬೆಟೀಲೆ ಅವರು “ನೆಹರೂ ಮತ್ತು ಅಂಬೇಡ್ಕರ್ ಅವರಿಗೆ ಸೆಕ್ಯುಲರಿಸಂ ಸ್ಟೇಟ್ ಎನ್ನುವುದು ಕೇವಲ ಒಂದು ಅನುಕೂಲಸಿಂಧು ಚಿಂತನೆಯಾಗಿರಲಿಲ್ಲ, nehru_ambedkarಬದಲಾಗಿ ಅದು ಒಂದು ದೇಶದ ಗೌರವದ ಸಂಕೇತವೆಂದೇ ನಂಬಿದ್ದರು. ಈ ಸೆಕ್ಯುಲರಿಸಂ ಸ್ಟೇಟ್ ಅನ್ನು ಅಂಬೇಡ್ಕರ್ ಅವರು ಬಹಳ ಸಮರ್ಪಕವಾಗಿ ಅರ್ಥ ಮಾಡಿಕೊಂಡಿದ್ದರು. ಕೇವಲ ದೇಶದಲ್ಲಿನ ರಾಜಕೀಯ ಮತ್ತು ಸಾಮಾಜಿಕ ಪ್ರಕ್ಷುಬ್ಧ ವಾತಾವರಣವು ಸೆಕ್ಯುಲರಿಸಂ ಎಳೆಯನ್ನು ದುರ್ಬಲಗೊಳಿಸುವುದಿಲ್ಲ. ಬದಲಾಗಿ ಅದು ಸೆಕ್ಯುಲರಿಸಂ ಅನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ಆದರೆ ಇಂಡಿಯಾದ ಜನಪರ ಚಿಂತಕರು ಮತ್ತು ಪ್ರಜ್ಞಾವಂತರು ಅತ್ಯಂತ ಶಾಂತಿಯುತ ವಾತಾವರಣದ ಸಂದರ್ಭದಲ್ಲಿ ಸೆಕ್ಯುಲರಿಸಂ ಅನ್ನು ಓಲೈಸಿ ಅಥವಾ ಸ್ವೀಕರಿಸಿ ಪ್ರಕ್ಷುಬ್ಧ, ನೀತಿಗೆಟ್ಟ ವಾತಾವರಣದಲ್ಲಿ ಸೆಕ್ಯುಲರಿಸಂ ಅನ್ನು ತ್ಯಜಿಸಿದರೆ ಅದು ಅವರ ಆತ್ಮದ್ರೋಹವಾಗುತ್ತದೆ ಮತ್ತು ದೇಶವನ್ನು ಸೋಲಿಸಿದಂತೆಯೇ ಸರಿ” ಎಂದು ಹೇಳುತ್ತಾರೆ.

ಇಂದು ಇಂಡಿಯಾದಲ್ಲಿ ಅಂತಹ ಪರಿಸ್ಥಿತಿ ತಲೆದೋರಿದೆ. ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭ ಪತ್ರಿಕಾ ರಂಗವು ತನ್ನ ಎಲ್ಲ ಮೌಲ್ಯಗಳನ್ನು, ನಿಯಮಗಳನ್ನು ಗಾಳಿಗೆ ತೂರಿ ಇಂದಿನ ಪ್ರಕ್ಷುಬ್ಧ ವಾತಾವರಣದಲ್ಲಿ ಸಂವಿಧಾನದ ಮೂಲ ಆಶಯಗಳಾದ ಸೆಕ್ಯುಲರಿಸಂ ಮತ್ತು ಜಾತ್ಯಾತೀತ ತತ್ವಗಳನ್ನು ತ್ಯಜಿಸಿ ಹುಸಿಯಾದ ಮೋದಿತ್ವವನ್ನು ಗೋಬೆಲ್ಸ್ ಶೈಲಿಯಲ್ಲಿ ವಾಸ್ತವವೆಂದು ಜನತೆಯ ಮೇಲೆ ಹೇರುತ್ತಿದ್ದಾರೆ. ಪತ್ರಕರ್ತ ವಿನೋದ್ ಮೆಹ್ತ ಅವರು “ಈ ಪ್ರಜಾಪ್ರಭುತ್ವದ 2014 ರ ಚುನಾವಣೆಯನ್ನು ಮಾಧ್ಯಮಗಳು ಹೇಗೆ ನಿಭಾಯಿಸಿವೆ? ನನ್ನ ಪ್ರಕಾರ ಮಾಧ್ಯಮಗಳ ವರ್ತನೆ ಮುಸುಕಾದ, ಮೋಸದ, ಕಿವಿಗಡುಚಿಕ್ಕುವ, ಅಸ್ಥಿರವಾದ, ಕಪಟವಾದ, ಅರ್ಧಸತ್ಯದ, ಅಪರೂಪಕ್ಕೆ ಮಾದರಿಯಾದ ನಡೆಗಳಾಗಿಯೇ ಗೋಚರಿಸುತ್ತಿದೆ. ಅಂದರೆ ಮಾಧ್ಯಮಗಳ ವರ್ತನೆ 2014 ರ ಚುನಾವಣೆಯ ಸಂದರ್ಭದ ರಾಜಕೀಯ ಪಕ್ಷಗಳ ನಡತೆಯನ್ನು ಪ್ರತಿಬಿಂಬಿಸುತ್ತಿವೆ ಅಷ್ಟೇ.” ಎಂದು ಹೇಳುತ್ತಾರೆ. ಕಳೆದ ವಾರ ಬಿಜೆಪಿ ಪಕ್ಷದ ಮೀನಾಕ್ಷಿ ಲೇಖಿ ಅವರು ನರೇಂದ್ರ ಮೋದಿಯನ್ನು ಟೀಕಿಸುವ, ವಿಮರ್ಶಿಸುವ ಪತ್ರಕರ್ತರಿಗೆ ನೆಟ್ಟಗೆ ವರ್ತಿಸುವಂತೆಯೂ, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಭಾರೀ ಬೆಲೆ ತೆರಬೇಕಾಗಬಹುದೆಂದು ಚರ್ಚೆಯ ಸಂದರ್ಭದಲ್ಲಿ ಹೇಳಿದರು. modi_bsyeddyurappaಇದನ್ನು ಉದಾಹರಿಸುತ್ತ ವಿನೋದ್ ಮೆಹ್ತ ಅವರು ಅಂದರೆ ಇನ್ನು ವಸ್ತುನಿಷ್ಟ, ನ್ಯಾಯಪರ ಪತ್ರಕರ್ತರ ನೆತ್ತಿಯ ಮೇಲೆ ಸದಾ ತೂಗುಕತ್ತಿ ನೇತಾಡುತ್ತಿರುತ್ತದೆ ಎಂದರ್ಥ. ಒಂದು ವೇಳೆ ಮೋದಿ ಪ್ರಧಾನಮಂತ್ರಿಯಾದರೆ ಈ ಪತ್ರಕರ್ತರಿಗೆ ತಕ್ಕ ಶಾಸ್ತಿ ಕಲಿಸುವುದು ಖಂಡಿತ ಎನ್ನುವ ಮಾತುಗಳು ಇಂದು ಮಾಧ್ಯಮ ವಲಯಗಳಲ್ಲಿ ಚರ್ಚಿತಗೊಳ್ಳುತ್ತಿವೆ. ಇದಕ್ಕೆ ಉದಾಹರಣೆಯಾಗಿ ಗುಜರಾತ್‌ನಲ್ಲಿ ಪ್ರತೀಕಾರದ ಅನೇಕ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಇಡೀ ವಾತಾವರಣವೇ ಭಯಗ್ರಸ್ಥ ಮತ್ತು ಆತಂಕದಿಂದ ತುಂಬಿದೆ ಎಂದು ಬರೆಯುತ್ತಾರೆ.

ಎಡ್ವರ್ಡ ಸೈದ್ ಓರಿಯಂಟಲಿಸಂ ಕುರಿತು ಬರೆಯುತ್ತಾ “orientals ರನ್ನು ಅಮಾನವೀಯರೆಂದೇ ಗೇಲಿಪಡಿಸಲಾಗುತ್ತಿತ್ತು. ಇಲ್ಲಿ ನಾವು ಮತ್ತು ಅವರೆನ್ನುವ ಸ್ಪಷ್ಟ ಗೆರೆಯನ್ನೆಳೆಲಾಗಿತ್ತು. orientals ಅನಾಗರಿಕರೆಂದೇ ಭಾವಿಸಲಾಗುತ್ತಿತ್ತು. ಯುರೋಪಿಯನ್ನರು ನಾವು orientals ರನ್ನು ನಿರ್ಧರಿಸುತ್ತಿದ್ದೇವೆ ಎಂದು ಭಾವಿಸಿದರು. ಉದಾಹರಣೆಗೆ orientals ರೆಂದರೆ ಅನಾಗರಿಕರು, ಸೋಮಾರಿಗಳು, ಕ್ರೂರಿಗಳು ಎಂದು ಪರಿಗಣಿಸಿಲಾಯಿತು. ಆಗ ಸಹಜವಾಗಿಯೇ ಈ ಯುರೋಪಿಯನ್ನರು ತಮ್ಮನ್ನು ನಾಗರೀಕರು, ಸೌಮ್ಯವಾದಿಗಳು, ಶಾಂತಿಪ್ರಿಯರೆಂದೇ ಬಿಂಬಿಸಿಕೊಳ್ಳತೊಡಗಿದರು. ಈ ಮೂಲಕ orientals ರ ಬಹುರೂಪಿ ಸಾಂಸ್ಕೃತಿಕ ಅವೈದಿಕ ಪರಂಪರೆಯನ್ನು ಸಾಮಾನ್ಯೀಕರಿಸತೊಡಗಿದರು” ಎಂದು ಹೇಳಿದ್ದಾರೆ. ಇದನ್ನು ನಾವು ಇಂಡಿಯಾದ ಸಂದರ್ಭದಲ್ಲಿ ವಿಶ್ಲೇಷಿಸಿದಾಗ ಈ ಸಂಘ ಪರಿವಾರವು ತನ್ನನ್ನು ಮತ್ತುedward-said-orientalism ಹಿಂದೂ ಸಂಸ್ಕೃತಿಯನ್ನು ಮೇಲ್‍ಸ್ತರದಲ್ಲಿ ಗುರುತಿಸಿಕೊಂಡು ಉಳಿದವರನ್ನೆಲ್ಲಾ orientals ರಂತೆಯೇ ಚಿತ್ರಿಸುತ್ತಿರುವುದು ನಮ್ಮ ಕಣ್ಣ ಮುಂದಿದೆ.

