Monthly Archives: March 2015

ಆಮ್ ಆದ್ಮಿ ಪಕ್ಷ ಹಾದಿ ತಪ್ಪುತ್ತಿದೆಯೇ?

– ಆನಂದ ಪ್ರಸಾದ್

ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಜನ್ಮ ತಳೆದ ಆಮ್ ಆದ್ಮಿ ಪಕ್ಷ ರಾಜಕೀಯವನ್ನು ಬದಲಿಸುವ ಹಾಗೂ ಶುದ್ಧೀಕರಿಸುವ ಮುಖ್ಯ ಗುರಿಯೊಂದಿಗೆ ಜನ್ಮ ತಳೆದು ಚುನಾವಣಾ ಹೋರಾಟಕ್ಕೆ ಇಳಿದು ದೆಹಲಿಯಲ್ಲಿ ಅಭೂತಪೂರ್ವ ಜನಬೆಂಬಲದೊಂದಿಗೆ ಅಧಿಕಾರಕ್ಕೆ ಬಂದ ನಂತರ ಆಂತರಿಕ ಸಂಘರ್ಷದ ಕಾರಣ ಸುದ್ದಿಯಲ್ಲಿದೆ.  ಮಾಮೂಲಿ ರಾಜಕಾರಣಿಗಳಂತಲ್ಲದೆ ವಿವಿಧ ಕ್ಷೇತ್ರಗಳ ಅತ್ಯಂತ ಪ್ರತಿಭಾವಂತರಿಂದ ಕಟ್ಟಲ್ಪಟ್ಟ ಆಮ್ ಆದಿ ಪಕ್ಷ ಭಿನ್ನ ಹಾದಿಯಲ್ಲಿ ನಡೆದು ದೇಶದ ರಾಜಕೀಯವನ್ನು ಶುದ್ಧೀಕರಿಸುವ ಪ್ರಧಾನ ಗುರಿಯನ್ನು ಯಾವತ್ತೂ ಮರೆಯಬಾರದು. kejriwal-aap-launch-delhiಇದನ್ನು ಮರೆತರೆ ಪಕ್ಷದ ಬೆಳವಣಿಗೆಗೆ ತೊಂದರೆ ಖಂಡಿತ ಮಾತ್ರವಲ್ಲ ಪಕ್ಷವು ಜನತೆಯಿಂದ ನಗೆಪಾಟಲಿಗೆ ತುತ್ತಾಗುವುದರಲ್ಲಿ ಸಂಶಯವಿಲ್ಲ. ಪಕ್ಷವು ಚುನಾವಣೆಗಳಲ್ಲಿ ಗೆಲ್ಲುವ ಆತುರದಲ್ಲಿ ಅಥವಾ ಅಧಿಕಾರ ಹಿಡಿಯುವ ಹಂಬಲದಲ್ಲಿ ನೈತಿಕತೆಯನ್ನು ಬಿಟ್ಟರೆ ಉಳಿದ ಪಕ್ಷಗಳಿಗಿಂಥ ತಾನು ಭಿನ್ನ ಎಂದು ಹೇಳಿಕೊಳ್ಳಲು ಸಾಧ್ಯವಿಲ್ಲ. ಈ ಪ್ರಶ್ನೆ ಈಗ ಏಕೆ ಎದ್ದಿದೆ ಅರವಿಂದ ಕೇಜ್ರಿವಾಲ್ ಕಳೆದ ಲೋಕಸಭಾ ಚುನಾವಣೆಯಲ್ಲಿ ದೆಹಲಿಯ ಎಲ್ಲ ಲೋಕಸಭಾ ಸ್ಥಾನಗಳಲ್ಲಿಯೂ ಸೋತ ನಂತರ ದೆಹಲಿಯಲ್ಲಿ ಕಾಂಗ್ರೆಸ್ಸಿನ ಶಾಸಕರ ಬೆಂಬಲದಿಂದ ಸರ್ಕಾರ ರಚಿಸುವ ಸಂಬಂಧ ನಡೆಸಿದ ದೂರವಾಣಿ ಸಂಭಾಷಣೆ ಬೆಳಕಿಗೆ ಬಂದ ಕಾರಣದಿಂದ. ಅಧಿಕಾರಕ್ಕೋಸ್ಕರ ಈ ರೀತಿ ಮೌಲ್ಯಗಳಲ್ಲಿ ರಾಜಿ ಮಾಡಿಕೊಳ್ಳುವುದು ಎಂದಿಗೂ ಒಳ್ಳೆಯದಲ್ಲ. ಹಾಗೆ ಮಾಡಿದರೆ ಉಳಿದ ಪಕ್ಷಗಳಿಗೂ ಆಮ್ ಆದ್ಮಿ ಪಕ್ಷಕ್ಕೂ ವ್ಯತ್ಯಾಸವೇ ಇರುವುದಿಲ್ಲ. ಗುರಿ ಮಾತ್ರ ಮುಖ್ಯವಲ್ಲ ಗುರಿಯನ್ನು ತಲುಪುವ ರೀತಿಯೂ ಮುಖ್ಯ ಹಾಗೂ ನೈತಿಕತೆಯಿಂದ ಕೂಡಿರಬೇಕು ಎಂದು ಗಾಂಧೀಜಿಯವರು ಹೇಳಿದ್ದಾರೆ. ಪ್ರತಿಭಾವಂತರಾದ ಆಮ್ ಆದ್ಮಿ ಪಕ್ಷದ ನಾಯಕರು ಇದನ್ನು ಸದಾ ನೆನಪಿನಲ್ಲಿ ಇಟ್ಟುಕೊಳ್ಳಬೇಕೆಂಬುದು ಜನತೆಯ ಅಪೇಕ್ಷೆಯಾಗಿದೆ.

ಈಗ ಆಮ್ ಆದ್ಮಿ ಪಕ್ಷದಲ್ಲಿ ಕಂಡುಬರುತ್ತಿರುವ ಆಂತರಿಕ ಸಂಘರ್ಷದ ಮೂಲ ಯಾವುದು ಎಂದು ನೋಡಿದಾಗ ಅದು ಹೋಗಿ ನಿಲ್ಲುವುದು ಕೇಜ್ರಿವಾಲ್ ಅವರ ಸ್ವಭಾವದ ಮೇಲೆಯೇ. ಪ್ರಜಾಪ್ರಭುತ್ವದ ನೈಜ ಮೌಲ್ಯಗಳ ಅನುಸಾರ ಪಕ್ಷವನ್ನು ಬೆಳೆಸುವಲ್ಲಿ ಕೇಜ್ರಿವಾಲ್ ಎಡವುತ್ತಿದ್ದಾರೆ.  ಇದನ್ನು ಅವರು ಈಗಲೇ ತಿದ್ದಿಕೊಳ್ಳದಿದ್ದರೆ ಪಕ್ಷದ ಬೆಳವಣಿಗೆ ಸಾಧ್ಯವಿಲ್ಲ. ಮೌಲ್ಯಗಳೊಂದಿಗೆ ರಾಜಿಮಾಡಿಕೊಳ್ಳುವ ಕೇಜ್ರಿವಾಲ್ ಅವರ ಧೋರಣೆಯೇ ಪಕ್ಷದಲ್ಲಿ ಬಿರುಕು ಉಂಟಾಗಲು ಕಾರಣವಾಗುತ್ತಿದೆ ಎಂಬುದು ಸದ್ಯಕ್ಕೆ ಕಂಡುಬರುತ್ತಿರುವ ವಿಷಯವಾಗಿದೆ. ಪಕ್ಷವು ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಆಯ್ಕೆಯಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯ ಮೌಲ್ಯಗಳನ್ನು ಎತ್ತಿ ಹಿಡಿಯುವಲ್ಲಿ ಸಮರ್ಪಕವಾಗಿ ನಡೆದುಕೊಂಡಿಲ್ಲ ಎಂದು ಪ್ರಶಾಂತ್ ಭೂಷಣ್ ಎತ್ತಿರುವ ವಿಚಾರ ಕಡೆಗಣಿಸುವಂಥದ್ದಲ್ಲ.  ಇದು ಸುಗಮ ಆಡಳಿತ ನಡೆಸಲು ಇರುವ ಪ್ರಧಾನ ಅಡಿಗಲ್ಲಿಗೆ ಸಂಬಂಧಿಸಿರುವ ವಿಚಾರವಾಗಿದೆ. ನೈತಿಕವಾಗಿ ದೃಢವಾದ ನಿಲುವು ಇರುವ ಅಭ್ಯರ್ಥಿಗಳನ್ನು ಚುನಾವಣೆಗೆ ನಿಲ್ಲಿಸುವುದರಿಂದ ಮುಂದೆ ಗೆದ್ದರೆ ಉತ್ತಮ ಆಡಳಿತ ನಡೆಸಲು ಅನುಕೂಲವಾಗುತ್ತದೆ.  aap-kejriwal-yogendra-yadavಅದರ ಬದಲು ಹಣವಂತರಿಗೆ ಪಕ್ಷದ ಟಿಕೆಟ್ ನೀಡಿದರೆ ಮುಂದೆ ಇಂಥವರೇ ಉತ್ತಮ ಆಡಳಿತ ನೀಡುವಲ್ಲಿ ಅಡ್ಡಗಾಲಾಗುತ್ತಾರೆ. ತಮಗೆ ಸೂಕ್ತ ಸ್ಥಾನ ಸರ್ಕಾರದಲ್ಲಿ ಸಿಗದಿದ್ದರೆ ಇಂಥವರೇ ಭಿನ್ನಮತೀಯರಾಗಿ ಸರ್ಕಾರ ನಡೆಸುವಲ್ಲಿ ದೊಡ್ಡ ಅಡ್ಡಿಯಾಗುತ್ತಾರೆ. ಹೀಗಾಗಿ ಪಕ್ಷದಿಂದ ಚುನಾವಣೆಗೆ ನಿಲ್ಲುವ ಅಭ್ಯರ್ಥಿಗಳನ್ನು ಆರಿಸುವಾಗ ನೈತಿಕತೆಗೆ ಒತ್ತು ಕೊಡುವುದು ಬಹಳ ಮುಖ್ಯ. ಇಂಥ ಪ್ರಮುಖ ವಿಚಾರಗಳಲ್ಲಿ ರಾಜಿ ಮಾಡಿಕೊಳ್ಳುವುದು ತರವಲ್ಲ ಎಂಬುದು ಪ್ರಶಾಂತ್ ಭೂಷಣ್ ಅವರ ನಿಲುವು ಹಾಗೂ ದೆಹಲಿ ವಿಧಾನಸಭೆ ಚುನಾವಣೆಗಳಲ್ಲಿ ಅವರು ಹೆಚ್ಚಿನ ಉತ್ಸಾಹ ತೋರಿಸದೆ ಇರಲೂ ಇದು ಕಾರಣವಾಗಿ ಕಂಡುಬರುತ್ತದೆ. ಪಕ್ಷದ ಮೂಲ ನೈತಿಕ ಹಾಗೂ ಪ್ರಜಾಸತ್ತಾತ್ಮಕ ನಿಲುವುಗಳನ್ನು ಕಾಯ್ದುಕೊಳ್ಳಲು ಒತ್ತಾಯಿಸಿದ ಹಿರಿಯ ಸ್ಥಾಪಕ ಸದಸ್ಯರನ್ನು ಪ್ರಮುಖ ಸ್ಥಾನಗಳಿಂದ ಹೊರಹಾಕಲು ಪ್ರಯತ್ನಿಸುವ ಕೇಜ್ರಿವಾಲ್ ಬೆಂಬಲಿಗರ ಕ್ರಮ ಪಕ್ಷ ಸರಿಯಾದ ಹಾದಿಯಲ್ಲಿ ನಡೆಯುತ್ತಿಲ್ಲ ಎಂಬುದನ್ನು ತೋರಿಸುತ್ತದೆ. ಕೇಜ್ರಿವಾಲ್ ಇದನ್ನು ತಿದ್ದಿಕೊಳ್ಳದೆ ಇದ್ದರೆ ಪಕ್ಷ ಅಡ್ಡಹಾದಿಗೆ ಇಳಿಯುವುದು ಖಚಿತ.  ಕೇಜ್ರಿವಾಲ್ ಬೆಂಬಲಿಗರು ಪಕ್ಷವು ಸರಿಯಾದ ಹಾದಿಯಲ್ಲಿ ನಡೆಯುತ್ತಿಲ್ಲ ಎಂದು ಪ್ರತಿರೋಧ ತೋರಿದವರನ್ನೇ ಪಕ್ಷದಿಂದ ಹೊರಹಾಕಲು ನೋಡುತ್ತಿರುವುದು ಪಕ್ಷಕ್ಕೆ ಶೋಭೆಯಲ್ಲ. ಪ್ರಶಾಂತ್ ಭೂಷಣ್ ಹಾಗೂ ಯೋಗೇಂದ್ರ ಯಾದವ್ ಪಕ್ಷದಲ್ಲಿ ಅಧಿಕಾರದ ಸ್ಥಾನಕ್ಕಾಗಿ ಭಿನ್ನಮತ ತಳೆದಿದ್ದರೆ ಅವರನ್ನು ಹೊರಹಾಕುವುದು ನ್ಯಾಯೋಚಿತ ಆಗಿರುತ್ತಿತ್ತು ಆದರೆ ಪಕ್ಷದ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಅವರು ಅಧಿಕಾರದ ಸ್ಥಾನಗಳಿಗಾಗಿ ಭಿನ್ನಮತ ಹಾಗೂ ಗುಂಪುಗಾರಿಕೆ ಮಾಡಿರುವುದು ಕಂಡುಬರುವುದಿಲ್ಲ.  ಹೀಗಾಗಿ ಕೇಜ್ರಿವಾಲ್ ಬೆಂಬಲಿಗರು ತಮ್ಮ ತಪ್ಪನ್ನು ತಿದ್ದಿಕೊಂಡು ಪಕ್ಷವನ್ನು ಒಂದಾಗಿ ಮುನ್ನಡೆಸಿಕೊಂಡು ಹೋಗುವುದು ಕಾಲದ ಅಗತ್ಯವಾಗಿದೆ.

ಆಮ್ ಆದ್ಮಿ ಪಕ್ಷ ದೆಹಲಿಗೆ ಮಾತ್ರ ಸೀಮಿತ ಆಗಿರಬೇಕೋ ಅಥವಾ ಇನ್ನೂ ಕೆಲವು ರಾಜ್ಯಗಳ ವಿಧಾನಸಭೆ ಚುನಾವಣೆಗೆ ಹಾಗೂ ಮಹಾನಗರಸಭೆ ಚುನಾವಣೆಗೆ ಸ್ಪರ್ಧಿಸಬೇಕೋ ಎಂಬ ಬಗ್ಗೆ ಪಕ್ಷದಲ್ಲಿ ಗೊಂದಲಗಳಿವೆ. ಇದರಲ್ಲಿ ಗೊಂದಲ ಮಾಡಿಕೊಳ್ಳಬೇಕಾದ ಅಗತ್ಯ ಇಲ್ಲ.  aam-admi-party-aapಈ ವಿಷಯವನ್ನು ಆಯಾ ರಾಜ್ಯ ಘಟಕಗಳ ತೀರ್ಮಾನಕ್ಕೆ ಬಿಡುವುದು ನಿಜವಾದ ಪ್ರಜಾಪ್ರಭುತ್ವ ವ್ಯವಸ್ಥೆಯ ಲಕ್ಷಣವಾಗಿದೆ ಎಂಬುದು ಗೊಂದಲಕ್ಕೆ ಎಡೆಯಿಲ್ಲದೆ ಸ್ಪಷ್ಟವಾಗುವ ವಿಚಾರ.  ಚುನಾವಣೆಗೆ ಸ್ಪರ್ಧಿಸಲು ಬೇಕಾದ ಸಂಪನ್ಮೂಲವನ್ನು ಆಯಾ ರಾಜ್ಯ ಘಟಕಗಳು ಸ್ವಚ್ಛ ಮೂಲಗಳಿಂದ ಸಂಗ್ರಹಿಸಲು ಸಮರ್ಥವಾಗಿದ್ದರೆ ಅವರು ಚುನಾವಣೆಗೆ ಸ್ಪರ್ಧಿಸುವ ಕುರಿತು ನಿರ್ಣಯ ಕೈಗೊಳ್ಳಬಹುದು.  ಇದಕ್ಕೆ ಕೇಂದ್ರದ ಹೈಕಮಾಂಡಿನ ಒಪ್ಪಿಗೆ ಅಗತ್ಯವಿಲ್ಲ. ಇಂಥ ಹೈಕಮಾಂಡ್ ಸಂಸ್ಕೃತಿ ತಮ್ಮಲ್ಲಿ ಇಲ್ಲವೆಂದು ಆಮ್ ಆದ್ಮಿ ಪಕ್ಷ ಹೇಳಿಕೊಳ್ಳುತ್ತಿರುವುದರಿಂದ ತಮ್ಮ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳಲು ಅದರಂತೆ ನಡೆದುಕೊಳ್ಳಬೇಕು. ಇಲ್ಲದೆ ಹೋದರೆ ಉಳಿದ ಪಕ್ಷಗಳಿಗೂ ವಿವಿಧ ಕ್ಷೇತ್ರಗಳ ಪ್ರತಿಭಾವಂತರು ಸೇರಿ ಕಟ್ಟಿದ ಆಮ್ ಆದ್ಮಿ ಪಕ್ಷಕ್ಕೂ ವ್ಯತ್ಯಾಸವೇ ಇರುವುದಿಲ್ಲ.

ಆಮ್ ಆದ್ಮಿ ಪಕ್ಷ ದೆಹಲಿಯಲ್ಲಿ ಆಡಳಿತಕ್ಕೆ ಬಂದು ಒಂದು ತಿಂಗಳು ಕಳೆದರೂ ಭ್ರಷ್ಟಾಚಾರದ ವಿರುದ್ಧ ಬಲಿಷ್ಠ ಲೋಕಪಾಲ್ ಅಥವಾ ಲೋಕಾಯುಕ್ತ ವ್ಯವಸ್ಥೆ ರೂಪಿಸುವ ಕುರಿತು ದೆಹಲಿಯ ನೂತನ ಸರಕಾರ ಶೀಘ್ರ ಕ್ರಮ ಕೈಗೊಳ್ಳದೆ ಇರುವುದು ಸೂಕ್ತವಲ್ಲ. ಇದು ಪ್ರಧಾನವಾಗಿ ಹಾಗೂ ಶೀಘ್ರವಾಗಿ ಆಗಲೇಬೇಕಾದ ಕೆಲಸ. ಈ ಬಗ್ಗೆ ಉದಾಸೀನ ಸಲ್ಲದು.  ಅದೂ ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಜನ್ಮ ತಳೆದ ಆಮ್ ಆದ್ಮಿ ಪಕ್ಷಕ್ಕೆ ಇದು ಪ್ರಧಾನ ಆದ್ಯತೆಯಾಗಬೇಕಾಗಿದೆ.  ಭಾರತದ ಪ್ರಧಾನ ಸಮಸ್ಯೆ ಭ್ರಷ್ಟಾಚಾರವೇ ಆಗಿದೆ.  ರಾಜಕಾರಣಿಗಳನ್ನು ಹಾಗೂ ಅಧಿಕಾರಿ ವರ್ಗವನ್ನು ಅವ್ಯವಹಾರ ಮಾಡದಂತೆ ತಡೆಯಲು ಮತ್ತು ಹೆದರಿಕೆ ಹುಟ್ಟಿಸಲು ಇದು ಅತೀ ಅಗತ್ಯವಾಗಿದೆ. ಆಮ್ ಆದ್ಮಿ ಪಕ್ಷವು ಭ್ರಷ್ಟಾಚಾರದ ಗುಮ್ಮನನ್ನು ತೋರಿಸಿ ಕೇವಲ ಪಕ್ಷ ಬೆಳೆಸುವ ಹಾಗೂ ಅಧಿಕಾರಕ್ಕೆ ಏರುವ ಸಾಧನವಾಗಿ ಅದನ್ನು ಬಳಸಿಕೊಂಡರೆ ಉಳಿದ ಪಕ್ಷಗಳಿಗೂ ಅದಕ್ಕೂ ವ್ಯತ್ಯಾಸ ಇರುವುದಿಲ್ಲ.  ಬಿಜೆಪಿ ಪಕ್ಷವು ರಾಮ ಮಂದಿರ ವಿಷಯವನ್ನು ಪಕ್ಷ ಬೆಳೆಸಲು ಬೆಳೆಸಿಕೊಂಡಂತೆ ಮತ್ತು ನಂತರ ಅದನ್ನು ಮೂಲೆಗೆ ತಳ್ಳಿದಂತೆ ಆಮ್ ಆದ್ಮಿ ಪಕ್ಷವು ಭ್ರಷ್ಟಾಚಾರದ ವಿಷಯದಲ್ಲಿ ಮಾಡಬಾರದು.

ದೇಶದಲ್ಲಿ ರಾಜಕೀಯ ಶುದ್ಧೀಕರಣದ ಹಾಗೂ ರಾಜಕೀಯ ಮೌಲ್ಯಗಳ, ನೈತಿಕತೆಯ ಪುನರುತ್ಥಾನ ಇಂದಿನ ಅಗತ್ಯವಾಗಿದೆ. ಇದಕ್ಕಾಗಿ ಜನ ಎದುರು ನೋಡುತ್ತಿದ್ದಾರೆ ಹಾಗೂ ಅವಕಾಶಕ್ಕಾಗಿ ಕಾಯುತ್ತಿದ್ದಾರೆ ಎಂಬುದು ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶ ಸ್ಪಷ್ಟವಾಗಿ ತೋರಿಸಿದೆ.  ಕಾಂಗ್ರೆಸ್ ಪಕ್ಷವು ದೃಢವಾದ ಹಾಗೂ ಮೌಲ್ಯಯುತ ರಾಜಕೀಯದ ಪರ ಹೋರಾಡುವ ನಾಯಕತ್ವ ಹೊಂದದೆ ಇರುವುದರಿಂದಾಗಿ ಅವಸಾನದತ್ತ ಸಾಗುತ್ತಿರುವ ಹೊತ್ತಿನಲ್ಲಿ ಕಾಂಗ್ರೆಸ್ಸಿನ ಸ್ಥಾನವನ್ನು ತುಂಬುವ ಪಕ್ಷವಾಗಿ ಆಮ್ ಆದ್ಮಿ ಪಕ್ಷಕ್ಕೆ ಅವಕಾಶಗಳು ಇವೆ.  kejriwal_aap_pti_rallyಇದಕ್ಕೆ ಪಕ್ಷವು ಸ್ಪಷ್ಟವಾದ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯುವ ದೃಢತೆ ತೋರಿಸಬೇಕಾಗುತ್ತದೆ. ಆಮ್ ಆದ್ಮಿ ಪಕ್ಷದಲ್ಲಿ ನಾಯಕತ್ವದ ಗುಣಗಳುಳ್ಳ ಹಲವು ವ್ಯಕ್ತಿಗಳು, ವಿವಿಧ ಕ್ಷೇತ್ರಗಳ ಪ್ರತಿಭಾವಂತರು ಇದ್ದಾರೆ.  ಇವರೆಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಬೇಕಾದ ಅಗತ್ಯ ಇದೆ. ಯಾವುದೇ ರೀತಿಯ ಬಣ ರಾಜಕೀಯಕ್ಕೆ ಆಮ್ ಆದ್ಮಿ ಪಕ್ಷ ಅವಕಾಶ ನೀಡಬಾರದು. ಈಗ ಕೇಜ್ರಿವಾಲ್ ಜೊತೆಗೆ ನಿಂತಿರುವ ವ್ಯಕ್ತಿಗಳು ಬಣ ರಾಜಕೀಯಕ್ಕೆ ಪೂರಕವಾಗಿ ನಡೆದುಕೊಳ್ಳುತ್ತಿದ್ದು ಇದನ್ನು ನಿವಾರಿಸುವ ಕುರಿತು ಸ್ವತಃ ಕೇಜ್ರಿವಾಲ್ ಗಮನ ಹರಿಸಬೇಕು.

ಆಮ್ ಆದ್ಮಿ ಪಕ್ಷವು ಕೇವಲ ಕೇಜ್ರಿವಾಲ್ ಕಟ್ಟಿದ ಪಕ್ಷವಲ್ಲ. ಇದು ರಾಜಕೀಯದಲ್ಲಿ ಬದಲಾವಣೆ ಹಾಗೂ ಶುದ್ಧೀಕರಣವನ್ನು ಬಯಸುವ ಸಾವಿರಾರು ಜನರ ಬೆಂಬಲ ಹಾಗೂ ಅರ್ಥಿಕ ನೆರವಿನಿಂದ ರೂಪುಗೊಂಡ ಪಕ್ಷ ಆಗಿರುವ ಕಾರಣ ಈ ಪಕ್ಷವು ಸರಿಯಾದ ದಾರಿಯಲ್ಲಿ ಸಾಗುವಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ರಾಜಕೀಯದಲ್ಲಿ ಬದಲಾವಣೆ ಹಾಗೂ ಒಳಿತನ್ನು ಬಯಸುವ ಎಲ್ಲರ ಮೇಲೆಯೂ ಇದೆ. ಹೀಗಾಗಿ ವಿಶ್ವದಾದ್ಯಂತ ಇರುವ ಆಮ್ ಆದ್ಮಿ ಪಕ್ಷದ ಹಿತೈಷಿಗಳು ಹಾಗೂ ಬದಲಾವಣೆ ಬಯಸುವ ಜನ ಪಕ್ಷದ ಉನ್ನತ ನಾಯಕತ್ವವು ಹಾದಿ ತಪ್ಪಿದಾಗ ಅವರನ್ನು ಎಚ್ಚರಿಸುವ ಕೆಲಸವನ್ನು ಇಂದಿನ ಲಭ್ಯ ಅಂತರ್ಜಾಲ ಮೂಲಕ ಮಾಡುತ್ತಿರಬೇಕು. ನಾಯಕರಿಗೆ ಆಗಾಗ ಚಾಟಿ ಏಟು ನೀಡಿ ಅವರನ್ನು ಸರಿಯಾದ ದಾರಿಯಲ್ಲಿ ನಡೆಸುವ ಜವಾಬ್ದಾರಿ ಎಲ್ಲರ ಮೇಲೆಯೂ ಇದೆ.

ಡಿ. ಕೆ. ರವಿ ‘ಅಸಹಜ ಸಾವಿ’ಗೆ ಮಿಡಿದ ಕನ್ನಡದ 10 ಕಂಬನಿಗಳು!

ಐಎಎಸ್‍ ಅಧಿಕಾರಿ ಡಿ. ಕೆ. ರವಿ ಅವರ ‘ಅಸಹಜ ಸಾವಿ’ಗೆ ಕಳೆದ ಎರಡು ದಿನಗಳಿಂದ ರಾಜ್ಯದ ಉದ್ದಗಲಕ್ಕೂ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಒಬ್ಬ ಪ್ರಾಮಾಣಿಕ ಅಧಿಕಾರಿಯ ಸಾವು ಜನರ ಅಂತರಾತ್ಮವನ್ನು ತಟ್ಟಿರುವುದು ಇದಕ್ಕೆ ಸಾಕ್ಷಿ. ಮುಕ್ತ, ನಿರ್ಭೀತ ಸಮಾಜದ ಕನಸು ಇಟ್ಟುಕೊಂಡವರಿಗೆ ಆದರ್ಶಕ್ಕಾಗಿ ಒಬ್ಬ ವ್ಯಕ್ತಿ ಅಥವಾ ಸಿದ್ಧಾಂತದ ಅಗತ್ಯವಿರುತ್ತದೆ. ಬಹುಶಃ ಕೋಲಾರದಲ್ಲಿ ರವಿ ಅವರು ತಮ್ಮ ಅವಧಿಯಲ್ಲಿ ನಡೆದುಕೊಂಡ ಜನಪರ ನಡವಳಿಕೆ ಅವರನ್ನು ಆ ಸ್ಥಾನದಲ್ಲಿ ತಂದುಬಿಟ್ಟಿತ್ತು. ಇವತ್ತು ಆ ಸ್ಥಾನ ಅಕಾಲಿಕವಾಗಿ ಖಾಲಿಯಾದಾಗ ಸಹಜವಾಗಿಯೇ ಭಾವನೆಗಳಿಗೆ ಘಾಸಿಯಾಗಿದೆ. ಪೇಸ್ಬುಕ್‍ನಂತಹ ಸಾಮಾಜಿಕ ಜಾಲತಾಣದಲ್ಲಿ ರವಿ ಅವರ ಸಾವಿನ ಕುರಿತು ವ್ಯಕ್ತವಾಗುತ್ತಿರುವ ಪ್ರತಿಕ್ರಿಯೆಗಳು ಸಾವಿನ ಸುತ್ತಲಿನ ನಾನಾ ಆಯಾಮಗಳನ್ನು ಕಟ್ಟಿಕೊಡುತ್ತವೆ. ಈ ಹಿನ್ನೆಲೆಯಲ್ಲಿ ಅವುಗಳಲ್ಲಿ ಆಯ್ದ ಕೆಲವನ್ನು ನಾವಿಲ್ಲಿ ಒಂದೇ ಸೋರಿನ ಅಡಿಯಲ್ಲಿ ತರುವ ಪ್ರಯತ್ನ ಮಾಡಿದ್ದೀವಿ. ಈ ಮೂಲಕ ರವಿ ಅವರಿಗೆ ಶ್ರದ್ಧಾಂಜಲಿ ಮತ್ತು ಅವರ ಸಾವಿನ ಬಗ್ಗೆ ನಿಷ್ಪಕ್ಷಪಾತ ತನಿಖೆಗಾಗಿ ‘ವರ್ತಮಾನ’ ಬಳಗ ಆಶಿಸುತ್ತದೆ…

role1

1.

