AAP ಮತ್ತು ಕಮ್ಯುನಿಷ್ಟರು : ಮಾರ್ಕ್ಸ್ ಯಾವಾಗಲೂ ಸರಿ

– ಬಿ.ಶ್ರೀಪಾದ ಭಟ್

“ಬಂಡವಾಳಶಾಹಿಯು ಎಷ್ಟೇ ಆಧುನಿಕಗೊಂಡರೂ ಅದು ಮತ್ತೆ ಫ್ಯಾಂಟಸಿ ಮತ್ತು ಪುರಾತನ ಆಚರಣೆಗಳಿಂದ,ಮಿಥ್‌ಗಳಿಂದ ತೊಳೆಯಲ್ಪಡುತ್ತದೆ.ಅದು ತಾನು ಸಾಧಿಸಿದ ಅಭಿವೃದ್ಧಿಯ ಕುರಿತಾಗಿ ಎಷ್ಟೇ ಜಂಬಪಟ್ಟರೂ ಕಡೆಗೆ ಅದು ತನ್ನ ಸ್ಥಾನದಲ್ಲಿ ಪ್ರಸ್ತುತವಾಗಿ ಉಳಿಯಲು ಪ್ರತಿಕ್ಷಣ Karl-Marxಹೋರಾಡಬೇಕಾಗುತ್ತದೆ. ಕಡೆಗೆ ಬಂಡವಾಳಶಾಹಿಯ ಮಿತಿ ಬಂಡವಾಳಶಾಹಿಯೇ. ತನ್ನ ವರ್ತಮಾನವನ್ನು ಪುನಸೃಷ್ಟಿಸಲು ವಿಫಲವಾಗುವ ಈ ಬಂಡವಾಳಶಾಹಿಯು ಭವಿಷ್ಯವನ್ನು ಸೃಷ್ಟಿಸಲು ಸಹ ಸಂಪೂರ್ಣವಾಗಿ ವಿಫಲವಾಗುತ್ತದೆ.” -ಕಾರ್ಲ ಮಾರ್ಕ್ಸ

7 ನೇ ಅಕ್ಟೋಬರ್ 1862 ರಂದು ಲಂಡನ್‌ನಿಂದ ಕಾರ್ಲ ಮಾರ್ಕ್ಸ ತನ್ನ ಸ್ನೇಹಿತ ಏಂಗೆಲ್ಸ್‌ಗೆ ಬರೆದ ಪತ್ರದ ಸಾರಾಂಶ:

Dear Engels,

The  landlord  came to see me on Monday and told me that, after having forborne so long, he would hand things over to his  land agent, unless I paid him within the shortest possible time. And that means putting the  broker  in. I likewise — oddly enough on the same day — got a final demand for the rates, as well as letters from the  épiciers, most of them acquainted with the  landlord, threatening to prosecute me and withhold  provisions.
Might you perhaps be able to do something in this way, using Borkheim as  escompteur  so as to stave off the crisis? Of the £10, I paid 6 to the piano man, a nasty brute who wouldn’t have hesitated to bring me before the  County Court. With 2 of the pounds I redeemed things that were in pawn and put what was left at my wife’s disposal.
I assure you that if it wasn’t for  family difficulties, I would far rather move into a  model lodging house than be constantly squeezing your purse.
Salut.
Your
K. M.

ಇದು ಏನನ್ನು ಹೇಳುತ್ತದೆ ಎಂದು ಬಿಡಿಸಿ ಹೇಳಬೇಕಿಲ್ಲ.

ಏಕೆಂದರೆ ಮೇಲಿನ ಮಾತುಗಳೆಲ್ಲ ನೆನಪಾಗಲು ಕಾರಣ ಇತ್ತೀಚಿನ ಆಮ್ ಆದ್ಮಿ ಪಕ್ಷದ ಗೆಲುವಿನ ನಂತರ ಬಹುತೇಕ ಜನರು ಮಾರ್ಕ್ಸಿಸ್ಟರನ್ನು, ಕಮ್ಯುನಿಷ್ಟ್ ಪಕ್ಷವನ್ನು ಹಿಗ್ಗಾಮುಗ್ಗಾ ಟೀಕಿಸುತ್ತಿದ್ದಾರೆ ಎಂದು ಗೆಳೆಯರೊಬ್ಬರು ವಿವರಿಸಿದರು. arvind-kejriwal-delhi-electionsಅದ್ಯಾಕೆ ಹೀಗೆ ಎಂದು ಪ್ರಶ್ನಿಸಿದಾಗ ಅದು ಹಾಗೆಯೇ, ಆಮ್ ಆದ್ಮಿ ಪಕ್ಷದ ಸರಳತೆ, ಕೇವಲ ಒಂದು ವರ್ಷದಲ್ಲಿ ಅಭೂತಪೂರ್ವ ವಿಜಯವನ್ನು ಸಾಧಿಸಿದ ಆಮ್ ಆದ್ಮಿ ಪಕ್ಷ, ದಿನನಿತ್ಯ ಏರುತ್ತಿರುವ ಆಮ್ ಆದ್ಮಿ ಪಕ್ಷದ ಜನಪ್ರಿಯತೆ ಇವೆಲ್ಲವನ್ನು ಕಮ್ಯುನಿಷ್ಟರ ಕಳೆದ ಅರವತ್ತು ವರ್ಷಗಳ ಹೋರಾಟಕ್ಕೆ ಹೋಲಿಸುತ್ತ ಮಾರ್ಕ್ಸಿಸ್ಟರನ್ನು ಗೇಲಿ ಮಾಡಲಾಗುತ್ತಿದೆ, ಎಂದು ವಿವರಿಸುತ್ತಿದ್ದರು. ಇದು ನಿಜ. ಮೊನ್ನೆ ಕಿರಿಯ ಮಿತ್ರನೊಬ್ಬ ಕಮ್ಯುನಿಷ್ಟರನ್ನು ಹಿಗ್ಗಾ ಮುಗ್ಗಾ ಟೀಕಿಸುತ್ತಿದ್ದ. ಅವರನ್ನು ಹಳೇ ತಲೆಮಾರಿನವರು, ಜಡ್ಡುಗಟ್ಟಿದವರು ಎಂದು ಜರೆಯುತ್ತಿದ್ದ.

ಇನ್ನು “ಆಮ್ ಆದ್ಮಿ ಪಕ್ಷ”ಕ್ಕೆ ಬಂದರೆ ಇಂದು ಆ ಪಕ್ಷದ ನಾಯಕರ ಸರಳತೆ ಬಹಳಷ್ಟು ಪ್ರಶಂಸೆಗೊಳಗಾಗುತ್ತಿದೆ. ಇದು ಸಹಜವೇ. ಆ ಸರಳತೆ ಇಂದಿನ ತುರ್ತು ಅಗತ್ಯಗಳಲ್ಲೊಂದಾಗಿತ್ತು. ಆದರೆ ಆಮ್ ಆದ್ಮಿ ಪಕ್ಷವನ್ನು ಹೊಗಳುವ ಭರದಲ್ಲಿ ಕಮ್ಯುನಿಷ್ಟರ ಸರಳತೆ ಮತ್ತು ಪ್ರಾಮಾಣಿಕತೆಯನ್ನು ಟೀಕಿಸುತ್ತಿರುವವರಿಗೆ ಏನು ಹೇಳುವುದು? ಅವರ ಬಗ್ಗೆ ಮರುಕ ಹುಟ್ಟುತ್ತದೆ.

