ಹಸಿವು ಹಿಂಗಿಸೋ ತಾಕತ್ತಿರುವ ಮಸೂದೆ…


– ಡಾ.ಎಸ್.ಬಿ. ಜೋಗುರ


ದೇಶದ 67 ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಾದರೂ ನಾವು ಇಲ್ಲಿಯ ನಾಗರಿಕರ ಆಹಾರ ಸುಭದ್ರತೆಯ ಬಗೆಗೆ ಯೋಚಿಸುತ್ತಿರುವದು ಸಮಾಧಾನಕರ ಸಂಗತಿಯಾಗಿದೆ. ಆದರೆ ಲೋಕಸಭೆಯಲ್ಲಿ ಈ “ರಾಷ್ಟ್ರೀಯ ಆಹಾರ ಸುಭದ್ರತೆಯ ಮಸೂದೆ”ಗೆ ಸಂಬಂಧಿಸಿದ ಚರ್ಚೆಯ ಸಂದರ್ಭದಲ್ಲಿ ಟಿ.ಡಿ.ಪಿ. ಪಕ್ಷದ ಹುಯಿಲಿನಿಂದಾಗಿ ಆಹಾರ ಸಚಿವ ಕೆ.ವಿ.ಥಾಮಸ್ ಕಕ್ಕಾಬಿಕ್ಕಿಯಾಗಬೇಕಾಯಿತು. ಮತ್ತೂ ರಾಷ್ಟ್ರೀಯ ಆಹಾರ ಸುಭದ್ರತಾ ಬಿಲ್ ಮಂಡನೆಯಾಗುವ ಬದಲು ಯತಾಸ್ಥಿತಿಯಲ್ಲಿಯೇ ಉಳಿಯುವಂತಾಗಿತ್ತು. Food Security Billಆದರೆ ಈಗ ಆಹಾರ ಮಸ್ಸೊದೆಗೆ ಅಂಗೀಕಾರ ದೊರೆಯುವ ಮೂಲಕ ದೇಶದ 67 ಪ್ರತಿಶತ ಜನರಿಗೆ ಇದರಿಂದ ಪ್ರಯೋಜನವಾಗಲಿದೆ. 1.25 ಲಕ್ಷ ಕೊಟಿ ಹಣ ಇದಕ್ಕಾಗಿ ವ್ಯಯವಾಗಲಿದೆ.

ಮಾಹಿತಿ ಹಕ್ಕು, ಉದ್ಯೋಗದ ಹಕ್ಕು ಮತ್ತು ಶಿಕ್ಷಣದ ಹಕ್ಕುಗಳ ಸಾಲಿನಲ್ಲಿ ಈ ಆಹಾರ ಸುಭದ್ರತೆಯ ಹಕ್ಕು ಕೂಡಾ ತುರ್ತಾಗಿ ಸೇರಬೇಕಿತ್ತು. ಆದರೆ ಈ ಬಿಲ್ ಬಗ್ಗೆ ಒಮ್ಮತ ಬಾರದ ಕಾರಣ ಬರೀ ಚರ್ಚೆಯ ಹಂತದಲ್ಲಿಯೇ ಅದು ಉಳಿದಿತ್ತು. ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಆಹಾರದ ಸುಭದ್ರತೆ, ಶಿಕ್ಷಣ ಹಾಗೂ ಉದ್ಯೋಗಕ್ಕಿಂತಲೂ ಹೆಚ್ಚು ನಿರ್ಣಾಯಕವಾಗಲಿದೆ.

