ಮೋದಿ ಮತ್ತವರ ಆನ್‌ಲೈನ್ ಭಕ್ತರ ಬಗ್ಗೆ ಅನಗತ್ಯ ಭಯ ಬೇಡ…


– ರವಿ ಕೃಷ್ಣಾರೆಡ್ದಿ


 

ಕಳೆದ ಎರಡು ದಿನಗಳಿಂದ ವರ್ತಮಾನ,ಕಾಮ್‌ನಲ್ಲಿ ನಡೆಯುತ್ತಿರುವ ಚರ್ಚೆ ಮತ್ತದರ ಸ್ವರೂಪ ನೋಡಿದರೆ ಕರ್ನಾಟಕದ ಮಟ್ಟಿಗಂತೂ ಮೋದಿಯವರ ಆನ್‌ಲೈನ್ ಭಕ್ತರ ಬಗ್ಗೆ ಮತ್ತವರ ಪ್ರಚಾರ ಭರಾಟೆಯ ಬಗ್ಗೆ ಪ್ರಜಾಪ್ರಭುತ್ವವಾದಿಗಳು ಮತ್ತು ಜಾತ್ಯತೀತವಾದಿಗಳು ಭಯಪಡುವುದು ಅನವಶ್ಯಕ ಎನ್ನಿಸುತ್ತದೆ.

ಇಲ್ಲಿಯವರೆಗೂ ಬಹುಪಾಲು ಜನ ಅಂದುಕೊಳ್ಳುತ್ತಿದ್ದೇನೆಂದರೆ, ಅಂತರ್ಜಾಲದಲ್ಲೆಲ್ಲ ಮೋದಿಯ ಭಕ್ತರೇ ತುಂಬಿಕೊಂಡಿದ್ದಾರೆ, ಮೋದಿಯೇ ನಮ್ಮೆಲ್ಲಾ ಕಷ್ಟಗಳನ್ನು ತೊಡೆಯಲು ಬರುತ್ತಿರುವ ಪವಾಡಪುರುಷ, ಮತ್ತು ಬಲಿಷ್ಟ ದೇಶವನ್ನು ಕಟ್ಟಲು ಅವರಿಂದ ಮಾತ್ರ ಸಾಧ್ಯ ಎಂದೆಲ್ಲಾ ಗಟ್ಟಿಯಾದ ಜನಾಭಿಪ್ರಾಯ ರೂಪಿಸುತ್ತಿದ್ದಾರೆ ಎಂದು. ಆದರೆ, ಈ ಗುಂಪಿನಿಂದ ಯಾವ ರೀತಿಯ ಜನಾಭಿಪ್ರಾಯ ರೂಪಿಸಲು ಸಾಧ್ಯವಿದೆ ಮತ್ತು ಇವರ ಮಾತುಗಳನ್ನು ಒಪ್ಪದ ಜನ ಹೇಗೆ ಯೋಚನೆ ಮಾಡುತ್ತಾರೆ ಎನ್ನುವುದು ಸ್ಪಷ್ಟವಾಗಿ ಕಾಣಿಸುತ್ತಿರಲಿಲ್ಲ. ಆನ್‌ಲೈನ್ ಭಕ್ತರು ಮಾತ್ರ ಮತದಾರರಲ್ಲ, ಮತ್ತು ಆನ್‌ಲೈನ್‌ ಆಗಿರುವವರೆಲ್ಲ ಮೋದಿ ಜಪ ಮಾಡುವವವರಲ್ಲ.

ನೆನ್ನೆ ವರ್ತಮಾನ.ಕಾ‌ನಲ್ಲಿ ಎಮ್.ಸಿ.ಡೋಂಗ್ರೆಯವರ “ಮೋದಿಯ ಸುಳ್ಳುಗಳಿಗೆ ದೇಶದ ಜನ ಮರುಳಾಗದಿರಲಿ” ಲೇಖನ ಪ್ರಕಟವಾಯಿತು. ಆ ಲೇಖನದಲ್ಲಿ ಅನೇಕ ಅಂಕಿಅಂಶಗಳಿದ್ದವು. ಕೆಲವನ್ನು ಎಷ್ಟೇ ನಿರಾಕರಿಸಿದರೂ ಮೋದಿಯ ಪರ ಕೆಲಸ ಮಾಡುವ ಅಂಕಿಅಂಶಗಳೂ ಅದರಲ್ಲಿ ಸ್ಥೂಲವಾಗಿ ಇದೆ. ಆದರೆ ಆ ಲೇಖನದ ಒಟ್ಟಾರೆ ಧ್ವನಿ ಗುಜರಾತಿನ ಅಭಿವೃದ್ಧಿಯ ಬಗ್ಗೆ ಪ್ರಶ್ನೆಗಳನ್ನೆತ್ತಿರುವುದೇ ಅಲ್ಲದೆ, ಅಲ್ಲಿ ಆಗಿರಬಹುದಾದ ಅಭಿವೃದ್ಧಿ ಕಾರ್ಯಗಳಿಗೆ modiಮೋದಿಯೊಬ್ಬರೇ ಕಾರಣಪುರುಷ ಅಲ್ಲ ಎನ್ನುವುದನ್ನು ತಿಳಿಸುತ್ತದೆ. ಮೋದಿಯನ್ನು ತಾರ್ಕಿಕವಾಗಿ ಮತ್ತು ಮಾಹಿತಿಯುಕ್ತವಾಗಿ ವ್ಯತಿರೇಕಿಸುವುದೇ ಮುಖ್ಯವಾಗಿರುವ ಆ ಲೇಖನ ವರ್ತಮಾನ.ಕಾಮ್ ಮಟ್ಟಿಗೆ ಅಂತರ್ಜಾಲದಲ್ಲಿ ವೈರಲ್ ಆಗಿ ಪ್ರಸರಿಸಿದಂತಹ ಲೇಖನ. ಸಾವಿರಾರು ಜನ ಆ ಲೇಖನವನ್ನು ಓದಿರುವುದೇ ಅಲ್ಲದೆ, ಸಾಕಷ್ಟು ಕಡೆ ಅದನ್ನು ಹಂಚಿಕೊಂಡಿದ್ದಾರೆ. ಫೇಸ್‌ಬುಕ್‌ನಲ್ಲಿ ಅದನ್ನು ಹಂಚಿಕೊಂಡಿರುವವರ ಮತ್ತು ಲೈಕ್ ಮಾಡಿದವರ ಸಂಖ್ಯೆಯೇ ಈ ಲೇಖನ ಬರೆಯುತ್ತಿರುವ ಹೊತ್ತಿನಲ್ಲಿ 800 ದಾಟಿದೆ. ಮತ್ತು ಹೀಗೆ ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿರುವವರಲ್ಲಿ ಯಾರೊಬ್ಬರೂ ಮೋದಿಯ ಭಕ್ತರಾಗಿರುವುದಿಲ್ಲ ಎನ್ನುವುದನ್ನು ನಾವು ಗಮನಿಸಬೇಕು. ಇಂತಹುದೊಂದು ದೊಡ್ದ ಗುಂಪು ನಿಶ್ಯಬ್ದವಾಗಿ ಇದೆ ಎನ್ನುವುದೇ ಅನೇಕ ವಿಷಯಗಳನ್ನು ಹೇಳುತ್ತದೆ.