ಈ ಟೀಕಾಕಾರರು ಇಂಡಿಯಾದ ಕಮ್ಯುನಿಷ್ಟ್ ಪಕ್ಷಕ್ಕಾಗಿ, ಸಮತಾವಾದಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಎಸ್.ವಿ.ಘಾಟೆ, ಪೂಚಲಪಲ್ಲಿ ಸುಂದರಯ್ಯ, ಮಾಕಿನೇನಿ ಬಸವಪುನ್ನಯ್ಯ, ಡಾಂಗೆ, ಬಿ.ಟಿ.ರಣದಿವೆ, ಎ.ಕೆ.ಗೋಪಾಲನ್, ದಾಮೋದರನ್, ಕ್ರಿಷ್ಣ ಪಿಳ್ಳೆ, ಪಿ.ಸಿ.ಜೋಶಿ, ಇನ್ನೂ ಮುಂತಾದ ಮಾರ್ಕ್ಸಿಸ್ಟ್ ನಾಯಕರನ್ನು ಮತ್ತೊಮ್ಮೆ ಅರ್ಥಪೂರ್ಣವಾಗಿ, ಸಮಗ್ರವಾಗಿ, ಸಾವಧಾನದಿಂದ ಅಧ್ಯಯನ ಮಾಡಲಿ. ಸಮಾಜವಾದದ ಸಮಾಜಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಈ ನಾಯಕರು ಎಂತಹ ಆದರ್ಶವಾದಿಗಳು. ಎಂತಹ ಸರಳ ಜೀವಿಗಳು. ಇವರು ಜೈಲಿಗೆ ಹೋಗಿ ಬಂದದ್ದು ಎಷ್ಟು ಸಲವೋ, ಪೋಲೀಸರ ಏಟು ತಿಂದದ್ದು ಎಷ್ಟು ಸಲವೋ ಲೆಕ್ಕವೇ ಇಲ್ಲ. ಎಲ್ಲವೂ ಆದರ್ಶ ಸಮಾಜದ ಕನಸಿಗಾಗಿ, ಸಮಾನತೆಗಾಗಿ. ವೈಯುಕ್ತಿಕ ಬದುಕಿಗಾಗಿ ಕೂಡಿಟ್ಟದ್ದು ಇಲ್ಲವೇ ಇಲ್ಲ. ನಿಸ್ವಾರ್ಥವಾಗಿ ಬದುಕಿದರು. Manik_Sarkarಇದನ್ನು ಅರಿಯದೆ ಕಳೆದ ಅರವತ್ತು ವರ್ಷಗಳಲ್ಲಿ ಕಮ್ಯನಿಷ್ಟರು ಏನು ಮಾಡಿದರು ಎಂದು ಪ್ರಶ್ನಿಸುವುದು ಅಮಾನವೀಯತೆ ಮತ್ತು ಮೂರ್ಖತನ. ಈ ಮಾನವತಾವಾದಿಗಳ ಪ್ರಾಮಾಣಿಕತೆ ಮತ್ತು ಸರಳತೆ ಇಂದಿಗೂ ಕಮ್ಯುನಿಷ್ಟ್ ಪಕ್ಷದಲ್ಲಿ ಜೀವಂತವಾಗಿದೆ. ಕೆಳ ಮಧ್ಯಮವರ್ಗದವರಂತೆ ಸರಳವಾಗಿ ಬದುಕುತ್ತಿರುವ ತ್ರಿಪುರಾ ರಾಜ್ಯದ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್, ತೊಂಬತ್ತರ ಇಳಿ ವಯಸ್ಸಿನಲ್ಲಿ ರಿಕ್ಷಾದಲ್ಲಿ ಅಡ್ಡಾಡುವ ಕೇರಳದ ಮಾಜಿ ಮುಖ್ಯಮಂತ್ರಿ ಅಚ್ಯತನಂದನ್ ಇಂದಿಗೂ ಜ್ವಲಂತ ಸಾಕ್ಷಿ. ಗುಜ್ರಾಲ್ ಸರ್ಕಾರದಲ್ಲಿ ದೇಶದ ಗೃಹ ಮಂತ್ರಿಯಾಗಿದ್ದ ಇಂದ್ರಜಿತ್ ಗುಪ್ತ ವಾಸಿಸುತ್ತಿದ್ದದ್ದು ಔಟ್ ಹೌಸ್‌ನಲ್ಲಿ. ಇಂತಹ ನೂರಾರು ಉದಾಹರಣೆಗಳಿವೆ. ಇಂದಿಗೂ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷನ, ಆತನ ಕಾರ್ಯಕರ್ತರ ಮಾಸಿಕ ವೇತನ ತೀರಾ ಕಡಿಮೆ. ಆ ವೇತನವನ್ನು ಬರೆಯಲು ಕೂಡಾ ನಾಚಿಕೆ ಮತ್ತು ಕೀಳರಿಮೆ ಉಂಟಾಗುತ್ತದೆ. ತಿಂಗಳಿಗೆ ಅರವತ್ತು, ಎಪ್ಪತ್ತು ಲಕ್ಷದಷ್ಟು ಸಂಬಳಗಳನ್ನು ತೆಗೆದುಕೊಳ್ಳುವ ಜನ ತಿಂಗಳಿಗೆ ಕವಡೆಯಷ್ಟನ್ನೂ ಕೂಡಿಡದ, ಪ್ರತಿ ತಿಂಗಳೂ ಬಾಡಿಗೆಗಾಗಿ, ವಿದ್ಯುತ್ ಬಿಲ್‌ಗಾಗಿ, ರೇಷನ್‌ಗಾಗಿ ಕಷ್ಟಪಡುವ ಈ ಪ್ರಾಮಾಣಿಕ ಹೋರಾಟಗಾರರನ್ನು ಟೀಕಿಸುವುದು ನಿಜಕ್ಕೂ ಅವಿವೇಕತನ ಮತ್ತು ಜೀವವಿರೋಧಿ ವರ್ತನೆ.

ಕಮ್ಯುನಿಷ್ಟ್ ಸರ್ಕಾರಗಳ ಸಾಧನೆಗಳೇನು, ಅವರು ಮಾಡಿದ್ದೇನು ಅದನ್ನೆಲ್ಲ ಅಕಡೆಮಿಕ್ ಆಗಿಯೇ ಚರ್ಚಿಸಬೇಕಾಗುತ್ತದೆ. ರಸ್ತೆಯ ಮೇಲಲ್ಲ. ಇಲ್ಲಿ ಅವರು ಅನೇಕ ಬಾರಿ ಸೋತಿದ್ದಾರೆ, ಕೆಲವು ಕಡೆ ಗೆದ್ದಿದ್ದಾರೆ. ಅದನ್ನು ಯಾವುದಕ್ಕೆ ಮಾನದಂಡವಾಗಿ ಬಳಸಗಾಗುತ್ತದೆ?

ಇನ್ನು ಕಮ್ಯುನಿಷ್ಟರು ಕಾರ್ಮಿಕರಿಗೆ ಮೋಸ ಮಾಡಿದರು, ಅವರನ್ನು ಬೀದಿಗೆ ತಳ್ಳಿದರು ಎಂದು ಅರ್ಥಹೀನವಾಗಿ ವಾದಿಸುವವರು ದಯವಿಟ್ಟು ನನ್ನೊಂದಿಗೆ ಮಾತನಾಡಿ. ಏಕೆಂದರೆ ಕಳೆದ ಇಪ್ಪತ್ತು ವರ್ಷಗಳ ಕಾಲ ಮ್ಯಾನೇಜ್‌ಮೆಂಟ್ ಮತ್ತು ಕಾರ್ಮಿಕರೊಂದಿಗೆ ಕೆಲಸ ಮಾಡಿರುವ ನನ್ನಂತಹವರಿಗೆ ಇದರ ಪೂರ್ಣ ಪಾಠಗಳು, ವಿವರಗಳು ಸಂಪೂರ್ಣವಾಗಿ ಗೊತ್ತು. ನಾವೆಲ್ಲ ಇದರ ಭಾಗಿಗಳು ಮತ್ತು ಸಾಕ್ಷೀದಾರರು. ಅನಗತ್ಯವಾಗಿ ತಿಳುವಳಿಕೆ ಇಲ್ಲದೆ ಟೀಕಿಸುವವರು ತಮ್ಮನ್ನು ತಾವು ದಯನೀಯವಾಗಿ ಬಯಲುಗೊಳಿಸಿಕೊಳ್ಳುತ್ತಾರೆ. ಏಕೆಂದರೆ ಇವರು ನೆನಪಿಡಬೇಕಾಗಿರುವುದು ಸತ್ಯಕ್ಕೆ ನೂರಾರು ಮುಖಗಳಿರುತ್ತವೆ. ನಾನು ನೋಡಿದ್ದು, ಕಂಡಿದ್ದಷ್ಟೇ ಸತ್ಯವಲ್ಲ. ಇದು ಪ್ರತಿಯೊಬ್ಬರೂ ನೆನಪಿನಲ್ಲಿಟ್ಟುಕೊಳ್ಳಬೇಕು.

ಹೌದು ಕಮುನಿಷ್ಟರ ಜಡತ್ವವನ್ನು ವಿಮರ್ಶಿಸೋಣ. ಅವರ ಹಲವಾರು ಕೂಪಮಂಡೂಕತೆಯ, ಓಬಿರಾಯನ ಕಾಲದ ಚಿಂತನೆಗಳು ಇಂದು ಚರ್ಚೆಗೊಳಬೇಕಾಗಿವೆ. ನನ್ನ ಅನೇಕ ಕಾಮ್ರೇಡ್ ಮಿತ್ರರು ಇದಕ್ಕೆ ಹಿಂಜರಿಯುತ್ತಿಲ್ಲ.

“Why Marx is right ?” ಎನ್ನುವ ತನ್ನ ಪುಸ್ತಕದಲ್ಲಿ ಚಿಂತಕ ಟೆರಿ ಈಗಲ್ಟನ್ ಹೇಳುತ್ತಾನೆ:

“ಮಾರ್ಕ್ಸವಾದದ ಕುರಿತಾಗಿ ಇತ್ತೀಚಿನ ದಿನಗಳಲ್ಲಿ ಪ್ರಚಲಿತವಿರುವ ಪ್ರಮುಖ ಟೀಕೆ ’ಮಾರ್ಕ್ಸವಾದದ ಕಾಲ ಮುಗಿದಿದೆ. ಇದು ತನ್ನ ಪ್ರಸ್ತುತತೆಯನ್ನು ಅಷ್ಟೋ ಇಷ್ಟೋ ಉಳಿಸಿಕೊಂಡಿರುವುದು ಕಾರ್ಖಾನೆಗಳ ಆ ಗಲೀಜಿನ ಇಕ್ಕಟ್ಟಾದ ವರ್ಕಶಾಪ್‌ಗಳಲ್ಲಿ, ಹಸಿವಿನ ಆಕ್ರಂದತೆಯಲ್ಲಿ, ಕಲ್ಲಿದ್ದಲಿನ ಕಗ್ಗತ್ತಲೆಯ ಗಣಿಗಾರಿಕೆಯಲ್ಲಿ, ಅಲ್ಲಿನ ಚಿಮ್ನಿಗಳು ಹೊರಸೂಸುವ ದಟ್ಟವಾದ ಕಪ್ಪು ಹೊಗೆಯಲ್ಲಿ, ವಿಶಾಲವಾಗಿ ವ್ಯಾಪಿಸಿಕೊಂಡಿರುವ ದಾರಿದ್ರ್ಯತೆಯಲ್ಲಿ, ಕಡೆಗೆ ಆದರೆ ಪ್ರಮುಖವಾಗಿ ದುಡಿಯುವ ವರ್ಗಗಳ ಬಳಿ ಮಾತ್ರ. ಆದರೆ ಮೇಲ್ಮುಖವಾಗಿ ಅತ್ಯಂತ ಕಿಪ್ರಗತಿಯಲ್ಲಿ ಬೆಳೆಯುತ್ತಿರುವ ವರ್ಗರಹಿತ ವ್ಯವಸ್ಥೆಯಲ್ಲಿ, ಅವಕಾಶಗಳನ್ನು ಬಾಚಿಕೊಳ್ಳುತ್ತಿರುವ ಸಮಾಜದಲ್ಲಿ, ಕೈಗಾರಿಕೋತ್ತರದ ಇಂದಿನ ಕಾಲಘಟ್ಟದಲ್ಲಿ ಈ ಮಾರ್ಕ್ಸವಾದವು ತನ್ನ ಪ್ರಸ್ತುತತೆಯನ್ನು ಕಳೆದುಕೊಂಡಿದೆ. ಅದರ ಪ್ರಭಾವ ಶೂನ್ಯ. ಆದರೆ ಕೇವಲ ಕರ್ಮಠ ಎಡಪಂಥೀಯ ಚಿಂತನೆಗಳಲ್ಲಿ ಮುಳುಗಿರುವವರಲ್ಲಿ ಮಾತ್ರ ಈ ಮಾರ್ಕ್ಸವಾದದ ಕುರಿತಾದ ಹಪಾಹಪಿತನವಿದೆ. ಇವರಿಗೆ ಜಗತ್ತು ನಾಗಲೋಟದಲ್ಲಿ ಬೆಳೆಯುತ್ತ ಮತ್ತೊಂದು ಮಗ್ಗುಲಿಗೆ ಹೊರಳಿಕೊಳ್ಳುತ್ತಿರುವುದರ ವಾಸ್ತವತೆಯೇ ಅರಿವಿಲ್ಲ.’