ಆಹಾರದ ವಿಷಯವಾಗಿ ನಮ್ಮ ದೇಶದಲ್ಲಿ ಕಪ್ಪು ಬಿಳುಪು ಚಿತ್ರಣವಿದೆ. ಸಾಕಷ್ಟು ಆಹಾರ ಉತ್ಪಾದನೆಯಾಗುತ್ತಿರುವದು, ಯೋಗ್ಯ ಸಂಗ್ರಹಾಗಾರ ಇಲ್ಲದ ಕಾರಣ ಕೊಳೆಯುವದು.. ಹುಳ ಹಿಡಿಯುವದೂ ಇದೆ. ಇನ್ನೊಂದು ಬದಿ ಹಸಿವಿನಿಂದ ಸಾಯುವ, ಪೌಷ್ಟಿಕಾಂಶದಿಂದ ಬಳಲುವ ಮಕ್ಕಳ ಪ್ರಮಾಣವೇನೂ ಕಡಿಮೆಯಾಗಿಲ್ಲ. ಅತ್ಯಂತ ವೈಭವಯುತ ಬದುಕು ಸಾಗಿಸುವ, ತಿಂದದ್ದನ್ನು ಅರಗಿಸಿಕೊಳ್ಳುವದೇ ದೊಡ್ಡ ಕಿರಿಕಿರಿಯಾಗಿ ಪರಿತಪಿಸುವ ಔಷಧಿ, ಮಾತ್ರೆಯ ಮೂಲಕ ಆಹಾರ ಜೀರ್ಣವಾಗುವಂತೆ ಮಾಡಿ ನಿಟ್ಟುಸಿರು ಬಿಡುವವರು ಒಂದೆಡೆಯಾದರೆ, starved-peopleಹೊಟೆಲುಗಳಲ್ಲಿ ರೇಟ್ ಬೋರ್ಡ್ ನೋಡಿ, ಕೇಳಿ ಅರ್ಧಂಬರ್ಧ ಹೊಟ್ಟೆಯಲ್ಲಿ ಊಟ ಮಾಡಿ ಬೇಗ ಕರಗದಿರಲಿ ಎಂದು ತವಕಿಸುವ ದೊಡ್ಡ ಸಮೂಹ ಇನ್ನೊಂದೆಡೆ. 2012 ರ ಸಂದರ್ಭದಲ್ಲಿ ‘ಜಾಗತಿಕ ಹಸಿವಿನ ಸೂಚ್ಯಾಂಕ’ ಮಾಡಿದ ಸಮೀಕ್ಷೆಯಲ್ಲಿ ಮೂರು ಮುಖ್ಯ ಸಂಗತಿಗಳನ್ನು ಗಮನಹರಿಸಿ ಅದು ಅಧ್ಯಯನ ಮಾಡಿತ್ತು. ಒಂದನೆಯದು ಸತ್ವಭರಿತ ಆಹಾರದ ಕೊರತೆಯ ಜನಸಮೂಹದ ಪ್ರಮಾಣ, ಎರಡನೆಯದು ಶಿಶುವಿನ ಮರಣ ಪ್ರಮಾಣ, ಮೂರನೇಯದು ಪೌಷ್ಟಿಕಾಂಶಗಳ ಕೊರತೆಯಿಂದ ಬಳಲುವ ಮಕ್ಕಳ ಪ್ರಮಾಣ. ಈ ಮೂರು ಸಂಗತಿಗಳನ್ನು ಆದರಿಸಿ ಮಾಡಲಾದ ಸಮೀಕ್ಷೆಯ ಪ್ರಕಾರ 79 ರಾಷ್ಟ್ರಗಳ ಪೈಕಿ ಭಾರತ 65 ನೇ ಸ್ಥಾನದಲ್ಲಿರುವ ಬಗ್ಗೆ ವರದಿಯಾಗಿದೆ.