ಇಂದು ಕೋಮು ಸೌಹಾರ್ದತೆ ಮತ್ತು ಒಳಗೊಳ್ಳುವಿಕೆಯ ಚಿಂತನೆಗಳನ್ನು ಸಿಕ್ಯುಲರ್‌ಗಳು ಎಂದು ತೀವ್ರವಾಗಿ ಗೇಲಿ ಮಾಡಲಾಗುತ್ತಿದೆ. ಇದು ಅಡ್ವಾನಿ ಕಾಲದ ಗೇಲಿಯ ಪದವಾಗಿದ್ದ ಸೂಡೋ ಸೆಕ್ಯುಲರ್‌ನ ಮುಂದುವರಿದ ಭಾಗದಂತೆ ಕಂಡುಬಂದರೂ ಈ ಸಿಕ್ಯುಲರ್ ಎನ್ನುವ ಅಣಕದ ಹಿಂದೆ ನೆತ್ತರ ದಾಹದ ಕ್ರೌರ್ಯವಿದೆ. ಚಿಂತಕ ಹಸನ್ ತರೂರ್ ಅವರು “ಇಂದು ಈ ಸಿಕ್ಯುಲರ್ ತರಹದ ಆಪಾದನೆಗಳಿಗೆ ಕಾಂಗ್ರೆಸ್ ಮಾದರಿಯ ಸೆಕ್ಯುಲರ್ ರಾಜಕಾರಣವೂ ಸಹ ಒಂದು ಮುಖ್ಯ ಕಾರಣ. ಸ್ವಾತಂತ್ರದ ನಂತರ ಮುಸ್ಲಿಂ ಮೂಲಭೂತವಾದಿಗಳು ಸಮುದಾಯದ ನಾಯಕತ್ವನ್ನು ವಹಿಸಿಕೊಂಡು ಇಡೀ ಸೆಕ್ಯುಲರ್ ತತ್ವದ ಮೂಲ ಆಶಯಕ್ಕೆ ತಿಲಾಂಜಲಿ ನೀಡಿದರು. ದಿನನಿತ್ಯದ ಜಂಜಡಗಳಲ್ಲಿ ಮುಳುಗಿ ಹೋಗಿರುವ ಲಕ್ಷಾಂತರ ಜನಸಾಮಾನ್ಯ ಮುಸ್ಲಿಂರಿಗೆ ಈ ಧಾರ್ಮಿಕತೆಯ ನೀತಿಗಳು ಎಂದಿಗೂ ಪ್ರಮುಖವೆನಿಸಿರಲೇ ಇಲ್ಲ. ಆದರೆ ಇವನ್ನು ಸೆಕ್ಯುಲರಿಸಂನ ಹೆಸರಿನಲ್ಲಿ ಸಾರ್ವಜನಿಕವಾಗಿ ಬಳಕೆಗೆ ತರಲಾಯಿತು. ಒಂದು ವೇಳೆ ಈ ಧಾರ್ಮಿಕ ನೀತಿಗಳನ್ನು ಪಾಲಿಸಲು ವಿಫಲರಾದರೆ ಸೆಕ್ಯುಲರಿಸಂ ಸೋತಿದೆ ಎಂದೇ ವಿಶ್ಲೇಷಿಸಲಾರಂಬಿಸಿದರು.” ಎಂದು ಹೇಳುತ್ತಾರೆ. ಅಲ್ಪ ಸಂಖ್ಯಾತರ ಮೇಲೆ ಸಂಘ ಪರಿವಾರದ ನಿರಂತರ ಆಕ್ರಮಣ, ಹಲ್ಲೆಗಳು ಮತ್ತು ಇತರೇ ರಾಜಕೀಯ ಪಕ್ಷಗಳ ಬೋಗಸ್ ಮಾದರಿಯ ಸೆಕ್ಯುಲರ್ ರಾಜಕಾರಣದಿಂದ ಸಂಪೂರ್ಣವಾಗಿ ಕಂಗೆಟ್ಟ ಹೊಸ ತಲೆಮಾರಿನ ಮುಸ್ಲಿಂ ಯುವಕರು ಹಳೆ ತಲೆಮಾರಿನ ರಾಜಕಾರಣವನ್ನು ತಿರಸ್ಕರಿಸುತ್ತಿದ್ದಾರೆ. ನಮಗೆ ಇನ್ನು ಹೊಸ ನೋಟಗಳು ಬೇಕಾಗಿವೆ ಎಂದು ತುಡಿಯುತ್ತಿರುವ ಈ ಮುಸ್ಲಿಂ ಯುವಕರು ಇಂದು ಚಾಲ್ತಿಯಲ್ಲಿರುವ ಅಭಿವೃದ್ಧಿಯ ಮಂತ್ರದತ್ತ ಕಣ್ಣಾಯಿಸುತ್ತಿದ್ದಾರೆ. ಅಭಿವೃದ್ಧಿಯನ್ನು ಬಳಸಿಕೊಂಡು ಹಿಂದೂ ಮಧ್ಯಮವರ್ಗ ಆರ್ಥಿಕವಾಗಿ ಸಧೃಡವಾಗಿತ್ತಿರುವುದನ್ನು ಉದಾಹರಿಸುವ ಈ ಮುಸ್ಲಿಂ ಯುವಕರು ಅದನ್ನೇ ತಮ್ಮ ಸಮುದಾಯಕ್ಕೂ ಬಳಸಿಕೊಳ್ಳಬೇಕು ಎಂದು ತುಡಿಯುತ್ತಿದ್ದಾರೆ.

ಇಂತಹ ಪ್ರಕ್ಷುಬ್ಧ ಸಂದರ್ಭದಲ್ಲಿ ಅಖಂಡ ಭಾರತದಲ್ಲಿ ಎಲ್ಲರೂ ಸಮಾನರು ಎಂದು ಎಚ್ಚರಿಸುತ್ತಾ, ಅಭಿವೃದ್ಧಿ ಮಂತ್ರವನ್ನು ಜಪಿಸುತ್ತಾ ಸಂಘ ಪರಿವಾರ ಲಗ್ಗೆ ಇಡುತ್ತಿದೆ. ಮುಸ್ಲಿಂರು ಮತ್ತು ದಲಿತರು ಹೆಚ್ಚಿನ ಜನಸಂಖ್ಯೆಯಲ್ಲಿರುವ, ಧಾರ್ಮಿಕ ಸಾಮರಸ್ಯಕ್ಕೆ ಹೆಸರುವಾಸಿಯಾಗಿದ್ದ ವಾರಣಾಸಿಯನ್ನು ಹಿಂದುತ್ವದ ಆಡೊಂಬಲವಾಗಿ ಪರಿವರ್ತಿಸುತ್ತಿದ್ದಾರೆ. ಇದು ಮತ್ತೊಂದು ಅಯೋಧ್ಯೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಮೊನ್ನೆ ಮೋದಿ ವಾರಣಾಸಿಯಲ್ಲಿ ನಾಮಪತ್ರವನ್ನು ಸಲ್ಲಿಸುವ ಸಂದರ್ಭದ ವಿವರಗಳನ್ನು ಗಮನಿಸಿ. ಮೋದಿ ಮತ್ತವರ ತಂಡ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಬಳಿ ಇರುವ ಮದನ್ ಮೋಹನ ಮಾಳವೀಯ ಅವರ ಪ್ರತಿಮೆಗೆ ಹಾರ ಹಾಕುವುದರ ಮೂಲಕ ಪ್ರಾರಂಭಗೊಂಡ ಈ ಮೆರವಣಿಗೆ ನಂತರ ಸರ್ದಾರ್ ವಲ್ಲಭಾಯಿ ಪಟೇಲರ ಪ್ರತಿಮೆಗೆ ಹಾರ ಹಾಕಿ ಮುಂದುವರೆಯಿತು. ಈ ಮೂಲಕ ಮೂಲತಃ ರಾಷ್ಟ್ರೀಯವಾದಿ ಕಾಂಗ್ರೆಸಿಗರಾಗಿದ್ದ ಮಾಳವೀಯ ಮತ್ತು ವಲ್ಲಭಾಯಿ ಪಟೇಲರನ್ನು ಸಂಘಪರಿವಾರದವರಾಗಿ ಪಕ್ಷಾಂತರಗೊಳಿಸಲಾಯಿತು. ನಂತರ ಮೋದಿಯ ಈ ರೋಡ್ ಷೋ ವಿವೇಕಾನಂದರ ಪ್ರತಿಮೆಯ ಬಳಿಗೆ ಬಂದು ಹಾರವನ್ನು ಹಾಕಿ ಮುಂದುವರೆಯಿತು. ಈ ಮೂಲಕ ವಿವೇಕಾನಂದರನ್ನು ಹಿಂದುತ್ವದ ಪ್ರತಿನಿಧಿಯೆಂದೇ ಘೋಷಿಸಲಾಯಿತು. ಕಡೆಗೆ ಅಂಬೇಡ್ಕರ್ ಪ್ರತಿಮೆಯ ಬಳಿ ಬಂದು ಅವರ ಪ್ರತಿಮೆಗೆ ಹಾರ ಹಾಕಿದರು ನರೇಂದ್ರ ಮೋದಿ. ಅಲ್ಲಿಗೆ ಇಡೀ ಪ್ರಹಸನ ಒಂದು ತಾರ್ಕಿಕ ಅಂತ್ಯಕ್ಕೆ ತಲುಪಿ ದಲಿತರಿಗೆ ನೀವು ಬಾಣಗಳಾಗಲು ತಯಾರಾಗಿ ಎನ್ನುವ ಸಂದೇಶವನ್ನು ಸಾರಲಾಯಿತು. ಇದಷ್ಟನ್ನು ಸಂಪೂರ್ಣವಾಗಿ ಯೋಜನಬದ್ಧವಾಗಿ ರೂಪಿಸಲಾಯಿತು. ಸಂಘ ಪರಿವಾರದ ದುಷ್ಟತನಕ್ಕೆ, Modi-roadshow-varanasiಕ್ರೌರ್ಯಕ್ಕೆ ಎಲ್ಲೆಯೇ ಇಲ್ಲದಂತೆ ಸರಣಿಯೋಪಾದಿಯಲ್ಲಿ ಕ್ರಿಯೆಗಳು ಪ್ರತಿಕ್ರಿಯೆಗಳು ನಿರಂತರವಾಗಿ ಚಾಲ್ತಿಯಲ್ಲಿವೆ.

ಇನ್ನು ಗುಜರಾತ್‌ನ ಅಭಿವೃಧ್ಧಿಯ ಹುಸಿತನವನ್ನು ಕುರಿತಾಗಿ ಪುಟಗಟ್ಟಲೆ ದಾಖಲೆ ಸಮೇತ ಮಂಡಿಸಲಾಗಿದೆ. ಕೆಲವು ಉದಾಹರಣೆಗಳೆಂದರೆ ಮೋದಿಯ ಆಡಳಿತದ ಗುಜರಾತ್‌ನ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳಲ್ಲಿ ಮುಕ್ಕಾಲು ಭಾಗದಷ್ಟು ಪ್ರಾಧ್ಯಾಪಕರ ಹುದ್ದೆಗಳಿಗೆ ಹಲವಾರು ವರ್ಷಗಳಿಂದ ನೇಮಕಾತಿ ಮಾಡಿಲ್ಲ. ಇಂದಿಗೂ ಖಾಲಿ ಇವೆ. ಅತಿಥಿ ಪ್ರಾಧ್ಯಾಪಕರನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಇದು ಸಂಪೂರ್ಣ ಕಾರ್ಪೋರೇಟ್ ಶೈಲಿ. ಆದರೆ ಇದು ಸಂವಿಧಾನ ಆಶಯಗಳಿಗೆ ವಿರೋಧವಾದದ್ದು. ಗುಜರಾತ್‌ನ ಮಾನವ ಸಂಪನ್ಮೂಲದ ಕ್ರಮಾಂಕ ದೇಶದಲ್ಲಿಯೇ ಹನ್ನೊಂದನೇ ಸ್ಥಾನದಲ್ಲಿದೆ. ಮಕ್ಕಳ ಪೌಷ್ಠಿಕತೆಯಲ್ಲಿ ಹದಿನೈದನೇ ಸ್ಥಾನದಲ್ಲಿದೆ. ಬಡತನದ ಕ್ರಮಾಂಕವನ್ನು ಅಭಿವೃದ್ಧಿಯ ಕ್ರಮದಲ್ಲಿ ಹದಿನೈದನೇ ಸ್ಥಾನದಲ್ಲಿದೆ. ಸಾಕ್ಷರತೆಯಲ್ಲಿ ಹನ್ನೊಂದನೇ ಸ್ಥಾನದಲ್ಲಿದೆ. ಮುಕ್ಕಾಲು ಭಾಗದ ಗ್ರಾಮಸ್ಥರು ಇಂದಿಗೂ ಬಯಲು ಶೌಚಾಲಯವನ್ನು ಬಳುಸುತ್ತಾರೆ. ಕಳೆದ ಹತ್ತು ವರ್ಷಗಳಲ್ಲಿ ಗುಜರಾತ್ ರಾಜ್ಯದ ಸಾಲದ ಮೊತ್ತ 1,85,310 ಕೋಟಿಯಷ್ಟಿದೆ. ಆದರೆ ಈ ಸತ್ಯಗಳನ್ನು ಬಹುಪಾಲು ಮಾಧ್ಯಮಗಳು ಮರೆಮಾಚಿದ್ದು ಪ್ರಜಾಪ್ರಭುತ್ವದ ಆಶಯಗಳಿಗೆ ಒಂದು ದೊಡ್ಡ ಪೆಟ್ಟು.

