ಮೋದಿ ಮತ್ತು ಭವಿಷ್ಯದ ಇತಿಹಾಸದ ಪುಟಗಳು


– ರವಿ ಕೃಷ್ಣಾರೆಡ್ದಿ


 

“It’s easier to fool people than to convince them that they have been fooled.”― Mark Twain

ಇದು ಅಮೆರಿಕ ಅಲ್ಲ ಮತ್ತು ಇಲ್ಲಿ ಅಧ್ಯಕ್ಷೀಯ ವ್ಯವಸ್ಥೆ ಇಲ್ಲ. ಕಳೆದ ಮೂರ್ನಾಲ್ಕು ದಿನಗಳಿಂದ ದೇಶದ ದೊಡ್ಡ ಪಕ್ಷವೊಂದು ತನ್ನ ಪಕ್ಷದ ಪ್ರಧಾನ ಮಂತ್ರಿ ಅಭ್ಯರ್ಥಿಯನ್ನು ಘೋಷಿಸಿದ ಸುತ್ತಮುತ್ತ ನಡೆದ ಘಟನಾವಳಿಗಳ ಬಗ್ಗೆ ಹೇಳುವುದಾದರೆ, ಪ್ರಧಾನಿ ಸ್ಥಾನಕ್ಕೆ ಸ್ಪರ್ಧೆ ಇರುವುದಿಲ್ಲ ಮತ್ತು ಅಭ್ಯರ್ಥಿಗಳೂ ಇರುವುದಿಲ್ಲ. ಬಹುಮತ ಪಡೆದ ಸಂಸದೀಯ ಗುಂಪು ಆಯ್ಕೆ ಮಾಡಿಕೊಳ್ಳುವ ನಾಯಕತ್ವದ ಸ್ಥಾನ ಅದು. ಇತ್ತೀಚೆಗೆ ಆಗುತ್ತಿರುವುದೆಲ್ಲ ಮೀಡಿಯಾ ಮ್ಯಾನೇಜ್ ಮಾತ್ರವಾಗಿದೆ ಮತ್ತು ನಿತ್ಯಹಸಿವಿನ ಕಾರಣಕ್ಕಾಗಿ ಅದನ್ನು ಮಾಧ್ಯಮಗಳು ಭಕ್ಷಿಸಿ ಜನರಿಗೆ ಉಣಬಡಿಸುತ್ತಿವೆ.

ಗುಜರಾತಿನ ನೆಲದಲ್ಲಿ ಹುಟ್ಟಿಬಂದ ಸಂತ, ರಾಜಕಾರಣಿ, ಶಾಂತಿದೂತ,  ಗಾಂಧೀಜಿ. 200px-MKGandhi[1]ಹಲವಾರು ಭಿನ್ನಾಭಿಪ್ರಾಯಗಳಿದ್ದರೂ ಕೊನೆಯವರೆಗೂ ಗಾಂಧೀಜಿಯನ್ನು ಗೌರವಿಸುತ್ತ ಉಳಿದವರು ಸರ್ದಾರ್ ಪಟೇಲ್. ದೇಶ ಕಟ್ಟಿದವರು. ಅಂತಹ ನೆಲದಲ್ಲಿ ಯಾವುದೇ ಪಾಪಪ್ರಜ್ಞೆ ಮತ್ತು ಪ್ರಾಯಶ್ಚಿತ್ತದ ಲವಲೇಶವೂ ಇಲ್ಲದ ಕಳೆಯ ಗಿಡವೊಂದು ಇಂದು ವಿಷಪೂರಿತ ಮುಳ್ಳುಗಳೊಂದಿಗೆ ಆಮ್ಲಜನಕಕ್ಕೆ ಬದಲಾಗಿ ಇಂಗಾಲವನ್ನೇ ಕಕ್ಕುವ ಹೆಮ್ಮರವಾಗಿ ಬೆಳೆದು ನಿಂತಿದೆ. ಭಾರತದ ಇತಿಹಾಸ, ಪರಂಪರೆ ಮತ್ತು ಆತ್ಮದ ಪರಿಚಯವೇ ಇಲ್ಲದ ಜನ ಈ ದೇಶವನ್ನು ರೋಬಾಟ್ ಯಂತ್ರಮಾನವರಂತೆಯ ಏಕೋದ್ದೇಶದ ಮನುಷ್ಯರ ಸಂಕುಚಿತ ರಾಷ್ಟ್ರ ಕಟ್ಟುವುದಕ್ಕಾಗಿ, ಈ ದೇಶದಲ್ಲಿ ನಡೆದ ಸಾಂಸ್ಕೃತಿಕ ಮತ್ತು ರಾಜಕೀಯ ಹೋರಾಟಗಳ, ನ್ಯಾಯ ಮತ್ತು ಸಮಾನತೆಯ, ಮಾನವನ ಪರಮಾದ್ಭುತ ಜೀವವಿಕಾಸದ ಮತ್ತು ವಲಸೆಯ ಕತೆಯನ್ನೇ ತಿರುಚಿ ಕಗ್ಗತ್ತಲ ಭವಿಷ್ಯ ಬರೆಯಹೊರಟಿದ್ದಾರೆ.

ಮೋದಿಯನ್ನು ಪ್ರಧಾನ ಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದಾಕ್ಷಣ ಮೋದಿಯೇನೂ ಪ್ರಧಾನಿ ಆಗುವುದಿಲ್ಲ. ಚುನಾವಣೆಯಲ್ಲಿ ಏನಾಗುತ್ತದೆ ಎಂದು ಊಹಿಸಲಾಗದ ರಭಸದ ಮತ್ತು ಅನಿಶ್ಚಿತತೆತ ವರ್ತಮಾನದಲ್ಲಿ ನಾವಿದ್ದೇವೆ. ಈಗಿನ ಪರಿಸ್ಥಿತಿಯನ್ನು ಇಟ್ಟುಕೊಂಡು ಹೇಳುವುದಾದರೆ ಬಿಜೆಪಿ ಮತ್ತದರ ಎರಡೇ ಎರಡು ಮಿತ್ರಪಕ್ಷಗಳು ಏನೇ ತಿಪ್ಪರಲಾಗ ಹಾಕಿದರೂ ಮುಂದಿನ ಸರ್ಕಾರ ರಚಿಸುವ ಸ್ಥಿತಿ ಮುಟ್ಟುವುದಿಲ್ಲ. ಆದರೆ ಅವಿಭಜಿತ ಆಂಧ್ರಪ್ರದೇಶದ ತೆಲಂಗಾಣ ಮತ್ತು ಸೀಮಾಂಧ್ರದಲ್ಲಿ ಅಪ್ರಸ್ತುತವಾಗುತ್ತ ಸಾಗಿರುವ ತೆಲುಗುದೇಶಂ ಪಕ್ಷ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡರೆ ಅಲ್ಲೊಂದು ಬೋನಸ್ ಪಕ್ಷ ಸಿಗುತ್ತದೆ, ಆದರೆ ಹೆಚ್ಚಿನ ಸೀಟುಗಳೇನೂ ಬರುವ ಹಾಗೆ ಕಾಣಿಸುತ್ತಿಲ್ಲ. ತಮಿಳುನಾಡಿನಲ್ಲಿ ಜಯಲಲಿತ ಜೊತೆಯಾಗಬಹುದು. ಮಾಮೂಲಿನಂತೆ ಒಂದೇ ಪಕ್ಷಕ್ಕೆ ಅಪಾರವಾದ ಬಹುಮತ ಕೊಡುವ ತಮಿಳುನಾಡಿನ ನಿಯಮ ಈ ಸಾರಿಯೂ ಪುನರಾವರ್ತನೆ ಆಗಿ ಜಯಲಲಿತರ ಪಕ್ಷಕ್ಕೆ ಹೆಚ್ಚು ಸ್ಥಾನಗಳು ಬಂದರೆ ಅದು ಮಾತ್ರ ಮೋದಿಗೆ ನಿಜವಾದ ಬೋನಸ್.