2008 ರ ಸಂದರ್ಭದಲ್ಲಿ ಭಾರತೀಯ ರಾಜ್ಯಗಳ ಹಸಿವಿನ ಸೂಚ್ಯಾಂಕದ ಪ್ರಕಾರ ದೇಶದ ಬೇರೆ ಬೇರೆ ರಾಜ್ಯಗಳ ಸ್ಥಿತಿ ಬೇರೆ ಬೇರೆಯಾಗಿದೆ. ದೇಶದ ಸುಮಾರು 12 ರಾಜ್ಯಗಳು ಆಹಾರದ ವಿಷಯವಾಗಿ ಸಂಕಷ್ಟದಲ್ಲಿವೆ. ಅದರಲ್ಲೂ ಮಧ್ಯಪ್ರದೇಶ ತೀರ ಗಂಭೀರವಾದ ಸ್ಥಿತಿಯಲ್ಲಿದೆ ಎಂದು ವರದಿ ಆಗಿರುವದಿದೆ. ಸತ್ವಭರಿತ ಆಹಾರ ಮತ್ತು ಅಭಿವೃದ್ಧಿ ಸೂಚ್ಯಾಂಕದ ವಿಷಯದಲ್ಲಿ ದೇಶದ 12 ರಾಜ್ಯಗಳನ್ನು ಆಯ್ಕೆ ಮಾಡಿಕೊಂಡು ಅಧ್ಯಯನ ಮಾಡಲಾಗಿದೆ. ಅದರಲ್ಲಿ ಹತ್ತು ರಾಜ್ಯಗಳ ಶ್ರೇಣಿ ಹೀಗಿದೆ. ಮೊದಲ ಸ್ಥಾನದಲ್ಲಿ ಕೇರಳ, ಎರಡನೆಯ ಸ್ಥಾನ ಹರಿಯಾಣಾ, ಮೂರನೇಯ ಸ್ಥಾನ ತಮಿಳುನಾಡು, ನಾಲ್ಕನೇಯ ಸ್ಥಾನದಲ್ಲಿ ಗುಜರಾತ, ಐದನೇಯ ಸ್ಥಾನದಲ್ಲಿ ಮಹಾರಾಷ್ಟ್ರ, ಆರನೇಯ ಸ್ಥಾನದಲ್ಲಿ ಕರ್ನಾಟಕ, ಏಳನೇ ಸ್ಥಾನದಲ್ಲಿ ಆಂದ್ರಪ್ರದೇಶ, ಎಂಟನೆಯ ಸ್ಥಾನದಲ್ಲಿ ಆಸ್ಸಾಂ, ಒಂಬತ್ತನೇಯ ಸ್ಥಾನದಲ್ಲಿ ಓಡಿಸ್ಸಾ, ಹತ್ತನೇಯ ಸ್ಥಾನದಲ್ಲಿ ರಾಜಸ್ಥಾನ ಇದೆ. ನಮ್ಮ ದೇಶದಲ್ಲಿ ಸುಮಾರು 42 ಪ್ರತಿಶತ ಮಕ್ಕಳು ಪೌಷ್ಟಿಕಾಂಶದ ಕೊರತೆಯಿಂದ ಬಳಲುವವರಿದ್ದಾರೆ.