ಕಳೆದ 13 ವರ್ಷಗಳ ಮೋದಿಯ ಗುಜರಾತ್ ಸರ್ಕಾರದಲ್ಲಿ ಒಬ್ಬನೇ ಒಬ್ಬ ಅಲ್ಪಸಂಖ್ಯಾತ ಪ್ರತಿನಿಧಿ ಇಲ್ಲ. ಇದನ್ನು ಭಾರತ ಭಾಗ್ಯವಿಧಾತರೆಲ್ಲ ನೆನಪಿನಲ್ಲಿಟ್ಟುಕೊಳ್ಳಬೇಕು. ಅಸ್ಸಾಂನಲ್ಲಿ ಚುನಾವಣಾ ಭಾಷಣ ಮಾಡುತ್ತ ತಾನು ಅಧಿಕಾರಕ್ಕೆ ಬಂದರೆ ಬಾಂಗ್ಲಾದಿಂದ ಬಂದ ಹಿಂದೂ ವಲಸಿಗರಿಗೆ ಆಶ್ರಯವನ್ನು ಕಲ್ಪಿಸಲಾಗುವುದು ಮತ್ತು ಬಾಂಗ್ಲಾ ವಲಸಿಗರಾದ ಮುಸ್ಲಿಂರನ್ನು ಆಕ್ರಮವೆಂದು ಪರಿಗಣಿಸಿ ದೇಶದಿಂದ ಒದ್ದೋಡಿಸಲಾಗುವುದು ಎಂದು ತಮ್ಮ ಇತ್ತೀಚಿನ ಚುನಾವಣ ಭಾಷಣದಲ್ಲಿ ಮೋದಿ ಗುಡುಗಿದ್ದರು. ( ಎಕನಾಮಿಕ್ಸ್ ಟೈಮ್ಸ್ 5.5.2014). ಮೋದಿಯ ಈ ಪ್ರಚೋದನಕಾರಿ ಮತೀಯವಾದಿ ಭಾಷಣದ ಕೆಲವು ದಿನಗಳ ನಂತರ ಮೇ ಮೊದಲನೇ ವಾರದಲ್ಲಿ ಅಸ್ಸಾಂ ರಾಜ್ಯದಲ್ಲಿ ಕೋಮು ಗಲಭೆಗಳು ಮತ್ತೆ ಭುಗಿಲೆದ್ದು ಬೋಡೋ ಮತೀಯವಾದಿಗಳ ಹಲ್ಲೆಗಳಿಂದ ಸುಮಾರು 32 ಅಮಾಯಕರು ಸಾವನ್ನಪ್ಪಿದ್ದಾರೆ. ಏಪ್ರಿಲ್ 2013 ರಂದು ಉತ್ತರ ಪ್ರದೇಶದ ಹೊಣೆ ಹೊತ್ತುಕೊಂಡು ಅಲ್ಲಿಗೆ ಬಂದ ಮೋದಿಯ ಬಲಗೈ ಬಂಟVillagers with their belongings move to relief camps as they leave their locality after violence at Chirang district ಅಮಿತ್ ಷಾ ಕಾಲಿಟ್ಟ ಕೆಲವೇ ತಿಂಗಳುಗಳ ನಂತರ ಮುಝಫರ್ ನಗರ್ ಜಿಲ್ಲೆಯಲ್ಲಿ ಕೋಮು ಗಲಭೆಗಳು ಭುಗಿಲೆದ್ದವು. ಅಪಾರ ಸಾವುನೋವುಗಳು ಸಂಭವಿಸಿದವು. ಆ ಕೋಮು ಗಲಭೆ 2014 ರ ಚುನಾವಣೆಯಲ್ಲಿ ಸಂಘಪರಿವಾರದ ಪರವಾದ ಫಲಿತಾಂಶಕ್ಕೆ ದಿಕ್ಸೂಚಿಯಾಗಿ ಹೋಯ್ತು. ಇಡೀ ಓಬಿಸಿ ಹಿಂದೂಗಳ ಧೃವೀಕರಣವನ್ನು ಸಾಧಿಸಲು ಬಿಜೆಪಿ ಯಶಸ್ವಿಯಾಯಿತು. ಅದಕ್ಕಾಗಿ ನೂರಾರು ಮುಸ್ಲಿಂ ಮತ್ತು ದಲಿತ ಅಮಾಯಕರು ಪ್ರಾಣ ಕಳೆದುಕೊಳ್ಳಬೇಕಾಯಿತು. ಇದು ಅಧಿಕಾರಕ್ಕಾಗಿ ಹಪಾಹಪಿಸುವ ಸಂಘಪರಿವಾರದ ಮತೀಯವಾದದ ಶೈಲಿ. ಇದು ಕಳೆದ ಎಂಬತ್ತು ವರ್ಷಗಳಿಂದ ಜಾರಿಯಲ್ಲಿದೆ.

ಮತ್ತೊಂದು ಕಡೆ ಇದೇ ಮೋದಿಯು ಎಪ್ರಿಲ್ 2 ರಂದು ಮಾತನಾಡುತ್ತ, ತಾನು ಪ್ರಧಾನಮಂತ್ರಿಯಾದ ನಂತರ ಪಿಂಕ್ ರೆವಲ್ಯೂಷನ್ (ದನದ ಮಾಂಸದ ರಫ್ತು) ಅನ್ನು ಕೊನೆಗೊಳಿಸುತ್ತೇನೆ ಎಂದು ಭರವಸೆ ಕೊಡುತ್ತಿದ್ದಾರೆ. ಮತ್ತೊಂದು ಕಡೆ ತಮ್ಮ ಭಾಷಣದಲ್ಲಿ ಸಬ್ಕಾ ( ಸಮಾಜವಾದಿ, ಬಹುಜನ ಪಕ್ಷ, ಕಾಂಗ್ರೆಸ್) ದ ವಿನಾಶ ಶತಸಿದ್ಧ ಎಂದು ಹೇಳಿರುವ ಮೋದಿ ಮುಂದುವರೆದು “ಕಾಂಗ್ರೆಸ್ ಮುಕ್ತ ಭಾರತ್”ಗಾಗಿ ತನ್ನನ್ನು ಚುನಾಯಿಸಬೇಕೆಂದು ಕೋರಿಕೊಂಡಿದ್ದಾರೆ. ಅಂದರೆ ಏನರ್ಥ? ಈ ಎಲ್ಲಾ ಮಾತುಗಳು ಯಾವುದೇ ಸಣ್ಣ ಪುಟ್ಟ ಪುಢಾರಿ ಹೇಳಿದ್ದಲ್ಲ. ಭವಿಷ್ಯದ ಪ್ರಧಾನಿಯ ಎಂದೇ ಕರೆಸಿಕೊಂಡವರ ಬಾಯಿಂದ ಬಂದಂತಹವು. ಇದು ಇವರ ಎಕೆ47, ಎಕೆ ಅಂಟೋನಿ, ಎಕೆ 49ನ ಮತಾಂಧ ಹೇಳಿಕೆಯ ಮುಂದುವರೆದ ಭಾಗ. ಮೋದಿಯವರ ಬಲಗೈ ಬಂಟ ಅಮಿತ್ ಷಾ ತೋಳೇರಿಸುತ್ತ ದಿನಕ್ಕೊಮ್ಮೆ ವಿವಿಧ ಬಗೆಯ ಪ್ರತೀಕಾರದ ಮಾತನಾಡುತ್ತಿದ್ದಾರೆ. ಇವರ ಗುಜರಾತ್‌ನ ಪ್ರತೀಕಾರದ ಮಾದರಿಯನ್ನು ಕಂಡ ಪ್ರಜ್ಞಾವಂತರೆಲ್ಲಾ ಬೆಚ್ಚಿಬೀಳುತ್ತಿದ್ದಾರೆ. ಮೇ 4ರಂದು ಉತ್ತರ ಪ್ರದೇಶದ ಅಜಮಗರ್ ಕ್ಷೇತ್ರದಲ್ಲಿ ಮಾತನಾಡುತ್ತಾ ಈ ಕ್ಷೇತ್ರವು ಭಯೋತ್ಪಾದಕರನ್ನು ಉತ್ಪಾದಿಸುವ ಊರೆಂದು ಹೇಳಿಕೆ ನೀಡಿದ್ದಾರೆ. ಇನ್ನು ಬಿಹಾರನ ಬಿಜೆಪಿ ನಾಯಕ ಗಿರಿರಾಜ್ ಸಿಂಗ್ ಮೋದಿಯನ್ನು ವಿರೋಧಿಸುವವರೆಲ್ಲಾ ಪಾಕಿಸ್ತಾನಕ್ಕೆ ಹೋಗಬೇಕಾಗುತ್ತದೆ ಎಂದು ಗುಡುಗಿದ್ದಾರೆ. ಇನ್ನು ಪ್ರವೀಣ್ ತೊಗಾಡಿಯಾ ‘ಮುಸ್ಲಿಂ ಮೊಹಲ್ಲಗಳನ್ನು ವರ್ಗೀಕರಿಸಿ ನಂತರ ಅವನ್ನು ಶುದ್ಧೀಕರಿಸಿ ಅದರಿಂದ ಮುಸ್ಲಿಂರನ್ನು ಪ್ರತ್ಯೇಕಿಸಿ’ ಹೀಗೆ ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಬಿಜೆಪಿಯನ್ನು ಬೆಂಬಲಿಸಿದ ರಾಮದೇವ್ ಎನ್ನುವ ಸನ್ಯಾಸಿ ದಲಿತರ ಕುರಿತಾಗಿ ಅವಹೇಳನಕರವಾಗಿ ಮಾತನಾಡಿದ್ದಾರೆ. ಇವರ ಈ ಮಾತುಗಳನ್ನು ಸಂಘರಿವಾರ ಸಮರ್ಥಿಸಿಕೊಂಡಿದೆ. ಮೊನ್ನೆಯ ಚುನಾವಣಾ ಭಾಷಣದಲ್ಲಿ ಮೋದಿಯು ಕಷ್ಟದ ಕೆಲಸಗಳನ್ನು ನಿಭಾಯಿಸಲು ದೇವರು ಕೆಲವರನ್ನು ಆರಿಸುತ್ತಾನೆ. ಬಹುಶ ದೇವರು ನನ್ನನ್ನು ಆರಿಸಿರಬಹುದು ಎಂದು ಹೇಳಿ ಕಟ್ಟಕಡೆಗೆ ದೇವರನ್ನು ಎಳೆದು ತಂದಿದ್ದಾರೆ. ಮೋದಿ ಪ್ರಧಾನಮಂತ್ರಿಯಾಗುತ್ತಾರೆಂದು ಗೊತ್ತಾಗಿ ಪಾಕಿಸ್ತಾನ ಮತ್ತು ಚೀನಾ ದೇಶಗಳಲ್ಲಿ ನಡುಕ ಉಂಟಾಗಿದೆ ಅಂತೆ ಎನ್ನುವಂತಹ ಸುದ್ದಿಗಳು ಗಾಳಿಯಲ್ಲಿ ಸಿಕ್ಕಾಪಟ್ಟೆ ತೇಲುತ್ತಿವೆ. ಇನ್ನು ರಾಮ ಜನ್ಮಭೂಮಿ, ಆರ್‍ಟಿಕಲ್ 370, ಅಖಂಡ ಹಿಂದುತ್ವ ಹೀಗೆ ಮತೀಯವಾದಿ ಅಜೆಂಡಾಗಳನ್ನು ಬಗಲಲ್ಲಿ ಇರಿಸಿಕೊಂಡ ಆರೆಸಸ್ 2014 ರ ಚುನಾವಣೆಯ ಇಡೀ ವಿದ್ಯಾಮಾನಗಳನ್ನು ಕಂಡು ಪುಳಕಿತಗೊಂಡಂತಿದೆ. ಎಲ್ಲವೂ ತಾನು ಎಣಿಸಿದ ಹಾದಿಯಲ್ಲಿ ಸಾಗುತ್ತಿರುವುದು ಆರೆಸಸ್‌ನ ಮಹತ್ವಾಕಾಂಕ್ಷೆ ಗರಿಗೆದರುತ್ತಿದೆ. ಮೋದಿ ಅಧಿಕಾರಕ್ಕೆ ಬರುತ್ತಾರೆನ್ನುವ ಗಾಳಿ ಸುದ್ದಿಗಳೇ ಇಡೀ ಕೋಮುವಾದಿ ಶಕ್ತಿಗಳನ್ನು ಧೃವೀಕರಿಸಿ ಅಧಿಕಾರಕ್ಕೆ ಚಿಮ್ಮು ಹಲಗೆಯಾಗಿ ರೂಪುಗೊಂಡಿರುವುದು ಆರೆಸಸ್‌ಗೆ ಮೊಟ್ಟ ಮೊದಲ ಗೆಲುವಿನ ಸಂಭ್ರಮವನ್ನು ತಂದುಕೊಡುತ್ತಿದೆ.

