ತನಿಖೆಗೆ ಆದೇಶ

– ವರ್ತಮಾನ ಬಳಗ

ಸಚಿವ ವಿ.ಸೋಮಣ್ಣ ವಿರುದ್ಧದ ಆರೋಪಗಳ ತನಿಖೆಗೆ ಲೋಕಾಯುಕ್ತ ನ್ಯಾಯಾಲಯ ಆದೇಶ ನೀಡಿದೆ. ಅಪರಾಧ ದಂಡ ಸಂಹಿತೆ 156 (3) ವಿಧಿ ಅಡಿ ನ್ಯಾಯಾಧೀಶರಿಗೆ ಪ್ರದತ್ತವಾದ ಅಧಿಕಾರದ ಅನ್ವಯ ಪ್ರಕರಣ ದಾಖಲಿಸಲು ಆದೇಶಿಸಿದೆ. ಇನ್ನು ಮುಂದೆ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕಿದೆ.
ರವಿಕೃಷ್ಣಾ ರೆಡ್ಡಿ ನೀಡಿದ ದೂರಿನ ವಿಚಾರಣೆ ಆರಂಭವಾದಾಗಿನಿಂದ ಸಚಿವ ಸೋಮಣ್ಣ ಅಲ್ಲಲ್ಲಿ ಪ್ರತಿಕ್ರಿಯಿಸಿದ್ದಾರೆ. ಸುವರ್ಣ 24/7 ನ ಸಂದರ್ಶನದಲ್ಲಿ (ಟಾರ್ಗೆಟ್) ಸೋಮಣ್ಣ ತಮ್ಮನ್ನು ಸರ್ಮಥಿಸಿಕೊಳ್ಳುವ ಪ್ರಯತ್ನ ಮಾಡುವ ಭರದಲ್ಲಿ ತಪ್ಪನ್ನೂ ಒಪ್ಪಿಕೊಂಡರು. ತಾವು (ತಮ್ಮ ಪತ್ನಿ ಹೆಸರಿನಲ್ಲಿ) ಕೊಂಡ ಜಮೀನು ಡಿನೋಟಿಫೈ ಆಗಿಲ್ಲ ಎನ್ನುವ ಮಾಹಿತಿ ಅವರಿಗೆ ತಿಳಿದಿರಲಿಲ್ಲವಂತೆ. ಆ ಕಾರಣ ತಪ್ಪು ಆಗಿದ್ದರೂ ಅದು ಅವರಿಂದ ಆದದ್ದಲ್ಲ ಎನ್ನುವ ಸಮರ್ಥನೆ ಅವರದು.

ಧರ್ಮ ಸಿಂಗ್ ಅವರೇ ಡಿನೋಟಿಫೈ ಮಾಡಿದ್ದು, ನಂತರ ಅನಾವಶ್ಯಕವಾಗಿ ಯಡಿಯೂರಪ್ಪನವರ ಹೆಸರನ್ನು ತರಲಾಗಿದೆ ಎಂದು ಅವರು ಆರೋಪಿಸಿದರು. ಧರ್ಮ ಸಿಂಗ್ ಮೊದಲು ಡಿನೋಟಿಫೈಗೆ ಆದೇಶ ನೀಡಿದ್ದೇ ಆದರೆ ಅವರೂ ತಪ್ಪಿತಸ್ಥರೇ. ಪ್ರಕರಣ ವಿಚಾರಣೆ ವೇಳೆಯಲ್ಲಿ ನಿಜ ತಪ್ಪಿತಸ್ಥರ ಹೆಸರು ಬಯಲಾಗಲಿ.

