ರಾಘವೇಶ್ವರ ಭಾರತಿ ಪ್ರಕರಣ: ಜವಾಬ್ದಾರಿಯುತ ಸ್ಥಾನದಲ್ಲಿರುವವರ ಮಾತು-ನಡತೆಗಳ ಮೌಲ್ಯಗಳು ಸಾಯುತ್ತಿರುವಾಗ…

– ಅನುಪಮಾ ಪ್ರಸಾದ್

ಇಂದು ಸಾಮಾಜಿಕ-ರಾಜಕೀಯ-ಧಾರ್ಮಿಕ ಜೀವನದಲ್ಲಿ ಮಾತುಗಳ-ನಡತೆಗಳ ಮೌಲ್ಯಗಳು ಶರವೇಗದಲ್ಲಿ ಸಾಯುತ್ತಿರುವಾಗ ಎಲ್ಲೊ ಯಾರೋ ಇಡುವ ಸಣ್ಣ ನಡೆಯೊಂದು ಆಶಾವಾದಕ್ಕೆ ಕಾರಣವಾಗುತ್ತದೆ. ರಾಘವೇಶ್ವರ ಭಾರತಿ/ಪ್ರೇಮಲತಾ ಶಾಸ್ತ್ರಿ ಪ್ರಕರಣದ ತನಿಖೆ ನಡೆಸುತ್ತಿರುವ ನ್ಯಾಯಮೂರ್ತಿraghaveshwara-premalatha ಫಣೀಂದ್ರ ಅವರು ತನ್ನ ನ್ಯಾಯ ತೀರ್ಮಾನದ ಮೇಲೆ ಅವಿಶ್ವಾಸ ವ್ಯಕ್ತಪಡಿಸಿ ರಾಷ್ಟ್ರಪತಿಗೆ ಪತ್ರ ಹೋಗಿರುವುದರಿಂದ ತನಿಖೆಯಿಂದ ಹಿಂದೆ ಸರಿದಿರುವುದು ಮೌಲ್ಯಗಳು ಇನ್ನೂ ಸತ್ತಿಲ್ಲ ಅನ್ನುವುದಕ್ಕೆ ಸಣ್ಣ ಸಾಕ್ಷಿ. ಈ ಪ್ರಕರಣದಲ್ಲಿ ನ್ಯಾಯಪೀಠದ ಮೇಲೆ ಸಂಶಯ ವ್ಯಕ್ತ ಪಡಿಸಿ ಪತ್ರ ಬರೆದಿದ್ದು ಸರಿಯೆ ತಪ್ಪೆ ಅನ್ನುವುದಕ್ಕಿಂತ ಇಂತಹ ಸಂದರ್ಭದಲ್ಲಿ ನ್ಯಾಯಮೂರ್ತಿಗಳು ನಡೆದುಕೊಂಡ ರೀತಿ ಗಮನಾರ್ಹವಾಗುತ್ತದೆ. ‘ಸಮಾನ ಮನಸ್ಕ ವೇದಿಕೆ’ಯ ಮೂಲಕ ರಾಘವೇಶ್ವರ ಭಾರತಿ ಹಾಗು ಪ್ರೇಮಲತಾ ಪ್ರಕರಣದ ಕುರಿತಾಗಿ ಈಗಲಾದರೂ ಹೊರ ಬಿದ್ದ ಹವ್ಯಕ ಸಮುದಾಯದ ಹೇಳಿಕೆಯೂ ಇನ್ನೊಂದು ಸಣ್ಣ ಆರೋಗ್ಯಕರ ಬೆಳವಣಿಗೆ.

ಇನ್ನು ಕೆಲವರು ಆರೋಪ-ಪ್ರತ್ಯಾರೋಪ ಮಾಡುತ್ತಿರುವ ಇಬ್ಬರದೂ ತಪ್ಪಿದೆ ಎಂದು ಗೊಣಗುವುದರಲ್ಲಿ ನೈತಿಕವಾಗಿ ಯಾವ ತಿರುಳೂ ಇಲ್ಲ. ಏಕೆಂದರೆ ಇಲ್ಲಿ ಒಬ್ಬರದು ಗುರು ಸ್ಥಾನ. ಗುರು ತನ್ನ ಶಿಷ್ಯ ಬಳಗ ತಪ್ಪಿ ನಡೆದಾಗ ದಾರಿ ತೋರಿಸಬೇಕಾದವನು. ಅದರಲ್ಲೂ ಸನ್ಯಾಸತ್ವದ ಹೊದಿಕೆಯನ್ನು ಪ್ರಜ್ಞಾಪೂರ್ವಕವಾಗಿ ತೊಟ್ಟುಕೊಂಡು; ಸಾರ್ವಜನಿಕವಾಗಿ ಹಾಗೆಯೇ ಬಿಂಬಿಸಿಕೊಳ್ಳುತ್ತಿರುವಾಗ ಅತ್ಯಾಚಾರದಂತಹ ಗಂಭೀರ ಸ್ವರೂಪದ ಆರೋಪ ಎದುರಾಗಿದ್ದು, ರಾಘವೇಶ್ವರ ಭಾರತಿ ತಾನಾಗಿಯೇ ಪೀಠದಿಂದಿಳಿದು ತನಿಖೆ ಎದುರಿಸಲು ಸಿದ್ಧವಾಗಬೇಕಿತ್ತು. ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು, ಆ ಸ್ಥಾನದ ಮೌಲ್ಯಗಳನ್ನು ಗೌರವಿಸುವ ವ್ಯಕ್ತಿ ತೆಗೆದುಕೊಳ್ಳಬೇಕಾದ ನಡೆಯಾಗಿತ್ತು. ಆದರೆ, ಇನ್ನು ಅವರದೇ ಮಾತಿನ ಜಾಡಿನಲ್ಲಿ ಹೇಳುವುದಾದರೆ, ಮಾತಿಗೆ ಮೊದಲು ಶ್ರೀರಾಮ ತೋರಿಸಿದ ದಾರಿಯಲ್ಲಿ ನಡೆಯುತ್ತೇನೆ ಅನ್ನುವವರಿಗೆ ತನ್ನ ಪರಿಶುದ್ಧತೆಯನ್ನ ಸಾಬೀತು ಮಾಡಲು ಶ್ರೀರಾಮ ಅಂದು ಸೀತೆಗೆ ತೋರಿಸಿದ ದಾರಿ ಅಗ್ನಿ ಪರೀಕ್ಷೆಯಾದ್ದರಿಂದ; ತನಿಖೆಗೆ ತಡೆಯಾಜ್ಞೆಯ ಮೊರೆ ಹೋಗದೆ ತನ್ನನ್ನು ತನಿಖೆಗೆ ಒಡ್ಡಿಕೊಳ್ಳುವುದೇ ತನಗೆ ಶ್ರೀರಾಮ ಒಡ್ಡಿದ ಅಗ್ನಿ ಪರೀಕ್ಷೆ, ಹಾಗಾಗಿ ತನಿಖೆಗೆ ತಡೆಯಾಜ್ಞೆಗಳನ್ನೇ ತರುತ್ತ ವಿಳಂಬ ನೀತಿಗೆ ಮೊರೆ ಹೋಗುವುದು ಅವಮಾನವೆಂದನಿಸದಿರುವುದು ವಿಪರ್‍ಯಾಸ! ಅವರು ತಾನು ಯಾವುದೇ ಪ್ರಮಾದ ಎಸಗಿಲ್ಲ ಅನ್ನುತ್ತಲೇ ತನಿಖೆಯ ಎಲ್ಲಾ ಹಂತಗಳಲ್ಲು ತಡೆಯಾಜ್ಞೆ ತಂದಿದ್ದಂತು ಸತ್ಯ!

