ಮಂಗಳೂರು ಘಟನೆಯಲ್ಲಿ ಪತ್ರಕರ್ತನಾಗಿ ನಾನು ಸರಿಯಾಗಿದ್ದೀನಾ?


-ನವೀನ್ ಸೂರಿಂಜೆ   


 

ಜುಲೈ 28 ಸಂಜೆ 6.45 ರ ವೇಳೆ. ನನ್ನ ಸುದ್ದಿ ಮೂಲ ಯುವಕನೊಬ್ಬ ನನಗೆ ಕರೆ ಮಾಡಿದ್ದ. ಆತ ಪಡೀಲ್ ನಿವಾಸಿ. ಆತ ನನಗೆ ತಿಳಿಸಿದ್ದಿಷ್ಟು. “ನವೀನಣ್ಣ, ನಮ್ಮ ಪಡೀಲ್ ಜಂಕ್ಷನ್ನಲ್ಲಿ ಒಂದು ಟಿಂಬರ್ ಯಾಡರ್್ ಇದೆಯಲ್ವ. ಅಲ್ಲಿ ಒಂದು ಸುಮಾರು 30 ಮಂದಿ ಯುವಕರು ನಿಂತುಕೊಂಡು ಮಾತನಾಡುತ್ತಿದ್ದರು. ಇನ್ಯಾರನ್ನೋ ಕರೆಯಲು ಇನ್ಯಾರಿಗೋ ಒತ್ತಾಯಿಸುತ್ತಿದ್ದರು. ಬೈಕುಗಳನ್ನು ರೆಡಿ ಇಟ್ಟುಕೊಳ್ಳಿ ಎನ್ನುತ್ತಿದ್ದರು. ಬಹುಷಃ ಅವರು ನಮ್ಮ ಮೇಲಿನ ಗುಡ್ಡೆಯಲ್ಲಿರುವ ಗೆಸ್ಟ್ ಹೌಸ್ಗೆ ದಾಳಿ ಮಾಡಲು ಯೋಚಿಸುತ್ತಿದ್ದಾರೆ ಎನಿಸುತ್ತದೆ. ಬ್ಯಾರಿ ಹುಡುಗರು, ಹಿಂದೂ ಹುಡುಗಿಯರು ಎಂದೆಲ್ಲಾ ಮಾತನಾಡುತ್ತಿದ್ದರು” ಎಂದ. ಅವರು ಯಾವ ಸಂಘಟನೆಯವರು ಅಂತಿ ತಿಳ್ಕೋ ಮಾರಾಯ ಎಂದೆ ನಾನು. ಅವರು ಹಿಂದೂ ಸಂಘಟನೆಗಳು ಎಂಬುದಷ್ಟೇ ಅವನಿಗೆ ಖಚಿತವಾಯ್ತೆ ವಿನಹ ನಿಖರವಾಗಿ ಯಾವ ಸಂಘಟನೆ ಎಂಬುದು ತಿಳಿಯಲಿಲ್ಲ.

ತಕ್ಷಣ ನನ್ನ ಮನಸ್ಸಿಗೆ ಬಂದ ಪ್ರಶ್ನೆ “ಈ ಮಾಹಿತಿಯನ್ನು ಪೊಲೀಸರಿಗೆ ನೀಡಬೇಕೇ ಬೇಡವೇ”‘ ಎಂಬುದು. ದಾಳಿ ಯಾರು ಮಾಡುತ್ತಿದ್ದಾರೆ ಎಂದು ಗೊತ್ತಿಲ್ಲ. ಯಾಕಾಗಿ, ಯಾರ ಮೇಲೆ, ಯಾವ ಸಂಘಟನೆ, ಎಲ್ಲಿಗೆ ದಾಳಿ ಮಾಡುತ್ತಿದೆ ಎಂಬುದೂ ಗೊತ್ತಿಲ್ಲ. ಒಂದು ತೀರಾ ಪ್ರಾಥಮಿಕ ಮಾಹಿತಿಯಷ್ಠೆ ತಿಳಿದಿದೆ. ಸಂಘಟನೆಯ ಕಾರ್ಯಕರ್ತರೇ ಫೋನಾಯಿಸಿದ್ದರೆ ಪೊಲೀಸರಿಗೆ ಮಾಹಿತಿ ನೀಡಬಹುದಿತ್ತು. ನನ್ನ ಸುದ್ದಿಮೂಲ ಮಾಹಿತಿ ನೀಡಿದ್ದರಿಂದ ಆ ಸುದ್ದಿಯನ್ನು ಖಚಿತಪಡಿಸಿಕೊಂಡೇ ಪೊಲೀಸರಿಗೆ ಮಾಹಿತಿ ನೀಡೋಣ ಎಂದುಕೊಂಡು ನಾನು ಮತ್ತು ನನ್ನ ಕ್ಯಾಮರಮೆನ್ ಪಡೀಲ್ ಗುಡ್ಡೆಯ ಮೇಲಿರುವ ಗೆಸ್ಟ್ ಹೌಸ್ ಕಡೆ ಬೈಕಿನಲ್ಲಿ ತೆರಳಿದೆ.

ಒಂದೈದು ನಿಮಿಷದಲ್ಲಿ ಪಡೀಲ್ ಗುಡ್ಡೆಯಲ್ಲಿರುವ ಮಾನರ್ಿಂಗ್ ಮಿಸ್ಬಾ ಎನ್ನುವ ಹೋಂ ಸ್ಟೇ ಅಥವಾ ಗೆಸ್ಟ್ ಹೌಸ್ ಹೊರಭಾಗದಲ್ಲಿ ನಾನು ಮತ್ತು ನನ್ನ ಕ್ಯಾಮರಮೆನ್ ಇದ್ದೆವು. ಆಗ ಅಲ್ಲಿ ಯಾವ ದಾಳಿಕೋರರೂ ಇರಲಿಲ್ಲ. ಐದು ನಿಮಿಷ ಅಲ್ಲೇ ಕಾದು ನಿಂತೆವು. ಯಾರು ಯಾಕಾಗಿ ಈ ಹೋಂ ಸ್ಟೇಗೆ ದಾಳಿ ಮಾಡಲು ಸಿದ್ದತೆ ಮಾಡುತ್ತಾರೆ ಎಂಬುದು ಗೊತ್ತೇ ಆಗಲಿಲ್ಲ. ಪಡೀಲ್ ಹೆದ್ದಾರಿಯಿಂದ ಅಂದಾಜು ಅರ್ಧ ಕಿಮಿ ರಸ್ತೆ ದಾರಿಯಲ್ಲಿ ಈ ಹೋಂ ಸ್ಟೇ ಇದೆ. ಇದರ ಸುತ್ತಲೂ ದೊಡ್ಡದಾದ ಕಂಪೌಂಡ್ ಇದೆ. ಒಂದೇ ಒಂದು ಗೇಟ್ ಇದೆ. ಗೇಟ್ನಿಂದ 60 ಮೀಟರ್ ದೂರದಲ್ಲಿ ಹೋಂ ಸ್ಟೇ ಬಂಗಲೆ ಇದೆ. ನಾನು ಗೇಟ್ ಹತ್ತಿರ ನಿಂತು ಒಮ್ಮೆ ಇಡೀ ಬಂಗಲೆಯತ್ತಾ ಕಣ್ಣಾಡಿಸಿದೆ. ಅಲ್ಲಿ ದಾಳಿ ಮಾಡಲು ಕಾರಣವಾಗುವಂತಹ ಯಾವುದೇ ಆ್ಯಕ್ಟಿವಿಟೀಸ್ ನನಗೆ ಗೋಚರಿಸಲಿಲ್ಲ. ಒಬ್ಬಳು ಹುಡುಗಿ ಹೊರಗೆ ಚೇರ್ನಲ್ಲಿ ಕುಳಿತಿದ್ದಳು. ಇನ್ನಿಬ್ಬರು ಹುಡುಗರು ಬಂಗಲೆಯ ಮತ್ತೊಂದು ಮೂಲೆಯಲ್ಲಿ ನಿಂತುಕೊಂಡು ಮೊಬೈಲ್ನಲ್ಲಿ ಆಟವಾಡುತ್ತಿದ್ದರು. ಅವರು ಯಾವುದೇ ರೀತಿಯಲ್ಲೂ ಕಾನೂನು ಬಾಹಿರ ಕೃತ್ಯದಲ್ಲಿ ತೊಡಗಿರಲಿಲ್ಲ. ಆದುದರಿಂದ ದಾಳಿಕೋರರು ಬಯಸುವ ಸನ್ನಿವೇಶ ಅಲ್ಲಿರಲಿಲ್ಲ. ಆದುದರಿಂದ ಆಗಲೂ ನನಗೆ ಪೊಲೀಸರಿಗೆ ಮಾಹಿತಿ ನೀಡಬೇಕು ಅನ್ನಿಸಲಿಲ್ಲ. ನನ್ನ ಮಾಹಿತಿ ತಪ್ಪಾದರೆ ಒಂದಿಡೀ ಪೊಲೀಸ್ ಇಲಾಖೆಗೆ ತಪ್ಪು ಮಾಹಿತಿ ನೀಡಿದಂತಾಗುತ್ತದೆ. ಮತ್ತು ಹೋಂ ಸ್ಟೇಯಲ್ಲಿದ್ದವರಿಗೆ ವಿನಾಕಾರಣ ಪೊಲೀಸ್ ಕಿರುಕುಳ ನೀಡಲು ಕಾರಣನಾಗುವಂತಾಗುತ್ತೇನೆ ಎಂಬ ಆತಂಕದಿಂದಲೇ ಮಾಹಿತಿ ನೀಡಲಿಲ್ಲ. ನಾನು ಈ ರೀತಿ ಯೋಚಿಸುತ್ತಿರುವಾಗಲೇ ಸುಮಾರು ಮೂವತ್ತೂ ಅಧಿಕ ಇದ್ದ ತಂಡವೊಂದು ಹೋಂ ಸ್ಟೇಯ ಗೇಟಿನತ್ತಾ ಬರುತ್ತಿತ್ತು. ನಾನು ತಕ್ಷಣ ಕುತೂಹಲದಿಂದಲೇ ಕೇಳಿದೆ. “ಏನು ವಿಷಯ? ಏನಾಗ್ತಾ ಇದೆ ಇಲ್ಲಿ ?” ಎಂದು ತುಳುವಿನಲ್ಲಿ ಪ್ರಶ್ನಿಸಿದೆ. ತಕ್ಷಣ ಯುವಕನೊಬ್ಬ “ಬ್ಯಾರಿಗಳು ನಮ್ಮ ಹಿಂದೂ ಹುಡುಗಿಯರನ್ನು ಇಲ್ಲಿ ಕರೆದುಕೊಂಡು ಬಂದಿದ್ದಾರೆ. ಅವರನ್ನು ಬಿಡಬಾರದು”‘ ಎಂದ. ಅಷ್ಟರಲ್ಲಿ ಗುಂಪಿನಲ್ಲಿದ್ದ ಇನ್ನಿತರ ಯುವಕರು ಹೊರಗೆ ಕುಳಿತಿದ್ದ ಹುಡುಗಿಯತ್ತಾ ಕೈ ತೋರಿಸಿ, :ಅಲ್ಲಿ ಅಲ್ಲಿ ಇದ್ದಾಳೆ ಹುಡುಗಿ, ಅಗೋ ಹುಡುಗರು ಅಲ್ಲಿದ್ದಾರೆ ” ಎಂದು ಯುವಕ ಯುವತಿಯರತ್ತಾ ಓಡಿಕೊಂಡು ದಾಳಿಗೆ ಸಿದ್ದರಾದರು. ತಕ್ಷಣ ದಾಳಿ ಅರಿವಾದ ಯುವತಿ ತನ್ನನ್ನು ತಾನು ರಕ್ಷಣೆ ಮಾಡಿಕೊಳ್ಳಲು ಬಂಗಲೆಯ ಒಳ ಹೋದಳು. ಮತ್ತು ಬಾಗಿಲು ಹಾಕಲು ಯತ್ನಿಸಿದಳು. ಆಗ ಸುಮಾರು 30 ರಷ್ಟಿದ್ದ ದಾಳಿಕೋರರು ಬಾಗಿಲನ್ನು ಬಲವಾಗಿ ದೂಡಿ ಬಾಗಿಲು ತೆರೆಯುವಲ್ಲಿ ಸಫಲರಾದರು.

