Daily Archives: January 23, 2015

ನ್ಯಾಯಾಧೀಶರ ನಡೆ: ಹೀಗಾದರೆ ನೊಂದವರಿಗೆ ನ್ಯಾಯದಾನ ಹೇಗೆ..?

– ಮಹೇಶ್ ಸಿ.

ರಾಮಚಂದ್ರಾಪುರ ಮಠದ ಸ್ವಾಮೀಜಿ ವಿರುದ್ಧ ದಾಖಲಾಗಿರುವ ಪ್ರಕರಣ ಸಂಬಂಧ ಕರ್ನಾಕಟಕದ ಹೈಕೋರ್ಟ್ ನಲ್ಲಿ ವಿಚಾರಣೆ ನಡೆಸಲು ಇದುವರೆಗೆ ಐದು ಮಂದಿ ನ್ಯಾಯಾಧೀಶರು ತಿರಸ್ಕರಿಸಿದ್ದಾರೆ. ಅವರಲ್ಲಿ ನ್ಯಾ.ಎಚ್.ಜಿ.ರಮೇಶ್ ಅವರು ತಾವು ಈ ಹಿಂದೆ ಆರೋಪಿ ಪರ ಹಿರಿhcಯ ವಕೀಲ ಬಿ.ವಿ.ಆಚಾರ್ಯ ಬಳಿ ಜೂನಿಯರ್ ಆಗಿ ಕೆಲಸ ಮಾಡಿದ್ದ ಕಾರಣ ನೀಡಿ ಹಿಂದೆ ಸರಿದಿದ್ದಾರೆ. ಉಳಿದವರು – ಎನ್.ಕುಮಾರ್, ಪಿ.ಬಿ.ಬಜಂತ್ರಿ, ಕೆ.ಎನ್.ಫಣೀಂದ್ರ ಹಾಗೂ ರಾಮಮೋಹನ ರೆಡ್ಡಿ – ಕಾರಣಗಳನ್ನು ಬಹಿರಂಗ ಪಡಿಸಿದಂತಿಲ್ಲ.

ನೋವುಂಡವರು ನ್ಯಾಯಾಲಯದ ಮೊರೆ ಹೋಗುವುದು ನ್ಯಾಯಕ್ಕಾಗಿ. ಪ್ರಕರಣದ ಸಂಬಂಧ ವಿಚಾರಣೆ ನಡೆಸಿ ತೀರ್ಪು ನೀಡುವುದು ನ್ಯಾಯಾಧೀಶರ ಜವಾಬ್ದಾರಿ. ಹೀಗೆ ಕೆಲ ಪ್ರಕರಣಗಳು ತಮ್ಮೆದುರು ಬಂದಾಗ, ವಿಚಾರಣೆ ನಡೆಸದೇ ಎದ್ದುಬಿಟ್ಟರೆ? ನ್ಯಾಯಾಧೀಶರಿಗೆ ಆ ತೀರ್ಮಾನ ತೆಗೆದುಕೊಳ್ಳಲು ಕಾನೂನಿನಲ್ಲಿ ಅವಕಾಶಗಳಿರಬಹುದು. ಆದರೆ, ಒಂದರ ಹಿಂದೆ ಒಂದೆಂಬಂತೆ, ಐದು ಮಂದಿ ಪ್ರಕರಣದಿಂದ ಹಿಂದೆ ಸರಿದರೆ ನ್ಯಾಯದಾನ ಪ್ರಕ್ರಿಯೆಗೆ ತೊಡಕಾಗುವುದಿಲ್ಲವೆ?

