Monthly Archives: December 2011

Bhagvad Gita Debate: Anchor Takes Sides

– Bhoomi Banu

Sagarika Ghosh of Cnn.Ibn anchored a discussion on the issue ‘Should Bhagvad Gita be India’s national book?’ on December 20 in her programme Face the Nation. Earlier on the day Indian parliament had responded to a petition in Siberian court demanding ban on Russian translation of Swamy Prabhupada’s book on Bhagvad Gita. The contentious issue in the book is that it carried message extremist in nature.

Noted thinker Prof. Kancha Ilaih, spokesperson of ISKCON Amogh Leela Das, president of Janata Party Dr. Subramanya Swamy and Prof Pushpesh Panth of JNU were on the panel. Jaggi Vasudev’s opinion on the issue was also aired on the programme. Prof. Ilaiah had joined the debate from Hyderabad.

Going by the names of the individuals on the panel one could easily make out that the anchor or the channel did not give enough space for the ‘other view’. It was an interesting debate since there was lot of scope to study how so called ‘upper class intellectuals’ belittle, ignore and ridicule the opinions expressed by a thinker known for his organic views, based on democratic principles.

As Prof. Ilaiah disputed the ‘common belief’ that Bhagvad Gita is a book of non-violence, Dr. Swamy reacted, “Kancha Ilaiah, as usual is doing either propaganda or not read the book. He should read it first”. Arrogance was writ large on his face.

Prof. Pushpesh and another guy from ISKCON went on praising with superlatives. Prof. Pushpesh said Gita is a great work, you get into it and you will get what you want. ISKCON spokesperson said Gita is a ‘science of soul’ and in that way it is concerned to all no matter the religion, he or she belongs to.

Nobody in the panel even attempted to dispute the fact that Gita taught ‘killing enemy through means of god’. When Prof. Kancha Ilaiah raised that, nobody bothered to respond to it properly.  Instead, they exhibited mannerisms, ridiculing in nature. Prof. Pushpesh stated that the whole body is a metaphor for Kurukshetra! If he wants to study the text with metaphors of such magnitude, it is fine. But the simple reading of the text tells readers different things. Lord Krishna in straight forward words provokes Arjuna to fight his relatives in the war field. And, as we know Arjuna follows it. To that extent the book preaches violence.

Kancha Ilaiah, citing Dr.B.R Ambedkar’s observations on the Gita, argued that it stood on the premises of four varnas. Of course there are enough evidences in the text to substantiate the argument. Further, the saying ‘don’t expect the fruits for your labour’ – is simply the ideology which spoiled the fortune of the working class, which was constituted by majority of backward classes and dalits.

Interestingly, the anchor also joins the panel in her studio to counter Kancha Ilaiah’s views. Kancha Ilaiah rejects the idea of declaring it a national book, arguing that the book has divisive elements and honouring it with such a status was against diversity of the land.

Either by slip of her tongue or in a deliberate attempt Sagarika Ghosh asks Prof. Pushpesh to quote from Bhagvad Gita so that ‘WE’ can counter Kancha Ilaiah’s argument and state it is not a religious text (19.07 min). Her tone and use of words explicitly convey that she finds comfortable with the argument placed by ‘the upper caste intellectuals’. And, with that she raises doubt among the viewers, at least a section of viewers, that if her intention in organising such debate was only to echo the feelings raised by the BJP on the floor of parliament.

ಜೀವನದಿಗಳ ಸಾವಿನ ಕಥನ – 17

ಡಾ.ಎನ್. ಜಗದೀಶ್ ಕೊಪ್ಪ

ಕುಡಿಯುವ ನೀರಿನ ಯೋಜನೆಯಡಿ ಗುಜರಾತ್ ರಾಜ್ಯದ ಜನತೆಯನ್ನು ವಂಚಿಸಿದ ಕರ್ಮಕಾಂಡ ಸರದಾರ್ ಸರೋವರ ಅಣೆಕಟ್ಟಿನ ಇತಿಹಾಸದಲ್ಲಿ ತಳಕು ಹಾಕಿಕೊಂಡಿದೆ. ಗುಜರಾತ್, ರಾಜಸ್ತಾನ,ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ಹರಿಯುವ ಈ ನದಿಯಿಂದ 1989 ರಲ್ಲಿ 3 ಕೋಟಿ 20 ಲಕ್ಷ ಜನತೆಗೆ ಕುಡಿಯುವ ನೀರು ಒದಗಿಸಲಾಗುವುದೆಂದು ಹೇಳಲಾಗಿತ್ತು. ನಂತರ 1992 ರಲ್ಲಿ 4 ಕೋಟಿ ಜನಕ್ಕೆ ಎಂದು ತಿಳಿಸಿ, ಮತ್ತೆ 1998ರಲ್ಲಿ 3 ಕೋಟಿ ಜನತೆಗೆ ಮಾತ್ರ ನೀರು ಒದಗಿಸಲಾಗುವುದೆಂದು ಹೇಳುವುದರ ಮೂಲಕ ಸುಳ್ಳುಗಳನ್ನು ಪುಖಾನುಪುಂಖವಾಗಿ ಹರಿಯಬಿಡಲಾಯಿತು. ಈ ನದಿಯ ನೀರಿನ ಯೋಜನೆ ಎಷ್ಟು ಗೊಂದಲದ ಗೂಡಾಗಿದೆಯೆಂದರೆ, 1992ರಲ್ಲಿ ಒಟ್ಟು 8236 ನಗರ, ಪಟ್ಟಣ, ಹಳ್ಳಿಗಳಿಗೆ ನೀರು ಸರಬರಾಜು ಮಾಡಲಾಗುವುದೆಂದು ಹೇಳಲಾದ ಪಟ್ಟಿಯಲ್ಲಿ 236 ಹಳ್ಳಿಗಳಲ್ಲಿ ಜನರೇ ವಾಸಿಸುತ್ತಿಲ್ಲ. ಈವತ್ತಿಗೂ ಈ ಯೋಜನೆಯ ಮೂಲ ಉದ್ದೇಶ ಏನೂ?, ಎಷ್ಟು ಹಣ ಖರ್ಚಾಗುತ್ತಿದೆ, ನೀರಾವರಿಗೆ ಒಳಪಡುವ ಪ್ರದೇಶದ ವ್ಯಾಪ್ತಿ ಎಷ್ಟೆಂಬುದರ ಬಗ್ಗೆ ಯಾರಿಗೂ ಗೊತ್ತಿಲ್ಲ.

2000 ದ ಇಸವಿ ವೇಳೆಗೆ ಜಗತ್ತಿನಾದ್ಯಂತ ಸಮೀಕ್ಷೆ ಪ್ರಕಾರ ಜಲಾಶಯಗಳಿಂದ ಬಳಕೆಯಾಗುತ್ತಿರುವ ನೀರಿನಲ್ಲಿ ಶೇ.70ರಷ್ಟು ಕುಡಿಯುವ ನೀರಿಗಾಗಿ, ಶೇ.24ರಷ್ಟು ಕೈಗಾರಿಕೆಗಳಿಗಾಗಿ ಬಳಕೆಯಾಗುತಿದ್ದು, ಶೇ.4ರಷ್ಟು ಆವಿಯಾಗತ್ತಿದೆ. ಅಮೇರಿಕಾ ಮತ್ತು ಯುರೋಪ್ ದೇಶಗಳಲ್ಲಿ ಬಳಕೆಯಾಗುತ್ತಿರುವ ಶೇ65ರಷ್ಟು ಭಾಗದ ನೀರು ತೆರದ ಹಾಗೂ ಕೊಳವೆ ಬಾವಿಗಳ ಮೂಲದ್ದು.

ನದಿಗಳಿಗೆ ಅಡ್ಡಲಾಗಿ ಅಣೆಕಟ್ಟು ಕಟ್ಟಿದ ಫಲವಾಗಿ ಜಗತ್ತಿನ ಹಲವೆಡೆ ಅಸ್ತಿತ್ವದಲ್ಲಿ ಇದ್ದ ಜಲಸಾರಿಗೆಗೆ ದೊಡ್ಡಪೆಟ್ಟು ಬಿದ್ದಿತು. ಹಲವಾರು ದೇಶಗಳಲ್ಲಿ ಆಳವಾದ ಮತ್ತು ನಿಧಾನವಾಗಿ ಹರಿಯುವ ನದಿಗಳನ್ನು ಜಲಸಾರಿಗೆಗೆ ಬಳಸಲಾಗುತಿತ್ತು. ತೈಲ, ಕಲ್ಲಿದ್ದಲು, ಅದಿರು, ಮರದ ದಿಮ್ಮಿಗಳನ್ನು, ತೆರದ ಮಧ್ಯಮಗಾತ್ರದ (ಬಾರ್ಜ್) ಹಡಗುಗಳಲ್ಲಿ ಸಮುದ್ರ ತೀರದ ಬಂದರುಗಳಿಗೆ ಸಾಗಿಸುವುದು ರಸ್ತೆ ಸಾರಿಗೆಗಿಂತ ಕಡಿಮೆ ಖರ್ಚಿನದಾಗಿತ್ತು. ಜೊತೆಗೆ ಪ್ರಯಾಣಿಕರ ಅನೂಕೂಲಕ್ಕೆ ದೋಣಿಗಳು ಇದ್ದವು. ಈಗ ಜಲಸಾರಿಗೆ ಕೆಲವೆಡೆ ಮಾತ್ರ ಇನ್ನೂ ಅಸ್ತಿತ್ವದಲ್ಲಿದೆ.