ಆದರೂ ಚುನಾವಣೆಗಳಲ್ಲಿ ಹೀಗೆ ಆಗುತ್ತದೆ ಎಂದು ಹೇಳಲಾಗುವುದಿಲ್ಲ. ತಿಂಗಳ ಹಿಂದೆ ಎರಡು ಲೋಕಸಭಾ ಸ್ಥಾನಕ್ಕೆ ನಡೆದ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಎರಡರಲ್ಲೂ ಸೋಲುತ್ತದೆ ಎಂದುಕೊಂಡ ಅನೇಕರಲ್ಲಿ ನಾನೂ ಒಬ್ಬ. ಮಂಡ್ಯದಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ ಎಂದು ನಾನು ಮಾತನಾಡಿಸಿದ ಕೆಲವು ಕಾಂಗ್ರೆಸ್ ನಾಯಕರಿಗೇ ವಿಶ್ವಾಸವಿರಲಿಲ್ಲ. ಹಾಗಾಗಿ, ಅಂಕಗಣಿತ ಏನೇ ಹೇಳಿದರೂ Modiಮೋದಿ ನೇತೃತ್ವದ ಎನ್‌ಡಿಎ‌ ಅಧಿಕಾರ ಸ್ಥಾನದ ಹತ್ತಿರಕ್ಕೆ ಬರುವುದೇ ಇಲ್ಲ ಎಂದು ಹೇಳುವುದು ನಮ್ಮಗಳ ಇಚ್ಚೆ ಆಗುತ್ತದೆಯೇ ಹೊರತು ಕಾಲಜ್ಞಾನವಾಗುವುದಿಲ್ಲ. ಅವಕಾಶವಾದಿ ಮತ್ತು ಸಮಯಸಾಧಕ ರಾಜಕಾರಣಿಗಳೇ ಹೆಚ್ಚಿರುವ ದೇಶ ನಮ್ಮದು. ಅದರ ಜೊತೆಗೆ, ದೇಶದಲ್ಲಿ ಹೆಚ್ಚುತ್ತಿರುವ ನಗರವಾಸಿಗಳು, ನಗರ ಪ್ರದೇಶಗಳಲ್ಲಿಯೇ ಹೆಚ್ಚು ಘಟಿಸುವ ಕೋಮುಗಲಭೆಗಳು ಮತ್ತದು ಮಾಡುವ ಓಟು-ಕ್ರೋಢೀಕರಣ, ತಂತ್ರಜ್ಞಾನವನ್ನು ಬಳಸಿಕೊಂಡು ಭಾವಾವೇಶ ಮತ್ತು ಸಂಕುಚಿತ ಮತಾಂಧತೆಯನ್ನು ಹರಡಲು ಮಾಡುತ್ತಿರುವ ವ್ಯವಸ್ಥಿತ ಪ್ರಯತ್ನ, ವ್ಯಕ್ತಿಪೂಜೆ, ಇತ್ಯಾದಿಗಳು ಮೋದಿ ಮತ್ತವರ ಪಕ್ಷಕ್ಕೆ ಚುನಾವಣೆಯಲ್ಲಿ ಅನುಕೂಲ ಮಾಡಿಕೊಡುವ ಅಂಶಗಳು. ಹಾಗೇನಾದರೂ ಆದರೆ, ಭವಿಷ್ಯದ ಇತಿಹಾಸಕಾರರು ಈ ತಲೆಮಾರಿನ ಬಗ್ಗೆ ಒಳ್ಳೆಯ ಮಾತುಗಳನ್ನು ಆಡುವುದಿಲ್ಲ.

ಆದರೆ ಕರ್ನಾಟಕ ಬೇರೆಯದೇ ತೀರ್ಮಾನ ತೆಗೆದುಕೊಳ್ಳುತ್ತದೆ ಎನ್ನುವ ವಿಶ್ವಾಸ ನನ್ನದು. ದೇಶದಲ್ಲಿಯ ಕೆಲವು ಕಡೆ ಅಷ್ಟೇ ಅಲ್ಲದೆ ಕರ್ನಾಟಕದಲ್ಲಿಯೂ ಎದ್ದು ಕುಣಿಯುತ್ತಿರುವ ಕೆಲವು ಪಿತೂರಿಕೋರ ನರಿಗಳಿಗೆ ಬಿಜೆಪಿ ಪಕ್ಷ ತಾನು ಪ್ರತಿನಿಧಿಸುತ್ತಿರುವ ಬೆಂಗಳೂರು ನಗರದ ಮೂರು ಲೋಕಸಭಾ ಸ್ಥಾನಗಳಲ್ಲಿ ಒಂದನ್ನು ಉಳಿಸಿಕೊಂಡರೂ ಸಾಧನೆ ಆಗುತ್ತದೆ ಎನ್ನುವುದರ ಅರಿವಿದ್ದಂತಿಲ್ಲ. ರಾಜ್ಯದಲ್ಲಿ ಸದ್ಯದ ವಾಸ್ತವವೇ ಬೇರೆ ಇದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಗರದಲ್ಲಿಯ ಕನಿಷ್ಟ ಮೂರು ಸ್ಥಾನಗಳಲ್ಲಿ (ಹೆಬ್ಬಾಳ, ಜಯನಗರ, ಬಸವನಗುಡಿ) ಕಾಂಗ್ರೆಸ್ ಹೀನಾಯವಾಗಿ ಸೋತು ಬಿಜೆಪಿ ಗೆಲ್ಲಲು ಸ್ವತಃ ಕಾಂಗ್ರೆಸ್ ಕಾರಣವೇ ಹೊರತು ಬಿಜೆಪಿಗಿದ್ದಂತಹ “ಒಳ್ಳೆಯ” ಹೆಸರು ಅಲ್ಲ. ಇಂತಹ ಅನುಚಿತ ಔದಾರ್ಯವನ್ನು ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರದರ್ಶಿಸದೆ ಸರಿಯಾದ ತಂತ್ರಗಾರಿಕೆ ಮಾಡಿದರೆ, ಎಷ್ಟೇ ಮೋದಿ ಮುಖವಾಡಗಳು ಕುಣಿದಾಡಿದರೂ ಬೆಂಗಳೂರು ನಗರದಿಂದ ಒಬ್ಬನೇ ಒಬ್ಬ ಬಿಜೆಪಿ ಸಂಸದ ಗೆದ್ದು ಬರುವುದು ಕಷ್ಟವಿದೆ. ರಾಜ್ಯದ ಅನೇಕ ಕಡೆಯೂ ಇದೇ ಆಗಲಿದೆ.