ಈಗ ನನ್ನ ಪ್ರಜ್ಞೆ ನಿಜವಾಗಿಯೂ ಜಾಗೃತವಾಗಿತ್ತು. ತಕ್ಷಣ ನನ್ನ ಕಚೇರಿ ಮೊಬೈಲ್ 9972570044 ನಿಂದ ಮಂಗಳೂರು ಗ್ರಾಮಾಂತರ ಪೊಲೀಸ್ ನಿರೀಕ್ಷಕ ರವೀಶ್ ನಾಯಕ್ಗೆ 9480805330 ಎಂಬ ಮೊಬೈಲ್ ಸಂಖ್ಯೆಗೆ ಕರೆ ಮಾಡಿದ್ದೆ. ಆಗ ಸುಮಾರು 7.15 ರ ಸಂಜೆ ಸಮಯ. ರವೀಶ್ ನಾಯಕ್ ನನ್ನ ಕರೆ ಸ್ವೀಕರಿಸಲೇ ಇಲ್ಲ. ಒಂದು ಕಡೆಯಿಂದ ದಾಳಿ ಪ್ರಾರಂಭವಾಗಿದೆಯಷ್ಟೆ. ಇನ್ನೇನು ಆಗುತ್ತೋ ಎಂಬ ಆತಂಕದ ನಡುವೆಯೇ ಕಕ್ಕಾಬಿಕ್ಕಿಯಾದ ಹುಡುಗಿಯರು ಎಲ್ಲೆಲ್ಲೋ ಓಡಲು ಶುರುವಿಟ್ಟುಕೊಂಡಿದ್ದರು. ಪೊಲೀಸರಿಗೆ ಫೋನ್ ಮಾಡಿದರೆ ಕರೆ ಸ್ವೀಕರಿಸುತ್ತಿರಲಿಲ್ಲ. ಬೇರೆ ದಾರಿ ಕಾಣದೆ ಟಿವಿ 9 ವರದಿಗಾರನಾಗಿರುವ ನನ್ನ ಗೆಳೆಯ ರಾಜೇಶ್ ರಾವ್ ಬಳಿ ಪೊಲೀಸರಿಗೆ ಫೋನ್ ಮಾಡುವಂತೆ ಹೇಳಿದೆ. ರಾಜೇಶ್ ರಾವ್ ಅವರ ಮೊಬೈಲ್ನಿಂದ ಇನ್ಸ್ಸ್ಪೆಕ್ಟರ್ ರವೀಶ್ ನಾಯಕ್ಗೆ ಕರೆ ಮಾಡಿದರು. ಆಗಲೂ ರವೀಶ್ ನಾಯಕ್ ಕರೆ ಸ್ವೀಕರಿಸಲೇ ಇಲ್ಲ.

ನಾವು ಇನ್ಸ್ಸ್ಪೆಕ್ಟರ್ಗೆ ಫೋನ್ ಕರೆ ಮಾಡುತ್ತಿದ್ದಂತೆ ನಮ್ಮ ಕ್ಯಾಮರಾಮೆನ್ ದಾಳಿಕೋರರ ಹಿಂದೆಯೇ ಹೋಗಿ ಕರ್ತವ್ಯ ನಿರ್ವಹಿಸುತ್ತಿದ್ದ. ನಾನು ಮತ್ತು ನನ್ನ ಕ್ಯಾಮರಮೆನ್ ಮಾತ್ರ ಅಲ್ಲಿದ್ದೆವು. ಅಷ್ಟರಲ್ಲಿ ಸ್ಥಳೀಯ ಸಹಾಯ ಎಂಬ ಕೇಬಲ್ ಚಾನೆಲ್ ಕ್ಯಾಮರಮೆನ್ ಶರಣ್ ಮತ್ತು ಫೋಟೋಗ್ರಾಫರ್ ವಿನಯ ಕೃಷ್ಣ ಅಲ್ಲಿಗೆ ಬಂದಿದ್ದರು. ನಾನು ಎಲ್ಲವನ್ನೂ ಮೂಕ ಪ್ರೇಕ್ಷಕನಾಗಿ ನೋಡುತ್ತಿದ್ದೇನೆ. ನನಗೇನೂ ಮಾಡಲಾರದ ಅಪರಾಧಿ ಮನೋಭಾವ ನನ್ನಲ್ಲಿ ಮೂಡಿತ್ತು. ದಾಳಿಕೋರರಲ್ಲಿ ಶೇಕಡಾ 50ಕ್ಕೂ ಅಧಿಕ ಮಂದಿ ಮಧ್ಯಪಾನ ಮಾಡಿದ್ದರು. ನಾನು ಹೇಳಿದರೂ ಕೇಳೋ ಸ್ಥಿತಿಯಲ್ಲಿ ಇರಲಿಲ್ಲ. ಈ ಜಗತ್ತಿನಲ್ಲಿ ಏನೇನೋ ಹಿಂಸೆಗಳು ನಡೆದಿರಬಹುದು. ಆದರೆ ನನ್ನ ಜೀವಮಾನದಲ್ಲಿ ಇಂತಹ ಹಿಂಸೆಯನ್ನು ನೋಡಿರಲಿಲ್ಲ. ನನ್ನ ಕ್ಯಾಮರಾಮೆನ್ ಎಲ್ಲೆಲ್ಲಿ ಹೊಡೆಯುತ್ತಾರೋ ಅಲ್ಲಲ್ಲಿ ಓಡುತ್ತಿದ್ದ. ನಾನು ನೋಡುತ್ತಿದ್ದೆ ಮತ್ತು ಸಾಧ್ಯವಾದಷ್ಟೂ ಕಿರಿಚುತ್ತಿದ್ದೆ. “ಏ ಹುಡುಗಿರಿಗೆ ಹೊಡಿಬೇಡ್ರಿ” ಎಂತ ಬೊಬ್ಬೆ ಹೊಡೆಯುತ್ತಿದ್ದೆ. ನನ್ನ ಬೊಬ್ಬೆ ನನ್ನ ಕ್ಯಾಮರಾದಲ್ಲಿ ದಾಖಲಾಗಿದೆಯೇ ವಿನಹ ದಾಳಿಕೋರರ ಹೃದಯಕ್ಕೆ ತಟ್ಟಲೇ ಇಲ್ಲ. ಹಲ್ಲೆಗೆ ಒಳಗಾದ ಯುವಕರು ಗೋಗೆರೆಯುತ್ತಿದ್ದರು. “ಪ್ಲೀಸ್ ಬಿಟ್ಟುಬಿಡಿ. ನಾವು ಬತರ್್ ಡೇ ಪಾಟರ್ಿ ನಡೆಸುತ್ತಿದ್ದೇವೆ, ಪ್ಲೀಸ್” ಎಂದು ಕಾಲಿಗೆ ಬೀಳುತ್ತಾನೆ. ಆದರೂ ಕ್ರೂರಿ ದಾಳಿಕೋರರ ಮನಸ್ಸು ಕರಗುವುದಿಲ್ಲ. ಇಷ್ಟೇ ಆಗಿದ್ದರೆ ನಾನು ಮರೆತುಬಿಡುತ್ತಿದ್ದೆ. ಆದರೆ ಮುಂದೆ ನನ್ನ ಕಣ್ಣ ಮುಂದೆ ಬಂದಿದ್ದು ಭೀಭತ್ಸ ದೃಶ್ಯಗಳು.