ತಮ್ಮ ಮುಂದೆ ಬರುವ ಪ್ರಕರಣದ ಆರೋಪಿ ಅಥವಾ ದೂರುದಾರರ ಜೊತೆ ಯಾ11-court
ವುದೇ ರೀತಿಯ ಸಂಪರ್ಕ, ಸಂಬಂಧ ಇದ್ದಂತಹ ಸಂದರ್ಭಗಳಲ್ಲಿ ನ್ಯಾಯಾಧೀಶರು ವಿಚಾರಣೆಯಿಂದ ಹಿಂದೆ ಸರಿಯುವುದು ಸಹಜ. ಆಗ ತಮ್ಮ ನ್ಯಾಯದಾನ ಪ್ರಕ್ರಿಯೆಯನ್ನು ಇತರರು ಅನುಮಾನದ ಕಣ್ಣುಗಳಿಂದ ನೋಡಬಹುದು ಎಂಬ ಕಾರಣಕ್ಕೆ ಹಾಗೆ ಮಾಡಬಹುದು. ಬಹುಶಃ ಅದೇ ಕಾರಣಕ್ಕೆ ನ್ಯಾಯಾಧೀಶರು ಎಲ್ಲರೊಂದಿಗೆ ಬೆರೆಯುವುದಿಲ್ಲ. ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದೂ ಕಡಿಮೆ. ಆದರೆ ಈ ಸ್ವಾಮೀಜಿ ಪ್ರಕರಣದಲ್ಲಿ ಐವರು ಹೀಗೆ ಹಿಂದೆ ಸರಿದಿದ್ದಕ್ಕೆ ಏನು ಕಾರಣ ಇರಬಹುದು ಎನ್ನುವುದು ಕುತೂಹಲಕಾರಿ. ಮಾಜಿ ಕಾನೂನು ಮಂತ್ರಿ ಸುರೇಶ್ ಕುಮಾರ್ ಕೂಡಾ ಈ ಬಗ್ಗೆ ತಮ್ಮ ಫೇಸ್ ಬುಕ್ ಅಕೌಂಟ್ ನಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ. ಆದರೆ ಈ ಬೆಳವಣಿಗೆಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ಇನ್ನಷ್ಟು ಚರ್ಚೆಯಾಗುವ ಅಗತ್ಯವಿದೆ.

ವಿವಿಧ ಕ್ಷೇತ್ರಗಳಲ್ಲಿ ಕೆಲಸ ನಿರ್ವಹಿಸುವ ಅನೇಕರು ತಮ್ಮ ಸಂಬಂಧಿಕರು ಅಥವಾ ಪರಿಚಯಸ್ಥರ ವಿರುದ್ಧವೇ ನಿಷ್ಪಕ್ಷಪಾತಿಯಾಗಿ ನಡೆದುಕೊಳ್ಳಬೇಕಾಗುತ್ತದೆ. ಅನೇಕ ಪೊraghweshwara_bharathi_gurujಲೀಸ್ ಅಧಿಕಾರಿಗಳು ತಮ್ಮ ವೃತ್ತಿ ಜೀವನದಲ್ಲಿ ಅಂತಹ ಸಂದರ್ಭಗಳನ್ನು ಎದುರಿಸಿ ಕರ್ತವ್ಯ ನಿರ್ವಹಿಸಿದ್ದಾರೆ. ಅನೇಕ ಪತ್ರಕರ್ತರು ಕೂಡಾ ತಮ್ಮ ಆತ್ಮೀಯರಿಗೆ ಕಹಿಯಾಗುವಂತಹ ಸುದ್ದಿಯನ್ನು ಬರೆಯುವಾಗ ಹಿಂದೆ ಮುಂದೆ ನೋಡದ ಎಷ್ಟೋ ಉದಾಹರಣೆಗಳಿವೆ. ನ್ಯಾಯಾಧೀಶರು ಕೂಡಾ, ತಮ್ಮ ಎದುರಿಗಿರುವವರು ಆರೋಪಿ, ದೂರುದಾರ ಎಂದಷ್ಟೇ ಗ್ರಹಿಸಿ ತಮ್ಮ ವಿವೇಚನೆ ಬಳಸಿ ನ್ಯಾಯದಾನ ಮಾಡಲು ಸಾಧ್ಯವಿಲ್ಲವೆ?