ಆದರೆ, ಇಂತಹ ಸಂದರ್ಭದಲ್ಲಿ ರಾಜಕೀಯವಾಗಿ ಗುರುತಿಸಿಕೊಂಡು ಮುಂಚೂಣಿಯಲ್ಲಿರುವ ಮಹಿಳಾ ನಾಯಕಿಯರೂ ಪ್ರಶ್ನೆ ಮಾಡುವ ಗೋಜಿಗೇ ಹೋಗಲಿಲ್ಲ. shobha-karandlajeತೀರ್ಥಹಳ್ಳಿಯ ಬಾಲಕಿಯ ಪ್ರಕರಣದಲ್ಲಿ ಅತ್ಯಾಚಾರ ನಡೆದಿಲ್ಲ ಎಂದು ಮನೆಯವರು, ವೈದ್ಯಕೀಯ ಪರೀಕ್ಷೆಗಳು ಹೇಳಿದರೂ ಶೋಭಾ ಕರಂದ್ಲಾಜೆ ಮಾಧ್ಯಮಗಳೆದುರು ಬಾಲಕಿಯ ಸಾವು ಅತ್ಯಾಚಾರದ ಹತ್ಯೆ ಎಂದು ಸಾರ್ವಜನಿಕವಾಗಿ ಬೊಬ್ಬೆ ಹೊಡೆದು ಅದೇ ಅಂತಿಮ ಸತ್ಯವೆಂದು ಶರಾ ಬರೆಯಲು ಪ್ರಯತ್ನಿಸುತ್ತಾರೆ. ಕೀಳು ಮಟ್ಟದ ರಾಜಕೀಯ ದುರುದ್ದೇಶಕ್ಕಾಗಿ ತಾನು ಒಂದು ಮುಗ್ದ ಜೀವದ ಸಾವನ್ನು ಬಳಸಿಕೊಳ್ಳುತ್ತಿದ್ದೇನೆನ್ನುವ ಕನಿಷ್ಠ ಪ್ರಜ್ಞೆಯನ್ನೂ ಅವರು ತೋರಿಸುವುದಿಲ್ಲ.

ಇನ್ನು ಅದೇ ಪಕ್ಷದ ಮತ್ತೊಬ್ಬ ರಾಜಕಾರಣಿ ತೇಜಸ್ವಿನಿ ಗೌಡ ಕೆ.ಎಸ್.ಈಶ್ವರಪ್ಪ ಹಾಗು ಐವಾನ್ ಡಿಸೋಜರ ಮಾತಿನ ಮುಂದುವರಿಕೆಯೆಮಬಂತೆ ತನ್ನಂತೆಯೇ ರಾಜಕಾರಣದಲ್ಲಿರುವ ಮಹಿಳೆಯರ ಬಗ್ಗೆ ಯಾವ ವ್ಯಕ್ತಿ ಗೌರವವೂ ಇಲ್ಲದೆ ಅತ್ಯಂತ ಕೀಳು ಅಭಿರುಚಿಯ ಮಾತಾಡುತ್ತಾರೆ. ವಿಪರ್‍ಯಾಸವೆಂದರೆ ಇಬ್ಬರು ಮಹಿಳೆಯರೂ ಡಬ್ಬಲ್ ಡಿಗ್ರಿ ಪಡೆದ ಅಕ್ಷರಸ್ಥರೆ! ಈ ಇಬ್ಬರು ಮಹಿಳೆಯರ ಮಾತುಗಳಲ್ಲಡಗಿರುವುದೂ ಸ್ವಾರ್ಥ ರಾಜಕಾರಣವೇ ಹೊರತಾಗಿ ಮಹಿಳೆಯರ ಬಗೆಗಿನ, ಮಾನವೀತೆಯ ಬಗೆಗಿನ ಕಾಳಜಿಯೂ ಇಲ್ಲ. ನಾಗರೀಕ ಸೌಜನ್ಯವೂ ಇಲ್ಲ. ಇದ್ದುದರಲ್ಲಿ ತೇಜಸ್ವಿನಿಯವರ ಮಾತಿನ ಸಂದರ್ಭದಲ್ಲಿ ಪ್ರತಿಕ್ರಿಯೆಯಾಗಿ ಶ್ರೀಮತಿ ಮೋಟಮ್ಮ ಮಾತಿನ ಹದ ಕಾಯ್ದುಕೊಂಡು ಕಾವು ಉಳಿಸಿಕೊಂಡು ಪ್ರತಿಕ್ರಿಯಿಸಿದ್ದು ಸಮಾಧಾನಕರ ಅಂಶ. ಮತ್ತೆ ಪುನಃ ನಾಲಿಗೆ ಹರಿಯ ಬಿಟ್ಟವರು ವಿನಯ ಕುಮಾರ ಸೊರಕೆ. ಸಾರ್ವಜನಿಕವಾಗಿ ಅದು ರಾಜಕೀಯ ಸ್ಥಾನವಾಗಿರಲಿ; ಸಾಮಾಜಿಕ ಅಥವಾ ಧಾರ್ಮಿಕ ಸ್ಥಾನವಾಗಿರಲಿ. ಜವಾಬ್ದಾರಿಯುತ ಸ್ಥಾನಗಳಲ್ಲಿರುವವರು ಸಂಸ್ಕೃತಿಯ ಬಗ್ಗೆ ಗುತ್ತಿಗೆ ಪಡೆದುಕೊಂಡಂತೆ ಮಾತಾಡುವ ಮೊದಲು ಕಿಂಚಿತ್ ಆತ್ಮ ನಿರೀಕ್ಷಣೆ ನಡೆಸಿದರೆ ತಾವು ನಿರ್ವಹಿಸುತ್ತಿರುವ ಸ್ಥಾನದ ಮಾನವನ್ನಾದರೂ ಕಾಪಾಡಬಹುದೇನೊ.