ಆಹಾರದ ವಿಷಯವಾಗಿ ರಾಷ್ಟ್ರೀಯ ಮಾದರಿ ಸಮೀಕ್ಷೆ ಮೂರು ರೀತಿಯ ಸಮೂಹಗಳನ್ನು ಗುರುತಿಸಿರುವದಿದೆ. food_securityಒಂದನೆಯದಾಗಿ ವರ್ಷವಿಡೀ ಸಾಕಷ್ಟು ಆಹಾರ ಸಾಮಗ್ರಿಗಳನ್ನು ಹೊಂದಿರುವ ಕುಟುಂಬಗಳು, ಎರಡನೆಯದಾಗಿ ವರ್ಷದ ಕೆಲವು ತಿಂಗಳುಗಳಲ್ಲಿ ತೊಂದರೆಯನ್ನು ಎದುರಿಸುವ ಕುಟುಂಬಗಳು, ಮೂರನೆಯದು ವರ್ಷದುದ್ದಕ್ಕೂ ಸಾಕಷ್ಟು ಆಹಾರ ಸಾಮಗ್ರಿಗಳನ್ನು ಹೊಂದದೇ ಇರುವವರು. ಇನ್ನು ಈ ಮೇಲಿನ ಮೂರು ಪ್ರಕಾರಗಳು ದೇಶದ ಉದ್ದಗಲಕ್ಕೂ ಕಂಡು ಬರುವ ಸಮೂಹಗಳು. ಮೊದಲನೆಯ ಸಮೂಹಗಳಿಗೆ ಈ ಆಹಾರ ಸುಭದ್ರತೆಯ ಪ್ರಶ್ನೆಯೇ ಬರುವದಿಲ್ಲ. ಇನ್ನು ಎರಡನೆಯವರಿಗೆ ಸಂಕಟ ಬಂದಾಗ ವೆಂಕಟರಮಣ. ನಿಜವಾಗಿಯೂ ಆಹಾರದ ಸುಭದ್ರತೆ ಮತ್ತು ಹಕ್ಕಿನ ಪ್ರಶ್ನೆ ಇದ್ದದ್ದೇ ಮೂರನೇಯ ಜನಸಮೂಹದವರಿಗಾಗಿ. ಇವರು ಹಸಿವು ಮತ್ತು ಕೊರತೆಗಳ ನಡುವೆಯೇ ದಿನದೂಡುವವರು. ಎರಡನೆಯ ಮತ್ತು ಮೂರನೇಯ ಪ್ರರೂಪದ ಕುಟುಂಬದ ವಿಷಯಗಳ ಪ್ರಶ್ನೆ ಬಂದರೆ ವರ್ಷದ ಕೆಲವು ತಿಂಗಳುಗಳಲ್ಲಿ ಆಹಾರ ಧಾನ್ಯಗಳ ಕೊರತೆಯ ವಿಷಯವಾಗಿ ಪಶ್ಚಿಮ ಬಂಗಾಲ ಮೊದಲ ಸ್ಥಾನದಲ್ಲಿದ್ದರೆ, ವರ್ಷವಿಡೀ ಆಹಾರ ಧಾನ್ಯಗಳ ಕೊರತೆ ಎದುರಿಸುವ ರಾಜ್ಯಗಳ ಸಾಲಲ್ಲಿ ಆಸ್ಸಾಂ ಮೊದಲ ಸ್ಥಾನದಲ್ಲಿದೆ.

ಭಾರತದಲ್ಲಿ ಪೌಷ್ಟಿಕತೆಯ ಕೊರತೆ ಮತ್ತು ಕಡಿಮೆ ತೂಕದ ಮಕ್ಕಳ ವಿಷಯವಾಗಿ ಮಾತನಾಡುವದಾದರೆ ಭಾರತದಲ್ಲಿ 21.7 ಕೋಟಿ ಜನಸಂಖ್ಯೆಯಷ್ಟು ಜನ (ಹೆಚ್ಚೂ ಕಡಿಮೆ ಇಂಡೊನೇಷಿಯಾದ ಒಟ್ಟು ಜನಸಂಖೆಯಷ್ಟು) ಪೌಷ್ಟಿಕ ಆಹಾರದ ಕೊರತೆಯಿಂದ ಬಳಲುವ ಬಗ್ಗೆ ಸಮೀಕ್ಷೆಯಲ್ಲಿ ವರದಿಯಾಗಿದೆ. food-security-wasted-grainsಹಸಿರು ಕ್ರಾಂತಿಗಿಂತಲೂ ಮೊದಲು ದೇಶದಲ್ಲಿ ಭೀಕರ ಬರಗಾಲದ ಸಂದರ್ಭದಲ್ಲಿ ಜನ ಅಪಾರವಾಗಿ ಸಾಯುತ್ತಿದ್ದರು. ಆಗ ಮರಣ ಪ್ರಮಾಣ ಸಹಜವಾಗಿ ಹೆಚ್ಚಾಗುತ್ತಿತ್ತು. ಈಗ ಅಂಥ ಬರಗಾಲಗಳಿಲ್ಲ. ಆದರೆ ಈ ಬಗೆಯ ಸತ್ವಭರಿತ ಆಹಾರದ ಕೊರತೆಯಿಂದಾಗಿ ಸಾಯುವವರ ಪ್ರಮಾಣ ಆಗಿನ ಬರಗಾಲಗಳಿಗಿಂತಲೂ ಹೆಚ್ಚಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡೇ ಜನೆವರಿ 2011 ರ ಸಂದರ್ಭದಲ್ಲಿ ಪ್ರಧಾನಿ ಮನಮೋಹನ ಸಿಂಗ್ ರವರು ‘ನಮ್ಮಲ್ಲಿ ಹಸಿವು ಮತ್ತು ಅಪೌಷ್ಟಿಕತೆ ಎನ್ನುವದು ರಾಷ್ಟ್ರ ತಲೆತಗ್ಗಿಸುವಂತಿದೆ’ ಎಂದಿದ್ದರು. ಅದನ್ನು ಗಮನದಲ್ಲಿರಿಸಿಕೊಂಡೇ ‘ರಾಷ್ಟ್ರೀಯ ಆಹಾರ ಸುಭದ್ರತಾ ಬಿಲ್’ ಅನ್ನು ಮಂಡಿಸುವ ಯೋಚನೆಗೆ ಯು.ಪಿ.ಎ ಸರಕಾರ ಬಂದಿದ್ದು. ಈ ಮಸೂದೆಯ ಮೂಲಕ ಜನತೆಯ ಕಲ್ಯಾಣವನ್ನು ಜನರ ಹಕ್ಕಿನಲ್ಲಿ ಬದಲಾಯಿಸುವ ಒಳ್ಳೆಯ ಆಶಯವಿತ್ತು. ಅಂತೂ ಆ ಆಶಯವೂ ಈಡೇರಿದಂತಾಯಿತು.