ಹೋರಾಟಗಾರ್ತಿ ಮೇರಿ ಮಾರ್ಸೆಲ್ ಅವರು “ಚೋಮಸ್ಕಿಯ Manufacturing Consent ಚಿಂತನೆಗೆ ಇಂದಿನ 2014 ರ ಚುನಾವಣೆಯ ಇಡೀ ಪ್ರಹಸನ ಮತ್ತು ಕಾಲಘಟ್ಟ ಅತ್ಯಂತ ಸಮರ್ಪಕ ಉದಾಹರಣೆ. ಒಂದು ಸುಳ್ಳನ್ನು ನೂರು ಬಾರಿ ಹೇಳಿ ಸತ್ಯವೆಂದು ಸಾಧಿಸುವ ನಾಜಿಗಳ ಗೋಬೆಲ್ಸ್ ತಂತ್ರವನ್ನು ಕಾರ್ಪೋರೇಟ್ ಮತ್ತು ಮಾಧ್ಯಮಗಳು ಒಟ್ಟಾಗಿ ಕೈಜೋಡಿಸಿ ಸಂಘಪರಿವಾರದ ಪರವಾಗಿ ಯಶಸ್ವಿಯಾಗಿ ಜಾರಿಗೊಳಿಸಿವೆ. ಇದು ಲೇಖಕಿಯಾಗಿ ನನ್ನಂತವಳು ನನ್ನ ಹೆಸರಿನೊಂದಿಗೆ ಅನೇಕ ಬಗೆಯ ವಿರೋಧಗಳನ್ನು ಎದುರಿಸಿ ಬದುಕಬೇಕಾದಂತಹ ಸಂದರ್ಭ. ಇತ್ತೀಚೆಗೆ ನನ್ನ ಬ್ಲಾಗ್‌ನಲ್ಲಿ ರೋಮ್‌ಗೆ ಮರಳಿ ಹೋಗು ಎನ್ನುವಂತಹ ಸಂದೇಶಗಳು ಬರುತ್ತಿವೆ. ಭಾರತೀಯಳಾದ ನಾನು ಮತ್ತು ನನ್ನಂತಹ ಇನ್ನಿತರ ಅಲ್ಪಸಂಖ್ಯಾತರೆಲ್ಲ ಇಂತಹ ಲುಂಪೆನ್ ಶಕ್ತಿಗಳನ್ನು ಎದುರಿಸುವ ಮಾರ್ಗಗಳನ್ನು ಪ್ರತಿದಿನ ಹುಡುಕಬೇಕಾಗಿದೆ. ಅಂದರೆ ಒಂದುವೇಳೆ ಇಂಡಿಯಾದ ಅಲ್ಪಸಂಖ್ಯಾತರನ್ನೆಲ್ಲಾ, ಅಥವಾ ಸಂಘಪರಿವಾರದ ವಿರೋಧಿಗಳನ್ನೆಲ್ಲ ಸಂವಿಧಾನಕ್ಕೆ, ಪ್ರಜಾಪ್ರಭುತ್ವದ ವ್ಯವಸ್ಥೆಗೆ ಬದ್ಧರಾಗದಿದ್ದಾರೋ ಇಲ್ಲವೋ ಇದು ಮುಖ್ಯವಲ್ಲ, ಆದರೆ ಮೋದಿಗೆ ಬದ್ಧರಾಗಿರದಿದ್ದರೆ ಈ ದೇಶದಿಂದ ಓಡಿಸಲಾಗುತ್ತದೆ. ಇಂತಹ ಫ್ಯಾಸಿಸ್ಟ್ ಸಿದ್ಧಾಂತವನ್ನು ಕಾರ್ಪೋರೇಟ್ ವಲಯ ಹೇಗೆ ಬೆಂಬಲಿಸುತ್ತಿವೆ ಎಂಬುದು ಇಂದಿಗೂ ಅಚ್ಚರಿಯ ವಿಷಯ. ಅನಿವಾಸಿ ಭಾರತೀಯರು ಈ ಅಧ್ಯಕ್ಷೀಯ ಶೈಲಿಯ ಅಧ್ಯಕ್ಷ ಮೋದಿಗೆ ತಮ್ಮ ಹಣವನ್ನು ಅನುದಾನವಾಗಿ ಸುರಿಯುತ್ತಿವೆ ಎಂದರೆ ಏನರ್ಥ? ಈ ಅನಿವಾಸಿ ಭಾರತೀಯರು ತಾವು ವಾಸಿಸುತ್ತಿರುವ ಅಮೇರಿಕಾ ಮತ್ತು ಯುರೋಪಿನ ರಾಷ್ಟ್ರಗಳಿಗೆ ತಾವು ಅಲ್ಪಸಂಖ್ಯಾತರನ್ನು ದೇಶದಿಂದ ಒದ್ದೋಡಿಸುವ ಚಿಂತನೆಯುಳ್ಳ ಪಕ್ಷಕ್ಕೆ ಮತ್ತು ವ್ಯಕ್ತಿಗೆ ಬೆಂಬಲಿಸುತ್ತಿದ್ದೇವೆ ಎಂದು ಹೇಳಬಯಸುತ್ತಿವೆಯೇ? ಹಾಗಿದ್ದಲ್ಲಿ ಅಲ್ಲಿನ ಬಹುಸಂಖ್ಯಾತರು ಇದೇ ಮಾನದಂಡವನ್ನು ಅನುಸರಿಸಿ ಈ ಅಲ್ಪಸಂಖ್ಯಾತರಾದ ಹಿಂದು ಅನಿವಾಸಿ ಭಾರತೀಯರನ್ನು ಅಲ್ಲಿಂದ ಒದ್ದೋಡಿಸಿದರೆ ಇವರ ಪ್ರತಿಕ್ರಿಯೆ ಏನು?” ಎಂದು ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ.

ರಾಜಕೀಯ ಶಾಸ್ತ್ರದ ಫ್ರೊಫೆಸರ್ ಅಮಿತ್ ಅಹುಜ ಅವರು “ಇಂಡಿಯಾ ದೇಶವು ಗಣರಾಜ್ಯ ಮಾದರಿಯ ಪ್ರಜಾಪ್ರಭುತ್ವ ಒಕ್ಕೂಟ. ಇಲ್ಲಿ ಸಂವಿಧಾನವೇ ಅಂತಿಮ. tv-mediaಸಂವಿಧಾನದ ಆಶಯಗಳನ್ನು ಈ ದೇಶದ ಪ್ರತಿಯೊಬ್ಬ ನಾಗರಿಕನು ಗೌರವಿಸಬೇಕು. ಈ ಇಡೀ ಒಕ್ಕೂಟವು ಸಂಸದೀಯ ಮಾದರಿಯ ವ್ಯವಸ್ಥೆ, ರಾಷ್ಟ್ರಪತಿ, ನ್ಯಾಯಾಂಗ, ಕಾರ್ಯಾಂಗ, ಪತ್ರಿಕಾರಂಗ ಹೀಗೆ ವಿವಿಧ ಸರ್ಕಾರಿ ಸಂಸ್ಥೆಗಳಿಂದ ಕಟ್ಟಲ್ಪಟ್ಟಿರುತ್ತದೆ. ಹಾಗೆಯೇ ನಾಗರಿಕ ಸೇವಾ ಸಂಸ್ಥೆಗಳು, ಮಿಲಿಟರಿ ವ್ಯವಸ್ಥೆಗಳು ತಮ್ಮದೇ ಆದ ನೀತಿ ನಿಯಾಮಾವಳಿಗಳನ್ನು ಸಂವಿಧಾನದ ಆಶಯಗಳಿಗೆ ಅನುಗುಣವಾಗಿಯೇ ರೂಪಿಸಿಕೊಂಡಿದ್ದು ಮೂಲಭೂತವಾಗಿ ಮೇಲಿನ ಪ್ರಜಾಪ್ರಭುತ್ವದ ಒಕ್ಕೂಟವನ್ನು ರಾಜಕೀಯದ ಒತ್ತಡಗಳಿಂದ ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಆದರೆ ಮಾಧ್ಯಮಗಳು ಪ್ರಚಾರ ಪಡಿಸುತ್ತಿರುವ ಇಂದಿನ ಮೋದಿತ್ವದ ಮಾದರಿಯನ್ನೇ ನಂಬುವುದಾದರೆ ಈ ಮೋದಿಯು ಮೇಲಿನ ಪ್ರಜಾಪ್ರಭುತ್ವದ ಎಲ್ಲಾ ಸಂಸ್ಥೆಗಳನ್ನು, ಸ್ತಂಭಗಳನ್ನು ಓವರ್‌ಟೇಕ್ ಮಾಡಿ ಅವುಗಳ ಮೇಲೆ ತನ್ನ ಅಧಿಪತ್ಯವನ್ನು ಸಾಧಿಸುತ್ತಾನೆಂದರೆ ಇದು ಅತ್ಯಂತ ದುರಂತದ ಸಂಗತಿ. ಏಕೆಂದರೆ 2002 ರ ಗುಜರಾತ್ ಹತ್ಯಾಕಾಂಡ ಇದಕ್ಕೆ ಉದಾಹರಣೆ” ಎಂದು ಬರೆಯುತ್ತಾರೆ. ಇದು ನಿಜ. ಅತಿಶಯೋಕ್ತಿಯಲ್ಲ. ಮೇಲಿನ ಮಾತು ಅಕ್ಷರಶಃ ಸತ್ಯ. ಕಳೆದ ಒಂಬತ್ತು ವರ್ಷಗಳಲ್ಲಿ ಗುಜರಾತ್ ರಾಜ್ಯದಲ್ಲಿ ಲೋಕಾಯುಕ್ತರ ನೇಮಕಾತಿ ಮಾಡಿಲ್ಲ. ಸಂವಿಧಾನಾತ್ಮಕ ಅಧಿಕಾರ ಬಳಸಿಕೊಂಡು ರಾಜ್ಯಪಾಲರು ಇದನ್ನು ಪ್ರಶ್ನಿಸಿದರೆ ಅವರನ್ನೇ ಅವಹೇಳನ ಮಾಡಲಾಯಿತು. ಮೊನ್ನೆಯಷ್ಟೇ ಮೋದಿಯು ಚುನಾವಣಾ ಕಮಿಷನ್‌ಗೆ ಎಚ್ಚರಿಸಿದ್ದಾರೆ. ಅವರು ತಮ್ಮ ಇತಿಮಿತಿಗಳಲ್ಲಿ ಕಾರ್ಯ ನಿರ್ವಹಿಸಬೇಕೆಂದು ಗುಡುಗಿದ್ದಾರೆ. ಇನ್ನು ಬಹುಪಾಲು ಮಾಧ್ಯಮಗಳು ಆಗಲೇ ಮೋದಿಯ ಮುಂದೆ ತೆವಳುತ್ತಿವೆ. ಇನ್ನೂ ಅನೇಕ ಉದಾಹರಣೆಗಳನ್ನು ಕೊಡಬಹುದು.