24 thoughts on “ರಾಘವೇಶ್ವರ ಭಾರತಿ ಪ್ರಕರಣ: ಜವಾಬ್ದಾರಿಯುತ ಸ್ಥಾನದಲ್ಲಿರುವವರ ಮಾತು-ನಡತೆಗಳ ಮೌಲ್ಯಗಳು ಸಾಯುತ್ತಿರುವಾಗ…

  1. Ananda Prasad

    ಈ ಪ್ರಕರಣವನ್ನು ನೋಡುವಾಗ ನಮ್ಮ ರಾಜ್ಯದಲ್ಲಿ ಇರುವುದು ಪ್ರಜಾಪ್ರಭುತ್ವ ವ್ಯವಸ್ಥೆಯೂ ಅಥವಾ ಮಠ ಪ್ರಭುತ್ವವೋ ಎಂಬ ಸಂದೇಹ ಪ್ರಜ್ಞಾವಂತ ನಾಗರಿಕರಿಗೆ ಕಾಡುತ್ತದೆ. ಪ್ರೇಮಲತಾ ಹಾಗೂ ದಿವಾಕರ್ ದಂಪತಿಯನ್ನು ಹಲವು ದಿವಸ ಯಾವುದೇ ಆಧಾರ ಇಲ್ಲದೆಯೂ ಜಾಮೀನುರಹಿತ ಬಂಧನದಲ್ಲಿ ಇರಿಸಿರುವುದು ಇದನ್ನು ದೃಢಪಡಿಸುತ್ತದೆ. ಪ್ರೇಮಲತಾ ದಿವಾಕರ್ ದಂಪತಿ ಅತ್ಯಂತ ಪ್ರಭಾವಶಾಲಿಯಾದ ಮಠವು ನಡೆಸುವ ಕಾರ್ಯಕ್ರಮಕ್ಕೆ ಬೆದರಿಕೆ ಹಾಕಿದ್ದರು ಎಂಬುದು ಮೇಲ್ನೋಟಕ್ಕೇ ಒಂದು ಸುಳ್ಳು ದೂರು ಎಂಬುದು ಕಂಡುಬರುತ್ತದೆ. ಅತ್ಯಂತ ಪ್ರಭಾವಶಾಲಿಯಾದ ಮಠದ ವಿರುದ್ಧ ಸುಳ್ಳು ದೂರು ನೀಡಿ ಸಾಮಾನ್ಯ ವ್ಯಕ್ತಿಗಳು ಬಚಾವಾಗಲು ಸಾಧ್ಯವೇ ಎಂಬುದು ಎಂಥ ಮೂಢನಿಗಾದರೂ ಕಂಡುಬರುವ ಪ್ರಶ್ನೆ. ಈ ಪ್ರಕರಣ ನಡೆದು ಈಗಾಗಲೇ ಮೂರ್ನಾಲ್ಕು ತಿಂಗಳಾಯಿತು, ಪ್ರೇಮಲತಾ ದಂಪತಿ ಮಠದ ಭಕ್ತರಿಗೆ ಬೆದರಿಕೆ ಹಾಕಿದ್ದಾರೆ ಎಂಬುದಕ್ಕೆ ತನಿಖೆ ನಡೆಸಿದ ಪೊಲೀಸರಿಗೆ ಸಾಕ್ಷ್ಯ ಸಿಕ್ಕಿದೆಯೇ ಎಂದು ಪೊಲೀಸರು ಬಹಿರಂಗಪಡಿಸಬೇಕು. ಇಲ್ಲದೆ ಇದ್ದರೆ ಪ್ರೇಮಲತಾ ದಂಪತಿಯನ್ನು ಅನಾವಶ್ಯಕವಾಗಿ ಬಂಧಿಸಿದ ಹಾಗೂ ಜಾಮೀನು ನೀಡದೆ ಸತಾಯಿಸಿದ ನ್ಯಾಯಾಧೀಶರಿಗೆ ಶಿಕ್ಷೆ ಆಗಬೇಕು.

    Reply
    1. ನಾಗಶೆಟ್ಟಿ ಶೆಟ್ಕರ್

      “ಪ್ರೇಮಲತಾ ದಂಪತಿಯನ್ನು ಅನಾವಶ್ಯಕವಾಗಿ ಬಂಧಿಸಿದ ಹಾಗೂ ಜಾಮೀನು ನೀಡದೆ ಸತಾಯಿಸಿದ ನ್ಯಾಯಾಧೀಶರಿಗೆ ಶಿಕ್ಷೆ ಆಗಬೇಕು.”

      ನಿಮಗೇಕೋ ನ್ಯಾಯಾಂಗ ವ್ಯವಸ್ಥೆಯ ಮೇಲೆ ವೈಯಕ್ತಿಕ ಸಿಟ್ಟು ಇದೆ ಅಂತ ಕಾಣುತ್ತದೆ. ಆದುದರಿಂದ ನ್ಯಾಯಾಧೀಶರನ್ನು ವಿನಾಕಾರಣ ದೂಷಿಸುತ್ತಿದ್ದೀರಿ! ಪ್ರೇಮಲತಾ ದಂಪತಿಗಳನ್ನು ನ್ಯಾಯಾಧೀಶರು ಬಂಧಿಸಿದಾರೆಯೇ? ಕಾನೂನು ವ್ಯವಸ್ಥೆ ಬಗ್ಗೆ ಸರಿಯಾದ ತಿಳುವಳಿಕೆ ನಿಮಗಿದ್ದಿದ್ದರೆ ನೀವು ಹೀಗೆ ಹೇಳುತ್ತಿರಲಿಲ್ಲ! ಪೊಲೀಸರು ಪ್ರಸ್ತುತ ಪಡಿಸಿದ ಆಧಾರಗಳನ್ನು ಆಧಾರವಾಗಿಟ್ಟುಕೊಂಡು ನ್ಯಾಯಾಧೀಶರು ಜಾಮೀನಿನ ವಿಷಯದಲ್ಲಿ ತೀರ್ಪು ಕೊಟ್ಟಿದ್ದಾರೆ. ನ್ಯಾಯಾಧೀಶರು ರಾಘವೇಶ್ವರ ಅವರ ಕೈಗೊಂಬೆಯಾಗಿ ತೀರ್ಪು ನೀಡಿದ್ದಾರೆ ಎಂಬುದಕ್ಕೆ ನಿಮ್ಮ ಬಳಿ ಇರುವ ಆಧಾರವೇನು? ನ್ಯಾಯಾಂಗ ವ್ಯವಸ್ಥೆ ಬಗ್ಗೆ ನಿಮಗೆ ಇಷ್ಟೊಂದು ಅಸಹನೆ ಹಾಗೂ ವೈಷಮ್ಯವೇಕೆ?