“ಮಸಲ ಮೇಲಿನ ಮಾತುಗಳನ್ನು ನಂಬಬಹುದಾದರೆ ಇನ್ನು ಈ ಮಾರ್ಕ್ಸವಾದದ ಕಾಲ ಮುಗಿದುಹೋಗಿದೆ ಎನ್ನುವ ಚಿಂತನೆಗಳು, ಪ್ರಚಾರಗಳು ನಮ್ಮ ಎಲ್ಲಾ ಮಾರ್ಕ್ಸಿಸ್ಟರ ಕಿವಿಗೆ ಅತ್ಯಂತ ಸುಶ್ರಾವ್ಯವಾದ ಸಂಗೀತದಂತೆ ಕೇಳಿಸತೊಡಗಿದರೆ ಅದರಲ್ಲಿ ಆಶ್ಚರ್ಯವಿಲ್ಲ. ಏಕೆಂದರೆ ಇನ್ನಾದರೂ ಈ ಮಾರ್ಕ್ಸಿಸ್ಟರು ಪಿಕೆಟಿಂಗ್‌ಗಳು, ಪ್ರತಿಭಟನೆಗಳು, ಹರತಾಳಗಳನ್ನು ಮಾಡುವ ಕರ್ಮಕಾಂಡಕ್ಕೆ ಸಂಪೂರ್ಣ ವಿರಾಮ ಕೊಟ್ಟು ಕಂಗಾಲಾದ ಸ್ಥಿತಿಯಲ್ಲಿರುವ ತಮ್ಮ ಮನೆಗಳಿಗೆ ಮರಳಿ ಹೆಂಡತಿ ಮಕ್ಕಳೊಂದಿಗೆ ಸಂಜೆಯ ವೇಳೆಯ ಪ್ರಶಾಂತತೆಯನ್ನು ಅನುಭವಿಸಬಹುದು. ಆ ಕಮಿಟಿ ಮೀಟಿಂಗ್‌ಗಳಿಗೆ ಸಂಪೂರ್ಣ ತಿಲಾಂಜಲಿಯನ್ನು ಕೊಡಬಹುದು. ಮಾರ್ಕ್ಸಿಸ್ಟರು ತಮ್ಮನ್ನು ಈ ಮಾರ್ಕ್ಸಿಸ್ಟರ ಸ್ಥಿತಿಯಿಂದ, ಬಂಧನದಿಂದ ಬಿಡುಗಡೆಯನ್ನು ಬಯಸಿದ್ದರು. ಏಕೆಂದರೆ ಈ ಮಾರ್ಕ್ಸವಾದದ ರೀತಿಯು ಬುದ್ಧಿಸಂಗಿಂತಲೂ, ಬಂಡವಾಳವಾದದ ರೀತಿಗಿಂತಲೂ ಸಂಪೂರ್ಣ ಭಿನ್ನ. ಒಂದು ರೀತಿ ಈ ಮಾರ್ಕ್ಸಿಸ್ಟರು ವೈದ್ಯರ ತರಹ. ಈ ವೈದ್ಯರುಗಳು ಮೆಡಿಸಿನ್ ಅನ್ನು ಅಧ್ಯಯನ ಮಾಡಿ ಅದನ್ನು ತಮ್ಮ ಬಳಿಗೆ ಬಂದಂತಹ ರೋಗಿಗಳ ಮೇಲೆ ಪ್ರಯೋಗಿಸಿ ಅವರ ಕಾಯಿಲೆಗಳನ್ನು ಗುಣಪಡಿಸಿದ ನಂತರ ಆ ರೋಗಿಗೆ ಆ ಸದರಿ ವೈದ್ಯರ ಅವಶ್ಯಕತೆ ಇರುವುದಿಲ್ಲ ಮತ್ತು ವೈದ್ಯರೊಂದಿಗಿನ ರೋಗಿಯ ಸಂಬಂಧ ಮುಗಿದುಹೋಗುತ್ತದೆ. ಅದೇ ಮಾದರಿ ಈ ಮಾರ್ಕ್ಸಿಸ್ಟರದ್ದು ಸಹ. ಒಮ್ಮೆ ಗುರಿಗಳನ್ನು ತಲುಪಿದ ನಂತರ ಇವರ ಅವಶ್ಯಕತೆಯಿರುವುದಿಲ್ಲ. ಈ ಅವಶ್ಯಕತೆಯೇ ಇಲ್ಲವೆಂದಾದ ಮೇಲೆ ಚೆಗವೇರಾನ ಪೋಸ್ಟರುಗಳ ಅವಶ್ಯಕತೆಯೂ ಇರುವುದಿಲ್ಲ.”

“ಮಾರ್ಕ್ಸವಾದದ ಕುರಿತಾಗಿ ಎರಡನೇ ಪ್ರಮುಖ ಟೀಕೆ ’ಮಾರ್ಕ್ಸಿಸಂ ತನ್ನ ಪಠ್ಯಗಳಲ್ಲಿ, ಬೌದ್ಧಿಕ ಚಿಂತನೆಗಳ ಮಟ್ಟದಲ್ಲಿ ಅತ್ಯಂತ ಪ್ರಖರವಾಗಿಯೂ, ಪ್ರಗತಿಪರವಾಗಿಯೂ, ಆಕರ್ಷಕವಾಗಿಯೂ ಮಿಂಚುತ್ತಿರುತ್ತದೆ. ಆದರೆ ವ್ಯಾವಹಾರಿಕವಾಗಿ, ಕಾರ್ಯರೂಪದಲ್ಲಿ ಅದು ಭಯೋತ್ಪಾದನೆ ರೂಪದಲ್ಲಿ, ಊಹಿಸಲಾಗದ ಮಟ್ಟದಲ್ಲಿ ಬಲತ್ಕಾರದ ಪ್ರಕ್ರಿಯೆಯಲ್ಲಿ ನಿರಂತರವಾಗಿರುತ್ತದೆ. ಮಾರ್ಕ್ಸಿಸಂ ಎಂದರೆ ಸ್ವಾತಂತ್ಯ್ರಹೀನ ಸ್ಥಿತಿ. ಪಶ್ಚಿಮದ ಬುದ್ಧಿಜೀವಿಗಳಿಗೆ, ಅಧ್ಯಾಪಕರಿಗೆ ಈ ಮಾರ್ಕ್ಸಿಸಂ ಅಪ್ಯಾಯಮಾನವಾಗಿಯೂ, ಒಂದು ರೀತಿಯಲ್ಲಿ ಅಂಗೈಯ್ಯಲ್ಲಿನ ಅರಮನೆಯಂತೆ ಕಂಗೊಳಿಸುತ್ತಿರುತ್ತದೆ. ಆದರೆ ಲಕ್ಷಾಂತರ ಬಡವರಿಗೆ, ಕೆಳವರ್ಗಗಳಿಗೆ ಮಾರ್ಕ್ಸಿಸಂ ದಾರಿದ್ರ್ಯದ, ಚಿತ್ರಹಿಂಸೆಯ, ಬಲತ್ಕಾರದ ಶೋಷಣೆಯ ಸ್ಥಿತಿಯಾಗಿರುತ್ತದೆ. ಇದನ್ನು ಅರಿತೂ ಮಾರ್ಕ್ಸಿಸಂ ಅನ್ನು ಬೆಂಬಲಿಸುತ್ತಾರೆಂದರೆ ಅವರೆಲ್ಲ ಬೌದ್ಧಿಕವಾಗಿ ದಿವಾಳಿಯಾಗಿದ್ದಾರೆಂದೇ ಅರ್ಥ. ಇವರು ಅಭಿವೃದ್ಧಿಪರವಾದ ಮಾರ್ಕೆಟ್ ವ್ಯವಸ್ಥೆಯನ್ನು ಬುಡಮೇಲುಗೊಳಿಸಲು ತಯಾರಿದ್ದಾರೆಂತಲೇ ಅರ್ಥ.’