ನಾಲ್ವರು ಹುಡುಗರಿಗೆ ದಾಳಿಕೋರರು ಬಡಿಯುತ್ತಿರುವ ದೃಶ್ಯ ನೋಡಿ ಶಾಕ್ಗೆ ಒಳಗಾದ ಯುವತಿಯರು ದಿಕ್ಕಾಪಾಲಾಗಿ ಓಡಲು ಶುರುವಿಟ್ಟುಕೊಂಡರು. ಬಂಗಲೆಯ ತುಂಬಾ ಓಡುತ್ತಿರುವ ಯುವತಿಯರ ಹಿಂದೆ ಒಂದಷ್ಟು ದಾಳಿಕೋರರ ಓಟ ನಡೆಯುತ್ತಿತ್ತು. ನಂಬಿದರೆ ನಂಬಿ. ಬಿಟ್ಟರೆ ಬಿಡಿ. ಒಬ್ಬಳು ಹುಡುಗಿ ಒಂದನೇ ಮಹಡಿಯಿಂದ ಕೆಳಗೆ ಜಿಗಿದಿದ್ದಾಳೆ. ಅವಳನ್ನು ಹಿಡಿದುಕೊಂಡ ಇಪ್ಪತ್ತೂ ಅಧಿಕ ದಾಳಿಕೋರ ಕಾರ್ಯಕರ್ತರು ಆಕೆಯ ವಸ್ತ್ರಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ. ಆಕೆಯ ಕೆನ್ನೆಗೆ ಬಿಗಿದು, ಗೋಡೆಗೆ ನೂಕಿದ್ದಾರೆ. ಅಷ್ಟರಲ್ಲಿ ಪಿಂಕ್ ಡ್ರೆಸ್ ತೊಟ್ಟುಕೊಂಡಿದ್ದ ಹುಡುಗಿಯೊಬ್ಬಳು ಓಡಲು ಶುರುವಿಟ್ಟುಕೊಂಡಳು. ಆಕೆಯನ್ನು ಹಿಡಿದ ಗೂಂಡಾ ದಾಳಿಕೋರರು ಅಕ್ಷರಶ ಆಕೆಯನ್ನು ಬೆತ್ತಲು ಮಾಡಿದ್ದಾರೆ. ಒಂದು ತುಂಡು ವಸ್ತ್ರ ಹೊರತುಪಡಿಸಿ ವಿವಸ್ತ್ರ ಮಾಡಿದ ನಂತರ ಆಕೆಯ ಅಂಗಾಂಗಳ ಮೇಲೆ ಉದ್ದೇಶಪೂರ್ವಕವಾಗಿ ದಾಳಿ ಮಾಡಿದ್ದಾರೆ. ಇದು ನನ್ನನ್ನು ಅಕ್ಷರಶ ಅಧೀರನನ್ನಾಗಿಸಿದ ಧೃಶ್ಯ. ಈ ರೀತಿಯ ದೃಶ್ಯವನ್ನು ನಾನು ನನ್ನ ಜೀವಮಾನದಲ್ಲಿ ನೋಡಿರಲಿಲ್ಲ. ಕೇಳಿದ್ದೆ. ಇವೆಲ್ಲವೂ ವಿಶುವಲ್ ಆಗದೇ ಇರುವಂತದ್ದು. ಶೂಟಿಂಗ್ ಆಗಿದ್ದು ಸ್ವಲ್ಪವೇ ಸ್ವಲ್ಪ ಭಾಗ. ಆನಂತರ ಪಾಟರ್ಿಯಲ್ಲಿ ಪಾಲ್ಗೊಂಡಿದ್ದ ಎಲ್ಲಾ ಹುಡುಗ ಹುಡುಗಿಯರನ್ನು ಒಂದೇ ಕೋಣೆಯಲ್ಲಿ ಹಾಕಿ ಚಿಲಕ ಹಾಕಿದರು. ಇವೆಲ್ಲವೂ ನಡೆದಿದ್ದು ಮಿಂಚಿನ ವೇಗದಲ್ಲಿ. ಹೆಚ್ಚೆಂದರೆ 15 ನಿಮಿಷದಲ್ಲಿ ಇವೆಲ್ಲವೂ ಮುಗಿದು ಹೋಗಿತ್ತು.

ದಾಳಿಕೋರರ ಕಾರ್ಯಾಚರಣೆ ಒಂದು ಹಂತಕ್ಕೆ ಮುಗಿದ ನಂತರ ಪೊಲೀಸ್ ಇನ್ಸ್ಸ್ಪೆಕ್ಟರ್ ರವೀಶ್ ನಾಯಕ್, ಪೊಲೀಸ್ ಎಸೈ ಮುನಿಕಂಠ ನೀಲಸ್ವಾಮಿ ಮತ್ತು ಪೋಲೀಸ್ ಪೇದೆಗಳು ಬಂದಿದ್ದಾರೆ. ವಿಶೇಷ ಎಂದರೆ ಪೊಲೀಸರಿಗೆ ದಾಳಿಕೋರರ ಜೊತೆ ಮೊದಲೇ ಸಂಪರ್ಕ ಇರೋ ರೀತಿಯಲ್ಲಿ ಪೊಲೀಸರು ವತರ್ಿಸಿದ್ದಾರೆ. ಸುಮಾರು ಅರ್ಧ ಗಂಟೆಗಳಿಗೂ ಹೆಚ್ಚು ಕಾಲ ಪೊಲೀಸರು ದಾಳಿಕೋರರ ಜೊತೆ ಮಾತಕತೆಯಲ್ಲಿ ತಲ್ಲೀನರಾಗಿದ್ದರು. ದಾಳಿಕೋರರ ಬಂಧಿಸುವ ಬದಲು ಅವರ ಜೊತೆ ಹರಟೆ ಹೊಡೆಯುತ್ತಿರುವುದು ನನಗೆ ಆಶ್ಚರ್ಯ ಉಂಟು ಮಾಡಿತ್ತು. ಇವೆಲ್ಲಾ ನಡೆಯುತ್ತಿರಬೇಕಾದರೆ ಪಾಟರ್ಿಯಲ್ಲಿ ಪಾಲ್ಗೊಂಡಿದ್ದ ಯುವಕನೊಬ್ಬ ತಪ್ಪಿಸಿಕೊಳ್ಳಲು ಯತ್ನಿಸಿದ. ತಕ್ಷಣ ಪೊಲೀಸರು ಆ ಯುವಕನನ್ನು ವಶಕ್ಕೆ ತೆಗೆದುಕೊಂಡರು. ಪೊಲೀಸರ ವಶದಲ್ಲಿದ್ದ ಯುವಕನಿಗೆ ದಾಳಿಕೋರರು ಪೊಲೀಸರ ಸಮ್ಮುಖದಲ್ಲೇ ಹಲ್ಲೆ ನಡೆಸಿದರು.

ಅಷ್ಟರಲ್ಲಿ ನಮ್ಮ ಇನ್ನಷ್ಟೂ ಕ್ಯಾಮರಮೆನ್ಗಳು ಬಂದಿದ್ದರು. ನಾನು ನನ್ನ ಕ್ಯಾಮರಮೆನ್ ಜೊತೆ ಕಚೇರಿಗೆ ಬಂದು ಎಲ್ಲಾ ವಿಝುವಲ್ಸ್ ಬೆಂಗಳೂರು ಕಚೇರಿಗೆ ಅಪ್ಲಿಂಕ್ ಮಾಡಿದೆ. 7.45 ಕ್ಕೇ ವರದಿ ಪ್ರಕಟವಾಯಿತು. ವರದಿ ಪ್ರಕಟವಾದ ಕೆಲವೇ ನಿಮಿಷಗಳಲ್ಲಿ ನಮ್ಮ ಚಾನೆಲ್ನಲ್ಲಿ ಬರುತ್ತಿದ್ದ ವರದಿ ಮತ್ತು ದೃಶ್ಯಗಳನ್ನು ರಾಷ್ಟ್ರೀಯ ವಾಹಿನಿಗಳು ಬಳಕೆ ಮಾಡಿಕೊಂಡು ಸುದ್ಧಿ ಪ್ರಕಟಿಸಿದವು. ತಕ್ಷಣ ಇದೊಂದು ರಾಷ್ಟ್ರೀಯ ಸುದ್ಧಿಯಾಗಿ ಮಾರ್ಪಡಾಗಿತ್ತು. ಇದರಿಂದ ತೀವ್ರ ಕೋಪಗೊಂಡಿದ್ದ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ನನ್ನ ಗೆಳೆಯ, ಟಿವಿ 9 ವರದಿಗಾರ ರಾಜೇಶ್ ರಾವ್ಗೆ ದೂರವಾಣಿ ಕರೆ ಮಾಡಿದ್ದಾರೆ. ರಾಜೇಶ್ಗೆ ಸೀಮಂತ್ ಕುಮಾರ್ ಸಿಂಗ್ ಕರೆ ಮಾಡಿದಾಗ ನಾನೂ ಕೂಡಾ ರಾಜೇಶ್ ಜೊತೆಗಿದ್ದೆ. ಸೀಮಂತ್ ಮಾತುಗಳನ್ನು ರಾಜೇಶ್ ಲೌಡ್ ಸ್ಪೀಕರ್ ಇಟ್ಟು ನನಗೆ ಕೇಳಿಸುತ್ತಿದ್ದ. “ನವೀನ ನ್ಯೂಸ್ ಯಾಕೆ ಮಾಡಬೇಕಿತ್ತು. ಅವನಿಗೆ ಅಕ್ಕ ತಂಗಿ ಇಲ್ಲವಾ ? ಅವರಿಗೆ ಹೊಡೆಯಲ್ವ ? ಅದನ್ನು ಟಿವಿಯಲ್ಲಿ ತೋರಿಸ್ತಾರಾ ? ನೋಡ್ಕೋತೀನಿ ನಾನು ಅವನನ್ನು. ಅವನು ಮಂಗಳೂರಿನಲ್ಲಿ ತಾಲೀಬಾನ್ ಸಂಸ್ಕೃತಿ ಇದೆ ಎಂದು ಹೇಳಿದ. ಅಸ್ಸಾಂನ ಘಟನೆಗೆ ಈ ಘಟನೆಯನ್ನು ಹೋಲಿಸಿ ಲೈವ್ ಕೊಟ್ಟ. ಈ ಬಾರಿ ಅವನನ್ನು ಬಿಡುವುದಿಲ್ಲ. ಈ ಕೇಸ್ನಲ್ಲಿ ಅವನನ್ನು ಫಿಕ್ಸ್ ಮಾಡುತ್ತೇನೆ. ಅವನಿಗೆ ಎಷ್ಟು ಬೇಕಾದರೂ ಇಂಪ್ಲ್ಯೂಯನ್ಸ್ ಇರಲಿ. ಫಿಕ್ಸ್ ಮಾಡುವುದು ಮಾಡೋದೆ” ಎಂದು ಸೀಮಂತ್ ಹೇಳುತ್ತಿದ್ದರು. “ಹುಡುಗಿಯರಿಗೆ ಮತ್ತು ಹುಡುಗರಿಗೆ ಹೊಡೆದಿದ್ದು ದೊಡ್ಡ ವಿಷಯ ಅಲ್ಲ. ಅದನ್ನು ಚಿತ್ರೀಕರಿಸಿದ್ದು ಮಹಾ ಅಪರಾಧ,” ಎಂಬುದಷ್ಟೇ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಮಾತಿನ ಅರ್ಥ ಎಂಬುದಂತೂ ಸ್ಪಷ್ಟ.