ಮತ್ತು ಕೇಂದ್ರ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಮಾತನಾಡುತ್ತ, ಅದೇ ರಭಸದಲ್ಲಿ ನಮ್ಮ ರಾಜ್ಯ ಕಂಡ ಪರಮಾತಿಭ್ರಷ್ಟ ಯಡ್ಡಯೂರಪ್ಪನವರ ಜೊತೆಜೊತೆಗೆ ನಿಂತು ನರೇಂದ್ರ ಮೋದಿ ಮತ ಕೇಳಲಿರುವ ಚಿತ್ರ ಮೋದಿಯ ಅಧಿಕಾರದ ಹಪಹಪಿ ಮತ್ತು ನೀತಿಗಳಿಲ್ಲದ ಮನೋಭಾವವನ್ನೂ ಅನಾವರಣಗೊಳಿಸಲಿದೆ. ಇದನ್ನು ಪ್ರಾಮಾಣಿಕತೆ, ಬಲಿಷ್ಟ ದೇಶ, ಗಂಡಸುತನ, ದೇಶಭಕ್ತಿ, ಇತ್ಯಾದಿಗಳ ಹೆಸರಿನಲ್ಲಿ ಅಂತರ್ಜಾಲದಲ್ಲಿ ಎಗರಾಡುತ್ತಿರುವ ಕರ್ನಾಟಕದ ಕೆಲವು ಮತಾಂಧ ನರಿಗಳು ಹೇಗೆ ಸಮರ್ಥಿಸಿಕೊಳ್ಳಲಿವೆ? ಅವರಿಗೆ ಬೇಕಿರುವುದು ಜನಾಂಗ ನಿರ್ಮೂಲನೆಯೇ ಹೊರತು ಮನುಷ್ಯ ಸಮಾಜವನ್ನು ಕಟ್ಟುವ ಕಾಳಜಿ ಅಲ್ಲ. ಇದನ್ನು ಅರಿಯದ ಮುಗ್ಧರು, ದುಷ್ಟರು ಹಾಕಿದ ಕೋಮುದ್ವೇಷದ ಹೋಮದಲ್ಲಿ ಸಮಿತ್ತುಗಳಾಗಿ ಉರಿದುಹೋಗುತ್ತಿದ್ದಾರೆ. ದೇಶದ ಪ್ರಜ್ಞಾವಂತರೆಲ್ಲ ಈ ದುಷ್ಕೃತ್ಯದ ಸಾಮೂಹಿಕ ಜವಾಬ್ದಾರಿ ಹೊರಬೇಕಿದೆ.

ಬಹುಶಃ ಈ ಚುನಾವಣೆ ಕಾಂಗ್ರೆಸ್‌ನ rahul_priyanka_soniaಇಂದಿರಾಗಾಂಧಿ ಕುಟುಂಬದ ವಂಶಪಾರಂಪರ್ಯ ರಾಜಕಾರಣದ ಅವಸಾನಕ್ಕೂ ನಾಂದಿ ಹಾಡುತ್ತದೆ ಎನ್ನುವ ವಿಶ್ವಾಸ ನನ್ನದು. ಆ ಮೂಲಕ ದೇಶದಲ್ಲಿ ಇನ್ನೂ ಹಲವು ಪ್ರಾದೇಶಿಕ ಪಕ್ಷಗಳು ಹುಟ್ಟುತ್ತವೆ ಮತ್ತು ರಾಷ್ಟ್ರೀಯ ಪಕ್ಷಗಳ ಸ್ಥಾನಮಾನಗಳು ಕುಸಿಯುತ್ತ ಹೋಗುತ್ತದೆ. ಆಂತರಿಕ ಪ್ರಜಾಪ್ರಭುತ್ವ ಕಟ್ಟಿಕೊಳ್ಳದೆ, ನೀತಿ ಮತ್ತು ಮೌಲ್ಯಗಳ ವಿಚಾರದಲ್ಲಿ ಪರ್ಯಾಯ ಕಲ್ಪಿಸದೇ ಹೋದರೆ ಕಾಂಗ್ರೆಸ್ ಸರ್ವನಾಶದತ್ತ ಸಾಗಲಿದೆ. ಅವರ ತಾಯಿಯ ಪರ ಕೆಲಸ ಮಾಡಿದ ಅನುಕಂಪ ಮತ್ತು 2004 ರಂತಹ ಚಾರಿತ್ರಿಕ ಅವಕಾಶಗಳು ರಾಹುಲ್ ಗಾಂಧಿಗೆ ಕೂಡಿ ಬರುವುದಿಲ್ಲ. ಅದನ್ನು ಮೀರುವ ಗಟ್ಟಿಯಾದ ವ್ಯಕ್ತಿತ್ವವನ್ನೂ ಅವರು ಬೆಳೆಸಿಕೊಂಡಿಲ್ಲ. ರಾಷ್ಟ್ರ ಮಟ್ಟದಲ್ಲಿ ಕುಟುಂಬ ರಾಜಕಾರಣದ ಹಿಡಿತ ಇನ್ನೊಂದೈದತ್ತು ವರ್ಷಗಳಲ್ಲಿ ಇಲ್ಲವಾಗುವ ಸಾಧ್ಯತೆ ಇದೆ.

ಈ ದೇಶದಲ್ಲಿ ಜಾತ್ಯತೀತತೆ, ವೈವಿಧ್ಯತೆ, ಸಹಿಷ್ಣುತೆ, ಪ್ರಜಾಪ್ರಭುತ್ವ, ಸಮಾನತೆ, ನ್ಯಾಯ, ಇತ್ಯಾದಿಯಂತಹ ಸಾರ್ವಕಾಲಿಕ ಮೌಲ್ಯಗಳಲ್ಲಿ ವಿಶ್ವಾಸವಿಟ್ಟಂತಹ ಪಕ್ಷಗಳ ಕೊರತೆ ಇದೆ. ಮೋದಿಯನ್ನು ತೋರಿಸಿ ಕೆಲವು ಪಕ್ಷಗಳು ಜಾತ್ಯತೀತತೆ ಬಗ್ಗೆ ಮಾತನಾಡುತ್ತವೆಯೇ ಹೊರತು ಅವು ನಿಜಕ್ಕೂ ಜಾತ್ಯತೀತವೇನಲ್ಲ. ಮೋದಿಯಂತಹ ವ್ಯಕ್ತಿ ಇಷ್ಟು ಪ್ರಾಮುಖ್ಯತೆ ಗಳಿಸಲು ನಮ್ಮ ಜಾತ್ಯತೀತ ಪಕ್ಷಗಳ ದಿವಾಳಿತನ, ಅಪ್ರಾಮಾಣಿಕತೆ ಮತ್ತು ಮೌಲ್ಯದಾರಿದ್ರ್ಯಗಳು ಕಾರಣವೇ ಹೊರತು ಮೋದಿಯ ಆಡಳಿತ ವೈಖರಿ ಮತ್ತು ಭಾಷಣಗಳಲ್ಲ. ಮನಮೋಹನ ಸಿಂಗರು ಎರಡು-ಮೂರು ವರ್ಷಗಳ ಹಿಂದೆಯೇ ಪ್ರಧಾನಮಂತ್ರಿ ಸ್ಥಾನದಿಂದ ಹಿಂದೆಸರಿದು, ಮತ್ತೊಬ್ಬ ಕ್ರಿಯಾಶೀಲ ಮತ್ತು ಪ್ರಾಮಾಣಿಕರನ್ನು ಪ್ರಧಾನಿ ಮಾಡಿದ್ದರೆ ವಾಸ್ತವವೇ ಬೇರೆ ಆಗಿರುತ್ತಿತ್ತು. ಆದರೆ ಕಾಂಗ್ರೆಸ್ ನಾಯಕತ್ವ ಯಾವುದೇ ಸ್ವತಂತ್ರ ಮನೋಭಾವದ ವ್ಯಕ್ತಿಯನ್ನು ನಂಬುವ ಸ್ಥಿತಿಯಲ್ಲಿಲ್ಲ. ಇದು ಕಾಂಗ್ರೆಸ್‌ಗಾದ ನಷ್ಟ ಮಾತ್ರವಲ್ಲ, ದೇಶದ ವರ್ತಮಾನ ಮತ್ತು ಭವಿಷ್ಯಕ್ಕೂ ಆದ ಅನ್ಯಾಯ.