-ಶಶಿ ಶೇಖರ್

ಭ್ರಷ್ಟ ವ್ಯವಸ್ಥೆಗೆ ಬಲಿಯಾಯ್ತು ಪ್ರಾಮಾಣಿಕತೆ…!!!

ಒಂದು ನೀಚ ಭ್ರಷ್ಟ ವ್ಯವಸ್ಥೆ ಎಂತಹ ಪ್ರಾಮಾಣಿಕ, ಧಕ್ಷ ಅಧಿಕಾರಿಯ ಪ್ರಾಣವನ್ನಾದರೂ ಬಲಿ ಪಡೆಯುತ್ತೆ. ಅದಕ್ಕೆ ಮತ್ತೊಂದು ಉದಾಹರಣೆ ಡಿಕೆ ರವಿ ಅನುಮಾನಾಸ್ಪದ ಸಾವು. ಈ ಹಿಂದೆ ಇದೇ ರೀತಿ ದಕ್ಷತೆ ಮೆರೆದಿತ್ತ ಹಲವು ಅಧಿಕಾರಿಗಳು ಸಾವನ್ನಪ್ಪಿದ್ರು..
ಕರ್ನಾಟಕದ ಮಟ್ಟಿಗೆ ಕೆಎಎಸ್ ಅಧಿಕಾರಿ ಮಹಾಂತೇಶ್ ಕೊಲೆ ಮತ್ತು ಎಸ್ ಐ ಮಲ್ಲಿಕಾರ್ಜುನ ಬಂಡೆ. ಆದ್ರೆ ಕೆಲವೇ ದಿನಗಳಲ್ಲಿ ಇಷ್ಟು ದೊಡ್ಡಮಟ್ಟದಲ್ಲಿ ಹೆಸರು ಪಡೆದಿದ್ದವರು ಡಿಕೆ ರವಿ. ಕೋಲಾರದಲ್ಲಿ ಡಿಸಿಯಾಗಿ ಕೆಲಸ ಮಾಡಿದ ಅಷ್ಟೂ ದಿನ ಅಲ್ಲಿನ ಮರಳು ಮಾಫಿಯಾವನ್ನ ಉಸಿರೆತ್ತದಂತೆ ಮಾಡಿದ್ದು ಡಿಕೆ ರವಿ ಹೆಗ್ಗಳಿಕೆ. ಒಬ್ಬ ಅಧಿಕಾರಿ ವರ್ಗಾವಣೆಯಾದ್ರೆ ನಮ್ಮಲ್ಲಿ ಅಷ್ಟಾಗಿ ಪ್ರತಿಭಟನೆಗಳು ಆಗೋದಿಲ್ಲ. ಆದ್ರೆ ಡಿ ಕೆ ರವಿ ವರ್ಗಾವಣೆಯಾದಾಗ ಇಡೀ ಕೋಲಾರಕ್ಕೆ ಕೋಲಾರವೇ ವಿರೋಧಿಸಿತ್ತು. ಅಷ್ಟರಮಟ್ಟಿಗೆ ಡಿಕೆ ರವಿ ಜನಸ್ನೇಹಿಯಾಗಿದ್ದರು ಮತ್ತು ಜನಪರ ಕೆಲಸ ಮಾಡ್ತಾಯಿದ್ರು. ಕೋಲಾರದಲ್ಲಿ ಮರಳುಮಾಫಿಯಾವನ್ನ ಮಟ್ಟಹಾಕಿದ ರವಿಯವರನ್ನ ಸರ್ಕಾರ ಇದ್ದಕ್ಕಿದ್ದಂತೆ ವಾಣಿಜ್ಯ ತೆರಿಗ ಇಲಾಖೆಗೆ ವರ್ಗ ಮಾಡಿತ್ತು. ಐಎಎಸ್ ಅಧಿಕಾರಿಗಳಿಗೆ ಅಷ್ಟೇನು ಪ್ರಿಯವಲ್ಲದ ಇಲಾಖೆ ಅಂದ್ರೆ ಅದು ವಾಣಿಜ್ಯ ತೆರಿಗೆ ಇಲಾಖೆ. ಆದ್ರೆ ಸರ್ಕಾರದ ನಿರ್ಧಾರವನ್ನ ತುಂಬಾ ಖುಷಿಯಿಂದಲೇ ಸ್ವಾಗತಿಸಿ ಬೆಂಗಳೂರಿನಲ್ಲಿ ವಾಣಿಜ್ಯ ತೆರಿಗೆ ಹೆಚ್ಚುವರಿ ಆಯುಕ್ತರಾಗಿ ಧಕ್ಷತೆಯಿಂದ ಕೆಲಸ ಮಾಡ್ತಾಯಿದ್ರು. ಕಳೆದ ನಾಲ್ಕು ತಿಂಗಳಾವದಿಯಲ್ಲಿ ಬೆಂಗಳೂರು ಲ್ಯಾಂಡ್ ಮಾಫಿಯಾ ಮತ್ತು ರಿಯಲ್ ಎಸ್ಟೇಟ್ ವ್ಯವಹಾರ ಮಾಡೋ ಹಲವು ಕಂಪನಿಗಳ ಮೇಲೆ ರೇಡ್ ಮಾಡಿದ್ರು. ಕೇವಲ ನಾಲ್ಕು ತಿಂಗಳಲ್ಲಿ ಸರ್ಕಾರಕ್ಕೆ ತೆರಿಗೆ ವಂಚಿಸುತ್ತಿದ್ದ ರಿಯಲ್ ಎಸ್ಟೇಟ್ ಕಂಪನಿಗಳಿಂದ 120 ಕೋಟಿಗೂ ಅಧಿಕ ತೆರಿಗೆ ವಸೂಲಿ ಮಾಡಿದ್ರು. ಬಾಯಿಸತ್ತರವರ ಜಮೀನಿಗೆ ಬೇಲಿ ಸುತ್ತುತ್ತಿದ್ದವರನ್ನ ಅಕ್ಷರಶಃ ಎದುರುಹಾಕಿಕೊಂಡಿದ್ದರು ಡಿಕೆ ರವಿ. ಇಂತಹ ಆಧಿಕಾರಿ ಇನ್ನಷ್ಟು ವರ್ಚಗಳ ಕಾಲ ಕೆಲಸ ಮಾಡಿದ್ದಿದ್ರೆ ಭ್ರಷ್ಟರಪಾಲಿಗೆ ಸಿಂಹಸ್ವಪ್ನರಾಗಿರ್ತಿದ್ರು… ಆದ್ರೆ ಈ ಭ್ರಷ್ಟ ವ್ಯವಸ್ಥೆಗೆ ಬಲಿಯಾಗಿ ಹೋದ್ರು. ಅವರ ಸಾವು ಆತ್ಮಹತ್ಯೆಯೋ ಕೊಲೆಯೋ ಅಂತ ಈಗಲೇ ಊಹೆ ಮಾಡೋಕೆ ಸಾಧ್ಯವೇ ಇಲ್ಲ. ಒಂದು ವೇಳೆ ಅದು ಕೊಲೆಯಾಗಿದ್ರೂ ಅದು ಈ ವ್ಯವಸ್ಥೆ ಮಾಡಿದ ಕೊಲೆ. ಅದು ಆತ್ಮಹತ್ಯೆಯೇ ಆಗಿದ್ರೂ ಅದು ವ್ಯವಸ್ಥೆ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿದ್ದ ಪ್ರಚೋದನೆ… ಡಿಕೆ ರವಿಯವರೆ ಮತ್ತೆ ಹುಟ್ಟಿ ಬನ್ನಿ…

***

2.

-ರವೀಂದ್ರ ಗಂಗಲ್‍

ಒಮ್ಮಿಂದೊಮ್ಮಿಲೇ ಉನ್ಮಾದಕ್ಕೆ ಸಿಕ್ಕು ಅತಿರೇಕವಾಗಿ ವರ್ತಿಸುವುದಕ್ಕಿಂತ ಮೊದಲು… ಈ ವ್ಯವಸ್ಥೆಯಲ್ಲಿರುವ ಮೂಲ ತಪ್ಪುಗಳನ್ನು ತಿಳಿದುಕೊಳ್ಳಿ. ದೋಷಗಳನ್ನು ಕಂಡುಹಿಡಿಯಲು ಪ್ರಯತ್ನಿಸಿ. ಸತ್ತವರು ಸತ್ತು ಹೋಗುತ್ತಾರೆ. ಅವರಿಗೆ “ಈ ಭೂಮಿಗೆ ಮತ್ತೆ ಹುಟ್ಟಿ ಬಾ, ಈ ನೆಲದಲ್ಲಿ ಮತ್ತೆ ಹುಟ್ಟಿ ಬರಬೇಡವೆನ್ನುವುದು” ತೀರಾ ಬಾಲಿಶತನವಾಗುತ್ತದೆ. ಅವಾಸ್ತವಿಕವೆನ್ನಿಕೊಳ್ಳುತ್ತದೆ. ಈ ರಾಜ್ಯದ ಪ್ರತಿ ತಾಲೂಕಿನಲ್ಲಿ ಸರ್ಕಾರಿ ಸ್ವಾಮಿತ್ವದ ಹತ್ತಾರು ಇಲಾಖೆಗಳಿವೆ. ಪ್ರತಿ ಇಲಾಖೆಗೂ ಒಬ್ಬ ಅಧಿಕಾರಿ ನೇಮಕಗೊಂಡಿರುತ್ತಾನೆ. ಬಹುಸಂಖ್ಯಾತ ಸರ್ಕಾರಿ ಅಧಿಕಾರಿಗಳು ತಮ್ಮ ತಾಲೂಕಿನ ಶಾಸಕನಿಗೆ ಪ್ರತಿ ತಿಂಗಳು ದೇಣಿಗೆ ಕೊಟ್ಟುಬರುತ್ತಾರೆ. ಪ್ರತಿ ಸರ್ಕಾರಿ ಕಛೇರಿಗಳು ಬ್ರಿಟಿಷ್ ಆಡಳಿತದ ಶೈಲಿಯನ್ನೇ ಇವತ್ತಿಗೂ ಅನುಸರಿಸುತ್ತವೆ. ಅಲ್ಲಿ ಉನ್ನತ ಅಧಿಕಾರಿಗಳು ಸರ್ವಾಧಿಕಾರಿಗಳಂತೆ ವರ್ತನೆ ಮಾಡುತ್ತಾರೆ. ರಾಜಕಾರಣಿಗಳ ಚೇಲಾಗಳಾಗಿ ಬದುಕುತ್ತಾರೆ. ಜನರನ್ನು ಅವ್ಯಾಹತವಾಗಿ ಸುಲಿಯುತ್ತಾರೆ. ಈ ರಾಜಕಾರಣಿಗಳು ತಮಗೆ ಬೇಕಾದ ಅಧಿಕಾರಿಗಳನ್ನೇ ತಮ್ಮ ಸುತ್ತಮುತ್ತ ಬಿಟ್ಟುಕೊಳ್ಳುತ್ತಾರೆ. ಭಾರತದ ವಿಷಪೂರಿತ ರಾಜಕಾರಣಕ್ಕೆ ಹತ್ತಾರು ಹೆಡೆಗಳಿವೆ. ಹೆಡೆಗೆ ಹೊಡೆಯದೇ, ಬರಿ ಬಾಲವನ್ನು ತುಳಿಯುವುದು ಮೂರ್ಖತನ. ಹೊಡೆದರೆ ಹೆಡೆಗೆ ಹೊಡೆಯಬೇಕು. ಅದನ್ನು ಹೇಗೆ ಮಾಡಬೇಕೆಂದು ಚಿಂತಿಸಿ. ಇವತ್ತು ಸಿದ್ದರಾಮಯ್ಯ ಇದ್ದಾನೆ. ನಾಳೆ ಶೆಟ್ಟರ್ ಬರುತ್ತಾನೆ. ಇಂಥಹ ದುರಂತಗಳು ಮತ್ತೆಮತ್ತೆ ಮರುಕಳಿಸುತ್ತಲೇ ಇರುತ್ತವೆ. ದುರಂತ ಸಂಭವಿಸಿದಾಗ ಬುಗಿಲೆದ್ದು ಸಾರ್ವಜನಿಕ ಆಸ್ತಿಗೆ ಹಾನಿ ಮಾಡುವುದು ನಮ್ಮ ಅನಾರೋಗ್ಯ ಮನಸ್ಥಿತಿಯನ್ನು ತೋರಿಸಿಕೊಡುತ್ತದೆ. ಮೊದಲು ನಾವುಗಳು ಅಲರ್ಟ್ ಆಗ್ಬೇಕು. ನಮ್ಮ ಸುತ್ತಲಿನವರಿಗೆ ಅರಿವು ಮೂಡಿಸಬೇಕು. ಬೃಹತ್ತಾಗಿ ಬೆಳೆದು ನಿಂತಿರುವ ಒಂದು ಮರದ ರೆಂಬೆಕೊಂಬೆಗಳನ್ನ ಕತ್ತರಿಸಿ ಹಾಕುವುದಕ್ಕಿಂತ, ತಾಯಿಬೇರಿಗೆ ವಿಷ ತುಂಬುವ ಕೆಲಸ ನಡೆಯಬೇಕು.

ಡಿ.ಕೆ.ರವಿ ಪ್ರಾಮಾಣಿಕ ಅಧಿಕಾರಿ. ಬಡವರ ಬಗ್ಗೆ ಕಾಳಜಿಯನ್ನು ಇಟ್ಟುಕೊಂಡಿದ್ದ ಆಡಳಿತಗಾರ. ಸಾಯಬಾರದ ಸಾವನ್ನು ಸತ್ತರು. ಅವರ ಮನೆಯವರಿಗೆ ನೋವನ್ನ ಭರಿಸುವ ಶಕ್ತಿ ಸಿಗಲಿ ಎಂದಷ್ಟೇ ನಾನು ಆಶಿಸಬಲ್ಲೆ.

***473592371

3.

-ಪ್ರದೀಪ್‍ ಕೆ. ಎಸ್‍

ಸಮಾಜದ ಆಗುಹೋಗುಗಳ ಬಗ್ಗೆ ಕಿಂಚಿತ್ ಕಳಕಳಿ ಇರುವವರು ಕೂಡ ವಿಚಲಿತರಾಗುವಂತಹಾ ಘಟನೆ ಇದು . ಸಮಾಜಕ್ಕೆ ಮಾದರಿಯಾಗಿದ್ದ ಕಿರಿ ವಯಸ್ಸಿನ ಹಿರಿಯ ಅಧಿಕಾರಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ . ತರಹದ ಆಘಾತಗಳು ಅವರ ಕುಟುಂಬವರ್ಗವನ್ನಲ್ಲದೆ ಅವರ ಆದರ್ಶಗಳ ನೇರ ,ಪರೋಕ್ಷ ಫಲಾನುಭವಿಗಳನ್ನು ಕಾಡುತ್ತವೆ .

ನಿಷ್ಪಕ್ಷಪಾತವಾಗಿ ತನಿಖೆಯಾಗಲಿ .ಅಷ್ಟೊಂದು ಕ್ರಿಯಾಶೀಲ ,ಚಿಂತನಶೀಲ ವ್ಯಕ್ತಿಯ ಸಾವಿಗೆ ಕಾರಣ ಮತ್ತು ಪ್ರೇರೇಪಣಾ ಅಂಶಗಳು ಬೆಳಕಿಗೆ ಬರಲಿ . ಒಬ್ಬ ಪ್ರಾಮಾಣಿಕ ಅಧಿಕಾರಿಯ ಸೇವೆಗೆ ಬೆಲೆ ಸಿಕ್ಕಲಿ . ಸಾವಿಗೆ ತಕ್ಷಣದ ಕಾರಣ ಆತ್ಮಹತ್ಯೆ ,ಅಥವಾ ಯಾವುದೇ ಇರಲಿ .ಒಬ್ಬ ಮನುಷ್ಯನಾಗಿ ಅವರನ್ನು ಹಂತಕ್ಕೆ ತಳ್ಳಿದ ವ್ಯವಸ್ಥೆ ಅಥವಾ ವ್ಯಕ್ತಿಗಳು ಶಿಕ್ಷಾರ್ಹರು .

ಸಮಾಜದ ಒಳ ಹೂರಣಗಳು ಬರಡಾಗುತ್ತಿವೆ ಇದು ಸಾವಿರಾರು ವರ್ಷಗಳ ನಿರಂತರ ಸವಕಳಿ .ಇದ್ದಕ್ಕಿದ್ದಂತೆ ಬೆರಗಾಗಿಛೇ …” ಉದ್ಗಾರಕ್ಕಿಂತ ಇಂತಹಾ ಕೆಲ ಪ್ರಾಮಾಣಿಕರನ್ನಾದರೂ ಹೇಗೆ ಉಳಿಸಿಕೊಳ್ಳಬೇಕೆಂಬ ಚಿಂತನೆ , ನಾವೂ ಕೂಡಾ ಭ್ರಷ್ಟ ವ್ಯವಸ್ಥೆಯ ಪಾತ್ರಧಾರಿಗಳೆಂಬ ಪಾಪ ಪ್ರಜ್ಞೆ ಬೆಳೆಯಲಿ .

ರವಿ ಯವರಿಗೆ ಮನಃಪೂರ್ವಕ ಶ್ರದ್ಧಾಂಜಲಿ

***

4.

-ದಿನೇಶ್‍ ಕುಮಾರ್‍

ಎಲ್ಲ ಅಂದುಕೊಂಡಂತೇ ಆಗುತ್ತಿದೆ. ರಾಜಕೀಯ ಪಕ್ಷಗಳು ಡಿ.ಕೆ.ರವಿ ಸಾವನ್ನೂ ರಾಜಕೀಯದ ಸರಕು ಮಾಡಿಕೊಳ್ಳುತ್ತಿವೆ. ಒಬ್ಬ ನನ್ನ ಬಳಿ ಆಡಿಯೋ, ವಿಡಿಯೋ ದಾಖಲೆ ಇದೆ ಎನ್ನುತ್ತಾನೆ, ಮತ್ತೊಬ್ಬ ಪ್ರಭಾವಿ ಸಚಿವರು ತೆರಿಗೆ ಹಣ ಕಡಿಮೆ ಮಾಡಲು ಒತ್ತಡ ಹೇರಿದ್ದರು ಎನ್ನುತ್ತಾನೆ. ಇದನ್ನು ಪ್ರೇಮಪ್ರಕರಣ ಅಂತ ತಳುಕು ಹಾಕಬೇಡಿ ಎಂದು ಏಕಾಏಕಿ ಹೊಸ ವಿಷಯ ಸಿಡಿಸುತ್ತಾನೆ ಮತ್ತೊಬ್ಬ. ರವಿ ಸಾವಿನ ವಿಷಯ ಚರ್ಚೆಯಾಗುವಾಗ ಇಬ್ಬರು ಸಚಿವರು ಸದನದಲ್ಲೇ ನಿದ್ದೆ ಮಾಡುತ್ತಾರೆ. ಲೋಕಸಭೆಯಲ್ಲಿ ಪ್ರಹ್ಲಾದ ಜೋಷಿ ಇದೇ ವಿಷಯ ಮಾತನಾಡುವಾಗ ಕರ್ನಾಟಕದ ಮತ್ತೊಬ್ಬ ಸಂಸದ ಹಿಂದೆ ನಿಂತು ಕೇಕೆ ಹಾಕಿ ನಗುತ್ತಾನೆ. ಸಿಓಡಿ ತನಿಖೆ ಮಾಡ್ತೀವಿ ಎನ್ನುತ್ತೆ ರಾಜ್ಯ ಸರ್ಕಾರ, ಸಿಬಿಐ ತನಿಖೆನೇ ಬೇಕು-ಸದನದಲ್ಲೇ ಮಲಗುತ್ತೇವೆ ಎನ್ನುತ್ತವೆ ವಿರೋಧಪಕ್ಷಗಳು. ಇತ್ತ ಡಿ.ಕೆ.ರವಿಯ ಫುಟೇಜುಗಳಿಗೆ ಸಿನಿಮಾಹಾಡುಗಳನ್ನು ರೀಮಿಕ್ಸ್ ಮಾಡಿ ನ್ಯೂಸ್ ಚಾನಲ್ ಗಳು ಟಿಆರ್ ಪಿಗಾಗಿ ಹಣಾಹಣಿ ನಡೆಸುತ್ತಿವೆ.
ಪರಿಸ್ಥಿತಿ ಇನ್ನಷ್ಟು ಹದಗೆಟ್ಟುಹೋಗುವ ಮುನ್ನ ಮುಖ್ಯಮಂತ್ರಿ ಸಿದ್ಧರಾಮಯ್ಯ ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿಬಿಡುವುದು ಎಲ್ಲ ರೀತಿಯಲ್ಲೂ ಒಳ್ಳೆಯದು. ಒಂದೊಮ್ಮೆ ರವಿ ಆತ್ಮಹತ್ಯೆಯನ್ನೇ ಮಾಡಿಕೊಂಡಿದ್ದರೂ ಅದಕ್ಕೊಂದು ಕಾರಣ, ಕಾರಣಕರ್ತರು ಇರಲೇಬೇಕಲ್ಲವೇ? ಅವರಿಗೆ ಶಿಕ್ಷೆಯಾಗಬೇಕಲ್ಲವೇ? ಸಿಬಿಐ ಆಗಲೀ ಸಿಓಡಿಯಾಗಲೀ ವೈಜ್ಞಾನಿಕ ರೀತಿಯ ತನಿಖೆಯನ್ನೇ ನಡೆಸಬೇಕು. ಉಪ್ಪು ತಿಂದವರು ನೀರು ಕುಡಿಯಲಿ. ಇಡೀ ರಾಜ್ಯವೇ ಸಾವಿನ ಮನೆಯಾಗಿಹೋಗಿದೆ. ಸೂತಕದ ನಡುವೆ ಈ ರಾಜಕೀಯ ಹೇಸಿಗೆಗಳನ್ನೆಲ್ಲ ಜನರೇಕೆ ಸಹಿಸಿಕೊಳ್ಳಬೇಕು? ಸಿದ್ಧರಾಮಯ್ಯನವರೇ, ಸಿಬಿಐ ತನಿಖೆ ಆಗಿಹೋಗಲಿ ಬಿಡಿ.

ಮತ್ತು

ಒಂದು ತಿಂಗಳು ಪವರ್ ಬಿಲ್ ಕಟ್ಟದೇ ಹೋದರೆ ನಿಮ್ಮ ಮನೆಯ ಪವರ್ ಮೀಟರ್ ನ ಫ್ಯೂಸ್ ಕಿತ್ತು ಹಾಕಲಾಗುತ್ತದೆ. ಆದರೆ ಈ ರಿಯಲ್ ಎಸ್ಟೇಟ್ ಕಿರಾತಕರು ನೂರಾರು ಕೋಟಿ ತೆರಿಗೆ ವಂಚಿಸುತ್ತಿದ್ದರೂ ಅವರು ಗಣ್ಯಮಾನ್ಯರು, ಅವರ ಕೂದಲೂ ಕೊಂಕುವುದಿಲ್ಲ. ನಾಲ್ಕೇ ತಿಂಗಳಲ್ಲಿ ಡಿ.ಕೆ. ರವಿ ಇಂಥ ಕಿರಾತಕರಿಂದ ವಸೂಲಿ ಮಾಡಿದ್ದು ೧೨೫ ಕೋಟಿ ರುಪಾಯಿ. ರವಿ ಸಾವಿಗೂ ಈ ಹಲಾಲುಕೋರರಿಗೂ ಸಂಬಂಧವಿದೆಯಾ ಅಂತ ತನಿಖೆ ಮಾಡಬೇಕಾಗಿರೋದು ಪೊಲೀಸರು. ಆದರೆ ಇಡೀ ಬೆಂಗಳೂರನ್ನು ಹರಿದು ಹಂಚಿ ಮುಕ್ಕುತ್ತಿರುವ ಈ ಬಿಲ್ಡರ್ ಗಳ ಚಮಡಾ ಸುಲಿಯೋ ಕೆಲಸ ಯಾರು ಮಾಡಬೇಕು? ಎಲ್ಲ ರಿಯಲ್ ಎಸ್ಟೇಟು ಕಂಪೆನಿಗಳೂ ನಮ್ಮ ಪುಡಾರಿಗಳಿಗೆ ಶೇರುಗಳನ್ನು ಕೊಟ್ಟಿವೆ. ರಾಜ್ಯದಲ್ಲೊಂದು ರಣಹೇಡಿಗಳ ಸರ್ಕಾರವಿದೆ ಮತ್ತು ಅದರಷ್ಟೇ ದುಷ್ಟ ವಿರೋಧಪಕ್ಷಗಳಿವೆ. ಕೊಲೆಯಾಗಿರೋದು ರವಿಯಲ್ಲ, ನಾಡಿನ ಸಾಕ್ಷಿಪ್ರಜ್ಞೆ. ನಮ್ಮೆಲ್ಲರ ಆತ್ಮಸಾಕ್ಷಿಗಳೂ ಹೋಲ್ ಸೇಲಾಗಿ ನೇಣು ಹಾಕಿಕೊಂಡಿವೆ. ಯಾರ ಆತ್ಮಕ್ಕೆ ಶಾಂತಿ ಕೋರುವಿರಿ?

***

5.

-ರಾಘವೇಂದ್ರ

ಭ್ರಷ್ಟಚಾರ..ವ್ಯವಸ್ಥೆ, ಸಮಾಜ ಇವೆಲ್ಲವೂ ಒಂದಕ್ಕೊಂದು ಬೆಸೆದುಕೊಂಡು ಬಿಟ್ಟಿವೆ..ಅದನ್ನ ಬದಲಾಯಿಸಲು ಆ ದೇವರಿಂದಲೂ ಸಾಧ್ಯವಿಲ್ಲಾ…ಅಂತಾ ನಾವು ಅದೆಷ್ಟು ಬಾರಿ ಮಾತನಾಡ್ತೀವೋ ಲೆಕ್ಕವೇ ಇಲ್ಲಾ..ಆದ್ರೆ ನಿಜವಾಗಲೂ ಅದರ ನಿರ್ನಾಮ ಸಾಧ್ಯ..ಅದ್ರನ್ನ ಮೆಟ್ಟಿ ನಿಲ್ಲ ಬೇಕಾದವರು ಸಾಮಾನ್ಯ ಜನರು ಅನ್ನೋದನ್ನ ಸಾರಲು ಹೊರಟ ಹೋರಾಟಗಾರನೊಬ್ಬ ದುರಂತ ಅಂತ್ಯ ಕಂಡಿದ್ದಾನೆ..ಆತ ಎಂದೂ ನನ್ನಿಂದ ಇದು ಸಾದ್ಯವಿಲ್ಲಾ ಅಂದು ಕೊಳ್ಳಲೇ ಇಲ್ಲಾ..ಆರಂಭ ಅನ್ನೋದು ತನ್ನಿಂದಲೇ ಅಂತಾ ಮುನ್ನುಗ್ಗಿದ್ದ..ಆತನ ಜೊತೆಗೆ ಲಕ್ಷಾಂತರ ಮಂದಿ ಕೈಜೋಡಿಸಿದ್ರು..ಸಮಾಜಕ್ಕೆ ಬಹುದೊಡ್ಡ ಕಂಟಕವಾಗಿರೋ ಜಾತಿ ವ್ಯವಸ್ತೆ ವಿರುದ್ದ ಆತ ಸಮರ ಸಾರಿದ್ದ..ಆಡಂಬರದ ಹಂಗಿಲ್ಲದೇ ಸಾಮಾನ್ಯರೊಬ್ಬರ ಮನೆಯಲ್ಲಿ ಊಟ ಮಾಡಿದ್ದ..ಸಮಾಜದ ಕಟ್ಟ ಕಡೆಯ ಮಂದಿಗೆ ದೇವರ ದರ್ಶನಕ್ಕೆ ಅನುವು ಮಾಡಿಕೊಟ್ಟಿದ್ದ..ಆತ ನಿಜಕ್ಕೂ ಆ ಜಿಲ್ಲೆ ಜನರ ಪಾಲಿಗೆ ಬದಲಾವಣೆಯ ಹರಿಕಾರನಾಗಿ ಕಂಡಿದ್ದ..ಹೀಗಾಗೇ ಅವತ್ತು ಆತನ ವರ್ಗವಣೆಯನ್ನ ವಿರೋಧಿಸಿ ಅಷ್ಟು ಜನ ಆತನ ಪರವಾಗಿ ಬೀದಿಗೆ ಇಳಿದಿದ್ದು..ಹಾಗೇ ಅವತ್ತು ಅಚಾನಕ್ಕಾಗಿ ಬಂದ ಬದಲಾವಣೆಯನ್ನ ಸ್ವೀಕರಿಸಿದ ಆತ ಇಲ್ಲೂ ಸಹ ಭ್ರಷ್ಟರ ಪಾಲಿಗೆ ಸಿಂಹ ಸ್ವಪ್ನವಾಗಿದ್ದ..ಆದ್ರೆ ಸೋಮವಾರ ಸಂಜೆ ಸ್ಪೋಟವಾದ ಸುದ್ದಿ ಮಾತ್ರ ಇಡೀ ಆಘಾತಕಾರಿ…ಅಲ್ಲಿ ಆತ ತನ್ನ ಮನೆಯಲ್ಲೇ ಸಾವನ್ನಪ್ಪಿದ್ದ..ಅದು ಆತ್ಮಹತ್ಯೆನಾ..?ಕೊಲೆನಾ..?ಆತನಿಗೆ ಭೂಗತ ಪಾತಕಿಗಳಿಂದ ಬೆದರಿಕೆ ಇತ್ತಾ..? ಏನೇ ಆದ್ರು ಅಲ್ಲೊಂದು ಅನುಮಾನ ಇದ್ದೇ ಇದೆ…ಇನ್ನು ಆತನ ಸಾವಿನ ಸುದ್ದಿ ರಾಜ್ಯದ್ಯಾಂತ ಜನ ರೊಚ್ಚಿಗೆದ್ದಾರೆ..ಅವ್ರ ಆಕ್ರೋಶದ ಕಟ್ಟೆ ಒಡೆದಿದೆ…ಆದ್ರೆ ಇದು ನಿಜಕ್ಕೂ ಆತನ ಆಶೋತ್ತರಗಳನ್ನ, ಆತ ಕಂಡ ಕನಸನ್ನ ಸಾಕಾರ ಮಾಡೋ ಹಾದಿಯಲ್ಲಿ ಮುನ್ನಡೆಯುತ್ತಾ..? ಅಥವಾ ಎಂದಿನಂತೆ ಎರಡು ದಿನ ಆತನನ್ನ ನೆನೆದು ನಂತರ ಮರೆಯುವಂತ ಕೆಲಸ ಆಗುತ್ತಾ..? ಏನೇ ಆದ್ರು ಸತ್ಯ ಮತ್ತೆ ಹುಟ್ಟಿ ಬರುತ್ತೆ..ಇಲ್ಲಿ ಆತ ಸತ್ತಿರಬಹುದು ..ಆದ್ರೆ ಆತನ ಆದರ್ಶ, ಗುರಿ , ಪ್ರಾಮಾಣಿಕತೆಗೆ ಎಂದಿಗೂ ಸಾವಿಲ್ಲ..ಅವು ಎಂದಾದರೊಂದು ದಿನ ಗೆಲ್ಲುತ್ವೆ..ಅದು ನಮ್ಮ ನಿಮ್ಮಲ್ಲಿ ಬದಲಾವಣೆಯ ಹಸಿವನ್ನ ಹೆಚ್ಚಿಸಲಿ..ಆ ಹಸಿವು ಆತನ ಪ್ರಾಮಾಣಿಕತೆಯನ್ನ ಉಳಿಸಿ ಆತನ ಧ್ಯೇಯವನ್ನ ಸಾಕಾರಗೊಳಿಸೋ ನಿಟ್ಟಿನಲ್ಲಿ ಪ್ರಥಮ ಹೆಜ್ಜೆ ಆಗಲಿ..ಇದಕ್ಕೆ ನೀವೇನಂತೀರಿ…?