ಈ ಲೇಖನ ಪ್ರಕಟವಾಗುವ ಹಿಂದಿನ ದಿನ ನಾನು ಬರೆದಿದ್ದ “ಮೋದಿ ಮತ್ತು ಭವಿಷ್ಯದ ಇತಿಹಾಸದ ಪುಟಗಳು” ಪ್ರಕಟವಾಗಿತ್ತು. ಅಂಕಿಅಂಶಗಳಿಲ್ಲದ ಆ ಲೇಖನ ಮೋದಿಯಂತಹ ಕಿಂಚಿತ್ತೂ ಪ್ರಾಯಶ್ಛಿತ್ತ ಮನೋಭಾವವಿಲ್ಲದ ವ್ಯಕ್ತಿ ಮತ್ತು ಯಡ್ಡಯೂರಪ್ಪನಂತಹ ಭ್ರಷ್ಟಚಾರಿಯೊಡನೆ ರಾಜಿ ಮಾಡಿಕೊಂಡಾದರೂ ಸರಿ ಅಧಿಕಾರ ಹಿಡಿಯುವ ನೀತಿಯ ಹಿಂದೆ ಇದ್ದಿರಬಹುದಾದ ಲಾಲಸೆ ಮತ್ತು ನೀತಿರಾಹಿತ್ಯದ ಬಗ್ಗೆ ಚರ್ಚಿಸಿತ್ತು. ಇದನ್ನು ನಾನು ಹೇಳಬಯಸಿದ್ದೇಕೆಂದರೆ ಕೇಂದ್ರದಲ್ಲಿಯ ಯುಪಿಎ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತ ಮತ್ತು ಅದರ ಬಗ್ಗೆ ಸಕಾರಣಗಳಿಗಾಗಿಯೇ ಕೋಪೋದ್ರಿಕ್ತರಾಗಿರುವ ಒಂದು ಗುಂಪು ಮೋದಿ ಭ್ರಷ್ಟಾಚಾರಿಯಲ್ಲ ಎಂದುಕೊಂಡು ಅವರನ್ನು ಬೆಂಬಲಿಸುತ್ತಿರುವುದು ಅರ್ಥಹೀನ ಎನ್ನುವ ಕಾರಣಕ್ಕೆ. ಭ್ರಷ್ಟಾಚಾರದ ವಿಷಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು. ಬಿಜೆಪಿ ಉತ್ತಮ ಎಂದುಕೊಂಡಿರುವವರು ಮುಗ್ಧರು ಇಲ್ಲವೇ ಅಜ್ಞಾನಿಗಳು. ಆದರೆ ಹೊಸದೇನನ್ನೂ ಹೇಳದೆ, ಇತಿಹಾಸದಲ್ಲಿ ನಾವು ಹೇಗೆ ದಾಖಲಾಗಬೇಕು ಎನ್ನುವ ಬಗ್ಗೆ ಈ ತಲೆಮಾರು ಎಚ್ಚರ ವಹಿಸಬೇಕು ಎಂದು ಹೇಳಿದ್ದ ನನ್ನ ಆ ಲೇಖನ ಮೇಲಿನ ಲೇಖನದಷ್ಟಲ್ಲದಿದ್ದರೂ ನನ್ನ ಊಹೆಗೂ ಮೀರಿ ಅಂತರ್ಜಾಲದಲ್ಲಿ ಹರಡಿದೆ.

ಮತ್ತೆ, ವರ್ತಮಾನ.ಕಾಮ್‌ನಲ್ಲಿ ಪ್ರಕಟವಾಗುವ ಲೇಖನಗಳ ವ್ಯಾಪ್ತಿ ದೊಡ್ದದಿದೆ. ಇದು ಕೇವಲ ಅಂತರ್ಜಾಲಕ್ಕೆ ಸೀಮಿತವಾಗಿಲ್ಲ. ರಾಜ್ಯದ ಅನೇಕ ಕಡೆಯ ಸ್ಥಳೀಯ ಆದರೆ ಪ್ರಭಾವಶಾಲಿಯಾಗಿರುವ ಅನೇಕ ದಿನಪತ್ರಿಕೆಗಳು ಮತ್ತು ವಾರಪತ್ರಿಕೆಗಳು ಇಲ್ಲಿ ಪ್ರಕಟವಾಗುವ ಲೇಖನಗಳನ್ನು ಪ್ರಕಟಿಸುತ್ತವೆ. ರಾಜ್ಯದ ಯಾವಯಾವುದೋ ಮೂಲೆಗಳಿಂದ ಆಗಾಗ ಪರಿಚಿತರು ಫೋನ್ ಮಾಡಿ ’ಇಂದು ಆ ಲೇಖನ ಇಂತಿಂಥ ಪತ್ರಿಕೆಯಲ್ಲಿ ಬಂದಿದೆ’ ಎನ್ನುತ್ತಾರೆ. ಮೋದಿಯ ಬಗ್ಗೆ ಇಲ್ಲಿ ಪ್ರಕಟವಾದ ಲೇಖನಗಳೂ ಸಹ ಮುದ್ರಿತ ರೂಪದಲ್ಲಿ ಸಹಸ್ರಾರು ಓದುಗರನ್ನು ಮುಟ್ಟಿವೆ.