ಇತ್ತೀಚಿಗೆ ಮತ್ತೆ ಜಲಸಾರಿಗೆಯನ್ನು ಪುನಶ್ಚೇತನಗೊಳಿಸಲು ಹಲವಾರು ದೇಶಗಳು ಶ್ರಮಿಸುತ್ತಿವೆ. ಅಣೆಕಟ್ಟು ಇರವ ಸ್ಥಳದಲ್ಲಿ ದೊಡ್ಡ ಲಿಪ್ಟ್‌ಗಳನ್ನು ಸ್ಥಾಪಿಸಿ ಅವುಗಳ ಮೂಲಕ ಹಡಗು ಮತ್ತು ದೋಣಿಗಳನ್ನು ಜಲಾಶಯದಿಂದ ಕೆಳಗಿನ ನದಿಗೆ ಬಿಡುವುದು, ಇಲ್ಲವೇ ಕೆಳಗಿನ ನದಿಯಿಂದ ಸಾಗಿಬಂದ ಹಡಗು, ದೋಣಿಗಳನ್ನು ಜಲಾಶಯದ ಮೇಲ್ಬಾಗದ ನದಿಗೆ ಎತ್ತಿ ಬಿಡುವ ಕಾರ್ಯ ಚಾಲ್ತಿಯಲ್ಲಿದೆ. ಆದರೆ ಇದು ನಿರಿಕ್ಷಿತ ಮಟ್ಟದಲ್ಲಿ ಯಶಸ್ವಿಯಾಗಿಲ್ಲ‍. ನೈಜೀರಿಯದಲ್ಲಿ ಜಗತ್ತಿನ ಅತಿದೊಡ್ಡ ಅಂದರೆ, 10 ಸಾವಿರ ಟನ್ ಸಾಮರ್ಥದ ಲಿಪ್ಟ್ ಅಳವಡಿಸಲಾಯಿತು ಇದರಿಂದ ಏನೂ ಪ್ರಯೋಜನವಾಗಲಿಲ್ಲ. ಚೀನಾದ ತ್ರೀ ಗಾರ್ಜಸ್ ಅಣೆಕಟ್ಟಿನ ಬಳಿ ಸಹ ಇಂತಹದೇ ಮಾದರಿ ಲಿಪ್ಟ್ ಅಳವಡಿಸಲಾಗಿದೆ. ಇಂತಹ ಜಲಸಾರಿಗೆಯ ಪರ್ಯಾಯ ಭವಿಷ್ಯದಲ್ಲಿ ಯಶಸ್ವಿಯಾಗದು ಎಂದು ತಜ್ಙರು ಅಭಿಪ್ರಾಯಪಟ್ಟಿದ್ದಾರೆ. ಜಲಾಶಯದ ಹಿನ್ನೀರಿನ ನದಿಯಲ್ಲಿ ಹೂಳು ಶೇಖರವಾಗುವುದರಿಂದ ಹಡಗು ಮತ್ತು ದೋಣಿಗಳ ಚಲನೆಗೆ ಅಡ್ಡಿಯಾಗುತ್ತದೆ ಎಂಬುದು ತಜ್ಙರ ನಿಲುವು.

ವಿಶ್ವಬ್ಯಾಂಕ್ ಸಮೀಕ್ಷೆಯಂತೆ 1960 ರಲ್ಲಿ ಜಗತ್ತಿನಾದ್ಯಂತ 1 ಲಕ್ಷ 70 ಸಾವಿರ ಕಿಲೋಮೀಟರ್ ಜಲಸಾರಿಗೆಯಿದ್ದದ್ದ್ದು, 2000 ದ ವೇಳೆಗೆ ಅದು ಕೇವಲ 79 ಸಾವಿರ ಕಿ.ಮೀ.ಗೆ ಕುಸಿದಿತ್ತು.

ಉತ್ತರ ಅಮೇರಿಕಾ ಮತ್ತು ಯುರೋಪ್ ದೇಶಗಳಲ್ಲಿ ಇಂದಿಗೂ ಜಲಸಾರಿಗೆ ಪ್ರಾಮುಖ್ಯತೆ ಪಡೆದುಕೊಂಡಿದೆ. ಅಮೇರಿಕಾದ ಆರ್ಮಿ ಕೋರ್ಸ್ ಆಫ್ ಇಂಜಿನಿಯರ್ಸ್ ಸಂಸ್ಥೆ ಮಿಸಿಸಿಪ್ಪಿ ನದಿಯ ಮೇಲ್ಭಾಗದಲ್ಲಿ 1914 ರಿಮದ 1950 ರವರೆಗೆ ಅಣೆಕಟ್ಟುಗಳಿಗೆ 29 ಲಿಪ್ಟ್ ಅಳವಡಿಸಿ 800 ಕಿಲೋಮೀಟರ್ ಜಲಸಾರಿಗೆಯನ್ನು ಅಭಿವೃದ್ಧಿ ಪಡಿಸಿತ್ತು. 1990 ರಲ್ಲಿ ಅಮೇರಿಕಾ ಸರ್ಕಾರ ಜಲಸಾರಿಗೆ ನಿರ್ವಹಣೆಗಾಗಿ 12 ಶತಕೋಟಿ ಡಾಲರ್ ಹಣ ಖರ್ಚು ಮಾಡಿತ್ತು. ಅಲ್ಲಿ 12 ಬೃಹತ್ ವ್ಯಾಪಾರ ಸಂಸ್ಥೆಗಳು ಹಡಗುಗಳ ಮೂಲಕ ಅದಿರು, ತೈಲ, ಕಲ್ಲಿದ್ದಲು ಹಾಗು ಸರಕುಗಳನ್ನು ಸಾಗಿಸುತಿದ್ದು ಇದಕ್ಕಾಗಿ ಸರ್ಕಾರದಿಂದ ಹಲವಾರು ರಿಯಾಯತಿಗಳನ್ನು ಪಡೆದಿವೆ. ಆದರೆ ಲಿಪ್ಟ್ ಗಳ ದುರಸ್ತಿ ಮತ್ತು ನಿರ್ವಹಣೆ ಸಕಾರಕ್ಕೆ ಹೊರೆಯಾಗಿದೆ. ಇಲಿನಾಯ್ಸ್ ನದಿಗೆ ಕಟ್ಟಲಾಗಿರುವ ಅಣೆಕಟ್ಟಿನ ಲಿಪ್ಟ್ ಒಂದರ ಬದಲಾವಣೆಗಾಗಿ ಸರ್ಕಾರ 100 ಕೋಟಿ ಡಾಲರ್ ವ್ಯಯ ಮಾಡಿತು.

ಅಣೆಕಟ್ಟುಗಳ ನಿರ್ಮಾಪಕರು ಜಲಾಶಯಗಳಲ್ಲಿ ನಡೆಸಬಹುದಾದ ಮೀನುಗಾರಿಕೆ ಕೂಡ ಒಂದು ಲಾಭದಾಯಕ ಉಧ್ಯಮ ಎಂದು ಬಣ್ಣ ಬಣ್ಣದ ಕರಪತ್ರಗಳಲ್ಲಿ ಮುದ್ರಿಸಿ ಪ್ರಸಾರ ಮಾಡುತ್ತಿದೆ. ಆದರೆ, ಪರಿಸರ ತಜ್ಙರು ಲಾಭದಾಯಕವಲ್ಲ ಎಂದು ವಾದಿಸಿದ್ದಾರೆ. ಪ್ರವಾಹದ ಸಂದರ್ಭದಲ್ಲಿ ಜಲಾಶಯದಿಂದ ಅಪಾರ ಪ್ರಮಾಣದಲ್ಲಿ ನೀರನ್ನು ಹೊರಬಿಡುವುದರಿಂದ ನೀರಿನಲ್ಲಿರುವ, ಮೀನಿಗೆ ಬೇಕಾದ ಪೋಷಕಾಂಶಗಳು ಹರಿದು ಹೋಗುವುದನ್ನು  ತಜ್ಙರು ಗುರುತಿಸಿದ್ದಾರೆ. ಇವೆಲ್ಲಕ್ಕಿಂತ ಹೆಚ್ಚಾಗಿ ಕುಡಿಯುವ ನೀರು ಮತ್ತು ವಿದ್ಯುತ್ ಗಾಗಿ ನೀರು ಬಳಕೆಯಾಗುವುದನ್ನು ಗುರಿ ಮಾಡಿ ಇಂತಹ ಸ್ಥಿತಿಯಲ್ಲಿ ಮೀನು ಸಾಕಾಣಿಕೆ ಲಾಭ ತರುವುದಿಲ್ಲ ಎಂದು ಅವರು ವಾದಿಸಿದ್ದಾರೆ.

ಆಫ್ರಿಕಾದ ಕೈಂಜಿ ಅಣೆಕಟ್ಟಿನ ಜಲಾಶಯದಲ್ಲಿ 10 ಸಾವಿರ ಟನ್ ಮೀನು ಸಿಗಬಹುದೆಂದು ಅಂದಾಜಿಸಲಾಗಿತ್ತು 1970 ರಲ್ಲಿ ಎಲ್ಲರ ನಿರೀಕ್ಷೆ ಮೀರಿ 28 ಸಾವಿರ ಮೀನು ದೊರೆಯಿತು. ನಂತರದ ನಾಲ್ಕು ವರ್ಷಗಳಲ್ಲಿ ಅಂದರೆ, 1974 ರಲ್ಲಿ ಮೀನಿನ ಇಳುವರಿ ಕೇವಲ 4ಸಾವಿರದ 500 ಟನ್ಗೆ ಕುಸಿದಿತ್ತು.