ಡಿ.ಕೆ.ರವಿ, ನೀ ಮತ್ತೊಮ್ಮೆ ಉದಯಿಸು…!

***

6.

-ಪ್ರಗತ್‍ ಗೌಡ

‘ಮತ್ತೆ ಹುಟ್ಟಿ ಬಾ’ ಎನ್ನುವ ಮಾತು ತೀರಾ ಬಾಲಿಶ ಹೇಳಿಕೆಯಾಗಿ ಕಂಡುಬರುತ್ತಿದೆ ಇತ್ತೀಚೆಗೆ. ಮತ್ತೆ ಹುಟ್ಟಿ ಬಂದರೆ ಮುಂದೆ ಇದೇ ರೀತಿಯ ಸನ್ನಿವೇಶದಲ್ಲಿ ಉಳಿಸಿಕೊಳ್ಳಲು ಸಾದ್ಯವೇ? ಆ ಒಂದು ವಾತಾವರಣ ಇಲ್ಲಿ ನಿರ್ಮಿತವಾಗಿದೆಯೇ? ಇಂತಹ ಸನ್ನಿವೇಶಗಳಲ್ಲೂ ಸ್ವಹಿತ ಸ್ವಪ್ರತಿಷ್ಟೆ ರಾಜಕೀಯ ಲಾಭ ತೆಗೆದುಕೊಳ್ಳುತ್ತಿರುವ ರಾಜಕೀಯ ಪಕ್ಷಗಳ ಕಾರ್ಯಕರ್ತರು, ಸಂಘಟನಾ ಕಾರ್ಯಕರ್ತರು ಉರಿಯುವ ಚಿತೆಯಲ್ಲಿ ಚಳಿ ಕಾಯಿಸಿಕೊಳ್ಳುವಂತೆ ಬಾಸವಾಗುತ್ತಿದ್ದಾರೆ.

ಇಂತಹ ಕ್ರಿಮಿಗಳು ಇರುವ ವರೆಗೂ ಮತ್ತೆ ಹುಟ್ಟಿ ಬರಬೇಡಿ.

***

7.

-ನಾಗೇಂದ್ರ ಬಿ. ಸಿ

ಪಂಚೆ ಮೇಲಕ್ಕೆ ಕಟ್ಟಿ ,ಟವೆಲ್ ಕೊಡವಿ ‘ನಾನು ಪ್ರಾಮಾಣಿಕ’ ಅಂತ ಹೇಳಿದ್ರೆ ಆಗೋಲ್ಲಾ ಸ್ವಾಮಿ .ಪಕ್ಕದಲ್ಲಿ ಅಧಕ್ಷರು ,ಅಪ್ರಾಮಾಣಿಕರು ಹಾಗು ರಿಯಲ್ ಎಸ್ಟೇಟ್ ದಗಲ್ಬಾಜಿಗಳನ್ನ ಇಟ್ಕೊಂಡು ರಾಜ್ಯಬಾರ ನಡೆಸಿದರೆ ಉತ್ತರ ಕೊಡಬೇಕಾದವರು ನೀವೇನೇ,ಅಷ್ಟಕ್ಕೂ ರಾಜಕೀಯದಲ್ಲಿ ‘ಪ್ರಾಮಾಣಿಕ’ ಅನ್ನೋ ಸವಕಲು ನಾಣ್ಯವನ್ನ ಯಾಕೆ ಇನ್ನೂ ಚಲಾವಣೆಯಲ್ಲಿ ಇಡೋ ಪ್ರಯತ್ನ ಮಾಡ್ತಿದೀರಿ ? ….ಜನರನ್ನ ಮೂರ್ಖರನ್ನಾಗಿಸೋ ಕಾಲ ಮುಗಿದಿದೆ ,ಕೇವಲ ‘ಭಾಗ್ಯ’ಗಳ ಮೂಲಕ ಸಮಾಜದ ಸುಧಾರಣೆ ಆಗೋಲ್ಲಾ,ನೀವು ಮಾಡ್ತಿರೋದು ಭಾಗ್ಯಗಳ ಮುಖೇನ ಜಾತಿ ಮತಗಳ ಆಧಾರದಲ್ಲಿ ಸಮಾಜವನ್ನು ಒಡೆದು ಆಳೋ ನೀತಿಯನ್ನೇ … ಅದು ಸಮಾಜದಲ್ಲಿ ಅಸಮಧಾನದ ಸೆಳುಕುಗಳನ್ನ ಹುಟ್ಟುಹಾಕ್ತಿದೆ ಹಾಗು ಅದು ಜನರ ಸಾಮರಸ್ಯವನ್ನ ಹಾಳುಗೆಡವುತ್ತಿದೆ …ಆದ್ದರಿಂದ ನೀವೀಗ ಬೀಜೆಪಿಯವರನ್ನ ‘ಕೋಮುವಾದಿಗಳು’ ಅನ್ನೋ ನೈತಿಕತೆಯನ್ನ ಕಳೆದುಕೊಂಡು ಯಾವುದೋ ಕಾಲಾವಾಗಿದೆ….ಮೊನ್ನೆಯ ಘಟನೆಯಿಂದಾಗಿ ಪ್ರಾಮಾಣಿಕ ಅಧಿಕಾರಿಗಳ ಆತ್ಮಸ್ಥೈರ್ಯವೇ ಮುರಿದುಹೋಗಿರತ್ತೆ ಅವರುಗಳನ್ನ ವಿಶ್ವಾಸಕ್ಕೆ ತೆಗೆದುಕೊಂಡು ನೆಟ್ಟಗೆ ಅಧಿಕಾರ ನಡೆಸಿ ಸ್ವಾಮಿ,ಇಲ್ಲಾಂದ್ರೆ ಮುಂದಿನ ಪೀಳಿಗೆ ಇತಿಹಾಸದ ಪುಟಗಳನ್ನ ತಿರುವಿದಾಗ ಇಂತಹವರಿಂದಲೂ ನಮ್ಮ ರಾಜ್ಯ ಆಳಲ್ಪಟ್ಟಿತ್ತಲ್ಲ ಅಂತ ಅಸಹ್ಯಿಸಿಕೊಂಡಾರು…..

***

8.

-ರಾಘವೇಂದ್ರ ರಾವ್‍

ಪ್ರತಿನಿತ್ಯ ದಿನಪತ್ರಿಕೆ ಓದುತ್ತಿದ್ದ ನನ್ನ ಮಗಳಿಗೆ ಡಿ.ಕೆ.ರವಿ ಅವರ ಕೆಲಸ ಕಾರ್ಯಗಳು ಬಹಳ ಅಚ್ಚುಮೆಚ್ಚಾಗಿದ್ದವು. ಏಳನೆಯ ತರಗತಿಯಲ್ಲಿದ್ದರೂ ಅವಳಿಗೆ ತಾನೂ ಅಂತೆಯೇ ಐಎಎಸ್ ಅಧಿಕಾರಿ ಆಗಬೇಕೆಂಬ ಆಸೆ ಚಿಗುರಿದ್ದು ರವಿಯವರು. ಕಾರಲ್ಲಿ ಅವರು ಓಡಾಡುವುದನ್ನು ಕಾಣುತ್ತಿದ್ದ ಆವಳಿಗೆ ಒಮ್ಮೆ ಅವರನ್ನು raghavendra rao1ಕಂಡು ಮಾತನಾಡಬೇಕೆಂಬ ಆಸೆ…. ಜಿಲ್ಲಾಧಿಕಾರಿ, ಅವರ ಕಾರ್ಯಭಾರಗಳು ಅವರ ಒತ್ತಡಗಳು, ಶಿಷ್ಟಾಚಾರ… ಇತ್ಯಾದಿಗಳ ಅರಿವಿದ್ದ ನಮಗೆ ಅವರನ್ನು ಕಾಣಲು ಹಿಂಜರಿಕೆ. ವಿದ್ಯಾರ್ಥಿಗಳೆಂದರೆ ಅವರಿಗೆ ಅಚ್ಚುಮೆಚ್ಚು… ಆದ್ದರಿಂದ ಧೈರ್ಯ ಮಾಡಿ ಕಛೇರಿ ಬಳಿ ಹೋದೆವು. ಚುನಾವಣಾ ಪೂರ್ವ ಭರದ ಕೆಲಸ ಅಲ್ಲಿ ಸಾಗಿತ್ತು. ಹೊರಗೆ ಇದ್ದ ಸಿಬ್ಬಂದಿ ಸಾಕಷ್ಟು ಕಾಯಿಸಿದರು. ವಿದ್ಯಾರ್ಥಿ ಅವರನ್ನು ನೋಡಬಯಸಿದ್ದಾಳೆಂದು ಗೊತ್ತಾದ ತಕ್ಷಣ ಮೊದಲೇ ಹೇಳಬಾರದಿತ್ತಾ… ಎಂದು ಒಳಗೆ ಕಳುಹಿಸಿದರು. ಡಿ.ಕೆ.ರವಿ ಅವರ ನಗುಮೊಗ ನಮ್ಮ ಆತಂಕ, ಭಯಗಳನ್ನು ದೂರ ಮಾಡಿತು. ರಕ್ಷಾಳೊಡನೆ ಬಹಳಾ ಆತ್ಮೀಯವಾಗಿ ಮನೆಯ ನೆಂಟ ಎನ್ನುವಂತೆ ಮಾತನಾಡಿದರು. ಅವಳ ಆಕಾಂಕ್ಷೆಯನ್ನು ಕೇಳಿ ತಿಳಿದು. ಕೆಲವು ಹಿತವಚನ ಹೇಳಿದರು. ಹೆಣ್ಣು ಮಕ್ಕಳು ಚೆನ್ನಾಗಿ ಓದಲೇಬೇಕು ಎಂದರು. ಆಟೋಗ್ರಾಫ್, ಫೋಟೋಗ್ರಾಫ್ ಗೆ ಅವಕಾಶ ಕೊಟ್ಟರು. ತಾವೇ ಪುಸ್ತಕದ ಒಂದು ಹಾಳೆಯನ್ನು ತೆಗೆದು Raksha All the best ಎಂದು ಬರೆದು ಕೊಟ್ಟರು. ಅವರ ಸ್ನೇಹ, ಸೌಜನ್ಯಪೂರ್ಣ ನಡವಳಿಕೆ ನಮ್ಮಗಳ ಮೇಲೆ ಉಂಟುಮಾಡಿದ ಸದ್ಭಾವನೆ ನಮ್ಮ ಜೀವನಪೂರ್ತಿ ಉಳಿಯುವಂತಹದ್ದು. ಒಳಿತಿನ ಮೇಲೆ ನಮ್ಮ ನಂಬುಗೆಯನ್ನು ಹೆಚ್ಚಿಸಿತು.
ಅವರ ಸಾವಿಗೆ ಪರಿಹಾರವಿಲ್ಲ. ಸಾವನ್ನು ತಂದವರಿಗೆ ಒಳಿತಾಗುವ ಸಂಭವವಿಲ್ಲ… ಇವರ ಸಾವು ಅವರಂತಹ ಚೇತನಗಳಿಗೆ ಮತ್ತಷ್ಟು ಶಕ್ತಿ ತುಂಬಲಿ…
ಸುದ್ಧಿ ತಿಳಿದಾಗಿನಿಂದ ಮನದಲ್ಲ್ಲಿ ಮನೆಯಲ್ಲಿ ಸೂತಕದ ವಾತಾವರಣ.

***

9.

– ಮುರಳಿ ತರೀಕೆರೆ

ಧಿಕ್ಕಾರ…!!!

ಪ್ರಾಮಾಣಿಕ ಅಧಿಕಾರಿಗಳನ್ನ ಬಲಿ ಪಡೆದುಕೊಳ್ಳುವ ಭ್ರಷ್ಟ ವ್ಯವಸ್ತೆಗೆ ನನ್ನ ಧಿಕ್ಕಾರ, 
ಭುಗಳ್ಳತನ, ಮರಳು ಮಾಫಿಯ ಇತ್ಯಾದಿ ಮಾಫಿಯಗಳನ್ನು ತಮ್ಮ ಓಡಲಿನಲ್ಲಿಟ್ಟುಕೊಂಡು ಪೋಷಿಸುವ ನೀಚ ರಾಜಕಾರಣಿಗಳಿಗೆ ನನ್ನ ಧಿಕ್ಕಾರ,
ಅಧಿಕಾರದ ದುರ್ಭಳಕೆ ಮಾಡಿಕೊಳ್ಳುವ ಭ್ರಷ್ಟ ಅಧಿಕಾರಿಗಳಿಗೆ ನನ್ನ ಧಿಕ್ಕಾರ,
ದಕ್ಷ, ಪ್ರಾಮಾಣಿಕ ಅಧಿಕಾರಿಯೊಬ್ಬರನ್ನ ಉಳಿಸಿಕೊಳ್ಳಲಾಗದ ಆಡಳಿತ ಪಕ್ಷಕ್ಕೆ ನನ್ನ ಧಿಕ್ಕಾರ, 
ಅವಕಾಶ ಬಳಸಿ ತಮ್ಮ ತೂತುಗಳನ್ನ ಮುಚ್ಚಿಕೊಳ್ಳುತ್ತ, ಪರಸ್ಪರ ಕೆಸರಾಟ ನಡೆಸುವ ವಿರೋದ ಪಕ್ಷಗಳಿಗೂ ನನ್ನ ಧಿಕ್ಕಾರ.
ಸತ್ತ ಮೂರು ದಿನ, ಕೂಗಾಡಿಚೀರಾಡಿ, ಮತ್ತೆ ಮರು ದಿನ ಎಲ್ಲವನ್ನು ಮರೆತು, ಪ್ರಾಮಾಣಿಕ ಅಧಿಕಾರಿಯೊಬ್ಬರ ಒಂದೆರಡು ಆದರ್ಶಗಳನ್ನ ರೂಡಿಸಿಕೊಳ್ಳದ ಮಸುಳೆಗಣ್ಣಿನ ಮನಸುಗಳಿಗೆ ಧಿಕ್ಕಾರ.
.
.
ಇಷ್ಟೆಲ್ಲಾ ಆದರೂ ದೂರದ ಬೆಟ್ಟದ ಗರ್ಭ ಗೂಡಿಯಲ್ಲಿ ಸುಮ್ಮನೆ ಕಲ್ಲಾಗಿ ಕೂಳಿತ ದೇವನಿಗೂ ನನ್ನ ಧಿಕಾರ

ನಿಮ್ಮ ಆದರ್ಶಗಳು ನನ್ನಂತ ಕೋಟಿ ಯುವ ಮನಸುಗಳಿಗೆ ದಾರಿದೀಪ, ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ರವಿ ಸರ್

***

10.

-ರಾಹುಲ್‍ ಬೆಳಗಲಿ

473590681ಹೀಗೂ ಒಮ್ಮೆ ಆಲೋಚಿಸಿ……
ಒಬ್ಬ ಅಧಿಕಾರಿ, ರಾಜಕಾರಣಿ ಅಥವಾ ಸಾಮಾನ್ಯ ವ್ಯಕ್ತಿಯೇ ಆತ್ಮಹತ್ಯೆ ಮಾಡಿಕೊಂಡರೂ ಅಥವಾ ಸಾವನ್ನಪ್ಪಿದರೂ ಅದಕ್ಕೆ ಕಾರಣಗಳು ಹಲವು ಇರುತ್ತವೆ. ಎಲ್ಲದಕ್ಕೂ ವ್ಯವಸ್ಥೆ ಅಥವಾ ಸರ್ಕಾರವೊಂದೇ ಕಾರಣವಾಗಿರುವುದಿಲ್ಲ. ಆ ವ್ಯಕ್ತಿ 24 ಗಂಟೆಯೂ ಬರೀ ಸಮಾಜ, ಸರ್ಕಾರ ಮತ್ತು ಅವ್ಯವಸ್ಥೆ ಬಗ್ಗೆ ಚಿಂತಿಸುವುದಿಲ್ಲ. ಕಚೇರಿ ಕೆಲಸದ ನಂತರ ತನ್ನದೇ ಆದ ವೈಯಕ್ತಿಕ ಜೀವನ, ಕುಟುಂಬ, ಸ್ನೇಹಬಳಗ ಎಂದೆಲ್ಲಾ ಇರುತ್ತದೆ. ಆತ ಅಥವಾ ಆಕೆ ಕೂಡ ಮನುಷ್ಯ. ಎಲ್ಲರಂತೆಯೇ ಮಾನವ ಸಹಜ ಗುಣ, ಸಂಕಷ್ಟ, ಸಮಸ್ಯೆ, ನೋವು, ನಲಿವು ಇರುತ್ತವೆ. ಯಾರ ಮುಂದೆಯೂ ಹೇಳಿಕೊಳ್ಳಲಾಗದ ಮತ್ತು ಹಂಚಿಕೊಳ್ಳಲಾಗದ ನೋವು, ಸಂಕಟ, ಯಾತನೆ ಮತ್ತು ಅಸಹಾಯಕತೆಯೂ ಇರುತ್ತವೆ. ವ್ಯಕ್ತಿ ಎಷ್ಟೇ ಎತ್ತರಕ್ಕೇರಿದರೂ ಆತ ಆಥವಾ ಆಕೆ ದೇವಮಾನವ ಆಗುವುದಿಲ್ಲ. ಎಲ್ಲಾ ರೀತಿಯ ಸಮಸ್ಯೆಗಳಿಂದ ಸುಲಭವಾಗಿ ಪಾರಾಗಲು ಸಹ ಸಾಧ್ಯವಾಗುವುದಿಲ್ಲ. ಸಾವು ತಂದೊಡ್ಡುವ ಕೆಲ ಕಾರಣಗಳು ಕೆಲ ಬಾರಿ ಬಹಿರಂಗ ಆಗುತ್ತವೆ. ಕೆಲವೊಮ್ಮೆ ಸಾವಿನೊಂದಿಗೆ ಮಣ್ಣಾಗುತ್ತವೆ. ಎಲ್ಲದಕ್ಕೂ ಬರೀ ವ್ಯವಸ್ಥೆಯನ್ನೇ ದೂಷಿಸುವುದು ಆಗಿದ್ದರೆ, ಈ ವೇಳೆಗೆ ಯಾರೂ ಸಹ ಬದಕುತ್ತಿರಲಿಲ್ಲ. ಈ ಸಮಾಜವು ಇಷ್ಟು ಚಲನಶೀಲತೆಯಿಂದ ನಡೆಯುತ್ತಿರಲಿಲ್ಲ. ಆದರೆ ಇದನ್ನೇ ನೆಪವಾಗಿಸಿಕೊಂಡು ಪ್ರಾಮಾಣಿಕತೆಗೆ ಇತಿಶ್ರೀ ಹಾಡುವುದು ಮತ್ತು ಯಾರೂ ಸಹ ಅಂತಹ ಹುದ್ದೆಗೇರಲು ಪ್ರಯತ್ನಿಸಬೇಡಿ ಎನ್ನುವುದು ನಿರಾಸೆ ಮತ್ತು ಭಾವೋದ್ರೇಕದ ಪರಮಾವಧಿಯೇ ಹೊರತು ಮತ್ತೇನೂ ಅಲ್ಲ….ಹೀಗೂ ಒಮ್ಮೆ ಆಲೋಚಿಸಿ.

***

 

ರಾಜ್ಯದ ಮುಖ್ಯಮಂತ್ರಿಗಳಿಗೆ ಪ್ರಧಾನ ಮಂತ್ರಿ ನೆಹರೂ ಬರೆದ ಕೆಲವು ಪತ್ರಗಳು (1947-1953)

ಅನುವಾದ : ಬಿ.ಶ್ರೀಪಾದ ಭಟ್

(ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಕ್ಷಣದಿಂದ ಇಂಡಿಯಾ ದೇಶ ಹಿಂದುತ್ವ ಮೂಲಭೂತವಾದಿಗಳ ದೌರ್ಜನ್ಯದಿಂದ ನಲಗುತ್ತಿದೆ. ಹಿಂದೂ ಧರ್ಮದಲ್ಲಿ ಜಾತೀಯತೆಯ ಕ್ರೌರ್ಯದಿಂದ ಉಸಿರುಗಟ್ಟುತ್ತಿದ್ದರೂ ಅಲ್ಲೇ ಸಾಯಬೇಕೆ ಹೊರತಾಗಿ ಯಾವುದೇ ಮತಕ್ಕೆ ಹೋಗುವಂತಿಲ್ಲ, ಬೇರೆ ಧರ್ಮದವರು ಸಾರ್ವಜನಿಕವಾಗಿ ಬದುಕುವಂತಿಲ್ಲ, ದನ ತಿನ್ನುವಂತಿಲ್ಲ, ಮಹಿಳೆ ಮಂಗಳಸೂತ್ರ, ಕಾಲುಂಗರ ಧರಿಸಲೇಬೇಕು. ಹೀಗೆ ಸಂಘ ಪರಿವಾರದ ಎಣೆಯಿಲ್ಲದಷ್ಟು ಹಿಂದೂಯಿಸಂನ ಮತೀಯ ಮೂಲಭೂತವಾದ ಇಂದು ಪ್ರಜ್ಞಾವಂತರನ್ನು ಉಸಿರುಗಟ್ಟಿಸುತ್ತಿದೆ. ತೀರಾ ಇತ್ತೀಚೆಗೆ ಪರಿಸರವಾದಿ ಗ್ರೀನ್ ಪೀಸ್ ಸಂಘಟನೆಯ ಆಕ್ಟಿವಿಸ್ಟ್ ಪ್ರಿಯಾ ಪಿಳ್ಳೆ ಬ್ರಿಟೀಷ್ ಸಂಸತ್ತಿನಲ್ಲಿ ಭಾಗವಹಿಸಿ ವಿದೇಶಿ ಕಂಪನಿಯೊಂದು ವ್ಯಾಪಾರದ ಹೆಸರಿನಲ್ಲಿ ಇಂಡಿಯಾದಲ್ಲಿ ನಡೆಸುತ್ತಿರುವ ಪರಿಸರ ನಾಶದ ಕುರಿತು ಕಾರ್ಪೋರೇಟ್ ದುಷ್ಟ ಶಕ್ತಿಗಳ ಕುರಿತು ಮಾತನಾಡುವವರಿದ್ದರು. ಆದರೆ 56 ಇಂಚಿನ ಎದೆಯ ಮೋದಿಯ ಕೇಂದ್ರ ಸರ್ಕಾರ ಅವರು ದೇಶ ಬಿಟ್ಟು ಹೋಗದಂತೆ ನಿರ್ಬಂಧ ವಿಧಿಸಿತು. ಇದು ಅಪ್ಪಟ ಸರ್ವಾಧಿಕಾರಿ ಫ್ಯಾಸಿಸ್ಟ್ ವರ್ತನೆ. ದೇಶದ ಪ್ರಜಾಪ್ರಭುತ್ವವನ್ನು ಕೈಯಾರೆ ನಾಶಪಡಿಸುತ್ತಿರುವ ಈ ಫ್ಯಾಸಿಸ್ಟ್ ಬಿಜೆಪಿ ಸರ್ಕಾರಕ್ಕೆ ಹೈಕೋರ್ಟ ಕಠಿಣ ಪದಗಳಲ್ಲಿ ಛೀಮಾರಿ ಹಾಕಿದೆ. ಪ್ರಿಯಾ ಪಿಳ್ಳೆಯ ವ್ಯಕ್ತಿ ಸ್ವಾತಂತ್ರವನ್ನು ಎತ್ತಿ ಹಿಡಿದಿದೆ. ಸಂಘ ಪರಿವಾರದ ಈ ಪ್ರಜಾಪ್ರಭುತ್ವ ವಿರೋಧಿ ಫೆನಟಿಸಂ ಅನ್ನು ಆಗಿನ ಪ್ರಧಾನಿ ನೆಹರೂ ಅವರು ನಲವತ್ತರ ದಶಕದಲ್ಲೇ ಮನಗಂಡಿದ್ದರು. ಆರೆಸ್ಸಸ್ ಅನ್ನು ಒಂದು ಅಪಾಯಕಾರಿ ಸೀಕ್ರೆಟ್ ಸೊಸೈಟಿ ಎಂದು ಎಚ್ಚರಿಸಿದ್ದರು. ಈ ಕೋಮುವಾದಿ ದುಷ್ಟ ಶಕ್ತಿಗಳು ದೇಶಕ್ಕೆ ಸದಾ ಕಂಟಕಪ್ರಾಯರಾಗಿರುತ್ತಾರೆ ಎಂದು ನಿರ್ದಾಕ್ಷೀಣ್ಯವಾಗಿ ಬರೆದಿದ್ದರು. ತಮ್ಮ ಅಧಿಕಾರ ಅವಧಿಯಲ್ಲಿ ಎಲ್ಲಾ ಮುಖ್ಯಮಂತ್ರಿಗಳಿಗೆ ಪ್ರತಿ ಹದಿನೈದು ದಿನಕ್ಕೊಮ್ಮೆ ತಪ್ಪದೆ ನಿಯಮಿತವಾಗಿ ಪತ್ರ ಬರೆಯುತ್ತಿದ್ದರು. ಅವುಗಳಲ್ಲಿ ಆಯ್ದ ಮತೀಯವಾದ ಕೋಮುವಾದಕ್ಕೆ ಸಂಬಂದಿಸಿದ ಕೆಲವು ಪತ್ರಗಳನ್ನು ಇಲ್ಲಿ ಅನುವಾದಿಸಲಾಗಿದೆ)

ಪತ್ರ 1

ಕೇಂದ್ರ ಅಥವಾ ಪ್ರಾದೇಶಿಕ ಯಾವುದೇ ಸರ್ಕಾರವಾಗಿರಲಿ ಒಂದು ಸರ್ಕಾರವಾಗಿ ನಾವು ಯಾವುದೇ ಗುಂಪು ಅಥವ ಪಕ್ಷದ ಪರವಾಗಿletters for editors ಪಕ್ಷಪಾತಿಯಾಗಿ ವರ್ತಿಸಬಾರದು. ಒಂದು ಸರ್ಕಾರವಾಗಿ ನಾವು ಕೇವಲ ಕೆಲವೇ ಜನರ ಗುಂಪು ಎಂದು ಮಾತ್ರ ಪರಿಗಣಿಸಬಾರದು ಏಕೆಂದರೆ ನಮಗೆ ಆದರ್ಶಗಳಿವೆ, ಸಿದ್ಧಾಂತಗಳಿವೆ. ಯಾವುದೇ ವ್ಯಕ್ತಿ ಅಥವಾ ಗುಂಪು ಆ ಅದರ್ಶಗಳನ್ನು, ಸಿದ್ಧಾಂತಗಳನ್ನು ವಿರೋಧಿಸಿದರೆ ನಮ್ಮ ಸಂಪೂರ್ಣ ಸಾಮರ್ಥ್ಯ ಬಲದಿಂದ ನಾವು ಆ ಸವಾಲನ್ನು ಸ್ವೀಕರಿಸಬೇಕು ಮತ್ತು ಅದನ್ನು ಸ್ವೀಕರಿಸಲು ಪ್ರಸ್ತಾವಿಸುತ್ತೇವೆ, ಕಳೆದ ಕೆಲವು ವರ್ಷಗಳಿಂದ ಮುಸ್ಲಿಂಲೀಗ್ ಮತ್ತು ಪಾಕಿಸ್ತಾನ ದೇಶವು ಪ್ರಾರಂಬಿಸಿದ ಕೆಲವು ದುಷ್ಟ ನೀತಿಗಳಿಂದಾಗಿ ಉಂಟಾದ ಘೋರವಾದ ಪರಿಣಾಮಗಳ ಕುರಿತಾಗಿ ನಾನು ನಿಮಗೆಲ್ಲ ಬರೆಯುವ ಅವಶ್ಯಕತೆ ಇಲ್ಲವೆಂದೇ ಭಾವಿಸುತ್ತೇನೆ. ಇದರ ಕುರಿತಾಗಿ ನಮಗೆಲ್ಲ ಮಾಹಿತಿ ಇದೆ ಮತ್ತು ಅದರಿಂದುಂಟಾದ ಪರಿಣಾಮಗಳು ನಮಗೆಲ್ಲ ಗೊತ್ತಿದೆ. ಈ ದುಷ್ಟ ನೀತಿಗಳಿಂದ ಉಂಟಾದ ಪರಿಣಾಮಗಳು ಸಂಪೂರ್ಣವಾಗಿ ಕೊನೆಯಾಗದೆ ಇನ್ನೂ ಸಶಕ್ತವಾಗಿವೆ ಮತ್ತು ಈ ಕಾರಣಕ್ಕಾಗಿ ನಾವೆಲ್ಲ ಇನ್ನುಮುಂದೆಯೂ ಜಾಗೂರಕರಗಾಗಿ ಇರಬೇಕಾಗುತ್ತದೆ. ಒಂದು ಬಗೆಯ ಅಪಾಯ ಮತ್ತು ಆತಂಕದ ವಾತಾವರಣವಿದೆ ಮತ್ತು ನಾವು ವಿಶ್ರಮಿಸಿಕೊಳ್ಳಲು ಸಾಧ್ಯವಿಲ್ಲ. ಕೆಲ ಜನರು ಯುದ್ಧದ ಕುರಿತಾಗಿ ಪ್ರಾಥಮಿಕ ತಿಳುವಳಿಕೆ ಸಹ ಗೊತ್ತಿಲ್ಲದೆ ಅದರ ಕುರಿತಾಗಿ ಮೂರ್ಖತನದಿಂದ ಮಾತನಾಡುತ್ತಿದ್ದಾರೆ. ಇಂತಹ ಮಾತುಕತೆಗಳನ್ನು ನಾವು ಪುರಸ್ಕರಿಸಬಾರದು. ಆದರೆ ಅಪಾಯಕಾರಿಯಾದ ಸಾಧ್ಯತೆಗಳನ್ನು ಒಳಗೊಂಡಿರುವ ಪ್ರಸ್ತುತ ಸಂದರ್ಭದಲ್ಲಿ ನಾವು ಆಕಸ್ಮಿಕ ಘಟನೆಗಳಿಗೆ ತಯಾರಾಗಿರಬೇಕಾಗಿದೆ ಮತ್ತು ಪೂರ್ವಭಾವಿ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗಿದೆ.