“ಒಂದಂತೂ ನಿಜ. ಆಧುನಿಕ ಬಂಡವಾಳಶಾಹಿ ಸಮಾಜವು ಮಾವೋನ ಚೀನಾದಂತೆ, ಸ್ಟಾಲಿನ್ನಸ ಸೋವಿಯತ್ ಒಕ್ಕೂಟದಂತೆ ಅಸಹ್ಯ ಹುಟ್ಟಿಸುವ ಜೀತದ, ಕ್ರೌರ್ಯದ, ಹಿಂಸೆಯ ಫಲರೂಪ. ಈ ಬಂಡವಾಳಶಾಹಿ ವ್ಯವಸ್ಥೆಯು ಸಹ ರಕ್ತ ಮತ್ತು ಕಣ್ಣೀರಿನಿಂದ ಬಂಧಿಸಲ್ಪಟಿದೆ. 19ನೇ ಶತಮಾನದ ಅಂತ್ಯದ ವೇಳೆಗೆ ಲಕ್ಷಾಂತರ ಇಂಡಿಯನ್ನರು, ಆಫ್ರಿಕನ್ನರು, ಕೊರಿಯನ್ನರು, ರಶ್ಯನ್ನರು ಹಸಿವಿನಿಂದ, ದಾರಿದ್ರ್ಯದಿಂದ, ಕ್ಷಾಮದಿಂದ ಸತ್ತಿದ್ದರೆ ಅದು ಈ ಮುಕ್ತ ಮಾರುಕಟ್ಟೆ ಆರ್ಥಿಕ ನೀತಿಯಿಂದ. ನಿಜ ಈ ಮುಕ್ತ ಆರ್ಥಿಕ ವ್ಯವಸ್ಥೆಯ ಬಂಡವಾಳಶಾಹಿ ಸ್ವರೂಪವು ಕೆಲವು ವಲಯಗಳಲ್ಲಿ ಧೃಡತೆಯನ್ನು, ಅಭಿವೃದ್ಧಿಯನ್ನು, ಸುಖದ ಅನುಭವವನ್ನು ತುಂದುಕೊಟ್ಟಿದೆ. ಅದೂ ಸಹ ಮಾವೋನ ಚೀನಾದಂತೆ, ಸ್ಟಾಲಿನ್ನನ ಸೋವಿಯತ್‌ನಂತೆ. ಆದರೆ ಇದನ್ನು ಮನುಷ್ಯರ ಪ್ರಾಣದ ಮೇಲೆ ಒತ್ತೆ ಇಟ್ಟು ಸಾಧಿಸಲಾಯಿತು. ಇವೆರೆಡೂ ಸಿದ್ಧಾಂತಗಳು ನರಮೇಧದ, ಕ್ಷಾಮದ ಜೊತೆಜೊತೆಗೆ ಸುಖದ ಲೋಲುಪ್ತತೆಯನ್ನು ಹುಟ್ಟುಹಾಕಿತು. ಇದರ ಫಲವೇನೆಂದರೆ ಮುಂದಿನ ವರ್ಷಗಳಲ್ಲಿ ಇಡೀ ವಿಶ್ವವೇ ನಾಶವಾಗುವ ಸ್ಥಿತಿಗೆ ತಲುಪಿದೆ.

“ಅತ್ಯಂತ ಕಳೆಗೆಟ್ಟ, ಶಕ್ತಿಹೀನ ಸ್ಥಿತಿಯಲ್ಲಿ ಸೋಶಿಯಲಿಸಂನ್ನು ಸಾಧಿಸಲಾಗುತ್ತದೆ ಎಂದು ಮಾರ್ಕ್ಸ ಊಹಿಸಿರಲಿಲ್ಲ. ಅಷ್ಟೇಕೆ ಬೋಲ್ಷೆವಿಕ್ ನಾಯಕತ್ವವಾಗಲೀ, ಲೆನಿನ್, ಟ್ರಾಟಸ್ಕಿ ತರಹದ ನಾಯಕರಿಗೂ ಸಹ ಈ ಮಾದರಿಯ ಕಮ್ಯುನಿಸಂನ್ನು ಊಹಿಸಿರಲಿಲ್ಲ. ಅಲ್ಪ ಪ್ರಮಾಣದ ಸಂಪತ್ತನ್ನು ಎಲ್ಲರಿಗೂ ಒದಗುವಂತೆ ಪುನರೂಪಿಸುವ ಪ್ರಕ್ರಿಯೆಯೇ ಅಸಮರ್ಥವಾದದ್ದೆಂದು ಮಾರ್ಕ್ಸವಾದಿಗಳಿಗೆ ಅರಿವಾಗಲಿಲ್ಲ. ಸ್ವತಃ ಮಾರ್ಕ್ಸ ಹೇಳಿದಂತೆ ಇಂತಹ ವ್ಯವಸ್ಥೆಯಲ್ಲಿ ಕ್ರಾಂತಿಯನ್ನು ಸಾಧಿಸುವುದೆಂದರೆ ಹಳೇ ಯುಗದ ಹೆಳವಂಡಗಳು ಪುನಃ ಜನ್ಮ ತಾಳಿದಂತಷ್ಟೇ. ಇದರಿಂದ ಕ್ಷಾಮವು ಸಹ ಸಮಾಜವಾದದ ಹೆಸರಿನಲ್ಲಿ ಸಾರ್ವಜನೀಕರಣಗೊಳ್ಳುತ್ತದೆ. ಕೆಳಮಟ್ಟದಿಂದ ಸಂಪತ್ತನ್ನು ಕ್ರೋಢೀಕರಿಸುವುದೆಂದರೆ ಲಾಭದ ತುತ್ತತುದಿಯನ್ನು ತಲುಪುವುದಷ್ಟೆ. ಈ ತುತ್ತತುದಿಯನ್ನು ಯಾವ ವೇಗದಲ್ಲಿ ಸಾಧಿಸುತ್ತೇವೆಯೋ ಅದೇ ವೇಗದಲ್ಲಿ ನಾವು ಲಕ್ಷಾಂತರ ದಾರಿದ್ರ್ಯವನ್ನು ಹುಟ್ಟುಹಾಕಿರುತ್ತೇವೆ. ತಳಮಟ್ಟದಿಂದ ಆರ್ಥಿಕತೆಯ ಪ್ರಗತಿಯನ್ನು ಸಾಧಿಸುವುದೆಂದರೆ ಅದು ಅತ್ಯಂತ ನೋವಿನ, ಅಪಾರ ಶ್ರಮದ ಕೆಲಸ. ಈ ಕಷ್ಟ, ಕಾರ್ಪಣ್ಯಗಳಿಗೆ ಬಹುಸಂಖ್ಯಾತ ಜನತೆ ತಮ್ಮನ್ನು ತಾವು ಸಮರ್ಪಿಸಿಕೊಳ್ಳುವುದು ಅಸಾಧ್ಯದ ಮಾತು. ಇದನ್ನು ಪ್ರಜಾಪ್ರಭುತ್ವದ ತಳಹದಿಯಲ್ಲಿ, ಸಮಾಜವಾದದ ನೆಲೆಯಲ್ಲಿ ಜನತೆಯು ಸ್ವಯಂಸೇವಕರಾಗಿ ಸಾಧಿಸಲು ವಿಫಲವಾದಾಗ ಪ್ರಭುತ್ವವು ಅಧಿಕಾರಯುಕ್ತದ, ಉಕ್ಕಿನ ಹಿಡಿತದ ಶೈಲಿಯಲ್ಲಿ ಸಾಧಿಸಲು ಮುಂದಾಗುತ್ತದೆ. ರಷ್ಯಾದ ಬೋಲ್ಷೆವಿಕ್ ವ್ಯವಸ್ಥೆಯನ್ನೇ ಮಿಲಿಟರೀಕರಣಗೊಳಿಸಿದ್ದು ಇದಕ್ಕೆ ಒಂದು ಉತ್ತಮ ಉದಾಹರಣೆ.”

ಕಮ್ಯುನಿಷ್ಟರನ್ನು ಟೀಕಿಸುವವರು ಟೆರಿ ಈಗಲ್ಟನ್ನನ ಮೇಲಿನ ಪುಸ್ತಕವನ್ನು ಖಂಡಿತ ಓದಲೇಬೇಕು. ಕನಿಷ್ಟ ಪೂರ್ವಗ್ರಹಗಳಿಂದಾದರೂ ಹೊರಬರಬಹುದು. ನಂತರ ಮಾರ್ಕ್ಸನನ್ನು ಅಮೂಲಾಗ್ರವಾಗಿ, ಹೊಸ ನೋಟದಲ್ಲಿ ಓದಲಿ.