ಜಗತ್ತಿನ ಅತಿ ದೊಡ್ಡ ವಿಶಾಲವಾದ ಜಲಾಶಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಘಾನದ ವೊಲ್ಟಾ ನದಿಗೆ ಕಟ್ಟಿರುವ ಅಕೊಸೊಂಬೊ ಜಲಾಶಯದಿಂದ ಉಂಟಾಗಿರುವ ವೊಲ್ಟಾ ಸರೋವರದಲ್ಲಿ 60 ಸಾವಿರ ಟನ್ ಮೀನು ಉತ್ಪಾದನೆಯಾಗಿ 20 ಸಾವಿರ ಮೀನುಗಾರರಿಗೆ ಉದ್ಯೋಗ ದೊರಕಿಸಿತ್ತು. ಆದರೆ ಜಲಾಶಯ ನಿರ್ಮಾಣದಿಂದ ನೆಲೆ ಕಳೆದುಕೊಂಡ 80 ಸಾವಿರ ಮೀನುಗಾರರ ಪೈಕಿ ಉಳಿದ 60 ಸಾವಿರ ಮೀನುಗಾರರು ಅರಣ್ಯಗಳಲ್ಲಿ ಬೇಟೆಯಾಡುತ್ತಾ, ಗೆಡ್ಡೆ ಗೆಣಸು ತಿನ್ನುತ್ತಾ ಬದುಕು ದೂಡುವಂತಾಯಿತು.

ಉರುಗ್ವೆ ದೇಶದ ಮಿಲಿಟರಿ ಸರ್ಕಾರ ತಾನು ನಿರ್ಮಿಸಿದ್ದ ಸಾಲ್ವೋ ಗ್ರಾಂಡ್ ಜಲಾಶಯದಲ್ಲಿ ಅತ್ಯಾಧುನಿಕ ತಂತ್ರಜ್ಙಾನ ಬಳಸಿ ಮೀನುಗಾರಿಕೆಗೆ ಯೋಜನೆ ರೂಪಿಸಿತ್ತು. ಆದರೆ ಜರ್ಮನಿ ದೇಶದಿಂದ ಬರಬೇಕಾದ ಆರ್ಥಿಕ ನೆರವು ಬಾರದೆ ಇಡೀ ಯೋಜನೆ ವಿಫಲವಾಯಿತು.

ಇವತ್ತಿಗೂ ವಿಶ್ವ ಬ್ಯಾಂಕ್ ಅಣೆಕಟ್ಟುಗಳ ಮೂಲಕ ನಿರ್ಮಾಣವಾಗಿರುವ ಜಲಾಶಯಗಳಲ್ಲಿ ಮೀನು ಮತ್ತು ಸೀಗಡಿ ಸಾಕಾಣಿಕೆ ಒಂದು ಲಾಭದಾಯಕ ಉದ್ಯಮ ಎಂದು ನಂಬಿದೆ. ಅದರಂತೆ ಹಲವು ದೇಶಗಳಿಗೆ ಈ ಉದ್ಯಮಕ್ಕಾಗಿ ನೆರವು ನೀಡಿದೆ. ಚೀನಾ, ಇಂಡೊನೇಷಿಯಾ, ಜಾವ ದೇಶಗಳಲ್ಲಿ ಇದು ಯಶಸ್ವಿಯಾಗಿದೆ. ಆದರೆ ಅಧುನಿಕ ಹಾಗೂ ವೇಗವಾಗಿ ಬೆಳೆಯುವ ಮೀನಿನ ಸಂತತಿಯನ್ನು ಪರಿಚಯಿಸಿದ ಫಲವಾಗಿ ದೇಶೀಯ ತಳಿಗಳು ನಾಶವಾಗುತ್ತಿವೆ. ಈ ಸಂತತಿ ರೋಗವನ್ನು ತಾಳಿಕೊಳ್ಳು ಶಕ್ತಿ ಪಡೆದಿದ್ದವು.

ಇದನ್ನು ಅಭಿವೃದ್ಧಿಯ ವ್ಯಂಗ್ಯ ಎನ್ನಬೇಕೊ ಅಥವಾ ಶಾಪವೆನ್ನಬೇಕೊ ತಿಳಿಯುತ್ತಿಲ್ಲ. ಬಹುಉಪಯೋಗಿ ಅಣೆಕಟ್ಟು ಯೋಜನೆಗಳಲ್ಲಿ ಮನರಂಜನೆ ಒಂದು ಭಾಗವಾಗಿದ್ದು ಇದೀಗ ಅದು ಲಾಭದಾಯಕ ಉದ್ಯಮವಾಗಿ ಪರಿವರ್ತನೆಗೊಡಿದೆ.

ಅಮೇರಿಕಾದ ಹೂವರ್ ಅಣೆಕಟ್ಟಿನ ಜಲಾಶಯ ಇದೀಗ ಜಲಕ್ರೀಡೆ, ಸಾಹಸ ಕ್ರೀಡೆ, ದೋಣಿ ವಿಹಾರಕ್ಕೆ, ಮತ್ತು ಹವ್ಯಾಸಿ ಮೀನುಗಾರರಿಗೆ ಆಕರ್ಷಣೀಯ ಕೇಂದ್ರವಾಗಿದೆ. ಇದರ ಸಮೀಪದಲ್ಲೇ ಇರುವ ಜಗತ್ ಪ್ರಸಿದ್ಧ ಮೋಜಿನ ನಗರ ಹಾಗೂ ಜೂಜು ಮತ್ತು ವಿಲಾಸಕ್ಕೆ ಹೆಸರಾದ ಲಾಸ್ ವೆಗಾಸ್ ನಗರವಿದ್ದು ವಾರಾಂತ್ಯದಲ್ಲಿ ಲಕ್ಷಾಂತರ ಪ್ರವಾಸಿಗರು ಇಲ್ಲಿಗೆ ಬರುತಿದ್ದಾರೆ. ಇದೇ ನದಿಗೆ ಕಟ್ಟಲಾಗಿರುವ ಪೊವೆಲ್ ಮತ್ತು ಮೀಡ್ ಜಲಾಶಯಗಳು ಕೂಡ ಜಲಕ್ರೀಡೆಗಳಿಗೆ ಹೆಸರುವಾಸಿಯಾಗಿವೆ. ಈ ಪ್ರದೇಶಗಳ ಸುತ್ತ ಮುತ್ತ ಐಷಾರಾಮಿ ರೆಸಾರ್ಟ್‌ಗಳು, ಹೊಟೇಲ್‌ಗಳು, ಶ್ರೀಮಂತರ ವಿಶ್ರಾಂತಿಧಾಮಗಳು, ತಲೆಯೆತ್ತಿ ನಿಂತಿವೆ. ಈಗಾಗಲೇ ಜಲಾಶಯ ನಿರ್ಮಾಣದಿಂದ ಸಂತ್ರಸ್ತರಾಗಿದ್ದ ಮೂಲನಿವಾಸಿಗಳು ಮತ್ತೊಮ್ಮೆ ಉಳ್ಳವರ ವಿಲಾಸದ ಬದುಕಿಗೆ ತಾವು ವಾಸಿಸುತಿದ್ದ ಜಾಗಗಳನ್ನು ಬಿಟ್ಟುಕೊಟ್ಟು ಕಾಡು ಸೇರುತಿದ್ದಾರೆ.

ನಾವು ರೂಢಿಸಿಕೊಂಡ ಆಧುನಿಕತೆ ಎಲ್ಲರನ್ನೂ ಭ್ರಮೆಯ ಜಗತ್ತಿಗೆ ದೂಡಿದೆ. ಮಲೇಷಿಯಾದ ಜಲಾಶಯದ ಬಳಿ ಪ್ರಾರಂಭವಾದ ರೆಸಾರ್ಟ್ ಅನ್ನು ಉದ್ಘಾಟಿಸಿ ಮಾತನಾಡಿದ್ದ ಅಂದಿನ ಪ್ರಧಾನಿ ಡಾ. ಮಹತೀರ್ ಇದೊಂದು ಪರಿಸರ ಸ್ನೇಹಿ ಯೋಜನೆ ಎಂದು ಕರೆದಿದ್ದರು. ಆದರೆ ಇಂತಹ ಯೋಜನೆಗಳಿಗೆ ತಮ್ಮ ಆಸ್ತಿ ಹಾಗೂ ಬದುಕನ್ನು ಬಲಿ ಕೊಟ್ಟು ಮೂರಾ ಬಟ್ಟೆಯಾದ 10 ಸಾವಿರ ಸ್ಥಳೀಯ ನಿವಾಸಿಗಳ ಧಾರುಣ ಬದುಕು ಅವರ ನೆನಪಿಗೆ ಬಾರಲೇಇಲ್ಲ.

ಕೊಲಂಬಿಯಾದಲ್ಲಿ ಜಲಕ್ರೀಡೆಗಾಗಿ ನಿರ್ಮಾಣವಾದ ಕೊಲಿಮಾ ಐ ಡ್ಯಾಮ್ ಎಂಬ ಜಲಾಶಯಕ್ಕಾಗಿ 8 ಸಾವಿರ ಎಂಬೇರಾ ಮತ್ತು ಚಾಮಿ ಬುಡಕಟ್ಟು ನಿವಾಸಿಗಳು ಅತಂತ್ರರಾದರು.

ಇದೀಗ ಭಾರತದಲ್ಲಿ ಕೂಡ ಈ ಸಂಸ್ಕೃತಿ ಹರಡುತಿದ್ದು ಪಶ್ಚಿಮ ಘಟ್ಟದ ಕಾಳಿನದಿ, ಶರಾವತಿಯ ಹಿನ್ನೀರಿನ ಪ್ರದೇಶಗಳಲ್ಲಿ ಹುಟ್ಟಿಕೊಂಡಿರುವ ರೆಸಾರ್ಟ್‌ಗಳಲ್ಲಿ ಮೋಜು ಮತ್ತು ಉನ್ಮಾದದ ಪ್ರಪಂಚವೇ ಈಕೊ ಟೂರಿಸಂ ಹೆಸರಿನಲ್ಲಿ ತೆರೆದುಕೊಂಡಿದೆ.