ಇತ್ತೀಚೆಗೆ ಅಹಮದಾಬಾದ್‌ನಲ್ಲಿ ಮತದಾನ ಮಾಡಿದ ನಂತರ ಮೋದಿಯು ಸಂವಿಧಾನದ, ಚುನಾವಣಾ ಸಂಸ್ಥೆಯ ಎಲ್ಲಾ ನಿಯಮಗಳನ್ನು ಧಿಕ್ಕರಿಸಿ Modi-selfieತನ್ನ ಪಕ್ಷ ಬಿಜೆಪಿಯ ಕಮಲದ ಗುರುತನ್ನು ಪ್ರದರ್ಶಿಸುತ್ತಾ ಮತದಾನದ ಅಂಗಳದಲ್ಲೇ ಪತ್ರಿಕಾ ಗೋಷ್ಠಿ ನಡೆಸಿದರು. ಅವರ ಇಡೀ ನಡಾವಳಿ ನಾನು ಡೋಂಟ್ ಕೇರ್ ಎನ್ನುವಂತಿತ್ತು. ಇದು ಅಪ್ಪಟ ಫ್ಯಾಸಿಸ್ಟ್ ಶೈಲಿ. ಸಂವಿಧಾನ ವಿರೋಧಿ ಈ ದುಷ್ಕೃತ್ಯವನ್ನು ಸಂಘಪರಿವಾರ ಒಗ್ಗಟ್ಟಾಗಿ ಬೆಂಬಲಿಸಿತು. ಮೋದಿಯ ಈ ಫ್ಯಾಸಿಸ್ಟ್ ನಡುವಳಿಕೆಗಳನ್ನು ಅರ್ಥ ಮಾಡಿಕೊಳ್ಳಲು ಇಂದಿಗೂ ಆತನ ಬೆಂಬಲಿಗರು ನಿರಾಕರಿಸುತ್ತಿದ್ದರೆ ಇವರೆಲ್ಲಾ ಮುಂದಿನ ದುರಂತದ ದಿನಗಳಿಗೆ ಕಾರಣಕರ್ತರಾಗುತ್ತಾರೆ ಎಂದಷ್ಟೇ ಹೇಳಬೇಕಾಗುತ್ತದೆ. ಆದರೆ ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾದ ನಮ್ಮ ಬಹುಪಾಲು ಮಾಧ್ಯಮಗಳ ಈ ಅತ್ಮದ್ರೋಹವನ್ನು ಮುಂದಿನ ತಲೆಮಾರು ಎಂದಿಗೂ ಕ್ಷಮಿಸಲಾರದೇನೋ. ಏಕೆಂದರೆ ಒಂದು ಕಡೆ ಹೆಚ್.ಜಿ.ವೆಲ್ಸ್ ಹೇಳುತ್ತಾನೆ: “ಕೆಲವು ಜನ ಮೂರು ವಿದಧ ತೊಂದರೆಗಳಿಗೆ ಒಳಗಾಗುತ್ತಾರೆ. ಕೆಲವನ್ನು ಆಗಲೇ ಅನುಭವಿಸಿದ ಇತಿಹಾಸದ ನೆನಪುಗಳಿವೆ, ಕೆಲವನ್ನು ವರ್ತಮಾನದಲ್ಲಿ ಅನುಭವಿಸುತ್ತಿರುತ್ತಾರೆ, ಮತ್ತು ಮುಂದೆ ಒದಗಬಹುದಾದ ತೊಂದರೆಗಳನ್ನು ಗ್ರಹಿಸಿ ಅವುಗಳಿಗಾಗಿ ಎದುರು ನೋಡುತ್ತಿರುತ್ತಾರೆ.”

17 thoughts on “ನಿರಂತರವಾಗಿ ಉತ್ಪಾದಿಸಲ್ಪಡುತ್ತಿರುವ ವೈಭವದ ಮಿಥ್‌ಗಳು

  1. M A Sriranga

    ಶ್ರೀಪಾದ್ ಭಟ್ ಅವರಿಗೆ ಮೂರ್ನಾಲಕ್ಕು ಪ್ರಶ್ನೆಗಳಿವೆ–(೧) ಸೆಕ್ಯುಲರಿಸಂನಿಂದ ಪ್ರಾರಂಭವಾದ ತಮ್ಮ ಲೇಖನ ಕೊನೆಗೆ ಬಂದು ನಿಂತಿರುವುದು ಈಗ ಸಾಕಷ್ಟು ಮಂದಿ ಪ್ರಗತಿಪೀಠಸ್ಥತರಿಗೆ ಮಾಮೂಲಾಗಿರುವ “ಮೋದಿ” ಎಂಬ ತಲೆನೋವಿನಿಂದ. ಚುನಾವಣೆಯ ಫಲಿತಾಂಶದ ದಿನ ಹತ್ತಿರವಾಗುತ್ತಿರುವಂತೆ ಈ “ಮೈಗ್ರೇನ್” ತಲೆನೋವು ಜಾಸ್ತಿಯಾಗುತ್ತಿದೆ.
    (೨) ಇಂದು ತಾವು ಇಡೀ ಲೇಖನದಲ್ಲಿ ಪ್ರಸ್ತಾಪಿಸಿರುವ ವಿಷಯವೆಲ್ಲಾ ತಮಗೆ ತಿಳಿದು ಬಂದಿರುವುದು ತಾವು ಟೀಕಿಸಿರುವ “ಮೋದಿಯ mania” ದಿಂದ ಬಳಲುತ್ತಿರುವ T V ಮತ್ತು Print Media ದಿಂದಲೇ ಎಂಬುದನ್ನು ಮರೆಯಬಾರದಲ್ಲವೇ? ಅವು ಏನನ್ನೂ ಮುಚ್ಚಿಡದೆ ಪ್ರಕಟಮಾಡಿದ್ದಾರಲ್ಲ? ಅದೇ ರೀತಿ ಸೋನಿಯಾಗಾಂಧಿ,ರಾಹುಲ್ ಗಾಂಧಿ ಮತ್ತು ಚುನಾವಣೆಗೆ ನಿಲ್ಲದಿದ್ದರೂ ಸಹ ಪ್ರಿಯಾಂಕ ಗಾಂಧಿಯವರಿಗೆ, ಅವರ ರೋಡ್ ಶೋ ಮತ್ತು ಭಾಷಣಕ್ಕೆ full coverage ಕೊಡುತ್ತಿದ್ದಾರಲ್ಲ? (೩) ಬಿಜೆಪಿಯೇತರ ಇತರ ಪಕ್ಷಗಳ ನಾಯಕರುಗಳು ಈ ಚುನಾವಣೆಯಲ್ಲಿ ಶ್ರೀರಾಮ,ಸತ್ಯಹರಿಶ್ಚಂದ್ರ ಮತ್ತು ಮಹಾತ್ಮ ಗಾಂಧಿ ಅವರ ರೀತಿ ವರ್ತಿಸಿದರೆ? ಆ ಬಗ್ಗೆ ತಾವು ಏಕೆ ಒಂದು ಸಾಲೂ ಬರೆಯಲಿಲ್ಲ? ಮಿಥ್ ಗಳನ್ನು ಹರಡುತ್ತಿರುವವರ ಬಗ್ಗೆ ಬರೆಯುವ ತಾವು ಕಾಂಗ್ರೆಸ್ಸ್ ಸೇರಿದಂತೆ ಇತರ ಪಕ್ಷಗಳ ಬಗ್ಗೆ ಮೌನವಾಗಿರುವೂದೂ ಮಿಥ್ ನ ಇನ್ನೊಂದು ರೂಪವೇ ಅಲ್ಲವೇ?

    Reply
    1. avani

      [[(೨) ಇಂದು ತಾವು ಇಡೀ ಲೇಖನದಲ್ಲಿ ಪ್ರಸ್ತಾಪಿಸಿರುವ ವಿಷಯವೆಲ್ಲಾ ತಮಗೆ ತಿಳಿದು ಬಂದಿರುವುದು ತಾವು ಟೀಕಿಸಿರುವ “ಮೋದಿಯ mania” ದಿಂದ ಬಳಲುತ್ತಿರುವ T V ಮತ್ತು Print Media ದಿಂದಲೇ ಎಂಬುದನ್ನು ಮರೆಯಬಾರದಲ್ಲವೇ? ಅವು ಏನನ್ನೂ ಮುಚ್ಚಿಡದೆ ಪ್ರಕಟಮಾಡಿದ್ದಾರಲ್ಲ? ]] ಇದೆಂಥಾ ತಲೆ ಕೆಟ್ಟ ಪ್ರಶ್ನೆ ಶ್ರೀರಂಗರೆ? ಒಳ್ಳೆ ಮಕ್ಕಳ ಥರ ಕೇಳ್ತೀರಲ್ಲಾ?? ಟಿ. ವಿ ಗಳು ಅದರಲ್ಲೂ ಆಜ ತಕ್ ನಂಥವು , ಮತ್ತು ಇಂಗ್ಲೀಶ್ ಪತ್ರಿಕೆಗಳು ಮೋದಿಯನ್ನು ಹೊಗಳಲಿಕ್ಕೆ ಗುತ್ತಿಗೆ ಹಿಡಿದಿವೆ. ನಿಮಗೆ ಗೊತ್ತಿಲ್ಲ. ಮೋದೀ ಏನು ಹೇಳಿದರೂ ಅದಕ್ಕೆ ದೊಡ್ಡ ಬಣ್ಣ ಕಟ್ಟುತ್ತವೆ. ಉದಾಹರಣೆಗೆ ಮೋದಿ ಮುಸ್ಲೀಂ ರಿಗೆ ನಾಯಿ ಮರಿ ಅಂದಿದ್ದು ಪ್ರಿಯಾಂಕಾ ನನ್ನ ಮಗಳಿದ್ದಂತೆ ಎಂದಿದ್ದು ಇವೆಲ್ಲ ದೊಡ್ಡ ದೊಡ್ಡ ತಪ್ಪುಗಳನ್ನು ಮುಚ್ಚಿ ಮೋದಿಯನ್ನು ಹೊಗಳುತ್ತವೆ. ನೀವು ನೋಡಿಲ್ವಾ? ನಮ್ಮ ಹಳ್ಳಿಕಡೆ ಹೆಣ್ಣು ಮಕ್ಕಳಿಗೆ ಯಾವಾಗ ಬಂದ್ಯವಾ ಮಗಳ ಅಳ್ಯಾ ಏನಂತಾನ ಎನ್ನುತ್ತಾರೆ ಹಿರಿಯರು [ಬುದ್ಧಿ ಇಲ್ಲದವರು. ] ಪ್ರಿಯಾಂಕಾರಂತೆ ಝಾಡಿಸಲು ಗೊತ್ತಿಲ್ಲದ ಬುದ್ದೂ ಹುಡುಗಿಯರು ಹೌಂದ ಕಾಕಾ , ದೊಡಪ್ಪ ಈಗ ಬಂದ್ಯಾ ನಿನ್ನ ಅಳ್ಯಾ ಬೇಸಿ ಹಾನ ಎನ್ನುತ್ತಾರೆ . ಪ್ರಿಯಾಂಕಾ ಇಲ್ಲಿದ್ದರೆ ಈ ಹುಡುಗಿಯರಿಗೆ ತಿಳಿಸಿ ಹೇಳುತ್ತಿದ್ದರು. ನೀ ಯಾವಾಗ ನಮ್ಮ ಅಪ್ಪ ಆದಿ ? ನಮ್ಮ ಅಪ್ಪ ಇಂಥಾಂವ ಇದ್ದಾನ ಎನ್ನು ಎಂದು ತಿಳಿಸುತ್ತಿದ್ದರು. ಇನ್ನಾದರೂ ಬುದ್ಧಿ ಕಲ್ಲೀಲಿ ನಮ್ಮ ಹುಡುಗಿಯರು.ರು ಭಾರತವನ್ನು ಚನ್ನಾಗಿ ಮೇಯುತ್ತಾರೆ. ನಿಮ್ಮದೇನು ? ನೀವು ಸುಮ್ಮನಿರಿ.