      Reply
  2. Ananda Prasad

    ನನಗೆ ನ್ಯಾಯಾಂಗ ವ್ಯವಸ್ಥೆಯ ಮೇಲೆ ವೈಯಕ್ತಿಕ ದ್ವೇಷವೇನೂ ಇಲ್ಲ. ನಮ್ಮ ನ್ಯಾಯಾಂಗ ವ್ಯವಸ್ಥೆ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಹೇಳಿದರೆ ನೀವು ಏಕೆ ನ್ಯಾಯಾಂಗ ವ್ಯವಸ್ಥೆಯನ್ನು ವಹಿಸಿಕೊಂಡು ಬರುತ್ತಿದ್ದೀರಿ ಅರ್ಥವಾಗುವುದಿಲ್ಲ. ನಾನು ಇದನ್ನು ಹೇಳುತ್ತಿರುವುದರಲ್ಲಿ ಯಾವುದೇ ಸ್ವಾರ್ಥವಾಗಲಿ, ದುರುದ್ಧೇಶವಾಗಲೀ ಇಲ್ಲ. ನಮ್ಮ ನ್ಯಾಯ ವ್ಯವಸ್ಥೆ ಸುಧಾರಿಸಬೇಕು ಎಂಬುದಷ್ಟೇ ಇದರ ಉದ್ಧೇಶ. ಅಗ್ನಿ ವಾರಪತ್ರಿಕೆಯಲ್ಲಿ ಈ ವಾರ ಬಂದಿರುವ ಈ ಲೇಖನವನ್ನು ಓದಿ ನೋಡಿ. http://agniweekly.com/edition17/issue7/page10.html

    Reply
  3. ನಾಗಶೆಟ್ಟಿ ಶೆಟ್ಕರ್

    “ಕೆಲವರು ಆರೋಪ-ಪ್ರತ್ಯಾರೋಪ ಮಾಡುತ್ತಿರುವ ಇಬ್ಬರದೂ ತಪ್ಪಿದೆ ಎಂದು ಗೊಣಗು”

    ರಾಘವೇಶ್ವರ ಹಾಗೂ ಪ್ರೇಮಲತಾ – ಇವರು ಇಬ್ಬರು ಮಾಡಿದ ತಪ್ಪುಗಳೇನು ಅಂತ ಮೊದಲು ಬಹಿರಂಗವಾಗತಕ್ಕದ್ದು. ರಾಘವೇಶ್ವರ ಅವರೂ ಪ್ರೇಮಲತಾ ಅವರೂ ಬಹಳಷ್ಟು ವಿಚಾರಗಳನ್ನು ಮುಚ್ಚಿಟ್ಟಿದ್ದಾರೆ ಅಂತ ಧೃಢವಾಗಿ ಹೇಳಬಹುದಾಗಿದೆ. ಸ್ವಲ್ಪ ಕಾಲದ ಹಿಂದಿನವರೆಗೂ ಪ್ರೇಮಲತಾ ಹಾಗೂ ಅವರ ಕುಟುಂಬದವರು ರಾಘವೇಶ್ವರ ಅವರ ಆಪ್ತವಲಯದಲ್ಲಿದ್ದರು ಹಾಗೂ ಮಠದ ವಿಚಾರಗಳಲ್ಲಿ ಯೋಗ್ಯತೆಗೆ ಮೀರಿದ ಸ್ಥಾನಮಾನವನ್ನು ಪಡೆದಿದ್ದರು. ಇವರುಗಳ ನಡುವೆ ಎಲ್ಲವೂ ‘ಸರಿ’ ಇತ್ತು. ನಂತರದ ಕಾಲದಲ್ಲಿ ‘ಸಂಬಂಧ’ ಹಳಸಿ ವಿಷವಾಯಿತು. ರಾಘವೇಶ್ವರ, ಪ್ರೇಮಲತಾ ಇಬ್ಬರನ್ನೂ ಮಂಪರು ಪರೀಕ್ಷೆಗೆ ಒಡ್ಡಿದರೆ ‘ಗತ’ದ ಎಲ್ಲಾ ವಿಚಾರಗಳನ್ನು ತಿಳಿಯಬಹುದಾಗಿದೆ. ಮಂಪರು ಪರೀಕ್ಷೆಯಷ್ಟೇ ಅಲ್ಲ, ಶೃಂಗೇರಿ ಶಾರದೆಯ ಮುಂದೆ ಸಾರ್ವಜನಿಕವಾಗಿ ಸತ್ಯಪರೀಕ್ಷೆಗೂ ಇವರಿಬ್ಬರು ಒಪ್ಪಿಗೆ ನೀಡತಕ್ಕದ್ದು.

    Reply
    1. Ananda Prasad

      ಪ್ರೇಮಲತಾ ಅವರು ತಾವು ಮಂಪರು ಪರೀಕ್ಷೆಗೆ ಸಿದ್ಧ, ಸ್ವಾಮಿಗಳನ್ನ್ನೂ ಮಂಪರು ಪರೀಕ್ಷೆಗೆ ಒಳಪಡಿಸಬೇಕು ಎಂದು ಹೇಳಿದ್ದಾರೆ. ಮಂಪರು ಪರೀಕ್ಷೆಗೆ ಒಪ್ಪದೇ ಇರುವುದು ಸ್ವಾಮೀಜಿಯೇ ಹೊರತು ಪ್ರೇಮಲತಾ ಅಲ್ಲ. ಇದರಿಂದ ಯಾರ ಮಾತಿನಲ್ಲಿ ಹೆಚ್ಚು ಸತ್ಯ ಅಡಗಿದೆ ಎಂದು ತಿಳಿಯುತ್ತದೆ.