ಆದೇಶ ಡಿನೋಟಿಫೈ ಆದೇಶ ಹೊರಬಂದದ್ದು ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ. ಅವರ ಆದೇಶದ ಅನ್ವಯ 22 ಗುಂಟೆ ಜಮೀನು ಡಿನೋಟಿಫೈ ಆಯಿತು. ಆ ಹೊತ್ತಿಗಾಗಲೇ ಸೋಮಣ್ಣ ಕುಟುಂಬದವರು ಶಾಲೆ ಕಟ್ಟಡ ಕಟ್ಟಿಯಾಗಿತ್ತು ಎನ್ನುವುದು ಗಮನಾರ್ಹ. ಒಬ್ಬ ಮಂತ್ರಿಯ ಮನೆಯವರು ಭೂಮಿಯ ಮೂಲ ದಾಖಲಾತಿಗಳನ್ನು ಗಮನಿಸದೇ ಕೊಳ್ಳುತ್ತಾರೆ ಎನ್ನುವುದು ನಂಬುವಂತಹ ಸಂಗತಿಯೆ? ಅವರು ಪ್ರಸ್ತುತ ಜಮೀನು ನೋಟಿಫೈ ಆಗಿದೆ ಎಂದು ತಿಳಿದೇ ಅದನ್ನು ಕೊಂಡದ್ದು ಮತ್ತು ಅದನ್ನು ಡಿನೋಟಿಫೈ ಮಾಡುವ ಸಾಮರ್ಥ್ಯ ಅವರಲ್ಲಿ ಇರುವ ಕಾರಣವೇ ಅಂತಹದೊಂದು ವ್ಯವಹಾರಕ್ಕೆ ಕೈ ಹಾಕಿದ್ದು ಎನ್ನುವುದನ್ನು ತಿಳಿಯಲು ಎಂಥವರಿಗೂ ಕಷ್ಟವಾಗಲಿಕ್ಕಿಲ್ಲ.

ಬಿಡಿಎ ವ್ಯಾಪ್ತಿಯಲ್ಲಿದ್ದ ಜಮೀನನ್ನು ಪರಭಾರೆ ಮಾಡಿದ್ದು ತಪ್ಪು. ಪರಭಾರೆ ಮಾಡಿಸಿಕೊಂಡದ್ದೂ ತಪ್ಪು. ಜಮೀನಿನ ಮೂಲ ಮಾಲೀಕ, ತಾನು ತನ್ನ ಜಮೀನನ್ನು ಸೋಮಣ್ಣನವರ ಕುಟುಂಬಕ್ಕೆ (ಕಾನೂನು ಬಾಹಿರವಾಗಿ) ಮಾರಾಟ ಮಾಡಿದ ಮೇಲೆ ಅದ್ಯಾವ ಆಧಾರದ ಮೇಲೆ ಡಿನೋಟಿಫೈ ಮಾಡಿ ಎಂದು ಮನವಿ ಸಲ್ಲಿಸಿದರು?

ಈಗಾಗಲೇ ಯಡಿಯೂರಪ್ಪ, ಕೃಷ್ಣಯ್ಯ ಶೆಟ್ಟಿ ಪರಪ್ಪನ ಅಗ್ರಹಾರಕ್ಕೆ ಹೋಗಿ ಬಂದ ಪ್ರಕರಣ ಇದಕ್ಕಿಂತ ಭಿನ್ನವಾಗೇನೂ ಇಲ್ಲ. ಹಾಗಿರುವಾಗ ಕೆಲವು ಮಾಧ್ಯಮ ಸಂಸ್ಥೆಗಳು ಮಾತ್ರ ಸೋಮಣ್ಣ ನಿರಪರಾಧಿ ಎನ್ನುವ ತೀರ್ಪನ್ನು ನ್ಯಾಯಾಲಯಕ್ಕೆ ಮೊದಲೇ ನೀಡುವ ಅವಸರ ತೋರಿದ್ದಾರೆ. ಅವರು ಹೇಳುವುದು ಇದು ಹಳೇ ಪ್ರಕರಣ. ಗಾಯಗಳಿಗೆ ಸೂಕ್ತ ಚಿಕಿತ್ಸೆ ಕೊಡದೇ ಇದ್ದರೆ ಅವು ಎಷ್ಟು ಕಾಲದ ನಂತರವಾದರೂ ಮರುಕಳಿಸಿಬಹುದು. ಅಂತೆಯೇ ಇದು. ಸೋಮಣ್ಣ ತಮ್ಮ ಮಾತಿನ ಧಾಟಿಯಲ್ಲಿ ‘ಪುಡಗೋಸಿ 22 ಗುಂಟೆ’ ಜಮೀನು ಎನ್ನುತ್ತಾರೆ. ಅವರಿಗೆ ಬೆಂಗಳೂರೆಂಬ ಊರಲ್ಲಿ 22 ಗುಂಟೆ ಪುಡಗೋಸಿ! ಯಾರ ಕಿವಿ ಮೇಲೆ ಹೂ ಮುಡಿಸುವ ಪ್ರಯತ್ನವಿದು?