ಇಲ್ಲಿ ನಮಗೆ ಒಳಗಿನಿಂದಾಗಲಿ ಅಥವ ಬಾಹ್ಯದಿಂದ ಉಂಟಾಗುವ ಅಪಾಯಗಳ ಸಾಧ್ಯತೆ ಕಡಿಮೆ ಮಟ್ಟದಲ್ಲಿದೆ. ಆದರೆ ನಮ್ಮೊಳಗಿನ ಕೋಮುವಾದಿ ಸಂಘಟನೆಗಳು ಮತ್ತು ಪ್ರತಿಗಾಮಿ ಶಕ್ತಿಗಳು ಸ್ವತಂತ್ರ ಇಂಡಿಯಾದ ಭಾವೈಕ್ಯತೆಯನ್ನು ಒಡೆಯಲು ಪ್ರಯತ್ನಿಸುತ್ತಿವೆ. ಆದರೆ ಈ ನಾಶವೇನಾದರು ಸಂಭವಿಸಿದರೆ ಅದರಿಂದುಂಟಾಗುವ ಕ್ರಿಯೆ ಪ್ರತಿಕ್ರಿಯೆಗಳಲ್ಲಿ ತಾವೆಲ್ಲರೂ ಕೊಚ್ಚಿಹೋಗುತ್ತೇವೆಂದು ಈ ಕೋಮುವಾದಿ ಸಂಘಟನೆಗಳಿಗೆ ಅರಿವಿಲ್ಲ. ಆದರೂ ಈ ನಾಶವು ಸಂಭವಿಸುವುದಿಲ್ಲ ಮತ್ತು ನಾವು ಸಧೃಡವಾಗಿ ಮತ್ತು ಪರಿಪೂರ್ಣವಾಗಿ ಈ ಪ್ರತಿಗಾಮಿ ಶಕ್ತಿಗಳೊಂದಿಗೆ ಮುಖಾಮುಖಿಯಾಗಬೇಕಾಗಿದೆ

22 ನವೆಂಬರ್, 1947

ಪತ್ರ 2

ಕೆಲವು ಪ್ರಾಂತ್ಯಗಳಲ್ಲಿ ಆರೆಸ್ಸಸ್ ಸಂಘಟನೆಯು ದೊಡ್ಡ ಮಟ್ಟದ ಪ್ರತಿಭಟನೆಗಳನ್ನು ಹಮ್ಮಿಕೊಂಡಿದೆ ಎಂದು ನನಗೆ ವರದಿಗಳು ಬರುತ್ತಿವೆ. ಸೆಕ್ಷನ್ 144 ಜಾರಿಯಲ್ಲಿದ್ದರೂ ಈ ಪ್ರತಿಭಟನೆಗಳನ್ನು ಆಯೋಜಿಸಲಾಗುತ್ತಿದೆ. ಕೆಲವು ಪ್ರಾಂತ್ಯಗಳ ಆಡಳಿತ ನಡೆಸುತ್ತಿರುವ ಸರ್ಕಾರಗಳು ಈ ವಿಷಯದಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ ಮತ್ತು ಪ್ರಜಾಪ್ರಭುತ್ವದ ಶಾಸನದ ಅದೇಶಗಳನ್ನು ಫೆನಟಿಸಂ ಶಕ್ತಿಗಳು ಉಲ್ಲಂಘಿಸುತ್ತಿದ್ದರೂ ಈ ಸರ್ಕಾರಗಳು ಆ ಉಲ್ಲಂಘನೆಯನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಈ ವಿಷಯದಲ್ಲಿ ನಾನು ನಿಮ್ಮ ವಿವೇಚನೆಯ ಶಕ್ತಿಗೆ ಅಡ್ಡಿಬರಲು ಬಯಸುವುದಿಲ್ಲ. ಆದರೆ ಪ್ರಜಾಪ್ರಭುತ್ವದ ಶಾಸನದ ವಿರುದ್ಧ ಈ ಬಗೆಯ ಉಲ್ಲಂಘನೆಗಳನ್ನು ಸಮ್ಮತಿಸುವುದರಿಂದಾಗಿ ಮುಂದಿನ ದಿನಗಳಲ್ಲಿ ಘೋರ ಪರಿಣಾಮಗಳನ್ನೆದುರಿಸಬೇಕಾಗುತ್ತದೆ.

ಖಾಸಗಿ ಮಿಲಿಟರಿ ಮಾದರಿಯಲ್ಲಿರುವ ಆರೆಸ್ಸಸ್ ಸಂಘಟನೆ ತನ್ನ ಚಿಂತನೆಗಳಲ್ಲಿ ಮತ್ತು ಸಂಸ್ಥೆಯನ್ನು ವಿವಿಧ ಹಂತಗಳಲ್ಲಿRSS_meeting_1939 ಕಟ್ಟುವುದರಲ್ಲಿನ ನೈಪುಣ್ಯತೆಯಲ್ಲಿ ಮತ್ತು ಕಾರ್ಯವಿಧಾನದಲ್ಲಿ ಸಂಪೂರ್ಣವಾಗಿ ಜರ್ಮನಿಯ ನಾಜಿಗಳ ಮಾದರಿಯನ್ನು ಅನುಸರಿಸುತ್ತಿದೆ ಮತ್ತು ಈ ಕುರಿತಾಗಿ ನಮ್ಮ ಬಳಿ ಖಚಿತವಾದ, ನಿಖರವಾದ ಸಾಕ್ಷಿಗಳಿವೆ. ಆದರೆ ನಾಗರಿಕ ಹಕ್ಕುಗಳ ವಿಷಯದಲ್ಲಿ ನಾವು ಮಧ್ಯೆ ತಲೆ ಹಾಕುವುದಿಲ್ಲ. ಅದೇ ವೇಳೆ ತಮ್ಮ ಗುಪ್ತ ಕಾರ್ಯಸೂಚಿಯ ಅನುಷ್ಠಾನಕ್ಕಾಗಿ ಅಸಂಖ್ಯಾತ ಸಂಖ್ಯೆಯಲ್ಲಿ ಸ್ವಯಂಸೇವಕರಿಗೆ ಶಸ್ತ್ರಾಸ್ತ್ರ ತರಬೇತಿ ಕೊಡುವುದನ್ನು ನಾವು ಪ್ರೋತ್ಸಾಹಿಸುವುದಿಲ್ಲ. ಹಾಗೆಯೇ ಖಂಡಿತವಾಗಿ ಮತ್ತು ಉದ್ದೇಶಪೂರ್ವಕವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಆರೆಸ್ಸಸ್ ಸಂಘಟನೆ ವಿರೋಧಿಸುತ್ತಿದೆ ಎನ್ನುವ ಕಾರಣಕ್ಕಾಗಿ ನಾವು ಅದರ ವಿರುದ್ಧ ಕ್ರಮ ಕೈಗೊಳ್ಳುವುದಿಲ್ಲ ಮತ್ತು ಯಾವುದೇ ಬಗೆಯ ನ್ಯಾಯಸಮ್ಮತವಾದ ನೆಲೆಯಲ್ಲಿನ ವಿರೋಧವನ್ನು ನಾವು ಮನ್ನಿಸಲೇಬೇಕಾಗುತ್ತದೆ ಮತ್ತು ಅದಕ್ಕೆ ಅವಕಾಶ ಮಾಡಿಕೊಡುತ್ತೇವೆ. ಆದರೆ ಈ ಬಗೆಯ ಚಟುವಟಿಕೆಗಳು ಒಂದು ಒಪ್ಪಿತ ಮಿತಿಯನ್ನು ದಾಟಿ ಮುಂದುವರೆಯುತ್ತಿವೆ ಮತ್ತು ಪ್ರಾಂತೀಯ ಸರ್ಕಾರಗಳು ಆರೆಸ್ಸಸ್ ನ ಈ ಚಟುವಟಿಕೆಗಳ ಮೇಲೆ ಸದಾ ಕಣ್ಣಿಟ್ಟಿರಬೇಕು ಮತ್ತು ಅವಶ್ಯಕತೆ ಉಂಟಾದಲ್ಲಿ ಕ್ರಮ ಜರುಗಿಸಲು ಸಹ ಹಿಂಜರಿಯಬಾರದು

ಎರಡು ಭಿನ್ನ ಧರ್ಮಗಳ ನಡುವೆ ದ್ವೇಷ ಭಾವನೆಯನ್ನು ಪ್ರೋತ್ಸಾಹಿಸುತ್ತಿರುವ ಹಲವು ನಿಯತಕಾಲಿಕೆಗಳ ವಿರುದ್ಧ ಕೆಲವು ಪ್ರಾಂತೀಯ ಸರ್ಕಾರಗಳು ಶಿಸ್ತು ಕ್ರಮ ಕೈಗೊಂಡಿವೆ. ಆದರೆ ಈ ವಿಷಯದಲ್ಲಿ ಬೇರೆ ದಿನಪತ್ರಿಕೆಗಳಿಂಗಿತಲೂ ಮಿಗಿಲಾಗಿ ಈ ಆರೆಸ್ಸಸ್ ಸಂಘಟನೆಯ ದಿನ ಪತ್ರಿಕೆಗಳನ್ನು ದೂಷಿಸಬೇಕಾಗುತ್ತದೆ. ಈ ಆರೆಸ್ಸಸ್ ನ ಪತ್ರಿಕೆಗಳು ಕೋಮುವಾದಿ ಅಜೆಂಡಾವನ್ನು ಈ ಮಾದರಿಯ ಉಗ್ರ ಮಟ್ಟದಲ್ಲಿ ಅದು ಹೇಗೆ ಪ್ರಚಾರ ಮಾಡುತ್ತವೆ ಎಂದು ಒಮ್ಮೊಮ್ಮೆ ಆಶ್ಚರ್ಯವಾಗುತ್ತದೆ.

ಜರ್ಮನಿಯಲ್ಲಿ ನಾಜಿ ಚಳುವಳಿ ಬೆಳೆದ ಬಗೆಯ ಕುರಿತಾಗಿ ನನಗೆ ಸ್ವಲ್ಪ ಮಾಹಿತಿ ಇದೆ. ಕೆಳ ಮಧ್ಯಮ ವರ್ಗದ ತರುಣರು ಮತ್ತು ಮಹಿಳೆಯರನ್ನು ಪೊಳ್ಳಾದ, ಬಾಹ್ಯಾಡಂಬರದ ಬಲೆಗೆ ಕೆಡವಿಕೊಳ್ಳುವ ವಿಧಾನಗಳ ಮೂಲಕ ಅವರನ್ನು ತನ್ನೆಡೆಗೆ ಆಕರ್ಷಿಸಿತು. ಬುದ್ಧಿಮಟ್ಟದಲ್ಲಿ ಅಷ್ಟೊಂದು ಪರಿಣಿತಿ ಇಲ್ಲದ ಈ ವರ್ಗಕ್ಕೆ ಜೀವನದಲ್ಲಿ ಹೇಳಿಕೊಳ್ಳುವಂತಹ ಮೌಲ್ಯಗಳು ಇಲ್ಲದೇ ಇರುವುದಕ್ಕಾಗಿ ಇವರು ನಾಜಿ ಚಳುವಳಿಗೆ ಆಕರ್ಷಿತರಾದರು. ತುಂಬಾ ಸರಳವಾಗಿದ್ದ, ಮಾನಸಿಕ ಚೈತನ್ಯತೆಯ ಕೊರತೆಯಿಂದಾಗಿ ಈ ತರುಣರು ಮತ್ತು ಮಹಿಳೆಯರು ಸಿದ್ಧಾಂತಗಳು ಮತ್ತು ಯೋಜನೆಗಳಲ್ಲಿ ಸಂಪೂರ್ಣವಾಗಿ ಖುಣಾತ್ಮಕವಾಗಿದ್ದ ಈ ನಾಜಿ ಪಾರ್ಟಿಯೆಡೆಗೆ ಆಸಕ್ತಿ ಬೆಳಸಿಕೊಂಡರು. ನಾಜಿ ಪಕ್ಷವು ಜರ್ಮನಿ ದೇಶವನ್ನು ವಿನಾಶದೆಡೆಗೆ ಕೊಂಡೊಯ್ಯಿತು ಮತ್ತು ಇದೇ ಮಾದರಿಯ ಶಕ್ತಿಗಳನ್ನು ಇಂಡಿಯಾದಲ್ಲಿ ಬೆಳೆಯಲಿಕ್ಕೆ ಬಿಟ್ಟಲ್ಲಿ ಇಂಡಿಯಾ ದೇಶಕ್ಕೂ ಜರ್ಮನಿ ದೇಶಕ್ಕೆ ಆದ ಹಾನಿಯನ್ನೇ ಮಾಡುತ್ತಾರೆ. ಆದರೂ ಇಂಡಿಯಾ ದೇಶವು ಬದುಕುಳಿಯುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ. ಆದರೆ ಅಪಾರವಾದ ಗಾಯಗಳೊಂದಿಗೆ ಬದುಕುಳಿಯುವ ಇಂಡಿಯಾ ದೇಶ ನಂತರ ಮತ್ತೆ ಚೇತರಿಕೊಳ್ಳಲು ದಶಕಗಳ ಕಾಲಾವಕಾಶ ಬೇಕಾಗುತ್ತದೆ.

 7 ಡಿಸೆಂಬರ್, 1947

ಪತ್ರ 3

ಸ್ವತಂತ್ರ ದೇಶವಾಗಿ ಇಂಡಿಯಾಗೆ ಆರು ತಿಂಗಳು ತುಂಬಿದೆ. ಈ ಕಾಲಘಟ್ಟದ ಪಯಣ ಅತ್ಯಂತ ಯಾತನಾಮಯವಾಗಿತ್ತು. ಪ್ರತಿಯೊಂದು ದುರ್ಘಟನೆಯು ಮತ್ತೊಂದನ್ನು ಹಿಂಬಾಲಿಸುತ್ತಿತ್ತು, ಅದನ್ನು ಮತ್ತೊಂದು ಹೀಗೆ ಸರಣಿಯೋಪಾದಿಯಲ್ಲಿ ಎಣೆಯಿರದ ಸಂಕಟಗಳು, ಕಲ್ಲುಮುಳ್ಳಿನ ಹಾದಿ ಇವೆಲ್ಲವೂ ಗಾಂಧೀಜಿಯವರ ಹತ್ಯೆಯಂತಹ ದೊಡ್ಡ ದುರಂತದೊಂದಿಗೆ ಪರ್ಯಾವಸಾನಗೊಂಡವು.

ಈ ಆರು ತಿಂಗಳಲ್ಲಿ ನಮ್ಮ ರಾಜಕೀಯ ವಲಯದಲ್ಲಿ ಅಭೂತಪೂರ್ವವೆನ್ನುವಷ್ಟು ಬದಲಾವಣೆಗಳಾದವು. ರಾಜಕೀಯ ಪಕ್ಷವಾಗಿ ಹಿಂದೂ ಮಹಾಸಭಾ ಸಂಘಟನೆ ತನ್ನ ನೆಲೆಯನ್ನು ಕಳೆದುಕೊಂಡು ಅವಸಾನಗೊಂಡಿತು. ಆರೆಸ್ಸಸ್ ಪಕ್ಷವನ್ನು ನಿಷೇಧಿಸಲಾಯಿತು ಮತ್ತು ಈ ನಿಷೇಧಕ್ಕೆ ಬೆಂಬಲಿಸಿ ದೇಶಾದ್ಯಾಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಉತ್ತರ ಪ್ರದೇಶ ಸಂಸತ್ತಿನ ಮುಸ್ಲಿಂ ಲೀಗ್ ಪಕ್ಷವು ಸಹ ರಾಜಕೀಯ ಪಕ್ಷವಾಗಿ ತನ್ನ ನೆಲೆಯನ್ನು ಕಳೆದುಕೊಂಡಿತು. ಮುಂದಿನ ದಿನಗಳಲ್ಲಿ ದೇಶಾದ್ಯಾಂತ ಈ ಮುಸ್ಲಿಂ ಲೀಗ್ ಪಕ್ಷವು ಇದೇ ಮಾದರಿಯಲ್ಲಿ ಕುಂದುತ್ತ ಹೋಗುವ ಸಾಧ್ಯತೆಗಳಿಗಾಗಿ ನಾವು ಎದುರು ನೋಡುತ್ತಿದ್ದೇವೆ. ಗಾಂಧೀಜಿಯವರ ಹತ್ಯೆಯ ನಂತರವಷ್ಟೇ ಮೇಲಿನ ಘಟನೆಗಳು ಆತುರವೆನ್ನುವಷ್ಟರ ಮಟ್ಟಿಗೆ ಜರುಗಿದರೂ ಸಹ ನಮ್ಮ ರಾಜಕೀಯ ಜೀವನದಲ್ಲಿ ಇದು ಒಂದು ಆರೋಗ್ಯಕರ ಬೆಳವಣಿಗೆ ಎಂದೇ ನಾವು ಪರಿಗಣಿಸಬೇಕಾಗುತ್ತದೆ. ಸೆಕ್ಯುಲರ್ ತತ್ವದ ಪ್ರಜಾಪ್ರಭುತ್ವ ದೇಶವಾಗಿ ಇಂಡಿಯಾವನ್ನು ಕಟ್ಟಲು ಇವೆಲ್ಲವೂ ಅತ್ಯಂತ ಅವಶ್ಯಕವಾದ ನಡೆಗಳಾಗಿದ್ದವು

ಕಳೆದ ಈ ಆರು ತಿಂಗಳಲ್ಲಿ ಇಂಡಿಯಾ ಮತ್ತು ಪಾಕಿಸ್ತಾನದಲ್ಲಿ ನಡೆದ ಬೆಳವಣಿಗೆಗಳನ್ನು ಅವಲೋಕಿಸಿದಾಗ ಕೋಮುವಾದಿ ಶಕ್ತಿಗಳುJinnah_and_Muslim_League_founders ಮತ್ತು ಎರಡು ಚಕ್ರಾಧಿಪತ್ಯಗಳ ನಡುವಿನ ಘರ್ಷಣೆಗಳನ್ನು ಇದು ರುಜುವಾತು ಪಡಿಸುತ್ತದೆ. ಇಂಡಿಯಾ ದೇಶವು ಅಭಿವೃಧ್ಧಿಯ ಶಕ್ತಿಯಾಗಿ ಗೆಲುವು ಸಾಧಿಸುತ್ತಿದೆ. ಈ ಶಕ್ತಿಯು ಬಿಕ್ಕಟ್ಟಿನ ದಿನಗಳಲ್ಲಿ ತೀವ್ರ ಪರೀಕ್ಷೆಗೆ ಒಳಗಾಗಿತ್ತು, ಆದರೆ ಗಾಂಧೀಜಿಯವರು ತಮ್ಮ ಧೈರ್ಯ, ಆದರ್ಶ ಮತ್ತು ಜೀನಿಯಸ್ ವ್ಯಕ್ತಿತ್ವದಿಂದಾಗಿ ನಮ್ಮನ್ನೆಲ್ಲ ಉಳಿಸಿದರು ಮತ್ತು ಇದರಿಂದಾಗಿ ಪ್ರತ್ಯಾಘಾತಗಳು, ಪ್ರತಿಗಾಮಿ ಶಕ್ತಿಗಳು ಮೇಲುಗೈ ಸಾಧಿಸಲು ಸಾಧ್ಯವಾಗಲಿಲ್ಲ. ನಾವು ಅಲ್ಪತೃಪ್ತರಾಗಿ ವಿಶ್ರಮಿಸಿಕೊಳ್ಳದೇ ಇದೇ ಹಾದಿಯಲ್ಲಿ ಮುಂದುವರೆದರೆ ಗಾಂಧೀಜಿಯವರ ಆದರ್ಶಗಳು ಮತ್ತು ಗುರಿಗಳನ್ನು ಮುಟ್ಟಬಹುದು. ಆದರೆ ಇದೇ ಸಂದರ್ಭದಲ್ಲಿ ಪಾಕಿಸ್ತಾನದಲ್ಲಿ ಪ್ರತಿಗಾಮಿ ಶಕ್ತಿಗಳು ಮೇಲುಗೈ ಸಾಧಿಸುತ್ತಿವೆ. ಶರಿಯತ್ ನಿಯಮಗಳನ್ನಾಧರಿಸಿದ ಇಸ್ಲಾಮಿಕ್ ದೇಶದ ಪರವಾಗಿ ಮಿ.ಜಿನ್ನಾ ಮಾತನಾಡುತ್ತಿದ್ದಾರೆ. ಸಂಕುಚಿತ ದೃಷ್ಟಿಕೋನದ ಪ್ರಾದೇಶಿಕ ಪಕ್ಷಗಳು ನಿಯಂತ್ರಣ ಮೀರಿ ಬೆಳೆಯುತ್ತಿವೆ ಮತ್ತು ಕಡೆಗೆ ಜಿನ್ನಾ ಅವರು ಈ ಪಕ್ಷಗಳ ವಿರುದ್ಧ ಕಠಿಣ ಶಬ್ದಗಳಲ್ಲಿ ಎಚ್ಚರಿಕೆಯನ್ನು ನೀಡಬೇಕಾಯ್ತು. ಇನ್ನೂ ಅಭಿವೃದ್ಧಿಯ ಕಡೆಗೆ ಸಂಪೂರ್ಣವಾಗಿ ಮುನ್ನುಗ್ಗಲು ಪಾಕಿಸ್ತಾನಕ್ಕೆ ಇನ್ನೂ ಬಹಳಷ್ಟು ಸಮಯ ಬೇಕಾಗುತ್ತದೆ. ಆದರೆ ಪಾಕಿಸ್ತಾನದಲ್ಲಿ ಏನಾದರು ಆಗಲಿ, ಸೆಕ್ಯುಲರ್ ದೇಶವನ್ನು ನಿರ್ಮಾಣ ಮಾಡುವಂತಹ ಗುರಿ ಮಾತ್ರ ನಮ್ಮ ಮುಂದೆ ನಿಚ್ಛಳವಾಗಿದೆ. ಈ ಸೆಕ್ಯುಲರ್ ಇಂಡಿಯಾದಲ್ಲಿ ಎಲ್ಲಾ ವಿಭಿನ್ನ ಧರ್ಮಗಳ ಜನರು ಆತ್ಮಾಬಿಮಾನದಿಂದ ತಲೆ ಎತ್ತಿ ನಡೆಯುವಂತಾಗಬೇಕು.

 20ಫೆಬ್ರವರಿ, 1948

ಪತ್ರ 4

ಹೈದರಾಬಾದ್ ಮತ್ತು ಕಾಶ್ಮೀರದ ಕುರಿತಾಗಿ ಯಾವುದೇ ನಿರ್ಣಯಗಳನ್ನು ತೆಗೆದುಕೊಂಡಿರಬಹುದು, ಅದರೆ ಪ್ರಾಂತೀಯ ಸರ್ಕಾರಗಳು ತಮ್ಮ ಪ್ರದೇಶದ ವ್ಯಾಪ್ತಿಯೊಳಗಡೆ ಸಂಭವನೀಯವಾಗಿ ತಲೆ ಎತ್ತಬಹುದಾದದ ಅನಿಯಂತ್ರಣವಾದ ಪ್ರತಿಕ್ರಿಯೆಗಳ ಕುರಿತಾಗಿ ತುಂಬಾ ಹೆಚ್ಚಿನ ಎಚ್ಚರಿಕೆ ವಹಿಸಬೇಕಾಗಿದೆ. ನಾನು ಈ ಮೊದಲೇ ಹೇಳಿದ ಹಾಗೆ ಇಂಡಿಯಾದ ವಿವಿಧ ಭಾಗಗಳಲ್ಲಿ ಕೋಮುವಾದಿ ಚಟುವಟಿಕೆಗಳು ಮರುಕಳಿಸುವ ಸಾಧ್ಯತೆಗಳು ಗೋಚರಿಸುತ್ತಿವೆ. ಈ ಸಂದರ್ಭದಲ್ಲಿ ಅವರು ಹಿಂದೂ, ಮುಸ್ಲಿಂ ಅಥವಾ ಸಿಖ್ ಯಾವುದೇ ಧರ್ಮದವರಾಗಿರಲಿ ಅವರು ತಂಟೆಕೋರುತನ ಪ್ರಾರಂಬಿಸುವುದನ್ನು ನಿಗ್ರಹಿಸಬೇಕಾಗಿದೆ. ದುರದೃಷ್ಟವಶಾತ್ ಕೆಲವು ಸಿಖ್ ನಾಯಕರು ದುರ್ಬುದ್ಧಿಯಿಂದ ಪ್ರೇರೇಪಿತವಾದ ಚಿಂತನೆಗಳನ್ನು ಜನರ ಮುಂದೆ ಹೇಳುತ್ತಿದ್ದಾರೆ, ಹದ್ದುಮೀರಿದ ಭಾಷಣಗಳನ್ನು ಕೊಡುತ್ತಿದ್ದಾರೆ. ನೀವು ಗಮನಸಿರಬಹುದು, ಹಿಂದೂ ಮಹಾಸಭಾ ಮರಳಿ ರಾಜಕೀಯ ಪ್ರವೇಶಕ್ಕೆ ಯತ್ನಿಸುತ್ತಿದೆ. ಇದು ಅನಪೇಕ್ಷಣೀಯವಾದ, ಒಪ್ಪಲಿಕ್ಕೆ ಸಾಧ್ಯವಾಗದ ನಡೆಯಾಗಿದೆ. ಇದನ್ನು ಎಚ್ಚರಿಕೆಯಿಂದ ಗಮನಿಸಬೇಕಾಗಿದೆ. ನಿಮಗೆಲ್ಲ ಗೊತ್ತಿರುವ ಹಾಗೆ ಯಾವುದೇ ಬಗೆಯ ಕೋಮುವಾದಿ ಸಂಘಟನೆಗಳನ್ನು, ಸಂಸ್ಥೆಗಳನ್ನು ಬೆಂಬಲಿಸಬಾರದು ಹಾಗೂ ಪ್ರೋತ್ಸಾಹಿಸಬಾರದೆಂದು ಸರ್ಕಾರ ನಿರ್ಧಾರ ತೆಗೆದುಕೊಂಡಿದೆ. ಈ ಮೂಲಕ ನಾನು ಹೇಳ ಬಯಸುವುದು ಕೇಂದ್ರ ಅಥವಾ ಪ್ರಾಂತೀಯ ಸರ್ಕಾರಗಳು ಮತ್ತು ಅದರ ಅಧಿಕಾರಿಗಳು ಹಿಂದೂ ಮಹಾಸಭಾದಂತಹ ಸಂಘಟನೆಯೊಂದಿಗೆ ಅಥವಾ ಬೇರೆ ಕೋಮುವಾದಿ ಪಕ್ಷದೊಂದಿಗೆ ಸಂಬಂಧವನ್ನು ಹೊಂದಿರಬಾರದು. ಅವು ಯಾವುದೇ ಮುಖವಾಡಗಳನ್ನು ಧರಿಸಿದ್ದರೂ ಸಹಿತ.