ಈ ಹಿನ್ನೆಲೆಯಲ್ಲಿ ಹೇಳುವುದಾದರೆ, ಅಂತರ್ಜಾಲ ಕೇವಲ ಮೋದಿಯ ಭಕ್ತರಿಂದ ತುಂಬಿತುಳುಕಾಡುತ್ತಿಲ್ಲ. ಮತ್ತು ಮೋದಿಯನ್ನು ವಿರೋಧಿಸುವವರೆಲ್ಲ ಕಾಂಗ್ರೆಸ್‌ನ ನೀತಿಗಳನ್ನು ಮತ್ತು ಭ್ರಷ್ಟಾಚಾರವನ್ನು ಒಪ್ಪಿಕೊಂಡವರಾಗಲಿ, ವಿರೋಧಿಸದೇ ಉಳಿದವರಾಗಲಿ ಅಲ್ಲ. ಈ ದೇಶದಲ್ಲಿ ಪ್ರಜಾಪ್ರಭುತ್ವದ ಕಲ್ಪನೆಗೆ ವಿರುದ್ಧವಾಗಿರುವ rahul_priyanka_soniaವಂಶಪಾರಂಪರ್ಯ ಹಿಡಿತ ಹಾಗೂ ಅನಿಯಂತ್ರಿತ ಭ್ರಷ್ಟಾಚಾರದಿಂದ ಮುಳುಗಿರುವ ಕಾಂಗ್ರೆಸ್‌ ಪಕ್ಷವನ್ನು ಮತ್ತು ಜನಾಂಗಭೇದ ಪ್ರತಿಪಾದಿಸುವ, ಕಂದಾಚಾರ ಮತ್ತು ಸುಳ್ಳುಗಳ ಮೂಲಕ ಜನರನ್ನು ಉದ್ರೇಕಿಸುವ, ಭ್ರಷ್ಟಾಚಾರದ ವಿಷಯದಲ್ಲಿ ಕಾಂಗ್ರೆಸ್‌ಗೆ ಯಾವ ರೀತಿಯಲ್ಲಿಯೂ ಕಡಿಮೆಯಿಲ್ಲದ ಬಿಜೆಪಿ ಪಕ್ಷಗಳೆರಡನ್ನೂ ತ್ಯಜಿಸಿ ಇನ್ನೊಂದು ಪರ್ಯಾಯವನ್ನು ಕಟ್ಟುವ ಅಗತ್ಯ ದೇಶದ ಜನರ ಮುಂದಿದೆ. ಮತ್ತು ಅದಕ್ಕೆ ಸಮಯವೂ ಬಂದಿದೆ. ಪ್ರಜ್ಞಾವಂತ ಜನ ಅದನ್ನು ಪ್ರತಿಪಾದಿಸಬೇಕಿದೆ. ಮೋದಿಯನ್ನು ವಿರೋಧಿಸುವ ಒಂದೇ ಕಾರಣಕ್ಕೆ ಕಾಂಗ್ರೆಸ್ ಅನ್ನು ಬೆಂಬಲಿಸುವುದು ಅಪ್ರಬುಧ್ಹತೆಯಷ್ಟೇ ಅಲ್ಲ, ಅಪ್ರಾಮಾಣಿಕತೆಯೂ ಸಹ.

ಕಳೆದ ಎರಡು-ಮೂರು ಸಹಸ್ರ ವರ್ಷಗಳಲ್ಲಿ ಎಂತೆಂತಹವರನ್ನೋ ಈ ದೇಶ ಸಹಿಸಿಕೊಂಡಿದೆ. ಹೊರಗಿನವರ ದಾಳಿ, ಒಳಗಿನವರ ಸಂಕುಚಿತತೆ, ಇಲ್ಲಿಗೆ ಕಾಲಿಟ್ಟು ಇಲ್ಲಿಯೇ ಒಂದಾಗಿಹೋದ ಅನೇಕ ಜನಾಂಗಗಳು, ಸತ್ಯ ಮತ್ತು ನ್ಯಾಯದ ಪ್ರತಿಪಾದನೆಗೆ ಹುಟ್ಟಿಕೊಂಡ ಅನೇಕ ಸಾಂಸ್ಕೃತಿಕ ಹೋರಾಟಗಳು, ಕವಿಗಳು, ದಾರ್ಶನಿಕರು, ಬುದ್ಧ-ಬಸವ-ಗಾಂಧಿಯಂತಹ ಕಾಲಾತೀತರು; ಹೀಗೇ ವಿಶ್ವದಲ್ಲಿಯೇ ಅನನ್ಯವಾದ ಪರಂಪರೆ ಈ ದೇಶಕ್ಕಿದೆ. ಪ್ರಜಾಪ್ರಭುತ್ವದ ಪ್ರಸರಿಕೆ ಹಾಗೂ ನಮ್ಮ ಸಂವಿಧಾನ ಇಂದಿರಾ ಗಾಂಧಿಯೇ ಆಗಲಿ ಮೋದಿಯೇ ಆಗಲಿ, ಯಾವೊಬ್ಬ ಸರ್ವಾಧಿಕಾರಿಯೂ ಈ ದೇಶದ ಭವಿಷ್ಯವನ್ನು ತಮಗನ್ನಿಸಿದ ಹಾಗೆ ಬದಲಾಯಿಸಲಾಗದ ಕಟ್ಟುಪಾಡುಗಳನ್ನು ನಿರ್ಮಿಸಿವೆ. ಇಡೀ ವಿಶ್ವವೇ ಸಹಿಷ್ಣುತೆಯೆಡೆಗೆ, ದೇವರ ವಿಷಯದಲ್ಲಿ ನಾಸ್ತಿಕತೆ ಮತ್ತು ಅನಾಸಕ್ತಿಯಿಂದ ಕೂಡಿದ ಮತಾತೀತತೆಯೆಡೆಗೆ, ವಿಶ್ವಮಾನವತೆಯೆಡೆಗೆ ಹೊರಟಿರುವಾಗ, ಆ ನಿಸರ್ಗ ಶಕ್ತಿಗೆ ಎದುರಾಗಿ ಬರುವ ಕ್ಷುಲ್ಲಕ ವ್ಯಕ್ತಿಗಳನ್ನು ಈ ದೇಶ ಮತ್ತು ವಿಶ್ವ ನುಂಗಿ ಅರಗಿಸಿಕೊಳ್ಳಲಿದೆ. ಮೋದಿ ಯಾಕಾಗಿ ಪ್ರಧಾನಿಯಾಗಬಾರದು ಎನ್ನುವುದು ನ್ಯಾಯ ಮತ್ತು ಸತ್ಯದ ಕಾರಣಗಳಿಗಾಗಿ ಇರಬೇಕು. ಆದರೆ ಅದು ಮೋದಿ ಪ್ರಧಾನಿಯಾಗಿಬಿಟ್ಟರೆ ಅಯ್ಯೋ ಎನ್ನುವ ಭಯದಿಂದ ಹುಟ್ಟುವುದಾಗಿರಬಾರದು. ಭಯಭೀತರು ಅಂತಹ ಸಂದರ್ಭ ಬಂದುಬಿಟ್ಟರೆ ಶರಣಾಗುತ್ತಾರೆ ಇಲ್ಲವೇ ಭಯದಿಂದಲೇ ಸಾಯುತ್ತಾರೆ. ಸತ್ಯ ಮತ್ತು ನ್ಯಾಯದ ಕಾರಣಕ್ಕೆ ಎದುರಿಸುವವರು ಎಂತಹ ಸಂದರ್ಭದಲ್ಲೂ ಧೃತಿಗೆಡದೆ ಹೋರಾಡುತ್ತಾರೆ. ಈ ಗುಂಪಿನಲ್ಲಿ ನಾವು ಯಾರು ಎನ್ನುವುದಷ್ಟೆ ಮುಖ್ಯ.