ಭವಿಷ್ಯ ಆಶಾದಾಯಕವಾಗಿ ಇಲ್ಲದಿದ್ದರೂ, ಈ ನಾಡಿನಲ್ಲಿ ಸೀಮಿತ ಪ್ರಮಾಣದಲ್ಲಾದರೂ ನಡೆಯುತ್ತಿರುವ upward-mobility,garment-factory ಗಾರ್ಮೆಂಟ್ಸ್-ಐಟಿಬಿಟಿ-ಮಾಲ್‌ಗಳ ಕಾರಣಕ್ಕಾಗಿ ಕೆಳಮಧ್ಯಮವರ್ಗದ ಹೆಣ್ಣುಮಕ್ಕಳಿಗೆ ಸಿಗುತ್ತಿರುವ ಆರ್ಥಿಕ ಸ್ವಾತಂತ್ರ್ಯ, ಕುಲಮತ‌ಅಂತಸ್ತುಗಳ ಭೇದವಿಲ್ಲದೆ ಪ್ರೇಮದಲ್ಲಿ ಬೀಳುತ್ತಿರುವ ಯುವಸಮಾಜ, ಹೆಚ್ಚುತ್ತಿರುವ ಅಂತರ್ಜಾತಿ ವಿವಾಹಗಳು, ಇವೆಲ್ಲವೂ ಹೊಸದಾದ ಭಾರತವನ್ನೇ ಸೃಷ್ಟಿಸುತ್ತಿವೆ. ಪೂರ್ವಿಕರ ಕೆಲವು ಪ್ರತಿಗಾಮಿ ಚಿಂತನೆಗಳನ್ನು ತೊಡೆದುಹಾಕಿ, ಈ ನೆಲದಲ್ಲಿ ಹುಟ್ಟಿದ ಸಾರ್ವತ್ರಿಕ ಮೌಲ್ಯಗಳನ್ನು ಮತ್ತು ನಮ್ಮ ಪರಂಪರೆಯಲ್ಲಿಯ ಬಂಡಾಯ, ಅಹಿಂಸಾತ್ಮಕ ಹೋರಾಟ, ಮತ್ತು ಸಹಬಾಳ್ವೆಯ ನಾಗರಿಕತೆಯನ್ನು ಹೊಸಕಾಲಕ್ಕೆ ಅನ್ವಯಿಸಿಕೊಂಡು ರೂಪಿಸಿಕೊಂಡರೆ ಪ್ರಪಂಚವೆಲ್ಲ ಸ್ಫೂರ್ತಿಗಾಗಿ ಇದರತ್ತ ನೋಡುವ ದೇಶವಾಗುತ್ತದೆ ನಮ್ಮದು. ಇಲ್ಲದಿದ್ದರೆ ಹಿಟ್ಳರನ ಜರ್ಮನಿಯ ಬಗ್ಗೆ ಇಂದಿನ ಜರ್ಮನ್ನರೂ ಹೇಗೆ ಅಸಹ್ಯಿಸಿಕೊಳ್ಳುತ್ತಾರೋ, ಅದನ್ನು disown ಮಾಡುತ್ತಾರೋ, ಭಾರತದ ಅಂತಹ ಅವಧಿಗೆ ಕಾರಣರೂ ಸಾಕ್ಷಿಗಳೂ ಆಗಿ ಈ ತಲೆಮಾರು ನಿಲ್ಲುತ್ತದೆ. ನಮ್ಮದೇ ಸಂತತಿ ನಮ್ಮ ಭ್ರಷ್ಟತೆ ಮತ್ತು ದುಷ್ಟತೆಯ ಕಾರಣಕ್ಕೆ ನಮ್ಮನ್ನು ನಿರಾಕರಿಸುವುದಕ್ಕಿಂತ ಹೆಚ್ಚಿನ ತಿರಸ್ಕಾರ ಇನ್ನೊಂದಿಲ್ಲ. ಭವಿಷ್ಯದ ಇತಿಹಾಸದ ಪುಟಗಳಲ್ಲಿ ಇಂದಿನ ವರ್ತಮಾನ ಹೇಗೆ ದಾಖಲಾಗಬೇಕು ಎನ್ನುವ ಎಚ್ಚರವನ್ನು ಇಂದಿನ ಭಾರತ ಪಡೆಯಬೇಕಿದೆ.

14 thoughts on “ಮೋದಿ ಮತ್ತು ಭವಿಷ್ಯದ ಇತಿಹಾಸದ ಪುಟಗಳು

  1. Anand

    ಯಡಿಯೂರಪ್ಪ ಎಷ್ಟೇ ಕಳಂಕಿತರಾಗಿದ್ದರೂ ರಾಜ್ಯ ಬಿಜೆಪಿಗೆ ಅವರು ಬೇಕು, ಗುಜರಾತಿನ ‘ಹುಲಿ’ ರಾಷ್ಟ್ರದ ಇನ್ನುಳಿದ ಇಪ್ಪತ್ನಾಲ್ಕು ರಾಜ್ಯಗಳಿಗೆ ಪರಿಚಿತವಿಲ್ಲದಿದ್ದರೂ ಬಿಜೆಪಿಗೆ ಅವರೇ ಅತ್ಯುತ್ತಮರು, ಕಾರಣ ಬೆರಳೆಣಿಕೆಯ ಜನರನ್ನು ಬಿಟ್ಟರೆ ಅಲ್ಲಿ ನಾಯಕರುಗಳೇ ಇಲ್ಲ ಅಥವಾ ಬೆಳೆಯಲು ಇವರುಗಳೇ ಬಿಟ್ಟಿಲ್ಲ. ತನ್ನ ತಪ್ಪುಗಳಿಂದಾಗಿಯೇ ಈ ಪಕ್ಷ ಮತ್ತೆ ಕಾಂಗ್ರಸ್ಸಿಗೆ ಅವಕಾಶ ಕೊಟ್ಟರೆ ಅಚ್ಚರಿ ಪಡಬೇಕಿಲ್ಲ.

    ಗಾಂಧೀ ಮನೆತನದ ಕುಡಿಗಳು ಎಷ್ಟೇ ಅಪ್ರಬುದ್ಧರಾಗಿದ್ದರೂ ಅವರೇ ಇಂದ್ರ ಚಂದ್ರ ಎಂದು ಹಾಡಿ ಮೇಲೆ ಕೂಡಿಸುವ ಕಾಂಗ್ರೇಸ್ಸಿಗಳು, ಅದೇ ಸಂಸ್ಕೃತಿಯ ಪೋರ್ಟೆಬಲ್ ವರ್ಷನ್ ಆದ ಜೆಡಿಎಸ್, ಇವೆಲ್ಲ ನಾಯಕತ್ವದ ಕೊರತೆಯನ್ನು ಎತ್ತಿ ತೋರಿಸುತ್ತವೆ. ಎಲ್ಲರನ್ನೂ ಒಂದಾಗಿ ತೆಗೆದುಕೊಂಡು ಹೋಗುವ, ನಿಷ್ಠುರ ನಿಲುವುಗಳನ್ನು ತೆಗೆದುಕೊಳ್ಳುವ ಗುಣವಿರುವ, ಕುಶಾಗ್ರಮತಿ ನಾಯಕರನ್ನು ಬೆಳೆಸುವ ಹಾಗೂ ದೇಶದ ಚುಕ್ಕಾಣಿಯನ್ನು ಅಂತಹವರಿಗೆ ನೀಡುವ ಜವಾಬ್ದಾರಿ ಇಂದಿನ ಜನಾಂಗದ ಮೇಲಿದೆ.

    Reply
  2. Srini

    We don’t know what is the end results…but yes, I am going to not only vote for Modi but also campaign for him around my household and other network. Time to throw this corrupt UPA…Modify is only solution….