      Reply
    2. avani

      ಶ್ರೀರಂಗರೆ ನಿಮಗೆ ಸ್ವಲ್ಪವೂ ಗೊತ್ತಿಲ್ಲ ಏನೇನೋ ಪ್ರಶ್ನೆ ಕೇಳ್ತೀರಪ್ಪ. [[ಬಿಜೆಪಿಯೇತರ ಇತರ ಪಕ್ಷಗಳ ನಾಯಕರುಗಳು ಈ ಚುನಾವಣೆಯಲ್ಲಿ ಶ್ರೀರಾಮ,ಸತ್ಯಹರಿಶ್ಚಂದ್ರ ಮತ್ತು ಮಹಾತ್ಮ ಗಾಂಧಿ ಅವರ ರೀತಿ ವರ್ತಿಸಿದರೆ? ]] ಇಂಥ ಪ್ರಶ್ನೆಗಳನ್ನು ಕಳೆದ 60 ವರ್ಷಗಳಿಂದ ಎಲ್ಲಾ ರೀತಿನಲ್ಲೂ ಈದೇಶವನ್ನು ಅಧೋಗತಿಗೆ ಒಯ್ದ ರಾಜಮಾತೆ ಯುವರಾಜನ ಪಕ್ಷಕ್ಕೆ ಕೇಳ್ತಾರೇನ್ರಿ? ತಪ್ಪು ತಪ್ಪು ತಪ್ಪಾಯ್ತು ಎನ್ನಿ . ರಾಜರು ವಿಷ್ಣು ದೇವರ ಪ್ರತಿರೂಪ ಅವರನ್ನು ಏನೂ ಅನ್ನಬಾರದು ಅವರು ನಮ್ಮನ್ನು ಒದ್ದು ಆಳಲಿಕ್ಕೆ ದೇವರು ಕಳಿಸಿದ್ದಾನೆ. ರಾಜರು ಅವರ ವಂಶದಲ್ಲಿ ಹುಟ್ಟಿದವರು , ಅವರ ವಂಶಕ್ಕೆ ಬಂದವರೆಲ್ಲ ದೆ’ವರೇ ಅದಕ್ಕೆ ಅವರು ಭಾರತವನ್ನು ಚನ್ನಾಗಿ ಮೇಯುತ್ತಾರೆ. ನಿಮ್ಮದೇನು ? ನೀವು ಸುಮ್ಮನಿರಿ.

      Reply
  2. Salam Bava

    ಉನ್ನತ ತರದ article, ಇಟ್ಟು ಇಂದಿನ ಭಾರತೀಯ ಚುನಾವಣೆ ಯನ್ನು ವಿಶ್ಲೇಸಿಸಿದಾರೆ . ಅವರ ಕಳಕಳಿ ,ಓರ್ವ ವ್ಯಕ್ತಿಯನ್ನು ೧೨೦ ಕೋಟಿ ಜನಸಂಖ್ಯೆ ಯಿರುವ ಒಂದು ದೇಶದ
    ರಾಜನ ತರಹ ಬಿಂಬಿಸುದರಲ್ಲಿ ಸ್ವಾರ್ಥಿಗಳ ,ಸ್ಥಾಪಿತ ಹಿತಾಸಕ್ತಿಗಳ ಮತ್ತು ಅತ್ಯಂತ ಬಲಿಷ್ಠ ಮತಾಂದ ಶಕ್ತಿಗಳ ಒಗ್ಗೂಡುವಿಕೆ ಯ ಬಗ್ಗೆಯಾಗಿದೆ. ಮೋದಿ ಯಾವ ನಲ್ಲಿ Angle ನೋಡಿದರೂ ,ಅವರ ಸಮಕಾಲೀನ ಒಂದು imageನ್ನು ವಿವೇಚನೆಯಿನ್ದ ಪರಿಶೀಲಿಸಿದರೂ ಖಡಾ ಹಿಂದೂ ರಾಷ್ಟವಾದಿಯೂ ಪ್ರಧಾನಿ ಪದಕ್ಕೆ ಅವರನ್ನು ಅಂಗೀಕರಿಸಲಾರ .ಯಾಕೆಂದರೆ ಅವನು ನಿಜವಾಗಿ ದೇಶವನ್ನು ಪ್ರೀತಿಸುತ್ತಾನೆ ಅಂತಾದರೆ , ಇವತ್ತಿನ ಈ ಜಾಗತಿಕ set up ನಲ್ಲಿ ಮೋದಿಯಂತ ಓರ್ವ ಸಾದಾರಣ ಬುದ್ದಿಮತ್ತೆಯ ,ಪ್ರಬುದ್ದತೆಯಿಲ್ಲದ ,ವಿದೇಶ ನೀತಿಯ ಗಂದ ಗಾಳಿಯೂ ಅರಿವಿಲ್ಲದ , ಉದ್ದಟ ಮನೋಭಾವದ ವ್ಯಕ್ತಿ -ಭಾರತದಂಥ ಮಹಾನ್ ದೇಶದ ಚುಕ್ಕಾಣಿ ಹಿಡಿದರೆ ಏಗಾದೀತು . ಅದನ್ನೇ ಮೊನ್ನೆ ಗಾರ್ಡಿಯನ್ ಪತ್ರಿಕೆಗೆ ೫೦ ಭಾರತೀಯ ಸಂಜಾತ ಬುದ್ದಿಜೀವಿಗಳು ಪತ್ರ ಬರೆದು ಕಳಕಳಿ ವ್ಯಕ್ತ ಪಡಿಸಿದ್ದು .

    Reply
    1. avani

      ಸಲಾಂ ಬಾವ ರವರೆ ನಿಮ್ಮ ಪ್ರತಿಕ್ರಿಯೆಗೆ ನನ್ನ ಕೋಟಿ ಸಲಾಂಗಳು . ನಿಮ್ಮ ಮಾತು ಅಕ್ಷರಶಃ ನಿಜ. ಅಮುಲ್ ಬೇಬಿ ಯುವರಾಜನಷ್ಟು ತಿಳುವಳಿಕೆ ಮೋದಿಗೆಲ್ಲಿಂದ ಬರಬೇಕು? ನಿಮ್ಮ ಯುವರಾಜನಂತೆ ನಾಮಬಲ ಹಣದಬಲದಿಂದ ಮೋದಿ ಮೇಲೆ ಬಂದಿದ್ದಾನಾ? ಚಾ ಮಾರಿ ಬಂದವನಿಗೆ ಜನರ ಕಷ್ಟ ಸುಖದ ಕಲ್ಪನೆ ಇದೆಯಾ? ಅದೇ ನಿಮ್ಮ ಅಮುಲ್ ಬೇಬಿ ಯುವರಾಜ ಮಾತ್ರ ಜನರಿಗೆ ಅತೀ ಹತ್ತಿರದವನು. ಕಂಚಿನ ಕಂಠದಿಂದ ಮಾತನಾಡುತ್ತಾನೆ. ಈ ಎಪ್ಪನ ಸಭೆಗೆ ಜನ ಟಿಕೆಟ್ ತಗೊಂಡು ಭಾಷಣ ಕೇಳಲಿಕ್ಕೆ ಬರುತ್ತಾರೆ. ಇನ್ನು ಮೋದಿಗೆ ದೇಶದ ಬಗ್ಗೆ ಸ್ವಲ್ಪವೂ ಪ್ರೀತಿ ಇಲ್ಲ. ನಿಮ್ಮ ರಾಜಮಾತೆಯಂತೆ ಅವನು ಭಯೋತ್ಪಾದಕರು ಮರಣ ಹೊಂದಿದಾಗ ಬಿಕ್ಕಿ ಬಿಕ್ಕಿ ಅಳುವದಿಲ್ಲ. ಛೇ ಇಂಥವರು ಮುಂದಿನ ಪ್ರಧಾನಿ ಆಗಲು ಖಂಡಿತ ಲಾಯಕ್ಕಿಲ್ಲ. ನಮ್ಮ ಸೈನಿಕರ ತಲೆ ಕತ್ತರಿಸಿಕೊಂಡು ಹೋದಾಗ ಪಾಕಿಸ್ತಾನವನ್ನು ಎಚ್ಚರಿಸುತ್ತಾನಲ್ಲ? ನಮ್ಮ ಪ್ರಧಾನಿಗೆ ಹಳ್ಳಿ ಹೆಂಗಸು ಅಂದಾಗ ನಮ್ಮ ಮಹಾರಥಿಗಳೂ ಜ್ಞಾನಪೀಠಿಗಳೆ ಸುಮ್ಮನಿದ್ದಾಗ ಇವನು ಮೂಗು ತೂರಿಸುತ್ತಾನಲ್ಲ ? ಛೆ ಇವನೆಂಥವನು ? ಮೌನಿ ಬಾಬಾನೇ ಸುಮ್ಮನಿದ್ದಾರೆ ತಾನು ಹೇಳಿಕೆ ಕೊಡುತ್ತಾನೆ. ತಪ್ಪಲ್ಲವೆ? ರಾಹುಲಗೆ ಈಗಾಗಲ್ಜೇ ಒಂದು ರಾಜ್ಯದ ಮುಖ್ಯಮಂತ್ರಿಯಾಗಿ ತನ್ನ ರಾಜ್ಯ ಅಭಿರುದ್ಧಿ ಪಥದತ್ತ ಒಯ್ದ ಅನುಭವವಿದೆ. ಮಂತ್ರಿಯಾಗಿ ಒಳ್ಳೆಯ ಹೆಸುರು ಮಾಡಿದ ಅನುಭವವಿದೆ. ವಿದೇಶಾಂಗ ಮಂತ್ರಿಯಾಗಿ ಅವರು ಅನೆಕ ದೆಶಗಳೋಂದಿಗೆ ಸಂಬಂಧ ಸುಧಾರಿಸುವಂತೆ ಮಾಡಿದ್ದಾರೆ. ಮೋದಿಯಂತೆ ನಾಮ ಬಲದಿಂದ ಬಂದವರೆ? ಇಂಥವರು ಈ ದೆಶದ ಪ್ರಧಾನಿ ಆಗಬೇಕೆಂಬ ನಿಮ್ಮ ಕಾಳಜಿಗೆ ನನ್ನ ಕೋಟಿ ಕೋಟಿ ಸಲ್ಲಾಂ