ಇಂದು ಬೆಳಿಗ್ಗೆ ನನಗೆ ಇನ್ನೊಂದು ಶಾಕ್ ಕಾದಿತ್ತು. ನಾನು ಯಾರ ಪರವಾಗಿ ಸುದ್ದಿ ಮಾಡಿದ್ದೇನೋ ಅವರೇ ನನ್ನ ವಿರುದ್ಧ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ನನಗೆ ಸ್ಪಷ್ಟವಾಗಿ ಗೊತ್ತಿತ್ತು. ಹಲ್ಲೆಗೊಳಗಾದ ಯಾವುದೇ ಹುಡುಗ ಹುಡುಗಿ ಸ್ವ ಇಚ್ಚೆಯಿಂದ ನನ್ನ ವಿರುದ್ಧ ದೂರು ನೀಡಲು ಸಾದ್ಯವಿಲ್ಲ. ಪ್ಲೀಸ್ ಹೊಡಿಯಬೇಡಿ ಎಂದು ನಾನು ಸಾಧ್ಯವಾದಷ್ಟು ಬೊಬ್ಬೆ ಹಾಕುತ್ತಿದ್ದದ್ದು ಹಲ್ಲೆಗೊಳಗಾದ ಯುವತಿಯರಿಗೆ ಗೊತ್ತಿತ್ತು ಅಂದುಕೊಳ್ಳುತ್ತೇನೆ. ಸಂಜೆಯಾಗುವಾಗ ನನ್ನ ಡೌಟ್ ಕ್ಲೀಯರ್ ಆಗಿತ್ತು. ಮಾಧ್ಯಮದ ಜೊತೆ ಮಾತನಾಡಿದ ಹಲ್ಲೆಗೊಳಗಾದ ಯುವಕರು “ನಾವು ಮಾಧ್ಯಮ ಮಂದಿ ವಿರುದ್ಧ ದೂರು ನೀಡಿಲ್ಲ. ನಮಗೆ ಮಾಧ್ಯಮದವರು ಸಪೋಟರ್್ ಮಾಡಿದ್ದಾರೆ” ಎಂದರು.

ಅದೇನೇ ಇರಲಿ. ಮಂಗಳೂರು ಗ್ರಾಮಾಂತರ ಪೊಲೀಸರು ನನ್ನ ವಿರುದ್ಧ ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ನಾವು ಚಿತ್ರೀಕರಿಸಿದ ವಿಝುವಲ್ಸ್ ಆಧಾರದಲ್ಲೇ ಈವರೆಗೆ 8 ಮಂದಿ ದಾಳಿಕೋರರನ್ನು ಬಂಧಿಸಿದ್ದಾರೆ. ನಾವು ಒಂದು ಆಕ್ಷೇಪಾರ್ಹ ಘಟನೆಯನ್ನು ಚಿತ್ರೀಕರಿಸಿ ಸುದ್ದಿ ಪ್ರಸಾರ ಮಾಡಿದ್ದೇವೆಯೇ ಹೊರತು ಆಕ್ಷೇಪಾರ್ಹ ದೃಶ್ಯವನ್ನಲ್ಲ ಎಂಬುದು ನನಗೆ ಸ್ಪಷ್ಟತೆ ಇದೆ. ಮಂಗಳೂರಿನಲ್ಲಿ ಜುಲೈ 28 ರಾತ್ರಿ ನಡೆದ ದಾಳಿ ಹೊಸದೇನೂ ಅಲ್ಲ. ಪ್ರತೀ ವಾರಕ್ಕೊಂದು ಇಂತಹ ಘಟನೆ ನಡೆಯುತ್ತದೆ. ಮುಸ್ಲಿಂ ಹುಡುಗ ಹಿಂದೂ ಹುಡುಗಿ ಒಟ್ಟಿಗಿದ್ದರೆ ಹಿಂದೂ ಮತೀಯವಾದಿಗಳು ಅವರಿಗೆ ಹಲ್ಲೆ ಮಾಡಿ ಮತೀಯವಾದಿಗಳೇ ಅವರನ್ನು ಠಾಣೆಗೆ ಕೊಂಡೊಯ್ದು ಪೊಲೀಸರ ವಶಕ್ಕೆ ನೀಡುತ್ತಾರೆ. ಪೊಲೀಸರು ಪ್ರೇಮಿ(ಗೆಳೆಯರು)ಗಳ ತಂದೆ ತಾಯಿಯನ್ನು ಕರೆಸಿ ಎಚ್ಚರಿಕೆ ನೀಡಿ ಕಳುಹಿಸುತ್ತಾರೆ. ನಾವು ಶೂಟಿಂಗ್ ಮಾಡದೇ ಇದ್ದರೆ ಇಲ್ಲೂ ಅಷ್ಟೇ ನಡೆಯುತ್ತಿತ್ತು. ನಮ್ಮ ಶೂಟಿಂಗ್ನಿಂದ ಕೋಮುವಾದಿಗಳ ಒಂದು ಕ್ರೂರ ಮುಖ ಬಯಲಾಗಿದೆ ಮತ್ತು ಎಂಟು ಮಂದಿ ಬಂಧಿತರಾಗುವಂತೆ ಮಾಡಿದೆ. ಯಾರು ಏನೇ ಅನ್ನಲ್ಲಿ. ಯಾವ ಕೇಸೇ ಬೀಳಲಿ. ನಾನು ಪತ್ರಕರ್ತನಾಗಿ ಸಮಾಜಕ್ಕೆ ಏನೋ ನ್ಯಾಯ ನೀಡಿದ್ದೇನೆ ಅನ್ನಿಸುತ್ತಿದೆ. ಅಳುತ್ತಿರುವ ನನ್ನ ಮನಸ್ಸಿಗೆ ಸಧ್ಯ ಅಂತಹ ಸಮಾಧಾನ ಸಾಕು.

ನನ್ನ ಮೇಲೆ ದೂರು ನೀಡಿರುವುದು ಮತ್ತು ನನ್ನ ವಿರುದ್ಧ ಎಫ್ಐಆರ್ ದಾಖಲಿಸಿರುವುದು ದೊಡ್ಡ ವಿಷಯವೇ ಅಲ್ಲ. ನನ್ನ ಮೇಲಿನ ಎಫ್ಐಆರ್ನಿಂದ ದಾಳಿಕೋರ ಕ್ರೂರಿ ಮೃಗಗಳಿಗೆ ಶಿಕ್ಷೆಯಾಗುವುದಾದರೆ ನನ್ನ ಮೇಲಿನ ಎಫ್ಐಆರನ್ನು ನಾನು ಖುಷಿ ಪಡುತ್ತೇನೆ. ಯಾವುದಾದರೂ ಒತ್ತಡಕ್ಕೆ ಮಣಿದು ಆರೋಪದಿಂದ ನನ್ನನ್ನು ಬಿಡುಗಡೆ ಮಾಡುವಾಗ ಅಂತಹ ಬಿಡುಗಡೆಯಿಂದ ಆರೋಪಿ ದಾಳಿಕೋರರಿಗೆ ಲಾಭವಾಗುವುದಾದರೆ ಆಂತಹ ಬಿಡುಗಡೆ ನನಗೆ ಬೇಕಾಗಿಲ್ಲ. ನನ್ನ ಸಮ್ಮುಖದಲ್ಲೇ ನನ್ನ ಸಹೋದರಿಯರ ಮೇಲೆ ದಾಳಿ ನಡೆಸಿದ ದಾಳಿಕೋರರಿಗೆ ನ್ಯಾಯಾಲಯ ಅದೆಂತಹ ಶಿಕ್ಷೆ ನೀಡಿದರೂ ನ್ಯಾಯ ನೀಡಿದಂತಾಗುವುದಿಲ್ಲ. ಆದರೂ ಅವರಿಗೆ ಶಿಕ್ಷೆಯಾಗಬೇಕು.