(ಮುಂದುವರಿಯುವುದು)

KGF ಸಂತ್ರಸ್ತರಿಗೆ ನೆರವು : ದಯಾನಂದರ ವರದಿ…

ಟಿ.ಕೆ. ದಯಾನಂದ್

ವರ್ತಮಾನದ ಕರೆಗೆ ಓಗೊಟ್ಟ ಸಹೃದಯ ಜೀವಪರ ಬಂಧುಗಳಿಗೆ ಕೆಜಿಎಫ್‌ನ ಮಲಸಂತ್ರಸ್ಥರ ನೆನಕೆಗಳು ಸಲ್ಲುತ್ತಿವೆ. ವ್ಯವಸ್ಥೆ, ಅಧಿಕಾರ ಮತ್ತು ಸಮಕಾಲೀನ ನ್ಯಾಯ ನಿರಾಕರಣೆಯ ಅಡಕತ್ತರಿಗೆ ಸಿಕ್ಕಿಬಿದ್ದಿದ್ದ ಈ ಸಂತ್ರಸ್ಥರ ಹಸಿವಿನ ಸಂಕಷ್ಟವನ್ನು ನೀಗಲು ಜೊತೆ ನಿಲ್ಲೋಣ ಎಂಬ ವರ್ತಮಾನದ ಕರೆಗೆ ಅದೆಷ್ಟೋ ಮಂದಿ ಮುಂದೆ ಬಂದರು. ನಾವು ಒಂದು ಕ್ವಿಂಟೋಲ್, ಎರಡು ಕ್ವಿಂಟೋಲ್ ಅಕ್ಕಿ ಕೊಡಿಸುತ್ತೇವೆ ಅಂದವರು ಸುಮಾರು ಮಂದಿ. ಬ್ಯಾಂಕ್ ಅಕೌಂಟಿಗೆ ಒಬ್ಬರ ನಂತರ ಒಬ್ಬರಂತೆ ಹಣವನ್ನು ಸಂದಾಯ ಮಾಡಿದರು. ಕೆಲವರು ಚೆಕ್ ಕಳಿಸಿಕೊಟ್ಟರು, ಇನ್ನು ಹಲವು ಗೆಳೆಯರು/ಗೆಳತಿಯರು ನೇರವಾಗಿಯೇ ಬಂದು ನಮ್ಮ ಪಾಲಿದು ಎಂದು ಧನಸಹಾಯ ಮಾಡಿದರು. ಹೀಗೆ ಒಟ್ಟು ಸಂಗ್ರಹವಾದ ಹಣ 35 ಸಾವಿರ ರೂಪಾಯಿಗಳು. ಕ್ವಿಂಟೋಲ್ ಲೆಕ್ಕದ ಅಕ್ಕಿ ಮೂಟೆಗಳನ್ನು ಕೆಜಿಎಫ್ ಗೆ ಸಾಗಿಸುವುದು ತಾರ್ಕಿಕವಾಗಿ ಅಸಾಧ್ಯವಾದ ಕೆಲಸವೆಂಬ ಕಾರಣಕ್ಕೆ ಸಂಗ್ರಹಗೊಂಡ ಹಣದಲ್ಲಿಯೇ ಕೆಜಿಎಫ್‌ನಲ್ಲಿಯೇ ಒಂದಷ್ಟು ಆಹಾರ ಸಾಮಗ್ರಿಯನ್ನು ಖರೀದಿಸಿ ನೀಡುವುದೆಂದು ತೀರ್ಮಾನವಾಯಿತು. ಜೀವಪರ ನಿಲುಮೆಯ ಗೆಳೆಯ ಗೆಳತಿಯರು ಹೊಂದಿಸಿಕೊಟ್ಟ ಈ ಹಣವನ್ನು ತೆಗೆದುಕೊಂಡು ಕಳೆದ ಭಾನುವಾರ ಕೆಜಿಎಫ್‌ಗೆ ಭೇಟಿ ನೀಡಲಾಯಿತು. ಪತ್ರಕರ್ತ ಗೆಳೆಯರಾದ ದಿನೇಶ್, ಪ್ರವೀಣ್ ಸೂಡರೊಟ್ಟಿಗೆ ಮಧ್ಯಾಹ್ನದ ಹೊತ್ತಿಗೆ ಕೆಜಿಎಫ್ ತಲುಪಿದಾಗ ಅಲ್ಲಿನ ಅಂಬೇಡ್ಕರ್ ಉದ್ಯಾನದಲ್ಲಿ ಕೆಜಿಎಫ್‌ನ ಮಾಜಿ ಗಣಿ ಕಾರ್ಮಿಕರೂ, ಪ್ರಸ್ತುತ ಮಲ ಹೊರುವ ವೃತ್ತಿಗೆ ಬಿದ್ದು ಜೀವಗಳನ್ನು ಅಡವಿಟ್ಟು ಬದುಕುತ್ತಿದ್ದ ಕಾರ್ಮಿಕರೂ ಆದ ವೈ.ಜೆ. ರಾಜೇಂದ್ರ, ವಕೀಲ ಪುರುಷೋತ್ತಮ್, ಸಾಮಾಜಿಕ ಕಾರ್ಯಕರ್ತೆ ಪದ್ಮ ಮತ್ತು ಕೋಲಾರದ ಎಡಪಂಥದ ಸಂಘಟನೆಗಳ ಸಮ್ಮುಖದಲ್ಲಿ ಸಭೆ ಸೇರಿದ್ದರು. ಅವರೊಟ್ಟಿಗೆಯೇ ಕುಳಿತು ಮುಂದಿನ ಹೋರಾಟದ ರೂಪುರೇಷೆಗಳನ್ನು ರೂಪಿಸುವಲ್ಲಿ ಭಾಗಿಯಾಗಿ ಸಭೆ ಮುಗಿಯುವಷ್ಟರಲ್ಲಿ ಕತ್ತಲಾಗತೊಡಗಿತ್ತು.
 
ಸಭೆ ಮುಗಿಸಿ ಬಂದ ಪದ್ಮಾ ಮತ್ತು ಪ್ರಭುರವರೊಟ್ಟಿಗೆ ಕೆಜಿಎಫ್‌ನ ಮಾರುಕಟ್ಟೆಗೆ ತೆರಳಿ ಅಲ್ಲಿನ 50 ಕುಟುಂಬಗಳಿಗೆ ನಮ್ಮ ಬಳಿ ಸಂಗ್ರಹವಾದ 35 ಸಾವಿರದ ಮಿತಿಯಲ್ಲಿ ಯಾವ ಬಗೆಯಲ್ಲಿ ನೆರವು ನೀಡಬಹುದೆಂದು ಕೂಡಿ ಕಳೆದು ಲೆಕ್ಕಾಚಾರ ಮಾಡಿದಾಗ ಒಟ್ಟು 50 ಕುಟುಂಬಗಳಿಗೂ ಪ್ರತೀ ಕುಟುಂಬಕ್ಕೂ 25 ಕೇಜಿ ಒಳ್ಳೆಯ ಗುಣಮಟ್ಟದ ಅಕ್ಕಿಯನ್ನು ನೀಡಬಹುದೆಂದು ನಿಷ್ಕರ್ಷೆಯಾಯಿತು. ಅದರಂತೆ 1250 ಕಿಲೋ ಅಕ್ಕಿಯನ್ನು 25 ಕೇಜಿ ಚೀಲದಂತೆ ಖರೀದಿಸಿ ಅಲ್ಲಿಂದ ಒಂದು ಸರಕುಸಾಗಣೆಯ ವಾಹನದಲ್ಲಿ ಸಂಕಷ್ಟದಲ್ಲಿದ್ದ ಕಾರ್ಮಿಕರು ವಾಸಿಸುವ ಪ್ರದೇಶವಾದ ಕೆನಡೀಸ್ ಲೈನ್‌ಗೆ ಕೊಂಡೊಯ್ದೆವು. ಅಲ್ಲಿ ಒಟ್ಟು 50 ಕುಟುಂಬಗಳ ಮುಖ್ಯಸ್ಥರ ಹೆಸರನ್ನು ಪಟ್ಟಿಮಾಡಿ ಒಬ್ಬೊಬ್ಬರ ಹೆಸರನ್ನೂ ಕರೆದು ಅವರಿಗೆ ಪ್ರತೀ ಮನೆಗೆ 25 ಕೇಜಿ ಅಕ್ಕಿಯಂತೆ ವಿತರಣೆ ಮಾಡಲಾಯಿತು. ತಕ್ಷಣಕ್ಕೆ ದೊರೆತ ಈ ಬಗೆಯ ನೆರವಿನಿಂದ ಕಾರ್ಮಿಕರಲ್ಲಿ ಕೆಲವರು ಭಾವುಕರಾಗಿದ್ದರು, ಕೊಟ್ಟವರು ಯಾರೋ ಏನೋ ಗೊತ್ತಿಲ್ಲ ಅವರ ಜೀವಕ್ಕೆ ಒಳ್ಳೆಯದಾಗಲೆಂಬ ಹರಕೆ ಸಂತ್ರಸ್ಥ ಕಾರ್ಮಿಕರದ್ದಾಗಿತ್ತು. ಎಲ್ಲರ ಮುಖದಲ್ಲೂ ಹಸಿವಿನಿಂದ ತಾತ್ಕಾಲಿಕವಾಗಿಯಾದರೂ ತಪ್ಪಿಸಿಕೊಂಡೆವಲ್ಲ ಎಂಬ ಸಮಾಧಾನವಿತ್ತು. ಅಕ್ಕಿ ಖರೀದಿಗೆ 30 ಸಾವಿರ ರೂಗಳನ್ನು ವ್ಯಯಿಸಿ ಊಟ, ಕಾರಿನ ಪೆಟ್ರೋಲು, ಸರಕುಸಾಗಣೆ ವಾಹನದ ಬಾಡಿಗೆ ಎಲ್ಲವೂ ಕಳೆದು ಇನ್ನೂ ಮೂರೂವರೆ ಸಾವಿರದಷ್ಟು ಹಣ ಹಾಗೆಯೇ ಉಳಿದಿತ್ತು. ಅದರಲ್ಲಿ ಎಣ್ಣೆ ಖರೀದಿಸಿ ವಿತರಿಸುವ ಯೋಜನೆ ಹಾಕಿಕೊಂಡೆವಾದರೂ ಅದಕ್ಕೆ ಮೂರೂವರೆ ಸಾವಿರ ಕಡಿಮೆ ಬೀಳುತ್ತದೆಂಬ ಕಾರಣಕ್ಕೆ ಸುಮ್ಮನಾದೆವು. ಉಳಿದಿರುವ ಮೂರೂವರೆ ಸಾವಿರ ರೂಗಳ ಜೊತೆಗೆ ಬೆಂಗಳೂರಿನ ಕೆಲವರು ಅಕ್ಕಿ ಕೊಡಿಸುವ ಭರವಸೆ ನೀಡಿದ್ದರು, ಅದನ್ನು ಮತ್ತೆ ತೆಗೆದುಕೊಂಡು ಇದೇ ಬಗೆಯ ಸಂಕಷ್ಟಕ್ಕೆ ಸಿಲುಕಿರುವ ಕೆಜಿಎಫ್‌ನ ಬಿ. ಬ್ಲಾಕ್ ಮತ್ತು, ಬೇರ್ಶಾಪ್ ಪ್ರದೇಶಗಳಿಗೆ ತಲುಪಿಸುವ ಯೋಜನೆಯನ್ನು ಯೋಜಿಸಿದೆವು. ರಾತ್ರಿ ಹತ್ತರವರೆಗೂ ಅಕ್ಕಿ ವಿತರಣೆಯ ಕೆಲಸದಲ್ಲಿ ಮಗ್ನವಾಗಿದ್ದ ನಮ್ಮ ತಂಡ ವಿತರಣೆಯ ಜವಾಬ್ದಾರಿ ನಿರ್ವಹಿಸಿದ ಮೇಲೆ, ನಿಮ್ಮೊಟ್ಟಿಗೆ ನಾವಿದ್ದೇವೆ, ನೀವು ಒಂಟಿಯಲ್ಲ, ಬೆಂಗಳೂರಿನ ಒಂದು ಪಡೆಯೇ ನಿಮ್ಮೊಟ್ಟಿಗೆ ಇರುತ್ತದೆ, ನಿಮ್ಮ ಹೋರಾಟವನ್ನು ಮುಂದುವರೆಸಿ, ಯಶಸ್ಸು ಸಿಗಲಿ ಎಂದು ಹಾರೈಸಿ ಅಲ್ಲಿಂದ ಹೊರಟು ಬೆಂಗಳೂರು ತಲುಪುವ ಹೊತ್ತಿಗೆ ರಾತ್ರಿ 2 ಗಂಟೆಯಾಗಿತ್ತು. ವರ್ತಮಾನದೊಟ್ಟಿಗೆ ಕೈ ಜೋಡಿಸಿದ ಎಲ್ಲರ ನೆರವಿಗೂ ಸಾರ್ಥಕತೆ ಮೂಡಿದ ಸಮಾಧಾನ ನಮಗಿತ್ತು.
 