ಸೋಮಣ್ಣ ತಾವು ತಪ್ಪಿತಸ್ಥರೆಂದು ಸಾಬೀತಾದರೆ ರಾಜಕಾರಣವನ್ನೇ ಬಿಡುತ್ತಾರಂತೆ. ಬೆಂಗಳೂರನ್ನೇ ಬಿಟ್ಟು ಬೇರೆಡೆಗೆ ಹೋಗುವುದಾಗಿಯೂ ಹೇಳಿದರು. ತಪ್ಪಿತಸ್ಥರೆಂದು ನ್ಯಾಯಾಲಯದಲ್ಲಿ ಸಾಬೀತಾದರೆ ಬೆಂಗಳೂರನ್ನು ಬಿಡುವ ಸಂದರ್ಭ ಎದುರಾಗಲಿಕ್ಕಿಲ್ಲ.

ಚಿತ್ರ: ದಿ ಹಿಂದು

 

7 thoughts on “ತನಿಖೆಗೆ ಆದೇಶ

 1. geleyaa

  idappa uttara andre!!
  dinapatrikegalu, channelgalu katte kayuttive. illa illa enjalu tindu teppagive. neevadru ishtu dhairya toristidiri. ade kushi.
  ravi avara arogya chennagilla endu odide. avaru bega gunamukharagali.

  Reply
 2. eshwar

  ಮೊದಲು ರವಿಯವರ ಆರೋಗ್ಯ ಬೇಗ ಸುಧಾರಿಸಲಿ. ರವಿಯಂಥವರು ಆರೋಗ್ಯವಾಗಿದ್ದರೆ ಮಾತ್ರ ಸೋಮಣ್ಣನಂಥ ಗೋಮುಖ ವ್ಯಾಗ್ರಗಳ ಬಣ್ಣ ಬಯಲು ಮಾಡಲು ಸಾಧ್ಯ. ಜಾತಿ ರಾಜಕಾರಣ ಮಾಡುತ್ತಾ ಸದಾ ಹಸಿ ಹಸಿ ಸುಳ್ಳುಗಳನ್ನ ಹೇಳುತ್ತಾ ನಿರ್ಲಜ್ಜತನ ಪ್ರದರ್ಶನ ಮಾಡೋ ಸೋಮಣ್ಣನಂಥವರಿಗೂ ಅಷ್ಟೇ ನಿರ್ಲಜ್ಜ ಪತ್ರಕರ್ತರು ಮಾತ್ರ ಸಪೋರ್ಟ ಮಾಡಲು ಸಾಧ್ಯ. ಕನ್ನಡ ಪ್ರಭದ ವರದಿಗೆ ಧಿಕ್ಕಾರ

  Reply
 3. g. mahanhesh.

  ಅಕ್ರಮ ಆಸ್ತಿ, ಭ್ರಷ್ಟಾಚಾರ, ಡಿ ನೋಟಿಫಿಕೇಷನ್ ಬಗ್ಗೆ ಸಾಫ್ಟ್​ವೇರ್ ತಂತ್ರಜ್ಞರು ದನಿ ಎತ್ತುತ್ತಿರುವುದು ನಿಜಕ್ಕೂ ಆರೋಗ್ಯಕರ ಬೆಳವಣಿಗೆ. ರವಿಕೃಷ್ಣಾರೆಡ್ಡಿ ಅವರು ಇದಕ್ಕೆ ಮೇಲ್ಪಂಕ್ತಿ ಹಾಕಿಕೊಟ್ಟಿರುವುದು ನಿಜಕ್ಕೂ ಶ್ಲಾಘನೀಯ. ಪ್ರಜ್ಞಾವಂತರು, ಬುದ್ಧಿಜೀವಿಗಳು ಇನ್ನಾದರೂ ಮುಖ್ಯಮಂತ್ರಿ, ಮಂತ್ರಿ ಮಹೋದಯರ ಭ್ರಷ್ಟಾಚಾರಗಳ ಬಗ್ಗೆ ದನಿ ಎತ್ತುವ ಮೂಲಕ ಪ್ರಜಾಪ್ರಭುತ್ವ ಉಳಿಸಲು ಮುಂದಾಗಬೇಕು. ಇದು ಸಾಧ್ಯವಾಗದಿದ್ದರೇ…….
  ಜಿ.ಮಹಂತೇಶ್‌