36 thoughts on “ಮಂಗಳೂರು ಘಟನೆಯಲ್ಲಿ ಪತ್ರಕರ್ತನಾಗಿ ನಾನು ಸರಿಯಾಗಿದ್ದೀನಾ?

 1. yusuf patel

  nimma vrutti dharma paalisiddiri.polisaru bettalaagiddare.police & pundara akrama sambanda e prakarana bayalu maadide.polisaru bhayada vaatavaranadalli kelasa maduttiddare,idu apaayakaari belavanige.police network failur agide.purvagraha peeditaragi daali nadesiddare.polisarannu yaru command maaduttiddare.avamaanita yuva jananga ugra,naxal,moolabootavadigalaadare vyavasteye kaaranavagalide.bettalaadaga bai mucchisudu sahaja hedarabedi nimma dharma palici.

  Reply
 2. g.mahanthesh.

  ಒಬ್ಬ ವರದಿಗಾರನಾಗಿ ಏನೆಲ್ಲಾ ಮಾಡಬೇಕಿತ್ತು ಅದನ್ನೆಲ್ಲಾ ನೀವು ಮಾಡಿದ್ದೀರಿ. ಇದಕ್ಕೆ ನೀವು ಅಂಜುವುದು ಬೇಡ. ನೀವು ಮಾಡಿದ್ದ ಕರೆಯನ್ನ ಪೊಲೀಸರು ಸ್ವೀಕರಿಸಿದ್ದರೇ ಬಹುಶಃ ಅನಾಹುತ ತಪ್ಪುತ್ತಿತ್ತೇನೋ? ನಿಜಕ್ಕೂ ಅಲ್ಲಿ ದಿನ ನಿತ್ಯವೂ ಹಲ್ಲೆಯಾಗುತ್ತಿರುವುದು ತುಳು ಸಂಸ್ಕೃತಿಯ ಮೇಲೆ. ಏಕ ಸಂಸ್ಕೃತಿಯನ್ನ ಪ್ರತಿಷ್ಠಾಪಿಸುವ ರಭಸದಲ್ಲಿ ರಣ ಹದ್ದುಗಳಂತೆ ಹಿಂದೂ ವಕ್ತಾರರೆನಿಸಿಕೊಂಡಿರುವ ಪುಂಡು ಪೋಕರಿಗಳು ವಿಷ ಗಾಳಿಯನ್ನ ಬೀಸುತ್ತಿದ್ದಾರೆ. ಆದರೇನೂ ಮಾಡುವುದು…? ಪೊಲೀಸರು ಕೋಮುವಾದಿಕರಣಗೊಂಡಿದ್ದಾರಲ್ಲಾ…..?

  Reply
 3. Ramakrishna Bhat

  ನಿಮ್ಮ ಕ್ರಮಕ್ಕೆ ಶ್ಲಾಘನೆ.

  ದಾಳಿಕೋರರು ಮಾಡಿದ್ದು ಕೇವಲ ದೌರ್ಜನ್ಯ. ಅವರು ಸಮಾಜ ಕಳಕಳಿ ಇರುವವರಾಗಿದ್ರೆ ಆ ರೀತಿ ಮಾಡಬಾರದ್ದಿತ್ತು. ಪಾನಮತ್ತರಾಗಿ ಅಮಾಯಕವಾಗಿ ವರ್ತಿಸಿ ಥಳಿಸಿ ಹೀನಾಯ ಕೃತ್ಯ ಮಾಡುವುದು ಹಿಂದೂ ಧರ್ಮದ ಸಂರಕ್ಷಣೆಯೇ ?!! ಯಾವುದೋ ಕಾರಣಕ್ಕೆ ದಾರಿತಪ್ಪಿದ್ದರೂ ಅವರನ್ನ ಜವಾಬ್ದಾರಯುತರನ್ನಾಗಿ ಪರಿವರ್ತಿಸಲು ಪ್ರಯತ್ನಿಸಬೇಕಿತ್ತೇ ಹೊರತು ಏಕಾಏಕಿ ಈ ಕೃತ್ಯ ಎಸಗಿದ್ದು ನಿಜವಾಗಿ ಹಿಂದೂ ಧರ್ಮವನ್ನು ಕಡೆಗೆಣಿಸಿದ್ದಕ್ಕೆ ಸಮ. ಅವರನ್ನು ಶಿಕ್ಷಿಸಲು ಹೊರಟ ಇವರು ಮಾತ್ರ ಎಷ್ಟರ ಮಟ್ಟಿಗೆ ಯೋಗ್ಯರು ? ಅವರನ್ನು ಹಿಡುದು ಸದಾಚಾರ ಪ್ರವೃತ್ತಿಯನ್ನು ಬೋಧಿಸಿ ಪರಿವರ್ತನೆ ಮಾಡಬೇಕಿತ್ತೇ ಹೊರತು ಈ ರೀತಿಯ ಕೃತ್ಯ ತೀರಾ ನಾಚಿಕೆಗೇಡು. ಇದು ಮರೆಮಾಚಿ ಇನ್ನೊಂದು ಕಡೆ ಪುನರಾವರ್ತನೆಗೆ ಪ್ರಚೋದನೆ ಆದೀತೇ ಹೊರತು ನಿಜವಾದ ಸಂರಕ್ಷಣೆ ಆಗಲಾರದು.

  Reply
 4. ashoka

  great naveen bai…neevu nimma karthavya paalisiddeeri.hindu jaagarana vedikeyavara kuthanthra yeega bayalaythu.avarige akka thangiyaru illada kaarana avru e reethi madidru.bharatha deshadalli yellaru samanaru yendu avru yaavatthu enisalla.polisaru komuvadigalu.nimma melina f.i.r adstu bega hogali yendu sevaralli bedutthene….jai hind

  Reply
 5. karna

  ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ದೊಡ್ಡ …… ಇಂತ ಅಧಿಕಾರಿಗಳು ಇರೋವರೆಗೂ ಈ ಘಟನೆಗಳು ನಿಲ್ಲಲ್ಲ ….

  Reply
 6. ರಾಕೇಶ್ ಶೆಟ್ಟಿ

  ಪೋಲಿಸ್ ಇಲಾಖೆಯ ತಪ್ಪು ಮುಚ್ಚಿಕೊಳ್ಳಲು ಉಳಿದೆಲ್ಲ ರೀತಿಯ ಪ್ರಯತ್ನ ನಡೆಯುತ್ತಿದೆ. ಇವ್ರು ಸರಿಯಿದ್ದರೆ ಇಂತ ಸಂಘಟನೆಗಳ್ಯಾಕೆ ಇರುತಿದ್ದವು? ಮತ್ತು ಇಂತ ಸಂಘಟನೆಗಳಿಗೆ ಸಿಗುವ ಮಾಹಿತಿ ಪೋಲಿಸರಿಗಿಲ್ಲ ಅಂದರೆ ಅದು ಇಲಾಖೆಯ ವೈಫಲ್ಯ ಅಲ್ಲವೇ?
  ನಿಮ್ಮ ವ್ಯಾಪ್ತಿಯಲ್ಲಿ ಮಾಡಬಹುದಾದನ್ನು ನೀವು ಮಾಡಿದ್ದಿರಿ ನವೀನ್, ಬೆತ್ತಲೆ ರಾಜ್ಯದೊಳಗೆ ಮೈ ಮುಚ್ಚಿದವರೆ ಚೋರರಾಗುವುದು.

  Reply
 7. Oduga

  ನೀವು ಅವರ ಬಾಸ್ ಗಳ ಮುಖವಾಡವನ್ನು ಹಾಗೂ ಅವರ ಅಸಹಾಯಕತೆ -ಸಹಕಾರದ ಮುಖವಾಡವನ್ನು ಕಳಚಿ ಜಗತ್ತಿಗೆ ತೋರಿಸಿದ್ದೀರಿ, ವರದಿಯಾಗಬಾರದ ಅಥವಾ ಯಾವುದೇ ಮೂಲೆಯಲ್ಲಿ ಸಣ್ಣದಾಗಿ ವರದಿಯಾಗಬೇಕಾಗಿದ್ದ ಮಂಗಳೂರಿನ ಪ್ರತಿನಿತ್ಯದ ಘಟನೆಯನ್ನು ನೀವು ನಾಗರೀಕ ಸಮಾಜದ ಮುಂದಿಟ್ಟಿದ್ದೀರಿ. ಕೇಸ್ ದಾಖಲಿಸಲಾಗದ ಅಥವಾ ಯಾವುದೇ ಸಣ್ಣ ಪುಟ್ಟ ಕೇಸ್ ದಾಖಲಿಸಲಾಗುವಂತಹ ಅಪರಾಧ (ಕ್ಷಮಿಸಿ, ಸಂಸ್ಕೃತಿ ರಕ್ಷಣ್)ಗಳನ್ನು ನೀವು ಗೂಂಡಾ ಕಾಯ್ದೆಯ ಅಡಿಯಲ್ಲಿ ದಾಖಲಿಸುವಂತೆ ಒತ್ತಡವನ್ನು ಸೃಷ್ಟಿಸಿದ್ದೀರಿ. (ಒತ್ತಡ ಯಶಸ್ವಿಯಾಗುವುದು ಬೇರೆ ವಿಷಯ.) ಇಷ್ಟೆಲ್ಲಾ ಮಾಡಿ ನೀವು ಪೋಲಿಸರು ನಿಮ್ಮ ವಿರುದ್ಧ ಕ್ರಮ ಕೈಗೊಳ್ಳದಿರುತ್ತಾರ? ಅಮಾಯಕರನ್ನೇ ಬಿಡದ ಇವರು, ನಿಮ್ಮನ್ನು ಬಿಟ್ಟಾರೆಯೇ?
  ಅಭಿನಂದನೆಗಳು ನವೀನ್, ಇಡಿಯ ನಾಗರೀಕ ಹಾಗೂ ಪತ್ರಕತ೯ ಸಮುದಾಯ ನಿಮ್ಮೊಂದಿಗಿದೆ.