    Reply
  3. Ananda Prasad

    ಈ ಹಿಂದೆ ಭಾರತದ ಚುನಾವಣಾ ಫಲಿತಾಂಶಗಳನ್ನು ವಿಶ್ಲೇಷಿಸಿ ನೋಡಿದರೆ ಮೋದಿಯ ನೇತೃತ್ವದ ಬಿಜೆಪಿ ಜಯಗಳಿಸುವ ಸಾಧ್ಯತೆ ಇಲ್ಲ ಏಕೆಂದರೆ ಮೋದಿ ಹಾಗೂ ಅಡ್ವಾಣಿ ಒಂದೇ ರೀತಿಯ ವ್ಯಕ್ತಿತ್ವ ಹಾಗೂ ಹಿನ್ನೆಲೆ ಹೊಂದಿರುವವರು ಅಂದರೆ ಇಬ್ಬರೂ ಉಗ್ರ ಹಿಂದುತ್ವದ ಹಿನ್ನೆಲೆಯವರೇ. ಅಡ್ವಾಣಿ ನಂತರ ಜಾತ್ಯಾತೀತ ಇಮೇಜ್ ಹೊಂದಲು ಯತ್ನಿಸಿದರಾದರೂ ದೇಶದ ಜನ ಅವರ ಮಾರುವೇಷವನ್ನು ಒಪ್ಪಿಕೊಳ್ಳಲಿಲ್ಲ ಎಂಬುದು ಒಂದು ಸಮಾಧಾನಕರ ವಿಷಯ. ಅಡ್ವಾಣಿ ಕಪ್ಪು ಹಣದ ಬಗ್ಗೆ ಬಹಳ ದೊಡ್ಡ ಬೊಬ್ಬೆ ಹಿಂದಿನ ಚುನಾವಣೆಗಳಲ್ಲಿ ಹಾಕಿದರೂ ಜನ ಅವರ ಗೋಮುಖವ್ಯಾಘ್ರತನವನ್ನು ದೇಶದ ಜನ ಗುರುತಿಸಿದ್ದರು ಹೀಗಾಗಿಯೇ ಹಿಂದಿನ ಎರಡು ಚುನಾವಣೆಗಳಲ್ಲಿಯೂ ಬಿಜೆಪಿ ಜಯ ಗಳಿಸಲು ಸಾಧ್ಯವಾಗಲಿಲ್ಲ. ಗುರುವಿಗೆ ಸಾಧ್ಯವಾಗದೆ ಇದ್ದದ್ದು ಶಿಷ್ಯ ಮೋದಿಗೆ ಸಾಧ್ಯವಾಗುವ ಸಾಧ್ಯತೆ ಸದ್ಯಕ್ಕೆ ಕಾಣಿಸುತ್ತಿಲ್ಲ ಏಕೆಂದರೆ ಮೋದಿಗೆ ಜಾತ್ಯಾತೀತತೆಯ ಮುಖವಾಡವೂ ಇಲ್ಲ ಹೀಗಾಗಿ ಅವರನ್ನು ಒಪ್ಪಿಕೊಳ್ಳಲು ಪ್ರಾದೇಶಿಕ ಪಕ್ಷಗಳು ಮುಂದೆ ಬರಲಾರವು. ಅಲ್ಲದೆ ಮೋದಿ ಗುಜರಾತಿನಲ್ಲಿ ಪೋಲೀಸ್ ಇಲಾಖೆಯ ಕೇಸರೀಕರಣ ಮಾಡಿದ ದುಷ್ಪರಿಣಾಮವಾಗಿ ಇಂದು ಹಲವು ಉನ್ನತ ಪೋಲೀಸ್ ಅಧಿಕಾರಿಗಳು ಜೈಲಿನಲ್ಲಿ ಒದ್ದಾಡುತ್ತಾ ಮೋದಿಗೆ ಶಾಪ ಹಾಕುತ್ತಿದ್ದಾರೆ. ಇದನ್ನು ದೇಶದ ಪ್ರಜ್ಞಾವಂತ ಮತದಾರ ಗಮನಿಸದೆ ಇರಲಾರ.

    ಅಡ್ವಾಣಿಯವರನ್ನು ಉಕ್ಕಿನ ಮನುಷ್ಯ ಎಂದು ಕರೆಯುವುದೇ ಹಾಸ್ಯಾಸ್ಪದ. ಇದು ಬಿಜೆಪಿಯ ಸ್ವಯಂಘೋಷಿತ ಬಿರುದೇ ಹೊರತು ದೇಶದ ಜನ ನೀಡಿದ ಬಿರುದು ಅಲ್ಲ. ದೇಶಕ್ಕೆ ಒಬ್ಬರೇ ಉಕ್ಕಿನ ಮನುಷ್ಯ ಇರುವುದು, ಅವರೇ ವಲ್ಲಭಭಾಯಿ ಪಟೇಲ್. ತೊಂಭತ್ತರ ದಶಕದಲ್ಲಿ ರಾಜಕೀಯಕ್ಕೆ ಧರ್ಮವನ್ನು ದುರ್ಬಳಕೆ ಮಾಡಿಕೊಂಡು ಸಾವಿರಾರು ಜನರ ರಕ್ತ ಹರಿಸಲು ಕಾರಣವಾದ ಹಾಗೂ ಗಲಭೆ, ಬಂದ್ ಗಳಿಂದ ದೇಶಕ್ಕೆ ಸುಮಾರು 20 ಸಾವಿರ ಕೋಟಿ ರೂಪಾಯಿಗಳಷ್ಟು ನಷ್ಟಕ್ಕೆ ಕಾರಣವಾದ ಅಡ್ವಾಣಿ ಎಲ್ಲಿ, ದೇಶದ ಎಲ್ಲ ಸಂಸ್ಥಾನಗಳನ್ನು ಒಗ್ಗೂಡಿಸಿದ ವಲ್ಲಭಭಾಯಿ ಪಟೇಲ್ ಎಲ್ಲಿ? ಹೋಲಿಕೆಯೇ ಅಸಮಂಜಸ ಹಾಗೂ ಇಂಥ ಹೋಲಿಕೆ ವಲ್ಲಭಭಾಯಿ ಪಟೇಲರಿಗೆ ಮಾಡುವ ಅವಮಾನವೂ ಆದೀತು. ದೇಶಾದ್ಯಂತ ಭೀಕರ ಗಲಭೆಗಳಿಗೆ, ರಕ್ತಪಾತಕ್ಕೆ ಕಾರಣವಾದ ತೊಂಭತ್ತರ ಬಾಬ್ರಿ ಮಸೀದಿ ಧ್ವಂಸದ ನಂತರವೂ ದೇಶದಲ್ಲಿ ಬಿಜೆಪಿ ತನ್ನ ಸ್ವಂತ ಬಲದಲ್ಲಿ ಅಧಿಕಾರಕ್ಕೆ ಬರಲಾಗಲಿಲ್ಲ ಎಂಬುದು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಸಂದ ಜಯವೇ ಸರಿ. 2004ರ ಚುನಾವಣೆಗಳಲ್ಲಿ ವಿಕಾಸದ ಅಗಾಧ, ಅಬ್ಬರದ ಪ್ರಚಾರದ ಹೊರತಾಗಿಯೂ ಬಿಜೆಪಿ ಗೆಲ್ಲಲಾಗಲಿಲ್ಲ ಎಂಬುದು ಬಿಜೆಪಿಯ ವಿಕಾಸದ ಮುಖವಾಡವೂ ಯಶಸ್ವಿಯಾಗುವುದಿಲ್ಲ ಎಂಬುದನ್ನು ತೋರಿಸುತ್ತದೆ.