13 thoughts on “ಮೋದಿ ಮತ್ತವರ ಆನ್‌ಲೈನ್ ಭಕ್ತರ ಬಗ್ಗೆ ಅನಗತ್ಯ ಭಯ ಬೇಡ…

  1. FhekuCongress

    Yesterday U People have deleted my comment and now talking about online Modi disciples. Keep it up #fekucongress supporters….
    Jai Ho Ravi Krishna Reddy!

    Reply
    1. indra

      ಯಾರು ಏನೇ ತಿಪ್ಪರಲಾಗ ಹಾಕಿದರು ಮೋದಿ ಪ್ರಧಾನ ಮಂತ್ರಿ ಆಗೋದು ಶತ ಸಿದ್ಧ , ಇವತ್ತು ಮೋದಿ ಭಾಷಣಕ್ಕೆ ಲಕ್ಷಾಂತರ ಜನ ಬರುತ್ತಿದ್ದರೆ, ನಿಮಗೆ ತಾಖತ್ತು ಇದ್ದಾರೆ ಮೋದಿ ಭಾಷಣಕ್ಕೆ ಜನ ಸೇರದಂತೆ ತಡೆಯಿರಿ

      Reply
  2. narayan k

    Duddukotre lakshantara jana yaake koti koti ne barthare. nodi idu taakattina prashne alla. moodige, avara paravaagi bomda bajayistha iruva nimage nijvaglu takattidre Hindu fasisam na bittu ee deshada bhahu samskrutiyannu, nambikegallu gowravisi, moodi pradani agthare anno matrakke ee deshadalli kruravaagiruva jaathiyate yenu hogbidalla, badalige seemita gumpaada Rss, hindu moolabhutavaadigalige kushi agbhade orthu
    idara bagge maanaviyateyannu usiraaduva jana Athanka pado avashyakate kandita illa. Demacracy munde moodi yenu greatu alla.

    Reply
    1. nithin

      neevu yenthaa democracy matte yentha jaathiyathe bagge mathadtri marre.. iduvarege ide thara mathadine namma desha haalagiddu .. maanviyathe barudu vyakthi aa thara samskrathi meredaga mathra … swathantrya bandagind anodta iddivi congress na saadhane… omme nimmannu neeve aatmavane maadkolli nimge gottagutte… innu nimge gottagilla andre nimge olledu yavdu kettaddu yavdu annodu gottilla antha ne artha.. thnks..

      Reply
  3. Mallikarjuna Jalageri

    ರವಿ,
    ನಮ್ಮ ಸಮಸ್ಯೆ ಅಂದ್ರೆ, ಮೋದಿಗೆ ವೋಟ್ ಮಾಡ್ದೇ ಇದ್ರೆ, ನಮಗೆ ಇನ್ನು ಐದು ವರ್ಷ National Advisory Council ನವರ ಐಡಿಯಾಗಳಿಗೆ ತಲೆ ಕೊಡಬೇಕು.
    ಬೇರೆ ದಾರಿ ಯಾವುದಿದೆ?
    ಅರವಿಂದ ಕೇಜ್ರಿವಾಲ್, ಲೋಕಸತ್ತಾ, ಇವು ಯಾವ್ದೂ ಕೂಡಾ ಬಹುಮತ ಪಡೆಯಲಾರವು….