ನಿಜ. ಜಾಗತೀಕರಣದ ನಾಗಲೋಟದ ಇಂದಿನ ಸಂದರ್ಭದಲ್ಲಿ ನಮ್ಮ ಎಡಪಂಥೀಯರು ಮಾರ್ಕ್ಸವಾದವನ್ನು ಹೊಸ ನೋಟದಲ್ಲಿ, ಹೊಸ ದಿಕ್ಕಿನಲ್ಲಿ ಅರ್ಥೈಸಬೇಕಾಗಿತ್ತು. ತಮ್ಮ ಹಳೆಯ ನುಡಿಕಟ್ಟುಗಳನ್ನು ಬದಲಿಸಿಕೊಳ್ಳಬೇಕಾಗಿತ್ತು. ಈ ಹೊಸ ನುಡಿಕಟ್ಟುಗಳು ಮಾರ್ಕ್ಸವಾದದಲ್ಲಿ ತನಗೆ ತಾನೇ ತೆರೆದುಕೊಳ್ಳುತ್ತವೆ. ಆದರೆ ನಮ್ಮ ಒಳಗಣ್ಣುಗಳು ತೆರೆದುಕೊಳ್ಳಬೇಕು. ಆದರೆ ನಮ್ಮ ಕಮ್ಯುನಿಷ್ಟರು ಇಂದು ತಮ್ಮ ಒಳಗಣ್ಣುಗಳನ್ನು ತೆರೆಯಲು ನಿರಾಕರಿಸುತ್ತಿರುವುದು Globalizationಒಂದು ಕಾಲದಲ್ಲಿ ಕಮ್ಯುನಿಷ್ಟರೊಂದಿಗೆ ಗುರುತಿಸಿಕೊಂಡಿದ್ದ ನಮ್ಮಂತಹವರಿಗೆ ನಿಜಕ್ಕೂ ವ್ಯಥೆಯೆನಿಸುತ್ತದೆ. ಏಕೆಂದರೆ ಜಾಗತೀಕರಣದ ಪ್ರಲೋಭನೆಗಳು ನಮ್ಮ ಬದುಕಿನ ನೈತಿಕತೆ ಹಾಳು ಮಾಡಿರುವುದು ನಿಜ. ಏಕೆಂದರೆ ನಾವೆಲ್ಲ ಈ ಜಾಗತೀಕರಣವನ್ನು ಕೊಳ್ಳುಬಾಕ ಸಂಸ್ಕೃತಿಗೆ ತೆರೆದ ಹೆಬ್ಬಾಗಿಲೆಂದು ತಪ್ಪಾಗಿ ಪರಿಗಣಿಸಿ ಹಿಗ್ಗಾಮುಗ್ಗಾ ಮುಕ್ಕತೊಡಗಿದ್ದೇ ಈ ಅಜೀರ್ಣಕ್ಕೆ ಕಾರಣ. ಆದರೆ ಇದೇ ಜಾಗತೀಕರಣವನ್ನು ಬಳಸಿಕೊಂಡು ನಮ್ಮ ತಳಸಮುದಾಯಗಳಲ್ಲಿ ಆರ್ಥಿಕವಾಗಿ ಬಲು ದೊಡ್ಡ ಚಲನಶೀಲತೆಯನ್ನು ತಂದುಕೊಡಬಹುದು, ಅಸ್ಪೃಶ್ಯತೆಯನ್ನು ಸಹ ಕ್ರಮೇಣವಾಗಿ ಅಳಸಿಹಾಕಬಹುದು ಎನ್ನುವ ಸಾಧ್ಯತೆಗಳನ್ನು ಕುರುಡಾಗಿ ನಿರಾಕರಿಸುತ್ತಿದ್ದಾರೆ ನಮ್ಮ ಎಡಪಂಥೀಯರು. ಮರಳಿ ಇದು ಖಾಸಗೀಕರಣಕ್ಕೆ ದಾರಿ ಮಾಡಿಕೊಡುತ್ತದೆ ಎಂದೆಲ್ಲ ಹೇಳುತ್ತಿದ್ದಾರೆ, ಆದರೆ ಇದು ನಿಜಕ್ಕೂ ತಪ್ಪು. ಏಕೆಂದರೆ ಈಗಲ್ಟನ್ ಹೇಳುವಂತೆ ಭವಿಷ್ಯದಲ್ಲಿ ಉಂಟಾಗುವ ಬದಲಾವಣೆಯು ಇಂದಿನ ವ್ಯವಸ್ಥೆಯೊಂದಿಗೆ ಸಂಪೂರ್ಣ ಕಡಿತಗೊಂಡಿರುವಂತಾದ್ದಲ್ಲ ಅಥವಾ ಇಂದಿನ ವ್ಯವಸ್ಥೆಯ ಮುಂದುವರಿಕೆಯೂ ಅಲ್ಲ. ಅನೇಕ ಬಾರಿ ಮಾರ್ಕ್ಸ ಕಂಡುಕೊಂಡಿರುವಂತೆ “ಸಮಾಜವಾದವನ್ನು ಜಾರಿಗೊಳಿಸಬೇಕಾದರೆ ಮೊದಲು ಬಂಡವಾಳಶಾಹಿಯು ಚಾಲ್ತಿಯಲ್ಲಿರಬೇಕು”. ಇದನ್ನು ಜಗತ್ತಿನ ಯಾವುದೇ ಎಡಪಂಥೀಯ ರಾಜಕಾರಣಿಗಳು ಸರಿಯಾಗಿ ಅರ್ಥ ಮಾಡಿಕೊಂಡಂತಿಲ್ಲ. ಅಷ್ಟೇಕೆ ನಮ್ಮ ಮಾರ್ಕ್ಸಿಸ್ಟರು ಆರ್ವೆಲ್‌ನ ಮಾಸ್ಟರ್ ಪುಸ್ತಕ “1948 1984″ ಕಾದಂಬರಿಯನ್ನು ಓದಲು ಸಹ ನಿರಾಕರಿಸುತ್ತಾರೆ!! ಅದು ವಿಚಿತ್ರ್ಯವೇ ಸರಿ!! ನೆನಪಿರಲಿ ಹೆಗೆಲ್‌ನ ಚಿಂತನೆಗಳಿಗೆ ಬಂಡಾಯವಾಗಿಯೇ ಮಾರ್ಕ್ಸ ಚಿಂತಿಸಿದ್ದಲ್ಲವೇ ? ಆದರೆ ಹೆಗೆಲ್‌ನ “antithesis dialectics” ಅನ್ನು ಇಂದಿಗೂ ಚರ್ಚಿಸಲಾಗುತ್ತಿದೆ. ಮಾರ್ಕ್ಸನ ಮೆಟೀರಿಯಲಿಸ್ಟಿಕ್ ಫಿಲಾಸಫಿ ಮತ್ತು ಹೆಗೆಲ್‌ನ ಆಧ್ಯಾತ್ಮದ ಕಾನ್ಸೆಪ್ಷನ್ ಎರಡನ್ನೂ ನಿರಾಕರಿಸಲು ಸಾಧ್ಯವಿಲ್ಲವಲ್ಲವೇ??

 

10 thoughts on “AAP ಮತ್ತು ಕಮ್ಯುನಿಷ್ಟರು : ಮಾರ್ಕ್ಸ್ ಯಾವಾಗಲೂ ಸರಿ

  1. Ananda Prasad

    ಸಮತಾವಾದ (ಕಮ್ಯುನಿಸಂ)ದಲ್ಲಿ ಕೆಲವು ಗಂಭೀರ ಲೋಪಗಳು ಇವೆ. ಇಲ್ಲದೇ ಹೋಗಿದ್ದರೆ ಸಮತಾವಾದಿ ವ್ಯವಸ್ಥೆಯು ಸೋವಿಯತ್ ಯೂನಿಯನ್ನಲ್ಲಿ ಕುಸಿಯುತ್ತಿರಲಿಲ್ಲ ಮತ್ತು ಬಹುತೇಕ ಪ್ರಪಂಚದ ರಾಷ್ಟ್ರಗಳಿಂದ ಮಾಯವಾಗುತ್ತಿರಲಿಲ್ಲ. ಸಮತಾವಾದಿ ವ್ಯವಸ್ಥೆಯು ಪ್ರಜಾಪ್ರಭುತ್ವದ ಮೌಲ್ಯಗಳಾದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹಾಗೂ ವ್ಯಕ್ತಿ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುತ್ತದೆ. ಇದು ಅಂತಿಮವಾಗಿ ಇಡೀ ವ್ಯವಸ್ಥೆಯೇ ಕುಸಿಯುವಂತೆ ಮಾಡುತ್ತದೆ. ಬಂಡವಾಳಶಾಹಿ ವ್ಯವಸ್ಥೆಯು ಸಮತಾವಾದಿ ವ್ಯವಸ್ಥೆಯಂತೆ ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ವ್ಯಕ್ತಿ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವುದಿಲ್ಲ. ಇಂದು ನಾವು ಉಪಯೋಗಿಸುತ್ತಿರುವ ಹಲವು ಹೊಸ ತಂತ್ರಜ್ಞಾನ, ಆವಿಷ್ಕಾರಗಳಿಗೆ ಬಂಡವಾಳಶಾಹಿ ವ್ಯವಸ್ಥೆಯು ಪ್ರೇರಕವಾಗಿ ಕೆಲಸ ಮಾಡಿದೆ. ಇಂದು ಅತೀ ಹೆಚ್ಚು ಉಪಯೋಗಕಾರಿಯಾದ ಅಂತರ್ಜಾಲದ ಹಲವು ಆವಿಷ್ಕಾರಗಳು ಬಂಡವಾಳಶಾಹಿ ರಾಷ್ಟ್ರಗಳು ಜಗತ್ತಿಗೆ ನೀಡಿದ ಕೊಡುಗೆಯಾಗಿವೆ ಮತ್ತು ಇವುಗಳು ಜಗತ್ತಿನ ಎಲ್ಲರಿಗೂ ಉಚಿತವಾಗಿ ಉಪಯೋಗಿಸಲು ಲಭ್ಯವಾಗಿಸಿವೆ. ಉದಾಹರಣೆಗೆ ಗೂಗಲ್, ವಿಕಿಪೀಡಿಯ, ವೆಬ್ ಬ್ರೌಸರ್ಗಳು, ಯೂಟ್ಯೂಬ್, ಫೇಸ್ಬುಕ್ ಇತ್ಯಾದಿ. ಸಮತಾವಾದಿ ರಾಷ್ಟ್ರಗಳಲ್ಲಿ ಜಗತ್ತಿಗೆ ಉಪಯೋಗಕಾರಿಯಾದ ಮಹತ್ತರ ಆವಿಷ್ಕಾರಗಳು ಆಗಿಲ್ಲ. ಬಂಡವಾಳಶಾಹಿ ವ್ಯವಸ್ಥೆಯೊಳಗೆ ಆದರ್ಶಗಳನ್ನು ಪ್ರೇರಿಸುವ ಕೆಲಸ ಇಂದು ಜಗತ್ತಿನಾದ್ಯಂತ ಆಗಬೇಕಾಗಿದೆ. ಇನ್ನು ಮುಂದೆಯೂ ಸಮತಾವಾದ ಜಗತ್ತಿನಲ್ಲಿ ಯಶಸ್ವಿಯಾಗುವ ಸಾಧ್ಯತೆಗಳು ಇಲ್ಲ. ಮಾನವನು ಸಮತಾವಾದದ ಆದರ್ಶಗಳನ್ನು ಅರಗಿಸಿಕೊಳ್ಳುವಷ್ಟು ಮನೋವಿಕಾಸ ಹೊಂದಿಲ್ಲ. ಸರಾಸರಿ ಮನುಷ್ಯರು (average human beings) ಸಮತಾವಾದವನ್ನು ಯಶಸ್ವಿಗೊಳಿಸುವಷ್ಟು ವಿಕಾಸ ಹೊಂದಿಲ್ಲ. ಇದನ್ನು ಯಶಸ್ವಿಗೊಳಿಸಬೇಕಾದರೆ ಬಹುತೇಕ (majority) ಜನತೆ ಮನೋವಿಕಾಸ ಹೊಂದಿರಬೇಕಾಗುತ್ತದೆ. ಅಂಥ ಸ್ಥಿತಿಯನ್ನು ಮಾನವ ಜನಾಂಗ ಇನ್ನೂ ತಲುಪಿಲ್ಲ ಮಾತ್ರವಲ್ಲ ಇನ್ನೂ ಹಲವಾರು ಸಾವಿರಾರು ವರ್ಷಗಳವರೆಗೂ ಆ ಸ್ಥಿತಿಯನ್ನು ಮಾನವ ಜನಾಂಗ ತಲುಪುವ ಸಾಧ್ಯತೆ ಕಂಡುಬರುತ್ತಿಲ್ಲ.