ಖರ್ಚು ವೆಚ್ಚಗಳ ವಿವರ:
ಸಂಗ್ರಹಗೊಂಡ ಒಟ್ಟು ಮೊತ್ತ: 35 ಸಾವಿರ ರೂಗಳು.
1250 ಕಿಲೋ ಅಕ್ಕಿ ಖರೀದಿಗೆ  – 30 ಸಾವಿರ ರೂಗಳು
ಕಾರ್ ಪೆಟ್ರೋಲ್‌ಗೆ ಬಳಸಿದ್ದು   – 500 ರೂಗಳು
ನಾಲ್ಕು ಜನರ 2 ಹೊತ್ತಿನ ಊಟದ ವೆಚ್ಚ – 500 ರೂಗಳು
ಸರಕುಸಾಗಣೆ ವಾಹನದ ಬಾಡಿಗೆ  – 400 ರೂಗಳು
ಉಳಿದಿರುವ ಹಣ   – 3600 ರೂಗಳು


ಕಪ್ಪು ಹಣದ ನಿಯಂತ್ರಣಕ್ಕಾಗಿ ಪವರ್ ಆಫ್ ಅಟಾರ್ನಿ ಮಾರಾಟಗಳಿಗೆ ಕಡಿವಾಣ: ಸುಪ್ರೀಮ್ ಕೋರ್ಟ್‌ನ ದಿಟ್ಟ ಹೆಜ್ಜೆ

-ಪ್ರಶಾಂತ್ ಮಿರ್ಲೆ
ವಕೀಲರು

ದೇಶವ್ಯಾಪಿ ಸ್ಥಿರಾಸ್ಥಿಗಳು ಮತ್ತು ಅವುಗಳ ಮಾಲೀಕತ್ವವವನ್ನು ವರ್ಗಾವಣೆ ಮಾಡಿಸಲು ಕಾನೂನುಬದ್ದವಾಗಿ ಗುರುತಿಸಲ್ಪಟ್ಟ ಸ್ವತ್ತು ಹಸ್ತಾಂತರ ದಸ್ತಾವೇಜುಗಳನ್ನು (ಉದಾ: ಕ್ರಯಪತ್ರ/ದಾನಪತ್ರ/ವಿನಿಮಯಪತ್ರ ಇತ್ಯಾದಿ.) ಮಾಡಿಸಿ, ನಿಗದಿ ಪಡಿಸಿದ ಮುದ್ರಾಂಕ ಶುಲ್ಕ ಮತ್ತು ನೋಂದಣಿ ಶುಲ್ಕ ಪಾವತಿಸುವುದರ ಮೂಲಕ ಸ್ವತ್ತಿನ ಪ್ರದೇಶವಾರು ವ್ಯಾಪ್ತಿಗೆ ಒಳಪಡುವ ನೊಂದಣಾಧಿಕಾರಿ ಕಛೇರಿಯಲ್ಲಿ ನೊಂದಾಯಿಸಲಾಗುವುದು. ಆದರೆ ಇದಕ್ಕೆ ಪ್ರತಿಯಾಗಿ ಅನ್ಯಮಾರ್ಗದ ಮೂಲಕ ಸ್ಥಿರಸ್ವತ್ತುಗಳನ್ನು ಹೊಂದಲು ದೇಶದಲ್ಲಿ ಕೆಲವು ಮಾದರಿಯ ದಸ್ತಾವೇಜುಗಳು ಬಳಕೆಯಲ್ಲಿದ್ದು ಅವುಗಳಲ್ಲಿ ಪ್ರಮುಖವಾಗಿ ಕ್ರಯದ ಕರಾರು ಮಾಡಿಕೊಂಡು ಮತ್ತು ಅದಕ್ಕೆ ಪೂರಕವಾಗಿ ಪವರ್ ಆಫ್ ಅಟಾರ್ನಿ/ಮರಣ ಶಾಸನ ದಸ್ತಾವೇಜುಗಳ (ಇವುಗಳನ್ನು ಪವರ್ ಆಫ್ ಅಟಾರ್ನಿ ಮಾರಾಟಗಳು ಎನ್ನಬಹುದು) ಮೂಲಕ ಮಾಡಲಾಗುವ ಸ್ಥಿರಾಸ್ಥಿಗಳ ಮಾರಾಟಗಳ ಕುರಿತು ಇತ್ತೀಚೆಗೆ ಗೌರವಾನ್ವಿತ ಸರ್ವೋಚ್ಛ ನ್ಯಾಯಾಲಯ (ಸೂರಜ್ ಲ್ಯಾಂಪ್ ಮತ್ತು ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ ವಿರುದ್ದ ಸ್ಟೇಟ್ ಆಫ್ ಹರಿಯಾಣ ಅಂಡ್ ಅದರ್ಸ್  2009 (7) ಎಸ್ಸಿಸಿ 363) ಪ್ರಕರಣದಲ್ಲಿ ವಿಸ್ತೃತವಾಗಿ ಚರ್ಚಿಸಿ, ಇಂತಹ ಪವರ್ ಆಫ್ ಅಟಾರ್ನಿ ಮಾರಾಟಗಳ ಕಾನೂನುಬದ್ದವಾಗಿರುವುದಿಲ್ಲ ಎಂದು ಹೇಳಿದೆ. ಮತ್ತು ಸ್ಥಳೀಯ ಪ್ರಾಧಿಕಾರಗಳು ಈ ಸಂಬಂಧ ಪವರ್ ಆಫ್ ಅಟಾರ್ನಿ ಮಾರಾಟಗಳ ದಸ್ತಾವೇಜುಗಳನ್ನು ಪರಿಗಣಿಸಬಾರದು ಎಂಬ ಸ್ಪಷ್ಟ ನಿರ್ದೇಶನ ನೀಡಿದೆ.