    ಕಾರ್ಪೊರೇಟ್ ಉದ್ಯಮಿಗಳು ಹಾಗೂ ಇಂಟರ್ನೆಟ್ ಹಿಂದೂಗಳಿಗೆ ಮಾತ್ರವೇ ಮತ ಹಾಕುವ ಹಕ್ಕು ಇದ್ದರೆ ಮೋದಿ ಮೂರನೇ ಎರಡು ಬಹುಮತ ಪಡೆದು ಪ್ರಧಾನಿಯಾಗಬಹುದು ಆದರೆ ಇಲ್ಲಿ ಜನಸಾಮಾನ್ಯರಿಗೂ ಮತಾಧಿಕಾರ ಇರುವ ಕಾರಣ ಮೋದಿ ಪ್ರಧಾನಿಯಾಗುವ ಸಂಭವ ಕಡಿಮೆ ಇದೆ.
    ದೇಶಕ್ಕೆ ಇಂದು ಉದಾರವಾದಿ, ಪ್ರಗತಿಪರ ಸಾಮಾಜಿಕ ನಿಲುವುಳ್ಳ, ಧರ್ಮವನ್ನು ರಾಜಕೀಯ ಲಾಭಕ್ಕೆ ಬಳಸದ ಪ್ರಬುದ್ಧ ನಾಯಕರ ಅಗತ್ಯ ಇದೆ. ಅಂಥ ವ್ಯಕ್ತಿತ್ವ ಹಾಗೂ ನಾಯಕತ್ವ ಮೋದಿಯಲ್ಲಿ ಇಲ್ಲವೇ ಇಲ್ಲ. ಅಂಥ ಪ್ರಗತಿಪರ, ಉದಾರವಾದಿ ನಿಲುವುಳ್ಳ ನಾಯಕರನ್ನು ದೇಶದ ಜನ ಗುರುತಿಸಿ ಬೆಳೆಸಬೇಕಾಗಿದೆ.

    Reply
    1. mohan kumar

      Mr.prasad sir nanage Nivu helidiralla melina ella visayagalu saha arta agtaive, adare modiyavaru nadesidaru anta heluta idiralla aa godra himsacharada bagge swalpa vivaravada mahiti beku,hage adakku munche nadeda kela gatanegala bagge hecchina mahiti idre illi bareyiri. Hage deshadalli iduvarege nadeda Komu himsacharadalli ati Hecchu galabegalu yava Karanakkagi Nadedive annodannu namagu Swalpa arta ago age heli,Hage iga nimma congress kadegu swalpa gamana kodona sir, itihasave kandu keladanta sikkara marana homa madida congress nimage adu hege jatyatita paksha annodanna dayavittu tilisi. Adonde adre paravagilla sir, E desave kandu kelokagade iro astu laksha koti corruption congress ge navu yake vote madbeku.Nanna Koneya Prashne Naanu nimmastu tilidironu alla adru ondu arta agta illa Jatyatita paksha anta helikollo Congress navaru yake innu namma samvidanada viruddavagi jathi,Dharma,mata,panta anta Shale College, Kelasagalllli misalati Nondavani Madodu adu illade iddare innu kelave varshadalli Namma Deshada chaharene badalagutte sir,Samartya iddavanu Kelasa tagoltane bidi sir.Hage Madada Tappige Kshame Kelabeku Annodu tappe adannu Arta madkolli sir.

      Reply
  4. Ananda Prasad

    ಮೋದಿಯ ಬಲಗೈ ಬಂಟ ಅಮಿತ್ ಷಾ ಉತ್ತರಪ್ರದೇಶದ ಚುನಾವಣಾ ಉಸ್ತುವಾರಿ ವಹಿಸಿಕೊಂಡದ್ದೇ ತಡ ಉತ್ತರಪ್ರದೇಶದಲ್ಲಿ ಭೀಕರ ಕೋಮುಗಲಭೆಗಳು ಭುಗಿಲೇಳಲು ಕಾರಣವೇನು ಎಂಬ ಬಗ್ಗೆ ದೇಶದ ಜನ ಯೋಚಿಸಬೇಕಾದ ಅಗತ್ಯ ಇದೆ. ಅಲ್ಲಿ ಒಬ್ಬ ಹುಡುಗಿಯನ್ನು ಚುಡಾಯಿಸಿದ ಒಬ್ಬ ಅನ್ಯಧರ್ಮದ ವ್ಯಕ್ತಿಯನ್ನು ನೇರವಾಗಿ ಕೊಂದದ್ದು ಗಲಭೆ ಭುಗಿಲೇಳಲು ಕಾರಣವಾಯಿತು. ಅ ಕಾನೂನನ್ನು ಕೈಗೆತ್ತಿಕೊಳ್ಳುವಂತೆ ಹುಡುಗಿಯ ಕಡೆಯವರನ್ನು ಪ್ರಚೋದಿಸಿದ್ದು ಯಾರು ಎಂಬ ಬಗ್ಗೆ ತನಿಖೆ ನಡೆದರೆ ಇವುಗಳ ಮೂಲ ಗೊತ್ತಾದೀತು. ಚುಡಾಯಿಸಿದ್ದು ತಪ್ಪಾದರೂ ಅದನ್ನು ಪೊಲೀಸರಿಗೆ ದೂರು ಕೊಟ್ಟು ಬಗೆಹರಿಸಬೇಕಾಗಿರುವುದು ನಾಗರಿಕರ ಜವಾಬ್ದಾರಿ. ಅದನ್ನು ಬಿಟ್ಟು ನೇರವಾಗಿ ಕೊಲೆಗೆ ಇಳಿಯಲು ಪ್ರಚೋದನೆ ನೀಡಿದವರಿಗೆ ಕೋಮು ಗಲಭೆ ಭುಗಿಲೆಳುವುದು ಬೇಕಾಗಿತ್ತು ಎಂಬುದರಲ್ಲಿ ಅನುಮಾನವಿಲ್ಲ. ಒಂದು ವೇಳೆ ಪೊಲೀಸರು ದೂರನ್ನು ನಿರ್ಲಕ್ಷಿಸಿದರೆ ನಾಗರೀಕ ಸಮಾಜದಲ್ಲಿ ಜಿಲ್ಲಾ ಮಟ್ಟದ ಮೇಲಧಿಕಾರಿಗಳಿಗೆ ದೂರು ನೀಡುವುದು, ಜನಪ್ರತಿನಿಧಿಗಳಿಗೆ ದೂರು ನೀಡುವುದು, ಮಾಧ್ಯಮಗಳ ಗಮನಕ್ಕೆ ಪೋಲೀಸರ ನಿರ್ಲಕ್ಷ್ಯವನ್ನು ತರಬೇಕಾಗಿರುವುದು ನಾಗರಿಕರ ಜವಾಬ್ದಾರಿ. ಅದೇ ರೀತಿ ಹುಡುಗಿಯನ್ನು ಚುಡಾಯಿಸಿದ ವ್ಯಕ್ತಿಯನ್ನು ಕೊಂದವರನ್ನು ಮತ್ತೊಂದು ಧರ್ಮದವರು ಕೊಲ್ಲಲು ಹೋಗದೆ ನಾಗರಿಕ ದೂರು ನೀಡುವ ವಿಧಾನ ಅನುಸರಿಸಿದ್ದಿದ್ದರೆ ಇಂದು ಉತ್ತರ ಪ್ರದೇಶದ ಮುಜಫರ್ ನಗರದಲ್ಲಿ ನಡೆದಂಥ ಗಲಭೆಗಳು ನಡೆಯುವುದನ್ನು ತಡೆಯಬಹುದಿತ್ತು. ಪೊಲೀಸರು ಕಾನೂನು ಕೈಗೆತ್ತಿಕೊಂಡು ಗಲಭೆ ಎಬ್ಬಿಸುವವರನ್ನು ಮಿಂಚಿನ ವೇಗದಲ್ಲಿ ಬಂಧಿಸಿ ಸೂಕ್ತ ಪಾಠವನ್ನು ಗಲಭೆಕೋರರಿಗೆ ನೀಡಬೇಕಾದ ಅಗತ್ಯ ಇದೆ. ಪೊಲೀಸರು ನಕ್ಸಲರನ್ನು ಸಿಕ್ಕ ಸಿಕ್ಕಲ್ಲಿ ಎನ್ಕೌಂಟರ್ ಮಾಡಿ ಕೊಂದು ಹಾಕುವಂತೆ ಕಾನೂನು ಕೈಗೆತ್ತಿಕೊಳ್ಳುವ ಕೋಮು ಗಲಭೆಕೋರರಿಗೂ ಅದೇ ಮಾನದಂಡ ಅನುಸರಿಸಬೇಕು. ಹಾಗಾದಾಗ ನಾಗರೀಕ ಸಮಾಜದ ಒಳಗೇ ಇದ್ದು ಸಮಾಜದಲ್ಲಿ ವಿವಿಧ ಧರ್ಮಗಳ ನಡುವೆ ಹುಳಿ ಹಿಂಡುವ ಪಿತೂರಿಕೋರರಿಗೆ ತಕ್ಕ ಶಿಕ್ಷೆ ಆದೀತು.