  Reply
 8. ಪ್ರಜೆ

  ಅನುಮಾನವೇ ಇಲ್ಲ; ನೀವು ಮಾಡಿದ್ದರಲ್ಲಿ ಎಳ್ಳಷ್ಟೂ ತಪ್ಪಿಲ್ಲ. ಓರ್ವ ಪತ್ರಕರ್ತನಾಗಿ ಸಮಾಜದಲ್ಲಿನ ಅನ್ಯಾಯಕ್ಕೆ ಕನ್ನಡಿ ಹಿಡಿದಿದ್ದೀರಿ. ಮಂಗಳೂರು ಜಿಲ್ಲೆಯ ಮಂಗಗಳಿಗೆ ಕಡಿವಾಣ ಹಾಕಬೇಕಿದ್ರೆ ನಿಮ್ಮಂಥವರ ಸಂಖ್ಯೆ ಹೆಚ್ಚಬೇಕು. ನಕಲಿ ಸಂಸ್ಕೃತಿ ರಕ್ಷಕರ ಸಂತಾನಕ್ಕೆ ಧಿಕ್ಕಾರ

  Reply
 9. h pattabhirama somayaji

  naveen soorinje is an upright journalist. without him this and similar incidents will not see the light of day. seemanth kumar singh wants to take revenge on naveen because naveen has always exposed atrocities and that police have always worked hands in glove with the criminal sangh parivar: in fact, recently the police website had rss activities on it.
  naveen needs to be supported by all sane people

  Reply
 10. RAGHAVENDRA NAVADA

  ಮಾಧ್ಯಮದವರಿಗೆ ಕರ್ತವ್ಯಪ್ರಜ್ನೆ ಮೊದಲೊ ಅಥವಾ ಸಾಮಾಜಿಕ ಜವಾಬ್ದಾರಿ ಮತ್ತು ಸಮಯಪ್ರಜ್ನೆ ಮೊದಲೊ????????ದಯವಿಟ್ಟು ಉತ್ತರಿಸುವಿರಾ?????????

  Reply
  1. kumar

   navadre dakshina kannadadalli police navaru hege kelasa madthare anta yellarigu tiliduruva vishaya, sangaparivarada anta illade yenu madolla avaru, matte 100 ke dial madidre bartha ra avaru

   Reply
 11. vijaya kumar

  I am not educated to decide who is correct or not ? But Naveen Sir, hands off to you…. we are all there with you.

  Reply
 12. Kabeer

  Good Job Mr.Naveen, I thnx fr ur Media team. what u did it makes very helpfull to under estimate the culprits.Thank u

  Reply
 13. prasad raxidi

  ಮೂರ್ಖ ಪುಂಡರು ಸಿಕ್ಕಿಬಿದ್ದು ಶಿಕ್ಷೆಗೊಳಗಾಗಲೂ ಬಹುದು, ಆದರೆ ಅವರ ಹಿಂದಿರುವ ಅಮಾನುಷ ಧೂರ್ತರು ಸಿಕ್ಕಿ ಬೀಳುವುದೇ ಇಲ್ಲ.

  Reply
 14. anand prasad

  ಸಂವಿಧಾನಬಾಹಿರ ಶಕ್ತಿಗಳು ಚುನಾಯಿತ ಸರಕಾರದ ನಿಯಂತ್ರಣ ಹೊಂದಿರುವಾಗ ಅಂಥ ಸರಕಾರವು ಧರ್ಮದ ಹೆಸರಿನಲ್ಲಿ ನಡೆಸುವ ಗೂಂಡಾಗಿರಿಗೆ ರಕ್ಷಣೆ ನೀಡಲು ಬದ್ಧವಾಗಿರುವಾಗ ಇವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂಬ ಸರ್ಕಾರದ ಮಾತು ಕೇವಲ ಕಣ್ಣೊರೆಸುವ ತಂತ್ರವಷ್ಟೇ. ಸಂವಿಧಾನಬಾಹಿರ ಶಕ್ತಿಗಳು ಅಧಿಕಾರದಲ್ಲಿ ಇರುವವರೆಗೆ ಧರ್ಮದ ಹೆಸರಿನಲ್ಲಿ ನಡೆಸುವ ಪುಂಡಾಟಿಕೆಗೆ ಶಿಕ್ಷೆ ಆಗುವ ಸಾಧ್ಯತೆ ಇಲ್ಲ. ಕೆಲವು ದಿನಗಳ ನಂತರ ಪ್ರತಿಭಟನೆ ಎಲ್ಲ ತಣ್ಣಗಾದ ನಂತರ ಧಾರ್ಮಿಕ ಗೂಂಡಾಗಳ ಮೇಲೆ ಹಾಕಿದ ಕೇಸನ್ನು ಸರ್ಕಾರವು ಹಿಂದೆಗೆದುಕೊಳ್ಳುವುದು ಬಹುತೇಕ ಖಚಿತ. ಚುನಾಯಿತ ಸರಕಾರವು ಸಂವಿಧಾನಬಾಹಿರ ಮೂಲಭೂತವಾದಿ ಶಕ್ತಿಗಳ ಅಡಿಯಾಳಾಗಿರುವವರೆಗೆ ಇದನ್ನು ತಪ್ಪಿಸಲು ಸಾಧ್ಯವಿಲ್ಲ. ಚುನಾಯಿತ ಸರ್ಕಾರಗಳನ್ನು ಮೂಲಭೂತವಾದಿ ಸಂವಿಧಾನಬಾಹಿರ ಶಕ್ತಿಗಳು ನಿಯಂತ್ರಿಸುವ ವ್ಯವಸ್ಥೆ ಇರುವ ಪಕ್ಷವನ್ನು ಧರ್ಮದ ಹೆಸರಿನ ಸೋಗಿಗೆ ಮರುಳಾಗಿ ನಾವೇ ಅಧಿಕಾರಕ್ಕೆ ತರುವ ಮೂರ್ಖತನ ಮಾಡುತ್ತಿರುವಾಗ ನಮ್ಮನ್ನು ನಾವೇ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಾಗಿದೆ. ಧರ್ಮದ ಹೆಸರಿನಲ್ಲಿ ವಾರ್ಷಿಕವಾಗಿ ಸಮಾಜೋತ್ಸವ ಏರ್ಪಡಿಸಿ ಹಿಂದೂ ಮತಬ್ಯಾಂಕ್ ಅನ್ನು ಜೀವಂತವಾಗಿಟ್ಟು ಮತ್ತೆ ಚುನಾವಣೆಗಳಲ್ಲಿ ಇಂಥ ಮೂಲಭೂತವಾದಿ ಶಕ್ತಿಗಳೇ ಗೆಲ್ಲಲು ನಾವೇ ಕುರಿಗಳಂತೆ ಓಟು ಹಾಕುವ ಬುದ್ಧಿವಂತಿಕೆಯನ್ನು ರಾಜ್ಯದಲ್ಲೇ ಅತ್ಯಂತ ಸಾಕ್ಷರ ಜಿಲ್ಲೆ ಎನಿಸಿಕೊಂಡಿರುವ ದಕ್ಷಿಣ ಕನ್ನಡದ ಜನ ಮಾಡುತ್ತಿರುವಾಗ ಇಲ್ಲಿ ಪ್ರಜಾಪ್ರಭುತ್ವ ಎಂದೋ ನಾಶವಾಗಿದೆ. ಇಲ್ಲಿ ಅಧಿಕಾರದಲ್ಲಿರುವುದು ಧಾರ್ಮಿಕ ಮೂಲಭೂತವಾದವೇ. ಬಹುತೇಕ ಜನ ಇಂಥ ಮೂಲಭೂತವಾದಿ ಚಿಂತನೆಗೆ ತಮ್ಮ ಮೆದುಳನ್ನು, ಚಿಂತನಾಶಕ್ತಿಯನ್ನು ಒತ್ತೆಯಿಟ್ಟಿರುವ ಕಾರಣ ಇದರ ವಿರುದ್ಧ ಜಾಗೃತಿ ಮೂಡಿಸುವುದು ಬಹಳ ಕಷ್ಟ. ಧಾರ್ಮಿಕ ವಿಚಾರಗಳ ಮುಂದೆ ವಿಚಾರಶೀಲರ ಮಾತಿಗೆ ಕಿವಿಗೊಡುವವರು ಇಲ್ಲದಿರುವಾಗ ಇಂಥದ್ದೆಲ್ಲ ಆಗುತ್ತಿರುತ್ತದೆ.

  Reply
 15. shivaprasad

  ene adaruu nimage hudugiyara mele naija kalaji iruttiddare nivu adannu atara prasara adi avara manahani maduttiralilla

  Reply
 16. k.g.suresh

  ಹೆದರಬೇಡಿ ನವೀನ್ ಕಾನೂನು ಕುರುಡು ಅನ್ನೋದನ್ನು ಸ್ವತಃ ಕಾನೂನು ಪಾಲಿಸುವ ಪೊಲೀಸರೇ ಈ ಮೂಲಕ ತೋರಿಸಿಕೊಟ್ಟಿದ್ದಾರೆ. ಸತ್ಯ ಇಂದಲ್ಲ ನಾಳೆ ಗೆಲ್ಲಲೇ ಬೇಕು. ಧೈರ್ಯವಾಗಿರಿ.