      Reply
      1. ನಾಗಶೆಟ್ಟಿ ಶೆಟ್ಕರ್

        ನಿಮ್ಮ ವಾದ ಮೇಲ್ನೋಟಕ್ಕೆ ಸರಿ ಅಂತ ಕಂಡರೂ ಆಳವಾಗಿ ಯೋಚಿಸಿ ನೋಡಿದರೆ ವಾದ ಅಪಕ್ವ ಅಂತ ಸ್ಪಷ್ಟವಾಗುತ್ತದೆ. ರಾಘವೇಶ್ವರ ಅವರು ಮಂಪರು ಪರೀಕ್ಷೆಗೆ ಒಳಪಡಲು ಒಪ್ಪುವುದಿಲ್ಲ ಎಂದು ಪ್ರೇಮಲತಾ ಅವರಿಗೆ ಗೊತ್ತಿದೆ. ಹೀಗಾಗಿ ಅವರು ರಾಘವೇಶ್ವರ ಅವರು ಮಂಪರು ಪರೀಕ್ಷೆಗೆ ರೆಡಿ ಇದ್ದರೆ ತಾವೂ ಕೂಡ ರೆಡಿ ಎಂಬ ಜಾಣತನದ ಮಾತನ್ನು ಆಡಿದ್ದಾರೆ. ರಾಘವೇಶ್ವರ ರೆಡಿ ಇರಲಿ ಬಿಡಲಿ ಪ್ರೇಮಲತಾ ಅವರು ಮುಂದು ಬಂದು ಮಂಪರು ಪರೀಕ್ಷೆಗೆ ತಮ್ಮನ್ನು ಒಳಪಡಿಸಿದ್ದಿದ್ದರೆ ಸತ್ಯದ ಒಂದು ಮುಖವಾದರೂ ಬಯಲಾಗುತ್ತಿತ್ತು. ಒಟ್ಟಾರೆ ಈ ಪ್ರಕರಣದ ಪೂರ್ಣ ಸತ್ಯ ಹೊರಬರುವುದು ಪ್ರೇಮಲತಾ ಅವರಿಗೂ ಬೇಡವಾಗಿದೆ ರಾಘವೇಶ್ವರ ಅವರಿಗೂ ಬೇಡವಾಗಿದೆ. ಆದುದರಿಂದಲೇ “ಕೆಲವರು ಆರೋಪ-ಪ್ರತ್ಯಾರೋಪ ಮಾಡುತ್ತಿರುವ ಇಬ್ಬರದೂ ತಪ್ಪಿದೆ ಎಂದು ಗೊಣಗು”ತ್ತಿದ್ದಾರೆ. ಸತ್ಯನಿಷ್ಠರಾದ ನಾವು ಪ್ರಗತಿಪರರು ಪ್ರೇಮಲತಾ ಅವರ ಪರವಾಗಿ ಅಥವಾ ರಾಘವೇಶ್ವರ ಅವರ ವಿರುದ್ಧವಾಗಿ ನಮ್ಮ ನೈತಿಕ ಶಕ್ತಿಯನ್ನು ವ್ಯಯ ಮಾಡುವುದು ಬೇಡ. ಇಬ್ಬರಿಂದಲೂ ಸತ್ಯ ಹೊರಬರುವಂತೆ ಮಾಡಲು ಸರಕಾರವನ್ನು ಒತ್ತಾಯಿಸೋಣ.

        Reply
        1. Ananda Prasad

          ಪ್ರೇಮಲತಾ ಅವರು ತಾವು ಮಂಪರು ಪರೀಕ್ಷೆಗೆ ಸಿದ್ಧ ಎಂದು ಹೇಳುವ ನೈತಿಕ ಧೈರ್ಯ ತೋರಿಸಿದ್ದಾರೆ. ಇದನ್ನು ನಾನು ಮೆಚ್ಚುತ್ತೇನೆ. ವಾಸ್ತವವಾಗಿ ಈ ನೈತಿಕ ಧೈರ್ಯವನ್ನು ಸ್ವಾಮೀಜಿ ತೋರಿಸಬೇಕಾಗಿತ್ತು. ಹೀಗಾಗಿ ಮೇಲ್ನೋಟಕ್ಕೆ ಪ್ರೇಮಲತಾ ಅವರ ಮಾತಿನಲ್ಲಿ ಹೆಚ್ಚಿನ ಸತ್ಯಾಂಶ ಇರುವಂತೆ ಕಂಡುಬರುತ್ತದೆ. ಸ್ವಾಮೀಜಿಯಾದರೋ ವೈದ್ಯಕೀಯ ಪರೀಕ್ಷೆಗೆ ಹಿಂದೇಟು ಹಾಕುತ್ತಾ ನ್ಯಾಯಾಲಯದ ಮುಂದೆ ಮೀನಮೇಷ ಎಣಿಸುತ್ತಿರುವುದನ್ನು ನೋಡಿದಾಗ ಜನರ ಸಂಶಯ ಇನ್ನಷ್ಟು ಹೆಚ್ಚಾಗುತ್ತದೆ.

          Reply
          1. ನಾಗಶೆಟ್ಟಿ ಶೆಟ್ಕರ್

            ಪ್ರೇಮಲತಾ ಅವರು ರಾಘವೇಶ್ವರ ಅವರನ್ನೂ ಮಂಪರು ಪರೀಕ್ಷೆಗೆ ಒಳಪಡಿಸುವುದಾದರೆ ತಾವೂ ಪರೀಕ್ಷೆಗೆ ಸಿದ್ಧ ಎಂದಿದ್ದಾರೆಯೇ ಹೊರತು ತಮ್ಮನ್ನು ಮಂಪರು ಪರೀಕ್ಷೆಗೆ ಒಳಪಡಿಸಿ ಸತ್ಯ ಕಂಡು ಹಿಡಿಯಿರಿ ಅಂತ ಹೇಳಿಲ್ಲ. ರಾಘವೇಶ್ವರ ಅವರು ಮಂಪರು ಪರೀಕ್ಷೆಗೆ ಸಿದ್ಧರಿಲ್ಲ ಎಂಬುದು ಪ್ರೇಮಲತಾ ಅವರಿಗೆ ಗೊತ್ತಿರುವುದರಿಂದ ಅವರು ಹೀಗೆ ಷರತ್ತು ಬದ್ಧ ಒಪ್ಪಿಗೆ ಕೊಟ್ಟಿದ್ದಾರೆ. ಪ್ರೇಮಲತಾ ಅವರ ಜಾಣತನ ಈ ಪ್ರಕರಣದಿಂದ ತಿಳಿದು ಬರುತ್ತದೆ. ಆದುದರಿಂದ ಪ್ರೇಮಲತಾ ಮಾಧ್ಯಮಗಳ ಸಮ್ಮುಖದಲ್ಲಿ ಹೇಳಿರುವುದೆಲ್ಲ ಸತ್ಯ ಎಂದು ನಂಬಿ ನಾವು ಪ್ರಗತಿಪರರು ಮೋಸ ಹೋಗಬಾರದು. ರಾಘವೇಶ್ವರ ಹಾಗೂ ಪ್ರೇಮಲತಾ ನಡುವೆ ವಿರಸ ಉಂಟಾಗಲು ಅಸಲಿ ಕಾರಣಗಳೇನು ಅಂತ ಪತ್ತೆ ಹಚ್ಚಬೇಕು. ಇಬ್ಬರನ್ನೂ ಅವರ ಒಪ್ಪಿಗೆ ಇರಲಿ ಇಲ್ಲದಿರಲಿ ಮಂಪರು ಪರೀಕ್ಷೆಗೆ ಒಳಪಡಿಸತಕ್ಕದ್ದು.