    Reply
    1. mohan kumar

      sir,
      Nimage E gatanegu munche nadeda,nadeda nantarada,alli nadeyuttiruva nijavada mahiti nijakku gottilla anodu nanna abhimata sir,UP yalli Prativarsha kadime Andru 100 Komu galabegalu naditave Adakkella Amit Sha Avare karana Alla Sir,Sp Ya ajam Khan ravara neravininda alli igagale Allina Muslim yuvakarige Sten gun galu Sikta ive Adu allina Policerigu Gottu E congress Govt Gottu adannu Guptacara ilakegalu Spastapadista ive.

      Reply
  5. Srini

    Dear Ananda Prasad, – Where did Amita Shah came in to picture? If you aren’t ware of what is happeing in UP, let me give you some pointers. Moment SP came in to power (from August 2012), i can list atleast 17 communal violence in UP. Here it is –

    1. Bareilly August 12, 2012 Communal violence during a religious procession leading to clamping of curfew.
    2. Bareilly Jul 23, 2012 Communal clash. One killed. Curfew imposed in entire city.
    3. Kosikalan Jun 14, 2012 Communal violence sparked off over the killing of a young man. Curfew clamped.
    4. Saharanpur Jun 14, 2012 Communal violence. Women targeted. Curfew clamped.
    5. Lucknow, Allahabad & Kanpur Aug 17, 2012 Protest demonstrations against the violence in Assam followed by communal clashes and attacks on media.
    6. Ghaziabad Aug 13, 2012 Communal violence followed by curfew.
    7. Ghaziabad Sep 16, 2012 Communal violence results in death of two. Curfew. 8. Faizabad Oct 24, 2012 Communal clashes over immersion of idol. Curfew.
    9. Faizabad Oct 26, 2012 Repeat of violence over religious procession and route for immersion of Durga idol in river. Large-scale arson; 24 shops burnt, vehicles set afire.
    10. Azamgarh Dec 6, 2012 Violent clash between two groups. 11 injured. Heavy police deployment.
    11. Pratapgarh Jun 25, 2012 Gang-rape and murder followed by communal violence
    12. Muzaffarnagar Jun 4, 2012 Two women and 18 men wounded in communal clashes
    13. Kosikalan Feb 4, 2013 Renewed communal violence; one killed
    14. Muzaffarnagar Feb 4, 2013 Another round of communal violence. 15 injured. 15. Lucknow Jan 12, 2013 Clash between Shia and Sunni sects of Muslims over Tazia procession. Heavy stone-pelting, clashes leave four hurt.
    16. Pratapgarh Mar 3, 2013 Mob kills deputy superintendent of police Zia-ul-Haq after murder of a village head and his brother. DSP’s family pointedly accused powerful minister Raghuraj Pratap Singh ‘Raja Bhaiya’.
    17. Etawah Feb 24, 2013 Broad daylight killing of youth coming for his own wedding inside the court premises sparks off large-scale violence

    Muzaffarnagar itself had 2 such incidents few months back and government did nothing to control it. If you closely monitor current developments and reports – politician from every party was behind provoking respective communities (Congress, BJP, SP & BSP)

    Reply
    1. Ananda Prasad

      ಅಮಿತ್ ಷಾ ಅವರು ಉತ್ತರ ಪ್ರದೇಶದ ಚುನಾವಣಾ ಉಸ್ತುವಾರಿ ವಹಿಸಿಕೊಂಡ ನಂತರ ದೊಡ್ಡ ಪ್ರಮಾಣದಲ್ಲಿ ಉತ್ತರ ಪ್ರದೇಶದ ಮುಜಾಫರನಗರದಲ್ಲಿ ಕೋಮು ಗಲಭೆಗಳು ಸ್ಫೋಟಿಸಿವೆ. ಇದು ಕಾಕತಾಳೀಯ ಎನಿಸುವುದಿಲ್ಲ. ಇವು ಅತ್ಯಂತ ವ್ಯವಸ್ಥಿತ ಗಲಭೆಗಳಂತೆ ಕಂಡುಬರುತ್ತವೆ. ಪ್ರಮುಖ ರಾಜಕೀಯ ಪಕ್ಷಗಳು ತಮಗೆ ಕೊಮುಗಲಭೆಗಳಿಂದ ಎಷ್ಟು ಲಾಭ ಆದೀತು ಎಂದು ಲೆಕ್ಕ ಹಾಕುತ್ತಿರುವುದು ನಿಜವಾದರೂ ಕೋಮು ಗಲಭೆಗಳು ನಡೆದಾಗ ಹೆಚ್ಚು ಲಾಭವಾಗುವುದು ಬಿಜೆಪಿಗೆ. ಹೀಗಾಗಿ ಕೋಮು ಗಲಭೆಗೆ ಪ್ರಚೋದನೆ ನೀಡುವಲ್ಲಿ ಅದರ ಪಾತ್ರ ಗಣನೀಯವಾಗಿರುತ್ತದೆ. ಕೋಮು ಗಲಭೆಗಳು ಬಹುಸಂಖ್ಯಾತ ಹಿಂದೂಗಳನ್ನು ಧ್ರುವೀಕರಿಸುವ ಕಾರಣ ಹೆಚ್ಚಿನ ಲಾಭ ಬಿಜೆಪಿಗೆ ಆಗುತ್ತದೆ. ಹೀಗಾಗಿ ಎಲ್ಲಿ ಬಿಜೆಪಿ ಹಾಗೂ ಅದರ ಪರಿವಾರ ಸಂಘಟನೆಗಳು ಸಣ್ಣ ಘಟನೆಗಳನ್ನು ದೊಡ್ಡದು ಮಾಡಿ ಅದು ಸ್ಫೋಟಗೊಳ್ಳುವಂತೆ ಮಾಡುವುದು ಕಂಡುಬರುತ್ತದೆ. ಇದು ದೇಶದ ಹಿತದೃಷ್ಟಿಯಿಂದ ಅತ್ಯಂತ ಹಾನಿಕಾರಕ

      Reply
  6. Srini

    Hope you have read my previous post….even court asked same yesterday to SP government…. Since August 2012, there has been 21 different communal incidents in UP…Muzaffarnagar itself had 2 such cases and there was always tension which cameout big time…i repeat – Politician from all 4 party provoked people this time and that record was in IBNlive other day…..

    Reply
  7. Mahesh

    ಆನಂದ ಪ್ರಸಾದ್ ರವರೇ, ಎಲ್ಲಿ ಕಾನೂನು ವ್ಯವಸ್ಥೆ, ಆಡಳಿತ ವ್ಯವಸ್ಥೆಗಳು ಕುಸಿದಿರುತ್ತವೆಯೋ ಅಂತಲ್ಲಿ ಸಹಜವಾಗಿ ಜನರಲ್ಲಿ ವಿಕ್ಟಿಮ್ ಹುಡ್ ಭಾವನೆ ಬೆಳೆದಿರುತ್ತದೆ. ಅಂತಹ ವಿಕ್ಟಿಮ್ ಹುಡ್ ಭಾವನೆಯನ್ನು ಧರ್ಮ, ಭಾಷೆ, ಜನಾಂಗ ಮೊದಲಾದ ಫ್ಯಾಸಿಸ್ಟ್ ಶಕ್ತಿಗಳು ಚೆನ್ನಾಗಿ ಬಳಸಿಕೊಳ್ಳುತ್ತವೆ. ಇವುಗಳು ಕೊನೆಯಲ್ಲಿ ಕೋಮುಗಲಭೆಗಳಿಗೆ ಕಾರಣವಾಗುತ್ತವೆ. ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಆಡಳಿತದಲ್ಲಿ ಇಷ್ಟೊಂದು ಕೋಮುಗಲಭೆಗಳು ಸಂಭವಿಸಿದ್ದರೆ ಅದಕ್ಕೆ ರಾಜ್ಯದಲ್ಲಿರುವ ಅರಾಜಕತೆಯೂ ಅಷ್ಟೇ ಪ್ರಮುಖ ಕಾರಣ

    Reply
    1. pavan

      ri anand prasad nivu hindu alva namma hindustanadalli nanobba hindu andare adu tappa avru komavadigalla ri nijavaglu nivu komavadigalu nanna rashtra hindu rashtra….