  Reply
 4. g.mahanthesh

  ಅಕ್ರಮ ಆಸ್ತಿ, ಭ್ರಷ್ಟಾಚಾರ, ಡಿ ನೋಟಿಫಿಕೇಷನ್ ಬಗ್ಗೆ ಸಾಫ್ಟ್​ವೇರ್​ ತಂತ್ರಜ್ಞರು ದನಿ ಎತ್ತುತ್ತಿರುವುದು ನಿಜಕ್ಕೂ ಆರೋಗ್ಯಕರ ಬೆಳವಣಿಗೆ. ರವಿಕೃಷ್ಣಾರೆಡ್ಡಿ ಅವರು ಇದಕ್ಕೆ ಮೇಲ್ಪಂಕ್ತಿ ಹಾಕಿಕೊಟ್ಟಿರುವುದು ನಿಜಕ್ಕೂ ಶ್ಲಾಘನೀಯ. ಪ್ರಜ್ಞಾವಂತರು, ಬುದ್ಧಿಜೀವಿಗಳು ಇನ್ನಾದರೂ ಮುಖ್ಯಮಂತ್ರಿ, ಮಂತ್ರಿ ಮಹೋದಯರ ಭ್ರಷ್ಟಾಚಾರಗಳ ಬಗ್ಗೆ ದನಿ ಎತ್ತಿ, ಮುಚ್ಚಿ ಹೋಗುತ್ತಿರುವ, ಹೋಗಲಿರುವ ಪ್ರಕರಣಗಳನ್ನ ಹೊರಗೆ ಹಾಕಬೇಕಿದೆ. ಇದು ಇವತ್ತಿನ ತುರ್ತು ಕೂಡ. ಇದು ಸಾಧ್ಯವಾದರೆ ಮಾತ್ರ ಪ್ರಜಾಪ್ರಭುತ್ವ ಉಳಿಯಬಹುದೇನೋ…..

  Reply
 5. Ananda Prasad

  ಸ್ವಾತಂತ್ರ್ಯ ಪೂರ್ವದಲ್ಲಿ ವಕೀಲರುಗಳು ದೇಶಕ್ಕಾಗಿ ಹೋರಾಡುವುದರಲ್ಲಿ ಮುಂಚೂಣಿಯಲ್ಲಿರುತ್ತಿದ್ದರು. ಇಂದು ವಕೀಲರು ಭ್ರಷ್ಟರನ್ನು ರಕ್ಷಿಸಲು, ಭ್ರಷ್ಟರ ಪರವಾಗಿ ವಾದಿಸಲು ಮುಂಚೂಣಿಯಲ್ಲಿ ನಿಂತಿದ್ದಾರೆ, ತನ್ಮೂಲಕ ಕೋಟ್ಯಂತರ ಹಣ ಗಳಿಸುತ್ತಿದ್ದಾರೆ. ಭ್ರಷ್ಟರ ಪರವಾಗಿ ವಾದಿಸಿ ಭ್ರಷ್ಟಾಚಾರದಿಂದ ಗಳಿಸಿದ ಹಣದ ಭಾಗವನ್ನು ತಮ್ಮ ಸಂಭಾವನೆಯಾಗಿ ಕೋಟಿಗಳ ಲೆಕ್ಕದಲ್ಲಿ ಪಡೆಯುವ ವಕೀಲರು ಭ್ರಷ್ಟರಲ್ಲವೇ? ಇಂಥ ವಕೀಲರು ಇರುವಾಗ ದೇಶ ಉದ್ಧಾರವಾದೀತೆ? ಇಂದು ಬರೇ ವಕೀಲರು ಮಾತ್ರವಲ್ಲ ಮಾಧ್ಯಮಗಳೂ ಭ್ರಷ್ಟರ ರಕ್ಷಣೆಗೆ ಮುಂಚೂಣಿಯಲ್ಲಿ ನಿಂತಿದ್ದಾರೆ. ಭ್ರಷ್ಟರ ಪರವಾಗಿ ಸಂದರ್ಶನ ಪ್ರಸಾರ ಮಾಡುವುದು ಇದರ ಒಂದು ಭಾಗವೇ ಆಗಿದೆ. ಇಂಥ ಭೀಕರ ಸನ್ನಿವೇಶದಲ್ಲಿ ರವಿಕೃಷ್ಣ ರೆಡ್ಡಿಯಂಥ ಸಾಫ್ಟ್ವೇರ್ ತಂತ್ರಜ್ಞರು ಹೋರಾಟಕ್ಕೆ ಮುಂದಾಗಿರುವುದು ದೇಶದ ಹಿತದೃಷ್ಟಿಯಿಂದ ಒಂದು ಉತ್ತಮ ಬೆಳವಣಿಗೆ. ಇದೇ ರೀತಿಯಲ್ಲಿ ಹೆಚ್ಚು ಹೆಚ್ಚು ಸಾಫ್ಟ್ ವೇರ್ ತಂತ್ರಜ್ಞರು ಇಂಥ ಹೋರಾಟಕ್ಕೆ ಕೈಗೂಡಿಸಬೇಕಾಗಿದೆ.