  4. ಎಚ್. ಸುಂದರ ರಾವ್

    ಮೇಡಂ
    ತನ್ನ ಮೇಲೆ ಅಪವಾದ ಬಂದಾಗ ಶ್ರೀರಾಮ ಹೇಗೆ ನಡೆದುಕೊಂಡ ಎನ್ನುವುದಕ್ಕೆ ಒಂದು ಉದಾಹರಣೆ ನೀವು ಕೊಟ್ಟಿದ್ದೀರಿ. ಇನ್ನೂ ಒಂದು ಇದೆ: ಅಗಸನೊಬ್ಬ ಶ್ರೀರಾಮನ ಬಗ್ಗೆ ಒಂದು ಆಪಾದನೆ ಮಾಡಿದ ಅಥವಾ ಲಘುವಾಗಿ ಮಾತನಾಡಿದ. ಆ ಅಗಸ ನಿಜವಾಗಿ ಶ್ರೀರಾಮನ ಬಗ್ಗೆ ದೂರನ್ನು ಸಹ ಯಾರಿಗೂ ಕೊಟ್ಟಿರಲಿಲ್ಲ. ಶ್ರೀರಾಮನಿಗೆ ಅದು ಗೊತ್ತಾದದ್ದು ಮೂರನೆಯ ಪಕ್ಷವಾದ ಒಬ್ಬ ಗೂಢಚಾರನ ಮೂಲಕ. ರಾಜನಾಗಿದ್ದ ರಾಮನಿಗೆ ಆ ಅಗಸನನ್ನು ನಿಗ್ರಹಿಸುವುದೇನೂ ದೊಡ್ಡ ಸಮಸ್ಯೆಯಾಗಿರಲಿಲ್ಲ. ನಮ್ಮ ಸ್ವಾಮಿಗಳು ಮಾತು ಮಾತಿಗೂ ಗುಣಗಾನ ಮಾಡುವ ಆ ಶ್ರೀರಾಮ (ರಾಜಾರಾಮ) ಅಗಸನ ಆಪಾದನೆಯ ಕುರಿತು ಹೇಗೆ ಪ್ರತಿಕ್ರಿಯಿಸಿದ ಎನ್ನುವುದು ಎಲ್ಲರಿಗೂ ಗೊತ್ತಿದೆ. ದುರದೃಷ್ಟವಶಾತ್ ನಮ್ಮ ಸ್ವಾಮಿಗಳಿಗೂ ಅವರನ್ನು ಸುತ್ತುವರಿದಿರುವವರಿಗೂ ಮಾತ್ರ ಅದು ಗೊತ್ತಿಲ್ಲದೆ ಹೋಗಿದೆ!
    ಎಚ್. ಸುಂದರ ರಾವ್

    Reply
    1. Ganesh

      Why do you compare the mythology to the actual life situation?. There is no Rama or Seeta here in real life. If one look at this particular incident, it can be observed that the team once together to act for achieving their selfish motto is today split, and the spat has become filthy. Now the misdeeds of each other are coming out in public as wrath. “Moral of the story is if wrong deeds are done in the name of God, the same shall the cause of fall for all those involved”.

      Reply
      1. ಎಚ್. ಸುಂದರ ರಾವ್

        ಪ್ರಿಯ ಗಣೇಶ್
        ನಿಮಗೆ ಕನ್ನಡ ತಿಳಿದಿದೆ. ನೀವು ಕನ್ನಡದಲ್ಲಿ ಬರೆದರೆ ನಾನು ಸಾಧ್ಯವಿದ್ದಷ್ಟು ಚರ್ಚೆಯಲ್ಲಿ ಭಾಗವಹಿಸುತ್ತೇನೆ. ಇಲ್ಲದಿದ್ದರೆ ಕ್ಷಮಿಸಿ

        Reply
        1. ನಾಗಶೆಟ್ಟಿ ಶೆಟ್ಕರ್

          ಸುಂದರ ರಾವ್ ಅವರ ಅಭಿಪ್ರಾಯವು ನನ್ನದೂ ಆಗಿದೆ. ಕನ್ನಡ ಬಲ್ಲವರು ಕನ್ನಡಲ್ಲೇ ಚರ್ಚೆ ಮಾಡುವುದು ಉತ್ತಮ.

          Reply
          1. Ganesh

            Dear Mr. Rao/Shettar, kindly excuse me for the inconvenience caused. I know Kannada. But at present my Computer does not know. I will try and get Kannada software. However, even then my difficulty shall be the key-board which does not have Kannada alphabets. At this situation if you think language is not a barrier for thought flow and healthy discussion, then we can still discuss. But, if Kannada is the only way to express then I can type Kannada words in English alphabets. Kindly advice.