ಮತ್ತೊಬ್ಬ ಪ್ರಾಂತೀಯ ಮುಖ್ಯಮಂತ್ರಿಯು ಬರೆದ ಪತ್ರವೊಂದರಲ್ಲಿ ಸೇನೆಯನ್ನು ಪ್ರಾದೇಶಿಕವಾಗಿ ಬೆಳೆಸಬೇಕು ಮತ್ತು ಅದಕ್ಕೆ ಪ್ರಾದೇಶಿಕ ಹೆಸರುಗಳನ್ನು ಕೊಡಬೇಕು ಎಂದು ಹೇಳಿದ್ದಾರೆ. ಇದರ ಮೂಲಕ ಪ್ರಾದೇಶಿಕ ಮಟ್ಟದಲ್ಲಿ ಪ್ರೋತ್ಸಾಹ ಮತ್ತು ಉತ್ಸಾಹ ಹೆಚ್ಚುತ್ತದೆ ಎಂದು ಅವರು ಸಮರ್ಥಿಸಿಕೊಂಡಿದ್ದರು. ಆದರೆ ರಕ್ಷಣಾ ಸಚಿವಾಲಯವು ಇದರ ವಿರುದ್ಧ ಆಕ್ಷೇಪಣೆ ಸಲ್ಲಿಸಿತು. ಇದು ಪ್ರಸ್ತುತ ಸೇನಾ ವ್ಯವಸ್ಥೆಗೆ ಧಕ್ಕೆ ತರುತ್ತದೆ ಎಂದು ಹೇಳಲಾಗಿತ್ತು. ಇದನ್ನು ನಾನು ಸಮರ್ಥಿಸುತ್ತೇನೆ. ಏಕೆಂದರೆ ಅದು ಕೋಮು ಸ್ವರೂಪವಾಗಿರಲಿ, ಪ್ರಾಂತೀಯ ಸ್ವರೂಪದ್ದಾಗಿರಲಿ ಸೇನೆಯೊಳಗೆ ಯಾವುದೇ ಮಾದರಿಯ ಪ್ರತ್ಯೇಕತೆಯ ಚಿಂತನೆಯನ್ನು ಬೆಳೆಸಬಾರದು.

 16 ಅಗಸ್ಟ್, 1948

ಪತ್ರ 5

ಈ ಆರೆಸ್ಸಸ್ ಕುರಿತಾಗಿ ನಮಗೆ ಅನೇಕ ಬಗೆಯಲ್ಲಿ ಎಚ್ಚರಿಕೆಗಳು ಬರುತ್ತಿವೆ. ಮುಂದಿನ ದಿನಗಳಲ್ಲಿ ಅವರುRSS ಸತ್ಯಾಗ್ರಹವನ್ನು ಆರಂಬಿಸಲು ಯೋಜನೆ ಹಾಕಿಕೊಳ್ಳುತ್ತಿದ್ದಾರೆ ಎನ್ನುವ ಮಾಹಿತಿಗಳು ನಮಗೆ ಲಭ್ಯವಾಗಿವೆ. ಜೈಪುರದಲ್ಲಿ ಕಾಂಗ್ರೆಸ್ ಅಧಿವೇಶನ ನಡೆಯುವ ಸಂದರ್ಭದಲ್ಲಿ ಎಲ್ಲಾ ಮಂತ್ರಿಗಳು ತಮ್ಮ ಮುಖ್ಯ ಕಛೇರಿಯಲ್ಲಿ ಗೈರು ಹಾಜರಾಗಿರುವ ಆ ಸಂದರ್ಭದಲ್ಲಿ ಈ ಸತ್ಯಾಗ್ರಹವನ್ನು ಆಯೋಜಿಸಲು ನಿರ್ಧರಿಸಿದ್ದಾರೆ. ಆದರೆ ಆರೆಸ್ಸಸ್ ಸಂಘಟನೆಯು ಸತ್ಯಾಗ್ರಹವನ್ನು ಎನ್ನುವ ಪದವನ್ನು ಬಳಸುವುದೇ ಒಂದು ವಿರೋಧಭಾಸವಾಗಿ ಕಾಣುತ್ತದೆ. ಏಕೆಂದರೆ ಈ ಸತ್ಯಾಗ್ರಹವೆನ್ನುವ ಚೇತನದಿಂದ ಮತ್ತು ಅದರ ಆದರ್ಶ ಗುಣಗಳಿಂದ ಸಂಪೂರ್ಣವಾಗಿ ವಿರುದ್ಧ ದಿಕ್ಕಿನಲ್ಲಿರುವ ಆರೆಸ್ಸಸ್ ಗೂ ಸತ್ಯಾಗ್ರಹಕ್ಕೂ ಸಂಬಂಧವೇ ಇಲ್ಲ. ಆರೆಸ್ಸಸ್ ಮೂಲಭೂತವಾಗಿ ಸಾರ್ವಜನಿಕ ಮುಖವಾಡವನ್ನು ಹೊಂದಿದ ಒಂದು ಸೀಕ್ರೆಟ್ ಸಂಸ್ಥೆ. ಈ ಆರೆಸ್ಸಸ್ ಸಂಸ್ಥೆಯಲ್ಲಿ ಸದಸ್ಯರಿಲ್ಲ, ನೊಂದಣಿ ಇಲ್ಲ, ಅಸಂಖ್ಯಾತ ದೇಣಿಗೆಯನ್ನು ಪಡೆಯುತ್ತಿದ್ದರೂ ಅಲ್ಲಿ ಲೆಕ್ಕಪತ್ರಗಳಿಲ್ಲ, ಆರೆಸ್ಸಸ್ ಸಂಘಟನೆಗೆ ಶಾಂತಿಯುತ ವಿಧಾನಗಳಲ್ಲಿ ನಂಬಿಕೆ ಇಲ್ಲ ಇದು ಸತ್ಯಾಗ್ರಹ ನೀತಿಗೆ ವಿರೋಧಿ. ಸಾರ್ವಜನಿಕವಾಗಿ ಅವರು ಏನು ಹೇಳುತ್ತಾರೋ ಅದಕ್ಕೆ ವಿರುದ್ಧವಾಗಿ ಖಾಸಗಿಯಾಗಿ ನಡೆದುಕೊಳ್ಳುತ್ತಾರೆ. ಪ್ರತಿಯೊಂದು ಪ್ರಾಂತೀಯ ಸರ್ಕಾರಗಳಿಗೂ ಆರೆಸ್ಸಸ್ ಚಟುವಟಿಕೆಗಳ ಸಂಪೂರ್ಣ ವಿವರಗಳು ಗೊತ್ತಿವೆ. ವ್ಯಕ್ತಿಯೊಬ್ಬನನ್ನು ಎದುರಾಳಿ ಎಂದು ಸ್ವೀಕರಿಸಲು ಯಾವುದೇ ತಕರಾರು ಇರಬಾರದು. ಯುವ ಜನತೆಯನ್ನು ಸದಸ್ಯರನ್ನಾಗಿ ಮಾಡಿಕೊಂಡ ಯಾವುದೇ ಸಂಸ್ಥೆಯು ದೂರದೃಷ್ಟಿಯಲ್ಲಿ, ಸಾಮಾನ್ಯ ತಿಳುವಳಿಕೆಯಲ್ಲಿ, ಕಾಣ್ಕೆಯಲ್ಲಿ ಅಪಾರ ಕೊರತೆಯನ್ನು ಹೊಂದಿದ್ದರೆ ಅದು ಶೋಚನೀಯವೆಂದೇ ಹೇಳಬೇಕಾಗುತ್ತದೆ. ಈ ಹಿನ್ನಲೆಯಲ್ಲಿ ಆರೆಸ್ಸಸ್ ಸಂಘಟನೆಯು ಯುರೋಪಿನ ವಿವಿಧ ಭಾಗಗಳಲ್ಲಿ ಬೆಳೆದ ಫ್ಯಾಸಿಸಂ ಪಕ್ಷಗಳನ್ನು ಹೋಲುತ್ತದೆ.

 6 ಡಿಸೆಂಬರ್, 1948

ಪತ್ರ 6

ಕಳೆದ ಹದಿನೈದು ದಿನಗಳಲ್ಲಿ ಇಂಡಿಯಾದಲ್ಲಿ ಘಟಿಸಿದ ಮಹತ್ವದ ಸಂಗತಿಯೆಂದರೆ ಕೋಮುವಾದದ ರಣರಂಗವು ಪೂರ್ವ ಬಂಗಾಲ ಮತ್ತು ಕಲ್ಕತ್ತ ( ಕೊಲ್ಕತ್ತ)ದಲ್ಲಿ ಮತ್ತೆ ದೊಡ್ಡ ಪ್ರಮಾಣದಲ್ಲಿ ಮರುಕಳಿಸಿರುವುದು. ನನ್ನ ಕಳೆದ ಪತ್ರದಲ್ಲಿ ನಾನು ಪೂರ್ವ ಪಾಕಿಸ್ತಾನದ ಕೆಲವು ಬೆಳವಣಿಗೆಗಳನ್ನು ಕುರಿತಾಗಿ ಬರೆದಿದ್ದು ನಿಮಗೆ ನೆನಪಿರಬಹುದು. ಈ ಬೆಳವಣಿಗಗೆಗಳ ಫಲವಾಗಿ ದಮನಿತ ಸಮುದಾಯಗಳಿಂದ ಬಲು ದೊಡ್ಡ ಪ್ರಮಾಣದಲ್ಲಿ ಜನರು ಇಂಡಿಯಾಗೆ ವಲಸೆ ಬರತೊಡಗಿದರು. ಖುಲಾನ ಜಿಲ್ಲೆಯಲ್ಲಿನ ದೌರ್ಜನ್ಯಗಳು ಮತ್ತು ವಲಸೆ ಬಂದ ಜನರ ದುರವಸ್ಥೆ ಕಲ್ಕತ್ತ ಜನರಲ್ಲಿ ಸ್ವಲ್ಪ ಮಟ್ಟಿಗೆ ಉದ್ರೇಕಕ್ಕೆ ಕಾರಣವಾಯಿತು. ಮುಸ್ಲಿಂ ಮೊಹಲ್ಲಗಳಲ್ಲಿ ಸಣ್ಣ ಪ್ರಮಾಣದ ತೊಂದರೆಗಳು ಆರಂಭಗೊಂಡವು. ನಂತರ ದೊಡ್ಡ ಪ್ರಮಾಣದಲ್ಲಿ ಲೂಟಿ, ಹಲ್ಲೆಗಳು ಪ್ರಾರಂಭಗೊಂಡಿತು. ಸುಮಾರು ಜನರು ಸಾವಿಗೀಡಾದರು. ಈ ಸಾವಿನ ಸುದ್ದಿಯಿಂದಾಗಿ ಈಗಾಗಲೇ ಗಲಭೆಗ್ರಸ್ಥವಾಗಿದ್ದ ಪೂರ್ವ ಪಾಕಿಸ್ತಾನದಲ್ಲಿ ಪರಿಸ್ಥಿತಿಯು ಮತ್ತಷ್ಟು ಉಲ್ಬಣಗೊಂಡಿತು. ಡಾಕಾ ಮತ್ತಿತರ ಪ್ರದೇಶಗಳಲ್ಲಿ ಲೂಟಿ ಮತ್ತು ಹತ್ಯೆಗಳಿಂದಾಗಿ ಸಾಕಷ್ಟು ಸಂಖ್ಯೆಯಲ್ಲಿ ಹಿಂದೂಗಳು ಸಾವಿಗೀಡಾದರು. ಈ ಸಂಗತಿಗಳು ಮಾಧ್ಯಮದಲ್ಲಿ ಪ್ರಕಟವಾಗುತ್ತಿರುವುದರಿಂದ ಮತ್ತು ನಿಖರವಾದ ಮಾಹಿತಿ ಲಭ್ಯವಿಲ್ಲದ ಕಾರಣ ಈ ಕ್ಷಣದಲ್ಲಿ ನಾನು ನಿಮಗೆ ಯಾವುದೇ ವಿವರಗಳನ್ನು ಕೊಡಲಾರೆ. ಒಟ್ಟಿನಲ್ಲಿ ಪೂರ್ವ ಪಾಕಿಸ್ತಾನ ಮತ್ತು ಕಲ್ಕತ್ತದಲ್ಲಿ ಪರಿಸ್ಥಿತಿಯು ತುಂಬಾ ಗಂಭೀರಗೊಂಡಿದ್ದು ಮತ್ತಷ್ಟು ಕೆರಳುವ ಸಾಧ್ಯತೆಗಳಿವೆ. ಪೂರ್ವ ಪಾಕಿಸ್ತಾನದಲ್ಲಿನ ಪರಿಸ್ಥಿತಿಯ ಕುರಿತಾಗಿ ನಾನೀಗಲೇ ಏನನ್ನೂ ಹೇಳುವ ಸ್ಥಿತಿಯಲ್ಲಿ ಇಲ್ಲ, ಆದರೆ ಕಲ್ಕತ್ತದಲ್ಲಿ ಸಣ್ಣ ಪುಟ್ಟ ಘಟನೆಗಳನ್ನು ಹೊರತುಪಡಿಸಿ ಪರಿಸ್ಥಿತಿಯು ಸಂಪೂರ್ಣ ಹತೋಟಿಯಲ್ಲಿದೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ಅಲ್ಲಿನ ಅವರ ಸರ್ಕಾರ ಇಡೀ ಪರಿಸ್ಥಿತಿಯನ್ನು ಅತ್ಯಂತ ನಾಜೂಕಾಗಿ, ಕ್ಷಿಪ್ರಗತಿಯಲ್ಲಿ ಹತೋಟಿಗೆ ತಂದಿದ್ದಾರೆ. ಮೌಲಾನ ಅಬ್ದುಲ್ ಕಲಾಂ ಅಜಾದ್ ಇಂದು ಕಲ್ಕತ್ತಗೆ ಹೊರಡುತ್ತಿದ್ದಾರೆ. ಆದರೆ ದೊಡ್ಡ ಪ್ರಮಾಣದಲ್ಲಿ ಮುಸ್ಲಿಂರು ಮನೆಯನ್ನು ತೊರೆದು ಗುಂಪಾಗಿ ಬೇರೆ ಸ್ಥಳಗಳಲ್ಲಿ ವಾಸಿಸತೊಡಗಿದ್ದು ಕಲ್ಕಕತ್ತದಲ್ಲಿ ಸಧ್ಯದ ಪ್ರಮುಖ ತೊಂದರೆಯಾಗಿದೆ. ಇಲ್ಲಿನ ಕೆಲವು ಮೊಹಲ್ಲಗಳನ್ನು ಸುಟ್ಟು ಹಾಕಲಾಯಿತು. ಆದರೆ ಈ ಬಹುಪಾಲು ಮುಸ್ಲಿಂರು ತಮ್ಮ ಮನೆಗಳಿಗೆ ಮರಳುತ್ತಾರೆ ಎನ್ನುವ ಭರವಸೆ ಇದೆ.

ಪೂರ್ವ ಪಾಕಿಸ್ತಾನದಲ್ಲಿ ಜರುಗಿದ ಘಟನೆಗಳು ಕಲ್ಕತ್ತದಲ್ಲಿ ಪ್ರತಿಧ್ವನಿಸತೊಡಗಿರುವುದು ಕಳವಳಕಾರಿಯಾದದ್ದು. ಆದರೆ ಇದಕ್ಕಿಂತಲೂ ಭೀಕರವಾಗಿರುತ್ತಿತ್ತು. ಆದರೆ ಹಾಗಾಲಿಲ್ಲ ಎನ್ನುವುದೇ ಸಧ್ಯಕ್ಕೆ ಕೆಲಮಟ್ಟಿಗೆ ಮನಶ್ಯಾಂತಿ ಕೊಡುತ್ತದೆ. ಆದರೂ ಪರಿಸ್ಥಿತಿಯು ಇನ್ನೂ ಅಸಹಜವಾಗಿ ನಿಯಂತ್ರಣದಲ್ಲಿ ಇಲ್ಲದಿರುವುದರಿಂದ ಮುಂದಿನ ಪರಿಣಾಮಗಳೂ ಸಹ ಅನಿಶ್ಚತೆಯಿಂದಿವೆ. ನಾವು ಜ್ವಾಲಾಮುಖಿಯ ಮೇಲೆ ಕುಳಿತಂತೆ ಭಾಸವಾಗುತ್ತಿದೆ. ಸಣ್ಣ ಕಿಡಿ ಇಡೀ ಜ್ವಾಲಾಮುಖಿಯನ್ನು ಸ್ಪೋಟಿಸಬಹುದು. ಆದರೆ ಜ್ವಾಲಾಮುಖಿ ಹಾಗೇ ಇದೆ ಮತ್ತು ನಾವು ಅದರ ಕುದಿಯುವಿಕೆಯ ಗಡಗಡ ಶಬ್ದವನ್ನು ಅಲಿಸಬಹುದು. ಪೂರ್ವ ಪಾಕಿಸ್ತಾನದಲ್ಲಿ ಜರುಗಿದ ಭಯಂಕರ ಘಟನೆಗಳ ಕುರಿತಾದ ಸುದ್ದಿಗಳನ್ನು ಕೇಳಿ ನಮ್ಮ ಜನರು ಉದ್ರೇಕಗೊಂಡಿರುವುದು ಸಹಜವೇನೋ. ಇದರ ಫಲವಾಗಿ ಇಲ್ಲಿ ಜರಗುವ ಪ್ರತೀಕಾರದ ಘಟನೆಗಳ ವಿವರಗಳನ್ನು ಕೇಳಿ ಆಲ್ಲಿಯ ಜನ ಉದ್ರೇಕಗೊಳ್ಳತೊಡಗುತ್ತಾರೆ.ಈ ಬಗೆಯ ನಿರಂತರವಾದ ಕ್ರಿಯೆ ಪ್ರತಿಕ್ರಿಯೆ ಒಂದು ವಿಷವರ್ತುಲ.ಇದರಿಂದ ನಾವು ಹೊಬರುವುದು ಹೇಗೆ?

ಬಹಳ ವರ್ಷಗಳ ಹಿಂದೆಯೇ ನಾವು ಈ ದ್ವೇಷದ, ಹಿಂಸಾಚಾರದ ವಿಷವರ್ತುಲಕ್ಕೆ ಸಿಲುಕಿಕೊಂಡೆವು. ಮುಸ್ಲಿಂ ಲೀಗ್ ಪಕ್ಷವು ಎರಡು ದೇಶದ ಸಿದ್ಧಾಂತವನ್ನು ಅನೇಕ ವರ್ಷಗಳಿಂದ ಬೋಧಿಸುತ್ತಲೇ ಬಂದಿತ್ತು. ಇದು ದೇಶ ವಿಭಜನೆಗೆ ಕಾರಣವಾಗಿ ಆ ಮೂಲಕ ಭಯಾನಕ ಘಟನೆಗಳು ಜರುಗಿದವು. ಆದರೂ ವಿಭಜನೆಯ ಯಾತನೆ, ನೋವು, ಆಕ್ರಂದನ, ಗಾಯಗಳು ಕಡೆಗೆ ಒಂದು ದಿನ ನಮ್ಮನ್ನು ವಿಷವರ್ತುಲದಿಂದ ಹೊರಬರಲು ಸಹಾಯ ಮಾಡುತ್ತವೆ ಎಂದು ನಂಬಿದ್ದೆವು. ಆದರೆ ಸೆಪ್ಟೆಂಬರ್ 1947ರಲ್ಲಿ ಪಾಕಿಸ್ತಾನ ಮತ್ತು ಉತ್ತರ ಭಾರತದಲ್ಲಿ ಭಯಾನಕ ಘಟನೆಗಳು ಜರುಗಿದವು. ಇದರ ಫಲವಾಗಿ ನಾವು ಭಾರಿ ಬೆಲೆ ತೆರಬೇಕಾಯ್ತು. ಆಗ ಗಾಂಧೀಜಿಯವರ ಉಪಸ್ಥಿತಿ ಕಲ್ಕತ್ತ ಮತ್ತು ಉತ್ತರ ಭಾರತವನ್ನು ರಕ್ಷಿಸಿದ್ದೇನೋ ನಿಜ. ಆದರ ಗಾಯವು ತುಂಬಾ ಆಳವಾಗಿತ್ತು ಮತ್ತು ಹಿಂಸೆಯು ನಿರಂತರವಾಗಿದ್ದರಿಂದ ಆಳವಾದ ಗಾಯವು ಮಾಗುವ ಸಾಧ್ಯತೆ ತುಂಬಾ ಕಡಿಮೆ ಇತ್ತು. ನಾವು ಮುಂದೆಯೂ ಭಾರಿ ಬೆಲೆ ತೆರುತ್ತಲೇ ಇರಬೇಕಾಗುತ್ತದೆ ಮತ್ತು ಈ ಹಿಂಸೆ ವರ್ತುಲ ಸರಣಿ ಎಂದು ಮುಗಿಯುತ್ತದೆ ಎಂದು ನಮಗೂ ಸ್ಪಷ್ಟತೆ ಇಲ್ಲ.

ಹಿಂದೂ ಮತ್ತು ಸಿಖ್ ಧರ್ಮದ ಕೆಲವು ನೇತಾರರು ದೇಶವನ್ನು ಬಲವಂತವಾಗಿ ಮತ್ತೆ ಒಂದುಗೂಡಿಸುತ್ತೇವೆಂದು ವೀರಾವೇಶದಿಂದ ಭಾಷಣ ಮಾಡುತ್ತಿದ್ದಾರೆ. ಮತ್ತೆ ಕೆಲವರು ಪಾಕಿಸ್ತಾನದ ವಿರುದ್ದ ಭಾರತ ಸರ್ಕಾರವು ತುಂಬಾ ದುರ್ಬಲವಾದ ಪಾಲಿಸಿಗಳನ್ನು ರೂಪಿಸಿದೆ ಎಂದು ಟೀಕಿಸುತ್ತಿದ್ದಾರೆ. ಆದರೆ ನಾವು ಈಗ ಅನುಸರಿಸುತ್ತಿರುವ ಪಾಲಿಸಿಯನ್ನು ಹೊರತುಪಡಿಸಿ ಮತ್ತೇನನ್ನು ರೂಪಸಿಬೇಕೆಂದು ನಮಗೂ ಗೋಚರಿಸುತ್ತಿಲ್ಲ ಯುದ್ಧದ ಹೊರತಾಗಿ. ಆದರೆ ಯುದ್ಧವನ್ನು ಘೋಷಿಸಿದರೆ ಅದರ ಪರಿಣಾಮಗಳ ಕುರಿತು ಅನೇಕರಿಗೆ ಗೊತ್ತಿರುವಂತಿಲ್ಲ. ಈ ಆಧುನಿಕ ಯುದ್ಧವು ದಾರುಣವಾದ ವಿಷಯ. ಇದು ಶುರವಾದರೆ ಮುಗಿಯುವುದಿಲ್ಲ ಮತ್ತು ಸಂಬಂಧಪಟ್ಟ ಎಲ್ಲರನ್ನೂ ನಾಶಪಡಿಸುತ್ತದೆ. ಅಂದರೆ ಮತ್ತಷ್ಟು ನೇರವಾಗಿ ಹೇಳಬೇಕೆಂದರೆ ಯಾವುದೇ ಸಂದರ್ಭದಲ್ಲಿ ವಿದೇಶಿ ನುಸುಳುವಿಕೆಯಿಂದ ತುಂಬಾ ಕಾಲದವರೆಗು ದೇಶದ ಅಭಿವೃದ್ಧಿಯು ಸ್ಥಗಿತಗೊಳ್ಳುತ್ತದೆ. ಕೇವಲ ಸೇನೆಯ ದೃಷ್ಟಿಕೋನದಿಂದ ನೊಡಿದಾಗ ನಾನು ಯುದ್ಧದಿಂದ ಭಯ ಹೊಂದಲು ಸಾಧ್ಯವೇ ಇಲ್ಲ. ಆದರೆ ಇಡೀ ದೇಶದ ಹಿತಾಸಕ್ತಿಯ ನೆಲೆಯಿಂದ ಅವಲೋಕಿಸಿದಾಗ ನಾವು ಸಾಧ್ಯವಿದ್ದಷ್ಟು ಈ ಯುದ್ಧವನ್ನು ತಡೆಗಟ್ಟುವುದು ಅತ್ಯಂತ ವಿವೇಕಯುತವಾದ ನಿರ್ಧಾರ. ಮತ್ತೊಂದು ಮುಖ್ಯ ವಿಷಯವೇನೆಂದರೆ ದೇಶವೊಂದರ ಪ್ರತೀಕಾರದ ಘಟನೆಗಳು ಪರಿಸ್ಥಿತಿಯನ್ನು ಮತ್ತಷ್ಟು ಹಾಳುಗೆಡವುತ್ತವೆ ಮತ್ತು ಉನ್ಮಾದಕ್ಕೆ ಒಳಗಾಗುವ ಬಹುಸಂಖ್ಯಾತರಿಂದ ಅಲ್ಪಸಂಖ್ಯಾತರಿಗೆ ಅಪಾಯ ಕಾದಿರುತ್ತದೆ. ಯಾವುದೇ ಬಗೆಯಲ್ಲಿ ತಪ್ಪು ನೀತಿಗಳನ್ನು ಅಳವಡಿಸಿಕೊಳ್ಳುವುದನ್ನು ನಾವು ಕೈಬಿಡಬೇಕು ಏಕೆಂದರೆ ಮತ್ತೊಂದು ಭಾಗದಲ್ಲಿ ಪ್ರತೀಕಾರಕ್ಕಾಗಿ ಫೆನಟಿಸಂ ಶಕ್ತಿಗಳು ಕಾಯುತ್ತಿರುತ್ತವೆ.