      Reply
  3. M A Sriranga

    ಸಲಾಂ ಬಾವ ಅವರೇ ರಾಜಕೀಯ ಹಾಗೂ ಪ್ರಧಾನ ಮಂತ್ರಿ ,ಮುಖ್ಯಮಂತ್ರಿ ಮತ್ತು ಮಂತ್ರಿ ಕೆಲಸಗಳು ಎನ್ನುವುದು ವಿದ್ಯಾರ್ಹತೆಗೆ ತಕ್ಕಂತೆ ಕೆಲಸಕ್ಕೆ apply ಮಾಡುವುದಲ್ಲ; campus selectionನ್ನೂ ಅಲ್ಲ. Political Scienceನಲ್ಲಿ P. hd ಮಾಡಿ ಹತ್ತಾರು ಚಿನ್ನದಪದಕಗಳಿಸಿಯೋ ಅಥವಾ IIM ನಲ್ಲಿ ಓದಿಯೋ ಮಾಡಬೇಕಾದ ಕೆಲಸವಲ್ಲ. ನಮ್ಮ ಈವರೆಗಿನ ಪ್ರಧಾನ ಮಂತ್ರಿಗಳು ಇವೆಲ್ಲಾ ಇಲ್ಲದೇ ೧೯೪೭ರಿಂದ ಇಲ್ಲಿಯವರೆಗೆ ದೇಶದ ಹೊಣೆ ಹೊತ್ತಿಲ್ಲವೇ? ಮುಖ್ಯವಾಗಿ ಬೇಕಾಗಿರುವುದು ರಾಜಕೀಯ ಇಚ್ಚಾಶಕ್ತಿ. ಗಾರ್ಡಿಯನ್ ಪತ್ರಿಕೆಗೆ ಕಳವಳ ವ್ಯಕ್ತಪಡಿಸಿ NRI ಗಳು ಬರೆದ ಸೋಗಲಾಡಿತನದ angleನ ಲೇಖನವಲ್ಲ;ಕಳಕಳಿ ಅಲ್ಲ. ಈ ಅರವತ್ತೇಳು ವರ್ಷಗಳು ತಮಗೆ ಮತ್ತು ಈ ಲೇಖಕರಂತಹ ಉನ್ನತ ಮಟ್ಟದ ಚಿಂತಕರಿಗೆ ಕಾಡದಿದ್ದ ದೇಶಪ್ರೇಮ ಈಗ ಧುತ್ತನೆ ಬಂದಿದ್ದಾದರೂ ಏಕೆ ಮತ್ತು ಹೇಗೆ?

    Reply
    1. Godbole

      ಶ್ರೀರಂಗ ಅವರೇ, ಈ ಸಲಾಂ ಬಾವ ಅವರಿಗೆ ಆಕ್ಸ್ಫರ್ಡ್, ಕೇಂಬ್ರಿಡ್ಜ್ , ಅಥವಾ ಹಾರ್ವಾರ್ಡ್ ನಲ್ಲಿ ‘ಉನ್ನತ’ ವ್ಯಾಸಂಗ ಮಾಡಿದ ರಾಹುಲ್ ಗಾಂಧೀ, ಮನಮೋಹನ್ ಸಿಂಗ್, ಚಿದಂಬರಂ, ಕಪಿಲ್ ಸಿಬಲ್, ಸಲ್ಮಾನ್ ಖುರ್ಷಿದ್ ತರಹದ ಕಾಂಗ್ರೆಸ್ ರಾಜಕಾರಣಿಗಳಷ್ಟೇ ಈ ದೇಶದ ಆಡಳಿತ ನಡೆಸಲು ಲಾಯಕ್ಕಾದ ವ್ಯಕ್ತಿಗಳು. ವಸಾಹತುಶಾಹಿಯ ಬಳುವಲಿಯಾದ ಗುಲಾಮಿ ಮನೋಭಾವ ಇವರನಿನ್ನೂ ಬಿಟ್ಟಿಲ್ಲ.

      Reply
    2. Salam Bava

      of course, campus selection ನಿಂದ ಅಲ್ಲ , ಆದರೆ ಈ ೬೭ ವರ್ಷ ದೇಶವನ್ನು ಆಳಿದ ಯಾವುದೇ ಪ್ರಧಾನಿಯ ಕೇವಲ ರಾಜಕೀಯ ಇಚ್ಚಾ ಶಕ್ಥಿಯೊಂದರಿಂದ ಮಾ ತ್ರ ಅಲ್ಲ .ಪ್ರಜಾಸತ್ತೆಯಲ್ಲಿ ಬಹುಮತಕ್ಕೆ ಮಾನ್ಯತೆ ,ಆದ್ರೆ ನಮ್ಮ ಇಷ್ಟ ರ ವರೆಗಿನ ಯಾವ ಪ್ರಧಾನಿಯೂ ಮೋದಿಯಂತೆ ದ್ವೆಶಿಸಲ್ಪಡಲಿಲ್ಲ .ವಿನ್ಸ್ತನ್ ಚರ್ಚಿಲ್ ಹೇಳಿದ್ದು -ಒಂದು ದೇಶದ ಚುಕ್ಕಾಣಿ ಹಿಡಿಯುವ ವ್ಯಕ್ತಿ ಪ್ರಜೆಗಳಿಂದ ಪ್ರೀತಿಸಲ್ಫಡದಿದ್ದರೆ ಓಕೆ ,ಆದರೆ ಕೆಲವೇ ವ್ಯಕ್ತಿಗಲಾದರೂ ತೀವ್ರ ದ್ವೇಷಿಸುವ ನನ್ನು ಆ ಪದಕ್ಕೆ ನೇಮಿಸುದಕ್ಕೆ ನನ್ನ ವಿರೋದವಿದೆ ಭಾರತದಂಥ ಒಂದು ವ್ಯವಿದ್ಯಮಯ ದೇಶದ ಭವಿಷ್ಯವನ್ನು ಕೇವಲ ಓರ್ವ ವ್ಯಕ್ತಿಯ ಪಾದತಲದಲ್ಲಿ ಅರ್ಪಿಸುದಕ್ಕಿಂಥ ದುರ್ವಿದಿ ಬೇರೆ ಇದೆಯೇ .ಬಿಜೆಪಿ ಒಬ್ಬ ವ್ಯಕ್ತಿಗೆ ತನ್ನನ್ನು ಸಂಪೂರ್ಣ ಶರಣಾಗಿಸಿಕೊಂಡಿದೆ ಮೊದಲು ಪಕ್ಷದ ರಕ್ಷಕ ಮತ್ತು ಈಗ ರಾಷ್ಟದ ರಕ್ಷಕ ಎಂದು ಬಿಂಬಿಸಿ ,ಕಾರ್ಯಕರ್ತರಿಂದ ಹಿಡಿದು ,ತಮ್ಮಂಥ ಸಮರ್ಥಕರು ,ಅಡ್ವಾಣಿ ಯಂಥ ನಾಯಕರು ಅವರಿಗೆ ತಮ್ಮನ್ನು ಸಂಪೂರ್ಣ ಸಮರ್ಪಿಸಿ ಕೊಂಡಿದ್ದಾರೆ. ಅವರೆಂದರೆ ಒಂದು ರೀತಿಯ ಮತ್ತು ಬೀತಿಯ ವಾತಾವರಣದ ನಿರ್ಮಾಪಕ . ಮುಸ್ಲಿಂ ,ಲಿಬರಲ್ ಹಿಂದೂ ,ಸೆಕ್ಯುಲರಿಸ್ಟ್ ,ಕ್ರಿಸ್ಚನ್ ,ಎಡ ಪಂಥಿಯರು ,ಸಮಾಜವಾದಿಗಳು ,ಮಮತಾ,ಮಾಯಾವತಿ,ಜಯ,ದ್ರಾವಿಡ ಚಿಂತನೆಯವರು ,ದಲಿತರು ,ಸಿವಿಲ್ ಸೊಸೈಟಿ ,ರಯೆತರು ,ಬುದ್ದಿಜೀವಿಗಳು ,ಪತ್ರಕರ್ತರು ಮೊದಲಾದ ಭಾರತೀಯ ಸಮಾಜದ ವರ್ಗ ,ಅರಬರಿಂದ ಹಿಡಿದು ಯುರೋಪಿಯನ್ರ ವರೆಗೆ ಅನ್ಥರಾಸ್ಟ್ರೀಯ ಸಮೂಹ ಮೋದಿಯನ್ನು ಒಂದಾ ದ್ವೆಶಿಸುತ್ತದೆ ಇಲ್ಲವೇ ಬೀತಿಗೊಳಗಾಗಿದೆ ..ಭಾರತದ ಪ್ರಧಾನಿಯಾಗಲು ಇರಬೇಕಾದ ನಮ್ರತೆ ,ಸಭ್ಯತೆ ಯಾ ಕೊರತೆ ಇವರಲ್ಲಿ ಕಾಣಿಸುತ್ತಿಲ್ಲವೇ . ಇಚ್ಚಾಶಕ್ತಿ ಎಂದರೆ – ಮೇಧಾ ಪಾಟ್ಕರ್ ,ತೀಸ್ತ ಸೇಟಲ್ವಾದ್ ,ಭಟ್ ಮೊದಲಾದವರನ್ನು ಬೇಟೆಯಾಡಿ ಮಣಿಸಿದಂತೆ ಅಂದಾದರೆ ಅದನ್ನು ಯಾವ ನ್ಯಾಯ ಪಕ್ಷಪಾತಿಯೂ ಒಪ್ಪಲಿಕ್ಕಿಲ್ಲ

      Reply
      1. M A Sriranga

        ಸಲಾಂ ಬಾವ ಅವರಿಗೆ->>>ಪ್ರಜಾಸತ್ತೆಯಲ್ಲಿ ಬಹುಮತಕ್ಕೆ ಮಾನ್ಯತೆ>>>> ಸರಿಯಾದ ಮಾತು. ಆದರೆ ಒಂದು ಪಕ್ಷಕ್ಕೆ ಬಹುಮತವಿದೆಯೋ ಇಲ್ಲವೋ ಎಂದು ತಿಳಿಯುವುದು ಚುನಾವಣೆಯ ಫಲಿತಾಂಶ ಬಂದಮೇಲೆ ತಾನೇ? ಈಗಲೇ ಒಬ್ಬ ವ್ಯಕ್ತಿ/ಪಕ್ಷದ ಬಗ್ಗೆ ಏಕೆ ತೀರ್ಮಾನ ಕೊಡುತ್ತಿದ್ದೀರಿ? ಗುಜರಾತೂ ಸೇರಿದಂತೆ ಇತರ ಮೂರ್ನಾಲಕ್ಕು ರಾಜ್ಯಗಳಲ್ಲಿ ಬಿ ಜೆ ಪಿ ಅಧಿಕಾರದಲ್ಲಿದೆ. ನಮ್ಮ ಕರ್ನಾಟಕದಲ್ಲೂ ಕಳೆದ ಐದು ವರ್ಷಗಳು ಬಿ ಜೆ ಪಿ ಅಧಿಕಾರದಲ್ಲಿತ್ತು. ಹಾಗಾದರೆ ಅವರು ಮತ್ತು ನಾವುಗಳು ತಮ್ಮ ಜಮಾ ಖರ್ಚಿನ ಲೆಕ್ಕದ ಯಾವ ಕಾಲಂ ನಲ್ಲೂ ಬರುವುದಿಲ್ಲವೇ? ಬಿ ಜೆ ಪಿಯ ಮಾತೃಪಕ್ಷವಾದ ಹಿಂದಿನ ಜನ ಸಂಘದಲ್ಲಿ ಕೇವಲ ಇಬ್ಬರು ಎಂ ಪಿ ಗಳಿದ್ದರು. ಕಾಲಾನುಕಾಲದಲ್ಲಿ ಅದು ೧೮೫ರ ಆಸುಪಾಸಿಗೆ ಬಂದು ಭಾರತವನ್ನು ಸಮರ್ಥವಾಗಿ ಮುನ್ನಡೆಸಲಿಲ್ಲವೇ? ಹಾಗಾದರೆ ಹಿಂದಿನವರು ಮತ್ತು ಇಂದು ಬಿ ಜೆ ಪಿ ಮತ್ತು ಮೋದಿಯವರ ಪರವಾಗಿ ಇರುವವರೆಲ್ಲಾ ತಮ್ಮ ಅಭಿಪ್ರಾಯದಂತೆ ಮೂರ್ಖರೇ? ತಮ್ಮ ಮತ್ತು ಈ ಲೇಖನ ಬರೆದವರ ಸಮಸ್ಯೆಯೇನೆಂದರೆ ಬಿ ಜೆ ಪಿ ಅಧಿಕಾರಕ್ಕೆ ಬಂದರೂ ಬರಲಿ;ಆದರೆ ಮೋದಿಯವರು ಪ್ರಧಾನಮಂತ್ರಿ ಆಗುವುದು ಬೇಡ ಎನ್ನುವುದಷ್ಟೇ ಹೊರತು ಬೇರೇನೂ ಅಲ್ಲ. ಅದಕ್ಕೆ ಕೊಂಕಣ ಸುತ್ತಿ ಮೈಲಾರಕ್ಕೆ ಬಂದವರ ಹಾಗೆ ನಾನಾ ವರಸೆಗಳ ಪಟ್ಟು ಹಾಕುತ್ತಿದ್ದೀರಿ. ಆದರೆ ತಾವು ದೀರ್ಘವಾದ ಪಟ್ಟಿಯಲ್ಲಿ ಕೊಟ್ಟಿರುವ “ಕೆನೆ ಪದರದ ಮಹಾಶಯರುಗಳು” ಮಾತ್ರ ಭಾರತದ ಪ್ರಜೆಗಳು ಅಲ್ಲ. ಅವರನ್ನು ಬಿಟ್ಟು ಇನ್ನೂ ಕೋಟ್ಯಾನುಕೋಟಿ ಜನರಿದ್ದಾರೆ. ಅವರನ್ನು ಮರೆಯಬಾರದಲ್ಲವೇ?