ವಿರೋಧಿಸಲಿಕ್ಕಾಗಿಯೇ ಇತರೆ ಕರಡುಗಳಿವೆ. ಅವುಗಳಿಗೆ ಬೇಕಾದರೆ ಅಡೆತಡೆ ಒಡ್ಡಲಿ. ಆಹಾರ ಸುಭದ್ರತೆಯನ್ನು ಜನತೆಯ ಹಕ್ಕಾಗಿಸುವ ಮೂಲಕ ಹಸಿದ ಹೊಟ್ಟೆಗೆ ಖಾತ್ರಿಯಾಗಬಹುದಾದ ಆಹಾರಧಾನ್ಯಗಳನ್ನು rationshop-PDSಒದಗಿಸಲಿರುವ ಇಂಥಾ ಕರಡನ್ನು ವಿರೋಧಿಸಬಾರದು. ಈ ಬಿಲ್ ಅತಿ ಮುಖ್ಯವಾಗಿ ಮಹಿಳೆ ಮತ್ತು ಮಕ್ಕಳನ್ನೂ ಗಮನದಲ್ಲಿರಿಸಿಕೊಂಡಿದೆ. ಹೆರಿಗೆಯ ಸಂದರ್ಭದಲ್ಲಿ ಮಹಿಳೆಗೆ ಪೌಷ್ಟಿಕ ಆಹಾರದ ಜೊತೆಯಲ್ಲಿ 6000 ರೂ ಮಾತೃತ್ವ ಧನವನ್ನೂ ಆಕೆ ಪಡೆಯಲಿದ್ದಾಳೆ. ಅಪೌಷ್ಟಿಕತೆಯಿಂದ ಬಳಲುವ 14 ವರ್ಷದ ಮಕ್ಕಳು ಪೌಷ್ಟಿಕ ಆಹಾರವನ್ನು ಕಡ್ಡಾಯವಾದ ಶಿಕ್ಷಣದ ರೀತಿಯಲ್ಲಿಯೇ ಪಡೆಯಲಿದ್ದಾರೆ. ಹಾಗಾಗಿ ಹಸಿವು ಹಿಂಗಿಸುವ ತಾಕತ್ತು, ಈಗ ಪರಿಚಯಿಸಲಾಗಿರುವ ಈ ರಾಷ್ಟ್ರೀಯ ಆಹಾರ ಸುಭದ್ರತಾ ಮಸೂದೆಗಿದೆ. ಈ ಮಸೂದೆಯನ್ನು ನಾವೆಲ್ಲರೂ ಮನಸಾರೆ ಸ್ವಾಗತಿಸಬೇಕು.