    Reply
  4. Ananda Prasad

    ಮೋದಿ ಒಬ್ಬ ಮುತ್ಸದ್ಧಿ ನಾಯಕ ಅಲ್ಲ. ಗೋಧ್ರಾ ರೈಲು ಅಗ್ನಿ ದುರಂತದಲ್ಲಿ ಸುಟ್ಟು ಕರಕಲಾದ ಕರಸೇವಕರ ಶವಗಳನ್ನು ಅಹಮದಾಬಾದಿಗೆ ತಂದು ಮೆರವಣಿಗೆ ಮಾಡಲು ಉನ್ನತ ಪೋಲೀಸ್ ಅಧಿಕಾರಿಗಳ ಸಲಹೆಗೆ ವಿರುದ್ಧವಾಗಿ ಅವಕಾಶ ಕೊಟ್ಟದ್ದು ಗುಜರಾತ್ ರಾಜ್ಯದಾದ್ಯಂತ ಗಲಭೆ ಮಿಂಚಿನ ವೇಗದಲ್ಲಿ ಹಬ್ಬಲು ಕಾರಣವಾಯಿತು. ಒಬ್ಬ ಮುತ್ಸದ್ಧಿ ನಾಯಕ ಇಂಥ ಕ್ರಮಗಳಿಗೆ ಅವಕಾಶ ಕೊಡುತ್ತಿರಲಿಲ್ಲ ಆದರೆ ಮೋದಿ ಇದರಿಂದ ತನಗೆ ಹಾಗೂ ತನ್ನ ಪಕ್ಷಕ್ಕೆ ಲಾಭ ಆಗಲಿದೆ ಎಂದೇ ಇಂಥದಕ್ಕೆ ಅವಕಾಶ ಕೊಟ್ಟರು. ನಂತರ ವಾಜಪೇಯಿ ರಾಜಧರ್ಮ ಪಾಲಿಸಿ ಎಂದು ಹೇಳಿದಾಗಲೂ ಅದನ್ನು ಪಾಲಿಸದೆ ಗಲಭೆಗಳಿಂದ ತನಗೆ ಹಾಗೂ ಪಕ್ಷಕ್ಕೆ ಎಷ್ಟು ಲಾಭ ಆಗಬಹುದು ಎಂಬುದನ್ನೇ ನೋಡಿದರು. ತನ್ನ ಶಿಷ್ಯನ ನಿರ್ಧಾರಗಳನ್ನು ಗುರು ಅಡ್ವಾಣಿಯವರು ಬಲವಾಗಿ ಬೆಂಬಲಿಸಿ ತಾನೂ ಕೂಡ ಮತ್ಸದ್ಧಿ ನಾಯಕ ಅಲ್ಲ ಎಂಬುದನ್ನು ಸಾಬೀತುಪಡಿಸಿದರು. ಮೋದಿಯವರು ಸಾಕ್ಷ್ಯಗಳ ಆಧಾರದ ಮೇಲೆ ತೀರ್ಪು ನೀಡುವ ನ್ಯಾಯ ವ್ಯವಸ್ಥೆಯ ದೌರ್ಬಲ್ಯದಿಂದ ಗುಜರಾತ್ ಗಲಭೆಗಳಲ್ಲಿ ತಪ್ಪಿತಸ್ಥ ಅಲ್ಲ ಎಂದು ಪಾರಾಗಿರಬಹುದು ಆದರೆ ದೇಶದ ಪ್ರಜ್ಞಾವಂತ ಜನ ಮೋದಿ ತಪ್ಪಿತಸ್ಥ ಅಲ್ಲ ಎಂದು ಒಪ್ಪಿಕೊಳ್ಳುವುದಿಲ್ಲ. ಗಾಂಧಿ ಹತ್ಯೆಯಲ್ಲಿ ಸಾವರ್ಕರ್ ಪಾತ್ರ ಸಾಬೀತುಪಡಿಸುವ ಸಾಕ್ಷ್ಯ ಇಲ್ಲವೆಂದು ಸಾವರ್ಕರ್ ನ್ಯಾಯಾಲಯದಿಂದ ತಪ್ಪಿತಸ್ಥ ಅಲ್ಲ ಎಂದು ತೀರ್ಪು ಬಂದಿರಬಹುದು ಆದರೆ ದೇಶದ ಬಹುತೇಕ ಜನ ಸಾವರ್ಕರ್ ಗಾಂಧಿ ಹತ್ಯೆಯಲ್ಲಿ ಶಾಮೀಲಾಗಿದ್ದಾರೆ ಹಾಗಾಗಿ ಅವರು ತಪ್ಪಿತಸ್ಥ ಎಂದೇ ತಿಳಿದಿದ್ದಾರೆ. ಹೀಗಾಗಿಯೇ ಸಾವರ್ಕರ್ ಅಪ್ರತಿಮ ದೇಶಭಕ್ತರಾದರೂ ಕಳಂಕಿತರಾಗಿಯೇ ಇತಿಹಾಸದಲ್ಲಿ ದಾಖಲಾಗಿದ್ದಾರೆ. ಗಾಂಧಿ ಹತ್ಯೆಯಾದಾಗ ಸಾವರ್ಕರ್ ನಿವಾಸದ ಮೇಲೆ ನಡೆದ ಜನಸಮೂಹದ ದಾಳಿ ಇದನ್ನು ಎತ್ತಿ ಹಿಡಿಯುತ್ತದೆ. ಮೋದಿಯೂ ಕೂಡ ಅಪ್ರತಿಮ ದೇಶಭಕ್ತರಾದರೂ ಇತಿಹಾಸದಲ್ಲಿ ಗುಜರಾತ್ ಗಲಭೆ ವಿಷಯದಲ್ಲಿ ತಪ್ಪಿತಸ್ಥರಾಗಿಯೇ ಉಳಿಯಲಿದ್ದಾರೆ ಇದನ್ನು ತಪ್ಪಿಸಲು ಸಾಧ್ಯವಿಲ್ಲ.

    ಮೋದಿಯವರಿಗೆ ಕೂಡ ಅವರ ಹಿಂಬಾಲಕರು ಎಷ್ಟೇ ಬೊಬ್ಬೆ, ಪ್ರಚಾರ ಮಾಡಿದರೂ ಕೂಡ ಬಹುಮತ ಬರುವ ಸಂಭವ ಇಲ್ಲವೇ ಇಲ್ಲ ಎಂದು 100 % ಗ್ಯಾರಂಟಿಯಾಗಿ ಹೇಳಬಹುದು. ಅವರು ಪ್ರಧಾನಿಯಾದರೂ ಗುಜರಾತಿನಲ್ಲಿ ಆಡಳಿತ ಮಾಡಿದಂತೆ ಆಡಳಿತ ಮಾಡಲು ಮಿತ್ರ ಪಕ್ಷಗಳು (ಮಿತ್ರಪಕ್ಷಗಳನ್ನು ಒಟ್ಟುಗೂಡಿಸಲು ಅವರು ಸಮರ್ಥರಾದರೆ) ಬಿಡುವ ಸಂಭವ ಇಲ್ಲ. ಗುಜರಾತಿನಲ್ಲಿ ಅವರಿಗೆ 2/3 ಬಹುಮತ ಅಥವಾ ಅದರ ಹತ್ತಿರ ಹತ್ತಿರ ಬಹುಮತ ಇದೆ. ಅವರು ಪ್ರಧಾನಿಯಾದರೂ ತಮ್ಮ ಸ್ವಾರ್ಥ ಸಾಧಿಸಿಕೊಳ್ಳುವ ಪ್ರಾದೇಶಿಕ ಪಕ್ಷಗಳ ನಿರಂತರ ಬೇಡಿಕೆಗಳನ್ನು ಈಡೇರಿಸಲೇಬೇಕಾಗುತ್ತದೆ. ಇವುಗಳನ್ನು ಸಂಭಾಳಿಸಿಕೊಂಡು ಆಡಳಿತ ನಡೆಸುವುದು ಎಷ್ಟು ಕಷ್ಟ ಎಂದು ಅವರಿಗೆ ಆಗ ಅರ್ಥ ಆದೀತು. ಮನಮೋಹನ ಸಿಂಗರನ್ನು ಮೂದಲಿಸಿದಷ್ಟು ಸುಲಭ ಅಲ್ಲ ಸಮ್ಮಿಶ್ರ ಸರಕಾರ ಸಂಭಾಳಿಸುವುದು.

