ನವೀನ್ ಸೂರಿಂಜೆ: ಜಾಮೀನು ಮಂಜೂರು

ಕರ್ನಾಟಕ ಹೈಕೋರ್ಟ್ ಮಂಗಳೂರಿನ ವರದಿಗಾರ ನವೀನ್ ಸೂರಿಂಜೆಗೆ ಜಾಮೀನು ಮಂಜೂರು ಮಾಡಿದೆ. ನ್ಯಾಯಾಲಯದ ಅಗತ್ಯ ಪ್ರಕ್ರಿಯೆಗಳು ಪೂರ್ಣಗೊಂಡು ಬಿಡುಗಡೆಯಾಗುವುದು ಮಂಗಳವಾರವೇ. ಸದ್ಯಕ್ಕೆ ಇದೊಂದು ಸಣ್ಣ ರಿಲೀಫ್. ಇದೇ ಅಂತ್ಯವಲ್ಲ.

ಇತ್ತೀಚಿನ ಬೆಳವಣಿಗೆಗಳಿಂದ ಗೊತ್ತಾದದ್ದು ಏನೆಂದರೆ, ಕಸ್ತೂರಿ ಸುದ್ದಿ ವಾಹಿನಿ ನವೀನ್ ಬಿಡುಗಡೆಗೆ ಆಸಕ್ತಿ ವಹಿಸಿದೆ. ಸಂಸ್ಥೆಯವರು ಕೂಡಾ ಕಾನೂನು ಹೋರಾಟದ ಹೊಣೆ ಹೊರುವಲ್ಲಿ ಸಹಕರಿಸಿದ್ದಾರೆ. ವೆಚ್ಚವನ್ನು ಭರಿಸುವ ಭರವಸೆಯನ್ನೂ ನೀಡಿದ್ದಾರೆ ಎಂದು ತಿಳಿದುಬಂದಿದೆ. ಅವರ ಕ್ರಮ ಸ್ತುತ್ಯಾರ್ಹ.

– ವರ್ತಮಾನ ಬಳಗ.

5 thoughts on “ನವೀನ್ ಸೂರಿಂಜೆ: ಜಾಮೀನು ಮಂಜೂರು

  1. anand prasad

    ನವೀನರಿಗೆ ರಾಜ್ಯ ಹೈಕೋರ್ಟಿನಲ್ಲಿ ಜಾಮೀನು ಸಿಕ್ಕಿರುವುದು ನಿರೀಕ್ಷಿತವೇ ಆಗಿದೆ. ಮಂಗಳೂರಿನ ನ್ಯಾಯಾಲಯಗಳಲ್ಲಿ ನ್ಯಾಯ ಸಿಗುವ ನಿರೀಕ್ಷೆ ಇರಲಿಲ್ಲ ಏಕೆಂದರೆ ಮಂಗಳೂರಿನ ನ್ಯಾಯಾಲಯಗಳು ನ್ಯಾಯವನ್ನು “ಎತ್ತಿಹಿಡಿಯುವ” ಧೈರ್ಯ ಹೊಂದಿಲ್ಲ ಏಕೆಂದರೆ ಕೇಸರೀಕರಣದ ಪ್ರಭಾವ ಮಂಗಳೂರಿನಲ್ಲಿ ಅಷ್ಟು ತೀವ್ರವಾಗಿದೆ. ಇದು ಹಿಂದೆ ಕರಾವಳಿ ಅಲೆ ಸಂಪಾದಕರ ಬಂಧನದ ವಿಷಯದಲ್ಲಿಯೂ ಸಾಬೀತಾಗಿದೆ. ಕಸ್ತೂರಿ ಸುದ್ದಿವಾಹಿನಿಯವರು ನವೀನರಿಗೆ ಕಾನೂನು ಬೆಂಬಲ ಹಾಗೂ ನೈತಿಕ ಹಾಗೂ ಮಾಧ್ಯಮ ಬೆಂಬಲ ನೀಡಬೇಕಾಗಿರುವುದು ಅಗತ್ಯ.

    Reply
  2. Anand Baidanamane

    ಕಸ್ತೂರಿ ವಾಹಿನಿ ವರದಿಗಾರ ನವೀನ್ ನ ಬಂಧನದ ನಂತರ ನಡೆದ ಬೆಳವಣಿಗೆಗಳು……, ಒಂದಿಷ್ಟು ಚರ್ಚೆಗಳು ಕೆಲ ಪ್ರಶ್ನೆಗಳನ್ನು ಮಾಧ್ಯಮ ಕ್ಷೇತ್ರದಲ್ಲಿ ಹುಟ್ಟುಹಾಕಿದೆ…. ನವೀನ್ ಮಾಡಿದ್ದು ತಪ್ಪೇ, ಸರಿಯೇ ಅನ್ನೋ ತರ್ಕಕ್ಕೆ ಬದಲಾಗಿ ಮುಂದೆ ಕಾನೂನಿನ ಅಂಗಳದಲ್ಲಿ ಹೊರಬಿಳೋ ಫಲಿತಾಂಶವನ್ನು ಕಾಯೋಣ… ನವೀನ್ ಗೆ ಜಾಮೀನು ಸಿಕ್ಕಿದ್ದು ತುಂಬಾ ಒಳ್ಳೆಯ ಬೆಳವಣಿಗೆ ……,

    Reply

Leave a Reply

Your email address will not be published. Required fields are marked *