7 thoughts on “ಹಸಿವು ಹಿಂಗಿಸೋ ತಾಕತ್ತಿರುವ ಮಸೂದೆ…

  1. Srini

    I don’t oppose Food security bill but strongly oppose the timing. We just don’t have enough money as well as required infrastructure to execute it. Where do we have storage system? How do you handle transportation? This is biggest ever blunder by any government post independence and we are going to pay a very heavy price for it.

    What a shame, just for Votes, politicians can pass a bill without any plan and sense of economic feasibility.

    Reply
  2. ಜೆ.ವಿ.ಕಾರ್ಲೊ, ಹಾಸನ

    ವರ್ಷದ ಹನ್ನೆರಡು ತಿಂಗಳು ಒಂದಿಲ್ಲೊಂದು ಚುನಾಣೆಗಳು ಇರುವ ಈ ನಾಡಿನಲ್ಲಿ ಯಾವುದೇ ಜನಪರ ಕಾರ್ಯಕ್ರಮಗಳ ಹಿಂದೆ ವೋಟ್ ಬ್ಯಾಂಕಿನ ವಾಸನೆ ಹೊಡೆಯುವುದು ಸಹಜ. ವೋಟ್ ಬ್ಯಾಂಕಿನ ರಾಜಕಾರಣ ಬೇಡವೆಂದಾದರೆ ಪ್ರಸ್ತುತ ರಾಜಕೀಯ ವ್ಯವಸ್ಥೆಯನ್ನು ಕಿತ್ತೊಗೆದು ವೋಟುಗಳ ಅಗತ್ಯವಿಲ್ಲದ ವ್ಯವಸ್ಥೆಯನ್ನು ತರುವುದು ಒಳಿತು.

    ಮೂಲಭೂತ ಸೌಕರ್ಯಗಳಿಲ್ಲ, ಅವೆಲ್ಲಾ ಮೊದಲಾಗಲಿ ಎಂದು ಕಾದು ಕುಳಿತರೆ ಅದು ಎಂದಿಗೂ ಆಗುವುದಿಲ್ಲ. ಹಾಗೆ ನೋಡಿದರೆ ಪ್ರಜಾಪ್ರಭುತ್ವವನ್ನು ಹೊಂದಿರುವಂತ ಯೋಗ್ಯತೆ ನಮಗಿದೆಯೇ?

    Reply
  3. s.b.jogur

    J.Vi. yes, neevu heluvudu nija aadare naavu to do a great right do a little wrong ennuva tatvavannu mechchabekide. kurudaralli mellugannu soooktavallave..?

    Reply
  4. vasanth

    Sir,
    Who will tell all these things to Mohan Das Pai and some politicians those who are opposing this Bill specially to politicians from BJP. Even journalists like Shekar Gupta is opposing this bill. Their rhetoric is always towards safeguarding the elite people. They don’t talk about Income Tax subsidy to IT firms. What a pity.