  Reply
 6. V.R.Carpenter

  ನಿಜವಾಗಿಯೂ ಆರು ಕೋಟಿ ಕನ್ನಡಿಗರು ಬಿ.ಜೆ.ಪಿ.ಗೆ ಆಶೀರ್ವದಿಸಿದ್ದಾರಾ?

  ಯಾವುದೇ ಬಿ.ಜೆ.ಪಿ. ಮಂತ್ರಿಗಳು, ಶಾಸಕರು, ಚೇಲಾಗಳು, ಚಮಚಾಗಳು, ಹುಟ್ಟಾ ಭ್ರಷ್ಟರು `ನಮಗೆ ಆರು ಕೋಟಿ ಕನ್ನಡಿಗರ ಆಶೀವರ್ಾದವಿದೆ’ `ಬಿ.ಜೆ.ಪಿಯನ್ನು ಆರು ಕೋಟಿ ಕನ್ನಡಿಗರು ಆಡಳಿತಕ್ಕೆ ತಂದಿದ್ದಾರೆ’ ಎಂದೆಲ್ಲಾ ಬೊಗಳೆ ಬಿಡುತ್ತಾ ಸ್ವಾಭಿಮಾನ, ನೈತಿಕತೆ ಮತ್ತು ಸಾತ್ವಿಕತೆ ಉಳಿಸಿಕೊಂಡಿರುವ ಕನ್ನಡಿಗರನ್ನು ಅಣಕ ಮಾಡುವ ರೀತಿಯಲ್ಲಿ ಅವಮಾನಿಸುತ್ತಿದ್ದಾರೆ, ನನಗೆ ಈಗ 30 ವರ್ಷ. 12 ವರ್ಷದಿಂದ ಮತದಾನ ಮಾಡುತ್ತಾ ಬಂದಿದ್ದೇನೆ, ಆದರೆ ಯಾವತ್ತೂ ಕೂಡ ಬಿ.ಜೆ.ಪಿ.ಗೆ ವೋಟು ಒತ್ತಿಲ್ಲ. ಸಾಂಗ್ಲಿಯಾನರಂಥ ವ್ಯಕ್ತಿ ನನ್ನ ಕ್ಷೇತ್ರದಲ್ಲಿ(ಯಲಹಂಕ) ನಿಂತಾಗ ಕೂಡ ಅವರಿಗೆ ವೋಟು ಹಾಕಲಿಲ್ಲ. ಮುಂದೆಯೂ ಕೂಡ! ಅಲ್ಲದೇ ನನ್ನಂತೆ ಯೋಚಿಸುವ ಕೋಟ್ಯಾಂತರ ಮಂದಿಗಳು ಈ ಕನರ್ಾಟಕದಲ್ಲಿ ಇದ್ದಾರೆ. ಇದನ್ನು ಕಾಂಗ್ರೆಸ್, ಜೆ.ಡಿ.ಎಸ್, ಕಮ್ಯೂನಿಸ್ಟ್ ಪಾಟರ್ಿ, ಇತರೆ ಪಕ್ಷಗಳ ಮುಖಂಡರ ಆಶೀವರ್ಾದಗಳೂ ಇವರಿಗೆ ದಕ್ಕಿಲ್ಲ. ಹೀಗಿರುವ ಪರಿಸ್ಥಿತಿಯಲ್ಲಿ ಈ ನಿಜವನ್ನು ಮರೆತು ತಿಂದ ಭ್ರಷ್ಟಾಚಾರದ ಎಂಜಲನ್ನು ಕನ್ನಡಿಗರ ಮುಖಕ್ಕೆ ಉಗುಳುವುದನ್ನು ಬಿಡಬೇಕೆಂದು ಆಗ್ರಹಿಸುತ್ತೇನೆ. ಬೇಕಾದರೆ ನಮ್ಮ ಹಿತೈಷಿ ಕನ್ನಡಿಗರು ಎಂದು ಎಂಜಲು ಕಾರಿಕೊಳ್ಳಿ!!!!!

  Reply

Leave a Reply

Your email address will not be published.