 16 ಫೆಬ್ರವರಿ, 1950

ಪತ್ರ7

ಇಂಡಿಯಾ ದೇಶವು ಅಭಿವೃದ್ಧಿ ಹೊಂದಬೇಕಾದರೆ ಮುಸ್ಲಿಂರನ್ನು ಒಳಗೊಂಡಂತೆ ಎಲ್ಲಾ ಅಲ್ಪಸಂಖ್ಯಾತರನ್ನು ನಮ್ಮೊಳಗೆ ಒಳಗೊಳ್ಳಬೇಕು. ಆದರೆ ಹಿಂದೂ ಮಹಾಸಭಾ ಮತ್ತು ಇನ್ನಿತರ ಕೋಮುಶಕ್ತಿಗಳ ದೃಷ್ಟಿಕೋನ ಇದಕ್ಕೆ ವಿರುದ್ಧವಾಗಿದೆ. ಇವರೆಲ್ಲ ಇದನ್ನು ವಿರೋಧಿಸಿದರು. ಈ ಹಿಂದೂ ಮಹಾಸಭಾದ ಸಿದ್ಧಾಂತಗಳು ಇಂಡಿಯಾ ದೇಶಕ್ಕೆ ಮಾರಕವಾಗುತ್ತವೆ ಎಂದು ನನಗೆ ಖಚಿತವಾಗಿದೆ. ವಿಭಜನೆಯನ್ನು ಕೊನೆಗೊಳಿಸುತ್ತೇವೆ ಎಂದು ಹೇಳುವ ಅವರ ಮಾತುಗಳು ತುಂಬಾ ಮೂರ್ಖತನದ್ದು. ನಾವು ಆ ರೀತಿಯಾಗಿ ಮಾಡಲು ಸಾಧ್ಯವಿಲ್ಲ ಮತ್ತು ಆ ರೀತಿಯಾಗಿ ಮಾಡಲೂ ಬಾರದು. ಒಂದು ವಿಭಜನೆಯು ಕೊನೆಗೊಂಡಿದ್ದರೆ ಎರಡೂ ಬಣಗಳಲ್ಲಿನ ಪರಸ್ಪರ ದ್ವೇಷ ಮತ್ತು ಕ್ಷುಲ್ಲಕ ಸಂಗತಿಗಳು ಹಾಗೆಯೇ ಉಳಿದುಕೊಂಡು ಮತ್ತಷ್ಟು ದುರಂತವನ್ನು ಹುಟ್ಟಿಹಾಕುತ್ತಿತ್ತು. ಹೀಗಾಗಿ ಅಂಖಂಡ ಭಾರತದ ಪರಿಕಲ್ಪನೆಯನ್ನು ನಾವು ತಿರಸ್ಕರಿಸಬೇಕು

ಮುಸ್ಲಿಂರು ಈ ದೇಶಕ್ಕೆ ಸದಾ ನಿಷ್ಠೆಯನ್ನು ವ್ಯಕ್ತಪಡಿಸುತ್ತಿರಬೇಕು ಮತ್ತು ಅವರ ಹೊಂದಿರುವರು ಎನ್ನಲಾಗುವ ಪಾಕಿಸ್ತಾನ ಪರmuslims460ನಿಲುವುಗಳನ್ನು ಖಂಡಿಸುತ್ತಿರಬೇಕು ಎನ್ನುವ ಈ ಎರಡು ನೀತಿಗಳು ಇಂದು ನಮ್ಮಲ್ಲಿ ಸಾಮಾನ್ಯವಾಗಿದೆ. ಈ ಮಾದರಿಯ ಧೋರಣೆಗಳು ಸಂಪೂರ್ಣವಾಗಿ ತಪ್ಪು ಮತ್ತು ಈ ಧೋರಣೆಗಳು ಖಂಡನೆಗೆ ಅರ್ಹವಾಗಿವೆ. ಮುಸ್ಲಿಂರಿಗೆ ಸದಾ ಈ ದೇಶಕ್ಕೆ ನಿಷ್ಠೆಯನ್ನು ಪ್ರದರ್ಶಿಸಿ ಎಂದು ಒತ್ತಾಯಿಸುವುದನ್ನು ನಾನು ತಪ್ಪೆಂದು ವಾದಿಸುತ್ತೇನೆ. ಭಯದಿಂದ ನಿಷ್ಠೆಯನ್ನು ಉತ್ಪಾದಿಸಲಾಗುವುದಿಲ್ಲ. ಇದು ಸಹಜ ಬೆಳವಣಿಗೆಯಾಗಿ ರೂಪುಗೊಳ್ಳಬೇಕು. ಈ ನಿಷ್ಠೆಯ ಕುರಿತಾದ ಭಾವುಕತೆ ಬೆಳೆಯುವಂತಹ ವಾತಾವರಣವನ್ನು ನಾವು ಮೊದಲು ರೂಪಿಸಬೇಕು. ಅಲ್ಪಸಂಖ್ಯಾತರ ವಿರುದ್ಧ ಟೀಕೆಗಳು ಮತ್ತು ಹುಸಿ ಆರೋಪಗಳಿಂದ ಯಾವ ಪ್ರಯೋಜನವೂ ಇಲ್ಲ. ನಿರಂತರವಾಗಿ ಬದಲಾಗುತ್ತಿರುವ ವಾತಾವರಣದಿಂದಾಗಿ ನಿಖರವಾದ ದೂರದೃಷ್ಟಿಯ ಯೋಜನೆಗಳನ್ನು ಹಾಕಿಕೊಳ್ಳುವುದು ಕಷ್ಟಕರವಾಗುತ್ತದೆ. ಆದರೆ ಬಹುಸಂಖ್ಯಾತರು ಮತ್ತು ಅಲ್ಪಸಂಖ್ಯಾತರ ನಡುವಿನ ರಾಜಕೀಯ ದೃಷ್ಟಿಕೋನದಿಂದ ಹುಟ್ಟಿಕೊಂಡ ಭೇದವನ್ನು ತೆಗೆದುಹಾಕಿ ಅಲ್ಪಸಂಖ್ಯಾತರಿಗೆ ಈ ದೇಶವು ಸುರಕ್ಷವಾದ ಸ್ಥಳ ಎನ್ನುವ ವಾತಾವರಣವನ್ನು ನಿರ್ಮಿಸುವುದು ಸಧ್ಯಕ್ಕೆ ನಮ್ಮ ಮುಂದಿರುವ ದೂರದೃಷ್ಟಿಯ ಚಿಂತನೆ. ಇದು ತುಂಬಾ ಸಮಯವನ್ನು ತೆಗೆದುಕೊಳ್ಳುತ್ತದೆ. ಆದರೆ ಇದೊಂದೇ ನಮ್ಮ ಮುಂದಿರುವ ಗುರಿ. ಈ ಕ್ಷಣಕ್ಕೆ ಮಾಡಬಹುದಾದ ತುರ್ತಾದ ಕೆಲಸವೆಂದರೆ ಅಲ್ಪಸಂಖ್ಯಾತ ಸಮುದಾಯಗಳಲ್ಲಿ ತಮ್ಮ ರಾಜ್ಯವು ಸುರಕ್ಷಿತವೆನ್ನುವಂತಹ ನಂಬಿಕೆಯನ್ನು ಪ್ರತಿಯೊಂದು ರಾಜ್ಯಗಳು ಬೆಳೆಸಬೇಕಾಗಿದೆ. ಇಂದಿನ ಸಂದರ್ಭದಲ್ಲಿ ಸಂತ್ರಸ್ಥರಿಗೆ, ಶೋಷಿತರಿಗೆ ಪರಿಹಾರವನ್ನು ಕೊಡಬೇಕು ಮನೆಗಳನ್ನು ತೊರೆದವರಿಗೆ ಪುನರ್ವಸತಿ ಕಲ್ಪಿಸಕೊಡಬೇಕು. ವಲಸೆ ಬಂದವರಿಗೆ ಮರಳಿ ಅವರ ಧ್ವಂಸಗೊಂಡ ಮನೆಗಳನ್ನು ಕಟ್ಟಿಕೊಡಬೇಕು. ಧ್ವಂಸಗೊಂಡ ಮನೆಗಳ ಬದಲಿಗೆ ಸರ್ಕಾರಗಳು ಹೊಸ ಮನೆಗಳನ್ನು ಕಟ್ಟಿಕೊಡಬೇಕು. ಮುಖ್ಯವಾಗಿ ತಪ್ಪಿತಸ್ಥರು ಶಿಕ್ಷೆಗೆ ಒಳಗಾಗಬೇಕು ಮತ್ತು ಲೂಟಿ, ಹಿಂಸಾಚಾರಕ್ಕೆ ನಾನು ಬೆಲೆ ತೆರಬೇಕಾಗಿಲ್ಲ ಎನ್ನುವ ಧೋರಣೆಯನ್ನು ಸುಳ್ಳು ಮಾಡಬೇಕು. ಅಪಹರಿಸಲ್ಪಟ್ಟ ಮಹಿಳೆಯರ ಕುರಿತಾಗಿ ವಿಶೇಷ ಕಾಳಜಿ ವಹಿಸಬೇಕು. ಇನ್ನೂ ಮುಂದುವರೆದು ಅಲ್ಪಸಂಖ್ಯಾತರಿಗೆ ಸರ್ಕಾರಗಳಲ್ಲಿ ಮತ್ತು ಇನ್ನಿತರ ಇಲಾಖೆಗಳಲ್ಲಿ ಪ್ರಾತಿನಿಧ್ಯವನ್ನು ಕೊಡುವುದರ ಮೂಲಕ ಅವರಲ್ಲಿ ಭದ್ರತೆಯನ್ನು ದೊರಕಿಸಿಕೊಡಬೇಕು

1 ಮಾರ್ಚ, 1950

ಪತ್ರ 8

ಕಳೆದ ಮೂರು ವಾರಗಳಿಂದ ಪೂರ್ವ ಬಂಗಾಲ ಅಥವಾ ಪಶ್ಚಿಮ ಬಂಗಾಲದಲ್ಲಿ ಅಂತಹ ಪ್ರಮುಖ ಘಟನೆಗಳು ಸಂಭವಿಸಿಲ್ಲ ಎಂದು ಹೇಳಲಾಗುತ್ತಿದೆ. ಆದರೆ ಮುಂದೆ ಏನಾಗಬಹುದು ಅಥವಾ ಪೂರ್ವ ಬಂಗಾಲದ ಕುಗ್ರಾಮವೊಂದರಲ್ಲಿ ನಡೆಯುತ್ತಿರುವ ಘಟನೆಗಳ ಕುರಿತಾಗಿ ನಮಗೆ ನಿಖರವಾದ ಮಾಹಿತಿಗಳಿರುವುದಿಲ್ಲ. ನನಗೆ ವಿವಿಧ ಅಧಿಕೃತ ಮೂಲಗಳಿಂದ ದೊರಕಿದ ಸುದ್ದಿಗಳನ್ನು ಮಾತ್ರ ಹೇಳಬಲ್ಲೆ. ಇದರ ಆಧಾರದ ಮೇಲೆ ಬಂಗಾಳ ಪ್ರಾಂತಗಳಲ್ಲಿ ಗಲಭೆಗಳು ನಡೆದಿಲ್ಲ ಎಂದೇ ಹೇಳಬೇಕಾಗುತ್ತದೆ.

ಪೂರ್ವ ಬಂಗಾಲ ಮತ್ತು ಪಶ್ಚಿಮ ಬಂಗಾಲ ನಡುವಿನ ಪ್ರಯಾಣದ ವ್ಯವಸ್ಥೆ ಗಣನೀಯವಾಗಿ ಸುಧಾರಿಸಿದೆ. ಇದರ ಪರಿಣಾಮವಾಗಿ ಪೂರ್ವ ಬಂಗಾಲದಿಂದ ಪಶ್ಚಿಮ ಬಂಗಾಲಕ್ಕೆ ಹಿಂದೂಗಳ ವಲಸೆಯ ಪ್ರಮಾಣ ಹೆಚ್ಚುತ್ತಿದೆ. ಕೆಲ ಸಂಖ್ಯೆಯಷ್ಟು ಮುಸ್ಲಿಂರು ಕಲ್ಕತ್ತವನ್ನು ತೊರೆದು ಪಶ್ಚಿಮ ಬಂಗಾಲದಿಂದ ಪೂರ್ವ ಬಂಗಾಲಕ್ಕೆ, ಉತ್ತರ ಪ್ರದೇಶ, ಬಿಹಾರ್ ಕಡೆಗೆ ವಲಸೆ ಹೋಗುತ್ತಿದ್ದಾರೆ. ಬೇರೇನು ಸಂಭವಿಸದಿದ್ದರೆ ಈ ಒಳಹರಿವು ಮತ್ತು ಹೊರಹರಿವು ಇದೇ ರೀತಿ ನಿರಂತರವಾಗಿರುತ್ತದೆ. ಪೂರ್ವ ಬಂಗಾಲದಲ್ಲಿ ಹಿಂದೂ ವ್ಯಕ್ತಿ ಅಭದ್ರತೆಯಿಂದ ಆತಂಕದಲ್ಲಿದ್ದಾನೆ ಮತ್ತು ಅಲ್ಲಿಂದ ಹೊರಹೋಗಲು ಪ್ರಯತ್ನಿಸುತ್ತಿದ್ದಾನೆ ಎಂದು ಹೇಳಲಾಗುತ್ತಿದೆ. ಪೂರ್ವ ಬಂಗಾಲದಲ್ಲಿ ಹಿಂದೂಗಳು ಸುಮಾರು 12 ಮಿಲಿಯನ್ನಷ್ಟಿದ್ದಾರೆ ಎನ್ನುವ ಸಂಗತಿಯನ್ನು ಗಮನಿಸಿದಾಗ ಅಲ್ಲಿನ ಸಮಸ್ಯೆಯ ತೀವ್ರತೆ ನಮಗೆ ಅರಿವಾಗುತ್ತದೆ. ಆದರೆ ಪ್ರತಿ ತಿಂಗಳು, ಪ್ರತಿ ವರ್ಷ ಈ ದೊಡ್ಡ ಮಟ್ಟದ ಜನಸಂಖ್ಯೆಯ ಜನರು ತಮ್ಮ ನೆಲೆಗಳಿಂದ ಕಿತ್ತು ಕೊಂಡು ಬೇರೆ ರಾಜ್ಯಗಳಿಗೆ ಬರುತ್ತಿರುವುದು ಮತ್ತು ಅವರೆಲ್ಲ ಹೊರ ರಾಜ್ಯಗಳಲ್ಲಿ ನಿರಾಶ್ರಿತರಾಗಿ ಬದುಕುವುದು ಈ ಪ್ರಕ್ರಿಯೆಯನ್ನು ಬಹಳ ದಿನಗಳವರೆಗೆ ಸಹಿಸಲು ಸಾಧ್ಯವಿಲ್ಲ. ಈ ಬಗೆಯ ನಿರಂತರ ವಲಸೆ ಎರಡೂ ರಾಜ್ಯಗಳಲ್ಲಿಯೂ ಸಾಮಾಜಿಕ ಸಂರಚನೆಯನ್ನು ತೊಂದರೆಗೊಳಪಡಿಸುತ್ತದೆ

ಅಲ್ಪಸಂಖ್ಯಾತರಿಗೆ ಆಯಾ ರಾಜ್ಯಗಳಲ್ಲಿ ಸಹನೀಯವಾಗಿ ಬದಕುವಂತಹ ವಾತಾವರಣವನ್ನು ನಿರ್ಮಿಸಬೇಕು ಮತ್ತು ಅವರ ಸುರಕ್ಷತೆ ಮೊದಲ ಅದ್ಯತೆ ಆಗಿರಬೇಕು.ಈ ಮೂಲಭೂತ ಅಗತ್ಯಗಳನ್ನು ಸಾಧ್ಯವಾಗಿಸಿದರೆ ವಲಸೆಯ ಪ್ರಮಾಣ ಸಂಭವನೀಯವಾಗಿ ತಗ್ಗುತ್ತದೆ. ಪಾಕಿಸ್ತಾನದಲ್ಲಿ ಹಿಂದೂ ಅಲ್ಪಸಂಖ್ಯಾತರನ್ನು ಅಲ್ಲಿಂದ ಓಡಿಸಲಾಗುತ್ತಿದೆ. ಇದಕ್ಕೆ ಪರಿಹಾರವೇನು? ಈ ವಲಸೆಯನ್ನು ತಡೆಗಟ್ಟುವುದು ಒಂದು ಜವಬ್ದಾರಿಯಾದರೆ ಈ ಸಮಸ್ಯೆಗೆ ಮೂಲವಾದ ಸಮಸ್ಯೆ ಯಾವುದು? ನನ್ನ ಪ್ರಕಾರ ಕೋಮುವಾದಿ ಮತ್ತು ಸಂಕುಚಿತ ಮನಸ್ಥಿತಿಯಿಂದ ಪಾಕಿಸ್ತಾನ ಎನ್ನುವ ಇಸ್ಲಾಂ ರಾಷ್ಟ್ರದ ಪರಿಕಲ್ಪನೆ ಹುಟ್ಟಿಕೊಂಡಿತು. ಇದೇ ಮನಸ್ಥಿತಿ ಮುಂದುವರೆದರೆ ಇದರ ಪರಿಣಾಮಗಳೂ ಮುಂದುವರೆಯುತ್ತವೆ

ಈ ಮೂಲಭೂತ ಸಮಸ್ಯೆಯ ಕೆಲವು ವಿಷಯಗಳನ್ನು ಮಾತ್ರ ನಾನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಈ ಬಿಕ್ಕಟ್ಟಿನ ಸಂದರ್ಭದಲ್ಲಿ ನಾನು ಯಾವುದೇ ನಿರ್ಣಯಗಳನ್ನು ನಿಮ್ಮ ಮುಂದಿಡುವುದಿಲ್ಲ ಏಕೆಂದರೆ ಆ ನಿರ್ಣಯಗಳನ್ನು ಜಾರಿಗೊಳಿಸಲು ಕಷ್ಟಕರವಾಗಬಾರದು.

19 ಮಾರ್ಚ, 1950

ಪತ್ರ 9

ಇತ್ತೀಚಿನ ದಿನಗಳಲ್ಲಿ ನನ್ನೊಳಗೆ ಬೆಳೆಯುತ್ತಿರುವ ಒಂದು ಬಗೆಯ ಆತಂಕದ ಗ್ರಹಿಕೆಯನ್ನು ನಾನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ಇಂಡಿಯಾದಲ್ಲಿ ಅಲ್ಪಸಂಖ್ಯಾತರ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ನಮ್ಮ ಸಂವಿಧಾನವು ಸೂಕ್ತವಾಗಿದೆ ಮತ್ತು ನ್ಯಾಯಬದ್ಧವಾಗಿದೆ. ಇದನ್ನು ಬದಲಿಸುವ ಅಗತ್ಯವೇನು ಇಲ್ಲ.

ಸೇವಾ ವಲಯಗಳಲ್ಲಿ ಅಲ್ಪಸಂಖ್ಯಾತರ ಪ್ರಾತಿನಿಧ್ಯ ತುಂಬಾ ಕಡಿಮೆ ಇದೆ. ಕುಂಠಿತಗೊಳ್ಳುತ್ತಿದೆ. ಕೇಂದ್ರ ಸರ್ಕಾರದ ಇಲಾಖೆಗಳ ಅಂಕಿಸಂಖ್ಯೆಯನ್ನು ಪರಿಶೀಲಿಸಿದಾಗ ಅಲ್ಲಿನ ಒಟ್ಟಾರೆ ಪರಿಸ್ಥಿತಿಯು ಅಲ್ಪಸಂಖ್ಯಾತರಿಗೆ ಅದರಲ್ಲೂ ಮುಸ್ಲಿಂರಿಗೆ ತುಂಬಾ ಅನಾನುಕೂಲಕರವಾಗಿದೆ. ಇದು ನನ್ನಲ್ಲಿ ಖೇದವನ್ನುಂಟು ಮಾಡಿದೆ.

ನಮ್ಮ ರಕ್ಷಣಾ ಇಲಾಖೆಯಲ್ಲಿ ಮುಸ್ಲಿಂರು ಕಂಡು ಬರುವುದೇ ಇಲ್ಲ. ಡೆಲ್ಲಿ ಸೆಕ್ರಟೇರಿಯೇಟ್ ನಲ್ಲಿ ಮುಸ್ಲಿಂರು ತುಂಬಾ ವಿರಳ ಸಂಖ್ಯೆಯಲ್ಲಿದ್ದಾರೆ. ಬಹುಶ ರಾಜ್ಯಗಳಲ್ಲಿ ಪರಿಸ್ಥಿತಿ ಕೊಂಚ ಉತ್ತಮವಾಗಿರಬಹುದಾರೂ ಅಂತಹ ಗಮನೀಯ ಪ್ರಮಾಣದಲ್ಲಿ ಇರಲಿಕ್ಕಿಲ್ಲ. ಆದರೆ ಇಂದಿನ ಈ ವಸ್ತುಸ್ಥಿತಿಯನ್ನು ಉತ್ತಮಪಡಿಸುವ ಪ್ರಯತ್ನಗಳು ಕಂಡು ಬರದಿರುವುದು ನನ್ನಲ್ಲಿ ದುಗುಡವನ್ನುಂಟು ಮಾಡುತ್ತಿದೆ. ನಾವು ಕೂಡಲೆ ಸೂಕ್ತ ಕ್ರಮ ಕೈಗೊಳ್ಳದೇ ಹೋದಲ್ಲಿ ಇನ್ನಷ್ಟು ಬಿಗಡಾಯಿಸುತ್ತದೆ. ನಾವು ನೇಮಕಾತಿ ಸಂದರ್ಭದಲ್ಲಿ ಧರ್ಮವನ್ನು ಗಣನೆಗೆ ತೆಗೆದುಕೊಳ್ಳಬಾರದು ಮತ್ತು ಅದಕ್ಕೆ ಗಮನ ಕೊಡಬಾರದು ಎನ್ನುವ ನೀತಿ ಮೇಲ್ನೋಟಕ್ಕೆ ಸರಿಯಾಗಿಯೇ ಕಾಣುತ್ತದೆ. ನಾನು ಕೋಮುವಾದ ಮತ್ತು ಅದರ ಕ್ರಿಯೆಗಳನ್ನು ತಿರಸ್ಕರಿಸುತ್ತೇನೆ. ಇಂಡಿಯಾದಲ್ಲಿ ಇದು ಒಂದು ಅಪಾಯಕಾರಿ ಪ್ರವೃತ್ತಿ ಮತ್ತು ಇದನ್ನು ಬೇರು ಸಮೇತ ಕಿತ್ತು ಹಾಕಬೇಕು. ಇದೇ ಸಂದರ್ಭದಲ್ಲಿ ವಿವಿಧ ಸಮುದಾಯಗಳನ್ನುಳ್ಳ, ವೈವಿಧ್ಯ ಸಂಸ್ಕೃತಿಗಳ ಬಹುರೂಪಿ ಸಮಾಜವಾದ ಇಂಡಿಯಾದಲ್ಲಿ ನಾವು ಸಮತೋಲನವನ್ನು ಕಾಪಾಡಿಕೊಳ್ಳಬೇಕು ಮತ್ತು ಎಲ್ಲಾ ಧರ್ಮದವರಿಗೂ ಸಮಾನವಾದ ಅವಕಾಶಗಳು ದೊರಕಬೇಕು. ಇಲ್ಲಿ ಕೊಂಚ ಏರುಪೇರಾದರೂ ಅದರಿಂದುಂಟಾಗುವ ಅಸಮತೋಲನದಿಂದ ಮತ್ತಷ್ಟು ಹತಾಶೆ, ಅಸಮಧಾನಗಳು ಬಹಿರಂಗಗೊಳ್ಳುತ್ತವೆ ಮತ್ತು ಇಂಡಿಯಾದಂತಹ ಗಣರಾಜ್ಯ ವ್ಯವಸ್ಥೆಯಲ್ಲಿ ಇದು ಅಪಾಯಕಾರಿ ಬೆಳವಣಿಗೆ ನಾವು ಈ ಅನ್ಯಾಯವನ್ನು ಸರಿಪಡಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಕನಿಷ್ಠ ನಮ್ಮ ಸೇವಾ ಕ್ಷೇತ್ರಗಳ ಮೂಲಕ ಪ್ರಾರಂಬಿಸಬಹುದು. ಈ ಸೇವಾವಲಯಗಳಲ್ಲಿ ಎಲ್ಲಾ ಧರ್ಮ ವರ್ಗಗಳಿಗೆ ಸಮಾನ ಅವಕಾಶ ಕಲ್ಪಿಸಿಕೊಡುವುದರ ಮೂಲಕ ಪ್ರತಿಯೊಂದು ಸಮುದಾಯ ಮತ್ತು ವ್ಯಕ್ತಿಗಳ ನಡುವೆ ಸಹೋದರತ್ವವನ್ನು, ಪಾಲುದಾರಿಕೆಯನ್ನು ಬೆಳೆಸಬೇಕಾಗಿದೆ. ವೈಚಾರಿಕ ಮನೋವೃತ್ತಿಯನ್ನು ರೂಪಿಸಬೇಕಾಗಿದೆ. ಇದು ಬೋಧಿಸಿದಷ್ಟು ಸುಲಭವಲ್ಲ ಎನ್ನುವುದನ್ನು ನಾನು ಒಪ್ಪುವುದಿಲ್ಲ. ಎಲ್ಲವೂ ಸಾಧ್ಯವಿದೆ. ಪ್ರತಿಯೊಬ್ಬರನ್ನು ನಮ್ಮ ಚಿಂತನೆಯೊಳಗೆ, ನಮ್ಮ ಆದ್ಯತೆಗಳೊಂದಿಗೆ ಕೂಡಿಕೊಳ್ಳುವಂತಹ ಕಾರ್ಯಕ್ರಮಗಳನ್ನು ಆಯೋಜಿಸಬೇಕು.

ನಾನು ಮುಸ್ಲಿಂರ ಕುರಿತು ಸಂಭೋದಿಸಿದರೂ ಇದೇ ಚಿಂತನೆಗಳು ಕ್ರಿಶ್ಚಿಯನ್ನರು ಮತ್ತು ಇತರೇ ಅಲ್ಪಸಂಖ್ಯಾತರಿಗೂ ಅನ್ವಯವಾಗುತ್ತದೆ. ಅದರೆ ಅನೇಕ ಕ್ರಿಶ್ಚಿಯನ್ನರಿಗೆ ಇಂಡಿಯಾದಲ್ಲಿ ತಮ್ಮ ಸ್ಥಾನಮಾನಗಳ ಕುರಿತಾಗಿ ಅತಂತ್ರ ಭಾವನೆ ಇದೆ. ಇಂಡಿಯಾ ದೇಶವು ವಿಭಿನ್ನ ಧರ್ಮ, ಭಾಷೆ, ಜೀವನ ಕ್ರಮಗಳನ್ನು ಒಳಗೊಂಡಂತಹ ಬಹುರೂಪಿ ಸಂಸ್ಕೃತಿಯ ದೇಶ. ಇಲ್ಲಿ ಬಹುತ್ವವೇ ನಮ್ಮ ಅಸ್ಮಿತೆ. ಇಂತಹ ವೈವಿಧ್ಯಮಯ ದೇಶದಲ್ಲಿ ಬಹುಸಂಖ್ಯಾತರು ತಮ್ಮ ಧಾರ್ಮಿಕ ಭಾವನೆಗಳನ್ನು ಬೇರೆ ಧರ್ಮದವರ ಮೇಲೆ ಹೇರಬಾರದು. ಅದು ನಮ್ಮ ದೇಶದೊಳಗೆ ಘರ್ಷಣೆಯನ್ನು ಹುಟ್ಟು ಹಾಕುತ್ತದೆ. ಐಕ್ಯತೆ ನಮ್ಮ ಮೂಲ ಮಂತ್ರವಾಗಬೇಕಾಗಿದೆ. ಜನರ ಮನಸ್ಸನ್ನು ಬೆಸೆಯುವ ಕಾರ್ಯಕ್ರಮ ರೂಪಿಸಬೇಕು

ಇಂಡಿಯಾದಲ್ಲಿ ರಾಷ್ಟ್ರೀಯತೆಯ ಮನೋಧರ್ಮ ವಿಸ್ತಾರಗೊಳ್ಳುತ್ತಿದೆ. ಆದರೆ ದೇಶವು ವಿದೇಶಿಯರ ಆಳ್ವಿಕೆಯಲ್ಲಿದ್ದಾಗ ಜನರನ್ನುConstitution_Preamble ಒಗ್ಗೂಡಿಸಲು ಈ ಮಾದರಿಯ ರಾಷ್ಟ್ರೀಯತೆಯ ಅವಶ್ಯಕತೆ ಇದೆ. ಆದರೆ ಸ್ವತಂತ್ರ ರಾಷ್ಟ್ರವಾದ ನಂತರ ಒಂದು ಕಾಲಘಟ್ಟದವರೆಗೆ ಮಾತ್ರ ಇದರ ಪ್ರಸ್ತುತತೆಯನ್ನು ಮಾನ್ಯತೆ ಮಾಡಬಹುದು. ನಂತರ ಇದರ ಪ್ರಭಾವ ಕ್ರಮೇಣ ಕ್ಷಿಣಿಸುತ್ತಾ ಹೋಗುತ್ತದೆ. ಸ್ವತಂತ್ರ ದೇಶದಲ್ಲಿ ಬಹುಸಂಖ್ಯಾತರು ರಾಷ್ಟ್ರೀಯತೆಯನ್ನು ಪ್ರತಿಪಾದಿಸುತ್ತಾ ಇಡೀ ದೇಶವೇ ತಮ್ಮದೆಂದು ಪ್ರಚಾರ ಮಾಡಲು ಆರಂಬಿಸುತ್ತಾರೆ. ತಮ್ಮ ಈ ಪ್ರಯತ್ನದಲ್ಲಿ ಅಲ್ಪಸಂಖ್ಯಾತರನ್ನು ತಮ್ಮ ಧರ್ಮದೊಳಗೆ ಲೀನವಾಗಿಸಿಕೊಳ್ಳಲು ಹವಣಿಸುತ್ತಾರೆ ಆದರೆ ಇದರಿಂದಾಗಿ ನಮ್ಮೊಳಗಿನ ಘರ್ಷಣೆಯು ಮತ್ತಷ್ಟು ಬಲಗೊಳ್ಳುತ್ತದೆ. ಇಂಡಿಯಾ ದೇಶ ಮತ್ತು ಭಾರತೀಯರಾದ ನಾವು ಈ ಪ್ರವೃತ್ತಿಯನ್ನು ಇಲ್ಲಿನ ಜಾತಿ ಮತ್ತು ಪರಂಪರೆಯ ಹಿನ್ನಲೆಯಲ್ಲಿ ಎಚ್ಚರಿಕೆಯಿಂದ ಗಮನಿಸಬೇಕು. ನಾವು ಪ್ರತ್ಯೇಕ ಗುಂಪುಗಳಿಗೆ ಬಲಿಯಾಗುತ್ತೇವೆ ಮತ್ತು ಐಕ್ಯತೆಯನ್ನು ಮರೆಯುತ್ತೇವೆ. ಇದು ಇಂದು ನಮ್ಮ ಪ್ರವೃತ್ತಿಯಾಗಿ ಬೆಳೆಯುತ್ತಿದೆ.