    Reply
  5. a

    ಆಹಾರ ಭದ್ರತಾ ಮಸೂದೆಯಲ್ಲಿ ವೋಟ್ ಬ್ಯಾಂಕ್ ರಾಜಕೀಯ ಇರುವುದು ನಿಜವಾದರೂ ದೇವರು, ಧರ್ಮ, ದನದ ಹೆಸರಿನಲ್ಲಿ ಮಾಡುವ ರಾಜಕೀಯಕ್ಕಿಂತ ಇದು ಉತ್ತಮ ಮತ್ತು ಜನಪರ ಎಂಬುದರಲ್ಲಿ ಸಂದೇಹವಿಲ್ಲ. ಹಿಂದೆ ಭೂಸುಧಾರಣೆ ಮಸೂದೆ ತಂದಾಗಲೂ ಇದೇ ರೀತಿ ಟೀಕೆಗಳು ಬಂದಿದ್ದವು. ಬರಿಯ ವೋಟ್ ಬ್ಯಾಂಕ್ ರಾಜಕೀಯ ಮಾಡುವುದರಿಂದ ದೇಶದ ಅಭಿವೃದ್ಧಿ ಆಗಲಾರದು. ಇದನ್ನು ಕಾಂಗ್ರೆಸ್ ಪಕ್ಷವು ಮನಗಾಣಬೇಕು. ಸಮಾಜವಾದದ ಮೌಲ್ಯಗಳ ಜೊತೆ ಉತ್ಪಾದನಾ ವಲಯದಲ್ಲಿ, ಕೈಗಾರಿಕಾ ವಲಯದಲ್ಲಿ, ವಿಜ್ಞಾನ ತಂತ್ರಜ್ಞಾನದಲ್ಲಿ ಸ್ವಾವಲಂಬನೆ ಸಾಧಿಸಿ ದೇಶದ ಆರ್ಥಿಕ ಸ್ಥಿತಿಯನ್ನು ಮೇಲಕ್ಕೆತ್ತುವ ಕೆಲಸಕ್ಕೆ ಒತ್ತು ನೀಡಬೇಕಾಗಿದೆ. ದೇಶದ ಆಮದು ರಫ್ತಿಗಿಂತ ಹೆಚ್ಚಾಗುತ್ತಿದ್ದು ರೂಪಾಯಿ ಮೌಲ್ಯ ಡಾಲರ್ ಎದುರು ನಿರಂತರವಾಗಿ ಕುಸಿಯುತ್ತಿದೆ. ಇದರ ಪರಿಣಾಮ ದೇಶದ ಎಲ್ಲಾ ಜನವರ್ಗದ ಮೇಲೆ ಬೀಳುತ್ತಿದ್ದು ಜನ ಕಂಗಾಲಾಗಿದ್ದಾರೆ. ಹೀಗಾಗಿ ಆಹಾರ ಭದ್ರತಾ ಮಸೂದೆಯೂ ಕಾಂಗ್ರೆಸ್ ಪಕ್ಷವನ್ನು ಚುನಾವಣೆಗಳಲ್ಲಿ ಮೇಲಕ್ಕೆತ್ತುವ ಸಾಧ್ಯತೆ ಇಲ್ಲ. ಸಮತೋಲಿತ ಕೈಗಾರಿಕಾ ಅಭಿವೃದ್ಧಿಗೆ ಸೂಕ್ತ ವಾತಾವರಣವನ್ನು ದೇಶದಲ್ಲಿ ಬೆಳೆಸುವ ನೀತಿಗಳನ್ನು ತರಲು ಕಾಂಗ್ರೆಸ್ ಪಕ್ಷವು ವಿಫಲವಾಗಿದೆ. ಯಾವುದೇ ಸ್ಪಷ್ಟ ನಿರ್ಧಾರಗಳನ್ನು ತೆಗೆದುಕೊಳ್ಳದೆ ಕಾಲಹರಣ ಮಾಡುವುದರಿಂದ ದೇಶಕ್ಕೆ ನಷ್ಟ. ಕಾಂಗ್ರೆಸ್ಸಿನಲ್ಲಿ ಸಾಕಷ್ಟು ಅನುಭವೀ ರಾಜಕಾರಣಿಗಳು ಇದ್ದರೂ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು ವಿಫಲವಾಗುತ್ತಿರುವುದು ಶೋಚನೀಯ. ಭ್ರಷ್ಟಾಚಾರದ ವಿರುದ್ಧ ಕ್ರಮ ತೆಗೆದುಕೊಳ್ಳುವಲ್ಲಿ ಸೋನಿಯಾ ಗಾಂಧಿ ನಾಯಕತ್ವ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿಲ್ಲ. ದೇಶದಲ್ಲಿ ಕಲ್ಲಿದ್ದಲು, ಕಬ್ಬಿಣದ ಅದಿರು ಬೇಕಾದಷ್ಟು ಇದ್ದರೂ ಹೊರದೇಶಗಳಿಂದ ಕಲ್ಲಿದ್ದಲು, ಕಬ್ಬಿಣ ಮತ್ತು ಉಕ್ಕು ಆಮದು ಮಾಡುವ ಪರಿಸ್ಥಿತಿ ಬಂದಿರುವುದು ಸರ್ಕಾರದ ಅನಿರ್ಧಾರದ ನೀತಿಯಿಂದಲೇ ಅಲ್ಲವೇ? ಇದರಿಂದ ರೂಪಾಯಿ ಮೌಲ್ಯ ಕುಸಿತಕ್ಕೆ ಇನ್ನಷ್ಟು ಇಂಬು ಕೊಟ್ಟಂತೆ ಆಗಿದೆ. ದೇಶೀಯ ಉದ್ಯಮಗಳನ್ನು ಪ್ರೋತ್ಸಾಹಿಸುವ, ದೇಶೀಯ ಬಂಡವಾಳ ಹೂಡಿಕೆಯನ್ನು