        Reply
        1. Salam Bava

          ಮೇರಾ ಭಾರತ್ ಮಹಾನ್ ಹೈ -ನಾನು ಭಾರತೀಯನೆಂದು ಹೆಮ್ಮೆ ಪಡುತ್ತೇನೆ ,ಭಾರತವನ್ನು ಅತೀವವಾಗಿ ಪ್ರೀತಿಸುತ್ತೇನೆ . ನಿಮಗೆಲ್ಲಾ ಎಷ್ಟು ಹಕ್ಕು ಮತ್ತು ಕರ್ತ್ಯವ್ಯಗಳು ಈ ದೇಶದ ಪ್ರಜೆಯಾಗಿ ಇವೆಯೋ ಅದೆಲ್ಲಾ ನನಗೂ ಇದೆ. ನೀವು ಯಾರೂ ಮೂರ್ಖರೆಎಂದು ನಾನು ಯಾವತ್ತೂ ಹೇಳಲಾರೆ . ನೀವಲ್ಲಾ ಹಿಂದೂ ರಾಷ್ಟ್ರವಾದ ಮತ್ತು ಮೋದಿ ತೋರಿಸುವ ಅಭಿವ್ರಿದ್ದಿ ಎಂಬ ಮಂಕು ಬೂದಿಗೆ ಎರವಾಗಿದ್ದೀರಿ ಅಲ್ಲವೇ ? ಕೇವಲ ಒಂದು ಧಾರ್ಮಿಕ ನಂಬಿಕೆಯ ಮೇರೆಗೆ ನನ್ನ ಮಾತ್ರ್ರ್ ದೇಶದಲ್ಲಿ ನನ್ನನ್ನು ಎರಡನೆಯ ದರ್ಜೆಯ ಪ್ರಜೆಯಾಗಿಸುವ ಹುನ್ನಾರಕ್ಕೆ ,ನನ್ನ ದೇಶ ಅತ್ಯಂತ ಜತನದಿಂದ ಕಾಪಾಡಿದ ಉನ್ನತ ಮೌಲ್ಯಕ್ಕೆ ದಕ್ಕೆ ತರುವ ಪ್ರಯತ್ನಕ್ಕೆ ನಾನು ಬೆಂಬಲಿಸಬೇಕೆ ?ಈ ಲೇಖನದಲ್ಲಿ ಲೇಖಕರ ಕಳಕಳಿಯ ಮೂಲ ಅದುವೇ .
          ಹಿಟ್ಲರ್ ಜರ್ಮನಿ ಯಲ್ಲಿ ಅತ್ಯಂತ ಪ್ರಸಿದ್ದನಾಗಿದ ,ಅವನ ಸಬೆಗೆ ಲಕ್ಷಾನತರ ಜನ ಸೇರುತ್ತಿದ್ದರು ,ಎಲ್ಲಾ ಭಂಡ್ವಾಲಶಾಹಿಗಳು ಅವನ ಬೆಂಬಲಕ್ಕೆ ನಿಂತ್ತಿದ್ದರು ,ಅವನ ಮಾತೇ ವೇದವಾಕ್ಯವಾಗಿತ್ತು ,ಎಲ್ಲಿಯ ವರೆಗೆ ಅಂದರೆ -ಅವನಿಗೆ ಒಬ್ಬ Mistress ಇದ್ದ ವಿಷಯ ಅವನ ಪತನದ ವರೆಗೆ ಜರ್ಮನ್ ರಿಗೆ ತಿಳಿದಿರಲಿಲ್ಲಾ . ಆರ್ಯ ವಂಶದ superiority ಯನ್ನು ಬೋದಿಸಿ ಜನರನ್ನು ಬಡಿದೆಬ್ಬಿಸುತ್ತಿದ್ದ ಇದರ ಒಂದು ಝಲಕ್ ಇಂದಿನ ಭಾರತೀಯ ರಾಜಕೀಯ ವೀಕ್ಸಣೆ ಯಲ್ಲಿ ಕಾಣುತ್ತದೆಯೋ .
          ಮತೀಯ ಆದಾರದ ಮೇಲೆ ಕಟ್ಟಿದ ಪಾಕಿಸ್ತಾನದ ಸ್ತಿತಿ ನೋಡಿ . ಎಂಥಾ ಬಲಾಡ್ಯ ಸೋವಿಯಟ್ ,ಸದ್ದಾಂ ನಂಥ ಸರ್ವಾದಿಕಾರಿಯ ಸೆಲೆಯಲ್ಲಿ ಸಿಕ್ಕ ಇರಾಕೆ ,ಆಫ್ರಿಕಾ ದ ಏಕಚಕ್ರಾದಿಪತ್ಯಗಳು ಇವೆಲ್ಲಾ ಛಿದ್ರವಾದದ್ದು ಓರ್ವ ವ್ಯಕ್ತ್ಯಿಯ ಪಾದದಲ್ಲಿ ಒಂದು ಇಡೀ ದೇಶವನ್ನು ಅರ್ಪಿಸಿದ್ದದ್ದರಿಂದ .
          ಇನ್ನು ಕರ್ನಾಟಕದಲ್ಲಿನ ಬಿಜೆಪಿ ಆಳ್ವಿಕೆ ನಾವೆಲ್ಲಾ ನೋಡಿದ್ದೆವೆ ,ಅನುಭವಿಸಿದ್ದೆಇವೆ ಽದನ್ನು ಒಂದು ದುಃಸ್ವಪ್ನ ಎಂದು ಮರೆತು ಬಿಡಿ

          Reply
          1. M A Sriranga

            ಸಲಾಂ ಬಾವ ಅವರೇ ಮೋದಿಯವರು ಪ್ರಧಾನಿ ಆದರೆ ಭಾರತ ಹಿಂದುರಾಷ್ಟ್ರವಾಗಿ ಪರಿವರ್ತನೆಯಾಗಿಬಿಡುತ್ತದೆ ಎಂಬುದು ಹುಸಿ ಜಾತ್ಯಾತೀತವಾದಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಮಾಡುತ್ತಿರುವ ಮಾತಿನ ಚಮತ್ಕಾರ ಅಷ್ಟೇ. ಹಿಂದುಯೇತರರನ್ನು ಎದುರುಹಾಕಿಕೊಂಡು ಸರ್ಕಾರ ನಡೆಸಲಿಕ್ಕೆ ಭಾರತ ದೇಶ ಹಿಂದಿನ ಕಾಲದ ಯಾವುದೋ ಸಣ್ಣ ಪುಟ್ಟ ಸಂಸ್ಥಾನವಲ್ಲ. ಹಿಂದೂಗಳು ಇತರ ಧರ್ಮದವರ ಹಾಗೆ ಅಂಧ ಶ್ರದ್ಧೆಯವರಲ್ಲ. ಅದನ್ನು ಮರೆಯಬೇಡಿ. ಇದರ ಜತೆಗೆ . ಭಾರತ ಸರ್ಕಾರದ ಪ್ರತಿ ನಡೆಯನ್ನೂ ಇಡೀ ವಿಶ್ವವೇ ಎಚ್ಚರಿಕೆಯಿಂದ ಗಮನಿಸುತ್ತಿರುತ್ತದೆ. ನಮ್ಮ ಸಂಸತ್ತಿನಲ್ಲಿ ವಿರೋಧಪಕ್ಷಗಳು ಅವಕಾಶ ಸಿಕ್ಕರೆ ಸಾಕು ಸರ್ಕಾರದ ಕಾಲನ್ನು ಎಳೆಯಲು ಕಾದಿರುತ್ತವೆ. ಇಷ್ಟೆಲ್ಲಾ ನಿಜಾಂಶಗಳನ್ನು ಪಕ್ಕಕ್ಕೆ ಸರಿಸಿ ತಾವು ತಮ್ಮ ಕಲ್ಪನಾಲೋಕದಲ್ಲೇ ವಿಹರಿಸುವುದಾದರೆ ಅದು ತಮ್ಮ ಇಷ್ಟ.

  4. avani

    ಸಲಾಂ ಬಾವ ಅವರೆ ಎಮರ್ಜನ್ಸಿ ತಂದು ನಮ್ಮನ್ನು ಎಲ್ಲ ಸ್ವಾತಂತ್ರ್ಯದಿಂದ ವಂಚಿತರನ್ನಾಗಿ ಮಾಡಿದ್ದು ಸರ್ವಾಧಿಕಾರಿ ಮೋದಿನೇ ಅಲ್ಲವೆ?? ಮರೆತಿದ್ದೆ ನೆನಪಿಸಿದ್ದಕ್ಕೆ ಧನ್ಯವಾದಗಳು.

    Reply
  5. Salam Bava

    ನಿಮ್ಮ ಧನ್ಯವಾದವನ್ನು ನಾನು ಸ್ವೀಕರಿಸಿದ್ದೇನೆ . ಇನ್ನು ಏನಾದರೂ ಉಪಯುಕ್ತ ಸಲಹೆ ,ಅರಿವು ಬೇಕೆಂದಾದರೆ feel free to ask me

    Reply
  6. avani

    [[ ಇನ್ನು ಏನಾದರೂ ಉಪಯುಕ್ತ ಸಲಹೆ ,ಅರಿವು ಬೇಕೆಂದಾದರೆ feel free to ask me]] ಖಂಡಿತ ಸರ್ ನಿಮ್ಮಂಥವರಿಂದ ಸಲಹೆ ಪಡೆಯದೇ ಯಾರಿಂದ ಪಡೆಯುವದು??????????!!!!!!!!!!!!!!!!!!!!!!!!!!!!!!!!! ಹಾ ಹಾ ಹಾ ಹಾ ಹಾ ಹಾ

    Reply

Leave a Reply

Your email address will not be published. Required fields are marked *