    Reply
  2. Umesh

    ಶ್ರೀಪಾದಭಟ್,

    ಯೂರೋಪಿನ ಪ್ರಖರ ಚಿಂತಕ Bertrand Russell ತನ್ನ In Praise of Idleness ಗ್ರಂಥದಲ್ಲಿ communismನ ಬಗ್ಗೆ ವಿಸ್ತೃತವಾಗಿ ವಿಮರ್ಶಿಸಿದ್ದಾನೆ. ಆ ಪುಸ್ತಕದಿಂದ ಆಯ್ದ ಕೆಲವು (೮ ಮುಖ್ಯ ಪಾಯಿಂಟಗಳಿಂದ) ವಿಚಾರ ಹೀಗಿದೆ –

    (In Praise of Idleness by Bertrand Russell, Unwin Books, second impression 1962, page 70)

    1. I cannot accept Marx’s theory of value, nor yet, in his form, the theory of surplus value. The theory that the exchange value of a commodity is proportional to the labour involved in its production,which Marx took over from Ricardo, is shown to be false by Ricardo’s theory of rent, and has long been abandoned by all non-Marxian economists. The theory of surplus value rests upon Malthu’s theory of population, which Marx elsewhere rejects…..

    4. Communism is not democratic. What it calls the ‘dictatorship of the proletariat’ is in fact the dictatorship of a small minority, who become an oligarchic governing class. All history shows that government is always conducted in the interests of the governing class, except in so far as it is influenced by fear of losing power. This is the teaching, not only of history, but of Marx. The governing class in a Communist state has even more power than the capitalist class in a ‘democratic’ State. So long as it retains the loyalty of the armed forces, it can use its power to obtain for itself advantages quite harmful as those of capitalists. To suppose that it will always act for general good is mere foolish idealism, and is contrary to Marxian political psychology.

    5. Communism restricts liberty, particularly intellectual liberty….

    8. There is so much of hate in Marx, and in Communism that Communists can hardly be expected when victorious to establish a regime affording no outlet for malevolence.

    ನೀವು ಹೇಳಿರುವ ಸರಳತೆ ಕೇವಲ ಒಂದು ತೋರಿಕೆ ಮಾತ್ರ, ಮತ್ತು ಆ ಪಕ್ಷದ ಬಲವಂತ ಹೇರಿಕೆ. ಪಕ್ಷವು ಬಡವರ ಪರ ಅಂತಾದರೆ ಯಾಕೆ ಮಾರ್ಕ್ಸ್ವಾದಿಗಳು ಪಶ್ಚಿಮ ಬಂಗಾಳದ ನಂದಿಗ್ರಾಮದಲ್ಲಿ, , ಬಂಡವಾಳಶಾಹಿ ಪರವಾಗಿ ನಿಂತು, ಬಡ ರೈತರ ನರಮೇಧ ನಡೆಸಿದರು? ಇದು ಒಂದು ಉದಾಹರಣೆ ಮಾತ್ರ. ಕೇರಳದಲ್ಲಿ ಇವರು ನಡೆಸುವ ಹತ್ಯಾಕಾಂಡಗಳು ಯಾಕಾಗಿ?

    Reply
  3. Ahamed

    ಭಾರತದ ಜೆ.ಪಿ ಚಳುವಳಿ, ಪ್ರಫುಲ್ಲ ಕುಮಾರನ ಎ.ಜಿ.ಪಿ ಎ.ಎ.ಪಿಯ ಘೋಷಣೆಗಳನ್ನು ಹಾಕಿಕೊಂಡೇ ಭಾರತದಲ್ಲಿ ಪರ್ಯಾಯವಾಗಿ ಹಟ್ಟಿದ್ದು ಆ ಯಾವ ಚಳುವಳಿಗೂ ಪರ್ಯಾಯ ಆರ್ಥಿಕ ಚಿಂತನೆಗಳಾಗಲಿ, ಸಾಮಾಜಿಕ-ಆರ್ಥಿಕ ಧೃಷ್ಠಿಕೋನಗಳಾಗಲಿ, ಅಂತರ ರಾಷ್ಟ್ರೀಯ ಪಾಲಿಸಿಗಳಾಗಲಿ ಇರಲಿಲ್ಲ ಕೇವಲ ಸ್ಥಳೀಯ ರಾಜಕೀಯ ವ್ಯವಸ್ಥೆಯ ಅಸಮದಾನದ ಕೂಸುಗಳು ಮಾತ್ರವೇ ಆಗಿದ್ದವು. ಎ.ಎ.ಪಿ ಹೊಸ ಅಸಮದಾನದ ಭರವಸೆ ಅಷ್ಟೆ ಹಾಗಾಗಿ ಅದನ್ನು ನಮ್ಮಂತವರು ಗೌರವಿಸುತ್ತೇವೆ ಆದರೆ ಆ ಪಕ್ಷದ ಮೇಲಿನ ಮೂರೂ ನಿಲುವು ಸ್ಪಷ್ಠವಿಲ್ಲ ಮಾಥ್ರವಲ್ಲ ಈ ಪಕ್ಷ ಕಾರ್ಪೋರೇಟ್ ವ್ಯವಸ್ಥೆಯನ್ನು ಬೆಂಬಲಿಸುತ್ತದೆ ಹಾಗೂ ಸಂವಿಧಾನದ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಗಟ್ಟಿಯಾಗಿ ಧ್ವನಿಸುವುದೇ ಇಲ್ಲ ಹಾಗಾಗಿ ಇದಕ್ಕೆ ಬಾಳಿಕೆ ಆ ಎರಡರಂತೆಯೇ.

    Reply
    1. Ananda Prasad

      ಪರ್ಯಾಯ ಆರ್ಥಿಕ ಚಿಂತನೆಗಳು ಇಂದು ಇಲ್ಲ ಮಾತ್ರವಲ್ಲ ಅವು ಯಶಸ್ವಿಯಾಗುವುದಿಲ್ಲ. ಸಮತಾವಾದಿ ವ್ಯವಸ್ಥೆಯೂ ಇಂದು ಉದಾರೀಕರಣ, ಜಾಗತೀಕರಣಕ್ಕೆ ತೆರೆದುಕೊಂಡಿದೆ (ಉದಾ: ಚೀನಾ). ಬಂಡವಾಳಶಾಹಿ ವ್ಯವಸ್ಥೆಯೇ (ಅಥವಾ ಕಾರ್ಪೋರೇಟ್) ಇಂದು ಹೆಚ್ಚುಕಡಿಮೆ ಪ್ರಪಂಚದ ಬಹುತೇಕ ರಾಷ್ಟ್ರಗಳಲ್ಲಿ ನಡೆಯುತ್ತಿರುವುದು. ಭಾರತವೂ ಅದಕ್ಕೆ ಒಗ್ಗಿಕೊಳ್ಳಬೇಕಾಗುತ್ತದೆ. ಸಹಜವಾಗಿಯೇ ಆಮ್ ಆದ್ಮಿ ಪಕ್ಷವೂ ಅದನ್ನೇ ಹೊಂದಿದೆ. ಹಾಗೆಂದು ಇದು ಬಂಡವಾಳಶಾಹಿ ಭ್ರಷ್ಟಾಚಾರ ಹಾಗೂ ಅನೈತಿಕತೆಯನ್ನು ಬೆಂಬಲಿಸುತ್ತಿಲ್ಲ ಎಂದು ಇದುವರೆಗೆ ಕಂಡುಬಂದಿದೆ. ದೆಹಲಿಯಲ್ಲಿ ಅದು ೭೦೦ ಲೀಟರ್ ಉಚಿತ ನೀರು ಹಾಗೂ ಅರ್ಧ ಬೆಲೆಗೆ ವಿದ್ಯುತ್ ನೀಡುವ ಕ್ರಮ ಕೈಗೊಂಡಿದೆ. ಹೀಗಾಗಿ ಇದು ಬಂಡವಾಳಶಾಹಿ ಲಾಭಕೊರತನವನ್ನು ಪ್ರೋತ್ಸಾಹಿಸುವಂತೆ ಕಂಡುಬರುತ್ತಿಲ್ಲ. ಬಂಡವಾಳಶಾಹಿಗಳು ಒಂದು ಸೀಮಿತ ಲಾಭಾಂಶವನ್ನು ಉದ್ಯಮದಲ್ಲಿ ಇರಿಸಿಕೊಳ್ಳುವುದು ತಪ್ಪಲ್ಲ. ಉದ್ಯಮವನ್ನು ಬೆಳೆಸಲು, ಯಶಸ್ವಿಯಾಗಿ ನಡೆಸಿಕೊಂಡು ಹೋಗಲು ಇದು ಅಗತ್ಯ. ಆಮ್ ಆದ್ಮಿ ಪಕ್ಷವು ಸಾಮಾಜಿಕ ರಾಜಕೀಯ ದೃಷ್ಟಿಕೋನವನ್ನು ಹಾಗೂ ವಿದೇಶ ವ್ಯವಹಾರ ನೀತಿಗಳನ್ನು ಇನ್ನಷ್ಟೇ ಬೆಳೆಸಿಕೊಳ್ಳ ಬೇಕಾಗಿದೆ ಮತ್ತು ಇಂಥ ದೃಷ್ಟಿಕೋನವನ್ನು ಬೆಳೆಸಿಕೊಳ್ಳಲು ಜನಸಾಮಾನ್ಯರು ತಮ್ಮ ಅಭಿಪ್ರಾಯ ನೀಡಬಹುದಾಗಿದೆ. ಜನತೆಯೊಂದಿಗೆ ವಿಚಾರವಿಮರ್ಷೆ ಮಾಡಿ ಅದನ್ನು ಅಳವಡಿಸಿಕೊಳ್ಳುವ ನೀತಿಯನ್ನು ಪಕ್ಷವು ಹೊಂದಿರುವುದು ಒಂದು ಉತ್ತಮ ಅಂಶ. ಇದುವರೆಗಿನ ಆಮ್ ಆದ್ಮಿ ಪಕ್ಷದ ನಡವಳಿಕೆಗಳನ್ನು ನೋಡುವಾಗ ಪಕ್ಷವು ಸರಿಯಾದ ದಾರಿಯಲ್ಲಿ ಹೋಗುತ್ತಿದೆ. ಅಧಿಕಾರವು ಯಾವುದೇ ವ್ಯಕ್ತಿಯನ್ನು ಅಹಂಕಾರಿಯನ್ನಾಗಿ, ದೊಡ್ಡಸ್ತಿಕೆಯ, ಪ್ರತಿಷ್ಠೆಯ ಗುಲಾಮನನ್ನಾಗಿ ಮಾಡುವ ಗುಣ ಹೊಂದಿರುತ್ತದೆ. ಹೀಗಾಗಿ ಆಮ್ ಆದ್ಮಿ ಪಕ್ಷವನ್ನೂ ಜನರೇ ಸರಿಯಾದ ದಾರಿಯಲ್ಲಿ ಹೋಗುವಂತೆ ಕಾಲಕಾಲಕ್ಕೆ ನಿರ್ದೇಶಿಸಬೇಕಾದ ಅಗತ್ಯ ಇದೆ. ಪಕ್ಷವು ದಾರಿ ತಪ್ಪಿದಾಗ ಅದನ್ನು ಸರಿದಾರಿಯಲ್ಲಿ ಹೋಗುವಂತೆ ಮಾಧ್ಯಮಗಳು ನೋಡಿಕೊಳ್ಳಬೇಕಾಗಿದೆ.