  Reply
 17. mark

  naveen ravare nimma karthavavannu sariyagi madiddira namma rayadalli police navaru bari rajakiya nayakara kai gombegalu edakkella karana b. j..p sarakara e sarakarakke dikkaravirali

  Reply
 18. sathyamurthy anandur

  ಪ್ರಿಯ ನವೀನ್
  ನಿಮ್ಮ ಆತಂಕದ ಬರಹ ನೋಡಿದೆ. ಬಹುಶಃ ಪತ್ರಕರ್ತರ ಜೀವನದಲ್ಲಿ ಇಂಥ ಅವಕಾಶಗಳು ಕ್ರೌರ್ಯದ ನೆರಳಲ್ಲಿ ಬರುತ್ತಲೇ ಇರುತ್ತವೆ. ಕೆಲವೊಮ್ಮೆ ನಮ್ಮ ಕರ್ಮ…. ಕಣ್ಣೆದುರು ನಡೆದಿದ್ದನ್ನ ಬರೆಯುವುದೋ ಚಿತ್ರೀಕರಿಸುವುದೋ ಒಟ್ತಿನಲ್ಲಿ ಪತ್ರಕರ್ತನ ಕೆಲಸ ಮಾಡಬೇಕಾಗುತ್ತದೆ. ಇನ್ನೂ ಕೆಲವೊಮ್ಮೆ ನಮ್ಮ ಜಾಗೃತ ಮನಸ್ಸು ಪಡೆಯುವ ಸಮಯಸ್ಫೂರ್ತಿ ಹಾಗೂ ಅವಕಾಶ ಇಂಥ ಸಂದರ್ಭಗಳನ್ನು ಸೃಷ್ಟಿ ಮಾಡುತ್ತವೆ. ನಿಮ್ಮ ಕಾಳಜಿಗೆ ಪ್ಅತ್ರಕರ್ತನಾಗಿ ನನಗೆ ಸಂತಸ. ಮಾನಗೇಡಿ ನಾಯಿಗಳ ವರ್ತನೆಗೆ ಅಸಹ್ಯ ಅನ್ನಿಸುತ್ತದೆ, ಇಂಥ ಕ್ರೌರ್ಯದ ನಡುವೆ ನಾವಿದ್ದೀವಾ ಅಂತ.ನಿಮಗೆ ವಂದನೆ. ನಿಮ್ಮ ಜೊತೆ ನಾವಿದ್ದೇವೆ.
  -ಸತ್ಯಮೂರ್ತಿ ಆನಂದೂರು, ಬೆಂಗಳೂರು

  Reply
 19. Mahesh

  Dear Naveen,

  Neevu chitreekarisida video_galu police department jothe share madabekitte vinaha…24×7 news channel_ge alla…adondu local suddiyagi irabekitte vinaha not a national news. Neevobba samajika javabdariya vyakthiyagiddalli adannu pade pade news_lli torisabaradittu. neevoo aa huduga, hudugiyara shoshaneyalli paludara aagiddeeri…

  Reply
 20. anand prasad

  ಈ ಘಟನೆಯ ಚಿತ್ರೀಕರಣ ಪೊಲೀಸರಿಗೆ ಕೊಡಬೇಕಿತ್ತು ಎಂಬುದು ಸಮಂಜಸವಲ್ಲ. ವೀಡಿಯೊದಲ್ಲಿ ತೋರಿಸಿದ ಹುಡುಗಿಯರ ದೃಶ್ಯಗಳು ಯಾರದ್ದೆಂದು ಗುರುತಿಸುವ ರೀತಿಯಲ್ಲಿ ಅವರು ಪ್ರಸಾರ ಮಾಡಿಲ್ಲ. ಇಲ್ಲಿ ಅವರಿಗೆ ಹೊಡೆಯುವ ದೃಶ್ಯಗಳನ್ನು ಪ್ರಸಾರ ಮಾಡಲಾಗಿದೆಯೇ ವಿನಃ ವೀಡಿಯೊ ನೋಡಿ ಇದು ಯಾರದ್ದೆಂದು ಗುರುತಿಸುವ ಸಾಧ್ಯತೆ ಟಿವಿಯಲ್ಲಿ ಪ್ರಸಾರ ಮಾಡಿದ ವೀಡಿಯೊದಲ್ಲಿ ಕಂಡು ಬರಲಿಲ್ಲ. ಹುಡುಗರ ವೀಡಿಯೊಗಳನ್ನು ಮಾತ್ರ ಯಾರು ಎಂದು ಗುರುತಿಸುವ ರೀತಿಯಲ್ಲಿ ಪ್ರಸಾರ ಮಾಡಲಾಗಿದೆ. ಇದರಿಂದ ಹುಡುಗರ ಬಾಳಿಗೆ ಯಾವುದೇ ತೊಂದರೆ ಆಗುವ ಸಾಧ್ಯತೆ ಕಾಣುವುದಿಲ್ಲ. ಹುಡುಗಿಯರ ಗುರುತು ಸಿಗುವ ರೀತಿ ಪ್ರಸಾರ ಮಾಡಿದ್ದಿದ್ದರೆ ನಮ್ಮಂಥ ಪ್ರತಿಗಾಮಿ ಸಮಾಜದಲ್ಲಿ ಅವರಿಗೆ ತೊಂದರೆ ಆಗುವ ಸಂಭಾವ್ಯತೆ ಇತ್ತು. ಈ ವೀಡಿಯೊವನ್ನು ದೇಶವ್ಯಾಪಿ ಪ್ರಸಾರ ಮಾಡಿದ ಕಾರಣ ಧಾರ್ಮಿಕ ಮೂಲಭೂತವಾದಿ ಸಂಘಟನೆಗಳು ಯಾವ ರೀತಿ ಮತಿಹೀನವಾಗಿ ವರ್ತಿಸುತ್ತವೆ ಎಂಬುದು ದೇಶ ಹಾಗೂ ರಾಜ್ಯಾದ್ಯಂತ ಪ್ರತ್ಯಕ್ಷ ನೋಡಿದಂತಾಗಿ ತೀವ್ರ ಪ್ರತಿಭಟನೆ ಹಾಗೂ ಜಾಗೃತಿಗೆ ಕಾರಣವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ಇಂಥ ಸಂಘಟನೆಗಳಿಗೆ ನೀರು ಗೊಬ್ಬರ ಹಾಕಿ ಬೆಳೆಸುತ್ತಿರುವ ರಾಜಕೀಯ ಪಕ್ಷಕ್ಕೆ ಹಿನ್ನಡೆ ಉಂಟುಮಾಡುವ ಸಂಭವ ಇದೆ, ತನ್ಮೂಲಕ ಪ್ರಜಾಪ್ರಭುತ್ವ ಮೌಲ್ಯಗಳ ಪರವಾಗಿ ಸ್ವಲ್ಪವಾದರೂ ಜಾಗೃತಿಯನ್ನು ತರುವ ಸಂಭವ ಇದೆ. ಹೀಗಾಗಿ ಇದನ್ನು ಪ್ರಸಾರ ಮಾಡಿದ್ದು ಬಹಳ ಉತ್ತಮ ಕಾರ್ಯ ಎಂಬುದರಲ್ಲಿ ಸಂದೇಹವೇ ಇಲ್ಲ.

  Reply
 21. ರವೀಶ್

  ನನಗೊಂದು ಅರ್ಥ ಆಗಿಲ್ಲ ರವೀಶ್ ನಾಯಕ್ ಫೋನ್ ಎತ್ತಿಲ್ಲ ಸರಿ ….ಆದರೆ 100 ಇತ್ತಲ್ಲ ಅದಿಕ್ಕೆ ಫೋನ್ ಮಾಡಬಹುದಿತ್ತಲ್ಲ? ಆವಾಗ ಪೋಲಿಸರು ಬರುತ್ತಿದ್ದರಲ್ಲ?

  Reply
  1. anand prasad

   ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೊಲೀಸರು ಹಾಗೂ ಸಂಘ ಪರಿವಾರ ಕೈಜೋಡಿಸಿರುವ ಕಾರಣ ಇಂಥ ದೂರುಗಳನ್ನೆಲ್ಲ ಪೊಲೀಸರು ಸಂಘ ಪರಿವಾರದ ನಿರ್ದೇಶನದ ಅನುಸರ ನಿರ್ಲಕ್ಷಿಸುತ್ತಾರೆ ಹಾಗೂ ಸಂಘ ಪರಿವಾರದ ಸಂಘಟನೆಗಳ ಎಲ್ಲ ಕೃತ್ಯಗಳನ್ನು ನೋಡಿಯೂ ನೋಡದಂತೆ ಇರುತ್ತಾರೆ. ಹೀಗಾಗಿ ಯಾವ ಪೊಲೀಸರಿಗೆ ಫೋನ್ ಮಾಡಿದರೂ ಪರಿಣಾಮ ಒಂದೇ. ಹೀಗಾಗಿ ನವೀನ್ ಅವರು ಕನಿಷ್ಠ ಮೂಲಭೂತವಾದಿ ಸಂಘಟನೆಗಳ ಮತಿಹೀನ ಕೃತ್ಯಗಳನ್ನು ಸೆರೆ ಹಿಡಿದು ರಾಜ್ಯ ಹಾಗೂ ದೇಶಾದ್ಯಂತ ಪ್ರಸಾರವಾಗುವಂತೆ ಮಾಡಿ ಮೂಲಭೂತವಾದಿ ಸಂಘಟನೆಗಳ ವಿರುದ್ಧ ತೀವ್ರ ಪ್ರತಿಭಟನೆ ವ್ಯಕ್ತವಾಗುವಂತೆ ಮಾಡಿರುವುದು ಪ್ರಜಾಪ್ರಭುತ್ವದ ಉಳಿವಿನ ದೃಷ್ಟಿಯಿಂದ ಅತ್ಯಂತ ಸಮಯೋಚಿತವಾದುದು. ಈಗ ದಾಳಿ ನಡೆಸಿದವರ ಮೇಲೆ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆಂದು ಹೇಳಲಾಗಿದೆ ಹಾಗೂ ಸಂಘದ ಮುಖಂಡರು ಇಂಥ ಕಾಯ್ದೆಯನ್ನು ಹಾಕಬಾರದು ಎಂದು ಗೃಹ ಮಂತ್ರಿಯ ಮೇಲೆ ಒತ್ತಡ ತರುತ್ತಿದ್ದಾರೆ ಎಂಬ ಸುದ್ದಿ ಇದೆ.