    ಒಬ್ಬ ನಾಯಕನ ಗುಣ, ವ್ಯಕ್ತಿತ್ವ ಎಂಥದು ಎಂಬುದು ಅವನ ಹಿಂಬಾಲಕರಿಂದ ತಿಳಿಯಬಹುದು. ಮೋದಿಯ ಹಿಂಬಾಲಕರು ಮೋದಿಯನ್ನು ವಿರೋಧಿಸುವವರ ಮೇಲೆ ನಡೆಸುತ್ತಿರುವ ಕುಹಕ, ಮೂದಲಿಕೆ, ತಿರಸ್ಕಾರ, ಬೆದರಿಕೆ, ಬೈಗುಳ ಇವುಗಳೇ ಸಾಕು ಮೋದಿಯವರ ಬೆಳವಣಿಗೆಯನ್ನು ತಡೆಯಲು ಮತ್ತು ಮೋದಿಯವರ ವ್ಯಕ್ತಿತ್ವ ಎಂಥದು ಎಂದು ತಿಳಿಯಲು . ಅಂತರ್ಜಾಲದಲ್ಲಿ ಮೋದಿ ಹಿಂಬಾಲಕರು ಬಳಸುವ ವಿಕೃತ, ಅಸಂಸ್ಕೃತ , ಕುಹಕ, ಮೂದಲಿಕೆ, ಬೆದರಿಕೆ, ಬೈಗುಳದ ಭಾಷೆ ನೋಡಿದರೆ ಮೋದಿಯ ಭಾರತ ಮುಂದೆ ಯಾವ ರೀತಿ ಬದಲಾಗಬಹುದು ಎಂಬುದರ ಒಂದು ಮುನ್ನೋಟ ಸಿಗುತ್ತದೆ. ಮೋದಿಗೆ ನಿಜವಾಗಿಯೂ ಪ್ರಧಾನಿ ಆಗಬೇಕು ಎಂದಿದ್ದರೆ ಇಂಥ ತಮ್ಮ ಹಿಂಬಾಲಕರ ಕುಹಕ, ಮೂದಲಿಕೆ, ತಿರಸ್ಕಾರ, ಬೈಗುಳ, ಬೆದರಿಕೆಗಳನ್ನು ನಿಯಂತ್ರಿಸುತ್ತಿದ್ದರು. ಒಬ್ಬ ಮುತ್ಸದ್ಧಿ ನಾಯಕ ತನ್ನ ಹಿಂಬಾಲಕರನ್ನು ಸಭ್ಯ ಹಾಗೂ ಸುಸಂಸ್ಕೃತ ಭಾಷೆ ಬಳಸಲು ಕಲಿಸುತ್ತಾನೆಯೇ ಹೊರತು ಕೀಳು ಮಟ್ಟದ ಬೆದರಿಕೆ, ಬೈಗುಳ, ಕುಹಕದ ಭಾಷೆ ಬಳಸಲು ಬಿಡಲಾರ.

    Reply
    1. aveenkumarp

      ಆನಂದ ಪ್ರಸಾದ್,
      ಆಗಲೇ ಬೇಕಾಗುತ್ತದೆ… ಮಾಡಲೇ ಬೇಕಾಗುತ್ತದೆ ಎನ್ನುವ ಭವಿಷ್ಯತ್ಕಾಲದ ಅಪಾನಬಿಕೆಗೆ ಪಕ್ಕಾಗಿ ಎಲ್ಲವನ್ನೂ ಒಂದೇ ತಕ್ಕಡಿಯಲ್ಲಿ ತೂಗುವ ಹುಂಬ ಮನಸ್ಥಿತಿ ಅವಶ್ಯಕತೆ ಇದೆಯಾ? ಸತತ 3 ಬಾರಿ ತನ್ನ ಸ್ವ-ವಕ್ತಿತ್ವದಿಂದಲೇ ಮುಖ್ಯಮಂತ್ರಿಯಾಗಿ ಆರಿಸಿ ಬರುತ್ತಿರುವ ವ್ಯಕ್ತಿ ರಾಜ್ಯಕ್ಕಲ್ಲ ದೇಶಕ್ಕೆ 24/7 ವಿದ್ಯುತ್ ಕೊಡುತ್ತೇನೆ, ಕೆಲಸ ನೀಡುತ್ತೇನೆ, ದೇಶದ ಗಡಿಯಲ್ಲಿ ಹೊರಗಿನವರು ಪುಂಡಾಟ ಮಾಡಲು ಬಿಡೆನು ಎನ್ನುವುದೇ ತಪ್ಪೆನ್ನುವಂತೆ ಮಾತಾಡುವ ಅವಶ್ಯಕತೆ ಏನಿದೆ?

      ಭಟ್ಟಂಗಿಗಳು ಊದುವ ಪುಂಗಿ ನಾದವೆ ತಮಗೆ ಹಿತವೆನಿಸುವಂತಿದೆ. ಯಾರೋ ಬಂದರೂ ಅದೇ ರಾಗ ಅನ್ನುವ ಮನಸ್ಥಿತಿ ನಿಮ್ಮದಿದ್ದರೆ ಹೊಸಬರಿಗೆ ಅವಕಾಶ ಕೊಡಿ… ಹೇಗೂ ಬದಲಾಗುವುದಿಲ್ಲ ಎನ್ನುವ ಭಾವ ನಿಮ್ಮದು. ಉದ್ದಾರ ಆದರೆ ನಿಮಗಷ್ಟೇ ಅಲ್ಲ ದೇಶಕ್ಕೂ ಉಪಯೋಗ….ಹಾಳಾಗಬಹುದು ಎನ್ನುವುದಕ್ಕೆ ಹಲಾಗದೆ ಉಳಿದಿರುವುದು ಏನೇನೂ ಇಲ್ಲ.