ಪವರ್ ಆಫ್ ಅಟಾರ್ನಿ ಮಾರಾಟಗಳಿಗೆ ಕಾನೂನುಬದ್ದ ಮಾನ್ಯತೆಯಿಲ್ಲ:

ಇದರಲ್ಲಿ ಗಮನಾರ್ಹ ಸಂಗತಿಗಳೆಂದರೆ, ಸ್ಥಿರಸ್ವತ್ತುಗಳ ವರ್ಗಾವಣೆಯಲ್ಲಿ ಚಾಲ್ತಿಯಲ್ಲಿರುವ ಕೆಲವು ಪ್ರಕಾರಗಳಲ್ಲಿ ಮಾಲೀಕರಿಂದ ಖರೀದಿದಾರನು ಪವರ್ ಆಫ್ ಅಟಾರ್ನಿ (ಅಧಿಕಾರ ನಾಮೆ)  ಮಾರಾಟಗಳ ಮೂಲಕ ಸ್ಥಿರಸ್ವತ್ತಿನ ಸ್ವಾಧೀನ ಹೊಂದುವುದು, ಅಥವಾ ಸ್ವತ್ತಿನ ಮಾಲೀಕರೊಂದಿಗೆ ಕ್ರಯದ ಕರಾರು ಮಾಡಿಕೊಂಡು ಮತ್ತು ಅದಕ್ಕೆ ಪೂರಕವಾಗಿ ಪವರ್ ಆಫ್ ಅಟಾರ್ನಿಯನ್ನು ಪಡೆದುಕೊಂಡು ಸ್ಥಿರಸ್ವತ್ತಿನ ಸ್ವಾಧೀನ ಹೊಂದುವುದು ಅಥವಾ ಮಾಲೀಕರಿಂದ ಮರಣ ಶಾಸನ ಬರೆಸಿಕೊಳ್ಳುವ ಮೂಲಕ ಸ್ವತ್ತಿನ ಸ್ವಾಧೀನ ಹೊಂದುವುದು, ತದನಂತರ ತಮ್ಮ ಹೆಸರಿಗೆ (ಹೊಲ್ಡರ್) ಖಾತಾ ಮಾಡಿಸಿಕೊಂಡು ಸ್ವತ್ತನ್ನು ಅನುಭವಿಸುವುದು, ಈ ಹಸ್ತಾಂತರ ದಸ್ತಾವೇಜುಗಳ ಮೂಲಕ ಸ್ವತ್ತನ್ನು ಅನುಭವಿಸುತ್ತಾ ಇರುವವರ ಹೆಸರಿಗೆ ಯಾವುದೇ ನೋಂದಾಯಿತ ದಾಖಲೆಗಳಿರುವುದಿಲ್ಲ ಮತ್ತು ಇರುವಂತಹ ದಾಖಲೆಗಳು ಪೂರ್ವ ಮಾಲೀಕರ ಹೆಸರಿನಲ್ಲೆ ಇರುತ್ತವೆ, ಕಾರಣ ಸ್ಥಿರಾಸ್ಥಿಗಳನ್ನು ಹೊಂದಲು ಇರುವ ಪ್ರತಿಬಂದಕ ನಿಯಮಗಳಿಂದ ತಪ್ಪಿಸಿಕೊಳ್ಳಲು, ಸ್ಥಿರಸ್ವತ್ತುಗಳ ವರ್ಗಾವಣೆಯಲ್ಲಿ ಭರಿಸಬೇಕಾದ ಮುದ್ರಾಂಕ ಶುಲ್ಕ ಮತ್ತು ನೋಂದಣಿ ಶುಲ್ಕಗಳನ್ನು ಪಾವತಿಸದಂತೆ ವಂಚಿಸಲು, ಸ್ವತ್ತಿನ ವರ್ಗಾವಣೆಯಿಂದ ಬರುವ ಆದಾಯದ ಮೇಲಿನ ಕ್ಯಾಪಿಟಲ್ ಗ್ಯೇನ್ ಪಾವತಿ ಮಾಡದಿರಲು, ಕಪ್ಪು ಹಣವನ್ನು ಬಂಡವಾಳವಾಗಿ ಪರಿವರ್ತಿಸಲು ಮತ್ತು ಸಂಬಂಧಪಟ್ಟ ಇಲಾಖೆಗಳಿಗೆ ಸ್ವತ್ತಿನ ವರ್ಗಾವಣೆಯಿಂದ ಬರುವ ಇತರೇ ಅಭಿವೃದ್ಧಿ ಹೊರತಾದ ಶುಲ್ಕಗಳನ್ನು ಭರಿಸದಂತೆ ತಪ್ಪಿಸಿಕೊಳ್ಳಲು ಕಂಡುಕೊಂಡಿರುವ ಮಾರ್ಗಗಳಾಗಿದ್ದು. ಆದ್ದರಿಂದ ಬರೀ ಅಧಿಕಾರ ನಾಮೆಯ (ಪವರ್ ಆಫ್ ಅಟಾರ್ನಿಯ) ಪಡೆಯುವ ಮೂಲಕವಾಗಲಿ ಅಥವಾ ಕ್ರಯದ ಕರಾರು ಮತ್ತು ಅದಕ್ಕೆ ಪೂರಕವಾಗಿ ಅಧಿಕಾರ ನಾಮೆಯನ್ನು ನೀಡುವ ಮೂಲಕ ವಾಗಲಿ ಅಥವಾ ಮರಣ ಶಾಸನ ಮಾಡಿಕೊಟ್ಟರೆ, ಇದರಿಂದ ಸಂಬಂಧಪಟ್ಟ ಸ್ಥಿರಾಸ್ಥಿಗಳ ಸಂಪೂರ್ಣ ಮಾಲೀಕತ್ವ ವರ್ಗಾವಣೆ ಆಗುವುದಿಲ್ಲ ಎಂಬುದನ್ನು ನ್ಯಾಯಾಲಯ ಸ್ವಷ್ಟಪಡಿಸಿದೆ.

ಇಷ್ಟಲ್ಲದೆ, ಇಂತಹ ದಸ್ತಾವೇಜುಗಳ ಬಳಕೆಗಳಿಂದ ಉಂಟಾಗಿದ್ದ ಹಲವು ದ್ವಂದ್ವಗಳಿಗೆ ತೆರೆ ಎಳೆದು ಸ್ವಷ್ಠೀಕರಣ ನೀಡಿದೆ. ಅವುಗಳಲ್ಲಿ ಕೆಲವನ್ನು ಈ ಕೆಳಕಂಡಂತೆ ಗುರುತಿಸಬಹುದು :