      Reply
      1. Ananda Prasad

        ನಾನು ಯಾವುದೇ ಕೋಮಿನ ಪರ ಅಥವಾ ವಿರೋಧ ಅಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆ ಬೆಳೆಯಬೇಕಾದರೆ ಧರ್ಮ, ದೇವರು, ಗೋಮಾತೆ, ಮಂದಿರ ಮೊದಲಾದ ಭಾವನಾತ್ಮಕ ವಿಷಯ ಎತ್ತಿಕೊಂಡು ಮುಗ್ಧ ಹಿಂದೂಗಳನ್ನು ಮತ್ತೊಂದು ಧರ್ಮದ ವಿರುದ್ಧ ಎತ್ತಿ ಕಟ್ಟಿ ರಾಜಕೀಯ ಮಾಡುವುದರಿಂದ ಸಾಧ್ಯವಿಲ್ಲ. ರಾಷ್ಟ್ರದ ನಿಜವಾದ ಸಮಸ್ಯೆಗಳನ್ನು ಎತ್ತಿಕೊಂಡು ಅದಕ್ಕೆ ಪರಿಹಾರ ಸೂಚಿಸುವ ರಾಜಕೀಯವನ್ನು ಬೆಳೆಸುವುದು ಇಂದಿನ ಅಗತ್ಯ. ಹಾಗೆ ಮಾಡಬೇಕಾದರೆ ಭಾವನಾತ್ಮಕ ವಿಷಯಗಳನ್ನು ರಾಜಕೀಯಕ್ಕೆ ಬಳಸುವುದನ್ನು ಬಿಡಬೇಕು. ಇಲ್ಲದಿದ್ದರೆ ಪ್ರಜಾಪ್ರಭುತ್ವ ವ್ಯವಸ್ಥೆ ಬೆಳೆಯಲು ಸಾಧ್ಯವಿಲ್ಲ. ಮೋದಿಯಾಗಲೀ, ಅಡ್ವಾಣಿಯವರಾಗಲೀ ಅಥವಾ ಅವರ ರಾಜಕೀಯ ಪಕ್ಷವಾಗಲೀ ಲಾಗಾಯ್ತಿನಿಂದ ಇದನ್ನೇ ಮಾಡುತ್ತಾ ಬಂದಿದ್ದಾರೆ. ಅವರು ಬೆಳೆದದ್ದೇ ಧರ್ಮ, ದೇವರ ವಿಷಯವನ್ನು ಎತ್ತಿಕೊಂಡು ಮುಗ್ಧ ಹಿಂದೂಗಳನ್ನು ಇನ್ನೊಂದು ಧರ್ಮದ ವಿರುದ್ಧ ಎತ್ತಿ ಕಟ್ಟಿಯೇ ಆಗಿದೆ. ಇಂಥ ರಾಜಕೀಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬೆಳೆಸುವುದಿಲ್ಲ, ಬಲಪಡಿಸುವುದೂ ಇಲ್ಲ. ಇದರ ಬಗ್ಗೆ ಮುಗ್ಧ ಹಿಂದೂಗಳಿಗೆ ಅರಿವಿಲ್ಲದಿರುವುದು ಈ ದೇಶದ ನಿಜವಾದ ದುರಂತ.

        Reply
  8. Mallikarjuna Jalageri

    ಆನಂದ್ ಪ್ರಸಾದ್,
    ಅಜಿತ್ ಸಿಂಗರ ಜಾಟ್ ಬಳಗವನ್ನು ತನ್ನೆಡೆಗೆ ಸೆಳೆಯಲು, ಮುಸ್ಲಿಮರನ್ನ ಅಂಕೆಯಲ್ಲಿಡಲು ಗಲಭೆಗಳು ನಡೀತಾ ಇವೆ.
    ಇವತ್ತು ಜಾತಿ/ಮತದ ಗಲಭೆ ಬರೇ ಯು. ಪಿ ಯಲ್ಲಿದೆ.
    ರೂಪಾಯಿ, ಕಾಸು ವ್ಯವಸ್ಥೆ ಮುಗ್ಗರಿಸಿ ನಾಡಿನೆಲ್ಲೆಡೆ, ಜ್ಯೋತಿಷಿಗಳು, ಸ್ವಾಮೀಜಿಗಳು, ಆಡಳಿತಗಾರರು ಜನರ ಅತ್ಮವಿಶ್ವಾಸವನ್ನೇ ಕಳೀತಾ ಇದ್ದಾರೆ.
    ಜನ ತಮ್ಮ ಅನ್ನ ದುಡಿಯೋದಕ್ಕೆ ಕೇಂದ್ರದ ಕಾಂಗ್ರೆಸ್ ಸರ್ಕಾರ ಬಿಡ್ತಿಲ್ಲ.
    ಇದರ ಬಗ್ಗೆ ಯಾವ ಒಬ್ಬ ಸೆಕ್ಯುಲರ್ ಜನಜೀವಿ ಕೂಡ ದನಿ ಎತ್ತುತ್ತಾ ಇಲ್ಲ.
    ಇದೇ, ಮೋದಿಯಂಥ ಮಾರ್ಕೆಟಿಂಗ್ ತಂತ್ರಗಾರಿಕೆಗೆ ಆಸ್ಪದ ಕೊಡ್ತಾ ಇರೋದು..

    Reply
    1. Ananda Prasad

      ಜನ ತಮ್ಮ ಅನ್ನ ದುಡಿಯೋದಕ್ಕೆ ಕಾಂಗ್ರೆಸ್ ಬಿಡ್ತಾ ಇಲ್ಲ ಎಂಬ ನಿಮ್ಮ ಮಾತು ಇದು ಯಾವ ಅರ್ಥದಲ್ಲಿ ಎಂದು ನನಗೆ ಗೊತ್ತಾಗುತ್ತಿಲ್ಲ. ಜನ ತಮ್ಮ ಅನ್ನ ದುಡಿದು ತಿನ್ನಲು ಕಾಂಗ್ರೆಸ್ ಅಡ್ಡಿಪಡಿಸಿಲ್ಲ. ಕಾಂಗ್ರೆಸ್ ಭ್ರಷ್ಟಾಚಾರ ನಿಯಂತ್ರಣದ ಬಗ್ಗೆ ಗಮನ ಹರಿಸುತ್ತಿಲ್ಲ. ಭ್ರಷ್ಟರ ಬಗ್ಗೆ ಖಡಕ್ ಕ್ರಮ ತೆಗೆದುಕೊಳ್ಳುತ್ತಿಲ್ಲ. ಆದರೆ ಜನರನ್ನು ದುಡಿದು ತಿನ್ನಲು ಬಿಡುತ್ತಿಲ್ಲ ಎಂಬುದು ಹೇಗೆ ಎಂಬುದು ಗೊತ್ತಾಗಲಿಲ್ಲ.

      Reply

Leave a Reply

Your email address will not be published. Required fields are marked *