      ಮತ್ತೆ ಮತ್ತೆ ನಿಮ್ಮ ಗೋಧ್ರಾ ಭೂತದ ಕನವರಿಕೆ ಬಗ್ಗೆ: ಒಮ್ಮೆ ಸಮ ಚಿತ್ತದಿಂದ ಕೆಳಗಿನ ಅಂಕಣವನ್ನು ಓದಿ. ಸತ್ಯ ನನಗಲ್ಲದೆ ಇನ್ನಾರಿಗೂ ತಿಳಿದಿಲ್ಲ ಎನ್ನುವ ಭಂಡತನ ಬೇಡ.
      http://koenraadelst.bharatvani.org/articles/fascism/godhra.html

      Reply
      1. Ananda Prasad

        ಗೋಧ್ರಾದ ಭೂತ ಎಲ್ಲಾ ಪ್ರಜ್ಞಾವಂತ ಭಾರತೀಯರನ್ನೂ ಕಾಡುತ್ತಿರುವುದು ನಿಜ ಮತ್ತು ಪ್ರಜಾಪ್ರಭುತ್ವದ ಹಿತದೃಷ್ಟಿಯಿಂದ ಹಾಗೆ ಕಾಡಬೇಕಾಗಿರುವುದು ಆರೋಗ್ಯಪೂರ್ಣ ಮನೋಸ್ಥಿತಿಯೂ ಹೌದು. ಹಾಳಾಗದೆ ಉಳಿಯಲು ಏನು ಉಳಿದಿದೆ ಎಂದು ನೀವು ಕೇಳಿದ್ದೀರಿ. ಭಾರತದಲ್ಲಿ ಇಂದಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಕಾಂಗ್ರೆಸ್ ಆಳ್ವಿಕೆಯಲ್ಲಿ ತಕ್ಕಮಟ್ಟಿಗಾದರೂ ಉಳಿದುಕೊಂಡಿದೆ. ನರೇಂದ್ರ ಮೋದಿ ಹಾಗೂ ಸಂಘ ಪರಿವಾರದ ಆಡಳಿತ ಬಂದರೆ ಅದೂ ಉಳಿಯುತ್ತದಾ ಎಂಬ ಆತಂಕ ಎಲ್ಲ ಪ್ರಜ್ಞಾವಂತರನ್ನೂ ಕಾಡುತ್ತಿದೆ. ಭೀತಿ ಇರುವುದು ಮೋದಿ ಬಗ್ಗೆ ಮಾತ್ರವಲ್ಲ ಮೋದಿಯನ್ನು ಮುಂದೆ ಬಿಟ್ಟುಕೊಂಡು ಹಿಂಬಾಗಿಲಿನ ಆಡಳಿತ ನಡೆಸುವ ಸಂಘ ಪರಿವಾರದ ಬಗ್ಗೆಯೂ ಪ್ರಜ್ಞಾವಂತರಿಗೆ ಭೀತಿ ಇದೆ. ಹೀಗಾಗಿಯೇ ಪ್ರಜ್ಞಾವಂತರು, ಬುದ್ಧಿಜೀವಿಗಳು ಮೂಲಭೂತವಾದ, ಪ್ರತಿಗಾಮಿತನ, ಸರ್ವಾಧಿಕಾರ ಹಾಗೂ ಭ್ರಷ್ಟತೆ ಇವುಗಳ ನಡುವೆ ಆಯ್ಕೆಯ ಪ್ರಶ್ನೆ ಬಂದಾಗ ಭ್ರಷ್ಟತೆ ಕಡಿಮೆ ಅಪಾಯಕಾರಿಯಾಗಿರುವ ಕಾರಣ ಭ್ರಷ್ಟತೆಯಾದರೂ ಆದೀತು ಸರ್ವಾಧಿಕಾರ, ಮೂಲಭೂತವಾದ, ಪ್ರತಿಗಾಮಿತನ ಬೇಡ ಎಂದು ಹೇಳುತ್ತಾರೆ. ವಿಶ್ವದಾದ್ಯಂತ ಬುದ್ಧಿಜೀವಿಗಳ ಇದೇ ರೀತಿಯ ನಿಲುವನ್ನು ಹೊಂದಿದ್ದಾರೆ. ಇದು ಸರಿಯಾದ, ಆರೋಗ್ಯಕರವಾದ ನಿಲುವೂ ಹೌದು.

        Reply
  5. krishna Murthy

    ಎಂಥೆಂಥ ರಾಜಕಾರಣಿಗಳನ್ನು ನಾವು ನೋಡಿಯಾಯಿತು. ಪ್ರತಿಬಾರಿಯೂ ಜನ ಬದಲಾವಣೆ ಇಷ್ಟ ಪಡುತ್ತಾರೆ. ಎಲ್ಲಾ ರಾಜಕಾರಣಿಗಳ ಹಿಂದೆ, ರಾಜಕೀಯ ಪಕ್ಷಗಳ ಹಿಂದೆ ಕಪಟ, ಮೋಸಗಾರಿಕೆ, ಕುತಂತ್ರ, ಪರಿಸ್ಥಿತಿಗೆ ತಕ್ಕಂತೆ ಬದಲಾವಣೆಯಾಗುವ ಮುಖವಾಡ ಎಲ್ಲಾ ಇರುತ್ತೆದೆ. ಇಂತಹ ರಾಜಕಾರಣಿ ನಮ್ಮ ದೇಶಕ್ಕೆ ಬೇಕು ಎನ್ನುವ ನಾಯಕ ಇಲ್ಲದ ಮೇಲೆ ಮೋದಿಯನ್ನು ಜನ ಒಪ್ಪಿಕೊಂಡರೆ ತಪ್ಪೇನು? ಮೋದಿ ಮೇಲಿರುವ ಆರೋಪ ಎಲ್ಲಾ ಪಕ್ಷಗಳ ನಾಯಕರ ಮೇಲೂ ಇದೆ.