ಕೋಮುವಾದಿ ಸಂಘಟನೆಗಳು ತೀವ್ರವಾದಿ ಸಂಕುಚಿತ ಮನೋಧರ್ಮಗಳಿಗೆ, ರಾಷ್ಟ್ರೀಯತೆಯ ಮುಖವಾಡದಲ್ಲಿ ಕೋಮುವಾದವನ್ನು ಹುಟ್ಟುಹಾಕುವ ವೇದಿಕೆಗಳಾಗಿ ಬೆಳೆಯುತ್ತಿವೆ. ಏಕತೆಯ ಹೆಸರಿನಲ್ಲಿ ಅವರು ಪ್ರತ್ಯೇಕತೆಯನ್ನು ಭೋದಿಸುತ್ತ ದೇಶವನ್ನು ನಾಶಪಡಿಸುತ್ತಾರೆ. ಸಾಮಾಜಿಕ ನೆಲೆಯಲ್ಲಿ ಪ್ರತಿಕ್ರಿಯೆಯ ಹೆಸರಿನಲ್ಲಿ ಅತ್ಯಂತ ಕೆಟ್ಟ ಗುಣಗಳನ್ನು ಪ್ರದರ್ಶಿಸುತ್ತಾರೆ. ನಾವು ಈ ಎಲ್ಲಾ ಶಕ್ತಿಗಳೊಂದಿಗೆ ಮುಖಾಮುಖಿಯಾಗಬೇಕಾಗಿದೆ.

ಮಹಿಳೆಯರ ವಿಷಯಕ್ಕೆ ಸಂಬಂಧಪಟ್ಟಂತೆ ನಾನು ನಿಮ್ಮ ಗಮನ ಸೆಳೆಯಲು ಬಯಸುತ್ತೇನೆ. ಕಳೆದ ಚುನಾವಣೆಯ ಸಂದರ್ಭದಲ್ಲಿ ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಕೆಂದು ನಾನು ಸೂಚಿಸಿದ್ದೆ. ನನ್ನ ಪ್ರಯತ್ನದ ನಡುವೆಯೂ ಕೆಲವೇ ಮಹಿಳೆಯರನ್ನು ಕಣಕ್ಕಿಳಿಸಲಾಯಿತು ಮತ್ತು ಅವರು ಗೆದ್ದು ಆರಿಸಿಬಂದರು. ಮಹಿಳೆಯರಿಗೆ ಸಮಾನ ಹಕ್ಕು ಮತ್ತು ಅವಕಾಶಗಳನ್ನು ಕೊಡದೇ ಹೋದರೆ ದೇಶವು ಅಭಿವೃದ್ಧಿಯನ್ನು ಸಾಧಿಸುವುದಿಲ್ಲ

 20 ಸೆಪ್ಟೆಂಬರ್, 1953

(ಕೃಪೆ : “Letters for a Nation” by Jawaharlal Nehru: to his Chief Ministers – 1947 -1953, Editor : Madhav Khosla)  

ಸತ್ತದ್ದು ಅಂತಃಸಾಕ್ಷಿ: ಕೊಲ್ಲಲ್ಪಟ್ಟದ್ದು ಲೇಖಕ

                                                                                                             ಪಿ.ಭಾರತೀ ದೇವಿ

ತಮಿಳು ಲೇಖಕ ಪೆರುಮಾಳ್ ಮುರುಗನ್ ತಮ್ಮೊಳಗಿನ ಲೇಖಕ ಸತ್ತಿದ್ದಾನೆ ಎಂದು ಘೋಷಿಸಿಕೊಂಡರು. ಅವರು 2010ರಲ್ಲಿ ಬರೆದ ಕೃತಿ ‘ಮಾದೋರುಬಾಗನ್’ ಗೆ ಎದುರಾದ ವಿರೋಧ ಅವರೊಳಗಿನ ಬರಹಗಾರನ ಚೈತನ್ಯವನ್ನು ಉಡುಗಿಸಿತು. ಈ ಬಗೆಯಲ್ಲಿ ಆಕ್ಷೇಪಾರ್ಹವಾದ ಸಂಗತಿ ಈ ಕೃತಿಯಲ್ಲಿ ಏನಿದೆ ಎಂಬ ಕುತೂಹಲದಿಂದ ಓದಿದರೆ ಅಲ್ಲಿ ವಿಮರ್ಶೆಗೊಳಗಾಗುವುದು ಕಟ್ಟುಪಾಡುಗಳಿಂದ ವ್ಯಕ್ತಿಯ ಜೀವಚೈತನ್ಯವನ್ನು ಉಡುಗಿಸುವ ವ್ಯವಸ್ಥೆ. ಹೀಗೆ ಸಹಜ, ಸ್ವತಂತ್ರ ಬದುಕಿಗೆ ಕೋಳ ತೊಡಿಸುವ ಕಟ್ಟಳೆಗಳು ಅದರಿಂದಾದ ಗಾಯಕ್ಕೆ ತಾವೇ ಮುಲಾಮು ಕೂಡಾ ಸವರುತ್ತವೆ. ಆದರೆ ಈ ಮುಲಾಮು ಗಾಯವನ್ನು ಗುಣಪಡಿಸುವ ಬದಲು ಹುಣ್ಣಾಗಿಸುತ್ತದೆ. ಈ ಬಗೆಯ ಹುಣ್ಣಿಗೆ ಕನ್ನಡಿ ಹಿಡಿದದ್ದಕ್ಕೇ ಎನಿಸುತ್ತದೆ ಇಂತಹ ಕೃತಿ ನಿಷೇಧಾರ್ಹ ಎನಿಸುವುದು.

ಈ ಕೃತಿ ಮತ್ತು ಅದರ ಹೆಸರಿನಲ್ಲಿ ನಡೆದ ವಿವಾದ ಆಧುನಿಕ ಎನ್ನುವ ಸಂದರ್ಭದಲ್ಲೂ ನಮ್ಮ ಕುರೂಪವನ್ನು ನೋಡುವ ಕನ್ನಡಿ ಇಟ್ಟಾಗ ಅದನ್ನು ಮುಖಾಮುಖಿಯಾಗಲು ಸಿperumalದ್ಧರಿಲ್ಲದ ನಾವು ಎಂತಹ ನಾಗರಿಕರು? ಎನ್ನುವ ಪ್ರಶ್ನೆಯನ್ನು ಎಲ್ಲರ ಮುಂದಿಡುತ್ತದೆ. ಕೆಲವು ದಿನಗಳ ಹಿಂದೆ ‘ಇಂಡಿಯಾಸ್ ಡಾಟರ್’ ಡಾಕ್ಯುಮೆಂಟರಿಗೆ ವ್ಯಕ್ತವಾದ ಅಭಿಪ್ರಾಯವೂ ನಮ್ಮನ್ನು ಆವರಿಸಿರುವ ಕೇಡನ್ನು ಒಪ್ಪಿಕೊಳ್ಳಲು, ಅದಕ್ಕೆ ಎದುರಾಗಲು ಸಿದ್ಧವಿರದ ಮನಸ್ಥಿತಿಯನ್ನು ತೋರಿಸುತ್ತದೆ. ಯಥಾಸ್ಥಿತಿಯನ್ನು ಸುಂದರ ಮಾತುಗಳಲ್ಲಿ ಬಣ್ಣಿಸಿ ಮುಂದುವರೆಸಿಕೊಂಡು ಹೋಗುವವರಿಗೆ, ಸಂಸ್ಕೃತಿಯ ಹಿರಿಮೆಯನ್ನು ಕೊಂಡಾಡಲು ಹಿಂದಿನದನ್ನು ತಿರುಚುವ ಜನರಿಗೆ ಅಪಥ್ಯವಾಗುವ ಕಹಿ ಇದು.

*************

ಮಾದೋರುಬಾಗನ್ ಎತ್ತುವ ಪ್ರಶ್ನೆ ವ್ಯಕ್ತಿಯ ಬದುಕಿನ ಖಾಸಗಿ ವಲಯದಲ್ಲೂ ಅನಪೇಕ್ಷಿತವಾಗಿ ಮೂಗು ತೂರಿಸಿ ಬದುಕನ್ನು ಅಸಹನೀಯಗೊಳಿಸುವ ಸಾಮಾಜಿಕ ವಿಷಮತೆಯನ್ನು ಎಳೆಯಾಗಿ ಹೊಂದಿದೆ. ಈ ಕೃತಿಯನ್ನು ಜಾತಿ, ವರ್ಗ, ಲಿಂಗಗಳ ಹಿನ್ನೆಲೆಗಳಲ್ಲಿ ಅಭ್ಯಸಿಸಬಹುದಾದರೂ ಸದ್ಯಕ್ಕೆ ನಾನು ಇದನ್ನು ವ್ಯಕ್ತಿಯ ಖಾಸಗಿ ಬದುಕಿನ ಜೀವಂತಿಕೆಯನ್ನು ಕಸಿಯುವ ವ್ಯವಸ್ಥೆಯ ಮಧ್ಯಪ್ರವೇಶ ಎಂಬ ನೆಲೆಯಲ್ಲಿ ಗಮನಿಸುತ್ತಿದ್ದೇನೆ.

ತಮಿಳುನಾಡಿನಲ್ಲಿ ವ್ಯವಸಾಯದ ಕೆಲಸ ಮಾಡುತ್ತಾ ಬಂದಿರುವ ಗೌಂಡರ್ ಸಮುದಾಯದ ಪೊನ್ನ ಮತ್ತು ಕಾಳಿ ಮದುವೆಯಾಗಿ ಹಲವು ವರ್ಷಗಳಾದರೂ ಮಕ್ಕಳಿಲ್ಲದೆ ಬಳಲುವ ಕತೆ ಇದು. ಇವರಿಗೆ ಮಕ್ಕಳಿಲ್ಲ ಎನ್ನುವ ಸಣ್ಣ ಕೊರಗು ಇದ್ದರೂ ಅದು ಅವರ ನಡುವಣ ಪ್ರೀತಿಗೆ ಅಡ್ಡಿಯಾಗಿರುವುದಿಲ್ಲ. ಆದರೆ ಅವರ ದಿನನಿತ್ಯದ ಸನ್ನಿವೇಶಗಳಲ್ಲೆಲ್ಲ ಇದನ್ನು ಎತ್ತಿ ಆಡುವ ಸಮಾಜ ಅವರು ಬದುಕಿನ ಸಣ್ಣ ಸಂತೋಷಗಳಿಗೂ ಎರವಾಗುವ ಹಾಗೆ ಮಾಡುತ್ತದೆ. ಮದುವೆಯಾಗಿ ತಮ್ಮ ಬದುಕು ಹೇಗೆ ಸಾಗುತ್ತದೆ ಎಂದು ಅರಿವಾಗುವ ಮೊದಲೇ ಮಕ್ಕಳನ್ನು ಹೊತ್ತು, ಗೊತ್ತು ಗುರಿಯೇ ಇಲ್ಲದಂತೆ ಒಂದಾದ ಮೇಲೆ ಒಂದರಂತೆ ಹುಟ್ಟಿಸಿ, ಸಾಕಲು ಪಡಿಪಾಟಲು ಪಡುವವರೂ ಒಂದಿಷ್ಟೂ ಸ್ವ ಅವಲೋಕನ ಮಾಡಿಕೊಳ್ಳದಂತೆ ಇದೇ ಪರಮಸತ್ಯ ಎಂಬಂತೆ ಬದುಕುತ್ತಿರುತ್ತಾರೆ. ಇಂಥ ಎಲ್ಲರೂ ಕಾಳಿ ಮತ್ತು ಪೊನ್ನನ ಬದುಕು ಮಕ್ಕಳಿಲ್ಲದೇ ಅರ್ಥಹೀನ ಎಂದು ನಿರ್ಧರಿಸಿಬಿಡುತ್ತಾರೆ.

ಕೃಷಿಯ ಸಂದರ್ಭದಲ್ಲಿ ಬೀಜ ಬಿತ್ತಲು ನೆರವಾಗಲು ಹೋದ ಪೊನ್ನ, ಬಂಜೆ ಬಿತ್ತಿದರೆ ಇಳುವರಿ ಹೇಗೆ ಬರಲು ಸಾಧ್ಯ ಎಂಬ ಮಾತಿನಿಂದ ನೋಯುತ್ತಾಳೆ. ಯಾರ ಮಕ್ಕಳೇ ಆಗಲಿ ಮನೆಗೆ ಬಂದಾಗ ಪೊನ್ನಳಿಗೆ ಸಂಭ್ರಮ. ಅದೇ ಅವರು ಆಡುವಾಗ ತುಸು ಗಾಯ ಮಾಡಿಕೊಂಡರೂ ಮಕ್ಕಳೇ ಇಲ್ಲದ ಪೊನ್ನಳಿಗೆ ಮಕ್ಕಳನ್ನು ಹೇಗೆ ನೋಡಿಕೊಳ್ಳಬೇಕೆಂದು ಗೊತ್ತಿದ್ದರೆ ತಾನೇ? ಎಂಬ ಚುಚ್ಚುಮಾತು ಅವಳನ್ನು ಘಾಸಿಗೊಳಿಸುತ್ತದೆ. ಶುಭಸಮಾರಂಭಗಳಿಗೆ ಹೋದರೂ ಅವಳ ಬಗ್ಗೆ ತಿರಸ್ಕಾರ ಅಥವಾ ಅನುಕಂಪ. ಹತ್ತು ವರ್ಷಗಳಿಂದಲೂ ಇವನ್ನೆಲ್ಲ ಅನುಭವಿಸಿ ಅನುಭವಿಸಿ ಪೊನ್ನ ಕುಗ್ಗುತ್ತಾ ಹೋಗುತ್ತಾಳೆ. ದಿನದಿಂದ ದಿನಕ್ಕೆ ಜನರೊಂದಿಗೆ ಬೆರೆಯುವುದನ್ನು ಕಡಿಮೆ ಮಾಡುತ್ತಾ ಒಂಟಿಯಾಗುತ್ತಾಳೆ.

ಆಕೆಯ ಗಂಡ ಕಾಳಿ ತನ್ನ ಗೆಳೆಯರ ಮಧ್ಯೆ ಕೈಲಾಗದವನು ಎಂಬ ಮಾತುಗಳಿಗೆ ಈಡಾಗಬೇಕಾಗುತ್ತದೆ. ಅವನಿಗೆ ಮಕ್ಕಳಿಲ್ಲದಿರುವುದರಿಂದ ಅವನ ನಂತರ ಆಸ್ತಿ ನಮ್ಮದಾಗಬೇಕು ಎಂದು ಹುಸಿ ಕಾಳಜಿ ತೋರಿಸುವವರ ಸಂಖ್ಯೆ ಜಾಸ್ತಿಯಾಗುತ್ತದೆ. ಮಕ್ಕಳಿಲ್ಲದಿರುವುದರಿಂದ ನಿಮಗೇನು ಚಿಂತೆ, ಇರುವುದನ್ನು ಖರ್ಚು ಮಾಡಿ ಹಾಯಾಗಿದ್ದೀರಿ ಎನ್ನುವ ಭರ್ತ್ಸನೆಯ ಮಾತುಗಳು ನಿರಂತರ ಅವನನ್ನು ತಾಕುತ್ತಿರುತ್ತವೆ.

ಮಕ್ಕಳನ್ನು ಪಡೆಯುವುದಕ್ಕೆ ಇವರಿಬ್ಬರೂ ಯಾವ್ಯಾವ ಪೂಜೆ ಸಾಧ್ಯವೋ, ಯಾವ್ಯಾವ ಹರಕೆ ಸಾಧ್ಯವೋ ಎಲ್ಲವನ್ನೂ ಮಾಡುತ್ತಾರೆ. ತಮ್ಮ ಜೀವವನ್ನು ಪಣಕ್ಕೊಡ್ಡಿ ಕಷ್ಟಕರವಾದ ಹರಕೆಗಳನ್ನು ಪೂರೈಸುತ್ತಾರೆ. ಆದರೆ ಯಾವುದೂ ಪೊನ್ನಳ ಮಡಿಲನ್ನು ತುಂಬುವುದಿಲ್ಲ. ಪ್ರತಿತಿಂಗಳೂ ತಪ್ಪದೆ ಬರುವ ಸ್ರಾವ ಅವಳನ್ನು ಖಿನ್ನತೆಗೆ ದೂಡುತ್ತದೆ.

ಮನೆಯಲ್ಲಿ, ಮನೆಯ ಹೊರಗೆ ಎಲ್ಲ ಕಡೆಯಲ್ಲೂ ನಿರಂತರವಾದ ಇವೇ ಮಾತುಗಳಿಂದ ಇವರಿಬ್ಬರೂ ರೋಸಿ ಹೋಗುತ್ತಾರೆ. ಅದರಲ್ಲೂ ಹೆಚ್ಚು ಮಾತಿಗೆ ಆಹಾರವಾಗುವವಳು ಪೊನ್ನ. ಮಕ್ಕಳಿಲ್ಲದಿದ್ದರೆ ಅದಕ್ಕೆ ಹೆಣ್ಣೇ ಕಾರಣ ಎಂದು ದೂಷಿಸುವವರೇ ಜಾಸ್ತಿ. ಕೃಷಿ ಇಳುವರಿ ಚೆನ್ನಾಗೇ ಬರುತ್ತಿದ್ದರೂ ಕುರಿ ಕೋಳಿಗಳ ಸಂಖ್ಯೆ ಹೆಚ್ಚುತ್ತಿದ್ದರೂ ಮನೆಯಲ್ಲಿ ಮಾತ್ರ ಮಗುವಿನ ಕೇಕೆ ಇಲ್ಲವಲ್ಲ ಎಂಬ ಕೊರಗು ಎಲ್ಲ ಸಂದರ್ಭಗಳಲ್ಲೂ ಬೇರೆ ಬೇರೆ ರೀತಿಯಲ್ಲಿ ಇಣುಕಿ ಬದುಕಿಗೇ ಗ್ರಹಣ ಬಡಿದಂತಾಗುತ್ತದೆ.

ಆದರೆ ವೈಯಕ್ತಿಕವಾಗಿ ನೋಡಿದರೆ ಪೊನ್ನ-ಕಾಳಿಯರ ದಾಂಪತ್ಯದ ಬಿಸುಪು ಅಂದಿನಿಂದಲೂ ಕಾವು ಕಳೆದುಕೊಂಡಿಲ್ಲ. ಇಂದಿಗೂ ಪೊನ್ನಳ ನೆನಪೇ ಕಾಳಿಯಲ್ಲಿ ಹೊಸ ಹುರುಪು ತುಂಬುತ್ತದೆ. ಕಾಳಿಯ ಪ್ರತಿಯೊಂದು ಚಲನೆಯನ್ನೂ ಪೊನ್ನ ಬಲ್ಲಳು. ಅವರಿಗೆ ತಮ್ಮ ಸಂಬಂಧದಲ್ಲಿ ಯಾವ ಕೊರತೆಯೂ ಇಲ್ಲ, ಸುಖವಾಗಿಯೇ ಇದ್ದೇವೆ, ಯಾಕೆ ಅವರಿವರ ಮಾತಿಗೆ ಕಟ್ಟುಬಿದ್ದು ಮಕ್ಕಳಿಲ್ಲ ಎಂದು ಕೊರಗುವುದು ಎನಿಸುತ್ತದೆ. ಆದರೆ ಸುತ್ತಣ ಸಮಾಜ ಅವರು ಅವರ ಪಾಡಿಗೆ ಸುಖವಾಗಿ ಇರುವುದಕ್ಕೂ ಬಿಡುವುದಿಲ್ಲ.

ತಿರುಚಂಗೋಡಿನ ಅರ್ಧನಾರೀಶ್ವರ ದೇವಸ್ಥಾನದ ಜಾತ್ರೆಯ 14ನೇ ದಿನ ಮಕ್ಕಳಿಲ್ಲದವರಿಗೆ ದೇವರು ಮಕ್ಕಳನ್ನು ಕರುಣಿಸುತ್ತಾನೆ ಎಂಬ ನಂಬಿಕೆ ಅಲ್ಲೆಲ್ಲ ಹಬ್ಬಿತ್ತು. ಮಕ್ಕಳಿಲ್ಲದ ಮಹಿಳೆಯರು ಆ ದಿನ ಮಟ್ಟಿಗೆ ಮಕ್ಕಳನ್ನು ಪಡೆಯುವ ಸಲುವಾಗಿ ದೇವರ ರೂಪವೇ ಎಂಬಂತೆ ಕಾಣುವ ಪುರುಷರ ಜೊತೆಗಿದ್ದು ಮಕ್ಕಳನ್ನು ಪಡೆಯುವ ಅವಕಾಶ ಅದು. ಅನೇಕ ಜನ ಮಕ್ಕಳಿಲ್ಲದವರು ಆ ದಿನ ಮಕ್ಕಳನ್ನು ಪಡೆದು ಆ ಮಕ್ಕಳು ದೇವರ ಮಕ್ಕಳೆನಿಸಿಕೊಂಡಿದ್ದರು.

ಕಾಳಿಯ ತಾಯಿ ಮತ್ತು ಪೊನ್ನಳ ಅತ್ತೆ ಸೇರಿ ಪೊನ್ನಳನ್ನು ಈ ಬಾರಿ ಜಾತ್ರೆಯ 14ನೇ ದಿನ ಕಳುಹಿಸಬೇಕು ಎಂದು ಅಂದುಕೊಳ್ಳುತ್ತಾರೆ. ಕಾಳಿಯ ತಾಯಿ ಅದನ್ನು ಮಗನ ಜೊತೆ ಯಾಚನೆಯ ರೀತಿಯಲ್ಲಿ ಹೇಳಿಕೊಳ್ಳುತ್ತಾಳೆ. ಆದರೆ ಆ ಯೋಚನೆಯೇ ಕಾಳಿಯ ನಿದ್ದೆ ಕೆಡಿಸುತ್ತದೆ. ಕೊರತೆಯಿಲ್ಲದ ತಮ್ಮ ಸಾಂಗತ್ಯಕ್ಕೆ ಬಿರುಕಾಗಬಹುದಾದ ಅದು ಕಾಳಿಗೆ ಸಹ್ಯವಾಗುವುದಿಲ್ಲ. ಕೊನೆಯಲ್ಲಿ ಕಾಳಿ ಒಪ್ಪಿದ್ದಾನೆ ಎಂದು ಪೊನ್ನಳನ್ನು ನಂಬಿಸಿ, ಕಾಳಿಯನ್ನು ಉಪಾಯದಿಂದ ಬೇರೆಡೆಗೆ ಕರೆದೊಯ್ದು ಅವಳನ್ನು ದೇವಸ್ಥಾನಕ್ಕೆ ಕರೆತರಲಾಗುತ್ತದೆ.

ನಿದ್ದೆ ತಿಳಿದು ಪೊನ್ನಳನ್ನು ಜ್ಞಾಪಿಸಿಕೊಂಡು ಮನೆಗೆ ಬಂದ ಕಾಳಿ ಮನೆಯ ಮುಂದೆ ಇರುವ ಗಾಡಿ ಕಾಣದಿರುವುದನ್ನು ಕಂಡು ತಾನು ಇವರೆಲ್ಲರ ಮೋಸಕ್ಕೆ ಬಲಿಯಾದೆ ಎಂದು ರೋದಿಸುತ್ತಾನೆ. ತಮ್ಮ ಪ್ರೀತಿಯ ಬದುಕು ಒಡೆಯಿತು ಎಂದು ಆಕ್ರೋಶದಿಂದ ‘ಕೊನೆಗೂ ಮೋಸ ಮಾಡಿದ್ಯಲ್ಲೆ, ಹಾದರಗಿತ್ತಿ…’ ಎಂದು ಹತಾಶನಾಗಿ ಕಿರುಚುತ್ತಾನೆ. ಈ ಸಂಚಿಗೆ ಪೊನ್ನ-ಕಾಳಿಯರ ಬೆಚ್ಚನೆಯ ಬದುಕು ಛಿದ್ರವಾಗುತ್ತದೆ.

************

ಮಾದೋರುಬಾಗನ್ ಕೃತಿಯನ್ನು ವಿರೋಧಿಸುವವರಲ್ಲಿ ಬಹಳ ಜನ ಅವರೇ ಒಪ್ಪಿಕೊಳ್ಳುವ ಹಾಗೆ ಅದನ್ನು ಸರಿಯಾಗಿ ಓದಿಕೊಂಡಿಲ್ಲ. ಕೃತಿಯ ಕೊನೆಯಲ್ಲಿ ತಿರುಚಂಗೋಡ್ ದೇವಸ್ಥಾನದ ಜಾone partತ್ರೆಯ ಹದಿನಾಲ್ಕನೇ ದಿನ ಮಕ್ಕಳಿಲ್ಲದ ಹೆಂಗಸರು ಆ ದಿನದ ಮಟ್ಟಿಗೆ ಮಕ್ಕಳನ್ನು ಪಡೆಯುವ ಸಲುವಾಗಿ ಪರಪುರುಷನ ಜೊತೆಗೆ ಸೇರಬಹುದಾದ ಸಡಿಲಿಕೆ ಇತ್ತು ಎನ್ನುವ ಸಂಗತಿಯನ್ನು ಮುಂದಿಟ್ಟುಕೊಂಡು ಒಂದಷ್ಟು ಜನ ಇದನ್ನು ವಿರೋಧಿಸಿದರು. ಮಾನವಶಾಸ್ತ್ರೀಯ ಅಧ್ಯಯನ ದೃಷ್ಟಿಯಿಂದ ಮಹತ್ವವಾದ ಈ ವಿಚಾರವನ್ನು ತಮ್ಮ ಅಧ್ಯಯನ ಮೂಲಕ ಕಂಡುಕೊಂಡ ಸೃಜನಶೀಲ ಲೇಖಕ ಪೆರುಮಾಳ್ ಮುರುಗನ್ ಅದನ್ನು ಸಮಾಜದ ವಿಷಮತೆಯೊಂದಿಗೆ ಸೂಕ್ಷ್ಮವಾಗಿ ಹೆಣೆದಿದ್ದಾರೆ. ಆದಿಮ ಸಂಸ್ಕೃತಿ ಎಂದು ಗುರುತಿಸಲಾಗುವ ಬುಡಕಟ್ಟು ಜನರ ಆಚರಣೆಗಳನ್ನು ಗಮನಿಸಿದಾಗ ವರ್ಷದ ನಿರ್ದಿಷ್ಟ ದಿನದಲ್ಲಿ ಗಂಡು-ಹೆಣ್ಣುಗಳ ಮುಕ್ತ ಸಮಾಗಮದ ಕುರುಹುಗಳು ಸಿಗುತ್ತವೆ. ಅಲ್ಲದೆ, ಫಲವಂತಿಕೆಯ ಆಶಯವೇ ಪ್ರಮುಖವಾಗಿರುವ ಕಡೆಗಳಲ್ಲಿ ಹೇಗಾದರೂ ಸರಿ, ವಂಶವನ್ನು ಮುಂದುವರಿಸಲು ಉತ್ತರಾಧಿಕಾರಿಯನ್ನು ಪಡೆಯುವುದು ಮುಖ್ಯವಾಗುತ್ತದೆ. ಮಹಾಭಾರತದ ನಿಯೋಗ ಪದ್ಧತಿ, ಮಲೆಮಾದೇಶ್ವರ ಕಾವ್ಯದಲ್ಲಿ ಬರುವ ಸಂಕವ್ವ ಮಗುವನ್ನು ಪಡೆಯುವ ಪ್ರಸಂಗ ಮುಂತಾದ ಹಲವು ಉದಾಹರಣೆಗಳು ಸಿಗುತ್ತವೆ.

ಮದುವೆ ಎನ್ನುವುದು ಪರಿಪೂರ್ಣವಾಗುವುದು ವರ್ಷದೊಳಗೆ ಮಗುವನ್ನು ಹೆರುವ ಮೂಲಕ ಎಂದು ಇಂದಿಗೂ ಬಹುತೇಕರು ನಂಬಿಕೊಂಡಿರುವ ಸಮಾಜ ನಮ್ಮದು. ಹೆಣ್ಣಿನ ಹೆಣ್ತನ ಪರಿಪೂರ್ಣವಾಗುವುದೇ ಗರ್ಭಾಶಯದ ಮೂಲಕ; ಗಂಡಿನ ಗಂಡಸುತನ ಸಾಬೀತು ಮಾಡುವುದಕ್ಕೆ ಅವನು ಹೇಗೆ ಹೆಣ್ಣನ್ನು ಆಳುತ್ತಾನೆ ಎಂಬುದೇ ಮಾನದಂಡ; ಅವನು ಎಷ್ಟು ಮಕ್ಕಳನ್ನು ಹುಟ್ಟಿಸುತ್ತಾನೆ ಎಂಬುದೇ ಅವನ ಪೌರುಷದ ದ್ಯೋತಕ ಎಂದಾದಾಗ ರೂಪುಗೊಳ್ಳುವ ಹೆಣ್ಣು-ಗಂಡಿನ ಮಾದರಿಗಳು ಎಂಥವಾಗಿರುತ್ತವೆ? ಅವು ಎಷ್ಟು ಅಪಾಯಕಾರಿ?