  1. ದೆಹಲಿ ಉಚ್ಛ ನ್ಯಾಯಾಲಯವು ಆಶಾ ಎಂ. ಜೈನ್ ವಿರುದ್ದ. ಕೆನರಾ ಬ್ಯಾಂಕ್ (94 (2001) ಡಿಎಲ್ಟಿ 841) ಪ್ರಕರಣದಲ್ಲಿ ನಿರ್ಣಯಿಸಿದಂತೆ ಅಧಿಕಾರ ನಾಮೆಯಲ್ಲಿ ಅಧಿಕಾರ ಸ್ಥಾಪಿತವಾಗಿದ್ದರೆ ಅದನ್ನು ಆಸ್ತಿ ಹಸ್ತಾಂತರ ವರ್ಗಾವಣೆಯ ವಿಧಾನವಾಗಿ ಮಾನ್ಯತೆ ಇದೆ ಎಂಬುದನ್ನು ಗುರುತಿಸಿದ ಸರ್ವೋಚ್ಛ ನ್ಯಾಯಾಲಯವು ಪವರ್ ಆಫ್ ಅಟಾರ್ನಿ ಮಾರಾಟಗಳ ಮೂಲಕ ಮಾಡಲಾಗುವ ಸ್ಥಿರಾಸ್ಥಿಗಳ ವರ್ಗಾವಣೆ ಸಂಪೂರ್ಣ ಮಾಲೀಕತ್ವವನ್ನು ವರ್ಗಾಯಿಸುವ ವಿಧಾನ ಎಂದು ಪರಿಗಣಿಸಬಾರದು ಮತ್ತು ಅವುಗಳಲ್ಲಿ ಕ್ರಯದ ಕರಾರು ಬಾದ್ಯತೆಯನ್ನು ಮಾತ್ರ ಸೃಷ್ಟಿಸುತ್ತದೆ, ಎಂದು ವ್ಯಾಖ್ಯಾನಿಸಿದೆ. ಮತ್ತು ಮಾಲೀಕರು ಆ ಸ್ವತ್ತುಗಳನ್ನು ಮತ್ತೊಬ್ಬರಿಗೆ ಮಾರಾಟ ಮಾಡಲು ಯಾವುದೇ ನಿರ್ಬಂಧಗಳಿರುವುದಿಲ್ಲ ಮತ್ತು ಅಧಿಕಾರ ನಾಮೆ ಮಾಡಿಸಿಕೊಂಡವನಿಗೆ ತಾನು ಕೊಟ್ಟ ಹಣದ ಹಿಂಪಾವತಿಗೆ ಮಾತ್ರ ನಿರ್ದಿಷ್ಟ ಅನುಷ್ಠಾನದ ದಾವಾ ಹೂಡಬಹುದು ಎಂಬುದನ್ನು ಸ್ವಷ್ಟಪಡಿಸಿದೆ.
  2. ಯಾವುದೇ ಸ್ಥಿರ ಆಸ್ತಿಗಳ ವರ್ಗಾವಣೆಯು ನೋಂದಣಿಯಾಗುವುದು ಖಡ್ಡಾಯ.
  3. ಈಗಾಗಲೇ ಪವರ್ ಆಫ್ ಅಟಾರ್ನಿ ಮಾರಾಟಗಳ ದಸ್ತಾವೇಜುಗಳ ಮೂಲಕ ಆಸ್ತಿಗಳನ್ನು ಹೊಂದಿರುವವರ ವಿರುದ್ದ ಕ್ರಮ ಕೈಗೊಂಡರೆ ಸಾರ್ವಜನಿಕರಿಗೆ ತೊಂದರೆಯಾಗಬಹು ಮತ್ತು ಸಕ್ರಮಗೊಳಿಸಲು ಸೂಕ್ತ ಕಾಲಾವಕಾಶವನ್ನು ನೀಡಬೇಕಾಗುತ್ತದೆ ಎಂದು ಪರಿಗಣಿಸಿ ಪ್ರಸ್ತುತ ತೀರ್ಪು ದಿನಾಂಕ 11.10.2011ರ ನಂತರವಷ್ಟೆ ್ಜಾರಿಯಾಗುವಂತೆ ಆದೇಶಿದೆ. ಮುಖ್ಯವಾಗಿ ಈಗಾಗಲೇ ಪವರ್ ಆಫ್ ಅಟಾರ್ನಿ ಮಾರಾಟಗಳ ದಸ್ತಾವೇಜುಗಳ ಮೂಲಕ ಅಸ್ತಿಗಳನ್ನು ಹೊಂದಿರುವವರ ಬಗ್ಗೆ ಸಂಬಧಪಟ್ಟ ಪ್ರಾಧಿಕಾರಗಳು ಯಾವ ಕ್ರಮ ಕೈಗೊಳ್ಳಲು ಮುಂದಾಗಬಾರದು ಎಂದು ಸ್ವಷ್ಟವಾಗಿ ನಿರ್ದೇಶಿಸಿದೆ.
  4. ದಿನಾಂಕ 11.10.2011ರ ನಂತರ ಯಾವುದೇ ಸ್ಥಿರ ಸ್ವತ್ತುಗಳ ಮೇಲೆ ಸಂಬಂಧಪಟ್ಟ ಕಂದಾಯ ಪ್ರಾಧಿಕಾರಗಳು ಅಥವಾ ಕಾರ್ಪೊರೇಷನ್‌ಗಳು ಅಥವಾ ಮುನ್ಸಿಪಾಲಿಟಿಗಳು ಅಥವಾ ಪಂಚಾಯ್ತಿಗಳು ಪವರ್ ಆಫ್ ಅಟಾರ್ನಿ ಮಾರಾಟಗಳ ದಸ್ತವೇಜುಗಳ ಮೂಲಕ ತಮ್ಮ ಹೆಸರಿಗೆ ಸ್ಥಿರಾಸ್ಥಿಗಳ ಖಾತಾ ವರ್ಗಾವಣೆಗೆ ಸಲ್ಲಿಸುವ ಅರ್ಜಿಗಳನ್ನು ಪರಿಗಣಿಸಬಾರದು.
  5. ಯಾವುದೇ ಗುತ್ತಿಗೆ/ಲಿಸ್ ಹೊಲ್ಡ್ ಸ್ವತ್ತುಗಳಿಗೂ ಮತ್ತು ಅವುಗಳ ವರ್ಗಾವಣೆಗೂ ಈ ತೀರ್ಪಿನ ನಿರ್ದೇಶಿಸಿದ ತತ್ವಗಳು ಅನ್ವಯವಾಗುತ್ತದೆ. ಅಂದರೆ ಗುತ್ತಿಗೆ/ಲಿಸ್ ಹೊಲ್ಡ್ ಸ್ವತ್ತುಗಳ ಹಕ್ಕು ಹಸ್ತಾಂತರವು ನೋಂದಾಯಿತ ಅಸೈನ್ಮೆಂಟ್ ಆಫ್ ಲೀಸ್ ಮಾಡುವುದರ ಮೂಲಕವಷ್ಟೆ ಕಾನೂನುಬದ್ದವಾಗುತ್ತದೆ.
  6. ಕುಟುಂಬ ಸದಸ್ಯರಿಗೆ ನೀಡುವ ಅಧಿಕಾರ ನಾಮೆ, ಸ್ಥಿರಸ್ವತ್ತುಗಳನ್ನು ನಿವೇಶನಗಳಾಗಿ ಅಥವಾ ವಸತಿ/ವಾಣಿಜ್ಯ ಸಮುಚ್ಚಯಗಳಾಗಿ ಅಭಿವೃದ್ಧಿ ಪಡಿಸುವ ಇಚ್ಛೆಯಿಂದ ಮಾಲೀಕನು ಅಭಿವೃದ್ಧಿದಾರರೊಡನೆ ಜಂಟಿಯಾಗಿ ಅಭಿವೃದ್ಧಿ ಮಾಡುವ ನೋಂದಾಯಿತ ಒಪ್ಪಂದ ಜ್ಞಾಪನದ ಪತ್ರಗಳಿಗೆ ಮತ್ತು ಸೃಜಿಸಿದ ಅಧಿಕಾರಗಳ ಯಶಸ್ವಿ ಅನುಷ್ಠಾನಕ್ಕೆ ಮಾಲೀಕನು ಅಭಿವೃದ್ಧಿದಾರನಿಗೆ ನೀಡುವ ನೋಂದಾಯಿತ ಪವರ್ ಆಫ್ ಅಟಾರ್ನಿಯ ಮೇರೆಗೆ ಮಾಡಿಕೊಡುವ ವರ್ಗಾವಣೆಗಳನ್ನು ನೈಜ ವರ್ಗಾವಣೆಗಳೆಂದು ಪರಿಗಣಿಸಿ ಇವುಗಳಿಗೆ ಈ ತೀರ್ಪು ಅನ್ವಯವಾಗುವುದಿಲ್ಲ ಎಂದು ಹೇಳಿದೆ.

ಸರ್ಕಾರದ ಕ್ರಮ :

ಈ ಮೇಲಿನ ಅಂಶಗಳನ್ನು ಪರಿಗಣಿಸಿದಾಗ ನಮ್ಮ ರಾಜ್ಯದಲ್ಲೂ ದಶಕಗಳ ಹಿಂದೆ ಹೆಚ್ಚಿನ ಪ್ರಮಾಣದಲ್ಲಿ ಸ್ಥಿರಸ್ವತ್ತುಗಳನ್ನು ಖರೀದಿಸಿರುವವರಲ್ಲಿ ಈ ಪವರ್ ಆಫ್ ಅಟಾರ್ನಿ ಮಾರಾಟಗಳ ದಸ್ತಾವೇಜುಗಳನ್ನು ಮಾಡಿಸಿಕೊಂಡು ಇಂದಿಗೂ ತೊಂದರೆ ಅನುಭವಿಸುತ್ತಿರುವವರು ಸಾಕಷ್ಟು ಜನ ಕಾಣಸಿಗುತ್ತಾರೆ. ಇವರುಗಳು ಆಸ್ತಿಗಳ ಮೇಲಿನ ತಮ್ಮ ಹಕ್ಕುಗಳನ್ನು ಸಕ್ರಮಗೊಳಿಸಿಕೊಳ್ಳುವುದು ಒಳಿತು. ಪ್ರಸ್ತುತ ನಮ್ಮ ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಕಾನೂನುಗಳಿಗೆ ತಿದ್ದುಪಡಿಗಳನ್ನು ತರುವ ಮೂಲಕ ಹಲವು ಸುಧಾರಣಾ ಕ್ರಮಗಳನ್ನು ಅಳವಡಿಸಿಕೊಳ್ಳುತ್ತಾ ಬಂದಿದೆ, ಇದರಲ್ಲಿ ಮುಖ್ಯವಾಗಿ ಅಧಿಕಾರ ನಾಮೆಯಡಿ ಸ್ಥಿರಸ್ವತ್ತಿನ ಹಸ್ತಾಂತರಣ ಕುರಿತ ಅಧಿಕಾರವನ್ನು ಪ್ರಾಪ್ತಿಸಿದ್ದರೆ ಅಂತಹ ದಸ್ತವೇಜುಗಳ ನೊಂದಣಿಯನ್ನು ಕಡ್ಡಾಯಗೊಳಿಸಿ, ಸ್ವತ್ತಿನ ಮಾರುಕಟ್ಟೆ ಮೌಲ್ಯದ ಮೇಲೆ ಅಥವಾ ಪ್ರತಿಫಲದ ಮೇಲೆ, ಇವುಗಳಲ್ಲಿ ಯಾವುದು ಹೆಚ್ಚೋ, ಅದರ ಮೇಲೆ, ಶೇ.6ರಷ್ಟು ಹಣವನ್ನು ಮುದ್ರಾಂಕ ಶುಲ್ಕವಾಗಿ ಪಾವತಿಸುವುದನ್ನು ಮತ್ತು ನೋಂದಣಿ ಮಾಡಿಸುವುದನ್ನು ಕಡ್ಡಾಯಗೊಳಿಸಿದೆ. ಅಂತೆಯೇ, ಕ್ರಯದ ಕರಾರು ಪತ್ರ ಮಾಡಿಕೊಳ್ಳುವಾಗಲು ಸ್ವತ್ತಿನ ಮಾರುಕಟ್ಟೆ ಮೌಲ್ಯ ಅಥವಾ ದಸ್ತಾವೇಜಿನಲ್ಲಿ ತೋರಿಸಿರುವ ಮೌಲ್ಯ, ಇವುಗಳಲ್ಲಿ ಯಾವ ಮೌಲ್ಯ ಹೆಚ್ಚಾಗಿರುತ್ತದೋ ಅದರ ಮೇಲೆ ನಿಗದಿ ಪಡಿಸಿದ ಮುದ್ರಾಂಕ ಶುಲ್ಕ (ಕಬ್ಜೆಯನ್ನು ನೀಡಿದ್ದರೆ ಶೇ.6ರಷ್ಟು ಅಥವಾ ಕಬ್ಜೆಯನ್ನು ನೀಡದಿದ್ದರೆ ಶೇ.0.01ರಷ್ಟು ಅಥವಾ 20,000 ರೂಪಾಯಿಗಳು, ಇದರಲ್ಲಿ ಯಾವುದು ಕಡಿಮೆಯೋ ಅದು ಅನ್ವಯ) ಪಾವತಿಸುವುದು ಕಡ್ಡಾಯ.