ಉತ್ತೇಜಿಸುವ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳದೆ ಉದ್ಯಮ ವಲಯವನ್ನು ನಿರ್ಲಕ್ಷಿಸಿದರೆ ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷವು ಸಮತೋಲಿತ ಉದ್ಯಮ ಅಭಿವೃದ್ಧಿ ನೀತಿಗಳನ್ನು ತೆಗೆದುಕೊಳ್ಳಲು ವಿಫಲವಾದರೆ ಇದರ ಲಾಭವನ್ನು ಧಾರ್ಮಿಕ ಮೂಲಭೂತವಾದಿಗಳು ಪಡೆಯುತ್ತಾರೆ ಮತ್ತು ದೇಶದಲ್ಲಿ ಮೂಲಭೂತವಾದಿಗಳ ಕೈ ಮೆಲಾಗಳು ಅನುವು ಮಾಡಿಕೊಟ್ಟಂತೆ ಆದೀತು. ದೇಶದಲ್ಲಿ ಧಾರ್ಮಿಕ ಮೂಲಭೂತವಾದ ಬೆಳೆದರೆ ಪ್ರಜಾಪ್ರಭುತ್ವ ವ್ಯವಸ್ಥೆಗೂ ಅಪಾಯ ಇದೆ ಎಂಬುದನ್ನು ಎಲ್ಲರೂ ಮನಗಾಣಬೇಕು. ಟಾಟಾ, ಬಿರ್ಲಾ, ಅಂಬಾನಿಗಳಂಥ ಉದ್ಯಮಿಗಳೂ ದೇಶದ ಪ್ರಗತಿಗೆ ಅತೀ ಅಗತ್ಯ. ಹೀಗಾಗಿ ಕೈಗಾರಿಕೋದ್ಯಮಿ ಗಳನ್ನು ಎಡಪಂಥೀಯರು ಹಾಗೂ ಸಮಾಜವಾದಿಗಳು ಟೀಕಿಸುತ್ತಾ ಕೂರುವುದರಿಂದ ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ಸಮಾಜವಾದ ಹಾಗೂ ಕೈಗಾರಿಕೆಗಳ ನಡುವೆ ಸಾಮಾನ್ಯವ ಸಾಧಿಸಿ ಅಭಿವೃದ್ಧಿಯೆಡೆಗೆ ಹೆಜ್ಜೆ ಹಾಕಬೇಕಾಗಿದೆ.

    Reply
  6. Srini

    To understand seriousness of crisis we are going to get into due to this Food Security Bill, read this well written article.

    http://www.firstpost.com/economy/food-bill-is-the-biggest-mistake-india-might-have-made-till-date-1062841.html

    Didn’t we end up at 68.5 rs against dolor today? It is now expected to touch 75… Our own Finance Minister calmly admits that this is due to certain decision they took in 2009.. who was in power then?

    We need such bill for sure but this is not the timing for 2 reasons –
    a – we simply can’t afford it.
    b- we don’t even have basic infrastructure to execute/implement it

    Reply

Leave a Reply

Your email address will not be published. Required fields are marked *