          2. Ananda Prasad

            ನಮ್ಮ ಕಂಪ್ಯೂಟರಿನಲ್ಲಿ ಕನ್ನಡ ಸಾಫ್ಟ್ವೇರ್ ಇಲ್ಲದೆಯೂ ಅಂತರ್ಜಾಲ ಸಂಪರ್ಕ ಇದ್ದಲ್ಲಿ ಸುಲಭವಾಗಿ ಕನ್ನಡದಲ್ಲಿ ಬರೆಯಬಹುದು. ಅಂತರ್ಜಾಲದಲ್ಲಿ ಇದಕ್ಕೆ ಬೇಕಾದ ತಾಣಗಳು ಇವೆ. ಗೂಗಲ್ ಕನ್ನಡ ಟ್ರಾನ್ಸ್ಲಿಟರೇಶನ್ ಎಂದು ಗೂಗಲ್ಲಿನಲ್ಲಿ ಹುಡುಕಿದರೆ ತಾಣವನ್ನು ತೋರಿಸುತ್ತದೆ ಅಥವಾ ಈ ವಿಳಾಸಕ್ಕೆ ಹೋದರೆ http://www.google.com/intl/kn/inputtools/try/ ಸುಲಭವಾಗಿ ಇಂಗ್ಲಿಷ್ ಕೀಬೋರ್ಡ್ ಮೂಲಕವೇ ಕನ್ನಡ ಅಕ್ಷರಗಳನ್ನು ಟೈಪ್ ಮಾಡಬಹುದು. ಹೀಗೆ ಟೈಪ್ ಮಾಡಿದ ಕನ್ನಡ ವಾಕ್ಯಗಳನ್ನು ನಂತರ ಕಾಪಿ ಮಾಡಿಕೊಂಡು (ಕೀಬೋರ್ಡಿನಲ್ಲಿ ಕಂಟ್ರೋಲ್ +ಸಿ ಅಕ್ಷರ ಬಳಸಿ) ಬೇಕಾದ ವೆಬ್ ಸೈಟಿನ ಪ್ರತಿಕ್ರಿಯೆ ನೀಡುವ ಜಾಗದಲ್ಲಿ ಪೇಸ್ಟ್ (ಕೀಬೋರ್ಡಿನಲ್ಲಿ ಕಂಟ್ರೋಲ್+ವಿ ಅಕ್ಷರ ಬಳಸಿ) ಮಾಡಬಹುದು. ಇದಲ್ಲದೆ ಕ್ವಿಲ್ಪ್ಯಾಡ್ ಕನ್ನಡ ಎಂದು ಗೂಗಲ್ಲಿನಲ್ಲಿ ಹುಡುಕಿದರೆ ಕ್ವಿಲ್ಪ್ಯಾಡ್ ವೆಬ್ಸೈಟನ್ನು ತೋರಿಸುತ್ತದೆ ಅಥವಾ ಈ ವಿಳಾಸಕ್ಕೆ ಹೋದರೆ http://www.quillpad.in/index.html#.VH5_gmd-vxU ಕನ್ನದಲ್ಲಿ ಇಂಗ್ಲೀಷ್ ಕೀಬೋರ್ಡಿನ ಮೂಲಕ ಬರೆಯಬಹುದು. ನಂತರ ಅದನ್ನು ಬೇಕಾದ ವೆಬ್ ಸೈಟಿನ ಪ್ರತಿಕ್ರಿಯೆ ನೀಡುವ ಜಾಗಕ್ಕೆ ಕಾಪಿ ಹಾಗೂ ಪೇಸ್ಟ್ ವಿಧಾನದ ಮೂಲಕ ಹಾಕಬಹುದು. ಈ ವಿಧಾನವನ್ನು ಕನ್ನದಲ್ಲಿ ಇ-ಮೇಲ್ ಕಳುಹಿಸಲೂಬಳಸಬಹುದು. ಇ-ಮೇಲಿನಲ್ಲಿ ಏನು ಬರೆಯಬೇಕೋ ಅದನ್ನು ಗೂಗಲ್ ಟ್ರಾನ್ಸ್ಲಿಟರೇಶನ್ ಅಥವಾ ಕ್ವಿಲ್ಪ್ಯಾಡ್ ಮೂಲಕ ಬರೆದು ನಂತರ ಕಾಪಿ ಪೇಸ್ಟ್ ಮೂಲಕ ಇ-ಮೇಲಿಗೆ ಅಂಟಿಸಿ ಕಳುಹಿಸಲೂಬಹುದು.

            ಈ ವಿಧಾನವು ಮೊಜಿಲ್ಲಾ ಫೈರ್ಫಾಕ್ಸ್ ಹಾಗೂ ಗೂಗಲ್ ಕ್ರೋಮ್ ವೆಬ್ ಬ್ರೌಸರ್ಗಳಲ್ಲಿ ಕೆಲಸ ಮಾಡುತ್ತದೆ. ಇಂಟರ್ನೆಟ್ ಎಕ್ಸ್ಪ್ಲೋರರ್ ಬ್ರೌಸರಿನಲ್ಲಿ (ಎಕ್ಸ್ಪ್ಲೋರರ್ ೮ರಲ್ಲಿ) ಈ ವಿಧಾನವು ಕೆಲಸಮಾಡುವುದಿಲ್ಲ. ಈ ವಿಧಾನದ ಮೂಲಕ ಕನ್ನಡದಲ್ಲಿ ಬರೆಯಲು ಅಂತರ್ಜಾಲ ಸಂಪರ್ಕ ಇರುವುದು ಅಗತ್ಯ. ಬ್ರಾಡ್ಬ್ಯಾಂಡ್ ಇದ್ದರೆ ಉತ್ತಮ. ೧೧೫ ಕೆಬಿಪಿಎಸ್ ವೇಗದ ವಿಲ್ ಫೋನ್ ಇಂಟರ್ನೆಟ್ ಸಂಪರ್ಕದಲ್ಲಿಯೂ ಈ ವಿಧಾನ ನಡೆಯುತ್ತದೆ ಆದರೆ ತುಸು ನಿಧಾನ.

  5. ಮಹೇಶ

    ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಉಳಿದ ಅಂಶಗಳ ಬಗ್ಗೆ ಏನೂ ಹೇಳಲು ಹೋಗುವುದಿಲ್ಲ. ಆದರೆ ರಾಘವೇಶ್ವರರನ್ನು ಪೀಠದಿಂದ ಇಳಿಸಲೇಬೇಕೆಂದು ಒತ್ತಾಯ ಮಾಡುತ್ತಿರುವವರಲ್ಲಿ ರಾಮನನ್ನು ಗುತ್ತಿಗೆ ಹಿಡಿದ ಪರಿವಾರದವರ ನಾಯಕರೇ ಮುಂಚೂಣಿಯಲ್ಲಿರುವುದು ಮೇಲ್ನೋಟಕ್ಕೆ ವ್ಯಕ್ತವಾಗುತ್ತಿದೆ.

    Reply
    1. ನಾಗಶೆಟ್ಟಿ ಶೆಟ್ಕರ್

      “ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಉಳಿದ ಅಂಶಗಳ ಬಗ್ಗೆ ಏನೂ ಹೇಳಲು ಹೋಗುವುದಿಲ್ಲ.”

      ಪ್ರೇಮಲತಾ ಪ್ರಕರಣದ ಸತ್ಯ ಏನೆಂದು ತಿಳಿದಿದ್ದರೆ ದಯವಿಟ್ಟು ಮುಂದೆ ಬಂದು ಸತ್ಯವನ್ನು ಬಹಿರಂಗ ಪಡಿಸಿ. ನಿಮ್ಮ ನಿಷ್ಠೆ ಸತ್ಯಕ್ಕೆ ಇರಲಿ.