ನ್ಯಾಯಾಲಯದ ಆದೇಶದಿಂದ ಮುಖ್ಯವಾಗಿ ಅಧಿಕಾರ ನಾಮೆ/ಕ್ರಯದ ಕರಾರು/ಮರಣ ಶಾಸನ ಪತ್ರಗಳ ಮೂಲಕ ಮಾಲೀಕತ್ವವವನ್ನು ಹೊಂದುವುದನ್ನು ಅಸಿಂಧುಗೊಳಿಸಿರುವುದು ಸ್ಥಿರ ಆಸ್ತಿಗಳ ವಹಿವಾಟಿನಲ್ಲಿ ಸಾಮಾನ್ಯನಿಗೆ ನಷ್ಟಕ್ಕಿಂತ ಲಾಭವೇ ಹೆಚ್ಚಾಗುವುದರಲ್ಲಿ ಸಂಶಯ ಇಲ್ಲ, ನ್ಯಾಯಾಲಯದ ತೀರ್ಪಿನಿಂದ ಮುಂದಿನ ದಿನಗಳಲ್ಲಿ ದೇಶದಾದ್ಯಂತ ಏಕರೂಪ ನಿಯಮದಂತೆ ಅಸ್ತಿಗಳ ವರ್ಗಾವಣೆಗೆ ಸ್ವತ್ತಿನ ಮಾಲೀಕನೇ ಖುದ್ದಾಗಿ ನೋಂದಣಿ ಕಛೇರಿಯಲ್ಲಿ ಹಾಜರಾಗಬೇಕಾಗುತ್ತದೆ.

ಕಪ್ಪು ಹಣದ ನಿಯಂತ್ರಣ :

ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಮಾಡಿರುವ ಶಿಫಾರಸ್ಸಿನಂತೆ ನಮ್ಮ ರಾಜ್ಯ ಸರ್ಕಾರವು ಸಹಾ ಸುಧಾರಣೆಯತ್ತ ಗಮನಿಸಬೇಕಾದುದು ಮುಖ್ಯ, ರಾಜ್ಯದಲ್ಲಿ ಸ್ಥಿರಸ್ವತ್ತಿನ ಹಸ್ತಾಂತರ ದಸ್ತಾವೇಜು (ಕ್ರಯಪತ್ರ) ನೋಂದಣಿ ಸಮಯದಲ್ಲಿ ಒಟ್ಟು ಭರಿಸಬೇಕಾದ ವೆಚ್ಚ ಸ್ವತ್ತಿನ ಮಾರುಕಟ್ಟೆ ಮೌಲ್ಯ ಅಥವಾ ದಸ್ತಾವೇಜಿನಲ್ಲಿ ತೋರಿಸಿರುವ ಪ್ರತಿಫಲ, ಇವುಗಳಲ್ಲಿ ಯಾವುದು ಹೆಚ್ಚೋ, ಅದರ ಮೇಲೆ ಶೇ.7.78ರಷ್ಟು ಹಣವನ್ನು ಶುಲ್ಕದ ರೂಪದಲ್ಲಿ ಭರಿಸಬೇಕಾಗಿರುತ್ತದೆ, ಇದರಿಂದ ರಿಯಲ್ ಎಸ್ಟೇಟ್ ಉದ್ಯಮದ ಕಾರ್ಯಚಟುವಟಿಕೆಗಳು ಹೆಚ್ಚಿರುವ ನಗರ ಪ್ರದೇಶಗಳಲ್ಲಿ ನೋಂದಣಿ ಸಮಯದಲ್ಲಿ ಭರಿಸಬೇಕಾದ ಶುಲ್ಕದಿಂದ ಪಾರಾಗಲು ಹೆಚ್ಚಿನ ಮೌಲ್ಯವನ್ನು ದಸ್ತಾವೇಜುಗಳಲ್ಲಿ ಕಾಣಿಸದಂತೆ ಮಾಡುವುದು ಕಪ್ಪುಹಣದ ಬಳಕೆಗೆ ಸರ್ಕಾರವೇ ಪರೋಕ್ಷವಾಗಿ ಪ್ರೋತ್ಸಾಹಿಸಿದಂತೆ. ಮುದ್ರಾಂಕ ಮತ್ತು ನೋಂದಣಿ ಶುಲ್ಕಗಳನ್ನು ಕಡಿಮೆ ಮಾಡುವುದು ಈ ಸಂದರ್ಭದಲ್ಲಿ ಸೂಕ್ತ, ಈ ನಿಟ್ಟಿನಲ್ಲಿ ಸರ್ಕಾರ ಚಿಂತಿಸಬೇಕಾಗಿದೆ.

ಇದರಿಂದ ಸಾರ್ವಜನಿಕರು ಅಸ್ತಿಗಳ ಖರೀದಿ ಪ್ರಕ್ರಿಯೆಗಳನ್ನು ನೋಂದಾಯಿಸಿಕೊಳ್ಳಲು ಪ್ರೋತ್ಸಾಹಿಸಿ ಸಂಪೂರ್ಣ ಪ್ರತಿಫಲವನ್ನು ದಾಖಲಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಂತಾಗುತ್ತದೆ ಮತ್ತು ಮುದ್ರಾಂಕ ಪಾವತಿಯಲ್ಲಿ ಹೆಚ್ಚು ವಿವಾದಗಳಿಗೆ ಆಸ್ಪದ ಇರುವುದಿಲ್ಲ. ಯಾವಾಗ ಸಂಪೂರ್ಣ ಪ್ರತಿಫಲ ದಾಖಲಿಸಲು ಉತ್ಸುಕರಾಗುತ್ತಾರೋ ಪರೋಕ್ಷವಾಗಿ ಕಪ್ಪುಹಣದ ಬಳಕೆ ತಗ್ಗುತ್ತದೆ. ಈ ಕ್ರಮದಿಂದ ಸರ್ಕಾರಕ್ಕೆ ತಾತ್ಕಲಿಕವಾಗಿ ರಾಜಸ್ವದಲ್ಲಿ ಕಡಿಮೆಯಾದರು ಕಪ್ಪುಹಣದ ಬಳಕೆಯನ್ನು ನಿಯಂತ್ರಣಕ್ಕೆ ತರುವುದು ಶ್ರೇಷ್ಠ ಸಾಧನೆಯೆ ಸರಿ.

KGF ಸಂತ್ರಸ್ತರಿಗೆ ತಲುಪಿದ ನೆರವು…

ಗೆಳೆಯರೆ,

ಕಳೆದ ಭಾನುವಾರ ಟಿ.ಕೆ. ದಯಾನಂದ್, ದಿನೇಶ್ ಕುಮಾರ್, ಮತ್ತು ಗೆಳೆಯರು KGFಗೆ ಹೋಗಿ ಸುಮಾರು 50 ಸಂತ್ರಸ್ತ ಕುಟುಂಬಗಳಿಗೆ ನೆರವನ್ನು ನೀಡಿ ಬಂದಿದ್ದಾರೆ. ಅದರ ವಿವರಗಳನ್ನು ಒಂದೆರಡು ದಿನದಲ್ಲಿ ಪ್ರಕಟಿಸಲಿದ್ದೇವೆ. ಹಾಗೆಯೇ, ರಸೀತಿಯನ್ನೂ ಸಹ. ದಿನೇಶ್ ಕುಮಾರ್‌ರವರು ಈಗ ತಾನೆ ಅಂದಿನ ಹಂಚಿಕೆ ಕಾರ್ಯದ ಕೆಲವು ಫೋಟೋಗಳನ್ನು ಕಳುಹಿಸಿದ್ದಾರೆ. ಅವರಿಗೆ ಮತ್ತು ಇದನ್ನು ಸಾಧ್ಯ ಮಾಡಿದ ಎಲ್ಲರಿಗೂ ಮತ್ತೊಮ್ಮೆ ವರ್ತಮಾನದ ಬಳಗದ ಪರವಾಗಿ ಧನ್ಯವಾದಗಳು.

ಅಂದಹಾಗೆ, ನಮಗೆ ಭಾನುವಾರದ ತನಕವೂ ನೆರವು ಹರಿದು ಬಂದಿತ್ತು. ಒಟ್ಟು ರೂ. 35000 ಹಣಸಂಗ್ರಹವಾಗಿದ್ದು, ಅದರ ಅಂತಿಮ ವಿವರ ಹೀಗಿದೆ: ವರ್ತಮಾನ ಬಳಗ – 5000,, ರಾಮಕೃಷ್ಣ ಎಂ – 10000, ಮಾನಸ ನಾಗರಾಜ್ – 500, ಅನಾಮಧೇಯ-1 – 1000, ಎಸ್. ವಿಜಯ – 1000, ಸ್ವರ್ಣ ಕುಮಾರ್ ಬಿ.ಎ. – 1500, ಬಿ. ಶ್ರೀಪಾದ ಭಟ್ – 2000, ಅನಾಮಧೇಯ-2 – 500, ಅಕ್ಷತಾ – 1000, ಸಂದೀಪ್/ರಾಘವೇಂದ್ರ ಸಿ.ವಿ. – 2000, ಪಿ.ರಂಗನಾಥ – 2000, ತ್ರಿವೇಣಿ ಟಿ.ಸಿ. – 1000, ಅವಿನಾಶ ಕನ್ನಮ್ಮನವರ – 500, ಸತೀಶ್ ಗೌಡ ಬಿ.ಎಚ್. (ಕ.ರ.ವೇ.) – 500, ಆರ್.ಕೆ.ಕೀರ್ತಿ (ಕ.ರ.ವೇ.) – 1000, ಬಿ. ಸಣ್ಣೀರಪ್ಪ (ಕ.ರ.ವೇ.) – 500, ಸಿ.ವಿ.ದೇವರಾಜ್ (ಕ.ರ.ವೇ.) – 1000, ನಂದಿನಿ ಎ.ಡಿ. – 500, ಶಿವಕುಮಾರ್ ದಂಡಿಗೆಹಳ್ಳಿ – 2000, ಕಾರ್ತಿಕ್ ಡಿ.ಪಿ. – 1500.