   Reply
 22. Ramakrishna, Abudhabi

  Dear Mr. Naveen,

  You have done your job. Don’t worry about FIR. The police will nor dare enough to proceed. Sitting here, I can also watch, already a memorandum has been submitted by Press Club not to fiel case against journalists. Surely, the attacking team had informed police.
  Also, there are rumours in media that there were two girls parents belonging to a party. Other than that today in FB I saw clippings one of the mother of a boy.
  You dont loose confidence. You have done your job. Be Professional.
  We are with you.

  Reply
 23. umesh

  ಒಬ್ಬ ವರದಿಗಾರನಾಗಿ ಏನೆಲ್ಲಾ ಮಾಡಬೇಕಿತ್ತು ಅದನ್ನೆಲ್ಲಾ ನೀವು ಮಾಡಿದ್ದೀರಿ. ಇದಕ್ಕೆ ನೀವು ಅಂಜುವುದು ಬೇಡ. ಪೋಲಿಸ್ ಇಲಾಖೆಯ ತಪ್ಪು ಮುಚ್ಚಿಕೊಳ್ಳಲು ಉಳಿದೆಲ್ಲ ರೀತಿಯ ಪ್ರಯತ್ನ ನಡೆಯುತ್ತಿದೆ.ಸತ್ಯ ಇಂದಲ್ಲ ನಾಳೆ ಗೆಲ್ಲಲೇ ಬೇಕು. ಧೈರ್ಯವಾಗಿರಿ.

  Reply
 24. Nisha

  nimage hats up naveen. nagantu alu bartide nimma report noduvaga.. police ru bekantale nimma cl recive madilla ansutte..complent cl anta avarige gottirbeku.. bloody police & nonsens guys… a henmaklannu muttidu ella puna pokrigalige jeevanadalli inyava hennanu muttada hage avara kyannu cut madbeku…thuuu nayi janmdavaugalu…

  Reply
 25. anand prasad

  ಮಂಗಳೂರು ಹೋಂ ಸ್ಟೇ ಪ್ರಕರಣದಲ್ಲಿ ದಾಳಿಗೊಳಗಾದ ಓರ್ವ ಹುಡುಗಿಗೆ ಆಕೆ ಓದುತ್ತಿರುವ ಮ್ಯಾನೇಜ್ಮೆಂಟ್ ಕಾಲೇಜು ಮೂರನೇ ಸೆಮೆಸ್ಟರ್ ಪರೀಕ್ಷೆ ಬರೆಯದಂತೆ ನಿಷೇಧ ವಿಧಿಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಈ ಕುರಿತ ವರದಿ ಇಲ್ಲಿ ಲಭ್ಯ http://in.video.yahoo.com/news-26036098/national-26073656/mangalore-moral-police-victims-face-ire-of-college-authorities-30155199.html ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂಲಭೂತವಾದ ಯಾವ ರೀತಿ ಕಾಲೇಜುಗಳನ್ನು ನಡೆಸುವವರ ಮೇಲೆಯೂ ಪ್ರಭಾವ ಬೀರಿದೆ ಎಂಬುದು ಇದರಿಂದ ತಿಳಿಯುತ್ತದೆ. ಆ ಹುಡುಗಿ ಪರೀಕ್ಷೆ ಬರೆಯದಂತೆ ಮಾಡಿರುವ ಘನ ಅಪರಾಧವಾದರೂ ಏನು ಎಂದು ಪ್ರಜ್ಞಾವಂತ ನಾಗರಿಕರು ಕೇಳಬೇಕಾಗುತ್ತದೆ? ಒಬ್ಬ ಹುಡುಗಿಯ ಭವಿಷ್ಯದ ಜೊತೆ ಆಟ ಆಡುವ ಅಧಿಕಾರ ಕಾಲೇಜು ಆಡಳಿತಕ್ಕೆ ನೀಡಿದವರು ಯಾರು? ಈ ಬಗ್ಗೆ ರಾಜ್ಯದ ನಾಗರಿಕರು ಧ್ವನಿ ಎತ್ತಬೇಕಾಗಿದೆ.

  Reply
  1. prasad raxidi

   ಮೊನ್ನೆ ಕಸ್ತೂರಿ ನ್ಯೂಸ್ ನಲ್ಲಿ ನವೀನ್ ಸಂದರ್ಶನ ನೋಡಿದೆ , ಎಲ್ಲ ವಿವರಗಳನ್ನು ಬಿಡಿಸಿಟ್ಟರು. ಮಾತಿನ ಮಧ್ಯೆ ಅವರು ಹೇಳಿದ ಮಾತು ” ಆ ಹುಡುಗಿಯರನ್ನು ರಕ್ಷಿಸಬೇಕಾದ ಪೋಲೀಸರೇ ಅವರನ್ನು ಇನ್ನಷ್ಟು ಅಪಾಯಕ್ಕೆ ತಳ್ಳಿದಂತಾಗಿದೆ” ಈಮಾತು ಈಗ ನಿಜವಾಗುತ್ತಿದೆ. …ಅನ್ನಿಸುತ್ತಿದೆ..

   Reply
 26. Purushothama Bilimale

  Dear Naveen, I congratulate you for your writings and boldness. True, Police will trouble you, but ultimately truth will win. The common man is simply loosing faith in Police system as they are also part of the bigger corruption. We know the history of few officers who are working in key positions at Mangalore. . You can not complaint to Government even, as the current Government borne and lived in resorts.
  People like me who live outside Karnataka, use to quote Dr. Shivarama Karanth, Kamaladevi Chattopadhyaya, Ullal Shirinivasa Mallya, Karnad Sadashiva Rao, Kudmal Ranga Rao and others for establishing the dynamics of undivided DK District, But now whom should we quote? Communal forces simply destroyed the image of Tulunadu.

  Reply
 27. Raatan

  ಜನರ ಅಭಿಪ್ರಾಯ ಪಡೆದು ಮಾಡುವುವೇನು? ನಿಮ್ಮ ಆಗ್ಮಸಾಕ್ಷಿಗೆ ನೀವು ನಡೆದುಕೊಂಡಿದ್ದು ಸರಿ ಎಂದೆನಿಸಿದೆಯಾ? ನಾವು ಎದುರಲ್ಲಿರುವ ಯಾವ ವ್ಯಕ್ತಿಯನ್ನೂ ಕನ್ವಿನ್ಸ ಮಾಡಬಹುದು ಆದರೆ ನಮಗೆ ನಾವು ಕನ್ವಿನ್ಸ ಆಗುವದು ಮಾತ್ರ ನಾವು ಮಾಡಿದ್ದು ನ್ಯಾಯಯುತವಾಗಿ (ಕಾನೂನುಬಧ್ಧವಾದ ನ್ಯಾಯವಲ್ಲ, ನೈತಿಕವಾದ ನ್ಯಾಯ) ಸರಿಯಾಗಿದೆ ನಮ್ಮ ಮನ ಒಪ್ಪಿದಾಗ ಮಾತ್ರ. ನಮ್ಮ ಮನ ಒಪ್ಪುವದು ನಮ್ಮ ಆಗ್ಮಸಾಕ್ಷಿಗನುಗುಣವಾಗಿ ನಡೆದುಕೊಂಡಾಗ ಮಾತ್ರ. I hope I made my point clear with regards to your action.

  Reply
 28. jp urwa managlore

  ಮ೦ಗ ಳುರಿಗೆ ಬೇಕು ಗೋಪಾಲ್ ಹುಉಸುರು, ಎಸ್ ಪಿ ಡಾ! ಸುಬ್ರಮಣ್ಯ ರಾವ್ ಮತ್ತು ಸೂಪರ್ ಡಿಸಿ ಪೊನ್ನುರಾಜ್ ಹಿ ತ್ರಿ ಮೂರ್ತಿ ಗಳು ಮ೦ಗ ಳುರಿ ನ ಚಿತ್ರಣ ಬದಲಾಯಿಸಿದ ಮಾಹಾನ್ ವ್ಯಕ್ತಿಗಳು

  Reply
 29. Gajendraswamy

  ಸರ್… ಈ ವ್ಯವಸ್ಥೆ ಹಾಗೂ ನಮ್ಮೂಳಗಿನ ಉಗ್ರತೆಗೆ ಉತ್ತರ ಸಿಗದ ದುರಂತವಿದೆ. ನಿಮ್ಮತನಕ್ಕೆ ನಮ್ಮ ಻ಭಿನಂಧನೆಗಳು. ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲವಿದೆ

  Reply

Leave a Reply

Your email address will not be published.