ಫಲವಂತಿಕೆಯ ಆಶಯವೇನೇ ಇರಲಿ, ಆದರೆ ವ್ಯಕ್ತಿತ್ವದ ಪರಿಪೂರ್ಣತೆಯನ್ನು ಕೇವಲ ವಂಶಾಭಿವೃದ್ಧಿ ಮಾಡುವ ಶಕ್ತಿಯಿಂದಲೇ ನಿರ್ಧರಿಸುವುದು ಲೈಂಗಿಕತೆ ಮತ್ತು ವ್ಯಕ್ತಿತ್ವದ ಸಮಗ್ರತೆಯ ಸಾಧ್ಯತೆಗಳನ್ನೇ ಕುಗ್ಗಿಸುವುದಿಲ್ಲವೇ? ಈ ದೃಷ್ಟಿಕೋನ ಮಹಿಳೆಯನ್ನು ಭೋಗಿಸಲು ಮತ್ತು ವಂಶೋದ್ಧಾರಕನನ್ನು ಹೆತ್ತುಕೊಡಲು ಇರುವ ಉಪಕರಣ ಎಂಬಂತೆ ಮಾತ್ರ ನೋಡುತ್ತದೆ. ತನ್ನೆಲ್ಲ ಶಕ್ತಿಯ ಆಚೆಗೆ ಹೆಣ್ಣನ್ನು ಬಸಿರು ಮಾಡದ ಗಂಡನ್ನು ನಿಷ್ಪ್ರಯೋಜಕನೆಂಬಂತೆ ನೋಡುತ್ತದೆ. ಈ ಮನೋವೃತ್ತಿ ತನ್ನ ಅತಿಯಲ್ಲಿ ಹೆಣ್ಣಿನ ದೇಹದ ಮೇಲೆ ಆಕ್ರಮಣ ಮಾಡುತ್ತದೆ. ಆಕ್ರಮಣ ಮಾಡಲಾಗದವನನ್ನು ಹೇಡಿ ಎಂದು ಝಂಕಿಸುತ್ತದೆ. ಇದು ಅತ್ಯಾಚಾರಕ್ಕೆ ಪ್ರೇರೇಪಿಸುವ ಮನೋವೃತ್ತಿಯತ್ತ ಒಯ್ಯುತ್ತದೆ.

ಇಂತಹ ಅನಾರೋಗ್ಯಕರ ಸ್ಥಿತಿಯನ್ನು ಮಾದೋರುಭಾಗನ್ ತೀವ್ರತೆಯೊಂದಿಗೆ ಚಿತ್ರಿಸುತ್ತದೆ ಅಷ್ಟೆ, ತೀರ್ಮಾನ ಕೊಡುವುದಿಲ್ಲ. ಆದರೆ ಸೂಕ್ಷ್ಮ ಓದುಗನಿಗೆ ಪೊನ್ನ-ಕಾಳಿಯರ ಬದುಕಿನ ಸಹಜ ಲಯ ತಪ್ಪಿ ಅವರು ಬದುಕಿನ ಎಲ್ಲ ಸಂಗತಿಗಳಲ್ಲೂ ಉತ್ಕಟತೆಯಿಂದ ತೊಡಗಿಕೊಳ್ಳುವ ಶಕ್ತಿ ಇದ್ದೂ ಎಲ್ಲವನ್ನೂ ಕಳಕೊಂಡವರಂತೆ ನಿಸ್ತೇಜರಾಗುವುದು ಕಾಡುತ್ತಾ ಹೋಗುತ್ತದೆ. ಕೊನೆಗೂ ಇಂತಹ ವಿಷವರ್ತುಲದಲ್ಲಿ ಅವರನ್ನು ಎಳೆದ ಸಮಾಜ ಅದಕ್ಕೆ ಪರಿಹಾರವಾಗಿ ಒದಗಿಸುವ ಸಂದರ್ಭ ಇವರ ಬದುಕಿನ ಮೂಲಸೆಲೆಯನ್ನೇ ಬತ್ತಿಸಿಬಿಡುತ್ತದೆ. ತಿರುಚಂಗೋಡಿಗೆ ಹೋದ ಪೊನ್ನ, ಮೋಸ ಹೋದ ಕಾಳಿ ಇಬ್ಬರೂ ಮಗುವನ್ನು ಪಡೆದರೂ ಬದುಕನ್ನು ಮುನ್ನಡೆಸುವ ಪ್ರೀತಿಯ ಸೆಲೆಯನ್ನೇ ಕಳೆದುಕೊಂಡಿರುತ್ತಾರೆ. ತಾನೇ ಸೃಷ್ಟಿಸಿದ ಸಮಸ್ಯೆಗೆ ತಾನೇ ನೀಡುವ ಪರಿಹಾರ ಸಮಸ್ಯೆಯನ್ನು ಆಳವಾಗಿಸಿ ಜೀವನಪ್ರೀತಿಯ ಎರಡು ಜೀವಗಳ ಉಲ್ಲಾಸವನ್ನು ಕಸಿಯುವಲ್ಲಿ ಕೊನೆಗೊಳ್ಳುತ್ತದೆ.

ಈ ಕೃತಿ 2010ರಲ್ಲೇ ಬಂದಿದ್ದರೂ ಯಾಕೆ 2015ರಲ್ಲಿ ಈ ಮಟ್ಟಿಗಿನ ವಿರೋಧಕ್ಕೆ ಈಡಾಯಿತು ಎಂದು ನೋಡಲು ಹೋದರೆ ಬಿಜೆಪಿ ನೇತೃತ್ವದ ಎನ್.ಡಿ.ಎ ಬಹುಮತ ಪಡೆದು ಸರ್ಕಾರ ರೂಪಿಸಿದ ಹಿನ್ನೆಲೆಯಲ್ಲಿಯೇ ದೇಶದ ಎಲ್ಲೆಡೆ ಮತೀಯ ಶಕ್ತಿಗಳು ಬಲಪಡೆದುಕೊಂಡವು. ತಮಿಳು ನಾಡಿನಲ್ಲಿಯೂ ಬಲಪಡೆದುಕೊಂಡ ಇಂತಹುದೇ ಶಕ್ತಿಗಳು ಲೇಖಕ ಪೆರುಮಾಳ್ ಮುರುಗನ್ ಅವರನ್ನು ಗುರಿಯಾಗಿಸಿಕೊಂಡವು. ಅವರು ಈ ಕೃತಿಗೆ ತೋರಿದ ವಿರೋಧವನ್ನು ತಾರ್ಕಿಕವಾಗಿಯೇ ವಿವರಿಸಬಹುದು. ದೇಶದ ಉದ್ಧಾರಕ್ಕಾಗಿ ನಾಲ್ಕು ಮಕ್ಕಳನ್ನು ಹೆರಬೇಕು ಎನ್ನುವವರಿಗೆ, ಮಹಿಳೆಯ ಲೈಂಗಿಕತೆಯ ಮೇಲೆ ಮಾತ್ರ ಕಡಿವಾಣ ಹಾಕುವವರಿಗೆ, ಪೌರುಷವನ್ನು ವಿಜೃಂಭಿಸುವವರಿಗೆ ಈ ಕೃತಿ ಎತ್ತುವ ಪ್ರಶ್ನೆ ತಮ್ಮನ್ನೇ ಪ್ರಶ್ನಿಸಿದಂತೆ ಅನಿಸಿದರೆ ಅಚ್ಚರಿಯೇನಿಲ್ಲ್ಲ. ಸಮಾಜವೇ ಎತ್ತಿ ತೋರಿಸಿ, ವಿಜೃಂಭಿಸಿದ ಕೊರತೆಗೆ ಅದೇ ಸೂಚಿಸುವ ಪರಿಹಾರ ವಿಕೃತ ಎನಿಸಿದರೆ, ಚರಿತ್ರೆಯ ಕೊಳಕು ಎನಿಸಿದರೆ ಅವರನ್ನೇ ಕೇಳಬೇಕು, ಹೆಣ್ಣು ಗರ್ಭಪಾತ್ರೆ ಎನ್ನುವಂತೆ ಇಂದಿಗೂ ನೀವು ಮಾತಾಡುತ್ತಿರುವುದು ಏಕೆ? ಅವಳನ್ನು ಆಡಿ ಆಡಿ ಹಿಂಸಿಸುವ ಸಮಾಜ ಅವಳು ಒಮ್ಮೆ ಇವರ ಬಾಯಿಯಿಂದ ಪಾರಾದರೆ ಸಾಕು ಎಂಬಂತೆ ಲಭ್ಯವಿರುವ ಆಸರೆಗಳ ಮೊರೆ ಹೋದರೆ ಅನೈತಿಕ ಏಕಾಗುತ್ತದೆ? ಫಲವಂತಿಕೆಯ ಅಶಯವೇ ಪ್ರಧಾನವಾಗುಳ್ಳ ಪ್ರಾಚೀನ ಸಮುದಾಯಗಳು ಮಕ್ಕಳನ್ನು ಪಡೆಯಲು ಇದ್ದ ಅವಕಾಶಗಳನ್ನು ಮಾನವಶಾಸ್ತ್ರೀಯ ಅಧ್ಯಯನಕ್ಕೆ ಒಳಪಡಿಸಬೇಕೇ ಹೊರತು ಅದರ ಚಿತ್ರಣ ಪರಂಪರೆಗೆ ಮಾಡಿದ ಅಪಚಾರ ಎನ್ನುವುದು ಚರಿತ್ರೆಯನ್ನು ತಮಗೆ ಬೇಕಾದಂತೆ ವ್ಯಾಖ್ಯಾನಿಸುವ ಒತ್ತಾಯದಿಂದ ಹೊರಟಿದೆ.

ಬದುಕಿನಲ್ಲಿ ಯಾರಿಗೂ ಇರಬಹುದಾದ ಹಲವು ಕೊರತೆಗಳಂತೆ ಇದೂ ಒಂದು ಕೊರತೆ ಎನ್ನುವಷ್ಟಕ್ಕೇ ಬಿಡದೆ ವ್ಯಕ್ತಿಗಳನ್ನು ಬೆಂಬಿಡದೆ ಕಾಡುವ ಸಮಾಜದ ಹುಳುಕಿಗೆ ಕನ್ನಡಿ ಹಿಡಿದ ಲೇಖಕ ಪೆನ್ನನ್ನೇ ಕೆಳಗಿಡುವ ಸಂದರ್ಭ ಬಂದಿದೆ ಎಂದರೆ ಇಲ್ಲಿ ಸತ್ತಿರುವುದು ಸ್ವವಿಮರ್ಶೆ ಮಾಡಿಕೊಳ್ಳಬೇಕಾದ ಸಮಾಜದ ಅಂತಃಸಾಕ್ಷಿ, ಕೊಲ್ಲಲ್ಪಟ್ಟಿರುವುದು ಲೇಖಕ.

‘ಆಮ ಆದ್ಮಿ’ಯ ಗೆಲುವಿನ ಗುಟ್ಟೆನು..?


– ಡಾ.ಎಸ್.ಬಿ. ಜೋಗುರ


ಈಚೆಗೆ ನಡೆದ ದೆಹಲಿಯ ಚುನಾವಣೆ ಮತ್ತು ಫ಼ಲಿತಾಂಶದ ಸಂದರ್ಭದಲ್ಲಿ ನಾನು ದೆಹಲಿಯಲ್ಲಿದ್ದೆ. ದೆಹಲಿ ಸಿಟಿಯಲ್ಲಿ ಸಂಚರಿಸುವಾಗ ನನಗೆ ಅಲ್ಲಲ್ಲಿ ಸಿಗುವ ರಿಕ್ಷಾವಾಲಾಗಳು, ಡಬ್ಬಾ ಅಂಗಡಿಗಳ ಮುಂದಿರುವ ಜನರೊಂದಿಗೆ ಹಾಗೇ ಹರಟುತ್ತಾ ‘ಕ್ಯಾ ಹೈ ದಿಲ್ಲಿ ಇಲೆಕ್ಷನ್ ಕಾ ಹಾಲ್’ ಅಂತಿದ್ದೆ. ಅದಕ್ಕವರು ‘ಪೂಛನಾ ಕ್ಯಾ ಹೈಜೀ ಕೇಜ್ರಿವಾಲಾ ಹೀ ಆಯೇಗಾ’ ಎಂದು ತುಂಬಾ ಕಾನ್ಫಿಡಂಟ್ ಆಗಿ ಹೇಳುವವರು. ಚುನಾವಣೆ ಹತ್ತಿರವಾಗುತ್ತಿರುವಂತೆ ಆಮ್ ಆದ್ಮಿ ಪಕ್ಷದ ಜನಪ್ರಿಯತೆ ಇನ್ನಷ್ಟು ಹೆಚ್ಚಾಗುತ್ತಾ ನಡೆಯಿತು. cyclerickshaw-delhiಕೇವಲ ನಮ್ಮ ದೇಶ ಮಾತ್ರವಲ್ಲ, ಇಡೀ ವಿಶ್ವದಲ್ಲಿ ಜನಸಮಾನ್ಯರದೇ ಬಹುದೊಡ್ಡ ಪಾಲು ಅವರು ಬಯಸಿದರೆ ಇಷ್ಟಪಡುವ ವ್ಯಕ್ತಿಯನ್ನು, ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಸಂಶಯವೇ ಇಲ್ಲ. ಇನ್ನು ಇತ್ತೀಚಿನ ದಿನಗಳಲ್ಲಿ ನಗರಗಳ ಚುನಾವಣಾ ಫ಼ಲಿತಾಂಶ ಜನಸಾಮಾನ್ಯ ನಿರೀಕ್ಷಿಸುವಂತೆ ಸಾಧ್ಯವಾಗುತ್ತಿದೆ. ಜಾಗತೀಕರಣದ ಸಂದರ್ಭದಲ್ಲಿ ರಾಜಕೀಯ ಸ್ಥಿತ್ಯಂತರಗಳು ಮಧ್ಯಮ ವರ್ಗದವರ, ಜನಸಾಮಾನ್ಯನ ಮೂಲಕ ನಿರ್ಧರಿತವಾಗುತ್ತಿರುವದು ವಿಶ್ವದ ಅನೇಕ ಕಡೆಗಳಲ್ಲಿ ಎದ್ದು ತೋರುತ್ತಿದೆ. ಯಾವುದೇ ಒಂದು ರಾಜಕೀಯ ಪಕ್ಷ ಕೆಲವೇ ಕೆಲವು ಶ್ರೀಮಂತ ದೊರೆಗಳ ಖುಷಿಗಾಗಿ ಅಧಿಕಾರ ಚಲಾಯಿಸುತ್ತವೆ ಎನ್ನುವದಾದರೆ ಅದರ ಆಯುಷ್ಯ ದೀರ್ಘವಾಗಿರುವದಿಲ್ಲ ಎಂದರ್ಥ. ದೆಹಲಿಯಲ್ಲಿ ಅಧಿಕಾರದ ಗದ್ದುಗೆಯಲ್ಲಿರುವ ಪಕ್ಷ ಜನಸಾಮಾನ್ಯನ ಮಾನಸಿಕ ಸ್ತರಗಳನ್ನು ಅರಿಯದೇ ಬರೀ ಭಾಷಣದ ಮೂಲಕವೇ ಎಲ್ಲವನ್ನು ಸಾಧ್ಯಮಾಡಬಹುದೆನ್ನುವ ಭ್ರಮೆಯನ್ನು ದೆಹಲಿಯ ಮತದಾರ ಛಿದ್ರಛಿದ್ರವಾಗಿ ಒಡೆದಿರುವದಿದೆ. ಯಾವ ಪಕ್ಷವೂ ನಿರೀಕ್ಷಿಸದ ರೀತಿಯಲ್ಲಿ ಫ಼ಲಿತಾಂಶವನ್ನು ಗಳಿಸಿದ ಆಮ ಆದ್ಮಿ ಪಕ್ಷ ಜನಸಾಮಾನ್ಯನಂತೆಯೇ ಯೋಚಿಸುವ, ಮಾತನಾಡುವ, ಕನಸು ಕಾಣುವ ಮೂಲಕವೇ ಅಧಿಕಾರದ ಗದ್ದುಗೆಯೇರಿದ್ದು ಮಾತ್ರವಲ್ಲದೇ ದೈನಂದಿನ ಅಗತ್ಯಗಳಾದ ವಿದ್ಯುತ್, ಕುಡಿಯುವ ನೀರು ಮುಂತಾದವುಗಳನ್ನು ಮಾತು ತಪ್ಪದ ಮಕ್ಕಳಂತೆ ಈಡೇರಿಸಿದ್ದಾರೆ. ವಿಶ್ವದ ಬಹುತೇಕ ಕಡೆಗಳಲ್ಲಿ ಈ ನಗರ ಪ್ರದೇಶಗಳಲ್ಲಿ ವಾಸಿಸುವ ಬಹುತೇಕ ಸಾಮಾನ್ಯ ಮತ್ತು ಮಧ್ಯಮ ವರ್ಗದ ಜನರು ತಮ್ಮ ಜನನಾಯಕರಿಂದ ಅರಮನೆ, ಮೃಷ್ಟಾನ್ನ ಭೋಜನವನ್ನು ಕೇಳುವದಿಲ್ಲ. ತೀರಾ ಸಾಮಾನ್ಯ ದೈನಂದಿನ ಜೀವನ ನಿರ್ವಹಣೆಗೆ ಅಗತ್ಯವಿರುವ ಉದ್ಯೋಗ, ವಸತಿ, ಕುಡಿಯುವ ನೀರು ಮುಂತಾದವುಗಳನ್ನೇ ಕೇಳುತ್ತಾರೆ. ಜೊತೆಗೆ ವರ್ಷದಿಂದ feb142015kejriwalವರ್ಷಕ್ಕೆ ತೀವ್ರ ಪ್ರಮಾಣದಲ್ಲಿ ಹೊರನೋಟಕ್ಕೆ ನಿಚ್ಚಳವಾಗಿ ತೋರುವ ನಗರ ಜೀವನದಲ್ಲಿಯ ಅಸಮಾನತೆಗಳಿಂದ ಉಧ್ಬವವಾಗಬಹುದಾದ ಅತೃಪ್ತಿಯ ಪರಿಣಾಮವೂ ಈ ಬಗೆಯ ಫ಼ಲಿತಾಂಶವನ್ನು ಕೊಡಬಲ್ಲದು.

ಕಳೆದ ಎರಡೂವರೆ ದಶಕಗಳಿಂದಲೂ ಜಾಗತೀಕರಣದ ಪ್ರಭಾವ ವಿಶ್ವದ ಆರ್ಥಿಕ ಮತ್ತು ಸಾಮಾಜಿಕ ಸಂಗತಿಗಳ ಮೇಲೆ ಉಂಟಾಗುತ್ತಿರುವ ಹಾಗೆಯೇ ರಾಜಕೀಯ ವಿದ್ಯಮಾನಗಳ ಮೇಲೆಯೂ ಅದು ತನ್ನ ಪ್ರಭಾವವನ್ನು ಬೀರುತ್ತಿದೆ. ಈಚೆಗೆ ಬ್ರಾಝಿಲ್ ಲ್ಲಿ ನಡೆದ ಚುನಾವಣೆ, ಗ್ರೀಸ್ ನಲ್ಲಿ ನಡೆದ ರಾಜಕೀಯ ವಿದ್ಯಮಾನ, ಹಾಂಗ್ ಕಾಂಗ್ ನಲ್ಲಿ ನಡೆದ ರಾಜಕೀಯ ಪ್ರತಿಭಟನೆ ಹುಸಿ ಭರವಸೆಗಳನ್ನು ನೀಡಿದ ರಾಜಕೀಯ ನೇತಾರರು ಕೇವಲ ಶ್ರೀಮಂತರ ಪ್ರೀತಿ ಪಾತ್ರರಾಗುವದನ್ನು ಸಹಿಸದೇ ಜನ ವಿಶ್ವದಾದ್ಯಂತ ಬೀದಿಗಿಳಿದು ಪ್ರತಿಭಟನೆ ಮಾಡತೊಡಗಿದ್ದಾರೆ ಇಲ್ಲವೇ ರಾಜಕೀಯ ಅಧಿಕಾರವನ್ನೇ ಬದಲಾಯಿಸಿದ್ದಾರೆ. ನ್ಯುಯಾರ್ಕ್ ಮತ್ತು ಲಾಸ್ ಎಂಜೆಲ್ಸ್ ನಂಥಾ ಪಟ್ಟಣಗಳೂ ಇದಕ್ಕೆ ಹೊರತಾಗಿಲ್ಲ. ಎರಡು ದಶಕಗಳ ಮೊದಲಿನ ಜನಸಾಮಾನ್ಯ ಅಮೇರಿಕೆಯ ಮಾತ್ರವಲ್ಲ ಯಾವುದೇ ರಾಷ್ಟ್ರದ ಅಧ್ಯಕ್ಷ, ಪ್ರಧಾನಿ ಬಂದು ಹೋದರೂ ಅಷ್ಟಾಗಿ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ ಆದರೆ ಈಗ ಪರಿಸ್ಥಿತಿ ಸಂಪೂರ್ಣ ಭಿನ್ನವಾಗಿದೆ. ಅಮೇರಿಕೆಯ ಅಧ್ಯಕ್ಷ ಓಬಾಮಾ ಬರೀ ಬಂದ ವಿಷಯ ಮಾತ್ರವಲ್ಲ, ಆತ ಮಾತನಾಡಿದ್ದು, ಪ್ರಧಾನಿಯ ಜೊತೆಗಿನ ಸಂಭಾಷಣೆ ಎಲ್ಲವನ್ನು ಮಾಧ್ಯಮಗಳ ಮೂಲಕ ಸೂಕ್ಷ್ಮವಾಗಿ ನೋಡುವುದು, ಕೇಳುವುದು, ಓದುವುದು ಮಾತ್ರವಲ್ಲದೇ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ತನ್ನ ಹಕ್ಕುಗಳು, ಅಧಿಕಾರಗಳೇನು..? ಎನ್ನುವದನ್ನು ಯೋಚಿಸುವಷ್ಟು ಸಮರ್ಥತೆಯನ್ನು ಈ ಜಾಗತೀಕರಣದ ವಿದ್ಯಮಾನಗಳೇ ಅವರಿಗೆ ತಂದು ಕೊಟ್ಟಿರುವದಿದೆ. ಹೀಗಾಗಿ ಈಗಾಗಲೇ ಅಧಿಕಾರದಲ್ಲಿರುವ ರಾಜಕೀಯ ಪಕ್ಷಗಳು ಸುಮ್ ಸುಮ್ನೆ ಪಾರಿಜಾತ ಪುಷ್ಪವನ್ನೇ ಮತದಾರನ ಕೈಗಿಡುವ ಮಾತಾಡದಿರುವದೇ ಕ್ಷೇಮ. ಆಮ್ ಆದ್ಮಿ ಪಕ್ಷದ ಗೆಲುವಿಗೆ ಅತಿ ಮುಖ್ಯ ಕಾರಣ ಆ ಪಕ್ಷದ ನೇತಾರನ ಗ್ರಹಿಕೆಗಳು, ಮಾತುಗಳು, ಭರವಸೆಗಳು. ಪಕ್ಕಾ ಸಾಮಾನ್ಯ ಮನುಷ್ಯನಾಗಿಯೇ ಚುನಾವಣೆ ಎದುರಿಸಿದ ಕೇಜ್ರಿವಾಲ್ ಸಮೂಹ ಅಪಾರ ಪ್ರಮಾಣದ ಗೆಲುವನ್ನು ಪಡೆಯುವಲ್ಲಿ ಜನಮಾನಸವನ್ನು ಅರಿಯುವಲ್ಲಿ ಸಫ಼ಲರಾದದ್ದೇ ಕಾರಣ. ಬಣ್ಣದ ಮಾತು ಮತ್ತು ಹುಸಿ ಭರವಸೆಗಳನ್ನು ಹೇಗೆ ಜನಸಾಮಾನ್ಯ ಇಷ್ಟಪಡುವದಿಲ್ಲವೋ ಅದೇ ರೀತಿಯಲ್ಲಿ ತೀರಾ ಸಣ್ಣ ಕಾರಣಗಳನ್ನು ಮುಂದೆ ಮಾಡಿ ಒಳಜಗಳಗಳನ್ನು ಹುಟ್ಟು ಹಾಕಿಕೊಳ್ಳುವ ಪಕ್ಷಗಳನ್ನು ಕೂಡಾ ಸಹಿಸುವದಿಲ್ಲ. ಯಾಕೆಂದರೆ ಅಧಿಕಾರವನ್ನು ಕೊಟ್ಟಾಗಲೂ ಮಾಡಲಾಗದವರು ಮತ್ತೊಮ್ಮೆ ತಮ್ಮನ್ನು ಆರಿಸುವರೆಂಬ ಕನಸನ್ನು ಮರೆತುಬಿಡುವದೇ ಕ್ಷೇಮ. ಅದರಲ್ಲೂ ನಗರ ಪ್ರದೇಶಗಳಲ್ಲಿಯ ಮತದಾರ ತೀರಾ ಜಾಗೃತ ಹೀಗಾಗಿ ರಾಜಕೀಯ ಎನ್ನುವುದು ಮುಂಚಿನಂತೆ ದುಡ್ಡಿದ್ದವರ ಅಖಾಡಾ ಎನ್ನುವ ಮಾತು ತುಸು ಮಂಕಾಗುತ್ತಿದೆ. ಭಾರತದ ನಗರಗಳಲ್ಲಿ ಇಂದು ಸುಮಾರು ೩೨ ಪ್ರತಿಶತ ಜನರು ವಾಸವಾಗಿದ್ದಾರೆ. ಇವರಲ್ಲಿ ಕೆಲವೇ ಕೆಲವರು ಮಾತ್ರ ಎಲ್ಲ ಬಗೆಯ ಸೌಲಭ್ಯಗಳನ್ನು ಹೊಂದಿದವರಾಗಿ ಬದುಕು ಸಾಗಿಸುತ್ತಿದ್ದಾರೆ. ಈ ಕೆಲವೇ ಕೆಲವರಲ್ಲಿ ರಾಜಕಾರಣಿಗಳು, ಅಧಿಕಾರಿಗಳು ಮತ್ತು ಉದ್ದಿಮೆದಾರರು. ಮಿಕ್ಕವರು ಅನೇಕ ಬಗೆಯ ಸೌಲಭ್ಯವಂಚಿತರಾಗಿ ಬದುಕುವ ಜೊತೆ ಜೊತೆಗೆ ಅಸ್ಥಿತ್ವದಲ್ಲಿರುವ ಅಸಮಾನತೆಗಳ ಬಗ್ಗೆ ಒಂದು ಬಗೆಯ ಸಿಟ್ಟನ್ನು ಕಾಪಾಡಿಕೊಂಡು ಬರುವುದು ಮಾತ್ರವಲ್ಲದೇ ಅದನ್ನು ಕೇವಲ ಬಡವನ ಸಿಟ್ಟು ದವಡೆಗೆ ಮೂಲ ಎನ್ನುವ ಹಾಗೆ ಮಾಡದೇ ಈ ಬಗೆಯ ಚುನಾವಣೆಗಳಲ್ಲಿ ಪ್ರದರ್ಶಿಸುತ್ತಾರೆ ಅದರ ಪರಿಣಾಮವಾಗಿಯೇ ಆಮ್ ಆದ್ಮಿ ಪಕ್ಷದಂತಹ ರಾಜಕೀಯ ಚಟುವಟಿಕೆಗಳಿಗೆ ಪ್ರೋತ್ಸಾಹ ಸಾಧ್ಯವಾಗುತ್ತದೆ. ದೇಶದ ಬಹುದೊಡ್ಡ ಪ್ರಮಾಣದಲ್ಲಿರುವ ಜನಸಾಮಾನ್ಯನನ್ನು ಮರೆತು ರಾಜಕೀಯ ಮಾಡಲಾಗದು ಹಾಗೆ ಮಾಡ ಹೋದರೆ ವೈಫ಼ಲ್ಯ ಖಾತ್ರಿ. ಮೊನ್ನೆಯಷ್ಟೆ ಮಂಡನೆಯಾದ ಕೇಂದ್ರ ರೈಲು ಬಜೆಟ್ ಸಂದರ್ಭದಲ್ಲಿ ಆಮ ಆದ್ಮಿ ಪಕ್ಷ ಬಜೆಟ್ ಗೆ ಪ್ರತಿಕ್ರಿಯಿಸುವಾಗಲೂ ಜನಸಾಮಾನ್ಯನನ್ನು ಮರೆಯಲಿಲ್ಲ. ಆಗ ಅದು ‘ಈ ಬಜೆಟ್ ಸಾಮಾನ್ಯನ ಪಾಲಿಗೆ ಖಾಲಿ ಚೀಲವಿದ್ದಂತೆ’ ಎಂದಿತು. ಈ ಬಗೆಯ ತಾತ್ವಿಕ ಆಲೋಚನೆ ದೆಹಲಿ ಚುನಾವಣೆಯಲ್ಲಿ ದೊಡ್ಡ ಪ್ರಮಾಣದ ಕೆಲಸ ಮಾಡಿದೆ. ಸದ್ಯದ ಮಟ್ಟಿಗೆ ಆಮ್ ಆದ್ಮಿ ಮಾತು ಕೊಟ್ಟಂತೆ ವಿದ್ಯುತ್ ದರ ಇಳಿಸಿದೆ, ಉಚಿತ ಕುಡಿಯುವ ನೀರನ್ನೂ ಒದಗಿಸಿದೆ. ಸುಂದರವಾಗಿ ಮಣ ಮಾತಾಡುವವರಿಗಿಂತಲೂ ಹೀಗೆ ದೈನಂದಿನ ಅಗತ್ಯತೆಗಳನ್ನು ಗಮನಹರಿಸುವ ಜನನಾಯಕರೇ ಮೇಲು ಎಂದೆನಿಸುತ್ತದೆ.