      Reply
  6. ak kukkaje

    ಸ್ವಾಮಿ ವೇಷದಲ್ಲಿಯೂ, ಮುಲ್ಲಾ ವೇಷದಲ್ಲಿಯೂ,ಪಾದ್ರಿ ವೇಷದಲ್ಲಿಯೂ ಇರುವುದರಿಂದ,ಆಯಾ ಧರ್ಮದ ಅಮಾಯಕರ ಆವೇಶ ನಮ್ಮನ್ನು ರಕ್ಷಿಸಬಹುದು.ಎಂಬ ಒಂದು ಆತ್ಮವಿಶ್ವಾಸವೇ ಇತ್ಯಾದಿ ಜನರಿಗೆ ತಮ್ಮ ತೀಟೆ ತೀರಿಸಿಕೊಳ್ಳುವ ತಪ್ಪುಗಳನ್ನು ಮಾಡಲು ಪ್ರೇರಣೆಯಾಗಿದೆ ಇದರಿಂದಾಗಿ ನಮ್ಮ ನೆರೆಯ ಕೇರಳದಲ್ಲಿ ಇತ್ತೀಚಿಗೆ ಮುಸ್ಲಿಂ ಪುರೋಹಿತರ ವರ್ಗದ ಸಂಸ್ಥೆಯಲ್ಲಿ ನಡೆದ ಪ್ರಕರಣ ಅದರ ಬಗ್ಗೆ ಪುರೋಹಿತನೊಬ್ಬ ಆಡಿದ ಮಾತು ವಿವಾದ ಸೃಷ್ಟಿಸಿತು ಆದರೂ ಆತನ ಬೆಂಬಲಿಗರೂ ಇನ್ನೂ ಆತನ ಪರವಾಗಿದ್ದು ವಿಷಯಗಳು ಚರ್ಚೆಯಲ್ಲಿರುವಾಗಲೇ ನಮ್ಮ ದ.ಕ. ದ ಪ್ರದೇಶವೊಂದರಲ್ಲಿ ಕೆಲವು ಮಂದಿ ಆತನಿಗೆ ವೇದಿಕೆ ನಿರ್ಮಿಸಿದ್ದಾರೆ,ಅದೇ ಬುದ್ದಿಜೀವಿಗಳ ಕೇರಳದಲ್ಲಿನ ಚರ್ಚ್ ಅಧೀನದಲ್ಲಿನ ಸಿಸ್ಟರ್ ಅಭಯಾ ಪ್ರಕರಣ ಎಷ್ಟೋ ವರುಷಗಳಿಂದ ಚಾಲ್ತಿಯಲ್ಲಿರುವುದು ಎಲ್ಲರೂ ತಿಳಿದ ವಿಚಾರ ನಮ್ಮ ಕರ್ನಾಟಕದಲ್ಲಿ ವಿವಿಧ ಮಠದ ಸ್ವಾಮಿಗಳು ಈ ನಿಟ್ಟಿನಲ್ಲಿ ಮುಂಚೂಣಿಯಲ್ಲಿದ್ದು,ತಮ್ಮ ಧರ್ಮವನ್ನು ಅಸ್ತ್ರವಾಗಿಸಿ ತಮಗೆ ಬೇಕಾದಷ್ಟು ಹಣಗಳಿಸಿ ಶೇಕರಿಸಿದ ಹಣದ ಪ್ರಾಬಲ್ಯ ಮತ್ತು ತಮಗೆ ಧರ್ಮದ ಪಟ್ಟದ ಜತೆಗೆ ರಾಜಕೀಯ ಪಟ್ಟಭದ್ರ ಹಿತಾಸಕ್ತಿಗಳಿಂದ ರಕ್ಷಣೆ ಇದೆಯೆಂಬ ಭರವಸೆಯಲ್ಲಿ ಎಲ್ಲಾ ಮಿತಿಮೀರಿದ ಅತಿರೇಕಗಳನ್ನು ಮಾಡಿ ಧರ್ಮದ ಹೆಸರಿನಲ್ಲಿ ಅಮಾಯಕರಿಗೆ ಆವೇಶದ ಅಮಲನ್ನು ನೀಡಿ ಅದನ್ನೇ ತಮ್ಮ ರಕ್ಷಣೆಯ ಗುರಾಣಿಯಾಗಿಸಿದ್ದಾರೆ.ಪ್ರಗತಿಪರ ಬರಹಗಾರರೂ ಕೂಡ ಇತ್ಯಾದಿ ಬೆಕ್ಕು ಸನ್ಯಾಸಿಗಳಿಗೆ ಪರೋಕ್ಷದಲ್ಲಿ ಬೆಂಬಲದ ಮಾತನ್ನು ನೀಡುವುದು ವಿಪರ್ಯಾಸವೂ ವಿಶಾದನೀಯವೂ ಆಗಿದ್ದು ಧರ್ಮವೆಂಬ ಸೂಕ್ಸ್ಮ ವಿಚಾರದ ಮೂಲಕ ಅದರ ಪೀಟದಲ್ಲಿರುವ ಜನ ಯಾರನ್ನೂ ವಶೀಕರಿಸಲು ಸಾಧ್ಯ ಎಂದು ಸಾಬೀತುಪಡಿಸಿದ್ದಾರೆ.
    ಪ್ರೇಮಲತಾ ರವರು ಮಂಪರು ಪರೀಕ್ಷೆಗೆ ಸಿದ್ದವೆಂದಾದರೆ ರಾಘವೇಶ್ವರ ಎಂಬವರೂ ಸಿದ್ದರಾಗಬೇಕು ಎಂಬುವುದು ನ್ಯಾಯಬದ್ದವಾಗಿದೆ. ಕಾನೂನಿನ ಮುಂದೆ ಸ್ವಾಮಿ,ಮುಲ್ಲಾ, ಪಾದ್ರಿ, ಸಾಮಾನ್ಯ ಎಂಬ ವರ್ಗೀಕರಣ ಸಲ್ಲದು.

    Reply
      1. Ganesh

        Anagha, it is not blind believers. It is the support of those believers who have their self interest and gains in the name of such ‘Seers/Mutt/Mullahs/Priests’. Always such issues outburst once when these involved thugs come across differences. If you observe with detachment everyone is accused and everyone is a victim. Responsibility lies on everyone and starts from oneself. One should practice to keep distance (that is to be detached) from every action/happenings and apply his/her mind to decide write/wrong, and then act knowing the limitation.

        Reply
  7. Ganesh

    The article by Anupama Prasad is throwing light on the behavioral pattern of leaders. She has sighted a clear example of the ‘Justice Phaneedra’. It will be fruitful and the purpose of the article may be achieved if we the readers analyse such behaviors of the so called leaders (political/religious/social) during various similar incidents across the country, instead of focusing on this single incident and getting personal. This incident of Raghaveshara/Premalatha is one such example where the behavior of social/political/religious leaders are getting projected. Our energy needs to invested on educating ourselves and empowering the younger generation on the social values, moral responsibilities and ethical practice.

    Reply
  8. ak kukkaje

    The society should not excuse them for their any of criminal or illegal activities because of their religious title
    If once they are getting the confidence as “their follower’s religious sentiment will defending them from any of their major mistakes” then it will cause to develop more and more such an activities in particular establishments. It is either, Mutt, Darghas, Churches or their orphanages respectively.
    So that in this issue of Mr.Raghveshwar’s incident also government should take strict action like Mr. Ram pal’s incident of Haryana or as Mr. Nithyananda incident of Bidadi

    Reply

Leave a Reply

Your email address will not be published. Required fields are marked *