      Reply
  4. Gn Nagaraj

    ಫೇಸ್ ಬುಕ್ ನಲ್ಲಿ ಮತ್ತು ಖಾಸಗಿ ಮಾತುಕತೆಗಳಲ್ಲಿ ಬಂದ ಪ್ರತಿಕ್ರಿಯೆಗಳಿಂದ ಪ್ರಚೋದಿತರಾಗಿ ಶ್ರೀಪಾದ್ ಭಟ್ ಈ ಲೇಖನ ಬರೆದಿದ್ದಾರೆ .ಅವರ ಕಳಕಳಿಗೆ ಸ್ವಾಗತ .ಫೇಸ್ ಬುಕ್ ಕಾಮೆಂಟ್ ಗಳನ್ನು ನಾನು ನೋಡಲಾಗಿಲ್ಲ.ಇಲ್ಲಿ ಮೇಲಿರುವ ಕಾಮೆಂಟ್ ಗಳು ಹಾಗೂ ಶ್ರೀಪಾದ ಭಟ್ ರವರ ಲೇಖನವೂ ಕೆಲವು ಮುಖ್ಯ ಪ್ರಶ್ನೆಗಳನ್ನು ಎತ್ತಿವೆ. ಇವುಗಳಿಗೆ ಪ್ರತಿಕ್ರಿಸಲು ಒಂದು ಲೇಖನವೇ ಬೇಕಾಗಿದೆ. ಒಂದೆರಡು ದಿನಗಳಲ್ಲಿ ಇಲ್ಲಿ ಮುಂದೆ ಬರಲಿರುವ ಕಾಮೆಂಟಗಳನ್ನೂ ಸೇರಿಸಿ ಪ್ರತಿಕ್ರಿಸುವುದು ಒಳ್ಳೆಯದು ಎಂದು ನನ್ನ ಭಾವನೆ.ಚರ್ಚೆ ಸ್ವಾಗತಾರ್ಹ.

    Reply
  5. B.Sripad Bhat

    ಅರ್ವಲ್ ನ ಕಾದಂಬರಿ “1984” ಎಂದಿರಬೇಕಿತ್ತು.” 1948” ಎಂದು ತಪ್ಪಾಗಿ ಟೈಪ್ ಆಗಿದೆ.ಕ್ಷಮಿಸಿ.

    Reply
  6. Umesh

    ಸಂಪದ ಬ್ಲಾಗ್ನಲ್ಲಿ ಜಾರ್ಜ್ ಆರ್ವೆಲ್ ನ “ಅನಿಮಲ್ ಫಾರ್ಮ್” (Animal Farm) ಕಾದಂಬರಿ ಕುರಿತು ಒಂದು ಲೇಖನ ಇವತ್ತು ಪ್ರಕಟವಾಗಿದೆ. ಆ ಕಾದಂಬರಿ ಕುರಿತು ಲೇಖಕರು ಈ ರೀತಿ ಬರೆದ್ದಿದ್ದಾರೆ –

    “.. 1945ರಲ್ಲಿ ಪ್ರಕಟವಾದ ಇ೦ಗ್ಲಿಷ ಕಾದ೦ಬರಿಕಾರ ಜಾರ್ಜ್ ಆರ್ವೆಲ್ ನ ಕಾದ೦ಬರಿ ’ಅನಿಮಲ್ ಫಾರ್ಮ್’ನ ಸ೦ಕ್ಷಿಪ್ತ ಸಾರಾ೦ಶವಿದು.ರಷ್ಯನ್ನರ ಸಮತಾವಾದ ಮತ್ತು ಜೊಸೆಫ್ ಸ್ಟಾಲಿನ್ ರನ್ನು ಗುರಿಯಾಗಿಸಿಕೊ೦ಡು ರಚಿಸಲ್ಪಟ್ಟ ಈ ಕಾದ೦ಬರಿ ಕೆಲಕಾಲ ಕಮ್ಯುನಿಸ್ಟ್ ರಾಷ್ಟ್ರಗಳಲ್ಲಿ ನಿಷೇಧಿಸಲ್ಪಟ್ಟಿತ್ತು.ಕಾಲ್ಪನಿಕ ಕಾದ೦ಬರಿಯೇ ಆಗಿದ್ದರೂ ಕಮ್ಯುನಿಸ್ಟರ ವಿಫಲತೆಗಳನ್ನು,ಬಲಹೀನತೆಗಳನ್ನು ’ಅನಿಮಲ್ ಫಾರ್ಮ್’ನ೦ತೆ ಎಳೆ ಎಳೆಯಾಗಿ ಬಿಡಿಸಿಟ್ಟ ರಾಜಕೀಯದ ವಿಡ೦ಬನಾತ್ಮಕ ಕೃತಿ ಬಹುಶ; ಇನ್ನೊ೦ದಿರಲಾರದು…”

    ಲೇಖನ:

    ಆರ್ವೇಲ್ ನ ಕಾದ೦ಬರಿ ’ಎನಿಮಲ್ ಫಾರ್ಮ್’ನೊಳಗೊ೦ದು ಪ್ರಸ್ತುತ ಭಾರತವನ್ನು ಕಾಣುತ್ತ…

    Reply
  7. suresh G Deshapnde.

    I was part of a socialist forum and had campaigned for one decade on these issues. Today also I feel, out of this globalization what has happened? Majority of the countries have become weak. soviet Russia became a collapsed economy. India though has strong foundations is reeling under pressure. The challenges are many fold. The solutions are rare.Indian country has one more vicious cycle that is belief in corrupt practices. Corruption has become rampant. Even one has to bribe for cremating the dead or to obtain a death or birth certificate. The capitalism has found a new base but it is also facing challenges. A pizza which may have a production cost of say Rs.100 is sold for Rs 350 etc. This type of consumerism cannot last long. a biscuit packet which cost 1 rupee went to 5 rupees. Now the rate remains same but the quantity has gone down from 100 g to 40g.
    You cannot hide these realities for long. Why did foreign Insurance comapnies went back. No one protested them. At the entry there was resistance but in the process they found that the viability is not possible under prevailing situations.
    One side FDI limit has gone up and other side there is no FDI at all. These are the realities. Pharmaceutical industry is captured by the multinationals on one side and on the other doctors have started to recieve money and prescribe sub standard medicines. This is the emergent picture.
    Only one conclusion can be drawn whether you live in flat or bunglow or hut the basic needs remain the same. Exploitation has been a face of human race. Once it was on knowledge and power now on market
    when you look the picture it appers like a kaleidoscope presentation.so long as one remains within the basic needs he is free from tensions. Dominos would sell pizza but not haravi palle. What is needed by me? If liquor costs1000 or cigarette costs 20 till you do not use them you are free from all that.
    Similar is the position of globalization. Teach our people to live within their range. One day these multinationals would go without any sound. The proponents of the model would also become poor.But today the world has moved from prosperity to poverty for majority. Exploitative class may be enjoying but it is not permanent.
    Bhagavad geeta says AAgama anitya tan titikshasva bharata.
    No ism dies so also marxism. With time it may become less radiant or more radiant but both are passing phases. This world can cater to the needs of its creation but not the greed. Whether it is aam admi or marxism or the religious foundations, they have preached peaceful existence with minimal requirements. Globalization preaches maximum utilization and go for that and end up in turmoil….