    Reply
  6. Kodava

    ಅಲ್ಲಾ ಸ್ವಾಮಿ ನಾವು ಭಾರತೀಯರು .. ಎಂಥ ಎಂಥವರಿಗೆಲ್ಲ ನಮ್ಮ ದೇಶದ ಆಡಳಿತ ಕೊಟ್ಟಿಲ್ಲ ?? ಮೊಗಲರು , ಬ್ರೀಟೀಷರು , ಒಳ್ಳೆಯವರು , ಕೆಟ್ಟವರು , ಭ್ರಷ್ಟಾಚಾರಿಗಳು , ನಾಲಾಯಕ್ ಗಳು , ಕೊಳ್ಳೆ ಹೊಡೆಯುವವರು !! ಅವರಿಗೆಲ್ಲಾ ಹೋಲಿಸಿದರೆ ( ಹೋಲಿಸಲು ಸಾಧ್ಯವಿಲ್ಲ ) ಮೋದಿ ಯಾವ ಸಾಲಿನಲ್ಲೂ ಸೇರುವುದಿಲ್ಲ . ಕಾಮಾಲೆ ( ಕೈ ) ಕಣ್ಣಿನಿಂದ ಹೊರಬಂದು ನೋಡಿದರೆ ಒಬ್ಬ ಸಚ್ಚಾರಿತ್ರ ವ್ಯಕ್ತಿ ಮೋದಿ . ಅವರ ಬಗ್ಗೆ ಯಾವ ಆರೊಪಗಳಿಲ್ಲ . ಇದ್ದಾರೆ ಅವೆಲ್ಲ ಕಾಮಾಲೆ ( ಕೈ ) ಕಣ್ಣಿನವು . ಇಂಥ ವ್ಯಕ್ತಿಯ ಬಗ್ಗೆ ಸುಮ್ಮನೆ ಕೊಂಕು ಮಾತನಾಡುವುದನ್ನು ಬಿಡಿ ಮೊದಲು . ಎಲ್ಲರಿಗೂ ಆಡಳಿತ ಕೊಟ್ಟು ಅವರ ಯೋಗ್ಯತೆ ಏನು ಅಂತ ತಿಳಿದಾಯಿತು . ಬದಲಾವಣೆ ತರೋಣ . ದೇಶವನ್ನು ಮುನ್ನಡೆಸೋಣ … ದೇಶ ಕೊಳ್ಳೆ ಹೊಡೆದವರಿಗೆ ಸರಿಯಾದ ಪಾಠ ಕಲಿಸೋಣ .

    Reply
    1. Ananda Prasad

      ಮೋದಿ ಸಚ್ಚಾರಿತ್ಯದ ವ್ಯಕ್ತಿಯಾಗಿದ್ದರೆ ಮೊದಲು ಸಂಘ ಪರಿವಾರದ ಚಿಂತನೆಗಳಿಂದ ಹೊರಬರುತ್ತಿದ್ದರು ಮತ್ತು ಬಿಜೆಪಿಯಿಂದಲೂ ಹೊರಬರುತ್ತಿದ್ದರು. ಗುಜರಾತಿನಲ್ಲಿ ಲೋಕಾಯುಕ್ತ ನೇಮಕ ಮಾಡದೆ ಇರುವುದು ಏನನ್ನು ಸೂಚಿಸುತ್ತದೆ? ಗುಜರಾತಿನಲ್ಲಿ ಲೋಕಾಯುಕ್ತ ನೇಮಕ ಮಾಡುವ ಕಾಯ್ದೆಗೆ ತಿದ್ದುಪಡಿ ತಂದು ಆಡಳಿತ ಪಕ್ಷದ ಮೂಗಿನ ನೇರಕ್ಕೆ ನಡೆಯುವ ವ್ಯಕ್ತಿಯನ್ನು ನೇಮಕ ಮಾಡಲು ಅನುವು ಮಾಡಿಕೊಡುವ ಬದಲಾವಣೆ ತಂದದ್ದು ಯಾಕಾಗಿ? ಇದರಿಂದ ಲೋಕಾಯುಕ್ತ ದುರ್ಬಲಗೊಳ್ಳುವುದಿಲ್ಲವೇ? ಹೀಗೆ ಮಾಡಿದ್ದು ಯಾಕಾಗಿ? ಬಿಜೆಪಿ ಶುದ್ಧ ಚಾರಿತ್ರ್ಯದ ಪಕ್ಷವಾಗಿದ್ದರೆ ಪಾರ್ಟಿ ಫಂಡಿಗೆ ದೊರಕುವ ಹಣದ ಮೂಲ ಬಹಿರಂಗಪಡಿಸದಂತೆ ಆರ್. ಟಿ. ಐ. ಕಾಯ್ದೆಗೆ ತಂದ ತಿದ್ದುಪಡಿಗೆ ಇತರ ಪ್ರಮುಖ ಪಕ್ಷಗಳ ಜೊತೆ ನಿಂತು ಬೆಂಬಲ ಕೊಟ್ಟದ್ದು ಯಾಕೆ? ಯಾಕೆ ಬಿಜೆಪಿ ಆಮ್ ಆದ್ಮಿ ಪಕ್ಷದಂತೆ ತನ್ನ ಪಾರ್ಟಿ ಫಂಡಿಗೆ ಸಿಗುವ ಹಣವನ್ನು ತನ್ನ ವೆಬ್ ಸೈಟಿನಲ್ಲಿ ಬಹಿರಂಗ ಪಡಿಸುವುದಿಲ್ಲ? ಬಿಜೆಪಿ ಇತರ ಪಕ್ಷಗಳಿಗಿಂತ ಭಿನ್ನ ಹಾಗೂ ಶುದ್ಧ ಚಾರಿತ್ರ್ಯದ ಪಕ್ಷ ಎಂದಾದರೆ ಆಮ್ ಆದ್ಮಿ ಪಕ್ಷದಂತೆ ತನ್ನ ಪಕ್ಷದ ಹಣದ ಮೂಲವನ್ನು ಬಹಿರಂಗಪಡಿಸಲಿ.

      Reply
  7. sri

    pheku . in this site has exposed fake modi development very well. as per our ppl concern, most of fanatics are from kundapur, mangalore region. they are about 2000-4000 fanatic who have no shame, no pride and no self-respect. for them protecting bjp image and abusing congress is more important than karnataka state interest. moreover, they are bl00dy ignorant

    Reply

Leave a Reply

Your email address will not be published. Required fields are marked *