    Reply
  8. suresh G Deshapnde.

    In the above article there is one error. Second para- Why did foreign Insurance companies go back? It is typed as went back.Iregret for the error committed.

    Reply
  9. vageesh

    Left parties should update otherwise aam admi party will fill that gap. please read this article.

    Why The Left is not Right About Mass Movements
    LEFT PARTIES LOOKED DOWN AT THE JP MOVEMENT They were too late in grasping North India’s caste dynamics and continue to remain fidgety about striking pacts with like-minded outfits such as AAP. Result: they’re shrinking as an electoral force

    At Arvind Kejriwal’s swearing-in last week, a few of the hundreds of banners that floated against the sky in Delhi’s Ramlila Maidan were in Malayalam, brandished by groups of enthusiastic young men from Kerala, where CPM is looking to improve its Lok Sabha tally in 2014 to retain its national party status. In the previous general election, the Left bloc won a historical low of 24 seats, and the two key constituents, CPM and the CPI, almost lost their national party status. The Kejriwal-led Aam Aadmi Party (AAP) has now emerged as a non-Congress, non-BJP alternative in Delhi. And the new worry is: thanks to its socialist rhetoric, will AAP eat into the Left’s vote base in its strongholds? Not in the near future anyway, feels University of Delhi professor Achin Vanaik, who has closely followed the Left’s political trajectory. Pradeep Chhibber, political science professor at University of California, Berkeley, says AAP poses a bigger threat to the Congress than any other party. AAP is challenging the Congress’ centrist narrative, he notes. Yet, what comes to the fore whenever a new entity successfully taps into the fear and trauma of the have-nots is the Left’s repeated failure at expanding its presence beyond three states: Kerala, Tripura and West Bengal. Which is perhaps why CPM general secretary Prakash Karat is now being asked the question, are you ceding political turf to AAP? Of course, all is not well in these states. In West Bengal CPM was thrown out of power in 2012 after 34 years of uninterrupted rule; in Kerala factionalism has dented the image of its leaders despite being in the opposition; in Tripura, the only state the Left is in power, a local leader was recently expelled after sleeping on a bed of cash, and incidents of corruption abound.
    Reluctant Politicians
    Karat was at his perfunctory best when he answered the question, in a recent interview to a television channel. He praised AAP for its poll win, but said he was closely watching to see if it emerges as “serious” political alternative. Several of his colleagues respond differently, giving away the frustration of not being able to do what AAP has done, in Delhi. They are also upset that from the Left’s Lok Sabha tally of 61 in 2004 – a historical high – it lost “so much of its clout” within five years. A CPM central committee member – who voted for Kejriwal, going against the party diktat, in Delhi – is of the view that AAP is populist, and doesn’t encroach onto the Left’s political space. “But my party, like others, underestimated AAP, and like the radical Left in Europe and Latin America, we also need to align with populist parties to gain an electoral edge,” he says asking not to be named. Typically, CPM cadres in Delhi – where it does not field candidates — vote for the Congress. “But most party workers were in favour of AAP,” says this leader. In Kerala, VS Achuthanandan, 90-year-old highly popular CPM veteran, praised AAP for its spectacular electoral debut and hoped that “a broom wave” swept Kerala, too, purging corrupt elements in the state. In fact, AAP leader Prashant Bhushan met the former Kerala chief minister to seek his support to fight corruption, triggering speculations that the rebel Marxist icon — who has repeatedly attacked the state leadership of the CPM –may enter into a truck with AAP.
    Long List of Blunders
    In the long run, whether AAP comes out with a bang or with a whimper, what is appalling is the CPM central leadership’s failure to help the party grow, asserts a Kerala-based politburo member. “It is 35 years since the party (CPM) vowed to expand aggressively in the north, but it is sad that nothing has come of it,” he rues. This leader, who was in favour of Jyoti Basu becoming prime minister in 1996, was referring to the Salkia Plenum of the party held in December-end of 1978 which outlined ways to transform the party into a mass movement with countrywide presence. Vanaik says for the Left parties to expand, they need to mobilise mass movements, and that the CPM is completely languishing in parliamentary politics. “It is the CPI that is involved in some bit of mass mobilisation, and that too only on a small scale,” the Delhi University professor notes. Within the confines of parliamentary politics, too, the Left has scored badly. Political analyst and former JNU professor Sudha Pai blames it on key leaders at the Centre not having any grassroots links. She was referring to Karat and senior colleague in the politburo, Sitaram Yechury, both pitchforked into national leadership straight from the university. She is only partly right, contends a senior CPM leader from Bengal. “Even their predecessors weren’t good at comprehending the nuances of coalition politics though the likes of EMS Namboodiripad talked a lot about it and practised a little,” he says. Historically, he avers, the Left parties have looked down upon populist, mass movements such as the one led by none other than Jayaprakash Narayan against Indira Gandhi in the early 1970s. “In Bihar, the CPI had failed to understand caste dynamics; in Uttar Pradesh (where Karat has been in charge for a long time), both the CPM and the CPI couldn’t adapt themselves as politics became more caste-obsessed. In Andhra Pradesh, there was no Left unity, and they had in the beginning looked down upon NT Rama Rao. In Rajasthan, CPM couldn’t retain seats because it couldn’t step up mass mobilisation movements. The list of woes is endless,” he says.
    Agony of the Left
    The problems within the Left go beyond cracking the caste calculus, says a Delhi-based CPI leader who regrets that “Prakash & Co rejected an offer served on a platter”. While the CPI joined the 1996 United Front cabinet in which Indrajit Gupta was Union home minister, the young brigade of the CPM voted against Basu becoming the PM. Basu himself called it a historical blunder. “Look at AAP, it has taken support from a party it had fought against, Congress, to form the government. If Congress pulls out, the blame is now on them. We should have realised it in 1996,” says the West Bengal leader. CPM leadership still maintains that its decisions were right. Besides squandering away the opportunity, Karat and others also brought in more of what a CPM leader calls “rigidity” in the party apparatus at the top level, and restricting key powers in the hands of a few. Meanwhile, Vanaik says that the Left in India only has to look at its counterparts in Latin America and other countries to learn how to forge ties with popular movements such as AAP. “This has happened in Brazil, for instance,” he says. Notably, communist parties have often fought alongside national movements and often “controlled” such movements. In South Africa, for example, South African Communist Party, had the reins of the leadership of the African National Congress. “Blindly dismissing populist parties that also encourage direct democracy isn’t good politics for the Left,” says an RSP leader who asked not to named. RSP and Forward Bloc are two other constituents of the Left Front besides CPM and CPI.
    Waltz with Incompetence
    In fact, the Indian Left’s follies don’t end there. In 2004, according to a CPM insider who has worked in the party’s central committee office, then general secretary Harkishan Singh Surjeet wanted the Left to “correct and make up for the blunder” and join UPA-I. But he was, once again, “outwitted by the charming hardliners. Back then, Surjeet went home, and refused to come back to the party office (AKG Bhavan in Gole Market, Delhi) for many weeks. Out of despair, he had said that ‘these young leaders are behaving like Naxalites’,” the person said. Karat didn’t reply to specific queries from ET, but said he would soon write about AAP and its political significance in the CPM mouthpiece, Peoples Democracy. Karat, who replaced Surjeet as general secretary in 2005, has incurred the displeasure of key state units. The Karat-led politburo overruled in 2006 a proposal by the Kerala state leadership to ally with a Congress breakaway group. The West Bengal unit of the party has often been vocal of its disenchantment with Karat over issues such as Somnath Chatterjee’s expulsion from the party in 2008. A section of the party leadership across states was against the Left withdrawing support from the Congress over the India-US nuclear deal. “We underestimated the adversary and party had to admit it,” says the CPM politburo leader from Kerala. He agrees with Vanaik, the renowned Left scholar, that “progressive movements (such as AAP) are largely temporary”.
    Left In The Lurch AAP is clearly socialist, and its spectacular poll debut comes at a time when the Indian Left is facing rapid decline as an electoral force
    SCORE CARD AAP’s victory in Delhi was largely
    unexpected. The
    one-year-old party decimated the Congress in Delhi and stopped the BJP’s victory march in Delhi
    Vs The Left suffered a huge setback
    in the 2009 Lok Sabha
    election, winning a
    historical low of 24 seats;
    in 2011 it lost power after 34 years of being in power in West Bengal; the Kerala unit is faction-ridden. There are troubles in Tripura as well
    TREND SPOTTING
    While AAP is still new, its poll triumph, on its own, puts the spotlight on the failure of the Left to align with like-minded parties –successful Left movement overseas have often tied up with populist, pro-democracy parties
    SIMPLICITY QUOTIENT
    The Left has in the past boasted itself as a cadre party led by leaders who have led simple lives and shunned the trappings of power
    However, Left leaders in West Bengal and Kerala have come under sharp attack over their affluent ways and the way they court corporates and shady businessmen
    Lately, through symbolic measures, AAP leaders have earned a name for being pro-people and selfless

    ACHIN VANAIK Professor, University of Delhi
    The Left in India only has to look at its counterparts in Latin America and other countries to learn how to forge ties with progressive movements.

    PRAKASH KARAT General secretary, CPM
    We are closely watching AAP to see if it emerges as serious political alternative.

    YOGENDRA YADAV
    AAP leader in an interview to The Indian Express
    The Left-Right spectrum never made sense in the Indian context. The Right cannot have a viable politics here and the Left did not have an intelligent economics.

    http://epaper.timesofindia.com/Default/Client.asp?Daily=ETM&showST=true&Enter=true&Skin=ETNEW

    Reply

Leave a Reply

Your email address will not be published. Required fields are marked *